Flu Prevention Tips: ಚಳಿಗಾಲದ ಸೋಂಕುಗಳಿಂದ ಮಕ್ಕಳನ್ನು ಕಾಪಾಡುವುದು ಹೇಗೆ? - Vistara News

ಆರೋಗ್ಯ

Flu Prevention Tips: ಚಳಿಗಾಲದ ಸೋಂಕುಗಳಿಂದ ಮಕ್ಕಳನ್ನು ಕಾಪಾಡುವುದು ಹೇಗೆ?

ಚಳಿಗಾಲದ ಸೋಂಕುಗಳು ಎಲ್ಲೆಡೆ ಸುದ್ದಿ ಮಾಡುತ್ತಿವೆ. ಇಂಥ ದಿನಗಳಲ್ಲಿ ಫ್ಲೂನಂಥ ವೈರಸ್‌ಗಳು ಅಂಟದಂತೆ ಮಕ್ಕಳನ್ನು (flu prevention tips) ಕಾಪಾಡಿಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ.

VISTARANEWS.COM


on

Flu Prevention Tips
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಳಿ ಹೆಚ್ಚುತ್ತಿದ್ದಂತೆ (flu prevention tips) ಸೋಂಕುಗಳ ಲಕ್ಷಣಗಳು ಎಲ್ಲೆಡೆ ತೀವ್ರವಾಗುತ್ತಿವೆ. ಸುಸ್ತು, ಕೆಮ್ಮು, ನೆಗಡಿ, ಜ್ವರ, ಗಂಟಲುನೋವು ಮುಂತಾದವುಗಳದ್ದೇ ಕಾರುಭಾರು ಎಲ್ಲೆಡೆ. ಪ್ರೌಢರಲ್ಲೂ ಈ ಲಕ್ಷಣಗಳು ತೊಂದರೆ ಕೊಡುತ್ತವಾದರೂ ಮಕ್ಕಳಷ್ಟಲ್ಲ. ರೋಗ ನಿರೋಧಕ ಶಕ್ತಿ ಇನ್ನೂ ಬಲವಾಗದ ಎಳೆಯರಿಗೆ ಚಳಿಗಾಲದ ವೈರಸ್‌ಗಳು ನೀಡುವ ಕಾಟ ಒಂದೆರಡು ದಿನಗಳಿಗೆ ಮುಗಿಯುವುದೇ ಇಲ್ಲ. ಮೊದಲು ನೆಗಡಿಯೊ ಕೆಮ್ಮೊ ಶುರುವಾಗಿ ಮಾರನೇ ದಿನಕ್ಕೆ ಜೋರು ಜ್ವರ, ನಡುಕ, ಬೆನ್ನಿಗೇ ಗಂಟಲು ನೋವು ಅಥವಾ ತಲೆನೋವು ಇಲ್ಲವೇ ಕಿವಿ ನೋವು, ಏಳಲಾರದ ಸುಸ್ತು ಇತ್ಯಾದಿ ಇತ್ಯಾದಿ. ನಾಲ್ಕು ದಿನ ಕಾಡಿಸಿದ ಜ್ವರ ಹೇಗೊ ಬಿಟ್ಟರೂ, ಕಫ-ಕೆಮ್ಮು ತಾರಕಕ್ಕೇರಿ ಇನ್ನೂ ನಾಲ್ಕು ದಿನ ಚೇತರಿಸಿಕೊಳ್ಳುವುದಕ್ಕೆ ಬೇಕು ಎಂಬಂಥ ಸ್ಥಿತಿಗೆ ಪುಟಾಣಿಗಳನ್ನು ತರುತ್ತದೆ. ಚಳಿಗಾಲದ ಸೋಂಕುಗಳು ಮಕ್ಕಳನ್ನು ಕಾಡದಂತೆ ತಡೆಯುವುದು ಹೇಗೆ?

Virus Background with Disease Cells and Red Blood Cells

ಒಬ್ಬರಿಂದೊಬ್ಬರಿಗೆ ವೇಗವಾಗಿ ಹರಡುವ ಈ ವೈರಸ್‌ಗಳು ಮಕ್ಕಳಲ್ಲಿ ಪ್ರಸರಣವಾಗುವುದು ಇನ್ನೂ ತ್ವರಿತವಾಗಿ. ಶಾಲೆಯಲ್ಲಿ ಅಥವಾ ಡೇ ಕೇರ್‌ನಲ್ಲಿ ಒಟ್ಟಿಗೆ ಆಡುವ, ಅಕ್ಕಪಕ್ಕ ಕುಳಿತುಕೊಳ್ಳುವ, ಒಬ್ಬರ ವಸ್ತುಗಳನ್ನು ಇನ್ನೊಬ್ಬರು ಮುಟ್ಟುವ ಸಂದರ್ಭಗಳು ದಿನವೂ ಇರುವುದರಿಂದ, ಮಕ್ಕಳಲ್ಲಿ ಸೋಂಕುಗಳು ತಡೆಯುವು ಸಾಹಸವೇ ಸರಿ. ಅದರಲ್ಲೂ ಕೆಲವು ತಿಂಗಳ ಹಿಂದೆ ಉಂಟಾದ ಸೋಂಕಿನಿಂದ ಪ್ರತಿರೋಧಕ ಶಕ್ತಿ ಜಾಗೃತವಾಗಿರುತ್ತದೆ ಎಂದು ಮಕ್ಕಳ ವಿಷಯದಲ್ಲಿ ಹೇಳಲಾಗದು. ಹಾಗಾಗಿ ಚಿಣ್ಣರು ಆಗಾಗ ಹುಷಾರು ತಪ್ಪುವುದು ಸಾಮಾನ್ಯ ಎಂಬಂತೆ ಆಗುತ್ತದೆ.

Girl, Mom and Doctor with Vaccine Injection,

ಲಸಿಕೆ ಬೇಕು

ಆಯಾ ವರ್ಷದ ಫ್ಲೂ ಋತುವಿನಲ್ಲಿ ಯಾವೆಲ್ಲಾ ವೈರಸ್‌ಗಳು ಬರಬಹುದು ಎಂಬ ಲೆಕ್ಕಾಚಾರದ ಮೇಲೆ ಫ್ಲೂ ಲಸಿಕೆಯನ್ನು ತಯಾರಿಸಲಾಗುತ್ತದೆ. ಹಾಗಾಗಿ ಪ್ರತಿ ವರ್ಷ ಮಕ್ಕಳಿಗೆ ಫ್ಲೂ ಲಸಿಕೆಯನ್ನು ಹಾಕಿಸುವುದು ಉತ್ತಮ. ಇದರಿಂದ ರೋಗ ನಿರೋಧಕಶಕ್ತಿಯನ್ನು ತಾತ್ಕಾಲಿಕವಾಗಿ ಉತ್ತೇಜಿಸಿದಂತಾಗುತ್ತದೆ. ಒಂದೊಂದು ಸೋಂಕು ತಾಗಿದರೂ, ಅದರ ತೀವ್ರತೆ ಕಡಿಮೆ ಇರುತ್ತದೆ. ರೋಗ ಗುಣವಾಗುವುದಕ್ಕೆ ಬೇಕಾಗುವ ಸಮಯವೂ ಕಡಿಮೆಯೇ.

ಆಹಾರ

ಆರೋಗ್ಯಯುತ ಆಹಾರವನ್ನು ಮಕ್ಕಳಿಗೆ ತಿನ್ನಿಸುವುದು ಯಜ್ಞದಂತೆಯೇ. ಆದರೂ ಸೋಂಕುಗಳೊಂದಿಗೆ ಹೋರಾಡುವ ಶಕ್ತಿ ಬೇಕೆಂದರೆ ಮಕ್ಕಳ ಆಹಾರಾಭ್ಯಾಸಗಳು ಸತ್ವಯುತವಾಗಿ ಇರಲೇಬೇಕು. ಜಂಕ್‌ ಸೇವನೆಯಿಂದ ಪ್ರತಿರೋಧಕ ಶಕ್ತಿ ತೀವ್ರವಾಗಿ ಕುಂಠಿತಗೊಳ್ಳುತ್ತದೆ. ಹಸಿರು ತರಕಾರಿಗಳು- ಸೊಪ್ಪು, ಋತುಮಾನದ ಹಣ್ಣುಗಳು, ಇಡೀ ಧಾನ್ಯಗಳು, ಮೊಳಕೆ ಕಾಳುಗಳು, ಡೈರಿ ಉತ್ಪನ್ನಗಳು, ಬೀಜಗಳು, ಮೊಟ್ಟೆ, ಮೀನು ಮುಂತಾದವು ಮಕ್ಕಳಿಗೆ ಅಗತ್ಯವಾಗಿ ಬೇಕಿರುವ ಆಹಾರಗಳ ಪಟ್ಟಿಯಲ್ಲಿವೆ. ಕರಿದ, ಸಂಸ್ಕರಿತ, ಸಕ್ಕರೆಭರಿತ, ಪ್ಯಾಕ್‌ ಮಾಡಿದ ಆಹಾರಗಳು ತರುವುದು ಹಾನಿಯನ್ನೇ ಹೊರತು ಆರೋಗ್ಯವನ್ನಲ್ಲ.

ಅಭ್ಯಾಸಗಳು

ಕೋವಿಡ್‌ ಭೀತಿಯೂ ಮತ್ತೆ ತಲೆದೋರುತ್ತಿರುವ ಹಿನ್ನೆಲೆಯಲ್ಲಿ, ಕೆಲವು ಹಳೆಯ ಅಭ್ಯಾಸಗಳನ್ನು ಮಕ್ಕಳಿಗೆ ನೆನಪಿಸುವುದು ಅಗತ್ಯ. ವೈಯಕ್ತಿಕ ಅಂತರವನ್ನು ಸಾಧ್ಯವಾದಷ್ಟು ಕಾಯ್ದುಕೊಳ್ಳುವುದು, ಆಗಾಗ ಕೈ ಶುಚಿ ಮಾಡುವುದು, ಲಿಫ್ಟ್‌, ಮೆಟ್ಟಿಲಿನ ಕಂಬಿಗಳು ಮುಂತಾದ ಎಲ್ಲರೂ ಮುಟ್ಟುವಂಥ ಜಾಗಗಳಲ್ಲಿ ಕೈ ಇಡದೇ ಇರುವುದು, ಕಣ್ಣು-ಬಾಯಿ-ಮೂಗು ಮುಟ್ಟದಿರುವುದು, ನೆಗಡಿ-ಕೆಮ್ಮು ಇದ್ದರೆ ಮಾಸ್ಕ್‌ ಹಾಕುವುದು ಮುಂತಾದ ಕೋವಿಡ್‌ ಕಾಲದ ಅಭ್ಯಾಸಗಳು ಚಳಿಗಾಲದಲ್ಲಿ ಜಾರಿಯಲ್ಲಿದ್ದರೆ ಹೆಚ್ಚಿನ ರಕ್ಷಣೆ ದೊರೆಯುತ್ತದೆ.

ಚಟುವಟಿಕೆ

ಮಕ್ಕಳು ನಿತ್ಯವೂ ಮನೆಯಿಂದ ಹೊರಗೆ ಆಡುವುದನ್ನು ಪ್ರೋತ್ಸಾಹಿಸಿ. ಹೊರಾಂಗಣ ಆಟಗಳಲ್ಲಿ ಸೋಂಕು ಹರಡುವ ಪ್ರಮಾಣ ಕಡಿಮೆ. ಬಿಸಿಲಲ್ಲಿ ಮಕ್ಕಳು ಆಡಿದಾಗ ಪ್ರತಿರೋಧಕ ಶಕ್ತಿ ಇನ್ನಷ್ಟು ಬಲವಾಗುತ್ತದೆ. ಜಡವಾಗಿರುವುದು, ಸ್ಕ್ರೀನ್‌ ಮುಂದೆ ಬಿದ್ದುಕೊಂಡು ತಿನ್ನುವುದು- ಇಂಥವೆಲ್ಲಾ ಮಕ್ಕಳ ಶಕ್ತಿ-ಸಾಮರ್ಥ್ಯಗಳನ್ನು ಕುಗ್ಗಿಸುತ್ತವೆ.

Boy Sleeping in His Bedroom

ನಿದ್ದೆ

ಬೆಳೆಯುವ ಮಕ್ಕಳಿಗೆ 9-10 ತಾಸು ನಿದ್ದೆ ಅಗತ್ಯ. ಇದರಿಂದ ಶರೀರ ತಂತಾನೆ ಸರಿಮಾಡಿಕೊಳ್ಳಲು ಅಗತ್ಯವಾದ ವಿಶ್ರಾಂತಿ ನೀಡಿದಂತಾಗುತ್ತದೆ. ನಿದ್ದೆಯ ಸಮಯವನ್ನು ಟಿವಿ, ಮೊಬೈಲ್‌ಗಳು ಕಸಿದರೆ ಇದಕ್ಕಿಂತ ದೊಡ್ಡ ಸಂಕಷ್ಟ ಇನ್ನೊಂದಿಲ್ಲ. ಒಂದೊಮ್ಮೆ ಸೋಂಕು ಬಂದರೆ, ಔಷಧಿ-ಉಪಚಾರಗಳ ಜೊತೆಗೆ ಭರಪೂರ ವಿಶ್ರಾಂತಿ-ನಿದ್ದೆಯೂ ಮಕ್ಕಳಿಗೆ ಅತ್ಯಗತ್ಯ.

Kids Drinking Water

ನೀರು

ಸೋಂಕು ಇರಲಿ, ಇಲ್ಲದಿರಲಿ- ಮಕ್ಕಳು ನೀರು ಕುಡಿಯುವ ಪ್ರಮಾಣವನ್ನು ಗಮನಿಸಿ. ದಿನಕ್ಕೆ ಎಂಟು ಗ್ಲಾಸ್‌ ನೀರು ಮಕ್ಕಳಿಗೂ ಅಗತ್ಯ. ದೇಹದಿಂದ ಕಶ್ಮಲಗಳನ್ನು ತೆಗೆಯಲು ಇದು ಎಲ್ಲರಿಗೂ ಬೇಕಾಗುತ್ತದೆ. ಅವರು ಕುಡಿಯುವ ನೀರಿನ ಪ್ರಮಾಣ ಸಾಕಾಗುತ್ತಿಲ್ಲ ಎನಿಸಿದರೆ, ಇನ್ನಷ್ಟು ಕುಡಿಯುವಂತೆ ಪ್ರೋತ್ಸಾಹಿಸಿ. ಸೂಪ್‌, ಜ್ಯೂಸ್ ಮುಂತಾದ ದ್ರವಾಹಾರಗಳ ಮೂಲಕ ದೇಹಕ್ಕೆ ಸಾಕಷ್ಟು ನೀರು ದೊರೆಯುತ್ತಿದೆ ಎಂಬುದನ್ನು ಖಾತ್ರಿಪಡಿಸಿ.

ಇದನ್ನೂ ಓದಿ: Health Benefits Of Curd Rice: ಮೊಸರನ್ನ ಎಂಬ ಅಮೃತ: ಹೊಟ್ಟೆಗೂ ಹಿತ, ದೇಹಕ್ಕೂ ಹಿತ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಆರೋಗ್ಯ

Health Tips Kannada: ಯಾವ ಬೀಜ ತಿಂದರೆ ನಮ್ಮ ಆರೋಗ್ಯಕ್ಕೆ ಏನು ಪ್ರಯೋಜನ?

ವಿಟಮಿನ್‌ಗಳು, ಖನಿಜಾಂಶಗಳು, ಒಳ್ಳೆಯ ಕೊಬ್ಬು, ಪ್ರೊಟೀನ್‌ ಸೇರಿದಂತೆ ಎಲ್ಲವೂ ಇರುವ ಬೀಜಗಳು ತಿನ್ನಲು ರುಚಿಕರವಾಗಿಯೂ, ಆರೋಗ್ಯಕರವಾಗಿಯೂ ಇರುತ್ತವೆ. ಹಲವು ರೋಗಗಳು ಬರದಂತೆ ತಡೆಯುವ, ಶಕ್ತಿ ಸಾಮರ್ಥ್ಯ ಹೆಚ್ಚಿಸುವ ಈ ಬೀಜಗಳ ಸೇವನೆಯಿಂದ ನಮ್ಮ ಸೌಂದರ್ಯವೂ ಸೇರಿದಂತೆ ಆರೋಗ್ಯವೂ ವೃದ್ಧಿಯಾಗುತ್ತದೆ. ಯಾವ ಬೀಜ ಸೇವಿಸಿದರೆ ಯಾವ ಲಾಭ ಪಡೆಯಬಹುದು ಎಂಬ ಮಾಹಿತಿ (Health Tips Kannada) ಇಲ್ಲಿದೆ.

VISTARANEWS.COM


on

Health Tips Kannada
Koo

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು (Health Tips Kannada) ಎಂಬ ಹಳೇ ಗಾದೆಯನ್ನು ಈ ಬೀಜಗಳ ವಿಚಾರಕ್ಕೆ ಹೇಳಬಹುದೇನೋ. ಯಾಕೆಂದರೆ ಬೀಜಗಳು ನೋಡಲು ಚಿಕ್ಕದಾದರೂ, ಅದರಲ್ಲಿರುವ ಪೋಷಕಾಂಶಗಳ ವಿಚಾರಕ್ಕೆ ಬಂದರೆ ದೇಹಕ್ಕೆ ಅಗತ್ಯವಾಗಿರುವ ಎಲ್ಲವನ್ನೂ ಒಳಗೊಂಡಿವೆ. ವಿಟಮಿನ್‌ಗಳು, ಖನಿಜಾಂಶಗಳು, ಒಳ್ಳೆಯ ಕೊಬ್ಬು, ಪ್ರೊಟೀನ್‌ ಸೇರಿದಂತೆ ಎಲ್ಲವೂ ಇರುವ ಬೀಜಗಳು ತಿನ್ನಲು ರುಚಿಕರವಾಗಿಯೂ, ಆರೋಗ್ಯಕರವಾಗಿಯೂ ಇರುತ್ತವೆ. ಹಲವು ರೋಗಗಳು ಬರದಂತೆ ತಡೆಯುವ, ಶಕ್ತಿ ಸಾಮರ್ಥ್ಯ ಹೆಚ್ಚಿಸುವ ಈ ಬೀಜಗಳ ಸೇವನೆಯಿಂದ ನಮ್ಮ ಸೌಂದರ್ಯವೂ ಸೇರಿದಂತೆ ಆರೋಗ್ಯವೂ ವೃದ್ಧಿಯಾಗುತ್ತದೆ. ಬನ್ನಿ, ಯಾವೆಲ್ಲ ಬೀಜಗಳಿಂದ ಯಾವ ಲಾಭಗಳನ್ನು ನಾವು ಪ್ರಮುಖವಾಗಿ ಪಡೆಯಬಹುದು ಎಂಬುದನ್ನು ನೋಡೋಣ.

Pomegranate seeds

ದಾಳಿಂಬೆ ಬೀಜಗಳು

ಕೆಂಬಣ್ಣದ ದಾಳಿಂಬೆ ಹಣ್ಣಿನ ಬೀಜಗಳನ್ನು ಕವಿಗಳು ಹಲ್ಲುಗಳಿಗೆ ಹೋಲಿಸುತ್ತಾರೆ. ಮುತ್ತಿನಂತ ಹಲ್ಲನ್ನು ಹೊಂದಿದ್ದರೆ ದಾಳಿಂಬೆಯ ಬೀಜದಂತೆ ಮುದ್ದಾಗಿವೆ ಎನ್ನುವುದನ್ನು ನೀವು ನೋಡಿರಬಹುದು. ಈ ದಾಳಿಂಬೆಯ ಕೆಂಬಣ್ಣದ ಬೀಜಗಳಲ್ಲಿ ಆಂಟಿ ಆಕ್ಸಿಡೆಂಟ್‌ಗಳೂ, ವಿಟಮಿನ್‌ ಸಿಯೂ ಹೇರಳವಾಗಿವೆ. ಇದು ಕೊಬ್ಬನ್ನು ಕರಗಿಸುವ ಜೊತೆಗೆ ಆಂಟಿ ಏಜಿಂಗ್‌ ಗುಣಗಳನ್ನೂ ಹೊಂದಿದೆ. ಹೀಗಾಗಿ ತೂಕ ಇಳಿಸುವ ಮಂದಿಗೆ ದಾಳಿಂಬೆ ತಿನ್ನುವುದು ಬಹಳ ಒಳ್ಳೆಯದು.

Sunflower seed and flax seed

ಸೂರ್ಯಕಾಂತಿ ಬೀಜ ಹಾಗೂ ಅಗಸೆ ಬೀಜ

ಸೂರ್ಯಕಾಂತಿ ಹೂವಿನ ಬೀಜಗಳ ಸಿಪ್ಪೆ ಸುಲಿದು ಅದರೊಳಗಿನ ಬೀಜವನ್ನು ಸೇವಿಸುವುದರಿಂದ ಸಾಕಷ್ಟು ಲಾಭಗಳಿವೆ. ಸೂರ್ಯಕಾಂತಿ ಬೀಜದಲ್ಲಿ ವಿಟಮಿನ್‌ ಬಿ೧, ತಾಮ್ರ, ವಿಟಮಿನ್‌ ಇ, ಆಂಟಿ ಆಕ್ಸಿಡೆಂಟ್‌ಗಳು, ಪ್ರೊಟೀನ್‌ ಹಾಗೂ ನಾರಿನಂಶ ಹೇರಳವಾಗಿವೆ. ಇದು ಮಧುಮೇಹಕ್ಕೆ ಬಹಳ ಒಳ್ಳೆಯದು. ಸೂರ್ಯಕಾಂತಿ ಹಾಗೂ ಅಗಸೆ ಬೀಜಗಳು ಗ್ಲುಕೋಸ್‌ ಮಟ್ಟವನ್ನು ಕೆಳಗಿಳಿಸುವ ಗುಣವನ್ನು ಹೊಂದಿರುವುದರಿಂದ ಇವೆರಡೂ ಕೂಡಾ ಮಧುಮೇಹಕ್ಕೆ ಒಳ್ಳೆಯ ಆಹಾರಗಳು.

Chia Seeds Black Foods

ಚಿಯಾ ಬೀಜಗಳು

ಚಿಯಾ ಬೀಜಗಳು ಆಕಾರದಲ್ಲಿ ಪುಟಾಣಿಯಾದರೂ ಇವುಗಳಲ್ಲಿರುವ ಶಕ್ತಿ ದೊಡ್ಡದು. ಇತ್ತೀಚೆಗಿನ ದಿನಗಳಲ್ಲಿ ಚಿಯಾ ಬೀಜಗಳು ಹೆಚ್ಚು ಪ್ರಸಿದ್ಧಿಗೆ ಬಂದಿದ್ದು, ಸಲಾಡ್‌ಗಳಲ್ಲಿ, ಸ್ಮೂದಿಗಳಲ್ಲಿ ಹಾಗೂ ಡೆಸರ್ಟ್‌ಗಳಲ್ಲಿ ಬಳಕೆಯಾಗುತ್ತಿವೆ. ಕ್ಯಾಲ್ಶಿಯಂ ಹೆಚ್ಚಿರುವ ಚಿಯಾ ಬೀಜಗಳನ್ನು ತಿನ್ನುವುದರಿಂದ ಎಲುಬಿನ ಆರೋಗ್ಯ ವೃದ್ಧಿಯಾಗುತ್ತದೆ. ಎಲುಬು ಗಟ್ಟಿಯಾಗುತ್ತದೆ.

Sweet pumpkin seed

ಕುಂಬಳಕಾಯಿ ಬೀಜ

ಕುಂಬಳಕಾಯಿ ಬೀಜಗಳು ಹಸಿರು ಬಣ್ಣದಲ್ಲಿರುವ ಬೀಜಗಳಾಗಿದ್ದು, ಇವುಗಳ ಸೇವನೆಯಿಂದಲೂ ಸಾಕಷ್ಟು ಆರೋಗ್ಯದ ಲಾಭಗಳಿವೆ. ಸಲಾಡ್‌ ಹಾಗೂ ಸಿರಿಯಲ್‌ಗಳ ಜೊತೆಗೆ ಇವನನು ಸೇರಿಸಿ ಬಳಸಲಾಗುತ್ತದೆ. ಕಬ್ಬಿಣಾಂಶ ಅತ್ಯಂತ ಹೆಚ್ಚಿರುವ ಈ ಬೀಜಗಳು ಶಕ್ತಿವರ್ಧಕಗಳು. ನಮ್ಮ ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸುವ ಜೊತೆಗೆ ರಕ್ತದಲ್ಲಿ ಹಿಮೋಗ್ಲೋಬಿನ್‌ ಅನ್ನೂ ಇದು ಹೆಚ್ಚಿಸುವಲ್ಲಿ ಪಾತ್ರ ವಹಿಸುತ್ತದೆ. ತೂಕ ಇಳಿಕೆಗೂ ಇದು ಒಳ್ಳೆಯದು.

sesame seeds Sesame Benefits

ಎಳ್ಳು

ಎಳ್ಳಿನ ಬೀಜಗಳೂ ಕೂಡಾ ನೋಡಲು ಚಿಕ್ಕವಾಗಿದ್ದರೂ ತಮ್ಮ ಗುಣದಲ್ಲಿ ಶ್ರೇಷ್ಠತೆಯನ್ನು ಮೆರೆಯುವಂಥವುಗಳು. ಫೈಟೋನ್ಯೂಟ್ರಿಯೆಂಟ್‌ಗಳು, ಆಂಟಿ ಆಕ್ಸಿಡೆಂಟ್‌ಗಳು, ವಿಟಮಿನ್‌ ಹಾಗೂ ನಾರಿನಂಶ ಹೆಚ್ಚಿರುವ ಈ ಬೀಜಗಳಲ್ಲಿ ಒಮೆಗಾ 6 ಫ್ಯಾಟಿ ಆಸಿಡ್‌ ಕೂಡಾ ಹೇರಳವಾಗಿದೆ. ಕೆಟ್ಟ ಕೊಲೆಸ್ಟೆರಾಲ್‌ ಅನ್ನು ಕಡಿಮೆ ಮಾಡಿ, ಹೃದಯದ ಆರೋಗ್ಯವನ್ನೂ ಇದು ಹೆಚ್ಚಿಸುತ್ತದೆ. ಅಮೆರಿಕನ್‌ ಹಾರ್ಟ್‌ ಅಸೋಸಿಯೇಶನ್‌ ವರದಿಯ ಪ್ರಕಾರ, ಎಳ್ಳಿನಲ್ಲಿರುವ ಮೋನೋ ಸ್ಯಾಚುರೇಟೆಡ್‌ ಹಾಗೂ ಪಾಲಿ ಸ್ಯಾಚುರೇಟೆಡ್‌ ಕೊಬ್ಬು ಹಿತಮಿತವಾಗಿ ದೇಹ ಸೇರಿದರೆ, ಹೃದಯಕ್ಕೆ ಒಳ್ಳೆಯದನ್ನೇ ಮಾಡುತ್ತದೆ. ಅಷ್ಟೇ ಅಲ್ಲ, ಪಾರ್ಶ್ವವಾಯುವಿನಂಥ ಸಮಸ್ಯೆಗಳನ್ನೂ ದೂರವಿರಿಸುತ್ತದೆ. ಇಂಥ ಅಪಾಯದಿಂದ ನಮ್ಮನ್ನು ದೂರವಿರಿಸುವ ಸಾಮರ್ಥಿವನ್ನು ಹೊಂದಿದೆ ಎಂದು ವರದಿ ಮಾಡಿದೆ.
ಈ ಬೀಜಗಳ ಲಾಭಗಳನ್ನು ನಾವು ಪಡೆಯುವುದಕ್ಕಾಗಿ ನಾವು ಮಾಡಬಹುದಾದ ಬೆಸ್ಟ್‌ ಉಪಾಯಗಳಲ್ಲಿ ಪ್ರಮುಖವಾದುದು, ಸಲಾಡ್‌ಗಳ ಮೇಲೆ ಟಾಪಿಂಗ್‌ನಂತೆ ಹಾಕಿ ಸೇವಿಸುವುದು. ಇಲ್ಲವಾದರೆ, ಸ್ನ್ಯಾಕಿಂಗ್‌ ಸಮಯದಲ್ಲಿ ಸಿಕ್ಕಸಿಕ್ಕ ತಿನಿಸುಗಳನ್ನು ತಿನ್ನುವ ಬದಲು ಇವನ್ನು ಸೇವಿಸುವುದು.

ಇದನ್ನೂ ಓದಿ: Pulses Benefits: ಬೇಳೆಕಾಳುಗಳಲ್ಲಿರುವ ಎಲ್ಲ ಪೋಷಕಾಂಶಗಳು ದೇಹಕ್ಕೆ ಸೇರಬೇಕಾದರೆ ಹೀಗೆ ಮಾಡಿ!

Continue Reading

ಆರೋಗ್ಯ

Health Tips: ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸಿಕೊಳ್ಳಬೇಕೆ? ಈ ಆಹಾರ ಸೇವಿಸಿ

ಹಿಮೋಗ್ಲೋಬಿನ್ ಕಡಿಮೆಯಾದರೆ ಅದನ್ನು ರಕ್ತಹೀನತೆ ಎನ್ನುತ್ತೇವೆ. ಮೊದಲಿಗೆ ಕೆಲವು ಪೂರಕಗಳನ್ನು ವೈದ್ಯರು ನೀಡಬಹುದು. ಆದರೆ ಇದನ್ನು ಜೀವನವಿಡೀ ಆಹಾರದ ಮೂಲಕವೇ ಸಮತೋಲನದಲ್ಲಿ ಇರಿಸಿಕೊಳ್ಳಬೇಕು. ಯಾವ ಆಹಾರದ ಮೂಲಕ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು ಎಂಬುದು ಗೊತ್ತೇ? ಇಲ್ಲಿದೆ (Health Tips) ಮಾಹಿತಿ.

VISTARANEWS.COM


on

Health Tips
Koo

ಹಿಮೋಗ್ಲೋಬಿನ್‌ ಬಗ್ಗೆ ಎಲ್ಲರೂ ಕೇಳಿರುತ್ತೇವೆ. ಅದರ ಮಟ್ಟ ಕಡಿಮೆಯಾಯಿತೆಂದು ಮಾತ್ರೆ ನುಂಗುವವರನ್ನೂ ಕಂಡಿರುತ್ತೇವೆ. ಆದರೆ ಅದು ಕಡಿಮೆಯಾದರೆ ಸಮಸ್ಯೆಯೇನು ಎಂಬುದು ಗೊತ್ತಿರುವುದಿಲ್ಲ. ಹಿಮೋಗ್ಲೋಬಿನ್‌ ಎಂದರೆ ಕೆಂಪುರಕ್ತ ಕಣಗಳಲ್ಲಿರುವ ಒಂದು ಬಗೆಯ ಪ್ರೊಟೀನ್‌. ಇದರ ಕೆಲಸದ ಬಗ್ಗೆ ಚುಟುಕಾಗಿ ಹೇಳಬೇಕೆಂದರೆ, ದೇಹದಲ್ಲಿ ಆಮ್ಲಜನಕದ ಮೇಲುಸ್ತುವಾರಿ ನೋಡಿಕೊಳ್ಳುವ ವಿಭಾಗ ಇದರದ್ದು. ಈ ವಿಭಾಗದಲ್ಲಿ ಎಡವಟ್ಟಾದರೆ ಉಳಿದೆಲ್ಲ ವಿಭಾಗದಲ್ಲೂ ಏರುಪೇರು ಉಂಟಾಗುತ್ತದೆ. ಹಾಗಾಗಿ ಇದರ ಮಟ್ಟದಲ್ಲಿ ತೀರಾ ಏರುಪೇರು ಆಗುವಂತಿಲ್ಲ. ಹಿಮೋಗ್ಲೋಬಿನ್‌ ಕಡಿಮೆಯಾದರೆ ಅದನ್ನು ರಕ್ತಹೀನತೆ ಅಥವಾ ಅನೀಮಿಯ ಎಂದು ಕರೆಯಲಾಗುತ್ತದೆ. ಇದನ್ನು ಸರಿತೂಗಿಸುವಂಥ ಆಹಾರಗಳು ಯಾವುವು ಎಂಬುದು (Health Tips) ಗೊತ್ತೇ?

Iron rich foods

ಕಬ್ಬಿಣಯುಕ್ತ ಆಹಾರಗಳು

ಆಹಾರದಲ್ಲಿ ಕಬ್ಬಿಣದಂಶ ಹೆಚ್ಚಿದ್ದರೆ, ರಕ್ತಹೀನತೆಯನ್ನು ನಿವಾರಿಸಲು ನೆರವಾಗುತ್ತದೆ. ಮೀನು, ಕೆಂಪು ಮಾಂಸ, ಚಿಕನ್‌, ಕಾಳುಗಳು, ಬೇಳೇಗಳು, ತೋಫು, ಹಸಿರು ಸೊಪ್ಪು ಮತ್ತು ತರಕಾರಿಗಳು, ಬ್ರೊಕೊಲಿ, ಒಣದ್ರಾಕ್ಷಿ, ಎಪ್ರಿಕಾಟ್‌ನಂಥವು ಆಹಾರದಲ್ಲಿರಲಿ.

Vitamin c

ವಿಟಮಿನ್‌ ಸಿ

ಕಬ್ಬಿಣಯುಕ್ತ ಆಹಾರವನ್ನೇನೋ ತಿನ್ನುತ್ತೀರಿ. ಇದು ಸರಿಯಾಗಿ ಹೀರಲ್ಪಡುವುದಕ್ಕೆ ವಿಟಮಿನ್‌ ಸಿ ಅಂಶ ಅಗತ್ಯ. ಹಾಗಾಗಿ ಸಿಟ್ರಸ್‌ ಹಣ್ಣುಗಳಾದ ಕಿತ್ತಳೆ, ದ್ರಾಕ್ಷಿ, ನಿಂಬೆಯಂಥವು, ಎಲ್ಲಾ ರೀತಿಯ ಬೆರ್ರಿಗಳು, ಕಿವಿ ಹಣ್ಣು, ಕ್ಯಾಪ್ಸಿಕಂ, ಟೊಮೇಟೊ ಇತ್ಯಾದಿಗಳು ದೈನಂದಿನ ಆಹಾರದಲ್ಲಿ ಬೇಕು.

ಫೋಲೇಟ್‌

ಹಿಮೋಗ್ಲೋಬಿನ್‌ ಉತ್ಪಾದನೆಯಲ್ಲಿ ವಿಟಮಿನ್‌ ಬಿ೯ ಅಥವಾ ಫೋಲೇಟ್‌ ಪ್ರಧಾನ ಕೆಲಸ ಮಾಡುತ್ತದೆ. ಪಾಲಕ್‌ ಸೊಪ್ಪು, ಬ್ರೊಕೊಲಿ, ಅವಕಾಡೊ ಅಥವಾ ಬೆಣ್ಣೆ ಹಣ್ಣು, ಕಿತ್ತಳೆ ಹಣ್ಣಿನಂಥವು ಅಗತ್ಯವಾಗಿ ಬೇಕು.

Beetroot

ಬೀಟ್‌ರೂಟ್‌

ಇದೊಂದು ತರಕಾರಿಯಿಂದ ಹಲವು ರೀತಿಯ ಅನುಕೂಲಗಳು ದೊರೆಯುತ್ತವೆ. ಇದರಲ್ಲಿ ಕಬ್ಬಿಣದಂಶ, ಫಾಲಿಕ್‌ ಆಮ್ಲ ಮತ್ತು ಪೊಟಾಶಿಯಂ ಒಟ್ಟಿಗೇ ದೊರೆಯುತ್ತದೆ. ಇವೆಲ್ಲವೂ ಹಿಮೋಗ್ಲೋಬಿನ್ ಉತ್ಪಾದನೆಗೆ ಸಹಾಯ ಮಾಡುತ್ತವೆ. ಇದನ್ನು ಹಸಿಯಾಗಿ, ಬೇಯಿಸಿ… ಹೇಗಾದರೂ ತಿನ್ನಿ, ಅಂತೂ ಸಾಕಷ್ಟು ತಿನ್ನಿ.

Pomegranate

ದಾಳಿಂಬೆ

ಈ ಹಣ್ಣಿನಲ್ಲಿ ಕಬ್ಬಿಣ ಮತ್ತು ವಿಟಮಿನ್‌ ಸಿಗಳೆರಡೂ ಇವೆ. ಈ ಮೂಲಕ ಹಿಮೋಗ್ಲೋಬಿನ್ ಹೆಚ್ಚು ಉತ್ಪಾದನೆ ಆಗುವುದಕ್ಕೆ ನೆರವಾಗುತ್ತದೆ. ದಾಳಿಬೆಯ ಬೀಜಗಳನ್ನು ಮೆಲ್ಲುವುದು ಆಗದಿದ್ದರೆ, ಇದರ ತಾಜಾ ರಸವನ್ನೂ ಕುಡಿಯಬಹುದು.

ನೀರು, ನಿದ್ದೆ

ದಿನಕ್ಕೆ ಎಂಟು ತಾಸು ನಿದ್ದೆ ಮತ್ತು ಎಂಟು ಗ್ಲಾಸ್‌ ನೀರು- ಇದನ್ನು ದಿನದ ಮಂತ್ರವಾಗಿಸಿಕೊಳ್ಳಿ. ದೇಹಕ್ಕೆ ಸಾಕಷ್ಟು ವಿಶ್ರಾಂತಿ ದೊರೆಯದಿದ್ದರೆ ಕೆಂಪುರಕ್ತಕಣಗಳ ಉತ್ಪಾದನೆಯಲ್ಲಿ ತೊಡಕಾಗುತ್ತದೆ. ಇದು ಹಿಮೋಗ್ಲೋಬಿನ್‌ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ನೀರಿನ ಕೊರತೆಯಾದರೆ ರಕ್ತದ ಸಾಂದ್ರತೆ ಮತ್ತು ಪ್ರಮಾಣದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಹಾಗಾಗಿ ಈ ಬಗ್ಗೆ ಗಮನ ಬೇಕು.

ಇವು ಬೇಡ

ಕೆಲವು ಆಹಾರಗಳು ಕಬ್ಬಿಣದಂಶವನ್ನು ದೇಹ ಹೀರಿಕೊಳ್ಳದಂತೆ ತಡೆಯುತ್ತವೆ. ಉದಾ, ಕಾಫಿ, ಚಹಾದಂಥ ಕೆಫೇನ್‌ಯುಕ್ತ ಪೇಯಗಳು, ಕ್ಯಾಲ್ಶಿಯಂ ಸಾಂದ್ರವಾಗಿರುವ ಆಹಾರಗಳು, ನಾರುಭರಿತ ತಿನಿಸುಗಳನ್ನು ಊಟದ ಸಮಯದಲ್ಲಿ ದೂರ ಮಾಡಿ. ಇದರಿಂದ ಕಬ್ಬಿಣದಂಶ ಚೆನ್ನಾಗಿ ಹೀರಲ್ಪಡುತ್ತದೆ.

ಇದನ್ನೂ ಓದಿ: World Food Safety Day: ಆಹಾರ ಸುರಕ್ಷತೆಗಾಗಿ ನಾವು ಏನು ಮಾಡಬಹುದು?

ದೂರ ಮಾಡಿ

ಆಲ್ಕೋಹಾಲ್‌ ಮತ್ತು ಜಡ ಜೀವನಗಳೆರಡೂ ಹಿಮೋಗ್ಲೋಬಿನ್ನ ಶತ್ರುಗಳು. ಆಲ್ಕೋಹಾಲ್‌ ಸೇವನೆಯಿಂದ ಕಬ್ಬಿಣದಂಶವನ್ನು ದೇಹ ಹೀರಿಕೊಳ್ಳುವುದಕ್ಕೆ ಅಡಚಣೆ ಉಂಟಾಗುತ್ತದೆ. ಜಡ ಜೀವನವು ರಕ್ತ ಪರಿಚಲನೆಯ ಶತ್ರು. ನಿಯಮಿತವಾಗಿ ವ್ಯಾಯಾಮ ಮಾಡುತ್ತಿದ್ದರೆ ಕೆಂಪು ರಕ್ತಕಣಗಳ ಉತ್ಪಾದನೆ ಚೆನ್ನಾಗಿ ಆಗಿ, ರಕ್ತದ ಪರಿಚಲನೆಯೂ ಸರಾಗ ಇರುತ್ತದೆ.

Continue Reading

Latest

World Environment Day:ವಿಶ್ವ ಪರಿಸರ ದಿನವನ್ನು ವಿಶೇಷವಾಗಿ ಆಚರಿಸಿದ ‘ಕೇಳಚಂದ್ರ ಕಾಫಿ’

World Environment Day ನಾವು ವಾಸಿಸುವ ಪರಿಸರ ಚೆನ್ನಾಗಿದ್ದರೆ ನಮ್ಮ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ಆದರೆ ಈಗ ಎಲ್ಲೆಡೆ ಕಲುಷಿತ ವಾತಾವರಣದಿಂದ ಹೆಸರೇ ಕೇಳರಿಯದ ರೋಗಗಳು, ನಾನಾ ರೀತಿಯ ಸಮಸ್ಯೆಗಳು ಕಾಡುತ್ತಿವೆ.ಪರಿಸರ ಸಂರಕ್ಷಣೆಯ ಕುರಿತು ಸಾಕಷ್ಟು ಜನರು ಎಚ್ಚೆತ್ತುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಕೇಳಚಂದ್ರ ಕಾಫಿ ಸಂಸ್ಥೆಯೂ ಕೈ ಜೋಡಿಸಿದೆ. ತನ್ನ ಎಲ್ಲ ಎಸ್ಟೇಟ್ ​ಗಳಲ್ಲಿ ಪರಿಸರ ಸ್ನೇಹಿ ಉಪಕ್ರಮಗಳನ್ನು ಕೈಗೊಂಡು ಪರಿಸರ ಎಷ್ಟು ಮುಖ್ಯ ಎಂಬ ಅರಿವು ಮೂಡಿಸುತ್ತಿದೆ.

VISTARANEWS.COM


on

World Environment Day
Koo

ಚಿಕ್ಕಮಗಳೂರು: ಜೂನ್ ತಿಂಗಳು ಬಂತೆಂದರೆ ಪರಿಸರ ಸಂರಕ್ಷಣೆಯ ಮಾತು ಎಲ್ಲೆಡೆ ಕೇಳಿ ಬರುತ್ತದೆ. ನಾವಿರುವ ಪರಿಸರ ಮೊದಲಿನ ಹಾಗೇ ಇಲ್ಲ ಎನ್ನುವ ನೋವು, ಕಾಳಜಿ ಎಲ್ಲರ ಮನದಲ್ಲಿಯೂ ಇದೆ. ಪರಿಸರ ಚೆನ್ನಾಗಿ ಇದ್ದರೆ ನಮ್ಮ ಆರೋಗ್ಯ, ಮನಸ್ಸು ಎರಡೂ ಚೆನ್ನಾಗಿರುತ್ತದೆ. ಈ ಕುರಿತು ಸಾಕಷ್ಟು ಸಂಘ ಸಂಸ್ಥೆಗಳು ಪರಿಸರ ಸಂರಕ್ಷಣೆಯ ಚಟುವಟಿಕೆಯಲ್ಲಿ ಕೈ ಜೋಡಿಸಿವೆ. ಕಾಫಿ (coffee) ಉತ್ಪನ್ನಗಳ ಉತ್ಕೃಷ್ಟ ಸಂಸ್ಥೆಯಾಗಿರುವ ಕೇಳಚಂದ್ರ ಕಾಫಿ ಕೂಡ ಇದಕ್ಕೆ ಹೊರತಾಗಿಲ್ಲ! ವಿಶ್ವ ಪರಿಸರ ದಿನಾಚರಣೆಯ (World Environment Day) ಆಚರಣೆಯ ಹಿನ್ನೆಲೆಯಲ್ಲಿ ತನ್ನ ಎಲ್ಲ ಎಸ್ಟೇಟ್ ​ಗಳಲ್ಲಿ ಪರಿಸರ ಸ್ನೇಹಿ ಉಪಕ್ರಮಗಳನ್ನು ಕೈಗೊಳ್ಳುತ್ತಿದೆ. ಪರಿಸರದ ಅತ್ಯುನ್ನತ ನಿರ್ವಹಣೆ ಮತ್ತು ಸ್ಥಿರವಾದ ಅಭ್ಯಾಸಗಳ ವಿಚಾರದಲ್ಲಿ ತನ್ನ ಬದ್ಧತೆಯನ್ನು ಸಾರುತ್ತಿದೆ. ನಮ್ಮ ಸುತ್ತಲಿನ ಪರಿಸರವನ್ನು ಸಂರಕ್ಷಿಸುವ ಮತ್ತು ಪರಿಸರ ಸ್ನೇಹಿ ಅಭ್ಯಾಸಗಳನ್ನು ಅನುಸರಿಸುವ  ಪ್ರಾಮುಖ್ಯತೆಯ ಬಗ್ಗೆ ಎಸ್ಟೇಟ್​ ಸಿಬ್ಬಂದಿ, ಕಾರ್ಮಿಕರು ಮತ್ತು ಯುವ ಪೀಳಿಗೆಗೆ ಶಿಕ್ಷಣ ನೀಡುವ ಉದ್ದೇಶವನ್ನು ಈ ಉಪಕ್ರಮಗಳು ಹೊಂದಿವೆ.

ಕೇಳಚಂದ್ರ ಕಾಫಿ ಜನಪ್ರಿಯ ಪ್ರವಾಸಿ ತಾಣ ಮುಳ್ಳಯ್ಯನಗಿರಿಯ ತಪ್ಪಲಿನಲ್ಲಿರುವ ಯೆಲ್ಲೂರ್​ ಖಾನ್​ ಎಸ್ಟೇಟ್ ​ನಲ್ಲಿ ಎಲ್ಲ ಸಿಬ್ಬಂದಿ ಮತ್ತು ಕಾರ್ಮಿಕರಿಗಾಗಿ ವಿಶ್ವ ಪರಿಸರ ದಿನಾಚರಣೆಯ ಮಹತ್ವವನ್ನು ತಿಳಿಸಲು ವಿಶೇಷ ಕಾರ್ಯಕ್ರಮ ಆಯೋಜಿಸಿತ್ತು.  ಪರಿಸರ ಸಂರಕ್ಷಣೆ, ಜಲಮೂಲಗಳ ಸಂರಕ್ಷಣೆ, ಮಾಲಿನ್ಯ ತಡೆಗಟ್ಟುವಿಕೆ ಮತ್ತು ಮುಂದಿನ ಪೀಳಿಗೆಗಾಗಿ ಪರಿಸರವನ್ನು ರಕ್ಷಿಸುವ ಪ್ರಾಮುಖ್ಯತೆಯ ಬಗ್ಗೆ ಕಾರ್ಮಿಕರೆಲ್ಲರೂ ಅಗತ್ಯ ಮಾಹಿತಿಯನ್ನು ಪಡೆದರು.ಶೈಕ್ಷಣಿಕ ಗೋಷ್ಠಿಯ ನಂತರ ಪ್ರವಾಸಿಗರು ಆಗಾಗ್ಗೆ ಭೇಟಿ ನೀಡುವ 3 ಕಿ.ಮೀ ಉದ್ದದ ರಸ್ತೆಯುದ್ದಕ್ಕೂ ವಿಶೇಷ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಯಿತು. ಈ ಅಭಿಯಾನದಲ್ಲಿ ಪಾಲ್ಗೊಂಡ ತಂಡವು ಪ್ಲಾಸ್ಟಿಕ್ ಮತ್ತು ಇತರ ತ್ಯಾಜ್ಯಗಳನ್ನು ಸಂಗ್ರಹಿಸಿ, ಸರಿಯಾದ ತ್ಯಾಜ್ಯ ನಿರ್ವಹಣೆಯನ್ನು ಉತ್ತೇಜಿಸಲು ಮತ್ತು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಪ್ರವಾಸಿಗರನ್ನು ಪ್ರೇರೇಪಿಸಿತು.

ಇನ್ನು ಕಮ್ಮರಗೋಡು ಕ್ಲಸ್ಟರ್​ನಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಾಮುಖ್ಯತೆಯನ್ನು ಅರಿಯುವ ಉದ್ದೇಶದಿಂದ ಬೃಹತ್ ಪ್ರಮಾಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪರಿಸರದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಈ ಕಾರ್ಯದಲ್ಲಿ ಶಾಲಾ ಮಕ್ಕಳ ಭಾಗವಹಿಸುವಿಕೆಯೂ ನಿರ್ಣಾಯಕ ಪಾತ್ರ ವಹಿಸಿತು. ನಮ್ಮ ಭೂಮಿಯ ಆರೋಗ್ಯ ಮತ್ತು ಸ್ಥಿರತೆ ಸುಧಾರಿಸುವಲ್ಲಿ ಮರಗಳು ವಹಿಸುವ ಉತ್ತಮ ಪಾತ್ರದ ಬಗ್ಗೆ ಮಕ್ಕಳಿಗೆ ಕಲಿಸಲಾಯಿತು.  

ಇದನ್ನೂ ಓದಿ:Pulses Benefits: ಬೇಳೆಕಾಳುಗಳಲ್ಲಿರುವ ಎಲ್ಲ ಪೋಷಕಾಂಶಗಳು ದೇಹಕ್ಕೆ ಸೇರಬೇಕಾದರೆ ಹೀಗೆ ಮಾಡಿ!

ಪರಿಸರ ದಿನಾಚರಣೆ ಅಂಗವಾಗಿ ಆಯೋಜಸಿರುವ ಈ ಕಾರ್ಯಕ್ರಮಗಳು ಪರಿಸರ ಸ್ನೇಹಿ ಅಭ್ಯಾಸಗಳು, ಉತ್ತಮ ಭವಿಷ್ಯ ಮತ್ತು ಹೈಟೆಕ್ ಹಾಗೂ ಸ್ಮಾರ್ಟ್​​ ಕೃಷಿಗೆ ಕೇಳಚಂದ್ರ ಕಾಫಿಯ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ. ಕಂಪನಿಯ ಈ ರೀತಿಯ ಕಾರ್ಯಕ್ರಮಗಳು 2030 ರ ವೇಳೆಗೆ ಜೀವವೈವಿಧ್ಯತೆಯ ನಷ್ಟವನ್ನು ಸರಿತೂಗಿಸುವ ವಿಶ್ವಸಂಸ್ಥೆಯ ಕರೆಗೆ ಅನುಗುಣವಾಗಿವೆ.  ಭೂಮಿಯ ನೈಸರ್ಗಿಕ ಪರಿಸರ ವ್ಯವಸ್ಥೆಯನ್ನು ಪುನರ್​​ ಸ್ಥಾಪನೆ ಮಾಡುವಲ್ಲಿ ಕೇಳಚಂದ್ರ ಕಾಫಿ ಸಂಪೂರ್ಣ ಬದ್ಧವಾಗಿದೆ ಎಂಬುದನ್ನು ಸ್ಪಷ್ಟಪಡಿಸಿದೆ.

Continue Reading

ಆರೋಗ್ಯ

World Food Safety Day: ಆಹಾರ ಸುರಕ್ಷತೆಗಾಗಿ ನಾವು ಏನು ಮಾಡಬಹುದು?

ಆಹಾರ ಸುರಕ್ಷತೆಯ ಹೆಚ್ಚಿನ ಕ್ರಮಗಳು ಪಾಲನೆಯಾಗುವುದು ಅಥವಾ ಉಲ್ಲಂಘನೆ ಆಗುವುದು ಅಡುಗೆಮನೆಗಳಲ್ಲೇ. ಬೆಳೆಯುವ ಹಂತದಿಂದ ಹಿಡಿದು, ದಾಸ್ತಾನು ಮಾಡುವವರೆಗೂ ಆಹಾರ ಸುರಕ್ಷಾ ನಿಯಮದ ಉಲ್ಲಂಘನೆಗಳು ಆಗುತ್ತಲೇ ಇದ್ದರೂ, ಕೆಲಮಟ್ಟಿಗೆ ಅವುಗಳನ್ನು ಬಳಕೆಯೋಗ್ಯ ಮಾಡುವುದು ಬಳಕೆದಾರರ ಕೈಯಲ್ಲೂ ಇದೆ. ಇಂದು ವಿಶ್ವ ಆಹಾರ ಸುರಕ್ಷತಾ ದಿನ (World Food Safety Day).

VISTARANEWS.COM


on

World Food Safety Day
Koo

ಆಹಾರ ಸೇವನೆ ಬದುಕುಳಿಯುವುದಕ್ಕೆ ಮಾತ್ರವೇ ಅಗತ್ಯವಲ್ಲ; ನಮ್ಮ ಸ್ವಾಸ್ಥ್ಯದ ಸೋಪಾನವದು. ಒಳ್ಳೆಯ ಆಹಾರದಿಂದ ದೇಹಕ್ಕೆ ಸಾಕಷ್ಟು ಪೋಷಕಸತ್ವಗಳು ದೊರೆಯುವ ಹಾಗೆಯೇ, ತಿನ್ನುವ ಆಹಾರ ಸರಿಯಿಲ್ಲದಿದ್ದರೆ ಸಾಕಷ್ಟು ರೋಗಗಳನ್ನೂ ಆಹ್ವಾನಿಸುತ್ತದೆ. ಕೆಟ್ಟ ಆಹಾರ ತಿಂದರೂ, ಆಹಾರ ಕೆಟ್ಟ ಮೇಲೆ ತಿಂದರೂ ಅನಾರೋಗ್ಯ ತಪ್ಪಿದ್ದಲ್ಲ. ಹಾಗಾಗಿ ಸುರಕ್ಷತೆಯ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಜೂನ್‌ ತಿಂಗಳ 7ನೇ ದಿನವನ್ನು ಜಾಗತಿಕ ಆಹಾರ ಸುರಕ್ಷತಾ ದಿನವೆಂದು (World Food Safety Day) ಗುರುತಿಸಲಾಗಿದೆ.
ಆಹಾರ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಬೇಕೆಂಬ ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 2018ರಲ್ಲಿ ಕೈಗೊಳ್ಳಲಾಗಿತ್ತು. ಆಹಾರದಿಂದ ಉಂಟಾಗುವ ಅನಾರೋಗ್ಯಗಳನ್ನು ತಡೆಯುವ, ನಿರ್ವಹಿಸುವ ಮತ್ತು ಪತ್ತೆ ಮಾಡುವ ಉದ್ದೇಶ ಇದರ ಹಿಂದಿದೆ. ವಿಶ್ವ ಸಂಸ್ಥೆಯ ಅಡಿಯಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಆಹಾರ ಮತ್ತು ಕೃಷಿ ಸಂಸ್ಥೆಗಳು ಜಂಟಿಯಾಗಿ ಈ ದಿನವನ್ನು ಆಚರಿಸುತ್ತವೆ. ವಿಶ್ವ ಆರೋಗ್ಯ ಸಂಸ್ಥೆ ಈ ವರ್ಷ ಹೊರಡಿಸಿರುವ ಘೋಷವಾಕ್ಯ- ಆಹಾರ ಸುರಕ್ಷತೆ: ಅನಿರೀಕ್ಷಿತಗಳಿಗೆ ಸಜ್ಜಾಗಿ. ಆಹಾರ ಸುರಕ್ಷತೆಯ ಹೆಚ್ಚಿನ ಕ್ರಮಗಳು ಪಾಲನೆಯಾಗುವುದು ಅಥವಾ ಉಲ್ಲಂಘನೆ ಆಗುವುದು ಅಡುಗೆಮನೆಗಳಲ್ಲೇ. ಆದರೆ ಅದಕ್ಕೂ ಮುನ್ನ, ಬೆಳೆಯುವ ಹಂತದಿಂದ ಹಿಡಿದು, ದಾಸ್ತಾನು ಮಾಡುವವರೆಗೂ ಆಹಾರ ಸುರಕ್ಷಾ ನಿಯಮದ ಉಲ್ಲಂಘನೆಗಳು ಆಗುತ್ತಲೇ ಇರುತ್ತವೆ. ಅತಿಯಾದ ಕೀಟನಾಶಕಗಳ ಬಳಕೆ, ಕಳೆನಾಶಕಗಳನ್ನು ಸುರಿಯುವುದು, ಸಾವಯವ ಪದ್ಧತಿಗಳ ಅವನತಿ, ದಾಸ್ತಾನು ಮಾಡುವಾಗಲೂ ಬಳಕೆಯಾಗುವ ರಾಸಾಯನಿಕಗಳು, ಕಲಬೆರಕೆಗಳು- ಇವೆಲ್ಲ ಆಹಾರದ ಸುರಕ್ಷಾ ಗುಣಮಟ್ಟ ಕುಸಿಯುವಂತೆ ಮಾಡುತ್ತವೆ. ಆದಾಗ್ಯೂ ಕೆಲಮಟ್ಟಿಗೆ ಅವುಗಳನ್ನು ಬಳಕೆಯೋಗ್ಯ ಮಾಡುವುದು ಬಳಕೆದಾರರ ಕೈಯಲ್ಲೂ ಇದೆ. ಇಲ್ಲಿವೆ ಕೆಲವು ಸರಳ ಕ್ರಮಗಳು-

Food Cleaning Tips Kannada

ಸ್ವಚ್ಛತೆಗೆ ಆದ್ಯತೆ

ಹಣ್ಣು, ತರಕಾರಿಗಳನ್ನು ಉಪಯೋಗಿಸುವ ಮುನ್ನ ಕೆಲಕಾಲ ನೆನೆಸಿ, ಸ್ವಚ್ಛವಾಗಿ ತೊಳೆಯಿರಿ. ಅಡುಗೆಮನೆಯ ನೈರ್ಮಲ್ಯ ಮತ್ತು ಬಳಸುವ ಉಪಕರಣಗಳ ಸ್ವಚ್ಛತೆಗೂ ಆದ್ಯತೆ ನೀಡಿ. ಆಹಾರ ಬೇಯಿಸುವ ಕೈಗಳು ಸಹ ಶುಚಿಯಾಗಿರಲಿ.

ಹಸಿ ಆಹಾರಗಳ ಬಗ್ಗೆ ಎಚ್ಚರ

ಮೊಟ್ಟೆ ಮತ್ತು ಮಾಂಸಾಹಾರಗಳನ್ನೂ ಎಂದಿಗೂ ಹಸಿಯಾಗಿ ಸೇವಿಸಬೇಡಿ. ಸಾದಾ ಹಾಲಿನ ಬದಲು ಪ್ಯಾಶ್ಚರೈಸ್‌ ಮಾಡಿದ ಹಾಲು ಬಳಕೆಗೆ ಹೆಚ್ಚು ಸುರಕ್ಷಿತ.

ಕೀಟಗಳು

ಅಡುಗೆ ಮನೆಯಲ್ಲಿ ಇಲಿ, ಜಿರಳೆ, ಕೀಟಗಳೆಲ್ಲ ಇದ್ದಷ್ಟೂ ಆಹಾರದ ಸುರಕ್ಷತೆ ನಿಭಾಯಿಸುವುದು ಕಷ್ಟ. ಹಾಗಾಗಿ ಇಂಥ ಪ್ರಾಣಿಗಳಿಂದ ಪಾಕಗೃಹವನ್ನು ಮುಕ್ತಗೊಳಿಸಿಕೊಳ್ಳಿ.

ICMR Dietary Guidelines

ತಾಜಾತನ

ಆಹಾರ ಬಿಸಿಯಾಗಿರುವಾಗಲೇ ಸೇವಿಸಿದರೆ ರುಚಿ, ಆರೋಗ್ಯ ಎರಡನ್ನೂ ಸಾಧಿಸಬಹುದು. ಇದಕ್ಕಾಗಿ ಮನೆಯ ಎಲ್ಲರೂ ಒಟ್ಟಿಗೆ ಊಟ ಮಾಡುವ ಅಭ್ಯಾಸ ಜಾರಿಗೆ ತನ್ನಿ. ಇದರಿಂದ ಮನೆಮಂದಿಯ ಬಾಂಧವ್ಯವೂ ಹೆಚ್ಚುತ್ತದೆ.

ಉಳಿಕೆ ಬಗ್ಗೆ ಜಾಗ್ರತೆ

ಉಳಿಕೆ ಆಹಾರವನ್ನು ಪ್ಲಾಸ್ಟಿಕ್‌ ಬದಲಿಗೆ ಲೋಹ ಅಥವಾ ಗಾಜಿನ ಪಾತ್ರೆಗಳಲ್ಲಿ ಶೀಥಲೀಕರಿಸಿ. ಉಳಿಕೆ ಆಹಾರವನ್ನು ಸೇವಿಸುವಾಗ, ಫ್ರಿಜ್‌ನಿಂದ ತೆಗೆದು ಚೆನ್ನಾಗಿ ಹಬೆಯಾಡುವಂತೆ ಬಿಸಿಮಾಡಿ. ಒಮ್ಮೆ ಬಿಸಿ ಮಾಡಿದ ಉಳಿಕೆ ಆಹಾರವನ್ನು ಮತ್ತೆ ಫ್ರಿಜ್‌ನಲ್ಲಿಟ್ಟು ಸೇವಿಸಬೇಡಿ, ಉಳಿದರೆ ಬಿಸಾಡಿ.

Drinking Water Before Meals

ನೀರು

ಕುಡಿಯುವ ನೀರನ್ನು ಕುದಿಸಿ ಕುಡಿಯಿರಿ ಅಥವಾ ಆಧುನಿಕ ಪ್ಯೂರಿಫೈಯರ್‌ ಬಳಸಿ. ನಿತ್ಯವೂ ನೀರಿನ ಬಾಟಲಿಗಳನ್ನು ಬಳಸುವ ಅಭ್ಯಾಸವಿದ್ದರೆ, ಅವುಗಳನ್ನು ಆಗಾಗ ತೊಳೆದು ಶುಚಿ ಮಾಡಿ.

Continue Reading
Advertisement
Karnataka Weather Forecast
ಮಳೆ38 mins ago

Karnataka Weather : ರಾಜ್ಯಾದ್ಯಂತ ಮುಂದುವರಿದ ಮಳೆ; 19 ಜಿಲ್ಲೆಗಳಿಗೆ ಯೆಲ್ಲೋ, ಆರೆಂಜ್‌ ಅಲರ್ಟ್‌

Rishabh Pant
ಪ್ರಮುಖ ಸುದ್ದಿ1 hour ago

Rishabh Pant : ಸಂಜು ಸ್ಯಾಮ್ಸನ್​ ಜತೆಗಿನ ಒಳ ಜಗಳದ ಬಗ್ಗೆ ಸ್ಪಷ್ಟನೆ ನೀಡಿದ ರಿಷಭ್ ಪಂತ್​

Health Tips Kannada
ಆರೋಗ್ಯ1 hour ago

Health Tips Kannada: ಯಾವ ಬೀಜ ತಿಂದರೆ ನಮ್ಮ ಆರೋಗ್ಯಕ್ಕೆ ಏನು ಪ್ರಯೋಜನ?

Health Tips
ಆರೋಗ್ಯ2 hours ago

Health Tips: ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸಿಕೊಳ್ಳಬೇಕೆ? ಈ ಆಹಾರ ಸೇವಿಸಿ

Dina Bhavishya
ಭವಿಷ್ಯ2 hours ago

Dina Bhavishya : ಹಣ ಗಳಿಸುವ ವಿವಿಧ ಮಾರ್ಗಗಳಿಗೆ ಈ ರಾಶಿಯವರಿಗೆ ಸಿಗಲಿದೆ ಪುಷ್ಟಿ

T20 World Cup
ಪ್ರಮುಖ ಸುದ್ದಿ7 hours ago

T20 World Cup : ವಿಶ್ವ ಕಪ್​ ಇತಿಹಾಸದಲ್ಲಿ ಮೊದಲ ಗೆಲುವು ದಾಖಲಿಸಿದ ಕೆನಡಾ; ಐರ್ಲೆಂಡ್​ಗೆ ನಿರಾಸೆ

Narendra Modi
ದೇಶ7 hours ago

Narendra Modi: ಹಂಗಾಮಿ ಪ್ರಧಾನಿ ಮೋದಿಗೆ ಮೊಸರು-ಸಕ್ಕರೆ ತಿನ್ನಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು!

Narendra Modi
ಸಂಪಾದಕೀಯ8 hours ago

ವಿಸ್ತಾರ ಸಂಪಾದಕೀಯ: ಮೋದಿ ಮೂರನೇ ಅವಧಿ, ಆಗಲಿ ಇನ್ನಷ್ಟು ವಿಕಾಸದ ಬುನಾದಿ

T20 World Cup
ಪ್ರಮುಖ ಸುದ್ದಿ8 hours ago

T20 World Cup : ಪಾಕಿಸ್ತಾನ ತಂಡ ಅಮೆರಿಕ ವಿರುದ್ಧ ಸೋತಿದ್ದು ಐಎಮ್​ಎಫ್​ ನೀಡುವ 80 ಕೋಟಿ ಸಾಲಕ್ಕಾಗಿ!

Naxals
ದೇಶ8 hours ago

ಛತ್ತೀಸ್‌ಗಢದಲ್ಲಿ ಭದ್ರತಾ ಸಿಬ್ಬಂದಿ ಭರ್ಜರಿ ಬೇಟೆ; 7 ನಕ್ಸಲರ ಹತ್ಯೆ, ಮೂವರು ಯೋಧರಿಗೆ ಗಾಯ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ12 hours ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ14 hours ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ4 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ5 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ5 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ6 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು7 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌