Hyperpigmentation: ಕಾಡುವ ಈ 'ಕಪ್ಪುಕಲೆ' ಸಮಸ್ಯೆಗೆ ಇಲ್ಲಿದೆ ಪರಿಹಾರ - Vistara News

ಆರೋಗ್ಯ

Hyperpigmentation: ಕಾಡುವ ಈ ‘ಕಪ್ಪುಕಲೆ’ ಸಮಸ್ಯೆಗೆ ಇಲ್ಲಿದೆ ಪರಿಹಾರ

Hyperpigmentation: ಹೆಣ್ಣು ಗಂಡೆನ್ನದೆ ಕಾಡುವ ಇದು ಬಹುತೇಕರ ಸಾಮಾನ್ಯ ಸಮಸ್ಯೆ ಎಂದರೆ ಚರ್ಮದ ಮೇಲೆ ಅಲ್ಲಲ್ಲಿ ಗಾಢವಾದ ಪ್ಯಾಚ್. ಸೌಂದರ್ಯ ಸಮಸ್ಯೆಯಾಗಿರುವುದರಿಂದ ಹಲವರನ್ನು ಮಾನಸಿಕವಾಗಿಯೂ ಬಾಧಿಸುತ್ತದೆ. ಮುಖ್ಯವಾಗಿ ಹೆಣ್ಣುಮಕ್ಕಳು ತಮ್ಮ ಚರ್ಮದ ಕಾಂತಿ ಮಾಯವಾಗಿ ಮುಖದ ಮೇಲೆ ಹೀಗೆ ಕಪ್ಪನೆಯ ಪ್ಯಾಚ್‌ಗಳು ಮೂಡಿದ್ದನ್ನು ಮತ್ತೆ ಇಲ್ಲವಾಗಿಸುವುದು ಹೇಗೆ ಎಂಬ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಾರೆ. ಇದಕ್ಕೆ ಪರಿಹಾರ ಏನು? ಇಲ್ಲಿದೆ ಉತ್ತರ.

VISTARANEWS.COM


on

Hyperpigmentation
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ತಾನು ಸುಂದರವಾಗಿ ಕಾಣಬೇಕು (Hyperpigmentation) ಎಂಬ ಇಚ್ಛೆ ಯಾರಿಗಿಲ್ಲ ಹೇಳಿ? ಆದರೆ, ಈ ಆಸೆಗೆ ತಣ್ಣೀರೆರಚುವಂತೆ ಕಾಡುವ ಚರ್ಮದ ಸಮಸ್ಯೆ ಎಂದರೆ ಅದು ಹೈಪರ್‌ ಪಿಗ್ನೆಂಟೇಶನ್‌ ಅಥವಾ ಮೆಲಾಸ್ಮಾ. ಹೆಣ್ಣು ಗಂಡೆನ್ನದೆ ಕಾಡುವ ಇದು ಬಹುತೇಕರ ಸಾಮಾನ್ಯ ಸಮಸ್ಯೆ. ಚರ್ಮದ ಮೇಲೆ ಅಲ್ಲಲ್ಲಿ ಗಾಢವಾದ ಪ್ಯಾಚ್, ಕಪ್ಪು ಕಲೆಗಳು ಮೂಡುವುದೇ ಈ ಸಮಸ್ಯೆ. ಇದು ಹೇಳಿಕೊಳ್ಳುವಂಥ ಸಮಸ್ಯೆ ಅಲ್ಲವಾದರೂ, ಚರ್ಮದ ಸೌಂದರ್ಯ ಸಮಸ್ಯೆಯಾಗಿರುವುದರಿಂದ ಹಲವರನ್ನು ಮಾನಸಿಕವಾಗಿಯೂ ಬಾಧಿಸುತ್ತದೆ. ಮುಖ್ಯವಾಗಿ ಹೆಣ್ಣುಮಕ್ಕಳು ತಮ್ಮ ಚರ್ಮದ ಕಾಂತಿ ಮಾಯವಾಗಿ ಮುಖದ ಮೇಲೆ ಹೀಗೆ ಕಪ್ಪನೆಯ ಪ್ಯಾಚ್‌ಗಳು ಮೂಡಿದ್ದನ್ನು ಮತ್ತೆ ಇಲ್ಲವಾಗಿಸುವುದು ಹೇಗೆ ಎಂಬ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಾರೆ. ಚರ್ಮದಲ್ಲಿ ಮೆಲನಿನ್‌ ಉತ್ಪಾದನೆ ಹೆಚ್ಚಾಗುವುದರಿಂದ ಹೀಗಾಗುತ್ತದೆ. ಸಾಮಾನ್ಯವಾಗಿ ಎಲ್ಲ ಬಗೆಯ ಚರ್ಮದ ಮಂದಿಗೂ ಈ ಸಮಸ್ಯೆ ಬರಬಹುದಾಗಿದ್ದು, ಚರ್ಮವನ್ನು ಹೆಚ್ಚು ಹೊತ್ತು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಹಾಗೂ ಹಾಗೂ ಕೆಲವು ಹಾರ್ಮೋನಿನ ಸಮಸ್ಯೆಗಳಿಂದ ೩೫- ೪೦ ವಯಸ್ಸು ದಾಟುವ ಸಂದರ್ಭ ಹಲವರಲ್ಲಿ ಕಾಣಿಸಿಕೊಳ್ಳಬಹುದು. ಇನ್ನೂ ಕೆಲವರಿಗೆ ಗರ್ಭಿಣಿಯರಾಗಿದ್ದಾಗಲೂ ಹಾರ್ಮೋನಿನ ಏರುಪೇರಿನಿಂದ ಕಾಣಿಸಬಹುದು. ಬನ್ನಿ, ಹೈಪರ್‌ಪಿಗ್ಮೆಂಟೇಶನ್‌ ಸಮಸ್ಯೆ ಕಾಣಿಸಿಕೊಂಡಾಗ ನೀವು ನಿಮ್ಮ ಚರ್ಮಕ್ಕೆ ಏನು ಮಾಡಬೇಕು ಹಾಗೂ ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳೋಣ.

Dark spots, freckles,hyperpigmentation

ಏನು ಮಾಡಬೇಕು?

ನಿತ್ಯವೂ ಸನ್‌ಸ್ಕ್ರೀನ್‌ ಧರಿಸಿ

ಸೂರ್ಯನ ಹಾನಿಕಾರಕ ಯುವಿ ಕಿರಣಗಳಿಂದ ನಮ್ಮ ಚರ್ಮವನ್ನು ರಕ್ಷಿಸಿಕೊಳ್ಳಲು ದಿನವೂ ಸನ್‌ಸ್ಕ್ರೀನ್‌ ಹಚ್ಚಿ. ಇದು ಮೆಲನಿನ್‌ ಉತ್ಪಾದನೆಯನ್ನು ಹೆಚ್ಚದಂತೆ ನೋಡಿಕೊಳ್ಳುತ್ತದೆ. ಪರಿಣಾಮವಾಗಿ ಹೈಪರ್‌ಪಿಗ್ಮೆಂಟೇಶನ್‌ ಹೆಚ್ಚಾಗುವುದಿಲ್ಲ.

ಮೆದುವಾದ ಸ್ಕಿನ್‌ಕೇರ್‌ ವಸ್ತುಗಳನ್ನು ಬಳಸಿ. ನಿಮ್ಮ ಚರ್ಮದ ಮೇಲೆ ಗಾಢವಾದ, ರಾಸಾಯನಿಕಯುಕ್ತ ತೀಕ್ಷ್ಣ ಕ್ರೀಮ್‌ಗಳನ್ನು ಬಳಸಬೇಡಿ. ಹಗುರವಾದ, ಮೆದುವಾದ, ನೈಸರ್ಗಿಕ ಗುಣಗಳುಳ್ಳ ವಸ್ತುಗಳ್ನೇ ಬಳಸಿ.

ಆಂಟಿಆಕ್ಸಿಡೆಂಟ್‌ ಸೇವಿಸಿ: ನೀವು ಸೇವಿಸುವ ಆಹಾರದಲ್ಲಿ ಹೇರಳವಾಗಿ ಆಂಟಿ ಆಕ್ಸಿಡೆಂಟ್‌ಗಳಿರಲಿ. ಮುಖ್ಯವಾಗಿ ವಿಟಮಿನ್‌ ಸಿ ಆಕ್ಸಿಡೇಟಿವ್‌ ಒತ್ತಡದಿಂದ ಪಾರು ಮಾಡುತ್ತದೆ. ವಿಟಮಿನ್‌ ಸಿ ಯುಕ್ತ ಆಹಾರ ಸೇವಿಸಿ. ಹಾಗೂ ವಿಟಮಿನ್‌ ಸಿ ಇರುವ ಸೌಂದರ್ಯವರ್ಧಕಗಳನ್ನು ನೀವು ಬಳಸಬಹುದು.

drink water

ಹೆಚ್ಚು ನೀರು ಕುಡಿಯಿರಿ

ಹೆಚ್ಚು ನೀರು ಕುಡಿಯುವುದು, ಚರ್ಮಕ್ಕೆ ಸರಿಯಾದ ನೀರು ಪೂರೈಕೆ ಮಾಡುವುದು ಒಳ್ಳೆಯದು. ಇದು ನೈಸರ್ಗಿಕವಾಗಿ ಒಳಗಿನಿಂದಲೇ ಚರ್ಮವನ್ನು ರಿಪೇರಿ ಮಾಡುತ್ತದೆ.

ಚರ್ಮಕ್ಕೆ ಹೊಳಪನ್ನು ನೀಡುವ ನಿಯಾಸಿನಮೈಡ್‌, ಕೋಜಿಕ್‌ ಆಸಿಡ್‌, ಲೈಕೋರೈಸ್‌ ಇತ್ಯಾದಿಗಳಿರುವ ಸೌಂದರ್ಯವರ್ಧಕಗಳನ್ನು ಬಳಸಬಹುದು. ಇದು ಹೈಪರ್‌ಪಿಗ್ಮೆಂಟೇಶನ್‌ ಅನ್ನು ಕಡಿಮೆ ಮಾಡಿ ಚರ್ಮವನ್ನು ನಿಮ್ಮ ಹಳೆಯ ಬಣ್ಣಕ್ಕೆ ತರಲು ಸಹಾಯ ಮಾಡುತ್ತದೆ. ಕಲೆಗಳನ್ನು ಹೋಗಲಾಡಿಸುತ್ತವೆ.

ಆಗಾಗ ಎಕ್ಸ್‌ಫಾಲಿಯೇಟ್‌ ಮಾಡಿ. ಅರ್ಥಾತ್‌, ಒಳ್ಳೆಯ ನೈಸರ್ಗಿಕ ಗುಣಗಳುಳ್ಳ ಸ್ಕ್ರಬಿಂಗ್‌ ಲೋಷನ್‌ ಬಳಸಿ ವಾರಕ್ಕೆರಡು ಬಾರಿ ಸ್ಕ್ರಬ್‌ ಮಾಡಿ.

ಹೈಪರ್‌ ಪಿಗ್ಮೆಂಟೇಶನ್‌ಗೆ ಈಗ ಸಾಕಷ್ಟು ಸೌಂದರ್ಯ ಚಿಕಿತ್ಸೆಗಳೂ ಲಭ್ಯವಿವೆ. ಕೆಮಿಕಲ್‌ ಪೀಲ್‌, ಲೇಸರ್‌ ಥೆರಪಿ, ಮೈಕ್ರೋಡರ್ಮಾಬ್ರೇಶನ್‌ ಇತ್ಯಾದಿಗಳು ಈ ಸಮಸ್ಯೆಯನ್ನು ಸಾಕಷ್ಟು ಕಡಿಮೆ ಮಾಡುತ್ತವೆ. ಒಳ್ಳೆಯ ನುರಿತ ವೈದ್ಯರನ್ನು ಸಂಪರ್ಕಿಸಿ ಇವನ್ನು ಮಾಡಿಸಿಕೊಳ್ಳಬಹುದು.

ಇದನ್ನೂ ಓದಿ: Weight Loss Tips: ಕಪ್ಪು ಬಣ್ಣದ ಆಹಾರಗಳಿಂದ ತೂಕ ಇಳಿಸಿ!

ಇವನ್ನು ಮಾಡಬೇಡಿ

  • ಯಾವತ್ತೂ ಸನ್‌ಸ್ಕ್ರೀನ್‌ ಹಚ್ಚದೆ ಇರಬೇಡಿ. ಸನ್‌ಸ್ಕ್ರೀನ್‌ ಬಹಳ ಮುಖ್ಯ.
  • ಚರ್ಮವನ್ನು ಚಿವುಟಬೇಡಿ. ಮೊಡವೆ, ಕಜ್ಜಿಗಳಿದ್ದರೆ, ಅವುಗಳನ್ನು ಉಗುರಿನಿಂದ ಕೆರೆಯಬೇಡಿ. ಇವು ಕಲೆಯನ್ನು ಉಳಿಸಿಬಿಡುತ್ತವೆ.
  • ಆಲ್ಕೋಹಾಲ್‌, ಸಲ್ಫೇಟ್‌, ಹಾಗೂ ಗಾಢ ಪರಿಮಳಗಳುಳ್ಳ ಸೌಂದರ್ಯವರ್ಧಕ, ಕ್ರೀಂಗಳನ್ನು ಬಳಸಬೇಡಿ.
  • ನಿತ್ಯವೂ ಮಾಯ್‌ಶ್ಚರೈಸ್‌ ಮಾಡಿಕೊಳ್ಳುವುದನ್ನು ಮರೆಯಬೇಡಿ.
  • ಅತಿಯಾಗಿ ಎಕ್ಸ್‌ಫಾಲಿಯೇಟ್‌ ಮಾಡಬೇಡಿ.
  • ನಿಮ್ಮ ಚರ್ಮ ತೋರುವ ಪ್ರತಿಕ್ರಿಯೆಯನ್ನು ನಿರ್ಲಕ್ಷಿಸಬೇಡಿ. ಏನೇ ಅಲರ್ಜಿಯಿದ್ದರೂ ಕೂಡಲೇ ಸೂಕ್ತ ವೈದ್ಯರನ್ನು ಕಾಣಿ.
  • ಯಾವತ್ತಿಗೂ ದಿನಾಂಕ ಮುಗಿದುಹೋದ ಸೌಂದರ್ಯವರ್ಧಕಗಳನ್ನು ಬಳಸಬೇಡಿ.
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Dengue Fever: ಇನ್ನೂ ಏರಲಿದೆ ಡೆಂಗ್ಯು ಕೇಸ್‌ ಎಂದ ಆರೋಗ್ಯ ಸಚಿವರು; ಇದುವರೆಗೆ 6 ಸಾವು

Dengue Fever: ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ಬಾರಿ ಪ್ರಕರಣಗಳು ಡಬಲ್ ಆಗಿವೆ. ಜನವರಿಯಿಂದ ಜುಲೈ 1ರ ತನಕ ಒಟ್ಟು 6187 ಕೇಸ್ ಪಾಸಿಟಿವ್ ಇದೆ. ಕಳೆದ ವರ್ಷ 2903 ಇತ್ತು. ಇಷ್ಟೇ ಅಲ್ಲ ರಾಜ್ಯದಲ್ಲಿ ಮತ್ತಷ್ಟು ಡೆಂಗ್ಯು ಕೇಸ್ ಇರಬಹುದು. 47% ಟೆಸ್ಟಿಂಗ್ ರೇಟ್ ಹೆಚ್ಚಳ ಮಾಡಲಾಗಿದೆ.

VISTARANEWS.COM


on

dengue fever Dinesh Gundu Rao
Koo

ಬೆಂಗಳೂರು: ಇದುವರೆಗೆ ರಾಜ್ಯದಲ್ಲಿ ಡೆಂಗ್ಯು ಜ್ವರದಿಂದಾಗಿ (Dengue Fever) 6 ಜನ ಸತ್ತಿದ್ದಾರೆ. ಸೆಪ್ಟೆಂಬರ್‌ನಲ್ಲಿ ಡೆಂಗ್ಯು ಜ್ವರ ಪ್ರಕರಣಗಳು (Dengue Positive) ಇನ್ನೂ ಏರಬಹುದು ಎಂದು ಆರೋಗ್ಯ ಸಚಿವ (Health Minister) ದಿನೇಶ್‌ ಗುಂಡೂರಾವ್‌ (dinesh Gundu Rao) ಎಚ್ಚರಿಸಿದ್ದಾರೆ.

ಡೆಂಗ್ಯು ಹರಡುವಿಕೆ ನಿಯಂತ್ರಣದ ಬಗ್ಗೆ ವಿವಿಧ ಇಲಾಖೆಗಳ ಜೊತೆ ಸಭೆ ಮಾಡಿದ ಬಳಿಕ ಅವರು ಸುದ್ದಿಗೋಷ್ಠಿ ನಡೆಸಿದರು. ಡೆಂಗ್ಯು ಕಳೆದ ವರ್ಷಕ್ಕಿಂತ ಈ ಬಾರಿ ದುಪ್ಪಟ್ಟಾಗಿದೆ. ಇಲ್ಲಿಯವರೆಗೂ ರಾಜ್ಯದಲ್ಲಿ 6187 ಪ್ರಕರಣ ದಾಖಲಾಗಿದೆ. 6 ಜನ ಸತ್ತಿದ್ದಾರೆ. ಇದರಲ್ಲಿ ಕೋಮಾರ್ಬಿಡಿಟೀಸ್‌ (ಬಿಪಿ, ಮಧುಮೇಹ, ಹೃದಯ ಕಾಯಿಲೆ) ಇದ್ದ ಮೂವರೂ ಸೇರಿದ್ದಾರೆ ಎಂದು ಸಚಿವರು ತಿಳಿಸಿದರು.

ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ಬಾರಿ ಪ್ರಕರಣಗಳು ಡಬಲ್ ಆಗಿವೆ. ಜನವರಿಯಿಂದ ಜುಲೈ 1ರ ತನಕ ಒಟ್ಟು 6187 ಕೇಸ್ ಪಾಸಿಟಿವ್ ಇದೆ. ಕಳೆದ ವರ್ಷ 2903 ಇತ್ತು. ಇಷ್ಟೇ ಅಲ್ಲ ರಾಜ್ಯದಲ್ಲಿ ಮತ್ತಷ್ಟು ಡೆಂಗ್ಯು ಕೇಸ್ ಇರಬಹುದು. 47% ಟೆಸ್ಟಿಂಗ್ ರೇಟ್ ಹೆಚ್ಚಳ ಮಾಡಲಾಗಿದೆ. ಸದಾ ಮಳೆ ಬರುತ್ತಿದ್ದರೆ ಡೆಂಗ್ಯು ಸೊಳ್ಳೆ ಬರುವುದಿಲ್ಲ. ಮಳೆ ಬಿಟ್ಟು ಬಿಟ್ಟು ಬರುವ ಹಿನ್ನೆಲೆಯಲ್ಲಿ ಡೆಂಗ್ಯುವಿಗೆ ಅನುಕೂಲ ವಾತಾವರಣ ಇದೆ. ನಿಂತು ಬೀಳುವ ಮಳೆಯಿಂದಾಗಿ ಸೊಳ್ಳೆ ಹರಡುವಿಕೆ ಹೆಚ್ಚಾಗುತ್ತದೆ. ಇದು ಅನುಕೂಲ ಮಾಡಿಕೊಡುತ್ತದೆ. ಹವಾಮಾನ ಬದಲಾವಣೆಯಿಂದ ರೋಗ ಉಲ್ಬಣಗೊಳ್ಳುತ್ತಿದೆ ಎಂದು ಸಚಿವರು ತಿಳಿಸಿದರು.

ರಾಜ್ಯದಲ್ಲಿ ಒಟ್ಟು 6187 ಪ್ರಕರಣಗಳು ಇವೆ. 3463 ಪ್ರಕರಣ ನಗರ ಪ್ರದೇಶಗಳಲ್ಲಿ ಕಂಡು ಬಂದಿವೆ. 56% ನಗರ ಪ್ರದೇಶದಲ್ಲಿ, 44% ಗ್ರಾಮೀಣ ಪ್ರದೇಶದಲ್ಲಿ ಪೊಸಿಟಿವ್‌ ಬಂದಿವೆ. ಒಂದು ವರ್ಷದ ಒಳಗಿನ 123 ಮಕ್ಕಳಿಗೆ, 1-18 ವರ್ಷದ 2301 ಮಂದಿಗೆ, 19- 60 ವರ್ಷದ 3313 ಮಂದಿಗೆ, 61 ವರ್ಷ ಮೇಲಿನ 450 ಮಂದಿಗೆ ಪಾಸಿಟಿವ್‌ ಬಂದಿದೆ ಎಂದು ಮಾಹಿತಿ ನೀಡಿದರು.

ಡೆಂಗ್ಯು ಜ್ವರ ಇನ್ನಷ್ಟು ಹೆಚ್ಚಾಗಬಹುದು. ಸೆಪ್ಟಂಬರ್‌ನಲ್ಲಿ ಮತ್ತೆ ಹೆಚ್ಚಾಗುವ ಸಾಧ್ಯತೆ ಇದೆ. ಮುಖ್ಯಮಂತ್ರಿಗಳು ಮುಂಜಾಗ್ರತಾ ಕ್ರಮಕ್ಕೆ ಸೂಚಿಸಿದ್ದಾರೆ. ಟೆಸ್ಟಿಂಗ್ ಕಿಟ್ ಹೆಚ್ಚುವರಿ ಇರಿಸಲಾಗಿದೆ. ಪ್ಲೇಟ್‌ಲೆಟ್ಸ್‌ ಕೊಡುವುದಕ್ಕೆ ತಿಳಿಸಿದ್ದೇವೆ. ಡೆಂಗ್ಯುವಿಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಪ್ಲೇಟ್ ಲೆಟ್ಸ್ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ. ಬ್ಲಡ್ ಯೂನಿಟ್‌ಗಳ ಜತೆ ಮಾತುಕತೆ ಮಾಡಲಾಗಿದೆ. ಐವಿ ಫ್ಲೂವಿಡ್‌ಗಳನ್ನು ಕೊಡಲಾಗುತ್ತದೆ. ಇದು ನಮ್ಮ ಬಳಿ ಸಾಕಷ್ಟು ಇದೆ. ಆರಂಭದಲ್ಲಿ ಪ್ಯಾರಸಿಟಮಲ್ ಕೊಟ್ಟರೆ ಸಾಕಾಗುತ್ತದೆ ಎಂದು ತಿಳಿಸಿದರು.

ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ

ಖಾಸಗಿ ಆಸ್ಪತ್ರೆಗಳು ಡೆಂಗ್ಯು ಕೇಸ್ ರಿಪೋರ್ಟ್ ಮಾಡುತ್ತಿಲ್ಲ. ಕೆಪಿಎಂ ಆಕ್ಟ್ ಪ್ರಕಾರ ಖಾಸಗಿ ಆಸ್ಪತ್ರೆಗಳು ಡೆಂಗ್ಯು ಕೇಸ್ ರಿಪೋರ್ಟ್ ಮಾಡುವುದು ಕಡ್ಡಾಯ. IHIPಯಲ್ಲಿ ಅನೇಕ ಖಾಸಗಿ ಆಸ್ಪತ್ರೆಗಳು ಅಪ್ಲೋಡ್ ಮಾಡುತ್ತಿಲ್ಲ. ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕು. ಖಾಸಗಿ ಆಸ್ಪತ್ರೆಯಲ್ಲಿ ಡೆಂಗ್ಯು ತಪಾಸಣೆಗೆ ದರ ನಿಗದಿ ಮಾಡುವ ಬಗ್ಗೆ ಚರ್ಚೆ ಮಾಡಿಲ್ಲ. ಆ ಬಗ್ಗೆ ಮುಂದೆ ಚರ್ಚೆ ಮಾಡುತ್ತೇವೆ ಎಂದು ಅವರು ತಿಳಿಸಿದರು.

ನಮ್ಮ ವೆಬ್‌ಸೈಟಿನಲ್ಲಿ ಡೆಂಗ್ಯು ಬುಲೆಟಿನ್ ಬಿಡುಗಡೆ ಮಾಡುತ್ತೇವೆ. ಪ್ರತಿ ದಿನ ಎಷ್ಟು ಕೇಸ್ ಬಂದಿದೆ ಎನ್ನುವ ಮಾಹಿತಿ ಹಾಕುತ್ತೇವೆ. ದಿನ ನಿತ್ಯ ಡೆಂಗ್ಯು ಬುಲೆಟಿನ್ ಕೊಡಲಾಗುತ್ತದೆ. ಬೆಂಗಳೂರು ನಗರದಲ್ಲಿ ಬಿಬಿಎಂಪಿ ಎಲ್ಲಾ ಮನೆಗಳ ಸರ್ವೆ ಮಾಡುತ್ತಿದೆ. ಸೂಕ್ಷ್ಮ ಪ್ರದೇಶಗಳು ಮಾತ್ರವಲ್ಲ ಎಲ್ಲಾ ಮನೆಗಳ ಸರ್ವೆ ನಡೆಸಲು ನಾನು ಬಿಬಿಎಂಪಿಗೆ ಸೂಚನೆ ನೀಡಿದ್ದೇನೆ. ಮನೆ ಮನೆಗೆ ಭೇಟಿ ಕೊಡಲು ಸೂಚಿಸಿದ್ದೇನೆ. ರಾಜ್ಯಾದ್ಯಂತ ಡೆಂಗ್ಯು ಬಗ್ಗೆ ಕಟ್ಟೆಚ್ಚರ ವಹಿಸಲು ಸೂಚನೆ ಕೊಡಲಾಗಿದೆ. ಪ್ರತಿ ಶುಕ್ರವಾರ ಡೆಂಗ್ಯು ವಿಚಾರದಲ್ಲಿ ಫೀಲ್ಡ್‌ನಲ್ಲಿ ಇದ್ದು, ಮಾನಿಟರ್ ಮಾಡಲು ಸೂಚಿಸಿದ್ದೇನೆ. ಪ್ರತಿ ಶುಕ್ರವಾರ ಮನೆ ಮನೆ ಸಮೀಕ್ಷೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಎಲ್ಲೆಲ್ಲಿ ಪಾಸಿಟಿವ್ ಕೇಸ್ ಬರುತ್ತದೆಯೋ ಅಲ್ಲಿ ತೀವ್ರ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಲಾರ್ವ ನಾಶ, ಫಾಗಿಂಗ್ ಸೇರಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. RWA, ಕ್ರೆಡೈ ಸೇರಿ ಕಟ್ಟಡ ಮಾಲೀಕರು ಸೇರಿ ಅವರನ್ನು ಒಳಗೊಂಡು ಸಭೆ ನಡೆಸಲು ತೀರ್ಮಾನಿಸಿದ್ದೇವೆ. ಮೆಡಿಕಲ್ ಆಫೀಸರ್, MOH, ಸೈನ್ಸ್ ಟೀಚರ್ಸ್‌ಗೆ ಡೆಂಗ್ಯು ವಿಚಾರದಲ್ಲಿ ವಿಶೇಷ ತರಬೇತಿ ನೀಡಲಾಗಿದೆ. ಮಕ್ಕಳಿಗೆ ಡೆಂಗ್ಯು ಕುರಿತು ತಿಳಿವಳಿಕೆ ನೀಡಲಾಗಿದೆ. ಡಿಪೋಗಳಲ್ಲಿ ಟಯರ್‌ಗಳಲ್ಲಿ ಸೊಳ್ಳೆ ಉತ್ಪತ್ತಿ ಆಗುತ್ತಿರುವುದು ಕಂಡು ಬಂದಿದೆ. ಡಿಪೋಗಳಿಂದ ಸ್ಯಾಂಪಲ್ ಕಲೆಕ್ಟ್ ಮಾಡಲಾಗಿದೆ. ಹೆಚ್ಚು ಸಕ್ರಿಯ ಪ್ರಕರಣಗಳು ಕಂಡು ಬರ್ತಿದೆ. ಹೀಗಾಗಿ ಎಚ್ಚರಿಕೆ ವಹಿಸಲು ಸಾರಿಗೆ ಇಲಾಖೆಗೆ ಸೂಚಿಸಿದ್ದೇವೆ. ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಜನರಿಗೆ ಅರಿವು ಮೂಡಿಸುವಂತೆ ತಿಳಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Dengue fever: ಮಾರಕ ಡೆಂಗ್ಯು ಜ್ವರಕ್ಕೆ ಬಾಲಕಿ ಬಲಿ

Continue Reading

ಆರೋಗ್ಯ

Sour Curd: ಹುಳಿ ಬಂದ ಮೊಸರಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದೋ ಕೆಟ್ಟದ್ದೋ?

sour curd: ನಿತ್ಯವೂ ಊಟದ ಕೊನೆಯಲ್ಲಿ ಮೊಸರನ್ನ ತಿನ್ನುವುದು ಬಹುತೇಕರಿಗೆ ಅಭ್ಯಾಸ. ಅಷ್ಟೇ ಅಲ್ಲ, ಅನೇಕ ಬಗೆಯಲ್ಲಿ ಮೊಸರಿನ ಬಳಗೆ ನಮ್ಮ ಮನೆಗಳಲ್ಲಿ ನಿತ್ಯವೂ ಇದೆ. ಬೇಸಿಗೆಯಲ್ಲಿ ಮಜ್ಜಿಗೆ ಮಾಡಿ ಕುಡಿಯಲು, ತಂಪಾದ ಲಸ್ಸಿ ಹೊಟ್ಟೆಗಿಳಿಸಲು ಮೊಸರು ಬೇಕೇ ಬೇಕು. ಇಂತಹ ಮೊಸರಿನಲ್ಲಿರುವ ಪ್ರೊಬಯಾಟಿಕ್‌ ಗುಣಗಳಿರುವುದರಿಂದ, ಈ ಒಳ್ಳೆಯ ಬ್ಯಾಕ್ಟೀರಿಯಾಗಳು ಹೊಟ್ಟೆಯನ್ನು, ಪಚನಕ್ರಿಯೆಯನ್ನು ಆರೋಗ್ಯವಾಗಿಡುತ್ತದೆ. ಆದರೆ, ಮೊಸರು ಬಹುಬೇಗನೆ ಹುಳಿ ಬರುತ್ತದೆ. ಹೀಗೆ ಹೆಚ್ಚು ಹುಳಿ ಬಂದ ಮೊಸರನ್ನು ಸೇವಿಸಬಹುದೇ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

VISTARANEWS.COM


on

Sour Curd
Koo

ಮೊಸರು ಭಾರತೀಯರ ಅಡುಗೆ ಮನೆಯ ಆರಾಧ್ಯ ದೈವ. ಅದರಲ್ಲೂ ದಕ್ಷಿಣ ಭಾರತೀಯರಿಗೆ ಮೊಸರಿಲ್ಲದೆ ಜೀವನ ಬಲು ದುಸ್ತರ. ನಿತ್ಯವೂ ಊಟದ ಕೊನೆಯಲ್ಲಿ ಮೊಸರನ್ನ ತಿನ್ನುವುದು ಬಹುತೇಕರಿಗೆ ಅಭ್ಯಾಸ. ಅಷ್ಟೇ ಅಲ್ಲ, ಅನೇಕ ಬಗೆಯಲ್ಲಿ ಮೊಸರಿನ ಬಳಗೆ ನಮ್ಮ ಮನೆಗಳಲ್ಲಿ ನಿತ್ಯವೂ ಇದೆ. ಬೇಸಿಗೆಯಲ್ಲಿ ಮಜ್ಜಿಗೆ ಮಾಡಿ ಕುಡಿಯಲು, ತಂಪಾದ ಲಸ್ಸಿ ಹೊಟ್ಟೆಗಿಳಿಸಲು ಮೊಸರು ಬೇಕೇ ಬೇಕು. ಇಂತಹ ಮೊಸರಿನಲ್ಲಿರುವ ಪ್ರೊಬಯಾಟಿಕ್‌ ಗುಣಗಳಿರುವುದರಿಂದ, ಈ ಒಳ್ಳೆಯ ಬ್ಯಾಕ್ಟೀರಿಯಾಗಳು ಹೊಟ್ಟೆಯನ್ನು, ಪಚನಕ್ರಿಯೆಯನ್ನು ಆರೋಗ್ಯವಾಗಿಡುತ್ತದೆ. ಆದರೆ, ಮೊಸರು ಬೇಸಿಗೆಯಲ್ಲಿ ಬಹುಬೇಗನೆ ಹುಳಿ ಬರುತ್ತದೆ. ಹೆಚ್ಚು ಕಾಲ ಹೊರಗೇ ಇಟ್ಟರೆ, ಹುಳಿಯಾಗುತ್ತದೆ. ಕೆಲವೊಮ್ಮೆ ಇದು ಅತಿ ಹುಳಿಯಾಗಿ ತನ್ನ ವಾಸನೆಯನ್ನೂ, ರುಚಿಯನ್ನೂ ಬದಲಾಯಿಸಿಬಿಡುತ್ತದೆ. ಹೀಗೆ ಹುಳಿಯಾದ ಮೊಸರೂ ಕೂಡಾ ಆರೋಗ್ಯಕ್ಕೆ ಒಳ್ಳೆಯದನ್ನೇ ಮಾಡುತ್ತದೋ ಎಂಬ ಗೊಂದಲ ಕೆಲವರಲ್ಲಿ ಇರಬಹುದು. ಬನ್ನಿ, ಈ ಬಗ್ಗೆ (sour curd) ತಿಳಿಯೋಣ.

homemade curd in a clay pot Stomach Bloating Relief

ಆರೋಗ್ಯಕ್ಕೆ ಹಾನಿಯೇ?

ಹುಳಿ ಮೊಸರಿನ ಸೇವನೆಯಿಂದ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ. ಇದು ತೀರಾ ರುಚಿ ಕೆಡದೇ ಇದ್ದರೆ ಹಾಗೂ ಹಾಳಾಗದಿದ್ದರೆ, ಇದನ್ನು ಸೇವಿಸಬಹುದು. ಇದರಲ್ಲಿರುವ ಅಸಿಡಿಟಿ ಮಟ್ಟ ಹೆಚ್ಚಾದಷ್ಟು ಇದರಲ್ಲಿರುವ ಪ್ರೊಬಯಾಟಿಕ್‌ ಗುಣ ಹೆಚ್ಚುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಆದರೂ, ಇಂಥ ಮೊಸರನ್ನು ಸೇವಿಸುವ ಮುನ್ನ ಕೆಲವು ವಿಚಾರಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಬನ್ನಿ ಅವು ಯಾವುವು ನೋಡೋಣ.

curd in bowl
  • ಹುಳಿ ಬಂದ ಮೊಸರನ್ನು ಫ್ರಿಡ್ಜ್‌ನಲ್ಲಿಟ್ಟಿರಬೇಕು ಹಾಗೂ ಅದನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿ ಇಟ್ಟಿರಬೇಕು. ಇಲ್ಲವಾದರೆ, ಇದರಲ್ಲಿ ಕೆಟ್ಟ ಬ್ಯಾಕ್ಟೀರಿಯಾಗಳೂ ಬೆಳೆಯುವ ಸಂಭವ ಹೆಚ್ಚು.
  • ಮೊಸರಿನ ರೂಪ ಹಾಗೂ ಅದರ ಪರಿಮಳದಲ್ಲಿ ವ್ಯತ್ಯಾಸವಾಗಿದ್ದರೆ, ವಾಸನೆ ಬೀರುತ್ತಿದ್ದರೆ ಸೇವನೆ ಒಳ್ಳೆಯದಲ್ಲ. ಅಥವಾ ಹಳದಿ ಬಣ್ಣಕ್ಕೆ ತಿರುಗಿದ್ದರೂ ಕೂಡಾ ಇದನ್ನು ಸೇವಿಸಬಾರದು.
  • ಲ್ಯಾಕ್ಟೋಸ್‌ಗೆ ಬ್ಯಾಕ್ಟೀರಿಯಾ ಸೇರಿ ಹುದುಗು ಬಂದು ಲ್ಯಾಕ್ಟಿಕ್‌ ಆಸಿಡ್‌ ಆದಾಗ ಮೊಸರು ಹುಳಿ ಬರುತ್ತದೆ. ಇದು ನೈಸರ್ಗಿಕವಾದ, ಸಹಜವಾದ ಪ್ರಕ್ರಿಯೆ. ಇದಕ್ಕೆ ಕಾಲಾವಕಾಶ ಬೇಕು. ಎಷ್ಟು ಹೊತ್ತು ಹುಳಿಬರುವಿಕೆಯಲ್ಲಿ ತೆಗೆದುಕೊಂಡಿದೆ ಎಂಬುದರ ಮೇಲೆ ಮೊಸರಿನ ಹುಳಿ ನಿರ್ಧರಿತವಾಗುತ್ತದೆ.
  • ಹುಳಿ ಬರಲು ಆರಂಭವಾದ ಮೊಸರನ್ನು ಫ್ರಿಡ್ಜ್‌ನಲ್ಲಿಡುವ ಮೂಲಕ ಹುಳಿ ಬರುವಿಕೆಯ ಹಂತವನ್ನು ನಿಧಾನವಾಗಿಸಬಹುದು. ಹೆಚ್ಚು ಹೊತ್ತು ಹೊರಗೇ ಇಟ್ಟರೆ ಮತ್ತೆ ಹೆಚ್ಚು ಹುಳಿ ಬಂದು ಸೇವಿಸಲು ಅಯೋಗ್ಯವಾಗುತ್ತದೆ.
  • ಮೊಸರನ್ನು ತೆಗೆಯಲು ಬಳಸುವ ಸೌಟು ಯಾವಾಗಲೂ ಶುದ್ಧವಾಗಿರಲಿ. ಮೊಸರು ಬಹುಬೇಗನೆ ಬೇರೆ ವಸ್ತುಗಳ ಮೂಲಕ ಕಲುಷಿತಗೊಂಡು ಹಾಳಾಗುವ ಸಂಭವವಿದೆ.
  • ಹುಳಿ ಮೊಸರನ್ನು ತಿಂದು ಅಭ್ಯಾಸವಿಲ್ಲದಿದ್ದರೆ ಒಮ್ಮೆಲೆ ಹೆಚ್ಚು ಸೇವಿಸಬೇಡಿ. ಸ್ವಲ್ಪ ಸ್ವಲ್ಪವೇ ನಿಮ್ಮ ಆಹಾರದಲ್ಲಿ ಸೇರಿಸಿ.
  • ಹುಳಿ ಮೊಸರನ್ನು ಹಾಗೆಯೇ ತಿನ್ನಲು ಸಾಧ್ಯವಾಗದಿದ್ದರೆ, ಬೇರೆ ಆಹಾರಗಳ ಜೊತೆಗೆ ಸೇವಿಸಿ. ಆಗ ಅದರ ಪರಿಣಾಮ ಕಡಿಮೆಯಾಗುತ್ತದೆ.
  • ಎಲ್ಲಕ್ಕಿಂತ ಮುಖ್ಯವಾಗಿ ಹುಳಿ ಮೊಸರನ್ನು ಹಗಲಿನಲ್ಲಿ ಸೇವಿಸಿ. ರಾತ್ರಿಯ ಸಮಯ ಆದಷ್ಟೂ ಸೇವಿಸದೆ ಇರುವುದು ಒಳ್ಳೆಯದು. ನೀವು ಹೆಚ್ಚು ಆಕ್ಟಿವ್‌ ಆಗಿದ್ದಾಗ ಹಗಲು ಹೊತ್ತಿನಲ್ಲಿ ಅಥವಾ ಮಧ್ಯಾಹ್ನದೂಟದ ಜೊತೆಗೆ ಸೇವಿಸಬಹುದು.
  • ನಿಮ್ಮ ದೇಹಕ್ಕೆ ಹುಳಿ ಮೊಸರಿನಿಂದ ಏನಾದರೂ ತೊಂದರೆಯಾಗುತ್ತದೆಯೋ ಗಮನಿಸಿ. ಏನಾದರೂ ಸಮಸ್ಯೆಯಾದರೆ, ದಯವಿಟ್ಟು ಸೇವಿಸಬೇಡಿ. ನಿಮ್ಮ ದೇಹಕ್ಕೆ ಹೊಂದುತ್ತಿಲ್ಲ ಎಂದೇ ಅರ್ಥ.

ಇದನ್ನೂ ಓದಿ: Internet Addiction: ಈ 10 ಲಕ್ಷಣಗಳು ನಿಮ್ಮಲ್ಲಿದ್ದರೆ, ನೀವೂ ಇಂಟರ್ನೆಟ್‌ ಚಟಕ್ಕೆ ಬಿದ್ದಿದ್ದೀರಿ ಎಂದರ್ಥ!

Continue Reading

ಆರೋಗ್ಯ

Pancreatitis: ಏನಿದು ಪ್ಯಾಂಕ್ರಿಯಾಟೈಟಿಸ್‌ನಿಂದ ಉಂಟಾಗುವ ಉರಿಯೂತ? ಇದಕ್ಕೇನು ಪರಿಹಾರ?

Pancreatitis: ಹೊಟ್ಟೆಯಲ್ಲಿರುವ ಪ್ರಮುಖ ಅಂಗಗಳಲ್ಲಿ ಮೇದೋಜ್ಜೀರಕ ಗ್ರಂಥಿ (Pancreas)ಯೂ ಒಂದು. ಮೇದೋಜ್ಜೀರಕ ಗ್ರಂಥಿಯು ಹೊಟ್ಟೆಯ ಹಿಂದೆ ಮತ್ತು ಸಣ್ಣ ಕರುಳಿನ ಬಳಿ ಇರುವ ಉದ್ದವಾದ ಗ್ರಂಥಿ ಆಗಿದೆ. ಪ್ಯಾಂಕ್ರಿಯಾಟೈಟಿಸ್‌ ಅಂದರೆ ಮೇದೋಜ್ಜೀರಕ ಗ್ರಂಥಿಯ ಉರಿಯೂತದ ಕಾಯಿಲೆ ಎಂದರ್ಥ. ಇದಕ್ಕೆ ಏನು ಕಾರಣ? ಪರಿಹಾರ ಏನು? ಈ ಕುರಿತು ಪರಿಣತ ವೈದ್ಯರು ನೀಡಿರುವ ಸಲಹೆ ಇಲ್ಲಿದೆ.

VISTARANEWS.COM


on

Pancreatitis
Koo

-ಡಾ. ಕಿಶೋರ್ ಜಿಎಸ್‌ಬಿ, ಹಿರಿಯ ಸಲಹೆಗಾರ ಮತ್ತು ಕ್ಲಿನಿಕಲ್ ಲೀಡ್
ಡಾ. ಪಿಯೂಷ್ ಕುಮಾರ್ ಸಿನ್ಹಾ, ಹಿರಿಯ ಸಲಹೆಗಾರ, ಎಚ್‌ಪಿಬಿ ಸರ್ಜರಿ ಮತ್ತು ಲಿವರ್ ಟ್ರಾನ್ಸ್‌ಪ್ಲಾಂಟೇಶನ್ ವಿಭಾಗ, ಫೋರ್ಟಿಸ್‌ ಆಸ್ಪತ್ರೆ

ಹೊಟ್ಟೆಯಲ್ಲಿರುವ ಪ್ರಮುಖ ಅಂಗಗಳಲ್ಲಿ ಮೇದೋಜ್ಜೀರಕ ಗ್ರಂಥಿ (Pancreatitis)ಯೂ ಒಂದು. ಮೇದೋಜ್ಜೀರಕ ಗ್ರಂಥಿಯು ಹೊಟ್ಟೆಯ ಹಿಂದೆ ಮತ್ತು ಸಣ್ಣ ಕರುಳಿನ ಬಳಿ ಇರುವ ಉದ್ದವಾದ ಗ್ರಂಥಿ ಆಗಿದೆ. ಪ್ಯಾಂಕ್ರಿಯಾಟೈಟಿಸ್‌ ಅಂದರೆ ಮೇದೋಜ್ಜೀರಕ ಗ್ರಂಥಿಯ ಉರಿಯೂತದ ಕಾಯಿಲೆ ಎಂದರ್ಥ.

Pancreatitis

ಮೇದೋಜ್ಜೀರಕ ಗ್ರಂಥಿಯ ಪ್ರಮುಖ ಕೆಲಸಗಳು

ಕಿಣ್ವ ಉತ್ಪಾದನೆ

ಇದು ನಿಮ್ಮ ಸಣ್ಣ ಕರುಳಿನಲ್ಲಿರುವ ಪ್ರೋಟೀನ್‌, ಕಾರ್ಬೋಹೈಡ್ರೇಟ್‌ಗಳು ಮತ್ತು ಕೊಬ್ಬನ್ನು ಒಡೆಯುವ ಜೀರ್ಣಕಾರಿ ಕಿಣ್ವಗಳನ್ನು ಉತ್ಪಾದಿಸುತ್ತದೆ. ಈ ಕಿಣ್ವಗಳು ಸರಿಯಾದ ಪೋಷಕಾಂಶಗಳ ಹೀರಿಕೊಳ್ಳಲಿದೆ.

ಹಾರ್ಮೋನ್ ನಿಯಂತ್ರಣ

ಇದು ಇನ್ಸುಲಿನ್ ಮತ್ತು ಗ್ಲುಕಗನ್‌ನಂತಹ ಹಾರ್ಮೋನ್‌ಗಳನ್ನು ಸಹ ಉತ್ಪಾದಿಸುತ್ತದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.

ಉರಿಯೂತಕ್ಕೆ ಕಾರಣಗಳು

ಮೇದೋಜ್ಜೀರಕ ಗ್ರಂಥಿಯು ಉರಿಯೂತವಾದಾಗ ತೀವ್ರವಾದ ಪ್ಯಾಂಕ್ರಿಯಾಟೈಟಿಸ್ ಸಂಭವಿಸುತ್ತದೆ. ಈ ಉರಿಯೂತವು ಅದರ ಸಾಮಾನ್ಯ ಕಾರ್ಯಚಟುವಟಿಕೆಗೆ ಅಡ್ಡಿಪಡಿಸುತ್ತದೆ, ಜೀರ್ಣಕಾರಿ ಕಿಣ್ವಗಳು ಮೇದೋಜ್ಜೀರಕ ಗ್ರಂಥಿಯೊಳಗೆ ಗೊತ್ತಿಲ್ದೇ ಸಕ್ರಿಯವಾಗಲು ಕಾರಣವಾಗುತ್ತದೆ. ಅಂದರೆ, ಸ್ವಯಂ ಜೀರ್ಣಕ್ರಿಯೆಗೆ ಕಾರಣವಾಗುತ್ತದೆ. ಉರಿಯೂತದ ತೀವ್ರತೆಯು ರೋಗದ ಕೋರ್ಸ್ ಅನ್ನು ನಿರ್ಧರಿಸುತ್ತದೆ.

Pancreatitis photo

ಈ ಅಂಶಗಳು ಉರಿಯೂತವನ್ನು ಪ್ರಚೋದಿಸಬಹುದು

ಪಿತ್ತಗಲ್ಲುಗಳು

ಪಿತ್ತಗಲ್ಲು ಸಾಮಾನ್ಯ ಪಿತ್ತರಸ ನಾಳದಲ್ಲಿ ನೆಲೆಸಬಹುದು, ಪಿತ್ತರಸ ಮತ್ತು ಪ್ಯಾಂಕ್ರಿಯಾಟಿಕ್ ಕಿಣ್ವಗಳ ಹರಿವನ್ನು ತಡೆಯುತ್ತದೆ. ಈ ಬ್ಯಾಕಪ್ ಮೇದೋಜ್ಜೀರಕ ಗ್ರಂಥಿಯನ್ನು ಉರಿಯುವಂತೆ ಮಾಡುತ್ತದೆ.

Alcohol and cigarette Snoring Solution

ಆಲ್ಕೋಹಾಲ್ ಸೇವನೆ

ಕಾಲಾನಂತರದಲ್ಲಿ ಅತಿಯಾದ ಆಲ್ಕೊಹಾಲ್ ಸೇವನೆಯು ಮೇದೋಜ್ಜೀರಕ ಗ್ರಂಥಿಯನ್ನು ಹಾನಿಗೊಳಿಸಿ, ಉರಿಯುತ್ತಕ್ಕೆ ಕಾರಣವಾಗಬಹುದು. ಕೆಲವೊಮ್ಮೆ ಒಂದು ಪಾನೀಯವು ತೀವ್ರವಾದ ಪ್ಯಾಂಕ್ರಿಯಾಟೈಟಿಸ್ನ ಸಂಚಿಕೆಯನ್ನು ಪ್ರಚೋದಿಸಬಹುದು.

ಇತರ ಕಾರಣಗಳು

ಅತಿಯಾದ ಔಷಧಿಗಳ ಸೇವನೆ, ದೇಹಕದಲ್ಲಿ ಕಾಣಿಸಿಕೊಳ್ಳುವ ಸೋಂಕುಗಳು (ಮಂಪ್ಸ್), ಅಧಿಕ ರಕ್ತದ ಟ್ರೈಗ್ಲಿಸರೈಡ್ ಮಟ್ಟ ಮತ್ತು ಕೆಲವು ಶಸ್ತ್ರಚಿಕಿತ್ಸಾ ವಿಧಾನಗಳು ಕಾರಣವಾಗಬಹುದು.

ತೀವ್ರವಾದ ಪ್ಯಾಂಕ್ರಿಯಾಟೈಟಿಸ್‌ನ ರೋಗಲಕ್ಷಣ

  • ಹೊಟ್ಟೆಯ ಮೇಲ್ಭಾಗದಲ್ಲಿ ತೀವ್ರವಾದ ನೋವು, ಈ ನೋವು ಬೆನ್ನಿನ ಕಡೆಗೂ ಹರಡಬಹುದು,
  • ವಾಕರಿಕೆ ಮತ್ತು ವಾಂತಿ
  • ಹಸಿವು ಆಗದೇ ಇರುವುದು
  • ಜ್ವರ
  • ಹೃದಯ ಬಡಿತ ಹೆಚ್ಚಳ
  • ಅಸ್ವಸ್ಥತೆ ಅಥವಾ ಆಯಾಸ
  • ಕಿಬ್ಬೊಟ್ಟೆಯ ಊತ
  • ಪರೀಕ್ಷೆ ಅಗತ್ಯ

ರಕ್ತ ಪರೀಕ್ಷೆ: ನಿಮ್ಮ ರಕ್ತದಲ್ಲಿನ ಪ್ಯಾಂಕ್ರಿಯಾಟಿಕ್ ಕಿಣ್ವಗಳ (ಅಮೈಲೇಸ್ ಮತ್ತು ಲಿಪೇಸ್) ಮಟ್ಟ (ಸಾಮಾನ್ಯ ಮೇಲಿನ ಮಿತಿಗಿಂತ ಮೂರು ಪಟ್ಟು ಹೆಚ್ಚು) ಹೆಚ್ಚಳವಾಗುತ್ತಿರುವ ಪರೀಕ್ಷೆ ಮಾಡಿಸಿಕೊಳ್ಳುವುದು

ಅಲ್ಟ್ರಾಸೌಂಡ್, CT ಸ್ಕ್ಯಾನ್, ಅಥವಾ MRI ಸ್ಕ್ಯಾನ್‌ನ ಮೂಲಕ ಮೇದೋಜ್ಜೀರಕ ಗ್ರಂಥಿಯನ್ನು ದೃಶ್ಯೀಕರಿಸಿ ಪಿತ್ತಗಲ್ಲು, ಉರಿಯೂತ ಅಥವಾ ತೊಡಕುಗಳನ್ನು ಗುರುತಿಸುವುದು

Pancreatitis image

ಚಿಕಿತ್ಸೆಗಳೇನು?

ನೋವು ನಿವಾರಣೆ: ಮೇದೋಜ್ಜೀರಕದಲ್ಲಿ ಉಂಟಾದ ನೋವನ್ನು ನಿವಾರಿಸಲು ವೈದ್ಯರು ಸೂಕ್ತ ಔಷಧ ನೀಡುತ್ತಾರೆ. ಔಷಧಗಳು ಮತ್ತು ನೋವು ನಿರ್ವಹಣೆ ತಂತ್ರಗಳು ಅಸ್ವಸ್ಥತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಮೇದೋಜ್ಜೀರಕ ಗ್ರಂಥಿಯನ್ನು ಶಾಂತಿಗೊಳಿಸುವುದು: ಅತಿಯಾದ ಉರಿಯೂತವಿದ್ದ ಸಂದರ್ಭದಲ್ಲಿ ವೈದ್ಯರು, ಮೊದಲು ಮೇದೋಜ್ಜೀರಕ ಗ್ರಂಥಿ ಶಾಂತಿಗೊಳಿಸಲು ಊಟ ಹಾಗೂ ನೀರು ಸೇವಿಸುವುದನ್ನು ನಿಲ್ಲಿಸಲು ಸೂಚಿಸುತ್ತಾರೆ. ಇದಕ್ಕೆ ಪರ್ಯಾಯವಾಗಿ ನಿಮ್ಮನ್ನು ಹೈಡ್ರೀಕರಿಸಲು ದ್ರವಗಳನ್ನು ಅಭಿದಮನಿ ಮೂಲಕ ಒದಗಿಸಲಾಗುತ್ತದೆ.

ಔಷಧಿಗಳು: ವಾಕರಿಕೆ ಮತ್ತು ವಾಂತಿಯನ್ನು ನಿಯಂತ್ರಿಸಲು ಔಷಧಿಗಳನ್ನು ನೀಡಬಹುದು.

ಪ್ರಕರಣದ ತೀವ್ರತೆ ಆಧಾರದ ಮೇಲೆ ಸೂಕ್ತ ಚಿಕಿತ್ಸೆ ನೀಡಲಿದ್ದಾರೆ.

ಇದನ್ನೂ ಓದಿ: Sabja Seeds Benefits: ಸಬ್ಜಾ ಬೀಜವನ್ನು ನೆನೆಹಾಕಿ ಸೇವಿಸಿದರೆ ಹಲವು ಆರೋಗ್ಯ ಸಮಸ್ಯೆ ದೂರ

ತಡೆಗಟ್ಟುವ ಕ್ರಮಗಳೇನು?

  • ಧೂಮಪಾನವನ್ನು ತ್ಯಜಿಸಿ – ಧೂಮಪಾನವು ಮಾರಕವಾಗಬಹುದು. ಆದ್ದರಿಂದ, ಧೂಮಪಾನವನ್ನು ನಿಲ್ಲಿಸಿ. ನಿಮಗೆ ಸಾಧ್ಯವಾಗದಿದ್ದರೆ, ನಿಮ್ಮ ವೈದ್ಯರಿಂದ ಸಹಾಯ ಪಡೆಯಿರಿ.
  • ಆಲ್ಕೋಹಾಲ್ ಸೇವನೆಯನ್ನು ನಿಲ್ಲಿಸಿ – ಮೇದೋಜ್ಜೀರಕ ಗ್ರಂಥಿಯ ಉರಿಯೂತದೊಂದಿಗೆ ಆಲ್ಕೊಹಾಲ್ ಕುಡಿಯುವುದು ಜೀವಕ್ಕೆ ಅಪಾಯಕಾರಿ.
  • ನಿಮ್ಮನ್ನು ಹೈಡ್ರೀಕರಿಸಿಟ್ಟುಕೊಳ್ಳಿ – ನಿಮ್ಮನ್ನು ಹೈಡ್ರೀಕರಿಸಲು ಸಾಕಷ್ಟು ನೀರು ಮತ್ತು ಇತರ ದ್ರವಗಳನ್ನು ಕುಡಿಯಿರಿ.
  • ಕಡಿಮೆ ಕೊಬ್ಬಿನ ಆಹಾರವನ್ನು ಸೇವಿಸಿ – ಧಾನ್ಯಗಳು, ತಾಜಾ ತರಕಾರಿಗಳು, ಹಣ್ಣುಗಳು ಮತ್ತು ಸೀಸದ ಪ್ರೋಟೀನ್‌ಗಳನ್ನು ಒಳಗೊಂಡಿರುವ ಕಡಿಮೆ-ಕೊಬ್ಬಿನ ಆಹಾರವನ್ನು ಅನುಸರಿಸಿ.
Continue Reading

ಆರೋಗ್ಯ

Food for Concentration: ಈ ಆಹಾರಗಳ ಸೇವನೆಯಿಂದ ನಿಮ್ಮ ಏಕಾಗ್ರತೆ ಶಕ್ತಿಯೇ ಕುಂಠಿತವಾಗಬಹುದು!

Food for Concentration: ಕೆಲವು ಆಹಾರಗಳು ಸಾಕಷ್ಟು ಪೋಷಕಾಂಶಗಳನ್ನು ಒಳಗೊಂಡು ಮಿದುಳಿನ ಆರೋಗ್ಯದ ಕಾಳಜಿ ವಹಿಸುತ್ತವೆ. ಮೀನು, ಮೊಟ್ಟೆ, ಡಾರ್ಕ್‌ ಚಾಕೋಲೇಟ್‌, ಬೆರ್ರಿಗಳು, ಒಣ ಬೀಜಗಳು, ಧಾನ್ಯಗಳು, ಬೇಳೆ ಕಾಳುಗಳು ಮಿದುಳಿನ ಆರೋಗ್ಯಕ್ಕೆ ಅತ್ಯಂತ ಸೂಕ್ತ. ಇವನ್ನು ತಿನ್ನುವುದರಿಂದ ಮಿದುಳಿನ ಆರೋಗ್ಯ ಹೆಚ್ಚುತ್ತದೆ. ಆದರೆ, ಕೆಲವು ಆಹಾರ ಸೇವನೆಯಿಂದ ಮಿದುಳಿನ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳೂ ಆಗುತ್ತವೆ. ಅವು ಏಕಾಗ್ರತೆಯನ್ನೂ ಕ್ಷೀಣಿಸುವಂತೆ ಮಾಡಬಲ್ಲವು.

VISTARANEWS.COM


on

Food for Concentration
Koo

ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ (Food for Concentration) ಗುಟ್ಟಿರುವುದು ನಾವೇನು ಆಹಾರ ಸೇವಿಸುತ್ತೇವೆ ಎಂಬುದರ ಮೇಲೆ. ಈಗಾಗಲೇ ಅನೇಕ ಸಂಶೋಧನೆಗಳು ನಾವು ತಿನ್ನುವ ಆಹಾರಕ್ಕೂ ನಮ್ಮ ಮಾನಸಿಕ ಆರೋಗ್ಯಕ್ಕೂ ಸಂಬಂಧವಿದೆ ಎಂಬುದನ್ನು ಸಾಬೀತುಪಡಿಸಿವೆ. ಕೆಲವು ಆಹಾರಗಳು ಸಾಕಷ್ಟು ಪೋಷಕಾಂಶಗಳನ್ನು ಒಳಗೊಂಡು ಮಿದುಳಿನ ಆರೋಗ್ಯದ ಕಾಳಜಿ ವಹಿಸುತ್ತವೆ. ಮೀನು, ಮೊಟ್ಟೆ, ಡಾರ್ಕ್‌ ಚಾಕೋಲೇಟ್‌, ಬೆರ್ರಿಗಳು, ಒಣ ಬೀಜಗಳು, ಧಾನ್ಯಗಳು, ಬೇಳೆ ಕಾಳುಗಳು ಮಿದುಳಿನ ಆರೋಗ್ಯಕ್ಕೆ ಅತ್ಯಂತ ಸೂಕ್ತ. ಇವನ್ನು ತಿನ್ನುವುದರಿಂದ ಮಿದುಳಿನ ಆರೋಗ್ಯ ಹೆಚ್ಚುತ್ತದೆ. ಆದರೆ, ಕೆಲವು ಆಹಾರ ಸೇವನೆಯಿಂದ ಮಿದುಳಿನ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳೂ ಆಗುತ್ತವೆ. ಅವು ಏಕಾಗ್ರತೆಯನ್ನೂ ಕ್ಷೀಣಿಸುವಂತೆ ಮಾಡಬಲ್ಲವು. ಬನ್ನಿ, ಯಾವೆಲ್ಲ ಆಹಾರಗಳು ಏಕಾಗ್ರತಾ ಶಕ್ತಿಯನ್ನೇ ಮೊಡಕುಗೊಳಿಸುತ್ತವೆ ಎಂಬುದನ್ನು ನೋಡೋಣ.

Cakes, Muffins

ಇವು ಅತಿಯಾದರೆ ಒಳ್ಳೆಯದಲ್ಲ

ಪೇಸ್ಟ್ರಿ, ಕೇಕ್‌, ವೈಟ್‌ ಬ್ರೆಡ್‌: ಕೇಕ್‌, ಪೇಸ್ಟ್ರಿಗಳು ಹಾಗೂ ಬ್ರೆಡ್‌ನಿಂದ ಮಾಡಿದ ಸ್ಯಾಂಡ್‌ವಿಚ್‌, ಬರ್ಗರ್‌, ಡೋನಟ್‌ ಇತ್ಯಾದಿಗಳೆಲ್ಲವೂ ಬಾಯಲ್ಲಿ ನೀರೂರುಸಬಹುದು. ನಿಮ್ಮ ಸಂಭ್ರಮವನ್ನು ಹೆಚ್ಚಿಸಬಹುದು. ಮಕ್ಕಳು ಇವಿದ್ದರೆ ಊಟ ಬಿಡಬಹುದು. ಆದರೆ, ಇವು ಅತಿಯಾದರೆ ಒಳ್ಳೆಯದಲ್ಲ. ಇವು ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ಏರುಪೇರುಗೊಳಿಸುವ ಜೊತೆಗೆ ಮಿದುಳಿನ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಬಹುದು.

French Fries Closeup

ಹೆಚ್ಚು ಉಪ್ಪಿರುವ ತಿನಿಸುಗಳು

ಹೆಚ್ಚು ಉಪು ಒಳ್ಳೆಯದಲ್ಲ. ಹೆಚ್ಚು ಉಪ್ಪಿನ ಸೇವನೆಯಿಂದ ಮಿದುಳಿನ ಕಾರ್ಯನಿರ್ವಹಣೆಗೆ ಅಡ್ಡಿಯಾಗುತ್ತದೆ. ಹೆಚ್ಚು ಉಪ್ಪಿನಿಂದ ಕೆಲವೊಮ್ಮೆ ಮಿದುಳಿನಲ್ಲಿ ಉರಿಯೂತವೂ ಆಗಬಹುದು. ಸ್ಮರಣಶಕ್ತಿ ಕುಂಠಿತಗೊಳ್ಳುವುದು, ಏಕಾಗ್ರತೆಗೆ ಧಕ್ಕೆಯುಂಟಾಗುವುದು ಇತ್ಯಾದಿಗಳೂ ಆಗುವ ಸಂಭವ ಹೆಚ್ಚು.

Selection of Colorful Sweets

ಸೋಡಾ ಹಾಗೂ ಸಕ್ಕರೆಯುಕ್ತ ಆಹಾರ

ಹೆಚ್ಚಿನ ಮಂದಿಗೆ ತಂಪಾದ ಸೋಢಾ, ಹಾಗೂ ಕಾರ್ಬೋನೇಟೆಡ್‌ ಡ್ರಿಂಕ್‌ಗಳನ್ನು ಸೇವಿಸುವುದರಿಂದ ಖುಷಿ, ಉಲ್ಲಾಸ ಸಿಗುತ್ತದೆ. ಆದರೆ, ಇವುಗಳ ಸೇವನೆಯಿಂದ ದಿಢೀರ್‌ ಸಕ್ಕರೆಯ ಅಂಶ ದೇಹದಲ್ಲಿ ಹೆಚ್ಚುತ್ತದೆ. ಸಿಹಿತಿನಿಸು, ಹಾಗೂ ಸಿಹಿಯಾದ ಡ್ರಿಂಕ್‌ಗಳನ್ನು ಕುಡಿಯುವುದರಿಂದಲೂ ಇದೇ ಆಗಬಹುದು. ಇಂತಹ ಸಿಹಿಯಿಂದ ಸಿಗುವ ಖುಷಿಗೆ ಒಗ್ಗಿಕೊಂಡ ಮನಸ್ಸು ದೇಹ ಹಲವು ಅಡ್ಡ ಪರಿಣಾಮಗಳನ್ನೂ ಕಾಣುತ್ತದೆ. ಮಾನಸಿಕವಾಗಿ ಒತ್ತಡ, ಖಿನ್ನತೆ, ಪಾರ್ಶ್ವವಾಯು, ಏಕಾಗ್ರತೆಯಲ್ಲಿ ಸಮಸ್ಯೆ ಇತ್ಯಾದಿಗಳಿಗೂ ಕಾರಣವಾಗಬಹುದು.

Image Of Coffee Side Effects

ಕಾಫಿ

ಕಾಫಿ ಕುಡಿಯುವುದರಿಂದ ಅದರಲ್ಲಿರುವ ಕೆಫಿನ್‌ನಿಂದಾಗಿ ನಿಮಗೆ ಶಕ್ತಿ ಇಮ್ಮಡಿಯಾಗಿ ಕೆಲಸದಲ್ಲಿ ಚುರುಕುತನ ಕಾಣಬಹುದು. ಆದರೆ, ಇದು ತಾತ್ಕಾಲಿಕ. ಆದರೆ ಇವು ಉದ್ವೇಗವನ್ನೂ ಹೆಚ್ಚು ಮಾಡುತ್ತದೆ. ಕೆಲವು ಮಂದಿಗೆ ಇದು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪರಿಣಾಮ ಬೀರುತ್ತದೆ. ನಿದ್ದೆಯ ಸಮಸ್ಯೆ, ಒಂದೆಡೆ ಕೂರಲು ಸಾಧ್ಯವಾಗದಿರುವಂಥ ಏಕಾಗ್ರತೆಯ ಕೊರತೆ ಇತ್ಯಾದಿಗಳೂ ಕಾಣಿಸಿಕೊಳ್ಳಬಹುದು.

ಇದನ್ನೂ ಓದಿ: Mint Leaf Water: ಪುದಿನ ಎಲೆಗಳ ನೀರನ್ನು ನಿತ್ಯವೂ ಕುಡಿಯಿರಿ, ಈ ಲಾಭಗಳನ್ನು ಪಡೆಯಿರಿ!

ಶಕ್ತಿವರ್ಧಕ ಪೇಯಗಳು

ಬಹಳ ಮಂದಿ ನಿದ್ದೆಯನ್ನು ಮುಂದೂಡಲು ಕೆಲವು ಕೆಫಿನ್‌ ಇರುವ ಪೇಯಗಳು, ಶಕ್ತಿವರ್ಧಕ ಪೇಯಗಳನ್ನು ಕುಡಿಯುತ್ತಾರೆ. ಅದು ಆ ಕ್ಷಣಕ್ಕೆ ನಿದ್ದೆಯನ್ನು ಮುಂದೂಡಬಹುದು ನಿಜವಾದರೂ, ಭವಿಷ್ಯದಲ್ಲಿ ಒಳ್ಳೆಯದನ್ನು ಮಾಡಲಾರದು. ನಿರ್ಜಲೀಕರಣ, ಮೂತ್ರಶಂಕೆ ಅತಿಯಾಗುವುದು, ಮೂಡ್‌ ಏರುಪೇರು, ಉದ್ವೇಗ, ಏಕಾಗ್ರತೆಯ ಸಮಸ್ಯೆ ಇತ್ಯಾದಿ ಸಮಸ್ಯೆಗಳನ್ನು ತಂದೊಡ್ಡಬಹುದು.

Continue Reading
Advertisement
Woman Doctor
ದೇಶ4 mins ago

ಬೇರೆ ಹುಡುಗಿಗೆ ಮೋಸ ಆಗಬಾರದು; ಮದುವೆಯಾಗಲ್ಲ ಎಂದ ಗೆಳೆಯನ ಗುಪ್ತಾಂಗ ಕತ್ತರಿಸಿದ ಯುವತಿ! Video ಇದೆ

Designer Hairpins Fashion
ಫ್ಯಾಷನ್16 mins ago

Designer Hairpins Fashion: ಗ್ರ್ಯಾಂಡ್‌ ಲುಕ್‌ಗೆ ಸಾಥ್‌ ನೀಡುವ ಡಿಸೈನರ್‌ ಹೇರ್‌ಪಿನ್ಸ್

Amritpal Singh
ದೇಶ52 mins ago

Amritpal Singh: ಜೈಲಿನಲ್ಲಿರುವ ಖಲಿಸ್ತಾನಿ ಪ್ರತ್ಯೇಕತಾವಾದಿ ಅಮೃತ್‌ಪಾಲ್‌ ಸಿಂಗ್‌ಗೆ ಪೆರೋಲ್‌

Bridge Collapse
ದೇಶ1 hour ago

Bridge Collapse: ಬಿಹಾರದಲ್ಲಿ ಮತ್ತೆರಡು ಸೇತುವೆ ಕುಸಿತ; 15 ದಿನಗಳಲ್ಲಿ ಇದು 7ನೇ ಪ್ರಕರಣ!

Stabbing Case
ಕರ್ನಾಟಕ1 hour ago

Stabbing Case: ಕಾಲೇಜಿನೊಳಗೆ ಬಿಡದ್ದಕ್ಕೆ ಸೆಕ್ಯೂರಿಟಿ ಗಾರ್ಡ್‌ನ ಇರಿದು ಕೊಂದ ವಿದ್ಯಾರ್ಥಿ!

ಕರ್ನಾಟಕ2 hours ago

Rain News: ಚಿಕ್ಕಮಗಳೂರು, ಕೊಡಗಿನಲ್ಲಿ ಮಳೆ ಅಬ್ಬರ; ವಿದ್ಯುತ್‌ ಕಣ್ಣಾಮುಚ್ಚಾಲೆಯಿಂದ ಜನ ಪರದಾಟ

Cabinet Committees
ದೇಶ2 hours ago

Cabinet Committees: ಸಂಪುಟ ಸಮಿತಿಗಳನ್ನು ರಚಿಸಿದ ಕೇಂದ್ರ; ಭದ್ರತಾ ಸಮಿತಿಗೆ ಮೋದಿಯೇ ಮುಖ್ಯಸ್ಥ!

Hemant Soren
ದೇಶ3 hours ago

Hemant Soren: ‌ಜಾಮೀನು ಸಿಕ್ಕ ಬೆನ್ನಲ್ಲೇ ಮತ್ತೆ ಜಾರ್ಖಂಡ್‌ ಸಿಎಂ ಆಗಲಿರುವ ಹೇಮಂತ್‌ ಸೊರೆನ್

MUDA site scandal
ಕರ್ನಾಟಕ3 hours ago

MUDA site scandal: ಮುಡಾ ಸೈಟ್ ಅಕ್ರಮ; ನಾನು ಯಾಕಪ್ಪ ರಾಜೀನಾಮೆ ಕೊಡಲಿ, ನನ್ನ ಪಾತ್ರ ಏನಿದೆ ಎಂದ ಸಿಎಂ!

Kannada New Movie Odo Odo Odo Kailash Kher
ಸಿನಿಮಾ3 hours ago

Kannada New Movie: ‘ಫಾರೆಸ್ಟ್’ ಸಿನಿಮಾದ ಮೊದಲ ಹಾಡು ರಿಲೀಸ್!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ1 day ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ2 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ3 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು3 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ4 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ4 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ5 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ6 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ6 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

ಟ್ರೆಂಡಿಂಗ್‌