No Smoking Day: ಎಳೆದರೆ ದಂ, ಪ್ರಾಣ ಖತಂ! ಧೂಮಪಾನದಿಂದ ದೂರ ಸರಿಯಲು ಹೀಗೆ ಮಾಡಿ - Vistara News

ಆರೋಗ್ಯ

No Smoking Day: ಎಳೆದರೆ ದಂ, ಪ್ರಾಣ ಖತಂ! ಧೂಮಪಾನದಿಂದ ದೂರ ಸರಿಯಲು ಹೀಗೆ ಮಾಡಿ

ಇರುಳು ಕಂಡ ಬಾವಿಗೆ ಹಗಲು ಬೀಳುವುದೆಂಬ ಮಾತಿದೆ. ತಂಬಾಕು ವ್ಯಸನಿಗಳ ಪಾಲಿಗೂ ಈ ಮಾತು ಸತ್ಯ. ಧೂಮಪಾನದಿಂದ ಉಂಟಾಗುವ ದುಷ್ಪರಿಣಾಮಗಳ ಅರಿವಿದ್ದೂ ವ್ಯಸನಿಗಳಾಗುವವರ ಸಂಖ್ಯೆ ವಿಶ್ವದೆಲ್ಲೆಡೆ ಹೆಚ್ಚುತ್ತಿದೆ. ಹಾಗಾಗಿಯೇ ಇಂದು ʻಧೂಮಪಾನ ರಹಿತ ದಿನʼ (No Smoking Day).

VISTARANEWS.COM


on

No smoking
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕಂಡಿದ್ದಕ್ಕೆಲ್ಲ ಒಂದೊಂದು ದಿನ ಆಚರಿಸುವುದು ಆಧುನಿಕ ಜಗತ್ತಿನ ಸಂಪ್ರದಾಯ. ಹೀಗಿರುವಾಗ ಸಿಗರೇಟ್‌ಗೊಂದು ದಿನ ಇರದಿದ್ದರೆ ಹೇಗೆ? ಇವತ್ತು ಧೂಮಪಾನದ ವಿಷಯಕ್ಕೇ ಮೀಸಲಾದ ದಿನ! ಇಷ್ಟೆಂದರೆ ʻದಮ್‌ʼ ಜೊತೆಗೆ ದಾಂಪತ್ಯ ಹೂಡಿರುವ ದಂ-ಪತಿಗಳು ಖುಷಿಯಿಂದ ಕುಣಿದಾಡಿಬಿಟ್ಟಾರು. ವಿಷಯ ಅರ್ಧಂಬರ್ಧ ಕೇಳಿಯೇ ಖುಷಿ ಪಟ್ಟರೆ, ಪೂರ್ತಿ ಕೇಳಿದ ಮೇಲೆ ಅಂಥವರು ಹೇಗಿರುತ್ತಾರೋ. ಪ್ರತಿ ವರ್ಷದ ಮಾರ್ಚ್‌ ತಿಂಗಳ ಎರಡನೇ ಬುಧವಾರವನ್ನು ʻಧೂಮಪಾನ ರಹಿತ ದಿನʼ ಎಂದು ಗುರುತಿಸಲಾಗಿದೆ. ಹೌದು, ಧೂಮಪಾನ ಮತ್ತು ತಂಬಾಕು ಚಟಗಳ ವಿರುದ್ಧದ ಅಭಿಯಾನದ ಹಿನ್ನೆಲೆಯಲ್ಲಿ ಈ ದಿನ ಹುಟ್ಟಿಕೊಂಡಿದ್ದು, ವಿಶ್ವದ ಎಲ್ಲ ದೇಶಗಳಲ್ಲಿ ಇದನ್ನು ಆಚರಿಸುವ (No Smoking Day) ಅನಿವಾರ್ಯತೆಯೂ ಎದುರಾಗಿದೆ.
ಇಂಗ್ಲೆಂಡ್‌ನಲ್ಲಿ 1984ರ ಬೂದಿ ಬುಧವಾರದಂದು (Ash Wednesday) ಈ ದಿನ ಮೊದಲಿಗೆ ಪ್ರಾರಂಭವಾಗಿದ್ದು, ನಂತರ ಅದನ್ನು ಮಾರ್ಚ್‌ ತಿಂಗಳ ಎರಡನೇ ಬುಧವಾರವೆಂದು ಘೋಷಿಸಲಾಯಿತು. ʻಧೂಮಪಾನ ರಹಿತ ದಿನʼ ಎಂಬ ಹೆಸರು ಕೇಳಿಯೇ ದಂ ಪ್ರಿಯರು ಕೋಪದಿಂದ ಹೊಗೆಯಾಡಬಹುದು. ಆದರೆ ಸಿಗರೇಟ್‌ನ ಕಾರಣಕ್ಕೆ ಹೊಗೆ ಹಾಕಿಸಿಕೊಳ್ಳುವುದು ಬೇಡ ಎನ್ನುವ ಆಸೆಯಿದ್ದರೆ, ಈ ಬಗ್ಗೆ ಲಕ್ಷ್ಯ ಕೊಡುವುದು ಕ್ಷೇಮ. ಕ್ಯಾನ್ಸರ್‌, ಶ್ವಾಸಕೋಶದ ಸೋಂಕುಗಳು, ಹೃದಯದ ಸಮಸ್ಯೆಗಳು, ಫಲವಂತಿಕೆಯ ಕೊರತೆ, ಗರ್ಭಾವಸ್ಥೆಯ ತೊಂದರೆಗಳು, ಅವಧಿಗೆ ಮುನ್ನವೇ ವಯಸ್ಸಾಗುವುದು, ಚರ್ಮ ಸುಕ್ಕಾಗುವುದು, ಹಲ್ಲು-ಒಸಡಿನ ಸಮಸ್ಯೆಗಳು… ಸಿಗರೇಟ್‌ನಿಂದಾಗುವ ತೊಂದರೆಗಳ ಪಟ್ಟಿ ಮುಗಿಯುವುದೇ ಇಲ್ಲ.

smoking

ಕೋಟಿಗಟ್ಟಲೆ ವ್ಯಸನಿಗಳು

ಭಾರತ ಒಂದರಲ್ಲೇ ಸುಮಾರು 26 ಕೋಟಿಗೂ ಹೆಚ್ಚು ತಂಬಾಕು ವ್ಯಸನಿಗಳಿದ್ದಾರೆ. ವಾರ್ಷಿಕ 10 ಲಕ್ಷ ಮಂದಿ ತಂಬಾಕಿನ ವ್ಯಸನದಿಂದ ಉಂಟಾಗುವ ರೋಗಗಳಿಗೆ ಜೀವ ಕಳೆದುಕೊಳ್ಳುತ್ತಿದ್ದಾರೆ. ಆಸ್ತಮಾ, ಬ್ರಾಂಕೈಟಿಸ್‌, ನ್ಯುಮೋನಿಯದಂಥ ತೊಂದರೆಗಳು ಧೂಮಪಾನಿಗಳ ಪುಪ್ಪುಸವನ್ನು ಹಿಂಡುತ್ತಲೇ ಇರುತ್ತವೆ. ಹಾಗಾಗಿ ಸಿಗರೇಟ್‌ ವ್ಯಸನದಿಂದ ಮುಕ್ತರಾಗುವ ಅನಿವಾರ್ಯತೆಯನ್ನು ಎಲ್ಲೆಡೆ ಹರಡಲು ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ʻಮಕ್ಕಳನ್ನು ತಂಬಾಕಿನಿಂದ ದೂರವಿರಿಸಿʼ ಎನ್ನುವ ಘೋಷಣೆಯನ್ನು 2024ರಲ್ಲಿ ಸಾರಲಾಗುತ್ತಿದೆ.
ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಅರಿವಿಲ್ಲದೆಯೇ ಈ ವ್ಯಸನಕ್ಕೆ ಅಂಟಿಕೊಂಡವರು ಕಡಿಮೆ ಎನ್ನುವುದು ಇನ್ನೂ ವಿಪರ್ಯಾಸದ ವಿಷಯ. ಹಾಗಾಗಿ ಹೊಗೆ ಸುರುಳಿಯಿಂದ ಬಿಡಿಸಿಕೊಂಡು ಹೊರ ಬರುವುದಕ್ಕೆ ಏನು ಮಾಡಬಹುದು ಎನ್ನುವುದರ ಮೇಲೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸುವ ಆವಶ್ಯಕತೆ ಈಗ ಎದುರಾಗಿದೆ. ಒಂದು ಧಂ ಎಳೆಯಲೇಬೇಕು ಎನ್ನುವ ತುಡಿತವನ್ನು ಹತ್ತಿಕ್ಕಿ, ಮನಸ್ಸಿನ ಚಪಲದ ಮೇಲೆ ಜಯ ಸಾಧಿಸುವುದು ಹೇಗೆ ಎನ್ನುವತ್ತ ಕೆಲವು ಕಿವಿಮಾತುಗಳಿವು.

ಕಾರಣವನ್ನು ನೀವೇ ಹುಡುಕಿಕೊಳ್ಳಿ

ಹೌದು, ಸಿಗರೇಟ್‌ ಬಿಡುವುದಕ್ಕೆ ಇನ್ನೊಬ್ಬರು ಹೇಳಿದಾಗ ಕೇಳುವುದಕ್ಕೆ ಮನಸ್ಸಾಗುವುದಿಲ್ಲ. ಬದಲಿಗೆ, ಕಾರಣವನ್ನು ನೀವೇ ಹುಡುಕಿಕೊಳ್ಳಿ. ಉದಾ, ಕ್ಯಾನ್ಸರ್‌ ದೂರ ಇಡುವುದು, ಹೃದಯವನ್ನು ಚೆನ್ನಾಗಿಡುವುದು, ನಿಮ್ಮ ಮಕ್ಕಳನ್ನು ಇದರಿಂದ ಕಾಪಾಡುವುದು- ಇಂಥ ಯಾವುದಾದರೂ ನಿಮ್ಮ ಮನಸ್ಸಿಗೆ ಸತ್ಯವೆನಿಸುವ ಕಾರಣವನ್ನು ಹುಡುಕಿ, ಅದಕ್ಕೆ ಭದ್ರವಾಗಿ ಅಂಟಿಕೊಳ್ಳಿ. ಆಗ ಪ್ರತಿಬಾರಿ ಧಂ ಎಳೆಯುವ ಮನಸ್ಸಾದಾಗಲೂ ಕಣ್ಣೆದುರಿಗೆ ಕೆಮ್ಮುತ್ತಿರುವ ನಿಮ್ಮದು ಅಥವಾ ಮಕ್ಕಳ ಚಿತ್ರವನ್ನು ತಂದುಕೊಳ್ಳಲು ಕಷ್ಟವಾಗುವುದಿಲ್ಲ.

ತುಡಿತಗಳನ್ನು ಮೆಟ್ಟಿ

ಒತ್ತಡ ಅತಿಯಾದರೆ ಧಂ ಬೇಕೆನಿಸುತ್ತದೆಯೇ? ಮಿತ್ರರೊಂದಿಗೆ ಪಾರ್ಟಿಗೆ ಹೋದಾಗ ಹತ್ತಿಕ್ಕುವುದು ಕಷ್ಟವೇ? ಪ್ರತಿ ದಿನ ಊಟದ ನಂತರ ಹೊಗೆ ಸುರುಳಿ ಸುತ್ತುತ್ತೀರೇ? ಅಂದರೆ, ಸಿಗರೇಟ್‌ ಬೇಕೆಂಬುದನ್ನು ಟ್ರಿಗರ್‌ ಮಾಡುವ ವಿಷಯ ಯಾವುದು ಗಮನಿಸಿ. ಉದಾ, ಪ್ರತಿದಿನ ಊಟದ ನಂತರ ಸಿಗರೇಟ್‌ ಅಭ್ಯಾಸವಿದ್ದರೆ, ಒಂದು ಡಾರ್ಕ್‌ ಚಾಕಲೇಟ್‌ ತಿನ್ನುವುದಕ್ಕೆ ಬದಲಾಯಿಸಿ. ಇದರಲ್ಲಿರುವ ಕೆಫೇನ್‌ ಮೆದುಳನ್ನು ಪ್ರಚೋದಿಸುತ್ತದೆ, ಆರೋಗ್ಯಕ್ಕಾಗುವ ಹಾನಿಯನ್ನು ಈ ಮೂಲಕ ಕಡಿಮೆ ಮಾಡಬಹುದು.

Stop Tobacco App is used for to stop public smoking in bengaluru

ಚಟ ಬದಲಾಯಿಸಿ!

ಇದೂ ಒಂದು ಮಾರ್ಗ. ಸಿಗರೇಟ್‌ ಬೇಕೆನಿಸಿದಾಗೆಲ್ಲ ಅದಕ್ಕಾಗಿಯೇ ಇರುವ ಕ್ಯಾಂಡಿಗಳನ್ನು ಬಾಯಲ್ಲಿರಿಸಿಕೊಳ್ಳಿ. ಒಂದೊಮ್ಮೆ ಅದು ಬೇಡದಿದ್ದರೆ, ಉಪ್ಪಲ್ಲಿ ಅದ್ದಿದ ನಿಂಬೆಹಣ್ಣು, ನೆಲ್ಲಿಕಾಯಿಯ ಕ್ಯಾಂಡಿಗಳನ್ನು ಅಥವಾ ಹುಣಸೆಹಣ್ಣಿನ ಕ್ಯಾಂಡಿಯನ್ನು ಪ್ರಯತ್ನಿಸಿ. ಆ ರುಚಿ ಬಾಯಿಗೆ ಒಗ್ಗದಿದ್ದರೆ ಬಾದಾಮಿ, ಫಾಕ್ಸ್‌ನಟ್‌ ಮುಂತಾದ ಕಾಯಿಗಳನ್ನು ʻಕಟಂʼ ಮಾಡಿ. ಆ ಹೊತ್ತಿಗೆ ಹಸಿಯಾದ ಕ್ಯಾರೆಟ್‌ ತಿನ್ನುವವರಿದ್ದಾರೆ. ಇಡೀ ಗೋದಿ ಕಾಳುಗಳನ್ನು ಅಗಿದೂ ಅಗಿದು ಚ್ಯೂಯಿಂಗ್‌ ಗಮ್‌ನಂತೆ ಮಾಡುವವರೂ ಇದ್ದಾರೆ. ಅಂತೂ ಸಿಗರೇಟ್‌ ಬಿಡುವುದಕ್ಕೆ ಆರೋಗ್ಯಕರ ದಾರಿಗಳು ಲೋಕದಲ್ಲಿ ಸಿಕ್ಕಾಪಟ್ಟೆ ಇವೆ, ನೀವು ಮನಸ್ಸು ಮಾಡಬೇಕಷ್ಟೆ.

ಹವ್ಯಾಸಗಳು

ಯಾವುದೋ ವಸ್ತು ಬೇಕೆಂದು ಹಠ ಮಾಡುವ ಮಕ್ಕಳ ಗಮನವನ್ನು ಬೇರೆಡೆ ಸೆಳೆಯುವ ತಂತ್ರ ನಿಮ್ಮ ಮನಸ್ಸಿನ ಹಠಕ್ಕೂ ಪರಿಣಾಮಕಾರಿ. ಉದಾ, ಊಟದ ನಂತರ ಸಿಗರೇಟ್‌ ಬೇಡುವ ಮನಸ್ಸನ್ನು ಯಾವುದೋ ಹವ್ಯಾಸದಲ್ಲಿ ವ್ಯಸ್ತವಾಗಿಸಿ. ವಾಕಿಂಗ್‌ ಇಲ್ಲವೇ ಸೈಕ್ಲಿಂಗ್‌ ಹೋಗಿ, ಹಾಡು ಕೇಳಿ, ಚಿತ್ರ ಬರೆಯಿರಿ, ಮಿತ್ರರೊಂದಿಗೆ ಮಾತಾಡಿ, ಗಿಡದ ಬುಡ ಕೆದಕಿ, ಆ ಹೊತ್ತಿನಲ್ಲಿ ದಿನಕ್ಕೊಬ್ಬರಿಗೆ ಫೋನ್‌ ಮಾಡುವ ಮೂಲಕ ಬಿಟ್ಟುಹೋದ ಸಂಬಂಧಗಳನ್ನು ಜೋಡಿಸಿಕೊಳ್ಳಿ- ಅಂತೂ ಮನಸ್ಸನ್ನು ಸಿಗರೇಟ್‌ನಿಂದ ವಿಮುಖ ಮಾಡುವುದಕ್ಕೆ ಏನು ಸಾಧ್ಯವೋ ಅದನ್ನು ಮಾಡಿ.

Smoking Heart Attack Causes

ಒಂದೇಒಂದು… ಊಹುಂ!

ಈಗೊಂದು ವಾರದಿಂದ ಸಿಗರೇಟ್‌ ಮುಟ್ಟಿಲ್ಲ. ಇವತ್ತು ಒಂದೇಒಂದು ದಂ ಎಳೆದು ಬಿಡುತ್ತೇನೆ ಎಂದು ಭಾವಿಸಿದರೆ- ಖಂಡಿತ ಬೇಡ. ʻಒಂದುʼ ಎನ್ನುವುದು ಅಷ್ಟಕ್ಕೇ ನಿಲ್ಲುವ ಖಾತ್ರಿ ಖಂಡಿತ ಇರುವುದಿಲ್ಲ. ಸಿಗರೇಟ್‌ ಬಿಡುವತ್ತ ಇಟ್ಟಿರುವ ಹೆಜ್ಜೆಯನ್ನು ಯಾವುದೇ ಕಾರಣಕ್ಕೂ ಹಿಂತೆಗೆಯಬೇಡಿ.

ಇದನ್ನೂ ಓದಿ: Stress can cause neck pain: ಕುತ್ತಿಗೆ ನೋವೇ?‌ ಮಾನಸಿಕ ಒತ್ತಡವೂ ಕಾರಣವಾಗಿರಬಹುದು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Mosquito Repellent Plants: ನಿಮಗೆ ಗೊತ್ತೆ? ಈ 5 ಬಗೆಯ ಗಿಡಗಳು ಸೊಳ್ಳೆಗಳನ್ನು ಓಡಿಸುತ್ತವೆ!

Mosquito Repellent Plants: ಸೊಳ್ಳೆಗಳನ್ನು ದೂರ ಮಾಡಲು ಎಂಥಾ ಸರ್ಕಸ್‌ ಮಾಡಿದರೂ ನಷ್ಟವಿಲ್ಲ ಎಂಬಂತಾಗಿದೆ ಈ ಮಳೆಗಾಲದಲ್ಲಿ. ನೈಸರ್ಗಿಕ ಪರಿಮಳದ ತೈಲಗಳು ಅಥವಾ ರಿಪೆಲ್ಲೆಂಟ್‌ಗಳನ್ನು ಹಚ್ಚಿಕೊಂಡರೆ, ಸೊಳ್ಳೆಗಳನ್ನು ಓಡಿಸಬಹುದು. ಜೊತೆಗೆ, ಮನೆಯ ಒಳ-ಹೊರಗೆ ಕೆಲವು ಬಗೆಯ ಗಿಡಗಳನ್ನು ಬೆಳೆಸುವುದು ಸಹ ಈ ಕೆಲಸದಲ್ಲಿ ಉಪಯೋಗಕ್ಕೆ ಬರುತ್ತದೆ.

VISTARANEWS.COM


on

Mosquito Repellent Plants
Koo

ಮಳೆಗಾಲವೆಂದರೆ ಸೊಳ್ಳೆಗಳ (Mosquito Repellent Plants) ಕಾಲವೆಂಬ ಭಾವನೆ ಬಂದರೆ ಅಚ್ಚರಿಯಿಲ್ಲ. ಬರೀ ಸೊಳ್ಳೆ ಕಚ್ಚುವುದು ಸಮಸ್ಯೆಯಲ್ಲ, ಅದರೊಂದಿಗೆ ಬರುವ ಮಲೇರಿಯ, ಡೆಂಗ್ಯೂ, ಜೀಕಾ ಮುಂತಾದ ವೈರಸ್‌ಗಳು ಭೀತಿ ಮೂಡಿಸುತ್ತಿವೆ. ಮನೆಯ ಸುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಿದರೂ, ಮನೆಯೆದುರಿನ ರಸ್ತೆಯಲ್ಲೋ ಚರಂಡಿಯಲ್ಲೋ ನೀರು ನಿಲ್ಲುತ್ತಿದ್ದರೆ ಎಷ್ಟೆಂದು ಒದ್ದಾಡುವುದಕ್ಕೆ ಸಾಧ್ಯ? ಕಿಟಕಿಗಳಿಗೆಲ್ಲ ಸೊಳ್ಳೆ ಪರದೆ ಹಾಕಿದ್ದಾಗಿದೆ, ಆದರೂ ಬಾಗಿಲು ತೆರೆದಾಗ ನಮಗಿಂತ ಮೊದಲು ಸೊಳ್ಳೆಗಳು ನುಗ್ಗುತ್ತವೆ. ರಾತ್ರಿ ಮಲಗುವಾಗಲೂ ಪರದೆಯೊಳಗೇ ಮಲಗುತ್ತೇವೆ, ಹಗಲೆಲ್ಲ ಸೊಳ್ಳೆ ಪರದೆ ಸುತ್ತಿಕೊಂಡು ಓಡಾಡಲು ಸಾಧ್ಯವೇ?
ಈ ಕ್ರಮಗಳೆಲ್ಲ ಒಳ್ಳೆಯದೇ. ಅಗತ್ಯವಾಗಿ ಬೇಕಾಗಿದ್ದು ಸಹ ಹೌದು. ಜೊತೆಗೆ ಕೆಲವು ನೈಸರ್ಗಿಕ ಪರಿಮಳದ ತೈಲಗಳು ಅಥವಾ ರಿಪೆಲ್ಲೆಂಟ್‌ಗಳನ್ನು ಹಚ್ಚಿಕೊಂಡರೆ, ಸೊಳ್ಳೆಗಳು ಹತ್ತಿರ ಬಾರದಂತೆ ಕಾಪಾಡಿಕೊಳ್ಳಬಹುದು. ಜೊತೆಗೆ, ಮನೆಯ ಸುತ್ತಮುತ್ತ ಕೆಲವು ಒಳಾಂಗಣ/ಹೊರಾಂಗಣದ ಗಿಡಗಳನ್ನು ಬೆಳೆಸುವುದು ಸಹ ಈ ಕೆಲಸದಲ್ಲಿ ಉಪಯೋಗಕ್ಕೆ ಬರುತ್ತದೆ. ಸೊಳ್ಳೆಗಳನ್ನು ದೂರ ಓಡಿಸುವಂಥ ಗುಣವನ್ನುಳ್ಳ ಐದು ಗಿಡಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.

citronella

ಸಿಟ್ರೋನೆಲ್ಲ

ಲೆಮೆನ್‌ಗ್ರಾಸ್‌, ನಿಂಬೆ ಹುಲ್ಲು ಎಂದೆಲ್ಲಾ ಈ ಗಿಡವನ್ನು/ಹುಲ್ಲನ್ನು ಕರೆಯಲಾಗುತ್ತದೆ. ಸೊಳ್ಳೆಯನ್ನು ದೂರ ಅಟ್ಟುವ ವಿಷಯದಲ್ಲಿ ವಿಶೇಷ ಪರಿಣತಿ ಹೊಂದಿರುವ ಈ ಗಿಡದ ಸಾರವನ್ನು ಸ್ಪ್ರೇ, ಕ್ರೀಮ್‌, ಲೋಶನ್‌, ತೈಲ, ಮೋಂಬತ್ತಿಗಳು ಮುಂತಾದ ಹಲವು ರೀತಿಯ ಉತ್ಪನ್ನಗಳಲ್ಲಿ ಉಪಯೋಗಿಸಲಾಗುತ್ತದೆ. ಇದಕ್ಕಿರುವ ನಿಂಬೆಯ ಗಾಢವಾದ ಸುಗಂಧವೇ ಸೊಳ್ಳೆಯನ್ನು ದೂರ ಇರಿಸುತ್ತದೆ. ಮನೆಯ ಸುತ್ತಮುತ್ತಲಿನ ಭಾಗದಲ್ಲಿ ಅಥವಾ ಬಾಲ್ಕನಿಯ ಕುಂಡಗಳಲ್ಲಾದರೂ ಸರಿ, ಬೆಳೆಸಿ. ಇದು ಹಲವು ಔಷಧೀಯ ಉಪಯೋಗಗಳನ್ನೂ ಹೊಂದಿದ್ದು, ಸೊಳ್ಳೆ ಬಾರದಂತೆ ತಡೆಯಲೂ ನೆರವಾಗುತ್ತದೆ. ಆದರೆ ಈ ಹುಲ್ಲಿನ ಅಂಚು ಹರಿತವಾಗಿರುವುದರಿಂದ, ನೇರವಾಗಿ ಕೈ-ಕಾಲುಗಳ ಮೇಲೆ ಉಜ್ಜಿಕೊಳ್ಳಲು ಯತ್ನಿಸಬೇಡಿ, ಗಾಯವಾದೀತು.

Lavender Fragrant Flowers

ಲಾವೆಂಡರ್

ಇದರ ಹೂವುಗಳು ನಿಮ್ಮ ಬಾಲ್ಕನಿ ಮತ್ತು ಮನೆಯೊಳಗಿನ ಜಾಗವನ್ನು ಸುಂದರಗೊಳಿಸುವುದು ಮಾತ್ರವಲ್ಲ, ಆಹ್ಲಾದಕರ ಪರಿಮಳವು ಸೊಳ್ಳೆಗಳನ್ನು ದೂರ ಓಡಿಸುತ್ತದೆ. ಇದರ ಘಮ ಮನುಷ್ಯರಿಗೆ ಆಪ್ಯಾಯಮಾನವೇ ಹೊರತು ಸೊಳ್ಳೆ ಅಥವಾ ಇತರ ಕೀಟಗಳಿಗಲ್ಲ. ಬಿಸಿಲು ಬರುವಂಥ ಜಾಗದಲ್ಲಿ ಇದನ್ನು ಕುಂಡಗಳಲ್ಲಿ ಬೆಳೆಯಬಹುದು. ಈ ಹೂವನ್ನು ಒಣಗಿಸಿ ಅದನ್ನು ಪುಟ್ಟ ಸ್ಯಾಶೆಗಳಲ್ಲಿ ತುಂಬಿ ಮನೆಯಲ್ಲೆಲ್ಲಾ ಇರಿಸಿಕೊಳ್ಳಬಹುದು. ಲ್ಯಾವೆಂಡರ್‌ ತೈಲವನ್ನೂ ಇತರ ಎಣ್ಣೆಯೊಂದಿಗೆ ಸೇರಿಸಿ ಚರ್ಮಕ್ಕೆ ಲೇಪಿಸಿಕೊಳ್ಳಬಹುದು. ಇದನ್ನು ಹಚ್ಚಿಕೊಳ್ಳುವುದರಿಂದ ಚರ್ಮಕ್ಕೆ ಹಲವು ರೀತಿಯಲ್ಲಿ ಅನುಕೂಲಗಳಿವೆ.

Marigold

ಮಾರಿಗೋಲ್ಡ್‌

ಚೆಂಡು ಹೂವು ಎಂದೇ ಇವು ಪ್ರಸಿದ್ಧ. ಮಳೆಗಾಲದ ಈ ಹೊತ್ತಿನಲ್ಲಿ ಮೇಲೇಳುವ ಚೆಂಡು ಹೂವಿನ ಗಿಡಗಳು, ನವರಾತ್ರಿ-ದೀಪಾವಳಿಯ ಆಸುಪಾಸಿನಲ್ಲಿ ಇಡೀ ಗಿಡ ತುಂಬುವಷ್ಟು ಹೂ ಬಿಡುತ್ತವೆ. ಇವೂ ಸಹ ಸೊಳ್ಳೆ ಓಡಿಸುವಲ್ಲಿ ಸಹಕಾರ ನೀಡುವಂಥವು. ಬಾಲ್ಕನಿಯಲ್ಲಿ, ಬಾಗಿಲು-ಕಿಟಕಿಗಳ ಬಳಿ, ಅಂದರೆ ಸೊಳ್ಳೆ ಒಳ ಪ್ರದೇಶ ಮಾಡುವ ಜಾಗಗಳಲ್ಲಿ ಇದನ್ನು ಕುಂಡದಲ್ಲಿ ಇರಿಸಿಕೊಳ್ಳುವುದು ಒಳ್ಳೆಯ ಉಪಾಯ. ಇದರ ಹೂವುಗಳನ್ನು ಗೊಂಚಲು ಮಾಡಿ, ಹೂದಾನಿಗಳಲ್ಲಿ ಮನೆಯೊಳಗೆ ಇರಿಸಿಕೊಳ್ಳಬಹುದು. ಹೂವನ್ನು ಒಣಗಿಸಿಟ್ಟುಕೊಂಡರೆ ಸೊಳ್ಳೆ ಓಡಿಸುವಲ್ಲಿ ಇನ್ನಷ್ಟು ನೆರವು ದೊರೆಯುತ್ತದೆ.

Basil

ಬೆಸಿಲ್

ಇದು ಕೇವಲ ಸೊಳ್ಳೆ ಓಡಿಸುವುದಕ್ಕೆ ಮಾತ್ರವಲ್ಲ, ರುಚಿಕಟ್ಟಾದ ಅಡುಗೆಗೂ ಉಪಯೋಗವಾಗುತ್ತದೆ. ಇದರ ತೀಕ್ಷ್ಣವಾದ ಪರಿಮಳವು ಸೊಳ್ಳೆಗಳನ್ನು ಹತ್ತಿರ ಸುಳಿಯಗೊಡುವುದಿಲ್ಲ. ಹಾಗಾಗಿ ಸೊಳ್ಳೆ ಓಡಿಸುವ ಉಪಾಯಗಳಲ್ಲಿ ಇದನ್ನು ಸಹ ಅಳವಡಿಸಿಕೊಳ್ಳಬಹುದು. ಸಾಕಷ್ಟು ಗಾಳಿ-ಬೆಳಕು ಇರುವಂಥ ಜಾಗದಲ್ಲಿ ಇದನ್ನು ಕುಂಡಗಳಲ್ಲಿ ಬೆಳೆಸಬಹುದು. ಇದರ ಎಲೆಗಳನ್ನು ಕಿವುಚಿ ಮೈ-ಕೈಗೆಲ್ಲ ರಸ ಲೇಪಿಸಿಕೊಂಡರೂ ಸೊಳ್ಳೆ ಹತ್ತಿರ ಸುಳಿಯುವುದಿಲ್ಲ. ಇದರ ಕುಂಡಗಳನ್ನು ಸೊಳ್ಳೆಯ ಪ್ರವೇಶ ದ್ವಾರಗಳಲ್ಲಿ ಇರಿಸಿಕೊಂಡರೆ, ಸೊಳ್ಳೆಯ ಉಪಟಳಕ್ಕೆ ಬಾಗಿಲು ತೆರೆಯಲೂ ಅಳುಕುವ ಸ್ಥಿತಿ ತೊಲಗುತ್ತದೆ.

Lemon balm

ಲೆಮೆನ್‌ ಬಾಮ್‌

ಪುದೀನಾ ಜಾತಿಗೆ ಸೇರಿದ ಸಸ್ಯವಿದು. ಇದರ ಕಟುವಾದ ಘಮ ಸೊಳ್ಳೆ ಓಡಿಸುವಲ್ಲಿ ನೆರವಾಗುತ್ತದೆ. ಯಾವುದೇ ಕೈತೋಟ ಅಥವಾ ಬಾಲ್ಕನಿಗಳಲ್ಲಿ ಇವುಗಳನ್ನು ಸುಲಭವಾಗಿ ಬೆಳೆಯಬಹುದು. ಇದರ ಗಾಢವಾದ ನಿಂಬೆಯಂಥ ಪರಿಮಳ ನಮಗೆ ಹಿತವೆನಿಸಿದರೂ ಸೊಳ್ಳೆಗಳಿಗೆ ಆಗದು. ಮನಸ್ಸನ್ನು ಶಾಂತಗೊಳಿಸುವ ಗುಣಗಳು ಇದಕ್ಕಿರುವುದರಿಂದ, ಈ ಮೂಲಿಕೆಯ ಎಲೆಗಳನ್ನು ಚಹಾ ಮಾಡಿ ಕುಡಿಯುವವರಿದ್ದಾರೆ.

ಇದನ್ನೂ ಓದಿ: Head Massage Tips: ತಲೆಯ ಮಸಾಜ್‌ನಿಂದ ಮಾನಸಿಕ ಒತ್ತಡ ನಿವಾರಿಸಲು ಸಾಧ್ಯ! ಹಾಗಂತ ಬೇಕಾಬಿಟ್ಟಿ ಮಸಾಜ್‌ ಮಾಡಬೇಡಿ

Continue Reading

ಆರೋಗ್ಯ

Head Massage Tips: ತಲೆಯ ಮಸಾಜ್‌ನಿಂದ ಮಾನಸಿಕ ಒತ್ತಡ ನಿವಾರಿಸಲು ಸಾಧ್ಯ! ಹಾಗಂತ ಬೇಕಾಬಿಟ್ಟಿ ಮಸಾಜ್‌ ಮಾಡಬೇಡಿ

Head Massage Tips: ತಲೆಗೆ ಎಣ್ಣೆ ಮಸಾಜ್‌ ಮಾಡುತ್ತೀರಾ? ಮನಸ್ಸಿನ ಒತ್ತಡ ನಿರ್ವಹಣೆಗೆ ಇದು ಅತ್ಯಂತ ಒಳ್ಳೆಯ ಮಾರ್ಗ ಎಂಬುದನ್ನು ಹೆಚ್ಚಿನ ತಕರಾರಿಲ್ಲದೇ ಒಪ್ಪಿಕೊಳ್ಳಬಹುದು. ಇದರಿಂದ ಲಾಭವೇನು, ಹೇಗೆ ಮಾಡಿದರೆ ಸೂಕ್ತ ಎಂಬಿತ್ಯಾದಿ ವಿವರಗಳು ಇಲ್ಲಿವೆ. ತಲೆಯ ಭಾಗಕ್ಕೆ ರಕ್ತಸಂಚಾರವನ್ನು ಹೆಚ್ಚಿಸಿ, ಆಮ್ಲಜನಕದ ಪೂರೈಕೆಯನ್ನು ವೃದ್ಧಿಸಿ, ಮನಸ್ಸನ್ನು ಶಾಂತಗೊಳಿಸುವ ಈ ಅಭ್ಯಾಸದಿಂದ ಇನ್ನೂ ಏನೇನು ಲಾಭಗಳಿವೆ ಎಂಬುದನ್ನು ನೋಡೋಣ.

VISTARANEWS.COM


on

Head Massage Tips
Koo

ಬದುಕಿನಲ್ಲಿ ಕಡೆಯವರೆಗೆ ನಮ್ಮ ಜೊತೆಗಿರುವುದು ನಮ್ಮ ಆತಂಕ, ಒತ್ತಡಗಳು ಮಾತ್ರ ಎಂಬುದು ಆಧುನಿಕ ಕಾಲದ ಗಾದೆ. ಇವುಗಳಿಂದ ಬಿಡಿಸಿಕೊಳ್ಳಲು ಮಾಡದ ಸರ್ಕಸ್‌ ಯಾವುದಿದೆ? ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗುವುದರಿಂದ ಹಿಡಿದು, ಲೋಕದ ಸಹವಾಸವೇ ಸಾಕೆಂದು ಆಶ್ರಮ ಸೇರಿ ಸನ್ಯಾಸ ತೆಗೆದುಕೊಂಡವರೂ ಇದ್ದಾರೆ. ಇದೆಲ್ಲ ಬಿಡಿ, ನಮ್ಮ-ನಿಮ್ಮ ಮಟ್ಟವನ್ನು ಮೀರಿದ್ದು. ಈಗ ಸಾಮಾನ್ಯರಿಗೆ ಆಗುವಂಥ ಸರಳವಾದ ವಿಷಯಕ್ಕೆ ಬರೋಣ. ಸರಳವಾದ ತಲೆಯ ಮಸಾಜ್‌ (Head Massage Tips) ಒತ್ತಡ ಕಡಿಮೆ ಮಾಡುವಲ್ಲಿ ಎಷ್ಟೊಂದು ಪರಿಣಾಮಕಾರಿ ಎನ್ನುವುದು ಗೊತ್ತೇ? ಆಯುರ್ವೇದವನ್ನು ಶತಶತಮಾನಗಳಿಂದ ಬದುಕಿನ ರೀತಿಯಂತೆ ಆಚರಿಸುತ್ತಾ ಬಂದಿರುವ ಭಾರತದಲ್ಲಿ ತಲೆಗೆ ಎಣ್ಣೆ ಮಸಾಜ್‌ ಮಾಡುವ ಬಗ್ಗೆ ಹೆಚ್ಚು ಹೇಳುವುದು ಬೇಕಿಲ್ಲ- ಎಂದು ತಿಳಿದಿದ್ದರೆ, ತಪ್ಪು! ತಲೆ ಕೂದಲಿಗೆ ಎಣ್ಣೆ ಹಚ್ಚುವುದಕ್ಕೂ ಜಾಹೀರಾತುಗಳನ್ನು ಕೊಡಬೇಕಾಗಿರುವ ಈ ಕಾಲದಲ್ಲಿ ಎಲ್ಲರೂ ಹಳೆಯ ಕಾಲದವರಂತೆ ಎಣ್ಣೆ ಮಸಾಜ್‌ ಮಾಡಿಕೊಳ್ಳುತ್ತಾರೆ ಎಂಬ ಭಾವಿಸುವುದಾದರೂ ಹೇಗೆ? ಹೀಗೆನ್ನುತ್ತಿದ್ದಂತೆ ತಲೆಯ ಕೂದಲೆಲ್ಲ ಕಿತ್ತು ಬರುವಂತೆ ಉಗ್ರವಾಗಿ ಮಸಾಜ್‌ ಮಾಡುವ ಚಿತ್ರವನ್ನು ಕಣ್ಣಿಗೆ ತಂದುಕೊಳ್ಳಬೇಡಿ. ಲಘುವಾದ ಆದರೆ ಸ್ಥಿರವಾದ ಲಯದಲ್ಲಿನ ಮಸಾಜ್‌ ಇದು. ತಲೆಯ ಭಾಗಕ್ಕೆ ರಕ್ತಸಂಚಾರವನ್ನು ಹೆಚ್ಚಿಸಿ, ಆಮ್ಲಜನಕದ ಪೂರೈಕೆಯನ್ನು ವೃದ್ಧಿಸಿ, ಮನಸ್ಸನ್ನು ಶಾಂತಗೊಳಿಸುವ ಈ ಅಭ್ಯಾಸದಿಂದ ಇನ್ನೂ ಏನೇನು ಲಾಭಗಳಿವೆ (Head Massage Tips) ಎಂಬುದನ್ನು ನೋಡೋಣ.

Lady Sitting on the Couch Gives Herself a Scalp Massage Gooseberry Benefits

ಸೆರೋಟೋನಿನ್‌ ಹೆಚ್ಚಳ

ಒತ್ತಡ ನಿವಾರಿಸುವಲ್ಲಿ ನಮ್ಮ ದೇಹದ ಹ್ಯಾಪಿ ಹಾರ್ಮೋನುಗಳ ಭೂಮಿಕೆ ಮಹತ್ವದ್ದು. ತಲೆಗೆ ಲಘುವಾದ ಎಣ್ಣೆ ಅಥವಾ ಜೆಲ್‌ ಮಸಾಜ್‌ ಮಾಡುವುದು ಸೆರೋಟೋನಿನ್‌ ಚೋದಕದ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ. ಇದರಿಂದ ಆತಂಕ ನಿವಾರಣೆ ಮತ್ತು ಒತ್ತಡ ಪರಿಹಾರ ಸಾಧ್ಯವಿದೆ. ಇದು ನಮ್ಮ ಮೂಡ್‌ ಸರಿಪಡಿಸಿ, ಆಹ್ಲಾದದ ಭಾವವನ್ನು ಹೆಚ್ಚಿಸುತ್ತದೆ. ಹಣೆಯ ನರಗಳನ್ನು ಸಡಿಲಿಸಿ, ಕಣ್ಣಿನ ಒತ್ತಡ ಕಡಿಮೆ ಮಾಡಿ, ಮನಸ್ಸಿನ ಸಮಾಧಾನ ಹೆಚ್ಚಿಸುತ್ತದೆ.

ಕಾರ್ಟಿಸೋಲ್‌ ಕಡಿಮೆ

ನಮ್ಮ ದೇಹದಲ್ಲಿ ಒತ್ತಡ ಹೆಚ್ಚುತ್ತಿದ್ದಂತೆ ಕಾರ್ಟಿಸೋಲ್‌ ಪ್ರಮಾಣವೂ ಹೆಚ್ಚುತ್ತದೆ. ಒತ್ತಡಕ್ಕೆ ಪ್ರತಿಯಾಗಿ ಬಿಡುಗಡೆಯಾಗುವ ಹಾರ್ಮೋನು ಎಂದು ತಿಳಿಯಬಹುದು ಇದನ್ನು. ಈ ಚೋದಕದ ಪ್ರಮಾಣ ದೇಹದಲ್ಲಿ ಹೆಚ್ಚಿದರೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಮುತ್ತಿಕೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ, ಕಾರ್ಟಿಸೋಲ್‌ ಪ್ರಮಾಣ ಹೆಚ್ಚದಂತೆ ನಿಭಾಯಿಸುವುದು ಅತಿ ಮುಖ್ಯ.

ಇದನ್ನೂ ಓದಿ: Early Symptoms Of Menopause: ದೇಹದಲ್ಲಿ ಈ ಲಕ್ಷಣಗಳು ಕಾಣಿಸಿದರೆ ಋತುಚಕ್ರ ಸದ್ಯದಲ್ಲೇ ನಿಲ್ಲುತ್ತದೆ ಎಂದರ್ಥ

ಮಾಡುವುದು ಹೇಗೆ?

ನಮಗೆ ನಾವೇ ಮಸಾಜ್‌ ಮಾಡಿಕೊಳ್ಳುವುದು ಅಸಾಧ್ಯವಲ್ಲ, ಆದರೆ ಪರಿಣಾಮಕಾರಿ ಆಗದೆಯೇ ಹೋಗಬಹುದು. ಹಾಗಾಗಿ ಒಬ್ಬರಿಗೊಬ್ಬರು ತಲೆಗೆ ಎಣ್ಣೆ ಮಸಾಜ್‌ ಮಾಡುವ ಕ್ರಮ ಮೊದಲಿನಿಂದಲೂ ಚಾಲ್ತಿಯಲ್ಲಿದೆ. ತಲೆಯ ಮಸಾಜ್‌ಗೆ ಕೊಬ್ಬರಿ ಎಣ್ಣೆ, ಎಳ್ಳೆಣ್ಣೆಯಂಥ ಯಾವುದನ್ನಾದರೂ ಬಳಸಬಹುದು. ಇವುಗಳ ಜೊತೆಗೆ ಕೆಲವು ಹನಿಗಳಷ್ಟು ಯಾವುದಾದರೂ ಸಾರಭೂತ ತೈಲವನ್ನು ಸೇರಿಸಿಕೊಂಡರೆ ಒತ್ತಡ ನಿವಾರಣೆಗೆ ಹೆಚ್ಚಿನ ಅನುಕೂಲವಾಗುತ್ತದೆ. ಮಸಾಜ್‌ ಮಾಡುವಾಗ ಇಡೀ ಅಂಗೈ ಹಾಕಿ ತಲೆಯನ್ನು ಉಜ್ಜುವ ಬದಲು, ಬೆರಳುಗಳ ತುದಿಯನ್ನು ಹೆಚ್ಚು ಬಳಸಿ. ತಲೆಯನ್ನು ತಿಕ್ಕಿ, ತೀಡಿ, ಲಘುವಾಗಿ ತಟ್ಟಬಹುದು. ಸಣ್ಣ ವೃತ್ತಾಕಾರದಲ್ಲಿ ತಿಕ್ಕುವುದು ಸರಿಯಾದ ಕ್ರಮ. ಹಣೆಯಿಂದ ಪ್ರಾರಂಭಿಸಿ, ತಲೆಯ ಹಿಂಭಾಗದತ್ತ ಮುಂದುವರಿಯಿರಿ. ಯಾವುದಾದರೂ ಭಾಗದಲ್ಲಿ ಹೆಚ್ಚಿನ ಒತ್ತಡವಿದೆ ಎನಿಸಿದರೆ, ಆ ಭಾಗಕ್ಕೆ ಹೆಚ್ಚು ಹೊತ್ತು ಮಸಾಜ್‌ ಮಾಡಿ. ಮುಖ್ಯವಾಗಿ ಹುಬ್ಬಿನ ಪಕ್ಕದ ಭಾಗ, ಮೂರನೇ ಕಣ್ಣಿನ ಭಾಗ, ನೆತ್ತಿ, ಕುತ್ತಿಗೆಯ ಹಿಂಭಾಗ- ಇಲ್ಲೆಲ್ಲ ಮಸಾಜ್‌ ಮಾಡಿದರೆ ಬೇಗ ಆರಾಮ ದೊರೆಯುತ್ತದೆ. ಕಣ್ಣಿನ ಸುತ್ತ ವೃತ್ತಾಕಾರದಲ್ಲೂ ಹಗುರವಾಗಿ ತಿಕ್ಕಬಹುದು. ಆದರೆ ಈ ಭಾಗಕ್ಕೆ ಹೆಚ್ಚಿನ ತೈಲ ಬಳಸುವುದು ಬೇಡ. ಕಣ್ಣಿಗೆ ಎಣ್ಣೆ ತಾಗಿದರೆ ವಿಪರೀತ ಉರಿಯಾಗುತ್ತದೆ. ಇದನ್ನು ವಾರಕ್ಕೊಮ್ಮೆ ನಿಶ್ಚಿತವಾಗಿ ಮಾಡಬಹುದು. ಹೆಚ್ಚು ಬಾರಿ ಮಾಡಿದರೆ, ಅನುಕೂಲ ಹೆಚ್ಚು. ಸಾಧಾರಣವಾಗಿ 10-15 ನಿಮಿಷಗಳ ಲಘುವಾದ ಮಸಾಜ್‌ ಒತ್ತಡ ನಿರ್ವಹಣೆಯಲ್ಲಿ ಹೆಚ್ಚಿನ ಪರಿಣಾಮ ನೀಡುತ್ತದೆ. ರಾತ್ರಿ ಮಲಗುವ ಮುನ್ನ ಇದನ್ನು ಮಾಡಿದರೆ, ಆರಾಮದಾಯಕ ನಿದ್ರೆ ನಿಮ್ಮದಾಗುತ್ತದೆ.

Continue Reading

ಆರೋಗ್ಯ

Healthy Heart Tips: ನಿಮ್ಮ ಹೃದಯ ಆರೋಗ್ಯವಾಗಿರಬೇಕೆ? ಮಳೆಗಾಲದಲ್ಲಿ ಈ ಏಳು ಆಹಾರಗಳಿಂದ ದೂರವಿರಿ!

ಕೊಬ್ಬಿನ ಮತ್ತು ಎಣ್ಣೆಯುಕ್ತ ಆಹಾರಗಳನ್ನು ಅತಿಯಾಗಿ ಸೇವಿಸಿ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಮಳೆಗಾಲ ಬಂದಾಗ ಇದೆಲ್ಲ ಸವಿಯುವ ಬಯಕೆ ಹುಟ್ಟುತ್ತದೆ. ಈ ಮಳೆಗಾಲದಲ್ಲಿ ಹೃದಯದ ಆರೋಗ್ಯವನ್ನು (Healthy Heart Tips) ಕಾಪಾಡಿಕೊಳ್ಳಲು ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದರ ಜೊತೆಗೆ ಸಮತೋಲಿತ ಆಹಾರವನ್ನು ಸೇವಿಸುವುದು ಕೂಡ ಮುಖ್ಯ. ಅಲ್ಲದೆ ಈ ಏಳು ಆಹಾರಗಳಿಂದ ದೂರವಿದ್ದರೆ ಒಳ್ಳೆಯದು.

VISTARANEWS.COM


on

By

Healthy Heart Tips
Koo

ಮಳೆಗಾಲವೆಂದರೆ (rainy season) ದೇಹಕ್ಕೆ ಹಿತವಲ್ಲದೇ ಇದ್ದರೂ ನಾಲಗೆಗೆ ರುಚಿಯಾಗುವ ಖಾದ್ಯಗಳನ್ನು ಸವಿಯಬೇಕು ಎಂದೇ ಬಯಸುತ್ತೇವೆ. ಬಿಸಿಬಿಸಿ ಬೋಂಡಾ, ಪಕೋಡಾ, ಕುರುಕಲು ತಿನಿಸಿಗಳು ನೆನದಾಗಲೇ ಬಾಯಲ್ಲಿ ನೀರೂರುವಂತೆ ಮಾಡುತ್ತದೆ. ಆದರೆ ಆರೋಗ್ಯವನ್ನು (health) ಕಾಪಾಡಲು ಬಯಸುವವರು ಮತ್ತು ಹೃದ್ರೋಗದ ಅಪಾಯದಿಂದ (Healthy Heart Tips) ಪಾರಾಗಲು ಮಳೆಗಾಲದಲ್ಲಿ ಇಂತಹ ತಿಂಡಿಗಳಿಂದ ದೂರವಿದ್ದರೆ ಒಳ್ಳೆಯದು. ಅದರಲ್ಲೂ ಮುಖ್ಯವಾಗಿ ಈ 7 ಆಹಾರಗಳನ್ನು ಸೇವಿಸದೇ ಇರುವುದು ಉತ್ತಮ.

ಮಳೆಗಾಲದಲ್ಲಿ ವಿವಿಧ ರೋಗಗಳ ಅಪಾಯ ಹೆಚ್ಚಾಗಿರುತ್ತದೆ. ಇದು ನಮ್ಮ ರೋಗನಿರೋಧಕ ಶಕ್ತಿಯನ್ನು ಪರೀಕ್ಷಿಸುತ್ತದೆ. ಆದ್ದರಿಂದ ಪರಿಹರಿಸಲೇಬಕಾದ ಕೆಲವೊಂದು ಆರೋಗ್ಯ ಸಮಸ್ಯೆಗಳಿರುತ್ತವೆ. ಅದರಲ್ಲಿ ಮುಖ್ಯವಾಗಿ ಅಧಿಕ ಕೊಲೆಸ್ಟ್ರಾಲ್ ಕೂಡ ಒಂದು. ಅಧಿಕ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವಲ್ಲಿ ನಮ್ಮ ಆಹಾರ ಪದ್ಧತಿ ಪ್ರಮುಖ ಪಾತ್ರವಹಿಸುತ್ತದೆ.

ಮಳೆಯನ್ನು ಆನಂದಿಸಲು ನಾವು ಸಾಮಾನ್ಯವಾಗಿ ಮೆಲ್ಲುವ ಕರಿದ ಆಹಾರ ಮತ್ತು ತಿಂಡಿಗಳು ನಮ್ಮ ಹೃದಯದ ಆರೋಗ್ಯವನ್ನು ನಿರ್ಲಕ್ಷಿಸುವಂತೆ ಮಾಡುತ್ತದೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಹೃದಯದ ತೊಂದರೆಗಳನ್ನು ಹೆಚ್ಚು ಮಾಡುವ ಅಪಾಯವಿದೆ.

ಮಳೆಗಾಲದಲ್ಲಿ ತಿನ್ನಲೇಬಾರದ 7 ಆಹಾರಗಳು

ಅನಾರೋಗ್ಯಕರ ಮತ್ತು ಹೃದಯದ ಸಮಸ್ಯೆಗಳನ್ನು ಉಂಟುಮಾಡುವ 7 ಆಹಾರಗಳ ಬಗ್ಗೆ ತಿಳಿದುಕೊಂಡು ಈ ವರ್ಷದಿಂದಲೇ ಮಳೆಗಾಲದಲ್ಲಿ ಇಂತಹ ಆಹಾರದಿಂದ ದೂರವಿರೋಣ.

Healthy Heart Tips


ಸಂಸ್ಕರಿಸಿದ ಮಾಂಸ

ಕುರಿ ಮರಿ ಮತ್ತು ಕೋಳಿಯಂತಹ ಸಂಸ್ಕರಿಸಿದ ಪ್ರಾಣಿಗಳ ಮಾಂಸವನ್ನು ಸೇವಿಸುವುದನ್ನು ಮಳೆಗಾಲದಲ್ಲಿ ಕಡಿಮೆ ಮಾಡಬೇಕು. ಯಾಕೆಂದರೆ ಅವುಗಳ ಮೇಲೆ ಬ್ಯಾಕ್ಟೀರಿಯಾದ ಬೆಳವಣಿಗೆಯ ಸಾಧ್ಯತೆಗಳು ಹೆಚ್ಚು. ಮಳೆಯ ದಿನಗಳಲ್ಲಿ ತೇವಾಂಶವು ಆಹಾರದ ಮೇಲೆ ಬ್ಯಾಕ್ಟೀರಿಯಾವನ್ನು ನಿರ್ಮಿಸಲು ಕಾರಣವಾಗಬಹುದು ಮತ್ತು ಆಹಾರ ವಿಷವನ್ನಾಗಿ ಪರಿವರ್ತಿಸಬಹುದು.

Healthy Heart Tips


ಡೀಪ್ ಫ್ರೈಡ್ ಫುಡ್

ಆಳವಾದ ಕರಿದ ಆಹಾರವನ್ನು ಸೇವಿಸುವುದನ್ನು ಮಳೆಗಾಲದಲ್ಲಿ ತಪ್ಪಿಸಬೇಕು. ಅವುಗಳನ್ನು ಹೆಚ್ಚಿನ ಕೊಬ್ಬು ಮತ್ತು ಹೆಚ್ಚಿನ ಕ್ಯಾಲೋರಿ ಎಣ್ಣೆಯಲ್ಲಿ ಹುರಿಯಲಾಗುತ್ತದೆ. ಇದು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. ಇದು ನಮ್ಮ ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರಬಹುದು. ಪ್ರತಿ ರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಹಾನಿ ಮಾಡುವ ಆಹಾರವನ್ನು ನಾವು ಸೇವಿಸಿದರೆ ದೇಹದ ರಕ್ಷಣಾ ಕಾರ್ಯವಿಧಾನವನ್ನು ದುರ್ಬಲಗೊಳಿಸಬಹುದು.

Healthy Heart Tips


ಉಪ್ಪಿನಾಂಶ ಇರುವ ಬೀಜಗಳು

ಕೇವಲ ಬೀಜಗಳು ಆರೋಗ್ಯಕ್ಕೆ ಅತ್ಯತ್ತಮ ಪೋಷಕಾಂಶದ ಮೂಲವಾಗಿರುತ್ತದೆ. ಚಹಾ, ಕಾಫಿಯೊಂದಿಗೆ ಇದರ ಸೇವನೆ ಒಳ್ಳೆಯದಾಗುತ್ತದೆಯಾದರೂ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹೆಚ್ಚು ಉಪ್ಪನ್ನು ತಿನ್ನುವುದು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು ಮತ್ತು ಹೃದ್ರೋಗದ ಅಪಾಯವನ್ನುಂಟು ಮಾಡುತ್ತದೆ ಎಂಬ ಅಂಶವನ್ನು ತಿಳಿದಿರಬೇಕು. ಉಪ್ಪು ಬೀಜಗಳು ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರುವುದಿಲ್ಲ ಮತ್ತು ಉತ್ತಮ ಆರೋಗ್ಯಕ್ಕೆ ಕೊಡುಗೆ ನೀಡುವುದಿಲ್ಲ. ಆದ್ದರಿಂದ ಉಪ್ಪು ಮತ್ತು ಮಸಾಲೆಯುಕ್ತ ಬೀಜಗಳನ್ನು ತಿನ್ನುವುದನ್ನು ತಪ್ಪಿಸಿ.

Healthy Heart Tips


ಸಮುದ್ರಾಹಾರಕ್ಕೆ ಮಿತಿ ಇರಲಿ

ಒಮೆಗಾ -3 ಕೊಬ್ಬಿನಾಮ್ಲ ಹೊಂದಿರುವ ಮೀನುಗಳಲ್ಲಿರುವ ಪೋಷಕಾಂಶಗಳ ಕಾರಣದಿಂದಾಗಿ ಹೃದಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಆದರೆ ಮಳೆಗಾಲದಲ್ಲಿ ಅವುಗಳ ಹೆಚ್ಚು ಸೇವನೆ ಒಳ್ಳೆಯದಲ್ಲ. ಇದು ಬ್ಯಾಕ್ಟೀರಿಯಾದ ಬೆಳವಣಿಗೆಗೆ ಕಾರಣವಾಗಬಹುದು. ಮಳೆಗಾಲದಲ್ಲಿ ಜಲಮೂಲಗಳನ್ನು ಕಲುಷಿತಗೊಳಿಸುತ್ತದೆ ಮತ್ತು ಮೀನುಗಳಂತಹ ಸಮುದ್ರ ಪ್ರಾಣಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕಲುಷಿತ ಸಮುದ್ರ ಆಹಾರವನ್ನು ತಿನ್ನುವುದು ಹೃದಯ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾಗಿ ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ ಮೀನು ತಿನ್ನಬೇಕು.

Healthy Heart Tips


ಪಿಜ್ಜಾ ಮತ್ತು ಬರ್ಗರ್

ಪಿಜ್ಜಾ ಮತ್ತು ಬರ್ಗರ್‌ಗಳು ಅನಾರೋಗ್ಯಕರ ಎಂದೇ ಪರಿಗಣಿಸಲಾಗಿದೆ. ಹೆಚ್ಚಿನ ಸೋಡಿಯಂ ಮತ್ತು ಕ್ಯಾಲೋರಿ ಆಹಾರಗಳಾಗಿರುವ ಇದರ ತಯಾರಿಕೆಯಲ್ಲಿ ಯಾವ ರೀತಿಯ ಹಿಟ್ಟು ಮತ್ತು ಎಣ್ಣೆಯನ್ನು ಬಳಸುತ್ತಾರೆ ಎಂಬುದು ಗೊತ್ತಿಲ್ಲ. ಹೀಗಾಗಿ ಉತ್ತಮ ಹೃದಯದ ಆರೋಗ್ಯಕ್ಕಾಗಿ ಇವುಗಳನ್ನು ತ್ಯಜಿಸಲೇಬೇಕು.

Healthy Heart Tips


ಪ್ಯಾಕ್ ಮಾಡಲಾದ ಚಿಪ್ಸ್

ಪ್ಯಾಕ್ ಮಾಡಲಾದ ಆಲೂಗೆಡ್ಡೆ ಚಿಪ್ಸ್ ಮತ್ತು ಇತರ ತಿಂಡಿಗಳನ್ನು ಹೆಚ್ಚಿನ ಸೋಡಿಯಂನಲ್ಲಿ ಸಂಸ್ಕರಿಸಲಾಗುತ್ತದೆ ಮತ್ತು ಸಂರಕ್ಷಕಗಳನ್ನು ಸೇರಿಸಲಾಗಿದೆ. ಅದು ಹೃದಯ ಸಮಸ್ಯೆಗಳ ದೊಡ್ಡ ಅಪಾಯವನ್ನು ಉಂಟುಮಾಡುತ್ತದೆ. ಇದು ಜೀರ್ಣಕ್ರಿಯೆ ಮತ್ತು ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: Noodles Side Effect: ಇನ್‌ಸ್ಟಂಟ್‌ ನೂಡಲ್‌‌ಗಳನ್ನು ಸೇವಿಸಿದರೆ ನಮ್ಮ ಆರೋಗ್ಯದ ಮೇಲಾಗುವ ಪರಿಣಾಮಗಳೇನು?

Healthy Heart Tips


ಎಣ್ಣೆಯುಕ್ತ ಆಹಾರಗಳು

ಆಲೂ ಟಿಕ್ಕಿ, ಚಾಟ್ ಮತ್ತು ಹೆಚ್ಚಿನ ಎಣ್ಣೆಯುಕ್ತ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು. ಅವು ಸ್ಯಾಚುರೇಟೆಡ್ ಕೊಬ್ಬು ಮತ್ತು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಸರಾಗವಾದ ರಕ್ತದ ಹರಿವನ್ನು ತಡೆಯುವ ಅಪಧಮನಿಗಳಲ್ಲಿ ಪ್ಲೇಕ್ ಅನ್ನು ನಿರ್ಮಿಸಬಹುದು. ಇದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ.

Continue Reading

ಆರೋಗ್ಯ

Shikakai For Hair: ಕೂದಲಿನ ಪೋಷಣೆಗೆ ಶ್ಯಾಂಪು ಒಳ್ಳೆಯದೋ ಸೀಗೆಕಾಯಿ ಒಳ್ಳೆಯದೋ?

Shikakai For Hair: ʻಎಣ್ಣೆ-ಸೀಗೆಕಾಯಿ ಸಂಬಂಧʼ ಎಂಬ ನುಡಿಗಟ್ಟೇ ಸಾಕು ಸ್ವಚ್ಛತೆಯಲ್ಲಿ ಸೀಗೆಕಾಯಿಯ ಸಾಮರ್ಥ್ಯ ಎಷ್ಟು ಎನ್ನುವುದನ್ನು ತಿಳಿಯುವುದಕ್ಕೆ. ಕೂದಲಿನ ಆರೈಕೆಯಲ್ಲಿ ಶತಮಾನಗಳಿಂದ ಇದು ಪ್ರಮಾಣೀಕೃತಗೊಂಡಿದೆ. ಆದರೆ ಕೂದಲಿಗೆ ಬೇಕಾದಂಥ ಒಳ್ಳೆಯ ಸತ್ವಗಳು ಏನಿವೆ ಸೀಗೆಕಾಯಿಯಲ್ಲಿ? ಈ ಬಗ್ಗೆ ಮಾಹಿತಿ ಇಲ್ಲಿದೆ.

VISTARANEWS.COM


on

Shikakai For Hair
Koo

ಹಳೆಯ ಕಾಲದಿಂದಲೂ ತಲೆಗೂದಲ ಆರೈಕೆಗೆ ಸೀಗೆಕಾಯಿ ಅಥವಾ ಶಿಕಾಕಾಯಿ ಬಳಕೆಯಲ್ಲಿದೆ. ಈಗಿನಂತೆ ಕಡಿಮೆ ಜಿಡ್ಡಿನ ಎಣ್ಣೆಗಳು ಇಲ್ಲದ ಕಾಲದಲ್ಲಿ, ದಿನವೂ ಎಣ್ಣೆಯನ್ನು ನಿಯಮಿತವಾಗಿ ಕೂದಲಿಗೆ ಲೇಪಿಸುತ್ತಿದ್ದ ಕಾಲದಲ್ಲಿ ತಲೆಯ ಸ್ವಚ್ಛತೆಯ ಹೊಣೆಯನ್ನು ಶತಮಾನಗಳ ಕಾಲ ನಿರ್ವಹಿಸಿದ್ದು ಸೀಗೆಕಾಯಿಯೆ. ಯಾವುದೇ ಜಾಹೀರಾತುಗಳ ಪ್ರಚಾರವಿಲ್ಲದೆ, ಬಣ್ಣದ ಪ್ಯಾಕಿಂಗ್‌ಗಳ ಅಬ್ಬರವಿಲ್ಲದೆ ಅಜ್ಜಿ-ಅಮ್ಮಂದಿರು ತುಂಬಿಡುತ್ತಿದ್ದ ಡಬ್ಬಿಗಳಿಂದ ನೇರವಾಗಿ ತರಳೆಯರ ಹೆರಳನ್ನು ಶುಚಿ ಮಾಡಿ, ಕೇಶರಾಶಿಯನ್ನು ಆರೋಗ್ಯವಾಗಿ ಇರಿಸುತ್ತಿತ್ತು. ಬ್ಯಾಕ್ಟೀರಿಯ ವಿರೋಧಿ, ಫಂಗಸ್‌ ನಿರೋಧಕ ಸಾಮರ್ಥ್ಯವಿರುವ ಇದು ಉರಿಯೂತ ಶಾಮಕ ಗುಣವನ್ನು ಸಹ ಹೊಂದಿಗೆ. ಹಾಗಾಗಿ ತಲೆಯ ಚರ್ಮವನ್ನು ತುರಿಕೆ, ಹೊಟ್ಟು, ಸೋಂಕುಗಳಿಂದ ಮುಕ್ತವಾಗಿರಿಸುವುದಕ್ಕೆ ಸೀಗೆಕಾಯಿಗೆ ಸಾಧ್ಯ. ಇನ್ನೂ ಏನೆಲ್ಲಾ ಗುಣಗಳಿವೆ ಇದರಲ್ಲಿ ಕೇಶಗಳ ಆರೈಕೆಗೆ ಬೇಕಾಗುವಂಥದ್ದು.

Shikakai

ಸ್ವಚ್ಛತೆಯಲ್ಲಿ ಮುಂದೆ

ʻಎಣ್ಣೆ ಸೀಗೆಕಾಯಿ ಸಂಬಂಧʼ ಎಂಬ ನುಡಿಗಟ್ಟೇ ನಮಗೆ ಇದರ ಸ್ವಚ್ಛತೆಯ ಸಾಮರ್ಥ್ಯಕ್ಕೆ ನೀಡಿದ ಪ್ರಮಾಣಪತ್ರದಂತಿದೆ. ವಾತಾವರಣದ ಧೂಳು, ಮಣ್ಣು, ಹೊಗೆಯಂಥ ಕೊಳೆಗಳನ್ನು ನಾಜೂಕಾಗಿಯೇ ಸ್ವಚ್ಛಗೊಳಿಸುವ ಕ್ಷಮತೆ ಇದರದ್ದು. ತಲೆಯ ಚರ್ಮದ ನೈಸರ್ಗಿಕ ತೈಲದಂಶವನ್ನು ತೆಗೆಯದಂತೆ, ಕೊಳೆಯನ್ನಷ್ಟೇ ತೆಗೆದು ಕೂದಲಿಗೆ ಸ್ವಚ್ಛ ಮತ್ತು ತಾಜಾ ಅನುಭವ ನೀಡುತ್ತದೆ.

ಕೇಶವರ್ಧನೆ

ಕೂದಲಿನ ಬೆಳವಣಿಗೆಗೆ ಸೀಗೆಕಾಯಿ ನೆರವು ನೀಡುತ್ತದೆ. ವಿಟಮಿನ್‌ ಎ, ಸಿ ಮತ್ತು ಕೆ ಜೀವಸತ್ವದ ಅಂಶಗಳು ಇದರಲ್ಲಿವೆ. ಇವುಗಳು ಕೂದಲಿನ ಬುಡವನ್ನು ಬಿಗಿ ಮಾಡಿ, ಕೂದಲೆಳೆಗಳನ್ನು ಸುದೃಢಗೊಳಿಸುತ್ತವೆ. ಇದರಿಂದ ಕೂದಲು ಉದುರುವುದು ಕಡಿಮೆಯಾಗಿ, ಬೆಳವಣಿಗೆ ಹೆಚ್ಚುತ್ತದೆ. ಜಾಹೀರಾತುಗಳಲ್ಲಿ ತೋರಿಸಿದಷ್ಟು ಅಲ್ಲದಿದ್ದರೂ, ಆರೋಗ್ಯಕರವಾದ ಉದ್ದ ಕೂದಲನ್ನಂತೂ ಹೊಂದಬಹುದು.

dandruff remedies

ಹೊಟ್ಟು ನಿವಾರಣೆ

ಒಮ್ಮೆ ತಲೆ ಹೊಟ್ಟಿನ ಸಮಸ್ಯೆ ಪ್ರಾರಂಭವಾದರೆ, ಅದರಿಂದ ಪಾರಾಗುವುದಕ್ಕೆ ಏನೇನೋ ಒದ್ದಾಟಗಳನ್ನು ಮಾಡಬೇಕಾಗುತ್ತದೆ. ಹೊಟ್ಟು ಹೋಗಿಸುವಂಥ ಹತ್ತಾರು ಶಾಂಪೂಗಳನ್ನು ಬಳಸುತ್ತೇವೆ. ಕೆಲವೊಮ್ಮೆ ವೈದ್ಯರ ಬಳಿ ಔಷಧಿಯನ್ನೂ ತೆಗೆದುಕೊಳ್ಳುವ ಪ್ರಮೇಯ ಬರುತ್ತದೆ. ಇಷ್ಟಾಗಿ ಹೊಟ್ಟು ದೂರ ಮಾಡಲು ಆಗದೇ ಇರಬಹುದು. ಆದರೆ ಫಂಗಸ್‌ ವಿರೋಧಿ ಗುಣವನ್ನು ಹೊಂದಿರುವ ಸೀಗೆಕಾಯಿಯ ನಿಯಮಿತವಾದ ಬಳಕೆಯಿಂದ ಹೊಟ್ಟು ಕ್ರಮೇಣ ಮಾಯವಾಗುತ್ತದೆ.

ಕಂಡೀಶನರ್

ಸೀಗೆಕಾಯಿಯಲ್ಲಿರುವ ಸಪೋನಿನ್‌ ಎಂಬ ಅಂಶವು ಕೂದಲಿನ ಕಂಡೀಶನರ್‌ ರೀತಿಯಲ್ಲಿ ಕೆಲಸ ಮಾಡುತ್ತದೆ. ಕೂದಲುಗಳ ಪಿಎಚ್‌ ಸಹ ಸಮತೋಲನದಲ್ಲಿ ಇರುವಂತೆ ನೋಡಿಕೊಳ್ಳುತ್ತದೆ. ಯಾವುದೇ ರಾಸಾಯನಿಕವಿಲ್ಲದ ಈ ನೈಸರ್ಗಿಕ ಕಂಡೀಶನರ್‌ ಬಳಕೆಯಿಂದ ಕೂದಲಿನ ಹೊಳಪು ಹೆಚ್ಚಿ, ಮೃದುವಾಗುತ್ತದೆ. ಇದರಿಂದ ಕೂದಲು ಒರಟಾಗಿ ಬಾಚುವಾಗ ತುಂಡಾಗುವುದನ್ನು ತಪ್ಪಿಸಬಹುದು.

Shikakai photo

ತುದಿ ಕವಲಿಲ್ಲ

ಕೂದಲಿಗೆ ಅಗತ್ಯ ಪೋಷಣೆ ದೊರೆಯದಿದ್ದರೆ, ಕೇಶಗಳ ತುದಿ ಕವಲಾಗಬಹುದು. ಇದರಿಂದ ಕೂದಲು ನಿರ್ಜೀವವಾದಂತಾಗಿ, ತುಂಡಾಗುತ್ತವೆ. ಸೀಗೆಕಾಯಿಯ ಬಳಕೆಯಿಂದ ಕೂದಲಿಗೆ ಸೂಕ್ತ ಆರೈಕೆ ದೊರೆತು, ತುದಿ ಸೀಳಿದಂತಾಗಿ ಕೂದಲು ತುಂಡಾಗುವುದು ಕಡಿಮೆಯಾಗುತ್ತದೆ. ಜೊತೆಗೆ ಕೂದಲೆಳೆಗಳು ದಪ್ಪವಾಗಿಯೂ ಬೆಳೆದು, ಕೂದಲಿನ ಒಟ್ಟಾರೆ ಗಾತ್ರ ಹೆಚ್ಚುತ್ತದೆ.

ಎಲ್ಲರಿಗೂ ಸೂಕ್ತ

ರಾಸಾಯನಿಕ ಭರಿತ ಶಾಂಪೂ ಮತ್ತು ಕಂಡೀಶನರ್‌ಗಳು ಎಲ್ಲ ರೀತಿಯ ಚರ್ಮ ಮತ್ತು ಕೂದಲುಗಳಿಗೆ ಹೊಂದುವಂಥವಲ್ಲ. ಸೂಕ್ಷ್ಮ ಕೂದಲಿನವರು ಯಾವ ಶಾಂಪೂ ತಮಗೆ ಹೊಂದುತ್ತದೆ ಎಂಬ ಪ್ರಯೋಗದಲ್ಲಿಯೇ ಕೂದಲು ಕಳೆದುಕೊಳ್ಳುವುದು ಸಾಮಾನ್ಯ. ಆದರೆ ಸೌಮ್ಯ ಮತ್ತು ನೈಸರ್ಗಿಕವಾದ ಸೀಗೇಕಾಯಿ ಬಳಕೆಯಿಂದ ಇಂಥ ಸಮಸ್ಯೆಗಳಿಗೆ ಅವಕಾಶವಿಲ್ಲ.

ಇದನ್ನೂ ಓದಿ: Monsoon Health Tips: ಮಳೆಗಾಲದ ರೋಗಗಳಿಂದ ಪಾರಾಗುವುದು ಹೇಗೆ?

ಪರಿಸರ ಸ್ನೇಹಿ ಆಯ್ಕೆ

ಯಾವುದೇ ರಾಸಾಯನಿಕ, ಪ್ಲಾಸ್ಟಿಕ್‌ಗಳ ಹಾವಳಿಯಿಲ್ಲ ಸೀಗೆಕಾಯಿಯ ಬಳಕೆಯಲ್ಲಿ. ಪರಿಸರಕ್ಕೆ ಮಾರುಕವಾಗುವಂಥ ಯಾವುದೇ ಅಂಶ ಇದರಲ್ಲಿ ಇಲ್ಲ. ಇದನ್ನು ಬಳಸಿನ ನಂತರ ಉಳಿವಂಥ ಶೇಷವೆಲ್ಲ ವಾತಾವರಣದಲ್ಲಿ ಕರಗುವಂಥವು. ಹಾಗಾಗಿ ಕೂದಲಿನ ಸ್ವಚ್ಛತೆಗೆ ಅತ್ಯಂತ ಸೂಕ್ತವಾದ ಆಯ್ಕೆಯೆಂದರೆ ಸೀಗೆಕಾಯಿ.

Continue Reading
Advertisement
Char Dham Yatra 2024
ಪ್ರವಾಸ2 mins ago

Char Dham Yatra 2024: ಚಾರ್‌ಧಾಮ್‌, ಕೇದಾರನಾಥನ ದರ್ಶನ ಮಾಡುವ ಆಸೆ ಇದೆಯೆ? ಈ ಮಹತ್ವದ ಸಂಗತಿಗಳನ್ನು ತಿಳಿದುಕೊಂಡಿರಿ

karnataka weather Forecast
ಮಳೆ2 mins ago

Karnataka Weather : ಅಬ್ಬರಿಸುತ್ತಿರುವ ಮುಂಗಾರು; ಕರಾವಳಿ, ಮಲೆನಾಡಿನಲ್ಲಿ ಇಂದು ಸಹ ಜೋರು ಮಳೆ

Vastu Tips
ಧಾರ್ಮಿಕ2 mins ago

Vastu Tips: ವಾಸ್ತು ಪ್ರಕಾರ ಮಕ್ಕಳ ಅಧ್ಯಯನ ಕೊಠಡಿ ಹೀಗಿರಬೇಕು

Mosquito Repellent Plants
ಆರೋಗ್ಯ32 mins ago

Mosquito Repellent Plants: ನಿಮಗೆ ಗೊತ್ತೆ? ಈ 5 ಬಗೆಯ ಗಿಡಗಳು ಸೊಳ್ಳೆಗಳನ್ನು ಓಡಿಸುತ್ತವೆ!

Somanathapura Talakadu Madhyaranga Bharachukki Gaganachukki KSRTC Package Tour from Bengaluru
ಕರ್ನಾಟಕ32 mins ago

KSRTC Package Tour: ಸೋಮನಾಥಪುರ, ತಲಕಾಡು, ಮಧ್ಯರಂಗ, ಭರಚುಕ್ಕಿ, ಗಗನಚುಕ್ಕಿಗೆ ಕೆಎಸ್‌ಆರ್‌ಟಿಸಿ ಪ್ಯಾಕೇಜ್‌ ಟೂರ್‌; ದರವೆಷ್ಟು?

dina Bhavishya
ಭವಿಷ್ಯ2 hours ago

Dina Bhavishya : ಈ ರಾಶಿಯವರಿಗೆ ಹೂಡಿಕೆ ವ್ಯವಹಾರವು ಇಮ್ಮಡಿ ಲಾಭ ತರುವುದು

Virat Kohli
ಪ್ರಮುಖ ಸುದ್ದಿ7 hours ago

Virat Kohli : ಹಣ, ಹೆಸರು ಬಂದ ತಕ್ಷಣ ಕೊಹ್ಲಿಗೆ ಅಹಂಕಾರ ಬಂತು; ಮಾಜಿ ಆಟಗಾರನ ಅರೋಪ

Smriti Singh
ದೇಶ7 hours ago

Smriti Singh: ಹುತಾತ್ಮ ಯೋಧನ 1 ಕೋಟಿ ರೂಪಾಯಿಯಲ್ಲಿ ಪೋಷಕರಿಗೆ 50%, ಪತ್ನಿಗೆ 50%; ಕೊನೆಗೂ ಸಿಕ್ಕಿತು ನ್ಯಾಯ

7th Pay Commission
ಕರ್ನಾಟಕ7 hours ago

7th Pay Commission: ವೇತನ ಏರಿಕೆಗೆ ಒಪ್ಪಿಗೆ; ಒಪಿಎಸ್, ಆರೋಗ್ಯ ಯೋಜನೆ ಬೇಡಿಕೆ ಬಾಕಿ; ನೌಕರರ ಸಂಘದ ಮುಂದಿನ ನಿರ್ಧಾರ ಏನು?

Viral Video
ವೈರಲ್ ನ್ಯೂಸ್7 hours ago

Viral Video: ಚಲಿಸುತ್ತಿರುವ ರೈಲಿನಲ್ಲಿ ಅಪಾಯಕಾರಿ ಸಾಹಸ! ವಿಡಿಯೊ ನೋಡಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ13 hours ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ19 hours ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ1 day ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ2 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ2 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ2 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ2 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ3 days ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

ಟ್ರೆಂಡಿಂಗ್‌