Juices Side Effect: ಅಂಗಡಿಯಲ್ಲಿ ಸಿಗುವ ಜ್ಯೂಸ್‌ ಕುಡಿದರೆ ಏನಾಗುತ್ತದೆ? - Vistara News

ಆರೋಗ್ಯ

Juices Side Effect: ಅಂಗಡಿಯಲ್ಲಿ ಸಿಗುವ ಜ್ಯೂಸ್‌ ಕುಡಿದರೆ ಏನಾಗುತ್ತದೆ?

ನಾವು ಮನೆಯಲ್ಲೇ ಮಾಡಿದ ಹಣ್ಣಿನ ರಸಗಳು (Juices Side Effect) ಒಮ್ಮೆ ಸಿಹಿ, ಒಮ್ಮೆ ಸಪ್ಪೆ, ಇನ್ನೊಮ್ಮೆ ಹುಳಿ- ಹೀಗೆ ನಾನಾ ರುಚಿಯಲ್ಲಿ ದೊರೆಯುತ್ತವೆ. ಆದರೆ ಬಾಟಲಿಯ ಜ್ಯೂಸ್‌ಗಳು ಸಿಹಿಯಾಗಿಯೇ ಇರುತ್ತವೆ. ರುಚಿಯಾಗಿರಲಿ ಎಂಬ ಕಾರಣಕ್ಕೆ ಹೆಚ್ಚುವರಿ ಸಕ್ಕರೆಯನ್ನು ತಯಾರಿಕೆಯ ಹಂತದಲ್ಲಿ ನಿಶ್ಚಿತವಾಗಿ ಸೇರಿಸಲಾಗುತ್ತದೆ. ಇದರಿಂದ ಆರೋಗ್ಯದ ಪಾಡೇನು? ಬಾಟಲಿಗಳಲ್ಲಿರುವ ರೆಡಿ-ಟು-ಯೂಸ್‌ ಜ್ಯೂಸ್‌ಗಳನ್ನು ಯಾಕೆ ಕುಡಿಯಬಾರದು? ಕುಡಿದರೇನಾಗುತ್ತದೆ? ಈ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

Juices Side Effect
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹಣ್ಣಿನ ರಸ (Juices Side Effect) ಒಳ್ಳೆಯದು ಎಂಬುದು ಎಲ್ಲರ ಮಾತು. ಹಾಗಂತ ಅಂಗಡಿಗಳಲ್ಲಿ ದೊರೆಯುವ ಬಾಟಲಿಯಲ್ಲಿರುವ ನಾನಾ ಕಂಪೆನಿಗಳ ಫ್ರೂಟ್‌ ಜ್ಯೂಸ್‌ಗಳ ಬಗ್ಗೆ ಒಳ್ಳೆಯ ಅಭಿಪ್ರಾಯಗಳಿಲ್ಲ. ಯಾವುದೋ ಒಂದು ಬ್ರಾಂಡ್‌ ಎಂದಲ್ಲ, ಅಂಥ ಯಾವ ಜ್ಯೂಸ್‌ಗಳೂ ಬೇಡ ಎನ್ನುವುದು ಆರೋಗ್ಯದ ಕಾಳಜಿ ಇರುವಂಥ ಎಲ್ಲರೂ ಹೇಳುವ ಮಾತು. ಹಣ್ಣಿನ ರಸವನ್ನೇ ಕುಡಿಯುವುದಾದರೆ ತಾಜಾ ಸಿದ್ಧಪಡಿಸಿಕೊಂಡೇ ಕುಡಿಯಿರಿ ಎಂಬ ಕಿವಿ ಮಾತನ್ನು ಹೇಳುತ್ತಾರೆ. ಹಾಗೇಕೆ? ಬಾಟಲಿಗಳಲ್ಲಿರುವ ರೆಡಿ-ಟು-ಯೂಸ್‌ ಜ್ಯೂಸ್‌ಗಳನ್ನು ಯಾಕೆ ಕುಡಿಯಬಾರದು? ಕುಡಿದರೇನಾಗುತ್ತದೆ? ರುಚಿ ಎನ್ನುವುದಕ್ಕೆ ಬಹಳಷ್ಟು ಕಲ್ಪನೆಗಳಿವೆ. ಆದರೆ ಎಲ್ಲಕ್ಕಿಂತ ಜನಪ್ರಿಯ ಕಲ್ಪನೆಯೆಂದರೆ ʻಸಿಹಿʼ ಎಂಬುದು. ನಾವು ಮನೆಯಲ್ಲೇ ಮಾಡಿದ ಹಣ್ಣಿನ ರಸಗಳು ಒಮ್ಮೆ ಸಿಹಿ, ಒಮ್ಮೆ ಸಪ್ಪೆ, ಇನ್ನೊಮ್ಮೆ ಹುಳಿ- ಹೀಗೆ ನಾನಾ ರುಚಿಯಲ್ಲಿ ದೊರೆಯುತ್ತವೆ. ಹಣ್ಣಿನ ಮೂಲ ರುಚಿ ಹೇಗಿದೆಯೋ ಹಾಗೆಯೇ ಹಣ್ಣಿನ ರಸ ಇರುತ್ತದೆ, ಇರಬೇಕು. ಆದರೆ ಬಾಟಲಿಯ ಜ್ಯೂಸ್‌ಗಳು ಹಾಗಲ್ಲ. ಎಲ್ಲವೂ ಸಿಹಿಯಾಗಿಯೇ ಇರುತ್ತವೆ. ರುಚಿಯಾಗಿರಲಿ ಎಂಬ ಕಾರಣಕ್ಕೆ ಹೆಚ್ಚುವರಿ ಸಕ್ಕರೆಯನ್ನು ತಯಾರಿಕೆಯ ಹಂತದಲ್ಲಿ ನಿಶ್ಚಿತವಾಗಿ ಸೇರಿಸಲಾಗುತ್ತದೆ. ಅದೇ ಕಾರಣಕ್ಕಾಗಿಯೇ ಬಾಟಲಿಯ ಜ್ಯೂಸ್‌ ಬೇಡ ಎಂದು ಹೇಳುವುದು.

Lump sugar and a wooden spoon with white sugar on a wooden background.

ಎಷ್ಟು ಸಕ್ಕರೆ?

ಹೆಚ್ಚುವರಿ ಸಕ್ಕರೆ ಅಂದರೆ ಎಷ್ಟು? ಈ ಪ್ರಮಾಣ ಆಯಾ ಬ್ರಾಂಡ್‌ಗಳು ಮತ್ತು ಆಯಾ ಉತ್ಪನ್ನಗಳ ಮೇಲೆ ನಿರ್ಧಾರವಾಗುತ್ತದೆ. ಜ್ಯೂಸ್‌ನ ಪ್ರತಿಯೊಂದು ನಿಗದಿತ ಸರ್ವಿಂಗ್‌ನಲ್ಲಿ 6 ರಿಂದ 20 ಗ್ರಾಂಗಳವರೆಗೆ ಅಧಿಕ ಸಕ್ಕರೆಯನ್ನು ಸೇರಿಸಲಾಗುತ್ತದೆ. ಅಂದರೆ, ಆ ಉತ್ಪನ್ನದಲ್ಲಿ ಸೇರಿರುವ ನೈಸರ್ಗಿಕ ಸಿಹಿಯಂಶದ ಮೇಲಿನ ಸಕ್ಕರೆ ಪ್ರಮಾಣವಿದು. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ಒಂದು ಗ್ಲಾಸ್‌ ಜ್ಯೂಸ್‌ನಲ್ಲಿ 1.5 ಚಮಚದಿಂದ 5 ಚಮಚದವರೆಗೂ ಹೆಚ್ಚುವರಿ ಸಕ್ಕರೆಯನ್ನು ನಾವು ಸೇವಿಸುತ್ತೇವೆ. ಇದು ಕೇವಲ ಜ್ಯೂಸ್‌ ಬಗೆಗಷ್ಟೇ ಅಲ್ಲ, ಫ್ಲೇವರ್‌ ಹೊಂದಿರುವ ಕಾಫಿ, ಮಿಲ್ಕ್‌ಶೇಕ್‌, ಚಹಾ, ಎನರ್ಜಿ ಡ್ರಿಂಕ್‌ಗಳು ಅಥವಾ ಎಳನೀರಾದರೂ ಸರಿ- ಇವೆಲ್ಲದಕ್ಕೂ ಹೆಚ್ಚುವರಿ ಸಕ್ಕರೆಯನ್ನು ಸೇರಿಸಲಾಗುತ್ತದೆ. ಇದರಿಂದ ಆ ಉತ್ಪನ್ನದ ಬಣ್ಣ, ರುಚಿಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ.

Image Of Fruit Juices Role in Managing Blood Sugar Levels

ಏನಾಗುತ್ತದೆ?

ಬೇಸಿಗೆಯಲ್ಲಿ ಹಣ್ಣಿನ ರಸಗಳನ್ನು ಹೆಚ್ಚೆಚ್ಚು ಕುಡಿಯಬೇಕೆಂಬ ಬಯಕೆ ಇರುವುದು ಸಹಜ. ಆದರೆ ಒಂದೊಂದು ಗ್ಲಾಸ್‌ನಲ್ಲೂ ಇಷ್ಟೊಂದು ಪ್ರಮಾಣದ ಸಕ್ಕರೆ ದೇಹ ಸೇರುತ್ತದೆ ಎಂದಾದರೆ, ಆರೋಗ್ಯದ ಗತಿ ಏನು? ತೂಕ ಹೆಚ್ಚುವುದು, ಇನ್‌ಸುಲಿನ್‌ ಪ್ರತಿರೋಧಕತೆ, ಹೃದಯದ ಸಮಸ್ಯೆಗಳು- ಹೀಗೆ ತರಹೇವಾರಿ ತೊಂದರೆಗಳು ಸಾಲುಗಟ್ಟುತ್ತವೆ. ಅದರಲ್ಲೂ ಮಧುಮೇಹ ಇರುವವರು ಇಂಥವನ್ನು ನಿಯಮಿತವಾಗಿ ಕುಡಿದರೆ, ಸಕ್ಕರೆ ಕಾಯಿಲೆಯನ್ನು ನಿಯಂತ್ರಣಕ್ಕೆ ತರುವುದು ಬಹಳ ಕಷ್ಟವಾಗುತ್ತದೆ.

ಏನು ಮಾಡಬೇಕು?

ಎಲ್ಲಕ್ಕಿಂತ ಸುರಕ್ಷಿತವೆಂದರೆ ತಾಜಾ ಹಣ್ಣಿನ ರಸದ ಸೇವನೆ. ಯಾವುದೇ ಸಕ್ಕರೆ-ಬೆಲ್ಲಗಳನ್ನೆಲ್ಲ ಸೇರಿಸದಿದ್ದರೂ, ಹಣ್ಣಿನ ತಾಜಾ ಪರಿಮಳವೇ ಇದಕ್ಕೆ ಅದ್ಭುತ ರುಚಿಯನ್ನು ಒದಗಿಸುತ್ತದೆ. ಜ್ಯೂಸ್‌ ಮಾತ್ರವಲ್ಲ, ಸ್ಮೂದಿ, ಮಿಲ್ಕ್‌ಶೇಕ್‌ ಮುಂತಾದ ಯಾವುದನ್ನೂ ಮಾಡಿಕೊಳ್ಳುವುದು ಕಷ್ಟವಲ್ಲ. ಆರೋಗ್ಯ ಏನಾದೀತೊ ಎಂಬ ಚಿಂತೆ ಬಿಟ್ಟು ಹಾಯಾಗಿ ಇವುಗಳನ್ನು ಗುಟುಕರಿಸಬಹುದು.

Juices

ಗಮನಿಸಿ

ಒಂದೊಮ್ಮೆ ಬಾಟಲಿಯ ಜ್ಯೂಸ್‌ಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ ಎಂದಾದರೆ, ಅವುಗಳನ್ನು ಖರೀದಿಸುವಾಗ ಬಾಟಲಿಯ ಮೇಲಿನ ಸ್ಟಿಕ್ಕರ್‌ ಗಮನಿಸಿ. ಇದರಲ್ಲಿ ಹೆಚ್ಚುವರಿ ಸಕ್ಕರೆ ಎಷ್ಟಿದೆ ಎಂಬುದನ್ನು ನೋಡಿ. ಈ ಪೈಕಿ ಯಾವುದರಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಸಕ್ಕರೆ ಸೇರಿಸಲಾಗಿದೆ ಎಂಬುದನ್ನು ಇದರಿಂದ ತಿಳಿಯಬಹುದು. ಕಡಿಮೆ ಸಕ್ಕರೆ ಇರುವುದನ್ನೇ ಖರೀದಿಸಿ. ಇರುವುದರಲ್ಲಿ ಇದು ಒಳ್ಳೆಯ ಉಪಾಯ.

ಇದನ್ನೂ ಓದಿ: Tips To Find The Juiciest Lemon: ಜ್ಯೂಸಿಯಾದ ನಿಂಬೆಹಣ್ಣನ್ನು ಮಾರುಕಟ್ಟೆಯಿಂದ ಆರಿಸಿ ತರುವುದೂ ಒಂದು ಕಲೆ! ಇಲ್ಲಿವೆ ಟಿಪ್ಸ್

ಪರ್ಯಾಯಗಳು

ಬೇಸಿಗೆಯ ದಾಹ ತಣಿಸಿಕೊಳ್ಳುವುದಕ್ಕೆ ಆರೋಗ್ಯಕರ ಪರ್ಯಾಯಗಳಿವೆ. ಅವುಗಳತ್ತ ನಾವು ಗಮನ ನೀಡಬೇಕಷ್ಟೆ. ಘಮಘಮಿಸುವ ಹರ್ಬಲ್‌ ಚಹಾಗಳು, ಗ್ರೀನ್‌ ಟೀಗಳು ದೇಹಕ್ಕೆ ಆರಾಮ ನೀಡುತ್ತವೆ. ಸುಡು ಬೇಸಿಗೆಯಲ್ಲಿ ಈ ಬಿಸಿ ಪೇಯಗಳನ್ನು ಹೇಗೆ ಕುಡಿಯುವುದೆಂಬ ಚಿಂತೆ ಇದ್ದರೆ, ಇವುಗಳನ್ನು ಆರಿಸಿ, ಫ್ರಿಜ್‌ನಲ್ಲಿರಿಸಿಯೂ ಸೇವಿಸಬಹುದು. ಪುದೀನಾ, ಅನಾನಸ್‌ ಮುಂತಾದವುಗಳನ್ನು ನೀರಿಗೆ ಸೇರಿಸಿದ ಇನ್‌ಫ್ಯೂಸ್ಡ್‌ ವಾಟರ್‌ ತಯಾರಿಸಿಕೊಳ್ಳಬಹುದು. ಮನೆಯಿಂದ ನಾಲ್ಕು ಹೆಜ್ಜೆ ಹೊರ ನಡೆದು ಎಳನೀರು ದೊರೆಯುತ್ತದೋ ನೋಡಿ. ಇವೆಲ್ಲ ಹೆಚ್ಚುವರಿ ಸಕ್ಕರೆ ಇಲ್ಲದೆಯೆ, ನೈಸರ್ಗಿಕವಾಗಿ ದೇಹವನ್ನು ತಂಪಾಗಿಡುವ ಮಾರ್ಗಗಳು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Tamarind Fruit Benefits: ಜೀರ್ಣಶಕ್ತಿ ಹೆಚ್ಚಿಸಿ ತೂಕ ಇಳಿಸಲು ಹುಣಸೇ ಹಣ್ಣು ಸುಲಭದ ಉಪಾಯ!

ಜೀವನಶೈಲಿ, ಕೆಲಸದ ಒತ್ತಡ, ಹೊರಗೆ ತಿನ್ನುವ ಅಭ್ಯಾಸ, ಚಟುವಟಿಕೆಗಳಿಲ್ಲದ ಕೆಲಸ, ಹಾರ್ಮೋನ್‌ ಸಮಸ್ಯೆ, ರಾತ್ರಿಪಾಳಿ ಸೇರಿದಂತೆ ಅನೇಕ ವಿಚಾರಗಳು ಇಂದು ತೂಕ ಏರಿಕೆಗೆ ಕಾರಣವಾಗುತ್ತದೆ. ಆದರೆ ಇಳಿಸುವ ಬಗ್ಗೆ ಪ್ರಯತ್ನಕ್ಕೆ ತಕ್ಕ ಫಲ ದೊರೆಯುವುದು ಕಡಿಮೆ. ಎಲ್ಲರ ಸಮಸ್ಯೆಯೂ ಇದೇ. ವ್ಯಾಯಾಮ, ಜಾಗಿಂಗ್‌, ಯೋಗ ಇತ್ಯಾದಿ ಮಾಡಿದರೂ ತೂಕ ಮಾತ್ರ ಇಳಿಯುವುದಿಲ್ಲ ಎಂಬುದು. ಏನೆಲ್ಲ ಪ್ರಯತ್ನಿಸಿ ನೋಡಿದ ನೀವು ಹುಣಸೆ ಹಣ್ಣನ್ನೂ (Tamarind Fruit Benefits) ಯಾಕೆ ಒಮ್ಮೆ ಪ್ರಯತ್ನಿಸಿ ನೋಡಬಾರದು?

VISTARANEWS.COM


on

Tamarind Fruit Benefits
Koo

ತೂಕ ಇಳಿಸುವುದು ಹೇಗೆ ಎಂಬುದು ಸದ್ಯ ಎಲ್ಲರ ನಡುವೆ ಚರ್ಚೆಯಾಗುವ ಅತ್ಯಂತ ಸಾಮಾನ್ಯ ವಿಷಯ. ಜೀವನಶೈಲಿ, ಕೆಲಸದ ಒತ್ತಡ, ಹೊರಗೆ ತಿನ್ನುವ ಅಭ್ಯಾಸ, ಚಟುವಟಿಕೆಗಳಿಲ್ಲದ ಕೆಲಸ, ಹಾರ್ಮೋನ್‌ ಸಮಸ್ಯೆ, ರಾತ್ರಿಪಾಳಿ ಸೇರಿದಂತೆ ಅನೇಕ ವಿಚಾರಗಳು ಇಂದು ತೂಕ ಏರಿಕೆಗೆ ಕಾರಣವಾಗುತ್ತದೆ. ಆದರೆ ಇಳಿಸುವ ಬಗ್ಗೆ ಪ್ರಯತ್ನಕ್ಕೆ ತಕ್ಕ ಫಲ ದೊರೆಯುವುದು ಕಡಿಮೆ. ಎಲ್ಲರ ಸಮಸ್ಯೆಯೂ ಇದೇ. ವ್ಯಾಯಾಮ, ಜಾಗಿಂಗ್‌, ಯೋಗ ಇತ್ಯಾದಿ ಮಾಡಿದರೂ ತೂಕ ಮಾತ್ರ ಇಳಿಯುವುದಿಲ್ಲ ಎಂಬುದು. ಏನೆಲ್ಲ ಪ್ರಯತ್ನಿಸಿ ನೋಡಿದ ನೀವು ಹುಣಸೆ ಹಣ್ಣನ್ನೂ ಯಾಕೆ ಒಮ್ಮೆ ಪ್ರಯತ್ನಿಸಿ ನೋಡಬಾರದು? ಹುಣಸೆಹಣ್ಣಿಗೂ ತೂಕಕ್ಕೂ ಏನು ಸಂಬಂಧ ಅಂತೀರಾ? ಸಂಬಂಧ ಇದೆ. ಹುಳಿಯಾದ ಹುಣಸೇಹಣ್ಣನ್ನು ನೀವು ಚಿಕ್ಕವರಿದ್ದಾಗ ಚಪ್ಪರಿಸಿ ತಿಂದಿರಬಹುದು, ಈಗ ಕ್ಯಾಂಡಿಗಳ ರೂಪದಲ್ಲೋ, ಚಟ್ನಿ ರೂಪದಲ್ಲೋ, ಅಥವಾ ಅಡುಗೆಗೆ ಬಳಸುವ ಮೂಲಕ ಮಾತ್ರ ಹುಣಸೆ ಹಣ್ಣನ್ನು ಬಳಸುತ್ತಿರಬಹುದು. ಆದರೆ ಹುಣಸೆ ಹಣ್ಣಿನ (Tamarind Fruit Benefits) ನೀರನ್ನು ತೂಕ ಇಳಿಕೆಗೆ ನೀವು ಬಳಸಿಲ್ಲವಾದರೆ ಒಮ್ಮೆ ಬಳಸಿ ನೋಡಿ. ಇದೂ ಕೂಡಾ ತೂಕ ಇಳಿಸಲು ನೆರವಾಗುತ್ತದೆ.

Tamarind Fruit

ಕಡಿಮೆ ಕ್ಯಾಲರಿಯಿದೆ

ಹುಣಸೆ ಹಣ್ಣಿನ ನೀರು ಅತ್ಯಂತ ಕಡಿಮೆ ಕ್ಯಾಲರಿಯನ್ನು ಹೊಂದಿದೆ. ಒಂದು ಹುಣಸೆಹಣ್ಣಿನಲ್ಲಿ ಕೇವಲ ಐದರಿಂದ ಆರು ಕ್ಯಾಲರಿ ಇರುತ್ತದಂತೆ. ಹಾಗಾಗಿ ಇದರ ಮೂಲಕ ಕ್ಯಾಲರಿ ಹೆಚ್ಚು ತೆಗೆದುಕೊಂಡ ಭಯವಿಲ್ಲ. ಇದಕ್ಕೆ ಸಿಹಿ ಹಾಗೂ ಮಸಾಲೆಗಳನ್ನು ಸೇರಿಸಿದರೆ ಖಂಡಿತವಾಗಿಯೂ ಕ್ಯಾಲರಿ ಬದಲಾವಣೆಯಾಗುತ್ತದೆ.

healthy internal organs of human digestive system

ಜೀರ್ಣಕ್ರಿಯೆಗೆ ಒಳ್ಳೆಯದು

ತೂಕ ಇಳಿಕೆಯ ಹಾದಿಯಲ್ಲಿ ಜೀರ್ಣಕ್ರಿಯೆಯ ಸಮಸ್ಯೆ ಯಾವತ್ತಿಗೂ ಇರಬಾರದು. ಆಹಾರ ಚೆನ್ನಾಗಿ ಜೀರ್ಣವಾಗಬೇಕು. ನಿಮ್ಮ ಜೀರ್ಣಕ್ರಿಯೆಯ ಆರೋಗ್ಯವನ್ನು ಹೆಚ್ಚಿಸಬೇಕಾದರೆ, ಬಹುಬೇಗನೆ ಸರಿಯಾಗಿ ಆಹಾರ ಜೀರ್ಣವಾಗಬೇಕೆಂದರೆ ಈ ಹುಣಸೇ ಹಣ್ಣಿನ ನೀರು ಸಹಾಯ ಮಾಡುತ್ತದೆ. ಇದು ಪಚನಕ್ರಿಯೆಯನ್ನು ಚುರುಕಾಗಿಸುವ ಮೂಲಕ ತೂಕ ಇಳಿಕೆಗೆ ಸಹಾಯ ಮಾಡುತ್ತದೆ.

ನಾರಿನಂಶವಿದೆ

ಹುಣಸೇಹಣ್ಣಿನಲ್ಲಿ ಸಾಕಷ್ಟು ನಾರಿನಂಶ ಇದೆ. ನಾರಿನಂಶವು ಜೀರ್ಣಕ್ರಿಯೆಗೆ ಒಳ್ಳೆಯದು. ಅಷ್ಟೇ ಅಲ್ಲ, ಇದು ತೂಕವನ್ನೂ ಇಳಿಸುತ್ತದೆ. ಹೊಟ್ಟೆ ತುಂಬಿರುವ ಫೀಲ್‌ ನೀಡುವುದರಿಂದ ಬೇರೆ ತಿನ್ನುವ ಬಯಕೆಯಾಗುವುದಿಲ್ಲ.

ಇದನ್ನೂ ಓದಿ: Mint Leaf Water: ಪುದಿನ ಎಲೆಗಳ ನೀರನ್ನು ನಿತ್ಯವೂ ಕುಡಿಯಿರಿ, ಈ ಲಾಭಗಳನ್ನು ಪಡೆಯಿರಿ!

ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿದೆ

ಹುಣಸೇ ಹಣ್ಣಿನ ನೀರನ್ನು ಯಾಕೆ ಕುಡಿಯಬೇಕು ಎಂದರೆ ಹುಣಸೇಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಹುಣಸೆಯಲ್ಲಿ ಟಾರ್ಟಾರಿಕ್‌ ಆಸಿಡ್‌ ಎಂಬ ಶಕ್ತಿಯುತವಾದ ಆಂಟಿ ಆಕ್ಸಿಡೆಂಟ್‌ ಇದ್ದು ಇದು ಫ್ರೀ ರ್ಯಾಡಿಕಲ್‌ಗಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಆಂಟಿ ಆಕ್ಸಿಡೆಂಟ್‌ನಿಂದ ಸಮೃದ್ಧವಾಗಿರುವ ಆಹಾರವು ಆರೋಗ್ಯವನ್ನು ಹೆಚ್ಚಿಸಿ, ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚು ಮಾಡಿ ತೂಕವನ್ನು ಇಳಿಸುತ್ತದೆ. ಹಾಗಾದರೆ, ಹುಣಸೆ ಹಣ್ಣಿನ ನೀರನ್ನು ಮಾಡುವುದು ಹೇಗೆ ಅಂತೀರಾ? ಇದೇನೂ ಬ್ರಹ್ಮವಿದ್ಯೆಯಲ್ಲ. ಹುಣಸೆ ಹಣ್ಣಿನ ಒಂದು ಸಣ್ಣ ತುಂಡನ್ನು ಬಿಸಿನೀರಿನಲ್ಲಿ ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಲ ನೆನೆಸಿಡಿ. ಇದು ಮೆತ್ತಗಾದ ಮೇಲೆ ಇದನ್ನು ಸ್ವಲ್ಪ ಕಿವುಚಿ ರಸ ಹಿಂಡಿ. ಹಿಂಡಿದ ಮೇಲೆ ಉಳಿದ ರಸಹೀನ ಹುಣಸೇ ಹಣ್ಣನ್ನು ಎಸೆಯಿರಿ. ನಂತರ ಈ ಹುಣಸೇ ಹಣ್ಣಿನ ನೀರಿಗೆ ನಿಮಗೆ ಬೇಕಾದಷ್ಟು ರುಚಿಗೆ ತಕ್ಕಂತೆ ನೀರು ಸೇರಿಸಿ ಕುಡಿಯಿರಿ. ರುಚಿಯಾಗಿ ಕುಡಿಯಬೇಕೆಂಬ ಬಯಕೆಯಿದ್ದರೆ, ಬೆಲ್ಲದ ಪುಡಿ, ಕಾಳು ಮೆಣಸಿನ ಪುಡಿ ಅಥವಾ ಚಾಟ್‌ ಮಸಾಲಾ ಹಾಕಿಯೂ ಕುಡಿಯಬಹುದು. ಆದರೆ ಇದು ನಿಮ್ಮ ರುಚಿಗೆ ಬಿಟ್ಟದ್ದು. ಹೀಗೆ ಮಾಡಿದಾಗ ಖಂಡಿತವಾಗಿ ನೀವು ಸೇವಿಸುವ ಕ್ಯಾಲರಿಯಲ್ಲಿ ವ್ಯತ್ಯಾಸವಾಗುತ್ತದೆ. ತೂಕ ಇಳಿಕೆಯ ಲಾಭ ಪಡೆಯಬೇಕೆಂದಿದ್ದರೆ ಬೆಳಗ್ಗಿನ ಹೊತ್ತು, ಇದಕ್ಕೆ ಸಿಹಿ, ಮಸಾಲೆ ಸೇರಿಸದೆ ಹಾಗೆಯೇ ಕುಡಿಯಿರಿ

Continue Reading

ಆರೋಗ್ಯ

World Digestive Health Day: ಜೀರ್ಣಕ್ರಿಯೆಯಲ್ಲಿ ತೊಡಕು ಅನಾರೋಗ್ಯಕ್ಕೆ ದಾರಿ; ಈ ಸಲಹೆ ಪಾಲಿಸಿ

ದೇಹದ ಸ್ವಾಸ್ಥ್ಯ ಹೆಚ್ಚಿಸಿಕೊಳ್ಳುವ ದಾರಿಯಲ್ಲಿ ಜೀರ್ಣಾಂಗಗಳ ಆರೋಗ್ಯ ರಕ್ಷಣೆ ಎಷ್ಟು ಮಹತ್ವದ್ದು ಎಂಬುದನ್ನು ಜನರಿಗೆ ಮನದಟ್ಟು ಮಾಡಿಸುವುದು ವಿಶ್ವ ಜೀರ್ಣಾಂಗಗಳ ಆರೋಗ್ಯ ದಿನದ ಉದ್ದೇಶ. ಪ್ರತಿ ವರ್ಷ ಮೇ ತಿಂಗಳ 29ನೇ (World Digestive Health Day) ದಿನವನ್ನು ಇದಕ್ಕಾಗಿ ಮೀಸಲಿಡಲಾಗಿದೆ. ಜೀರ್ಣಾಂಗ ಆರೋಗ್ಯ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

World Digestive Health Day
Koo

ಸರ್ವ ರೋಗಕ್ಕೂ ಹೊಟ್ಟೆಯೇ ಮೂಲ (Gut is the butt of every problem) ಎಂಬ ಮಾತೊಂದಿದೆ. ಈ ಮಾತು ಸುಳ್ಳೇನಲ್ಲ, ದೇಹದ ಹಲವು ಸಮಸ್ಯೆಗಳಿಗೆ ನಮ್ಮ ಆಹಾರ ಪದ್ಧತಿಗಳು, ಜೀರ್ಣಾಂಗದ ಏರುಪೇರುಗಳು ಕಾರಣವಾಗುತ್ತವೆ. ಬೊಜ್ಜು, ಮಧುಮೇಹದಂಥ ಸಮಸ್ಯೆಗಳಿಂದ ಹಿಡಿದು ಎಷ್ಟೋ ಸಮಸ್ಯೆಗಳು ಕಾಡುವುದು ದೇಹದ ಚಯಾಪಚಯ ಸರಿಯಿಲ್ಲದ ಸಂದರ್ಭಗಳಲ್ಲೇ. ದೇಹದ ಸ್ವಾಸ್ಥ್ಯ ಹೆಚ್ಚಿಸಿಕೊಳ್ಳುವ ದಾರಿಯಲ್ಲಿ ಜೀರ್ಣಾಂಗಗಳ ಆರೋಗ್ಯ ರಕ್ಷಣೆ ಎಷ್ಟು ಮಹತ್ವದ್ದು ಎಂಬುದನ್ನು ಜನರಿಗೆ ಮನದಟ್ಟು ಮಾಡಿಸುವುದು ವಿಶ್ವ ಜೀರ್ಣಾಂಗಗಳ ಆರೋಗ್ಯ ದಿನದ ಉದ್ದೇಶ. ಪ್ರತಿ ವರ್ಷ ಮೇ ತಿಂಗಳ 29ನೇ ದಿನವನ್ನು (World Digestive Health Day) ಇದಕ್ಕಾಗಿ ಮೀಸಲಿಡಲಾಗಿದೆ. ಎಲ್ಲರ ಕರುಳಿನಲ್ಲೂ ಅಸಂಖ್ಯಾತ ಬ್ಯಾಕ್ಟೀರಿಯಗಳಿರುತ್ತವೆ. ಇವುಗಳನ್ನು ಒಳ್ಳೆಯವು ಮತ್ತು ಕೆಟ್ಟವೆಂದು ವಿಂಗಡಿಸಲಾಗಿದೆ. ಜೀರ್ಣಾಂಗಗಳಲ್ಲಿ ಒಳ್ಳೆಯ ಬ್ಯಾಕ್ಟೀರಿಯಗಳ ಸಂಖ್ಯೆ ಹೆಚ್ಚಿದಷ್ಟೂ ದೇಹ ಸ್ವಾಸ್ಥ್ಯ ಚೆನ್ನಾಗಿರುತ್ತದೆ. ಕೆಟ್ಟ ಬ್ಯಾಕ್ಟೀರಿಯಗಳ ಪ್ರಮಾಣ ಹೆಚ್ಚಿದಷ್ಟೂ ದೇಹ ರೋಗಗಳ ಗೂಡಾಗುತ್ತದೆ. ಜೀರ್ಣಾಂಗಗಳ ಆರೋಗ್ಯ ಚೆನ್ನಾಗಿದ್ದರೆ ತೂಕ ನಿರ್ವಹಣೆ, ಸತ್ವಗಳನ್ನು ಹೀರಿಕೊಳ್ಳುವುದು, ಚೋದಕಗಳ ನಿರ್ವಹಣೆ, ಉರಿಯೂತ ನಿವಾರಣೆ, ಚಯಾಪಚಯ ಸರಿಪಡಿಸುವಂಥ ಕೆಲಸಗಳು ಕಷ್ಟವಿಲ್ಲದೆ ನೆರವೇರುತ್ತವೆ. ಹಾಗಾದರೆ ಜೀರ್ಣಾಂಗಗಳ ಆರೋಗ್ಯ ನಿರ್ವಹಣೆಗೆ ಏನು ಮಾಡಬೇಕು? ಯಾವ ಕ್ರಮಗಳನ್ನು ಅನುಸರಿಸಬೇಕು?

Vegetables and Fruits

ವೈವಿಧ್ಯಮವಾಗಿರಲಿ

ಋತುಮಾನಕ್ಕೆ ಸರಿಯಾದ ಹಣ್ಣು-ತರಕಾರಿಗಳು, ಕಾಯಿ-ಬೀಜಗಳು, ಕಾಳು-ಬೇಳೆಗಳು, ಇಡೀ ಧಾನ್ಯಗಳು, ಡೇರು ಉತ್ಪನ್ನಗಳಿಂದ ಆಹಾರ ಸಮೃದ್ಧವಾಗಿರಬೇಕು. ಇದರಿಂದ ಕರುಳಿನ ಒಳ್ಳೆಯ ಬ್ಯಾಕ್ಟೀರಿಯಗಳಿಗೆ ಬೇಕಾದ ಆಹಾರ ದೊರೆತು ಅವುಗಳ ಸಂಖ್ಯೆ ಹೆಚ್ಚುತ್ತದೆ. ಅಷ್ಟೇ ಅಲ್ಲ, ಕರುಳಿನಲ್ಲಿರುವ ಒಳ್ಳೆಯ ಸೂಕ್ಷ್ಮಾಣುಗಳೂ ವೈವಿಧ್ಯಮಯವಾಗುತ್ತವೆ. ಇದರಿಂದ ಬಗೆಬಗೆಯ ಪ್ರಯೋಜನಗಳಿವೆ.

ಪ್ರಿಬಯಾಟಿಕ್‌, ಪ್ರೊಬಯಾಟಿಕ್

ಜೀರ್ಣಾಂಗಗಳ ಆರೋಗ್ಯ ನಿರ್ವಹಣೆಗೆ ಇದು ಪ್ರಧಾನ ಪಾತ್ರ ವಹಿಸುತ್ತದೆ. ಹುದುಗು ಬಂದಿರುವಂಥ ಮೊಸರು, ಮಜ್ಜಿಗೆಯಂಥ ಆಹಾರಗಳು, ಹಸಿಯಾದ ಮೊಳಕೆ ಕಾಳುಗಳಂಥ ಆಹಾರಗಳು ಅಗತ್ಯವಾದ ಪ್ರಿಬಯಾಟಿಕ್‌ ಮತ್ತು ಪ್ರೊಬಯಾಟಿಕ್‌ ಅಂಶಗಳನ್ನು ಒದಗಿಸುತ್ತವೆ. ಕರುಳಿನ ಸೂಕ್ಷ್ಮಾಣುಗಳ ಸಮತೋಲನಕ್ಕೆ ಇದು ಅತಿ ಮುಖ್ಯ.

ನೀರು-ನಾರು-ನಿದ್ದೆ

ಇವೆಲ್ಲವೂ ಸಾಕಷ್ಟು ಬೇಕು. ದಿನಕ್ಕೆ ಮೂರು ಲೀ. ನೀರು ಜೀರ್ಣಾಂಗಗಳನ್ನು ಸುಸ್ಥಿತಿಯಲ್ಲಿ ಇರಿಸಬಲ್ಲದು. ಇದರೊಂದಿಗೆ ನಾರಿನಂಶವೂ ಸಾಕಷ್ಟು ಸೇರಿದರೆ ಅಜೀರ್ಣ, ಮಲಬದ್ಧತೆಯಂಥ ತೊಂದರೆಗಳು ಮಾಯವಾಗುತ್ತವೆ. ರೆಸ್ಟ್‌-ಡೈಜೆಸ್ಟ್‌ ಎಂಬುದು ದೇಹಕ್ಕೆ ಚೆನ್ನಾಗಿ ಅರ್ಥವಾಗುವ ವಿಚಾರ. ಹಾಗಾಗಿ ದಿನಕ್ಕೆ ಏಳೆಂಟು ತಾಸಿನಷ್ಟು ನಿದ್ದೆ ಮಾಡಿದರೆ ಜೀರ್ಣಾಂಗಗಳ ರಿಪೇರಿ ಕೆಲಸ ಸಾಂಗವಾಗಿ ನೆರವೇರುತ್ತದೆ.

Best Food To Eat At Night

ಮುಕ್ಕಬೇಡಿ

ಆಹಾರ ಸೇವನೆಗೊಂದು ಕ್ರಮವಿದೆ. ಈಗಿನ ದರ್ಶಿನಿ ಸಂಸ್ಕೃತಿಯಲ್ಲ ತಿನ್ನುವಾಗ ಬೇಕಿರುವುದು. ಅಂದರೆ ಗಡಿಬಿಡಿಯಲ್ಲಿ ಒಂದಿಷ್ಟು ಮುಕ್ಕಿ ಓಡುವುದಲ್ಲ. ನೆಮ್ಮದಿಯಿಂದ ಕುಳಿತು, ಚೆನ್ನಾಗಿ ಅಗಿದು ತಿನ್ನಿ. ಇದರಿಂದ ಅತಿಯಾಗಿ ತಿನ್ನುವುದು, ಅಗತ್ಯಕ್ಕಿಂತ ಹೆಚ್ಚು ತಿನ್ನುವುದನ್ನೆಲ್ಲ ಕಡಿಮೆ ಮಾಡಬಹುದು. ಜೊತೆಗೆ, ಆಹಾರ ತಿಂದ ತೃಪ್ತಿಯೂ ದೊರೆಯುತ್ತದೆ.

Cooking Oils

ಆರೋಗ್ಯಕರ ಎಣ್ಣೆ

ಗಾಣದ ಎಣ್ಣೆಗಳು ಅಥವಾ ಕೋಲ್ಡ್‌ ಪ್ರೆಸ್‌ ಮಾಡಿದ ಎಣ್ಣೆಗಳು ಬಳಕೆಗೆ ಹೆಚ್ಚು ಸುರಕ್ಷಿತ. ರಿಫೈನ್‌ ಮಾಡಿದ ಎಣ್ಣೆಗಳು, ಮರು ಬಳಕೆಯ ಎಣ್ಣೆಗಳು ಸೂಕ್ತವಲ್ಲ. ಇಂಥವುಗಳಿಂದ ದೇಹದಲ್ಲಿ ಉರಿಯೂತ ಹೆಚ್ಚುತ್ತದೆ. ಹಾಗಾಗಿ ತಾಜಾ ಮತ್ತು ಆರೋಗ್ಯಕರ ಎಣ್ಣೆಗಳನ್ನೇ ಅಡುಗೆಗೆ ಬಳಸಿ. ಪಚನಾಂಗಗಳ ಆರೋಗ್ಯ ರಕ್ಷಣೆಗೆ ಇವೂ ಮುಖ್ಯವಾದವು.

stress

ಒತ್ತಡ

ಮಾನಸಿನ ಒತ್ತಡ ಹೆಚ್ಚಿದಷ್ಟೂ ಜೀರ್ಣಾಂಗಗಳ ಏರುಪೇರು ಹೆಚ್ಚುತ್ತದೆ. ಇವೆರಡರ ನಡುವೆ ನೇರ ಸಂಬಂಧವಿದೆ. ಹಾಗಾಗಿ ಮಾನಸಿನ ಒತ್ತಡ ನಿರ್ವಹಣೆಗೆ ಧ್ಯಾನ, ಯೋಗ, ಪ್ರಾಣಾಯಾಮ, ಆರೋಗ್ಯ ಹವ್ಯಾಸಗಳನ್ನು ರೂಢಿಸಿಕೊಳ್ಳುವಂಥ ಕೆಲಸಗಳು ಒಳ್ಳೆಯ ಪರಿಣಾಮ ಬೀರುತ್ತವೆ. ಇಂಥ ಕ್ರಮಗಳಿಂದಲೂ ಕರುಳಿನ ಆರೋಗ್ಯ ಸುಧಾರಿಸಬಹುದು.

ಇದನ್ನೂ ಓದಿ: AC Side Effects: ಅತಿಯಾದ ಎಸಿ ಬಳಕೆಯಿಂದ ಏನಾಗುತ್ತದೆ ಎಂಬ ಅರಿವಿರಲಿ

ಇವುಗಳು ಬೇಡ

ಪ್ರತಿ ದಿನ ಒಂದೇ ರೀತಿಯ ಆಹಾರವನ್ನು ಸೇವಿಸಬೇಡಿ. ಆರೋಗ್ಯಕರವಾದ ವೈವಿಧ್ಯಮಯ ಆಹಾರಗಳು ಜೀರ್ಣಾಂಗಗಳ ಸ್ಥಿತಿಯನ್ನು ಸುಧಾರಿಸುತ್ತವೆ. ಸಂಸ್ಕರಿತ ಆಹಾರಗಳು ಬೇಡ. ಇದರಿಂದ ಕರುಳಿನ ಉರಿಯೂತ ಹೆಚ್ಚುತ್ತದೆ. ಗಬಗಬ ತಿನ್ನುವುದರ ಬದಲು, ಸಾವಧಾನವಾಗಿ ತಿನ್ನುವುದನ್ನು ರೂಢಿಸಿಕೊಳ್ಳಿ. ಕೃತಕ ಸಿಹಿ, ರುಚಿ, ಬಣ್ಣಗಳೆಲ್ಲ ಉರಿಯೂತ ಹೆಚ್ಚಿಸುತ್ತವೆ. ಬದಲಿಗೆ ನೈಸರ್ಗಿಕ ರುಚಿ, ಬಣ್ಣಗಳಿಗೆ ಆದ್ಯತೆ ನೀಡಿ.

Continue Reading

ಆರೋಗ್ಯ

AC Side Effects: ಅತಿಯಾದ ಎಸಿ ಬಳಕೆಯಿಂದ ಏನಾಗುತ್ತದೆ ಎಂಬ ಅರಿವಿರಲಿ

ಹಿಂದೊಮ್ಮೆ ಐಶಾರಾಮಿ ಎನಿಸಿದ್ದ ವಸ್ತುಗಳು ಈಗ ಅಗತ್ಯಗಳು ಎನಿಸಿರುವುದು ಹೌದು. ಆದರೆ ಅವುಗಳ ಬಳಕೆ ಅತಿ ಎನ್ನುವಷ್ಟಾದರೆ ಅದರಿಂದ ಅಡ್ಡ ಪರಿಣಾಮಗಳು ಉಂಟೇ ಎನ್ನುವುದನ್ನೂ ಗಮನಿಸಬೇಕಲ್ಲ. ಹವಾನಿಯಂತ್ರಕವನ್ನು ಬಳಸುವುದರಿಂದ ಬೇಸಿಗೆಯ ಹೊಡೆತವನ್ನು ತಪ್ಪಿಸಿಕೊಳ್ಳಬಹುದು ಎನ್ನುವುದು ಹೌದಾದರೂ, ದಿನ-ರಾತ್ರಿ ಅದರಡಿಯಲ್ಲೇ ಇರುವುದು ಆರೋಗ್ಯದ ಮೇಲೆ (AC Side Effects) ಮಾಡುವ ಪರಿಣಾಮವೇನು?

VISTARANEWS.COM


on

AC Side Effects
Koo

ಬೇಸಿಗೆಯಲ್ಲಿ ಮಾತ್ರವಲ್ಲ, ವರ್ಷದ ಹೆಚ್ಚಿನ ದಿನಗಳಲ್ಲಿ ಹವಾನಿಯಂತ್ರಣ ವ್ಯವಸ್ಥೆ ಅಥವಾ ಎಸಿ ಬಳಕೆ ವ್ಯಾಪಕವಾಗಿದೆ. ಒಮ್ಮೆ ಎಸಿ ಬಳಕೆಗೆ ಒಗ್ಗಿದರೆ ಮತ್ತೆ ಅದರ ಹೊರತಾಗಿ ಇರುವುದು ಕಷ್ಟ ಎನ್ನುವಂತಾಗುತ್ತದೆ. ಹಗಲಿಡೀ ಕಚೇರಿಗಳಲ್ಲಿ ಎಸಿ ಛಾಯೆಯಲ್ಲಿ ಕುಳಿತರೆ, ರಾತ್ರಿ ಮನೆಗೆ ಬಂದ ಮೇಲೂ ಎಸಿ ಹಾಕಿಕೊಳ್ಳುತ್ತೇವೆ. ಹವಾನಿಯಂತ್ರಣ ವ್ಯವಸ್ಥೆ ಇಲ್ಲದೆ ಹಗಲೂ ಇಲ್ಲ, ರಾತ್ರಿಯೂ ಇಲ್ಲ ಎನ್ನುವಷ್ಟು ಅದಕ್ಕೆ ಒಗ್ಗಿ ಹೋಗಿರುತ್ತೇವೆ. ಸಾಮಾನ್ಯ ದಿನಗಳಲ್ಲೇ ಇಷ್ಟಾದ ಮೇಲೆ ಬೇಸಿಗೆಯಲ್ಲಿ ಇನ್ನೆಷ್ಟಿರಬೇಡ ಇದರ ಬಳಕೆ? ಆದರೆ ಹೀಗೆ ಅತಿಯಾಗಿ ಎಸಿ ಬಳಸುವುದು ಒಳ್ಳೆಯದೇ? ಹಿಂದೊಮ್ಮೆ ಐಶಾರಾಮಿ ಎನಿಸಿದ್ದ ವಸ್ತುಗಳು ಈಗ ಅಗತ್ಯಗಳು ಎನಿಸಿರುವುದು ಹೌದು. ಆದರೆ ಅವುಗಳ ಬಳಕೆ ಅತಿ ಎನ್ನುವಷ್ಟಾದರೆ ಅದರಿಂದ ಅಡ್ಡ ಪರಿಣಾಮಗಳು ಉಂಟೇ ಎನ್ನುವುದನ್ನೂ ಗಮನಿಸಬೇಕಲ್ಲ. ಹವಾನಿಯಂತ್ರಕವನ್ನು ಬಳಸುವುದರಿಂದ ಬೇಸಿಗೆಯ ಹೊಡೆತವನ್ನು ತಪ್ಪಿಸಿಕೊಳ್ಳಬಹುದು ಎನ್ನುವುದು ಹೌದಾದರೂ, ದಿನ-ರಾತ್ರಿ ಅದರಡಿಯಲ್ಲೇ ಇರುವುದು ಆರೋಗ್ಯದ ಮೇಲೆ ಮಾಡುವ ಪರಿಣಾಮವೇನು? ಬೇಸಿಗೆಗಷ್ಟೇ ಇದರ ಬಳಕೆಯನ್ನು ಮಿತಗೊಳಿಸಿ, ವರ್ಷದ ಉಳಿದ ದಿನಗಳಲ್ಲಿ ಇದನ್ನು ಬಳಸದೆ ಇರಬಹುದೇ? ಹೆಚ್ಚು ಬಳಸುವುದರಿಂದ (AC Side Effects) ಏನಾಗುತ್ತದೆ?

dry skin

ಒಣ ಕಣ್ಣು ಮತ್ತು ಚರ್ಮ

ಎಸಿ ಇರುವಂಥ ಸ್ಥಳಗಳಲ್ಲಿ ತೇವಾಂಶ ಕಡಿಮೆ. ಜೊತೆಗೆ, ಅತಿಯಾಗಿ ಎಸಿ ಅಡಿಯಲ್ಲಿ ಕುಳಿತಿದ್ದರೆ ಬೇಸಿಗೆಯಲ್ಲಿ ದಾಹವೂ ಅಷ್ಟಾಗಿ ಕಾಡದೆ, ಕುಡಿಯುವ ನೀರಿನ ಪ್ರಮಾಣವೂ ಕಡಿಮೆ ಆಗಬಹುದು. ಇದರಿಂದ ಚರ್ಮವೆಲ್ಲ ಒಣಗಿದಂತಾಗುತ್ತದೆ. ಇದೇ ಮುಂದುವರೆದು ಸುಕ್ಕುಗಟ್ಟಿದಂತಾದೀತು. ಕಣ್ಣೂ ತೇವ ಕಳೆದುಕೊಂಡು ಶುಷ್ಕವಾಗಬಹುದು. ಇದರಿಂದ ಕಣ್ಣು ಕೆಂಪಾಗುವುದು, ತುರಿಕೆಯಂಥ ತೊಂದರೆಗಳು ಗಂಟು ಬೀಳಬಹುದು. ಹಾಗಾಗಿ ಎಸಿಯಿಂದ ಮಧ್ಯೆ ಬಿಡುವು ತೆಗೆದುಕೊಳ್ಳುವುದು ಸೂಕ್ತ. ಒಂದೊಮ್ಮೆ ಸತತವಾಗಿ ಎಸಿ ಬಳಸುವುದು ಅನಿವಾರ್ಯ ಎಂದಾದರೆ, ವಾತಾವರಣದ ತೇವ ಹೆಚ್ಚಿಸುವ ಹ್ಯುಮಿಡಿಫಯರ್‌ ಸಹ ಬಳಸುವುದು ಜಾಣತನ.

Doctor listens to the human lungs

ಶ್ವಾಸಕೋಶದ ತೊಂದರೆಗಳು

ಹವಾನಿಯಂತ್ರಕ ನೀಡುವಂಥ ಶುಷ್ಕವಾದ ತಣ್ಣನೆಯ ಗಾಳಿಯು ಶ್ವಾಸಕೋಶಗಳಿಗೆ ಕಿರಿಕಿರಿ ನೀಡಬಹುದು. ಇದರಿಂದ ಅಲರ್ಜಿಗಳು, ಅಸ್ತಮಾ ಮತ್ತು ಶ್ವಾಸಕೋಶದ ಸೋಂಕಿನ ತೊಂದರೆ ಉಲ್ಭಣಿಸಬಹುದು. ಜೊತೆಗೆ ದೀರ್ಘ ಕಾಲದವರೆಗೆ ಎಸಿಯ ತಣ್ಣನೆಯ ಗಾಳಿಗೆ ಒಡ್ಡಿಕೊಂಡಾಗ ಫ್ಲೂ ಮಾದರಿಯ ಶೀತ, ಜ್ವರವನ್ನು ಅಂಟಿಸಿಕೊಳ್ಳುವ ಸಾಧ್ಯತೆಗಳೂ ಅಧಿಕ. ಇಂಥ ಸಮಸ್ಯೆಗಳಿಗೆ ಕಡಿವಾಣ ಹಾಕುವ ಉದ್ದೇಶವಿದ್ದರೆ, ಎಸಿ ಫಿಲ್ಟರ್‌ಗಳನ್ನು ಸ್ವಚ್ಛವಾಗಿ ಇರಿಸಬೇಕು. ಉಷ್ಣತೆಯ ಏರಿಳಿತವನ್ನು ಕ್ರಮೇಣ ಮಾಡುವುದೊಳಿತು. ಜೊತೆಗೆ ಏರ್‌ ಪ್ಯೂರಿಫಯರ್‌ ಬಳಸುವ ಬಗ್ಗೆ ಯೋಚಿಸುವುದು ಸೂಕ್ತ.

woman have backache pain and waist painful.

ನೋವುಗಳು ಹೆಚ್ಚು

ದೀರ್ಘ ಕಾಲ ಹವಾ ನಿಯಂತ್ರಕದ ಅಡಿಯಲ್ಲಿ ಇರುವುದರಿಂದ ದೇಹದ ಉಷ್ಣತೆ ಕುಸಿಯುತ್ತದೆ. ಇದರಿಂದ ಸ್ನಾಯುಗಳಲ್ಲಿ ನೋವು, ಕೀಲುಗಳು ಬಿಗಿಯಾಗುವುದು ಮುಂತಾದ ತೊಂದರೆಗಳು. ಅದರಲ್ಲೂ ಇಂಥ ತೊಂದರೆಗಳು, ಮೂಳೆ-ಸ್ನಾಯುಗಳಲ್ಲಿ ನೋವು ಈಗಾಗಲೇ ಇದ್ದವರು ಈ ಬಗ್ಗೆ ಎಚ್ಚರ ವಹಿಸುವುದು ಒಳಿತು. ಎಸಿ ವಾತಾವರಣಕ್ಕೆ ಸೂಕ್ತವಾದಂಥ ವಸ್ತ್ರಗಳನ್ನು ಧರಿಸಬೇಕು. ಆಗೀಗ ಲಘುವಾದ ವ್ಯಾಯಾಮಗಳನ್ನು ಮಾಡುವುದರಿಂದ ರಕ್ತ ಸಂಚಾರ ಸುಗಮವಾಗುತ್ತದೆ. ಚೆನ್ನಾಗಿ ನೀರು ಕುಡಿಯುವುದು ಸಹ ಅಗತ್ಯ.

ಇದನ್ನೂ ಓದಿ: Mouthwashes: ಬಾಯಿಯ ಎಲ್ಲ ಸಮಸ್ಯೆಗಳಿಗೂ ಮೌತ್‌ವಾಷ್‌ ಪರಿಹಾರವೆ? ಇದರ ಇತಿಮಿತಿ ಬಗ್ಗೆಯೂ ತಿಳಿದಿರಲಿ

ಪ್ರತಿರೋಧಕತೆ ಕುಂಠಿತ

ಸತತವಾಗಿ ಹವಾನಿಯಂತ್ರಣದಡಿಯಲ್ಲಿ ಇರುವುದರಿಂದ ಪ್ರತಿರೋಧಕತೆ ಸಹ ಕುಂಠಿತವಾಗಬಹುದು. ಮುಖ್ಯವಾಗಿ ತಣ್ಣನೆಯ ಶುಷ್ಕ ವಾತಾವರಣವೇ ಇದಕ್ಕೆಲ್ಲ ಕಾರಣ. ಒಮ್ಮೆ ಯಾವುದಾದರೂ ರೋಗಾಣು ಎಸಿ ವಾತಾವರಣವನ್ನು ಹೊಕ್ಕಿದರೆ, ದೀರ್ಘ ಕಾಲದವರೆಗೆ ಅಲ್ಲಿಯೇ ಇರುತ್ತದೆ. ಹಾಗಾಗಿ ಎಸಿಯಿಂದ ಬಿಡುವು ತೆಗೆದುಕೊಳ್ಳುವುದು ಅಗತ್ಯ. ಸೂಕ್ತವಾದ ಪೋಷಕಾಂಶವನ್ನು ಆಹಾರದ ಮೂಲಕ ತೆಗೆದುಕೊಳ್ಳುವುದು ಸಹ ಇನ್ನೊಂದು ಮುಖ್ಯವಾದ ಅಂಶ.
ಎಸಿಯಲ್ಲಿ ಸತತವಾಗಿ ಕುಳಿತಾಗ ಜಡತೆ ಸಹ ಅಮರಿಕೊಳ್ಳಬಹುದು. ಅದರಲ್ಲೂ ಬೇಸಿಗೆಯ ಮಧ್ಯಾಹ್ನಗಳಲ್ಲಿ ನಿದ್ದೆ ಹೆಚ್ಚು. ಹಾಗಿರುವಾಗ ಎಸಿ ಆ ಭಾವವನ್ನು ದ್ವಿಗುಣಗೊಳಿಸಬಹುದು. ಕಠೋರ ಬೇಸಿಗೆಯಲ್ಲೇ ಆದರೂ ಆಗಾಗ ಎಸಿಯಿಂದ ಹೊರಬನ್ನಿ. ಇದು ದೇಹಕ್ಕೆ ಅಗತ್ಯವಾದ ತಾಜಾ ಮತ್ತು ಶುದ್ಧ ಗಾಳಿಯನ್ನು ನೀಡುತ್ತದೆ. ಅಗತ್ಯಕ್ಕೆ ಬೇಕಷ್ಟೇ ಎಸಿಯನ್ನು ಬಳಸುವುದರಿಂದ ಅತಿಯಾದ ವಿದ್ಯುತ್‌ ಖರ್ಚನ್ನೂ ಉಳಿಸಬಹುದು. ವಾತಾವರಣಕ್ಕೆ ಎಸಿಯಿಂದ ಆಗುವ ಹಾನಿಯನ್ನೂ ಕಡಿಮೆ ಮಾಡಬಹುದು. ಹಾಗಾಗಿ ವಾತಾವರಣ ತಂಪಾಗಿಸುವ ಬದಲಿ ವ್ಯವಸ್ಥೆಯ ಬಗ್ಗೆಯೂ ಚಿಂತಿಸಿ.

Continue Reading

ಆರೋಗ್ಯ

Vijayanagara News: ಹೊಸಪೇಟೆಯಲ್ಲಿ ವಿಶ್ವ ಋತುಚಕ್ರ ನೈರ್ಮಲ್ಯ ದಿನಾಚರಣೆ

Vijayanagara News: ಹೊಸಪೇಟೆ ನಗರದ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿಶ್ವ ಋತುಚಕ್ರ ನೈರ್ಮಲ್ಯ ದಿನಾಚರಣೆ ಕಾರ್ಯಕ್ರಮ ಜರುಗಿತು.

VISTARANEWS.COM


on

World Menstrual Hygiene Day in Hosapete
Koo

ಹೊಸಪೇಟೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಗರದ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯಲ್ಲಿ ಮಂಗಳವಾರ ವಿಶ್ವ ಋತುಚಕ್ರ ನೈರ್ಮಲ್ಯ ದಿನಾಚರಣೆ ಕಾರ್ಯಕ್ರಮ (Vijayanagara News) ಜರುಗಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಂಕರ್ ನಾಯಕ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, 11 ರಿಂದ 14 ವರ್ಷದ ಹೆಣ್ಣುಮಕ್ಕಳಲ್ಲಿ ಪ್ರಾರಂಭವಾಗುವ ಋತುಚಕ್ರದ ಕುರಿತು ಪ್ರತಿಯೊಬ್ಬ ಕಿಶೋರಿಯಿಂದ ಹಿಡಿದು ಎಲ್ಲ ಮಹಿಳೆಯರು ಜಾಗೃತಿ ಹೊಂದಬೇಕು.

ಋತುಸ್ರಾವವಾದಾಗ ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿ ವರ್ಷ ಹೊಸದಾದ ಘೋಷಣೆಯೊಂದಿಗೆ ತಿಳಿಸುವ ವಿಶ್ವ ಋತುಚಕ್ರದ ನೈರ್ಮಲ್ಯ ದಿನದ ಮಹತ್ವವನ್ನು ಪ್ರತಿಯೊಬ್ಬರು ಅರಿಯಬೇಕು ಎಂದು ಸಲಹೆ ಮಾಡಿದರು.

ಇದನ್ನೂ ಓದಿ: Credit Card Safety Tips: ಕ್ರೆಡಿಟ್‌ ಕಾರ್ಡ್ ವಂಚನೆಯಿಂದ ಪಾರಾಗಲು ಇಲ್ಲಿದೆ 9 ಸಲಹೆ

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಜಂಬಯ್ಯ ಮಾತನಾಡಿ, ಪ್ರತಿಯೊಬ್ಬ ಪ್ರಜೆ ಋತುಚಕ್ರದ ಕುರಿತು ಅರಿವು ಪಡೆದು ಜ್ಞಾನವಂತರಾಗಬೇಕು. ಮೂಢನಂಬಿಕೆಯನ್ನು ಹೋಗಲಾಡಿಸಬೇಕು. ಕಿಶೋರಿಯರು ಮತ್ತು ಮಹಿಳೆಯರು ಋತುಸ್ರಾವ ಉಂಟಾದಾಗ ವೈಯಕ್ತಿಕ ಕಾಳಜಿ, ಸಂತಾನೋತ್ಪತ್ತಿ, ಪೌಷ್ಟಿಕ ಆಹಾರದ ಸೇವನೆಯ ಬಗ್ಗೆ ತಿಳುವಳಿಕೆ ಹೊಂದಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಡಿಎಂಒ ಕಾರ್ಯಕ್ರಮದ ಅಧಿಕಾರಿ ಡಾ. ಕಮಲಮ್ಮ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಋತುಚಕ್ರ ಅಥವಾ ಋತುಸ್ರಾವ ಎಂದರೆ ಹದಿಹರೆಯದ ಹೆಣ್ಣುಮಕ್ಕಳು ಪ್ರೌಢಾವಸ್ಥೆ ತಲುಪುವ ಹಂತವಾಗಿದೆ. ಈ ಸಂದರ್ಭದಲ್ಲಿ ಮಹಿಳೆಯರು ಪೌಷ್ಠಿಕ ಆಹಾರ ಸೇವನೆ ಮಾಡಬೇಕು. ಋತುಸ್ರಾವ ಉಂಟಾದಾಗ ಹಳೆಯದಾದ ಉಪಯೋಗಿಸಿದ ಬಟ್ಟೆಗಳನ್ನು ಬಳಸಬಾರದು. ವಿಶೇಷವಾಗಿ ಋತುಚಕ್ರದ ಶುಚಿತ್ವ ನಿರ್ವಹಣೆಯ ಬಗ್ಗೆ ಗ್ರಾಮೀಣ ಭಾಗದ ಮಹಿಳೆಯರು ಹೆಚ್ಚಿನ ತಿಳುವಳಿಕೆ ಹೊಂದಬೇಕಿದೆ ಎಂದು ಸಲಹೆ ನೀಡಿದರು.

ಆರ್‌ಬಿಎಸ್‌ಕೆ ವೈದ್ಯಾಧಿಕಾರಿ ಡಾ.ಆಶಾ, ಮುಟ್ಟಿನ ನೈರ್ಮಲ್ಯ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ಆರ್‌ಸಿಎಚ್ ಸಿಬ್ಬಂದಿ, ಆರೋಗ್ಯ ಸಿಬ್ಬಂದಿ, ಸಮುದಾಯ ಆರೋಗ್ಯ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು, ತುಂಗಭದ್ರಾ ಸ್ಕೂಲ್ ಆಫ್ ನರ್ಸಿಂಗ್ ಹೋಂನ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು.

ಇದನ್ನೂ ಓದಿ: Child Trafficking Racket: ಅಂತಾರಾಜ್ಯ ಮಕ್ಕಳ ಕಳ್ಳಸಾಗಣೆ ದಂಧೆ ಪತ್ತೆ; 11 ಮಕ್ಕಳ ರಕ್ಷಣೆ

ಕಾರ್ಯಕ್ರಮದಲ್ಲಿ ಎಲ್ಲರಿಗೂ ಮುಟ್ಟಿನ ನೈರ್ಮಲ್ಯದ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ. ದೊಡ್ಡಮನಿ ಪ್ರಾಸಾವಿಕ ಮಾತನಾಡಿದರು. ಧರ್ಮನಗೌಡ ವಂದಿಸಿದರು.

Continue Reading
Advertisement
PM Kisan Samman
ಕೃಷಿ16 mins ago

PM Kisan Samman: ಪಿಎಂ ಕಿಸಾನ್ ಸಮ್ಮಾನ್ 17ನೇ ಕಂತಿನ ಹಣ ಬಿಡುಗಡೆ ಯಾವಾಗ? ಪರಿಶೀಲಿಸುವುದು ಹೇಗೆ?

Nita Ambani
ವಾಣಿಜ್ಯ21 mins ago

Nita Ambani: ನೀತಾ ಅಂಬಾನಿ ಕುಡಿಯುವ ನೀರಿನ ಬಾಟಲಿಯ ಬೆಲೆ 49 ಲಕ್ಷ ರೂಪಾಯಿ!

Team India Coach
ಕ್ರೀಡೆ29 mins ago

Team India Coach: ಅಭಿಮಾನಿಗಳು ಬಯಸಿದರೂ ಕೋಚ್​ ಹುದ್ದೆಗೆ ಧೋನಿ ಅನರ್ಹ; ಕಾರಣವೇನು?

Sudha Murty
ಕರ್ನಾಟಕ33 mins ago

Sudha Murty: ಡಾ.ಮಂಜುನಾಥ್‌ ಗೆಲುವಿಗಾಗಿ ರಾಯರಿಗೆ ವಿಶೇಷ ಹರಕೆ ಹೊತ್ತ ಸುಧಾಮೂರ್ತಿ; ಏನದು?

Headless Chicken
ವಿಜ್ಞಾನ44 mins ago

Headless Chicken: ತಲೆ ಕತ್ತರಿಸಿದರೂ ಈ ಕೋಳಿ 18 ತಿಂಗಳು ಬದುಕಿತ್ತು! ಸಾಯುವ ಮೊದಲು ಮಾಲೀಕನನ್ನು ಶ್ರೀಮಂತಗೊಳಿಸಿತು!

Monsoon 2024
ದೇಶ1 hour ago

Monsoon 2024: ಮುಂದಿನ 24 ಗಂಟೆಗಳಲ್ಲೇ ಮುಂಗಾರು ಪ್ರವೇಶ; ಕರ್ನಾಟಕ ಸೇರಿ ಎಲ್ಲೆಲ್ಲಿ ಮಳೆ?

Belagavi Tour
ಪ್ರವಾಸ2 hours ago

Belagavi Tour: ಬೆಳಗಾವಿಗೆ ಭೇಟಿ ನೀಡಿದಾಗ ಈ ಸ್ಥಳಗಳನ್ನು ನೋಡಲು ಮರೆಯಬೇಡಿ

AUS vs NAM
ಕ್ರೀಡೆ2 hours ago

AUS vs NAM: ನಮೀಬಿಯಾ ವಿರುದ್ಧ ಅಭ್ಯಾಸ ಪಂದ್ಯವಾಡಿದ ಆಸೀಸ್​ ತಂಡದ ಕೋಚಿಂಗ್​ ಸಿಬ್ಬಂದಿ

Dream Of Retired Couple
ಪ್ರವಾಸ2 hours ago

Dream Of Retired Couple: ನಿರಂತರ ಮೂರೂವರೆ ವರ್ಷಗಳ ನೌಕಾಯಾನಕ್ಕಾಗಿ ತಮ್ಮದೆಲ್ಲವನ್ನೂ ಮಾರಿದ ದಂಪತಿ!

KSET Results 2024
ಕರ್ನಾಟಕ2 hours ago

KSET Results 2024:‌ ಕೆ-ಸೆಟ್‌ ಪರೀಕ್ಷೆ ಫಲಿತಾಂಶ; ಅಂಕಪಟ್ಟಿ ಡೌನ್‌ಲೋಡ್‌ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ1 day ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 day ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ3 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು3 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ7 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌