Kidney Stones: ಈ ಅಭ್ಯಾಸ ನಿಮಗಿದ್ದರೆ ಕಿಡ್ನಿಯಲ್ಲಿ ಕಲ್ಲಾಗುವ ಅಪಾಯ ಹೆಚ್ಚು! - Vistara News

ಆರೋಗ್ಯ

Kidney Stones: ಈ ಅಭ್ಯಾಸ ನಿಮಗಿದ್ದರೆ ಕಿಡ್ನಿಯಲ್ಲಿ ಕಲ್ಲಾಗುವ ಅಪಾಯ ಹೆಚ್ಚು!

Kidney Stones: ನಗರೀಕರಣದ ಭರಾಟೆಯಲ್ಲಿ ಎಲ್ಲವೂ ಯಾಂತ್ರೀಕರಣಗೊಂಡಿವೆ. ಕೂತಲ್ಲೇ ರಿಮೋಟ್‌ ಒತ್ತಿದರಾಯಿತು. ಇದರಿಂದಾಗಿ ದೈಹಿಕ ಚಟುವಟಿಕೆಗಳು ಕಡಿಮೆಯಾಗಿವೆ. ಇದರ ಬೆನ್ನಿಗೆ ಆಗಮಿಸುವ ಬೊಜ್ಜು, ಮಧುಮೇಹ, ರಕ್ತದ ಏರೊತ್ತಡಗಳೆಲ್ಲ ಕಿಡ್ನಿ ಕಲ್ಲಿನ ಸಮಸ್ಯೆಯನ್ನು ಹೆಚ್ಚಿಸುತ್ತವೆ. ಇವಿಷ್ಟೇ ಅಲ್ಲ, ಇನ್ನೇನು ಕಾರಣಗಳಿವೆ ಇದಕ್ಕೆ? ಈ ಲೇಖನ ಓದಿ.

VISTARANEWS.COM


on

Kidney Stones
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೆಲವು ಆರೋಗ್ಯ ಸಮಸ್ಯೆಗಳು ಜೀವಕ್ಕೆ ಅಪಾಯ ತರದಿದ್ದರೂ ಸಾಕಷ್ಟು ನೋವನ್ನಂತೂ ತರುತ್ತವೆ. ಮೂತ್ರಪಿಂಡದ ಕಲ್ಲಿನ ಸಮಸ್ಯೆಯೂ ಅಂಥವುಗಳಲ್ಲಿ ಒಂದು. ಕಿಡ್ನಿಸ್ಟೋನ್‌ ಎಂದೇ ಕರೆಯಲಾಗುವ ಈ ಸಮಸ್ಯೆ ಇತ್ತೀಚಿನ ವರ್ಷಗಳಲ್ಲಿ ಮಿತಿಮೀರಿದೆ. ಉಪ್ಪು ಮತ್ತು ಖನಿಜಗಳಿಂದ ನಿರ್ಮಾಣವಾಗುವ ಈ ಸಣ್ಣ-ದೊಡ್ಡ ಹರಳುಗಳು, ಮೂತ್ರದಲ್ಲಿ ಹೊರಹೋಗುವಾಗ ವಿಪರೀತ ಉರಿ-ನೋವನ್ನು ತರುತ್ತವೆ. ಇದಕ್ಕೆ ಸಮರ್ಪಕ ಚಿಕಿತ್ಸೆಗಳು ಇವೆಯಾದರೂ ಚೆನ್ನಾಗಿ ನೀರು ಕುಡಿದು ಅದನ್ನು ದೇಹದಿಂದ ಮೂತ್ರದ ಮೂಲಕ ವಿಸರ್ಜಿಸುವುದಕ್ಕೇ ಹೆಚ್ಚಿನ ವೈದ್ಯರು ಶಿಫಾರಸು ಮಾಡುತ್ತಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಸಮಸ್ಯೆ (Kidney Stones) ಹೆಚ್ಚಿರುವುದೇಕೆ?

Kidney diseases. Man suffering from pain with inflammation and kidney stones

ಆಹಾರದಲ್ಲಿನ ಬದಲಾವಣೆ

ನಮ್ಮ ಆಹಾರದಲ್ಲಿ ಅಗತ್ಯಕ್ಕೆ ತಕ್ಕಷ್ಟು ಪ್ರೊಟೀನ್‌, ಖನಿಜಗಳೆಲ್ಲ ಇರಬೇಕೆಂಬುದು ನಿಜ. ಆದರೆ ಪ್ರಾಣಿಜನ್ಯ ಪ್ರೊಟೀನ್‌, ಸೋಡಿಯಂ ಮತ್ತು ಸಂಸ್ಕರಿತ ಸಕ್ಕರೆಯ ಪ್ರಮಾಣ ಹೆಚ್ಚಾಗಿದೆ ಇಂದಿನ ದಿನಗಳಲ್ಲಿ. ಅಧಿಕ ಪ್ರಮಾಣದ ಉಪ್ಪು ತಿನ್ನುವುದರಿಂದ ಮೂತ್ರಪಿಂಡದಲ್ಲಿ ಹರಳುಗಟ್ಟುವ ಪ್ರಕ್ರಿಯೆ ಹೆಚ್ಚುತ್ತದೆ. ಇದರಿಂದ ಮೂತ್ರದಲ್ಲಿ ಸೋಡಿಯಂ ಮತ್ತು ಕ್ಯಾಲ್ಶಿಯಂ ವಿಸರ್ಜನೆ ಅಧಿಕವಾಗುತ್ತದೆ. ಮೂತ್ರದ ಪಿಎಚ್‌ ಹೆಚ್ಚಾಗಿ ಕಲ್ಲುಗಳು ಉಂಟಾಗುತ್ತವೆ. ಇದಲ್ಲದೆ, ಆಹಾರದಲ್ಲಿ ಉಪ್ಪಿನಂಶ ಅಧಿಕವಾದರೆ ಸಿಟ್ರೇಟ್‌ ಅಂಶ ದೇಹದಿಂದ ಹೊರಗೆ ಹೋಗುವುದು ಕಡಿಮೆಯಾಗುತ್ತದೆ. ಆದರೆ ಸಿಟ್ರೇಟ್‌ ಅಂಶ ಕಿಡ್ನಿ ಸೇರಬೇಕು, ಇದರಿಂದ ಕಿಡ್ನಿಯಲ್ಲಿ ಹರಳುಗಟ್ಟುವ ಪ್ರಕ್ರಿಯೆಯನ್ನು ತಡೆಯಬಹುದು.

ಚಟುವಟಿಕೆ ಕಡಿಮೆ

ನಗರೀಕರಣದ ಭರಾಟೆಯಲ್ಲಿ ಎಲ್ಲವೂ ಯಾಂತ್ರೀಕರಣಗೊಂಡಿವೆ. ಕೂತಲ್ಲಿಂದ ಎದ್ದು ಟಿವಿ, ಫ್ಯಾನು ಹಾಕುವ ಕಷ್ಟವೂ ಇಲ್ಲ; ಕೂತಲ್ಲೇ ರಿಮೋಟ್‌ ಒತ್ತಿದರಾಯಿತು. ಇದರಿಂದಾಗಿ ದೈಹಿಕ ಚಟುವಟಿಕೆಗಳು ಕಡಿಮೆಯಾಗಿವೆ. ಅತಿಯಾದ ಪ್ರಾಣಿಜನ್ಯ ಕೊಬ್ಬು ಮತ್ತು ಸಂಸ್ಕರಿತ ಆಹಾರಗಳ ಜೊತೆಗೆ ದೇಹಕ್ಕೆ ಚಟುವಟಿಕೆಯೂ ಇಲ್ಲದಿದ್ದರೆ, ಬೊಜ್ಜು ಬರಲೇಬೇಕಲ್ಲ. ಇದರ ಬೆನ್ನಿಗೆ ಆಗಮಿಸುವ ಮಧುಮೇಹ, ರಕ್ತದ ಏರೊತ್ತಡಗಳೆಲ್ಲ ಕಿಡ್ನಿ ಕಲ್ಲಿನ ಸಮಸ್ಯೆಯನ್ನು ಹೆಚ್ಚಿಸುತ್ತವೆ.

ಜೀವನಶೈಲಿ

ದೀರ್ಘ ಕಾಲ ಒಂದೇ ಕಡೆ ಕೂತಿರುವುದು, ವ್ಯಾಯಾಮ ಇಲ್ಲದಿರುವುದು, ಅತಿಯಾದ ಕೆಫೇನ್‌ ಸೇವನೆ, ಆಲ್ಕೋಹಾಲ್‌ ಸೇವನೆ ಇನ್ನಿತರ ಜೀವನಶೈಲಿಯ ದೋಷಗಳು ಕಿಡ್ನಿಗಳ ಆರೋಗ್ಯದ ಮೇಲೆ ಒತ್ತಡ ಹಾಕುತ್ತವೆ. ಮುಖ್ಯವಾಗಿ ದೇಹದ ಚಯಾಪಚಯ ಹಾಳಾದರೆ ಮತ್ತು ತೂಕ ಹೆಚ್ಚಿದರೆ, ಮೂತ್ರಪಿಂಡದಲ್ಲಿ ಖನಿಜಗಳು ಹರಳುಗಟ್ಟುವ ಭೀತಿ ಹೆಚ್ಚುತ್ತದೆ.

Kidney Stones

ತಡೆಯಲಾಗದೇ?

ಖಂಡಿತವಾಗಿಯೂ ಈ ಬಗ್ಗೆ ಪ್ರಯತ್ನ ಮಾಡಬಹುದು. ಇದರಲ್ಲಿ ಮೊದಲ ಹೆಜ್ಜೆಯೆಂದರೆ ದಿನದಲ್ಲಿ ಕುಡಿಯುವ ನೀರಿನ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವುದು. ದಿನಕ್ಕೆ ಕನಿಷ್ಟ 3 ಲೀ. ನೀರು ಕುಡಿಯುವ ಗುರಿಯನ್ನು ಪೂರ್ಣಗೊಳಿಸಿ. ದಿನದಲ್ಲಿ 2-2.5 ಲೀ.ನಷ್ಟು ಮೂತ್ರ ವಿಸರ್ಜನೆಯಾದರೆ, ಕಿಡ್ನಿಯಲ್ಲಿರುವ ಕಲ್ಲುಗಳನ್ನು ಕರಗಿಸಲು ಅಥವಾ ಬಾರದಂತೆ ತಡೆಗಟ್ಟಲು ಅನುಕೂಲವಾಗುತ್ತದೆ. ಮೂತ್ರ ಹೆಚ್ಚು ಸಾಂದ್ರವಾದಷ್ಟೂ ಹರಳುಗಟ್ಟುವ ಸಾಧ್ಯತೆ ಹೆಚ್ಚು. ಒಂದೊಮ್ಮೆ ಈಗಾಗಲೇ ಕಲ್ಲುಗಳಿದ್ದರೆ, ಪಿಎಚ್‌ ಅಧಿಕವಿರುವ ಸಾಂದ್ರ ಮೂತ್ರದಲ್ಲಿ ಅವುಗಳನ್ನು ಹೊರಹಾಕಲು ಸಾಧ್ಯವಿಲ್ಲ.

ಆಹಾರ

ಈಗಾಗಲೇ ಕಲ್ಲುಗಳಿದ್ದರೆ, ಆಕ್ಸಲೇಟ್‌ಗಳು ವಿಫಲವಾಗಿರುವ ಆಹಾರವನ್ನು ತಾತ್ಕಾಲಿಕವಾಗಿ ಕಡಿಮೆ ಮಾಡುವುದು ಅಗತ್ಯ. ಟೊಮೇಟೊ, ಪಾಲಕ್‌ಗಳಲ್ಲಿ ಆಕ್ಸಲೇಟ್‌ಗಳ ಪ್ರಮಾಣ ಹೆಚ್ಚು. ಹೂಕೋಸು, ಬದನೆಕಾಯಿ, ಅಣಬೆಗಳಲ್ಲಿ ಯೂರಿಕ್‌ ಆಮ್ಲದ ಪ್ರಮಾಣ ಹೆಚ್ಚಿದ್ದು, ಇವೂ ಸಹ ಹರಳುಗಟ್ಟಲು ನೆರವಾಗುತ್ತವೆ. ಹಾಗಾಗಿ ಈ ತರಕಾರಿಗಳ ಸೇವನೆಯಲ್ಲಿ ಮಿತಗೊಳಿಸಿ. ಕ್ಯಾರೆಟ್‌, ಹಾಗಲಕಾಯಿಯಂಥ ತರಕಾರಿಗಳು ಕಲ್ಲುಗಳಾಗುವುದನ್ನು ತಡೆಯುವ ಗುಣ ಹೊಂದಿದ್ದು, ಇವುಗಳ ಸೇವನೆಯನ್ನು ಸ್ವಲ್ಪ ಹೆಚ್ಚು ಮಾಡಿ.
ಹಣ್ಣುಗಳ ವಿಷಯಕ್ಕೆ ಬಂದರೆ, ಚಿಕ್ಕು, ದ್ರಾಕ್ಷಿ ಹಣ್ಣುಗಳಲ್ಲಿ ಆಕ್ಸಲೇಟ್‌ ಪ್ರಮಾಣ ಅಧಿಕ. ಸೀತಾಫಲದಲ್ಲಿ ಯೂರಿಕ್‌ ಆಮ್ಲದ ಮಟ್ಟ ಹೆಚ್ಚು. ಇವೆಲ್ಲವನ್ನೂ ಕಡಿಮೆ ಮಾಡಿ. ಬದಲಿಗೆ, ಬಾಳೆ ಹಣ್ಣು ತಿನ್ನಿ. ಇದರಲ್ಲಿರುವ ವಿಟಮಿನ್‌ ಬಿ೬ ಅಂಶವು ಯೂರಿಕ್‌ ಆಮ್ಲವನ್ನು ವಿಘಟಿಸಿ, ಹೊರಹಾಕಲು ಯತ್ನಿಸುತ್ತದೆ. ಪೊಟಾಶಿಯಂ ಮತ್ತು ಮೆಗ್ನೀಶಿಯಂ ಅಧಿಕವಿರುವ ಎಳನೀರು ಸಹ ಒಳ್ಳೆಯದು. ಸಿಟ್ರೇಟ್‌ ವಿಫುಲವಾಗಿರುವ ಸಿಟ್ರಸ್‌ ಹಣ್ಣುಗಳು ಅಗತ್ಯವಾಗಿ ಬೇಕು. ಅನಾನಸ್‌ ಕೂಡ ಹರಳುಗಟ್ಟುವ ಪ್ರಕ್ರಿಯೆಯನ್ನು ತಡೆಯುತ್ತದೆ.

ಇದನ್ನೂ ಓದಿ: Monsoon Skincare: ಮಳೆಗಾಲದಲ್ಲಿ ಚರ್ಮದ ಆರೈಕೆ ಹೇಗಿರಬೇಕು?

ಇವು ಬೇಡ

ಚಿಕನ್‌, ಮಟನ್‌, ಮೀನು, ಮೊಟ್ಟೆಗಳಲ್ಲಿ ಯೂರಿಕ್‌ ಆಮ್ಲ ಅಥವಾ ಪ್ಯೂರಿನ್‌ಗಳ ಸಾಂದ್ರತೆ ಅಧಿಕ. ಹಾಗಾಗಿ ಈ ಆಹಾರಗಳಲ್ಲಿ ಕಡಿಮೆ ಮಾಡಿ. ಜೊತೆಗೆ, ಗೋಡಂಬಿ, ಕೊಕೊ, ಚಾಕಲೇಟ್‌ಗಳು, ಚಹಾ, ಕಾಫಿ ಮತ್ತಿತರ ಕೆಫೇನ್‌ಗಳಲ್ಲಿ ಆಕ್ಸಲೇಟ್‌ ಅಂಶ ಅಧಿಕ. ಇವುಗಳಲ್ಲಿ ಯಾವುದನ್ನೆಲ್ಲ ಬಿಡುವುದಕ್ಕೆ ಸಾಧ್ಯ ಎಂಬುದನ್ನು ನೋಡಿ. ತೀರಾ ಆಗದಿದ್ದರೆ, ಮಿತಗೊಳಿಸಿ. ಜಡ ಜೀವನಶೈಲಿಯಂತೂ ಬೇಡವೇ ಬೇಡ. ಪ್ರತಿದಿನ ನಿಯಮಿತವಾಗಿ ವ್ಯಾಯಾಮ ಮಾಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Nipah Virus: ಕೇರಳದಲ್ಲಿ ನಿಫಾ ಕೇಸ್ ಪತ್ತೆ; ಡೆಂಗ್ಯೂ ಬೆನ್ನಲ್ಲೇ ಕರ್ನಾಟಕಕ್ಕೆ ಮತ್ತೊಂದು ಭೀತಿ

Nipah Virus: ಇನ್ನು ಈ ಬಗ್ಗೆ ಕೇರಳ ಆರೋಗ್ಯ ಸಚಿವೆ ವೀಣಾ ಚಾರ್ಜ್‌ ಪ್ರತಿಕ್ರಿಯಿಸಿದ್ದು, 14 ವರ್ಷದ ಬಾಲಕನಲ್ಲಿ ನಿಫಾ ವೈರಸ್ ಪತ್ತೆಯಾಗಿದೆ. ಬಾಲಕನ ಮೊದಲ ಸಂಪರ್ಕಿತರನ್ನು ಪತ್ತೆ ಹಚ್ಚೆ ಕ್ವಾರಂಟೈನ್ ಮಾಡಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

VISTARANEWS.COM


on

Nipah Virus
Koo

ತಿರುವನಂತಪುರಂ: ನೆರೆಯ ರಾಜ್ಯ ಕೇರಳದಲ್ಲಿ ಮತ್ತೆ ನಿಫಾ ವೈರಸ್‌(Nipah Virus) ಆತಂಕ ಹೆಚ್ಚುತ್ತಿದ್ದು, 14 ವರ್ಷದ ಬಾಲಕನಲ್ಲಿ ಈ ಮಾರಣಾಂತಿಕ ವೈರಸ್‌ ಪತ್ತೆ ಆಗಿದೆ. ಈಗಾಗಲೇ ಡೆಂಗ್ಯೂ ವೈರಸ್‌ ಕೇಸ್‌ಗಳು ದಿನೇ ದಿನೇ ಹೆಚ್ಚುತ್ತಿರುವ ಭೀತಿಯಲ್ಲಿರುವ ಕರ್ನಾಟಕಕ್ಕೆ ಇದೀಗ ನಿಫಾ ವೈರಸ್‌ ಆತಂಕ ಕಾಡಿದೆ. ಕೇರಳ(Kerala)ದ ಮಲಪ್ಪುರಂ ಜಿಲ್ಲೆಯಲ್ಲಿ ನಿಫಾ ವೈರಸ್ ಪತ್ತೆಯಾಗಿದೆ. ಇದರ ಪರಿಣಾಮ ಇದೀಗ ಹೈ ಅಲರ್ಟ್ ಘೋಷಿಸಲಾಗಿದೆ.

ಇನ್ನು ಈ ಬಗ್ಗೆ ಕೇರಳ ಆರೋಗ್ಯ ಸಚಿವೆ ವೀಣಾ ಚಾರ್ಜ್‌ ಪ್ರತಿಕ್ರಿಯಿಸಿದ್ದು, 14 ವರ್ಷದ ಬಾಲಕನಲ್ಲಿ ನಿಫಾ ವೈರಸ್ ಪತ್ತೆಯಾಗಿದೆ. ಬಾಲಕನ ಮೊದಲ ಸಂಪರ್ಕಿತರನ್ನು ಪತ್ತೆ ಹಚ್ಚೆ ಕ್ವಾರಂಟೈನ್ ಮಾಡಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಇನ್ನು ಸಂಭವನೀಯ ವೈರಸ್ ಹರಡುವಿಕೆಯ ಬಗ್ಗೆ ರಾಜ್ಯ ಸರ್ಕಾರ ಜಾಗರೂಕತೆ ವಹಿಸಿದೆ. ನಿಫಾ ವೈರಸ್ ಹರಡುವುದನ್ನು ತಡೆಯಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಸಾರ್ವಜನಿಕ ಸುರಕ್ಷತೆಯನ್ನು ಖಾತರಿಪಡಿಸುವುದು, ಪ್ರಸ್ತುತ ಪರಿಸ್ಥಿತಿಯನ್ನು ಪರಿಶೀಲಿಸುವುದು ಮತ್ತು ನಿಯಂತ್ರಣದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಮಲಪ್ಪುರಂನಲ್ಲಿರುವ ಸರ್ಕಾರಿ ತಂಗುದಾಣದಲ್ಲಿ 24 ಗಂಟೆಗಳ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ.

ಸೋಂಕಿತ ಬಾಲಕನ ಸಂಪರ್ಕದಲ್ಲಿದ್ದವರ ಪಟ್ಟಿ ಸಿದ್ಧಪಡಿಸಲಾಗಿದೆ. ಹೆಚ್ಚಿನ ಅಪಾಯದ ಪ್ರದೇಶಗಳಲ್ಲಿರುವ ಜನರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲು ಕ್ರಮವಹಿಸಲಾಗಿದೆ. ಬಾಲಕನಿಗೆ ಸೋಂಕು ತಗುಲಿದ ಪ್ರದೇಶದ 3 ಕಿಮೀ ವ್ಯಾಪ್ತಿಯಲ್ಲಿ ನಿರ್ಬಂಧ ವಿಧಿಸಬೇಕೆ ಎಂಬ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ.

ಸಚಿವೆ ವೀಣಾ ಜಾರ್ಜ್ ಅವರು ಮಲಪ್ಪುರಂಗೆ ತೆರಳಿದ್ದಾರೆ. ವೈರಸ್ ನಿಯಂತ್ರಣಕ್ಕಾಗಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್ (ಎಸ್‌ಒಪಿ) ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ಸರ್ಕಾರವು ಸಮಿತಿಗಳನ್ನು ರಚಿಸಿದೆ.
ಬಾಲಕನ ಸ್ಥಿತಿ ಗಂಭೀರವಾಗಿದೆ. ಆತನನ್ನು ಕೋಝಿಕ್ಕೋಡ್‌ ವೈದ್ಯಕೀಯ ಕಾಲೇಜಿಗೆ ವರ್ಗಾಯಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 14 ವರ್ಷದ ಬಾಲಕನ ಮಾದರಿಗಳನ್ನು ಪುಣೆ ಎನ್‌ಐವಿ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ. ಇದೀಗ ವರದಿ ಬಂದಿದ್ದು, ನಿಫಾ ವೈರಸ್ ದೃಢಪಟ್ಟಿದೆ. ನಿಫಾ ವೈರಸ್ ಖಚಿತವಾಗುತ್ತಿದ್ದಂತ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಬಾಲಕನನ್ನು ಇದೀಗ ಕೋಝಿಕೋಡ್ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಸ್ಥಳಾಂತರಿಸಲು ಸೂಚಿಸಲಾಗಿದೆ. ಇದೀಗ ಬಾಲಕನ ಸಂಪರ್ಕಿತರನ್ನು ಪತ್ತೆ ಹಚ್ಚಲಾಗುತ್ತಿದೆ. ಪೋಷಕರು ಸೇರಿದಂತೆ ಮೊದಲ ಸಂಪರ್ಕಿತರನ್ನು ಈಗಾಗಲೇ ಐಸೋಲೇಶನ್ ಮಾಡಲಾಗಿದೆ. ಇವರ ಮಾದರಿಗಳನ್ನು ಸಂಗ್ರಹಿಸಿ ಪುಣೆಗೆ ಕಳುಹಿಸಲಾಗಿದೆ.

ಕೇರಳದಲ್ಲಿ ಸುಮಾರು ಹತ್ತು ತಿಂಗಳ ಹಿಂದೆ ನಿಫಾ ಸೋಂಕಿನಿಂದಾಗಿ ಮೂವರು ಮೃತಪಟ್ಟಿದ್ದರು. ಹಾಗಾಗಿ, ರಾಜ್ಯ ಸರ್ಕಾರವು ಕಂಟೇನ್‌ಮೆಂಟ್‌ ವಲಯಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸುವ ಮೂಲಕ ಸೋಂಕು ಹರಡುವುದನ್ನು ತಡೆಯಲು ಮುಂದಾಗಿತ್ತು. ಕಲ್ಲಿಕೋಟೆಯಲ್ಲಿಯೇ ಆರು ಜನರಿಗೆ ಸೋಂಕು ತಗುಲಿದ ಕಾರಣ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಸುಮಾರು 9 ಗ್ರಾಮಗಳನ್ನು ಕಂಟೇನ್‌ಮೆಂಟ್‌ ವಲಯಗಳು ಎಂದು ಗುರುತಿಸಲಾಗಿತ್ತು.

ಇದನ್ನೂ ಓದಿ: Foreign Secretary: ಕೇರಳಕ್ಕಾಗಿ ‘ವಿದೇಶಾಂಗ ಕಾರ್ಯದರ್ಶಿ’ಯನ್ನು ನೇಮಿಸಿದ ಪಿಣರಾಯಿ; ಭುಗಿಲೆದ್ದ ವಿವಾದ

Continue Reading

ಆರೋಗ್ಯ

Health Tips Kannada: ಕಾಳುಗಳನ್ನು ನೆನೆಸಿಯೇ ತಿನ್ನಬೇಕು ಅಂತಾರೆ ಯಾಕೆ?

Health Tips Kannada: ಕಾಳುಗಳಲ್ಲಿ ಒಂದು ಬಗೆಯ ಸಂಕೀರ್ಣ ಸಕ್ಕರೆ ಅಂಶಗಳಿರುತ್ತವೆ. ಬಹುಪಾಲು ಜನರಿಗೆ ಈ ಸಕ್ಕರೆಯಂಶ ವಿಘಟನೆಯಾಗಿ ಜೀರ್ಣವಾಗುವುದಿಲ್ಲ. ಇದರಿಂದಾಗಿಯೇ ಕಾಳುಗಳನ್ನು ತಿಂದಾಗ ಹೊಟ್ಟೆ ಉಬ್ಬರಿಸಿ ಕಷ್ಟವಾಗುತ್ತದೆ. ಹೀಗಾಗದಂತೆ ಮಾಡುವುದಕ್ಕೆ ಸಾಧ್ಯವಿದೆಯೇ? ಇಲ್ಲಿದೆ ಈ ಕುರಿತ ಮಾಹಿತಿ.

VISTARANEWS.COM


on

Health Tips Kannada
Koo

ಕಾಳುಗಳನ್ನು (Health Tips Kannada) ಅಡುಗೆಗೆ ಬಳಸುವಾಗ ತಾಸುಗಟ್ಟಲೆ ಮುಂಚಿತವಾಗಿ ಅವುಗಳನ್ನು ನೆನೆಸಿಡುವ ಅಭ್ಯಾಸ ಬಹಳ ಮನೆಗಳಲ್ಲಿರುತ್ತದೆ. ಕಾಳು-ಬೇಳೆಗಳು ಬೇಗ ಬೇಯುತ್ತವೆ ಎನ್ನುವ ಉದ್ದೇಶಕ್ಕೆ ಅವುಗಳನ್ನು ಮುಂಚಿತವಾಗಿ ನೆನೆಹಾಕಲಾಗುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಅದಷ್ಟೇ ಅಲ್ಲ, ಕಾಳುಗಳನ್ನು ಬೇಯಿಸುವ ಮುನ್ನ ಚೆನ್ನಾಗಿ ನೆನೆಸುವುದರಿಂದ ಹಲವು ರೀತಿಯಲ್ಲಿ ಲಾಭಗಳಿವೆ. ಅದನ್ನು ತಿಂದಾದ ಮೇಲೆ ಹೊಟ್ಟೆಯುಬ್ಬರಿಸಿ, ಮನೆಯ ವಾತಾವರಣವನ್ನು ಮಲಿನಗೊಳಿಸುವ ಅವಸ್ಥೆಯನ್ನು ನಿವಾರಿಸಬಹುದು. ಜೊತೆಗೆ, ತಿಂದಿದ್ದನ್ನು ಹೀರಿಕೊಳ್ಳಲೂ ದೇಹಕ್ಕೆ ಸುಲಭವಾಗುತ್ತದೆ. ಏನು ಲಾಭಗಳಿವೆ ಕಾಳುಗಳನ್ನು ನೆನೆಸಿ ತಿನ್ನುವುದರಿಂದ?

Blue Flame of gas Burner

ಇಂಧನ ಉಳಿತಾಯ

ದೀರ್ಘ ಸಮಯ ಕಾಳುಗಳನ್ನು ನೆನೆಸುವುದರಿಂದ ಶೀಘ್ರ ಬೇಯುತ್ತವೆ ಅವು. ಈ ಮೂಲಕ ಇಂಧನವನ್ನು ಉಳಿಸಬಹುದು. ಅಡುಗೆ ಮನೆಯಲ್ಲಿ ಹೆಚ್ಚು ಸಮಯ ಕಳೆಯುವುದನ್ನೂ ತಪ್ಪಿಸಬಹುದು. ಅದರಲ್ಲೂ ಬರೀ ನೀರಿನಲ್ಲಿ ಕಾಳುಗಳನ್ನು ನೆನೆಸುವುದಕ್ಕಿಂತ, ಆ ನೀರಿಗೆ ಒಂದು ಚಿಟಿಕೆ ಉಪ್ಪು ಹಾಕಿ ನೆನೆಸುವುದು ಹೆಚ್ಚು ಪ್ರಯೋಜನಕಾರಿ.

ealthy internal organs of human digestive system / highlighted blue organs

ಜೀರ್ಣಾಂಗಗಳಿಗೆ ಅನುಕೂಲ

ಕಾಳುಗಳಲ್ಲಿ ಒಂದು ಬಗೆಯ ಸಂಕೀರ್ಣ ಸಕ್ಕರೆ ಅಂಶಗಳಿರುತ್ತವೆ. ಆಲಿಗೋಸಾಕರೈಡ್ಸ್‌ ಎಂದು ಅವುಗಳನ್ನು ಕರೆಯಲಾಗುತ್ತದೆ. ಬಹುಪಾಲು ಜನರಿಗೆ ಈ ಸಕ್ಕರೆಯಂಶ ವಿಘಟನೆಯಾಗಿ ಜೀರ್ಣವಾಗುವುದಿಲ್ಲ. ಇದರಿಂದಾಗಿಯೇ ಕಾಳುಗಳನ್ನು ತಿಂದಾಗ ಹೊಟ್ಟೆ ಉಬ್ಬರಿಸಿ, ಗ್ಯಾಸ್‌ ಸಮಸ್ಯೆ ಆಗುವುದು. ಹಾಗಾಗಿ ಕಾಳುಗಳನ್ನು ಚೆನ್ನಾಗಿ ನೆನೆಸುವುದರಿಂದ ಅವುಗಳಲ್ಲಿರುವ ಈ ಸಕ್ಕರೆಯಂಶವನ್ನು ಕಡಿಮೆ ಮಾಡಬಹುದು. ನೆನೆದು ಉಳಿದ ಅಂಶವನ್ನೂ ವಿಘಟನೆ ಮಾಡಲು ಅನುಕೂಲವಾಗುತ್ತದೆ ದೇಹಕ್ಕೆ.

ಹೀರಿಕೊಳ್ಳಲು ಸುಲಭ

ನೆನೆದ ಕಾಳುಗಳು ಬೇಯುವುದಕ್ಕೆ ಅನುಕೂಲವಷ್ಟೇ ಅಲ್ಲ, ಸತ್ವಗಳನ್ನು ಹೀರಿಕೊಳ್ಳಲೂ ಸುಲಭದ ತುತ್ತಾಗುತ್ತವೆ. ಕೆಲವು ಖನಿಜಗಳನ್ನು ಹೀರಿಕೊಳ್ಳುವುದಕ್ಕೆ ಅದೇ ಆಹಾರದಲ್ಲಿರುವ ಕೆಲವು ಅಂಶಗಳು ಅಡ್ಡಿ ಮಾಡುತ್ತವೆ. ಉದಾ, ಕಾಳುಗಳಲ್ಲಿರುವ ಫೈಟಿಕ್‌ ಆಮ್ಲವು ಕಬ್ಬಿಣ, ಸತು, ಕ್ಯಾಲ್ಶಿಯಂನಂಥ ಖನಿಜಗಳನ್ನು ಹೀರಿಕೊಳ್ಳಲು ತಡೆ ಮಾಡುತ್ತದೆ. ಆದರೆ ಕಾಳುಗಳನ್ನು ಹೆಚ್ಚು ಸಮಯ ನೆನೆಸುವುದರಿಂದ ಫೈಟಿಕ್‌ ಆಮ್ಲದ ಸಾಂದ್ರತೆಯನ್ನು ಕಡಿಮೆ ಮಾಡಬಹುದು.

ಟಾಕ್ಸಿನ್‌ ಕಡಿಮೆ

ಕಾಳುಗಳಲ್ಲಿ ಇರುವ ಅಂಶಗಳೆಲ್ಲ ಅದರ ಗಿಡಕ್ಕೆ ಪೂರಕವಾದಂಥವು. ಹಾಗಾಗಿ ಕೆಲವು ಅಂಶಗಳು ಮಾನವ ದೇಹಕ್ಕೆ ಬೇಡದಂಥವೂ ಇರಬಹುದು. ಉದಾ, ಕಿಡ್ನಿ ಬೀನ್‌ಗಳಲ್ಲಿರುವ ಲೆಕ್ಟಿನ್‌ ಅಂಶವು ನಮಗೆ ಬೇಡ. ಹಾಗಾಗಿ ಈ ಕಾಳುಗಳನ್ನು ಸಾಕಷ್ಟು ಸಮಯ ನೆನೆಸಿ, ಅದರ ನೀರು ಬದಲಾಯಿಸಿ ಬೇಯಿಸಿದರೆ ಮಾತ್ರ ಲೆಕ್ಟಿನ್‌ ಅಂಶವನ್ನು ತೆಗೆಯಬಹುದು. ಇಂಥವೇ ಇನ್ನೂ ಕೆಲವು ಟಾಕ್ಸಿನ್‌ಗಳು ಕಾಳುಗಳಲ್ಲಿರುತ್ತವೆ.

soak pulses

ರುಚಿ

ಚೆನ್ನಾಗಿ ನೆನೆದ ಕಾಳುಗಳು ಒಂದೇ ಸಮನಾಗಿ ಬೇಯುತ್ತವೆ. ತಮ್ಮ ಆಕಾರವನ್ನು ಬಿಟ್ಟುಕೊಡದೇ, ಒಳಗಿನಿಂದ ಬೆಣ್ಣೆಯಂತೆ ಕಾಳುಗಳು ಬೆಂದಿದ್ದರೆ, ಅಂಥ ಅಡುಗೆಯ ರುಚಿ ಹೆಚ್ಚು. ಸಾಕಷ್ಟು ನೆನೆಯದ ಅಥವಾ ಸ್ವಲ್ಪವೂ ನೆನೆಯದ ಕಾಳುಗಳು ಬೇಯುವುದಕ್ಕೆ ಸಮಯವೂ ಹೆಚ್ಚು ಬೇಕು. ಹಾಗೆಂದು ಹೆಚ್ಚು ಬೇಯಿಸಿದರೆ ಪೇಸ್ಟಿನಂತಾಗಿ ಅಡುಗೆಯ ರುಚಿ ಕೆಡುತ್ತದೆ.

ಇದನ್ನೂ ಓದಿ: Curd Rice Recipe: ಮೊಸರನ್ನ ರುಚಿಕರವಾಗಿರಲು ಹೀಗೆ ಮಾಡಿ!

ನೆನೆಸುವುದು ಹೇಗೆ?

ಕಾಳುಗಳನ್ನು ನೀರಿಗೆ ಹಾಕುವುದೇನು ಬ್ರಹ್ಮ ವಿದ್ಯೆಯೇ ಎಂದು ನಗಬೇಡಿ. ಕೆಲವೊಮ್ಮೆ ಅದರಲ್ಲೂ ತಪ್ಪಾಗುತ್ತದೆ. ಮೊದಲಿಗೆ ಕಾಳುಗಳನ್ನು ಚೆನ್ನಾಗಿ ತೊಳೆದ ಮೇಲೆ, ಅಗಲ ಬಾಯಿಯ ಪಾತ್ರೆಗೆ ಹಾಕಿ, ಅದರ ಮೇಲೆ ಮೂರಿಂಚು ನೀರು ನಿಲ್ಲುವಷ್ಟು ನೆನೆಸಿ. ಚಿಟಿಕೆ ಉಪ್ಪು ಹಾಕಿ. ಹಾಗಲ್ಲದಿದ್ದರೆ, ಮೂರು ಕಪ್‌ ಕಾಳುಗಳಿಗೆ 10 ಕಪ್‌ನಷ್ಟು ನೀರು ಹಾಕಿ. ಇದೀಗ 8 ತಾಸುಗಳ ಕಾಲ ಅಥವಾ ಅಹೋರಾತ್ರಿ ನೆನೆಯಲಿ. ಇದನ್ನು ಬೇಯಿಸುವಾಗ, ನೆನೆಸಿದ ನೀರನ್ನು ಅವಶ್ಯವಾಗಿ ತೆಗೆದು ಬೇರೆ ನೀರಲ್ಲೇ ಬೇಯಿಸಿ. ನೆನೆಸಿದ ನೀರಲ್ಲಿ ಟಾಕ್ಸಿನ್‌ಗಳು ಕರಗಿರುವುದರಿಂದ, ನಮಗದು ಬೇಡ. ಆದರೆ ಬೇಯಿಸಿದ ಕಾಳು-ಬೇಳೆಗಳ ಕಟ್ಟನ್ನು ಮಾತ್ರ ಎಂದಿಗೂ ಬಿಸಾಡಬೇಡಿ. ಒಂದೊಮ್ಮೆ ರಾತ್ರಿಡೀ ನೆನೆಸುವಷ್ಟು ಸಮಯವಿಲ್ಲ, ತುರ್ತಾಗಿ ಅದನ್ನು ಅಡುಗೆಗೆ ಬಳಸಬೇಕಿದೆ ಎಂದಾದರೆ, ಇನ್ನೊಂದು ಕ್ರಮವಿದೆ. ಒಂದು ಕಪ್‌ ಕಾಳುಗಳಿಗೆ ಐದು ಕಪ್‌ನಂತೆ ಕುದಿಯುವ ನೀರು ಹಾಕಿ. ಇದನ್ನು ಭದ್ರವಾಗಿ ಮುಚ್ಚಿಡಿ, ಒಂದೆರಡು ತಾಸಿನ ನಂತರ ಈ ಕಾಳುಗಳು ಚೆನ್ನಾಗಿ ನೆನೆದಿರುತ್ತವೆ. ಅದನ್ನೀಗ ಅಡುಗೆಗೆ ಬಳಸಬಹುದು.

Continue Reading

ಆರೋಗ್ಯ

Health Tips Kannada: ಮಳೆಗಾಲದಲ್ಲಿ ಹಾಗಲಕಾಯಿ ತಿಂದರೆ ಪ್ರಯೋಜನಗಳು ಎಷ್ಟೊಂದು!

Health Tips Kannada: ಕಹಿ ಇರುವುದೆಲ್ಲ ಹಾಗಲಕಾಯಿ ಆಗುವುದಿಲ್ಲ. ಅದರ ಗುಣಗಳು ಇರುವುದೇ ಹಾಗೇ, ಬೇರಾವುದೇ ತರಕಾರಿಗಳು ಇರದ ಹಾಗೆ. ಬಾಯಿಗೆ ಕಹಿಯಾದರೂ, ಆರೋಗ್ಯಕ್ಕೆ ಸಿಹಿಯನ್ನೇ ನೀಡುತ್ತದೆ ಇದು. ಅದರಲ್ಲೂ ಮಳೆಗಾಲದಲ್ಲಿ ಹಾಗಲಕಾಯಿ ತಿನ್ನುವುದು ಹಲವು ರೀತಿಯ ಆರೋಗ್ಯಕರ ಲಾಭಗಳನ್ನು ತರುತ್ತದೆ. ಏನು, ಹೇಗೆ ಎನ್ನುವುದನ್ನು ಈ ಲೇಖನದ ಮೂಲಕ ಅರ್ಥ ಮಾಡಿಕೊಳ್ಳೋಣ.

VISTARANEWS.COM


on

Health Tips Kannada
Koo

ʻಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿʼ ಎನ್ನುವ ಗಾದೆಯೇ ಸಾಕು ಈ ಎರಡೂ ವಸ್ತುಗಳ ಕಹಿ ಗುಣವನ್ನು ಹೇಳುವುದಕ್ಕೆ. ಬೇವಿನ ಕಾಯಿಯನ್ನು ಅಡುಗೆಗೆ ಬಳಸುವುದಿಲ್ಲ. ಆದರೆ ಹಾಗಲಕಾಯಿ ಬಹಳಷ್ಟು ರೀತಿಯ ವ್ಯಂಜನಗಳಿಗೆ ಬಳಕೆಯಾಗುತ್ತದೆ. ಹಾಗಲ ಕಾಯಿಯಿಂದ ಪಲ್ಯ, ಗೊಜ್ಜುಗಳಿಂದ ತೊಡಗಿ ಬಾಳಕದವರೆಗೆ ಹಲವು ರೀತಿಯ ಅಡುಗೆಗಳು ತಯಾರಾಗುತ್ತವೆ. ಪ್ರತಿರೋಧಕತೆ ಹೆಚ್ಚಿಸಿ, ಜೀರ್ಣಕ್ರಿಯೆ ಚುರುಕು ಮಾಡಿ, ರಕ್ತದಲ್ಲಿನ ಸಕ್ಕರೆಯಂಶ ನಿಯಂತ್ರಿಸಿ, ಯಕೃತ್‌ನ ಸಾಮರ್ಥ್ಯ ಹೆಚ್ಚಿಸುವಂಥ ಈ ಹಾಗಲವು ರುಚಿಯಲ್ಲಿ ಕಹಿಯೇ ಹೌದಾದರೂ, ಮಳೆಗಾಲದ ಅಡುಗೆಗಳಲ್ಲಿ ಇದಕ್ಕೆ ಜಾಗ ಕೊಡಬೇಕಾದ್ದು ಅಗತ್ಯ. ಏಕೆ ಎಂಬುದನ್ನು (Health Tips Kannada) ನೋಡೋಣ.

Antioxidants in it keep immunity strong Benefits Of Mandakki

ಪ್ರತಿರೋಧಕತೆ ತೀಕ್ಷ್ಣ

ಮಳೆಗಾಲದಲ್ಲಿ ನಾನಾ ವೈರಸ್‌ಗಳ ಕಾಟ ಮುಗಿಯುವುದೇ ಇಲ್ಲ. ಹಾಗಾಗಿ ಮಳೆ-ಗುಡುಗುಗಳೆಲ್ಲ ಮೂಗು-ಗಂಟಲಲ್ಲೂ ಮೊಳಗುತ್ತವೆ. ವಿಟಮಿನ್‌ ಸಿ ಮತ್ತು ಇತರ ಉತ್ಕರ್ಷಣ ನಿರೋಧಕಗಳು ಭರಪೂರ ಇರುವ ಹಾಗಲ ಕಾಯಿಯ ಸೇವನೆಯಿಂದ ಸೋಂಕುಗಳ ವಿರುದ್ಧ ಹೋರಾಡುವುದಕ್ಕೆ ಹೆಚ್ಚಿನ ಬಲ ದೊರೆಯುತ್ತದೆ. ದೇಹದಲ್ಲಿನ ಬಿಳಿ ರಕ್ತಕಣಗಳನ್ನು ಬಲಪಡಿಸುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅದರಲ್ಲೂ ನೆಗಡಿ, ಕೆಮ್ಮು, ಜ್ವರದಂಥ ಸೋಂಕು ರೋಗಗಳ ವಿರುದ್ಧ ಹೆಚ್ಚಿನ ಅನುಕೂಲ ಕಲ್ಪಿಸುತ್ತದೆ.

Blood Sugar Regulation Drumsticks Benefits

ಮಧುಮೇಹ ನಿಯಂತ್ರಣ

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಹಾಗಲ ಹೆಚ್ಚಿನ ದಕ್ಷತೆಯನ್ನು ಮೆರೆದಿದೆ. ಅದರಲ್ಲೂ ಮಧುಮೇಹ-ಪೂರ್ವ ಸ್ಥಿತಿಯಲ್ಲಿ ಇರುವವರು ಇದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು. ಪಾಲಿಪೆಪ್‌ಟೈಡ್‌-ಪಿ ಮಾದರಿಯ ಸಂಯುಕ್ತಗಳು ಇದರಲ್ಲಿದ್ದು, ಇವು ರಕ್ತದಲ್ಲಿನ ಸಕ್ಕರೆಯಂಶವನ್ನು ಕಡಿಮೆ ಮಾಡುತ್ತವೆ. ಇನ್‌ಸುಲಿನ್‌ ಪ್ರತಿರೋಧವನ್ನು ಕಡಿಮೆ ಮಾಡುವುದರಿಂದ, ಮಳೆಗಾಲದಲ್ಲಿ ಮಧುಮೇಹ ನಿಯಂತ್ರಣಕ್ಕೆ ಇದನ್ನು ತಿನ್ನುವುದು ಪ್ರಯೋಜನವಾಗುತ್ತದೆ.

Image Of Karela Benefits

ನಾರಿನಂಶ ಹೆಚ್ಚು

ಮಳೆ-ಚಳಿ ಇದ್ದಾಗ ಹೆಚ್ಚು ನೀರು ಕುಡಿಯುವುದಕ್ಕೆ ನೆನಪೇ ಆಗುವುದಿಲ್ಲ. ಆದರೆ ದೇಹಕ್ಕೆ ನೀರು ಬೇಕಾಗುತ್ತದೆಂಬುದು ಸುಳ್ಳಲ್ಲವಲ್ಲ. ಬಾಯಾರಿಕೆ ಆಗುವುದು ತಿಳಿಯುವುದಿಲ್ಲ ಎಂಬ ನೆವದಿಂದ ನೀರು ಕುಡಿಯದಿದ್ದರೆ, ಮಳೆಗಾಲದಲ್ಲೇ ಮಲಬದ್ಧತೆಯಂಥ ತೊಂದರೆಗಳು ಗಂಟಾಗುತ್ತವೆ. ಹಾಗಲಕಾಯಿಯಲ್ಲಿ ನಾರಿನಂಶ ವಿಫುಲವಾಗಿದೆ. ಮಳೆಗಾಲದಲ್ಲಿ ಇದನ್ನು ಸೇವಿಸುವುದರಿಂದ ಮಲಬದ್ಧತೆಯ ನಿವಾರಣೆಗೆ ನೆರವು ದೊರೆಯುತ್ತದೆ. ಜೊತೆಗೆ, ಹಾಗಲ ಬೈಲ್‌ ರಸದ ಉತ್ಪಾದನೆಗೂ ಪ್ರೋತ್ಸಾಹ ನೀಡುವುದರಿಂದ ಜೀರ್ಣಾಂಗಗಳು ಚುರುಕಾಗುತ್ತವೆ.

Skin Care Gooseberry Benefits

ಚರ್ಮ ಫಳಫಳ

ವಾತಾವರಣದಲ್ಲಿ ತೇವ ಹೆಚ್ಚುತ್ತಿದ್ದಂತೆ, ತ್ವಚೆಯಲ್ಲಿ ಎಣ್ಣೆಯಂಶವೂ ಹೆಚ್ಚುತ್ತದೆ. ಇದರಿಂದ ಫಂಗಸ್‌ ಸೋಂಕು, ಮೊಡವೆಯಂಥ ತೊಂದರೆಗಳು ಕಾಣಬಹುದು. ಹಾಗಲದಲ್ಲಿರುವ ಉರಿಯೂತ ಶಾಮಕ ಮತ್ತು ಸೂಕ್ಷ್ಮಾಣು ವಿರೋಧಿ ಗುಣಗಳು ಚರ್ಮದ ಸಮಸ್ಯೆ ಪರಿಹಾರಕ್ಕೆ ಸಹಾಯ ಮಾಡುತ್ತವೆ. ಹಾಗಲ ಕಾಯಿಯನ್ನು ಆಗೀಗ ತಿನ್ನುವುದರಿಂದ ಅಥವಾ ಅದರ ರಸ ಕುಡಿಯುವುದರಿಂದ ಫಳಫಳ ಹೊಳೆಯುವ ತ್ವಚೆಯನ್ನು ಹೊಂದಬಹುದು.

Bitter Gourd Juice Vegetable Juice For Control Diabetes

ಡಿಟಾಕ್ಸ್‌

ಯಕೃತ್‌ನ ಆರೋಗ್ಯ ಸುಧಾರಿಸುವ ಹಾಗಲ ಕಾಯಿಯ ಸಾಮರ್ಥ್ಯದಿಂದ, ಇದನ್ನು ಡಿಟಾಕ್ಸ್‌ ಪೇಯವಾಗಿ ಬಳಸಲಾಗುತ್ತದೆ. ಮಳೆಗಾಲದಲ್ಲಿ ಬದಲಾಗುವ ವಾತಾವರಣ ಮತ್ತು ಆಹಾರ ಪದ್ಧತಿಯಿಂದಾಗಿ ಯಕೃತ್‌ ಹೆಚ್ಚು ಕೆಲಸ ಮಾಡಬೇಕಾಗಬಹುದು. ಆದರೆ ಆಗೀಗ ಹಾಗಲಕಾಯಿಯ ರಸ ಕುಡಿಯುವುದರಿಂದ ಪಿತ್ತಜನಕಾಂಗವನ್ನು ಡಿಟಾಕ್ಸ್‌ ಮಾಡುವುದು ಸಾಧ್ಯವಾಗುತ್ತದೆ.

Continue Reading

ಆರೋಗ್ಯ

Food Poisoning: ಫುಡ್‌ ಪಾಯ್ಸನ್‌ ಆದಾಗ ಏನು ಮಾಡಬೇಕು?

Food Poisoning: ಆಹಾರ ಕಲುಷಿತಗೊಳ್ಳುವುದಕ್ಕೆ ಹಲವು ಕಾರಣಗಳಿರಬಹುದು. ಬ್ಯಾಕ್ಟೀರಿಯ, ವೈರಸ್‌ ಅಥವಾ ಇತರ ಸೂಕ್ಷ್ಮಾಣುಗಳು ಅದರಲ್ಲಿ ಇರಬಹುದು. ಟಾಕ್ಸಿನ್‌ಗಳು ಸೇರಿರಬಹುದು. ಚಿಕಿತ್ಸೆಯ ನಂತರ ಈ ಸಮಸ್ಯೆ ಪೂರ್ಣ ಗುಣವಾಗುತ್ತದೆ. ಏನು ಫುಡ್‌ ಪಾಯ್ಸನ್‌ ಎಂದರೆ? ಏನಿದರ ಲಕ್ಷಣಗಳು? ಇಲ್ಲಿದೆ ವಿವರ.

VISTARANEWS.COM


on

By

What is Food Poisoning?
Koo

ಬಾಲಿವುಡ್‌ ನಟಿ (Bollywood actress) ಜಾಹ್ನವಿ ಕಪೂರ್‌ (Janhvi Kapoor) ಫುಡ್‌ ಪಾಯ್ಸನ್‌ನಿಂದಾಗಿ (What is Food Poisoning?) ಆಸ್ಪತ್ರೆ ಸೇರಿದ ಸುದ್ದಿಯ ಬೆನ್ನಲ್ಲೇ ಈ ಸಮಸ್ಯೆಯ ಬಗ್ಗೆ ಒಂದಿಷ್ಟು ವಿವರಗಳನ್ನು ತಿಳಿಯುವ ಉದ್ದೇಶವಿದು. ಹೊಟ್ಟೆ ಹಾಳಾಗಿದೆ ಎಂದಾಕ್ಷಣ, ʻಫುಡ್‌ ಪಾಯ್ಸನ್‌ʼ ಆಗಿದೆ ಎಂಬ ಮಾತು ಕೇಳಿಬರುತ್ತದೆ.

ಕಲುಷಿತ ಆಹಾರದ ಸೇವನೆಯಿಂದ ಬರುವ ಸಮಸ್ಯೆಯಿದು ಎಂಬುದು ಎಲ್ಲರಿಗೂ ಗೊತ್ತು. ಹಾಗಾದರೆ ತಾರೆಯರಿಗೆ ಒಳ್ಳೆಯ ಆಹಾರ ಸೇವಿಸಬೇಕೆಂಬುದು ತಿಳಿದಿರುವುದಿಲ್ಲವೇ? ಎಲ್ಲೆಂದರಲ್ಲಿ ತಿಂದು ಹೀಗೆ ಹೊಟ್ಟೆ ಹಾಳು ಮಾಡಿಕೊಳ್ಳುತ್ತಾರೆಯೇ? ಏನು ಫುಡ್‌ ಪಾಯ್ಸನ್‌ ಎಂದರೆ? ಏನಿದರ ಲಕ್ಷಣಗಳು?

ಆಹಾರ ಕಲುಷಿತಗೊಳ್ಳುವುದಕ್ಕೆ ಹಲವು ಕಾರಣಗಳಿರಬಹುದು. ಬ್ಯಾಕ್ಟೀರಿಯ, ವೈರಸ್‌ ಅಥವಾ ಇತರ ಸೂಕ್ಷ್ಮಾಣುಗಳು ಅದರಲ್ಲಿ ಇರಬಹುದು. ಟಾಕ್ಸಿನ್‌ಗಳು ಸೇರಿರಬಹುದು. ಚಿಕಿತ್ಸೆಯ ನಂತರ ಈ ಸಮಸ್ಯೆ ಪೂರ್ಣ ಗುಣವಾಗುತ್ತದೆ. ಆದರೆ ಚಿಕ್ಕ ಮಕ್ಕಳು, ವೃದ್ಧರು, ಗರ್ಭಿಣಿಯರು ಅಥವಾ ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಈ ಸಮಸ್ಯೆ ಹೆಚ್ಚಿನ ತೊಂದರೆಯನ್ನು ತರಬಹುದು.

ಆಹಾರದಲ್ಲಿ ಸಾಮಾನ್ಯವಾಗಿ ಬೆಳೆಯುವ ಸಾಲ್ಮೊನೆಲ್ಲ, ಇ. ಕೋಲಿ, ಲಿಸ್ಟೆರಿಯ ಮುಂತಾದ ಬ್ಯಾಕ್ಟೀರಿಯಗಳು, ನೊರೊವೈರಸ್‌, ಹೆಪಟೈಟಿಸ್‌ ಎ ಇನ್ನಿತರ ವೈರಸ್‌ಗಳು, ಟೊಕ್ಸೊಪ್ಲಾಸ್ಮದಂಥ ಸೂಕ್ಷ್ಮಾಣುಗಳು ಆರೋಗ್ಯ ಏರುಪೇರಾಗುವುದಕ್ಕೆ ಕಾರಣವಾಗುತ್ತವೆ.

ಲಕ್ಷಣಗಳೇನು?

ವಾಂತಿ, ಹೊಟ್ಟೆ ತೊಳೆಸುವುದು, ಅತಿಸಾರ, ಹೊಟ್ಟೆ ನೋವು, ಜ್ವರ, ತಲೆನೋವು, ಸುಸ್ತು, ನಿಶ್ಶಕ್ತಿ ಇತ್ಯಾದಿ. ಕಲುಷಿತ ಆಹಾರ ಸೇವಿಸಿದ ಒಂದೆರಡು ತಾಸುಗಳಲ್ಲೇ ಈ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಒಂದೆರಡು ದಿನವೂ ಆಗಬಹುದು. ಕೆಲವರು ಅಲ್ಪ ಕಾಲದ ಅನಾರೋಗ್ಯದ ನಂತರ ಚೇತರಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಹಲವಾರು ದಿನಗಳೂ ಬೇಕಾಗಬಹುದು. ಒಂದೊಮ್ಮೆ ವಾಂತಿ-ಅತಿಸಾರದಂಥ ಲಕ್ಷಣಗಳು ಹೆಚ್ಚಾದರೆ ಆಸ್ಪತ್ರೆ ದರ್ಶನ ಮಾಡಲೇಬೇಕಾಗುತ್ತದೆ.

ಏನು ಮಾಡಬಹುದು?

ಲಕ್ಷಣಗಳು ಸೌಮ್ಯವಾಗಿದ್ದರೆ, ವೈದ್ಯರ ಸಲಹೆಯ ಮೇರೆಗೆ ಮನೆಯಲ್ಲೇ ಚಿಕಿತ್ಸೆ ಸಾಧ್ಯವಿದೆ. ವಾಂತಿ- ಅತಿಸಾರದಿಂದ ದೇಹ ಬಳಲಿದ್ದರೆ ಸಾಕಷ್ಟ ದ್ರವಾಹಾರವನ್ನು ಸೇವಿಸಿ. ಹಾಗಿಲ್ಲದಿದ್ದರೆ ನಿರ್ಜಲೀಕರಣದ ಅಪಾಯ ಎದುರಾಗಬಹುದು. ದೇಹಕ್ಕೆ ಏನೇ ಸಮಸ್ಯೆಯಾದರೂ, ಅದು ಗುಣವಾಗುವುದಕ್ಕೆ ವಿಶಾಂತಿ ಬೇಕು. ಚೆನ್ನಾಗಿ ನಿದ್ರೆ ಮಾಡಿ. ಇದಕ್ಕೆ ಏನು ಮದ್ದು ಮಾಡಬಹುದು ಎಂಬುದನ್ನು ಗೂಗಲ್‌ ಮಾಡುತ್ತಾ ಸಮಯ ಹಾಳು ಮಾಡಬೇಡಿ.

What is Food Poisoning?


ಆಹಾರ

ಬಾಳೆಹಣ್ಣು, ಅನ್ನ, ಸೇಬುಹಣ್ಣು ಮುಂತಾದ ಮೆತ್ತನೆಯ ಆಹಾರಗಳು ಈ ಹೊತ್ತಿಗೆ ಸೂಕ್ತ. ದಾಳಿಂಬೆ ಹಣ್ಣು ಅಥವಾ ರಸ ಹೊಟ್ಟೆಯ ತೊಂದರೆಗೆ ಆರಾಮ ನೀಡುತ್ತದೆ. ಹೊಟ್ಟೆಯ ಲಕ್ಷಣಗಳಿಂದ ಆಸಿಡಿಟಿ ಆಗಿದ್ದರೆ, ಎಳನೀರು ಮತ್ತು ಬೂದು ಕುಂಬಳಕಾಯಿಯ ರಸಗಳು ಆರಾಮ ನೀಡಬಲ್ಲವು.

ಶುಂಠಿಯ ಕಷಾಯ ಅಥವಾ ಚಹಾ ಸಹ ಉಪಶಮನ ನೀಡುತ್ತದೆ. ಮೊಸರು, ಮಜ್ಜಿಗೆ ಮುಂತಾದ ಪ್ರೊಬಯಾಟಿಕ್‌ ಆಹಾರಗಳು, ಪ್ರೊಬಯಾಟಿಕ್‌ ಎನ್‌ಜೈಮ್‌ಗಳು ಈ ಸಮಸ್ಯೆ ಬೇಗ ಗುಣವಾಗುವಲ್ಲಿ ಸಹಾಯ ಮಾಡುತ್ತವೆ.

ಇದನ್ನೂ ಓದಿ: Health Tips Kannada: ಚಹಾದಿಂದ ಅಸಿಡಿಟಿಯೇ? ಹಾಗಾದರೆ ನೀವು ಈ 5 ತಪ್ಪುಗಳನ್ನು ಮಾಡುತ್ತಿದ್ದೀರಿ ಎಂದರ್ಥ!


ತಡೆಯಲಾಗದೇ?

ಯಾಕಾಗದು? ಖಂಡಿತ! ಪ್ರತಿ ಬಾರಿ ಊಟ-ತಿಂಡಿಯ ಸಮಯಗಳಲ್ಲಿ ಕೈಗಳಲ್ಲಿ ಸರಿಯಾಗಿ ತೊಳೆದುಕೊಳ್ಳಿ. ಉಪಯೋಗಿಸುವ ತಟ್ಟೆ, ಚಮಚಗಳು ಸಹ ಸ್ವಚ್ಛವಾಗಿರುವುದು ಮುಖ್ಯ. ಮನೆಯಲ್ಲಿ ಉಳಿಕೆ ಆಹಾರವನ್ನು ಸಮರ್ಪಕವಾಗಿ ದಾಸ್ತಾನು ಮಾಡಿ. ಫ್ರಿಜ್‌ನಲ್ಲಿರುವ ಆಹಾರವನ್ನು ತಿನ್ನುವಾಗ, ಅವುಗಳನ್ನು ಉಗಿ ಹಾಯುವಂತೆ ಬಿಸಿ ಮಾಡಿ.

ಮೊಟ್ಟೆ, ಮೀನು ಅಥವಾ ಇನ್ನಾವುದೇ ಮಾಂಸವನ್ನು ಹಸಿಯಾಗಿ ಎಂದಿಗೂ ತಿನ್ನಬೇಡಿ. ಕುಡಿಯುವ ನೀರು ಶುದ್ಧವಾಗಿರುವಂತೆ ನೋಡಿಕೊಳ್ಳಿ. ಅನುಮಾನವಿದ್ದರೆ ಕುದಿಸಿಯೇ ಕುಡಿಯಿರಿ. ಹೊರಗೆ ಎಲ್ಲಿಯೇ ಆಹಾರ ಸೇವಿಸಿದರೂ, ಬಿಸಿಯಾಗಿದ್ದನ್ನೇ ತಿನ್ನಿ.

Continue Reading
Advertisement
Kalki 2898 AD makers served legal notice Kalki Dham Peethadheeshwar Acharya Pramod Krishnam
ಟಾಲಿವುಡ್11 mins ago

Kalki 2898 AD: ಅಮಿತಾಭ್‌, ಪ್ರಭಾಸ್‌ಗೆ ಲೀಗಲ್ ನೋಟಿಸ್ ಕಳುಹಿಸಿದ ಕಾಂಗ್ರೆಸ್ ಮಾಜಿ ನಾಯಕ!

ದೇಶ16 mins ago

Central Budget 2024: ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಟೀಂನಲ್ಲಿ ಯಾರೆಲ್ಲಾ ಇದ್ದಾರೆ ಗೊತ್ತಾ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

ರಾಜಮಾರ್ಗ ಅಂಕಣ
ಕ್ರೀಡೆ51 mins ago

ರಾಜಮಾರ್ಗ ಅಂಕಣ: ರಾಹುಲ್ ದ್ರಾವಿಡ್ ಎಂಬ ಮಹಾಗುರುವಿಗೆ ಸಲಾಂ; ಭಾರತರತ್ನ ನೀಡಲು ಇದು ಸಕಾಲ

Road Accident
ಕ್ರೈಂ52 mins ago

Road Accident: ಕಾರು-ಬಸ್‌ ನಡುವೆ ಮುಖಾಮುಖಿ ಡಿಕ್ಕಿ; ಇಬ್ಬರ ಸಾವು

Road Rage Case
ದೇಶ60 mins ago

Road Rage Case: ನಡು ರಸ್ತೆಯಲ್ಲೇ ಮಹಿಳೆಯ ಕೂದಲು ಎಳೆದು ಮೂಗಿಗೆ ಪಂಚ್‌; ವೈರಲಾಗ್ತಿದೆ ಈ ವಿಡಿಯೋ

Pawan Kalyan Go To Singapore Anna Lezhneva graduation ceremony
ಕಾಲಿವುಡ್1 hour ago

Pawan Kalyan: ಸಿಂಗಾಪುರದಲ್ಲಿ ಪವನ್ ಕಲ್ಯಾಣ್ ಮೂರನೇ ಪತ್ನಿ ಪಡೆದ ಪದವಿ ಯಾವುದು?

Women's Asia Cup
ಕ್ರೀಡೆ1 hour ago

Women’s Asia Cup: ಏಷ್ಯಾಕಪ್​ನಿಂದ ಹೊರಬಿದ್ದ ಕನ್ನಡತಿ ಶ್ರೇಯಾಂಕಾ ಪಾಟೀಲ್

Road Accident
ಕ್ರೈಂ2 hours ago

Road Accident: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಜೀಪು; ಬಸ್‌ ನಿಲ್ಲಿಸದ ಕೋಪಕ್ಕೆ ಕಲ್ಲು ತೂರಿದವ ಪೊಲೀಸ್‌ ಅತಿಥಿ

Nipah Virus
ದೇಶ2 hours ago

Nipah Virus: ಕೇರಳದಲ್ಲಿ ನಿಫಾ ಕೇಸ್ ಪತ್ತೆ; ಡೆಂಗ್ಯೂ ಬೆನ್ನಲ್ಲೇ ಕರ್ನಾಟಕಕ್ಕೆ ಮತ್ತೊಂದು ಭೀತಿ

Payal Malik declares she’s ready to divorce Armaan Malik
ಬಿಗ್ ಬಾಸ್2 hours ago

Payal Malik: ಇನ್ನೊಬ್ಬಳ ಜತೆ ಹಾಯಾಗಿರಲಿ ಎಂದು ಪತಿಗೆ ವಿಚ್ಛೇದನ ಕೊಡೋಕೆ ಮುಂದಾದ ಪಾಯಲ್!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ21 hours ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ23 hours ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ2 days ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ2 days ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ3 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ3 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ5 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ6 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ6 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

ಟ್ರೆಂಡಿಂಗ್‌