Lung Cancer: ಸಿಗರೇಟ್ ಮಾತ್ರವಲ್ಲ, ಶ್ವಾಸಕೋಶದ ಕ್ಯಾನ್ಸರ್‌‌ಗೆ ಇನ್ನೂ ಹಲವು ಕಾರಣಗಳಿವೆ! - Vistara News

ಆರೋಗ್ಯ

Lung Cancer: ಸಿಗರೇಟ್ ಮಾತ್ರವಲ್ಲ, ಶ್ವಾಸಕೋಶದ ಕ್ಯಾನ್ಸರ್‌‌ಗೆ ಇನ್ನೂ ಹಲವು ಕಾರಣಗಳಿವೆ!

Lung Cancer: ಸಿಗರೇಟ್‌ ಮತ್ತು ತಂಬಾಕಿನ ಚಟದಿಂದ ಪುಪ್ಪುಸ ಕ್ಯಾನ್ಸರ್‌ ಬರುವುದೆಂಬ ಸತ್ಯ ಈಗಾಗಲೇ ಸಿದ್ಧವಾಗಿರುವಂಥದ್ದು. ಆದರೆ ಶ್ವಾಸಕೋಶದ ಕ್ಯಾನ್ಸರ್‌ ಬರುವುದಕ್ಕೆ ಇದೊಂದೇ ಅಲ್ಲ, ಇನ್ನೂ ಬಹಳಷ್ಟು ಕಾರಣಗಳಿವೆ ಎಂಬುದನ್ನೂ ಅಧ್ಯಯನಗಳು ಎತ್ತಿ ಹಿಡಿಯುತ್ತಿವೆ. ಏನೆಲ್ಲ ಕಾರಣಗಳು ಶ್ವಾಸಕೋಶದ ಕ್ಯಾನ್ಸರ್‌ ಅಮರಿಕೊಳ್ಳುವುದರ ಹಿಂದಿವೆ ಎಂಬ ವಿವರಗಳು ಇಲ್ಲಿವೆ.

VISTARANEWS.COM


on

Lung Cancer
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನಮ್ಮ ಜೀವನದ ಎಲ್ಲಾ ಭಾಗಗಳೂ ಒಟ್ಟಾರೆಯಾಗಿ ಸೇರಿ ನಮ್ಮ ದೇಹಸ್ವಾಸ್ಥ್ಯವನ್ನು ರೂಪಿಸುತ್ತವೆ. ನಮ್ಮ ಆಹಾರ, ವ್ಯಾಯಾಮ, ನಮ್ಮ ಚಟುವಟಿಕೆಗಳು, ಉಸಿರಾಡುವ ಗಾಳಿಯಿಂದ ಹಿಡಿದು ಎಲ್ಲವೂ ಮಹತ್ವವೆನಿಸುತ್ತವೆ. ಸಿಗರೇಟ್‌ ಮತ್ತು ತಂಬಾಕಿನ ಚಟದಿಂದ ಪುಪ್ಪುಸ ಕ್ಯಾನ್ಸರ್‌ (Lung Cancer) ಬರುವುದೆಂಬ ಸತ್ಯ ಈಗಾಗಲೇ ಸಿದ್ಧವಾಗಿರುವಂಥದ್ದು. ಆದರೆ ಶ್ವಾಸಕೋಶದ ಕ್ಯಾನ್ಸರ್‌ ಬರುವುದಕ್ಕೆ ಇದೊಂದೇ ಅಲ್ಲ, ಇನ್ನೂ ಬಹಳಷ್ಟು ಕಾರಣಗಳಿವೆ ಎಂಬುದನ್ನೂ ಅಧ್ಯಯನಗಳು ಎತ್ತಿ ಹಿಡಿಯುತ್ತಿವೆ. ಇದಲ್ಲದೆ ಇನ್ನೂ ಏನೆಲ್ಲ ಕಾರಣಗಳು ಶ್ವಾಸಕೋಶದ ಕ್ಯಾನ್ಸರ್‌ ಅಮರಿಕೊಳ್ಳುವುದರ ಹಿಂದಿವೆ ಮತ್ತು ಅದನ್ನು ಆರಂಭಿಕ ಹಂತಗಳಲ್ಲಿ ಪತ್ತೆ ಮಾಡುವುದು ಹೇಗೆ ಎಂಬ ವಿವರಗಳು ಇಲ್ಲಿವೆ.

Environmental pollution

ಪರಿಸರ ಮಾಲಿನ್ಯ

ಇತ್ತೀಚಿನ ವರ್ಷಗಳಲ್ಲಿ ಇದು ಸಹ ದೊಡ್ಡ ಮಟ್ಟದಲ್ಲಿ ಕಾರಣವಾಗುತ್ತಿದೆ. ಇದಕ್ಕೆ ಕಾರಣವಾಗುವಂಥ ವಿಷಯಗಳು ಬಹಳಷ್ಟಿವೆ. ವಾಹನಗಳು ಉಗುಳುವ ಹೊಗೆ, ಕಾರ್ಖಾನೆಗಳಿಂದ ಹೊರಸೂಸುವ ವಿಷಾನಿಲಗಳಿಂದ ಹಿಡಿದು ರಸ್ತೆಬದಿಯಲ್ಲಿ ಸುಡುವ ಕಸದವರೆಗೆ ಬಹಳಷ್ಟು ರೀತಿಯ ಮಾಲಿನ್ಯಗಳೆಲ್ಲವೂ ಸೇರಿ ವಾತಾವರಣದ ಘನ ಕಣಗಳ (ಪಿಎಂ) ಸಾಂದ್ರತೆ ಹೆಚ್ಚುತ್ತದೆ. ಈ ಸಮಸ್ಯೆ ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣುತ್ತದೆ. ವಾತಾವರಣದಲ್ಲಿನ ಘನ ಕಣಗಳ ಸಾಂದ್ರತೆ ಹೆಚ್ಚಿದಂತೆ ಶ್ವಾಸಕೋಶಗಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಕಂಡುಬರುತ್ತಿದೆ.

ರೇಡಾನ್‌ ಭೀತಿ

ಮಣ್ಣಿನಲ್ಲಿ ಹೆಚ್ಚಿನ ಯುರೇನಿಯಂ ಅಂಶ ಇರುವಲ್ಲಿ ನೈಸರ್ಗಿಕವಾಗಿಯೇ ಕಂಡು ಬರುವ ವಿಕಿರಣಕಾರಕ ಅನಿಲವಿದು. ಕೆಲವೊಮ್ಮೆ ಒಂದೊಂದು ಪ್ರದೇಶಗಳಲ್ಲಿ, ಮನೆಗಳಲ್ಲೂ ಇದರ ಸಾಂದ್ರತೆ ಹೆಚ್ಚಬಲ್ಲದು. ಕಾರಣ, ಆಯಾ ಪ್ರದೇಶದ ಮಣ್ಣಿನ ಗುಣ ನಮಗೆ ಅರಿವಿರುವುದಿಲ್ಲ. ಇಂಥ ಪ್ರದೇಶಗಳಲ್ಲಿ ದೀರ್ಘ ಕಾಲ ವಾಸವಿದ್ದರೆ, ಇದೇ ವಿಕಿರಣ ಅನಿಲವನ್ನು ಉಸಿರಾಡಿದರೆ ಪುಪ್ಪುಸ ಕ್ಯಾನ್ಸರ್‌ ಭೀತಿ ಹೆಚ್ಚುತ್ತದೆ.

ವೃತ್ತಿಯ ತೊಂದರೆಗಳು

ಗಣಿಯಲ್ಲಿ ಕೆಲಸ ಮಾಡುವವರು, ಕಟ್ಟಡ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವವರು, ಕೆಲವು ರಾಸಾಯನಿಕಗಳ ತಯಾರಿಕೆಯಲ್ಲಿ ತೊಡಗಿಕೊಂಡವರು- ಇಂತಹ ವೃತ್ತಿಗಳಲ್ಲಿ ಇರುವವರಿಗೆ ಶ್ವಾಸಕೋಶಗಳು ಹಾನಿಗೊಳಗಾಗುವ ಸಾಧ್ಯತೆ ಉಳಿದವರಿಗಿಂತ ಹೆಚ್ಚು. ಆಸ್‌ಬೆಸ್ಟೋಸ್‌, ಆರ್ಸೆನಿಕ್‌, ಡೀಸೆಲ್‌ ಹೊಗೆಯೂ ಶ್ವಾಸಕೋಶಗಳ ಕ್ಯಾನ್ಸರ್‌ ಬರುವುದಕ್ಕೆ ರಹದಾರಿ ನೀಡಬಲ್ಲವು.

Cancer cells infected the Human Respiratory System Climbing Stairs Benefits

ಆನುವಂಶಿಕ ಕಾರಣಗಳು

ಕುಟುಂಬದಲ್ಲಿ ಕ್ಯಾನ್ಸರ್‌ನ ಇತಿಹಾಸವಿದ್ದರೆ ಈ ಬಗ್ಗೆ ಎಚ್ಚರದಿಂದ ಇರುವುದು ಒಳಿತು. ಅದರಲ್ಲೂ ಶ್ವಾಸಕೋಶದ ಕ್ಯಾನ್ಸರ್‌ ಹೊಂದಿದ ರಕ್ತಸಂಬಂಧಿಗಳಿದ್ದರೆ, ಕುಟುಂಬಸ್ಥರಿದ್ದರೆ, ಮುಂದಿನ ತಲೆಮಾರುಗಳ ಅಪಾಯವನ್ನು ಹೆಚ್ಚಿಸುತ್ತದೆ.

ಶ್ವಾಸಕೋಶದ ಸಮಸ್ಯೆಗಳು

ಪಲ್ಮನರಿ ಫೈಬ್ರೋಸಿಸ್‌ ಅಥವಾ ಇನ್ನಾವುದೇ ರೀತಿಯ ಉರಿಯೂತಗಳು ದೀರ್ಘಕಾಲ ಶ್ವಾಸಕೋಶಗಳನ್ನು ಕಾಡಿದರೆ, ಅದರಿಂದಲೂ ಕ್ಯಾನ್ಸರ್‌ ಬರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಉರಿಯೂತದಿಂದ ಪುಪ್ಪುಸಗಳನ್ನು ಪಾರು ಮಾಡುವಂಥ ಕ್ರಮಗಳ ಬಗ್ಗೆ ವೈದ್ಯರಲ್ಲಿ ಚರ್ಚಿಸುವುದು ಕ್ಷೇಮ.

No smoking

ಪಾರ್ಶ್ವ ಧೂಮಪಾನ

ಸಿಗರೇಟ್‌ ಸೇದುವ ಚಟದವರಿಗೆ ಚಟ್ಟ ಖಾತ್ರಿ. ಆದರೆ ನೇರವಾಗಿ ಅಲ್ಲದೆ, ಈ ಹೊಗೆಗೆ ತೆರೆದುಕೊಂಡವರಿಗೂ ಶ್ವಾಸಕೋಶದ ಕ್ಯಾನ್ಸರ್‌ನ ಅಪಾಯ ತಪ್ಪಿದ್ದಲ್ಲ. ಇದಿಷ್ಟೇ ಅಲ್ಲ, ನಿಕೋಟಿನ್‌ ಅವಶೇಷಗಳ ಸಂಪರ್ಕಕ್ಕೆ ನಿಯಮಿತವಾಗಿ ಬಂದರೂ ಈ ಭೀತಿ ಹತ್ತಿರವಾಗುತ್ತದೆ ಎನ್ನುತ್ತವೆ ಹಲವು ಅಧ್ಯಯನಗಳು. ಹಾಗಾಗಿ ಕುಟುಂಬದಲ್ಲಿ ಧೂಮಪಾನಿಗಳು ಇಲ್ಲದಿದ್ದರೂ, ಅಕ್ಕಪಕ್ಕದಲ್ಲಿ ಇದ್ದರೂ ಅಪಾಯ ಅಕ್ಕಪಕ್ಕದಲ್ಲೇ ಇದೆಯೆಂದು ಅರ್ಥ.

ಇದನ್ನೂ ಓದಿ: Painkillers Side Effects: ನೋವು ನಿವಾರಕಗಳನ್ನು ನುಂಗುತ್ತೀರಾ? ಹಾಗಾದರೆ ಈ ಮಾಹಿತಿ ತಿಳಿದಿರಲಿ!

ದೂರ ಮಾಡುವುದು ಹೇಗೆ?

ವಾಯು ಮಾಲಿನ್ಯ ಹೆಚ್ಚಿದೆ ಎನಿಸಿದ ಪ್ರದೇಶಗಳಿಂದ ದೂರ ಸರಿಯಲು ಸಾಧ್ಯವೇ ಎಂಬುದನ್ನು ಪರಿಶೀಲಿಸಿ. ಅದರಲ್ಲೂ ವಾತಾವರಣದಲ್ಲಿ ರೇಡಾನ್‌ನಂಥ ಅನಿಲಗಳಿದ್ದರೆ, ಸ್ಥಳ ಬದಲಿಸುವುದೇ ಸೂಕ್ತ. ಆನುವಂಶಿಕ ಕಾರಣಗಳಿದ್ದರೆ, ಕಾಲಕಾಲಕ್ಕೆ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳಿ. ಇದರಿಂದ ಆರಂಭದಲ್ಲಿ ಇರುವಂಥವೂ ಪತ್ತೆಯಾಗಬಹುದು. ಉತ್ತಮ ಆಹಾರ, ನಿದ್ದೆ, ವ್ಯಾಯಾಮದಂಥ ಕ್ರಮಬದ್ಧ ಜೀವನಶೈಲಿಯನ್ನು ರೂಢಿಸಿಕೊಳ್ಳುವುದು ಬಹಳಷ್ಟು ರೋಗಗಳನ್ನು ದೂರ ಇರಿಸಬಲ್ಲದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

MonkeyPox: ತೀವ್ರಗೊಳ್ಳುತ್ತಿದೆ ಮಂಕಿ ಪಾಕ್ಸ್; ಮತ್ತೊಮ್ಮೆ ಲಾಕ್‌ಡೌನ್ ಘೋಷಣೆ?

ಆಫ್ರಿಕನ್ ರಾಷ್ಟ್ರಗಳ ಮೂಲಕ ಮಂಕಿ ಪಾಕ್ಸ್ (MonkeyPox) ವೈರಸ್ ಸೋಂಕು ವೇಗವಾಗಿ ಹರಡುತ್ತಿದ್ದು, ಇತಿಹಾಸವು ಪುನರಾವರ್ತನೆಯಾಗಬಹುದೇ ಎನ್ನುವ ಆತಂಕ ಎದುರಾಗಿದೆ. ಕೋವಿಡ್ -19 ಸಾಂಕ್ರಾಮಿಕದ ಸಮಯದಲ್ಲಿ ವಿಧಿಸಲಾದ ಜಾಗತಿಕ ಲಾಕ್‌ಡೌನ್‌ಗಳು ಮತ್ತೆ ಉಂಟಾಗಬಹುದೇ ಎನ್ನುವ ಭಯ ಈಗ ವಿಶ್ವವನ್ನೇ ಕಾಡುತ್ತಿದೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಏನು ಹೇಳಿದೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

MonkeyPox
Koo

ಕೋವಿಡ್ ಸಾಂಕ್ರಾಮಿಕದ (covid pandemic) ಬಳಿಕ ಕಾಣಿಸಿಕೊಳ್ಳುತ್ತಿರುವ ಕೆಲವೊಂದು ವೈರಸ್ ಸೋಂಕುಗಳು (Virus infection) ಎಷ್ಟು ಅಪಾಯಕಾರಿ ಎನ್ನುವ ಬಗ್ಗೆ ಗೊಂದಲವಿದ್ದರೂ ಎಲ್ಲರಲ್ಲೂ ಆತಂಕ ಹೆಚ್ಚಾಗಿಯೇ ಇದೆ. ಇದೀಗ ವಿಶ್ವಕ್ಕೆ ಮಂಕಿ ಪಾಕ್ಸ್ (MonkeyPox) ಭಯ ಕಾಡಲಾರಂಭಿಸಿದ್ದು, ಮತ್ತೊಂದು ಲಾಕ್ ಡೌನ್ ಸಾಧ್ಯತೆಯ ಆತಂಕ ಎದುರಾಗಿದೆ.

ಆಫ್ರಿಕನ್ ರಾಷ್ಟ್ರಗಳ ಮೂಲಕ ಈ ರೋಗವು ವೇಗವಾಗಿ ಹರಡುತ್ತಿದ್ದು, ಕರಾಳ ಇತಿಹಾಸವು ಪುನರಾವರ್ತನೆಯಾಗಬಹುದೇ ಎನ್ನುವ ಆತಂಕ ಎದುರಾಗಿದೆ. ಕೋವಿಡ್ -19 ಸಾಂಕ್ರಾಮಿಕದ ಸಮಯದಲ್ಲಿ ವಿಧಿಸಲಾದ ಜಾಗತಿಕ ಲಾಕ್‌ಡೌನ್‌ಗಳು ಮತ್ತೆ ಉಂಟಾಗಬಹುದೇ ಎನ್ನುವ ಭಯವೂ ಕಾಡುತ್ತಿದೆ. ಈ ಮಧ್ಯೆ ಎಲ್ಲರೂ ಕೊಂಚ ನೆಮ್ಮದಿಯ ವಿಚಾರವೇನೆಂದರೆ ವಿಶ್ವಸಂಸ್ಥೆಯ ತಜ್ಞ ಡಾ. ಹ್ಯಾನ್ಸ್ ಕ್ಲೂ ಅವರು ಎಂ ಪಾಕ್ಸ್ ಗಂಭೀರವಾಗಿದ್ದರೂ ಕೋವಿಡ್ -19 ನಂತಹ ಕಠಿಣ ಕ್ರಮ ಬೇಕಾಗಿಲ್ಲ ಎಂದು ಹೇಳಿದ್ದಾರೆ.

ಎಂಪಾಕ್ಸ್ ನ ಹೊಸ ರೂಪಾಂತರವಾದ ಕ್ಲೇಡ್ ಐಬಿ ಬಗ್ಗೆ ಹೆಚ್ಚುತ್ತಿರುವ ಆತಂಕಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಶೇ. 10-11ರಷ್ಟು ಹೆಚ್ಚಿನ ಮರಣ ಪ್ರಮಾಣದಿಂದಾಗಿ ಈ ತಳಿಯು ಆತಂಕವನ್ನು ಹೆಚ್ಚಿಸಿದೆ. ಆದರೆ ರೂಪಾಂತರದ ತೀವ್ರತೆಯ ಹೊರತಾಗಿಯೂ ಜಾಗತಿಕ ಸಮುದಾಯವು ಅದರ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಯಲು ಉಪಕರಣಗಳು ಮತ್ತು ಜ್ಞಾನವನ್ನು ಹೊಂದಿದೆ ಎಂದು ಡಾ. ಕ್ಲೂ ಅಭಯ ನೀಡಿದರು.

ಎಂಪಾಕ್ಸ್‌ಗೆ ಸಂಬಂಧಿಸಿ ಲಾಕ್‌ಡೌನ್‌ ಬಗ್ಗೆ ಪ್ರಸ್ತುತ ಯಾವುದೇ ಯೋಜನೆಗಳಿಲ್ಲ. ಯಾಕೆಂದರೆ ಅಸ್ತಿತ್ವದಲ್ಲಿರುವ ಸಾರ್ವಜನಿಕ ಆರೋಗ್ಯ ತಂತ್ರಗಳೊಂದಿಗೆ ಪರಿಸ್ಥಿತಿಯನ್ನು ನಿಯಂತ್ರಿಸಬಹುದಾಗಿದೆ ಎಂದು ತಿಳಿಸಿದರು. 2022ರಲ್ಲಿ ಮಂಕಿ ಪಾಕ್ಸ್ ಮೊದಲ ಬಾರಿಗೆ ಲಂಡನ್‌ನಲ್ಲಿ ಕಾಣಿಸಿಕೊಂಡಿತು. ಈ ಕಾಯಿಲೆಯಿಂದ ಸುಮಾರು 450 ಮಂದಿ ಸಾವನ್ನಪ್ಪಿದ್ದರು. ಹೀಗಾಗಿ ಇದರ ಸಂಭಾವ್ಯ ಅಪಾಯದ ಆತಂಕ ಹೆಚ್ಚಾಗಿದೆ.


ವೇಗವಾಗಿ ಹರಡುವಿಕೆ ಮತ್ತು ಸೋಂಕಿತರ ಮೇಲೆ ತೀವ್ರ ಪರಿಣಾಮದಿಂದಾಗಿ ವಿಶ್ವ ಅರೋಗ್ಯ ಸಂಸ್ಥೆಯು ಮಂಕಿ ಪಾಕ್ಸ್ ಅನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದೆ. ಮಂಕಿ ಪಾಕ್ಸ್ ವೈರಸ್‌ನ ಲಕ್ಷಣಗಳು ಸಾಮಾನ್ಯವಾಗಿ 3ರಿಂದ 17 ದಿನಗಳ ಅನಂತರ ಕಾಣಿಸಿಕೊಳ್ಳುತ್ತವೆ. ಜ್ವರ, ಚರ್ಮದ ದದ್ದುಗಳು, ಊದಿಕೊಂಡ ದುಗ್ಧರಸ ಗ್ರಂಥಿಗಳು ಮತ್ತು ಆಯಾಸ ಸಾಮಾನ್ಯವಾಗಿ ರೋಗ ಲಕ್ಷಣಗಳಾಗಿರುತ್ತವೆ. ಸೋಂಕಿತ ವ್ಯಕ್ತಿಗಳೊಂದಿಗೆ ನಿಕಟ ಸಂಪರ್ಕದಲ್ಲಿರುವವರಿಗೆ ಈ ರೋಗವು ವೇಗವಾಗಿ ಹರಡುವ ಅಪಾಯವಿದೆ.

ಸಲಿಂಗಕಾಮಿ ಪುರುಷರು ಮತ್ತು ಲೈಂಗಿಕ ಕಾರ್ಯಕರ್ತರ ಮೇಲೆ ಮಂಕಿ ಪಾಕ್ಸ್ ಹೆಚ್ಚಾಗಿ ಪರಿಣಾಮ ಬೀರುತ್ತದೆ ಎಂದು ವೈಜ್ಞಾನಿಕ ಪುರಾವೆಗಳು ಸೂಚಿಸುತ್ತವೆ.

ಇದನ್ನೂ ಓದಿ: Painkillers Side Effects: ನೋವು ನಿವಾರಕಗಳನ್ನು ನುಂಗುತ್ತೀರಾ? ಹಾಗಾದರೆ ಈ ಮಾಹಿತಿ ತಿಳಿದಿರಲಿ!

ಪ್ರಕರಣಗಳು ಉಲ್ಬಣಗೊಳ್ಳುತ್ತಿದ್ದರೂ ಡಾ. ಕ್ಲೂ ಅವರ ಹೇಳಿಕೆಗಳು ಕೊಂಚ ಆತಂಕವನ್ನು ಕಡಿಮೆ ಮಾಡಿ ಆಶಾವಾದವನ್ನು ಮೂಡಿಸುತ್ತದೆ. ಎಚ್ಚರಿಕೆಯಿಂದ ಇರುವುದು, ಪರಿಣಾಮಕಾರಿ ಕ್ರಮಗಳನ್ನು ಪಾಲಿಸುವುದರಿಂದ ಜಗತ್ತು ಮತ್ತೊಂದು ಲಾಕ್‌ಡೌನ್ ಸನ್ನಿವೇಶವನ್ನು ಎದುರಿಸುವ ತೊಂದರೆಯಿಂದ ಪಾರಾಗಬಹುದು.

ತೀವ್ರತರವಾದ ಕ್ರಮಗಳನ್ನು ಆಶ್ರಯಿಸುವುದಕ್ಕಿಂತ ಹೆಚ್ಚಾಗಿ ತಡೆಗಟ್ಟುವ ಕ್ರಮಗಳು ಮತ್ತು ತಿಳುವಳಿಕೆಯುಳ್ಳ ಸಾರ್ವಜನಿಕ ಆರೋಗ್ಯ ತಂತ್ರಗಳ ಮೂಲಕ ರೋಗವನ್ನು ನಿಯಂತ್ರಿಸುವುದು ಹೇಗೆ ಎಂಬುದನ್ನು ಕೋವಿಡ್ ಸಾಂಕ್ರಾಮಿಕವು ಈಗಾಗಲೇ ನಮಗೆ ಕಲಿಸಿ ಕೊಟ್ಟಿದೆ.

Continue Reading

ಆರೋಗ್ಯ

Home Remedies: ಮಕ್ಕಳನ್ನು ಕಾಡುವ ಶೀತ-ಕೆಮ್ಮಿಗೆ ಮನೆಯಲ್ಲೇ ಇದೆ ಉಪಶಮನ

Home Remedies: ಒಮ್ಮೆ ಚಳಿ-ಮಳೆ, ಬಿಸಿಲು-ಸೆಕೆ ಎನ್ನುತ್ತಾ ಏರಿಳಿಯುತ್ತಿರುವ ವಾತಾವರಣದಿಂದ, ಏನೇನೊ ಕಾಯಿಲೆಗಳು ಅಂಟುವುದರಲ್ಲಿ ಅನುಮಾನವೇ ಇಲ್ಲ. ಹರಿಯುವ ಮೂಗು, ಬಿಗಿಯುವ ಉಸಿರಿನಂಥ ತೊಂದರೆಗಳು ಪುಟಾಣಿಗಳನ್ನು ಸಾಕಷ್ಟು ಗೋಳಾಡಿಸುತ್ತವೆ. ಆಡಲಾಗದೆ, ಅನುಭವಿಸಲೂ ಆಗದೆ ಅಳುವ ಕಂದಮ್ಮಗಳನ್ನು ಕಂಡಾಗ ಪಾಲಕರಿಗೆ ʻಅಯ್ಯೋʼ ಎನಿಸುವುದು ಸುಳ್ಳಲ್ಲ. ಇವಿಷ್ಟು ಸಾಲದೆಂಬಂತೆ ಕಾಡುವ ಕೆಮ್ಮು. ಇಂಥ ಅವಸ್ಥೆಯಲ್ಲಿ ಪುಟ್ಟ ಮಕ್ಕಳ ಆರೈಕೆಯನ್ನು ಮಾಡುವುದು ಹೇಗೆ?

VISTARANEWS.COM


on

Home Remedies For Cough And Cold
Koo

ಬೆಳೆಯದ (Home Remedies) ಪ್ರತಿರೋಧಕ ಶಕ್ತಿಯ ಕಾರಣದಿಂದ ಎಳೆ ಮಕ್ಕಳಿಗೆ ಸೋಂಕುಗಳು ಅಂಟುವುದು ಬೇಗ. ಅವುಗಳ ಶ್ವಾಸನಾಳಗಳು ಪುಟ್ಟದಾಗಿ ಇರುವುದರಿಂದ ಸ್ವಲ್ಪ ಕಫ ಇದ್ದರೂ, ಕೆಮ್ಮುತ್ತಾ ಎದೆ ಬಿಗಿದು ಉಸಿರಾಡುವುದು ಕಷ್ಟವಾಗುತ್ತದೆ. ಆಡಲಾಗದೆ, ಅನುಭವಿಸಲೂ ಆಗದೆ ಅಳುವ ಕಂದಮ್ಮಗಳನ್ನು ಕಂಡಾಗ ಪಾಲಕರಿಗೆ ʻಅಯ್ಯೋʼ ಎನಿಸುವುದು ಸುಳ್ಳಲ್ಲ. ಇಂಥ ಅವಸ್ಥೆಯಲ್ಲಿ ಪುಟ್ಟ ಮಕ್ಕಳ ಆರೈಕೆಯನ್ನು ಮಾಡುವುದು ಹೇಗೆ?
ಮಳೆಗಾಲದಲ್ಲಿ ಶೀತ-ಕೆಮ್ಮಿನ ಉಪಟಳ ಯಾರನ್ನೂ ಬಿಡುವುದಿಲ್ಲ. ಆದರೆ ಚಿಕ್ಕ ಮಕ್ಕಳನ್ನು ಕಾಡಿದರೆ, ಅವರಿಗಿಂತ ಹೆಚ್ಚಿನ ತಲೆಬಿಸಿ ಹೆತ್ತವರಿಗಾಗುತ್ತದೆ. ಒಮ್ಮೆ ಚಳಿ-ಮಳೆ, ಬಿಸಿಲು-ಸೆಕೆ ಎನ್ನುತ್ತಾ ಏರಿಳಿಯುತ್ತಿರುವ ವಾತಾವರಣದಿಂದ, ಏನೇನೊ ಕಾಯಿಲೆಗಳು ಅಂಟುವುದರಲ್ಲಿ ಅನುಮಾನವೇ ಇಲ್ಲ. ಹರಿಯುವ ಮೂಗು, ಬಿಗಿಯುವ ಉಸಿರಿನಂಥ ತೊಂದರೆಗಳು ಪುಟಾಣಿಗಳನ್ನು ಸಾಕಷ್ಟು ಗೋಳಾಡಿಸುತ್ತವೆ. ಈಗಿನ್ನೂ ಪ್ರಬುದ್ಧವಾಗದ ಪ್ರತಿರೋಧಕ ಶಕ್ತಿಯ ಕಾರಣದಿಂದ ಎಳೆ ಮಕ್ಕಳಿಗೆ ಸೋಂಕುಗಳು ಅಂಟುವುದು ಬೇಗ. ಅವುಗಳ ಶ್ವಾಸನಾಳಗಳು ಪುಟ್ಟದಾಗಿ ಇರುವುದರಿಂದ ಸ್ವಲ್ಪ ಕಫ ಇದ್ದರೂ, ಎದೆ ಬಿಗಿದು ಉಸಿರಾಡುವುದು ಕಷ್ಟವಾಗುತ್ತದೆ. ಆಡಲಾಗದೆ, ಅನುಭವಿಸಲೂ ಆಗದೆ ಅಳುವ ಕಂದಮ್ಮಗಳನ್ನು ಕಂಡಾಗ ಪಾಲಕರಿಗೆ ʻಅಯ್ಯೋʼ ಎನಿಸುವುದು ಸುಳ್ಳಲ್ಲ. ಇವಿಷ್ಟು ಸಾಲದೆಂಬಂತೆ ಕಾಡುವ ಕೆಮ್ಮು. ಇಂಥ ಅವಸ್ಥೆಯಲ್ಲಿ ಪುಟ್ಟ ಮಕ್ಕಳ ಆರೈಕೆಯನ್ನು ಮಾಡುವುದು ಹೇಗೆ?

Sick Woman at Home Lemon Water Benefits

ಕಾರಣಗಳು

ಮಳೆಗಾಲದಲ್ಲಿ ಚಿಕ್ಕ ಮಕ್ಕಳಲ್ಲಿ ಸೋಂಕುಗಳು, ನೆಗಡಿ-ಕೆಮ್ಮು ಹೆಚ್ಚುವುದಕ್ಕೆ ಹಲವು ಕಾರಣಗಳು ಇರಬಹುದು. ವಾತಾವರಣದಲ್ಲಿ ತೇವ ಹೆಚ್ಚಿದ್ದಾಗ ಕಣ್ಣಿಗೆ ಕಾಣದ ಶಿಲೀಂಧ್ರಗಳು ಬೆಳೆಯುವುದು ಬೇಗ. ಇವು ಬಿಡುಗಡೆ ಮಾಡುವ ಸೂಕ್ಷ್ಮ ಕಣಗಳು ಎಳೆಯರ ಶ್ವಾಸನಾಳವನ್ನು ಉಸಿರಾಟದ ಮೂಲಕ ಸೇರುತ್ತವೆ. ಅಲ್ಲಿ ಅಲರ್ಜಿ ಉಂಟುಮಾಡುತ್ತವೆ. ಅದರಲ್ಲೂ ಅಲರ್ಜಿಗಳಿಗೆ ಹೆಚ್ಚು ತುತ್ತಾಗುವ ಮಕ್ಕಳಿಗೆ ಮೋಡ ಮತ್ತು ಮಬ್ಬಿನ ವಾತಾವರಣವು ಇನ್ನಷ್ಟು ತೊಂದರೆಗಳನ್ನು ತರುತ್ತದೆ. ಒಂದೆರಡು ದಿನಗಳು ಮೋಡ-ಮಳೆಯ ವಾತಾವರಣ, ಮತ್ತೆರಡು ದಿನ ಬಿಸಿಲು, ಪುನಃ ಮೋಡ- ಈ ರೀತಿಯ ಹವಾಮಾನವು ಅಲರ್ಜಿ ಕಡಿಮೆಯಾಗುವುದಕ್ಕೆ ಬಿಡುವುದೇ ಇಲ್ಲ. ಜೊತೆಗೆ, ಹಲವು ರೀತಿಯ ಸೋಂಕುಗಳ ಪ್ರಸರಣವನ್ನೂ ಹೆಚ್ಚಿಸುತ್ತದೆ. ಯಾವುದೇ ಸಣ್ಣ-ದೊಡ್ಡ ಸೋಂಕು ಬಂದ ಮೇಲೆ ನೆಗಡಿ, ಕೆಮ್ಮು ಬಾಲದಂತೆ ಹಿಂದೆಯೇ ಬರುತ್ತವೆ. ಹೀಗೆ ಪ್ರತಿರೋಧಕ ಶಕ್ತಿ ಚೇತರಿಸಿಕೊಳ್ಳುವ ಮುನ್ನವೇ ಮತ್ತೆ ಸೊಂಕುಗಳು ಬರುತ್ತಿದ್ದರೆ ಮಕ್ಕಳು ಸೊರಗುವುದು ಸಹಜ. ವೈದ್ಯರು ಹೇಳಿದ ಔಷಧಿಗಳ ಜೊತೆಗೆ ಕೆಲವು ಸರಳ ಮನೆಮದ್ದುಗಳು ಸಹ ಮಕ್ಕಳ ಶೀಘ್ರ ಚೇತರಿಕೆಗೆ ಸಹಾಯ ಮಾಡುತ್ತವೆ.

ಸ್ಟೀಮರ್‌

ಶೀತ-ಕೆಮ್ಮಿನ ದಿನಗಳಲ್ಲಿ ಬಿಸಿ ಆವಿಯನ್ನು ತೆಗೆದುಕೊಳ್ಳುವುದು ಶೀಘ್ರ ಚೇತರಿಕೆಗೆ ಎಡೆ ಮಾಡುತ್ತದೆ. ಬಿಸಿ ನೀರಿನ ಟಬ್‌ನಲ್ಲಿ ಕೆಲಕಾಲ ಮಗುವಿನೊಂದಿಗೆ ಇರುವುದಕ್ಕೆ ಸಾಧ್ಯವೇ ನೋಡಿ. ಇದರಿಂದ ಹೆಚ್ಚಿನ ಪ್ರಮಾಣದ ನೀರಾವಿ ಮಗುವಿಗೆ ದೊರೆಯುತ್ತದೆ. ಮಕ್ಕಳಿಗೆ ಬಳಸಲು ಸಾಧ್ಯವಾಗುವಂಥ ಸ್ಟೀಮರ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ನಿಮಗೆ ಸೂಕ್ತ ಎನಿಸಿದ್ದನ್ನು ತಂದು ಉಪಯೋಗಿಸಿ ನೋಡಬಹುದು. ಇದರಿಂದ ಬಿಗಿದ ಶ್ವಾಸನಾಳಗಳು ಸಡಿಲವಾಗಿ, ಕಫ ಹೊರಬರಲು ಸಾಧ್ಯವಾಗುತ್ತದೆ.

ಬೆಚ್ಚಗಿನ ಪೇಯಗಳು

ಆರು ತಿಂಗಳ ನಂತರದ ಎಳೆ ಮಕ್ಕಳಿಗೆ ಆಗಾಗ ಒಂದೆರಡು ಚಮಚದಷ್ಟು ಬೆಚ್ಚಗಿನ ನೀರು ಅಥವಾ ಸೌಮ್ಯವಾದ ಜೀರಿಗೆ ಇಲ್ಲವೇ ಕೊತ್ತಂಬರಿ ನೀರನ್ನು ಕುಡಿಸಬಹುದು. ವರ್ಷದ ಮೇಲಿನ ಮಕ್ಕಳಿಗೆ ಬೆಚ್ಚಗಿನ ನೀರು ಅಥವಾ ಹಾಲಿಗೆ ಕೊಂಚ ಜೇನುತುಪ್ಪ ಹಾಕಿಯೂ ಕುಡಿಸಬಹುದು. ಇದರಿಂದ ಗಂಟಲಲ್ಲಿನ ಕಿರಿಕಿರಿಯನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ.

Nasal spray

ಮೂಗಿನ ಸ್ಪ್ರೇ

ಉಪ್ಪು ನೀರಿನ ಸ್ಪ್ರೇಗಳು ಕಟ್ಟಿದ ಮೂಗನ್ನು ಖಾಲಿ ಮಾಡಲು ಸಹಾಯ ಮಾಡಬಲ್ಲವು. ಪುಟ್ಟ ಮಕ್ಕಳಿಗೆಂದೇ ಮೀಸಲಾದ ಸ್ಪ್ರೇಗಳನ್ನು ಬಳಕೆ ಮಾಡುವುದರಿಂದ ಸಮಸ್ಯೆಗಳು ಬರಲಾರವು. ಈ ಮೂಲಕ ಉಸಿರಾಟ ಸರಾಗವಾಗಿ ಮಕ್ಕಳಿಗೆ ನಿದ್ದೆ ಮಾಡಲು ಸಾಧ್ಯವಾಗುತ್ತದೆ. ಸಾಕಷ್ಟು ವಿಶ್ರಾಂತಿ ದೇಹಕ್ಕೆ ದೊರೆಯದಿದ್ದರೆ, ಗುಣವಾಗುವುದು ನಿಧಾನವಾಗುತ್ತದೆ.

ಮಲಗಿಸುವ ಭಂಗಿ

ಉಸಿರಾಟ ಕಷ್ಟವಾಗಿ ಕೆಮ್ಮು ಕಾಡುತ್ತಿದ್ದರೆ, ಮಕ್ಕಳ ತಲೆಯನ್ನು ಕೊಂಚ ಎತ್ತರ ಮಾಡಿ ಮಲಗಿಸಿ. ಕೇವಲ ದಿಂಬನ್ನಷ್ಟೇ ಎತ್ತರಿಸಬೇಡಿ. ಬದಲಿಗೆ ಹಾಸಿಗೆಯನ್ನೇ ತಲೆಯ ಭಾಗದಲ್ಲಿ ಎತ್ತರ ಬರುವಂತೆ ಮಾಡಿ. ಇದರಿಂದ ಉಸಿರಾಟ ಸರಾಗವಾಗಿ, ಕೆಮ್ಮು ಕಡಿಮೆಯಾಗುತ್ತದೆ. ಶಾಂತವಾಗಿ ನಿದ್ದೆ ಮಾಡಲು ಮಕ್ಕಳಿಗೆ ಸಹಾಯವಾಗುತ್ತದೆ.

ಹ್ಯುಮಿಡಿಫಯರ್‌

ಮನೆಯಲ್ಲಿ ಹ್ಯುಮಿಡಿಫಯರ್‌ ಉಪಯೋಗಿಸುವುದು ಸಹ ಕೆಮ್ಮು ಕಡಿಮೆ ಮಾಡುವುದಕ್ಕೆ ಇನ್ನೊಂದು ಪರಿಣಾಮಕಾರಿ ವಿಧಾನ. ಇದರಿಂದ ಗಂಟಲಿನ ಕಿರಿಕಿರಿ ಗಣನೀಯವಾಗಿ ತಗ್ಗಿಸಬಹುದು. ಆದರೆ ವಾತಾವರಣ ಶುಷ್ಕವಾಗಿ ಇದ್ದಾಗ ಮಾತ್ರವೇ ಇದು ಹೆಚ್ಚು ಪ್ರಯೋಜನಕಾರಿ. ವಾತಾವರಣದಲ್ಲಿ ತೇವ ಹೆಚ್ಚಿದ್ದರೆ, ಈ ಉಪಕರಣದಿಂದ ಸಹಾಯ ಆಗಲಾರದು.

ಇದನ್ನೂ ಓದಿ: Sodium reduction: ಉಪ್ಪು ಸೇವನೆ ಕಡಿಮೆಯಾದರೆ ಈ ಎಲ್ಲ ಸಮಸ್ಯೆಗಳು ಕಾಡುತ್ತವೆ

ಮನೆಮದ್ದುಗಳು

  • ಕಫ ಕರಗಿಸಿ, ಕೆಮ್ಮು ಕಡಿಮೆ ಮಾಡುವಲ್ಲಿ ಹಸಿ ಶುಂಠಿಯ ರಸ ಪರಿಣಾಮಕಾರಿ. ವರ್ಷ ಮೇಲಿನ ಮಕ್ಕಳಿಗಾದರೆ ಇದನ್ನು ನೀಡಬಹುದು. ಒಂದೆರಡು ಹನಿಯಷ್ಟು ನಿಂಬೆ ರಸ, ಅಷ್ಟೇ ಪ್ರಮಾಣದ ಶುಂಠಿ ರಸವನ್ನು ನಾಲ್ಕಾರು ಹನಿ ಜೇನುತಪ್ಪದೊಂದಿಗೆ ಮಿಶ್ರ ಮಾಡಿ, ಮಗುವಿನ ನಾಲಿಗೆಗೆ ಆಗಾಗ ಸ್ವಲ್ಪವೇ ನೆಕ್ಕಿಸುವುದರಿಂದ ಕೆಮ್ಮು ನಿಯಂತ್ರಿಸಲು ಸಹಾಯವಾಗುತ್ತದೆ.
  • ಕೊಂಚ ದೊಡ್ಡ ಮಕ್ಕಳಿಗಾದರೆ, ಸೋಂಪನ್ನು ಹುರಿದು ತರಿಯಾಗಿ ಪುಡಿ ಮಾಡಿ. ಅದನ್ನು ಆಗೀಗ ಕಾಲು ಚಮಚದಷ್ಟು ಮಕ್ಕಳಿಗೆ ಅಗಿಯುವುದಕ್ಕೆ ನೀಡಿ. ಇದರಿಂದಲೂ ಕೆಮ್ಮು ನಿಯಂತ್ರಣಕ್ಕೆ ಬರಬಹುದು.
  • ಕೊಬ್ಬರಿ ಎಣ್ಣೆಯನ್ನು ಉಗುರು ಬಿಸಿ ಮಾಡಿ, ಅದರಲ್ಲಿ ಒಂದೆರಡು ಕರ್ಪೂರವನ್ನು ಕರಗಿಸಿ. ಈ ತೈಲವನ್ನು ಮಕ್ಕಳ ಎದೆ ಮತ್ತು ಬೆನ್ನಿನ ಭಾಗಕ್ಕೆ ತೆಳುವಾಗಿ ಹಚ್ಚಿ, ಲಘುವಾಗಿ ಮಸಾಜ್‌ ಮಾಡಿ. ಬಿಸಿ ನೀರಲ್ಲಿ ಅದ್ದಿ ತೆಗೆದು ಹಿಂಡಿದ ಬಟ್ಟೆಯಿಂದ, ಈ ಭಾಗಗಳಿಗೆ ಶಾಖ ಕೊಡಿ
Continue Reading

ಆರೋಗ್ಯ

Painkillers Side Effects: ನೋವು ನಿವಾರಕಗಳನ್ನು ನುಂಗುತ್ತೀರಾ? ಹಾಗಾದರೆ ಈ ಮಾಹಿತಿ ತಿಳಿದಿರಲಿ!

Painkillers Side Effects: ಯಾವುದೇ ನೋವು ನಿವಾರಕಗಳೂ ಅಡ್ಡ ಪರಿಣಾಮಗಳಿಂದ ಸಂಪೂರ್ಣ ಮುಕ್ತವಲ್ಲ. ತೀರಾ ನೋವು ಬಾಧಿಸುವಾಗ ಅಪರೂಪಕ್ಕೆ ಅವುಗಳನ್ನು ತೆಗೆದುಕೊಳ್ಳಬಹುದೇ ಹೊರತು, ಅದನ್ನೇ ಅಭ್ಯಾಸ ಮಾಡಿಕೊಳ್ಳುವುದು ಖಂಡಿತಾ ಸರಿಯಲ್ಲ. ನೋವು ನಿವಾರಕಗಳನ್ನು ಅತಿಯಾಗಿ ಸೇವಿಸುವುದರ ಅಡ್ಡ ಪರಿಣಾಮಗಳಲ್ಲಿ ತಲೆನೋವೂ ಒಂದು. ಇನ್ನಷ್ಟು ವಿವರಗಳು ಈ ಲೇಖನದಲ್ಲಿದೆ.

VISTARANEWS.COM


on

Painkillers Side Effects
Koo

ʻಯಾಕೋ ತಲೆ ನೋವುʼ ಎನ್ನುತ್ತಾ ಒಂದು ಮಾಮೂಲಿ ಮಾತ್ರೆ (Painkillers Side Effects) ನುಂಗುತ್ತೀರಿ. ಅವತ್ತಿಗೆ ಸ್ವಲ್ಪ ಕಡಿಮೆಯಾಗುತ್ತದೆ. ಮಾರನೇ ದಿನಕ್ಕೆ ಪುನಃ ತಲೆ ಸಿಡಿಯುವ ಅನುಭವ! ಮತ್ತೆ ಮಾತ್ರೆ ಗುಳುಂ; ನಾಲ್ಕಾರು ದಿನಗಳಲ್ಲಿ ಮತ್ತೆ ತಲೆನೋವು… ಮಾತ್ರೆ… ಇದೇ ಚಕ್ರ ಮುಂದುವರಿಯುತ್ತದೆ. ತಲೆ ನೋವು ಬಿಡುವುದಿಲ್ಲ, ಮಾತ್ರೆ ತಿನ್ನದೆ ನೀವೂ ಬಿಡುವುದಿಲ್ಲ, ಈ ಸರಣಿ ತುಂಡರಿಯುವುದೇ ಇಲ್ಲ. ಏನು ಮಾಡುವುದು ಇದಕ್ಕೆ? ಯಾಕೆ ಹೀಗಾಗುತ್ತದೆ? ನೋವು ಕಡಿಮೆ ಮಾಡಲೆಂದು ತಿನ್ನುವ ಮಾತ್ರೆಯೇ ನೋವಿನ ಮೂಲವಾಗಬಹುದೇ? ಹೌದೆನ್ನುತ್ತಾರೆ ಆರೋಗ್ಯ ತಜ್ಞರು. ನೋವು ನಿವಾರಕಗಳನ್ನು ಅತಿಯಾಗಿ ಸೇವಿಸುವುದರ ಅಡ್ಡ ಪರಿಣಾಮಗಳಲ್ಲಿ ತಲೆನೋವೂ ಒಂದು. ಯಾವುದೇ ನೋವು ನಿವಾರಕಗಳೂ ಅಡ್ಡ ಪರಿಣಾಮಗಳಿಂದ ಸಂಪೂರ್ಣ ಮುಕ್ತವಲ್ಲ. ತೀರಾ ನೋವು ಬಾಧಿಸುವಾಗ ಅಪರೂಪಕ್ಕೆ ಅವುಗಳನ್ನು ತೆಗೆದುಕೊಳ್ಳಬಹುದೇ ಹೊರತು, ಅದನ್ನೇ ಅಭ್ಯಾಸ ಮಾಡಿಕೊಳ್ಳುವುದು ಖಂಡಿತಾ ಸರಿಯಲ್ಲ. ಒಂದಿಲ್ಲೊಂದು ರೀತಿಯಲ್ಲಿ ಅದು ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರಬಹುದು. ತಿನ್ನುವ ನೋವು ನಿವಾರಕಗಳ ಪ್ರಮಾಣ ಹೆಚ್ಚಾದಾಗ, ಅದರ ಅಡ್ಡ ಪರಿಣಾಮವಾಗಿಯೇ ತಲೆ ನೋವು ಬರುವ ಸಾಧ್ಯತೆಗಳಿವೆ. ಇದನ್ನು ʻಮದ್ದು ಮಿತಿ ಮೀರಿದಾಗಿನ ತಲೆನೋವುʼ medication overuse headache (MOH) ಎಂದು ಕರೆಯಲಾಗುತ್ತದೆ. ತಲೆನೋವಿನಿಂದ ಮುಕ್ತಿ ಪಡೆಯುವುದಕ್ಕಾಗಿ ನುಂಗಿದ ಮಾತ್ರೆಯೇ ತಲೆಶೂಲೆಯನ್ನು ಹೆಚ್ಚಿಸಿ, ಅದಕ್ಕೂ ಮಾತ್ರೆ ನುಂಗಿ… ಪರಿಸ್ಥಿತಿ ವಿಕೋಪಕ್ಕೇ ತಿರುಗಬಹುದು. ಇದರಿಂದ ತಲೆನೋವು ಬರುವ ಪ್ರಮಾಣ ಹೆಚ್ಚುತ್ತದೆ, ನೋವಿನ ತೀವ್ರತೆಯೂ ಅಧಿಕವಾಗುತ್ತದೆ.

Painkillers

ಇದರ ಬಗ್ಗೆ ಇನ್ನಷ್ಟು ವಿವರಗಳನ್ನು ಹೇಳುವುದಾದರೆ

ವಾರದಲ್ಲಿ ಎರಡು-ಮೂರು ಬಾರಿಗೂ ಹೆಚ್ಚು ಸಾರಿ ನೋವು ನಿವಾರಕಗಳನ್ನು ನುಂಗುತ್ತಿದ್ದೀರಿ ಎಂದಾದರೆ, ನೋವು ನಿವಾರಕಗಳ ತಲೆಶೂಲೆಯನ್ನು ಅಂಟಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ಅದರಲ್ಲೂ ಆಸ್ಪಿರಿನ್‌, ಐಬೂಪ್ರೊಫೆನ್‌, ಅಸೆಟೊಮೆನೊಫೆನ್‌ ಮುಂತಾದ ವೈದ್ಯರ ಚೀಟಿ ಇಲ್ಲದೆಯೂ ದೊರೆಯುವ ಮಾತ್ರೆಗಳು ಈ ತೊಂದರೆಯನ್ನು ಹೆಚ್ಚಿಸಬಲ್ಲವು. ಹಾಗಾಗಿ ಇಂಥ ಮಾತ್ರೆಗಳನ್ನು ತೀರಾ ಅಗತ್ಯ ಇರುವಾಗ ಮಾತ್ರವೇ ಉಪಯೋಗಿಸಿ, ಅತಿ ಮಾಡಿದರೆ ಮದ್ದೇ ರೋಗವಾಗಬಲ್ಲದು! ಈಗಾಗಲೇ ತೀವ್ರ ಮೈಗ್ರೇನ್‌ನಂಥ ತೊಂದರೆಗಳಿದ್ದರೆ ಈ ರೀತಿಯ ಓವರ್‌ ದ ಕೌಂಟರ್‌ ಮಾತ್ರೆಗಳಿಂದ ಹೆಚ್ಚಿನ ಪ್ರಯೋಜನ ಆಗುವುದಿಲ್ಲ. ಅದಕ್ಕೆ ವೈದ್ಯರಲ್ಲಿಯೇ ಮಾತಾಡಬೇಕು. ಕೆಲವರಿಗೆ ಇಂಥ ಮಾತ್ರೆಗಳನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಕಡಿಮೆಯಿದ್ದರೆ, ಅಡ್ಡ ಪರಿಣಾಮಗಳು ಬೇಗನೇ ಮತ್ತು ಹೆಚ್ಚು ತೀವ್ರವಾಗಿ ಕಾಣಬಹುದು. ಹಾಗಾಗಿ ನೋವಿಗೆ ಸ್ವಯಂ ವೈದ್ಯ ಮಾಡುವ ಮುನ್ನ ಎಚ್ಚರಿಕೆ ತೆಗೆದುಕೊಳ್ಳುವುದು ಸೂಕ್ತ.

Pain killers

ಏನಾಗುತ್ತದೆ?

ಹೀಗೆ ನೋವು ನಿವಾರಕಗಳಿಂದ ಬರುವ ತಲೆ ನೋವುಗಳಿಂದ ಏನಾಗುತ್ತದೆ ಎನ್ನುವುದನ್ನೂ ಅರ್ಥ ಮಾಡಿಕೊಳ್ಳೋಣ. ತಲೆ ನೋವು ಪುನರಾವರ್ತನೆಯಾಗುತ್ತದೆ ಮತ್ತು ತೀವ್ರತೆಯೂ ಹೆಚ್ಚುತ್ತದೆ. ಈ ದಿನದಿನದ ನೋವಿನಿಂದಾಗಿ ಬದುಕಿನ ಗುಣಮಟ್ಟ ಕುಸಿಯುತ್ತದೆ. ಸದಾ ಕಾಲ ನೋವಿನ ಚಿಂತೆಯೇ ಬಾಧಿಸುವಂತಾಗಿ, ನನಗೇನೋ ಆಗಿದೆ ಎಂದು ಹೆದರುವಂತಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ನೋವು ನಿವಾರಕಗಳು ಇಲ್ಲದಿದ್ದರೆ ನಡೆಯುವುದೇ ಇಲ್ಲ ಎನ್ನುವ ಮನಸ್ಥಿತಿ ತಲೆದೋರುತ್ತದೆ.

ಇದನ್ನೂ ಓದಿ: Myths About Asthma: ಇವು ಅಸ್ತಮಾ ಕುರಿತು ಇರುವ 9 ಸುಳ್ಳುಗಳು!

ಏನು ಮಾಡಬೇಕು?

ಇದರಿಂದ ಬಿಡುಗಡೆ ಪಡೆಯುವುದು ಮುಖ್ಯ. ಮೊದಲಿಗೆ, ಶರೀರದಲ್ಲಿ ನೋವು ಯಾಕಾಗಿ ಬರುತ್ತಿದೆ ಎಂಬುದನ್ನು ವೈದ್ಯರಲ್ಲಿ ಹೋಗಿಯೇ ತಿಳಿಯಬೇಕು. ಆ ಕಾರಣ ತಿಳಿದ ಮೇಲೆಯೇ ಔಷಧಿ ಮಾಡುವುದಕ್ಕೆ ಸಾಧ್ಯವಾಗುತ್ತದೆ. ತಲೆನೋವು ಪದೇಪದೆ ಬರುತ್ತಿದ್ದರೆ ನರರೋಗ ತಜ್ಞರನ್ನು ಕಾಣುವುದು ಅಗತ್ಯವೇ ಹೊರತು ಅಂಗಡಿಯಲ್ಲಿ ದೊರೆಯುವ ಮಾತ್ರೆ ನುಂಗುವುದಲ್ಲ. ನೋವು ನಿವಾರಣೆಗೆ ಪರ್ಯಾಯ ಮಾರ್ಗಗಳು ಇವೆಯೇ ಎಂಬುದನ್ನು ಶೋಧಿಸಿ. ಉದಾ, ಕೆಲವು ಅಕ್ಯುಪ್ರೆಶರ್‌ ಅಥವಾ ಮೆಡಿಟೇಶನ್‌ ಥೆರಪಿಗಳು ಕೆಲವರ ಪಾಲಿಗೆ ವರವಾಗಿ ಪರಿಣಮಿಸಬಲ್ಲವು. ಜೀವನಶೈಲಿಯಲ್ಲಿನ ಕೆಲವು ಬದಲಾವಣೆಗಳು, ನಿದ್ದೆ, ವ್ಯಾಯಾಮಗಳನ್ನು ಸರಿಪಡಿಸಿಕೊಳ್ಳುವುದು ಸಹ ಎಷ್ಟೋ ನೋವಿಗೆ ಮದ್ದಾಗಬಲ್ಲದು.

Continue Reading

ಆರೋಗ್ಯ

Health Tips: ಮೊಸರು ಉಪ್ಪಿನೊಂದಿಗೋ, ಸಕ್ಕರೆಯೊಂದಿಗೋ? ಯಾವ ಆಯ್ಕೆ ಉತ್ತಮ?

ಮೊಸರಿನ ಸೇವನೆಗೆ ಕೆಲವರು ಸಕ್ಕರೆಯೊಂದಿಗೆ ಇಷ್ಟ ಪಟ್ಟರೆ, ಇನ್ನು ಕೆಲವರು ಉಪ್ಪಿನೊಂದಿಗೆ ಇಷ್ಟ ಪಡುತ್ತಾರೆ. ಉಪ್ಪು ಮತ್ತು ಸಕ್ಕರೆ ಮೊಸರಿನ ರುಚಿಯನ್ನು ಹೆಚ್ಚಿಸುತ್ತದೆ ಆದರೂ ಇದರ ನಡುವೆ ಸಾಕಷ್ಟು ವ್ಯತ್ಯಾಸವನ್ನೂ ಉಂಟು ಮಾಡುತ್ತದೆ. ರುಚಿ, ಪೌಷ್ಟಿಕಾಂಶದ ಮೌಲ್ಯ, ಆರೋಗ್ಯ (Health Tips) ಪರಿಣಾಮಗಳ ಬಗ್ಗೆ ತಿಳಿದು ನೀವು ಯಾವುದನ್ನೂ ಆಯ್ಕೆ ಮಾಡಬಹುದು ನೋಡಿ. ಇಲ್ಲಿದೆ ಉಪಯುಕ್ತ ಮಾಹಿತಿ.

VISTARANEWS.COM


on

By

Health Tips
Koo

ಆರೋಗ್ಯಕರ (Health Tips) ಗುಣಕ್ಕಾಗಿ ಹೆಸರುವಾಸಿಯಾಗಿರುವ ಮೊಸರು (curds) ಬಹುತೇಕ ಎಲ್ಲರಿಗೂ ಪ್ರಿಯವಾಗುತ್ತದೆ. ಪ್ರಪಂಚದಾದ್ಯಂತ ಅನೇಕ ಪಾಕಪದ್ಧತಿಗಳಲ್ಲಿ ಮೊಸರನ್ನು ಬಳಸಲಾಗುತ್ತದೆ. ಹಾಲನ್ನು ಹುದುಗಿಸಿ ಮಾಡುವ ಮೊಸರು ಅನೇಕ ಪೌಷ್ಟಿಕಾಂಶಗಳನ್ನೂ ಒಳಗೊಂಡಿದೆ. ಕಟುವಾದ ರುಚಿ, ಕೆನೆ ವಿನ್ಯಾಸದಿಂದಾಗಿ ವಿವಿಧ ಭಕ್ಷ್ಯಗಳು ಮತ್ತು ಆಹಾರದ ಆದ್ಯತೆಗಳಿಗೆ ಇದು ಜನಪ್ರಿಯ ಆಯ್ಕೆಯಾಗಿದೆ.

ಮೊಸರಿನ ಸೇವನೆಗೆ ಕೆಲವರು ಸಕ್ಕರೆಯೊಂದಿಗೆ (suger) ಇಷ್ಟ ಪಟ್ಟರೆ, ಇನ್ನು ಕೆಲವರು ಉಪ್ಪಿನೊಂದಿಗೆ (salt) ಇಷ್ಟ ಪಡುತ್ತಾರೆ. ಉಪ್ಪು ಮತ್ತು ಸಕ್ಕರೆ ಮೊಸರಿನ ರುಚಿಯನ್ನು ಹೆಚ್ಚಿಸುತ್ತದೆ ಆದರೂ ಇದರ ನಡುವೆ ಸಾಕಷ್ಟು ವ್ಯತ್ಯಾಸವನ್ನೂ ಉಂಟು ಮಾಡುತ್ತದೆ. ರುಚಿ, ಪೌಷ್ಟಿಕಾಂಶದ ಮೌಲ್ಯ, ಆರೋಗ್ಯ ಪರಿಣಾಮಗಳ ಬಗ್ಗೆ ತಿಳಿದು ನೀವು ಯಾವುದನ್ನೂ ಆಯ್ಕೆ ಮಾಡಬಹುದು ನೋಡಿ.


ಸುವಾಸನೆ ಮತ್ತು ರುಚಿ

ಉಪ್ಪಿನೊಂದಿಗೆ ಮೊಸರು ಮತ್ತು ಸಕ್ಕರೆಯೊಂದಿಗೆ ಮೊಸರು ನಡುವಿನ ಅತ್ಯಂತ ತಕ್ಷಣದ ವ್ಯತ್ಯಾಸವೆಂದರೆ ಅವುಗಳ ರುಚಿ. ಉಪ್ಪಿನೊಂದಿಗೆ ಮೊಸರು ಖಾರ, ಕಟುವಾದ ಪರಿಮಳವನ್ನು ನೀಡಿದರೂ ಅದು ರಿಫ್ರೆಶ್ ಮತ್ತು ತೃಪ್ತಿಕರವಾಗಿರುತ್ತದೆ. ಉಪ್ಪಿನ ಸೇರ್ಪಡೆಯು ಮೊಸರಿನ ನೈಸರ್ಗಿಕ ಟ್ಯಾಂಜಿನೆಸ್ ಅನ್ನು ಹೆಚ್ಚಿಸುತ್ತದೆ. ಇದು ಮಸಾಲೆಯುಕ್ತ ಭಕ್ಷ್ಯ, ತಿಂಡಿ ಮತ್ತು ಊಟಗಳಿಗೆ ಪರಿಪೂರ್ಣವಾಗಿರುತ್ತದೆ. ಉಪ್ಪುಸಹಿತ ಮೊಸರನ್ನು ಹೆಚ್ಚಾಗಿ ರಾಯಿತದಂತಹ ಖಾರದ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಅಲ್ಲಿ ಅದರ ಸುವಾಸನೆಯು ಮಸಾಲೆ ಮತ್ತು ಇತರ ಪದಾರ್ಥಗಳಿಗೆ ಪೂರಕವಾಗಿರುತ್ತದೆ.

ಸಕ್ಕರೆಯೊಂದಿಗೆ ಮೊಸರನ್ನು ಸಿಹಿ ಸತ್ಕಾರವಾಗಿ ಪರಿವರ್ತಿಸುತ್ತದೆ. ಸಕ್ಕರೆಯ ಮಾಧುರ್ಯವು ಮೊಸರಿನ ಟ್ಯಾಂಜಿನೆಸ್ ಅನ್ನು ಸಮತೋಲನಗೊಳಿಸುತ್ತದೆ. ಇದು ಸಿಹಿತಿಂಡಿ ತರಹದ ಪರಿಮಳವನ್ನು ಸೃಷ್ಟಿಸುತ್ತದೆ. ಆರೋಗ್ಯಕರ ಮತ್ತು ತೃಪ್ತಿಕರವಾದ ಸಿಹಿಭಕ್ಷ್ಯವನ್ನು ರಚಿಸಲು ಇದನ್ನು ಬಳಸಬಹುದು. ಹಣ್ಣು, ಬೀಜ ಅಥವಾ ಜೇನುತುಪ್ಪ ಬೆರೆಸಿ ಇದು ಇನ್ನೂ ರುಚಿಯನ್ನು ಹೆಚ್ಚಿಸುತ್ತದೆ. ಸಕ್ಕರೆ ಅಂಶವು ವ್ಯತಿರಿಕ್ತವಾದ ರುಚಿಯನ್ನು ನೀಡುವುದರಿಂದ ಇದು ಊಟದ ಅನಂತರ ಬಳಸಬಹುದಾಗಿದೆ.

ಪೌಷ್ಟಿಕಾಂಶ

ಪೌಷ್ಠಿಕಾಂಶದ ವಿಷಯದಲ್ಲಿ ಉಪ್ಪಿನೊಂದಿಗೆ ಮೊಸರು ಮತ್ತು ಸಕ್ಕರೆಯೊಂದಿಗೆ ಮೊಸರು ವಿಭಿನ್ನ ಪರಿಣಾಮಗಳನ್ನು ಹೊಂದಿದೆ. ಮೊಸರು ಸ್ವತಃ ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಪ್ರೋಬಯಾಟಿಕ್‌ಗಳ ಸಮೃದ್ಧ ಮೂಲವಾಗಿದೆ. ಇದು ಜೀರ್ಣಕಾರಿ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಆದರೆ ಹೆಚ್ಚುವರಿ ಪದಾರ್ಥಗಳು ಮೊಸರಿನ ಪೌಷ್ಟಿಕಾಂಶದ ವಿಷಯವನ್ನು ಬದಲಾಯಿಸಬಹುದು.

ಉಪ್ಪಿನೊಂದಿಗೆ ಮೊಸರು ಪ್ರಾಥಮಿಕವಾಗಿ ಆಹಾರಕ್ಕೆ ಸೋಡಿಯಂ ಅನ್ನು ಸೇರಿಸುತ್ತದೆ. ಸೋಡಿಯಂ ದ್ರವ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಮತ್ತು ನರ ಮತ್ತು ಸ್ನಾಯುವಿನ ಕಾರ್ಯವನ್ನು ಬೆಂಬಲಿಸುವ ಅತ್ಯಗತ್ಯ ಖನಿಜವಾಗಿದ್ದರೂ ಅತಿಯಾದ ಸೇವನೆಯು ಅಧಿಕ ರಕ್ತದೊತ್ತಡ ಮತ್ತು ದ್ರವದ ಧಾರಣದಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಸಂಭಾವ್ಯ ಅಪಾಯಗಳನ್ನು ತಪ್ಪಿಸಲು ಉಪ್ಪನ್ನು ಮಿತವಾಗಿ ಬಳಸುವುದು ಮುಖ್ಯ.

ಸಕ್ಕರೆಯೊಂದಿಗೆ ಮೊಸರು ಭಕ್ಷ್ಯದ ಕ್ಯಾಲೊರಿ ಅಂಶವನ್ನು ಹೆಚ್ಚಿಸುತ್ತದೆ. ಕಾರ್ಬೋಹೈಡ್ರೇಟ್‌ಗಳನ್ನು ಮೀರಿ ಯಾವುದೇ ಗಮನಾರ್ಹ ಪೋಷಕಾಂಶಗಳನ್ನು ನೀಡದೆ ಸಕ್ಕರೆ ಹೆಚ್ಚುವರಿ ಕ್ಯಾಲೊರಿಗಳನ್ನು ಸೇರಿಸುತ್ತದೆ. ಅಧಿಕ ಸಕ್ಕರೆಯ ಸೇವನೆಯು ತೂಕ ಹೆಚ್ಚಾಗುವುದು, ಮಧುಮೇಹ ಮತ್ತು ಹಲ್ಲಿನ ಕ್ಷಯ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳೊಂದಿಗೆ ಸಂಬಂಧಿಸಿದೆ. ಆದ್ದರಿಂದ, ಸಕ್ಕರೆಯೊಂದಿಗೆ ಮೊಸರು ಒಂದು ಸಂತೋಷಕರ ಸತ್ಕಾರವಾಗಿದ್ದರೂ ಈ ಪ್ರತಿಕೂಲ ಪರಿಣಾಮಗಳನ್ನು ತಪ್ಪಿಸಲು ಅದನ್ನು ಮಿತವಾಗಿ ಸೇವಿಸಬೇಕು.

Health Tips
Health Tips


ಆರೋಗ್ಯದ ಮೇಲೆ ಪರಿಣಾಮ

ಸಕ್ಕರೆಯೊಂದಿಗೆ ಮೊಸರು ಮತ್ತು ಉಪ್ಪಿನೊಂದಿಗೆ ಮೊಸರು ಸೇವನೆಯ ಆರೋಗ್ಯ ಪರಿಣಾಮಗಳು ಆರೋಗ್ಯ ಪರಿಸ್ಥಿತಿಗಳು ಮತ್ತು ಆಹಾರದ ಅಗತ್ಯಗಳನ್ನು ಅವಲಂಬಿಸಿ ಬದಲಾಗಬಹುದು.

ಅಧಿಕ ರಕ್ತದೊತ್ತಡ ಅಥವಾ ಹೃದ್ರೋಗವನ್ನು ನಿರ್ವಹಿಸುವ ವ್ಯಕ್ತಿಗಳಿಗೆ ಉಪ್ಪಿನೊಂದಿಗೆ ಮೊಸರು ಅತ್ಯುತ್ತಮ ಆಯ್ಕೆಯಾಗಿರುವುದಿಲ್ಲ. ಅಧಿಕ ಸೋಡಿಯಂ ಸೇವನೆಯು ರಕ್ತದೊತ್ತಡ ಹೆಚ್ಚಿಸುತ್ತದೆ. ಹೀಗಾಗಿ ಇಂತವರು ಕಡಿಮೆ ಸೋಡಿಯಂ ಪರ್ಯಾಯಗಳನ್ನು ಆರಿಸಿಕೊಳ್ಳುವುದು ಅಥವಾ ಉಪ್ಪು ಸೇರಿಸದೆಯೇ ಮೊಸರನ್ನು ಆನಂದಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ.

ಸಕ್ಕರೆಯೊಂದಿಗೆ ಮೊಸರು ತೂಕ ಅಥವಾ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬೇಕಾದವರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಅತಿಯಾದ ಸಕ್ಕರೆ ಸೇವನೆಯು ತೂಕ ಹೆಚ್ಚಾಗಲು ಕಾರಣವಾಗಬಹುದು ಮತ್ತು ಇನ್ಸುಲಿನ್ ಪ್ರತಿರೋಧ ಮತ್ತು ಟೈಪ್ 2 ಮಧುಮೇಹದ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಸಮತೋಲಿತ ಆಹಾರವನ್ನು ಕಾಪಾಡಿಕೊಳ್ಳಲು ಬಯಸುವವರಿಗೆ ಸಕ್ಕರೆಯ ಸೇರ್ಪಡೆಗಳನ್ನು ಮಿತಿಗೊಳಿಸಲು ಸಲಹೆ ನೀಡಲಾಗುತ್ತದೆ ಮತ್ತು ಬದಲಿಗೆ ನೈಸರ್ಗಿಕ ಸಿಹಿಕಾರಕಗಳು ಅಥವಾ ತಾಜಾ ಹಣ್ಣುಗಳನ್ನು ಸೇವಿಸುವುದು ಸೂಕ್ತ.


ಅಡುಗೆ ಮನೆಯಲ್ಲಿ ಉಪಯೋಗ

ಉಪ್ಪಿನೊಂದಿಗೆ ಮೊಸರು ಮತ್ತು ಸಕ್ಕರೆಯೊಂದಿಗೆ ಮೊಸರು ಎರಡೂ ವಿಭಿನ್ನ ರುಚಿಯನ್ನು ಹೊಂದಿರುತ್ತದೆ. ಉಪ್ಪಿನೊಂದಿಗೆ ಮೊಸರನ್ನು ಖಾರದ ಭಕ್ಷ್ಯಗಳಿಗೆ ಬಳಸಬಹುದು. ಬಿರಿಯಾನಿ, ಮೇಲೋಗರ ಮತ್ತು ಬೇಯಿಸಿದ ಮಾಂಸಗಳೊಂದಿಗೆ ಮೊಸರು-ಆಧಾರಿತ ಭಕ್ಷ್ಯವಾದ ರಾಯಿತವನ್ನು ಬಳಸಬಹುದು.

ಸಕ್ಕರೆಯೊಂದಿಗೆ ಮೊಸರನ್ನು ಸಿಹಿತಿಂಡಿಗಳ ಜೊತೆ ಬಳಸಬಹುದು. ಸರಳವಾದ ಸಿಹಿತಿಂಡಿಯಾಗಿ ಬಡಿಸಬಹುದು. ಸ್ಮೂಥಿ, ಸಿಹಿ ಲಸ್ಸಿಯಾಗಿ ಬಳಸಬಹುದು.

ಇದನ್ನೂ ಓದಿ: Oral health: ಹಲ್ಲುಗಳನ್ನು ಬೇಕಾಬಿಟ್ಟಿಯಾಗಿ ಉಜ್ಜಬೇಡಿ! ಬ್ರಷ್‌ ಮಾಡುವಾಗ ಈ ಸಂಗತಿ ಮರೆಯಬೇಡಿ!

ಸಂಸ್ಕೃತಿ, ಪ್ರಾದೇಶಿಕ ಆದ್ಯತೆಗಳು

ಉಪ್ಪಿನೊಂದಿಗೆ ಮೊಸರು ಮತ್ತು ಸಕ್ಕರೆಯೊಂದಿಗೆ ಮೊಸರು ನಡುವಿನ ಆಯ್ಕೆಯಲ್ಲಿ ಸಾಂಸ್ಕೃತಿಕ ಮತ್ತು ಪ್ರಾದೇಶಿಕ ಆದ್ಯತೆಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಭಾರತದ ಅನೇಕ ಭಾಗಗಳಲ್ಲಿ ಉಪ್ಪುಸಹಿತ ಮೊಸರು ದೈನಂದಿನ ಊಟದಲ್ಲಿ ಪ್ರಧಾನವಾಗಿದೆ. ಸಕ್ಕರೆಯೊಂದಿಗೆ ಮೊಸರನ್ನು ಸಾಮಾನ್ಯವಾಗಿ ವಿವಿಧ ಸಂಸ್ಕೃತಿಗಳಲ್ಲಿ ಸತ್ಕಾರಕ್ಕಾಗಿ ಬಳಸಲಾಗುತ್ತದೆ. ಕೆಲವು ಪ್ರದೇಶಗಳಲ್ಲಿ ಊಟವನ್ನು ಕೊನೆಗೊಳಿಸಲು ಅಥವಾ ವಿಶೇಷ ಸಂದರ್ಭಗಳನ್ನು ಆಚರಿಸಲು ಇದು ಸಾಂಪ್ರದಾಯಿಕ ಭಾಗವಾಗಿದೆ.

Continue Reading
Advertisement
Viral Video
Latest3 mins ago

Viral Video: ಸೈಕಲ್‌ ಮೇಲೆ ಶಾಲೆಗೆ ಹೋಗುತ್ತಿದ್ದ ಮಕ್ಕಳಿಬ್ಬರಿಗೆ ವಿದ್ಯುತ್‌ ಶಾಕ್‌; ಕ್ಯಾಮೆರಾದಲ್ಲಿ ಸೆರೆಯಾಯ್ತು ಘೋರ ದೃಶ್ಯ

Viral Video
ಸಿನಿಮಾ13 mins ago

Viral Video: ‘ಶೀಲಾ ಕಿ ಜವಾನಿ’ ಹಾಡಿಗೆ ಸಖತ್ ಆಗಿ ಸೊಂಟ ಬಳುಕಿಸಿದ ಬೆಡಗಿ! ವಿಡಿಯೊ ನೋಡಿ

Kannada New Movie
ಬೆಂಗಳೂರು17 mins ago

Kannada New Movie: ವಿನೋದ್ ಪ್ರಭಾಕರ್ ಅಭಿನಯದ ʼಬಲರಾಮನ ದಿನಗಳುʼ ಚಿತ್ರ ತಂಡದಿಂದ ಬಿಗ್ ಅನೌನ್ಸ್‌ಮೆಂಟ್!

HD Kumaraswamy
ಕರ್ನಾಟಕ20 mins ago

HD Kumaraswamy: ಕಪ್ಪುಚುಕ್ಕೆ ಇಲ್ಲವೆನ್ನುವ ಸಿದ್ದರಾಮಯ್ಯ ವೈಟ್ನರ್ ಉಜ್ಜಿ ʼಕಪ್ಪುಚುಕ್ಕೆʼ ತೆಗೆದಿದ್ದೇಕೆ?; ಕುಮಾರಸ್ವಾಮಿ ಪ್ರಶ್ನೆ

MonkeyPox
ಆರೋಗ್ಯ35 mins ago

MonkeyPox: ತೀವ್ರಗೊಳ್ಳುತ್ತಿದೆ ಮಂಕಿ ಪಾಕ್ಸ್; ಮತ್ತೊಮ್ಮೆ ಲಾಕ್‌ಡೌನ್ ಘೋಷಣೆ?

Monsoon Fashion
ಫ್ಯಾಷನ್37 mins ago

Monsoon Fashion: ಟೀನೇಜ್‌ ಹುಡುಗಿಯರ ಮಾನ್ಸೂನ್‌ ಸ್ಟೈಲಿಂಗ್‌‌‌ಗೆ ಸಾಥ್‌ ನೀಡುತ್ತಿರುವ 3 ಫ್ಯಾಷನ್‌ ವೇರ್ಸ್

Home Remedies For Cough And Cold
ಆರೋಗ್ಯ45 mins ago

Home Remedies: ಮಕ್ಕಳನ್ನು ಕಾಡುವ ಶೀತ-ಕೆಮ್ಮಿಗೆ ಮನೆಯಲ್ಲೇ ಇದೆ ಉಪಶಮನ

kolkata Doctor murder case
ದೇಶ59 mins ago

Kolkata Doctor Murder Case: ಟ್ರೈನಿ ವೈದ್ಯೆ ಕೊಲೆ ಪ್ರಕರಣ- ಪ್ರಧಾನಿ ಮೋದಿಗೆ ದಿಢೀರ್‌ ಪತ್ರ ಬರೆದ ಮಮತಾ ಬ್ಯಾನರ್ಜಿ

rishab shetty
ಸಿನಿಮಾ1 hour ago

Rishab Shetty : ಕಂಬಳ ಬಳಿಕ ಕಾಂತಾರ- 2ನಲ್ಲಿ ಕಳರಿ ಪಯಟ್ಟು ಪ್ರದರ್ಶನಕ್ಕೆ ಸಜ್ಜಾದ ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ

Viral Video
Latest1 hour ago

Viral Video: ಶವಾಗಾರದಲ್ಲಿ ಶವಗಳ ಪಕ್ಕದಲ್ಲೇ ಲೈಂಗಿಕ ಕ್ರಿಯೆ! ಸಂಚಲನ ಮೂಡಿಸಿದೆ ಈ ವಿಡಿಯೊ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌