Mango Diet: ತೂಕ ಇಳಿಸುವ ಮಂದಿಯೂ ಚಿಂತೆಯಿಲ್ಲದೆ ಮಾವಿನಹಣ್ಣು ತಿನ್ನಿ: ಇಲ್ಲಿವೆ ಟಿಪ್ಸ್! - Vistara News

ಆರೋಗ್ಯ

Mango Diet: ತೂಕ ಇಳಿಸುವ ಮಂದಿಯೂ ಚಿಂತೆಯಿಲ್ಲದೆ ಮಾವಿನಹಣ್ಣು ತಿನ್ನಿ: ಇಲ್ಲಿವೆ ಟಿಪ್ಸ್!

ಯಾವುದೇ ತೂಕ ಏರಿಕೆಯ ಭಯವೂ ಇಲ್ಲದೆ ನಾವು ಮಾವು ತಿನ್ನಬಹುದು ಎಂಬುದು ಗೊತ್ತೇ? ಹಾಗಾದರೆ, ಈ ಬೇಸಗೆಯಲ್ಲಿ ಮಾವು ತಿನ್ನುವಾಗ ಈ ಸರಳ ಸೂತ್ರಗಳನ್ನು ಅನುಸರಿಸಿ.

VISTARANEWS.COM


on

Mango Diet
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೇಸಗೆ ಬಂತೆಂದರೆ ಎಲ್ಲರ ಹರುಷಕ್ಕೆ ಒಂದು ಕಾರಣ ಹಣ್ಣುಗಳ ರಾಜನೆಂದೇ ಖ್ಯಾತಿವೆತ್ತ ಮಾವಿನಹಣ್ಣು. ಬೇಸಗೆಯಲ್ಲಿ ಮರದ ತುಂಬಾ, ಮಾರುಕಟ್ಟೆ ತುಂಬಾ ಮಾವಿನಹಣ್ಣನ್ನು ನೋಡಿ ಬಾಯಿ ಚಪ್ಪರಿಸಿಕೊಂಡು ಬೇಸಗೆಯಿಡೀ ತಿಂದು ಬೇಸಗೆಯನ್ನು ಬೈಯದೆ ನೆಮ್ಮದಿಯಾಗಿರುತ್ತೇವೆ. ಮನೆಯಲ್ಲಿ ಬುಟ್ಟಿ ತುಂಬಾ ಮಾವಿನಹಣ್ಣು ತುಂಬಿಟ್ಟು ನಾನಾ ಬಗೆಯ ರೆಸಿಪಿಗಳನ್ನು ಟ್ರೈ ಮಾಡುತ್ತೇವೆ. ಮ್ಯಾಂಗೋ ಶೇಕ್‌ ಮಾಡಿ ಹೀರುತ್ತೇವೆ. ಮಾವಿನಹಣ್ಣಿನ ಐಸ್‌ಕ್ರೀಂ ಸವಿಯುತ್ತೇವೆ. ಆದರೆ, ಇವೆಲ್ಲವನ್ನೂ ಮಾಡುವಾಗ ಒಂದು ಭಯ ಮಾತ್ರ ಇದ್ದೇ ಇರುತ್ತದೆ. ಅದೇನೆಂದರೆ ತೂಕ ಏರಿಕೆ!

ಹೌದು. ನಾವು ಯಾವಾಗಲೂ ಮಾವಿನಹಣ್ಣು ತೂಕ ಇಳಿಸುವ ಮಂದಿಗೆ ಯೋಗ್ಯ ಹಣ್ಣಲ್ಲ ಎಂಬುದನ್ನೇ ಸಾರ್ವಕಾಲಿಕ ಸತ್ಯ ಅಂದುಕೊಂಡಿದ್ದೇವೆ. ಹೀಗಾಗಿ ಮಾವಿನಹಣ್ಣು ತಿಂದರೆ ತೂಕ ಏರುವುದು ಗ್ಯಾರೆಂಟಿ ಎಂದು ಅನೇಕರು ಮಾವಿನಹಣ್ಣಿನ ಸುದ್ದಿಗೂ ಹೋಗಲಾರರು. ಆದರೆ ಯಾವುದೇ ತೂಕ ಏರಿಕೆಯ ಭಯವೂ ಇಲ್ಲದೆ ನಾವು ಮಾವು ತಿನ್ನಬಹುದು ಎಂಬುದು ಗೊತ್ತೇ? ಹಾಗಾದರೆ, ಈ ಬೇಸಗೆಯಲ್ಲಿ ಮಾವು ತಿನ್ನುವಾಗ ಈ ಸರಳ ಸೂತ್ರಗಳನ್ನು ಅನುಸರಿಸಿ.

1. ಎಷ್ಟು ತಿನ್ನುತ್ತೀರಿ ಎಂಬ ಗಮನ ಇರಲಿ: ಹೌದು. ಮಾವಿನಹಣ್ಣು ಒಮ್ಮೆ ಒಂದು ದಿನಕ್ಕೆ ಎಷ್ಟು ನಿಮ್ಮ ಹೊಟ್ಟೆ ಸೇರುತ್ತಿದೆ ಎಂಬುದರ ಬಗ್ಗೆ ಗಮನ ಕೊಡಿ. ಮಾವಿನಹಣ್ಣು ಕೊಬ್ಬುರಹಿತ. ಹಾಗಾಗಿ ಅದನ್ನು ತೂಕ ಇಳಿಸುವ ಮಂದಿಯೂ ತಿನ್ನಬಹುದು, ಆದರೆ, ಎಷ್ಟು ಒಮ್ಮೆ ತಿನ್ನುತ್ತೀರಿ ಎಂಬುದು ಬಹಳ ಮುಖ್ಯ. ಸ್ವಲ್ಪ ಮಾವಿನಹಣ್ಣನ್ನು ಮಾತ್ರ ಹೊಟ್ಟೆಗಿಳಿಸಿದರೆ ಸಾಕು. ಒಮ್ಮೆ ನೂರು ಗ್ರಾಂನಷ್ಟು ಮಾವಿನಹಣ್ಣನ್ನು ಸೇವಿಸಿದರೆ, ಯಾವ ತೊಂದರೆಯೂ ಇಲ್ಲ. ಆದರೆ, ರುಚಿಯಾಗಿದೆ ಎಂದು ಇಡೀ ದಿನ ಮಾವಿನಹಣ್ಣು ತಿನ್ನುತ್ತಲೇ ಇರುವುದು ಒಳ್ಳೆಯದಲ್ಲ.

2. ಊಟದ ಜೊತೆಗೆ ತಿನ್ನಬೇಡಿ: ಮಧ್ಯಾಹ್ನದ ಊಟ ಅಥವಾ ರಾತ್ರಿ ಊಟದ ಜೊತೆಗೆ ಮಾವಿನಹಣ್ಣನ್ನು ತಿನ್ನುವ ಅಭ್ಯಾಸ ಇಟ್ಟುಕೊಳ್ಳಬೇಡಿ. ಊಟದ ಮಧ್ಯದ ಸ್ನ್ಯಾಕ್‌ ಸಮಯದಲ್ಲಿ ಮಾವಿನಹಣ್ಣು ಬೆಸ್ಟ್‌. ಇದರಲ್ ಅತ್ಯುತ್ತಮ ಪೋಷಕಾಂಶಗಳೂ ಇರುವುದರಿಂದ ಸ್ನ್ಯಾಕ್‌ ಸಮಯದಲ್ಲಿ ಜಂಕ್‌ ತಿನ್ನುವ ಬದಲು ಮಾವಿನ ಹಣ್ಣನ್ನು ಪರ್ಯಾಯವಾಗಿ ತಿನ್ನಬಹುದು. ಆಗ ಬೇಗ ಹಸಿವೆಯಾಗುವುದಿಲ್ಲ. ಹಸಿವೆಯಿಂದ ಏನೋನೋ ತಿನ್ನುವುದು ತಪ್ಪುತ್ತದೆ.

3. ಮಾವಿನಹಣ್ಣಿನ ಜೊತೆಗೆ ಸಿಹಿ ಸೇರಿಸಿ ತಿನ್ನುವುದನ್ನು ಬಿಡಿ: ಹೌದು. ಮಾವಿನಹಣ್ಣು ನೈಸರ್ಗಿಕವಾಗಿ ಸಿಹಿಯಾದ ಹಣ್ಣು ಆದ್ದರಿಂದ ಇದಕ್ಕೆ ಸಿಹಿ ಸೇರಿಸಿ ತಿನ್ನುವುದು ಒಳ್ಳೆಯದಲ್ಲ. ಆಮ್‌ರಸ್‌, ಮ್ಯಾಂಗೋ ಐಸ್‌ಕ್ರೀಂ ಹಾಗೂ ಕುಲ್ಫಿಗಳು, ಮ್ಯಾಗೋ ಶೇಕ್‌ಗಳು, ಸೀಕರಣೆ, ರಸಾಯನ ಇತ್ಯಾದಿ ಇತ್ಯಾದಿ ಮಾವಿನಹಣ್ಣಿನ ವಿವಿಧ ಪಾನೀಯ ಹಾಗೂ ಭಕ್ಷ್ಯಗಳನ್ನು ತಿನ್ನುವುದನ್ನು ಕಡಿಮೆ ಮಾಡಿ. ಮಾವಿನಹಣ್ಣನ್ನೇ ನೇರವಾಗಿ ಹಾಗೆಯೇ ತಿನ್ನಿ.

ಇದನ್ನೂ ಓದಿ: Alphonso Mango: ಪುಣೆಯಲ್ಲಿ ಅಲ್ಫೊನ್ಸೋ ಮಾವು ಇಎಂಇ ಮೂಲಕ ಮಾರಾಟ!

4. ಡಯಟ್‌ ಮಾಡ್ತಿದೀರಾ?: ಈಗಷ್ಟೇ ತೂಕ ಇಳಿಸುವ ಡಯಟ್‌ ಅನ್ನು ಆರಂಭಿಸಿದ್ದರೆ, ಕನಿಷ್ಟ ಎರಡು ವಾರಗಳಾದರೂ ಮಾವಿನ ಹಣ್ಣನ್ನು ಡಯಟ್‌ನಲ್ಲಿ ಸೇರಿಸಬೇಡಿ.

5. ನಿಮ್ಮ ಡಯಟ್‌ ಅನ್ನು ನೀವೇ ಸಿದ್ಧಗೊಳಿಸಿ: ಡಯಟ್‌ ಪ್ಲಾನ್‌ ಮಾಡುವ ಸಂದರ್ಭ ಮಾವಿನಹಣ್ಣಿಗೂ ಸ್ವಲ್ಪ ಜಾಗ ಕೊಡಿ. ಮಾವಿನ ಹಣ್ಣಿನ ಜೊತೆಗೆ ಆರೋಗ್ಯಕರ ಆಹಾರವನ್ನು ಸೇವಿಸುತ್ತಿದ್ದರೆ ತೂಕ ಏರಿಕೆಯ ಭಯವಿಲ್ಲ. ಆದರೆ, ಹಣ್ಣಿನ ಜೊತೆಗೆ ಸಾಕಷ್ಟು ಸಕ್ಕರೆ ಸೇರಿಸಿ, ಬಗೆಬಗೆಯ ತಿನಿಸುಗಳನ್ನು ಮಾಡಿ ತಿನ್ನುವುದರಿಂದ ಹಾಗೂ ಅನಾರೋಗ್ಯಕರ ಜಂಕ್‌ ಆಹಾರವನ್ನೂ ಇದರ ಜೊತೆ ತಿನ್ನುವುದರಿಂದ ತೂಕ ಏರುತ್ತದೆ. ಹಾಗಾಗಿ ಮುತುವರ್ಜಿಯಿಂದ ನಿಮ್ಮ ಡಯಟ್‌ ಪ್ಲಾನ್‌ ಸಿದ್ಧಪಡಿಸಿ.

ನೆನಪಿಡಿ. ಮಾವಿನಹಣ್ಣು ನಿಮ್ಮ ತೂಕ ಇಳಿಸಲು ಸಹಾಯ ಮಾಡುವುದಿಲ್ಲ. ಆದರೆ, ಈ ಹಣ್ಣಿನ ಜೊತೆಗೆ ಇತರ ಆಹಾರವನ್ನೂ ತೂಕ ಇಳಿಕೆಗೆ ಪೂರಕವಾಗಿಯೇ ತೆಗೆದುಕೊಳ್ಳುವುದರಿಂದ ತೂಕ ಏರದಂತೆ ತಡೆದು ಮಾವಿನಹಣ್ಣಿನ ರುಚಿಯನ್ನೂ ಡಯಟ್‌ ಜೊತೆ ಎಂಜಾಯ್‌ ಮಾಡಬಹುದು.

ಇದನ್ನೂ ಓದಿ: mango time: ಮಾವುಪ್ರಿಯರಿಗೆ ಹಣ್ಣು ತಿನ್ನಲು 15 ಕಾರಣಗಳು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

World Organ Donation Day: ಇಂದು ವಿಶ್ವ ಅಂಗಾಂಗದಾನ ದಿನ; ಯಾರದ್ದೋ ಬದುಕಿಗೆ ಭರವಸೆಯಾಗೋಣ! ನೋಂದಣಿ ಹೇಗೆ?

World Organ Donation Day: ಇಂದು ವಿಶ್ವ ಅಂಗದಾನ ದಿನ. ಅಂಗಗಳ ದಾನ ಬೇಡುವುದಕ್ಕೆ ಬಹಳಷ್ಟು ಕಾರಣಗಳು ಇರಬಹುದು. ಕಣ್ಣು, ಯಕೃತ್‌, ಮೂತ್ರಪಿಂಡ, ಹೃದಯ, ಪುಪ್ಪುಸ ಮುಂತಾದ ಹಲವು ಅಂಗಗಳನ್ನು ಕಸಿ ಮಾಡುವುದಕ್ಕೆ ವೈದ್ಯ ವಿಜ್ಞಾನಕ್ಕೆ ಇಂದು ಸಾಧ್ಯವಿದೆ. ಆದರೆ ದಾನಿಗಳ ಕೊರತೆ ಕಾಡುತ್ತದೆ. ಈ ಕುರಿತ ಲೇಖನ ಇಲ್ಲಿದೆ.

VISTARANEWS.COM


on

World Organ Donation Day
Koo

ಇಂದು ವಿಶ್ವ ಅಂಗಾಂಗ (World Organ Donation Day) ದಾನ ದಿನ. ನಮ್ಮೊಂದಿಗೇ ನಮ್ಮ ಅಮೂಲ್ಯ ಅಂಗಾಂಗಗಳು ಮಣ್ಣುಗೂಡಬಾರದೆಂಬ ಜಾಗೃತಿಯನ್ನು ಎಲ್ಲರಲ್ಲಿ ಮೂಡಿಸುವುದು ಈ ದಿನದ ಉದ್ದೇಶ. ನಮ್ಮ ಬುದಕಿನ ನಂತರ, ಅಗತ್ಯ ಇರುವವರಿಗೆ ಅಂಗಾಂಗಳನ್ನು ದಾನ ಮಾಡಲು ನಾವು ಬದುಕಿದ್ದಾಗಲೇ ನಿರ್ಧಾರಗಳನ್ನು ಮಾಡಬೇಕೆಂಬ ಸರಳ ಸತ್ಯಗಳನ್ನು ಅರಿವಿಗೆ ತರಿಸುವುದಕ್ಕೆ ಇದನ್ನು ಆಚರಿಸಲಾಗುತ್ತದೆ. ಅಂದಹಾಗೆ, ಅಂಗಾಂಗ ದಾನವನ್ನು ಬದುಕಿರುವವರೂ ಮಾಡಬಹುದು. ಈ ಬಾರಿಯ ಘೋಷವಾಕ್ಯ: ಯಾರದ್ದೋ ನಗುವಿಗೆ ನೀವು ಇಂದೇ ಕಾರಣರಾಗಿ! ದಿನದಿಂದ ದಿನಕ್ಕೆ ಅಂಗಾಂಗ ದಾನ ಬಯಸುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ ದಾನಿಗಳ ಸಂಖ್ಯೆ ಕಡಿಮೆಯಿದೆ. ಜನ್ಮಜಾತ ಸಮಸ್ಯೆ ಇರುವವರು, ಬದುಕಿನ ಯಾವುದೋ ಹಂತದಲ್ಲಿ ಕ್ಯಾನ್ಸರ್‌ ಅಥವಾ ಇನ್ನಾವುದೋ ರೋಗಕ್ಕೆ ತುತ್ತಾಗಿ ಅಂಗಗಳ ಕಸಿ ಅಗತ್ಯವಾದವರು, ಅಪಘಾತಕ್ಕೆ ತುತ್ತಾಗಿ ಅಂಗಗಳನ್ನು ಕಳೆದುಕೊಂಡವರು- ಹೀಗೆ ಅಂಗಗಳ ದಾನ ಬೇಡುವುದಕ್ಕೆ ಬಹಳಷ್ಟು ಕಾರಣಗಳು ಇರಬಹುದು. ಕಣ್ಣು, ಯಕೃತ್‌, ಮೂತ್ರಪಿಂಡ, ಹೃದಯ, ಪುಪ್ಪುಸ ಮುಂತಾದ ಹಲವು ಅಂಗಗಳನ್ನು ಕಸಿ ಮಾಡುವುದಕ್ಕೆ ವೈದ್ಯ ವಿಜ್ಞಾನಕ್ಕೆ ಇಂದು ಸಾಧ್ಯವಿದೆ. ಆದರೆ ದಾನಿಗಳ ಕೊರತೆ ಕಾಡುತ್ತದೆ.

World Organ Donation Day 2024
World Organ Donation Day 2024

ಇತಿಹಾಸ

ಅಂಗದಾನದ ಮೂಲ 20ನೇ ಶತಮಾನದಲ್ಲಿದೆ. 1954ರಲ್ಲಿ ಮೊದಲ ಬಾರಿಗೆ ಮೂತ್ರಪಿಂಡದ ಕಸಿಯನ್ನು ಯಶಸ್ವಿಯಾಗಿ ಮಾಡಲಾಯಿತು. ರೊನಾಲ್ಡ್‌ ಲೀ ಹೆರಿಕ್‌ ಎಂಬಾತ ತನ್ನ ಅವಳಿ ಸೋದರನಿಗೆ ದಾನ ಮಾಡಿದ್ದ ಮೂತ್ರಪಿಂಡವನ್ನು ಡಾ. ಜೋಸೆಫ್‌ ಮರ್ರೆ ಯಶಸ್ವಿಯಾಗಿ ಕಸಿ ಮಾಡಿದ್ದರು. ಆನಂತರದಿಂದ ಅಂಗದಾನ ಮತ್ತು ಕಸಿಯ ಬಗ್ಗೆ ವೈದ್ಯ ವಿಜ್ಞಾನ ಬಹಳ ಮುಂದುವರಿದಿದ್ದು, 1994ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಹೃದಯವನ್ನೂ ಯಶಸ್ವಿಯಾಗಿ ಕಸಿ ಮಾಡಲಾಗಿತ್ತು. ಅಂಗದಾನದ ಬಗ್ಗೆ ಅರಿವು ಮೂಡಿಸಿ, ನಿಸ್ವಾರ್ಥ ಭಾವದಿಂದ ಅಂಗದಾನ ಮಾಡಿದವರ ಮತ್ತು ಅವರ ಕುಟುಂಬದವರ ಉಪಕಾರವನ್ನು ಸ್ಮರಿಸುವ ನಿಟ್ಟಿನಲ್ಲಿ ಆಗಸ್ಟ್‌ ತಿಂಗಳ ೧೩ನೇ ದಿನವನ್ನು ವಿಶ್ವದೆಲ್ಲೆಡೆ ಅಂಗದಾನ ದಿನವೆಂದು ಗುರುತಿಸಲಾಗಿದೆ.
ವಿಶ್ವದಲ್ಲಿ ಇಂದಿಗೂ ಲಕ್ಷಾಂತರ ಮಂದಿ ಅಂಗಾಂಗ ಕಸಿಗಾಗಿ ಕಾಯುತ್ತಿದ್ದಾರೆ. ಪ್ರತಿಯೊಬ್ಬ ದಾನಿಯೂ ತನ್ನ ನಂತರ ಮಾಡುವ ಅಂಗದಾನದಿಂದ 8 ಮಂದಿಯ ಜೀವ ಉಳಿಸಿ, 75 ಜನರ ಬದುಕನ್ನು ಹಸನು ಮಾಡಬಹುದು. ಹಾಗಾಗಿ ಈ ಜೀವ ಉಳಿಸುವ ಕ್ರಿಯೆಯಲ್ಲಿ ಪಾಲ್ಗೊಳ್ಳಿ, ನಿಮ್ಮ ನಂತರ ಇತರರ ಬದುಕನ್ನು ಸುಂದರವಾಗಿಸಿ ಎನ್ನುವ ಸಂದೇಶವನ್ನು ಸಾರಲಾಗುತ್ತಿದೆ.

ಇದನ್ನೂ ಓದಿ: Ghee For Health: ನಾವು ಆರೋಗ್ಯವಾಗಿರಲು ದಿನಕ್ಕೆಷ್ಟು ತುಪ್ಪ ತಿನ್ನಬೇಕು?

ಭಾರತದಲ್ಲಿ ಹೇಗೆ?

ಅಂಗ ದಾನ ಮಾಡಲು ಆಸಕ್ತಿ ಇರುವವರು ಇದಕ್ಕಾಗಿ ನೋಂದಣಿ ಮಾಡಿಸಿಕೊಳ್ಳುವುದು ಅಗತ್ಯ. ಇದನ್ನು ಭಾರತದಲ್ಲಿ ಹೇಗೆ ಮಾಡಬೇಕು? ನಮ್ಮ ದೇಶದಲ್ಲಿ ಇದಕ್ಕಾಗಿಯೇ ಪ್ರತ್ಯೇಕ ಕಾನೂನು ರೂಪಿಸಲಾಗಿದೆ. ಮಾನವ ಅಂಗ ಮತ್ತು ಅಂಗಾಂಶ ಕಸಿ ಕಾಯ್ದೆ 1994ರ ಅನ್ವಯ ಇದನ್ನು ನಿರ್ವಹಿಸಲಾಗುತ್ತದೆ. 18 ವರ್ಷಕ್ಕೆ ಮೇಲ್ಪಟ್ಟವರು- ಯಾವುದೇ ಲಿಂಗ, ವಯಸ್ಸು, ಜಾತಿ, ಮತ ಇತ್ಯಾದಿಗಳ ಭೇದವಿಲ್ಲದೆ, ಎಲ್ಲರೂ ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು. ಇದಕ್ಕಾಗಿ ಪ್ರತ್ಯೇಕ ವೆಬ್‌ಸೈಟ್‌ ಇದ್ದು, ಇದರ ಮೂಲಕ ನೋಂದಣಿ ಮಾಡಿಕೊಳ್ಳಬಹುದು.
https://www.organindia.org/pledge-to-be-an-organ-donor/
ಈ ವೆಬ್‌ಸೈಟ್‌ನಲ್ಲಿ ಅರ್ಜಿ ತುಂಬಿದ ಮೇಲೆ, ಸರಕಾರದಿಂದಲೇ ನೀಡಲಾದ ಪ್ರತ್ಯೇಕ ನೋಂದಣಿ ಸಂಖ್ಯೆ ಹೊಂದಿದ ʻಡೋನರ್‌ ಕಾರ್ಡ್‌ʼ ಲಭಿಸುತ್ತದೆ. ಈ ಬಗ್ಗೆ ಕುಟುಂಬದವರ ಜೊತೆ ಚರ್ಚಿಸಿದ ನಂತರವೇ ನಿರ್ಧಾರ ತೆಗೆದುಕೊಳ್ಳಬೇಕಾದ್ದು ದಾನಿಗಳ ಕರ್ತವ್ಯ. ಕಾರಣ, ದಾನಿಯ ದೇಹಾಂತ್ಯದ ನಂತರ ಅವರ ವಾರಸುದಾರರೇ ಈ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಒಂದೊಮ್ಮೆ ಅಂಗದಾನದ ನೋಂದಣಿ ಮಾಡಿದ್ದರೂ, ವಾರಸುದಾರರು ಪ್ರತಿಕೂಲವಾಗಿ ನಿರ್ಧರಿಸಿದರೆ, ಅದನ್ನು ನೆರವೇರಿಸಲು ಸಾಧ್ಯವಿಲ್ಲ. ಹಾಗಾಗಿ ಕುಟುಂಬದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅಗತ್ಯ.

Continue Reading

ಆರೋಗ್ಯ

Intermittent Fasting: ಇಂಟರ್‌ ಮಿಟೆಂಟ್‌ ಫಾಸ್ಟಿಂಗ್‌ ಡಯಟ್‌ ಮಾಡುವವರೇ ಹುಷಾರ್! ಈ ಸಂಗತಿ ಗೊತ್ತಿರಲಿ

Intermittent Fasting: ಸದ್ಯದಲ್ಲಿ ಟ್ರೆಂಡ್‌ನಲ್ಲಿರುವ ಒಂದು ಪದ್ಧತಿ ಎಂದರೆ ಇಂಟರ್‌ಮಿಟೆಂಟ್‌ ಫಾಸ್ಟಿಂಗ್‌. ಇಂಟರ್‌ಮಿಟೆಂಟ್‌ ಫಾಸ್ಟಿಂಗ್‌ ಕೂಡಾ ಹಲವಾರು ಸಮಸ್ಯೆಗಳನ್ನು ಸೃಷ್ಟಿಸಬಹುದು. ದೈಹಿಕ, ಮಾನಸಿಕ ಜೊತೆಗೆ ಸಾಮಾಜಿಕ ಬದಲಾವಣೆಗಳನ್ನು ತರುವುದರಿಂದ ಇವು ಸಮಸ್ಯೆಯಾಗಿಯೂ ಪರಿಣಮಿಸಬಹುದು. ಬನ್ನಿ, ಇಂಟರ್‌ಮಿಟೆಂಟ್‌ ಫಾಸ್ಟಿಂಗ್‌ನಿಂದ ಯಾವೆಲ್ಲ ಸಮಸ್ಯೆಗಳು ಎದುರಾಗಬಹುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

VISTARANEWS.COM


on

Intermittent Fasting
Koo

ಇತ್ತೀಚೆಗಿನ ದಿನಗಳಲ್ಲಿ ಥರಹೇವಾರಿ ಡಯಟ್‌ ಪದ್ಧತಿಗಳನ್ನು ಜನರು ಅನುಸರಿಸುವುದು ಸಾಮಾನ್ಯವಾಗಿದೆ. ಬಗೆಬಗೆಯ ಡಯಟ್‌ ಚಾಲ್ತಿಯಲ್ಲಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬರುವ ನೂರಾರು ವಿಡಿಯೋಗಳಿಂದ ಟ್ರೆಂಡ್‌ಗಳಿಂದ ಪ್ರೇರಣೆಗೊಂಡು ವಯಸ್ಸಿನ ಹಂಗಿಲ್ಲದೆ ಎಲ್ಲರೂ ಬಗೆಬಗೆಯ ಪದ್ಧತಿಗಳನ್ನು ಅನುಸರಿಸುತ್ತಿದ್ದಾರೆ. ಆದರೆ, ಇದರಿಂದ ಲಾಭಗಳು ಮೇಲ್ನೋಟಕ್ಕೆ ಕಂಡರೂ ಅನೇಕ ಬಾರಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ಇದು ಹೊತ್ತು ತರಬಹುದು. ಸದ್ಯದಲ್ಲಿ ಟ್ರೆಂಡ್‌ನಲ್ಲಿರುವ ಒಂದು ಪದ್ಧತಿ ಎಂದರೆ ಇಂಟರ್‌ಮಿಟೆಂಟ್‌ ಫಾಸ್ಟಿಂಗ್‌. ಇಂಟರ್‌ಮಿಟೆಂಟ್‌ ಫಾಸ್ಟಿಂಗ್‌ ಕೂಡಾ ಹಲವಾರು ಸಮಸ್ಯೆಗಳನ್ನು ಸೃಷ್ಟಿಸಬಹುದು. ದೈಹಿಕ, ಮಾನಸಿಕ ಜೊತೆಗೆ ಸಾಮಾಜಿಕ ಬದಲಾವಣೆಗಳನ್ನು ತರುವುದರಿಂದ ಇವು ಸಮಸ್ಯೆಯಾಗಿಯೂ ಪರಿಣಮಿಸಬಹುದು. ಬನ್ನಿ, ಇಂಟರ್‌ಮಿಟೆಂಟ್‌ ಫಾಸ್ಟಿಂಗ್‌ನಿಂದ (Intermittent Fasting) ಯಾವೆಲ್ಲ ಸಮಸ್ಯೆಗಳು ಎದುರಾಗಬಹುದು ಎಂಬುದನ್ನು ನೋಡೋಣ.

Concept of Healthy Intermittent Fasting
Concept of Healthy Intermittent Fasting
  • ಇಂಟರ್‌ ಮಿಟೆಂಟ್‌ ಫಾಸ್ಟಿಂಗ್‌ ಡಯಟ್‌ ಪದ್ಧತಿಯಲ್ಲಿ ಸೀಮಿತ ಅವಧಿಯಲ್ಲಿ ಮಾತ್ರ ಆಹಾರ ಸೇವನೆ ಮಾಡುವ ಕಾರಣದಿಂದ ಬಹಳ ಸಾರಿ ನಿಮ್ಮ ದೇಹಕ್ಕೆ ಅಗತ್ಯವಿರುವಷ್ಟು ಪೋಷಕಾಂಶಗಳ ಪೂರೈಕೆ ಸಾಧ್ಯವಾಗಲಿಕ್ಕಿಲ್ಲ. ಮುಖ್ಯವಾಗಿ ಕ್ಯಾಲ್ಶಿಯಂ, ಕಬ್ಬಿಣಾಂಶ, ವಿಟಮಿನ್‌ ಡಿ ಇತ್ಯಾದಿಗಳು ದೇಹಕ್ಕೆ ಅಗತ್ಯವಿದ್ದಷ್ಟು ಬೇಕೇ ಬೇಕು. ಈ ಪದ್ಧತಿಯಲ್ಲಿ ಇಂತಹ ಮುಖ್ಯ ಪೋಷಕಾಂಶಗಳೇ ದೇಹಕ್ಕೆ ಸರಿಯಾಗಿ ಪೂರೈಕೆಯಾಗದೆ, ಆರೋಗ್ಯ ಸಮಸ್ಯೆಗಳು ಉದ್ಭವಿಸಬಹುದು.
  • ಹಸಿವು ಹಾಗೂ ಬಯಕೆ ಹೆಚ್ಚಾಗಬಹುದು. ಹೆಚ್ಚು ಹೊತ್ತು ಉಪವಾಸದಲ್ಲಿರುವುದರಿಂದ ಹಸಿವೂ ಹೆಚ್ಚಾಗಬಹುದು. ಇದರಿಂದ ಅತಿಯಾಗಿ ತಿನ್ನುವ ಸಾಧ್ಯತೆಗಳಿವೆ. ಇದು ಅನಾರೋಗ್ಯಕರ ಆಹಾರಾಭ್ಯಾಸಗಳನ್ನೂ, ಜಂಕ್‌ ಆಹಾರದ ಆಯ್ಕೆಯನ್ನೂ ಮಾಡಲು ಪ್ರೇರಣೆಯಾಗಬಹುದು. ಹಸಿವಿನಿಂದಾಗಿ ಏಕಾಗ್ರತೆಯ ಕೊರೆತೂ ಆಗಬಹುದು.
  • ದೇಹದ ಒಟ್ಟು ಜೀರ್ಣಾಂಗ ವ್ಯವಸ್ಥೆಯನ್ನು ಹಾಳು ಮಾಡಬಹುದು. ಕ್ಯಾಲರಿ ಇದ್ದಕ್ಕಿದ್ದಂತೆ ಕಡಿಮೆಯಾದಾಗ ದೇಹ ಬಳಲಬಹುದು. ಇದರಿಂದ ತೂಕ ಇಳಿಕೆಯಾದರೂ, ಹೆಚ್ಚು ಕಾಲ ನಿಲ್ಲದಿರಬಹುದು.
  • ಉಪವಾಸದ ಸಂದರ್ಭ ದೇಹದಲ್ಲಿ ಮಾಂಸಖಂಡಗಳ ನಷ್ಟವಾಗುತ್ತದೆ. ಇದರಿಂದ ಶಕ್ತಿ, ಸಾಮರ್ಥ್ಯ ಕುಂಠಿತವಾಗುತ್ತದೆ. ಇದು ನಮ್ಮ ಕೆಲಸ ಕಾರ್ಯಗಳ ಗುಣಮಟ್ಟದ ಮೇಲೆ ಪ್ರಭಾವ ಬೀರುತ್ತದೆ.
  • ಎಲ್ಲಕ್ಕಿಂತ ಮುಖ್ಯವಾಗಿ ಇದು ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ. ಉದ್ವೇಗವನ್ನು ಹುಟ್ಟುಹಾಕಬಹುದು. ಊಟದ ಸಮಸ್ಯೆಯನ್ನು ಹೊಂದಿದ ಮಂದಿಗೆ ಇದು ಇನ್ನಷ್ಟು ಮಾನಸಿಕವಾಗಿ ಪರಿಣಾಮ ಬೀರಬಹುದು. ಕೆಟ್ಟ ನಡತೆಗಳಿಗೂ ಕಾರಣವಾಗಬಹುದು.
  • ರಕ್ತದಲ್ಲಿರುವ ಸಕ್ಕರೆಯ ಮಟ್ಟದಲ್ಲಿ ಏರುಪೇರಾಗಬಹುದು. ಮಧುಮೇಹ ಹಾಗೂ ಹೈಪೋಗ್ಲಿಸೇಮಿಯಾದಂತಹ ಸಮಸ್ಯೆ ಇರುವ ಮಂದಿಗೆ ಇದು ಇನ್ನಷ್ಟು ಮಾರಕವಾಗಬಹುದು. ತಲೆಸುತ್ತು, ಸುಸ್ತು ಸೇರಿದಂತೆ ಅನೇಖ ಸಮಸ್ಯೆಗಳು ತಲೆದೋರಬಹುದು. ಹೊತ್ತು ಹೊತ್ತಿಗೆ ಸರಿಯಾಗಿ ಉಣ್ಣುವುದರಿಂದ ಈ ಸಮಸ್ಯೆಯಿಂದ ಪಾರಾಗಬಹುದು.
  • ಸಾಮಾಜಿಕ ಹಾಗೂ ಸಾಂಸ್ಕೃತಿಕ ಜೀವನದ ಮೇಲೂ ಪರಿಣಾಮ ಬೀರಬಹುದು. ಭಾರತದಂತಹ ಕೌಟುಂಬಿಕ ವ್ಯವಸ್ತೆ ಗಟ್ಟಿ ಇರುವ, ಬಗೆಬಗೆಯ ಧರ್ಮಗಳ ಬಗೆಬಗೆಯ ಹಬ್ಬಗಳ ಆಚರಣೆಯ ನಾಡಲ್ಲಿ ಇಂತಹುಗಳು ಕೆಲವೊಮ್ಮೆ ಸೈದ್ಧಾಂತಿಕ ಸಮಸ್ಯೆಗಳನ್ನೂ ಈಡು ಮಾಡಿ ಇದು ಮಾನಸಿಕ ಪರಿಣಾಮ ಬೀರಬಹುದು.
  • ದೀರ್ಘಕಾಲಿಕವಾಗಿ ನೋಡಿದರೆ, ಈ ಬಗೆಯ ಆಹಾರ ಪದ್ಧತಿಯನ್ನು ಮುಂದುವರಿಸುವುದು ಬಹಳ ಕಷ್ಟ. ಕೆಲಕಾಲ ಆಡಿದರೂ ಕ್ರಮೇಣ ಪಾಲಿಸಲಾಗ ಪದ್ಧತಿ ಇದು. ಹಾಗಾಗಿ, ಪರಿಣಾಮವೂ ದೀರ್ಘಕಾಲಿಕವಾಗಿಲ್ಲದಿರಬಹುದು.

ಇದನ್ನೂ ಓದಿ: Ceramic Cookware: ಪಿಂಗಾಣಿ ಪಾತ್ರೆಗಳನ್ನು ಅಡುಗೆಗೆ ಬಳಸಿದರೆ ಏನಾಗುತ್ತದೆ?

Continue Reading

ಆರೋಗ್ಯ

Ceramic Cookware: ಪಿಂಗಾಣಿ ಪಾತ್ರೆಗಳನ್ನು ಅಡುಗೆಗೆ ಬಳಸಿದರೆ ಏನಾಗುತ್ತದೆ?

Ceramic Cookware: ಸಾವಿರಾರು ವರ್ಷಗಳಿಂದ ಬಳಕೆಯಲ್ಲಿರುವ ಪಿಂಗಾಣಿ ಪಾತ್ರೆಗಳು ಈಗಲೂ ತಮ್ಮ ಹೊಳಪು ಕಳೆದುಕೊಂಡಿಲ್ಲ! ಆದರೆ ಅವು ಆರೋಗ್ಯಕ್ಕೆ ಸುರಕ್ಷಿತವೇ? ಅವುಗಳನ್ನು ಸುರಕ್ಷಿತವಾಗಿ ಬಳಸುವ ವಿಧಾನ ಎಂಬುದು ಇದೆಯೇ? ಎಲ್ಲ ಪಿಂಗಾಣಿ ಪಾತ್ರೆಗಳನ್ನೂ ಅಡುಗೆಗೆ ಬಳಸಬಹುದೇ? ಇನ್ನೂ ಬಹಳಷ್ಟು ಪ್ರಶ್ನೆಗಳಿಗೆ ಈ ಲೇಖನದಲ್ಲಿದೆ ಉತ್ತರ.

VISTARANEWS.COM


on

Ceramic Cookware
Koo

ಸೆರಾಮಿಕ್‌ ವಸ್ತುಗಳ ಬಳಕೆ (Ceramic Cookware) ಇಂದು ನಿನ್ನೆಯದಲ್ಲ. ಇದಕ್ಕೆ ಕ್ರಿಸ್ತ ಪೂರ್ವದ ದಿನಗಳ ಇತಿಹಾಸವಿದೆ. ಈ ವಸ್ತುಗಳನ್ನು ಅಡುಗೆ ಮಾಡುವುದಕ್ಕೂ ಬಳಸುತ್ತಿದ್ದ ಇತಿಹಾಸವಿದೆ. ಈಗಿನ ಅಡುಗೆ ಮನೆಗಳಲ್ಲಿ ಸ್ಟೀಲ್‌ ಮತ್ತು ನಾನ್‌ಸ್ಟಿಕ್‌ ಪಾತ್ರೆಗಳದ್ದೇ ದರ್ಬಾರು. ಹಳೆಯ ಕಾಲದ ಮಣ್ಣಿನ ಮತ್ತು ಪಿಂಗಾಣಿ ಪಾತ್ರೆಗಳ ವೈಭವ ನಿಧಾನಕ್ಕೆ ಮರುಕಳಿಸೀತೆ ಎನ್ನುವುದನ್ನು ಕಾದು ನೋಡಬೇಕಷ್ಟೆ. ಸ್ಟೀಲ್‌ ಪಾತ್ರೆಗಳು ಎಲ್ಲ ರೀತಿಯಿಂದಲೂ ಸುರಕ್ಷಿತ. ಆದರೆ ನಾನ್‌ಸ್ಟಿಕ್‌ ಪಾತ್ರೆಗಳ ಬಗ್ಗೆ ಸಾಕಷ್ಟು ಅಪಸ್ವರಗಳಿವೆ. ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದೇ ಹೇಳಲಾಗುತ್ತದೆ. ಗಾಜಿನ ಪಾತ್ರೆಗಳು ಸುರಕ್ಷಿತ ಹೌದಾದರೂ ಒಡೆಯುವ ಅಪಾಯವನ್ನು ಜೊತೆಗಿಟ್ಟುಕೊಂಡೇ ಬಳಸಬೇಕು. ಮಣ್ಣಿನ ಪಾತ್ರೆಗಳು ಆರೋಗ್ಯಕ್ಕೆ ಒಳ್ಳೆಯವಾದರೂ ನಿರ್ವಹಣೆಗೆ ತೊಡಕಾಗಬಹುದು. ಕಬ್ಬಿಣದ ಕಡಾಯಿಗಳು ಭಾರ ಹೆಚ್ಚು. ತಾಮ್ರ, ಕಂಚಿನವು ಈಗ ದೊರೆಯುವುದೇ ಕಡಿಮೆ. ಈಗ ಸೆರಾಮಿಕ್‌ ಪಾತ್ರೆಗಳ ವಿಷಯಕ್ಕೆ ಬಂದರೆ, ಅವುಗಳ ಬಳಕೆ ಸುರಕ್ಷಿತವೇ? ಇದರಿಂದ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲವೇ?

Female shopping ceramic cookware at workshop
Female shopping ceramic cookware at workshop

ಸೆರಾಮಿಕ್‌ ಸುರಕ್ಷಿತವೇ?

ಉನ್ನತ ಗುಣಮಟ್ಟದ ಸೆರಾಮಿಕ್‌ಗಳು ಸಾಮಾನ್ಯವಾಗಿ ಆರೋಗ್ಯಕ್ಕೆ ಸುರಕ್ಷಿತವೇ, ಅನುಮಾನವಿಲ್ಲ. ಇವುಗಳಲ್ಲಿ PTFE (polytetrafluoroethylene) ಮತ್ತು PFOA (perfluorooctanoic acid) ಇರುವುದಿಲ್ಲ. (ಈ ರಾಸಾಯನಿಕಗಳು ಸಾಮಾನ್ಯವಾಗಿ ನಾನ್‌ಸ್ಟಿಕ್‌ನಂಥ ಪಾತ್ರೆಗಳಲ್ಲಿ ಕಾಣುವಂಥವು) ಸೀಸ್‌, ಕ್ಯಾಡ್ಮಿಯಂ ಮುಂತಾದ ಹಾನಿಕಾರ ಲೋಹಗಳೂ ಸೆರಾಮಿಕ್‌ನಲ್ಲಿ ಇರಬಾರದು. ಇದರಲ್ಲಿರುವ ಸಿಲಿಕಾದಂಥ ವಸ್ತುಗಳಿಂದ ಆರೋಗ್ಯಕ್ಕೆ ಸಮಸ್ಯೆಗಳಿಲ್ಲ. ಆದರೂ ಕೆಲವೊಂದು ಎಚ್ಚರಿಕೆಯನ್ನು ತೆಗೆದುಕೊಳ್ಳುವುದು ಅಗತ್ಯ.
ಸುಂದರವಾಗಿ ಕಾಣಲೆಂದು ಕೆಲವು ಸೆರಾಮಿಕ್‌ ಪಾತ್ರೆಗಳ ಮೇಲ್ಮೈಗೆ ಸೀಸ, ಕ್ಯಾಡ್ಮಿಯಂ, ಬ್ಯಾರಿಯಂ ಮುಂತಾದ ಹಾನಿಕಾರಕ ಲೋಹಗಳನ್ನು ಹಾಕಲಾಗುತ್ತದೆ. ಹಾಗಾಗಿ ಸೆರಾಮಿಕ್‌ ಗುಣಮಟ್ಟದ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು ಅಗತ್ಯ. ಕಡಿಮೆ ಬೆಲೆಯಲ್ಲಿ, ಯಾವ್ಯಾವುದೋ ಅಂಗಡಿಗಳಲ್ಲಿ ದೊರೆಯುವ ಸೆರಾಮಿಕ್‌ಗಳನ್ನು ಖರೀದಿಸಿ ಬಳಸುವ ಬದಲು, ಗುಣಮಟ್ಟಕ್ಕೆ ಬೆಲೆ ನೀಡಿ. ಅಲಂಕಾರಕ್ಕೆಂದು ಹಳದಿ, ಕೆಂಪು, ನೀಲಿ ಮುಂತಾದ ಕಡು ಬಣ್ಣಗಳನ್ನು ಉಪಯೋಗಿಸಿದ ಪಾತ್ರೆಗಳಲ್ಲಿ ಲೆಡ್‌ ಮತ್ತು ಕಟು ಲೋಹಗಳೂ ಇರಬಹುದು, ಜಾಗ್ರತೆ.

ಇದನ್ನೂ ಓದಿ: High Calcium Foods: ದೇಹಕ್ಕೆ ಮುಖ್ಯವಾದ ಅಧಿಕ ಕ್ಯಾಲ್ಶಿಯಂ ಆಹಾರಗಳನ್ನು ಪಡೆಯುವುದು ಹೇಗೆ?

ಸೆರಾಮಿಕ್‌ ಬಳಕೆ

ಇವುಗಳನ್ನು ಬಳಸುವಾಗ ಕೆಲವು ಎಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅಗತ್ಯ. ಅವುಗಳನ್ನು ಉಪಯೋಗಿಸುವಾಗ ಕುಕ್ಕಿ, ಕೆರೆದು, ಪರಚುವಂತಿಲ್ಲ. ಇವುಗಳ ಮೇಲ್ಮೈ ಹಾಳಾದರೆ ಬಳಕೆಗೆ ಸುರಕ್ಷಿತ ಅಲ್ಲ ಎಂದೇ ಭಾವಿಸಬೇಕು. ಹಾಗಾಗಿ ಚೂಪಾದ ವಸ್ತುಗಳನ್ನು ಅಡುಗೆ ಮಾಡುವಾಗ ಬಳಸಬಾರದು. ಇವುಗಳು ಕ್ರಮೇಣ ಬಿಸಿ ಮಾಡಿ. ಒಮ್ಮೆಲೇ ಅತಿ ಹೆಚ್ಚು ಬಿಸಿಗೆ ಒಡ್ಡಬೇಡಿ. ಅಲ್ಲದಿದ್ದರೂ, ಮಧ್ಯಮ ಉರಿಗಿಂತ ಹೆಚ್ಚಿನ ಉರಿಯನ್ನು ಸೋಕಿಸಬೇಡಿ. ಬೇಕಿಂಗ್‌ ವಸ್ತುಗಳಾದರೆ 180 ಡಿ. ಗಿಂತ ಹೆಚ್ಚು ತಾಪಮಾನಕ್ಕೆ ಅವು ಯೋಗ್ಯವೇ ಎಂಬುದನ್ನು ಆಯಾ ವಸ್ತುವಿನ ಮ್ಯಾನುವಲ್‌ನಲ್ಲಿ ಪರಿಶೀಲಿಸಿ. ಎಲ್ಲ ಪಿಂಗಾಣಿಗಳೂ ಒಲೆ ಮೇಲೆ ಇರಿಸಲು ಬರುವುದಿಲ್ಲ. ʻಸೇಫ್‌ ಫಾರ್‌ ಸ್ಟೋವ್‌ ಟಾಪ್‌ʼ ಎಂಬ ಒಕ್ಕಣೆ ಅದರ ಪ್ಯಾಕಿಂಗ್‌ ಮೇಲಿಗೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ. ಕೆಲವೊಮ್ಮೆ ಬಿಸಿ ಆಹಾರಗಳನ್ನು ಸರ್ವ್‌ ಮಾಡಲು ಮಾತ್ರವೇ ಬಳಸುವಂಥದ್ದಾಇರುತ್ತದೆ. ಬಿಸಿಯಾದ ಪಾತ್ರೆಗೆ ತಣ್ಣನೆಯ ನೀರು ಸುರಿಯಬೇಡಿ. ಇದರಿಂದ ಮೇಲ್ಮೈಗೆ ಹಾನಿಯಾಗುತ್ತದೆ. ಸ್ವಚ್ಛ ಮಾಡುವಾಗ ಸೌಮ್ಯವಾದ ಸೋಪಿನ ಜೊತೆಗೆ ಸ್ಪಾಂಜ್‌ ಬಳಸಿ. ಕಠೋರವಾದ ಡಿಟರ್ಜೆಂಟ್‌ಗಳು ಇದಕ್ಕೆ ಹೇಳಿಸಿದ್ದಲ್ಲ. ಡಿಶ್‌ವಾಷರ್‌ಗೆ ಹಾಕುವ ಮುನ್ನ, ಅದನ್ನು ಹಾಗೆ ಮಾಡಬಹುದೇ ಎಂಬ ಸೂಚನೆಯನ್ನು ಮೊದಲು ಗಮನಿಸಿ. ಸೆರಾಮಿಕ್‌ ಮೇಲೆ ಕೆಲವೊಮ್ಮೆ ನಾನ್‌ಸ್ಟಿಕ್‌ ಮೇಲ್ಮೈ ಸಹ ಇರಬಹುದು. ಉಳಿದ ನಾನ್‌ಸ್ಟಿಕ್‌ಗಳಂತೆ ಇವು ವಾತಾವರಣಕ್ಕೆ ವಿಷಕಾರಿ ಅನಿಲಗಳನ್ನು ಬಿಡುಗಡೆ ಮಾಡುವುದಿಲ್ಲ. ಆದರೆ ಇದನ್ನೂ ಸಹ ಅತಿಯಾಗಿ ಬಿಸಿ ಮಾಡದೆ, ಮೇಲ್ಮೈ ಹಾಳಾಗದಂತೆ ಜಾಗ್ರತೆಯಿಂದ ಬಳಸಬೇಕು. ಸ್ವಚ್ಛಗೊಳಿಸುವಾಗಲೂ ನಾಜೂಕಾಗಿಯೇ ಆಗಬೇಕೇ ಹೊರತು, ಒರಟಾದ ವಸ್ತುಗಳಿಂದ ಉಜ್ಜುವಂತಿಲ್ಲ. ಇವುಗಳನ್ನು ಸ್ಟೋರ್‌ ಮಾಡುವಾಗಲೂ ಸ್ವಚ್ಛವಾಗಿ ಒರೆಸಿಯೇ ಕಪಾಟಿನೊಳಗಿಡಿ.

Continue Reading

ಆರೋಗ್ಯ

Whiten Your Yellow Teeth: ಈ ಆಹಾರಗಳು ನಿಮ್ಮ ಹಲ್ಲುಗಳ ಬಣ್ಣಗೆಡಿಸುತ್ತವೆ ಎನ್ನುವುದು ಗೊತ್ತಿದೆಯೆ?

Whiten Your Yellow Teeth: ನಾವು ತಿನ್ನುವ ಆಹಾರಗಳು, ಕುಡಿಯುವ ಪೇಯಗಳು, ಬಾಯಿ ಸ್ವಚ್ಛಗೊಳಿಸುವ, ಗೊಳಿಸದಿರುವ ನಮ್ಮ ಅಭ್ಯಾಸಗಳು, ಕೆಲವೊಂದು ಔಷಧಗಳು- ಹೀಗೆ ಹಲವು ಕಾರಣಗಳಿಂದಾಗಿ ನಮ್ಮ ದಂತಪಂಕ್ತಿಯ ಬಣ್ಣ ಬದಲಾಗಬಹುದು. ಈ ಬಣ್ಣಗೇಡು ಹಲ್ಲುಗಳೊಂದಿಗೆ ನಗುವುದಕ್ಕೆ ಮುಜುಗರವಾಗಿ ಹೇಗ್ಹೇಗೋ ನಗುವವರು ಬಹಳ ಮಂದಿಯಿದ್ದಾರೆ. ಈ ಹಳದಿ ಹಲ್ಲುಗಳಿಗೆ ಆಹಾರಗಳ ಮೂಲಕ ಪರಿಹಾರ ಇದೆಯೇ?

VISTARANEWS.COM


on

Whiten Your Yellow Teeth
Koo

ಹೀಗೊಂದು ಸನ್ನಿವೇಶವನ್ನು (Whiten Your Yellow Teeth) ಊಹಿಸಿಕೊಳ್ಳಿ- ಅದೊಂದು ಸುಂದರವಾದ ನಗು. ಆದರೆ ಬಾಯಿ ಬಿಟ್ಟರೆ ಬಣ್ಣಗೇಡು ಎನ್ನುವಂಥ ಅವಸ್ಥೆ. ಅಂದರೆ ಬಾಯಿ ಮುಚ್ಚಿಕೊಂಡಾಗ ಸುಂದರವಾಗಿ ಕಾಣುವ ನಗು, ಬಾಯಿ ಬಿಟ್ಟಾಕ್ಷಣ ಹಳದಿ ಬಣ್ಣದ ಹಲ್ಲುಗಳೊಂದಿಗೆ ರಾರಾಜಿಸುತ್ತದೆ! ಈ ಬಣ್ಣಗೇಡು ಹಲ್ಲುಗಳೊಂದಿಗೆ ನಗುವುದಕ್ಕೆ ಮುಜುಗರವಾಗಿ ಹೇಗ್ಹೇಗೋ ನಗುವವರು ಬಹಳ ಮಂದಿಯಿದ್ದಾರೆ. ಹೌದು, ಮನಸ್ಸು ನಿರ್ಮಲವಾಗಿದ್ದರೆ, ನಗುವೂ ಸ್ವಚ್ಛವೇ. ಆದರೆ ʻಹಲ್ಲು ಬಿಟ್ಟರೆ ಸಂತೋಷ, ಬಿಡದಿದ್ದರೆ ಇನ್ನೂ ಸಂತೋಷʼ ಎನ್ನುವ ಅವಸ್ಥೆಯಲ್ಲಿ ಫೋಟೋಗೆ ನಿಲ್ಲುವುದಾದರೂ ಹೇಗೆ? ಯಾವುದೇ ಸಾಮಾಜಿಕ ಮಾಧ್ಯಮಗಳಲ್ಲಿ ಅದನ್ನು ಹಾಕಿದಾಗ ಒಬ್ಬರಲ್ಲ ಒಬ್ಬರು ಈ ಬಗ್ಗೆ ಕಮೆಂಟಿಸಿಬಿಟ್ಟರೆ, ಶೋಕದ ಮಹಾಪೂರವೇ ಹರಿಯುವುದಿಲ್ಲವೇ? ಹಳದಿ ಹಲ್ಲುಗಳಿಗೆ ಏನು ಪರಿಹಾರ? ನಾವು ತಿನ್ನುವ ಆಹಾರಗಳು, ಕುಡಿಯುವ ಪೇಯಗಳು, ಬಾಯಿ ಸ್ವಚ್ಛಗೊಳಿಸುವ/ ಗೊಳಿಸದಿರುವ ನಮ್ಮ ಅಭ್ಯಾಸಗಳು, ಕೆಲವೊಂದು ಔಷಧಗಳು- ಹೀಗೆ ಹಲವು ಕಾರಣಗಳಿಂದಾಗಿ ನಮ್ಮ ದಂತಪಂಕ್ತಿಯ ಬಣ್ಣ ಬದಲಾಗಬಹುದು. ಇದಕ್ಕೆ ಸುಲಭದ ಪರಿಹಾರವೆಂದರೆ ದಂತವೈದ್ಯರನ್ನು ಕಾಣುವುದು ಮತ್ತು ಹಲ್ಲುಗಳನ್ನು ಬಿಳಿ ಮಾಡಿಸಿಕೊಳ್ಳುವುದು. ಅನತಿ ಸಮಯದಲ್ಲಿ, ಬೇಗನೇ ದೊರೆಯುವ ಪರಿಹಾರವಿದು. ಆದರೆ ಇದು ದೂರಗಾಮಿ ಪರಿಹಾರವಲ್ಲ. ಕೆಲವು ದಿನಗಳ ನಂತರ ದಂತಪಂಕ್ತಿ ಮತ್ತೆ ಬಣ್ಣಗೆಡಬಹುದು. ಎಷ್ಟು ಬಾರಿ ದಂತ ವೈದ್ಯರ ಬಳಿ ಹೋಗಿ ದುಬಾರಿ ಚಿಕಿತ್ಸೆಗಳನ್ನು ಮಾಡಿಸಿಕೊಳ್ಳಲು ಸಾಧ್ಯ? ಇದಕ್ಕೆ ದೀರ್ಘಾವಧಿ ಪರಿಹಾರವಿಲ್ಲವೇ ಎಂಬುದೀಗ ವಿಷಯ. ಮಾತ್ರವಲ್ಲ, ಆಹಾರಗಳಿಂದ ಇದನ್ನು ನಿರ್ವಹಿಸಲು ಸಾಧ್ಯವಿಲ್ಲವೇ?
ಕೆಲವು ಆಹಾರಗಳು ನಮ್ಮ ಹಲ್ಲುಗಳ ಮೇಲೆ ದೀರ್ಘಕಾಲ ಉಳಿದು ಎನಾಮಲ್‌ ಕವಚಕ್ಕೆ ಹಾನಿ ತರುವುದು ಮಾತ್ರವಲ್ಲ, ಬಿಳಿಯ ಬಣ್ಣವನ್ನೂ ಹಾಳು ಮಾಡಬಲ್ಲವು. ಅಂಥ ಕೆಲವು ಆಹಾರಗಳ ಬಗ್ಗೆ ಜಾಗ್ರತೆ ಬೇಕು. ಇದಲ್ಲದೆ, ಇನ್ನು ಕೆಲವು ಆಹಾರಗಳು ದಂತಗಳ ಸ್ವಾಸ್ಥ್ಯವನ್ನು ಹೆಚ್ಚಿಸಬಲ್ಲವು. ಅಂಥವುಗಳನ್ನು ಮರೆಯದೇ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಆಗ ಹೆಚ್ಚಿನ ರಾಸಾಯನಿಕಗಳ ಗೊಡವೆ ಇಲ್ಲದೆಯೇ ಸುಂದರ, ಸ್ವಚ್ಛ ನಗುವನ್ನು ನಿಮ್ಮದಾಗಿಸಿಕೊಳ್ಳಬಹುದು. ಎಂಥ ಆಹಾರಗಳು ಹಲ್ಲುಗಳಿಗೆ ಸೂಕ್ತವಲ್ಲ?

Selection of Colorful Sweets
Fruits and Vegetables Spilling from Paper Bag

ಸಕ್ಕರೆ ಮಾರಿಗಳು

ಅಂಟಾದ ಶುಗರ್‌ ಕ್ಯಾಂಡಿಗಳು, ಸೋಡಾ, ಫ್ರೂಟ್‌ ಜ್ಯೂಸ್‌ಗಳು ಈ ಸಾಲಿನಲ್ಲಿ ಮುಂಚೂಣಿಯಲ್ಲಿವೆ. ಇವುಗಳಲ್ಲಿರುವ ಸಕ್ಕರೆಯಂಶ ಹಲ್ಲಿನ ಮೇಲೆ ದೀರ್ಘ ಕಾಲ ಅಂಟಿಕೂತು ಬ್ಯಾಕ್ಟೀರಿಯಗಳನ್ನು ಕೂಗಿ ಕರೆಯುತ್ತದೆ. ಸೋಡಾಗಳಲ್ಲಿರುವ ಕಾರ್ಬನ್‌ ಅಂಶವು ಎನಾಮಲ್‌ ದುರ್ಬಲ ಮಾಡುವುದರಲ್ಲಿ ಸದಾ ಮುಂದು. ಇದರ ಫಲವಾಗಿ ಹಲ್ಲುಗಳ ಬಣ್ಣವೂ ಹಾಳಾಗುತ್ತದೆ.

ಸಿಟ್ರಸ್‌ ಹಣ್ಣುಗಳು

ದ್ರಾಕ್ಷಿ, ಕಿತ್ತಳೆ, ನಿಂಬೆಯಂಥ ಹುಳಿ ಹಣ್ಣುಗಳು ಆರೋಗ್ಯಕ್ಕೆ ಒಳ್ಳೆಯವೆ. ಹಾಗೆ ನೋಡಿದರೆ ಹಲ್ಲುಗಳ ಆರೋಗ್ಯಕ್ಕೆ ಇವೇನೂ ಹಾಳಲ್ಲ. ಹೊಳಪಿಗೂ ಸಮಸ್ಯೆ ತರುವಂಥವಲ್ಲ. ಆದರೆ ಇವುಗಳನ್ನು ತಿಂದ ಮೇಲೆ ನೆನಪಿನಿಂದ ಬಾಯಿ ಸ್ವಚ್ಛ ಮಾಡಿಕೊಳ್ಳಲೇಬೇಕು. ಅದಿಲ್ಲದಿದ್ದರೆ ಇದರಲ್ಲಿರುವ ಆಮ್ಲೀಯ ಅಂಶಗಳು ದಂತಪಂಕ್ತಿಗಳಿಗೆ ಹಾನಿ ಮಾಡಬಹುದು.

tea cooffee

ಕಾಫಿ, ಚಹಾ

ಹಲ್ಲುಗಳನ್ನು ಬಣ್ಣಗೇಡು ಮಾಡುವುದರಲ್ಲಿ ಇವುಗಳದ್ದು ಎತ್ತಿದ ಕೈ. ದಂತಗಳ ಬಿಳಿಯ ಬಣ್ಣ ಹಾಳು ಮಾಡುವ ಗುಣ ಇವುಗಳಿಗೆ ಇದ್ದೇ ಇದೆ. ಜೊತೆಗೆ, ಇವನ್ನು ಕುಡಿದ ಮೇಲೆ ಬಾಯಿ ತೊಳೆಯುವ ಅಭ್ಯಾಸ ಹೆಚ್ಚಿನವರಿಗೆ ಇರುವುದಿಲ್ಲ. ಹಾಗಾಗಿ ಸಮಸ್ಯೆ ಹೆಚ್ಚುತ್ತದೆ. ಕೆಫೇನ್‌ ಮಿತವಾಗಿದ್ದರೆ ಹಲ್ಲುಗಳಿಗೂ ಒಳ್ಳೆಯದು.

ಒಳ್ಳೆಯದಾವುದು?

ಚೀಸ್‌, ಯೋಗರ್ಟ್‌ನಂಥವು ದಂತಸ್ವಾಸ್ಥ್ಯಕ್ಕೆ ಪೂರಕವಾದವು. ಕ್ಯಾಲ್ಶಿಯಂ, ಫಾಸ್ಫೇಟ್‌ ಮತ್ತು ಪ್ರೊಬಯಾಟಿಕ್ಸ್‌ ಹೊಂದಿರುವ ಈ ಆಹಾರಗಳು ಹಲ್ಲುಗಳ ಎನಾಮಲ್‌ ಬಲಪಡಿಸುತ್ತವೆ. ಬಾಯಲ್ಲಿ ಜೊಲ್ಲು ರಸದ ಉತ್ಪಾದನೆಗೆ ಪ್ರೋತ್ಸಾಹ ನೀಡಿ, ಹಲ್ಲಿನ ಮೇಲ್ಮೈಯಲ್ಲಿ ಅಂಟಿ ಕೂರುವ ಬ್ಯಾಕ್ಟೀರಿಯಗಳನ್ನು ಕಡಿಮೆ ಮಾಡುತ್ತವೆ. ಈ ಮೂಲಕ ಹಲ್ಲಿನ ಹೊಳಪಿಗೆ ಕಾರಣವಾಗುತ್ತವೆ.

Fruits and Vegetables Spilling from Paper Bag

ತರಕಾರಿಗಳು

ಕ್ಯಾರೆಟ್‌, ಹಸಿರು ಸೊಪ್ಪು-ತರಕಾರಿಗಳು ಹಲ್ಲುಗಳ ಆರೋಗ್ಯಕ್ಕೆ ಬೇಕಾದಂಥವು. ಕರುಂಕುರುಂ ತಿನ್ನಬಹುದಾದ ಕ್ಯಾರೆಟ್‌, ಸೆಲೆರಿಯಂಥವು ಹಲ್ಲುಗಳಿಗೆ ನೈಸರ್ಗಿಕ ಬ್ರಷ್‌ನಂತೆ ಕೆಲಸ ಮಾಡುತ್ತವೆ. ಜೊತೆಗೆ ಕ್ಯಾಲ್ಶಿಯಂನಂಥ ಖನಿಜಗಳು ಮತ್ತು ಫಾಲಿಕ್‌ ಆಮ್ಲಗಳನ್ನು ಹೇರಳವಾಗಿ ಹೊಂದಿರುವ ಹಸಿರು ಸೊಪ್ಪುಗಳಿಗೆ ಹಲ್ಲುಗಳು ಎಲ್ಲ ರೀತಿಯಲ್ಲೂ ನಳನಳಿಸುತ್ತವೆ.

ಇದನ್ನೂ ಓದಿ: Almonds Benefits: ಈ 9 ಕಾರಣಗಳಿಗಾಗಿ ನೆನೆಸಿದ ಬಾದಾಮಿಯನ್ನು ಖಾಲಿ ಹೊಟ್ಟೆಯಲ್ಲಿ ನಿತ್ಯ ಸೇವಿಸಬೇಕು!

ಹಣ್ಣುಗಳು

ಈ ಸಾಲಿನಲ್ಲಿ ಮುಂದೆ ನಿಲ್ಲುವುದು ಸ್ಟ್ರಾಬೆರಿ. ನೈಸರ್ಗಿಕವಾಗಿಯೇ ಹಲ್ಲುಗಳನ್ನು ಬೆಳ್ಳಗೆ ಮಾಡುವ ಸಾಮರ್ಥ್ಯ ಇವುಗಳಿಗೆ ಇದೆ. ಜೊತೆಗೆ ಸೇಬು, ಬಾಳೆಯ ಹಣ್ಣುಗಳಲ್ಲೂ ಹಲ್ಲುಗಳ ಹೊಳಪು ಕಾಪಾಡುವ ಗುಣವಿದೆ. ಇವುಗಳಲ್ಲಿ ಇರುವ ಅಧಿಕ ನೀರಿನಂಶ ಲಾಲಾ ರಸದ ಉತ್ಪಾದನೆಗೆ ನೆರವಾಗುತ್ತದೆ. ಹಾಗಾಗಿ ಬಾಯಿಯ ಆರೋಗ್ಯಕ್ಕೆ ಅಧಿಕ ಪ್ರಮಾಣದಲ್ಲಿ ನೀರು ಕುಡಿಯುವುದು ಮಹತ್ವದ್ದು.

Continue Reading
Advertisement
Ashwini Ponnappa
ಪ್ರಮುಖ ಸುದ್ದಿ4 hours ago

Ashwini Ponnappa : ಷಟ್ಲರ್​ಗಳನ್ನೇ ಗುರಿಯಾಗಿಸಿದ ಕ್ರೀಡಾ ಇಲಾಖೆ ವಿರುದ್ಧವೇ ತಿರುಗಿ ಬಿದ್ದ ಅಶ್ವಿನಿ ಪೊನ್ನಪ್ಪ

Sowmya Reddy
ರಾಜಕೀಯ4 hours ago

Sowmya Reddy: ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಸೌಮ್ಯಾ ರೆಡ್ಡಿ ನೇಮಕ

Cricket News
ಪ್ರಮುಖ ಸುದ್ದಿ4 hours ago

Cricket News : ಬಾಂಗ್ಲಾದೇಶ ವಿರುದ್ಧದ ಸರಣಿಯ ವೇಳಾಪಟ್ಟಿ ಬದಲಾಯಿಸಿದ ಬಿಸಿಸಿಐ

Koppala News
ಕೊಪ್ಪಳ4 hours ago

Koppala News: ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್ ನಿರ್ಮಾಣದಲ್ಲೂ ಕಮಿಷನ್ ರಾಜಕೀಯ; ಕಾಂಗ್ರೆಸ್ ಮುಖಂಡನಿಂದಲೇ ಆರೋಪ

Koppala News
ಕರ್ನಾಟಕ5 hours ago

Koppala News: ಮಕ್ಕಳ ತಟ್ಟೆಯಲ್ಲಿನ ಮೊಟ್ಟೆ ಕಸಿದುಕೊಂಡ ಅಂಗನವಾಡಿಗೆ ನ್ಯಾಯಾಧೀಶರ ದಿಢೀರ್ ಭೇಟಿ!

Kannada New Movie
ಬೆಂಗಳೂರು5 hours ago

Kannada New Movie: ತೆರೆಗೆ ಬರಲು ಸಿದ್ಧವಾಗಿದೆ ಬರಗೂರು ರಾಮಚಂದ್ರಪ್ಪ ನಿರ್ದೇಶನದ ʼಸ್ವಪ್ನ ಮಂಟಪʼ ಚಿತ್ರ

Independence Day 2024
ದೇಶ5 hours ago

Independence Day 2024: ಬ್ರಿಟಿಷ್‌ ಕಾಲದ ಚಿನ್ನದ ನಾಣ್ಯದಿಂದ ಹಿಡಿದು ಸ್ವತಂತ್ರ ಭಾರತದ ರೂಪಾಯಿವರೆಗಿನ ಇತಿಹಾಸ ಕುತೂಹಲಕರ!

Vinesh Phogat
ಪ್ರಮುಖ ಸುದ್ದಿ5 hours ago

Vinesh Phogat : ವಿನೇಶ್​ ಪೋಗಟ್​ ಅನರ್ಹತೆ ತೀರ್ಪು ಆಗಸ್ಟ್​​​ 16ಕ್ಕೆ ಮುಂದೂಡಿಕೆ

Cauvery Water Dispute
ಕರ್ನಾಟಕ5 hours ago

Cauvery Water Dispute: ಕಾವೇರಿ ನೀರು ನಿಗದಿಗಿಂತ ಹೆಚ್ಚು ಹರಿಸಿದರೂ ತಮಿಳುನಾಡು ಆಕ್ಷೇಪ!

Sheikh Hasina
ಪ್ರಮುಖ ಸುದ್ದಿ6 hours ago

Sheikh Hasina : ಬಾಂಗ್ಲಾದಿಂದ ಪಲಾಯನ ಮಾಡಿದ ಬಳಿಕ ಮೊದಲ ಬಾರಿ ಹೇಳಿಕೆ ನೀಡಿದ ಶೇಖ್​ ಹಸೀನಾ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ5 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ5 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ6 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 week ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 week ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 week ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌