Multivitamins: ನಮಗೆ ವಿಟಮಿನ್‌ ಪೂರಕಗಳು ಅಗತ್ಯವೆಂದು ತಿಳಿಯುವುದು ಹೇಗೆ? - Vistara News

ಆರೋಗ್ಯ

Multivitamins: ನಮಗೆ ವಿಟಮಿನ್‌ ಪೂರಕಗಳು ಅಗತ್ಯವೆಂದು ತಿಳಿಯುವುದು ಹೇಗೆ?

Multivitamins: ನಮ್ಮಿಷ್ಟಕ್ಕೆ ಬೇಕಾದಂತೆ ವಿಟಮಿನ್‌ ಪೂರಕಗಳನ್ನು ಸೇವಿಸುವ ಖಯಾಲಿ ಹೆಚ್ಚುತ್ತಿದೆ. ಆದರೆ ನಮಗೆ ಕೊರತೆ ಇದೆಯೆಂದು ತಿಳಿಯುವುದು ಹೇಗೆ? ಶರೀರವು ಇದಕ್ಕೆ ಹಲವು ರೀತಿಯಲ್ಲಿ ಸೂಚನೆಗಳನ್ನು ನೀಡುತ್ತದೆ. ಕೂದಲು ಉದುರುವುದು, ಉಗುರು ಪದೇಪದೆ ಮುರಿಯುವುದು, ಚರ್ಮದ ಹೊಳಪು ಮಾಯವಾಗುವುದು, ಆಗಾಗ ಕಾಡುವ ಸೋಂಕು, ಬಾಯಿ ಹುಣ್ಣು ಇತ್ಯಾದಿಗಳನ್ನು ಏನೆಂದು ಗ್ರಹಿಸಬೇಕು ನಾವು ಎಂಬುದು ಗೊತ್ತೇ?

VISTARANEWS.COM


on

Multivitamins
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಿಟಮಿನ್‌ ಮತ್ತು ಖನಿಜಗಳು (Multivitamins) ನಮ್ಮ ದೇಹಕ್ಕೆ ಬೇಕಾದ ಅಗತ್ಯವಾದ ಅಂಶಗಳು. ಅವುಗಳ ಕೊರತೆಯಾದರೆ ಅದನ್ನು ಶರೀರ ಹಲವು ಸೂಚನೆಗಳ ಮೂಲಕ ನಮಗೆ ತಿಳಿಸುತ್ತದೆ. ಆದರೆ ನಮಗದು ಅರ್ಥವಾಗಬೇಕಲ್ಲ? ಯಾಕೋ ಕೂದಲು ಉದುರುತ್ತಿದೆ ಎಂದು ಅಲವತ್ತುಕೊಳ್ಳುತ್ತೇವೆ; ಚರ್ಮಕ್ಕೆ ಹೊಳಪಿಲ್ಲ ಎಂದು ಗೊಣಗುತ್ತಾ ಏನೇನೋ ಕ್ರೀಮ್‌ ಬಳಿದುಕೊಳ್ಳುತ್ತೇವೆ; ಬಾಯಲ್ಲಿ ಹುಣ್ಣಾಗಿ ಒದ್ದಾಡುತ್ತೇವೆ; ದಿನವಿಡೀ ಶಕ್ತಿಯೇ ಇಲ್ಲದೆ ಪರದಾಡುತ್ತೇವೆ. ಇಷ್ಟಾದರೂ ನಮ್ಮ ಶರೀರ ನಮಗೇನು ಹೇಳುತ್ತಿದೆ ಎನ್ನುವುದನ್ನೇ ನಾವು ಕೇಳಿಸಿಕೊಳ್ಳುವುದಿಲ್ಲ. ನಮಗೆ ಬೇಕಾದ ಸತ್ವಗಳನ್ನು ನಾವು ಆಹಾರದ ಮೂಲಕವೇ ತೆಗೆದುಕೊಳ್ಳಬೇಕಾದ್ದು ಸರಿಯಾದ ಕ್ರಮ. ಆದರೆ ವಿಟಮಿನ್‌ಗಳು ಅಗತ್ಯವಿರುವ ಪ್ರಮಾಣಕ್ಕೂ, ಈಗ ದೊರೆಯುತ್ತಿರುವ ಪ್ರಮಾಣಕ್ಕೂ ಬಹಳ ವ್ಯತ್ಯಾಸವಿದ್ದರೆ, ಅದನ್ನು ಸರಿದೂಗಿಸಲು ಕೆಲ ದಿನಗಳ ಮಟ್ಟಿಗೆ ವೈದ್ಯರು ಮಲ್ಟಿವಿಟಮಿನ್‌ಗಳನ್ನು ಪೂರಕಗಳ ರೂಪದಲ್ಲಿ ನೀಡುವುದು ಸಾಮಾನ್ಯ. ಕೆಲವೇ ತಿಂಗಳ ಕಾಲ ಇದನ್ನು ನೀಡಿ, ನಂತರ ಆಹಾರದಲ್ಲೇ ಸತ್ವಗಳು ದೊರೆಯಬೇಕೆಂದು ಹೇಳುವುದೂ ಸಾಮಾನ್ಯ. ಆದರೆ ನಮಗೆ ಪೂರಕಗಳು ಅಗತ್ಯ ಎಂಬುದನ್ನು ನಾವು ತಿಳಿದುಕೊಳ್ಳುವುದು ಹೇಗೆ? ಇದಕ್ಕಾಗಿ ಏನನ್ನು ಗ್ರಹಿಸಬೇಕು ನಾವು?

Supplement Vitamin Multivitamin Health Herbal Alternative Antioxidant
Supplement Vitamin Multivitamin Health Herbal Alternative Antioxidant

ಈ ಸೂಚನೆಗಳನ್ನು ಗ್ರಹಿಸಿ

  • ಕೂದಲು ಬುಡದಿಂದ ಉದುರುತ್ತಿದೆ ಎಂದಾದರೆ ವಿಟಮಿನ್‌ ಬಿ3, ಬಿ7 ಗಳ ಕೊರತೆ ಇರಬಹುದು.
  • ಉಗುರು ಮತ್ತು ಕೂದಲುಗಳು ಅರ್ಧಕ್ಕೆ ತುಂಡಾಗುತ್ತಿವೆ ಎಂದಾದರೆ ಬಿ7 ಜೀವಸತ್ವ ಅಥವಾ ಬಯೋಟಿನ್‌ ಕೊರತೆಯಾಗಿರಬಹುದು
  • ಬಾಯಲ್ಲಿ ಹುಣ್ಣುಗಳಾಗುತ್ತಿದೆ ಎಂದಾದರೆ ವಿಟಮಿನ್‌ ಬಿ1, ಬಿ2, ಬಿ6 ಗಳ ಪೈಕಿ ಎಲ್ಲವೂ ಅಥವಾ ಯಾವುದಾದರೂ ಜೀವಸತ್ವಗಳು ಕಡಿಮೆ ಇರಬಹುದು
  • ಇರುಳುಗಣ್ಣಿನಿಂದ ಹಿಡಿದು ದೃಷ್ಟಿಯ ಯಾವುದೇ ದೋಷಗಳಿದ್ದರೂ ಎ ಜೀವಸತ್ವದ ಮಟ್ಟ ಕಡಿಮೆಯಾಗಿರುವ ಸೂಚನೆ
  • ಚರ್ಮದ ಮೇಲೆ ಬಿಳಿ ಅಥವಾ ಕೆಂಪು ಗುರುತುಗಳು ಕಾಣುತ್ತಿದ್ದರೆ ವಿಟಮಿನ್‌ ಎ ಮತ್ತು ಸಿ ಕೊರತೆಯಾಗಿರುವ ಸಾಧ್ಯತೆ ಇರುತ್ತದೆ.
  • ಪದೇಪದೆ ಸೋಂಕುಗಳು ಕಾಡುತ್ತಿವೆ ಎಂದಾದರೆ ವಿಟಮಿನ್‌ ಸಿ ಬೇಕಾಗಿದೆ ಎಂದರ್ಥ

ಹೀಗೆನ್ನುತ್ತಿದ್ದಂತೆ ಈ ವಿಟಮಿನ್‌ಗಳ ಪೂರಕಗಳನ್ನು ಏಕ್‌ದಂ ಖರೀದಿಸಿ ಗುಳುಂ ಮಾಡುವುದಲ್ಲ. ಕಾರಣ, ಪ್ರತಿಯೊಂದು ಸೂಕ್ಷ್ಮ ಪೋಷಕಾಂಶಗಳಿಗೂ ಅದರದ್ದೇ ಆದ ನಿಗದಿತ ಮಟ್ಟವಿದೆ. ಅದನ್ನು ಮೀರಿ, ಏನಕ್ಕೇನೋ ಪೂರಕಗಳನ್ನು ತಿನ್ನುವಂತಿಲ್ಲ. ಅದಕ್ಕೆ ಅಡ್ಡ ಪರಿಣಾಮಗಳಿದ್ದು ಹೊಟ್ಟೆ ಬುಡಮೇಲಾಗಬಹುದು; ಪಿತ್ತಕೋಶವನ್ನೂ ಸಂಕಷ್ಟಕ್ಕೆ ದೂಡಬಹುದು. ಈ ಸತ್ವಗಳ ಕೊರತೆ ಇದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದಕ್ಕೆ ವೈದ್ಯರು ರಕ್ತ ಪರೀಕ್ಷೆಗಳನ್ನು ಮಾಡಿಸಿಕೊಳ್ಳಲು ಹೇಳಬಹುದು. ಯಾವ ಪೋಷಕಾಂಶಗಳು, ಎಷ್ಟು ಕೊರತೆಯಾಗಿದೆ ಎಂಬುದನ್ನು ಸರಿಯಾಗಿ ತಿಳಿದುಕೊಳ್ಳುವುದಕ್ಕೆ ಇದೇ ಸರಿಯಾದ ಮಾರ್ಗ. ಉದಾ, ಕ್ಯಾಲ್ಶಿಯಂ ಹೀರಿಕೊಳ್ಳುವುದಕ್ಕೆ ಬೇಕಾಗುವ ವಿಟಮಿನ್‌ ಡಿ ಅಂಶ ದಿನಕ್ಕೆ ೧೫ ಮೈಕ್ರೋಗ್ರಾಂ ಗಳಷ್ಟು ಇದ್ದರೆ ಸಾಕಾಗುತ್ತದೆ. ಈ ಪ್ರಮಾಣ ಎಲ್ಲರಿಗೂ ಅಲ್ಲ, 19-70ರ ವಯೋಮಾನದವರಿಗೆ. 70ರ ಮೇಲ್ಪಟ್ಟವರಿಗೆ 20 ಮೈಕ್ರೋಗ್ರಾಂ ಬೇಕಾಗುತ್ತದೆ. ವಿಟಮಿನ್‌ ಸಿ ಮಾತ್ರೆಗಳನ್ನು ತೆಗೆದುಕೊಳ್ಳುವಾಗಲೂ, ಮಹಿಳೆಯರಿಗೆ ದಿನಕ್ಕೆ 75 ಮಿಲಿಗ್ರಾಂ, ಪುರುಷರಿಗೆ ದಿನಕ್ಕೆ 90 ಮಿಲಿಗ್ರಾಂ ಸಾಕು ಎಂಬುದನ್ನು ಗಮನಿಸಬೇಕು.

ಇದನ್ನೂ ಓದಿ: Health Tips: ಅನೀಮಿಯ ತಡೆಯುವುದಕ್ಕೆ ದಿನಕ್ಕೆಷ್ಟು ಕಬ್ಬಿಣದಂಶ ಬೇಕು? ಇದನ್ನು ಆಹಾರದಿಂದ ಪಡೆಯುವುದು ಹೇಗೆ?

ಆಹಾರದ ಮೂಲಕವೇ ಏಕೆ?

ಮಾತ್ರೆಗಳ ರೂಪದಲ್ಲಿ ವಿಟಮಿನ್‌ ಖನಿಜಗಳೆಲ್ಲ ದೊರೆಯುವಾಗ, ಆಹಾರದಲ್ಲೇ ಕಷ್ಟಪಟ್ಟುಕೊಂಡು ಏಕೆ ಸೇವಿಸಬೇಕು? ಸುಮ್ಮನೆ ಮಾತ್ರೆ ನುಂಗಿದರೆ ಅಥವಾ ಟಾನಿಕ್‌ ಕುಡಿದರೆ ಆಗದೇ? ಈ ಮಾತ್ರೆಗಳಿಗಿಂತ ಸುಲಭವಾಗಿ ಆಹಾರದ ಮೂಲಕ ನೀಡುವುದನ್ನು ನಮ್ಮ ಶರೀರ ಹೀರಿಕೊಳ್ಳುತ್ತದೆ, ಯಾವುದೇ ಅಡ್ಡ ಪರಿಣಾಮಗಳಿಲ್ಲದೆ! ಅದರಲ್ಲೂ ಆಯಾ ಋತುಮಾನದಲ್ಲಿ ದೊರೆಯುವ ಹಣ್ಣು, ತರಕಾರಿಗಳೇ ಅಗತ್ಯ ಪೋಷಕಾಂಶಗಳು ಅತ್ತ್ಯುತ್ತಮ ಮೂಲ. ಕೊರತೆ ಇದ್ದಾಗ ಮಾತ್ರವೇ ಪೂರಕಗಳ ಮೊರೆ ಹೋಗಬೇಕೆ ವಿನಹ ಸದಾ ಕಾಲ ಅದನ್ನು ತಿನ್ನುವಂತಿಲ್ಲ. ಮಲ್ಟಿವಿಟಮಿನ್‌ಗಳನ್ನಾದರೂ ವೈದ್ಯರ ಸೂಚನೆ ಇಲ್ಲದೆ ಸೇವಿಸುವುದು ಸಂಕಷ್ಟಕ್ಕೆ ದಾರಿಯಾದೀತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Health Tips: ಬಿಸಿ ಕಾಫಿಗೆ ಬಾಯಿ ಸುಟ್ಟಿತೇ? ಇಲ್ಲಿದೆ ಉಪಶಮನ!

Health Tips: ಸಂಜೆ ಮಳೆ ಬರುವ ಸಮಯಕ್ಕೆ ಸುಡುವ ಕಾಫಿ ಜೊತೆಗೆ ಬಿಸಿ ಬೋಂಡಾ ತಿನ್ನುವ ಮನಸ್ಸಾದರೆ ಅಚ್ಚರಿಯಿಲ್ಲ. ಆದರೆ ಈ ಹೊತ್ತಿಗೆ ಬಾಯಿ ಸುಟ್ಟುಕೊಳ್ಳುವ ಸಾಧ್ಯತೆಗಳೂ ಹೆಚ್ಚು! ಬಾಯಿ ಸುಡುವುದಕ್ಕೆ, ಬಜ್ಜಿ-ಬೋಂಡಾ ಆಗಬೇಕೆಂದಿಲ್ಲ, ಬಿಸಿಯಾದ ಅನ್ನ-ತಿಳಿ ಸಾರಾದರೂ ಸಾಕಾಗುತ್ತದೆ. ಇವೆಲ್ಲವೂ ವಾರದೊಳಗೆ ಕಡಿಮೆ ಆಗುವುದು ಹೌದಾದರೂ, ಸುಟ್ಟ ಉರಿ ತಡೆಯುವುದಕ್ಕೆ, ನೋವಿನ ಉಪಶಮನಕ್ಕೆ ಏನನ್ನಾದರೂ ತ್ವರಿತವಾಗಿ ಮಾಡಬಹುದೇ? ಇಲ್ಲಿದೆ ಪರಿಹಾರ.

VISTARANEWS.COM


on

Tea vs Coffee
Koo

ಸಂಜೆ ಐದರ ಮಳೆಯ ಹೊತ್ತಿಗೆ (Health Tips) ಬಿಸಿಯಾಗಿ ಕಾಫಿ/ ಚಹಾ ಹೀರಬೇಕೆಂಬ ಮನಸ್ಸಾಗಿದೆ. ನಿಮಗೆ ಬೇಕೆಂದಲ್ಲ, ಮಳೆಗೆ ಬೇಕೆಂದು ಕಾಫಿ ಕುಡಿಯುವಾಗ ಬಿಸಿಯಾಗಿಲ್ಲದಿದ್ದರೆ ಹೇಗೆ? ಸುಡುವ ಕಾಫಿ ಹೀರುವಾಗ ನಾಲಿಗೆ ಕೆಲವೊಮ್ಮೆ ʻಚುರ್‌…ʼ ಆಗುತ್ತದೆ. ಅದರಲ್ಲೂ ಕೊಂಚ ಸಿಹಿ ಹೆಚ್ಚಿರುವ ಮತ್ತು ಮಂದವಾಗಿರುವ ಬಿಸಿ ಪಾನೀಯಗಳು ಮರೆಯದೇ ನಾಲಿಗೆ ಸುಡುತ್ತವೆ! ಉದಾ, ಖೀರು, ಗಂಜಿ ತಿಳಿಗಳೆಲ್ಲ ಇದೇ ಸಾಲಿಗೆ ಸೇರಿದವು. ಒಮ್ಮೆ ಇವುಗಳಿಂದ ಬಾಯಿ, ನಾಲಿಗೆ ಅಥವಾ ಗಂಟಲನ್ನು ಸುಟ್ಟುಕೊಂಡರೆ, ಸರಿಯಾಗುವುದಕ್ಕೆ ನಾಲ್ಕಾರು ದಿನಗಳು ಬೇಕು. ಅದಷ್ಟೂ ದಿನ ಬಾಯಿ ದೊರಗಾಗಿ, ಉರಿಯುವುದು ಮಾತ್ರವಲ್ಲ, ಬೊಬ್ಬೆಗಳೂ ಎದ್ದು, ತಿನ್ನುವ ಇತರ ವಸ್ತುಗಳ ರುಚಿಯೂ ತಿಳಿಯದೆ ಒದ್ದಾಡಬೇಕಾಗುತ್ತದೆ. ಇವೆಲ್ಲವೂ ವಾರದೊಳಗೆ ಕಡಿಮೆ ಆಗುವುದು ಹೌದಾದರೂ, ಸುಟ್ಟ ಉರಿ ತಡೆಯುವುದಕ್ಕೆ, ನೋವಿನ ಉಪಶಮನಕ್ಕೆ ಏನನ್ನಾದರೂ ತ್ವರಿತವಾಗಿ ಮಾಡಬಹುದೇ?

Ice Cubes Stacked Isolated
aloe vera

ಐಸ್‌ ಹಾಕಿ

ಖಂಡಿತವಾಗಿ! ಬಾಯಿ ಸುಟ್ಟ ನೋವಿನ ಉಪಶಮನಕ್ಕೆ ಹಲವು ರೀತಿಯ ಮನೆಮದ್ದುಗಳನ್ನು ಪ್ರಯೋಗಿಸಬಹುದು. ಇವು ಆ ಹೊತ್ತಿನ ನೋವನ್ನು ಕಡಿಮೆ ಮಾಡುವುದರ ಜೊತೆಗೆ, ಬೇಗನೆ ಗುಣ ಆಗುವುದಕ್ಕೂ ನೆರವಾಗುತ್ತವೆ. ಬಿಸಿ ಆಹಾರ ಬಾಯಿ ಸುಡುತ್ತಿದ್ದಂತೆಯೇ ತಕ್ಷಣವೇ ತಣ್ಣೀರಿನಿಂದ ಬಾಯಿ ಮುಕ್ಕಳಿಸಿ, ಫ್ರಿಜ್‌ನಲ್ಲಿ ಐಸ್‌ ಇದ್ದರೆ, ಅದನ್ನೂ ಬಾಯಿಗೆ ಹಾಕಿಕೊಳ್ಳಬಹುದು. ಐಸ್‌ ಹಾಕುವುದರಿಂದ ಸುಡುತ್ತಾ ಹೋಗುವುದನ್ನು ತಕ್ಷಣ ನಿಲ್ಲಿಸಬಹುದು. ಜೊತೆಗೆ, ಕೆಂಪಾಗಿ ಊತ ಬರುವುದನ್ನೂ ತಡೆಯಬಹುದು.

ಮೊಸರು, ಹಾಲು

ತಂಪಾದ ಹಾಲನ್ನು ಬಾಯಿಗೆ ತುಂಬಿಸಿಕೊಳ್ಳುವುದು ಒಳ್ಳೆಯ ಉಪಾಯ. ಕೊಂಚವೂ ಹುಳಿಯಿಲ್ಲದ ಮೊಸರು ಇದ್ದರೆ ಅದೂ ಸಹ ಸುಟ್ಟ ಉರಿಯನ್ನು ತಂಪಾಗಿಸುತ್ತದೆ. ಮಾತ್ರವಲ್ಲ, ಈ ಡೇರಿ ಉತ್ಪನ್ನಗಳು ಸುಟ್ಟ ಗಾಯಗ ಸುತ್ತಲೂ ರಕ್ಷಣಾ ಕವಚವೊಂದನ್ನು ನಿರ್ಮಿಸಿ, ಈ ಗಾಯ ಗುಣವಾಗುವವರೆಗೆ ಆರೈಕೆ ಮಾಡುತ್ತವೆ.

honey
aloe vera

ಜೇನುತುಪ್ಪ

ಇದರಲ್ಲಿರುವ ನೈಸರ್ಗಿಕ ಉತ್ಕರ್ಷಣ ನಿರೋಧಕಗಳು ಸುಟ್ಟ ಜಾಗದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತವೆ. ಅಲ್ಪ ಪ್ರಮಾಣದ ಜೇನು ತುಪ್ಪವನ್ನು ನೇರವಾಗಿ ಬಾಯೊಳಗಿನ ಸುಟ್ಟ ಭಾಗಕ್ಕೆ ಲೇಪಿಸಲು ಸಾಧ್ಯವೇ ಎಂಬುದನ್ನು ಪ್ರಯತ್ನಿಸಬಹುದು. ಬ್ಯಾಕ್ಟೀರಿಯ ವಿರೋಧಿ ಗುಣಗಳೂ ಜೇನುತುಪ್ಪಕ್ಕೆ ಇರುವುದರಿಂದ, ಸುಟ್ಟ ಜಾಗಕ್ಕೆ ಸೋಂಕಾಗದಂತೆ ತಡೆಯುತ್ತದೆ.

aloe vera

ಲೋಳೆಸರ

ಇದಕ್ಕೆ ಅಂಗಡಿಯಿಂದ ತಂದ ಅಲೋವೇರಾ ಜೆಲ್‌ ಬದಲು, ನಿಜವಾದ ಲೋಳೆಸರದ ಜೆಲ್‌ ಲೇಪಿಸುವುದು ಸೂಕ್ತ. ಅಂಗಡಿಯ ಜೆಲ್‌ಗಳಲ್ಲಿ ಪ್ರಿಸರ್ವೇಟಿವ್‌ ಅಥವಾ ಇನ್ನಾವುದಾದರೂ ರಾಸಾಯನಿಕಗಳು ಸೇರಿರಬಹುದು. ಇದರಿಂದ ಸುಟ್ಟ ಗಾಯಗಳಿಗೆ ಉಪಕಾರಕ್ಕಿಂತ ಹಾನಿಯಾಗುವ ಸಾಧ್ಯತೆಯೇ ಹೆಚ್ಚು. ಕೇವಲ ನಾಲಿಗೆ ಸುಟ್ಟಿದ್ದಕ್ಕೆಂದಲ್ಲ, ಯಾವುದೇ ಸುಟ್ಟ ಗಾಯಕ್ಕೆ ನಿಜವಾದ ಲೋಳೆಸರದ ಜೆಲ್‌ ಅನುಕೂಲವಾದೀತು. ಉರಿ ಶಮನ ಮಾಡಿ, ಬೇಗನೇ ಗುಣವಾಗಲು ನೆರವಾಗುತ್ತವೆ.

ಉಪ್ಪು ನೀರಿನ ಗಾರ್ಗಲ್‌

ಮೊದಲಿಗೆ ಹಾಲಿಗೆ ಕೊಂಚ ಅರಿಶಿನ ಪುಡಿಯನ್ನು ಸೇರಿಸಿ ಪೇಸ್ಟ್‌ ಮಾಡಿ. ಇದನ್ನು ಸುಟ್ಟ ಭಾಗಕ್ಕೆ ನೇರವಾಗಿ ಲೇಪಿಸಿ. ಉರಿ ಕಡಿಮೆಯಾದ ನಂತರ ಬೆಚ್ಚಗಿನ ನೀರಿಗೆ ಉಪ್ಪ ಹಾಕಿ ಚೆನ್ನಾಗಿ ಬಾಯಿ ಮುಕ್ಕಳಿಸಿ ಅಥವಾ ಗಾರ್ಗಲ್‌ ಮಾಡಿ. ಇದರಿಂದ ಉರಿ ಕಡಿಮೆಯಾಗಿ, ಊತವೂ ತಗ್ಗುತ್ತದೆ. ಇದನ್ನು ದಿನಕ್ಕೆ ಮೂರ್ನಾಲ್ಕು ಬಾರಿ ಮಾಡಬಹುದು.

ಇದನ್ನೂ ಓದಿ: Intermittent Fasting: ಇಂಟರ್‌ ಮಿಟೆಂಟ್‌ ಫಾಸ್ಟಿಂಗ್‌ ಡಯಟ್‌ ಮಾಡುವವರೇ ಹುಷಾರ್! ಈ ಸಂಗತಿ ಗೊತ್ತಿರಲಿ

ಇವು ಬೇಡ

ನಾಲಿಗೆ/ ಬಾಯಿ/ ಗಂಟಲು ಸುಟ್ಟ ಉರಿ ಕಡಿಮೆಯಾಗುವವರೆಗೂ ತೀಕ್ಷ್ಣವಾದ ರುಚಿಗಳನ್ನು ದೂರ ಇಡಿ. ಇಷ್ಟಾದ ಮೇಲೆ ಇನ್ನೂ ಸುಡು ಬಿಸಿಯನ್ನೇ ಸೇವಿಸುತ್ತಿದ್ದರೆ ಕಷ್ಟ! ತೀವ್ರ ಹುಳಿ ಅಥವಾ ಖಾರದ ಆಹಾರಗಳು ಸುಟ್ಟ ಭಾಗದಲ್ಲಿ ಉರಿಯನ್ನು ಬಡಿದೆಬ್ಬಿಸುತ್ತವೆ. ಈ ವಿಷಯದಲ್ಲಿ ಉಪ್ಪೇನೂ ಕಡಿಮೆಯಿಲ್ಲ, ಹಾಗಾಗಿ ನಿಮ್ಮ ಗಾಯಕ್ಕೆ ನೀವೇ ಉಪ್ಪು ಸವರಿಕೊಳ್ಳಬೇಡಿ. ಸುಟ್ಟ ಗಾಯ ಗುಣವಾಗುವುದನ್ನು ಆಲ್ಕೋಹಾಲ್‌ ಮುಂದೂಡುತ್ತದೆ. ಜೊತೆಗೆನಾಲಿಗೆಯ ಕಿರಿಕಿರಿಯನ್ನು ಹೆಚ್ಚಿಸುತ್ತದೆ.

Continue Reading

ಬಳ್ಳಾರಿ

Ballari News: ಬಳ್ಳಾರಿಯಲ್ಲಿ ಉಚಿತ ಮೊಣಕಾಲಿನ ಕೀಲು ನೋವು ಚಿಕಿತ್ಸಾ ಶಿಬಿರ

Ballari News: ಬಳ್ಳಾರಿಯ ಶ್ರೀ ಗುರು ಪುಷ್ಕರ ಸೇವಾ ಸಮಿತಿಯ ವತಿಯಿಂದ ಬಳ್ಳಾರಿ ನಗರದಲ್ಲಿ ಉಚಿತ ಮೊಣಕಾಲಿನ ಕೀಲು ನೋವು ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ತಾರಾನಾಥ ಸರ್ಕಾರಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಿದ್ದ ಈ ಶಿಬಿರದಲ್ಲಿ ಮೊಣಕಾಲು ಕೀಲು ಮತ್ತು ಇತರೆ ಕಾಯಿಲೆಗಳನ್ನು ಪರೀಕ್ಷಿಸಲಾಯಿತು.

VISTARANEWS.COM


on

Ballari News
Koo

ಬಳ್ಳಾರಿ: ಬಳ್ಳಾರಿಯ ಶ್ರೀ ಗುರು ಪುಷ್ಕರ ಸೇವಾ ಸಮಿತಿಯ ವತಿಯಿಂದ ಬಳ್ಳಾರಿ ನಗರದಲ್ಲಿ ಉಚಿತ ಮೊಣಕಾಲಿನ ಕೀಲು ನೋವು ಚಿಕಿತ್ಸಾ ಶಿಬಿರವನ್ನು (Ballari News) ಹಮ್ಮಿಕೊಳ್ಳಲಾಗಿತ್ತು.

ಇದನ್ನೂ ಓದಿ: Golden Star Ganesh: ಗಣೇಶ್​​ಗೆ ಶುರುವಾಗಿದೆ ಗೋಲ್ಡನ್ ಟೈಮ್:  ಫ್ಯಾನ್ಸ್ ಶೋ ಹೌಸ್ ಫುಲ್!

ತಾರಾನಾಥ ಸರ್ಕಾರಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಿದ್ದ ಈ ಶಿಬಿರದಲ್ಲಿ ಮೊಣಕಾಲಿನ ಕೀಲು ನೋವು ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ನಡೆಯಿತು.

ಶಿಬಿರದಲ್ಲಿ 350ಕ್ಕೂ ಹೆಚ್ಚು ರೋಗಿಗಳಿಗೆ ತಪಾಸಣೆ ನಡೆಸಲಾಯಿತು.

ಇದನ್ನೂ ಓದಿ: Gold Rate Today: ಚಿನ್ನದ ಬೆಲೆಯಲ್ಲಿ ತುಸು ಇಳಿಕೆ; ಇಂದಿನ ಬೆಲೆ ಚೆಕ್‌ ಮಾಡಿ

ಈ ಸಂದರ್ಭದಲ್ಲಿ ತಾರಾನಾಥ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ರಾಜಶೇಖರ ಗಿಣಗೇರ, ಡಾ.ಕೊಟ್ರೇಶ್‌, ಡಾ. ತಮೀಮ್, ಡಾ. ರಾಮಲಿಂಗ ಹೂಗಾರ, ಡಾ.ತಾಟ್ಲೆ, ಡಾ. ಲಲಿತಾ, ಡಾ. ಸುಷ್ಮಿತಾ ಹಾಗೂ ಎಸ್.ಎಸ್. ಕೇವಲ್ಚಂದ್‌ ವಿನಾಕಿಯಾ, ಶ್ರೀ ಗುರು ಪುಷ್ಕರ ಸೇವಾ ಸಮಿತಿಯ ಅಧ್ಯಕ್ಷ ಅಶೋಕ್‌ ಭಂಡಾರಿ, ದೀಪೇಶ್ ಪರಾಖ್ ಮತ್ತು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Continue Reading

ಆರೋಗ್ಯ

Health Tips: ಅನೀಮಿಯ ತಡೆಯುವುದಕ್ಕೆ ದಿನಕ್ಕೆಷ್ಟು ಕಬ್ಬಿಣದಂಶ ಬೇಕು? ಇದನ್ನು ಆಹಾರದಿಂದ ಪಡೆಯುವುದು ಹೇಗೆ?

Health Tips: ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವಿಶ್ವದಲ್ಲಿ 5 ವರ್ಷದೊಳಗಿನ ಮಕ್ಕಳಲ್ಲಿ ಸುಮಾರು ಶೇ. 40ರಷ್ಟು ಮಂದಿ, ಶೇ. 37ರಷ್ಟು ಗರ್ಭಿಣಿಯರು, 15-50 ವರ್ಷ ವಯೋಮಾನದ ಶೇ. 30 ಮಹಿಳೆಯರು ರಕ್ತಹೀನತೆಯಿಂದ ಬಳಸುತ್ತಿದ್ದಾರೆ. ಅನೀಮಿಯ ಕಾಡದಂತೆ ಮಾಡುವುದಕ್ಕೆ ದಿನಕ್ಕೆ ಎಷ್ಟು ಕಬ್ಬಿಣದಂಶ ದೇಹ ಸೇರಬೇಕು ಎಂಬುದು ಗೊತ್ತೇ?

VISTARANEWS.COM


on

health tips
Koo

ರಕ್ತಹೀನತೆಯ ಬಗ್ಗೆ (Health Tips) ಒಂದಿಷ್ಟು ಕೇಳಿರಬಹುದು. ಹಿಮೋಗ್ಲೋಬಿನ್‌ ಕಡಿಮೆ ಇದೆಯೆಂದು ಇಂಜೆಕ್ಷನ್‌ ಅಥವಾ ಮಾತ್ರೆ ತೆಗೆದುಕೊಳ್ಳುವವರನ್ನೂ ಕಂಡಿರಬಹುದು. ಸೊಪ್ಪು, ಬೀಟ್‌ರೂಟ್‌ ಮುಂತಾದ ಕೆಲವು ಆಹಾರಗಳಲ್ಲಿ ಕಬ್ಬಿಣದಂಶ ಹೇರಳವಾಗಿದೆ ಎಂಬುದನ್ನು ತಿಳಿದಿರಲೂಬಹುದು. ಆದರೆ ಅನೀಮಿಯ ಅಥವಾ ರಕ್ತಹೀನತೆ ಕಾಡದಂತೆ ಮಾಡುವುದಕ್ಕೆ ದಿನಕ್ಕೆ ಎಷ್ಟು ಕಬ್ಬಿಣದಂಶ ದೇಹ ಸೇರಬೇಕು ಎಂಬುದು ಗೊತ್ತೇ? ವೈದ್ಯರು ನೀಡಿದ ಪೂರಕಗಳನ್ನು ಸೇವಿಸುವುದು ಬೇರೆ ವಿಷಯ. ಅದನ್ನೇನು ಜೀವನಪೂರ್ತಿ ತಿನ್ನುವುದಕ್ಕೆ ಸಾಧ್ಯವಿಲ್ಲವಲ್ಲ. ಬದುಕಿಡೀ ತಿನ್ನುವುದು ಕಬ್ಬಿಣದಂಶ ಇರುವ ಆಹಾರಗಳನ್ನೇ ತಾನೇ? ಈ ಅಂಶವು ಕಡಿಮೆಯಾಗದಂತೆ ನಿಭಾಯಿಸುವುದು ಹೇಗೆ?

Anemia

ಕಬ್ಬಿಣ ನಮಗೇಕೆ ಬೇಕು?

ನಮಗೆ ಇದು ಅಗತ್ಯವಾದ ಖನಿಜ ಎಂಬುದು ನಿಜ, ಆದರೆ ಯಾಕೆ? ನಮ್ಮ ರಕ್ತದಲ್ಲಿ ಹಿಮೋಗ್ಲೋಬಿನ್‌ ಅಂಶದ ಉತ್ಪಾದನೆಗೆ ಇದು ಅಗತ್ಯ. ದೇಹದೆಲ್ಲೆಡೆ ಆಮ್ಲಜನಕವನ್ನು ಸಾಗಾಣಿಕೆ ಮಾಡಲು ಬೇಕಾಗುವ ಕೆಂಪು ರಕ್ತ ಕಣಗಳಲ್ಲಿರುವ ಒಂದು ವಿಶಿಷ್ಟ ಪ್ರೊಟೀನ್‌ ಈ ಹಿಮೋಗ್ಲೋಬಿನ್‌. ಆಹಾರವನ್ನು ಶಕ್ತಿಯಾಗಿ ಮಾರ್ಪಾಡು ಮಾಡುವಲ್ಲಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ, ಮೆದುಳಿನ ಕ್ಷಮತೆಗೆ, ಸ್ನಾಯುಗಳ ಬಲವರ್ಧನೆಗೆ… ಹೀಗೆ ಹಲವು ಕೆಲಸಗಳಿಗೆ ನಮಗೆ ಕಬ್ಬಿಣದಂಶ ಆವಶ್ಯಕ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಿಶ್ವದಲ್ಲಿ 5 ವರ್ಷದೊಳಗಿನ ಮಕ್ಕಳಲ್ಲಿ ಸುಮಾರು ಶೇ. 40ರಷ್ಟು ಮಂದಿ, ಶೇ. 37ರಷ್ಟು ಗರ್ಭಿಣಿ ಮಹಿಳೆಯರು, 15-50 ವರ್ಷ ವಯೋಮಾನದ ಶೇ. 30 ಮಹಿಳೆಯರು ರಕ್ತಹೀನತೆಯಿಂದ ಬಳಸುತ್ತಿದ್ದಾರೆ. ಇದಕ್ಕೆ ಹೋಲಿಸಿದರೆ ಪುರುಷರಲ್ಲಿ ರಕ್ತಹೀನತೆಯ ಪ್ರಮಾಣ ಕಡಿಮೆ.

ಎಷ್ಟು ಬೇಕು?

ಇವೆಲ್ಲ ಸೂಕ್ಷ್ಮ ಪೋಷಕಾಂಶಗಳಾದ್ದರಿಂದ ದಿನಕ್ಕೆ ಮಿಲಿಗ್ರಾಂಗಳ ಲೆಕ್ಕದಲ್ಲಿ ಸಾಕಾಗುತ್ತದೆ. ಆದರೆ ಅದೂ ಕೊರತೆಯಾಗಿ ಕಾಡುವುದಿದೆ. ಅದರಲ್ಲೂ ಮಾಂಸ ಮತ್ತು ಮೀನು ತಿನ್ನದವರಲ್ಲಿ ಈ ಕೊರತೆ ಇನ್ನೂ ಅಧಿಕ. ಸಸ್ಯಾದಿಗಳಲ್ಲಿರುವ ಕೆಲವು ರೀತಿಯ ಖನಿಜಗಳನ್ನು ಹೀರಿಕೊಳ್ಳಲು ದೇಹಕ್ಕೆ ಕಷ್ಟವಾಗುತ್ತದೆ ಎನ್ನುತ್ತಾರೆ ತಜ್ಞರು. ಅವರವರ ಲಿಂಗ ಮತ್ತು ವಯಸ್ಸಿನ ಮೇಲೆ ದೇಹಕ್ಕೆ ಬೇಕಾಗುವ ಕಬ್ಬಿಣದ ಅಂಶ ವ್ಯತ್ಯಾಸವಾಗುತ್ತದೆ. 19-50ರ ವಯೋಮಾನದ ಮಹಿಳೆಯರಿಗೆ ದಿನಕ್ಕೆ 18 ಮಿಲಿಗ್ರಾಂ, 51 ವರ್ಷಗಳ ನಂತರದ ಮಹಿಳೆಯರಿಗೆ ದಿನಕ್ಕೆ 8 ಮಿಲಿಗ್ರಾಂ, 19 ವರ್ಷಗಳ ನಂತರದ ಪುರುಷರಿಗೆ ದಿನಕ್ಕೆ 8 ಮಿಲಿಗ್ರಾಂ, ಗರ್ಭಿಣಿಯರಿಗೆ ದಿನಕ್ಕೆ 27 ಮಿಲಿಗ್ರಾಂ ಕಬ್ಬಿಣದಂಶ ಬೇಕಾಗುತ್ತದೆ. ಇವನ್ನೆಲ್ಲ ಯಾವ ಆಹಾರಗಳಿಂದ ಪಡೆಯಬಹುದು?

iron food

ಕಬ್ಬಿಣಯುಕ್ತ ಆಹಾರಗಳು

ಆಹಾರದಲ್ಲಿ ಕಬ್ಬಿಣದಂಶ ಹೆಚ್ಚಿದ್ದರೆ, ರಕ್ತಹೀನತೆಯನ್ನು ನಿವಾರಿಸಲು ನೆರವಾಗುತ್ತದೆ. ಮೀನು, ಕೆಂಪು ಮಾಂಸ, ಚಿಕನ್‌, ಕಾಳುಗಳು, ಬೇಳೆಗಳು, ತೋಫು, ಹಸಿರು ಸೊಪ್ಪು ಮತ್ತು ತರಕಾರಿಗಳು, ಬೀಟ್‌ರೂಟ್‌, ದಾಳಿಂಬೆ, ಬ್ರೊಕೊಲಿ, ಒಣದ್ರಾಕ್ಷಿ, ಎಪ್ರಿಕಾಟ್‌ನಂಥವು ಆಹಾರದಲ್ಲಿರಲಿ.

Foods High in vitamin C Vitamin C Foods

ವಿಟಮಿನ್‌ ಸಿ

ಕಬ್ಬಿಣಯುಕ್ತ ಆಹಾರವನ್ನೇನೋ ತಿನ್ನುತ್ತೀರಿ. ಇದು ಸರಿಯಾಗಿ ಹೀರಲ್ಪಡುವುದಕ್ಕೆ ವಿಟಮಿನ್‌ ಸಿ ಅಂಶ ಅಗತ್ಯ. ಹಾಗಾಗಿ ಸಿಟ್ರಸ್‌ ಹಣ್ಣುಗಳಾದ ಕಿತ್ತಳೆ, ದ್ರಾಕ್ಷಿ, ನಿಂಬೆಯಂಥವು, ಎಲ್ಲಾ ರೀತಿಯ ಬೆರ್ರಿಗಳು, ಕಿವಿ ಹಣ್ಣು, ಕ್ಯಾಪ್ಸಿಕಂ, ಟೊಮೇಟೊ ಇತ್ಯಾದಿಗಳು ದೈನಂದಿನ ಆಹಾರದಲ್ಲಿ ಬೇಕು. ಜೊತೆಗೆ, ಹಿಮೋಗ್ಲೋಬಿನ್‌ ಉತ್ಪಾದನೆಯಲ್ಲಿ ವಿಟಮಿನ್‌ ಬಿ೯ ಅಥವಾ ಫೋಲೇಟ್‌ ಪ್ರಧಾನ ಕೆಲಸ ಮಾಡುತ್ತದೆ. ಪಾಲಕ್‌ ಸೊಪ್ಪು, ಬ್ರೊಕೊಲಿ, ಅವಕಾಡೊ ಅಥವಾ ಬೆಣ್ಣೆ ಹಣ್ಣು, ಕಿತ್ತಳೆ ಹಣ್ಣಿನಂಥವು ಅಗತ್ಯವಾಗಿ ಬೇಕು.

ಇದನ್ನೂ ಓದಿ: Whiten Your Yellow Teeth: ಈ ಆಹಾರಗಳು ನಿಮ್ಮ ಹಲ್ಲುಗಳ ಬಣ್ಣಗೆಡಿಸುತ್ತವೆ ಎನ್ನುವುದು ಗೊತ್ತಿದೆಯೆ?

ಇವು ಬೇಡ

ಕೆಲವು ಆಹಾರಗಳು ಕಬ್ಬಿಣದಂಶವನ್ನು ದೇಹ ಹೀರಿಕೊಳ್ಳದಂತೆ ತಡೆಯುತ್ತವೆ. ಉದಾ, ಕಾಫಿ, ಚಹಾದಂಥ ಕೆಫೇನ್‌ಯುಕ್ತ ಪೇಯಗಳು, ಕ್ಯಾಲ್ಶಿಯಂ ಸಾಂದ್ರವಾಗಿರುವ ಆಹಾರಗಳು, ನಾರುಭರಿತ ತಿನಿಸುಗಳನ್ನು ಊಟದ ಸಮಯದಲ್ಲಿ ದೂರ ಮಾಡಿ. ಇದರಿಂದ ಕಬ್ಬಿಣದಂಶ ಚೆನ್ನಾಗಿ ಹೀರಲ್ಪಡುತ್ತದೆ. ಆಲ್ಕೋಹಾಲ್‌ ಮತ್ತು ಜಡ ಜೀವನಗಳೆರಡೂ ಹಿಮೋಗ್ಲೋಬಿನ್ನ ಶತ್ರುಗಳು. ಆಲ್ಕೋಹಾಲ್‌ ಸೇವನೆಯಿಂದ ಕಬ್ಬಿಣದಂಶವನ್ನು ದೇಹ ಹೀರಿಕೊಳ್ಳುವುದಕ್ಕೆ ಅಡಚಣೆ ಉಂಟಾಗುತ್ತದೆ.

ನೀರು, ನಿದ್ದೆ

ದಿನಕ್ಕೆ ಎಂಟು ತಾಸು ನಿದ್ದೆ ಮತ್ತು ಎಂಟು ಗ್ಲಾಸ್‌ ನೀರು- ಇದನ್ನು ದಿನದ ಮಂತ್ರವಾಗಿಸಿಕೊಳ್ಳಿ. ದೇಹಕ್ಕೆ ಸಾಕಷ್ಟು ವಿಶ್ರಾಂತಿ ದೊರೆಯದಿದ್ದರೆ ಕೆಂಪುರಕ್ತಕಣಗಳ ಉತ್ಪಾದನೆಯಲ್ಲಿ ತೊಡಕಾಗುತ್ತದೆ. ಇದು ಹಿಮೋಗ್ಲೋಬಿನ್‌ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ನೀರಿನ ಕೊರತೆಯಾದರೆ ರಕ್ತದ ಸಾಂದ್ರತೆ ಮತ್ತು ಪ್ರಮಾಣದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಹಾಗಾಗಿ ಈ ಬಗ್ಗೆ ಗಮನ ಬೇಕು.

Continue Reading

ಆರೋಗ್ಯ

World Organ Donation Day: ಇಂದು ವಿಶ್ವ ಅಂಗಾಂಗದಾನ ದಿನ; ಯಾರದ್ದೋ ಬದುಕಿಗೆ ಭರವಸೆಯಾಗೋಣ! ನೋಂದಣಿ ಹೇಗೆ?

World Organ Donation Day: ಇಂದು ವಿಶ್ವ ಅಂಗದಾನ ದಿನ. ಅಂಗಗಳ ದಾನ ಬೇಡುವುದಕ್ಕೆ ಬಹಳಷ್ಟು ಕಾರಣಗಳು ಇರಬಹುದು. ಕಣ್ಣು, ಯಕೃತ್‌, ಮೂತ್ರಪಿಂಡ, ಹೃದಯ, ಪುಪ್ಪುಸ ಮುಂತಾದ ಹಲವು ಅಂಗಗಳನ್ನು ಕಸಿ ಮಾಡುವುದಕ್ಕೆ ವೈದ್ಯ ವಿಜ್ಞಾನಕ್ಕೆ ಇಂದು ಸಾಧ್ಯವಿದೆ. ಆದರೆ ದಾನಿಗಳ ಕೊರತೆ ಕಾಡುತ್ತದೆ. ಈ ಕುರಿತ ಲೇಖನ ಇಲ್ಲಿದೆ.

VISTARANEWS.COM


on

World Organ Donation Day
Koo

ಇಂದು ವಿಶ್ವ ಅಂಗಾಂಗ (World Organ Donation Day) ದಾನ ದಿನ. ನಮ್ಮೊಂದಿಗೇ ನಮ್ಮ ಅಮೂಲ್ಯ ಅಂಗಾಂಗಗಳು ಮಣ್ಣುಗೂಡಬಾರದೆಂಬ ಜಾಗೃತಿಯನ್ನು ಎಲ್ಲರಲ್ಲಿ ಮೂಡಿಸುವುದು ಈ ದಿನದ ಉದ್ದೇಶ. ನಮ್ಮ ಬುದಕಿನ ನಂತರ, ಅಗತ್ಯ ಇರುವವರಿಗೆ ಅಂಗಾಂಗಳನ್ನು ದಾನ ಮಾಡಲು ನಾವು ಬದುಕಿದ್ದಾಗಲೇ ನಿರ್ಧಾರಗಳನ್ನು ಮಾಡಬೇಕೆಂಬ ಸರಳ ಸತ್ಯಗಳನ್ನು ಅರಿವಿಗೆ ತರಿಸುವುದಕ್ಕೆ ಇದನ್ನು ಆಚರಿಸಲಾಗುತ್ತದೆ. ಅಂದಹಾಗೆ, ಅಂಗಾಂಗ ದಾನವನ್ನು ಬದುಕಿರುವವರೂ ಮಾಡಬಹುದು. ಈ ಬಾರಿಯ ಘೋಷವಾಕ್ಯ: ಯಾರದ್ದೋ ನಗುವಿಗೆ ನೀವು ಇಂದೇ ಕಾರಣರಾಗಿ! ದಿನದಿಂದ ದಿನಕ್ಕೆ ಅಂಗಾಂಗ ದಾನ ಬಯಸುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ ದಾನಿಗಳ ಸಂಖ್ಯೆ ಕಡಿಮೆಯಿದೆ. ಜನ್ಮಜಾತ ಸಮಸ್ಯೆ ಇರುವವರು, ಬದುಕಿನ ಯಾವುದೋ ಹಂತದಲ್ಲಿ ಕ್ಯಾನ್ಸರ್‌ ಅಥವಾ ಇನ್ನಾವುದೋ ರೋಗಕ್ಕೆ ತುತ್ತಾಗಿ ಅಂಗಗಳ ಕಸಿ ಅಗತ್ಯವಾದವರು, ಅಪಘಾತಕ್ಕೆ ತುತ್ತಾಗಿ ಅಂಗಗಳನ್ನು ಕಳೆದುಕೊಂಡವರು- ಹೀಗೆ ಅಂಗಗಳ ದಾನ ಬೇಡುವುದಕ್ಕೆ ಬಹಳಷ್ಟು ಕಾರಣಗಳು ಇರಬಹುದು. ಕಣ್ಣು, ಯಕೃತ್‌, ಮೂತ್ರಪಿಂಡ, ಹೃದಯ, ಪುಪ್ಪುಸ ಮುಂತಾದ ಹಲವು ಅಂಗಗಳನ್ನು ಕಸಿ ಮಾಡುವುದಕ್ಕೆ ವೈದ್ಯ ವಿಜ್ಞಾನಕ್ಕೆ ಇಂದು ಸಾಧ್ಯವಿದೆ. ಆದರೆ ದಾನಿಗಳ ಕೊರತೆ ಕಾಡುತ್ತದೆ.

World Organ Donation Day 2024
World Organ Donation Day 2024

ಇತಿಹಾಸ

ಅಂಗದಾನದ ಮೂಲ 20ನೇ ಶತಮಾನದಲ್ಲಿದೆ. 1954ರಲ್ಲಿ ಮೊದಲ ಬಾರಿಗೆ ಮೂತ್ರಪಿಂಡದ ಕಸಿಯನ್ನು ಯಶಸ್ವಿಯಾಗಿ ಮಾಡಲಾಯಿತು. ರೊನಾಲ್ಡ್‌ ಲೀ ಹೆರಿಕ್‌ ಎಂಬಾತ ತನ್ನ ಅವಳಿ ಸೋದರನಿಗೆ ದಾನ ಮಾಡಿದ್ದ ಮೂತ್ರಪಿಂಡವನ್ನು ಡಾ. ಜೋಸೆಫ್‌ ಮರ್ರೆ ಯಶಸ್ವಿಯಾಗಿ ಕಸಿ ಮಾಡಿದ್ದರು. ಆನಂತರದಿಂದ ಅಂಗದಾನ ಮತ್ತು ಕಸಿಯ ಬಗ್ಗೆ ವೈದ್ಯ ವಿಜ್ಞಾನ ಬಹಳ ಮುಂದುವರಿದಿದ್ದು, 1994ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಹೃದಯವನ್ನೂ ಯಶಸ್ವಿಯಾಗಿ ಕಸಿ ಮಾಡಲಾಗಿತ್ತು. ಅಂಗದಾನದ ಬಗ್ಗೆ ಅರಿವು ಮೂಡಿಸಿ, ನಿಸ್ವಾರ್ಥ ಭಾವದಿಂದ ಅಂಗದಾನ ಮಾಡಿದವರ ಮತ್ತು ಅವರ ಕುಟುಂಬದವರ ಉಪಕಾರವನ್ನು ಸ್ಮರಿಸುವ ನಿಟ್ಟಿನಲ್ಲಿ ಆಗಸ್ಟ್‌ ತಿಂಗಳ ೧೩ನೇ ದಿನವನ್ನು ವಿಶ್ವದೆಲ್ಲೆಡೆ ಅಂಗದಾನ ದಿನವೆಂದು ಗುರುತಿಸಲಾಗಿದೆ.
ವಿಶ್ವದಲ್ಲಿ ಇಂದಿಗೂ ಲಕ್ಷಾಂತರ ಮಂದಿ ಅಂಗಾಂಗ ಕಸಿಗಾಗಿ ಕಾಯುತ್ತಿದ್ದಾರೆ. ಪ್ರತಿಯೊಬ್ಬ ದಾನಿಯೂ ತನ್ನ ನಂತರ ಮಾಡುವ ಅಂಗದಾನದಿಂದ 8 ಮಂದಿಯ ಜೀವ ಉಳಿಸಿ, 75 ಜನರ ಬದುಕನ್ನು ಹಸನು ಮಾಡಬಹುದು. ಹಾಗಾಗಿ ಈ ಜೀವ ಉಳಿಸುವ ಕ್ರಿಯೆಯಲ್ಲಿ ಪಾಲ್ಗೊಳ್ಳಿ, ನಿಮ್ಮ ನಂತರ ಇತರರ ಬದುಕನ್ನು ಸುಂದರವಾಗಿಸಿ ಎನ್ನುವ ಸಂದೇಶವನ್ನು ಸಾರಲಾಗುತ್ತಿದೆ.

ಇದನ್ನೂ ಓದಿ: Ghee For Health: ನಾವು ಆರೋಗ್ಯವಾಗಿರಲು ದಿನಕ್ಕೆಷ್ಟು ತುಪ್ಪ ತಿನ್ನಬೇಕು?

ಭಾರತದಲ್ಲಿ ಹೇಗೆ?

ಅಂಗ ದಾನ ಮಾಡಲು ಆಸಕ್ತಿ ಇರುವವರು ಇದಕ್ಕಾಗಿ ನೋಂದಣಿ ಮಾಡಿಸಿಕೊಳ್ಳುವುದು ಅಗತ್ಯ. ಇದನ್ನು ಭಾರತದಲ್ಲಿ ಹೇಗೆ ಮಾಡಬೇಕು? ನಮ್ಮ ದೇಶದಲ್ಲಿ ಇದಕ್ಕಾಗಿಯೇ ಪ್ರತ್ಯೇಕ ಕಾನೂನು ರೂಪಿಸಲಾಗಿದೆ. ಮಾನವ ಅಂಗ ಮತ್ತು ಅಂಗಾಂಶ ಕಸಿ ಕಾಯ್ದೆ 1994ರ ಅನ್ವಯ ಇದನ್ನು ನಿರ್ವಹಿಸಲಾಗುತ್ತದೆ. 18 ವರ್ಷಕ್ಕೆ ಮೇಲ್ಪಟ್ಟವರು- ಯಾವುದೇ ಲಿಂಗ, ವಯಸ್ಸು, ಜಾತಿ, ಮತ ಇತ್ಯಾದಿಗಳ ಭೇದವಿಲ್ಲದೆ, ಎಲ್ಲರೂ ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು. ಇದಕ್ಕಾಗಿ ಪ್ರತ್ಯೇಕ ವೆಬ್‌ಸೈಟ್‌ ಇದ್ದು, ಇದರ ಮೂಲಕ ನೋಂದಣಿ ಮಾಡಿಕೊಳ್ಳಬಹುದು.
https://www.organindia.org/pledge-to-be-an-organ-donor/
ಈ ವೆಬ್‌ಸೈಟ್‌ನಲ್ಲಿ ಅರ್ಜಿ ತುಂಬಿದ ಮೇಲೆ, ಸರಕಾರದಿಂದಲೇ ನೀಡಲಾದ ಪ್ರತ್ಯೇಕ ನೋಂದಣಿ ಸಂಖ್ಯೆ ಹೊಂದಿದ ʻಡೋನರ್‌ ಕಾರ್ಡ್‌ʼ ಲಭಿಸುತ್ತದೆ. ಈ ಬಗ್ಗೆ ಕುಟುಂಬದವರ ಜೊತೆ ಚರ್ಚಿಸಿದ ನಂತರವೇ ನಿರ್ಧಾರ ತೆಗೆದುಕೊಳ್ಳಬೇಕಾದ್ದು ದಾನಿಗಳ ಕರ್ತವ್ಯ. ಕಾರಣ, ದಾನಿಯ ದೇಹಾಂತ್ಯದ ನಂತರ ಅವರ ವಾರಸುದಾರರೇ ಈ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಒಂದೊಮ್ಮೆ ಅಂಗದಾನದ ನೋಂದಣಿ ಮಾಡಿದ್ದರೂ, ವಾರಸುದಾರರು ಪ್ರತಿಕೂಲವಾಗಿ ನಿರ್ಧರಿಸಿದರೆ, ಅದನ್ನು ನೆರವೇರಿಸಲು ಸಾಧ್ಯವಿಲ್ಲ. ಹಾಗಾಗಿ ಕುಟುಂಬದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅಗತ್ಯ.

Continue Reading
Advertisement
Vinesh Phogat
ಪ್ರಮುಖ ಸುದ್ದಿ45 mins ago

Vinesh Phogat: ವಿನೇಶ್‌ ಪೋಗಟ್‌ಗೆ ಭಾರೀ ಹಿನ್ನಡೆ; ಬೆಳ್ಳಿ ಪದಕ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

duleep trophy
ಕ್ರೀಡೆ1 hour ago

Duleep Trophy: ದುಲೀಪ್‌ ಟ್ರೋಫಿ ತಂಡ ಪ್ರಕಟ; ಪಟ್ಟಿಯಲ್ಲಿಲ್ಲ ಕೊಹ್ಲಿ, ಶರ್ಮಾ ಹೆಸರು- ನಾಲ್ಕು ಟೀಮ್‌ಗಳ ನಾಯಕರು ಇವರೇ!

Reliance Foundation
ದೇಶ1 hour ago

Reliance Foundation: ಡಿಗ್ರಿ, ಪಿಜಿ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌; ರಿಲಯನ್ಸ್ ಫೌಂಡೇಷನ್‌ನಿಂದ ವಿದ್ಯಾರ್ಥಿ ವೇತನ

Bank FD Rates
ಮನಿ-ಗೈಡ್2 hours ago

Bank FD Rates: ಪರಿಷ್ಕೃತ ಲೆಕ್ಕಾಚಾರದ ಪ್ರಕಾರ ಎಫ್‌ಡಿ ಬಡ್ಡಿ ದರ ಯಾವ ಬ್ಯಾಂಕ್‌ನಲ್ಲಿ ಎಷ್ಟಿದೆ?

Banking Recruitment 2024
ಉದ್ಯೋಗ2 hours ago

Banking Recruitment 2024: 11 ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 4455 ಹುದ್ದೆ; ಐಬಿಪಿಎಸ್‌ನಿಂದ ಮತ್ತೆ ನೇಮಕ; complete details

Necklace Mangalya Fashion
ಫ್ಯಾಷನ್2 hours ago

Necklace Mangalya Fashion: ವಿವಾಹಿತರ ಮಾಂಗಲ್ಯಕ್ಕೂ ಸಿಕ್ತು ವೈವಿಧ್ಯಮಯ ನೆಕ್ಲೇಸ್‌ ರೂಪ!

Arun Yogiraj
ಬೆಂಗಳೂರು2 hours ago

Arun Yogiraj: ʼವಿಶ್ವ ಶ್ರೇಷ್ಠ ಕನ್ನಡಿಗ 2024ʼ ಪ್ರಶಸ್ತಿಗೆ ಶ್ರೀರಾಮ ವಿಗ್ರಹದ ರೂವಾರಿ ಅರುಣ್ ಯೋಗಿರಾಜ್‌ ಆಯ್ಕೆ

Shira News
ತುಮಕೂರು2 hours ago

Shira News: ಉದ್ಯೋಗ ಕೌಶಲಕ್ಕಾಗಿ ಶಿರಾದಲ್ಲಿ ಸ್ಕಿಲ್ ಯುನಿವರ್ಸಿಟಿ ಸ್ಥಾಪನೆ; ಟಿ.ಬಿ. ಜಯಚಂದ್ರ

Murder Case
ಕರ್ನಾಟಕ2 hours ago

Murder Case: ಪತ್ನಿಯನ್ನು ಸ್ಮಶಾನಕ್ಕೆ ಕರೆದೊಯ್ದು ಕೊಲೆಗೈದ ಪತಿ!

Multivitamins
ಆರೋಗ್ಯ2 hours ago

Multivitamins: ನಮಗೆ ವಿಟಮಿನ್‌ ಪೂರಕಗಳು ಅಗತ್ಯವೆಂದು ತಿಳಿಯುವುದು ಹೇಗೆ?

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ6 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ6 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ6 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 week ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 week ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 week ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌