Peanut benefits | ಬಡವರ ಬಾದಾಮಿ ನೆಲಗಡಲೆಯನ್ನು ಚಳಿಗಾಲದಲ್ಲೇ ಏಕೆ ತಿನ್ನಬೇಕು!? - Vistara News

ಆರೋಗ್ಯ

Peanut benefits | ಬಡವರ ಬಾದಾಮಿ ನೆಲಗಡಲೆಯನ್ನು ಚಳಿಗಾಲದಲ್ಲೇ ಏಕೆ ತಿನ್ನಬೇಕು!?

VISTARANEWS.COM


on

peanut benefits
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬಡವರ ಬಾದಾಮಿ ನೆಲಗಡಲೆ ಚಳಿಗಾಲಕ್ಕೆ ಕರೆಕ್ಟಾಗಿ ಹಾಜರಿ ಹಾಕುತ್ತದೆ. ಇನ್ನೇನು ಅಕ್ಟೋಬರ್‌ ತಿಂಗಳು ಬರುತ್ತಿದ್ದಂತೆ ಬೀದಿಬದಿಗಳೆಲ್ಲ ನೆಲಗಡಲೆಯ ರಾಶಿಯಿಂದ ತುಂಬಿಕೊಳ್ಳುತ್ತದೆ. ರಸ್ತೆ ಬದಿ ಮಾರಾಟ ಮಾಡುವ ಸಣ್ಣಪುಟ್ಟ ವ್ಯಾಪಾರಿಗಳು ತಮ್ಮ ಬೇರೆ ವ್ಯಾಪಾರಗಳಿಗೆ ಟಾಟಾ ಹೇಳಿ ನೆಲಗಡಲೆ ರಾಶಿ ಹಾಕುತ್ತಾರೆ.ನೆಲಗಡಲೆಯಿಂದ ಏನೇನು ಲಭ್ಯವಿದೆಯೋ ಅವೆಲ್ಲ ಈ ಸಮಯದಲ್ಲಿ ಸಿಗಲಾರಂಭಿಸುತ್ತದೆ. ಬೆಲ್ಲ ಹಾಗೂ ನೆಲಗಡಲೆ ಹಾಕಿದ ಚಿಕ್ಕಿ, ಹುರಿದು ಖಾರ ಮಸಾಲೆ ಹಾಕಿದ ಗರಮಾಗರಂ ನೆಲಗಡಲೆ, ಹೀಗೆ ಎಲ್ಲಿ ನೋಡಿದರಲ್ಲಿ ನೆಲಗಡಲೆಯದೇ ಸಾಮ್ರಾಜ್ಯ. ಕಡಲೇಕಾಯಿ ಪರಿಷೆ ಹೆಸರಿನಲ್ಲಿ ನೆಲಗಡಲೆಯ ಜಾತ್ರೆಯೇ ನಡೆಯುತ್ತದೆ. ಹಾಗಾದರೆ ಈ ನೆಲಗಡಲೆಗೂ ಚಳಿಗಾಲಕ್ಕೂ ಏನು ಸಂಬಂಧ, ನಾವು ಚಳಿಗಾಲ ಬಂದೊಡನೆ ನೆಲಗಡಲೆಯನ್ನು ಹೀಗೆ ತಿನ್ನಲು ಶುರುಮಾಡುವುದಾದರೂ ಯಾಕೆ ಎಂದು ಯೋಚಿಸಿದದ್ದೀರಾ?

ಪ್ರಕೃತಿ ತನ್ನಲ್ಲಿ ಏನೆಲ್ಲಾ ರಹಸ್ಯಗಳನ್ನು ಹುದುಗಿಸಿಟ್ಟುಕೊಂಡಿದೆ ಆಯಾ ಕಾಲಕ್ಕೆ ಏನೆಲ್ಲ ತಿನ್ನಬೇಕು ಎಂಬುದನ್ನು ಅದುವೇ ನಮಗೆ ಹೇಳಿಕೊಡುತ್ತದೆ. ಚಳಿಗಾಲಕ್ಕೆ ಕರೆಕ್ಟಾಗಿ ಭೂಮಿಯಡಿಯಿಂದ ಬರುವ ಇದು ಚಳಿಗಾಲಕ್ಕೆಂದೇ ಹೇಳಿ ಮಾಡಿಸಿದ ಆಹಾರ. ಇದು ಚಳಿಗಾಲದಲ್ಲಿ ನಮ್ಮ ದೇಹವನ್ನು ಬೆಚ್ಚಗಿಡುವುದಲ್ಲದೆ, ಈ ಕಾಲದಲ್ಲಿ ದೇಹಕ್ಕೆ ಅಗತ್ಯ ಬೇಕಾಗಿರುವ ಪ್ರೊಟೀನನ್ನು ಪೂರೈಕೆ ಮಾಡುತ್ತದೆ. ಅಷ್ಟೇ ಅಲ್ಲದೆ, ಇದು ಒಳ್ಳೆಯ ಬ್ಯಾಕ್ಟೀರಿಯಾದ ಬೆಳವಣಿಗೆಗೆ ಸಹಾಯ ಮಾಡುವುದಲ್ಲದೆ, ಪಿತ್ತಕೋಶದ ಆರೋಗ್ಯಕ್ಕೆ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚು ಮಾಡುವಲ್ಲಿ ಸಹಾಯ ಮಾಡುತ್ತದೆ.

೧. ತೂಕ ಇಳಿಕೆಯಲ್ಲಿ ಸಹಾಯ ಮಾಡುತ್ತದೆ: ನೆಲಗಡಲೆ ತಿಂದರೆ ತೂಕ ಇಳಿಯುತ್ತದೆ ಎಂದರೆ ಯಾರೂ ನಂಬಲಾರರು. ಯಾಕೆಂದರೆ ಒಮ್ಮೆ ನೆಲಗಡಲೆ ಬಾಯಿಗಿಡಲು ಶುರು ಮಾಡಿದರೆ, ಮತ್ತೆ ಡಬ್ಬ ಖಾಲಿಯಾಗುವವರೆಗೂ ತಿನ್ನುತ್ತಲೇ ಇರಬೇಕೆನಿಸುವ ಚಟ ಹತ್ತಿಸುವ ನೆಲಗಡಲೆಯನ್ನು ತಿಂದು ತಿಂದು ಚಳಿಗಾಲದಲ್ಲಿ ಭರ್ಜರಿ ತೂಕ ಏರುವ ಸಂಭವವೇ ಹೆಚ್ಚಿರುತ್ತದೆ. ಹೀಗಾಗಿ ತೂಕ ಇಳಿಕೆ ಹೇಗೆ ಎಂದೆನಿಸುವುದು ಸಹಜ. ನೆಲಗಡಲೆಯಲ್ಲಿ ಪ್ರೊಟೀನ್‌ ಹಾಗೂ ನಾರಿನಂಶ ಅಧಿಕವಾಗಿರುವುದರಿಂದ ತೂಕ ಇಳಿಕೆಯಲ್ಲಿ ಇದು ಸಹಾಯ ಮಾಡುತ್ತದೆ ಎಂಬುದು ನಿಜವೇ ಆದರೂ, ಎಷ್ಟು ತಿನ್ನಬೇಕು ಎಂಬ ಬಗ್ಗೆ ನಿಗಾ ಇರಬೇಕು.

೨. ಮಧುಮೇಹಕ್ಕೆ ಒಳ್ಳೆಯದು: ಮಧುಮೇಹಿಗಳಿಗೆ ದೇಹಕ್ಕೆ ಮಗ್ನೀಶಿಯಂ ಬೇಕು. ನೆಲಗಡಲೆಯಲ್ಲಿ ಅದು ಹೇರಳವಾಗಿದೆ. ಕೊಬ್ಬು ಹಾಗೂ ಕಾರ್ಬೋಹೈಡ್ರೇಟನ್ನು ಕರಗಿಸುವಲ್ಲಿ ಮೆಗ್ನೀಶಿಯಂ ಪಾತ್ರವೂ ದೊಡ್ಡದು. ಹೀಗಾಗಿ ರಕ್ತದಲ್ಲಿ ಸಕ್ಕರೆಯ ಅಂಶ ಸಮತೋಲನ ಕಾಯ್ದುಕೊಳ್ಳುತ್ತದೆ.

peanut benefits

೩. ಹೃದಯಕ್ಕೆ ಒಳ್ಳೆಯದು: ನೆಲಗಡಲೆಯಲ್ಲಿ ಕೊಬ್ಬಿನಂಶ ಹೇರಳವಾಗಿರುವುದರಿಂದ ಹೃದಯಕ್ಕೆ ಅದು ಒಳ್ಳೆಯದಲ್ಲ ಎಂದು ಜನರು ಯೋಚಿಸುತ್ತಾರೆ. ಆದರೆ ನೆಲಗಡಲೆಯಲ್ಲಿರುವ ಆರೋಗ್ಯಕರ ಕೊಬ್ಬು ಆರೋಗ್ಯವಂತ ದೇಹಕ್ಕೆ ಅಗತ್ಯವಾಗಿ ಬೇಕಿದೆ. ಆದರೆ, ಹೆಚ್ಚು ತಿನ್ನಬಾರದು. ನೆಲಗಡಲೆಯಲ್ಲಿರುವ ಒಲೆಯಿಕ್‌ ಆಸಿಡ್‌, ಮೋನೋ ಸ್ಯಾಚುರೇಟೆಡ್‌ ಫ್ಯಾಟ್‌ ಹಾಗೂ ಪಾಲಿ ಅನ್‌ಸ್ಯಾಚುರೇಟೆಡ್‌ ಫ್ಯಾಟ್‌ ದೇಹದ ರಕ್ತದಲ್ಲಿ ಕೆಟ್ಟ ಕೊಲೆಸ್ಟೆರಾಲನ್ನು ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟೆರಾಲ್‌ ಅಂಶವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ | Health Tips For Diabetes | ಮಧುಮೇಹ ಬಾರದಿರಲು ಈ ಆರು ಆಹಾರಗಳನ್ನು ಬಿಟ್ಟುಬಿಡಿ!

೪. ಒತ್ತಡವನ್ನು ನಿವಾರಿಸುತ್ತದೆ: ನೆಲಗಡಲೆಯಲ್ಲಿರುವ ಅಮೈನೋ ಆಸಿಡ್‌ ಮಿದುಳಿನ ಆರೋಗ್ಯಕ್ಕೆ ಪೂರಕವಾಗಿರುವ ರಸಾಯನಿಕಗಳನ್ನು ಬಿಡುಗಡೆ ಮಾಡುವುದರಿಂದ ಒತ್ತಡ, ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳಿಂದ ಹೊರಬರಲು ಸಹಾಯ ಮಾಡುತ್ತದೆ.

೫. ಚರ್ಮ ಹಾಗೂ ಕೂದಲ ಆರೋಗ್ಯಕ್ಕೆ ಒಳ್ಳೆಯದು: ನೆಲಗಡಲೆಯಲ್ಲಿರುವ ಆರೋಗ್ಯಕರ ಒಳ್ಳೆಯ ಕೊಬ್ಬು ಹೊಳೆಯುವ ಚರ್ಮಕ್ಕೆ ಒಳ್ಳೆಯದು. ಇದರಲ್ಲಿ ವಿಟಮಿನ್‌ ಸಿ, ವಿಟಮಿನ್‌ ಇ ಹಾಗೂ ರಿಸ್ವರೆಟ್ರಾಲ್‌ಗಳು ಚರ್ಮ ಅವಧಿಗೆ ಮುನ್ನವೇ ಸುಕ್ಕಾಗುತ್ತಿದ್ದರೆ ಅದಕ್ಕೆ ಪರಿಹಾರ ನೀಡುತ್ತದೆ. ಇದು ಬಯೋಟಿನ್‌ ಉತ್ಪಾದನೆಗೆ ಉದ್ದೀಪನ ನೀಡುವ ಮೂಲಕ ಕೂದಲ ಬೆಳವಣಿಗೆಗೂ ಪೂರಕ.

ಈ ಎಲ್ಲ ಕಾರಣಗಳಿಗಾದರೂ ನೆಲಗಡಲೆಯನ್ನು ನಿತ್ಯದ ಆಹಾರದಲ್ಲಿ ಸೇರಿಸಬೇಕು. ಚಳಿಗಾಲದಲ್ಲಿ ನೆಲಗಡಲೆಯೊಂದು ಸೂಪರ್‌ ಫುಡ್‌! ಆದರೆ, ಇದನ್ನು ತಿನ್ನುವುದು ಚಟವಾಗದಂತೆ ಕಂಟ್ರೋಲ್‌ ಮಾಡುವ ರಿಮೋಟ್‌ ನಿಮ್ಮ ಕೈಯಲ್ಲೇ ಇಟ್ಟುಕೊಂಡಿರುವುದು ಒಳ್ಳೆಯದು. 

ಇದನ್ನೂ ಓದಿ | Health Care | ತಾವರೆ ಬೀಜ ಅಥವಾ ಮಖನಾ ತಿನ್ನಲು ರುಚಿ ಮಾತ್ರವೇ ಅಲ್ಲ, ಆರೋಗ್ಯಕ್ಕೂ ಒಳ್ಳೆಯದು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Fortis Hospital: ರಸ್ತೆ ಅಪಘಾತದಿಂದ ಕರುಳಿನಲ್ಲಿ ರಂಧ್ರ; 10 ವರ್ಷದ ಬಾಲಕನಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ

Fortis Hospital: ರಸ್ತೆ ಅಪಘಾತದಲ್ಲಿ ಕರುಳಿಗೆ ಹೊಡೆತ ಬಿದ್ದ ಕಾರಣ ಕರುಳಿನಲ್ಲಿ ರಂಧ್ರ ಉಂಟಾಗಿ ಗಂಭೀರವಾಗಿದ್ದ 10ವರ್ಷದ ಬಾಲಕನಿಗೆ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಆಸ್ಪತ್ರೆಯ ಶಿಶುವೈದ್ಯ ಮತ್ತು ತೀವ್ರ ನಿಗಾ ವಿಭಾಗದ ಸಲಹೆಗಾರ ಡಾ. ಯೋಗೇಶ್ ಕುಮಾರ್ ಗುಪ್ತಾ ಮತ್ತು ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ಸಲಹೆಗಾರ ಡಾ. ಶ್ರೀಧರ ಮೂರ್ತಿ ಅವರ ತಂಡ ಶಸ್ತ್ರಚಿಕಿತ್ಸೆ ನಡೆಸಿದೆ.

VISTARANEWS.COM


on

Successful complex surgery at Fortis Hospital for a boy who had a hole in his intestine due to a road accident
Koo

ಬೆಂಗಳೂರು: ರಸ್ತೆ ಅಪಘಾತದಲ್ಲಿ ಕರುಳಿಗೆ ಹೊಡೆತ ಬಿದ್ದ ಕಾರಣ ಕರುಳಿನಲ್ಲಿ ರಂಧ್ರ ಉಂಟಾಗಿ ಗಂಭೀರವಾಗಿದ್ದ 10ವರ್ಷದ ಬಾಲಕನಿಗೆ ಫೋರ್ಟಿಸ್‌ ಆಸ್ಪತ್ರೆಯಲ್ಲಿ (Fortis Hospital) ಯಶಸ್ವಿಯಾಗಿ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಬನ್ನೇರುಘಟ್ಟ ರಸ್ತೆ ಫೋರ್ಟಿಸ್ ಆಸ್ಪತ್ರೆಯ ಶಿಶುವೈದ್ಯ ಮತ್ತು ತೀವ್ರ ನಿಗಾ ವಿಭಾಗದ ಸಲಹೆಗಾರ ಡಾ. ಯೋಗೇಶ್ ಕುಮಾರ್ ಗುಪ್ತಾ ಮತ್ತು ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ಸಲಹೆಗಾರ ಡಾ. ಶ್ರೀಧರ ಮೂರ್ತಿ ಅವರ ತಂಡ ಶಸ್ತ್ರಚಿಕಿತ್ಸೆ ನಡೆಸಿದೆ.

ಇದನ್ನೂ ಓದಿ: Pralhad Joshi: ಕೇಂದ್ರದ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ; 1.3 ಕೋಟಿ ಜನರಿಂದ ನೋಂದಣಿ

ಈ ಕುರಿತು ಮಾತನಾಡಿದ ಡಾ. ಶ್ರೀಧರ ಮೂರ್ತಿ, ಮೋಹನ್‌ ಎಂಬ 10 ವರ್ಷದ ಬಾಲಕನು ರಸ್ತೆ ಅಪಘಾತದಲ್ಲಿ ಗಾಯಗೊಂಡು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಆದರೆ, ಒಂದು ವಾರದಲ್ಲಿ ಆ ಬಾಲಕ ಹೊಟ್ಟೆಯಲ್ಲಿ ಅತೀವ ನೋವು, ವಾಂತಿ ಕಾಣಿಸಿಕೊಂಡಿತ್ತು. ಬಳಿಕ ಬಾಲಕನನ್ನು ಫೋರ್ಟಿಸ್‌ ಆಸ್ಪತ್ರೆಗೆ ದಾಖಲಿಸಿ, ಸಂಪೂರ್ಣ ತಪಾಸಣೆ ಮಾಡಿದ ಬಳಿಕ, ಅಪಘಾತದಿಂದ ಆತನ ಹೊಟ್ಟೆಯಲ್ಲಿನ ಅಂಗಾಂಗಗಳು ಅಂಟಿಕೊಂಡ ಸ್ಥಿತಿಗೆ ತಲುಪಿದ್ದವು. ಇದರಿಂದ ಕರುಳಿನಲ್ಲಿ ರಂಧ್ರ ಉಂಟಾಗಿ, ಧ್ರವ ಸೋರಿಕೆಯಾಗಿರುವುದು ಕಂಡು ಬಂತು.

ಇದರಿಂದ ಬಾಲಕನ ಜೀರ್ಣಕ್ರಿಯೆ ಏರುಪೇರಾಗಿ ಅಪಾಯದ ಹಂತ ತಲುಪಿತ್ತು. ಕೂಡಲೇ ಬಾಲಕನಿಗೆ ಶಸ್ತ್ರಚಿಕಿತ್ಸೆಯ ಅನಿವಾರ್ಯತೆ ಕಂಡು ಬಂತು. ಬಾಲಕನಿಗೆ ರಂಧ್ರವಾಗಿದ್ದ ಕರುಳಿನ ಭಾಗವನ್ನು ಕತ್ತರಿಸಿ ತೆಗೆದು, ಅನಾಸ್ಟೊಮೊನಿಸ್‌ ಎಂಬ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು. ಅನಾಸ್ಟೊಮೊನಿಯಾ ಶಸ್ತ್ರಚಿಕಿತ್ಸೆಯು ಕತ್ತರಿಸಿದ ಅಂಗವನ್ನು ಮತ್ತೊಂದು ಅಂಗದೊಂದಿಗೆ ಹೊಂದಾಣಿಕೆ ಮಾಡುವ ಕ್ರಿಯೆಯಾಗಿದೆ. ಇದರಿಂದ ಕರುಳಿನ ಕ್ರಿಯೆ ಎಂದಿನಂತೆ ನಡೆಯಲಿದೆ. ಇದೊಂದು ಅಪರೂಪದ ಪ್ರಕರಣವಾಗಿದ್ದು, ಈ ಶಸ್ತ್ರಚಿಕಿತ್ಸೆಯಿಂದ ಬಾಲಕನ ಜೀವ ಉಳಿದಿದೆ ಎಂದು ವಿವರಿಸಿದರು.

ಇದನ್ನೂ ಓದಿ: Kannada New Movie: ರೆಟ್ರೋ ಸ್ಟೈಲ್‌ನಲ್ಲಿ ಮೂಡಿಬಂದ ʼಹೇಳು ಗೆಳತಿʼ; ಚರಣ್‌ರಾಜ್ ಕಂಠಸಿರಿಗೆ ಕೇಳುಗರು ಫಿದಾ

ಡಾ. ಯೋಗೇಶ್ ಕುಮಾರ್ ಗುಪ್ತಾ ಮಾತನಾಡಿ, ಬಾಲಕನಿಗೆ ಅಪಘಾತವಾದ ಸಂದರ್ಭದಲ್ಲಿ ದೇಹದ ಮೇಲೆ ಅಷ್ಟಾಗಿ ಗಾಯಗಳಾಗದೇ ಇದ್ದರು, ಒಳಭಾಗದಲ್ಲಿ ಹೆಚ್ಚು ಗಾಯವಾಗಿತ್ತು. ಇದರಿಂದ ಕರುಳಿನ ಕೆಲವು ಭಾಗವನ್ನು ಕತ್ತರಿಸಿ, ಉಳಿದಂತೆ ಕರುಳಿನ ಭಾಗವನ್ನು ಹೊಂದಿಕೆ ಮಾಡಲಾಗಿದೆ. ಇದೀಗ ಬಾಲಕ ಸಂಪೂರ್ಣ ಚೇತರಿಕೆಯ ಹಾದಿಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

Continue Reading

ಆರೋಗ್ಯ

Nutrients For The Human Body: ನಮ್ಮ ದೇಹವೆಂಬ ಕಾರ್ಯಾಲಯದಲ್ಲಿ ಕೆಲಸ ಮಾಡುವ 22 ಪೋಷಕಾಂಶಗಳ ಬಗ್ಗೆ ನಿಮಗೆ ಗೊತ್ತೇ?

What are the nutrients for the human body: ಬಗೆಬಗೆಯ ಪೋಷಕಾಂಶಗಳು ದೇಹದಲ್ಲಿ ಬಗೆಬಗೆಯ ಕಾರ್ಯನಿರ್ವಹಿಸಿ ಒಟ್ಟಾಗಿ ಒಂದು ವ್ಯವಸ್ಥೆಯನ್ನು ಅದ್ಭುತವಾಗಿ ನಿರ್ವಹಿಸುತ್ತವೆ. ಈ ಟೀಮ್‌ ವರ್ಕ್‌ನಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ವ್ಯವಸ್ಥೆಯಾಗಿ ದೇಹ ಸೋಲುತ್ತದೆ. ನಮ್ಮದೇ ದೇಹ ಹಗಲಿರುಳು ಹೀಗೆ ಕೆಲಸ ಮಾಡಲು 22 ಬಗೆಯ ಪೋಷಕಾಂಶಗಳು ಅವಶ್ಯವಾಗಿ ಬೇಕಂತೆ. ನಿಮಗೆ ಈ 22 ಪೋಷಕಾಂಶಗಳು ಯಾವುವೆಂದು ತಿಳಿದಿದೆಯೇ? ಈ ಬಗ್ಗೆ ಇಲ್ಲಿದೆ ಮಾಹಿತಿ.

VISTARANEWS.COM


on

Nutrients For The Human Body
Koo

ನಮ್ಮ ದೇಹವೆಂಬ ಕಾರ್ಯಾಲಯ ಸಮರ್ಪಕವಾಗಿ ಕೆಲಸ ಮಾಡಬೇಕಿದ್ದರೆ ಪೋಷಕಾಂಶಗಳು (nutrients for the human body) ಬೇಕೇ ಬೇಕು. ಬಗೆಬಗೆಯ ಪೋಷಕಾಂಶಗಳು ದೇಹದಲ್ಲಿ ಬಗೆಬಗೆಯ ಕಾರ್ಯನಿರ್ವಹಿಸಿ ಒಟ್ಟಾಗಿ ಒಂದು ವ್ಯವಸ್ಥೆಯನ್ನು ಅದ್ಭುತವಾಗಿ ನಿರ್ವಹಿಸುತ್ತವೆ. ಈ ಟೀಮ್‌ ವರ್ಕ್‌ನಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ವ್ಯವಸ್ಥೆಯಾಗಿ ದೇಹ ಸೋಲುತ್ತದೆ. ನಮ್ಮದೇ ದೇಹ ಹಗಲಿರುಳು ಹೀಗೆ ಕೆಲಸ ಮಾಡಲು 22 ಬಗೆಯ ಪೋಷಕಾಂಶಗಳು ಅವಶ್ಯವಾಗಿ ಬೇಕಂತೆ. ನಿಮಗೆ ಈ 22 ಪೋಷಕಾಂಶಗಳು ಯಾವುವೆಂದು ತಿಳಿದಿದೆಯೇ? ನಮ್ಮದೇ ದೇಹದ ಬಗ್ಗೆ ಇಷ್ಟಾದರೂ ನಾವು ತಿಳಿದುಕೊಳ್ಳದಿದ್ದರೆ ಹೇಗೆ ಹೇಳಿ. ಬನ್ನಿ, ನಮ್ಮ ದೇಹಕ್ಕೆ ಅವಶ್ಯವಾಗಿ ಬೇಕಾಗುವ 22 ಪೋಷಕಾಂಶಗಳ ಬಗ್ಗೆ ಮಾಹಿತಿ ತಿಳಿಯೋಣ.

Vitamin A

ವಿಟಮಿನ್‌ ಎ

ವಿಟಮಿನ್‌ ಎ ಅತ್ಯಂತ ಅಗತ್ಯವಾದ ಜೀವಸತ್ವಗಳಲ್ಲಿ ಒಂದು. ನಮ್ಮ ಕಣ್ಣಿನ ಆರೋಗ್ಯಕ್ಕೆ ಅತ್ಯಂತ ಮುಖ್ಯವಾಗಿ ಬೇಕಾಗುವ ಪೋಷಕಾಂಶ ಇದು. ಸಿಹಿಗೆಣಸು, ಕ್ಯಾರೆಟ್‌, ಮಾವಿನಹಣ್ಣು ಇತ್ಯಾದಿಗಳಲ್ಲಿ ಅಧಿಕ ಪ್ರಮಾಣದಲ್ಲಿ ವಿಟಮಿನ್‌ ಎ ಇದೆ. ಉಳಿದಂತೆ ನಿತ್ಯ ಸೇವಿಸುವ ಹಲವು ಆಹಾರಗಳಲ್ಲಿ ವಿಟಮಿನ್‌ ಎಯನ್ನು ಸ್ವಲ್ಪ ಪ್ರಮಾಣದಲ್ಲಿ ಪಡೆಯಬಹುದು.

Vitamin B

ವಿಟಮಿನ್‌ ಬಿ

ನಮ್ಮ ದೇಹ ಪಡೆದ ಆಹಾರವನ್ನು ಶಕ್ತಿಯಾಗಿ ಪರಿವರ್ತಿಸುವಲ್ಲಿ ಸಹಾಯ ಮಾಡುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿ ವಿಟಮಿನ್‌ ಬಿ ಹೇರಳವಾಗಿದೆ.

Vitamin C

ವಿಟಮಿನ್‌ ಸಿ

ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಅತ್ಯಂತ ಅಗತ್ಯ ಈ ವಿಟಮಿನ್‌ ಸಿ. ಸಿಟ್ರಸ್‌ ಹಣ್ಣುಗಳಲ್ಲಿ, ಬ್ರೊಕೋಲಿ, ಕ್ಯಾರೆಟ್‌ ಇತ್ಯಾದಿಗಳಲ್ಲಿ ಹೇರಳವಾಗಿ ಪಡೆಯಬಹುದು.

Vitamin D

ವಿಟಮಿನ್‌ ಡಿ

ಎಲುಬಿನ ಸದೃಢತೆಗೆ ಹಾಗೂ ಹಲ್ಲಿನ ಆರೋಗ್ಯಕ್ಕೆ ವಿಟಮಿನ್‌ ಡಿ ಬೇಕೇಬೇಕು. ದೇಹ ಕ್ಯಾಲ್ಶಿಯಂ ಹೀರಿಕೊಳ್ಳಬೇಕಾದರೆ, ಇದರ ಅವಶ್ಯಕತೆ ಇದೆ. ಸೂರ್ಯನ ಬೆಳಕಿನಲ್ಲಿ ಹೇರಳವಾಗಿರುವ ಇದನ್ನು ಅಣಬೆ, ಸೋಯಾ ಹಾಲು, ಮೀನು ಇತ್ಯಾದಿಗಳಲ್ಲೂ ಪಡೆಯಬಹುದು.

Vitamin E

ವಿಟಮಿನ್‌ ಇ

ಇದು ದೇಹಕ್ಕೆ ಬೇಕಾದ ಆಂಟಿ ಆಕ್ಸಿಡೆಂಟ್‌. ಎಲ್ಲ ಹಸಿರು ತರಕಾರಿಗಳಲ್ಲಿ ಇದು ಹೇರಳವಾಗಿದೆ.

ವಿಟಮಿನ್‌ ಎಫ್

ಇದು ಪಾಲಿ ಅನ್‌ಸ್ಯಾಚುರೇಟೆಡ್‌ ಫ್ಯಾಟಿ ಆಸಿಡ್‌ ಆಗಿದ್ದು, ಇದು ಗಾಯಗಳು ಗುಣವಾಗಲು, ಒಣಗಲು ಅತ್ಯಂತ ಅಗತ್ಯ. ಎಣ್ಣೆಗಳು, ಬೀಜಗಳು, ಮೀನು ಇತ್ಯಾದಿಗಳ ಮೂಲಕ ಪಡೆಯಬಹುದು.

ಕ್ಯಾಲ್ಶಿಯಂ

ಮೂಳೆಗಳ ಆರೋಗ್ಯ, ಹಾರ್ಮೋನುಗಳ ಉತ್ಪಾದನೆಗೆ ಕ್ಯಾಲ್ಶಿಯಂ ಬೇಕೇ ಬೇಕು. ಹಾಲು, ಬ್ರೊಕೋಲಿ, ರಾಗಿ, ಬಸಳೆ ಇತ್ಯಾದಿಗಳಲ್ಲಿ ಇದು ಅಧಿಕವಾಗಿದೆ.

ಪೊಟಾಶಿಯಂ

ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ದೇಹದಲ್ಲಿ ನೀರಿನ ಪ್ರಮಾಣವನ್ನು ಕಾಯ್ದುಕೊಳ್ಳುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಬಾಳೆಹಣ್ಣಿನಲ್ಲಿ, ರಾಜ್ಮಾದಂತಹ ಕಾಳುಗಳಲ್ಲಿ ಪೊಟಾಶಿಯಂ ಪಡೆಯಬಹುದು.

ಮೆಗ್ನೀಶಿಯಂ

ದೇಹದಲ್ಲಿ ರಾಸಾಯನಿಕ ಕ್ರಿಯೆ ನಡೆಯಲು ಮೆಗ್ನೀಶಿಯಂ ಬೇಕೇ ಬೇಕು. ಎಲುಬನ್ನು ಗಟ್ಟಿಗೊಳಿಸುವಲ್ಲಿಯೂ ಇದು ನೆರವಾಗುತ್ತದೆ. ಕುಂಬಳಕಾಯಿ ಬೀಜ, ಬಸಳೆ ಇತ್ಯಾದಿಗಳಲ್ಲಿ ಇದನ್ನು ಪಡೆಯಬಹುದು.

ಕಬ್ಬಿಣಾಂಶ

ರಕ್ತದಲ್ಲಿ ಹಿಮೋಗ್ಲೋಬಿನ್‌ ಹೆಚ್ಚಿಸಲು ಕಬ್ಬಿಣಾಂಶ ಬೇಕೇಬೇಕು. ಬಸಳೆ, ಬೀಜಗಳು, ಬೆಲ್ಲ, ಚಿಯಾ ಬೀಜಗಳು ಇತ್ಯಾದಿಗಳ ಮೂಲಕ ಕಬ್ಬಿಣಾಂಶ ಪಡೆಯಬಹುದು.

ಇದನ್ನೂ ಓದಿ: Thyroid Health Formulas: ನಿಮ್ಮ ಥೈರಾಯ್ಡ್‌ ನಿಮ್ಮ ಕೈಯಲ್ಲಿ! ಥೈರಾಯ್ಡ್‌ ಆರೋಗ್ಯಕ್ಕೆ ಇಲ್ಲಿವೆ ಆರು ಸೂತ್ರಗಳು

ವಿಟಮಿನ್‌ ಬಿ1 (ಥೈಮೀನ್)

ಕೂದಲು ಹಾಗೂ ಮಿದುಳಿನ ಆರೋಗ್ಯಕ್ಕೆ ಇದು ಅತ್ಯಂತ ಅವಶ್ಯಕ. ಸೋಯಾ ಹಾಲಿನಲ್ಲಿ ಇದು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿದೆ.

ವಿಟಮಿನ್‌ ಬಿ 6 (ಪೈರಿಡಾಕ್ಸಿನ್)

ಹೃದ್ರೋಗ ಬರದಂತೆ ಕಾಪಾಡುವಲ್ಲಿ ಈ ವಿಟಮಿನ್‌ ಸಹಾಯ ಮಾಡುತ್ತದೆ. ಬಾಳೆಹಣ್ಣು, ಕಲ್ಲಂಗಡಿ ಹಣ್ಣಿನಲ್ಲಿ ಇದು ಹೇರಳವಾಗಿದೆ.

ವಿಟಮಿನ್‌ ಬಿ 12(ಕೊಬಾಲಾಮಿನ್):

ಹೊಸ ಅಂಗಾಂಶಗಳ ಸೃಷ್ಠಿಗೆ, ಅಮೈನೋ ಆಸಿಡ್‌ ಅನ್ನು ವಿಘಟಿಸಲು ಇದು ಬೇಕೇ ಬೇಕು. ಮೊಟ್ಟೆ, ಮೀನಿನಲ್ಲಿ ಇದು ಹೇರಳವಾಗಿದೆ.

ರೈಬೋಫ್ಲೇವಿನ್:

ವಿಟಮಿನ್‌ ಬಿ2 ಎಂದೂ ಕರೆಯಲ್ಪಡುವ ಇದು ಮೈಗ್ರೇನ್‌ ಅನ್ನು ತಡೆಯುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಮೊಟ್ಟೆ, ಮಾಂಸ, ಮೊಳಕೆ ಕಾಳುಗಳು ಬೀನ್ಸ್‌ನಲ್ಲಿ ಇದು ಅಧಿಕವಾಗಿದೆ.

ಬಯೋಟಿನ್

ಗ್ಲುಕೋಸ್‌ನ ಸಂಶ್ಲೇಷಣೆಗೆ ಅತ್ಯಂತ ಅಗತ್ಯವಾಗಿರುವ ಬಯೋಟಿನ್‌ ಅನ್ ಧಾನ್ಯಗಳಿಂದ ಪಡೆಯಬಹುದು.

ಖೋಲಿನ್

ಮಿದುಳಿನ ಚಟುವಟಿಕೆಗೆ, ಚುರುಕುತನಕ್ಕೆ ಇದು ಬೇಕೇ ಬೇಕು. ನೆಲಗಡಲೆಯಲ್ಲಿ ಖೋಲಿನ್‌ ಹೇರಳವಾಗಿದೆ.

ಫೋಲಿಕ್‌ ಆಸಿಡ್‌

ಮಹಿಳೆಯರಿಗೆ ಅತ್ಯಂತ ಅಗತ್ಯವಾಗಿ ಬೇಕಾಗುವ ಪೋಷಕಾಂಶವಿದು. ಗರ್ಭಿಣಿಯರು ಸೇವಿಸಲೇಬೇಕಾದ್ದು. ಮಗುವಿನ ಹೆರಿಗೆಗೆ ಈ ಪೋಷಕಾಂಶ ನೆರವಾಗುತ್ತದೆ. ಟೊಮೇಟೋ, ಕಿತ್ತಳೆ, ಮೊಟ್ಟೆ ಇತ್ಯಾದಿಗಳಲ್ಲಿ ಇದನ್ನು ಪಡೆಯಬಹುದು.

Vitamin k

ವಿಟಮಿನ್‌ ಕೆ

ಮೂಳೆ ಮುರಿತವನ್ನು ಇದು ತಡೆಯುತ್ತದೆ. ಮುಖ್ಯವಾಗಿ ಸೊಂಟದ ಮೂಳೆಗೆ ಅತ್ಯಗತ್ಯವಾಗಿ ಬೇಕಾಗುವ ಪೋಷಕಾಂಶವಿದು. ಕ್ಯಾಬೇಜ್‌ ಹಾಗೂ ಬ್ರೊಕೊಲಿಯಲ್ಲಿ ಹೇರಳವಾಗಿದೆ.

ತಾಮ್ರ

ಕೆಂಪು ರಕ್ತ ಕಣಗಳ ಅಭಿವೃದ್ಧಿಗೆ ಇದು ಬೇಕು. ಧಾನ್ಯಗಳು, ಬೀನ್ಸ್‌, ಬೀಜಗಳು, ಆಲೂಗಡ್ಡೆ ಇತ್ಯಾದಿಗಳ ಮೂಲಕ ತಾಮ್ರವನ್ನು ಪಡೆಯಬಹುದು.

ಕ್ಲೋರೈಡ್‌

ಪಚನಕ್ರಿಯೆಗೆ ಈ ಪೋಷಕಾಂಶ ಬೇಕೇ ಬೇಕು. ಉಪ್ಪು, ಟೊಮೆಟೋ, ಲೆಟ್ಯೂಸ್‌, ಸೆಲೆರಿಯಂತಹುಗಳಲ್ಲಿ ಕ್ಲೋರೈಡ್‌ ಇದೆ.

ಪಾಸ್ಪರಸ್‌

ನಮ್ಮ ಅಂಗಾಂಶಗಳಿಗೆ ಪೋಷಕಾಂಷವನ್ನು ಒದಗಿಸುವುದಕ್ಕೆ ಇದು ಬೇಕು. ಇದು ಡಿಎನ್‌ಎಯ ಒಂದು ಭಾಗವಾಗಿದೆ ಕೂಡಾ. ಬಟಾಣಿಯಲ್ಲಿ ಇದನ್ನು ಹೇರಳವಾಗಿ ಪಡೆಯಬಹುದು.

ಇದನ್ನೂ ಓದಿ: Ear Infections During Monsoon: ಮಳೆಗಾಲದಲ್ಲಿ ಕಾಡುವ ಕಿವಿನೋವಿನಿಂದ ಮುಕ್ತರಾಗಲು ಸರಳ ಉಪಾಯ ಇಲ್ಲಿದೆ

ಝಿಂಕ್‌

ನಮ್ಮ ಇಂದ್ರಿಯಗಳು ಕಾರ್ಯನಿರ್ವಹಿಸಬೇಕಾದರೆ ಝಿಂಕ್‌ ಬೇಕೇ ಬೇಕು. ಸೀಫುಡ್‌, ಬೀನ್ಸ್‌, ಬೀಜಗಳು, ಚಿಕನ್‌ ಇತ್ಯಾದಿಗಳ ಮೂಲಕ ಇದನ್ನು ಪಡೆಯಬಹುದು.

Continue Reading

ಆರೋಗ್ಯ

Health Tips: ಉಪಾಹಾರದಲ್ಲಿ ಇವುಗಳು ಬೇಡವೇ ಬೇಡ ಎನ್ನುತ್ತಾರೆ ಮಾಧುರಿ ದೀಕ್ಷಿತ್ ಪತಿ ಡಾ. ಶ್ರೀರಾಮ್ ನೆನೆ

ಕಾರ್ಡಿಯೊಥೊರಾಸಿಕ್ ಸರ್ಜನ್ ಆಗಿರುವ ಡಾ. ನೆನೆ ಈಗ ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಆರೋಗ್ಯಕರ ಜೀವನಕ್ಕಾಗಿ (Health Tips) ನಾವು ತಪ್ಪಿಸಬೇಕಾದ ಉಪಹಾರದ ಮಾಹಿತಿ ನೀಡಿದ್ದಾರೆ. ಇದರಲ್ಲಿ ಬಿಳಿ ಬ್ರೆಡ್, ಸಕ್ಕರೆಯ ಧಾನ್ಯಗಳು, ಹಣ್ಣಿನ ರಸ, ಸಂಸ್ಕರಿಸಿದ ಮಾಂಸ, ಸಿಹಿಯಾದ ಮೊಸರು ಈ ಆಯ್ಕೆಗಳನ್ನು ತಪ್ಪಿಸಬೇಕು ಎಂದು ಹೇಳಿದ್ದು, ಇದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

VISTARANEWS.COM


on

By

Health Tips
Koo

ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ (Bollywood actress Madhuri Dixit) ಅವರ ಪತಿ ಡಾ. ಶ್ರೀರಾಮ್ ನೆನೆ (Dr Shriram Nene) ಅವರು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ನಿಯಮಿತವಾಗಿ ಆರೋಗ್ಯ ಸಂಬಂಧಿತ (health tips) ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಅವರು ಹೃದಯಾಘಾತದ (heart attack case) ಅಪಾಯವು ಏಕೆ ಹೆಚ್ಚು ಎಂಬುದನ್ನು ಹಂಚಿಕೊಂಡಿದ್ದು, ಇದಕ್ಕಾಗಿ ಆರೋಗ್ಯಕರ ಉಪಹಾರ ಹೇಗಿರಬೇಕು ಎಂದು ಹೇಳಿದ್ದಾರೆ.

ಕಾರ್ಡಿಯೊಥೊರಾಸಿಕ್ ಸರ್ಜನ್ ಆಗಿರುವ ಡಾ. ನೆನೆ ಈಗ ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಆರೋಗ್ಯಕರ ಜೀವನಕ್ಕಾಗಿ ನಾವು ತಪ್ಪಿಸಬೇಕಾದ ಉಪಹಾರದ ಮಾಹಿತಿ ನೀಡಿದ್ದಾರೆ. ಇದರಲ್ಲಿ ಬಿಳಿ ಬ್ರೆಡ್, ಸಕ್ಕರೆಯ ಧಾನ್ಯಗಳು, ಹಣ್ಣಿನ ರಸ, ಸಂಸ್ಕರಿಸಿದ ಮಾಂಸ, ಸಿಹಿಯಾದ ಮೊಸರು ಈ ಆಯ್ಕೆಗಳನ್ನು ತಪ್ಪಿಸಬೇಕು ಎಂದು ಹೇಳಿದ್ದಾರೆ.

ಬಿಳಿ ಬ್ರೆಡ್

ಬಿಳಿ ಬ್ರೆಡ್ ಅನ್ನು ಕಡಿಮೆ ಗುಣಮಟ್ಟದ ಕಾರ್ಬೋಹೈಡ್ರೇಟ್‌ಗಳೊಂದಿಗೆ ಸಂಸ್ಕರಿಸಲಾಗುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಕಾರಣವಾಗಬಹುದು. ಬಿಳಿ ಬ್ರೆಡ್ ಅನ್ನು ಅತಿಯಾಗಿ ಸೇವಿಸುವುದರಿಂದ ಬೊಜ್ಜು, ಹೃದ್ರೋಗ ಮತ್ತು ಮಧುಮೇಹ ಉಂಟಾಗುತ್ತದೆ.

ಸಕ್ಕರೆ ಧಾನ್ಯಗಳು

ಸಕ್ಕರೆ ಸಿರಿಧಾನ್ಯಗಳು ಸರಳವಾದ ಕಾರ್ಬೋಹೈಡ್ರೇಟ್ ಆಹಾರ ಪದಾರ್ಥಗಳಾಗಿವೆ. ಇದು ಹೆಚ್ಚಿನ ಹಸಿವು ಮತ್ತು ಶುಗರ್ ಮಟ್ಟ ಹೆಚ್ಚಿಸಲು ಕಾರಣವಾಗಬಹುದು. ಇದು ಟೈಪ್ 2 ಮಧುಮೇಹ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.

ಹಣ್ಣಿನ ರಸ

ಹಣ್ಣುಗಳನ್ನು ಜ್ಯೂಸ್ ಮಾಡುವುದರಿಂದ ಅವುಗಳಲ್ಲಿರುವ ಅಗತ್ಯ ಪೋಷಕಾಂಶಗಳ ನಷ್ಟಕ್ಕೆ ಕಾರಣವಾಗುತ್ತದೆ. ಜ್ಯೂಸ್ ಮಾಡುವುದು ಹೆಚ್ಚಿನ ಸಕ್ಕರೆಗಳನ್ನು ಬಿಡುಗಡೆ ಮಾಡುತ್ತದೆ. ಹಣ್ಣಿನ ರಸವು ಬೊಜ್ಜು ಮತ್ತು ತೂಕ ಹೆಚ್ಚಾಗಲು ಕಾರಣವಾಗಬಹುದು.


ಸಂಸ್ಕರಿಸಿದ ಮಾಂಸ

ಬೆಳಗಿನ ಉಪಾಹಾರಕ್ಕಾಗಿ ಸಂಸ್ಕರಿಸಿದ ಮಾಂಸವನ್ನು ತಿನ್ನುವುದು ಹೊಟ್ಟೆ ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಕೂಡ ಸಂಸ್ಕರಿಸಿದ ಮಾಂಸವನ್ನು ಸೇವಿಸುವ ಕೆಲವು ಅಡ್ಡಪರಿಣಾಮಗಳಾಗಿವೆ.

ಇದನ್ನೂ ಓದಿ: Actor Shahrukh Khan: ಅಮೆರಿಕದಲ್ಲಿ ಶಾರುಖ್ ಖಾನ್‌ಗೆ ಶಸ್ತ್ರಚಿಕಿತ್ಸೆ; ಬಾಲಿವುಡ್‌ ಬಾದ್‌ಶಾಗೆ ಕಾಡುತ್ತಿರುವ ಸಮಸ್ಯೆ ಏನು?

ಸಿಹಿಯಾದ ಮೊಸರು

ಮೊಸರಿನಲ್ಲಿರುವ ನೈಸರ್ಗಿಕ ಸಕ್ಕರೆ ಆರೋಗ್ಯಕರವಾಗಿದ್ದರೂ ಸುವಾಸನೆಯ ಮೊಸರು ಅಧಿಕ ಸಕ್ಕರೆಯನ್ನು ಹೊಂದಿರುತ್ತದೆ. ಇದು ತೂಕ ಹೆಚ್ಚಾಗುವುದು, ಟೈಪ್ 2 ಮಧುಮೇಹ ಮತ್ತು ಕೆಲವು ರೀತಿಯ ಕ್ಯಾನ್ಸರ್ ಬೆಳವಣಿಗೆಗೆ ಕಾರಣವಾಗುತ್ತದೆ.

Continue Reading

ಆರೋಗ್ಯ

Ear Infections During Monsoon: ಮಳೆಗಾಲದಲ್ಲಿ ಕಾಡುವ ಕಿವಿನೋವಿನಿಂದ ಮುಕ್ತರಾಗಲು ಸರಳ ಉಪಾಯ ಇಲ್ಲಿದೆ

Ear Infections during Monsoon: ವಾತಾವರಣದಲ್ಲಿ ತೇವಾಂಶ ಹೆಚ್ಚಿದಾಗ ಕಿವಿಯ ಸೋರುವುದು, ಕಿವಿನೋವು ಕಾಟ ಕೊಡುತ್ತಲೇ ಇರುತ್ತವೆ. ಕಿವಿ ಕಟ್ಟಿದಂತಾಗುವುದು, ಕಿರಿಕಿರಿ, ಸರಿಯಾಗಿ ಕೇಳದಂತಾಗುವುದು, ಬಿಟ್ಟು ಬಿಟ್ಟು ಕಾಡುವ ನೋವು ಇತ್ಯಾದಿಗಳೆಲ್ಲ ಸೋಂಕಿನ ಲಕ್ಷಣಗಳು. ಮಳೆಗಾಲದಲ್ಲಿ ಕಾಡುವ ಕಿವಿಯ ಸೋಂಕುಗಳನ್ನು ನಿಯಂತ್ರಿಸುವುದು ಹೇಗೆ? ಈ ಬಗ್ಗೆ ಇಲ್ಲಿದೆ ಉಪಯುಕ್ತ ಮಾಹಿತಿ.

VISTARANEWS.COM


on

Ear Infections during Monsoon
Koo

ಮಳೆಗಾಲದ ಆರೋಗ್ಯ ಸಮಸ್ಯೆಗಳು (Ear Infections during Monsoon) ನಾನಾ ರೀತಿಯವು. ಹೆಚ್ಚಿನ ತೇವಾಂಶ ಇರುವಲ್ಲೆಲ್ಲ ವೈರಸ್‌, ಫಂಗಸ್‌ ಮತ್ತು ಬ್ಯಾಕ್ಟೀರಿಯಗಳ ಬೆಳವಣಿಗೆ ಸಮೃದ್ಧವಾಗಿ ಆಗುತ್ತದೆ. ಉದಾ: ಕಿವಿಯನ್ನೇ ಗಮನಿಸಿದರೆ ಮುಖದಂಚಿಗಿನ ಈ ಪುಟ್ಟ ಬಾವಿಗಳಲ್ಲಿ ಎಷ್ಟೊಂದು ತೇವಾಂಶ ಸೇರಿಕೊಳ್ಳುತ್ತದೆಂದರೆ ಜೋರು ಮಳೆಯಲ್ಲಿ ಕಿವಿನೋವು ಎಷ್ಟೋ ಮಂದಿಗೆ ಬಿಡುವುದೇ ಇಲ್ಲ. ಆಗಾಗ ಕಿವಿಯ ಸೋರುವುದು, ಸೋಂಕುಗಳು ಕಾಟ ಕೊಡುತ್ತಲೇ ಇರುತ್ತವೆ. ಕಿವಿ ಕಟ್ಟಿದಂತಾಗುವುದು, ಕಿರಿಕಿರಿ, ಸರಿಯಾಗಿ ಕೇಳದಂತಾಗುವುದು, ಸೋರುವುದು, ಬಿಟ್ಟು ಬಿಟ್ಟು ಕಾಡುವ ನೋವು ಇತ್ಯಾದಿಗಳೆಲ್ಲ ಸೋಂಕಿನ ಲಕ್ಷಣಗಳು. ಮಳೆಗಾಲದಲ್ಲಿ ಕಾಡುವ ಕಿವಿಯ ಸೋಂಕುಗಳನ್ನು ನಿಯಂತ್ರಿಸುವುದು ಹೇಗೆ?

ear clean

ಸ್ವಚ್ಛತೆ

ಕಿವಿಯ ಹೊರಭಾಗದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಲ್ಳುವುದು ಅಗತ್ಯ. ಅದಕ್ಕಾಗಿ ಸ್ವಚ್ಛವಾದ ಹತ್ತಿಯ ವಸ್ತ್ರದಿಂದ ಕಿವಿಯ ಹೊರಭಾಗವನ್ನು ಒರೆಸಿ ಶುಚಿ ಮಾಡಿ. ಸ್ನಾನ ಆದ ನಂತರ ಅಥವಾ ಹೊರಗಿನಿಂದ ಬಂದಾಗ ಮಳೆಯಲ್ಲಿ ನೆನೆದಿದ್ದರೆ ಕಿವಿಯ ಹೊರಭಾಗವನ್ನು ಒರೆಸಿ ಒಣಗಿಸಿಕೊಳ್ಳುವುದು ಅಗತ್ಯ. ಇದಕ್ಕಾಗಿ ಕಿವಿಯೊಳಗೆ ಹತ್ತಿಯನ್ನೋ ಅಥವಾ ಇನ್ನೇನನ್ನಾದರೂ ತುರುಕುವ ಸಾಹಸ ಮಾಡಬೇಡಿ.

ಇಯರ್‌ ಪ್ಲಗ್‌

ಕಿವಿಯೊಳಗೆ ಹಾಕುವಂಥ ಯಾವುದೇ ಉಪಕರಣಗಳಾದರೂ ಕಿವಿಯ ಪೊರೆಯ ಅತ್ಯಂತ ಸಮೀಪದಲ್ಲೇ ಇರುತ್ತವೆ. ಹಾಗಾಗಿ ಅವುಗಳ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಿ. ಅವುಗಳಲ್ಲೂ ಫಂಗಸ್‌ ಬೆಳೆಯುವ ಅಪಾಯವಿದೆ. ಹಾಗಾಗಿ ಇಯರ್‌ಪ್ಲಗ್‌, ಹೆಡ್‌ಫೋನ್‌ ಗಳನ್ನು ಆಗಾಗ ಶುಚಿ ಮಾಡಿ ಇರಿಸಿಕೊಳ್ಳಿ. ಇದರಿಂದ ರೋಗಾಣುಗಳು ಕಿವಿಯನ್ನು ಪ್ರವೇಶಿಸುವ ಸಾಧ್ಯತೆ ಕಡಿಮೆಯಾಗುತ್ತದೆ.

ear bud
ear bud

ಕಡ್ಡಿ ಹಾಕಬೇಡಿ

ಕಡ್ಡಿಗಳು, ಹತ್ತಿಯ ಸ್ವಾಬ್‌ಗಳು ಮುಂತಾದ ಯಾವುದನ್ನೂ ಕಿವಿಯೊಳಗೆ ಸ್ವಚ್ಛತೆಯ ನೆವದಿಂದ ಹಾಕಬೇಡಿ. ಕಿವಿಯನ್ನು ಸ್ವಚ್ಛ ಮಾಡುವುದಕ್ಕಿಂತ ಹೆಚ್ಚು ಹಾನಿಯನ್ನೇ ಮಾಡುತ್ತವೆ ಈ ವಸ್ತುಗಳು. ಹೀಗೆ ಹಾಕುವ ವಸ್ತುಗಳಲ್ಲೇ ರೋಗಾಣುಗಳು ಇರಬಹುದು. ಅವು ಶುಚಿ ಮಾಡುವ ಬದಲು ಕಿವಿಯಲ್ಲಿರುವ ಕುಗ್ಗೆಯನ್ನು ಇನ್ನಷ್ಟು ಒಳಗೆ ತಳ್ಳಿ ಹಾನಿ ಮಾಡಬಹುದು. ಒಂದೊಮ್ಮೆ ಕಿವಿಯನ್ನು ಶುಚಿ ಮಾಡುವುದು ಅಗತ್ಯ ಎಂದಾದರೆ, ತಜ್ಞರ ನೆರವು ಪಡೆಯಿರಿ.

ಈಜಬೇಡಿ

ಮಳೆಗಾಲದ ದಿನಗಳಲ್ಲಿ ಈಜುಕೊಳಗಳಿಗೆ ಇಳಿಯುವುದು ಕ್ಷೇಮವಲ್ಲ. ಆ ನೀರಿನಲ್ಲಿ ಹಲವು ರೀತಿಯ ರೋಗಾಣುಗಳು ಇರಬಹುದು. ಕೇವಲ ಈಜುವುದೇ ಅಲ್ಲ, ಯಾವುದೇ ರೀತಿಯ ಜಲಸಾಹಸಗಳು ಈ ದಿನಗಳಲ್ಲಿ ಸರಿಯಲ್ಲ. ಇಷ್ಟಾಗಿಯೂ ನೀರಿಗಿಳಿಯುವುದು ಅನಿವಾರ್ಯ ಎಂದಾದರೆ ಜಲ ನಿರೋಧಕ (ವಾಟರ್‌ ರೆಸಿಸ್ಟೆಂಟ್‌) ಇಯರ್‌ ಪ್ಲಗ್‌ಗಳನ್ನು ಬಳಸುವುದು ಒಳ್ಳೆಯದು. ಇವು ಕಿವಿ ಮತ್ತು ನೀರಿನ ನಡುವೆ ಗೋಡೆಯನ್ನು ಸೃಷ್ಟಿ ಮಾಡಿ, ಕಿವಿಗೆ ನೀರು ಹೋಗದಂತೆ ತಡೆಯುತ್ತವೆ.

ವಿಶ್ರಾಂತಿ ನೀಡಿ

ನಮ್ಮ ಕಿವಿಗೂ ವಿಶ್ರಾಂತಿ ಬೇಕು. ಸದಾ ಕಾಲ ಕೇಳುತ್ತಲೇ ಇರುವ ಅವುಗಳಿಗೆ ದಿನವಿಡೀ ಇಯರ್‌ ಫೋನ್‌ ತುಂಬಿಸಿಟ್ಟರೆ ಕಷ್ಟ. ಇದರಿಂದ ಕಿವಿಯಲ್ಲಿನ ತೇವಾಂಶವೂ ಹೆಚ್ಚುತ್ತದೆ. ಹಾಗಾಗಿ ಕೇಳುವ ಕಾಯಕದಿಂದ ದಿನದ ಸ್ವಲ್ಪ ಹೊತ್ತು ಅವುಗಳಿಗೆ ವಿಶ್ರಾಂತಿ ನೀಡಿ. ಸುತ್ತಲಿನ ಜಗತ್ತಿನ ಶಬ್ದಗಳನ್ನು ನಿಲ್ಲಿಸಲಂತೂ ಸಾಧ್ಯವಿಲ್ಲ. ಹಾಗಾಗಿ ಕಿವಿಗೆ ಹಾಕುವ ಉಪಕರಣಗಳನ್ನು ಕಡಿಮೆ ಮಾಡಿ.

ಇದನ್ನೂ ಓದಿ:Thyroid Health Formulas: ನಿಮ್ಮ ಥೈರಾಯ್ಡ್‌ ನಿಮ್ಮ ಕೈಯಲ್ಲಿ! ಥೈರಾಯ್ಡ್‌ ಆರೋಗ್ಯಕ್ಕೆ ಇಲ್ಲಿವೆ ಆರು ಸೂತ್ರಗಳು

ತಜ್ಞರೇ ಬೇಕು

ಇಷ್ಟಾಗಿ ಕಿವಿಯಲ್ಲಿ ನೋವು, ಕಿರಿಕಿರಿ ಅಥವಾ ಯಾವುದೇ ರೀತಿಯ ತೊಂದರೆಯಿದ್ದರೂ ಸ್ವಯಂವೈದ್ಯ ಮಾಡಬೇಡಿ. ಔಷಧಿ ಅಂಗಡಿಯಿಂದ ಯಾವುದಾದರೂ ಡ್ರಾಪ್ಸ್‌ ತಂದು ಹಾಕುವುದು, ಪ್ರತಿಜೈವಿಕ ಡ್ರಾಪ್‌ ಪ್ರಯೋಗಿಸುವುದು, ಯಾವುದೋ ಸೊಪ್ಪಿನ ರಸ ಅಥವಾ ತೈಲ ಕಿವಿಗೆ ಹನಿಸುವುದು ಮುಂತಾದ ಯಾವುದೇ ನಾಟಿ ಪದ್ಧತಿಗಳು ಕಿವಿಯನ್ನು ತೀವ್ರ ತೊಂದರೆಗೆ ದೂಡಬಹುದು. ಬದಲಿಗೆ, ನೇರವಾಗಿ ಇಎನ್‌ಟಿ ವೈದ್ಯರ ಬಳಿ ಹೋಗಿ.

Continue Reading
Advertisement
Kabini Dam
ಕರ್ನಾಟಕ2 hours ago

ಮೈಸೂರು: ಕಬಿನಿ ಜಲಾಶಯದ ಬಲದಂಡೆ ನಾಲೆ ಬಳಿ ಭಾರಿ ಬಿರುಕು, ನಾಲೆ ಒಡೆಯುವ ಭೀತಿಯಲ್ಲಿ ಜನ

Shiradi Ghat
ಕರ್ನಾಟಕ2 hours ago

Shiradi Ghat: ಗುಡ್ಡ ಕುಸಿತ; ಶಿರಾಡಿ ಘಾಟ್‌ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಬಂದ್‌, ಬದಲಿ ಮಾರ್ಗ ಸೂಚನೆ

Road Rage
ದೇಶ3 hours ago

Road Rage: ಸ್ಕೂಟಿಗೆ ಬೈಕ್‌ ಟಚ್‌ ಆಗಿದ್ದಕ್ಕೆ ಜಗಳ; ಗುಂಡು ಹಾರಿಸಿ 2 ಮಕ್ಕಳ ತಾಯಿಯನ್ನು ಕೊಂದ ವ್ಯಕ್ತಿ

Rashid khan 600 wickets
ಕ್ರೀಡೆ3 hours ago

Rashid khan 600 wickets: ಟಿ20 ಕ್ರಿಕೆಟ್​ನಲ್ಲಿ 600 ವಿಕೆಟ್​ ಪೂರ್ತಿಗೊಳಿಸಿದ ರಶೀದ್​ ಖಾನ್​; ಮೊದಲ ಸ್ಪಿನ್ನರ್

Viral video
ವೈರಲ್ ನ್ಯೂಸ್3 hours ago

Viral Video: ಕೇಶ ವಿನ್ಯಾಸಕ್ಕೆ ಸಲಾಕೆ ಬಳಸಿದ ಕ್ಷೌರಿಕ!

Virat Kohli
ಕ್ರೀಡೆ3 hours ago

Virat Kohli: ಗಂಭೀರ್​ ಮಾರ್ಗದರ್ಶನದಂತೆ ಅತ್ಯಂತ ಜೋಶ್​ನಿಂದ ಬ್ಯಾಟಿಂಗ್​ ಅಭ್ಯಾಸ ನಡೆಸಿದ ಕೊಹ್ಲಿ; ಫೋಟೊ ವೈರಲ್​

Infosys
ಕರ್ನಾಟಕ4 hours ago

Infosys: ಇನ್ಫೋಸಿಸ್‌ನಿಂದ 32 ಸಾವಿರ ಕೋಟಿ ರೂ. ತೆರಿಗೆ ವಂಚನೆ; ಜಿಎಸ್‌ಟಿ ನೋಟಿಸ್‌ ರವಾನೆ

Paris Olympics
ಕ್ರೀಡೆ4 hours ago

Paris Olympics: ಪ್ರೀ ಕ್ವಾರ್ಟರ್​ ಫೈನಲ್​ನಲ್ಲಿ ಮುಗ್ಗರಿಸಿದ ಮಣಿಕಾ ಬಾತ್ರಾ

Indians spend 15 billion hours waiting for customer service time in 2023 ServiceNow information
ದೇಶ5 hours ago

Servicenow: ಭಾರತೀಯರು ಗ್ರಾಹಕ ಸೇವೆ ಪಡೆಯಲು ವರ್ಷದಲ್ಲಿ 15 ಶತಕೋಟಿ ಗಂಟೆ ಕಳೆಯುತ್ತಾರೆ! ಅಧ್ಯಯನ ವರದಿ

Former MLA Rupali Nayka appeals to DC to resolve various issues under Karwara Ankola Assembly Constituency
ಉತ್ತರ ಕನ್ನಡ5 hours ago

Uttara Kannada News: ಕ್ಷೇತ್ರದ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಮಾಜಿ ಶಾಸಕಿ ರೂಪಾಲಿ ನಾಯ್ಕರಿಂದ ಡಿಸಿಗೆ ಮನವಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ1 day ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ2 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ2 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ2 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ3 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ3 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ3 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ3 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ4 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

ಟ್ರೆಂಡಿಂಗ್‌