Hair Growth Tips: ತಲೆ ಕೂದಲು ವೇಗವಾಗಿ ಬೆಳೆಯಬೇಕೆ? ಹೀಗೆ ಮಾಡಿ - Vistara News

ಆರೋಗ್ಯ

Hair Growth Tips: ತಲೆ ಕೂದಲು ವೇಗವಾಗಿ ಬೆಳೆಯಬೇಕೆ? ಹೀಗೆ ಮಾಡಿ

ಕೂದಲು ಬೆಳೆಯುತ್ತಿಲ್ಲ, ತೆಳ್ಳಗಾಗುತ್ತಿದೆ ಎಂದರೆ ಅದಕ್ಕೆ ನಾನಾ ಕಾರಣಗಳಿರುತ್ತವೆ. ಈ ಕುರಿತು (Hair growth tips) ಇಲ್ಲಿದೆ ಮಾಹಿತಿ.

VISTARANEWS.COM


on

Hair Growth Tips
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೆಲವರ ಅತೀ ದೊಡ್ಡ ಸಮಸ್ಯೆ ಎಂದರೆ ಕೂದಲು ಉದ್ದ ಬೆಳೆಯದೆ ಇರುವುದು. ನನ್ನ ಕೂದಲು ಬಹಳ ನಿಧಾನವಾಗಿ ಬೆಳೆಯುತ್ತದೆ, ಅಷ್ಟೇ ಅಲ್ಲ, ಒಂದು ಹಂತದ ನಂತರ ಬೆಳವಣಿಗೆ ನಿಂತಂತೆ ಭಾಸವಾಗುತ್ತದೆ. ಭುಜದವರೆಗೆ ಬೆಳೆದ ನಂತರ ಬೆಳೆಯುವುದೇ ಇಲ್ಲ ಅನಿಸುತ್ತದೆ ಎಂಬುದು ಹಲವರ ದೂರು. ಇಂಥವರಿಗೆ ತಮ್ಮ ಕೂದಲ ಬಗ್ಗೆ ಇನ್ನಾವುದೇ ಕಂಪ್ಲೇಂಟುಗಳಿರುವುದಿಲ್ಲ. ಬದಲಾಗಿ ಕೂದಲು ಬೆಳೆಯುವುದಿಲ್ಲ ಎಂಬುದೇ ದೊಡ್ಡ ಸಮಸ್ಯೆ.
ಕೂದಲು ಬೆಳೆಯುತ್ತಿಲ್ಲ, ತೆಳ್ಳಗಾಗುತ್ತಿದೆ ಎಂದರೆ ಅದಕ್ಕೆ ನಾನಾ ಕಾರಣಗಳಿರುತ್ತವೆ. ಹಾರ್ಮೋನಿನ ವೈಪರೀತ್ಯ, ಪೋಷಕಾಂಶಗಳ ಕೊರತೆ, ಹೊರಗಿನ ಮಾಲಿನ್ಯಯುಕ್ತ ಹವಾಮಾನ, ತಲೆಗೆ ಸೂಕ್ತವಲ್ಲದ ನೀರಿನ ಬಳಕೆ, ರಾಸಾಯನಿಕಯುಕ್ತ ಶಾಂಪೂ ಬಳಕೆ ಹೀಗೆ ಕಾರಣಗಳು ಹಲವಾರು. ಹೀಗಾಗಿ ದಟ್ಟವಾದ ಉದ್ದ ಕೂದಲು ಬೆಳೆಯಲು ಈ ಎಲ್ಲವುಗಳ ಪೂರಕ ವ್ಯವಸ್ಥೆ ನಿರ್ಮಾಣವಾಗಬೇಕು. ನಮ್ಮ ಕೂದಲ ಸಮಸ್ಯೆಗೆ ಏನು ಕಾರಣವಿರಬಹುದು, ಏನು ಮಾಡಬೇಕು ಎಂಬ ಬಗ್ಗೆ ಅರಿವಿರಬೇಕು. ಇಲ್ಲದಿದ್ದಲ್ಲಿ, ಒಂದು ಸಮಸ್ಯೆಯಿಂದ ಇನ್ನೊಂದು ಸಮಸ್ಯೆಯತ್ತ ಮುಖ ಮಾಡಬೇಕಾಗುತ್ತದೆ. ಹಾಗಾದರೆ ಬನ್ನಿ, ಕೂದಲು ಬಹಳ ವೇಗವಾಗಿ ದಟ್ಟವಾಗಿ, ಉದ್ದವಾಗಿ ಬೆಳೆಯಲು ಯಾವ ಪದಾರ್ಥಗಳಿಂದ ಕೂದಲ ಪೋಷಣೆ (Hair growth tips) ಮಾಡಬೇಕು ಎಂಬುದನ್ನು ನೋಡೋಣ.

gooseberries Gooseberry Benefits

ನೆಲ್ಲಿಕಾಯಿ

ಕೂದಲ ಆರೋಗ್ಯಕ್ಕೆ ನೆಲ್ಲಿಕಾಯಿಯಷ್ಟು ಸಮೃದ್ಧ ಆಹಾರ ಇನ್ನೊಂದಿಲ್ಲ. ನೆಲ್ಲಿಕಾಯಿಯ ಸೇವನೆ ಹಾಗೂ ಕೂದಲ ಮೇಲಿನ ಬಳಕೆ ಎರಡೂ ಕೂಡಾ ಕೂದಲನ್ನು ಸಮೃದ್ಧವಾಗಿ ಉದ್ದ ಬೆಳೆಯುವಂತೆ ಮಾಡುತ್ತದೆ ಎಂಬುದನ್ನು ಆಯುರ್ವೇದವೂ ಹೇಳುತ್ತದೆ. ನೆಲ್ಲಿಕಾಯಿಯಲ್ಲಿ ವಿಟಮಿನ್‌ ಸಿ ಹೇರಳವಾಗಿದ್ದು ಇದು ಕೂದಲ ಬುಡವನ್ನೇ ಗಟ್ಟಿ ಮಾಡುವುದಲ್ಲದೆ, ಕೂದಲಿಗೆ ಶಕ್ತಿಯನ್ನು ನೀಡುತ್ತದೆ. ಜೊತೆಗೆ ಕೂದಲ ಬೆಳವಣಿಗೆಗೆ ಸೂಕ್ತ ಅವಕಾಶ ಕಲ್ಪಿಸುತ್ತದೆ. ಅಷ್ಟೇ ಅಲ್ಲ, ಕೂದಲು ಕಪ್ಪಾಗಿರುವಂತೆ ಮಾಡುತ್ತದೆ. ಸಣ್ಣ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗುವುದಕ್ಕೆ ನೆಲ್ಲಿಕಾಯಿ ಬಹಳ ಒಳ್ಳೆಯ ಔಷಧಿ. ನೆಲ್ಲಿಕಾಯಿಯ ಎಣ್ಣೆ, ಪುಡಿಗಳ ಬಳಕೆ ಅಥವಾ ನೆಲ್ಲಿಕಾಯಿಯನ್ನು ಆಗಾಗ ಆಹಾರದಲ್ಲಿ ಬಳಕೆ ಮಾಡುವುದು ಮಾಡುತ್ತಾ ಬಂದಲ್ಲಿ ಕೂದಲು ಬೆಳೆಯುತ್ತದೆ. ಕೂದಲ ಆರೋಗ್ಯವೂ ವೃದ್ಧಿಸುತ್ತದೆ.

Bhringaraja

ಭೃಂಗರಾಜ

ಕೂದಲ ವಿಚಾರ ಬಂದಾಗಲೆಲ್ಲ ಭೃಂಗರಾಜ ಎಂಬ ಗಿಡಮೂಲಿಕೆಯ ಹೆಸರು ಬಳಕೆ ಮಾಡುವುದನ್ನು ನೀವು ಕೇಳಿರಬಹುದು. ಗಿಡಮೂಲಿಕೆಗಳಿಗೇ ರಾಜ ಎಂಬ ಹೆಸರಿಂದ ಕರೆಯಲ್ಪಡುವ ಭೃಂಗರಾಜ ಎಂಬ ಗಿಡಕ್ಕೆ ಕೂದಲಿಗೆ ಸಮಸ್ತ ಪೋಷಣೆಯನ್ನೂ ನೀಡುವ ಶಕ್ತಿಯಿದೆ. ಕೂದಲನ್ನು ಬುಡದಿಂದಲೇ ಶಕ್ತಿಯುತಗೊಳಿಸುವುದಷ್ಟೇ ಅಲ್ಲ, ಬಹುಬೇಗನೆ ಕೂದಲು ಉದ್ದ ಬೆಳೆಯುವಂತೆಯೂ ಮಾಡುತ್ತದೆ. ಭೃಂಗರಾಜದ ಎಣ್ಣೆ ಕೂದಲಿಗೆ ಅತ್ಯುತ್ತಮ ಪೋಷಣೆ ನೀಡುತ್ತದೆ.

Fenugreek Lose Belly Fat

ಮೆಂತ್ಯಕಾಳು

ಕಹಿ ರುಚಿಯ ಮೆಂತ್ಯ ಗುಣದಲ್ಲಿ ಯಾವತ್ತೂ ಸಿಹಿಯೇ. ಇದರಲ್ಲಿ ನೈಕೋಟಿನಿಕ್‌ ಆಸಿಡ್‌ ಎಂಬ ಪ್ರೊಟೀನ್‌ ಶ್ರೀಮಂತವಾಗಿದ್ದು ಇದು ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕೂದಲು ತುಂಡಾಗದಂತೆ ಪೋಷಣೆ ನೀಡಿ, ಹೊಳಪನ್ನೂ ನೀಡುತ್ತದೆ. ಮೆಂತ್ಯವನ್ನು ರಾತ್ರಿ ನೀರಿನಲ್ಲಿ ನೆನೆಹಾಕಿ ಅದನ್ನು ಮೊಳಕೆ ಬರಿಸಿ ತಿನ್ನುವ ಮೂಲಕ, ಜೊತೆಗೆ ಅದನ್ನು ಪೇಸ್ಟ್‌ ಮಾಡಿ ತಲೆಗೆ ಹಚ್ಚುವ ಮೂಲಕ ಇದರ ಪ್ರಯೋಜನ ಪಡೆಯಬಹುದು.

Aloe Vera Herbs For Hair Growth Aloe vera contains enzymes that can promote healthy hair growth by removing dead skin cells from the scalp and promoting hair follicle health.

ಆಲೋವೆರಾ

ಆಲೋವೆರಾ ಜೆಲ್‌ ಅನ್ನು ತಲೆಗೆ ಹಚ್ಚುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಇದು ತಲೆಯ ಭಾಗದ ಚರ್ಮದ ತೇವಾಂಶವನ್ನು ಸಮತೋಲನಗೊಳಿಸಿ, ಕೂದಲ ಬುಡವನ್ನು ಸಂರಕ್ಷಣೆ ಮಾಡುತ್ತದೆ. ನೈಸರ್ಗಿಕ ಕಂಡೀಷನರ್‌ ಆಗಿ ಕೆಲಸ ಮಾಡುವ ಇದು ಕೂದಲ್ನು ದಟ್ಟವಾಗಿಸುತ್ತದೆ. ನಯವಾಗಿಸುತ್ತದೆ.

flower Hibiscus Benefits

ದಾಸವಾಳ

ದಾಸವಾಳದ ಎಲೆ ಹಾಗೂ ಹೂವು ಎರಡೂ ಕೂಡಾ ಕೂದಲ ಕಾಳಜಿ ಅತ್ಯಂತ ಒಳ್ಳೆಯದು. ಇದರಲ್ಲಿ ವಿಟಮಿನ್‌ ಹಾಗೂ ಅಮೈನೋ ಆಸಿಡ್‌ ಹೇರಳವಾಗಿ ಇರುವುದರಿಂದ ಕೂದಲು ಉದುರುವಿಕೆಯನ್ನು ತಡೆದು ಕೂದಲಿಗೆ ಹೊಳಪನ್ನು ನೀಡೀ ಸೊಂಪಾಗಿ ಉದ್ದ ಬೆಳೆಯುವಂತೆ ಮಾಡುತ್ತದೆ.

Neem Tree Plants That Are Best for Home As Per Vastu

ಕಹಿಬೇವು

ಕಹಿಬೇವಿನಲ್ಲಿ ಆಂಟಿ ಬ್ಯಾಕ್ಟೀರಿಯಲ್‌ ಹಾಗೂ ಆಂಟಿ ಫಂಗಲ್‌ ಗುಣಗಳಿದ್ದು ಇವುಗಳು ಕೂದಲ ಬಹುತೇಕ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ತಲೆಹೊಟ್ಟು, ಕಜ್ಜಿ, ತುರಿಕೆ, ನಿಸ್ತೇಜ ಒಣಗಿದಂತಾಗುವ ಕೂದಲು, ಕೂದಲುರುವುದು ಇತ್ಯಾದಿ ಎಲ್ಲ ಸಮಸ್ಯೆಗಳಿಗೂ ಕಹಿಬೇವಿನಲ್ಲಿ ಉತ್ತರವಿದೆ. ಈ ಎಲ್ಲ ಸಮಸ್ಯೆಗಳಿಂದ ಕೂದಲನ್ನು ದೂರವಿಟ್ಟು ಕೂದಲ ಬೆಳವಣಿಗೆಗೆ ನೆರವಾಗುತ್ತದೆ.

ಇದನ್ನೂ ಓದಿ: Health Tips For Lungs: ಈ ಆಹಾರ ತಿನ್ನಿ, ನಿಮ್ಮ ಶ್ವಾಸಕೋಶದ ಆರೋಗ್ಯ ಹೆಚ್ಚಿಸಿಕೊಳ್ಳಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Moringa Leaves Health Benefits: ನುಗ್ಗೆ ಸೊಪ್ಪು ಏಕೆ ತಿನ್ನಬೇಕು? ಏನಿದೆ ಇದರಲ್ಲಿ ವಿಶೇಷ ಗುಣ?

ನುಗ್ಗೆ ಸೊಪ್ಪನ್ನು (Moringa Leaves Health Benefits) ಬೇಸಿಗೆಯಲ್ಲೂ ತಿನ್ನುವುದಕ್ಕೆ ಯೋಗ್ಯ. ಆದರೆ ಎಷ್ಟು ತಿನ್ನಬಹುದು? ಇದರಲ್ಲಿ ಏನಿವೆ ಅಂಥ ತಿನ್ನಲೇಬೇಕಾದ ಸತ್ವಗಳು? ಉಳಿದೆಲ್ಲ ಸೊಪ್ಪುಗಳಂತೆ ಅಲ್ಲವೇ ಇದು ಸಹ? ಅಂಥ ಗುಣಗಳು ಏನಿವೆ ಇದರಲ್ಲಿ? ಇದನ್ನೇಕೆ ಸೂಪರ್‌ಫುಡ್‌ ಎಂದು ಕರೆಯಬೇಕು? ಇದನ್ನು ಎಷ್ಟು ತಿಂದರೆ ಒಳ್ಳೆಯದು? ಈ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

Moringa Leaves Health Benefits
Koo

ನುಗ್ಗೆ ಸೊಪ್ಪು (Moringa Leaves Health Benefits) ಎನ್ನುತ್ತಿದ್ದಂತೆ ಅದರ ಪಾಕದ ಘಮಕ್ಕೆ ಮೂಗರಳಿಸುವವರು ಹಲವರಿದ್ದಾರು. ಭಾರತದ ಉದ್ದಗಲಕ್ಕೆ ನುಗ್ಗೆ ಜನಪ್ರಿಯ. ಆದರೆ ಬೇಸಿಗೆಯಲ್ಲಿ ಇದು ದೇಹದ ಉಷ್ಣತೆ ಹೆಚ್ಚಿಸುತ್ತದೆ ಎಂದು ಇದನ್ನು ದೂರ ಮಾಡಿ, ಮಳೆಗಾಲ-ಚಳಿಗಾಲದಲ್ಲಿ ಮಾತ್ರವೇ ಬಳಸುವ ಕ್ರಮ ಹಲವೆಡೆಗಳಲ್ಲಿದೆ. ಆದರೆ ಈ ಎಲೆಗಳಲ್ಲಿ ಸಾಕಷ್ಟು ನೀರಿನಂಶವೂ ಇರುವುದರಿಂದ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸುವಂಥ ಸೂಪರ್‌ ಫುಡ್‌ ಇದು ಎಂಬುದು ಗೊತ್ತೇ? ಉಳಿದೆಲ್ಲ ಸೊಪ್ಪುಗಳಂತೆ ಅಲ್ಲವೇ ಇದು ಸಹ? ಅಂಥ ಗುಣಗಳು ಏನಿವೆ ಇದರಲ್ಲಿ? ಇದನ್ನೇಕೆ ಸೂಪರ್‌ಫುಡ್‌ ಎಂದು ಕರೆಯಬೇಕು? ಇದನ್ನು ಎಷ್ಟು ತಿಂದರೆ ಒಳ್ಳೆಯದು?

Moringa Leaves Medicinal Leaves

ಸತ್ವಗಳೇನಿವೆ?

ಇದರಲ್ಲಿ ಉಳಿದೆಲ್ಲ ಸೊಪ್ಪುಗಳಿಗಿಂತ ಪ್ರೊಟೀನ್‌ ಸಾಂದ್ರವಾಗಿದೆ. 18 ಬಗೆಯ ಅಮೈನೊ ಆಮ್ಲಗಳು ಇದರಲ್ಲಿವೆ. ಇದರಲ್ಲದೆ, ವಿಟಮಿನ್‌ ಎ, ವಿಟಮಿನ್‌ ಸಿ, ಕ್ಯಾಲ್ಸಿಯಂ, ಪೊಟಾಶಿಯಂ ಮತ್ತು ಕಬ್ಬಿಣದ ಅಂಶಗಳು ಇದರಲ್ಲಿ ಹೇರಳವಾಗಿದೆ. ಇವೆಲ್ಲವುಗಳಿಂದ ಸ್ನಾಯುಗಳು ದೃಢಗೊಂಡು, ದೃಷ್ಟಿ ಕ್ಷೇಮವಾಗಿದ್ದು, ಪ್ರತಿರೋಧಕ ಶಕ್ತಿ ಸುಧಾರಿಸಿ, ಮೂಳೆಗಳು ಬಲಗೊಂಡು, ರಕ್ತದಲ್ಲಿನ ಆಮ್ಲಜನಕದ ಮಟ್ಟವೂ ಸುಧಾರಿಸುತ್ತದೆ.

ಉತ್ಕರ್ಷಣ ನಿರೋಧಕಗಳು

ಇದರಲ್ಲಿ ಕ್ವೆರ್ಸೆಟಿನ್‌, ಕ್ಲೊರೊಜೆನಿಕ್‌ ಆಮ್ಲ ಮತ್ತು ಬೀಟಾ ಕ್ಯಾರೊಟಿನ್‌ಗಳು ವಿಫುಲವಾಗಿವೆ. ಈ ಅಂಶಗಳು ದೇಹದಲ್ಲಿ ಅಂಡಲೆಯುವ ಮುಕ್ತಕಣಗಳನ್ನು ಪ್ರತಿಬಂಧಿಸುತ್ತವೆ. ಇದರಿಂದ ಮಾರಕ ರೋಗಗಳು ಬಾರದಂತೆ ತಡೆಯಬಹುದು. ಜೊತೆಗೆ ದೇಹದೆಲ್ಲೆಡೆ ಹೆಚ್ಚುವ ಉರಿಯೂತದ ಕಾಟದಿಂದ ಮುಕ್ತರಾದರೆ ಆರ್ಥರೈಟಿಸ್‌ನಿಂದ ಹಿಡಿದು ಹೃದಯ ರೋಗಗಳವರೆಗೆ ಬಹಳಷ್ಟು ತೊಂದರೆಗಳನ್ನು ದೂರ ಇರಿಸಲು ಸಾಧ್ಯವಿದೆ.

Antioxidants in it keep immunity strong Benefits Of Mandakki

ರೋಗನಿರೋಧಕ ಶಕ್ತಿ ಹೆಚ್ಚಳ

ಇದರಲ್ಲಿ ವಿಟಮಿನ್‌ ಸಿ ಪ್ರಮಾಣ ಹೆಚ್ಚಿದೆ. ಅಂದಾಜಿಗೆ ಹೇಳುವುದಾದರೆ, ಕಿತ್ತಳೆ ಹಣ್ಣುಗಳಲ್ಲಿ ಇರುವ ಪ್ರಮಾಣಕ್ಕಿಂತಲೂ ನುಗ್ಗೆ ಸೊಪ್ಪಿನಲ್ಲಿ ಹೆಚ್ಚು ಸಿ ಜೀವಸತ್ವವಿದೆ. ಹಾಗಾಗಿ ಸೋಂಕುಗಳನ್ನು ದೂರ ಮಾಡಲು, ಒಂದೊಮ್ಮೆ ಋತುಮಾನದ ವೈರಸ್‌ಗಳು ಕಾಡಿದರೂ ಬೇಗ ಚೇತರಿಸಿಕೊಳ್ಳಲು ಇದರ ನಿಯಮಿತ ಸೇವನೆಯಿಂದ ಸಾಧ್ಯವಾಗುತ್ತದೆ.

Weight Loss tension

ತೂಕ ಇಳಿಸಲು ನೆರವು

ಕಡಿಮೆ ಕ್ಯಾಲರಿಯಲ್ಲಿ ಹೆಚ್ಚಿನ ಪೋಷಕಾಂಶಗಳನ್ನು ನೀಡುವಂಥ ಆಹಾರಗಳು ತೂಕ ಇಳಿಸಿಕೊಳ್ಳಲು ಸೂಕ್ತವಾದಂಥವು. ಜೊತೆಗೆ ಹೇರಳವಾದಂಥ ನಾರು ಮತ್ತು ಪ್ರೊಟೀನ್‌ ಅಂಶಗಳಿದ್ದ ಆಹಾರದಿಂದ ಹೊಟ್ಟೆ ತುಂಬುವುದು ಬೇಗ, ಕಳ್ಳ ಹಸಿವಿನ ಕಾಟವೂ ಇಲ್ಲ. ಈ ಎಲ್ಲ ಗುಣಗಳನ್ನು ಹೊಂದಿರುವ ನುಗ್ಗೆ ಸೊಪ್ಪು ತೂಕ ಇಳಿಸಿಕೊಳ್ಳುವವರಿಗೆ ಪ್ರಯೋಜನಕಾರಿ.

Diabetes Diabetes concept Tired of diabetes high sugar disea Spinach Benefits

ಮಧುಮೇಹಿಗಳಿಗೆ ಒಳ್ಳೆಯದು

ನಾರು ಮತ್ತು ಪ್ರೊಟೀನ್‌ ಹೆಚ್ಚಿರುವ ಆಹಾರಗಳು ಮಧುಮೇಹಿಗಳಿಗೆ ಪೂರಕ, ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಸ್ಥಿರವಾಗಿರುತ್ತದೆ ಎನ್ನುವುದನ್ನು ಅಧ‍್ಯಯನಗಳು ತಿಳಿಸುತ್ತವೆ. ಇದರ ಜೊತೆಗೆ, ನುಗ್ಗೆಯಲ್ಲಿರುವ ಐಸೊಥಿಯೊಸಯನೇಟ್‌ ಎಂಬ ನೈಸರ್ಗಿಕ ಉತ್ಕರ್ಷಣ ನಿರೋಧಕಗಳು ರಕ್ತದಲ್ಲಿ ಸಕ್ಕರೆಯಂಶ ಏರಿಳಿತ ಆಗದಂತೆ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪಾಲಿಫೆನಾಲ್‌ ಅಂಶಗಳೂ ಇದರಲ್ಲಿ ಇರುವುದರಿಂದ ಯಕೃತ್ತಿನ ಆರೋಗ್ಯ ರಕ್ಷಣೆ ಮಾಡುವುದು ಕಷ್ಟವಲ್ಲ.

ಎಷ್ಟು ಸೇವಿಸಬೇಕು?

ಶರೀರಕ್ಕೆ ಯಾವುದಾದರೂ ಸತ್ವ ಅತಿಯಾದರೂ ಜೀರ್ಣಿಸಿಕೊಳ್ಳುವುದು ಕೆಲವೊಮ್ಮೆ ಕಷ್ಟವಾಗಬಹುದು. ಹಾಗಾಗಿ ನುಗ್ಗೆ ಸೊಪ್ಪು ಒಳ್ಳೆಯದು ಎನ್ನುವುದು ನಿಜ. ಆದರೆ ಅದನ್ನು ಎಷ್ಟು ಸೇವಿಸಬೇಕು? ಎಷ್ಟು ತಿಂದರೆ ದೇಹ ತೆಗೆದುಕೊಳ್ಳಬಲ್ಲದು? ನುಗ್ಗೆ ಸೊಪ್ಪಿನ ಪುಡಿಯನ್ನು (ಮೊರಿಂಗ ಪೌಡರ್‌) ಸೇವಿಸುವ ಅ‍ಭ್ಯಾಸವಿದ್ದರೆ ದಿನಕ್ಕೆ ಒಂದು ದೊಡ್ಡ ಚಮಚ ಸಾಕಾಗುತ್ತದೆ. ಇದರಿಂದ, ಅಂದಾಜಿಗೆ ಹೇಳುವುದಾದರೆ, 35 ಕ್ಯಾಲರಿ ಶಕ್ತಿ ದೊರೆಯುತ್ತದೆ. ಅದಿಲ್ಲದಿದ್ದರೆ, ಒಂದು ದೊಡ್ಡ ಮುಷ್ಟಿಯಷ್ಟು ಹಸಿ ಸೊಪ್ಪು ಸೇವನೆಯಿಂದ ಈ ಅಭ್ಯಾಸವನ್ನು ಪ್ರಾರಂಭಿಸಬಹುದು. ಗರ್ಭಿಣಿಯರು ಸ್ವಲ್ಪ ತಿಂದರೆ ತೊಂದರೆಯಿಲ್ಲ, ಆದರೆ ಅತಿಯಾಗಿ ತಿನ್ನುವುದು ಸಮಸ್ಯೆಗಳನ್ನು ತರಬಹುದು.

ಇದನ್ನೂ ಓದಿ: Dates Benefits: ಲೈಂಗಿಕ ಶಕ್ತಿ ಹೆಚ್ಚಿಸಿಕೊಳ್ಳಬೇಕೆ? ದಿನಕ್ಕೊಂದು ಖರ್ಜೂರ ತಿಂದರೆ ಸಾಕು!

ಹೇಗೆಲ್ಲ ತಿನ್ನಬಹುದು?

ಬೆಳಗ್ಗೆ ನುಗ್ಗೆ ಸೊಪ್ಪಿನ ಪುಡಿಯ ಕಷಾಯ ಅಥವಾ ಚಹಾ ಮಾಡಿ ಸೇವಿಸುವವರಿದ್ದಾರೆ. ಈ ಪುಡಿಯನ್ನು ಸ್ಮೂದಿಗಳಿಗೆ ಬಳಸಬಹುದು. ಸ್ಯಾಂಡ್‌ವಿಚ್‌ಗಳಿಗೆ ಇದರ ಪೇಸ್ಟ್‌ ಬಳಸಬಹುದು; ಡಿಪ್‌ ಆಗಿಯೂ ರುಚಿ ಹೆಚ್ಚಿಸುತ್ತದೆ. ಸೂಪ್‌ಗಳಿಗೆ ಬಲು ರುಚಿ. ಪೆಸ್ಟೊ ಪಾಸ್ತ ಮಾಡುವಾಗ ಬೆಸಿಲ್‌ ಬದಲಿಗೆ ನುಗ್ಗೆ ಎಲೆಗಳನ್ನು ಬಳಸಿಕೊಳ್ಳಬಹುದು. ಉಳಿದಂತೆ ಅಪ್ಪಟ ದಕ್ಷಿಣ ಭಾರತೀಯ ಶೈಲಿಯ ಸಾಂಬಾರ್‌, ಪಲ್ಯ, ರೊಟ್ಟಿ, ಗೊಜ್ಜುಗಳಿಗೆ ಇದನ್ನು ಖಂಡಿತವಾಗಿ ಬಳಸಬಹುದು.

Continue Reading

ಆರೋಗ್ಯ

Health Tips Kannada: ಅನಾರೋಗ್ಯದ ಮೂಲ ಕೊಲೆಸ್ಟ್ರಾಲ್‌ ತಗ್ಗಿಸಬೇಕೆ? ಬೆಳಗ್ಗೆ ಈ ಪೇಯ ಕುಡಿಯಿರಿ

ಆಹಾರದ ಬದಲಾವಣೆಗಳಿಂದ ಕೊಲೆಸ್ಟ್ರಾಲ್‌ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸಬಹುದು. ನಾರು ಹೆಚ್ಚಿರುವ ಆಹಾರಗಳು, ನೈಸರ್ಗಿಕವಾಗಿ ಕೊಲೆಸ್ಟ್ರಾಲ್‌ ಕಡಿಮೆ ಮಾಡುವ ಗುಣವುಳ್ಳವು ಮತ್ತು ಉತ್ಕರ್ಷಣ ನಿರೋಧಕಗಳು ಹೆಚ್ಚಿರುವ ಆಹಾರಗಳಿಂದ ಈ ದೋಷವನ್ನು ಸರಿಪಡಿಸಿಕೊಳ್ಳಲು ಸಾಧ್ಯವಿದೆ ಎನ್ನುತ್ತಾರೆ ಸ್ವಾಸ್ಥ್ಯ ಪರಿಣಿತರು. ಎಂಥಾ ಆಹಾರಗಳವು? ಈ ಕುರಿತು ಇಲ್ಲಿದೆ ಮಾಹಿತಿ.

VISTARANEWS.COM


on

Overweight man suffering from chest pain, high blood pressure, cholesterol level
Koo
Obese male suffering from chest pain high blood pressure cholesterol level Sesame Benefits
ಕೊಲೆಸ್ಟ್ರಾಲ್‌ ಅಪಾಯಕಾರಿ
ಆಹಾರ ಕ್ರಮದಲ್ಲಿನ ದೋಷ ಮತ್ತು ವ್ಯಾಯಾಮ ಇಲ್ಲದಿರುವಂಥ ಕಾರಣದಿಂದ ದೇಹದಲ್ಲಿ ಜಮೆಯಾಗುವ ಕೊಬ್ಬು ಹೆಚ್ಚುತ್ತಿದೆ. ಅತಿಯಾದ ಕೊಬ್ಬಿನ ಆಹಾರ ಸೇವನೆ, ಸಂಸ್ಕರಿತ ಸಕ್ಕರೆ ಸೇವನೆಯಿಂದಾಗಿ ಶರೀರದಲ್ಲಿ ಕೊಲೆಸ್ಟ್ರಾಲ್‌ ಪ್ರಮಾಣ ಹೆಚ್ಚುತ್ತಿದೆ. ಇದರಿಂದ ಹೃದಯದ ತೊಂದರೆ ಮತ್ತು ಪಾರ್ಶ್ವವಾಯುವಿನಂಥ ಮಾರಣಾಂತಿಕ ಸಮಸ್ಯೆಗಳು ಎದುರಾಗುತ್ತವೆ.
Skin Care Foods
ಆಹಾರದ ಪಾತ್ರ ಮುಖ್ಯ
ಕೆಲವು ಆಹಾರದ ಬದಲಾವಣೆಗಳಿಂದ ಈ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸಬಹುದು. ನಾರು ಹೆಚ್ಚಿರುವ ಆಹಾರಗಳು, ನೈಸರ್ಗಿಕವಾಗಿ ಕೊಲೆಸ್ಟ್ರಾಲ್‌ ಕಡಿಮೆ ಮಾಡುವ ಗುಣವುಳ್ಳವು ಮತ್ತು ಉತ್ಕರ್ಷಣ ನಿರೋಧಕಗಳು ಹೆಚ್ಚಿರುವ ಆಹಾರಗಳಿಂದ ಈ ದೋಷವನ್ನು ಸರಿಪಡಿಸಿಕೊಳ್ಳಲು ಸಾಧ್ಯವಿದೆ. ಬೆಳಗಿನ ಖಾಲಿ ಹೊಟ್ಟೆಯಲ್ಲಿ ನಾವು ದೇಹಕ್ಕೆ ನೀಡುವಂಥ ಆಹಾರಗಳು ಹಲವು ರೀತಿಯಲ್ಲಿ ಮಹತ್ವವನ್ನು ಪಡೆದಿವೆ.
reen Tea Benefits Of Drinking Green Tea
ಗ್ರೀನ್‌ ಟೀ
ಹಲವು ರೀತಿಯ ಉತ್ತಮ ಪಾಲಿಫೆನಾಲ್‌ಗಳನ್ನು ಹೊಂದಿರುವ ಗ್ರೀನ್‌ ಟೀ, ಉತ್ಕರ್ಷಣ ನಿರೋಧಕಗಳ ಖಜಾನೆಯಂತಿದೆ. ಅದರಲ್ಲೂ ಗ್ರೀನ್‌ ಟೀದಲ್ಲಿರುವ ಕೆಟಿಚಿನ್‌ ಅಂಶಗಳು ಕೊಲೆಸ್ಟ್ರಾಲ್‌ಗಳ ಜೊತೆ ಕೆಲಸ ಮಾಡುತ್ತವೆ. ಇದರಿಂದ ಆಹಾರದಲ್ಲಿನ ಕೊಲೆಸ್ಟ್ರಾಲ್‌ ಅಂಶವನ್ನು ದೇಹ ಹೀರಿಕೊಳ್ಳುವುದನ್ನು ಕಡಿಮೆ ಮಾಡಲು ಸಾಧ್ಯವಿದೆ. ಹಾಗಾಗಿ ನಿಯಮಿತವಾಗಿ ಗ್ರೀನ್‌ ಟೀ ಕುಡಿಯುವುದರಿಂದ ದೇಹದಲ್ಲಿ ಎಲ್‌ಡಿಎಲ್‌ ಮತ್ತು ಒಟ್ಟಾರೆ ಕೊಲೆಸ್ಟ್ರಾಲ್‌ಗಳನ್ನು ಕಡಿಮೆ ಮಾಡಲು ಸಾಧ್ಯವಿದೆ.
Chia seeds and soy milk
ಚಿಯಾ ಬೀಜ ಮತ್ತು ಸೋಯ್‌ ಹಾಲು
ಈ ಮಿಶ್ರಣ ಕೊಲೆಸ್ಟ್ರಾಲ್‌ ನಿರ್ವಹಣೆಯಲ್ಲಿ ದಕ್ಷತೆಯನ್ನು ಪ್ರದರ್ಶಿಸಿದೆ. ನಾರು, ಪ್ರೊಟೀನ್‌ ಮತ್ತು ಒಮೇಗಾ ೩ ಕೊಬ್ಬಿನಾಮ್ಲಗಳ ಜೊತೆಗೆ ಹಲವು ಸೂಕ್ಷ್ಮ ಸತ್ವಗಳು ಇದರಿಂದ ದೇಹ ಸೇರುತ್ತವೆ. ದೇಹದಲ್ಲಿ ಎಚ್‌ಡಿಎಲ್‌ ಅಥವಾ ಉತ್ತಮ ಕೊಬ್ಬನ್ನು ಹೆಚ್ಚಿಸುವ ಸಾಧ್ಯತೆ ಚಿಯಾ ಬೀಜಗಳಿಗಿದೆ. ಎಲ್‌ಡಿಎಲ್‌ ಅಥವಾ ಕೆಟ್ಟ ಕೊಬ್ಬನ್ನು ಕಡಿಮೆ ಮಾಡುವ ಕ್ಷಮತೆ ಸೋಯಾ ಹಾಲಿಗಿದೆ. ಹಾಗಾಗಿ ಈ ಮಿಶ್ರಣವನ್ನೂ ಬೆಳಗಿನ ಪೇಯವಾಗಿ ಉಪಯೋಗಿಸಬಹುದು.
Beetroot and carrot juice
ಬೀಟ್‌ರೂಟ್‌ ಮತ್ತು ಕ್ಯಾರೆಟ್‌ ರಸ
ಹೆಚ್ಚಿನ ನೈಟ್ರೇಟ್‌ ಅಂಶವಿರುವ ಬೀಟ್‌ರೂಟ್‌ ರಸ ಕೊಲೆಸ್ಟ್ರಾಲ್‌ ತಗ್ಗಿಸುವ ಸಾಧ್ಯತೆಯನ್ನು ಹೊಂದಿದೆ. ಇನ್ನು, ಬೀಟಾ ಕ್ಯಾರೋಟಿನ್‌ನಂಥ ಕೆರೋಟಿನಾಯ್ಡ್‌ಗಳನ್ನು ಹೊಂದಿರುವ ಕ್ಯಾರೆಟ್‌ ಸಹ ಕೊಲೆಸ್ಟ್ರಾಲ್‌ ಹೀರಿಕೊಳ್ಳುವುದನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಈ ಬಗ್ಗೆ ಹಲವು ಅಧ್ಯಯನಗಳು ನಡೆಯುತ್ತಿದ್ದು, ಪೂರಕ ಪರಿಣಾಮವನ್ನು ದಾಖಲಿಸಿವೆ.
Ginger, lemon juice
ಶುಂಠಿ, ನಿಂಬೆ ರಸ
ಬೆಳಗಿನ ಹೊತ್ತು ಬೆಚ್ಚಗಿನ ನೀರಿಗೆ ಕೆಲವು ಹನಿ ನಿಂಬೆ ರಸ ಮತ್ತು ಅರ್ಧ ಚಮಚ ಶುಂಠಿ ರಸ ಸೇರಿಸಿ ಕುಡಿಯುವುದು ಸಹ ಉತ್ತಮ ಪರಿಣಾಮಗಳನ್ನ ತೋರಿಸಬಲ್ಲದು. ಉತ್ಕರ್ಷಣ ನಿರೋಧಕಗಳನ್ನು ನಿಂಬೆ ರಸ ದೇಹಕ್ಕೆ ನೀಡಿದರೆ, ಟ್ರೈಗ್ಲಸರೈಡ್‌ ಮತ್ತು ಎಲ್‌ಡಿಎಲ್‌ ತಗ್ಗಿಸುವ ಗುಣವನ್ನು ಶುಂಠಿ ಹೊಂದಿದೆ. ಜೊತೆಗೆ, ಬೆಳಗಿನ ಹೊತ್ತು ಚೈತನ್ಯವನ್ನು ನೀಡಿ, ವ್ಯಾಯಾಮ ಮಾಡುವ ಉತ್ಸಾಹವನ್ನೂ ಹೆಚ್ಚಿಸುತ್ತದೆ ಈ ಪೇಯ.
Tomato juice
ಟೊಮೇಟೊ ರಸ
ಟೊಮೆಟೊದ ಕೆಂಪು ಬಣ್ಣಕ್ಕೆ ಕಾರಣವಾಗುವುದು ಅದರಲ್ಲಿರುವ ಲೈಕೊಪೇನ್‌ ಅಂಶ. ಇದು ಎಲ್‌ಡಿಎಲ್‌ ಕಡಿಮೆ ಮಾಡುವ ಗುಣವನ್ನು ಢಾಳಾಗಿ ತೋರಿಸಿದೆ. ಅಧ್ಯಯನಗಳ ಪ್ರಕಾರ, ಅತಿ ಹೆಚ್ಚು ಪ್ರಮಾಣದ ಲೈಕೊಪೇನ್‌ ಅಂಶವು (ದಿನಕ್ಕೆ 25 ಎಂಜಿಗಿಂತ ಹೆಚ್ಚು), ಕಡಿಮೆ ತೀವ್ರತೆಯ ಸ್ಟ್ಯಾಟಿನ್‌ಗಳು (ಕೊಲೆಸ್ಟ್ರಾಲ್‌ ಕಡಿಮೆ ಮಾಡುವ ಔಷಧಿಗಳು) ಬೀರುವ ಪರಿಣಾಮವನ್ನೇ ತೋರುತ್ತವೆ.
Turmeric and soy milk
ಅರಿಶಿನ ಮತ್ತು ಸೋಯ್‌ ಹಾಲು
ಸೋಯ್‌ ಹಾಲಿನಲ್ಲಿ ಎಲ್‌ಡಿಎಲ್‌ ಅಥವಾ ಕೆಟ್ಟ ಕೊಬ್ಬನ್ನು ಕಡಿಮೆ ಮಾಡುವ ಸಾಧ್ಯತೆಯಿದೆ. ಇನ್ನು ಅರಿಶಿನದಲ್ಲಿರುವ ಕರ್ಕುಮಿನ್‌ ಎಂಬ ಪ್ರಬಲ ಉತ್ಕರ್ಷಣ ನಿರೋಧಕವು ಎಲ್‌ಡಿಎಲ್‌ ಮತ್ತು ಟ್ರೈಗ್ಲಿಸರೈಡ್‌ಗಳನ್ನು ತಗ್ಗಿಸುವ ಗುಣವನ್ನು ತೋರಿಸಿದೆ. ಹಾಗಾಗಿ ಪ್ರಾಣಿಜನ್ಯ ಹಾಲಿಗೆ ಅರಿಶಿನ ಸೇರಿಸುವ ಬದಲು, ಸೋಯಾ ಹಾಲಿಗೆ ಅರಿಶಿನ ಸೇರಿಸಿ ಕುಡಿಯುವುದು ಕೊಲೆಸ್ಟ್ರಾಲ್‌ ತಗ್ಗಿಸುವುದಕ್ಕೆ ಒಳ್ಳೆಯ ಉಪಾಯ.
Continue Reading

ಆರೋಗ್ಯ

Health Tips Kannada: ಕಣ್ಣಿನ ಕೆಳಗಿನ ಕಪ್ಪು ಕಲೆ ನಿವಾರಿಸುವುದು ಹೇಗೆ?

ಕಣ್ಣಿನ ಕೆಳಗಿನ ಭಾಗದಲ್ಲಿ ಕಾಣುವ ಗಾಢಬಣ್ಣದ ವರ್ತುಲಗಳು ಮುಖಕ್ಕೆ ವಯಸ್ಸಾದ, ಸುಸ್ತಾದ ಮತ್ತು ನಿದ್ದೆಗೆಟ್ಟ ಕಳೆಯನ್ನು ನೀಡುತ್ತದೆ. ಇದು ಗಂಭೀರವಾದ ಆರೋಗ್ಯ ಸಮಸ್ಯೆಯ ಲಕ್ಷಣ ಅಲ್ಲದಿದ್ದರೂ, ಇದನ್ನು ಸರಿ ಮಾಡುವುದು ಹೇಗೆಂಬ ಪ್ರಶ್ನೆ ಮೂಡುವುದಂತೂ ಹೌದು. ಇದನ್ನು ನಿವಾರಿಸುವುದು ಹೇಗೆ? ಈ ಕುರಿತು ಇಲ್ಲಿದೆ ಉಪಯುಕ್ತ ಮಾಹಿತಿ.

VISTARANEWS.COM


on

Health Tips Kannada
Koo
Cold compress
ತಣ್ಣನೆಯ ಕಂಪ್ರೆಸ್‌
ತಂಪಾದ ನೀರಲ್ಲಿ ಅದ್ದಿದ ಬಟ್ಟೆ, ಫ್ರಿಜ್‌ನಲ್ಲಿ ಕೆಲಕಾಲ ಇರಿಸಿದ ತೇವದ ಟೀ ಬ್ಯಾಗ್‌ ಮುಂತಾದವುಗಳನ್ನು ಕಣ್ಣಿನ ಮೇಲೆ 10-15 ನಿಮಿಷ ಇರಿಸಿಕೊಳ್ಳಿ. ಅದರಲ್ಲೂ ಗ್ರೀ ಟೀ ಅಥವಾ ಕ್ಯಾಮೊಮೈಲ್‌ ಟೀ ಹೆಚ್ಚು ಉಪಯುಕ್ತ. ಇದರಿಂದ ಈ ಭಾಗದಲ್ಲಿ ಉಬ್ಬಿದಂತೆ ಕಾಣುವ ರಕ್ತನಾಳಗಳು ಸಂಕೋಚಗೊಳ್ಳುತ್ತವೆ. ಇದರಿಂದ ಕಣ್ಣಿನ ಕೆಳಗಿನ ಭಾಗ ಉಬ್ಬಿದಂತಾಗಿ ಕಪ್ಪಾಗಿದ್ದರೆ ಕಡಿಮೆಯಾಗುತ್ತದೆ.
Cucumber
ಸೌತೇಕಾಯಿ
ತಂಪಾದ ಸೌತೇಕಾಯಿಯ ಗಾಲಿಯಂಥ ತುಂಡನ್ನು ಕಣ್ಣುಗಳ ಮೇಲಿರಿಸಿ 20 ನಿಮಿಷ ಬಿಡಿ. ಇದನ್ನು ದಿನವೂ ಮಾಡಬಹುದು. ಇದರಿಂದ ಕಣ್ಣಿನ ಕೆಳಗೆ ಉಬ್ಬಿದ್ದರೆ ಕಡಿಮೆಯಾಗಿ, ಗಾಢಬಣ್ಣವೂ ತಿಳಿಯಾಗುತ್ತದೆ. ಜೊತೆಗೆ ಕಣ್ಣನ್ನು ತಂಪಾಗಿಸಿ, ದೃಷ್ಟಿಗೂ ಅನುಕೂಲ ಒದಗಿಸುತ್ತದೆ.
potato
ಆಲೂಗಡ್ಡೆ
ಸೌತೇಕಾಯಿಯಂತೆ, ಆಲೂಗಡ್ಡೆಗೂ ನೈಸರ್ಗಿಕವಾದ ಬ್ಲೀಚಿಂಗ್‌ ಗುಣವಿದೆ. ಹಾಗಾಗಿ ಕಪ್ಪಾದ ಚರ್ಮವನ್ನು ನಿಧಾನಕ್ಕೆ ತಿಳಿಯಾಗಿಸುತ್ತದೆ. ಫ್ರಿಜ್‌ನಲ್ಲಿಟ್ಟ ಆಲೂಗಡ್ಡೆಯನ್ನು ತುರಿದು ರಸ ತೆಗೆಯಿರಿ, ಈ ತಂಪಾದ ರಸದಲ್ಲಿ ಸ್ವಚ್ಛ ಹತ್ತಿಯ ಬಟ್ಟೆಯನ್ನು ಅದ್ದಿ ಕಣ್ಣುಗಳ ಕೆಳಗಿರಿಸಿಕೊಳ್ಳಿ. ೧೫ ನಿಮಿಷಗಳ ನಂತರ ತಂಪಾದ ನೀರಲ್ಲಿ ತೊಳೆಯಿರಿ.
Tomato juice
ಟೊಮಾಟೊ ರಸ
ಇದೂ ಸಹ ಗಾಢ ಬಣ್ಣವನ್ನು ತಿಳಿಯಾಗಿಸಬಲ್ಲ ಗುಣವನ್ನು ಹೊಂದಿದೆ. ಟೊಮಾಟೊ ರಸ ತೆಗೆದು, ಕೆಲವು ಹನಿ ನಿಂಬೆರಸ ಸೇರಿಸಿ. ಇದರಲ್ಲಿ ಸ್ವಚ್ಛ ವಸ್ತ್ರವನ್ನು ಅದ್ದಿ, ಕಣ್ಣುಗಳ ಕೆಳಗಿರಿಸಿಕೊಳ್ಳಿ. 10 ನಿಮಿಷಗಳ ನಂತರ ಬೆಚ್ಚಗಿನ ನೀರಲ್ಲಿ ತೊಳೆಯಿರಿ.
Almond oil
ಬಾದಾಮಿ ಎಣ್ಣೆ
ವಿಟಮಿನ್‌ ಇ ಹೇರಳವಾಗಿದೆ ಬಾದಾಮಿ ತೈಲದಲ್ಲಿ. ರಾತ್ರಿ ಮಲಗುವ ಮುನ್ನ, ಇದರ ಕೆಲವು ಹನಿಗಳನ್ನು ಕಣ್ಣ ಕೆಳಭಾಗದಲ್ಲಿ ಲಘುವಾಗಿ ಹಚ್ಚಿ ಮಸಾಜ್‌ ಮಾಡಿ. ರಾತ್ರಿಡೀ ಇದನ್ನು ಹಾಗೆಯೇ ಬಿಡಿ. ಹಚ್ಚಿದ ಎಣ್ಣೆ ಅತಿಯಾದರೆ ಕಣ್ಣುರಿ ಬಂದೀತು. ಹಾಗಾಗಿ ಸ್ವಲ್ಪವೇ ಹಚ್ಚಿ.
rose water
ಗುಲಾಬಿ ಜಲ
ಹತ್ತಿಯ ಪ್ಯಾಡ್‌ಗಳಲ್ಲಿ ತಂಪಾದ ಗುಲಾಬಿ ಜಲದಲ್ಲಿ ಅದ್ದಿ, ಮುಚ್ಚಿದ ಕಣ್ಣುಗಳ ಮೇಲೆ ಇರಿಸಿಕೊಳ್ಳಿ. ಸೌತೇಕಾಯಿಯಂಥದ್ದೇ ಪರಿಣಾಮಗಳನ್ನು ಗುಲಾಬಿ ಜಲವೂ ನೀಡಬಲ್ಲದು. 15 ನಿಮಿಷಗಳ ನಂತರ ತಂಪಾದ ನೀರಲ್ಲಿ ತೊಳೆಯಿರಿ.
aloe vera
ಲೋಳೆಸರ
ಇದರ ತಂಪಾದ ತಾಜಾ ಜೆಲ್‌ ತೆಗೆಯಿರಿ. ಅದನ್ನು ಕಣ್ಣಿನ ಕೆಳಭಾಗದಲ್ಲಿ ಇರಿಸಿಕೊಂಡು 20 ನಿಮಿಷ ಬಿಡಿ. ನಂತರ ತಂಪಾದ ನೀರಿನಿಂದ ತೊಳೆಯಿರಿ. ಇದು ಚರ್ಮವನ್ನು ಬಿಗಿಯಾಗಿಸಿ, ತೇವವನ್ನು ಹಿಡಿದಿಡುತ್ತದೆ. ಜೊತೆಗೆ ಕಣ್ಣಿನ ಕೆಳಭಾಗದ ಕಪ್ಪು ಚರ್ಮವನ್ನು ತಿಳಿಯಾಗಿಸುತ್ತದೆ. ಇವೆಲ್ಲವುಗಳ ಜೊತೆಗೆ, ದೇಹಕ್ಕೆ ಚೆನ್ನಾಗಿ ನೀರು ಬೇಕು. ಋತುಮಾನದ ಸೊಪ್ಪು-ತರಕಾರಿ-ಹಣ್ಣುಗಳು ಬೇಕು. ಕಣ್ತುಂಬಾ ನಿದ್ದೆಯಂತೂ ಕಡ್ಡಾಯ.
Continue Reading

ಆರೋಗ್ಯ

ICMR Good Health Guidelines: ಆರೋಗ್ಯವಾಗಿರಲು ಎಷ್ಟು ಗಂಟೆ ನಿದ್ದೆ ಮಾಡಬೇಕು, ಎಷ್ಟು ಗಂಟೆ ಕೆಲಸ ಮಾಡಬೇಕು? ಆಹಾರ ಏನಿರಬೇಕು?

ಆರೋಗ್ಯಕರ ಜೀವನಕ್ಕೆ ದೈಹಿಕ ಚಟುವಟಿಕೆ ಬಹುಮುಖ್ಯ. ಜೊತೆಗೆ ವಿಶ್ರಾಂತಿಯು ಬೇಕು. ಇದಕ್ಕಾಗಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ತನ್ನ ಮಾರ್ಗಸೂಚಿಯಲ್ಲಿ (ICMR  Good Health Guidelines) ಏನು ಹೇಳಿದೆ ಗೊತ್ತೇ? ನಿತ್ಯ ಜೀವನದಲ್ಲಿ ಪಾಲಿಸಲೇಬೇಕಾದ ಉಪಯುಕ್ತ ಸಲಹೆಗಳ ಪಟ್ಟಿ ಇಲ್ಲಿದೆ.

VISTARANEWS.COM


on

By

ICMR  Good Health Guidelines
Koo

ಆರೋಗ್ಯವಾಗಿರಲು (healthy) ದೈಹಿಕ ಚಟುವಟಿಕೆಯೊಂದಿಗೆ (activity) ಸರಿಯಾಗಿ ವಿಶ್ರಾಂತಿ (rest) ಪಡೆಯುವುದು ಬಹುಮುಖ್ಯ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR  Good Health Guidelines) ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ. ದಿನಕ್ಕೆ ಎಂಟು ಗಂಟೆಗಳ ನಿದ್ರೆ ಮತ್ತು ಎಂಟು ಗಂಟೆಗಳ ಕೆಲಸವನ್ನು ಅದು ಶಿಫಾರಸು ಮಾಡಿದೆ.

ಮಕ್ಕಳು ಮತ್ತು ಹದಿಹರೆಯದವರು (children and youth) ದಿನಕ್ಕೆ ಕನಿಷ್ಠ 60 ನಿಮಿಷಗಳ ವರೆಗೆ ಮಧ್ಯಮದಿಂದ ಹುರುಪಿನ ವ್ಯಾಯಾಮ ನಡೆಸಬೇಕು. ಅದೇ ರೀತಿ ವಯಸ್ಕರು (aged) ವಾರದಲ್ಲಿ ಕನಿಷ್ಠ ಐದು ದಿನಗಳವರೆಗೆ ದಿನಕ್ಕೆ 30- 60 ನಿಮಿಷಗಳ ಮಧ್ಯಮ-ತೀವ್ರತೆಯ ಏರೋಬಿಕ್ ವ್ಯಾಯಾಮ ಅಥವಾ 15 ನಿಮಿಷಗಳ ತೀವ್ರವಾದ- ತೀವ್ರತೆಯ ಏರೋಬಿಕ್ ವ್ಯಾಯಾಮವನ್ನು ನಡೆಸಲು ಐಸಿಎಂಆರ್ ಶಿಫಾರಸು ಮಾಡಿದೆ.

ಯಾಕೆ?

ಪ್ರತಿ ನಿತ್ಯ ಯೋಗ, ದೈಹಿಕ ವ್ಯಾಯಾಮ ಮಾಡುವುದರಿಂದ ಒಳ್ಳೆಯ ಆರೋಗ್ಯ ಮತ್ತು ಆರೋಗ್ಯಕರ ಜೀವನವನ್ನು ನಡೆಸಬಹುದು. ಇದು ದೇಹದ ತೂಕ ಕಾಪಾಡಲು, ಮಾಂಸಖಂಡಗಳ ಶಕ್ತಿ ವೃದ್ಧಿಸಲು, ಎಲುಬಿನ ಆರೋಗ್ಯ, ಕೀಲುಗಳ ಜೋಡಣೆಯನ್ನು ಆರೋಗ್ಯವಾಗಿ ಇರಿಸುತ್ತದೆ. ನಿತ್ಯವೂ ಯೋಗ, ದೈಹಿಕ ಚಟುವಟಿಕೆ ನಡೆಸುವುದರಿಂದ ದೀರ್ಘಕಾಲದ ಕೆಲವು ಆರೋಗ್ಯ ಸಮಸ್ಯೆಗಳನ್ನು ಹೋಗಲಾಡಿಸಬಹುದು.

ಯಾವ ರೀತಿ?

ನಡಿಗೆ, ಜಿಮ್, ಸ್ವಿಮ್ಮಿಂಗ್, ಜಾಗಿಂಗ್, ಸ್ಕಿಪ್ಪಿಂಗ್, ಸೈಕ್ಲಿಂಗ್ ಮೊದಲಾದವುಗಳಲ್ಲಿ ಯಾವುದಾದರೂ ಒಂದೆರಡನ್ನು ನಮ್ಮ ನಿತ್ಯದ ಚಟುವಟಿಕೆಯಲ್ಲಿ ಅಳವಡಿಸಿಕೊಳ್ಳಬೇಕು. ಇದರೊಂದಿಗೆ ಪ್ರಾಣಾಯಾಮ, ಧ್ಯಾನವನ್ನು ಅಳವಡಿಸಿಕೊಳ್ಳಲು ಐಸಿಎಂಆರ್ ಸೂಚಿಸಿದೆ.

ಅಲ್ಲದೇ ಮನೆ ಕೆಲಸ, ಮನೆ ಸುತ್ತಮುತ್ತ ಸುತ್ತಾಡೋದು, ಮೆಟ್ಟಿಲುಗಳನ್ನು ಹತ್ತಿ ಇಳಿಯೋದು, ಉದ್ಯಾನ ಕೆಲಸಗಳು, ಹೊರಾಂಗಣ, ಒಳಾಂಗಣ ಕ್ರೀಡೆಗಳನ್ನು ಸೇರಿಸಿಕೊಳ್ಳಬೇಕು. ಕಾರ್ಡಿಯೋ ಚಟುವಟಿಕೆಗಳನ್ನು ನಡೆಸಲು ಮರೆಯದಿರಿ.

ವೈದ್ಯರನ್ನು ನೋಡಿ

ದೈಹಿಕ ಚಟುವಟಿಕೆ ಎಷ್ಟೇ ಮಾಡಿದರೂ ಅನಾರೋಗ್ಯ ಕಾಡಿದಾಗ ವೈದ್ಯರನ್ನು ಕಾಣಲೇಬೇಕು. ಅದರಲ್ಲೂ ಮುಖ್ಯವಾಗಿ ಉಸಿರಾಟದ ತೊಂದರೆ, ದೇಹದ ಭಾಗದಲ್ಲಿ ನೋವು, ವಾಕರಿಕೆ, ಸುಸ್ತು, ತಲೆನೋವು ಕಡಿದಾಗ ದೇಹಕ್ಕೆ ವಿಶ್ರಾಂತಿಯನ್ನು ಬಯಸುತ್ತದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.

ಇದನ್ನೂ ಓದಿ: ICMR Dietary Guidelines: ನಿಮ್ಮ ಆರೋಗ್ಯ ಚೆನ್ನಾಗಿರಬೇಕೆ? ತಜ್ಞ ಸಮಿತಿಯ ಈ ಆಹಾರ ಸಲಹೆ ಪಾಲಿಸಿ


ಯಾವುದು ಎಷ್ಟು ಚಟುವಟಿಕೆ ಬೇಕು?

ನಿದ್ದೆ 8 ಗಂಟೆ, ಕಚೇರಿ ಕೆಲಸ – 8 ಗಂಟೆ, ಮನೆ ಕೆಲಸ- 3.30 ಗಂಟೆ, ತಿನ್ನುವುದು, ಟಿವಿ ನೋಡುವುದು, ತಮ್ಮನ್ನು ತಾವು ತಯಾರಿ ಮಾಡುವುದಕ್ಕೆ- 3 ಗಂಟೆ, ವ್ಯಾಯಾಮ- 60 ನಿಮಿಷ, ಏರೋಬಿಕ್ ವ್ಯಾಯಾಮ- 20 ನಿಮಿಷವನ್ನು ಮೀಸಲಿಡುವಂತೆ ಐಸಿಎಂಆರ್ ಸೂಚಿಸಿದೆ.

ಊಟ, ಉಪಾಹಾರದಲ್ಲಿ ಏನಿರಬೇಕು?

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಕಡಿಮೆ ಚಟುವಟಿಕೆ ಹೊಂದಿರುವ ಪುರುಷರು ಮತ್ತು ಮಹಿಳೆಯರು ಆಹಾರದಲ್ಲಿ (food) ಪೌಷ್ಟಿಕಾಂಶಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದ್ದು, ಇದಕ್ಕಾಗಿ ಇಂಥವರು ಯಾವ ರೀತಿಯ ಆಹಾರ ಸೇವಿಸಬೇಕು ಎಂಬುದರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಐಸಿಎಂಆರ್ ಪ್ರಕಾರ ಕಡಿಮೆ ಚಟುವಟಿಕೆ ಹೊಂದಿರುವ ಪುರುಷರ ಉಪಾಹಾರದಲ್ಲಿ ನೆನೆಸಿದ ಮತ್ತು ಬೇಯಿಸಿದ ಬಜ್ರಾ 90 ಗ್ರಾಂ ಮತ್ತು ತರಕಾರಿಗಳು 50 ಗ್ರಾಂ ಒಳಗೊಂಡಿರಬೇಕು. ಅದೇ ರೀತಿ ಮಹಿಳೆಯರಿಗೆ ನೆನೆಸಿದ ಮತ್ತು ಬೇಯಿಸಿದ ಬಜ್ರಾವನ್ನು ಉಪಾಹಾರದಲ್ಲಿ 60 ಗ್ರಾಂ ಮತ್ತು ತರಕಾರಿಗಳು 100 ಗ್ರಾಂ ಸೇರಿಸಿಕೊಳ್ಳಬೇಕು.

ಮಧ್ಯಾಹ್ನದ ಊಟದಲ್ಲಿ ಪುರುಷರು ಧಾನ್ಯಗಳನ್ನು 100 ಗ್ರಾಂ ಮತ್ತು ಬೇಳೆಕಾಳುಗಳು 30 ಗ್ರಾಂ, ಮಹಿಳೆಯರು ಮಧ್ಯಾಹ್ನದ ಊಟದಲ್ಲಿ ಧಾನ್ಯಗಳು 80 ಗ್ರಾಂ ಮತ್ತು ದ್ವಿದಳ ಧಾನ್ಯಗಳನ್ನು 20 ಗ್ರಾಂ ತೆಗೆದುಕೊಳ್ಳಬಹುದು. ಸಂಜೆ ಇಬ್ಬರಿಗೂ 50 ಮಿಲಿ ಲೀಟರ್ ಹಾಲು ಕುಡಿಯಲು ಸೂಚಿಸಲಾಗುತ್ತದೆ.

Continue Reading
Advertisement
Lok Sabha Election
ದೇಶ25 mins ago

Lok Sabha Election: 28 ವರ್ಷಗಳಲ್ಲೇ ಶ್ರೀನಗರದಲ್ಲಿ ಅಧಿಕ ಮತದಾನ; 370ನೇ ವಿಧಿ ರದ್ದು ಎಫೆಕ್ಟ್?

Award Ceremony
ಬೆಂಗಳೂರು31 mins ago

Award Ceremony: ಬೆಂಗಳೂರಿನಲ್ಲಿ ಮೇ 19ರಂದು ಕಾದಂಬರಿ ಸಾರ್ವಭೌಮ ಅ.ನ.ಕೃ. ಪ್ರಶಸ್ತಿ ಪ್ರದಾನ

Muhammad Waseem
ಕ್ರೀಡೆ39 mins ago

Muhammad Waseem : ಇತಿಹಾಸ ಸೃಷ್ಟಿಸಿದ ಯುಎಇ ಕ್ರಿಕೆಟ್​ ತಂಡದ ನಾಯಕ ವಸೀಮ್​

Narendra Modi
ದೇಶ1 hour ago

Narendra Modi: ವಾರಾಣಸಿಯಲ್ಲಿ ಹೊಸ ಅಲೆ ಸೃಷ್ಟಿಸಿದ ಮೋದಿ, ಶಕ್ತಿ ಪ್ರದರ್ಶನ; ರೋಡ್‌ ಶೋ Photos ಇಲ್ಲಿವೆ

Pratibha Puraskar
ಕರ್ನಾಟಕ1 hour ago

Pratibha Puraskar: ರಾಜ್ಯ ಸರ್ಕಾರಿ ನೌಕರರ ಮಕ್ಕಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ; ಮೇ 31 ಕೊನೆಯ ದಿನ

HD Revanna Bail Revanna will not leave the country condition imposed by the court
ಕ್ರೈಂ2 hours ago

HD Revanna Bail: ರೇವಣ್ಣಗೆ ಜಾಮೀನು; ನಾಳೆ 11 ದಿನದ ವನವಾಸದಿಂದ ಮುಕ್ತಿ; ಬೇಲ್‌ ಸಿಗಲು ಕಾರಣವೇನು?

Dust Storm
ಪ್ರಮುಖ ಸುದ್ದಿ2 hours ago

Dust Storm : ಧೂಳು ಗಾಳಿಗೆ ಹೋರ್ಡಿಂಗ್ ಕುಸಿದು ಮೂವರ ಸಾವು, 59 ಮಂದಿಗೆ ಗಾಯ

CopConnect cyber security caffe inauguration by Dr Nagalakshmi Chaudhary at bengaluru
ಬೆಂಗಳೂರು2 hours ago

Bengaluru News: ಮಹಿಳೆಯರು ಸೋಷಿಯಲ್‌ ಮೀಡಿಯಾ ಬಳಸುವಾಗ ಎಚ್ಚರ ವಹಿಸಬೇಕು ಎಂದ ಮಹಿಳಾ ಆಯೋಗದ ಅಧ್ಯಕ್ಷೆ

35 crore crop damage insurance deposit for farmers of Yallapur constituency says MLA Shivaram Hebbar
ಉತ್ತರ ಕನ್ನಡ2 hours ago

Uttara Kannada News: ಯಲ್ಲಾಪುರ ಕ್ಷೇತ್ರದ ರೈತರಿಗೆ 35 ಕೋಟಿ ರೂ. ಬೆಳೆ ಹಾನಿ ವಿಮೆ ಜಮಾ: ಶಿವರಾಮ ಹೆಬ್ಬಾರ್‌

Bilhara village farmer grew bumper mango on barren land
ಕರ್ನಾಟಕ2 hours ago

Yadgiri News: ಬರಡು ಭೂಮಿಯಲ್ಲಿ ಈ ರೈತ ಬಂಪರ್ ಮಾವು ಬೆಳೆದಿದ್ದು ಹೇಗೆ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

HD Revanna Bail Revanna will not leave the country condition imposed by the court
ಕ್ರೈಂ3 hours ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

Prajwal Revanna case HD Revanna finally gets bail What was the argument like
ಕ್ರೈಂ4 hours ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

Prajwal Revanna Case Revanna bail plea to be heard Judge reprimands SIT cops for their behaviour
ಕ್ರೈಂ4 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಎಸ್‌ಐಟಿ ಪೊಲೀಸರ ವರ್ತನೆಗೆ ಜಡ್ಜ್‌ ಗರಂ!

Karnataka Weather Forecast
ಮಳೆ5 hours ago

Karnataka Weather : ನಾಳೆ ಮುಕ್ಕಾಲು ಕರ್ನಾಟಕದಲ್ಲಿ ಬಿರುಗಾಳಿ ಜತೆಗೆ ವಿಪರೀತ ಮಳೆ

Modi Roadshow Live
ದೇಶ5 hours ago

Modi Roadshow Live: ವಾರಾಣಸಿಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ11 hours ago

Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

karnataka weather forecast karnataka rains
ಮಳೆ16 hours ago

Karnataka Weather : ವಾಯುಭಾರ ಕುಸಿತ; ಕರಾವಳಿ, ಮಲೆನಾಡು ಸೇರಿ ಹಲವೆಡೆ ಭಾರಿ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ17 hours ago

Dina Bhavishya : ಇಂದು ಹೂಡಿಕೆ ಮಾಡಿದರೆ ಗಳಿಸುವಿರಿ ಭಾರಿ ಲಾಭ; ಅನಿರೀಕ್ಷಿತ ಸುದ್ದಿಯಿಂದ ಸಂತಸ

Prajwal Revanna Case I was never kidnapped and son has made a false complaint Video of victim goes viral
ಕ್ರೈಂ1 day ago

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

Karnataka Weather Forecast Heavy rain in chikkmagalur
ಮಳೆ1 day ago

Karnataka Weather : ಚಿಕ್ಕಮಗಳೂರಲ್ಲಿ ಅಬ್ಬರಿಸುತ್ತಿರುವ ಮಳೆ; ಬೃಹತ್‌ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು

ಟ್ರೆಂಡಿಂಗ್‌