Fox Nuts: ಮಖನಾ ತಿಂದರೆ ಆಗುವ ಪ್ರಯೋಜನಗಳು ಹಲವು - Vistara News

ಆರೋಗ್ಯ

Fox Nuts: ಮಖನಾ ತಿಂದರೆ ಆಗುವ ಪ್ರಯೋಜನಗಳು ಹಲವು

ಉಪವಾಸದ ದಿನಗಳಲ್ಲಿ (Fox nuts) ಶಕ್ತಿಗಾಗಿ, ಸುಮ್ಮನೆ ಬಾಯಾಡುವುದಕ್ಕೆ, ಕುರಕಲು ತಿನ್ನುವ ಚಟ ಇಳಿಸಿಕೊಳ್ಳುವುದಕ್ಕೆ ಮಖನಾ ತಿನ್ನುವ ಕಾರಣಗಳು ಇಂಥವು ಯಾವುದೂ ಇರಬಹುದು. ಆದರೆ ಅದನ್ನು ತುಪ್ಪದಲ್ಲೇ ಹುರಿದು ತಿನ್ನುವುದು ಸರಿಯಾದ ಕ್ರಮ ಎನ್ನುತ್ತಾರೆ ಆಹಾರ ತಜ್ಞರು. ಏನು ಕಾರಣ? ಇಲ್ಲಿದೆ ವಿವರ.

VISTARANEWS.COM


on

Fox Nuts
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಖನಾ ಅಥವಾ ತಾವರೆ ಬೀಜ ಅಥವಾ ಫಾಕ್ಸ್‌ ನಟ್‌ (Fox nuts) ಎಂಬೆಲ್ಲಾ ಹೆಸರುಗಳಿಂದ ಕರೆಸಿಕೊಳ್ಳುವ ಪಾಪ್‌ ಕಾರ್ನ್‌ನಂತೆಯೇ ಕಾಣುವ ಈ ತಿನಿಸು ಸಾಕಷ್ಟು ಜನಪ್ರಿಯವಾಗುತ್ತಿದೆ. ಇದನ್ನು ಅಂಗಡಿಯಿಂದ ತಂದಾಗ ಇರುವಂತೆಯೇ ಬಾಯಾಡುವವರು, ಹುರಿದು ಗರಿಗರಿ ಮಾಡಿ ಬಾಯಿಗೆಸೆದುಕೊಳ್ಳುವವರು, ಪುಡಿ ಮಾಡಿ ಇತರ ಆಹಾರಗಳೊಂದಿಗೆ ಸೇವಿಸುವವರು… ಹೀಗೆ ಹಲವು ರೀತಿಗಳಲ್ಲಿ ಮಖನಾ ಮೆಲ್ಲುವವರಿದ್ದಾರೆ. ಉಪವಾಸದ ದಿನಗಳಲ್ಲಿ ಶಕ್ತಿಗಾಗಿ, ಸುಮ್ಮನೆ ಬಾಯಾಡುವುದಕ್ಕೆ, ಕುರಕಲು ತಿನ್ನುವ ಚಟ ಇಳಿಸಿಕೊಳ್ಳುವುದಕ್ಕೆ- ಮಖನಾ ತಿನ್ನುವ ಕಾರಣಗಳು ಇಂಥವು ಯಾವುದೂ ಇರಬಹುದು. ಆದರೆ ಅದನ್ನು ತುಪ್ಪದಲ್ಲೇ ಹುರಿದು ತಿನ್ನುವುದು ಸರಿಯಾದ ಕ್ರಮ ಎನ್ನುತ್ತಾರೆ ಆಹಾರ ತಜ್ಞರು. ಏನು ಕಾರಣ?

ಇದಕ್ಕೂ ಮೊದಲು ಮಖನಾದಲ್ಲಿ ಇರುವಂಥ ಪೌಷ್ಟಿಕಾಂಶಗಳೇನು ಎಂಬುದನ್ನು ನೋಡೋಣ. ಕಡಿಮೆ ಕ್ಯಾಲರಿ ಮತ್ತು ಕನಿಷ್ಟ ಕೊಬ್ಬು ಇರುವಂಥ ಈ ತಿನಿಸು ಹೆಚ್ಚಿನ ಸತ್ವಗಳನ್ನು ದೇಹಕ್ಕೆ ನೀಡಬಲ್ಲದು. ದೇಹಕ್ಕೆ ಅಗತ್ಯವಾದ ಪ್ರೊಟೀನ್‌ ಮತ್ತು ನಾರಿನ ಕಣಜವಿದು. ಜೊತೆಗೆ, ಕಬ್ಬಿಣ, ಕ್ಯಾಲ್ಶಿಯಂ, ಮೆಗ್ನೀಶಿಯಂ, ಪೊಟಾಶಿಯಂ, ಫಾಸ್ಫರಸ್‌ ಮುಂತಾದ ಸೂಕ್ಷ್ಮ ಪೋಷಕಾಂಶಗಳು ಬಹಳಷ್ಟಿವೆ. ಉತ್ಕೃಷ್ಟ ಫ್ಲೆವನಾಯ್ಡ್‌ಗಳಿದ್ದು, ದೇಹವನ್ನು ಉರಿಯೂತಗಳಿಂದ ರಕ್ಷಿಸುತ್ತವೆ. ಇವೆಲ್ಲ ಮಖನಾದ ಸದ್ಗುಣಗಳು, ಸರಿ. ಆದರೆ ಅದನ್ನು ತುಪ್ಪದಲ್ಲಿ ಹುರಿದು ತಿನ್ನುವ ಮರ್ಮವೇನು?

Roasted Fox Nuts mint flavor

ರುಚಿ ಹೆಚ್ಚಿಸುತ್ತದೆ

ಬಾಯಿಗೆ ರುಚಿಯೆನಿಸುವ ತಿನಿಸುಗಳು ಯಾರಿಗೆ ಬೇಡ? ಅದೇ ಗುಂಗಿನಲ್ಲಿ ಸಂಜೆಯಾಗುತ್ತಿದ್ದಂತೆ ಚಾಟ್‌ ಕಾರ್ನರ್‌ಗಳಿಗೆ ಎಡತಾಕಿ, ಆರೋಗ್ಯದ ಕಾಳಜಿಯನ್ನು ಆಚೆ ಬಿಸಾಕಿ, ಸಿಕ್ಕಿದ್ದೆಲ್ಲ ಹೊಟ್ಟೆಗಿಳಿಸುವುದಿಲ್ಲವೇ? ಇಂಥ ಆನಾರೋಗ್ಯಕರ ಆಹಾರಗಳ ಬದಲಿಗೆ, ತುಪ್ಪದಲ್ಲಿ ಸ್ವಲ್ಪವೇ ಉಪ್ಪು ಮತ್ತು ಇಷ್ಟದ ಮಸಾಲೆ ಪುಡಿಗಳೊಂದಿಗೆ ಹುರಿದ ಮಖನಾ ನಿಜಕ್ಕೂ ಒಳ್ಳೆಯ ಆಯ್ಕೆ.

ಸತ್ವ ಮತ್ತು ಸ್ವಾದ

ತುಪ್ಪದಲ್ಲಿರುವ ಆರೋಗ್ಯಕರ ಕೊಬ್ಬು ಸೊಲ್ಪವೇ ಪ್ರಮಾಣದಲ್ಲಿ ಮಖನಾದೊಂದಿಗೆ ಸೇರಿದರೆ ಲಾಭವಿದೆ. ವಿಟಮಿನ್‌ ಎ, ಡಿ, ಇ ಮತ್ತು ಕೆ ಸತ್ವಗಳು ಮಖನಾದೊಂದಿಗೆ ಸೇರುತ್ತವೆ. ಮಖನಾದಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಕೊಬ್ಬು ಇರುವುದರಿಂದ ತುಪ್ಪದ ಒಗ್ಗರಣೆ ಅದನ್ನು ತೂಗಿಸುತ್ತದೆ.

healthy internal organs of human digestive system / highlighted blue organs

ಪಚನಕ್ಕೆ ಅನುಕೂಲ

ತುಪ್ಪದಲ್ಲಿರುವ ಬಟೈರಿಕ್‌ ಆಮ್ಲವು ಜೀರ್ಣಕ್ರಿಯೆಗೆ ಸಹಕಾರಿ. ಹಾಗಾಗಿ ಹೆಚ್ಚು ನಾರುಭರಿತವಾದ ಮಖನಾಗಳನ್ನು ತುಪ್ಪದಲ್ಲಿ ಹುರಿದು ತಿನ್ನುವುದರಿಂದ, ಪಚನಕ್ರಿಯೆ ಕಡಿಮೆಯಿರುವವರಿಗೆ ಅನುಕೂಲಕರ. ಅವರಿಗಷ್ಟೇ ಅಲ್ಲ, ನಾರುಭರಿತ ಆಹಾರ ಬಹಳಷ್ಟು ಮಂದಿಗೆ ಹೊಟ್ಟೆಯ ತೊಂದರೆಗಳನ್ನು ಕೊಡುತ್ತದೆ. ಅಂಥ ಎಲ್ಲರಿಗೂ ಇದು ಉಪಯುಕ್ತ.

ಹಸಿವು ತಣಿಸುತ್ತದೆ

ಉಪವಾಸ ವ್ರತಗಳನ್ನು ಮಾಡುವಂಥ ಬಹಳಷ್ಟು ಮಂದಿ ನಡುವೆ ಮಖನಾ ತಿನ್ನುವ ಕ್ರಮ ಇರಿಸಿಕೊಂಡಿರುತ್ತಾರೆ. ತೂಕ ಇಳಿಸುವವರಿಗೂ ಇದು ಅಚ್ಚುಮೆಚ್ಚು. ಕಾರಣ, ನಾರು ಮತ್ತು ಪ್ರೊಟೀನ್‌ ಹೆಚ್ಚಿರುವ ಇದರಲ್ಲಿ ಕ್ಯಾಲರಿ ಕಡಿಮೆ. ತುಪ್ಪದಲ್ಲಿ ಹುರಿದು ಗರಿಯಾಗಿಸಿಕೊಂಡು ಬಾಯಿಗೆಸೆದರೆ ರುಚಿಯಾದ ತಿನಿಸೊಂದನ್ನು ತಿಂದ ತೃಪ್ತಿಯೂ ಉಳಿಯುತ್ತದೆ. ಹೆಚ್ಚು ಕ್ಯಾಲರಿಯನ್ನು ದೇಹಕ್ಕೆ ಸೇರಿಸುವ ಭೀತಿಯೂ ಕಾಡುವುದಿಲ್ಲ.

rosted lotus seeds or makhana or makana

ಶಕ್ತಿವರ್ಧಕ

ಸರಳ ಕಾರ್ಬ್‌ಗಳಂತೆ ಥಟ್ಟನೆ ಉರಿದು ಖರ್ಚಾಗುವಂಥ ಸತ್ವಗಳಲ್ಲ ಮಖನಾದಲ್ಲಿರುವುದು. ಇದರಲ್ಲಿರುವ ಪೋಷಕಾಂಶಗಳು ದೀರ್ಘಕಾಲದವರೆಗೆ ದೇಹಕ್ಕೆ ಶಕ್ತಿ ನೀಡುತ್ತಿರುತ್ತವೆ. ಇದರಿಂದ ಹೆಚ್ಚಿನ ಸಮಯದವರೆಗೆ ಹಸಿವಾಗದಂತೆ ತಡೆದು, ದೇಹವನ್ನೂ ಬಳಲದಂತೆ ರಕ್ಷಿಸಿಕೊಳ್ಳಬಹುದು.

ಉತ್ಕರ್ಷಣ ನಿರೋಧಕಗಳಿವೆ

ತುಪ್ಪದಲ್ಲಿ ಉರಿಯೂತವನ್ನು ತಡೆಯುವಂಥ ಉತ್ತಮ ಸತ್ವಗಳಿವೆ. ಮಖನಾದಲ್ಲಿರುವ ಫ್ಲೆವನಾಯ್ಡ್‌ಗಳು ಸಹ ಉತ್ಕರ್ಷಣ ನಿರೋಧಕಗಳೇ. ಈ ಎರಡನ್ನೂ ಸೇರಿಸಿದಾಗ ಉತ್ಕರ್ಷಣವನ್ನು ತಡೆಯುವ ಸಾಮರ್ಥ್ಯ ವೃದ್ಧಿಸುತ್ತದೆ.

Doctor shows protected human liver

ಯಕೃತ್‌ ರಕ್ಷಣೆ

ತುಪ್ಪದೊಂದಿಗೆ ಜೀರಿಗೆ, ಇಂಗು, ಕಾಳುಮೆಣಸು ಮುಂತಾದವುಗಳನ್ನು ಹಾಕಿ ಮಖನಾ ಹುರಿಯಬಹುದು. ಇದರಿಂದ ದೇಹದಲ್ಲಿ ಬೇಡದ ಕೊಬ್ಬನ್ನು ತಗ್ಗಿಸಲು ಅನುಕೂಲವಾಗುತ್ತದೆ. ಕೊಬ್ಬು ಕಡಿಮೆಯಾದರೆ ಯಕೃತ್‌ಗೂ ಫ್ಯಾಟಿ ಲಿವರ್‌ನಂಥ ಕಾಯಿಲೆಯಿಂದ ರಕ್ಷಣೆ ದೊರೆತಂತೆ.

ಇದನ್ನೂ ಓದಿ: Winter Health Tips: ಬಂದೇ ಬಿಡ್ತು ಚಳಿಗಾಲ! ಇರಲಿ ಆರೋಗ್ಯದ ಕಡೆಗೆ ಎಚ್ಚರ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Vijayanagara News: ಹೊಸಪೇಟೆಯಲ್ಲಿ ವಿಶ್ವ ಋತುಚಕ್ರ ನೈರ್ಮಲ್ಯ ದಿನಾಚರಣೆ

Vijayanagara News: ಹೊಸಪೇಟೆ ನಗರದ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿಶ್ವ ಋತುಚಕ್ರ ನೈರ್ಮಲ್ಯ ದಿನಾಚರಣೆ ಕಾರ್ಯಕ್ರಮ ಜರುಗಿತು.

VISTARANEWS.COM


on

World Menstrual Hygiene Day in Hosapete
Koo

ಹೊಸಪೇಟೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಗರದ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯಲ್ಲಿ ಮಂಗಳವಾರ ವಿಶ್ವ ಋತುಚಕ್ರ ನೈರ್ಮಲ್ಯ ದಿನಾಚರಣೆ ಕಾರ್ಯಕ್ರಮ (Vijayanagara News) ಜರುಗಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಂಕರ್ ನಾಯಕ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, 11 ರಿಂದ 14 ವರ್ಷದ ಹೆಣ್ಣುಮಕ್ಕಳಲ್ಲಿ ಪ್ರಾರಂಭವಾಗುವ ಋತುಚಕ್ರದ ಕುರಿತು ಪ್ರತಿಯೊಬ್ಬ ಕಿಶೋರಿಯಿಂದ ಹಿಡಿದು ಎಲ್ಲ ಮಹಿಳೆಯರು ಜಾಗೃತಿ ಹೊಂದಬೇಕು.

ಋತುಸ್ರಾವವಾದಾಗ ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿ ವರ್ಷ ಹೊಸದಾದ ಘೋಷಣೆಯೊಂದಿಗೆ ತಿಳಿಸುವ ವಿಶ್ವ ಋತುಚಕ್ರದ ನೈರ್ಮಲ್ಯ ದಿನದ ಮಹತ್ವವನ್ನು ಪ್ರತಿಯೊಬ್ಬರು ಅರಿಯಬೇಕು ಎಂದು ಸಲಹೆ ಮಾಡಿದರು.

ಇದನ್ನೂ ಓದಿ: Credit Card Safety Tips: ಕ್ರೆಡಿಟ್‌ ಕಾರ್ಡ್ ವಂಚನೆಯಿಂದ ಪಾರಾಗಲು ಇಲ್ಲಿದೆ 9 ಸಲಹೆ

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಜಂಬಯ್ಯ ಮಾತನಾಡಿ, ಪ್ರತಿಯೊಬ್ಬ ಪ್ರಜೆ ಋತುಚಕ್ರದ ಕುರಿತು ಅರಿವು ಪಡೆದು ಜ್ಞಾನವಂತರಾಗಬೇಕು. ಮೂಢನಂಬಿಕೆಯನ್ನು ಹೋಗಲಾಡಿಸಬೇಕು. ಕಿಶೋರಿಯರು ಮತ್ತು ಮಹಿಳೆಯರು ಋತುಸ್ರಾವ ಉಂಟಾದಾಗ ವೈಯಕ್ತಿಕ ಕಾಳಜಿ, ಸಂತಾನೋತ್ಪತ್ತಿ, ಪೌಷ್ಟಿಕ ಆಹಾರದ ಸೇವನೆಯ ಬಗ್ಗೆ ತಿಳುವಳಿಕೆ ಹೊಂದಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಡಿಎಂಒ ಕಾರ್ಯಕ್ರಮದ ಅಧಿಕಾರಿ ಡಾ. ಕಮಲಮ್ಮ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಋತುಚಕ್ರ ಅಥವಾ ಋತುಸ್ರಾವ ಎಂದರೆ ಹದಿಹರೆಯದ ಹೆಣ್ಣುಮಕ್ಕಳು ಪ್ರೌಢಾವಸ್ಥೆ ತಲುಪುವ ಹಂತವಾಗಿದೆ. ಈ ಸಂದರ್ಭದಲ್ಲಿ ಮಹಿಳೆಯರು ಪೌಷ್ಠಿಕ ಆಹಾರ ಸೇವನೆ ಮಾಡಬೇಕು. ಋತುಸ್ರಾವ ಉಂಟಾದಾಗ ಹಳೆಯದಾದ ಉಪಯೋಗಿಸಿದ ಬಟ್ಟೆಗಳನ್ನು ಬಳಸಬಾರದು. ವಿಶೇಷವಾಗಿ ಋತುಚಕ್ರದ ಶುಚಿತ್ವ ನಿರ್ವಹಣೆಯ ಬಗ್ಗೆ ಗ್ರಾಮೀಣ ಭಾಗದ ಮಹಿಳೆಯರು ಹೆಚ್ಚಿನ ತಿಳುವಳಿಕೆ ಹೊಂದಬೇಕಿದೆ ಎಂದು ಸಲಹೆ ನೀಡಿದರು.

ಆರ್‌ಬಿಎಸ್‌ಕೆ ವೈದ್ಯಾಧಿಕಾರಿ ಡಾ.ಆಶಾ, ಮುಟ್ಟಿನ ನೈರ್ಮಲ್ಯ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ಆರ್‌ಸಿಎಚ್ ಸಿಬ್ಬಂದಿ, ಆರೋಗ್ಯ ಸಿಬ್ಬಂದಿ, ಸಮುದಾಯ ಆರೋಗ್ಯ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು, ತುಂಗಭದ್ರಾ ಸ್ಕೂಲ್ ಆಫ್ ನರ್ಸಿಂಗ್ ಹೋಂನ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು.

ಇದನ್ನೂ ಓದಿ: Child Trafficking Racket: ಅಂತಾರಾಜ್ಯ ಮಕ್ಕಳ ಕಳ್ಳಸಾಗಣೆ ದಂಧೆ ಪತ್ತೆ; 11 ಮಕ್ಕಳ ರಕ್ಷಣೆ

ಕಾರ್ಯಕ್ರಮದಲ್ಲಿ ಎಲ್ಲರಿಗೂ ಮುಟ್ಟಿನ ನೈರ್ಮಲ್ಯದ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ. ದೊಡ್ಡಮನಿ ಪ್ರಾಸಾವಿಕ ಮಾತನಾಡಿದರು. ಧರ್ಮನಗೌಡ ವಂದಿಸಿದರು.

Continue Reading

ಆರೋಗ್ಯ

Mango For Diabetes: ಮಧುಮೇಹಿಗಳೂ ಮಾವಿನಹಣ್ಣಿನ ರುಚಿ ಸವಿಯಬಹುದೇ? ಇಲ್ಲಿದೆ ಉತ್ತರ!

ಸಾಕಷ್ಟು ವಿಟಮಿನ್‌ ಸಿ, ವಿಟಮಿನ್‌ ಎ, ವಿಟಮಿನ್‌ ಬಿ6, ವಿಟಮಿನ್‌ ಕೆ ಸೇರಿದಂತೆ ಖನಿಜಾಂಶಗಳಾದ ತಾಮ್ರ, ಫೋಲೇಟ್‌, ಮೆಗ್ನೀಶಿಯಂ, ಪೊಟಾಶಿಯಂ ಇತ್ಯಾದಿಗಳನ್ನೂ ಹೊಂದಿರುವ ಹಣ್ಣು ಮಾವಿನಹಣ್ಣು. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ರಕ್ತದೊತ್ತಡದ ಸಮತೋಲನಕ್ಕೂ ಸಹಾಯ ಮಾಡುವ ಈ ಹಣ್ಣಿನಿಂದ ಸಾಕಷ್ಟು ಆರೋಗ್ಯಕರ ಲಾಭಗಳಿವೆ. ಆದರೆ, ಸಾಕಷ್ಟು ಸಕ್ಕರೆಯ ಅಂಶ ಇದರಲ್ಲಿ ಇರುವುದರಿಂದ ಮಧುಮೇಹಿಗಳು ಮಾವಿನಹಣ್ಣಿನಿಂದ (Mango For Diabetes) ದೂರವಿರಬೇಕೇ ಎಂಬುದು ಪ್ರಶ್ನೆ.

VISTARANEWS.COM


on

Mango For Diabetes
Koo

ಹೇಳಿ ಕೇಳಿ ಬೇಸಿಗೆ ಕಾಲ. ಬೇಸಿಗೆ ಬಂತೆಂದರೆ ಎಲ್ಲರೂ ಖುಷಿ ಪಡುವುದು ಹಣ್ಣುಗಳ ರಾಜ ಮಾವಿನ ಹಣ್ಣಿನ (Mango For Diabetes) ಆಗಮನಕ್ಕೆ. ಬೇಸಿಗೆಯ ಬರವಿಗಾಗಿ ಜಾತಕ ಪಕ್ಷಿಯಂತೆ ಕಾದು ಕೂರುವವರ ಹಿಂದಿನ ಆಸಕ್ತಿಯ ಕಾರಣಗಳಲ್ಲಿ ಪ್ರಮುಖವಾದದ್ದು ಇದೇ. ಮಾವಿನ ಹಣ್ಣಿನ ಸುಗ್ಗಿಯ ಕಾಲ. ನಾನಾ ಬಗೆಯ, ರುಚಿರುಚಿಯಾದ, ಅಮೃತದಂತಹ ಮಾವಿನ ಹಣ್ಣಿನ ರುಚಿಗೆ, ಅದರ ಘಮಕ್ಕೆ ಮನಸೋಲದವರು ಯಾರು ಹೇಳಿ! ಸಾಕಷ್ಟು ವಿಟಮಿನ್‌ ಸಿ, ವಿಟಮಿನ್‌ ಎ, ವಿಟಮಿನ್‌ ಬಿ6, ವಿಟಮಿನ್‌ ಕೆ ಸೇರಿದಂತೆ ಖನಿಜಾಂಶಗಳಾದ ತಾಮ್ರ, ಫೋಲೇಟ್‌, ಮೆಗ್ನೀಶಿಯಂ, ಪೊಟಾಶಿಯಂ ಇತ್ಯಾದಿಗಳನ್ನೂ ಹೊಂದಿರುವ ಹಣ್ಣು ಮಾವಿನಹಣ್ಣು. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ರಕ್ತದೊತ್ತಡದ ಸಮತೋಲನಕ್ಕೂ ಸಹಾಯ ಮಾಡುವ ಈ ಹಣ್ಣಿನಿಂದ ಸಾಕಷ್ಟು ಆರೋಗ್ಯಕರ ಲಾಭಗಳಿವೆ. ಆದರೆ, ಈ ಹಣ್ಣಿನ ಬಗ್ಗೆ ಇರುವ ಒಂದೇ ದೂರೆಂದರೆ, ಸಾಕಷ್ಟು ಸಕ್ಕರೆಯ ಅಂಶ ಇದರಲ್ಲಿ ಇರುವುದರಿಂದ ಮಧುಮೇಹಿಗಳು ಮಾವಿನಹಣ್ಣಿನಿಂದ ದೂರವಿರಬೇಕು ಎಂಬ ಸತ್ಯ.
ಹೌದು. ಮಧುಮೇಹಿಗಳಿಗೆ ಮಾವಿನಹಣ್ಣು ಎಷ್ಟೇ ಪ್ರಿಯವೇ ಆಗಿದ್ದರೂ, ವೈದ್ಯರು ಹೇಳುವ ಮಾತು ಎಂದರೆ, ಮಾವಿನಹಣ್ಣು ಸೇರಿದಂತೆ ಕೆಲವು ಹೆಚ್ಚು ಸಕ್ಕರೆ, ಕ್ಯಾಲರಿ ಇರುವ ಹಣ್ಣುಗಳಿಂದ ದೂರವಿರಿ ಎಂಬುದು. ಆದರೆ ಮಾರುಕಟ್ಟೆಯಲ್ಲಿ ಬಿದ್ದಿರುವ ಮಾವಿನ ಹಣ್ಣಿನ ರಾಶಿಯನ್ನು ನೋಡಿದರೆ ದೂರವಿರಲು ಯಾರಿಗೆ ತಾನೇ ಸಾಧ್ಯವಾಗುತ್ತದೆ ಹೇಳಿ. ಬೇಸಿಗೆಯಲ್ಲಿ ಮಾವಿನ ಹಣ್ಣಿನಿಂದ ದೂರವಿರಲು ತಪಸ್ಸನ್ನೇ ಮಾಡಬೇಕಾಗುತ್ತದೆ ಎಂದು ಮಧುಮೇಹಿಗಳು ನಿರಾಶರಾಗಬೇಕಿಲ್ಲ. ಮಾವಿನಹಣ್ಣನ್ನು ಅವರೂ ತಿನ್ನಬಹುದು. ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರದಂತೆ ಮಾವಿನಹಣ್ಣನ್ನು ಹೇಗೆ ತಿನ್ನಬಹುದು (Mango For Diabetes) ಎಂಬುದನ್ನು ನೋಡೋಣ ಬನ್ನಿ.

National Mango Day

ಹೇಗೆ ಸವಿಯಬೇಕು ಅನ್ನೋದು ಮುಖ್ಯ

ನಿಮಗೆ ಮಾವಿನಹಣ್ಣು ತಿನ್ನಲಾಗುತ್ತಿಲ್ಲ ಎಂಬ ಬೇಸರ ಬೇಡ. ನೀವೂ ಎಲ್ಲರಂತೆ ಬೇಸಿಗೆಯಲ್ಲಿ ಮಾವನ್ನು ಸವಿಯಬಹುದು. ಆದರೆ, ಹೇಗೆ ಸವಿಯಬೇಕು ಎಂಬುದನ್ನು ಮಾತ್ರ ಕೊಂಚ ಎಚ್ಚರಿಕೆಯಿಂದ ತಿಳಿದುಕೊಳ್ಳಬೇಕು. ತಜ್ವರ ಪ್ರಕಾರ ಸಾಮಾನ್ಯ ಗಾತ್ರದ ಒಂದು ಮಾವಿನ ಹಣ್ಣನ್ನು ದಿನಕ್ಕೆ ಒಂದು ತಿನ್ನಬಹುದು. ಸಾಮಾನ್ಯ ಗಾತ್ರದ ಒಂದು ಮಾವಿನಹಣ್ಣಿನಲ್ಲಿ ೫೦ ಗ್ರಾಂ ಕಾರ್ಬೋಹೈಡ್ರೇಟ್‌ ಇರುತ್ತದೆ. ಹಾಗಾಗಿ ದಿನಕ್ಕೆ ಅರ್ಧ ಅಥವಾ ಒಂದು ಮಾವಿನ ಹಣ್ಣಿಗಿಂತ ಹೆಚ್ಚು ತಿನ್ನುವ ಹಠಕ್ಕೆ ಬೀಳಬೇಡಿ.

ಬೇರೆ ಆಹಾರದ ಜತೆ ತಿನ್ನಿ

ಮಾವಿನ ಹಣ್ಣನ್ನು ಬೇರೆ ಆಹಾರದ ಜೊತೆಗೆ ತಿನ್ನಿ. ಒಳ್ಳೆಯ ಕೊಬ್ಬಿರುವ, ನಾರಿನಂಶವಿರುವ ಆಹಾರವನ್ನು ಮಾವಿನ ಹಣ್ಣಿನ ಜೊತೆಜೊತೆಗೇ ತಿನ್ನುವುದು ಒಳ್ಳೆಯದು. ಬಾದಾಮಿ, ವಾಲ್ನಟ್‌, ನಿಂಬೆ ಹಣ್ಣು ಹಿಂಡಿದ ನೀರಿನಲ್ಲಿ ನೆನೆಸಿದ ಚಿಯಾ ಬೀಜಗಳು ಇತ್ಯಾದಿಗಳನ್ನು ಮಾವಿನ ಹಣ್ಣು ತಿನ್ನುವಾಗಲೇ ತಿಂದರೆ ಮಾವಿನ ಹಣ್ಣಿನಿಂದಾಗಿ ನಿಮ್ಮ ದೇಹದ ಗ್ಲುಕೋಸ್‌ ಒಡನೆಯೇ ಏರುವುದಿಲ್ಲ.

eating mango

ತಿನ್ನುವ ಸಮಯ ಮುಖ್ಯ

ಮಾವಿನ ಹಣ್ಣನ್ನು ತಿನ್ನುವ ಸಮಯ ಬಹಳ ಮುಖ್ಯ. ರಾತ್ರಿ ತಿನ್ನಬೇಡಿ. ನೀವು ಅತ್ಯಂತ ಚುರುಕಾಗಿರುವ, ಕ್ರಿಯಾಶೀಲರಾಗಿರುವ ಸಮಯದಲ್ಲಿ ಮಾವಿನಹಣ್ಣು ಸೇವಿಸಿ. ನೀವು ಹೆಚ್ಚು ಓಡಾಡಿಕೊಂಡಿರುವ, ವಾಕಿಂಗ್‌ ಮಾಡುವ ಮೊದಲು, ವರ್ಕೌಟ್‌ ಮಾಡುವ ಮೊದಲು, ಅಥವಾ ಯಾವುದಾದರೂ ದೈಹಿಕವಾದ ಕೆಲಸ ಮಾಡುವ, ಶ್ರಮ ವಹಿಸುವ ಮೊದಲು ಮಾವು ತಿನ್ನಿ.

ಇದನ್ನೂ ಓದಿ: Cooking In An Iron Pot: ಕಬ್ಬಿಣದ ಪಾತ್ರೆಯಲ್ಲಿ ಅಡುಗೆ ಮಾಡುವುದು ಒಳ್ಳೆಯದು! ಯಾಕೆ ಗೊತ್ತೇ?

ತಿನ್ನುವ ಪ್ರಮಾಣ ಮಹತ್ವದ್ದು

ನೀವು ಮಾವಿನಹಣ್ಣನ್ನು ಹೇಗೆ ತಿನ್ನುತ್ತೀರಿ ಎಂಬುದೂ ಮುಖ್ಯ. ಮಾವಿನಹಣ್ಣನ್ನು ಹಾಗೆಯೇ, ತಿಂದರೆ ಅತ್ಯಂತ ಒಳ್ಳೆಯದು. ಬದಲಾಗಿ ಮಾವಿನ ಹಣ್ಣಿನ ಶೇಕ್‌ ಅಥವಾ ಇನ್ನೂ ಏನೇನೋ ಸಿಹಿತಿನಿಸು, ಡೆಸರ್ಟ್‌ ಅಥವಾ ಖಾದ್ಯಗಳ ರೂಪದಲ್ಲಿ ತಿನ್ನುವುದರಿಂದ ಪರಿಣಾಮ ಹೆಚ್ಚೇ ಆಗಬಹುದು. ಮಾವಿನಹಣ್ಣನ್ನು ಹಾಗೆಯೇ ತಿನ್ನುವುದರಿಂದ ಪರಿಣಾಮ ಕಡಿಮೆ. ಮಧುಮೇಹಿಗಳು ಹಣ್ಣು ತಿನ್ನಲೇಬಾರದು ಎಂಬ ನಿಯಮವಿಲ್ಲ. ಹೇಗೆ, ಯಾವಾಗ ಮತ್ತು ಎಷ್ಟು ತಿನ್ನುತ್ತಾರೆ ಎಂಬುದು ಮುಖ್ಯ. ಸರಿಯಾದ ಸಮಯದಲ್ಲಿ ಸರಿಯಾದ ಪ್ರಮಾಣದಲ್ಲಿ ಹಣ್ಣು ತಿಂದರೆ ದೇಹಕ್ಕೆ ಒಳ್ಳೆಯದೇ ಆಗುತ್ತದೆ ಎಂಬುದು ನೆನಪಿರಲಿ.

Continue Reading

ಆರೋಗ್ಯ

Cooking In An Iron Pot: ಕಬ್ಬಿಣದ ಪಾತ್ರೆಯಲ್ಲಿ ಅಡುಗೆ ಮಾಡುವುದು ಒಳ್ಳೆಯದು! ಯಾಕೆ ಗೊತ್ತೇ?

ಮಣ್ಣಿನ ಮಡಕೆಯಿಂದ ಹಿಡಿದು ಗಾಜಿನ ಪಾತ್ರೆಗಳವರೆಗೆ ತರಹೇವಾರಿ ಪಾತ್ರೆಗಳು ಆಕರ್ಷಕ ವಿನ್ಯಾಸಗಳಲ್ಲಿ ಇಂದು ಲಭ್ಯವಿವೆ. ಅಡುಗೆ ಮನೆಯ ಸೌಂದರ್ಯವನ್ನು ಹೆಚ್ಚಿಸುವಲ್ಲಿ ನಾವು ಆಯ್ಕೆ ಮಾಡುವ ಪಾತ್ರೆಗಳ ಪಾಲೂ ಇದೆ ಎಂಬುದು ನಿಜ. ಆದರೂ, ಪ್ರತಿ ಪಾತ್ರೆಗಳ ಆಯ್ಕೆಯ ಹಿಂದೆ ನಮ್ಮ ಆರೋಗ್ಯದ ರಹಸ್ಯವೂ ಅಡಗಿದೆ. ನಮ್ಮ ಹಳೆಯ ತಲೆಮಾರಿನ ಹಿರಿಯರಿಂದ ಪಾತ್ರೆಗಳ ಬಳಕೆಯ ಬಗ್ಗೆ ನಮಗೆ ದಕ್ಕಿದ ವಿಚಾರದ ಹಿಂದೆ (Cooking in an iron pot) ವಿಜ್ಞಾನವೂ ಇದೆ.

VISTARANEWS.COM


on

Cooking In An Iron Pot
Koo

ಭಾರತೀಯ ಅಡುಗೆ ಮನೆಗಳ ಪಾತ್ರೆಗಳಲ್ಲೇ ಒಂದು ಸೊಗಸಿದೆ. ನಾವು ನಿತ್ಯವೂ ಅಡುಗೆಗೆ ಬಳಸುವ ಪಾತ್ರೆಗಳಲ್ಲಿ ಪ್ರತಿಯೊಬ್ಬರ ಆಸಕ್ತಿ, ಅಭಿರುಚಿಗಳನ್ನೂ ಗುರುತಿಸಬಹುದು. ಮಣ್ಣಿನ ಮಡಕೆಯಿಂದ ಹಿಡಿದು ಗಾಜಿನ ಪಾತ್ರೆಗಳವರೆಗೆ ತರಹೇವಾರಿ ಪಾತ್ರೆಗಳು ಆಕರ್ಷಕ ವಿನ್ಯಾಸಗಳಲ್ಲಿ ಇಂದು ಲಭ್ಯವಿವೆ. ಅಡುಗೆ ಮನೆಯ ಸೌಂದರ್ಯವನ್ನು ಹೆಚ್ಚಿಸುವಲ್ಲಿ ನಾವು ಆಯ್ಕೆ ಮಾಡುವ ಪಾತ್ರೆಗಳ ಪಾಲೂ ಇದೆ ಎಂಬುದು ನಿಜ. ಆದರೂ, ಪ್ರತಿ ಪಾತ್ರೆಗಳ ಆಯ್ಕೆಯ ಹಿಂದೆ ನಮ್ಮ ಆರೋಗ್ಯದ ರಹಸ್ಯವೂ ಅಡಗಿದೆ. ನಮ್ಮ ಹಳೆಯ ತಲೆಮಾರಿನ ಹಿರಿಯರಿಂದ ಪಾತ್ರೆಗಳ ಬಳಕೆಯ ಬಗ್ಗೆ ನಮಗೆ ದಕ್ಕಿದ ವಿಚಾರದ ಹಿಂದೆ ವಿಜ್ಞಾನವೂ ಇದೆ. ವೈದ್ಯರೂ, ಸಂಶೋಧನೆಗಳೂ ಕೂಡಾ ಇವನ್ನು ಪುಷ್ಟೀಕರಿಸಿವೆ. ಮಣ್ಣಿನ ಪಾತ್ರೆಗಳು, ಕಬ್ಬಿಣದ ಪಾತ್ರೆಗಳ ಬಳಕೆ, ಎಲ್ಲೆಲ್ಲಿ ತಾಮ್ರದ ಪಾತ್ರೆಗಳನ್ನು ಬಳಸಬಹುದು ಇತ್ಯಾದಿ ಮಾಹಿತಿಗಳನ್ನು ನಾವು ಗ್ರಹಿಸಿಕೊಂಡು ಅಳವಡಿಸುವುದರಿಂದ ಸಾಕಷ್ಟು ಆರೋಗ್ಯದ (Cooking in an iron pot) ಲಾಭಗಳನ್ನೂ ಪಡೆಯಬಹುದು. ಹೊಸ ನಮೂನೆಯ ಆಧುನಿಕ ಪಾತ್ರೆಗಳ ಹಾವಳಿಯಿಂದ ತಲೆತಲಾಂತರಗಳಿಂದ ಬಂದ ಕಬ್ಬಿಣದ ಪಾತ್ರೆಗಳ ಬಳಕೆ ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗಿತ್ತು. ಆದರೆ, ಈಗ ಮತ್ತೆ ಕಬ್ಬಿಣದ ಪಾತ್ರೆಯ ಪ್ರಯೋಜನಗಳ ಬಗ್ಗೆ ಜನರಲ್ಲಿ ನಿಧಾನವಾಗಿ ಅರಿವು ಮೂಡುತ್ತಿರುವುದರಿಂದ ಕಬ್ಬಿಣ ಮತ್ತೆ ಚಾಲ್ತಿಯಲ್ಲಿ ಬರುತ್ತಿದೆ. ಬನ್ನಿ, ಕಬ್ಬಿಣದ ಪಾತ್ರೆಯನ್ನು ಬಳಸುವುದರಿಂದ ಯಾವೆಲ್ಲ ಪ್ರಯೋಜನಗಳಿವೆ ಎಂಬುದನ್ನು ನೋಡೋಣ.

Closed Caldron Pot

ಹೆಚ್ಚು ಬೇಯಿಸಲು ಉತ್ತಮ

ಕಬ್ಬಿಣದ ಪಾತ್ರೆಯಲ್ಲಿ ಹೆಚ್ಚು ಉಷ್ಣತೆಯ ಹೀಟಿಂಗ್‌ ಪಾಯಿಂಟ್‌ ತಲುಪಬಹುದು. ಆಹಾರವನ್ನು ರೋಸ್ಟ್‌ ಮಾಡಲು, ಗ್ರಿಲ್‌ ಮಾಡಲು ಹಾಗೂ ಬೇಯಿಸಲು ಕಬ್ಬಿಣದ ಪಾತ್ರೆ ಅತ್ಯುತ್ತಮ. ಆದರೆ, ಕಬ್ಬಿಣದ ಪಾತ್ರೆಯಲ್ಲಿ ಎಲ್ಲ ಭಾಗದಲ್ಲೂ ಒಂದೇ ಸಮನಾದ ಉಷ್ಣತೆ ಹಂಚಿ ಹೋಗುವುದಿಲ್ಲ. ಹಾಗಾಗಿ ಈ ಕಬ್ಬಿಣದ ಪಾತ್ರೆಯಲ್ಲಿ ಅಡುಗೆ ಮಾಡುವ ಮೊದಲೇ ಕೊಂಚ ಹೊತ್ತು ಬಿಸಿಗೆ ಇಡಬೇಕಾಗುತ್ತದೆ. ಆದರೆ ಎಷ್ಟು ಬಿಸಿಯಾದರೂ ನಾನ್‌ಸ್ಟಿಕ್‌ನಂತೆ ಇದರಲ್ಲಿ ರಾಸಾಯನಿಕ ಬಿಡುಗಡೆಯಾಗುವ ಭಯವಿಲ್ಲ.

ತುಕ್ಕು ಹಿಡಿಯಲು ಬಿಡಬಾರದು

ಕಬ್ಬಿಣದ ಪಾತ್ರೆಯ ಬಳಕೆ ಕಷ್ಟ ಎಂಬ ಭಾವನೆ ಹಲವರಲ್ಲಿದೆ. ಆದರೆ ಅದು ಅಷ್ಟು ಕಷ್ಟದ ವಿಚಾರವೇನಲ್ಲ. ಕಬ್ಬಿಣದ ಪಾತ್ರೆ ಕೊಂಚ ಒರಟು ಮೇಲ್ಮೈಯನ್ನು ಹೊಂದಿರುವುದರಿಂದ ಅದನ್ನು ಸದಾ ತೊಳೆದು ಆರಲು ಬಿಟ್ಟು ಎಣ್ಣೆ ಹಚ್ಚಿಟ್ಟರೆ ಸಾಕಾಗುತ್ತದೆ. ತುಕ್ಕು ಹಿಡಿಯಲು ಬಿಡಬಾರದು. ಹಿಡಿದರೆ ಅದನ್ನು ತೊಳೆದು ಮತ್ತೆ ಉಪಯೋಗಿಸಲು ನೆನಪಿಡಿ. ತುಕ್ಕಿನ ಮೇಲೆಯೇ ಹಾಗೆಯೇ ಅಡುಗೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

Cast Iron Pot Of Chili

ಸ್ವಚ್ಛಗೊಳಿಸುವುದು ಸುಲಭ

ಹಾಗೆ ನೋಡಿದರೆ ಕಬ್ಬಿಣದ ತವಾ ಅಥವಾ ಪಾತ್ರೆಯನ್ನು ಸ್ವಚ್ಛಗೊಳಿಸುವುದು ಸುಲಭ. ಇದಕ್ಕೆ ಅತ್ಯಂತ ಜಾಗರೂಕತೆಯ ಕಾಳಜಿ ಅಗತ್ಯವಿಲ್ಲ. ನಾನ್‌ಸ್ಟಿಕ್‌ ಪಾತ್ರೆಯಂತೆ ಜಾಗರೂಕತೆಯ ಅಗತ್ಯವಿಲ್ಲ. ಯಾವುದೇ ಡಿಶ್‌ವಾಶ್‌ ಜೆಲ್ ಮೂಲಕ ಸ್ವಚ್ಛಗೊಳಿಸಬಹುದು. ತಿಕ್ಕಿ ತೊಳೆಯಬಹುದು. ಆದರೆ ತಿಕ್ಕಿ ತೊಳೆದ ಮೇಲೆ ಒಣಗಿಸುವಾಗ ಸ್ವಲ್ಪ ಕಾಳಜಿ ಬೇಕು. ಎಣ್ಣೆಯನ್ನು ಹಚ್ಚಿ ಇಡುವ ಕೆಲಸ ಮಾತ್ರ ಈ ಪಾತ್ರೆಯ ಕಾವಲಿಯಲ್ಲಿ ಮಾಡಬೇಕಾದ ಹೆಚ್ಚುವರಿ ಕೆಲಸವಾಗಿದೆ.

ಲೋಹದ ಯಾವುದೇ ಸೌಟು ಬಳಸಬಹುದು

ನಾನ್‌ಸ್ಟಿಕ್‌ ಪಾತ್ರೆಯಂತೆ ಕಬ್ಬಿಣದ ಪಾತ್ರೆಗೆ ಮರದ ಸೌಟನ್ನು ಬಳಸಬೇಕಾಗಿಲ್ಲ. ಲೋಹದ ಯಾವುದೇ ಬಗೆಯ ಸೌಟನ್ನೂ ಬಳಸಬಹುದು. ಅದರ ಮೂಲಕ ಪಾತ್ರೆಗೆ ಯಾವುದೇ ಹಾನಿಯಾಗದು.

Iron Pot

ಆರೋಗ್ಯ ದೃಷ್ಟಿಯಿಂದ ಒಳ್ಳೆಯದು

ಕಬ್ಬಿಣದ ಪಾತ್ರೆಯ ಬಳಕೆ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದೇ. ನಮ್ಮ ದೇಹಕ್ಕೆ ಕಬ್ಬಿಣಾಂಶವೂ ಇದರಿಂದ ದೊರೆಯುತ್ತದೆ. ರಕ್ತಹೀನತೆಯಂತಹ ಸಮಸ್ಯೆ ಇದರಿಂದ ಬರದು. ಕಬ್ಬಿಣದ ಪಾತ್ರೆಯಲ್ಲಿ ಅಡುಗೆ ಮಾಡುವಾಗ ಕಬ್ಬಿಣದ ಸ್ವಲ್ಪ ಅಂಶ ಆಹಾರಕ್ಕೆ ಸೇರುವುದರಿಂದ ದೇಹಕ್ಕೆ ಕಬ್ಬಿಣಾಂಶವೂ ದೊರೆಯುತ್ತದೆ. ನಮ್ಮ ದೇಹದ ರಕ್ತದಲ್ಲಿನ ಹಿಮೋಗ್ಲೋಬಿನ್‌ನ ಹೆಚ್ಚಳಕ್ಕೆ ಕಬ್ಬಿಣಾಂಶ ಬೇಕೇಬೇಕು. ಹಾಗಾಗಿ ಇದು ಆರೋಗ್ಯಕ್ಕೆ ಪೂರಕ.

ಇದನ್ನೂ ಓದಿ: Clay Pot Cooking: ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡಲು ಬಯಸಿದ್ದೀರಾ? ಹಾಗಿದ್ದರೆ ಇವಿಷ್ಟು ಸಂಗತಿ ನೆನಪಿರಲಿ!

ಯಾವ ನಿರ್ಬಂಧವೂ ಇಲ್ಲ

ಕಬ್ಬಿಣದ ಪಾತ್ರೆಯಲ್ಲಿ ಅಸಿಡಿಕ್‌ ಅಥವಾ ಆಮ್ಲೀಯ ಗುಣಗಳ ಆಹಾರವನ್ನು ಇಡುವಂತಿಲ್ಲ ಎಂಬ ಯಾವ ನಿರ್ಬಂಧವೂ ಇಲ್ಲ. ಆದರೆ, ಇಂಥ ಅಡುಗೆಯನ್ನು ಬಹಳ ಹೊತ್ತು ಇಟ್ಟುಕೊಂಡು ಕುದಿಸುವಂಥ ಪ್ರಕ್ರಿಯೆ ಮಾಡದೆ ಇರುವುದು ಒಳ್ಳೆಯದು.

Continue Reading

ಆಹಾರ/ಅಡುಗೆ

Which Type Of Roti Is Best: ಯಾರಿಗೆ ಯಾವ ರೊಟ್ಟಿ ಸೂಕ್ತ? ತಿನ್ನುವ ಮೊದಲು ತಿಳಿದುಕೊಂಡಿರಿ!

ಹಲವಾರು ರೀತಿಯ ರೊಟ್ಟಿಗಳು ಆಹಾರವಾಗಿ ಜನಪ್ರಿಯತೆ ಗಳಿಸಿವೆ. ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ಧಾನ್ಯ ಪರಂಪರಾಗತ ಆಹಾರವಾಗಿಯೂ ಬಳಕೆಯಲ್ಲಿದೆ. ಆದರೆ ಯಾರಿಗೆ ಯಾವ ರೊಟ್ಟಿ ಒಳ್ಳೆಯದು? ಯಾವ ರೊಟ್ಟಿಯಲ್ಲಿ ಏನೇನು ಸತ್ವಗಳು ದೊರೆಯುತ್ತವೆ? ಇಲ್ಲಿವೆ (Which Type Of Roti Is Best) ವಿವರ.

VISTARANEWS.COM


on

Which Type Of Roti Is Best
Koo

ಭಾರತದಲ್ಲಿ ಎಲ್ಲವೂ ವೈವಿಧ್ಯಮಯ, ಊಟವೂ ಸೇರಿ. ಅನ್ನ ಎಂದರೆ ಎಲ್ಲವೂ ಒಂದೇ ಅಲ್ಲ. ಬಿಳಿಯಕ್ಕಿ, ಕೆಂಪಕ್ಕಿ, ಕುಚ್ಚಲಕ್ಕಿ ಮುಂತಾದ ಹಲವು ರೀತಿಯ ಅಕ್ಕಿಗಳಲ್ಲಿ ಅನ್ನ ಮಾಡಲಾಗುತ್ತದೆ. ರೊಟ್ಟಿ ಎಂದರೆ ಅದರಲ್ಲೂ ಭಿನ್ನತೆಯಿದೆ. ಅಕ್ಕಿರೊಟ್ಟಿ ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಚಲಿತ; ಗೋಧಿ ರೊಟ್ಟಿ ಭಾರತದೆಲ್ಲೆಡೆ ಚಾಲ್ತಿಯಲ್ಲಿದೆ; ಜೋಳದ್ದು ಕರ್ನಾಟಕವೂ ಸೇರಿದಂತೆ ಹಲವೆಡೆ ಬಳಕೆಯಲ್ಲಿದೆ; ರಾಗಿ ರೊಟ್ಟಿ ಕರ್ನಾಟಕದಲ್ಲಿ ಹೆಚ್ಚು ಪ್ರಿಯ; ಸಜ್ಜೆ ರೊಟ್ಟಿ ಗುಜರಾತ್‌, ರಾಜಸ್ಥಾನಗಳಲ್ಲಿ ಮುಖ್ಯ ಆಹಾರ; ಪಂಜಾಬ್‌ ಪ್ರಾಂತ್ಯದಲ್ಲಿ ಮೈದಾ ನಾನ್‌ಗಳು ಜನಪ್ರಿಯ. ಆದರೆ ಈ ಎಲ್ಲಾ ರೊಟ್ಟಿಗಳಲ್ಲಿ ತೂಕ ಇಳಿಸುವವರಿಗೆ ಸೂಕ್ತವಾಗಿದ್ದು (Which Type Of Roti Is Best) ಯಾವುದು? ಇತ್ತೀಚಿನ ವರ್ಷಗಳಲ್ಲಿ ಸಿರಿಧಾನ್ಯದ ಬಳಕೆ ಹೆಚ್ಚಿದೆ. ಆರೋಗ್ಯದ ಬಗ್ಗೆ ಕಾಳಜಿಯೂ ಹೆಚ್ಚಿರುವುದರಿಂದ, ಯಾವುದು ಹೆಚ್ಚು ಆರೋಗ್ಯಕರ ಎಂಬ ಚರ್ಚೆಗೆ ಕಾವೇರಿದೆ. ಆಹಾರ ತಜ್ಞರು ಈ ಬಗ್ಗೆ ನಾನಾ ರೀತಿಯ ವಿವರಣೆಗಳನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವು ರೀತಿಯ ರೊಟ್ಟಿಗಳ ಸತ್ವ ಮತ್ತು ಕ್ಯಾಲೊರಿಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ. ಇವೆಲ್ಲವೂ ಆರೋಗ್ಯಕ್ಕೆ ಒಳ್ಳೆಯದೇ ಆದರೂ ಒಂದೊಂದು ಧಾನ್ಯಗಳಿಗೂ ಅದರದ್ದೇ ಆದ ಅನನ್ಯತೆಯಿದೆ. ಹಾಗಾಗಿ ಅವುಗಳ ಸತ್ವಗಳು ಭಿನ್ನವಾಗುತ್ತವೆ.

Wheat Roti

ಗೋಧಿ ರೊಟ್ಟಿ

ಒಂದು ಮಧ್ಯಮ ಗಾತ್ರದ ಗೋಧಿ ರೊಟ್ಟಿಯಲ್ಲಿ 70-80 ಕ್ಯಾಲರಿ ಶಕ್ತಿ ದೊರೆಯುತ್ತದೆ. ಇದರಲ್ಲಿ ನಾರು, ಪಿಷ್ಟ, ಅಲ್ಪ ಪ್ರಮಾಣದ ಪ್ರೊಟೀನ್‌ ಮತ್ತು ಕೊಬ್ಬು, ಮ್ಯಾಂಗನೀಸ್‌, ಫಾಸ್ಫರಸ್‌ನಂಥ ಖನಿಜಗಳು, ಹಲವು ರೀತಿಯ ಬಿ ವಿಟಮಿನ್‌ಗಳು ಇದರಲ್ಲಿ ವಿಫುಲವಾಗಿವೆ. ಈ ಧಾನ್ಯ ದೊರೆಯುವುದು, ಇದರಲ್ಲಿ ಆಹಾರ ತಯಾರಿಸುವುದು ಕಷ್ವವಲ್ಲ ಮತ್ತು ಇದರ ರುಚಿಯೂ ಇಷ್ಟವಾಗುವಂಥದ್ದು.

Millet Roti

ರಾಗಿ ರೊಟ್ಟಿ

ಒಂದು ರಾಗಿ ರೊಟ್ಟಿಯಲ್ಲಿ 80-90 ಕ್ಯಾಲರಿ ಶಕ್ತಿ ದೊರೆಯುತ್ತದೆ. ಜೊತೆಗೆ, ಕ್ಯಾಲ್ಶಿಯಂ, ಕಬ್ಬಿಣ, ನಾರು, ಪ್ರೊಟೀನ್‌, ಪಿಷ್ಟ, ಉತ್ಕರ್ಷಣ ನಿರೋಧಕಗಳಿಂದ ಭರಿತವಾಗಿದೆ. ಹಲವು ರೀತಿಯ ಖನಿಜಾಂಶಗಳು ಇದರಲ್ಲಿವೆ. ಮೂಳೆಗಳ ಆರೋಗ್ಯಕ್ಕೆ ಇದು ಸೂಕ್ತವಾದದ್ದು ಮಾತ್ರವಲ್ಲ, ಮಧುಮೇಹಿಗಳಿಗೆ ಇದು ಒಳ್ಳೆಯ ಆಹಾರವಾಗಿದ್ದು, ರಕ್ತದಲ್ಲಿ ಸಕ್ಕರೆಯಂಶ ಏರದಂತೆ ಕಾಪಾಡಲು ನೆರವಾಗುತ್ತದೆ. ರಾಗಿ ತಿಂದವ ನಿರೋಗಿ ಎಂಬ ಮಾತು ವ್ಯಾಪಕ ಮನ್ನಣೆ ಪಡೆದಿದೆ.

jolada Roti

ಜೋಳದ ರೊಟ್ಟಿ

ಒಂದು ದೊಡ್ಡ ಜೋಳದ ರೊಟ್ಟಿಯಲ್ಲಿ 50-60 ಕ್ಯಾಲರಿ ಶಕ್ತಿ ದೊರೆಯುತ್ತದೆ. ಜೋಳ ತಿಂದವ ತೋಳದಂತಿರಬಹುದು ಎಂಬುದು ಜನಪ್ರಿಯ ಗಾದೆ. ಗ್ಲೂಟೆನ್‌ ರಹಿತವಾದ ಆಹಾರ ಇದಾಗಿದ್ದು, ಮಧುಮೇಹಿಗಳಿಗೆ ಸೂಕ್ತವಾದ ಆಹಾರವಿದು. ಇದರಲ್ಲಿ ಪ್ರೊಟೀನ್‌, ಕೊಬ್ಬು, ನಾರು, ಪಿಷ್ಟ, ಕ್ಯಾಲ್ಶಿಯಂ, ರಂಜಕ, ಕಬ್ಬಿಣ ಮುಂತಾದ ಸೂಕ್ಷ್ಮ ಪೋಷಕಾಂಶಗಳು ಬಹಳಷ್ಟಿವೆ.

Multigrain Roti

ಬಹುಧಾನ್ಯಗಳ ರೊಟ್ಟಿ

ಇದರಲ್ಲಿ ಹಲವಾರು ರೀತಿಯ ಧಾನ್ಯಗಳನ್ನು ಮಿಶ್ರ ಮಾಡಲಾಗುತ್ತದೆ. ಅಂದಾಜಿಗೆ ಹೇಳುವುದಾದರೆ, ಒಂದು ರೊಟ್ಟಿಯಲ್ಲಿ 80-100 ಕ್ಯಾಲರಿ ಶಕ್ತಿ ದೊರೆಯಬಹುದು. ಆದರೆ ಯಾವ್ಯಾವ ಧಾನ್ಯಗಳನ್ನು ಎಷ್ಟು ಪ್ರಮಾಣದಲ್ಲಿ ಮಿಶ್ರ ಮಾಡಲಾಗುತ್ತದೆ ಎನ್ನುವುದರ ಮೇಲೆ, ಇದರ ಕ್ಯಾಲರಿಗಳು ನಿರ್ಧಾರವಾಗುತ್ತದೆ. ಇದರಿಂದ ಹಲವು ರೀತಿಯ ಧಾನ್ಯಗಳು ಮತ್ತು ಸಿರಿಧಾನ್ಯಗಳು ಒಟ್ಟಿಗೇ ದೇಹಕ್ಕೆ ದೊರೆಯುವುದಕ್ಕೆ ಸಾಧ್ಯ. ಇದರಲ್ಲಿ ಹಲವು ರೀತಿಯ ವಿಟಮಿನ್‌ ಮತ್ತು ಖನಿಜಗಳು, ನಾರು ಹೇರಳವಾಗಿ ದೊರೆಯುತ್ತದೆ.

ಇದನ್ನೂ ಓದಿ: Health Benefits Of Tofu: ಪನೀರ್‌ನಂತೆ ಕಾಣುವ ಈ ಆಹಾರದ ಬಗ್ಗೆ ನಿಮಗೆ ಗೊತ್ತೆ?

ಯಾವುದು ಸೂಕ್ತ?

ಗ್ಲೂಟೆನ್‌ ಮುಕ್ತ ಆಹಾರ ಬೇಕೆಂದರೆ ರಾಗಿ ಮತ್ತು ಜೋಳದ ರೊಟ್ಟಿಗಳು ಸೂಕ್ತ. ಬಹುಧಾನ್ಯಗಳಲ್ಲಿ ಗೋಧಿ ಮಿಶ್ರವಾಗಿರುವ ಸಾಧ್ಯತೆ ಹೆಚ್ಚಾಗಿರುವುದರಿಂದ ಇದನ್ನು ಬಿಡುವುದು ಒಳಿತು. ಮಧುಮೇಹ ನಿಯಂತ್ರಣಕ್ಕೆ ಪ್ರಯತ್ನಿಸುತ್ತಿದ್ದರೆ ರಾಗಿ ಮತ್ತು ಜೋಳದ ರೊಟ್ಟಿಗಳು ಒಳ್ಳೆಯದು. ಹೆಚ್ಚು ಸಮತೋಲಿತ ಆಹಾರದ ಬಗ್ಗೆ ಗಮನ ಹೊಂದಿದ್ದರೆ ಬಹುಧಾನ್ಯಗಳ ರೊಟ್ಟಿ ಒಳ್ಳೆಯ ಆಯ್ಕೆ. ತೂಕ ಇಳಿಸುವುದು ಮುಖ್ಯ ಉದ್ದೇಶವಾಗಿದ್ದರೆ ಜೋಳದ ರೊಟ್ಟಿ ಸೂಕ್ತವಾದದ್ದು.

Continue Reading
Advertisement
Bomb Threat
ಪ್ರಮುಖ ಸುದ್ದಿ7 mins ago

Bomb Threat : ತೆಲಂಗಾಣ ಡಿಸಿಎಂ ಮನೆಗೆ ಬಾಂಬ್​ ಬೆದರಿಕೆ; ಆತಂಕ

Acid attack
ಕರ್ನಾಟಕ20 mins ago

Acid attack: ಮನೆ ಬಾಗಿಲು ತೆರೆಯದ ಹಿನ್ನೆಲೆ ವಿವಾಹಿತ ಪ್ರಿಯತಮೆಗೆ ಆ್ಯಸಿಡ್ ಎರಚಿದ ಪ್ರಿಯಕರ!

Cab service
ಪ್ರಮುಖ ಸುದ್ದಿ23 mins ago

Cab Service : ಆ್ಯಪ್​ ಆಧಾರಿತ ಕ್ಯಾಬ್​ಗಳು ಶೇ. 5ಕ್ಕಿಂತ ಹೆಚ್ಚು ಸೇವಾ ಶುಲ್ಕ ವಿಧಿಸುವಂತಿಲ್ಲ; ಸರ್ಕಾರದ ಆದೇಶಕ್ಕೆ ಕೋರ್ಟ್​ ಮನ್ನಣೆ

Gauri Khan
ಸಿನಿಮಾ55 mins ago

Gauri Khan: ಇಸ್ಲಾಂಗೆ ಮತಾಂತರ ಆಗದೇ ಇರಲು ಕಾರಣ ತಿಳಿಸಿದ ಶಾರುಖ್ ಖಾನ್ ಪತ್ನಿ ಗೌರಿ!

Veer Savarkar flyover
ಕರ್ನಾಟಕ55 mins ago

Veer Savarkar flyover: ಸಾವರ್ಕರ್ ಸೇತುವೆಯ ನಾಮಫಲಕಕ್ಕೆ ಮಸಿ ಬಳಿದಿರೋದು ಅತ್ಯಂತ ಖಂಡನೀಯ: ವಿಜಯೇಂದ್ರ

Lok Sabha Election
ಪ್ರಮುಖ ಸುದ್ದಿ60 mins ago

Lok Sabha Election : ಷೇರು ಮಾರುಕಟ್ಟೆ ಸಂಸ್ಥೆಯ ಪ್ರಕಾರ ಬಿಜೆಪಿ ಕಳೆದ ಬಾರಿಗಿಂತ ಹೆಚ್ಚು ಸೀಟು ಗೆಲ್ಲಲಿದೆ; ಲೆಕ್ಕಾಚಾರ ಹೀಗಿದೆ

Robbery Case Two accused arrested by yallapur police
ಕರ್ನಾಟಕ60 mins ago

Robbery Case: ಅರಬೈಲ್ ಘಟ್ಟದಲ್ಲಿ ಕಾರು ಅಡ್ಡಗಟ್ಟಿ ದರೋಡೆ; ಇಬ್ಬರು ಆರೋಪಿಗಳ ಬಂಧನ

MLA Belur Gopalakrishna latest statement in Hosnagara
ಶಿವಮೊಗ್ಗ1 hour ago

MLC Election: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವು ಖಚಿತ: ಬೇಳೂರು

Toyota Technical Training Institute students Excellent performance in India Skills Competition 2024
ಕರ್ನಾಟಕ1 hour ago

Toyota: ಇಂಡಿಯಾ ಸ್ಕಿಲ್ಸ್ ಕಾಂಪಿಟೇಷನ್ 2024; ಟಿಟಿಟಿಐ ವಿದ್ಯಾರ್ಥಿಗಳ ಉತ್ತಮ ಸಾಧನೆ

World Menstrual Hygiene Day in Hosapete
ಆರೋಗ್ಯ1 hour ago

Vijayanagara News: ಹೊಸಪೇಟೆಯಲ್ಲಿ ವಿಶ್ವ ಋತುಚಕ್ರ ನೈರ್ಮಲ್ಯ ದಿನಾಚರಣೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ3 hours ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು11 hours ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 day ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ2 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು2 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ6 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ7 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌