Vitamin B12: ನಮ್ಮ ಹಲವು ಸಮಸ್ಯೆಗಳಿಗೆ ವಿಟಮಿನ್‌ ಬಿ12 ಕೊರತೆಯೇ ಕಾರಣ! - Vistara News

ಆರೋಗ್ಯ

Vitamin B12: ನಮ್ಮ ಹಲವು ಸಮಸ್ಯೆಗಳಿಗೆ ವಿಟಮಿನ್‌ ಬಿ12 ಕೊರತೆಯೇ ಕಾರಣ!

ದೇಹ ತನ್ನಷ್ಟಕ್ಕೆ ತಾನು ವಿಟಮಿನ್‌ ಬಿ12 ತಯಾರಿಸಿಕೊಳ್ಳಲು (Vitamin B12) ಸಾಧ್ಯವಿಲ್ಲವಾದ್ದರಿಂದ ಆಹಾರದ ಮೂಲವೇ ಪೂರೈಸಬೇಕು. ಭಾರತದಲ್ಲಿ ಶೇ. 47 ಜನರಿಗೆ ವಿಟಮಿನ್‌ ಬಿ12 ಕೊರತೆಯಿದ್ದು, ಕೇವಲ ಶೇ. 25ರಷ್ಟು ಜನಕ್ಕೆ ಮಾತ್ರವೇ ದೇಹಕ್ಕೆ ಬೇಕಾದಷ್ಟು ಲಭ್ಯವಾಗುತ್ತಿದೆ. ಯಾವೆಲ್ಲ ಆಹಾರಗಳಲ್ಲಿ ಇದು ದೊರೆಯುತ್ತದೆ? ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Vitamin B12
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೆಲವು ಪೋಷಕಾಂಶಗಳ (Vitamin B12) ಕೊರತೆಯೆನ್ನುವುದು ಅಷ್ಟಾಗಿ ಗಮನಕ್ಕೆ ಬರುವುದಿಲ್ಲ. ತೀವ್ರವಾಗ ಲಕ್ಷಣಗಳನ್ನು ಅದು ಮೊದಲಿಗೆ ತೋರದಿದ್ದಾಗ, ಕೊರತೆ ತೀವ್ರವಾಗುವವರೆಗೂ ತಿಳಿಯುವುದೇ ಇಲ್ಲ ಎನ್ನುವಂತಾಗುತ್ತದೆ. ಉದಾ, ವಿಟಮಿನ್‌ ಬಿ-12 ಕೊರತೆ ಉಳಿದ ಸತ್ವಗಳ ಕೊರತೆಯಂತಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಅತ್ಯಂತ ‌ಹೆಚ್ಚು ಕೊರತೆ ಕಂಡುಬರುತ್ತಿರುವ ಸತ್ವಗಳಲ್ಲಿ ವಿಟಮಿನ್‌ ಬಿ-12 ಸಹ ಒಂದು. ಭಾರತದಲ್ಲಿ ಶೇ. 47 ಜನರಿಗೆ ವಿಟಮಿನ್‌ ಬಿ12 ಕೊರತೆಯಿದ್ದು, ಕೇವಲ ಶೇ. 25ರಷ್ಟು ಜನಕ್ಕೆ ಮಾತ್ರವೇ ದೇಹಕ್ಕೆ ಬೇಕಾದಷ್ಟು ಲಭ್ಯವಾಗುತ್ತಿದೆ. ಇದನ್ನು ದೇಹ ತನ್ನಷ್ಟಕ್ಕೆ ತಾನು ತಯಾರಿಸಿಕೊಳ್ಳಲು ಸಾಧ್ಯವಿಲ್ಲವಾದ್ದರಿಂದ ಆಹಾರದ ಮೂಲವೇ ಪೂರೈಸಬೇಕು. ನಿಯಾಸಿನ್‌, ಥಿಯಾಮಿನ್‌, ರೈಬೊಫ್ಲೆವಿನ್‌, ಫೋಲಿಕ್‌ ಆಮ್ಲ, ವಿಟಮಿನ್‌ ಬಿ೬ ಮತ್ತು ವಿಟಮಿನ್‌ ಬಿ12, ಬಯೋಟಿನ್‌ ಇವೆಲ್ಲವೂ ಬೇರೆ ಬೇರೆ ಬಿ ವಿಟಮಿನ್‌ಗಳು. ಇವೆಲ್ಲ ನಮ್ಮ ದೇಹದಲ್ಲಿ ನಿರ್ವಹಿಸಬೇಕಾದ ಕೆಲಸಗಳು ಬಹಳಷ್ಟಿವೆ. ಇದರಲ್ಲಿ, ವಿಟಮಿನ್‌ ಬಿ12 ನಮಗೇಕೆ ಬೇಕು ಮತ್ತು ಅದನ್ನು ಯಾವ ಆಹಾರಗಳ ಮೂಲಕ ಪಡೆಯಬಹುದು ಎಂಬ ಮಾಹಿತಿಯಿದು

Why do you need it Vitamin B12

ಖಿನ್ನತೆ ದೂರವಿಡಲು

ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್‌ ಬಿ12 ನಮ್ಮ ಆಹಾರದ ಭಾಗವಾಗಿರಬೇಕು. ನಮ್ಮನ್ನು ಸಂತೋಷದಿಂದಿಡಲು ಅಗತ್ಯವಾದ ಸೆರೋಟೋನಿನ್‌ ಚೋದಕಗಳು ಬಿಡುಗಡೆ ಆಗುವಲ್ಲಿ ವಿಟಮಿನ್‌ ಬಿ12 ಪಾತ್ರ ಗಣನೀಯ. ಈ ಪೋಷಕತತ್ವ ಕಡಿಮೆ ಆದವರು ಖಿನ್ನತೆಗೆ ಜಾರುವ ಸಾಧ್ಯತೆ, ಉಳಿದವರಿಗೆ ಹೋಲಿಸಿದಲ್ಲಿ, ದುಪ್ಪಟ್ಟು ಎಂದು ಹೇಳಲಾಗುತ್ತದೆ.

active brain

ಮೆದುಳಿನ ಆರೋಗ್ಯಕ್ಕೆ

ನಮ್ಮ ನರಗಳ ಆರೋಗ್ಯಕ್ಕೂ ವಿಟಮಿನ್‌ ಬಿ12 ಅತಿ ಮುಖ್ಯ. ಮೆದುಳಿನ ನ್ಯೂರಾನ್‌ಗಳು ಸಾಯುತ್ತಾ ಬರುವ ಅಟ್ರೋಫಿಯಂಥ ಅವಸ್ಥೆಗೆ ತುತ್ತಾಗಬಾರದೆಂದರೆ ವಿಟಮಿನ್‌ ಬಿ12 ಸೇವನೆ ಸಾಕಷ್ಟಿರಬೇಕು. ಇರುವುದೆಲ್ಲಾ ಮರೆವಂಥ ಡಿಮೆನ್ಶಿಯದಂಥ ಖಾಯಿಲೆ ದೂರವಿಡುವಲ್ಲಿ ಈ ಪೋಷಕಾಂಶದ ಪಾತ್ರ ಪ್ರಮುಖ. ಮೆದುಳಿಗೆ ಅಗತ್ಯ ಶಕ್ತಿಯನ್ನೂ ಇದು ಪೂರೈಸುವುದರಿಂದ, ನಮ್ಮ ಬುದ್ಧಿಯನ್ನೂ ಚುರುಕಾಗಿಸುವಲ್ಲಿ ಸಹಾಯ ಮಾಡುತ್ತದೆ.

Food Beneficial For Eye Health

ಕಣ್ಣಿನ ಆರೋಗ್ಯಕ್ಕೆ

ಇದಕ್ಕೂ ಅಗತ್ಯವಾಗಿ ಬೇಕು ಬಿ12 ಜೀವಸತ್ವ. ಕಣ್ಣಿನ ಮೆಕ್ಯುಲ ಹಾಳಾಗದೆ, ದೃಷ್ಟಿ ಪರಿಪೂರ್ಣವಾಗಿ ಇರಬೇಕೆಂದರೆ ವಿಟಮಿನ್‌ ಬಿ12 ನಮ್ಮ ಆಹಾರದಲ್ಲಿ ಇರಲೇಬೇಕು. ಸಾಮಾನ್ಯವಾಗಿ ವೃದ್ಧಾಪ್ಯದಲ್ಲಿ ತಲೆದೋರುವ ಈ ಬಗೆಯ ದೃಷ್ಟಿದೋಷ, ಇದೊಂದು ವಿಟಮಿನ್‌ನ ಕೊರತೆಯಿಂದ ಕಡಿಮೆ ವಯಸ್ಸಿನವರನ್ನೂ ಬಾಧಿಸುತ್ತದೆ.

ಎಷ್ಟು ಬೇಕು?

ಅಧ್ಯಯನಗಳ ಪ್ರಕಾರ, ದಿನವೊಂದಕ್ಕೆ 1.5 ಮೈಕ್ರೊ ಗ್ರಾಂ ನಷ್ಟು ಬಿ12 ಜೀವಸತ್ವ ನಮಗೆ ಬೇಕು. ಹಲವು ರೀತಿಯ ಪ್ರಾಣಿ ಜನ್ಯ ಆಹಾರಗಳಿಂದ ಈ ಪೋಷಕಾಂಶವನ್ನು ಪಡೆಯಲು ಸಾಧ್ಯ. ಸಸ್ಯಜನ್ಯ ಆಹಾರಗಳಲ್ಲಿ, ಅಂದರೆ ಹಣ್ಣು-ತರಕಾರಿಗಳಲ್ಲಿ ಇದರ ಲಭ್ಯತೆ ಕಡಿಮೆ.

How does deficiency occur Vitamin B12

ಯಾವೆಲ್ಲಾ ಆಹಾರಗಳಲ್ಲಿ ಇದು ಲಭ್ಯ?

ಅಂಗಾಂಗಗಳಲ್ಲಿ: ಅಂದರೆ ಯಕೃತ್ತು, ಕಿಡ್ನಿಯಂಥ ಅಂಗಾಂಗಗಳ ಮಾಂಸದಲ್ಲಿ ವಿಟಮಿನ್‌ ಬಿ 12 ಹೇರಳವಾಗಿದೆ. ಇದೊಂದೇ ಅಲ್ಲ, ಹಲವು ರೀತಿಯ ಪೋಷಕಾಂಶಗಳ ಆಗರ ಈ ಮಾಂಸ ಎನ್ನುತ್ತಾರೆ ತಜ್ಞರು.

Dairy products meat soy Food For Relieving Joint Pain

ಡೈರಿ ಉತ್ಪನ್ನಗಳಲ್ಲಿ

ಹಾಲು, ಮೊಸರು, ಬೆಣ್ಣೆಯಂಥ ಯಾವುದೇ ಡೈರಿಯ ಉತ್ಪನ್ನಗಳಲ್ಲಿ ಈ ಅಂಶ ಲಭ್ಯವಿದೆ. ಹಾಗಾಗಿ ಸಸ್ಯಾಹಾರಿಗಳು ವಿಟಮಿನ್‌ ಬಿ12 ಕೊರತೆಯನ್ನು ಅನುಭವಿಸುವ ಅಗತ್ಯವೇ ಇಲ್ಲ.

Egg Protein Foods

ಮೊಟ್ಟೆ

ವಿಟಮಿನ್‌ ಬಿ 12 ಮಾತ್ರವೇ ಅಲ್ಲ, ಹಲವು ರೀತಿಯ ಪೋಷಕಾಂಶಗಳನ್ನು ಪೂರೈಸುವ, ಪ್ರಚಲಿತವಿರುವ ಮತ್ತು ಕೈಗೆಟುಕುವ ಆಹಾರವಿದು.

Fatty Fish Joint Pain Relief Foods

ಮೀನು

ಮತ್ಸಾಹಾರಿಗಳಂತೂ ವಿಟಮಿನ್‌ ಬಿ 12 ಕೊರತೆಯನ್ನು ಸುಲಭದಲ್ಲಿ ನೀಗಿಸಿಕೊಳ್ಳಬಹುದು. ಟ್ಯೂನಾ, ಸಾಲ್ಮನ್‌ ರೀತಿಯ ಮೀನುಗಳಲ್ಲಿ ಪ್ರೊಟೀನ್.‌ ಫಾಸ್ಫರಸ್‌, ವಿಟಮಿನ್‌ ಎ, ವಿಟಮಿನ್‌ ಬಿ3 ಯಂಥ ಬಗೆಬಗೆಯ ಪೋಷಕಾಂಶಗಳು ಲಭ್ಯವಿವೆ.

ಫಾರ್ಟಿಫೈಡ್‌ ಸೀರಿಯಲ್‌

ಅಂದರೆ, ಪ್ರಾಕೃತಿಕವಾಗಿ ಇಲ್ಲದ ಫೋಷಕಗಳನ್ನು ಕೃತಕವಾಗಿ ಸೇರಿಸಿ ತಯಾರಿಸಿದ ಸೀರಿಯಲ್‌. ಕೆಲವು ರೀತಿಯ ಆಹಾರಕ್ಕೆ ಅಲರ್ಜಿ ಇರುವವರಿಗೂ ಇಂಥ ಆಯ್ಕೆಗಳು ಲಭ್ಯವಿದೆ. ಉಳಿದಂತೆ, ಪೋಷಕಾಂಶಗಳು ನೈಸರ್ಗಿಕವಾಗಿಯೇ ದೇಹಕ್ಕೆ ದೊರಕಿದರೆ ಉತ್ತಮ.

ಇದನ್ನೂ ಓದಿ: Coconut oil massage: ಮುಖದ ಕಾಂತಿ ಹೆಚ್ಚಿಸಿಕೊಳ್ಳಬೇಕೆ? ತೆಂಗಿನೆಣ್ಣೆ ಹಚ್ಚಿಕೊಂಡರೆ ಸಾಕು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Guava Leaves Benefits: ಕೇವಲ ಸೀಬೆ ಹಣ್ಣಲ್ಲ, ಎಲೆಯಿಂದಲೂ ಎಷ್ಟೊಂದು ಪ್ರಯೋಜನಗಳು!

ಸೀಬೆಯ ಎಲೆಯಿಂದ (guava leaves benefits) ನಿಮ್ಮ ಕೂದಲೂ ಸೇರಿದಂತೆ ನಿತ್ಯವೂ ಕಾಡುವ ಹಲವಾರು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣದಂತಹ ಉತ್ತರವಿದೆ. ಇದರಿಂದ ಆಗಬಹುದಾದ ಲಾಭಗಳನ್ನು ನೀವು ತಿಳಿದುಕೊಂಡರೆ ಖಂಡಿತಾ ನೀವು ಸೀಬೆ ಮರವನ್ನು ಅರಸಿಕೊಂಡು ಹೋಗುವುದರಲ್ಲಿ ಯಾವ ಸಂಶಯವೂ ಇಲ್ಲ. ಬನ್ನಿ ಸೀಬೆ ಮರದ ಎಲೆಯ ಲಾಭಗಳನ್ನು ತಿಳಿದುಕೊಳ್ಳೋಣ.

VISTARANEWS.COM


on

guava leaves benefits
Koo

ಪೇರಳೆ ಅಥವಾ ಸೀಬೆ ಹಣ್ಣಿನ (guava leaves benefits) ಮಹತ್ವದ ಬಗ್ಗೆ ನಿಮಗೆ ಕೇಳಿ ಗೊತ್ತಿರಬಹುದು. ಅದರ ಆರೋಗ್ಯದ ಲಾಭಗಳನ್ನು ನೀವು ಕೇಳಿ ತಿಳಿದುಕೊಂಡು ತಿನ್ನುತ್ತಲೂ ಇರಬಹುದು. ಆದರೆ ಸೀಬೆಕಾಯಿಯ ಎಲೆಯ ಲಾಭಗಳ ಬಗ್ಗೆ ನಿಮಗೆ ಗೊತ್ತೇ? ಸೀಬೆಯ ಎಲೆಯಿಂದ ನಿಮ್ಮ ಕೂದಲೂ ಸೇರಿದಂತೆ ನಿತ್ಯವೂ ಕಾಡುವ ಹಲವಾರು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣದಂತಹ ಉತ್ತರವಿದೆ. ಇದರಿಂದ ಆಗಬಹುದಾದ ಲಾಭಗಳನ್ನು ನೀವು ತಿಳಿದುಕೊಂಡರೆ ಖಂಡಿತಾ ನೀವು ಸೀಬೆ ಮರವನ್ನು ಅರಸಿಕೊಂಡು ಹೋಗುವುದರಲ್ಲಿ ಯಾವ ಸಂಶಯವೂ ಇಲ್ಲ. ಬನ್ನಿ ಸೀಬೆ ಮರದ ಎಲೆಯ ಲಾಭಗಳನ್ನು ತಿಳಿದುಕೊಳ್ಳೋಣ.

Guava Leaves

ಪೋಷಕಾಂಶಗಳು

ಸೀಬೆಯ ಎಲೆಯಲ್ಲಿ ಸಾಕಷ್ಟು ವಿಟಮಿನ್‌ಗಳೂ ಪೋಷಕಾಂಶಗಳೂ ಇರುವುದರಿಂದ ಕೂದಲನ್ನು ಶಕ್ತಿಯುತವಾಗಿಸುವಲ್ಲಿ ಇದರ ಪಾತ್ರ ದೊಡ್ಡದು. ಕೂದಲನ್ನು ಬೇರಿನಿಂದಲೇ ಶಕ್ತಿಯುತಗೊಳಿಸಿ ಗಟ್ಟಿಗೊಳಿಸುತ್ತದೆ. ಬುಡದಿಂದಲೇ ಕೂದಲನ್ನು ಆರೋಗ್ಯಯುತವಾಗಿಸಿ ಕೂದಲುದುರುವಿಕೆಯನ್ನು ತಡೆಯುತ್ತದೆ. ಕೂದಲು ಸೊಂಪಾಗಿ ದೃಢವಾಗಿ ಬೆಳೆಯುತ್ತದೆ.

ಕೂದಲು ದೃಢ

ಫ್ರೀ ರ್ಯಾಡಿಕಲ್ಸ್‌ ವಿರುದ್ಧ ಹೋರಾಡುವ ಗುಣವನ್ನು ಇದು ಹೊಂದಿರುವುದರಿಂದ ಕೂದಲಿನ ಬುಡಕ್ಕಾಗುವ ಹಾನಿಯನ್ನು ಇದು ತಪ್ಪಿಸುತ್ತದೆ. ಆ ಮೂಲಕ ಕೂದಲು ದೃಢವಾಗಿ ಬೆಳೆಯುತ್ತದೆ.

Image Of Guava Leaves Benefits

ರಕ್ತ ಸಂಚಾರ ಚುರುಕು

ಸೀಬೆ ಎಲೆಯು ಕೂದಲ ಬುಡದಲ್ಲಿ ರಕ್ತಸಂಚಾರವನ್ನು ಚುರುಕುಗೊಳಿಸುವಲ್ಲಿ ನೆರವಾಗುತ್ತದೆ. ಇದರಿಂದ ಕೂದಲ ಆರೋಗ್ಯ ಹೆಚ್ಚುತ್ತದೆ. ಕೂದಲಿಗೆ ಪೋಷಣೆ ಸರಿಯಾಗಿ ಆಗುವ ಮೂಲಕ ಸಂಪೂರ್ಣವಾಗಿ ಕೂದಲ ಆರೋಗ್ಯ ದ್ವಿಗುಣಗೊಳ್ಳುತ್ತದೆ.

ಕೂದಲ ಹೊಟ್ಟು ನಿವಾರಣೆ

ನಿಮಗೆ ಕೂದಲ ಹೊಟ್ಟಿನ ಸಮಸ್ಯೆ ಇದ್ದರೆ ಸೀಬೆ ಎಲೆ ಅತ್ಯುತ್ತಮ ಮನೆಮದ್ದು. ಸೀಬೆ ಎಲೆಯು ಕೂದಲ ಹೊಟ್ಟನ್ನು ತರುವ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡಿ ಕೂದಲ ಬುಡವನ್ನು ನಯವಾಗಿಸುತ್ತದೆ. ಕೂದಲ ಬುಡದ ಚರ್ಮ ಒಣಗಿ ಏಳುವುದನ್ನು ಇದು ತಡೆಯುತ್ತದೆ. ತುರಿಕೆ ಮತ್ತು ಕಜ್ಜಿಯ ಸಮಸ್ಯೆಗಳಿಗೂ ಇದು ಒಳ್ಳೆಯದು.

Hair Growth Tips

ಕೂದಲ ಬೆಳವಣಿಗೆ

ಸೀಬೆ ಎಲೆಯನ್ನು ಆಗಾಗ ಬಳಸುವ ಮೂಲಕ ಕೂದಲ ತುದಿ ಕವಲೊಡೆಯವ ಸಮಸ್ಯೆಯಿಂದಲೂ ಮುಕ್ತಿ ಪಡೆಯಬಹುದು. ಕೂದಲು ನಯವಾಗಿ ಉದ್ದ ಬೆಳೆಯುತ್ತದೆ.

ಮಿದುಳಿನ ಆರೋಗ್ಯಕ್ಕೆ ಸಹಕಾರಿ

ಸೀಬೆ ಎಲೆಯಲ್ಲಿ ವಿಟಮಿನ್‌ ಬಿ3 ಹಾಗೂ ಬಿ6 ಇರುವುದರಿಂದ ಮಿದುಳಿನ ಆರೋಗ್ಯಕ್ಕೂ ಇದು ಒಳ್ಳೆಯದು.

ಹೊಟ್ಟೆ ನೋವಿಗೆ ಪರಿಹಾರ

ಕೇವಲ ಇವಷ್ಟೇ ಅಲ್ಲ, ಸೀಬೆಯ ಎಲೆಗಳಿಂದ ಹೊಟ್ಟೆಯ ಸಮಸ್ಯೆಗಳಿಗೆ ಪರಿಹಾರ ಕಾಣಬಹುದು. ಹೊಟ್ಟೆಯಲ್ಲಿ ಹುಣ್ಣು, ಅಲ್ಸರ್‌, ಹೊಟ್ಟೆ ನೋವು ಮತ್ತಿತರ ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಸೀಬೆ ಎಲೆಗಿದೆ.

heart attack and Diabetes control

ಮಧುಮೇಹಕ್ಕೂ ಮದ್ದು

ಸೀಬೆ ಎಲೆ ಮಧುಮೇಹಕ್ಕೆ ಒಳ್ಳೆಯ ಮನೆಮದ್ದು. ಸೀಬೆ ಎಲೆಯ ಚಹಾ ಮಾಡಿ ಕುಡಿಯುವುದರಿಂದ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ಸಮತೋಲನಕ್ಕೆ ತರಬಹುದು.

ಗಾಯಕ್ಕೆ ಔಷಧ

ಗಾಯ ಮಾಗಲು, ಗುಣವಾಗಲು, ನೋವು ನಿವಾರಕವಾಗಿ, ರೋಗ ನಿರೋಧಕವಾಗಿಯೂ ಸೀಬೆ ಎಲೆಯು ಸಹಾಯ ಮಾಡುತ್ತದೆ.

Anti-inflammatory properties Guava Leaves Benefits

ಬಾಯಿ ಹುಣ್ಣು ನಿವಾರಣೆ

ಬಾಯಿಯ ಆರೋಗ್ಯಕ್ಕೂ ಸೀಬೆ ಎಲೆ ಒಳ್ಳೆಯದು. ಬಾಯಿಹುಣ್ಣು, ಹಲ್ಲು ನೋವು, ವಸಡಿನ ಸಮಸ್ಯೆ ಮತ್ತಿತರ ಸಮಸ್ಯೆಗಳಿಗೆ ಸೀಬೆ ಎಲೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಒಂದೆಡರಡು ಸೀಬೆ ಎಲೆಯನ್ನು ಅಥವಾ ಸೀಬೆಯ ಎಳೆ ಎಲೆಯನ್ನು ಬಾಯಲ್ಲಿಟ್ಟು ಜಗಿಯುವ ಮೂಲಕ ಇದರ ಪ್ರಯೋಜನ ಪಡೆಯಬಹುದು.

ಭೇದಿಗೆ ತಡೆ

ಭೇದಿಯ ಸಮಸ್ಯೆಗೆ ಸೀಬೆ ಎಲೆ ಒಳ್ಳೆಯ ಮನೆಮದ್ದು. ಇದು ಬೇದಿಯನ್ನು ತರುವ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುವ ಮೂಲಕ ಭೇದಿಯನ್ನು ತಡೆಯುತ್ತದೆ. ಖಾಲಿ ಹೊಟ್ಟೆಯಲ್ಲಿ ಸೀಬೆ ಎಲೆಯ ಟೀ ಮಾಡಿ ಕುಡಿಯುವ ಮೂಲಕ ಪರಿಹಾರ ಕಾಣಬಹುದು.

happy woman hand in heart

ಹೃದಯ ಆರೋಗ್ಯಕ್ಕೆ ಪೂರಕ

ಹೃದಯದ ಆರೋಗ್ಯಕ್ಕೂ ಸೀಬೆ ಎಲೆಯ ಉಪಯೋಗದಿಂದ ಫಲ ಕಾಣಬಹುದು. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುವುದಲ್ಲದೆ, ಕೊಲೆಸ್ಟೆರಾಲ್‌ ಅನ್ನೂ ಕಡಿಮೆಗೊಳಿಸುವ ತಾಕತ್ತನ್ನು ಹೊಂದಿದೆ.

Continue Reading

ಬೆಂಗಳೂರು

Liquid Nitrogen : ಕಾಟನ್ ಕ್ಯಾಂಡಿ ಬಳಿಕ ಕರ್ನಾಟಕದಲ್ಲಿ ಲಿಕ್ವಿಡ್ ನೈಟ್ರೋಜನ್ ಬಳಕೆ ನಿಷೇಧ

Liquid Nitrogen: ಆರೋಗ್ಯಕ್ಕೆ ಕುತ್ತು ತರುವ ಕಾಟನ್‌ ಕ್ಯಾಂಡಿ, ಗೋಬಿ ಮಂಚೂರಿ ಬ್ಯಾನ್‌ ಬಳಿಕ ಇದೀಗ ಆಹಾರದಲ್ಲಿ ಲಿಕ್ವಿಡ್‌ ನೈಟ್ರೋಜನ್‌ ಬಳಕೆಯನ್ನು ನಿಷೇಧಿಸಲಾಗಿದೆ. ಈ ಬಗ್ಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಆದೇಶವನ್ನು ಹೊರಡಿಸಿದೆ. ಆ ಪ್ರಕಾರ ಯಾರಾದರೂ ಲಿಕ್ವಿಡ್‌ ನೈಟ್ರೋಜನ್‌ ಬಳಸಿದ್ರೆ ಜೀವಾವಧಿ ಶಿಕ್ಷೆಯೊಂದಿಗೆ 10 ಲಕ್ಷ ರೂ. ದಂಡ ವಿಧಿಸಲಾಗುತ್ತದೆ.

VISTARANEWS.COM


on

By

LIQUID NITROGEN
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಆಹಾರ ಪದಾರ್ಥಗಳಲ್ಲಿ ಲಿಕ್ವಿಡ್ ನೈಟ್ರೋಜನ್ (Liquid Nitrogen) ಬಳಕೆ ಮಾಡಿದರೆ 10 ಲಕ್ಷ ರೂ. ದಂಡ, ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಈ ಸಂಬಂಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಅಧಿಕೃತ ಆದೇಶ ಹೊರಡಿಸಿದೆ. ಲಿಕ್ವಿಡ್ ನೈಟ್ರೋಜನ್‌ನ ಒಂದು ತುತ್ತು ಜೀವಕ್ಕೆ ಕುತ್ತು ತರಬಹುದು. ಹೀಗಾಗಿ ಕಲರ್ ಕಾಟನ್‌ ಕ್ಯಾಂಡಿ, ಗೋಬಿ ಮಂಚೂರಿ ಬಳಿಕ ಇದೀಗ ರಾಜ್ಯದಲ್ಲಿ ಆಹಾರದಲ್ಲಿ ಲಿಕ್ವಿಡ್ ನೈಟ್ರೋಜನ್ ಬಳಕೆಯನ್ನು ಬ್ಯಾನ್ ಮಾಡಲಾಗಿದೆ.

ಕೆಲವು ರೆಸ್ಟೋರಂಟ್‌ಗಳಲ್ಲಿ ಫುಡ್‌ ಪ್ರಿಯರನ್ನು ಆಕರ್ಷಿಸಲೆಂದೇ ತರಹೇವಾರಿ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಇತ್ತೀಚೆಗಂತೂ ಆಹಾರ ಪದಾರ್ಥಗಳಲ್ಲಿ ಲಿಕ್ವಿಡ್ ನೈಟ್ರೋಜನ್ ಬಳಕೆ ಹೆಚ್ಚಾಗುತ್ತಿದೆ. ಜನರು ತಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಅಪಾಯದ ಬಾಗಿಲು ತಟ್ಟುತ್ತಿದ್ದಾರೆ. ಲಿಕ್ವಿಡ್ ನೈಟ್ರೋಜನ್ ಮೂಲಕ ಸ್ಮೋಕ್‌ ಐಸ್‌ಕ್ರೀಂ, ಸ್ಮೋಕ್‌ ಬಿಸ್ಕತ್ತು, ಬಿಯರ್‌ನಲ್ಲಿ ಬಳಸಲಾಗುತ್ತಿದ್ದು,ಇದು ಜೀವಕ್ಕೆ ಅಪಾಯವನ್ನುಂಟು ಮಾಡುತ್ತಿದೆ. ಹೀಗಾಗಿ ಲಿಕ್ವಿಡ್ ನೈಟ್ರೋಜನ್ ಬಳಸಿದ ಆಹಾರ ಸೇವಿಸುವ ಮುನ್ನ ಎಚ್ಚರವಾಗಿರಿ.

ಈ ಸ್ಮೋಕಿಂಗ್ ಲಿಕ್ವಿಡ್ ನೈಟ್ರೋಜನ್ ಸೇವನೆಯಿಂದ ಅಂಗಾಂಗಗಳ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಮುಖ್ಯವಾಗಿ ಲಿಕ್ವಿಡ್‌ ನೈಟ್ರೋಜನ್‌ ಸೇವನೆಯಿಂದ ಕರಳು, ಗಂಟಲುಗಳಲ್ಲಿ ಹುಣ್ಣಾಗುತ್ತಿದೆ. ಈ ಹಿನ್ನೆಲೆಯಲ್ಲಿ ಲಿಕ್ವಿಡ್ ನೈಟ್ರೋಜನ್ ಬಳಕೆ ನಿರ್ಬಂಧಿಸಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆದೇಶ ಹೊರಡಿಸಿದೆ. ಲಿಕ್ವಿಡ್ ನೈಟ್ರೋಜನ್ ಬಳಕೆ ಮಾಡಿದರೆ 10 ಲಕ್ಷ ರೂ. ದಂಡ, ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಈಗಾಗಲೇ ಪಕ್ಕದ ತಮಿಳುನಾಡಲ್ಲಿ ಬಿಸ್ಕತ್‌ ಮತ್ತು ಐಸ್‌ಕ್ರೀಮ್‌ನಂತಹ ಆಹಾರ ಪದಾರ್ಥಗಳ ಜತೆ ಲಿಕ್ವಿಡ್‌ ನೈಟ್ರೋಜನ್‌ ನೇರ ಬಳಕೆಯನ್ನು ನಿಷೇಧಿಸಿದೆ. ಇದೀಗ ಕರ್ನಾಟಕದಲ್ಲೂ ಲಿಕ್ವಿಡ್‌ ನೈಟ್ರೋಜನ್‌ ಬಳಕೆಯನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ: Cotton Candy Ban : ರಾಜ್ಯದಲ್ಲಿ ಕಾಟನ್‌ ಕ್ಯಾಂಡಿ ಬ್ಯಾನ್‌, ಗೋಬಿ ಮಂಚೂರಿಗೂ ಡೇಂಜರ್‌

ಈ ಲಿಕ್ವಿಡ್‌ ನೈಟ್ರೋಜನ್‌ ಅಥವಾ ದ್ರವ ಸಾರಜನಕವನ್ನು ಔಷಧ ಮತ್ತು ರಾಸಾಯನಿಕ ಕಂಪನಿಗಳು ತಮ್ಮ ಉತ್ಪನ್ನಗಳನ್ನು 40 ಡಿಗ್ರಿ ಸೆಂಟಿಗ್ರೇಡ್‌ನಷ್ಟು ತಂಪಾಗಿಸಲು ಬಳಸುತ್ತವೆ. ಅಲ್ಲದೆ, ಫ್ರೀಜ್‌ ಮಾಡುವ ಹಲವು ವಿಧಾನಗಳಲ್ಲಿ ಬಳಸುತ್ತಾರೆ. ಈ ಲಿಕ್ವಿಡ್‌ ನೈಟ್ರೋಜನ್‌ ಸುರಿದರೆ ಥಟ್ಟನೆ ಹಿಗ್ಗಿ ಬಿಳಿಯ ಹೊಗೆಯಂತೆ ಆವಿಯಾಗಿ ಬಿಡುತ್ತದೆ.

ಇನ್ನೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ-2006 ಪ್ರಕಾರ ಲಿಕ್ವಿಡ್‌ ನೈಟ್ರೋಜನ್‌ ಆಹಾರದಲ್ಲಿ ಬಳಸಬಾರದು ಎಂಬುದು ಈ ಮೊದಲಿನಿಂದಲೂ ಇದೆ. ಆದರೂ ಕೆಲವರು ಜನರನ್ನು ಆಕರ್ಷಿಸಲು, ಹೊಸ ಮೆನುವಿಗಾಗಿ ಇದನ್ನು ಬಳಸುತ್ತಿದ್ದಾರೆ. ಇದು ಆರೋಗ್ಯಕ್ಕೆ ಹಾನಿಕಾರಕ. ಇದನ್ನು ಬಳಸುವವರ ವಿರುದ್ಧ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು ಎಂದು ಆರೋಗ್ಯ ಇಲಾಖೆ ಆಯುಕ್ತರು ತಿಳಿಸಿದ್ದಾರೆ.

ಆದೇಶದಲ್ಲಿ ಏನಿದೆ?

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006, ನಿಯಮಗಳು 2011ರಡಿ ಲಿಕ್ವಿಡ್‌ ನೈಟ್ರೋಜನ್‌ ಅನ್ನು ಡೈರಿ ಆಧಾರಿತ ಸಿಹಿತಿಂಡಿಗಳು -ಐಸ್ ಕ್ರೀಮ್‌ನಲ್ಲಿ ಘನೀಕರಣ ಮತ್ತು ಕೂಲಿಂಗ್ (Contact Freezing and Cooling Agent en Dairy- based desserts -Ice Cream) ಗಳ ತಯಾರಿಕೆಯ ಸಮಯದಲ್ಲಿ ಮಾತ್ರ ಬಳಸಲು ಅನುಮತಿ ಇದೆ. ಆದರೆ ಸ್ಮೋಕಿಂಗ್‌ ಬಿಸ್ಕತ್‌, ಡೆಸರ್ಟ್‌ ಸೇವನೆಗಾಗಿ ಒದಗಿಸುವ ಸಂದರ್ಭದಲ್ಲಿ ಉಪಯೋಗಿಸಲು ಅನುಮತಿ ಇಲ್ಲ. ಈ ಲಿಕ್ವಿಡ್‌ ನೈಟ್ರೋಜನ್‌ ಬಳಸಿದ ಆಹಾರ ತಿಂದರೆ ಜೀರ್ಣಾಂಗದ ಭಾಗಗಳಿಗೆ ಹಾನಿಯುಂಟಾಗುತ್ತದೆ.

LIQUID-NITROGEN

ಈ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ನಿಯಮ 30(2)(ಎ)ರಡಿ ಲಿಕ್ವಿಡ್‌ ನೈಟ್ರೋಜನ್‌ ಅನ್ನು ತಿನಿಸುಗಳಿಗೆ ಉಪಯೋಗಿಸುವುದನ್ನು ನಿರ್ಬಂಧಿಸಿ ಆದೇಶಿಸಲಾಗಿದೆ. ಉಲ್ಲಂಘನೆಯ ಪ್ರಕರಣಗಳು ಕಂಡು ಬಂದರೆ ತಯಾರಿಸುವವರ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ನಿಯಮ 59ರಡಿ 7 ವರ್ಷಗಳಿಂದ ಜೀವಾವಧಿ ಅವಧಿಯವರೆಗೆ ಜೈಲು ಶಿಕ್ಷೆಯನ್ನು ಮತ್ತು ರೂ.10 ಲಕ್ಷಗಳವರೆಗೆ ದಂಡವನ್ನು ವಿಧಿಸಲು ನ್ಯಾಯಾಲಯದಲ್ಲಿ ಕೇಸ್‌ ದಾಖಲಿಸಲಾಗುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಆರೋಗ್ಯ

World Asthma Day: ಅಸ್ತಮಾದಿಂದ ಪಾರಾಗಲು ಈ ಸಂಗತಿ ತಿಳಿದುಕೊಂಡಿರಿ

ವಿಶ್ವದಲ್ಲಿ 260 ದಶಲಕ್ಷ ಮಂದಿ ಅಸ್ತಮಾ ತೊಂದರೆಯಿಂದ ಬಳಲುತ್ತಿದ್ದಾರೆ. ಪ್ರತಿ ವರ್ಷ 4.5 ಲಕ್ಷ ಮಂದಿ ಈ ಸಮಸ್ಯೆಯಿಂದ ಸಾವಿಗೀಡಾಗುತ್ತಿದ್ದಾರೆ. ಇವುಗಳಲ್ಲಿ ಹೆಚ್ಚಿನ ಪ್ರಕರಣಗಳಲ್ಲಿ ಸಾವನ್ನು ತಡೆಯುವ ಸಾಧ್ಯತೆ ಇರುತ್ತದೆ. ಹಾಗಾಗಿ ಅಸ್ತಮಾ ಬಗ್ಗೆ ಅರಿವು ಹೊಂದುವುದು ಮತ್ತು ತಡೆಯಲು ಮುನ್ನೆಚ್ಚರಿಕೆ (World Asthma Day) ತೆಗೆದುಕೊಳ್ಳುವುದು ಅಗತ್ಯ. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

World Asthma Day
Koo

ಯಾವುದೇ ವಯಸ್ಸಿನವರನ್ನು ಕಾಡಬಹುದಾದ ದೀರ್ಘಕಾಲೀನ ರೋಗಗಳಲ್ಲಿ ಅಸ್ತಮಾ ಸಹ ಒಂದು. ಶ್ವಾಸಕೋಶದಲ್ಲಿನ ಗಾಳಿ ಕೊಳವೆಗಳು ಮತ್ತದರ ಕೋಶಗಳು ಊದಿಕೊಂಡು ಉಸಿರಾಟಕ್ಕೆ ತೊಂದರೆಯಾಗುವ ಅವಸ್ಥೆಯಿದು. ಇದರಿಂದಾಗಿ ಉಬ್ಬಸ, ಉಸಿರಾಟದ ತೊಂದರೆ, ಎದೆ ಬಿಗಿಯುವುದು, ನೆಗಡಿ, ಕೆಮ್ಮು, ವಿಪರೀತ ಕಫ, ಅಲರ್ಜಿ ಇತ್ಯಾದಿ ಸಮಸ್ಯೆಗಳು ಕಾಡಿಸುತ್ತವೆ. ಹಗಲಿನಲ್ಲಿ ಕಡಿಮೆ ಇದ್ದು ರಾತ್ರಿ ಸಮಯದಲ್ಲಿ ಈ ಸಮಸ್ಯೆಯ ತೀವ್ರತೆ ಹೆಚ್ಚಬಹುದು. ಈ ರೋಗದ ಬಗ್ಗೆ ಜಾಗೃತಿ ಹೆಚ್ಚಿಸುವ ಉದ್ದೇಶದಿಂದ ಮೇ ತಿಂಗಳ ಮೊದಲ ಮಂಗಳವಾರವನ್ನು (ಈ ಬಾರಿ ಮೇ 7ರಂದು) ವಿಶ್ವ ಅಸ್ತಮಾ ಜಾಗೃತಿ ದಿನವನ್ನಾಗಿ (World Asthma Day) ಆಚರಿಸಲಾಗುತ್ತದೆ.

Young Woman Having Asthma Attack at Home

ಜಾಗತಿಕವಾಗಿ ವಾಯು ಮಾಲಿನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ವಿಶ್ವದೆಲ್ಲೆಡೆ ಅಸ್ತಮಾ ಚಿಕಿತ್ಸೆಯನ್ನು ಉತ್ತಮಗೊಳಿಸುವುದು ಈ ಜಾಗೃತಿ ದಿನದ ಉದ್ದೇಶಗಳಲ್ಲಿ ಒಂದು. ಈ ವರ್ಷ ಮೇ 7ರಂದು ಆಚರಿಸಲಾಗುವ ಈ ದಿನಂದು, ಶ್ವಾಸನಾಳಗಳಿಗೆ ತೀವ್ರ ತೊಂದರೆ ನೀಡುವ ಈ ರೋಗದಿಂದ ನರಳುತ್ತಿರುವವರಿಗೆ ಕಾಳಜಿ, ಚಿಕಿತ್ಸೆ ಮತ್ತು ನೆರವು ನೀಡುವ ಬಗ್ಗೆ ಎಲ್ಲೆಡೆ ಅರಿವು ಮೂಡಿಸುವುದು ಮಹತ್ವದ್ದೆನಿಸಿದೆ. ಈ ವರ್ಷದ ಘೋಷವಾಕ್ಯ- “ಅಸ್ತಮಾ ಕುರಿತ ಅರಿವು ಸಬಲಗೊಳಿಸುತ್ತದೆ” ಮೊದಲ ಬಾರಿಗೆ 1993ರಲ್ಲಿ ವಿಶ್ವ ಅಸ್ತಮಾ ದಿನವನ್ನು ಘೋಷಿಸುವ ಸಂದರ್ಭದಲ್ಲಿ 35 ದೇಶಗಳು ಭಾಗವಹಿಸಿದ್ದವು. ಸಾಮಾನ್ಯವಾಗಿ ಅಸ್ತಮಾ ಕಾಡುವುದು ಚಳಿಗಾಲದಲ್ಲಿ ಹೆಚ್ಚು. ಹಾಗೆಂದು ವರ್ಷದ ಉಳಿದ ದಿನಗಳಲ್ಲಿ ತೊಂದರೆ ಕೊಡಬಾರದೆಂದೇನೂ ಇಲ್ಲ. ಮಳೆಗಾಲದಲ್ಲಿ ಮೋಡ ಕವಿದ ಸ್ಥಿತಿ ಇದ್ದಾಗ ಉಸಿರಾಡುವುದು ಕಷ್ಟವಾಗಬಹುದು. ಬೇಸಿಗೆಯಲ್ಲಿ ಶುಷ್ಕತೆ ಹೆಚ್ಚಾದಾಗ ವಾತಾರವಣದಲ್ಲಿ ಧೂಳಿನ ಕಣಗಳು ತೀವ್ರವಾಗಿ, ಅಸ್ತಮಾ ತೊಂದರೆ ಕೊಡುವ ಸಾಧ್ಯತೆಯಿದೆ. ಒಬ್ಬರಿಂದೊಬ್ಬರಿಗೆ ಹರಡದೆ ಇರುವ ರೋಗಗಳ ಪೈಕಿ ತೀವ್ರವಾಗಿ ಬಾಧಿಸುವ ರೋಗಗಳಲ್ಲಿ ಅಸ್ತಮಾ ಸಹ ಒಂದು. ವಿಶ್ವದಲ್ಲಿ 260 ದಶಲಕ್ಷ ಮಂದಿ ಈ ತೊಂದರೆಯಿಂದ ಬಳಲುತ್ತಿದ್ದಾರೆ. ಪ್ರತಿ ವರ್ಷ 4.5 ಲಕ್ಷ ಮಂದಿ ಈ ಸಮಸ್ಯೆಯಿಂದ ಸಾವಿಗೀಡಾಗುತ್ತಿದ್ದಾರೆ. ಇವುಗಳಲ್ಲಿ ಹೆಚ್ಚಿನ ಪ್ರಕರಣಗಳಲ್ಲಿ ಸಾವನ್ನು ತಡೆಯುವ ಸಾಧ್ಯತೆ ಇರುತ್ತದೆ. ಸರಿಯಾದ ಸಮಯಕ್ಕೆ ಚಿಕಿತ್ಸೆ, ಸರಿಯಾದ ಪ್ರಮಾಣದಲ್ಲಿ ಸ್ಟೆರಾಯ್ಡ್‌ ಇನ್‌ಹೇಲರ್‌ಗಳ ಬಳಕೆ, ಶ್ವಾಸಕೋಶಗಳ ಆರೋಗ್ಯದ ದೇಖರೇಖಿ- ಇಂಥ ಹಲವು ವಿಷಯಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಕಾಳಜಿ ವಹಿಸದಿರುವುದು ಇದಕ್ಕೆ ಕಾರಣವಾಗುತ್ತದೆ.

ಇದನ್ನೂ ಓದಿ: No Diet Day 2024: ಇಂದು ಡಯೆಟ್‌ ರಹಿತ ದಿನ ಆಚರಿಸುವುದೇಕೆ?

ರಾತ್ರಿ ಹೆಚ್ಚಬಹುದು

ಕೆಲವರಿಗೆ ಹಗಲಿಗೆ ಈ ತೊಂದರೆ ಕಡಿಮೆ ಇದ್ದು, ರಾತ್ರಿಗೆ ತೀವ್ರಗೊಳ್ಳಬಹುದು. ಹೀಗಾಗುವುದಕ್ಕೂ ಹಲವಾರು ಕಾರಣಗಳಿವೆ. ಒಂದು ಕಾರಣವೆಂದರೆ, ದೇಹದ ಸರ್ಕೇಡಿಯನ್‌ ಲಯ. ಅಂದರೆ ಹಗಲು ಕಳೆದು ರಾತ್ರಿ ಆವರಿಸುತ್ತಿದ್ದಂತೆ ದೇಹದ ನೈಸರ್ಗಿಕ ಗಡಿಯಾರವೂ ಬದಲಾಗುತ್ತದೆ. ಹೀಗೆ ಬದಲಾಗುವ ಸರ್ಕೇಡಿಯನ್‌ ಲಯದಿಂದಾಗಿ ಶ್ವಾಸನಾಳಗಳಲ್ಲಿ ಉರಿಯೂತ ಹೆಚ್ಚಬಹುದು. ಇನ್ನೊಂದು ಕಾರಣವೆಂದರೆ, ಮಲಗುವ ಭಂಗಿ. ನೆಲಕ್ಕೆ ಸಮಾಂನಾಂತರವಾಗಿ ಮಲಗಿದಾಗ ಶ್ವಾನನಾಳಗಳಲ್ಲಿ ಕಫ ಕಟ್ಟುವುದು ಹೆಚ್ಚುತ್ತದೆ. ಹಾಗಾಗಿ ಪೂರ್ಣ ಮಲಗುವ ಬದಲು ಹಿಂದೆ ಮಲಗಿದಂಥ ಭಂಗಿಯಲ್ಲಿ ಉಸಿರಾಟ ಕೊಂಚ ಸರಾಗವಾಗುತ್ತದೆ.

Woman Using an Asthma Inhaler

ಇನ್ನಷ್ಟು ಕಾರಣಗಳು

ಹುಳಿತೇಗಿನ ಸಮಸ್ಯೆಯಿದ್ದರೆ ಉಸಿರಾಟದ ತೊಂದರೆಯೂ ಕಾಣಬಹುದು. ಅದರಲ್ಲೂ ಜಿಇಆರ್‌ಡಿ (GERD) ನಂಥ ಕಿರಿಕಿರಿಗಳಿದ್ದರೆ ರಾತ್ರಿಯಲ್ಲಿ ಅಸ್ತಮಾ ತೊಂದರೆ ಕೊಡುವುದು ಸ್ವಲ್ಪ ಹೆಚ್ಚೆ. ಜೊತೆಗೆ, ಮನೆಯ ಒಳ-ಹೊರಗಿನ ವಾತಾವರಣ ಆದಷ್ಟು ಶುಚಿಯಾಗಿ ಇರುವಂತೆ ನೋಡಿಕೊಳ್ಳಿ. ಇದರಿಂದ ಅಲರ್ಜಿಯ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಬಹುದು. ಹೊಗೆ, ಧೂಳು, ಫಂಗಸ್, ಪರಾಗಗಳು ಇತ್ಯಾದಿಗಳು ಆದಷ್ಟು ದೂರವೇ ಇದ್ದಾರೆ ಕ್ಷೇಮ. ಹಾಸಿಗೆ ಬಟ್ಟೆಗಳನ್ನು ಆಗಾಗ ಬದಲಿಸಿ. ಅಲರ್ಜಿ ತರುವಂಥ ಆಹಾರಗಳನ್ನು ಮುಟ್ಟದಿರುವುದು ಕ್ಷೇಮ. ಸೋಂಕುಗಳಿಂದ ದೂರ ಇರುವುದಕ್ಕೆ ಶಕ್ತಿಯುತ ಆಹಾರ ಸೇವನೆ ಅಗತ್ಯ. ಇಡೀ ದೇಹದ ಆರೋಗ್ಯ, ಅದರಲ್ಲೂ ಶ್ವಾಸಕೋಶಗಳು ಚೆನ್ನಾಗಿರಬೇಕೆಂದರೆ, ನಿಯಮಿತವಾದ ವ್ಯಾಯಾಮ ಬೇಕು. ಯಾವುದೇ ಕಾಲದಲ್ಲೂ ಅಸ್ತಮಾ ಕಾಣಿಸಿಕೊಳ್ಳಬಹುದು. ಹಾಗಾಗಿ ಅಗತ್ಯ ಔಷಧಗಳನ್ನು ತಪ್ಪದೆ ಇರಿಸಿಕೊಳ್ಳಬೇಕು. ಇನ್ಹೇಲರ್ ಮುಂತಾದವುಗಳನ್ನು ತಂಪಾದ ಸ್ಥಳದಲ್ಲಿ ಇರಿಸುವುದು ಅಗತ್ಯ. ಕಾಲಕಾಲಕ್ಕೆ ಪೀಕ್ ಪ್ಲೊ ಮೀಟರ್ ನಿಂದ ಶ್ವಾಸಕೋಶದ ಸ್ಥಿತಿಗತಿಯ ಬಗ್ಗೆ ತಪಾಸಣೆ ಮಾಡಿಕೊಳ್ಳಿ. ಈ ರೋಗದ ನಿಯಂತ್ರಣಕ್ಕೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸುವುದು ಮತ್ತು ಉರಿಯೂತದ ಕಾರಣ ಅರ್ಥ ಮಾಡಿಕೊಳ್ಳುವುದು ಮಹತ್ವದ್ದು.

Continue Reading

ಆಹಾರ/ಅಡುಗೆ

Summer Food Tips: ಬೇಸಿಗೆಯಲ್ಲಿ ನಮ್ಮ ದೇಹವನ್ನು ತಂಪಾಗಿರಿಸುವ ಸರಳ ಆಹಾರಗಳಿವು!

ಹೊರಗೆ ಕಾಲಿಟ್ಟರೆ ಸಾಕು, ಸ್ನಾನ ಮಾಡಿದಂತೆ ಬೆವರಿನಿಂದಲೇ ತೊಯ್ದು ಹೋಗುವ ಮಂದಿ ಬಿಸಿಲನ್ನು ನೋಡಿ ಉಸ್ಸಪ್ಪ ಎನ್ನುತ್ತಿದ್ದಾರೆ. ಇಂತಹ ಬಿಸಿಲಿನ ವಿರುದ್ಧ ನಮ್ಮ ದೇಹವನ್ನು ಶಕ್ತವನ್ನಾಗಿ ಮಾಡಲು, ದೇಹವನ್ನು ತಂಪಾಗಿರಿಸಲು ಸೂಕ್ತ ಆಹಾರ ಸೇವನೆಯೂ ಮುಖ್ಯ. ಯಾವೆಲ್ಲ ಸರಳ ಆಹಾರಕ್ರಮ ನಮ್ಮ ದೇಹವನ್ನು ತಂಪಾಗಿರಿಸುತ್ತದೆ ಎಂಬುದನ್ನು ನೋಡೋಣ. ಈ ಆಹಾರ ಸೇವನೆಯಿಂದ ಬೇಸಿಗೆಯಲ್ಲಿ ನೀವು ಅಸಿಡಿಟಿ, ತಲೆಸುತ್ತು, ನಿತ್ರಾಣ, ನಿದ್ರಾಹೀನತೆ, ಹಸಿವಿನ ಕೊರತೆಯಂತಹ (summer food tips) ಸಮಸ್ಯೆಗಳಿಂದಲೂ ಪಾರಾಗಬಹುದು.

VISTARANEWS.COM


on

Summer Food Tips
Koo

ಬಹಳಷ್ಟು ಮಂದಿಯ ಬಾಯಿಯಲ್ಲಿ ಈಗ ಬರುವ ಮಾತು ಒಂದೇ: ಏನು ಸೆಖೆಯಪ್ಪಾ ಈ ಬಾರಿ! ಸೂರ್ಯ ಉದಯಿಸಿದ ಕೆಲವೇ ಗಂಟೆಗಳಲ್ಲಿ ಧಗಧಗಿಸಿ ಉರಿದು ಈ ಬಾರಿಯ ಬಿಸಿಲನ್ನು ಇನ್ನಷ್ಟು ತೀವ್ರಗೊಳಿಸಿದ್ದು ಸುಳ್ಳಲ್ಲ. ಬೆಂಗಳೂರಿಗರೂ ಕೂಡ ಈ ಬಾರಿಯ ಸೆಖೆಯಿಂದ ತತ್ತರಿಸಿ ಹೋಗಿದ್ದಾರೆ. ಹೊರಗೆ ಕಾಲಿಟ್ಟರೆ ಸಾಕು, ಸ್ನಾನ ಮಾಡಿದಂತೆ ಬೆವರಿನಿಂದಲೇ ತೊಯ್ದು ಹೋಗುವ ಮಂದಿ ಬಿಸಿಲನ್ನು ನೋಡಿ ಉಸ್ಸಪ್ಪ ಎನ್ನುತ್ತಿದ್ದಾರೆ. ಇಂತಹ ಬಿಸಿಲಿನ ವಿರುದ್ಧ ನಮ್ಮ ದೇಹವನ್ನು ಶಕ್ತವನ್ನಾಗಿ ಮಾಡಲು, ದೇಹವನ್ನು ತಂಪಾಗಿರಿಸಲು ಸೂಕ್ತ ಆಹಾರ (summer food tips) ಸೇವನೆಯೂ ಕೂಡ ಮುಖ್ಯ. ಹಾಗೆ ನೋಡಿದರೆ ನಾವು ಸಾಂಪ್ರದಾಯಿಕ ಶೈಲಿಯತ್ತ ಮುಖ ಮಾಡಿದರೆ ನಮ್ಮ ಪೂರ್ವಜರು, ಹಿರಿಯರು, ಋತುಮಾನಕ್ಕೆ ಅನುಗುಣವಾಗಿ ಆಹಾರವನ್ನು ತೆಗೆದುಕೊಳ್ಳುವ ಬಗೆಯನ್ನು ನಮಗೆ ದಾಟಿಸಿದ್ದಾರೆ. ಆದರೆ ಬಹಳಷ್ಟು ಬಾರಿ ಅವರ ಅಂತಹ ಸಂದೇಶವನ್ನು ನಾವು ನಿರಾಕರಿಸಿ ನಮ್ಮದೇ ಹಾದಿಯಲ್ಲಿ ಸಾಗಿದ್ದೂ ಕೂಡ ಇಂತಹ ಸಮಸ್ಯೆಗಳಿಗೆ ಕಾರಣವೇನೋ ಅನ್ನಬಹುದು. ನಾವು ಎಸಿ ಸ್ವಿಚ್‌ ಆನ್‌ ಮಾಡಿ ದೇಹವನ್ನು ಹೊರಗಿನಿಂದ ತಂಪಾಗಿಸಬಹುದು ನಿಜವೇ ಆಗಿದ್ದರೂ, ಒಳಗಿನಿಂದ ದೇಹವನ್ನು ತಂಪಾಗಿರಿಸಲು ಕೆಲವು ಆಹಾರ ಸೇವನೆಯ ಮೊರೆ ಹೋಗಲೇಬೇಕು. ಬನ್ನಿ, ಯಾವೆಲ್ಲ ಸರಳ ಆಹಾರಕ್ರಮ ನಮ್ಮ ದೇಹವನ್ನು ತಂಪಾಗಿರಿಸುತ್ತದೆ ಎಂಬುದನ್ನು ನೋಡೋಣ. ಈ ಆಹಾರ ಸೇವನೆಯಿಂದ ಬೇಸಿಗೆಯಲ್ಲಿ ನೀವು ಅಸಿಡಿಟಿ, ತಲೆಸುತ್ತು, ನಿತ್ರಾಣ, ನಿದ್ರಾಹೀನತೆ, ಹಸಿವಿನ ಕೊರತೆಯಂತ ಸಮಸ್ಯೆಗಳ ವಿರುದ್ಧ ಹೋರಾಡಿ ಫಲವನ್ನೂ ಕಾಣಬಹುದು.

Citrus fruits

ಸ್ಥಳೀಯ ಹಣ್ಣುಗಳು

ಬೆಳಗ್ಗಿನ ತಿಂಡಿಯ ನಂತರ ಮಧ್ಯಾಹ್ನದೂಟದ ಮೊದಲು ಏನಾದರೂ ಸ್ನ್ಯಾಕ್ಸ್‌ ತಿನ್ನುವ ಅಭ್ಯಾಸ ನಿಮಗಿದೆ ಎಂದಾದಲ್ಲಿ ಬೇಸಿಗೆಯಲ್ಲಿ ನಿಮ್ಮ ಸ್ಥಳೀಯ ಹಣ್ಣುಗಳನ್ನು ತಿನ್ನಲು ಮರೆಯಬೇಡಿ. ಸ್ಥಳೀಯವಾಗಿ ಸಿಗುವ, ಬೇಸಿಗೆಯಲ್ಲಿ ಮಾತ್ರ ಲಭ್ಯವಿರುವ ಹಣ್ಣುಗಳನ್ನು ಹೊಟ್ಟೆಗಿಳಿಸಿದರೆ ನಿಮ್ಮ ದೇಹ ತಂಪಾಗುತ್ತದೆ. ಬಿಸಿಲಿನಲ್ಲಿ ಓಡಾಡಿದರೂ ದೇಹಕ್ಕೆ ಶಕ್ತಿ ಸಾಮರ್ಥ್ಯ ಬರುತ್ತದೆ. ನಿತ್ರಾಣಗೊಳ್ಳುವ, ತಲೆಸುತ್ತಿ ಬವಳಿ ಬೀಳುವಂಥ ಸಮಸ್ಯೆಗಳು ನಿಮ್ಮನ್ನು ಕಾಡದು. ಉದಾಹರಣೆಗೆ, ತಾಳೆಹಣ್ಣು ಅಥವಾ ತಾಟಿನಿಂಗು, ಕಲ್ಲಂಗಡಿ ಹಣ್ಣು, ಖರ್‌ಬೂಜ, ಸೌತೆಕಾಯಿ ಇತ್ಯಾದಿಗಳ ಸೇವನೆ ಚೈತನ್ಯ ನೀಡುತ್ತದೆ. ಯಾವುದೇ ರಸಭರಿತವಾಗಿರುವ ಹಣ್ಣು ನೀವು ತಿನ್ನಬಹುದು. ಇವು ನಿಮ್ಮ ದೇಹವನ್ನು ಅಷ್ಟೇ ಅಲ್ಲ, ಮನಸ್ಸನ್ನೂ ತಂಪಾಗಿಯೇ ಇರಿಸುತ್ತದೆ. ಯಾವಾಗಲೂ ತಾಜಾ ಆಗಿರಿಸಲು ಸಹಾಯ ಮಾಡುತ್ತದೆ.

Health Benefits Of Curd Rice

ಮೊಸರನ್ನ

ಬಹಳಷ್ಟು ಮಂದಿ ಬೇಸಿಗೆಯಲ್ಲಿ ಹಸಿವನ್ನೇ ಕಳೆದುಕೊಳ್ಳುತ್ತಾರೆ. ಏನಾದರೂ ಕುಡಿದರೆ ಸಾಕು, ತಿನ್ನುವ ಮನಸ್ಸಾಗುವುದೇ ಇಲ್ಲ ಎನ್ನುತ್ತಾರೆ. ಬೇಸಿಗೆಯ ಬಿಸಿಲಿಗೆ ಇದು ಸಹಜ ಕೂಡಾ. ಆದರೆ, ಇಂತಹ ಸಂದರ್ಭ ಬೇಸಿಗೆಯಲ್ಲಿ ನಿಮಗೆ ಒಳ್ಳೆಯದನ್ನೇ ಬಯಸುವ ಅತ್ಯುತ್ತಮ ಮಧ್ಯಾಹ್ನದೂಟ ಎಂದರೆ ಅದು ಮೊಸರನ್ನ. ಮೊಸರನ್ನಕ್ಕೆ ಒಂದಿಷ್ಟು ಉಪ್ಪಿನಕಾಯಿ, ಹಪ್ಪಳ ಸೇರಿಸಿಕೊಂಡು ತಿಂದರೆ ಸ್ವರ್ಗಸುಖ. ಇದಲ್ಲವಾದರೆ ಗಂಜಿ ಉಪ್ಪಿನಕಾಯಿಯ ಊಟವಾದರೂ ಸರಿ, ಒಡನೆಯೇ ದೇಹಕ್ಕೆ ಶಕ್ತಿ ಚೈತನ್ಯವನ್ನು ನೀಡುತ್ತದೆ. ಹೊಟ್ಟೆಯನ್ನು ತಂಪಾಗಿರಿಸುತ್ತದೆ. ಮೊಸರನ್ನ ಒಳ್ಳೆಯ ಪ್ರೊಬಯಾಟಿಕ್‌ ಕೂಡಾ ಆಗಿರುವುದರಿಂದ ಇದು ಉತ್ತಮ ಅನುಭವ ನೀಡುತ್ತದೆ. ಹೊಟ್ಟೆಗೆ ಆರಾಮದಾಯಕ ಆಹಾರದ ಅನುಭವ ನೀಡುತ್ತದೆ.

ಇದನ್ನೂ ಓದಿ: Summer Health Tips: ಬಿಸಿಲ ಬೇಗೆ ತಣಿಸಿಕೊಳ್ಳಲು ಬೇಕು ನೆಲ್ಲಿಕಾಯಿ!

ಗುಲ್ಕಂಡ್‌ ನೀರು

ಬೇಸಿಗೆಯಲ್ಲಿ ಅಸಿಡಿಟಿ, ಹೊಟ್ಟೆಯಲ್ಲಿ ಬೆಂಕಿ ಬಿದ್ದಂತೆ ಉರಿ ಇತ್ಯಾದಿ ಸಮಸ್ಯೆಗಳು ಕಾಣಿಸುತ್ತಿದ್ದರೆ ಹಾಗೂ ನಿಮ್ಮ ನಿದ್ರೆಯ ಗುಣಮಟ್ಟ, ಕಣ್ಣು ಊದಿದಂತಾಗುವುದು, ಕೈಕಾಲು ಜೋಮು ಹಿಡಿದಂತಾಗುವುದು, ಅಲ್ಲಲ್ಲಿ ನೋವು, ಉರಿಯೂತ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಬೇಕೆಂದರೆ ಒಂದು ಚಮಚ ಗುಲ್ಕಂಡ್‌ ಅನ್ನು ನೀರಿನಲ್ಲಿ ಬೆರೆಸಿ ಮಲಗುವ ಮುನ್ನ ಕುಡಿಯಿರಿ. ಈ ಗುಲಾಬಿಯ ದಳದ ಡ್ರಿಂಕ್‌ ನಿಮ್ಮ ಈ ಸಮಸ್ಯೆಗಳಿಂದ ಬಚಾವು ಮಾಡುವುದಷ್ಟೇ ಅಲ್ಲ, ಒಂದು ರಿಲ್ಯಾಕ್ಸ್‌ ಅನುಭವವನ್ನೂ ನೀಡುತ್ತದೆ.

Continue Reading
Advertisement
IPL 2024
ಕ್ರೀಡೆ2 mins ago

IPL 2024 : ಅಭಿಮಾನಿಯ 80 ಸಾವಿರ ರೂಪಾಯಿ ಮೊಬೈಲ್​ ಒಡೆದು ಹಾಕಿದ ಚೆನ್ನೈ ಸ್ಟಾರ್​; ಇಲ್ಲಿದೆ ವಿಡಿಯೊ

Murder Case
ಕರ್ನಾಟಕ5 mins ago

Murder Case: ಬೆಂಗಳೂರಿನಲ್ಲಿ ರೌಡಿಶೀಟರ್‌ ಬರ್ಬರ ಹತ್ಯೆ; ನಡು ರಸ್ತೆಯಲ್ಲೇ ಅಟ್ಟಾಡಿಸಿ ಕೊಲೆ

Prajwal Revanna case Interpol issues messages against Prajwal to 196 countries
ಕ್ರೈಂ22 mins ago

Prajwal Revanna case: ಪ್ರಜ್ವಲ್‌ ರೇವಣ್ಣ ವಿರುದ್ಧ 196 ದೇಶಗಳಿಗೆ ಇಂಟರ್‌ಪೋಲ್‌ ಮೆಸೇಜ್‌; ಎಲ್ಲೇ ಕಂಡರೂ ಸಿಗುತ್ತೆ ಮಾಹಿತಿ!

PM Modi
ಪ್ರಮುಖ ಸುದ್ದಿ27 mins ago

PM Modi: ರಾಮಮಂದಿರಕ್ಕೆ ಕಾಂಗ್ರೆಸ್‌ ಬೀಗ ಹಾಕಬಾರದು ಎಂದರೆ ನಮಗೆ 400 ಸೀಟು ಕೊಡಿ ಎಂದ ಮೋದಿ

Prajwal Revanna Case HD Revanna has severe chest pain Admission in Victoria
ರಾಜಕೀಯ42 mins ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Air Purifier
ಆಟೋಮೊಬೈಲ್54 mins ago

Air Purifier: ಕಾರುಗಳಲ್ಲಿ ಏರ್ ಪ್ಯೂರಿಫೈಯರ್‌ ಏಕೆ ಅಗತ್ಯ ಗೊತ್ತೆ?

Prajwal Revanna Case HD Revanna bail plea to be heard tomorrow Jail or Bela
ಕ್ರೈಂ56 mins ago

Prajwal Revanna Case: ನಾಳೆ ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಜೈಲಾ? ಬೇಲಾ?

Ujjivan Small Finance Bank
ವಾಣಿಜ್ಯ1 hour ago

Ujjivan Small Finance Bank : ಉಜ್ಜೀವನ್ ಸ್ಮಾಲ್ ಫೈನಾನ್ಸ್ ಸಿಇಒ ಆಗಿ ಸಂಜೀವ್ ನೌಟಿಯಾಲ್ ನೇಮಕ

Lok Sabha Election 2024
ಕರ್ನಾಟಕ1 hour ago

Lok Sabha Election 2024: ಜಿ.ಎಂ.ಸಿದ್ದೇಶ್ವರ್‌ ಮಹಾ ಎಡವಟ್ಟು, ಪತ್ನಿ ಮತವನ್ನೂ ತಾವೇ ಹಾಕಿದ ಸಂಸದ

Nirav modi
ದೇಶ1 hour ago

Nirav Modi: ನೀರವ್‌ ಮೋದಿಗೆ ಲಂಡನ್‌ ಜೈಲೇ ಗತಿ; 5ನೇ ಬಾರಿ ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case HD Revanna has severe chest pain Admission in Victoria
ರಾಜಕೀಯ42 mins ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ4 hours ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ5 hours ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ1 day ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ1 day ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ1 day ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ2 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ2 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ2 days ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌