Walnut Benefits: ಮುಖದ ಕಾಂತಿ ಹೆಚ್ಚಬೇಕೆಂದರೆ ದಿನವೂ ತಿನ್ನಬೇಕು ವಾಲ್ನಟ್‌! - Vistara News

ಆರೋಗ್ಯ

Walnut Benefits: ಮುಖದ ಕಾಂತಿ ಹೆಚ್ಚಬೇಕೆಂದರೆ ದಿನವೂ ತಿನ್ನಬೇಕು ವಾಲ್ನಟ್‌!

ಚರ್ಮ ಹೊರಗಿನಿಂದ ಕಾಂತಿಯಿಂದ ಕಂಗೊಳಿಸಬೇಕಾದರೆ, ಚರ್ಮಕ್ಕೆ ಬೇಕಾದ ಪೋಷಕಾಂಶಗಳು ಒಳಗೆ ಸಿಗಬೇಕು. ಹೀಗೆ ಚರ್ಮಕ್ಕೆ ಸಿಗಲೇಬೇಕಾದ ಆಹಾರಗಳ ಪೈಕಿ ಮುಖ್ಯವೆನಿಸುವುದು ವಾಲ್ನಟ್‌ (walnut benefits) ಎಂದರೆ ನೀವು ನಂಬಲೇಬೇಕು.

VISTARANEWS.COM


on

walnut benefits
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಖದ ಸೌಂದರ್ಯದ ಬಗ್ಗೆ ಯಾರಿಗೆ ತಾನೇ ಆಸಕ್ತಿ ಇರುವುದಿಲ್ಲ ಹೇಳಿ. ತಾನು ಮುದ್ದಾಗಿ, ಲಕ್ಷಣವಾಗಿ, ಚಂದ ಕಾಣಬೇಕು ಎಂಬ ಬಯಕೆ ಎಲ್ಲರಲ್ಲೂ ಖಂಡಿತವಾಗಿಯೂ ಇರುತ್ತದೆ. ಮುಖ್ಯವಾಗಿ ಮಹಿಳೆಯರಿಗೆ ತಮ್ಮ ಚರ್ಮದ ಮೇಲೆ ವಿಶೇಷ ಆಸ್ಥೆಯಿರುವುದು ಸಾಮಾನ್ಯ. ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿತ್ಯವೂ ನೂರೆಂಟು ಪ್ರಯೋಗಗಳನ್ನು ಮಾಡುವುದು, ಹತ್ತಾರು ಫೇಶ್‌ಪ್ಯಾಕ್‌, ಕ್ರೀಮು, ಸೀರಂ ಎಂದು ಸಮಯ, ದುಡ್ಡು ವ್ಯಯಿಸುವುದು ಎಲ್ಲರಿಗೂ ಗೊತ್ತಿರುವುದೇ. ಆದರೆ ಸೌಂದರ್ಯ ಒಳಗಿನಿಂದ ಹೊರಹೊಮ್ಮಬೇಕು ಎಂಬುದು ಅಪ್ಪಟ ಸತ್ಯ. ಚರ್ಮ ಹೊರಗಿನಿಂದ ಕಾಂತಿಯಿಂದ ಕಂಗೊಳಿಸಬೇಕಾದರೆ, ಚರ್ಮಕ್ಕೆ ಬೇಕಾದ ಪೋಷಕಾಂಶಗಳು ಒಳಗೆ ಸಿಗಬೇಕು. ಹೀಗೆ ಚರ್ಮಕ್ಕೆ ಸಿಗಲೇಬೇಕಾದ ಆಹಾರಗಳ ಪೈಕಿ ಮುಖ್ಯವೆನಿಸುವುದು ವಾಲ್ನಟ್‌ (walnut benefits) ಎಂದರೆ ನೀವು ನಂಬಲೇಬೇಕು.

ಹೌದು. ವರದಿಗಳ ಪ್ರಕಾರ ವಾಲ್ನಟ್‌ ಒಮೆಗಾ ೩ ಹಾಗೂ ಒಮೆಗಾ ೬ ಅನ್‌ಸ್ಯಾಚುರೇಟೆಡ್‌ ಫ್ಯಾಟಿ ಆಸಿಡ್‌ಗಳಿರುವ ಬೀಜಗಳಲ್ಲಿ ಒಂದು. ಈ ಎರಡೂ ಫ್ಯಾಟಿ ಆಸಿಡ್‌ಗಳನ್ನು ದೇಹ ಸರಿಯಾದ ಪ್ರಮಾಣದಲ್ಲಿ ಪಡೆದರೆ ಮಾತ್ರ ಚರ್ಮದ ತೊಂದರೆಗಳು ಹಾಗೂ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳೆಲ್ಲ ದೂರಾಗುತ್ತವೆ. ೯೫ರಿಂದ ೯೯ಪ್ರತಿಶತ ಮಂದಿ ನಮಗೆ ನಿತ್ಯ ಬೇಕಾಗುವ ಈ ಎರಡು ಫ್ಯಾಟಿ ಆಸಿಡ್‌ಗಳನ್ನು ಬಹಳ ಕಡಿಮೆಯೇ ಸೇವಿಸುತ್ತಾರೆ. ಹಾಗಾಗಿ ಪ್ರತಿದಿನವೂ ಪ್ರತಿಯೊಬ್ಬರೂ ಎರಡರಿಂದ ಮೂರು ವಾಲ್ನಟ್‌ಗಳನ್ನು ಸೇವಿಸಬೇಕು. ಇದರಿಂದ ಚರ್ಮದ ಆರೋಗ್ಯ ಖಂಡಿತವಾಗಿಯೂ ವೃದ್ಧಿಸುತ್ತದಂತೆ. ಹಾಗಾದರೆ, ವಾಲ್ನಟ್‌ ದಿನವೂ ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಎಂಬುದನ್ನು ನೋಡೋಣ.

೧. ರಕ್ತಶುದ್ಧಿ ಮಾಡುತ್ತದೆ: ವಾಲ್ನಟ್‌ ಆಂಟಿ ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವುದರಿಂದ ಇದು ದೇಹದಲ್ಲಿರುವ ಕಶ್ಮಲಗಳನ್ನೆಲ್ಲ ದೇಹದಿಂದ ಹೊರಕ್ಕೆ ಕಳಿಸುತ್ತದೆ. ಇದರಿಂದ ರಕ್ತಶುದ್ಧಿಯಾಗುವುದಲ್ಲದೆ, ಇದರ ಪರಿಣಾಮವಾಗಿ ಚರ್ಮವೂ ಕಾಂತಿಯಿಂದ ಕಂಗೊಳಿಸುತ್ತದೆ. ಮೊಡವೆ, ಕಪ್ಪುಚುಕ್ಕೆಗಳೆಲ್ಲ ಮಾಯವಾಗುತ್ತದೆ. ಚರ್ಮಕ್ಕೆ ನೈಸರ್ಗಿಕ ಕಾಂತಿ ಬರುತ್ತದೆ.

Face Care

೨. ಇದು ನೈಸರ್ಗಿಕ ಮಾಯ್‌ಶ್ಚರೈಸರ್:‌ ಚರ್ಮಕ್ಕೆ ಅಗತ್ಯವಾಗಿ ಬೇಕಾಗಿರುವ ಮಾಯ್‌ಶ್ಚರೈಸಿಂಗ್‌ ಗುಣಗಳಿಂದ ಸಮೃದ್ಧವಾರಿರುವ ವಾಲ್ನಟ್‌ ವಿಟಮಿನ್‌ ಬಿ೫ ಹಾಗೂ ಇಯನ್ನು ತನ್ನಲ್ಲಿ ಹೊಂದಿದೆ. ಇದು ಚರ್ಮದ ಆರೋಗ್ಯಕ್ಕೆ ಬೇಕಾಗುವ ಪೋಷಕಾಂಶಗಳಾಗಿದ್ದು, ಇದು ಚರ್ಮವನ್ನು ಸದಾ ಒಣಗದಂತೆ, ಕುಳಿಗಳಾಗದಂತೆ ಕಾಫಾಡುತ್ತದೆ.

ಇದನ್ನೂ ಓದಿ: Skin Care: ಕೊಲಾಜೆನ್‌ಯುಕ್ತ ಆಹಾರ ಸೇವಿಸಿ: ಸಹಜ ಸೌಂದರ್ಯದಿಂದ ಕಂಗೊಳಿಸಿ!

೩. ಕಪ್ಪು ವರ್ತುಲಗಳಿಗೆ ಮದ್ದು: ಬಹಳಷ್ಟು ಮಂದಿಯನ್ನು ಕಾಡುವ ಸಮಸ್ಯೆ ಎಂದರೆ ಕಣ್ಣಿನ ಸುತ್ತಲ ಕಪ್ಪು ವರ್ತುಲಗಳು. ಅತಿಯಾದ ಕೆಲಸದ ಒತ್ತಡ, ಗಂಟೆಗಟ್ಟಲೆ ಲ್ಯಾಪ್‌ಟಾಪ್‌ ಮುಂದೆ ಕೂತಿರುವುದು, ನಿದ್ದೆಯಿಲ್ಲದೆ ಕೆಲಸ ಮಾಡುವುದು ಇತ್ಯಾದಿಗಳ ಪರಿಣಾಮ ಕಣ್ಣಿನ ಮೇಲೆ ಕಾಣಿಸುತ್ತದೆ. ಕಣ್ಣು ಆಳಕ್ಕಿಳಿದು ನಿಸ್ತೇಜವಾಗಿ ಕಣ್ಣಿನ ಸುತ್ತ ಕಪ್ಪು ವರ್ತುಲಗಳಾಗಿ ಕಾಣತೊಡಗುತ್ತದೆ. ಇಂತಹ ಸಮಸ್ಯೆ ಅನುಭವಿಸುವ ಮಂದಿಗೆ ವಾಲ್ನಟ್‌ ಅತ್ಯಂತ ಒಳ್ಳೆಯ ಮನೆಮದ್ದು. ದಿನವೂ ವಾಲ್ನಟ್‌ ಸೇವಿಸುತ್ತಾ ಬಂದರೆ ಇಂತಹ ಚರ್ಮದ ಸಮಸ್ಯೆಗಳು ಕಾಡುವುದಿಲ್ಲ.

೪. ಮುಪ್ಪನ್ನು ತಡೆಯುತ್ತದೆ: ವಾಲ್ನಟ್‌ ಆಂಟಿ ಆಕ್ಸಿಡೆಂಟ್‌ಗಳ ಹಾಗೂ ವಿಟಮಿನ್‌ಗಳಿಂದ ಶ್ರೀಮಂತವಾಗಿರುವುದರಿಂದ ಚರ್ಮಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗಳಿಗೂ ಇದು ಅತ್ಯಂತ ಪರಿಣಾಮಕಾರಿ. ಮಾಲಿನ್ಯ, ಉಷ್ಣತೆ ಇತ್ಯಾದಿಗಳಿಂದ ಚರ್ಮದ ಮೇಲಾಗುವ ದುಷ್ಪರಿಣಾಮಗಳಿಂದಾಗಿ ಚರ್ಮ ಬಹುಬೇಗನೆ ಸುಕ್ಕಾಗುವುದು, ಇತ್ಯಾದಿ ತೊಂದರೆಗಳಿಗೆ ಒಳಗಾಗುವುದು ಇಂದು ಸಾಮಾನ್ಯ. ಆದರೆ, ವಾಲ್ನಟ್‌ನ ಸೇವೆಯಿಂದ ಇಂತಹ ಸಮಸ್ಯೆಗಳು ಕಾಡುವುದಿಲ್ಲ. ಚರ್ಮದ ಸುಕ್ಕು, ನಿರಿಗೆ ಮತ್ತಿತರ ಸಮಸ್ಯೆಗಳಿಂದ ದೂರವಿರಿಸಿ ಬಹುಬೇಗನೆ ಮುಪ್ಪಾದವರಂತೆ ಕಾಣುವುದರಿಂದ ತಪ್ಪಿಸುತ್ತದೆ.

೫. ಹೊಳೆವ ಚರ್ಮ: ಹೊಳೆವ ಚರ್ಮ ಬೇಕೆಂದು ಯಾರಿಗೆ ತಾನೇ ಆಸೆಯಿರುವುದಿಲ್ಲ ಹೇಳಿ. ವಾಲ್ನಟ್‌ ದಿನವೂ ತಿಂದರೆ ಖಂಡಿತವಾಗಿ ಈ ಕನಸು ಕನಸಾಗಿಯೇ ಉಳಿಯುವುದಿಲ್ಲ. ಇದರ ನಿರಂತರ ಸೇವನೆಯಿಂದ ಚರ್ಮದ ಕಾಂತಿಯಲ್ಲಿ ಗಮನೀಯ ಬದಲಾವಣೆ ಕಂಡುಬರುತ್ತದೆ. ಚರ್ಮ ಒಳಗಿನಿಂದ ಆರೋಗ್ಯಯುತವಾಗಿ ಕಂಗೊಳಿಸುತ್ತದೆ.

ಇದನ್ನೂ ಓದಿ: Health Tips: ಬೆಳಗ್ಗೆದ್ದ ಕೂಡಲೇ ಚಹಾ ಬಿಸ್ಕತ್‌ ತಿನ್ನಬಾರದು ಯಾಕೆ ಗೊತ್ತೇ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Health Tips: ಪಾದಗಳ ಊತ, ನೋವನ್ನು ಕಡಿಮೆ ಮಾಡಲು ಇಲ್ಲಿದೆ ಸರಳ ಉಪಾಯ

ಸರಳವಾದ ಮನೆಮದ್ದುಗಳನ್ನು (Health Tips) ಬಳಸಿಕೊಂಡು ಪಾದದ ಊತ ಮತ್ತು ನೋವನ್ನು ತ್ವರಿತವಾಗಿ ಕಡಿಮೆ ಮಾಡಬಹುದು. ಈ ಅಭ್ಯಾಸಗಳನ್ನು ದಿನಚರಿಯಲ್ಲಿ ಅಳವಡಿಸಿಕೊಳ್ಳುವುದರಿಂದ ಪಾದದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ. ರೋಗಲಕ್ಷಣಗಳು ಮುಂದುವರಿದರೆ ಅಥವಾ ಹದಗೆಟ್ಟರೆ ಆರೋಗ್ಯ ತಜ್ಞರನ್ನು ಸಂಪರ್ಕಿಸಿ.

VISTARANEWS.COM


on

By

Health Tips
Koo

ಸಾಮಾನ್ಯವಾಗಿ ಹೆಚ್ಚು ಕಾಲ ಕುಳಿತುಕೊಂಡು ಕೆಲಸ ಮಾಡುವುದು, ಹಳೆಯ ಗಾಯ, ಆರೋಗ್ಯದಲ್ಲಾಗುವ (Health Tips) ಏರುಪೇರುಗಳಿಂದ ಪಾದಗಳಲ್ಲಿ ಊತ, ನೋವು (feet Swelling and Pain) ಉಂಟಾಗುತ್ತದೆ. ಇದು ಸಾಕಷ್ಟು ಅಹಿತಕರವಾಗಿರುತ್ತದೆ ಮತ್ತು ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯನ್ನು ಉಂಟು ಮಾಡುತ್ತದೆ. ಇದನ್ನು ಕೆಲವು ಸರಳ ಮನೆಮದ್ದುಗಳ (home remedies) ಮೂಲಕ ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಿದೆ.

ಕಾಲು ನೋವು ಮತ್ತು ಊತವನ್ನು ತ್ವರಿತವಾಗಿ ಕಡಿಮೆ ಮಾಡಲು ಕೆಲವು ಮನೆ ಮದ್ದುಗಳು ಇಂತಿವೆ.

Health Tips
Health Tips


ಅರಿಶಿನ ಚಿಕಿತ್ಸೆ

ಅರಿಶಿನವು ಉರಿಯೂತ ಮತ್ತು ನೋವು ನಿವಾರಕ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಇದು ಊತ ಮತ್ತು ನೋವನ್ನು ಕಡಿಮೆ ಮಾಡಲು ಅತ್ಯುತ್ತಮ ಆಯ್ಕೆಯಾಗಿದೆ.

ಒಂದು ಬೌಲ್ ಬೆಚ್ಚಗಿನ ನೀರಿಗೆ ಒಂದು ಚಮಚ ಅರಿಶಿನ ಪುಡಿಯನ್ನು ಸೇರಿಸಿ. ಇದಕ್ಕೆ ಒಂದು ಟೀ ಚಮಚ ಉಪ್ಪನ್ನು ಕೂಡ ಸೇರಿಸಬಹುದು. ಈ ಮಿಶ್ರಣದಲ್ಲಿ ಪಾದಗಳನ್ನು ಸುಮಾರು 15- 20 ನಿಮಿಷಗಳ ಕಾಲನೆನೆಸಿಟ್ಟರೆ ಸ್ನಾಯುಗಳಿಗೆ ವಿಶ್ರಾಂತಿ ದೊರೆಯುತ್ತದೆ ಮತ್ತು ಉರಿಯೂತ ಕಡಿಮೆ ಮಾಡುತ್ತದೆ.

ಅರಿಶಿನಕ್ಕೆ ತೆಂಗಿನೆಣ್ಣೆ ಬೆರೆಸಿ ಪೇಸ್ಟ್ ಮಾಡಿ ಪಾದಗಳ ಊತ ಅಥವಾ ನೋವಿನ ಪ್ರದೇಶಗಳಿಗೆ ಹಾಕಿ. ಒಣಗಿದ ಮೇಲೆ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದು ಕೂಡ ಉರಿಯೂತ, ನೋವನ್ನು ನಿವಾರಿಸುತ್ತದೆ.

Health Tips
Health Tips


ಉಪ್ಪು ನೀರು

ಉಪ್ಪನ್ನು ಬಳಸುವುದು ಪಾದದ ಊತ ಮತ್ತು ನೋವನ್ನು ನಿರ್ವಹಿಸಲು ಮತ್ತೊಂದು ಪರಿಣಾಮಕಾರಿ ಮಾರ್ಗವಾಗಿದೆ.

ಅರ್ಧ ಕಪ್ ಉಪ್ಪನ್ನು ಬೆಚ್ಚಗಿನ ನೀರಿನಲ್ಲಿ ಕರಗಿಸಿ ಇದರಲ್ಲಿ ಸುಮಾರು 20- 30 ನಿಮಿಷಗಳ ಕಾಲ ಪಾದಗಳನ್ನು ನೆನೆಸಿ. ಉಪ್ಪಿನಲ್ಲಿರುವ ಮೆಗ್ನೀಸಿಯಮ್ ಉರಿಯೂತವನ್ನು ಕಡಿಮೆ ಮಾಡುತ್ತದೆ. ಸ್ನಾಯುವಿನ ನೋವನ್ನು ಕಡಿಮೆ ಮಾಡುತ್ತದೆ.

Health Tips
Health Tips


ಐಸ್ ಪ್ಯಾಕ್

ಐಸ್ ಪ್ಯಾಕ್ ಅನ್ನು ಅನ್ವಯಿಸುವುದು ಊತ ಮತ್ತು ಮರಗಟ್ಟುವಿಕೆ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕೆಲವು ಐಸ್ ತುಂಡುಗಳನ್ನು ಸ್ವಚ್ಛವಾದ ಬಟ್ಟೆಯಲ್ಲಿ ಸುತ್ತಿ ಅಥವಾ ಐಸ್ ಪ್ಯಾಕ್ ಬಳಸಿ. ಇದನ್ನು 15- 20 ನಿಮಿಷಗಳ ಕಾಲ ಪಾದಗಳ ಊತ ಅಥವಾ ನೋವಿನ ಪ್ರದೇಶಕ್ಕೆ ಅನ್ವಯಿಸಿ. ಫ್ರಾಸ್ಬೈಟ್ ಅನ್ನು ತಡೆಗಟ್ಟಲು ಐಸ್ ಮತ್ತು ನಚರ್ಮದ ನಡುವೆ ಬಟ್ಟೆಯನ್ನು ಇರಿಸಲು ಮರೆಯದಿರಿ. ಶೀತವು ರಕ್ತನಾಳಗಳನ್ನು ಸಂಕುಚಿತಗೊಳಿಸಲು ಸಹಾಯ ಮಾಡುತ್ತದೆ. ಊತ ಮತ್ತು ನೋವನ್ನು ಕಡಿಮೆ ಮಾಡುತ್ತದೆ.

Health Tips
Health Tips


ಪಾದಗಳನ್ನು ಎತ್ತರದಲ್ಲಿ ಇರಿಸುವುದು

ಪಾದಗಳನ್ನು ಎತ್ತರದಲ್ಲಿ ಇಟ್ಟುಕೊಳ್ಳುವುದು ರಕ್ತ ಪರಿಚಲನೆಯನ್ನು ಗಮನಾರ್ಹವಾಗಿ ಸುಧಾರಿಸುತ್ತದೆ ಮತ್ತು ಊತವನ್ನು ಕಡಿಮೆ ಮಾಡುತ್ತದೆ.

ವಿಶ್ರಾಂತಿ ಪಡೆಯುವಾಗ ಅಥವಾ ನಿದ್ರಿಸುವಾಗ ದಿಂಬುಗಳನ್ನು ಇತ್ತು ಪಾದಗಳನ್ನು ಹೃದಯ ಮಟ್ಟದಿಂದ ಮೇಲಕ್ಕೆತ್ತಿ. ಇದು ಪಾದಗಳಲ್ಲಿ ದ್ರವದ ಶೇಖರಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದಿನಕ್ಕೆ ಹಲವಾರು ಬಾರಿ ನಿಮ್ಮ ಪಾದಗಳನ್ನು 15- 30 ನಿಮಿಷಗಳ ಕಾಲ ಎತ್ತರದಲ್ಲಿ ಇರಿಸಿ ಇದು ಉರಿಯೂತ, ನೋವನ್ನು ನಿವಾರಿಸುತ್ತದೆ.

Health Tips
Health Tips


ಬೆಚ್ಚಗಿನ ಎಣ್ಣೆ ಮಸಾಜ್

ಮೃದುವಾಗಿ ಬೆಚ್ಚಗಿನ ಎಣ್ಣೆ ಮಸಾಜ್ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ಊತ ಮತ್ತು ನೋವಿನಿಂದ ಪರಿಹಾರವನ್ನು ನೀಡುತ್ತದೆ.

ಸಾಸಿವೆ ಎಣ್ಣೆ, ಎಳ್ಳಿನ ಎಣ್ಣೆ ಅಥವಾ ಕ್ಯಾಸ್ಟರ್ ಆಯಿಲ್ ನಂತಹ ಬೆಚ್ಚಗಿನ ಎಣ್ಣೆಗಳನ್ನು ಬಳಸಿ ವೃತ್ತಾಕಾರವಾಗಿ ಪಾದಗಳಿಗೆ ಎಣ್ಣೆಯನ್ನು ನಿಧಾನವಾಗಿ ಮಸಾಜ್ ಮಾಡಿ. ಉಷ್ಣತೆ ಮತ್ತು ಮಸಾಜ್ ಕ್ರಿಯೆಯು ಸ್ನಾಯುಗಳಿಗೆ ವಿಶ್ರಾಂತಿ ನೀಡುತ್ತದೆ. ಬಿಗಿತವನ್ನು ಕಡಿಮೆ ಮಾಡುತ್ತದೆ. ಉತ್ತಮ ಫಲಿತಾಂಶಗಳಿಗಾಗಿ ಮಲಗುವ ಮುನ್ನ ಪಾದಗಳಿಗೆ ಮಸಾಜ್ ಮಾಡಿ.

Health Tips
Health Tips


ಪಾದದ ವ್ಯಾಯಾಮಗಳು

ಸರಳವಾದ ಕಾಲು ವ್ಯಾಯಾಮಗಳನ್ನು ಮಾಡುವುದರಿಂದ ಊತವನ್ನು ಕಡಿಮೆ ಮಾಡಬಹುದು.
ಕುಳಿತಿರುವಾಗ ಪದಗಳನ್ನು ಪ್ರದಕ್ಷಿಣಾಕಾರವಾಗಿ ಮತ್ತು ಅಪ್ರದಕ್ಷಿಣಾಕಾರವಾಗಿ ವೃತ್ತಗಳಲ್ಲಿ ತಿರುಗಿಸಿ. ಪ್ರತಿ ಪಾದದಲ್ಲಿ ಸುಮಾರು 1 ನಿಮಿಷ ಇದನ್ನು ಮಾಡಿ.

ರಕ್ತಪರಿಚಲನೆಯನ್ನು ಸುಧಾರಿಸಲು ಮತ್ತು ಊತವನ್ನು ಕಡಿಮೆ ಮಾಡಲು ಸಹಾಯ ಮಾಡಲು ಕಾಲ್ಬೆರಳುಗಳನ್ನು ಪದೇ ಪದೇ ಬಗ್ಗಿಸಿ.

Health Tips
Health Tips


ನೀರು, ಆಹಾರ

ಹೆಚ್ಚು ನೀರು ಕುಡಿಯುವುದು, ಆರೋಗ್ಯಕರ ಆಹಾರವನ್ನು ಕಾಪಾಡಿಕೊಳ್ಳುವುದು ಕಾಲು ಊತವನ್ನು ನಿರ್ವಹಿಸುವಲ್ಲಿ ಪಾತ್ರವನ್ನು ವಹಿಸುತ್ತದೆ. ದೇಹದಿಂದ ಹೆಚ್ಚುವರಿ ದ್ರವವನ್ನು ಹೊರಹಾಕಲು ಸಹಾಯ ಮಾಡಲು ದಿನವಿಡೀ ಸಾಕಷ್ಟು ನೀರು ಕುಡಿಯಿರಿ.

ಇದನ್ನೂ ಓದಿ: Tea vs Coffee: ಟೀ ಒಳ್ಳೆಯದಾ ಕಾಫಿ ಒಳ್ಳೆಯದಾ? ಇಲ್ಲಿದೆ ಉತ್ತರ

ಹಣ್ಣು, ತರಕಾರಿಗಳಲ್ಲಿ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ಸೇವಿಸಿ. ಬಾಳೆಹಣ್ಣುಗಳಂತಹ ಪೊಟ್ಯಾಸಿಯಮ್ ಅಧಿಕವಾಗಿರುವ ಆಹಾರಗಳು ದೇಹದಲ್ಲಿ ದ್ರವವನ್ನು ಸಮತೋಲನಗೊಳಿಸಲು ಮತ್ತು ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Continue Reading

ಆರೋಗ್ಯ

Health tips for Over 40: ನಿಮಗೆ 40 ದಾಟಿತೇ? ಹಾಗಾದರೆ ಈ ಸಪ್ಲಿಮೆಂಟ್‌ಗಳು ನಿಮಗೆ ಬೇಕಾಗಬಹುದು!

Health tips for Over 40: ನಲವತ್ತಕ್ಕೆ ಕಾಲಿಡುತ್ತಿರುವಾಗಲೇ ದೇಹದಲ್ಲಿ ಹಲವಾರು ಬದಲಾವಣೆಗಳು ನಿಧಾನವಾಗಿ ಕಾಣಿಸಿಕೊಳ್ಳಲಾರಂಭಿಸುತ್ತವೆ. ಎಲುಬಿನ ಸಾಂದ್ರತೆ, ಮಾಂಸಖಂಡಗಳು ಇಳಿಮುಖವಾಗುವುದು, ಜೀರ್ಣಕ್ರಿಯೆ ನಿಧಾನವಾಗುವುದು, ಹಾರ್ಮೋನಿನ ಬದಲಾವಣೆಗಳು ಇವೆಲ್ಲವೂ ಬಹಳ ಸಾಮಾನ್ಯ. ಕೆಲವು ಸಪ್ಲಿಮೆಂಟ್‌ಗಳು, ಪೋಷಕಾಂಶಯುಕ್ತ ಆಹಾರ, ವ್ಯಾಯಾಮ, ಚಟುವಟಿಕೆಯಿಂದಿರುವುದು ಇತ್ಯಾದಿಗಳು ಅತ್ಯಂತ ಮುಖ್ಯ. ಈ ಕುರಿತಂತೆ ಉಪಯುಕ್ತ ಸಲಹೆ ಇಲ್ಲಿದೆ.

VISTARANEWS.COM


on

Health tips for Over 40 supplimnt
Koo

ನಲವತ್ತಕ್ಕೆ ಪದಾರ್ಪಣೆ (Health tips for Over 40) ಮಾಡುವುದು ಎಂದರೆ, ದೇಹ ಹಲವಾರು ಬದಲಾವಣೆಗಳಿಗೆ ಒಳಗೊಳ್ಳುವುದು. ಹೌದು. ನಲವತ್ತಕ್ಕೆ ಕಾಲಿಡುತ್ತಿರುವಾಗಲೇ ದೇಹದಲ್ಲಿ ಹಲವಾರು ಬದಲಾವಣೆಗಳು ನಿಧಾನವಾಗಿ ಕಾಣಿಸಿಕೊಳ್ಳಲಾರಂಭಿಸುತ್ತದೆ. ಎಲುಬಿನ ಸಾಂದ್ರತೆ, ಮಾಂಸಖಂಡಗಳು ಇಳಿಮುಖವಾಗುವುದು, ಜೀರ್ಣಕ್ರಿಯೆ ನಿಧಾನವಾಗುವುದು, ಹಾರ್ಮೋನಿನ ಬದಲಾವಣೆಗಳು ಇವೆಲ್ಲವೂ ಬಹಳ ಸಾಮಾನ್ಯ. ಕೆಲವು ಸಪ್ಲಿಮೆಂಟ್‌ಗಳು, ಪೋಷಕಾಂಶಯುಕ್ತ ಆಹಾರ, ವ್ಯಾಯಾಮ, ಚಟುವಟಿಕೆಯಿಂದಿರುವುದು ಇತ್ಯಾದಿಗಳು ಅತ್ಯಂತ ಮುಖ್ಯ. ಬನ್ನಿ, ನಲವತ್ತು ದಾಟುತ್ತಿದ್ದಂತೆ, ಅಗತ್ಯವಾಗಿ ಬೇಕಾಗುವ ಸಪ್ಲಿಮೆಂಟ್‌ಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ವಿಟಮಿನ್‌ ಡಿ

ನಮಗೆ ವಯಸ್ಸಾಗುತ್ತಿದ್ದಂತೆಯೇ, ನಮ್ಮ ಚರ್ಮಕ್ಕೆ ಸೂರ್ಯನ ಬೆಳಕಿನಲ್ಲಿರುವ ವಿಟಮಿನ್‌ ಡಿಯನ್ನು ಸಂಸ್ಕರಿಸಿ ಪಡೆಯುವ ಶಕ್ತಿ ಕುಂಠಿತವಾಗುತ್ತದೆ. ವಿಟಮಿನ್‌ ಡಿ ನಮ್ಮ ದೇಹದಲ್ಲಿ ಕ್ಯಾಲ್ಶಿಯಂ ಹೀರಿಕೆಗೆ ಅತ್ಯಂತ ಅಗತ್ಯವಾಗಿ ಬೇಕಾದ ಪೋಷಕಾಂಶವಾದ್ದರಿಂದ ಇದರ ಕೊರತೆ ಕಾಡದಂತೆ ನೋಡಬೇಕು. ಹಾಗಾಗಿ ಆಗಾಗ, ಪರೀಕ್ಷೆಗಳಿಂದ ವಿಟಮಿನ್‌ ಡಿಯ ಕೊರತೆಯಿದ್ದರೆ ಅದನ್ನು ದೃಢಪಡಿಸಿಕೊಂಡು ವೈದ್ಯರ ಸಲಹೆಯಂತೆ ವಿಟಮಿನ್‌ ಡಿ ಸಪ್ಲಿಮೆಂಟ್‌ ಸೇವನೆ ಮಾಡುವುದು ಒಳ್ಳೆಯದು.

ಕ್ಯಾಲ್ಶಿಯಂ

ಎಲುಬಿನ ಸಾಂದ್ರತೆಯನ್ನು ಕಾಯ್ದುಕೊಳ್ಳಲು ಕ್ಯಾಲ್ಶಿಯಂ ಅಗತ್ಯವಾಗಿ ಬೇಕು. ನಲವತ್ತಾಗುತ್ತಿದ್ದಂತೆ ನಿಧಾನವಾಗಿ ಮೂಳೆ ಸವೆತ, ಸಂಧಿನೋವುಗಳು ಇತ್ಯಾದಿಗಳು ಕಾಡಲಾರಂಭಿಸುತ್ತದೆ. ಮುಖ್ಯವಾಗಿ ಮಹಿಳೆಯರಲ್ಲಿ ಈ ಸಮಸ್ಯೆ ಬರುವುದು ಹೆಚ್ಚು. ಕಾರಣ ಆಕೆ ಹೆರಿಗೆ ಇತ್ಯಾದಿಗಳಿಂದಾಗಿ ಸಾಕಷ್ಟು ಬದಲಾವಣೆಗಳನ್ನು ಕಾಣುವುದರಿಂದ ಹಾಗೂ ಮೆನೋಪಾಸ್‌ ಇತ್ಯಾದಿಗಳಿಂದಾಗಿಯೂ ಕ್ಯಾಲ್ಶಿಯಂ ದೇಹಕ್ಕೆ ಕೊರತೆಯಾಗುತ್ತದೆ. ಹೀಗಾಗಿ ಕ್ಯಾಲ್ಶಿಯಂ ಶ್ರೀಮಂತವಾಗಿರುವ ಆಹಾರ ಸೇವನೆ ಹಾಗೂ ಅಗತ್ಯ ಬಿದ್ದರೆ ವೈದ್ಯರ ಸಲಹೆಯಂತೆ, ಸಪ್ಲಿಮೆಂಟ್‌ ಸೇವನೆಯ ಮೊರೆ ಹೋಗಬಹುದು.

ಇದನ್ನೂ ಓದಿ: Actor Kiran Raj: ಕಿರಣ್‌ರಾಜ್‌ `ರಾನಿ’ ಸಿನಿಮಾಗೆ ಯು/ಎ ಸರ್ಟಿಫಿಕೇಟ್; ತೆರೆಗೆ ಯಾವಾಗ?

ಒಮೆಗಾ 3 ಫ್ಯಾಟಿ ಆಸಿಡ್‌

ಒಮೆಗಾ 3 ಫ್ಯಾಟಿ ಆಸಿಡ್‌ಗಳು ಮೀನಿನ ಎಣ್ಣೆ ಸಪ್ಲಿಮೆಂಟ್‌ಗಳ ಮೂಲಕ ಪಡೆಯಬಹುದು. ಇವುಗಳಲ್ಲಿ ಆಂಟಿ ಇನ್‌ಫ್ಲಮೇಟರಿ ಗುಣಗಳಿದ್ದು, ಇವು ಹೃದಯದ ಆರೋಗ್ಯವನ್ನು ವರ್ಧಿಸುತ್ತದೆ. ಇದು ಟ್ರೈಗ್ಲಿಸರಾಯ್ಡ್‌ಗಳನ್ನು ಇಳಿಸಿ, ಹೃದಯಾಘಾತ ಇತ್ಯಾದಿಗಳಿಂದ ರಕ್ಷಣೆ ನೀಡುತ್ತದೆ. ಮಿದುಳಿನ ಕೆಲಸವನ್ನು ಚುರುಕುಗೊಳಿಸುತ್ತದೆ. ಅಷ್ಟೇ ಅಲ್ಲ, ಸಂಧಿನೋವು, ಆರ್ಥೈಟಿಸ್‌ ಇತ್ಯಾದಿಗಳಿಗೂ ಒಳ್ಳೆಯದು.

ಮೆಗ್ನೀಶಿಯಂ

ದೇಹದ ಶಕ್ತಿವರ್ಧನೆಗೆ, ಮಾಂಸಖಂಡಗಳು ಕೆಲಸ ಮಾಡಲು, ನರಮಂಡಲದ ಚುರುಕಿಗೆ ಮೆಗ್ನೀಶಿಯಂ ಬೇಕು. ಹೃದಯದ ಆರೋಗ್ಯಕ್ಕೂ ಮೆಗ್ನೀಶಿಯಂ ಒಳ್ಳೆಯದು. ನಿದ್ದೆಯ ಗುಣಮಟ್ಟ ವೃದ್ಧಿಸಲು, ಮೂಳೆ ಗಟ್ಟಿಗೊಳ್ಳಲೂ ಮೆಗ್ನೀಶಿಯಂ ಸಹಾಯ ಮಾಡುತ್ತದೆ.

ಪ್ರೊಬಯಾಟಿಕ್‌ಗಳು

ಇಡಿಯ ಜೀರ್ಣಾಂಗ ವ್ಯೂಹ ಸಮರ್ಪಕವಾಗಿ ಕೆಲಸ ಮಾಡಲು ಸಹಾಯ ಮಾಡುವ ಬ್ಯಾಕ್ಟೀರಿಯಾ, ಪ್ರೊಬಯಾಟಿಕ್‌ನಲ್ಲಿದೆ. ನಲುವತ್ತು ದಾಟುತ್ತಿದ್ದಂತೆ, ಜೀರ್ಣಕ್ರಿಯೆ ಕುಂಠಿತವಾಗುತ್ತಿರುವಾಗ ಪ್ರೊಬಯಾಟಿಕ್‌ನ ಸಹಾಯವಿದ್ದರೆ ಒಳ್ಳೆಯದು. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಮಾನಸಿಕವಾಗಿ ಸದೃಢವಾಗಿರಲೂ ಕೂಡಾ ಇದು ಒಳ್ಳೆಯದು.

ವಿಟಮಿನ್‌ ಬಿ

ವಿಟಮಿನ್ ಬಿ6, ಬಿ12, ಫೋಲೇಟ್‌ ಸೇರಿದಂತೆ ವಿಟಮಿನ್‌ ಬಿ ದೇಹದ ಶಕ್ತಿವರ್ಧನೆಗೆ ನಲುವತ್ತರ ನಂತರ ಅತೀ ಅಗತ್ಯ. ಕೆಂಪು ರಕ್ತಕಣಗಳು ವೃದ್ಧಿಯಾಗಲು ಕೂಡಾ ಇದರಿಂದ ಸಹಾಯವಾಗುತ್ತದೆ. ವಯಸ್ಸಾಗುತ್ತಾ ಆಗುತ್ತಾ, ವಿಟಮಿನ್‌ ಬಿಯ (ಮುಖ್ಯವಾಗಿ ಬಿ12) ಹೀರಿಕೆಯ ಸಾಮರ್ಥ್ಯ ದೇಹಕ್ಕೆ ಕಡಿಮೆಯಾಗುತ್ತಾ ಬಂದಂತೆ ದೇಹದ ಶಕ್ತಿ ಕುಂದದಂತೆ, ಅನೀಮಿಯಾದಂತಹ ಕಾಯಿಲೆ ಬರದಂತೆ ತಡೆಯಲು ಸಪ್ಲಿಮೆಂಟ್‌ಗಳನ್ನು ನೀಡಬೇಕಾಗುತ್ತದೆ.

ಕೊಲಾಜೆನ್‌

ಕೊಲಾಜೆನ್‌ ಇಂದು ಕೇಳಿಬರುತ್ತಿರುವ ದೊಡ್ಡ ಹೆಸರು. ವಯಸ್ಸಾಗುತ್ತಾ ಸೌಂದರ್ಯ ಕಳೆದು ಹೋಗದಂತೆ ಇಂದು ಸಾಕಷ್ಟು ಮಂದಿ ಕೊಲಾಜೆನ್‌ ಸಪ್ಲಿಮೆಂಟ್‌ ಸೇವಿಸುತ್ತಿರುವುದು ಸಾಮಾನ್ಯವಾಗಿದೆ. ಚರ್ಮದಲ್ಲಿ ನೆರಿಗೆಗಳು, ವಯಸ್ಸಾದ ಲಕ್ಷಣಗಳನ್ನು ಕಡಿಮೆಗೊಳಿಸಲು ಇದು ನೆರವಾಗುತ್ತದೆ. ಅಷ್ಟೇ ಅಲ್ಲ, ಚರ್ಮಕ್ಕೆ ಮೃದುತ್ವವನ್ನು ನೀಡಿ, ಚರ್ಮದಲ್ಲಿ ನೀರಿನಂಶವನ್ನು ಉಳಿಸುವಂತೆ ಮಾಡಿ, ನಯವೂ ಹೊಳಪೂ ಆಗಿಸುತ್ತದೆ.

ವಿಟಮಿನ್‌ ಸಿ

ವಿಟಮಿನ್‌ ಸಿ ಅತ್ಯಂತ ಶಕ್ತಿಯುತವಾದ ಆಂಟಿ ಆಕ್ಸಿಡೆಂಟ್‌. ಇದು ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಸಿಗಲೇಬೇಕು. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚುವುದಲ್ಲದೆ, ಚರ್ಮದ ಆರೋಗ್ಯವೂ ಹೆಚ್ಚುತ್ತದೆ. ಅಗತ್ಯವಿದ್ದರೆ ಮಾತ್ರ ಇವುಗಳ ಸಪ್ಲಿಮೆಂಟ್‌ ಸೇವಿಸಬಹುದು.

Continue Reading

ಆರೋಗ್ಯ

Health Tips: ಏನ್ ನಿಂಗೆ ಕೊಬ್ಬಾ ಅನ್ನಬೇಡಿ ಕೊಬ್ಬೂ ಇರಬೇಕು!

Health Tips: ದೇಹದ ಒಟ್ಟಾರೆ ಸ್ವಾಸ್ಥ್ಯಕ್ಕೆ, ಕೋಶಗಳ ಬೆಳವಣಿಗೆಗೆ, ಶಕ್ತಿ ಸಂಚಯನಕ್ಕೆ, ಸತ್ವಗಳನ್ನು ಹೀರಿಕೊಳ್ಳುವುದಕ್ಕೆ- ಇಂಥ ಹಲವು ಕೆಲಸಗಳಿಗೆ ಕೊಬ್ಬಿನಂಶ ನಮಗೆ ಬೇಕಾಗುತ್ತದೆ. ಅಂದಮಾತ್ರಕ್ಕೆ ಕರಿದ ಆಹಾರಗಳನ್ನು ಮನಸೋಇಚ್ಛೆ ತಿನ್ನಬಹುದು ಎಂದರ್ಥವಲ್ಲ. ಮತ್ತೆ ಹೇಗೆ? ಇಲ್ಲಿದೆ ವಿವರ.

VISTARANEWS.COM


on

Health Tips
Koo

ಕೊಬ್ಬಿನ ಆಹಾರಗಳು ಎನ್ನುತ್ತಿದ್ದಂತೆ ಬೆಚ್ಚಿ ಬೀಳುತ್ತೇವೆ. ಮೈ-ಕೈಯೆಲ್ಲ ಕೊಬ್ಬು ತುಂಬಿ ಬಲೂನಿನಂತೆ ಊದಿಕೊಂಡು, ಒಂದು ದಿನ ಫಟ್ಟೆಂದು ಒಡೆದು ಹೋದೀತೆನ್ನುವ ಹಾಗೆ ಹೆದರಿ ನಡುಗುತ್ತೇವೆ. ನಮ್ಮ ಎಲ್ಲಾ ರಕ್ತನಾಳಗಳೂ ಕೊಲೆಸ್ಟ್ರಾಲ್‌ ತುಂಬಿಕೊಂಡು ಬಿರಿದು ಹೋಗುತ್ತವೆ ಎಂದು ಮಾಧ್ಯಮಗಳಲ್ಲೆಲ್ಲಾ ಭೀತಿ ಹುಟ್ಟಿಸಲಾಗುತ್ತದೆ. ಇದಕ್ಕೆ ಪೂರಕವಾಗಿ ಲೋ-ಫ್ಯಾಟು, ಲೋ-ಕಾರ್ಬು ಎನ್ನುತ್ತಾ ತುದಿಬುಡವಿಲ್ಲದ ಏನೇನೋ ಡಯೆಟ್‌ಗಳನ್ನು ಮಾಡಿಕೊಂಡು ದೇಹವನ್ನು ಸೊರಗಿಸುತ್ತೇವೆ. ಅಷ್ಟಾದರೂ ನಮ್ಮ ಫಿಟ್‌ನೆಸ್‌ ಗುರಿಯನ್ನು ತಲುಪುವುದಕ್ಕೆ ನಮಗೆ ಸಾಧ್ಯವಾಗುವುದಿಲ್ಲ. ಬದಲಿಗೆ ಮೈ-ಕೈಯೆಲ್ಲ ನೋವಾಗಿ ಕೀಲುಗಳು ʻಕಿರ್‌…ʼಗುಡಲು ಪ್ರಾರಂಭಿಸುತ್ತವೆ. ಏನಿದರರ್ಥ? ಕೊಬ್ಬಿನ ಆಹಾರಗಳು ನಮಗೆ ಅಗತ್ಯವೆಂದೇ? ಹೌದಾದರೆ, ಎಂಥ ಕೊಬ್ಬು (Health Tips) ನಮಗೆ ಬೇಕು? ಆಹಾರದಲ್ಲಿ ಸಮತೋಲನ ಸಾಧಿಸುವುದೆಂದರೆ ದೇಹಕ್ಕೆ ಬೇಕಾದಷ್ಟು ಒಳ್ಳೆಯ ಕೊಬ್ಬಿನ ಆಹಾರಗಳನ್ನೂ ನೀಡುವುದು ಎಂದೇ ಅರ್ಥ. ದೇಹದ ಒಟ್ಟಾರೆ ಸ್ವಾಸ್ಥ್ಯಕ್ಕೆ, ಕೋಶಗಳ ಬೆಳವಣಿಗೆಗೆ, ಶಕ್ತಿ ಸಂಚಯನಕ್ಕೆ, ಸತ್ವಗಳನ್ನು ಹೀರಿಕೊಳ್ಳುವುದಕ್ಕೆ- ಇಂಥ ಹಲವು ಕೆಲಸಗಳಿಗೆ ಕೊಬ್ಬಿನಂಶ ನಮಗೆ ಬೇಕಾಗುತ್ತದೆ. ಅಂದಮಾತ್ರಕ್ಕೆ ಕರಿದ ಆಹಾರಗಳನ್ನು ಮನಸೋಇಚ್ಛೆ ತಿನ್ನಬಹುದು ಎಂದರ್ಥವಲ್ಲ. ಮತ್ಸಾಹಾರಗಳು, ಡೇರಿ ಮತ್ತು ಸಸ್ಯಜನ್ಯ ಆಹಾರಗಳು ನಮ್ಮ ದೇಹಕ್ಕೆ ಅಗತ್ಯವಾದ ಒಳ್ಳೆಯ ಕೊಬ್ಬನ್ನು ಯಥೇಚ್ಛವಾಗಿ ಒದಗಿಸಬಲ್ಲವು. ಸಸ್ಯಾಹಾರಿಗಳಿಗೆ ಸೂಕ್ತವಾದಂಥ ಕೊಬ್ಬಿನ ಮೂಲಗಳನ್ನು ಇಲ್ಲಿ ವಿವರಿಸಲಾಗಿದೆ.

Avocado slices

ಅವಕಾಡೊ

ಬೆಣ್ಣೆ ಹಣ್ಣು ಎಂದೂ ಕರೆಯಲಾಗುವ ಈ ಹಣ್ಣಿನ ಋತುವೇ ಮಳೆಗಾಲದ ಹೊತ್ತು. ಇದೀಗ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿರುವ ಬೆಣ್ಣೆ ಹಣ್ಣನ್ನು ತೃಪ್ತಿಯಾಗುವಷ್ಟು ಸವಿಯಿರಿ. ಮಾನೊಅನ್‌ಸ್ಯಾಚುರೇಟೆಡ್‌ ಎಂದು ಇದರಲ್ಲಿರುವ ಕೊಬ್ಬನ್ನು ಕರೆಯಲಾಗುತ್ತದೆ. ಹೃಯದ ಆರೋಗ್ಯಕ್ಕೆ ಹೇಳಿ ಮಾಡಿಸಿದಂಥ ಹಣ್ಣಿದು. ಇದನ್ನು ಸ್ಯಾಂಡ್‌ವಿಚ್‌, ಸ್ಮೂದಿ, ಸಲಾಡ್‌ಗಳ ಜೊತೆಗೆ ಸೇರಿಸಿಕೊಂಡು ತಿನ್ನಬಹುದು ಅಥವಾ ಹಾಗೆಯೇ ಸವಿಯಲೂಬಹುದು.

ಚೀಸ್‌

ಇದರಲ್ಲಿ ಹಲವು ರೀತಿಯ ರುಚಿಕರ ಆಯ್ಕೆಗಳು ಲಭ್ಯವಿವೆ. ಅದರಲ್ಲೂ ಕಡಿಮೆ ಕೊಬ್ಬಿನ ಫೆಟಾ ಅಥವಾ ಕಾಟೇಜ್‌ ಚೀಸ್‌ಗಳು, ಪನೀರ್‌ನಂಥವು ಸಿಕ್ಕಾಪಟ್ಟೆ ಒಳ್ಳೆಯ ಸತ್ವಗಳನ್ನು ಒದಗಿಸುತ್ತವೆ. ಪ್ರೊಟೀನ್‌ ಸಹ ಇವುಗಳಲ್ಲಿ ಸಾಂದ್ರವಾಗಿದ್ದು, ಉತ್ತಮ ಕೊಬ್ಬಿನಂಶವನ್ನು ದೇಹಕ್ಕೆ ನೀಡುತ್ತವೆ. ಆಹಾರಗಳ ರುಚಿಯನ್ನೂ ವೃದ್ಧಿಸುತ್ತವೆ.

ಕಾಯಿ-ಬೀಜಗಳು

ಬಾದಾಮಿ, ವಾಲ್‌ನಟ್‌, ಗೋಡಂಬಿ, ಪಿಸ್ತಾ ಮುಂತಾದ ಕಾಯಿಗಳಂಥವು, ಅಗಸೆ, ಚಿಯಾ, ಸೂರ್ಯಕಾಂತಿ ಬೀಜ, ಕುಂಬಳ ಬೀಜದಂಥ ಸಣ್ಣ ಬೀಜಗಳು ಅತ್ಯಂತ ಆರೋಗ್ಯಕರ ಕೊಬ್ಬನ್ನು ನೀಡುವುದರ ಜೊತೆಗೆ, ನಾರು ಮತ್ತು ಪ್ರೊಟೀನ್‌ಗಳನ್ನೂ ದೇಹಕ್ಕೆ ಒದಗಿಸುತ್ತವೆ. ಇವುಗಳಲ್ಲಿರುವ ಒಮೇಗಾ ೩ ಕೊಬ್ಬಿನಾಮ್ಲವು ಆರೋಗ್ಯಕ್ಕೆ ಬಹಳಷ್ಟು ಲಾಭಗಳನ್ನು ತಂದು ಕೊಡಬಲ್ಲದು. ಹೃದಯ, ಮೆದುಳುಗಳನ್ನು ಸ್ವಸ್ಥವಾಗಿಡುವುದಕ್ಕೆ ಇಂಥ ಒಳ್ಳೆಯ ಕೊಬ್ಬುಗಳು ಬೇಕು.

Olive oil Foods You Should Never Refrigerate

ಆಲಿವ್‌ ಎಣ್ಣೆ

ಇದು ಮೆಡಿಟರೇನಿಯನ್‌ ಆಹಾರಪದ್ಧತಿಯಲ್ಲಿ ಹೇರಳವಾಗಿ ಬಳಕೆಯಲ್ಲಿದೆ. ಇದರಲ್ಲಿಯೂ ಮಾನೊಅನ್‌ಸ್ಯಾಚುರೇಟೆಡ್‌ ಕೊಬ್ಬಿನಂಶ ವಿಫುಲವಾಗಿದೆ. ಈ ಕೊಬ್ಬು ಹೃದಯದ ಆರೋಗ್ಯ ರಕ್ಷಣೆಗೆ ಪೂರಕವಾದದ್ದು. ಆದರೆ ಇದನ್ನು ಹೆಚ್ಚಿನ ಉಷ್ಣತೆಯಲ್ಲಿ ಬಿಸಿ ಮಾಡಲು ಸಾಧ್ಯವಿಲ್ಲ. ಕಡಿಮೆ ಉಷ್ಣತೆಯ ಆಹಾರಗಳ ತಯಾರಿಕೆಗೆ, ಸಲಾಡ್‌ಗಳಿಗೆ ಇದನ್ನು ಹೇರಳವಾಗಿ ಬಳಸಬಹುದು.

ಕೊಬ್ಬರಿ ಎಣ್ಣೆ

ತೆಂಗಿನ ಕಾಯಿ ಮತ್ತು ತೆಂಗಿನ ಎಣ್ಣೆಯಲ್ಲೂ ಒಳ್ಳೆಯ ಕೊಬ್ಬಿನಂಶವಿದೆ. ಇದರಲ್ಲಿರುವ ಮಧ್ಯಮ ಕೊಂಡಿಯ ಟ್ರೈಗ್ಲಿಸರೈಡ್‌ಗಳು (ಎಂಸಿಟಿ) ಆರೋಗ್ಯಕ್ಕೆ ಪೂರಕ ಎನ್ನುತ್ತವೆ ಅ‍್ಯಯನಗಳು. ಅಡುಗೆಯಲ್ಲಿ ತೆಂಗಿನ ಕಾಯಿಯನ್ನು ಬಳಸುವುದರ ಜೊತೆಗೆ, ತೆಂಗಿನ ಹಾಲು ಮತ್ತು ತೆಂಗಿನ ಎಣ್ಣೆಯನ್ನೂ ಹಿತ-ಮಿತವಾಗಿ ಬಳಸುವುದು ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮಗಳನ್ನು ಉಂಟು ಮಾಡುತ್ತದೆ.

ಇದನ್ನೂ ಓದಿ: Mushroom Benefits: ಅಣಬೆ ಎಂಬ ವಿಟಮಿನ್‌ ಡಿ! ಇದರ ಆರೋಗ್ಯ ಲಾಭ ತಿಳಿದರೆ ನೀವು ತಿನ್ನದೆ ಇರಲಾರಿರಿ!

ಮೊಸರು, ತುಪ್ಪ

ಸಾಮಾನ್ಯವಾಗಿ ತುಪ್ಪದಿಂದ ದೊರೆಯುವ ಕೊಬ್ಬಿನ ಮೂಲವನ್ನು ಎಲ್ಲರೂ ಶಿಫಾರಸು ಮಾಡುವುದಿಲ್ಲ. ಆದರೆ ಇದು ಸಹ ಮೀಡಿಯಂ ಚೈನ್‌ ಟ್ರೈಗ್ಲಿಸರೈಡ್‌ಗಳ ಸಾಲಿಗೇ ಬರುತ್ತದೆ. ಮಿತವಾಗಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದು. ಮೊಸರು ಒಳ್ಳೆಯ ಕೊಬ್ಬಿನೊಂದಿಗೆ ಸಾಕಷ್ಟು ಪ್ರಮಾಣದ ಪ್ರೊಬಯಾಟಿಕ್‌ ಅಂಶಗಳನ್ನೂ ನೀಡುತ್ತದೆ.

Continue Reading

ಕರ್ನಾಟಕ

Belagavi News: ಸ್ವಾತಂತ್ರ್ಯ ದಿ‌ನಾಚರಣೆಯಂದು ಅಂಗಾಂಗ ದಾನಿಗಳ ಕುಟುಂಬಗಳಿಗೆ ಗೌರವ; ದಿ‌ನೇಶ್ ಗುಂಡೂರಾವ್

Belagavi News: ಸಾವಿನ ಅಂಚಿನಲ್ಲಿರುವಾಗ ಇನ್ನೊಬ್ಬರ ಜೀವ ಉಳಿಸಲು ಅಂಗಾಂಗ ದಾನ ಮಾಡುವ ನಿರ್ಣಯ ಕೈಗೊಳ್ಳುವುದು ನಿಜಕ್ಕೂ ಪುಣ್ಯದ ಕೆಲಸ. ಅಂಗಾಂಗಗಳಿಗೆ ಇಂದು ಹೆಚ್ಚು ಬೇಡಿಕೆಯಿದೆ.‌ ಆದರೆ ಬೇಡಿಕೆಗೆ ತಕ್ಕಂತೆ ಅಂಗಾಂಗಗಳ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಸುಮಾರು 8500 ರೋಗಿಗಳು ಇಂದು ಅಂಗಾಂಗಗಳಿಗೆ ಕಾಯುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಅಂಗಾಂಗ ದಾನಕ್ಕೆ ನಾವೆಲ್ಲರು ಇಂದು ಪ್ರತಿಜ್ಞೆ ಮಾಡಬೇಕಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

VISTARANEWS.COM


on

Indian Organ Donation Day program inauguration by Minister Dinesh Gundurao at Belagavi
Koo

ಬೆಳಗಾವಿ: ದೇಶದಲ್ಲಿಯೇ ಅಂಗಾಂಗ ದಾನದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದರೂ, ದಾನಿಗಳ ಸಂಖ್ಯೆ ನಿರೀಕ್ಷೆಗೆ ತಕ್ಕಂತೆ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Belagavi News) ತಿಳಿಸಿದರು.

ಆರೋಗ್ಯ ಇಲಾಖೆಯ ವತಿಯಿಂದ ಬೆಳಗಾವಿಯಲ್ಲಿ ಇಂದು ಹಮ್ಮಿಕೊಂಡಿದ್ದ ಭಾರತೀಯ ಅಂಗಾಂಗ ದಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಂಗಾಂಗ ದಾನಿಗಳ ಕುಟುಂಬಗಳನ್ನು ಸನ್ಮಾನಿಸಿ, ಗೌರವಿಸುವುದರ ಜತೆಗೆ ರಾಜ್ಯ ಸರ್ಕಾರದ ಪ್ರಶಂಸಾ ಪತ್ರ ವಿತರಿಸಿ ಅವರು ಮಾತನಾಡಿದರು.

ಸಾವಿನ ಅಂಚಿನಲ್ಲಿರುವಾಗ ಇನ್ನೊಬ್ಬರ ಜೀವ ಉಳಿಸಲು ಅಂಗಾಂಗ ದಾನ ಮಾಡುವ ನಿರ್ಣಯ ಕೈಗೊಳ್ಳುವುದು ನಿಜಕ್ಕೂ ಪುಣ್ಯದ ಕೆಲಸ. ಅಂಗಾಂಗಗಳಿಗೆ ಇಂದು ಹೆಚ್ಚು ಬೇಡಿಕೆಯಿದೆ.‌ ಆದರೆ ಬೇಡಿಕೆಗೆ ತಕ್ಕಂತೆ ಅಂಗಾಂಗಗಳ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಸುಮಾರು 8500 ರೋಗಿಗಳು ಇಂದು ಅಂಗಾಂಗಗಳಿಗೆ ಕಾಯುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಅಂಗಾಂಗ ದಾನಕ್ಕೆ ನಾವೆಲ್ಲರು ಇಂದು ಪ್ರತಿಜ್ಞೆ ಮಾಡಬೇಕಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಇದನ್ನೂ ಓದಿ: 2nd PUC Exam Result 2024: ದ್ವಿತೀಯ ಪಿಯುಸಿ ಪರೀಕ್ಷೆ-1, 2, 3ರಲ್ಲಿ ಒಟ್ಟಾರೆ ಶೇ. 84.87 ವಿದ್ಯಾರ್ಥಿಗಳು ಪಾಸ್; ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ

ಅಂಗಾಂಗ ದಾನವನ್ನು ಪ್ರೇರಿಪಸಲು ಆರೋಗ್ಯ ಇಲಾಖೆ ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಿದೆ.‌ ಅಂಗಾಂಗ ದಾನಿಗಳ ಕುಟುಂಬಗಳನ್ನು ಸನ್ಮಾನಿಸುವ ಕಾರ್ಯಕ್ರಮ ಹಾಕಿಕೊಂಡಿದ್ದು, ಇನ್ನು ಮುಂದೆ ದಾನಿಗಳ ಮನೆಗಳಿಗೇ ಆರೋಗ್ಯ ಇಲಾಖೆ ಅಧಿಕಾರಿಗಳು ತೆರಳಿ ಸನ್ಮಾನಿಸಲಿದ್ದಾರೆ. ಅಲ್ಲದೇ ವಿಶೇಷವಾಗಿ ಸ್ವಾತಂತ್ರ್ಯ ದಿನಾಚಾರಣೆಯ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಅಂಗಾಂಗ ದಾನಿಗಳನ್ನು ಸನ್ಮಾನಿಸಿ, ಗೌರವಿಸುವಂತೆ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಸಚಿವರು ತಿಳಿಸಿದರು.

ಅಂಗಾಂಗ ದಾನಕ್ಕೆ ಯಾವುದೇ ಧರ್ಮದಲ್ಲಿ ಅಡ್ಡಿ ಇಲ್ಲ. ಅಂಗಾಂಗ ದಾನ ಮಾಡಿದರೆ ಪುನರ್ಜನ್ಮಕ್ಕೆ ತೊಂದರೆಯಾಗುತ್ತೆ ಎಂಬ ಕೆಲ ಮೂಢನಂಬಿಕೆಗಳು ಜನರಲ್ಲಿವೆ. ಪುನರ್ಜನ್ಮ ಗ್ಯಾರಂಟಿ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಆದರೆ ನೀವು ಮಾಡುವ ಅಂಗಾಂಗ ದಾನದಿಂದ ಇನ್ನೊಬ್ಬರ ಜೀವ ಉಳಿಯುವುದು ಗ್ಯಾರಂಟಿ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಇದನ್ನೂ ಓದಿ: Moon: ಭೂಮಿಯಿಂದ ದೂರ ಹೊರಟ ಚಂದ್ರ, ಶೀಘ್ರದಲ್ಲೇ ದಿನಕ್ಕೆ 24 ಅಲ್ಲ 25 ಗಂಟೆಗಳು ಇರಲಿವೆ!

ಕರ್ನಾಟಕ ರಾಜ್ಯ 2ನೇ ಸ್ಥಾನದಲ್ಲಿ

2023 ನೇ ಸಾಲಿನಲ್ಲಿ 178 ಅಂಗಾಂಗ ದಾನ ನಡೆದಿದ್ದು, ಕರ್ನಾಟಕ ರಾಜ್ಯವು ದೇಶದಲ್ಲಿ 2ನೇ ಸ್ಥಾನದಲ್ಲಿದೆ.‌ ಆದರೆ ಅಂಗಾಂಗ ಕಸಿಗಾಗಿ ಕಾಯುತ್ತಿರುವವರ ಸಂಖ್ಯೆಗೂ ಅಂಗಾಂಗಗಳ ಪೂರೈಕೆಗೂ ಅಜಗಜಾಂತರ ಅಂತರವಿದೆ. ಅತ್ಯಂತ ಬೇಡಿಕೆಯುಳ್ಳ, ಅಂಗ ಎಂದರೆ ಮೂತ್ರಪಿಂಡ, ಒಟ್ಟಾರೆಯಾಗಿ 8,500 ಕ್ಕೂ ಹೆಚ್ಚು ಜನರು ಅಂಗಾಂಗಳಿಗಾಗಿ ಜೀವಸಾರ್ಥಕತೆಯಲ್ಲಿ ನೋಂದಾಯಿಸಿಕೊಂಡಿರುತ್ತಾರೆ.

ಮೆದುಳು ನಿಷ್ಕ್ರಿಯವಾದ ಒಬ್ಬ ಮಾನವನ ಅಂಗಾಂಗ ದಾನ ಮಾಡುವುದರ ಮೂಲಕ 8 ಜನರ ಜೀವ ಉಳಿಸಬಹುದಾಗಿದೆ. ಚರ್ಮ, ಮೂಳೆ, ಅಸ್ಥಿಮಜ್ಜೆ, ಹೃದಯದ ಕವಾಟಗಳು ಇತ್ಯಾದಿ ಅಂಗಾಂಶಗಳನ್ನು ದಾನ ಮಾಡುವುದರ ಮೂಲಕ 50ಕ್ಕೂ ಹೆಚ್ಚು ರೋಗಿಗಳಿಗೆ ಗುಣಮಟ್ಟದ ಜೀವನ ನೀಡಬಹುದು.

ಅಂಗಾಂಗ ದಾನ ಪ್ರತಿಜ್ಞೆಯಲ್ಲಿ ದೇಶದಲ್ಲಿ ಕರ್ನಾಟಕ ರಾಜ್ಯವು ಮೂರನೇ ಸ್ಥಾನದಲ್ಲಿದೆ. ಒಟ್ಟಾರೆಯಾಗಿ 63 ಸಾವಿರಕ್ಕೂ ಹೆಚ್ಚು ಜನರು ಸ್ವಯಂ ಪ್ರೇರಿತರಾಗಿ ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡಿರುತ್ತಾರೆ. ಪ್ರತಿಜ್ಞೆ ಮಾಡುವುದರಲ್ಲಿ ಮಹಿಳೆಯರೇ ಮುಂಚೂಣಿಯಲ್ಲಿದ್ದಾರೆ. QR code scan ಮಾಡುವ ಮೂಲಕ ಎಲ್ಲಿಂದಲಾದರೂ ನೀವು ಬಯಸಿದ ಅಂಗಾಂಗಗಳು ಮತ್ತು ಅಂಗಾಂಶಗಳ ದಾನಕ್ಕೆ ಪ್ರತಿಜ್ಞೆ ಮಾಡಬಹುದಾಗಿದೆ.

ರಾಜ್ಯದಲ್ಲಿ ಸುಮಾರು 78ಕ್ಕೂ ಹೆಚ್ಚು ಅಂಗಾಂಗ ಕಸಿ ಕೇಂದ್ರ ಜೀವಸಾರ್ಥಕತೆ ಅಡಿಯಲ್ಲಿ ನೋಂದಾಯಿಸಿಕೊಂಡಿರುತ್ತವೆ. ಇದರಲ್ಲಿ ಬೆಳಗಾವಿ ವಿಭಾಗದಲ್ಲಿ ಏಳು ಆಸತ್ರೆಗಳಲ್ಲಿ ಅಂಗಾಂಗ ಕಸಿ ಮಾಡಲಾಗುತ್ತದೆ. ಬೆಳಗಾವಿಯಲ್ಲಿನ ಕೆ.ಎಲ್.ಇ ಆಸತ್ರೆ, ಕಿಡ್ನಿ, ಲಿವರ್, ಹೃದಯ ಅಂಗಾಂಗ ಕಸಿ ಸೌಲಭ್ಯ ಲಭ್ಯವಿದೆ.

ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಇದುವರೆಗೂ 27 ಕಿಡ್ನಿ (Kidney) ಅಂಗಾಂಗ ಕಸಿ ಮಾಡಲಾಗಿದೆ.. ಎಲ್ಲಾ ವೈದ್ಯಕೀಯ ಕಾಲೇಜಿನ ಆಸತ್ರೆಗಳನ್ನು ಜಿಲ್ಲಾ ಆಸತ್ರೆಗಳನ್ನು NTHORC-Non Transplant Human Organ Retrieval Centers ಆಗಿ ಸ್ಥಾಪಿಸಲು ಸರ್ಕಾರವು ಕ್ರಮ ಕೈಗೊಳ್ಳುತ್ತಿದೆ.

ಈಗಾಗಲೇ 26 NTHORC ಗಳನ್ನು ನೋಂದಾಯಿಸಲಾಗಿದೆ. ಅವುಗಳಲ್ಲಿ ನಿಮಾನ್ಸ್, ಬೆಂಗಳೂರು ವೈದ್ಯಕೀಯ ಕಾಲೇಜಿನ ಟ್ರಾಮಾ ಕೇರ್ ಕೂಡ ಸೇರಿದೆ. Institute Of Nephro Urology (NU) ಮತ್ತು Institute of Gastroenterology Sciences & Organ Transplant (IGOT) ನಡೆಯುತ್ತಿವೆ. ಇಲ್ಲಿಯವರೆಗೆ 281 ಬಿಪಿಎಲ್ ರೋಗಿಗಳಿಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಿಂದ ಅಂಗಾಂಗ ಕಸಿ ವೆಚ್ಚ ಭರಿಸಲಾಗಿದೆ.

ಇದನ್ನೂ ಓದಿ: KCET 2024 : ನೀಟ್‌ ಮೊದಲ ಸುತ್ತಿನ ಕೌನ್ಸೆಲಿಂಗ್ ನಂತರವೇ ಕೆಸಿಇಟಿ ಸೀಟು ಹಂಚಿಕೆ ಪ್ರಕ್ರಿಯೆ ಶುರು

ಯಾವ ಧರ್ಮದಲ್ಲೂ ಅಂಗಾಂಗ ದಾನ ನಿಷಿದ್ಧವಿಲ್ಲ, ಕರ್ನಾಟಕ ರಾಜ್ಯದಲ್ಲೇ ಎಲ್ಲಾ ಧರ್ಮದವರು ಅಂಗಾಂಗ ದಾನ ಮಾಡಿರುವ ನಿದರ್ಶನಗಳಿವೆ. ಕೆ.ಎಲ್.ಇ ಆಸ್ಪತ್ರೆಯ ವೈದ್ಯರುಗಳು ನಡೆಸಿರುವ ವಿಶೇಷ ಅಂಗಾಂಗ ಕಸಿಯಲ್ಲಿ ಯಾವುದೇ ಧರ್ಮದ ತಾರತಮ್ಯವಿಲ್ಲದೆ ಹಿಂದೂ ಹೃದಯ ದಾನಿಯಿಂದ ಪಡೆದ ಅಂಗವನ್ನು ಕ್ರಿಶ್ಚಿಯನ್ ವೈದ್ಯರು ಮುಸ್ಲಿಂ ರೋಗಿಯ ದೇಹಕ್ಕೆ ಕಸಿ ಮಾಡಿ ಭಾವೈಕತೆ ಸಾರಿದ್ದಾರೆ.

Continue Reading
Advertisement
Bengal Minister
ದೇಶ26 mins ago

Bengal Minister: ಮಹಿಳಾ ಅಧಿಕಾರಿಗೆ ಬಂಗಾಳ ಸಚಿವ ಜೀವ ಬೆದರಿಕೆ; ದೀದಿ ಆದೇಶದ ಬಳಿಕ ರಾಜೀನಾಮೆ!

BJP-JDS Padayatra
ಕರ್ನಾಟಕ32 mins ago

BJP-JDS Padayatra: ಬಿಜೆಪಿ-ಜೆಡಿಎಸ್‌ ಪಿತೂರಿಗೆ ಜಗ್ಗಲ್ಲ, ನಾವು ಒಗ್ಗಟ್ಟಿನಿಂದ ಹೋರಾಡುತ್ತೇವೆ: ಕೆ.ಸಿ. ವೇಣುಗೋಪಾಲ್

Novak Djokovic
ಪ್ರಮುಖ ಸುದ್ದಿ40 mins ago

Novak Djokovic : ಅಲ್ಕರಾಜ್ ಮಣಿಸಿ ಚೊಚ್ಚಲ ಒಲಿಂಪಿಕ್ಸ್ ಚಿನ್ನದ ಪದಕ ಗೆದ್ದ ನೊವಾಕ್ ಜೊಕೊವಿಕ್

PSI Parashuram Case
ಕ್ರೈಂ51 mins ago

PSI Parashuram Case: ಪಿಎಸ್‌ಐ ಪರಶುರಾಮ ಸಾವು ಪ್ರಕರಣದ ಕಡತ ನಾಳೆ ಸಿಐಡಿಗೆ ಹಸ್ತಾಂತರ: ಎಸ್‌ಪಿ ಜಿ.ಸಂಗೀತಾ

Health Tips
ಆರೋಗ್ಯ52 mins ago

Health Tips: ಪಾದಗಳ ಊತ, ನೋವನ್ನು ಕಡಿಮೆ ಮಾಡಲು ಇಲ್ಲಿದೆ ಸರಳ ಉಪಾಯ

Viral Video
ವೈರಲ್ ನ್ಯೂಸ್1 hour ago

Viral Video: ಇಸ್ರೇಲಿ ಅಪಹೃತನ ಮೃತ ದೇಹವನ್ನು ನಡುಬೀದಿಯಲ್ಲಿ ಒದ್ದ ಪ್ಯಾಲೆಸ್ತೀನ್‌ ಜನ!

Krishnam Pranaya Sakhi
ಸಿನಿಮಾ2 hours ago

Krishnam Pranaya Sakhi: ಕೃಷ್ಣಂ ಪ್ರಣಯ ಸಖಿ ಸಿನಿಮಾದ 4ನೇ ಹಾಡು ಔಟ್;‌ ರೊಮ್ಯಾಂಟಿಕ್‌ ಸಾಂಗ್ ಇಲ್ಲಿ ಕೇಳಿ!

Mohammed Siraj
ಕ್ರೀಡೆ2 hours ago

Mohammed Siraj : ಲಂಕಾ ವಿರುದ್ಧದ ಪಂದ್ಯದಲ್ಲಿ ಹೊಸ ದಾಖಲೆ ಬರೆದ ಮೊಹಮ್ಮದ್​ ಸಿರಾಜ್​

Murder Case
ಕರ್ನಾಟಕ2 hours ago

Murder Case: 300 ರೂಪಾಯಿಗಾಗಿ ಹೆತ್ತಮ್ಮನನ್ನೇ ಕೊಂದ ಪಾಪಿ ಮಗ!

Amitabh Bachchan
ಸಿನಿಮಾ2 hours ago

Amitabh Bachchan: ʼಕೌನ್‌ ಬನೇಗಾ ಕರೋಡ್‌ಪತಿʼ ಸ್ಪರ್ಧಿಗಳ ಎದುರು ನಾನು ಅಸಹಾಯಕ; ಅಮಿತಾಭ್‌ ಹೀಗೆ ಹೇಳಿದ್ದೇಕೆ?

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ8 hours ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 day ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ5 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ5 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ6 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ6 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌