Kyasanur Forest Disease: ಮಂಗನ ಕಾಯಿಲೆ ಲಕ್ಷಣಗಳೇನು? ಇದರಿಂದ ಪಾರಾಗುವುದು ಹೇಗೆ? - Vistara News

ಆರೋಗ್ಯ

Kyasanur Forest Disease: ಮಂಗನ ಕಾಯಿಲೆ ಲಕ್ಷಣಗಳೇನು? ಇದರಿಂದ ಪಾರಾಗುವುದು ಹೇಗೆ?

ಮಲೆನಾಡಿನ ಪ್ರದೇಶಗಳಲ್ಲಿ ಪ್ರತಿ ವರ್ಷವೂ ಉಪಟಳ ನೀಡುವ ಮಂಗನ ಕಾಯಿಲೆಯ (Kyasanur Forest Disease) ಬಗೆಗಿನ ಮಾಹಿತಿ ಇಲ್ಲಿದೆ. ಕೆಲವೊಂದು ವಿಷಯಗಳ ಬಗ್ಗೆ ನಿಗಾ ವಹಿಸುವುದರಿಂದ ರೋಗ ಪ್ರಸರಣವನ್ನು ಮೊಟಕು ಮಾಡುವುದು ಸಾಧ್ಯವಿದೆ. ಮೊದಲಿಗೆ, ಉಣ್ಣಿಗಳ ಕಡಿತಕ್ಕೆ ತುತ್ತಾಗದಂತೆ ಎಚ್ಚರ ವಹಿಸುವುದು ಅಗತ್ಯ.

VISTARANEWS.COM


on

Kyasanur Forest Disease
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಂಗನ ಕಾಯಿಲೆ ಎಂದೇ ಕರೆಯಲಾಗುವ ಕ್ಯಾಸನೂರ್‌ ಫಾರೆಸ್ಟ್‌ ಡಿಸೀಜ್‌ ಅಥವಾ ಕೆಎಫ್‌ಡಿ ಪ್ರಸರಣ (Kyasanur Forest Disease) ರಾಜ್ಯದಲ್ಲಿ ಹೆಚ್ಚುತ್ತಿದ್ದು, ಇಬ್ಬರು ಈಗಾಗಲೇ ಇದಕ್ಕೆ ಬಲಿಯಾಗಿದ್ದಾರೆ. ಹಲವಾರು ದಶಕಗಳಿಂದ ಪ್ರತಿ ವರ್ಷ ಈ ಸಮಯದಲ್ಲಿ ಮಲೆನಾಡಿನ ಸೀಮೆಗಳಲ್ಲಿ ಕಾಟ ಕೊಡುತ್ತಿರುವ ಈ ಕಾಯಿಲೆಯ ಬಗೆಗೆ ಒಂದಿಷ್ಟು ವಿವರಗಳು ಇಲ್ಲಿವೆ.
ಶಿವಮೊಗ್ಗ ಜಿಲ್ಲೆಯ ಕ್ಯಾಸನೂರಿನ ಕಾಡಿನಲ್ಲಿ, ಫ್ಲಾವಿವಿರಿಡೆ ಜಾತಿಗೆ ಸೇರಿದ ವೈರಸ್‌ನಿಂದ ಮೃತಪಟ್ಟ ಮಂಗವನ್ನು 1957ರಲ್ಲಿ ಮೊದಲಿಗೆ ಗುರುತಿಸಲಾಗಿತ್ತು. ಆನಂತರದಿಂದ ಪ್ರತಿ ವರ್ಷವೂ ನೂರಾರು ಜನರಿಗೆ ಈ ವೈರಸ್‌ನಿಂದ ಮಂಗನ ಕಾಯಿಲೆ ತಗುಲುತ್ತಿದ್ದು, ಸೋಂಕಿತ ಮಂಗಗಳಿಗೆ ಕಚ್ಚುವ ಉಣ್ಣಿ ಅಥವಾ ಉಣುಗುಗಳು ಮಾನವರಿಗೆ ಕಚ್ಚಿದಾಗ ಈ ವೈರಸ್‌ ಪ್ರಸರಣಗೊಳ್ಳುತ್ತದೆ. ಸಾಮಾನ್ಯವಾಗಿ ನವೆಂಬರ್‌ ನಂತರ ಎಪ್ರಿಲ್‌ವರೆಗಿನ ಅವಧಿಯಲ್ಲಿ ಈ ರೋಗ ಹೆಚ್ಚುತ್ತಿದೆ.

Immunity Against Diseases

ರೋಗ ಲಕ್ಷಣಗಳೇನು?

ಉಣುಗು ಕಚ್ಚಿದ 3-8 ದಿನಗಳಲ್ಲಿ ರೋಗ ಲಕ್ಷಣಗಳು ಪ್ರಕಟವಾಗುತ್ತವೆ. ಮೊದಲಿಗೆ ತೀವ್ರ ಜ್ವರ, ಚಳಿ ನಡುಕ, ತಲೆ ನೋವು, ವಿಪರೀತ ಆಯಾಸ ಕಾಣುತ್ತದೆ. ನಂತರ ವಾಂತಿ, ಭೇದಿ, ಮೈ-ಕೈ ನೋವು, ಜಠರ ಹಾಗೂ ಕರುಳಿನಲ್ಲಿ ತೊಂದರೆಗಳು, ಮೂಗು- ಒಸಡುಗಳಲ್ಲಿ ರಕ್ತಸ್ರಾವವೂ ಕಾಣಬಹುದು. ಸಾಮಾನ್ಯವಾಗಿ ಎರಡು ವಾರಗಳಲ್ಲಿ ಶೇ. 80ರಷ್ಟು ಸೋಂಕಿತರು ಚೇತರಿಸಿಕೊಳ್ಳುತ್ತಾರೆ. ಒಂದೊಮ್ಮೆ ಮೂರನೇ ವಾರಕ್ಕೂ ರೋಗ ಲಕ್ಷಣಗಳು ಮುಂದುವರಿದು, ಎರಡನೇ ಹಂತ ತಲುಪಿದರೆ ಸಮಸ್ಯೆ ಉಲ್ಭಣಿಸಬಹುದು. ಆಗ ನರಸಂಬಂಧಿ ಸಮಸ್ಯೆಗಳು, ದೃಷ್ಟಿಯ ತೊಂದರೆ, ಮಾನಸಿಕ ಸಮಸ್ಯೆಗಳು, ರಕ್ತಸ್ರಾವ ಮುಂತಾದವು ಕಂಡುಬಂದು, ರೋಗಿ ಚೇತರಿಸಿಕೊಳ್ಳುವುದು ನಿಧಾನವಾಗಬಹುದು. ಶೇ. 3-10ರಷ್ಟು ಪ್ರಕರಣಗಳಲ್ಲಿ ಮಾತ್ರವೇ ಸಾವು ಸಂಭವಿಸುತ್ತಿದೆ.

ಚಿಕಿತ್ಸೆ ಇದೆಯೇ?

ಈ ಕಾಯಿಲೆಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ರೋಗಿಯ ರೋಗ ಲಕ್ಷಣಗಳನ್ನು ಆಧರಿಸಿ, ಅದಕ್ಕೆ ಚಿಕಿತ್ಸೆ ನೀಡಲಾಗುತ್ತದೆ. ಪೀಡಿತ ಪ್ರದೇಶಗಳಲ್ಲಿ ರೋಗ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಆಸ್ಪತ್ರೆಗೆ ದಾಖಲಾಗಬೇಕು. ಎಲಿಸಾ ಪರೀಕ್ಷೆ ಮತ್ತು ಆರ್‌ಟಿಪಿಸಿಆರ್‌ ಪರೀಕ್ಷೆಗಳ ಮೂಲಕ ಸೋಂಕನ್ನು ದೃಢಪಡಿಸಲಾಗುತ್ತದೆ. ಪೌಷ್ಟಿಕ ಆಹಾರ ಸೇವಿಸಿ, ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗದಂತೆ ಜಾಗ್ರತೆ ವಹಿಸಬೇಕು. ಈ ಸಂದರ್ಭದಲ್ಲಿ ವೈದ್ಯರೊಂದಿಗೆ ಸಮಾಲೋಚನೆಯಲ್ಲಿ ಇರಬೇಕಾದ್ದು ಅಗತ್ಯ. ರೋಗ ಒಂದೊಮ್ಮೆ ಎರಡನೇ ಹಂತ ಪ್ರವೇಶಿಸಿ, ರಕ್ತಸ್ರಾವ ಹೆಚ್ಚಾದರೆ, ರಕ್ತಪೂರೈಕೆಯೂ ಅನಿವಾರ್ಯವಾಗಬಹುದು. ಆರೋಗ್ಯದಲ್ಲಿ ಹಲವು ರೀತಿಯಲ್ಲಿ ಏರುಪೇರು ಕಾಣಬಹುದು. ಹಾಗಾಗಿ ರೋಗ ಲಕ್ಷಣಗಳು ಗೋಚರಿಸುತ್ತಿದ್ದಂತೆ ತ್ವರಿತವಾಗಿ ಆಸ್ಪತ್ರೆಗೆ ಧಾವಿಸಬೇಕು.

ಎಲ್ಲೆಲ್ಲಿ ಈ ರೋಗವಿದೆ?

ಪ್ರತಿ ವರ್ಷ ಸಾಮಾನ್ಯವಾಗಿ 400-500 ಪ್ರಕರಣಗಳವರೆಗೂ ಮಂಗನ ಕಾಯಿಲೆ ವರದಿಯಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ಸಾಗರ, ತೀರ್ಥಹಳ್ಳಿ, ಹೊಸನಗರ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಭಟ್ಕಳ, ಸಿದ್ದಾಪುರ, ಜೊಯಿಡಾ, ದಕ್ಷಿಣ ಕನ್ನಡದ ಪುತ್ತೂರು, ಬೆಳತಂಗಡಿ ಮುಂತಾದೆಡೆ ಈ ರೋಗ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದೆ. ಕೆಲವು ವರ್ಷಗಳಲ್ಲಿ ಪೀಡಿತ ಸ್ಥಳಗಳ ಪಟ್ಟಿಯಲ್ಲೂ ವ್ಯತ್ಯಾಸ ಆಗಬಹುದು.

Infectious Disease

ತಡೆಯಲು ಸಾಧ್ಯವೇ?

ಕೆಲವೊಂದು ವಿಷಯಗಳ ಬಗ್ಗೆ ನಿಗಾ ವಹಿಸುವುದರಿಂದ ರೋಗ ಪ್ರಸರಣವನ್ನು ಮೊಟಕು ಮಾಡುವುದು ಸಾಧ್ಯವಿದೆ. ಮೊದಲಿಗೆ, ಉಣ್ಣಿಗಳ ಕಡಿತಕ್ಕೆ ತುತ್ತಾಗದಂತೆ ಎಚ್ಚರ ವಹಿಸುವುದು ಅಗತ್ಯ. ಅರಣ್ಯಕ್ಕೆ ಹೋಗುವಾಗ ಆದಷ್ಟೂ ಮೈ ಪೂರ ಮುಚ್ಚುಕೊಳ್ಳುವಂತೆ ವಸ್ತ್ರ ಧರಿಸಿ, ಕೈಗೆ ಗ್ಲಾಸ್‌, ಕಾಲಿಗೆ ಬೂಟು ಅಗತ್ಯ. ಜೊತೆಗೆ, ಕೀಟಾಣುಗಳನ್ನು ಓಡಿಸುವಂಥ ಡಿಎಂಪಿ ತೈಲದಂಥವನ್ನು ಲೇಪಿಸಿಕೊಳ್ಳಬೇಕು. ಅರಣ್ಯದಿಂದ ಹಿಂತಿರುಗಿದ ಮೇಲೆ ವಸ್ತ್ರಗಳನ್ನು ಬಿಸಿ ನೀರಲ್ಲಿ, ಆಂಟಿಸೆಪ್ಟಿಕ್‌ ಜೊತೆಗೆ ನೆನೆಸಿ ತಳೆಯಬೇಕು. ಮೈಗೆಲ್ಲಾ ಚೆನ್ನಾಗಿ ಸೋಪು ಹಚ್ಚಿ, ಬಿಸಿ ನೀರಲ್ಲಿ ಸ್ನಾನ ಮಾಡಬೇಕು.
ಮನೆಯ ಸುತ್ತಮುತ್ತಲಿನಲ್ಲಿ ಮಂಗ ಸತ್ತಿದ್ದರೆ ಅದನ್ನು ಆರೋಗ್ಯ ಇಲಾಖೆಗೆ ತ್ವರಿತವಾಗಿ ವರದಿ ಮಾಡಬೇಕು. ಸತ್ತ ಮಂಗದ ದೇಹವನ್ನು ಎಂದಿಗೂ ಮುಟ್ಟಬಾರದು. ಕಾಯಿಲೆ ಇರುವ ಕಾಡು ಪ್ರದೇಶಕ್ಕೆ ಹೋಗದಿದ್ದರೆ ಇನ್ನೂ ಒಳ್ಳೆಯದು. ಅಂತಹ ಪ್ರದೇಶಗಳ ಕಾಡಿನಿಂದ ಸೊಪ್ಪನ್ನು ತಂದು ಜಾನುವಾರು ಕೊಟ್ಟಿಗೆಗೆ ಹಾಕಬಾರದು. ಸಾಕು ಪ್ರಾಣಿಗಳಲ್ಲಿ ನೆಲೆಸುವ ಉಣುಗಿನಂಥ ಜೀವಿಗಳನ್ನು ನಿಯಂತ್ರಿಸಬೇಕು. ಈ ರೋಗಾಣು ಮಾನವರಿಂದ ಮಾನವರಿಗೆ ನೇರವಾಗಿ ಪ್ರಸರಣಗೊಂಡ ಉದಾಹರಣೆಗಳಿಲ್ಲ. ಆದರೆ ಒಬ್ಬರಿಗೆ ಕಚ್ಚಿದ ಉಣ್ಣಿಗಳು ಇನ್ನೊಬ್ಬರಿಗೆ ಕಚ್ಚಬಾರದೆಂದಿಲ್ಲ. ಮನೆಯಲ್ಲಿ ಬೆಕ್ಕು-ನಾಯಿಗಳಿದ್ದರೆ ಅವುಗಳ ಮುಖಾಂತರವೂ ಇನ್ನೊಬ್ಬರಿಗೆ ಹರಡಲು ಸಾಧ್ಯವಿದೆ. ಮುನ್ನೆಚ್ಚರಿಕೆ ಮಾತ್ರವೇ ಕಾಪಾಡಬಲ್ಲದು.

ಇದನ್ನೂ ಓದಿ: Benefits of Vitamin C: ಬೇಸಿಗೆಯಲ್ಲಿ ತಂಪಾಗಿರಲು ಬೇಕು ವಿಟಮಿನ್‌ ಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Fatty Lever Disease: ಎಚ್ಚರ ವಹಿಸಿ, ಮಕ್ಕಳನ್ನು ಸದ್ದಿಲ್ಲದೆ ಕಾಡುತ್ತಿದೆ ಫ್ಯಾಟಿ ಲಿವರ್‌ ಕಾಯಿಲೆ!

Fatty lever disease: ಮಕ್ಕಳ ಆಟವೆಂದರೆ ಏನೂ ಆದೀತು. ಕುಂಟಾಬಿಲ್ಲೆಯಿಂದ ಹಿಡಿದು, ಕಣ್ಣಾಮುಚ್ಚಾಲೆ, ಗಾಳಿಪಟ, ಮರಕೋತಿ, ಜೂಟಾಟ, ಜೋಕಾಲಿ… ಪಟ್ಟಿ ಉದ್ದವಾಗುತ್ತದೆ. ಆದರೆ ಈ ಯಾವ ಆಟಗಳೂ ಈಗಿನ ಮಕ್ಕಳಿಗಲ್ಲ, ಹಳೆಯ ಕಾಲದ ಚಿಣ್ಣರಿಗೆ. ಈಗಿನ ಮಕ್ಕಳ ಆಟದ ಪಟ್ಟಿಯನ್ನು ಕೊಡುವುದಾದರೆ ಫ್ರೀಫಯರ್‌, ಪಬ್‌ಜೀ, ಸಬ್‌ವೇ ಸರ್ಫರ್‌, ಕ್ಯಾಂಡಿ ಕ್ರಷ್…‌ ಇಂಥವೇ ಇರುತ್ತವೆ ಅದರಲ್ಲಿ. ಸದಾ ಕಾಲ ಪರದೆಗೇ ಅಂಟಿಕೊಂಡಿರುವ ಈ ಮಕ್ಕಳಲ್ಲಿ ಹೊರಗಿನ ಆಟ ಲುಪ್ತವಾದ್ದರಿಂದ ಆಗುತ್ತಿರುವ ಸಮಸ್ಯೆಗಳು ಒಂದೆರಡೇ ಅಲ್ಲ. ಕೇವಲ ದೃಷ್ಟಿದೋಷವನ್ನು ಮಾತ್ರವೇ ಪರದೆಯ ವ್ಯಸನ ನೀಡುತ್ತಿಲ್ಲ, ಜೊತೆಗೆ ಫ್ಯಾಟಿ ಲಿವರ್‌ನಂಥ ಗಂಭೀರವಾದ ಯಕೃತ್ತಿನ ಸಮಸ್ಯೆಗಳನ್ನು ಸಹ ನೀಡುತ್ತವೆ.

VISTARANEWS.COM


on

Fatty Lever Disease
Koo

ಟಿ ಲಿವರ್‌ ಸಮಸ್ಯೆ ಕೇವಲ (Fatty lever disease) ವಯಸ್ಕರಿಗೆ ಎಂದು ಭಾವಿಸಬೇಡಿ, ಮಕ್ಕಳಲ್ಲೂ ವ್ಯಾಪಕವಾಗುತ್ತಿದೆ ಎಂದು ಅಧ್ಯಯನಗಳು ಎಚ್ಚರಿಸುತ್ತಿವೆ. ದೋಷಪೂರಿತ ಆಹಾರಶೈಲಿಯ ಜೊತೆಗೆ ಆಟ, ಓಟಗಳೂ ಮಕ್ಕಳಲ್ಲಿ ಕಾಣೆಯಾಗಿರುವುದು ಆತಂಕವನ್ನು ಹೆಚ್ಚಿಸುತ್ತಿದೆ. ಮಕ್ಕಳ ಆಟವೆಂದರೆ ಏನೂ ಆದೀತು. ಕುಂಟಾಬಿಲ್ಲೆಯಿಂದ ಹಿಡಿದು, ಕಣ್ಣಾಮುಚ್ಚಾಲೆ, ಗಾಳಿಪಟ, ಮರಕೋತಿ, ಜೂಟಾಟ, ಜೋಕಾಲಿ… ಪಟ್ಟಿ ಉದ್ದವಾಗುತ್ತದೆ. ಆದರೆ ಈ ಯಾವ ಆಟಗಳೂ ಈಗಿನ ಮಕ್ಕಳಿಗಲ್ಲ, ಹಳೆಯ ಕಾಲದ ಚಿಣ್ಣರಿಗೆ. ಈಗಿನ ಮಕ್ಕಳ ಆಟದ ಪಟ್ಟಿಯನ್ನು ಕೊಡುವುದಾದರೆ ಫ್ರೀಫಯರ್‌, ಪಬ್‌ಜೀ, ಸಬ್‌ವೇ ಸರ್ಫರ್‌, ಕ್ಯಾಂಡಿ ಕ್ರಷ್…‌ ಇಂಥವೇ ಇರುತ್ತವೆ ಅದರಲ್ಲಿ. ಸದಾ ಕಾಲ ಪರದೆಗೇ ಅಂಟಿಕೊಂಡಿರುವ ಈ ಮಕ್ಕಳಲ್ಲಿ ಹೊರಗಿನ ಆಟ ಲುಪ್ತವಾದ್ದರಿಂದ ಆಗುತ್ತಿರುವ ಸಮಸ್ಯೆಗಳು ಒಂದೆರಡೇ ಅಲ್ಲ. ಕೇವಲ ದೃಷ್ಟಿದೋಷವನ್ನು ಮಾತ್ರವೇ ಪರದೆಯ ವ್ಯಸನ ನೀಡುತ್ತಿಲ್ಲ, ಜೊತೆಗೆ ಫ್ಯಾಟಿ ಲಿವರ್‌ನಂಥ ಗಂಭೀರವಾದ ಯಕೃತ್ತಿನ ಸಮಸ್ಯೆಗಳನ್ನು ಸಹ ನೀಡುತ್ತವೆ. ಅದರಲ್ಲೂ ಭಾರತದಲ್ಲಿ ಪ್ರತಿ ಮೂರನೇ ಮಗುವಿಗೆ ಯಕೃತ್ತಿನ ಕೊಬ್ಬು ಕಾಡುತ್ತಿದೆ ಎನ್ನುವುದು ಇತ್ತೀಚಿನ ಅಧ್ಯಯನಗಳ ಸಾರ.

Fatty Lever

ವಿವರಗಳು ಇಂತಿವೆ

ದಿನಕ್ಕೆ ಆರು ತಾಸುಗಳ ದೈಹಿಕ ಚಟುವಟಿಕೆಯನ್ನು ಮಾಡದ ಮಕ್ಕಳು ಯಕೃತ್ತಿನ ಸಮಸ್ಯೆಗೆ ಒಳಗಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ದೈಹಿಕ ಚಟುವಟಿಕೆಯೆಂದರೆ ಯಾವುದೋ ಕ್ರಮಬದ್ಧವಾದ ಆಟವನ್ನೇ ಮಕ್ಕಳು ಆಡಬೇಕೆಂದಿಲ್ಲ. ಕಳೆಯ ಕಾಲದ ಕುಂಟಾಬಿಲ್ಲೆ, ಜೂಟಾಟಗಳಿಂದ ಹಿಡಿದು ಯಾವುದೇ ರೀತಿಯ ಆಡುವ, ಓಡುವ, ಕುಣಿದು ಕುಪ್ಪಳಿಸುವ ಚಟುವಟಿಕೆಯೂ ಮಕ್ಕಳನ್ನು ಆರೋಗ್ಯಪೂರ್ಣವಾಗಿ ಇರಿಸುತ್ತದೆ. ಇಂಥ ಯಾವುದೇ ಚಟುವಟಿಕೆಗಳು ಮಕ್ಕಳಲ್ಲಿ ಫ್ಯಾಟಿ ಲಿವರ್‌ ಬಾರದಂತೆ ತಡೆಯುವಲ್ಲಿ ಶೇ. 33ರಷ್ಟು ಯಶಸ್ವಿಯಾಗುತ್ತವೆ ಎನ್ನುತ್ತವೆ ಕ್ಲಿನಿಕಲ್‌ ಮತ್ತು ಪ್ರಾಯೋಗಿಕ ಹೆಪಟಾಲಜಿ ವಿಭಾಗದ ಅಧ್ಯಯನಗಳು.

ಮುಂಚೂಣಿಯಲ್ಲಿ ಭಾರತ

ಮಧುಮೇಹ ಮತ್ತು ಬೊಜ್ಜಿನ ಸಮಸ್ಯೆಯ ನಂತರದ ಸ್ಥಾನವನ್ನು ಫ್ಯಾಟಿ ಲಿವರ್‌ ಆಕ್ರಮಿಸಿದೆ. ಈ ನಿಟ್ಟಿನಲ್ಲಿ ಯಕೃತ್ತಿನ ಕೊಬ್ಬನ್ನು ಹೊತ್ತ ಅತಿಹೆಚ್ಚು ಜನರನ್ನು ಹೊಂದಿರುವ ದೇಶವಾಗಿ ಭಾರತ ಹೊರಹೊಮ್ಮಲು ಸಿದ್ಧತೆ ನಡೆಸಿದೆ. ಅಂದರೆ, ಸುಮಾರು ೫೦ ಕೋಟಿ ಜನಕ್ಕೆ ಯಕೃತ್‌ನ ತೊಂದರೆ ಕಾಡುತ್ತಿದೆ. ಪ್ರತಿ ಮೂರನೇ ಮಗು ಯಕೃತ್ತಿನ ತೊಂದರೆಗೆ ತುತ್ತಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಗುಜರಿ ತಿನಿಸುಗಳು, ಜಿಡ್ಡುಭರಿತ ಆಹಾರದ ಸೇವನೆ ಮಿತಿಮೀರಿ ಹೆಚ್ಚಿದೆ. ಹಾಗೆ ತಿಂದ ಮೇಲೆ ಅದನ್ನು ಕರಗಿಸಲು ವ್ಯಾಯಾಮ ಮಾಡಿ ಶಕ್ತಿ ವ್ಯಯಿಸುವ ಬದಲು, ಜೀರ್ಣಾಂಗಗಳೇ ಚೂರ್ಣಿಸುವ ಕೆಲಸವನ್ನು ಮಾಡಬೇಕೆಂದು ಅಪೇಕ್ಷಿಸುತ್ತೇವೆ. ಇಂಥ ಸಂದರ್ಭಗಳಲ್ಲಿ ಯಕೃತ್ತಿನಲ್ಲಿ ಕೊಬ್ಬು ಶೇಖರವಾಗತೊಡಗುತ್ತದೆ. ಇದು ಮಕ್ಕಳು-ವಯಸ್ಕರೆನ್ನದೆ ಎಲ್ಲರನ್ನೂ ಕಾಡುತ್ತಿದೆ. ಇದರಿಂದಾಗಿ ಅಲ್ಕೋಹಾಲ್‌ನಿಂದಾಗುವ ಫ್ಯಾಟಿ ಲಿವರ್‌ಗಿಂತಲೂ ಹೆಚ್ಚು ಅಲ್ಕೋಹಾಲ್‌ ಜನ್ಯವಲ್ಲದ ಫ್ಯಾಟಿಲಿವರ್‌ ಸಮಸ್ಯೆ ಕಂಡುಬರುತ್ತಿದೆ. ಇದಕ್ಕೆ ಮುಖ್ಯ ಕಾರಣಗಳು ಹಲವಿವೆ. ದೈಹಿಕ ಚಟುವಟಿಕೆ ಕ್ಷೀಣವಾಗಿರುವುದು ಎಲ್ಲಕ್ಕಿಂತ ಮು‍ಖ್ಯವಾಗಿದ್ದು. ಜೊತೆಗೆ, ಕರಿದ ತಿಂಡಿಗಳು, ಮಸಾಲೆ ಭರಿತ ಜಿಡ್ಡಿನ ಆಹಾರಗಳು, ಗುಜರಿ ತಿನಿಸುಗಳು, ಸಂಸ್ಕರಿತ ಸಕ್ಕರೆಯ ಪದಾರ್ಥಗಳ ಸೇವನೆ ಎಲ್ಲ ವಯೋಮಾನದವರಲ್ಲೂ ಹೆಚ್ಚಿದೆ. ಇದರಿಂದ ಯಕೃತ್ತಿನ ಸಮಸ್ಯೆ ಮಾತ್ರವಲ್ಲದೆ, ಕೊಲೆಸ್ಟ್ರಾಲ್‌, ಬೊಜ್ಜು, ಮಧುಮೇಹ, ಥೈರಾಯ್ಡ್‌ ಏರುಪೇರು, ಅಜೀರ್ಣ, ನಿದ್ರಾಹೀನತೆಯಂಥ ತೊಂದರೆಗಳು ಗಂಟು ಬೀಳುತ್ತವೆ.

ಇದನ್ನೂ ಓದಿ: Constipation Problem: ಮಲಬದ್ಧತೆಯ ಸಮಸ್ಯೆಯೇ? ಸರಳ ಪರಿಹಾರಗಳು ಇಲ್ಲಿವೆ!

ಬದಲಾವಣೆ ಅಗತ್ಯ

ನಿಯಮಿತವಾದ ವ್ಯಾಯಾಮ, ಸಂತುಲಿತ ಆಹಾರ, ಅಲ್ಕೋಹಾಲ್‌ ಮತ್ತು ಸಂಸ್ಕರಿತ ಆಹಾರಗಳ ಸೇವನೆಯಿಂದ ದೂರ ಇರುವುದು ಮುಂತಾದ ಕೆಲವು ಸರಳ ಬದಲಾವಣೆಗಳಿಂದ ನಮ್ಮ ಯಕೃತ್ತನ್ನು ಕ್ಷೇಮವಾಗಿ ಕಾಪಾಡಿಕೊಂಡು, ರೋಗಮುಕ್ತರಾಗಿ ಬದುಕುವುದಕ್ಕೆ ಸಾಧ್ಯವಿದೆ. ಆಹಾರದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳುವುದರಿಂದ ಯಕೃತ್ತಿನ ಆರೋಗ್ಯ ಗಣನೀಯ ಪ್ರಮಾಣದಲ್ಲಿ ಸುಧಾರಿಸಬಲ್ಲದು. ಇವುಗಳ ಜೊತೆಗೆ ದಿನಕ್ಕೆ 30 ನಿಮಿಷಗಳ ದೈಹಿಕ ಚಟುವಟಿಕೆ ಕಡ್ಡಾಯವಾಗಿಬೇಕು.

Green tea

ಗ್ರೀನ್‌ ಟೀ

ಹಲವು ರೀತಿಯ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಈ ಪೇಯ, ದೇಹದಲ್ಲಿ ಉರಿಯೂತ ಶಮನ ಮಾಡಬಲ್ಲದು. ಇದರಿಂದ ಯಕೃತ್ತಿನ ಆರೋಗ್ಯವೂ ಸುಧಾರಿಸುತ್ತದೆ.

Green vegetables

ಹಸಿರು ತರಕಾರಿಗಳು

ಎಲೆಕೋಸು, ಹೂಕೋಸು, ಬ್ರೊಕೊಲಿಯಂಥ ತರಕಾರಿಗಳು ಸಹ ಪಿತ್ತಜನಕಾಂಗದ ಆರೋಗ್ಯ ರಕ್ಷಣೆಗೆ ನೆರವಾಗಬಲ್ಲವು.

Seeds Assortment

ಬೀಜಗಳು

ಆರೋಗ್ಯಕರ ಕೊಬ್ಬು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುವ ಬಾದಾಮಿ, ವಾಲ್‌ನಟ್‌ ಮುಂತಾದ ಬೀಜಗಳು ಲಿವರ್‌ನ ಕ್ಷಮತೆಯನ್ನು ಹೆಚ್ಚಿಸಬಲ್ಲವು

Garlic cloves

ಬೆಳ್ಳುಳ್ಳಿ

ಪಿತ್ತಜನಕಾಂಗದ ಉರಿಯೂತವನ್ನು ಕಡಿಮೆ ಮಾಡಿ, ಉತ್ಕರ್ಷಣ ನಿರೋಧಕವಾಗಿಯೂ ಬೆಳ್ಳುಳ್ಳಿ ಕೆಲಸ ಮಾಡಬಲ್ಲದು.

Berries

ಬೆರ್ರಿಗಳು

ಬ್ಲೂಬೆರ್ರಿ, ಸ್ಟ್ರಾಬೆರ್ರಿಯಂಥವು ದೇಹಕ್ಕೆ ಹೆಚ್ಚಿನ ನಾರಿನಂಶದೊಂದಿಗೆ ಪಿತ್ತಜನಕಾಂಗದ ರಕ್ಷಣೆಗೆ ಅಗತ್ಯ ಸತ್ವಗಳನ್ನು ನೀಡಬಲ್ಲವು.

Continue Reading

ಆರೋಗ್ಯ

Nutritional Supplements: ನಿತ್ಯವೂ ಪೋಷಕಾಂಶಗಳ ಸಪ್ಲಿಮೆಂಟ್‌ ಸೇವನೆ ಆರೋಗ್ಯಕ್ಕೆ ವರವೇ? ಶಾಪವೇ?

Nutritional supplements: ಹಲವು ಸಪ್ಲಿಮೆಂಟ್‌ಗಳನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಬೇಕಾದ ಹೆಚ್ಚುವರಿ, ಅಗತ್ಯ ಪೋಷಕಾಂಶಗಳು ಲಭ್ಯವಾಗಿ ಖಂಡಿತವಾಗಿಯೂ ಆರೋಗ್ಯ ವೃದ್ಧಿಯಾಗಿ, ತೂಕ ಹಿತಮಿತವಾಗಿರಿಸಿಕೊಳ್ಳುವಲ್ಲಿ ಸಹಾಯವಾಗಬಹುದು. ವಿಟಮಿನ್‌ ಸಪ್ಲಿಮೆಂಟ್‌ಗಳ ಸೇವನೆಯಿಂದ ದೇಹದ ಪಚನಕ್ರಿಯೆಯೂ ವೃದ್ಧಿಯಾಗಿ ಆ ಮೂಲಕ ಶಕ್ತಿ ಸರಿಯಾಗಿ ದೇಹಕ್ಕೆ ಲಭ್ಯವಾಗಿ, ದೇಹ ಚುರುಕಾಗಿ, ಎಲ್ಲ ಕೆಲಸ ಕಾರ್ಯಗಳು ಸಹಜವಾಗಿ ಆಗುತ್ತದೆ. ಆದರೆ, ಅತಿಯಾಗಿ ಸಪ್ಲಿಮೆಂಟ್‌ಗಳ ಸೇವನೆಯಿಂದ ಅಡ್ಡ ಪರಿಣಾಮಗಳೂ ಆಗಬಹುದು. ಈ ಬಗ್ಗೆ ಮಾಹಿತಿ ಇಲ್ಲಿದೆ.

VISTARANEWS.COM


on

Nutritional Supplements
Koo

ಕಳೆದ ಕೆಲವು ದಶಕಗಳಿಂದ ತೂಕ ಏರಿಕೆ ಎನ್ನುವುದೇ ಬಹುತೇಕ ಎಲ್ಲರ ಸಮಸ್ಯೆಯಾಗಿದೆ. ವೃತ್ತಿಯಲ್ಲಿನ ಒತ್ತಡ, ನಗರ ಜೀವನ, ವ್ಯಾಯಾಮದ ಕೊರತೆ, ಆಹಾರ ಪದ್ಧತಿ, ಜೀವನಕ್ರಮದಲ್ಲಿ ಬದಲಾವಣೆ ಇತ್ಯಾದಿಗಳೇ ತೂಕದ ಸಮಸ್ಯೆಯನ್ನೂ ಹಲವು ಆರೋಗ್ಯದ ಸಮಸ್ಯೆಗಳನ್ನೂ ಸಣ್ಣ ವಯಸ್ಸಿನಲ್ಲಿಯೇ ಹಲವರಿಗೆ ತಂದೊಡ್ಡಿದೆ ನಿಜ. ಸಣ್ಣ ವಯಸ್ಸಿನಲ್ಲಿಯೇ ಮಧುಮೇಹ, ಅಧಿಕ ರಕ್ತದೊತ್ತಡ, ಕೊಲೆಸ್ಟೆರಾಲ್‌ ಸಮಸ್ಯೆ, ಬೊಜ್ಜು ಇತ್ಯಾದಿ ಸಮಸ್ಯೆಗಳೆಲ್ಲ ಕಾಣಿಸಿಕೊಳ್ಳಲು ಆರಂಭವಾಗುತ್ತದೆ. ಹಲವು ಪೋಷಕಾಂಶಗಳ ಕೊರತೆ ಇತ್ಯಾದಿಗಳ ಸಮಸ್ಯೆಯೂ ಜೊತೆಗೆ ಸೇರಿಕೊಂಡು ಅನಾರೋಗ್ಯ, ಶಕ್ತಿಹೀನತೆಯಂಥ ಒಂದಿಲ್ಲೊಂದು ಸಮಸ್ಯೆಗಳು ಎಡತಾಕುತ್ತವೆ. ಇಂತಹ ಸಂದರ್ಭ ಇತ್ತೀಚೆಗಿನ ದಿನಗಳಲ್ಲಿ ಸಪ್ಲಿಮೆಂಟ್‌ಗಳ ಸೇವನೆಯೂ ಹೆಚ್ಚುತ್ತಿದೆ. ಹಲವು ಸಪ್ಲಿಮೆಂಟ್‌ಗಳನ್ನು ಜೊತೆಗೆ ಸೇವಿಸುವುದರಿಂದ ನಮ್ಮ ದೇಹಕ್ಕೆ ಬೇಕಾದ ಹೆಚ್ಚುವರಿ, ಅಗತ್ಯ ಪೋಷಕಾಂಶಗಳು ಲಭ್ಯವಾಗಿ ಖಂಡಿತವಾಗಿಯೂ ಆರೋಗ್ಯ ವೃದ್ಧಿಯಾಗಿ, ತೂಕ ಹಿತಮಿತವಾಗಿರಿಸಿಕೊಳ್ಳುವಲ್ಲಿ ಸಹಾಯವಾಗಬಹುದು. ವಿಟಮಿನ್‌ ಸಪ್ಲಿಮೆಂಟ್‌ಗಳ ಸೇವನೆಯಿಂದ ದೇಹದ ಪಚನಕ್ರಿಯೆಯೂ ವೃದ್ಧಿಯಾಗಿ ಆ ಮೂಲಕ ಶಕ್ತಿ ಸರಿಯಾಗಿ ದೇಹಕ್ಕೆ ಲಭ್ಯವಾಗಿ, ದೇಹ ಚುರುಕಾಗಿ, ಎಲ್ಲ ಕೆಲಸ ಕಾರ್ಯಗಳು ಸಹಜವಾಗಿ ಆಗುತ್ತದೆ. ಆದರೆ, ಅತಿಯಾಗಿ ಸಪ್ಲಿಮೆಂಟ್‌ಗಳ ಸೇವನೆ (Nutritional Supplements), ಸರಿಯಾದ ಸಪ್ಲಿಮೆಂಟ್‌ ಸೇವಿಸದೆ ಇರುವುದು, ಅಗತ್ಯವಿಲ್ಲದಿದ್ದರೂ ಸಪ್ಲಿಮೆಂಟ್‌ ಸೇವನೆ ಮಾಡುವುದು, ಅಥವಾ ತಪ್ಪುತಪ್ಪಾಗಿ ಸೇವಿಸುವುದು ಇತ್ಯಾದಿ ಮಾಡುವುದರಿಂದ ಅಡ್ಡ ಪರಿಣಾಮಗಳೂ ಆಗಬಹುದು. ಈಗ ಸಪ್ಲಿಮೆಂಟ್‌ಗಳ ಹೆಸರಿನಲ್ಲಿ ಮಾರುಕಟ್ಟೆಗೆ ಬಂದಿರುವ ಅನೇಕ ಫೇಕ್‌ ಸಪ್ಲಿಮೆಂಟ್‌ಗಳ ಬಗ್ಗೆಯೂ ಎಚ್ಚರಿಕೆ ವಹಿಸಬೇಕಾಗಿದೆ. ಹೀಗಾಗಿ, ಸಪ್ಲಿಮೆಂಟ್‌ ವರವಾಗುವ ಜೊತೆಗೆ ಕೆಲವೊಮ್ಮೆ ಶಾಪವಾಗಿಯೂ ಪರಿಣಮಿಸಬಹುದು. ಕೆಲವೊಮ್ಮೆ ಇದರಿಂದ ದೇಹಕ್ಕೆ ತೊಂದರೆಯೂ ಆಗಬಹುದು. ತೂಕ ಇಳಿಕೆಗೆಂದೇ ಸೇವಿಸುವ ಸಪ್ಲಿಮೆಂಟ್‌ಗಳು, ದಿಢೀರ್‌ ತೂಕ ಇಳಿಸಬಹುದೆಂದು ಹೇಳಿಕೊಳ್ಳುವ ಮಾತ್ರೆಗಳು, ಪುಡಿಗಳು ಇತ್ಯಾದಿಗಳ ಬಗ್ಗೆ ಸದಾ ಎಚ್ಚರಿಕೆ ಇರುವುದು ಒಳ್ಲೆಯದು. ಸಪ್ಲಿಮೆಂಟ್‌ಗಳ ಹೆಸರಿನಲ್ಲಿ ಇವು ದೇಹಕ್ಕೆ ಒಳ್ಳೆಯದು ಮಾಡುವ ಬದಲು ಹಾನಿಯನ್ನೇ ಮಾಡುವುದು ಹೆಚ್ಚು.

Healthy vitamins and supplements on wooden teaspoons against

ಎಚ್ಚರಿಕೆ ವಹಿಸಬೇಕಾದ್ದೇನು?

ಹಾಗಾದರೆ, ಸಪ್ಲಿಮೆಂಟ್‌ ಸೇವನೆಯ ಸಂದರ್ಭ ಎಚ್ಚರಿಕೆ ವಹಿಸಬೇಕಾದ್ದೇನು ಎಂಬ ಗೊಂದಲ ನಿಮಗಾಗಿರಬಹುದು. ಯಾವಾಗಲೂ ಸಮಸ್ಯೆಯ ಮೂಲವನ್ನು ಕಂಡು ಹಿಡಿಯದೆ, ನೀವೇ ವೈದ್ಯರಾಗಲು ಹೊರಡಬೇಡಿ. ನಿಮ್ಮ ಆರೋಗ್ಯದ ಸಮಸ್ಯೆಗೆ, ತೂಕ ಹೆಚ್ಚಳಕ್ಕೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಿ. ವೈದ್ಯರ, ಪೋಷಕಾಂಶ ತಜ್ಞರ ಸಲಹೆ ಪಡೆಯಿರಿ. ದೇಹಕ್ಕೆ ಯಾವ ಪೋಷಕಾಂಶದ ಕೊರತೆಯಾಗಿದೆ ಎಂದು ಅವರ ಸಲಹೆಯ ಮೇರೆಗೆ ಪರೀಕ್ಷೆ ಮಾಡಿಸಿಕೊಂಡು, ಅವರ ಸಲಹೆಯ ಮೇರೆಗೆ ಸಪ್ಲಿಮೆಂಟ್‌ ತೆಗೆದುಕೊಳ್ಳಿ. ನೀವೇ ನೇರವಾಗಿ ಸಪ್ಲಿಮೆಂಟ್‌ಗಳ ಸೇವನೆಗೆ ಇಳಿಯಬೇಡಿ. ವೈದ್ಯರ ಅನುಮತಿಯ ಮೇರೆಗೆ ಸಂಬಂಧಿಸಿದ ಸಪ್ಲಿಮೆಂಟ್‌ ಸೇವಿಸಿ.

ಇದನ್ನೂ ಓದಿ: Mint Leaf Water: ಪುದಿನ ಎಲೆಗಳ ನೀರನ್ನು ನಿತ್ಯವೂ ಕುಡಿಯಿರಿ, ಈ ಲಾಭಗಳನ್ನು ಪಡೆಯಿರಿ!

ಜೀವನಕ್ರಮವನ್ನು ರೂಢಿಸಿಕೊಳ್ಳುವುದು ಮುಖ್ಯ

ಎಲ್ಲಕ್ಕಿಂತ ಹೆಚ್ಚಾಗಿ ಆರೋಗ್ಯಕರ ಜೀವನಕ್ರಮವನ್ನು ರೂಢಿಸಿಕೊಳ್ಳುವುದು ಮುಖ್ಯ. ಸಪ್ಲಿಮೆಂಟ್‌ಗಳನ್ನು ತಿನ್ನುತ್ತೇನಲ್ಲ, ಇನ್ನು ಪೋಷಕಾಂಶಗಳ ಬಗ್ಗೆ ನಾನು ತಿನ್ನುವ ಆಹಾರದ ನಿಗಾ ಇರಿಸಿಕೊಳ್ಳುವ ಅಗತ್ಯವಿಲ್ಲ ಎಂದು ಬೇಕಾಬಿಟ್ಟಿ, ನಾಲಿಗೆಗೆ ಹಿತವೆನಿಸಿದ್ದನ್ನೆಲ್ಲ ತಿನ್ನಲು ಹೊರಡಬೇಡಿ. ನಾಲಿಗೆ ಬಯಸಿದ್ದನ್ನೆಲ್ಲ ನಾಲಿಗೆಗೆ ಕೊಡುವ ಮೊದಲು ಯೋಚಿಸಿ. ದೇಹಕ್ಕೆ ಒಳ್ಳೆಯದನ್ನು ಬಯಸುವ ಆಹಾರಗಳನ್ನು ಸೇವಿಸುವುದನ್ನು ಅಭ್ಯಾಸ ಮಾಡಿ. ದೇಹವನ್ನು ಚುರುಕಾಗಿರಿಸುವುದನ್ನು, ಅಭ್ಯಾಸ ಮಾಡಿ. ವ್ಯಾಯಾಮ, ಯೋಗ, ವಾಕಿಂಗ್‌, ಉತ್ತಮ ಆಹಾರಭ್ಯಾಸಗಳೇ ಇದರಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂಬುದನ್ನು ಮರೆಯಬೇಡಿ.

Continue Reading

ಆರೋಗ್ಯ

Oats For Weight Loss: ಓಟ್ಸ್‌ ತಿನ್ನುವುದರಿಂದ ತೂಕ ಇಳಿಯುತ್ತದೆಯೇ? ಉತ್ತರ ಇಲ್ಲಿದೆ

Oats For Weight Loss: ಓಟ್ಸ್‌ ಎಂಬುದು ಅತ್ಯಂತ ಹಳೆಯ ದವಸ ಧಾನ್ಯಗಳ ಪೈಕಿ ಒಂದು. ಇದರಲ್ಲಿ ನಮ್ಮ ದೇಹಕ್ಕೆ ಬೇಕಾಗುವ ಸಾಕಷ್ಟು ಮೈಕ್ರೋ ಹಾಗೂ ಮ್ಯಾಕ್ರೋ ಪೋಷಕಾಂಶಗಳಿವೆ. ಇವುಗಳಲ್ಲಿ ಪ್ರೊಟೀನ್‌ ಹೆಚ್ಚಿದ್ದು, ಇತರ ಧಾನ್ಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನಾರಿನಂಶವೂ, ಪೋಷಕಾಂಶಗಳೂ ಇರುತ್ತವೆ. ಪೋಷಕಾಂಶ ತಜ್ಞರ ಪ್ರಕಾರ, ಓಟ್ಸ್‌ನಲ್ಲಿ ಸಾಕಷ್ಟು ಕರಗಬಲ್ಲ ನಾರಿನಂಶವಿರುವುದರಿಂದ ಇದು ಕೊಲೆಸ್ಟೆರಾಲ್‌ ಮಟ್ಟವನ್ನು ತಗ್ಗಿಸಲು ನೆರವಾಗುತ್ತದೆ. ಅಷ್ಟೇ ಅಲ್ಲ, ದೇಹಕ್ಕೆ ಗ್ಲುಕೋಸ್‌ ಬೇಗನೆ ಸೇರದಂತೆಯೂ ಇವು ಮಾಡುತ್ತದೆ.

VISTARANEWS.COM


on

Oats For Weight Loss
Koo

ಎಲ್ಲರಿಗೂ ಒಂದಲ್ಲ ಒಂದು ಹಂತದಲ್ಲಿ ತಾವು ತೂಕ ಇಳಿಸಿಕೊಂಡು ಫಿಟ್‌ ಆಗಬೇಕು ಎಂಬ ಬಯಕೆ ಬಂದೇ ಬರುತ್ತದೆ. ಕಾರಣ ಇಂದಿನ ಒತ್ತಡದ ಜೀವನಕ್ರಮದಲ್ಲಿ, ಗೊತ್ತೇ ಆಗದಂತೆ ತೂಕ ಏರಿಸಿಕೊಂಡು ಒಂದು ದಿನ, ಅಯ್ಯೋ ಹೆಂಗಿದ್ದ ನಾನು ಹೆಂಗಾಗಿಬಿಟ್ಟೆ ಎಂಬ ಮರುಕ ಬಂದೇ ಬರುತ್ತದೆ. ಜ್ಞಾನೋದಯವಾಗುವ ಆ ಹಂತದಲ್ಲಿ, ಒಂದಿಷ್ಟು ಆರೋಗ್ಯಕರ ಅಭ್ಯಾಸಗಳು, ನಡಿಗೆ, ವ್ಯಾಯಾಮ ಸೇರಿದಂತೆ ತೂಕ ಇಳಿಸಿಕೊಳ್ಳುವ ಕಾರ್ಯಕ್ರಮ ಶುರುಹಚ್ಚಿಕೊಳ್ಳುತ್ತೇವೆ. ಅವರಿವರಿಂಧ ಕೇಳಿ, ಓದಿ ಪಡೆದುಕೊಂಡ ಮಾಹಿತಿಗಳ ಆಧಾರದಲ್ಲಿ ತೂಕ ಇಳಿಕೆಗೆ ತೊಡಗುವುದೇ ಹೆಚ್ಚು. ಹೀಗೆ ತೂಕ ಇಳಿಕೆಗೆ ಹೊರಟ ಪ್ರತಿಯೊಬ್ಬರೂ ಓಟ್ಸ್‌ ಕಡೆಗೆ ಒಂದಲ್ಲ ಒಂದು ದಿನ ಮುಖ ಮಾಡುತ್ತಾರೆ. ಓಟ್ಸ್‌ ಎಂಬುದು ಅತ್ಯಂತ ಹಳೆಯ ದವಸ ಧಾನ್ಯಗಳ ಪೈಕಿ ಒಂದು. ಇದರಲ್ಲಿ ನಮ್ಮ ದೇಹಕ್ಕೆ ಬೇಕಾಗುವ ಸಾಕಷ್ಟು ಮೈಕ್ರೋ ಹಾಗೂ ಮ್ಯಾಕ್ರೋ ಪೋಷಕಾಂಶಗಳಿವೆ. ಇವುಗಳಲ್ಲಿ ಪ್ರೊಟೀನ್‌ ಹೆಚ್ಚಿದ್ದು, ಇತರ ಧಾನ್ಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನಾರಿನಂಶವೂ, ಪೋಷಕಾಂಶಗಳೂ ಇರುತ್ತವೆ. ಪೋಷಕಾಂಶ ತಜ್ಞರ ಪ್ರಕಾರ, ಓಟ್ಸ್‌ನಲ್ಲಿ ಸಾಕಷ್ಟು ಕರಗಬಲ್ಲ ನಾರಿನಂಶವಿರುವುದರಿಂದ ಇದು ಕೊಲೆಸ್ಟೆರಾಲ್‌ ಮಟ್ಟವನ್ನು ತಗ್ಗಿಸಲು ನೆರವಾಗುತ್ತದೆ. ಅಷ್ಟೇ ಅಲ್ಲ, ದೇಹಕ್ಕೆ ಗ್ಲುಕೋಸ್‌ ಬೇಗನೆ ಸೇರದಂತೆಯೂ ಇವು ಮಾಡುತ್ತದೆ. ಕರುಳಿನಲ್ಲಿ ಆಹಾರ ಸುಲಭವಾಗಿ ಪ್ರವಹಿಸಲು ಕೂಡಾ ಇದು ನೆರವಾಗುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ದೇಹದಲ್ಲಿ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಇವೆಲ್ಲ ನಿಜವೇ ಆದರೂ, ಓಟ್ಸ್‌ನ ನಿತ್ಯದ ಸೇವನೆಯಿಂದ ತೂಕ (Oats For Weight Loss) ಇಳಿಸಬಹುದಾ? ಇದರ ಸೇವನೆ ಒಳ್ಳೆಯದಾ ಎಂದು ಪ್ರಶ್ನಿಸಿದರೆ ಖಂಡಿತವಾಗಿಯೂ ಗೊಂದಲ ಹುಟ್ಟಿಸದೆ ಇರದು.

Oats Vegetarian foods for stamina

ತೂಕ ಇಳಿಸುತ್ತದೆಯೆ?

ಈ ಓಟ್ಸ್‌ ಸೇವನೆಯಿಂದ ನಿಜವಾಗಿಯೂ ತೂಕ ಇಳಿಯುತ್ತದೆಯೇ ಎಂಬುದು ಎಲ್ಲರ ಪ್ರಶ್ನೆ. ಈ ಪ್ರಶ್ನೆ ಹೊಸತೇನಲ್ಲ. ಯಾಕೆಂದರೆ ಓಟ್ಸ್‌ನಲ್ಲಿ ಸಾಕಷ್ಟು ಪೋಷಕಾಂಶಗಳೂ, ನಾರಿನಂಶವೂ ಇರುವುದರಿಂದ ಇದರಿಂದ ತೂಕ ಇಳಿಯಬಹುದು ಎಂಬುದು ನಿಜವೇ ಆದರೂ, ಸರಿಯಾಗಿ ಹಿತಮಿತವಾಗಿ ಸೇವನೆ ಮಾಡಿದರೆ ಮಾತ್ರ ಇದು ಸಾಧಯ ಎಂಬುದೂ ಸತ್ಯವೇ. ಯಾಕೆಂದರೆ ಓಟ್ಸ್‌ನಲ್ಲಿ ಸ್ಟಾರ್ಚ್‌ ಕೂಡಾ ಇರುವುದರಿಂದ ಹಾಗೂ ಹೆಚ್ಚು ಕಾರ್ಬೋಹೈಡ್ರೇಟ್‌ ಇರುವ ಕಾರಣದಿಂದ ಹೆಚ್ಚು ಗ್ಲಿಸೆಮಿಕ್‌ ಇಂಡೆಕ್ಸ್‌ ಹೊಂದಿರುತ್ತದೆ. ಹಾಗಾಗಿ ದೇಹದಲ್ಲಿ ಸಕ್ಕರೆಯ ಪ್ರಮಾಣ ಏರುವ ಅಪಾಯವೂ ಇದೆ. ಹಿತಮಿತವಾಗಿ ಸೇವಿಸಿದರೆ ಮಾತ್ರ ಪ್ರಯೋಜನ ಪಡೆಯಬಹುದು ಎನ್ನುತ್ತಾರೆ.

ಇದನ್ನೂ ಓದಿ: Monsoon Hair care: ಮಳೆಗಾಲದಲ್ಲಿ ಕೂದಲಿನ ಆರೈಕೆಗೆ ಈ ಸಲಹೆ ಪಾಲಿಸಿ

ಇನ್‌ಸ್ಟ್ಯಾಂಟ್‌ ಓಟ್ಸ್‌ ಬೇಡ

ಓಟ್ಸ್‌ನನ್ನು ನಾವು ಹೇಗೆ ಬಳಸುತ್ತೇವೆ ಎಂಬುದರಲ್ಲಿ ಸತ್ಯ ಅಡಗಿದೆ ಎನ್ನುತ್ತಾರೆ ತಜ್ಞರು. ಯಾಕೆಂದರೆ ಓಟ್ಸ್‌ನಿಂದ ಲಾಭ ಇರುವಷ್ಟೇ ಅಪಾಯವೂ ಇದೆ. ಮಾರುಕಟ್ಟೆಯಲ್ಲಿ ಈಗ ಸುಲಭವಾಗಿ ಬಗೆಬಗೆಯ ಫ್ಲೇವರ್‌ಗಳ ಮಸಾಲೆಗಳ ಜೊತೆಗೆ ಲಭ್ಯವಾಗುವ ಇನ್‌ಸ್ಟ್ಯಾಂಟ್‌- ದಿಢೀರ್‌ ಓಟ್ಸ್‌ಗಳಲ್ಲಿ ಗ್ಲಿಸೆಮಿಕ್‌ ಇಂಡೆಕ್ಸ್‌ ಹೆಚ್ಚಿರುತ್ತದೆ. ಹಣ್ಣುಗಳನ್ನು ಸೇರಿಸಿ, ಇನ್‌ಸ್ಟ್ಯಾಂಟ್‌ ಓಟ್ಸ್‌ ಮಾಡಿ ತಿನ್ನುವುದರಿಂದ ರಕ್ತದಲ್ಲಿ ಸಕ್ಕರೆ ದಿಢೀರ್‌ ಹೆಚ್ಚಾಗುವ ಸಾಧ್ಯತೆ ಹೆಚ್ಚಿದೆ ಎನ್ನುತ್ತಾರೆ ತಜ್ಞರು.
ಹಾಗಾದರೆ, ತೂಕ ಇಳಿಸುವ ಉದ್ದೇಶದಿಂದ ಓಟ್ಸ್‌ ತಿನ್ನಲು ಬಯಸುವ ಮಂದಿ ಯಾವ ಕ್ರಮದಲ್ಲಿ ತಿಂದರೆ ಲಾಭ ಪಡೆಯಬಹುದು ಎಂಬ ಪ್ರಶ್ನೆ ನಿಮ್ಮದಾಗಿದ್ದರೆ, ಉತ್ತರ ಇಲ್ಲಿದೆ. ಇನ್‌ಸ್ಟ್ಯಾಂಟ್‌ಗಳ ಬದಲಾಗಿ ಸ್ಟೀಲ್‌ ಕಟ್‌ ಓಟ್ಸ್‌ಗಳ ಬಳಕೆ ಮಾಡುವುದು ಒಳ್ಳೆಯದು. ಇದು ನಿಧಾನವಾಗಿ ಶಕ್ತಿ ನೀಡುತ್ತದೆ. ಹಾಗೂ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಓಟ್ಸ್‌ ಒಳ್ಳೆಯದೆಂದು ಅಂದುಕೊಂಡು ಅತಿಯಾಗಿ ಓಟ್ಸನ್ನೇ ನಿತ್ಯವೂ ತಿನ್ನುವುದೂ ಕೂಡಾ ಒಳ್ಳೆಯದಲ್ಲ. ಹಿತಮಿತವಾಗಿ ತಿಂದರೆ ಮಾತ್ರ ಅವುಗಳ ನಿಜವಾದ ಪ್ರಯೋಜನ ಪಡೆಯಲು ಸಾಧ್ಯವಾಗಬಹುದು.

Continue Reading

ಆರೋಗ್ಯ

Seeds For Men Sexual Power: ಪುರುಷರ ಲೈಂಗಿಕ ಶಕ್ತಿ ಹೆಚ್ಚಳಕ್ಕೆ ಈ ಬೀಜಗಳು ಪರಿಣಾಮಕಾರಿ!

Seeds For Men Sexual power: ಒಳ್ಳೆಯ ಆಹಾರ ಸೇವನೆ ಮಾಡುತ್ತಾ, ನಿಯಮಿತ ವ್ಯಾಯಾಮ ಮಾಡುತ್ತಾ ಆರೋಗ್ಯಕರ ಜೀವನ ನಡೆಸುವುದು ವಯಸ್ಸಿನ ಹಂಗಿಲ್ಲದೆ ಬಹಳ ಮುಖ್ಯವಾಗುತ್ತದೆ. ಹೀಗೆ ಪುರುಷರ ಆರೋಗ್ಯಕ್ಕೆ ಪೂರಕವಾಗಿರುವ ಅತ್ಯಂತ ಒಳ್ಳೆಯದನ್ನೇ ಮಾಡುವ ಆಹಾರಗಳ ಪೈಕಿ ಒಣಹಣ್ಣುಗಳು ಹಾಗೂ ಬೀಜಗಳ ಪಾತ್ರವೂ ದೊಡ್ಡದು. ಅದರಲ್ಲೂ, ಸಿಹಿಕುಂಬಳದ ಬೀಜ ಪುರುಷನ ಆರೋಗ್ಯದ ಬಹುದೊಡ್ಡ ಮಿತ್ರ. ಯಾವ ಮಿತ್ರನನ್ನು ಮರೆತರೂ,ಈ ಸಿಹಿಕುಂಬಳದ ಬೀಜಗಳನ್ನು ಮಾತ್ರ ಮರೆಯಬೇಡಿ! ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Seeds For Men Sexual Power
Koo

ಆರೋಗ್ಯದ ವಿಚಾರ ಬಂದಾಗ ಮಹಿಳೆಯರಷ್ಟೇ ಪುರುಷರೂ ಆರೋಗ್ಯದ ಕಾಳಜಿ ವಹಿಸಲೇಬೇಕು. ಏನೇನೂ ಕಾಳಜಿ ವಹಿಸದೆ, ನಮಗೇನಾಗಿದೆ, ನಾವು ಆರಾಮವಾಗಿದ್ದೇವೆ, 50 ವರ್ಷ ದಾಟಿದ ಮೇಲೆ ನೋಡಿಕೊಂಡರಾಯಿತು ಎಂದುಕೊಂಡರೆ, ಅದು ಖಂಡಿತ ನಿಮ್ಮ ಮೂರ್ಖತನ. ಒಳ್ಳೆಯ ಆಹಾರ ಸೇವನೆ ಮಾಡುತ್ತಾ, ನಿಯಮಿತ ವ್ಯಾಯಾಮ ಮಾಡುತ್ತಾ ಆರೋಗ್ಯಕರ ಜೀವನ ನಡೆಸುವುದು ವಯಸ್ಸಿನ ಹಂಗಿಲ್ಲದೆ ಬಹಳ ಮುಖ್ಯವಾಗುತ್ತದೆ. ಹೀಗೆ ಪುರುಷರ ಆರೋಗ್ಯಕ್ಕೆ ಪೂರಕವಾಗಿರುವ ಅತ್ಯಂತ ಒಳ್ಳೆಯದನ್ನೇ ಮಾಡುವ ಆಹಾರಗಳ ಪೈಕಿ ಒಣಹಣ್ಣುಗಳು ಹಾಗೂ ಬೀಜಗಳ ಪಾತ್ರವೂ ದೊಡ್ಡದು. ಅದರಲ್ಲೂ, ಸಿಹಿಕುಂಬಳದ ಬೀಜ ಪುರುಷನ ಆರೋಗ್ಯದ ಬಹುದೊಡ್ಡ ಮಿತ್ರ. ಯಾವ ಮಿತ್ರನನ್ನು ಮರೆತರೂ,ಈ ಸಿಹಿಕುಂಬಳದ ಬೀಜಗಳನ್ನು ಮಾತ್ರ ಮರೆಯಬೇಡಿ! ಬನ್ನಿ, ಈ ಬೀಜಗಳಿಂದ ಪುರುಷರ ಆರೋಕ್ಕಾಗುವ (Seeds For Men Sexual power) ಲಾಭಗಳನ್ನು ತಿಳಿಯೋಣ.

Sweet Couple During Sunset

ಪುರುಷರ ಲೈಂಗಿಕ ಆರೋಗ್ಯ ವೃದ್ಧಿ

ಪುರುಷರ ಲೈಂಗಿಕ ಆರೋಗ್ಯ ಹೆಚ್ಚಿಸುವಲ್ಲಿ ಈ ಬೀಜಗಳು ಮುಖ್ಯ ಕೊಡುಗೆ ನೀಡುತ್ತವೆ. ವಯಸ್ಸಾದಂತೆ ಕೆಲವರಿಗೆ ಆಗುವ ವೃಷಣದ ಹಿಗ್ಗುವುಕೆಯಿಂದಾಗಿ, ಮೂತ್ರವಿಸರ್ಜನೆಯ ಸಮಸ್ಯೆ ಉಂಟಾಗುತ್ತದೆ. ಈ ಸಮಸ್ಯೆಗೆ ಇದು ಅತ್ಯುತ್ತಮ ಪರಿಹಾರ ನೀಡುತ್ತದೆ. ವೃಷಣಗಳಿಗೆ ಶಕ್ತಿ ನೀಡಿ, ಲೈಂಗಿಕ ಹಾರ್ಮೋನಿನ ಉತ್ಪತ್ತಿಯನ್ನು ಸಮತೋಲನೆಗೊಳಿಸುತ್ತದೆ.

ವೀರ್ಯವೃದ್ಧಿ

ಸಿಹಿ ಕುಂಬಳದ ಬೀಜದಲ್ಲಿ ಝಿಂಕ್‌ ಸಾಕಷ್ಟು ಪ್ರಮಾಣದಲ್ಲಿ ಇರುವುದರಿಂದ ಇದು ವೀರ್ಯವೃದ್ಧಿಗೆ ಸಹಾಯ ಮಾಡುತ್ತದೆ. ವೀರ್ಯದ ಸಂಖ್ಯೆಯಲ್ಲಿ ಕೊರತೆ ಕಾಣವು ಮಂದಿಗೆ ಇದು ಅತ್ಯಂತ ಒಳ್ಳೆಯ ಆಹಾರ. ವೀರ್ಯದ ಗುಣಮಟ್ಟವನ್ನೂ ಹೆಚ್ಚಿಸಿ, ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಲೈಂಗಿಕ ಹಾರ್ಮೋನು ಟೆಸ್ಟೋಸ್ಟೀರಾನ್‌ ಉತ್ಪತ್ತಿಗೆ ಪ್ರಚೋದನೆ ನೀಡುತ್ತದೆ.

ಪ್ರೊಟೀನ್‌ ಮೂಲ

ನಾವು ಸೇವಿಸುವ ಪೋಷಕಾಂಶಗಳ ಜೊತೆಯಲ್ಲಿ ಪ್ರೊಟೀನ್‌ನ ಅಂಶ ಇರುವುದು ಅತ್ಯಂತ ಮುಖ್ಯ. ಪ್ರತಿ 100 ಗ್ರಾಂ ಬೀಜಗಳಲ್ಲಿ 23.3 ಗ್ರಾಂನಷ್ಟು ಪ್ರೊಟೀನ್‌ ಇದ್ದು ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಪೂರೈಕೆ ಮಾಡುತ್ತದೆ. ಹಾಗಾಗಿ, ಪ್ರೊಟೀನ್‌ ಮೂಲಗಳನ್ನು ನೀವು ಹುಡುಕುತ್ತಿದ್ದರೆ, ಇದೂ ಉತ್ತಮ ಆಯ್ಕೆ.

ಇದನ್ನೂ ಓದಿ: Empty Stomach Foods: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಉತ್ತಮ!

ಉತ್ತಮ ಕೊಬ್ಬು

ನೈಸರ್ಗಿಕ ಎಣ್ಣೆಯಂಶ ಹೊಂದರುವ ಉತ್ತಮ ಕೊಬ್ಬಿನ ಮೂಲ ಈ ಬೀಜಗಳು. ಅತಿಯಾದ ಸೇವನೆ ತೂಕ ಹೆಚ್ಚಿಸುವ ಸಾಧ್ಯತೆ ಇದ್ದರೂ, ನಿತ್ಯವೂ ಸ್ವಲ್ಪ ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯ ಲಾಭಗಳನ್ನು ಪಡೆಯಬಹುದು.

May aid heart health Peach Benefits

ಹೃದಯದ ಆರೋಗ್ಯಕ್ಕೆ

ಈ ಬೀಜಗಳಲ್ಲಿ ಪಾಸ್ಪರಸ್‌ ಹೆಚ್ಚಿರುವುದರಿಂದ ಪಚನಕ್ರಿಯೆಗೂ ಇದು ಒಳ್ಳೆಯದು. ಮೆಗ್ನೀಶಿಯಂ ಕೂಡಾ ಉತ್ತಮ ಪ್ರಮಾಣದಲ್ಲಿರುವುದರಿಂದ ಹೃದಯದ ಆರೋಗ್ಯಕ್ಕೆ ಇದು ಅತ್ಯಂತ ಒಳ್ಳೆಯದು. ಹೃದಯಕ್ಕೆ ರಕ್ತ ಪಂಪ್‌ ಮಾಡುವ ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೆ, ರಕ್ತನಾಳಗಳ ಶಕ್ತಿ ಸಾಮರ್ಥ್ಯವನ್ನೂ ಹೆಚ್ಚಿಸುತ್ತದೆ.

Image Of Mental Health

ಮಾನಸಿಕ ಆರೋಗ್ಯಕ್ಕೆ

ಮಾನಸಿಕ ಆರೋಗ್ಯಕ್ಕೂ ಇದು ಅತ್ಯಂತ ಒಳ್ಳೆಯದು. ಇದರಲ್ಲಿ ಟ್ರಿಪ್ಟೋಫನ್‌ ಹೆಚ್ಚಿರುವುದರಿಂದ ಖಿನ್ನತೆಗೂ ಇದು ಒಳ್ಳೆಯದು.

Continue Reading
Advertisement
David Warner
ಪ್ರಮುಖ ಸುದ್ದಿ8 mins ago

David Warner : ವಿಶ್ವ ಕಪ್​ನಿಂದ ಹೊರಬಿದ್ದ ಬೇಸರ; ಬಿಯರ್ ಕುಡಿತಾ ಕುಳಿತ ಆಸ್ಟ್ರೇಲಿಯಾದ ಆಟಗಾರರು

Fatty Lever Disease
ಆರೋಗ್ಯ8 mins ago

Fatty Lever Disease: ಎಚ್ಚರ ವಹಿಸಿ, ಮಕ್ಕಳನ್ನು ಸದ್ದಿಲ್ಲದೆ ಕಾಡುತ್ತಿದೆ ಫ್ಯಾಟಿ ಲಿವರ್‌ ಕಾಯಿಲೆ!

Karnataka Milk Federation
ಪ್ರಮುಖ ಸುದ್ದಿ1 hour ago

ವಿಸ್ತಾರ ಸಂಪಾದಕೀಯ: ಹಾಲು ದರ ಏರಿಕೆ ಬಳಕೆದಾರನಿಗೆ ಹೊರೆಯಾಗದಿರಲಿ

Dina Bhavishya
ಭವಿಷ್ಯ1 hour ago

Dina Bhavishya: ಈ ರಾಶಿಯವರಿಗೆ ದೀರ್ಘಕಾಲದ ಪ್ರಯತ್ನ ಇಂದು ಯಶಸ್ಸು ತಂದುಕೊಡಲಿದೆ

Women's Asia Cup
ಪ್ರಮುಖ ಸುದ್ದಿ7 hours ago

Women’s Asia Cup 2024 : ಮಹಿಳೆಯರ ಏಷ್ಯಾ ಕಪ್​ ಕ್ರಿಕೆಟ್​ನ ವೇಳಾಪಟ್ಟಿ ಬಿಡುಗಡೆ, ಜುಲೈ 19ಕ್ಕೆ ಭಾರತ- ಪಾಕ್ ಪಂದ್ಯ

minister mb patil visit japan and discuss about investment in Karnataka
ಕರ್ನಾಟಕ7 hours ago

Foreign Investment: 100 ಕೋಟಿ ರೂ. ವೆಚ್ಚದ ತ್ಯಾಜ್ಯ ನೀರು ನಿರ್ವಹಣಾ ಉಪಕರಣಗಳ ತಯಾರಿಕಾ ಘಟಕ ಸ್ಥಾಪನೆಗೆ ಒಪ್ಪಂದ

Arvind Kejriwal
ಪ್ರಮುಖ ಸುದ್ದಿ7 hours ago

Arvind Kejriwal : ಜಾಮೀನು ಅರ್ಜಿ ವಿಚಾರಣೆಗೂ ಮುನ್ನ ಅರವಿಂದ್ ಕೇಜ್ರಿವಾಲ್ ಬಂಧಿಸಿದ ಸಿಬಿಐ

Kodagu News
ಕೊಡಗು7 hours ago

Kodagu News: ಕಳೆದುಕೊಂಡಿದ್ದ ಚಿನ್ನದ ನಾಣ್ಯ ವಾರಸುದಾರನ ಕೈ ಸೇರುವಂತೆ ಮಾಡಿದ ಪೊಲೀಸರು!

Lok Sabha Speaker
ಪ್ರಮುಖ ಸುದ್ದಿ8 hours ago

Lok Sabha Speaker : ಸ್ಪೀಕರ್​ ಚುನಾವಣೆಯಲ್ಲಿ ವೈಎಸ್​ಆರ್​ ಪಕ್ಷದಿಂದ ಬಿಜೆಪಿಗೆ ಬೆಂಬಲ

Rahul Gandhi
ಪ್ರಮುಖ ಸುದ್ದಿ8 hours ago

Rahul Gandhi : ಲೋಕ ಸಭೆಯಲ್ಲಿ ಪ್ರತಿ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಆಯ್ಕೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ1 day ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ4 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ5 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ5 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌