ಹೆರಿಗೆ ನಂತರ ಬೆನ್ನುನೋವು ಕಾಡ್ತಿದೆಯೇ? ಇಲ್ಲಿದೆ ಕಾರಣ ಹಾಗೂ ಪರಿಹಾರೋಪಾಯಗಳು - Vistara News

ಆರೋಗ್ಯ

ಹೆರಿಗೆ ನಂತರ ಬೆನ್ನುನೋವು ಕಾಡ್ತಿದೆಯೇ? ಇಲ್ಲಿದೆ ಕಾರಣ ಹಾಗೂ ಪರಿಹಾರೋಪಾಯಗಳು

ಹೆರಿಗೆ ಸಮಯದಲ್ಲಿ ಹಾಗೂ ನಂತರ ಮಹಿಳೆಯರನ್ನು ಕಾಡುವ ಬೆನ್ನು ನೋವಿನ ಸಮಸ್ಯೆಗೆ ಕಾರಣಗಳೇನು ಹಾಗೂ ಪರಿಹಾರಗಳೇನು ಎಂಬ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೆರಿಗೆ ಅನ್ನುವುದು ಮಹಿಳೆಯರ ಬದುಕಿನಲ್ಲಿ ಬಂದು ಹೋಗುವ ಒಂದು ಅಮೂಲ್ಯ ಅಧ್ಯಾಯ. ಹುಡುಗಿಯಾಗಿದ್ದವಳು ತಾಯಿಯಾಗಿ ಬಡ್ತಿ ಪಡೆವ ಮರುಜನ್ಮ ಇದು. ನೋವಿನ ಮೂಲಕ ಹೊಸತೊಂದು ಜೀವಕ್ಕೆ ಜನ್ಮ ನೀಡುವ ಪ್ರಕೃತಿ ಸಹಜ ಕ್ರಿಯೆ ಇದು. ಇಂಥ ಭಾವನಾತ್ಮಕ ಅಂಶಗಳ ಜತೆಗೇ ಅದು ಕೆಲವೊಂದು ವಾಸ್ತವಿಕ ಸಂಕಟಗಳನ್ನೂ ಹೊತ್ತು ತರುತ್ತದೆ. ಅದರಲ್ಲಿ ಹೆರಿಗೆ ನಂತರದ ಬೆನ್ನು ನೋವು ಕೂಡಾ ಒಂದು.

ಸಿಸೇರಿಯನ್‌ ಆದ ಮಹಿಳೆಯರಲ್ಲಿ ಬೆನ್ನು ನೋವಿನ ಸಮಸ್ಯೆ ಸ್ವಲ್ಪ ಹೆಚ್ಚಿರುತ್ತದೆ. ಸಿಸೇರಿಯನ್‌ ಸಂದರ್ಭ ಕೊಡುವ ಅನಸ್ತೇಶಿಯಾದ ಅಡ್ಡ ಪರಿಣಾಮ ಇದು ಎಂಬುದು ಬಹುತೇಕರ ನಂಬಿಕೆ. ಆದರೆ ಇದು ತಪ್ಪು ಕಲ್ಪನೆ. ಹಾಗಾದರೆ, ಮಹಿಳೆಯರನ್ನು ಬಹಳವಾಗಿ ಕಾಡುವ ಈ ಬೆನ್ನುನೋವಿಗೆ ನಿಜವಾದ ಕಾರಣ ಏನು ಹಾಗೂ ಇದು ಶಾಶ್ವತವಾಗಿ ಉಳಿಯದಂತೆ ಆರಂಭದಲ್ಲೇ ಹೇಗೆ ಕಡಿಮೆ ಮಾಡಿಕೊಳ್ಳಬಹುದು ಎಂಬುದನ್ನು ತಿಳಿಯೋಣ.

ಮಹಿಳೆ ಗರ್ಭಿಣಿಯಾದಾಗ ಸಹಜವಾಗಿ ಆಕೆಯ ದೇಹದಲ್ಲಿ ಕೆಲವು ಬದಲಾವಣೆಗಳಾಗುತ್ತದೆ. ದೇಹದ ಕೆಲ ಭಾಗಗಳಲ್ಲಿ ಮುಖ್ಯವಾಗಿ ತನ್ನ ಸೊಂಟದ ಸುತ್ತ ಹಾಗೂ ಬೆನ್ನಿನ ಕೆಳಭಾಗದಲ್ಲಿ ಭಾರ ಹೆಚ್ಚಾಗುತ್ತದೆ. ಹೊಟ್ಟೆಯೊಳಗೆ ಮಗುವಿನ ಬೆಳವಣಿಗೆಯಾಗುತ್ತಿರುವುದರಿಂದ ಸೊಂಟದ ಮೇಲಿನ ಭಾರ ಹೆಚ್ಚಿ ನೋವಿಗೆ ಕಾರಣವಾಗುತ್ತದೆ. ಹೆರಿಗೆಯ ನಂತರ ಈ ಬೆನ್ನು ನೋವು ಹೆಚ್ಚಾಗಲು ಪ್ರಮುಖ ಕಾರಣಗಳಿವೆ.

ಇದನ್ನೂ ಓದಿ: ಬಾಯಿಗೆ ಖಾರವಾದ್ರೂ ಹಲವು ಕಾಯಿಲೆ ಗಳಿಂದ ಪಾರು ಮಾಡುವ ಮಸಾಲೆ ಕಿಂಗ್‌ ಕರಿಮೆಣಸು

ಗರ್ಭಿಣಿ ಆಗಿದ್ದಾಗ ೯ ತಿಂಗಳ ಕಾಲ ದೇಹದಲ್ಲಿ ಸಾಕಷ್ಟು ಬದಲಾವಣೆಗಳು ನಡೆಯುತ್ತವೆ. ಹೊಟ್ಟೆಯನ್ನು ಆಧರಿಸಿಕೊಳ್ಳುವ ಹೊತ್ತಿನಲ್ಲಿ ಬೆನ್ನಿನ ಮೇಲೆ ಹೆಚ್ಚು ಭಾರ ಬಿದ್ದು ಆ ಭಾಗ ದುರ್ಬಲವಾಗುತ್ತದೆ. ಆದರೆ ಒಮ್ಮೆ ಮಗು ಜನಿಸಿದ ನಂತರ ಮಗುವಿನ ಕಾಳಜಿ, ತಾಯಿಯಾದ ಸಂಭ್ರಮದ ಆರಂಭದ ದಿನಗಳಲ್ಲಿ ತಾಯಿಯ ದೇಹದ ಒಳಗೆ ಆಗುವ/ಆದ ಬದಲಾವಣೆಗಳಿಗೆ ಹೆಚ್ಚಾಗಿ ಗಮನ ನೀಡಲಾಗುವುದಿಲ್ಲ. ಇದ್ದಕ್ಕಿದ್ದಂತೆ ಹೆಚ್ಚಿದ ಜವಾಬ್ದಾರಿ, ಮಗುವಿನ ಲಾಲನೆ ಪಾಲನೆಗಳಲ್ಲಿ ತಾಯಿಗೆ ನಿಜವಾಗಿ ಸಿಗಬೇಕಾದ ವಿಶ್ರಾಂತಿ ಸಿಗುವುದಿಲ್ಲ. ದುರ್ಬಲವಾದ ಬೆನ್ನಿಗೆ ಬೇಕಾದ ಕಾಳಜಿಯೂ ದೊರೆಯುವುದಿಲ್ಲ. ಹೀಗಾಗಿ ಈ ಬೆನ್ನುನೋವಿನ ಸಮಸ್ಯೆ ಶಾಶ್ವತ ಸಮಸ್ಯೆಯಾಗಿ ಹಲವರನ್ನು ಕಾಡುತ್ತದೆ.

ಗರ್ಭಾವಸ್ಥೆ ಸಮಯದಲ್ಲಿ ಪೌಷ್ಟಿಕ ಆಹಾರ ಸೇವನೆ ಮಾಡಬೇಕು

ಮಗುವಿಗೆ ಪದೇಪದೆ ಗಂಟೆಗಟ್ಟಲೆ ಹಾಲುಣಿಸುವುದು, ರಾತ್ರಿಯ ಹೊತ್ತು ಆಗಾಗ ಏಳುವುದು ಮತ್ತಿತರ ಕಾರಣಗಳಿಂದ ಕುಳಿತಿರಬೇಕಾದ ಸಂದರ್ಭ ಆಕೆಗೆ ಹೆಚ್ಚು ಇರುವುದರಿಂದ ಇದು ಬೆನ್ನು ನೋವು ಉಲ್ಬಣಿಸಲು ಕಾರಣವಾಗುತ್ತದೆ.

ಮಗುವಿಗೆ ಹಾಲುಣಿಸುವ ಸಂದರ್ಭ ಸಪೋರ್ಟ್‌ಗಾಗಿ ಸೊಂಟದ ಸುತ್ತ ದಿಂಬು ಬಳಸಬಹುದು. ಆಗ ಬೆನ್ನಿನ ಮೇಲೆ ಹೆಚ್ಚು ಭಾರ ಬೀಳುವುದಿಲ್ಲ. ಬಾಣಂತಿ ಮಲಗಿಕೊಂಡೇ ಇರಬೇಕು ಎಂಬುದು ಹಳೇ ನಂಬಿಕೆ. ಸಿಸೇರಿಯನ್‌ ಆದ ಮಹಿಳೆಯರು ೧೫ ದಿನಗಳ ನಂತರ ಬೆಲ್ಟ್‌ ಧರಿಸಲು ಆರಂಭಿಸಬಹುದು. ಇದರಿಂದ ಬೆನ್ನಿನ ಕೆಳ ಭಾಗ ಹಾಗೂ ಸೊಂಟಕ್ಕೆ ಆಧಾರ ದೊರಕುತ್ತದೆ. ಆಕೆ ಸಣ್ಣಪುಟ್ಟ ನಿಂತು ಮಾಡಬಹುದಾದ ಕೆಲಸಗಳು, ವಾಕಿಂಗ್‌ ಇತ್ಯಾದಿಗಳನ್ನು ೧೫ ದಿನಗಳ ನಂತರ ಆರಂಭಿಸಬಹುದು.

ಹೆಚ್ಚು ಹೊತ್ತು ನಿಲ್ಲುವುದು, ತಪ್ಪಾದ ಭಂಗಿಯಲ್ಲಿ ಕೂರುವುದು, ಮಗುವನ್ನು ತಪ್ಪುತಪ್ಪಾಗಿ ಹಿಡಿಯುವುದು ಕೂಡಾ ಇದಕ್ಕೆ ಕಾರಣವಿರಬಹುದು. ಹಾಗಾಗಿ ಇವೆಲ್ಲವುಗಳ ಬಗ್ಗೆಯೂ ಗಮನವಿರಲಿ.
ಒಂದು ನಿಗದಿತ ಸಮಯ ಪ್ರತಿನಿತ್ಯ ಬಾಣಂತಿ ಸರಳವಾದ ವ್ಯಾಯಾಮ, ವಾಕಿಂಗ್‌, ಯೋಗ ಮಾಡುವ ಮೂಲಕ ಬೆನ್ನು ನೋವಿನ ಸಮಸ್ಯೆಗೆ ತಕ್ಕಮಟ್ಟಿನ ಪರಿಹಾರ ಕಂಡುಕೊಳ್ಳಬಹುದು.

ಇದನ್ನೂ ಓದಿ: ದೇಶದ ಕಾಲು ಭಾಗ ಗರ್ಭಪಾತಗಳು ಮನೆಯಲ್ಲೇ ನಡೆಯುತ್ತವೆ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಬೆಂಗಳೂರು

World Heart Day: ಹೃದಯ ಕವಾಟ ಅಸ್ವಸ್ಥತೆ ಹೊಂದಿರುವ ರೋಗಿಗಳ ಪಾಲಿಗೆ ನವೀನ ತಂತ್ರಜ್ಞಾನಗಳು ವರದಾನ

World Heart Day : ನವೀನ ತಂತ್ರಜ್ಞಾನಗಳು ಹೃದಯ ಕವಾಟ ಅಸ್ವಸ್ಥತೆ ಹೊಂದಿರುವ
ರೋಗಿಗಳ ಪಾಲಿಗೆ ಕ್ರಾಂತಿಕಾರಿ ಆಗಿದೆ ಎಂದು ʻನಾರಾಯಣ ಇನ್ಸ್‌ಟಿಟ್ಯೂಟ್‌ ಆಫ್ ಕಾರ್ಡಿಯಾಕ್ ಸೈನ್ಸಸ್‌ʼನ ಹಿರಿಯ ಸಲಹೆಗಾರರಾದ ಡಾ.ಸಂಜಯ್ ಮೆಹ್ರೋತ್ರ ತಿಳಿಸಿದ್ದಾರೆ.

VISTARANEWS.COM


on

By

Innovative technologies have revolutionized patients with heart valve disorder
Koo

ಬೆಂಗಳೂರು: ಭಾರತದಲ್ಲಿ ಹೃದಯರಕ್ತನಾಳದ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಸರ್ವರ ಹೃದಯ ಆರೋಗ್ಯ ಸುಧಾರಣೆಗಾಗಿ ವೈದ್ಯಕೀಯ ಚಿಕಿತ್ಸೆಗಳನ್ನು ವಿಸ್ತರಿಸುವ ಅಗತ್ಯವನ್ನು ಒತ್ತಿ ಹೇಳಬೇಕಾದ ಪ್ರಾಮುಖ್ಯತೆ ಇತ್ತೀಚೆಗೆ ಹೆಚ್ಚುತ್ತಿದೆ. ಈ ವರ್ಷದ ವಿಶ್ವ ಹೃದಯ ದಿನವನ್ನು (World Heart Day) – “ಕ್ರಿಯಾಶೀಲರಾಗಿ ಹೃದಯವನ್ನು ಬಳಸಿ” ಎಂಬ ವಿಷಯಾಧಾರಿತವಾಗಿ ಆಚರಿಸಲಾಗುತ್ತಿದೆ. ಇದು ತಮ್ಮ ಹೃದಯದ ಆರೋಗ್ಯ ಮೇಲ್ವಿಚಾರಣೆಗಾಗಿ ಸಕ್ರಿಯ ಕ್ರಮಗಳನ್ನು ತೆಗೆದುಕೊಳ್ಳಲು ಜನರನ್ನು ಪ್ರೋತ್ಸಾಹಿಸುತ್ತದೆ. ʻನಾರಾಯಣ ಇನ್ಸ್‌ಟಿಟ್ಯೂಟ್‌ ಆಫ್ ಕಾರ್ಡಿಯಾಕ್ ಸೈನ್ಸಸ್‌ʼನ ಹಿರಿಯ ಸಲಹೆಗಾರರಾದ ಡಾ.ಸಂಜಯ್ ಮೆಹ್ರೋತ್ರ ಅವರು ಸಹ ತಮ್ಮ ಮಾತುಗಳಲ್ಲಿ ಇದನ್ನೇ ಒತ್ತಿ ಹೇಳಿದರು.

ಹೃದಯರಕ್ತನಾಳದ ಕಾಯಿಲೆಗಳು ಹೃದಯ ಮತ್ತು ರಕ್ತನಾಳಗಳ ಮೇಲೆ ಪರಿಣಾಮ ಬೀರುವ ಹಲವಾರು ಪರಿಸ್ಥಿತಿಗಳನ್ನು ಒಳಗೊಂಡಿರುತ್ತವೆ. ಇದರಲ್ಲಿ ʻಕರೋನರಿ ಆರ್ಟಿಲರಿ ಡಿಸೀಜ್‌ʼ(ಹೃದಯದ ಧಮನಿಗಳಲ್ಲಿ ಕೊಬ್ಬು ಶೇಖರಣೆಯಿಂದ ಅಡಚಣೆ), ಹೃದಯ ವೈಫಲ್ಯ, ʻಅರಿಥ್ಮಿಯಾಸ್ʼ (ಅನಿಯಮಿತ ಹೃದಯಬಡಿತ) ಮತ್ತು ʻಅಯೋರ್ಟಿಕ್ ಸ್ಟೆನೋಸಿಸ್‌ʼನಂತಹ ಹೃದಯ ಕವಾಟ ಕಾಯಿಲೆಗಳು ಸೇರಿವೆ. ಇವುಗಳ ಪ್ರತಿ ಕಾಯಿಲೆಯ ವಿಧವೂ ಎದೆ ನೋವು, ಉಸಿರಾಟದ ತೊಂದರೆ ಮತ್ತು ಆಯಾಸದಂತಹ ತನ್ನದೇ ಆದ ಸವಾಲುಗಳು ಮತ್ತು ರೋಗಲಕ್ಷಣಗಳನ್ನು ಒಳಗೊಂಡಿರುತ್ತದೆ. ಈ ಪರಿಸ್ಥಿತಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಮಯೋಚಿತ ರೋಗಪತ್ತೆ ಮತ್ತು ಚಿಕಿತ್ಸೆ ನಿರ್ಣಾಯಕವಾಗಿದೆ.

Innovative technologies have revolutionized patients with heart valve disorder
Innovative technologies have revolutionized patients with heart valve disorder

“ಇತ್ತೀಚೆಗೆ, ನಾನು ಅನಿಲ್ (ಹೆಸರು ಬದಲಾಯಿಸಲಾಗಿದೆ) ಎಂಬ ಹಿರಿಯ ವ್ಯಕ್ತಿಗೆ ಚಿಕಿತ್ಸೆ ನೀಡಿದೆ. ಅವರು ಈ ಹಿಂದೆ ತುಂಬಾ ಸಕ್ರಿಯರಾಗಿದ್ದರು, ಉತ್ತಮ ಆರೋಗ್ಯವನ್ನು ಹೊಂದಿದ್ದರು. ಆದಾಗ್ಯೂ, ತೋಟಗಾರಿಕೆ ಮತ್ತು ಮನೆಯ ಸುತ್ತಲೂ ನಡೆಯುವಂತಹ ಸರಳ ಚಟುವಟಿಕೆಗಳ ಸಮಯದಲ್ಲೂ ಅವರಿಗೆ ಉಸಿರಾಟದ ತೊಂದರೆ ಆರಂಭವಾಯಿತು. ಮಲಗಿರುವಾಗ ಉಸಿರಾಟದ ತೊಂದರೆಯಿಂದಾಗಿ ನಿದ್ರೆ ಮಾಡಲು ಹೆಣಗಾಡುವ ಮಟ್ಟಕ್ಕೆ ಅವರ ಸ್ಥಿತಿ ಹದಗೆಟ್ಟಿತು. ಒಂದು ದಿನ, ಅವರು ಮೆಟ್ಟಿಲುಗಳನ್ನು ಇಳಿಯುವಾಗ ಕುಸಿದುಬಿದ್ದರು. ಆಸ್ಪತ್ರೆಗೆ ದಾಖಲಿಸಿದ ನಂತರ, ಅನಿಲ್ ಅವರಿಗೆ ʻಅಯೋರ್ಟಿಕ್ ಸ್ಟೆನೋಸಿಸ್ʼ ಇರುವುದು ಪತ್ತೆಯಾಯಿತು.

ಇದು ಹೃದಯದ ಕವಾಟಗಳ ಪೈಕಿ ಒಂದು ಕವಾಟವು ಕಿರಿದಾಗುವ ಸ್ಥಿತಿ. ಹೃದಯದ ಕಾರ್ಯವನ್ನು ಪೂರ್ವ ಸ್ಥಿತಿಗೆ ಪುನಃಸ್ಥಾಪಿಸಲು, ಅನಿಲ್ ಅವರು ʻಟ್ರಾನ್ಸ್ ಕ್ಯಾಥೆಟರ್ ಅಯೋರ್ಟಿಕ್ ವಾಲ್ವ್ ಇಂಪ್ಲಾಂಟೇಶನ್ʼ(ಟಿಎವಿಐ) ಎಂಬ ಕಾರ್ಯವಿಧಾನಕ್ಕೆ ಒಳಗಾದರು. ಗಮನಾರ್ಹ ವಿಷಯವೆಂದರೆ, ಮರುದಿನವೇ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು ಮತ್ತು ಶೀಘ್ರದಲ್ಲೇ ತಮ್ಮ ಸಾಮಾನ್ಯ ದೈನಂದಿನ ಚಟುವಟಿಕೆಗಳನ್ನು ಪುನರಾರಂಭಿಸಿದರು,” ಎಂದು ನಾರಾಯಣ ಇನ್ಸ್‌ಟಿಟ್ಯೂಟ್ ಆಫ್ ಕಾರ್ಡಿಯಾಕ್ ಸೈನ್ಸ್‌ʼನ ಹಿರಿಯ ಸಲಹೆಗಾರ ಡಾ.ಸಂಜಯ್ ಮೆಹ್ರೋತ್ರ ವಿವರಿಸಿದರು.

ʻಅಯೋರ್ಟಿಕ್ ಸ್ಟೆನೋಸಿಸ್ʼ(ಎಎಸ್) ಸಮಸ್ಯೆಗೆ ಚಿಕಿತ್ಸೆಯು ಅದರ ತೀವ್ರತೆ ಮತ್ತು ರೋಗಲಕ್ಷಣಗಳನ್ನು ಅವಲಂಬಿಸಿರುತ್ತದೆ. ಲಕ್ಷಣರಹಿತ ಅಥವಾ ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳಿಗೆ, ತೊಡಕುಗಳ ಅಪಾಯವನ್ನು ಕಡಿಮೆ ಮಾಡಲು ವೈದ್ಯರು ಔಷಧ ಅಥವಾ ಜೀವನಶೈಲಿ ಬದಲಾವಣೆಗಳನ್ನು ಶಿಫಾರಸು ಮಾಡಬಹುದು. ಆಗಾಗ್ಗೆ ವೈದ್ಯರ ಭೇಟಿ ಮತ್ತು ಪರೀಕ್ಷೆಗಳ ಮೂಲಕ ನಿಯಮಿತ ಮೇಲ್ವಿಚಾರಣೆಗೆ ಸಲಹೆ ನೀಡಬಹುದು.

ಇದನ್ನೂ ಓದಿ: Breast cancer : ಸ್ತನ ಕ್ಯಾನ್ಸರ್‌ ರೋಗಿಗೆ ರೊಬೋಟ್‌ ನೆರವಿನಿಂದ ತನ್ನದೆ ದೇಹದ ಮತ್ತೊಂದು ಭಾಗ ಬಳಸಿ ಸ್ತನ ಪುನರ್‌ ನಿರ್ಮಾಣ; ಫೋರ್ಟಿಸ್‌ ಆಸ್ಪತ್ರೆ ವೈದ್ಯರ ಯಶಸ್ವಿ ಶಸ್ತ್ರಚಿಕಿತ್ಸೆ

ಆದಾಗ್ಯೂ, ತೀವ್ರವಾದ ʻಎಎಸ್ʼ ಸಮಸ್ಯೆಗೆ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ. ತಾಂತ್ರಿಕ ಪ್ರಗತಿಗಳು ಕಳೆದ ದಶಕದಲ್ಲಿ ʻಟಿಎವಿಐʼ ಅನ್ನು ಸುರಕ್ಷಿತ ಮತ್ತು ಹೆಚ್ಚು ಪರಿಣಾಮಕಾರಿಯಾಗಿಸಿವೆ. ಕಡಿಮೆ ಸಮಯ ಆಸ್ಪತ್ರೆಯಲ್ಲಿ ಉಳಿಯುವುದು, ಕಡಿಮೆ ನೋವು, ಕಡಿಮೆ ರಕ್ತ ನಷ್ಟ, ಕಡಿಮೆ ಸೋಂಕುಗಳು ಮತ್ತು ಕ್ಷಿಪ್ರ ಚೇತರಿಕೆಯಂತಹ ಪ್ರಯೋಜನಗಳನ್ನು ನೀಡುತ್ತವೆ. ಕಾರ್ಯವಿಧಾನದ ಮರುದಿನ ರೋಗಿಗಳು ಸಾಮಾನ್ಯವಾಗಿ ತಮ್ಮ ಸಾಮಾನ್ಯ ಚಟುವಟಿಕೆಗಳಿಗೆ ಮರಳಬಹುದು. ಸಂಶೋಧಕರು ಕವಾಟಗಳನ್ನು ಹೆಚ್ಚು ಕಾಲ ಉಳಿಯುವಂತೆ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ. ಕಿರಿಯ ವ್ಯಕ್ತಿಗಳು ಸೇರಿದಂತೆ ಹೆಚ್ಚಿನ ರೋಗಿಗಳಿಗೆ ʻಟಿಎವಿಐʼ ಆಯ್ಕೆಗಳನ್ನು ವಿಸ್ತರಿಸುವ ನಿಟ್ಟಿನಲ್ಲೂ ಕೆಲಸ ನಡೆಯುತ್ತಿದೆ.

ವೈದ್ಯಕೀಯ ಆರೈಕೆಯಲ್ಲಿ ಎಷ್ಟೆಲ್ಲಾ ಪ್ರಗತಿಯ ಹೊರತಾಗಿಯೂ, ಯುವ ಜನರಲ್ಲಿ ಹೃದಯರಕ್ತನಾಳದ ಕಾಯಿಲೆಗಳು ಹೆಚ್ಚಾಗುತ್ತಿರುವುದು ಕಂಡುಬರುತ್ತಿದೆ. ಈ ಹೆಚ್ಚುತ್ತಿರುವ ಹೃದ್ರೋಗದ ವ್ಯಾಪ್ತಿಯು ನಿರಂತರ ಜಾಗರೂಕತೆ ಮತ್ತು ತಡೆಗಟ್ಟುವ ಕ್ರಮಗಳ ಅಗತ್ಯವನ್ನು ಒತ್ತಿಹೇಳುತ್ತದೆ. ಹೃದಯರಕ್ತನಾಳದ ಕಾಯಿಲೆಗಳು ಮತ್ತು ಆರಂಭಿಕ ಮಧ್ಯಸ್ಥಿಕೆಯ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ವಿಶೇಷವಾಗಿ ಅಧಿಕ ರಕ್ತದೊತ್ತಡ ಅಥವಾ ಮಧುಮೇಹದಂತಹ ಅಪಾಯದ ಅಂಶಗಳನ್ನು ಹೊಂದಿರುವವರಿಗೆ ನಿಯಮಿತ ಪರೀಕ್ಷೆ ಮತ್ತು ತಪಾಸಣೆಗಳು ಅತ್ಯಗತ್ಯ ಎಂದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Breast cancer : ಸ್ತನ ಕ್ಯಾನ್ಸರ್‌ ರೋಗಿಗೆ ರೊಬೋಟ್‌ ನೆರವಿನಿಂದ ತನ್ನದೆ ದೇಹದ ಮತ್ತೊಂದು ಭಾಗ ಬಳಸಿ ಸ್ತನ ಪುನರ್‌ ನಿರ್ಮಾಣ; ಫೋರ್ಟಿಸ್‌ ಆಸ್ಪತ್ರೆ ವೈದ್ಯರ ಯಶಸ್ವಿ ಶಸ್ತ್ರಚಿಕಿತ್ಸೆ

Breast cancer : ಸ್ತನಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಹಿಳೆಗೆ ತನ್ನದೇ ದೇಹದ ಮತ್ತೊಂದು ಭಾಗ ಬಳಸಿಕೊಂಡು ರೊಬೋಟ್‌ ಸಹಾಯದ ಮೂಲಕ ಯಶಸ್ವಿಯಾಗಿ ಸ್ತನವನ್ನು ಪುನರ್‌ ನಿರ್ಮಿಸಲಾಗಿದೆ.

VISTARANEWS.COM


on

By

Breast cancer
Koo

ಬೆಂಗಳೂರು: ಮೂರನೇ ಹಂತದ ಸ್ತನಕ್ಯಾನ್ಸರ್‌ನಿಂದ (Breast cancer) ಬಳಲುತ್ತಿದ್ದ 38 ವರ್ಷದ ಮಹಿಳೆಗೆ ದೇಶದಲ್ಲೇ ಮೊದಲ ಬಾರಿಗೆ ತನ್ನದೇ ದೇಹದ ಮತ್ತೊಂದು ಭಾಗವನ್ನು ಬಳಸಿಕೊಂಡು ರೊಬೋಟ್‌ ಸಹಾಯದ ಮೂಲಕ ಯಶಸ್ವಿಯಾಗಿ ಸ್ತನವನ್ನು ಪುನರ್‌ ನಿರ್ಮಿಸಲಾಗಿದೆ. ಬನ್ನೇರುಘಟ್ಟ ರಸ್ತೆ ಫೋರ್ಟಿಸ್‌ ಆಸ್ಪತ್ರೆಯ ಆಂಕೊಲಾಜಿ ಮತ್ತು ರೊಬೊಟಿಕ್ ಮತ್ತು ಲ್ಯಾಪರೊಸ್ಕೋಪಿಕ್ ಸರ್ಜರಿ ವಿಭಾಗದ ನಿರ್ದೇಶಕ ಡಾ. ಸಂದೀಪ್ ನಾಯಕ್ ಪಿ ಅವರ ವೈದ್ಯ ತಂಡ ಈ ಸಾಧನೆ ಮಾಡಿದೆ.

ಈ ಕುರಿತು ಮಾತನಾಡಿದ ಡಾ. ಸಂದೀಪ್‌ ನಾಯಕ್‌ ಪಿ., 38 ವರ್ಷದ ರೇಹಾ (ಹೆಸರು ಬದಲಿಸಲಾಗಿದೆ) ಎಂಬುವವರಿಗೆ ಎಡ ಸ್ತನದ ಕ್ಯಾನ್ಸರ್‌ ಮೂರನೇ ಹಂತಕ್ಕೆ ತಲುಪಿತ್ತು. ಇವರಿಗೆ ಸಣ್ಣ ಮಗುವಿದ್ದು, ಹಾಲುಣಿಸುತ್ತಿದ್ದರು. ಸ್ತನ ಕ್ಯಾನ್ಸರ್‌ ಮೂರನೇ ಹಂತ ತಲುಪಿದ್ದರಿಂದ ಹಾಲುಣಿಸುವುದು ಸಹ ಕಷ್ಟಕರವಾಗಿತ್ತು. ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದ ಅವರಿಗೆ ಸ್ತನ ಕ್ಯಾನ್ಸರ್‌ ಮೂರನೇ ಹಂತಕ್ಕೆ ತಲುಪಿರುವುದು ತಿಳಿದು ಬಂತು. ಕೂಡಲೇ ಅವರಿಗೆ ಕಿಮೊಥೆರಪಿ ಕೋರ್ಸ್‌ ಪೂರ್ಣಗೊಳಿಸುವಂತೆ ಸಲಹೆ ನೀಡಿದೆವು. ಅದರಂತೆ ಅವರು ಕಿಮೊಥೆರಪಿ ತೆಗೆದುಕೊಂಡರು.

ಆದರೆ, ಅವರಿಗೆ ತಮ್ಮ ಸ್ತನ ಪುನರ್‌ ನಿರ್ಮಾಣದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದರಿಂದ ಅವರಿಗೆ ವಿನೂತನ ಶಸ್ತ್ರಚಿಕಿತ್ಸೆಯಾದ ರೊಬೊಟಿಕ್-ಸಹಾಯದ ನಿಪ್ಪಲ್ ಸ್ಪೇರಿಂಗ್ ಸ್ತನಛೇದನ ಮತ್ತು LD ಫ್ಲಾಪ್ ಪುನರ್‌ ನಿರ್ಮಾಣದ ಸಲಹೆ ನೀಡಿದೆವು. ಅದರಂತೆ, ಕ್ಯಾನ್ಸರ್‌ ಪೀಡಿತ ಸ್ತನ ಅಂಗಾಂಶವನ್ನು ತೆಗೆದುಹಾಕಿದ ನಂತರ, ನಾವು ರೋಬೋಟಿಕ್ ನೆರವಿನ LD ಫ್ಲಾಪ್ ಪುನರ್‌ ನಿರ್ಮಾಣದ ಮೂಲಕ ರೋಗಿಯ ಹಿಂಭಾಗದಿಂದ ತೆಗೆದ ಅಂಗಾಂಶವನ್ನು ಬಳಸಿಕೊಂಡು ಸ್ತನವನ್ನು ಪುನರ್ನಿರ್ಮಿಸಿದ್ದೇವೆ.

ಈ ವಿಧಾನವು ಕನಿಷ್ಠ ಆಕ್ರಮಣಕಾರಿಯಾಗಿದ್ದು, ತ್ವರಿತವಾಗಿ ಚೇತರಿಸಿಕೊಳ್ಳಲು ಸಹಕಾರಿಯಾಗಲಿದೆ. ಸಾಂಪ್ರದಾಯಿಕ ವಿಧಾನಗಳಿಗೆ ಹೋಲಿಸಿದರೆ ರೋಬೋಟ್‌ ಸಹಾಯದಿಂದ ನಡೆಸಿದ ಸ್ತನ ಮರುನಿರ್ಮಾಣ ಶಸ್ತ್ರಚಿಕಿತ್ಸೆಯು ಹೆಚ್ಚು ಪರಿಣಾಮಕಾರಿ. ಅಷ್ಟೇ ಅಲ್ಲದೆ, ದೇಶದಲ್ಲೇ ಮೊದಲ ಬಾರಿಗೆ ತಮ್ಮ ದೇಹದ ಭಾಗವನ್ನೇ ಬಳಸಿಕೊಂಡು ಸ್ತನವನ್ನು ನೈಸರ್ಗಿಕವಾಗಿ ರೋಬೋಟ್‌ ಸಹಾಯದ ಮೂಲಕ ಮರುನಿರ್ಮಾಣದ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈ ಕಾರ್ಯ ವಿಧಾನದಲ್ಲಿ ಫೋರ್ಟಿಸ್ ಆಸ್ಪತ್ರೆಯ ಡಾ ಅಮೀನುದ್ದೀನ್ ಖಾನ್ ಮತ್ತು ಡಾ ಭರತ್ ಜಿ ಅವರ ಸಹಕಾರ ಪ್ರಶಂಸನೀಯ. ಪ್ರಸ್ತುತ ರೋಗಿಯು ಆರೋಗ್ಯವಾಗಿದ್ದಾರೆ ಎಂದು ವಿವರಿಸಿದರು.

ಇದನ್ನೂ ಓದಿ: Siddhagiri Hospital : ರೋಗಿ ಕೊಳಲು ನುಡಿಸುವಾಗಲೇ ಮೆದುಳು ಶಸ್ತ್ರಚಿಕಿತ್ಸೆ; ಸಿದ್ದಗಿರಿ ಆಸ್ಪತ್ರೆ ವೈದ್ಯರ ಕಾರ್ಯಕ್ಕೆ ಮೆಚ್ಚುಗೆ

ಅತ್ಯಾಧುನಿಕ ತಂತ್ರಜ್ಞಾನವಾದ “ಡಾ ವಿನ್ಸಿ ಕ್ಸಿ” ರೋಬೋಟ್ ಮೂಲಕ ಮೂತ್ರಕೋಶ ಶಸ್ತ್ರಚಿಕಿತ್ಸೆ

ಬೆಂಗಳೂರು: ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನದಲ್ಲಿಯೇ ಮುಂಚೂಣಿಯಲ್ಲಿರುವ “ಡಾ ವಿನ್ಸಿ ಕ್ಸಿ (Da Vinci Xi)” ರೋಬೋಟ್‌ ಮೂಲಕ ಬನ್ನೇರುಘಟ್ಟ ಫೋರ್ಟಿಸ್‌ ಆಸ್ಪತ್ರೆಯು ಮೂತ್ರಕೋಶಕ್ಕೆ ಸಂಬಂಧಿಸಿದ 1000 ಸರ್ಜರಿಯನ್ನು ಯಶಸ್ವಿಯಾಗಿ ಪೂರೈಸಿದೆ. ಇದೇ ತಂತ್ರಜ್ಞಾನವನ್ನು ಕನ್ನಿಂಗ್‌ಹ್ಯಾಮ್‌ ರಸ್ತೆಯ ಫೋರ್ಟಿಸ್‌ ಆಸ್ಪತ್ರೆಯಲ್ಲೂ ಪ್ರಾರಂಭಿಸಲಾಗುತ್ತಿದೆ.

ಈ ಕುರಿತು ಮಾತನಾಡಿದ ಫೋರ್ಟಿಸ್‌ ಆಸ್ಪತ್ರೆಯ ಮೂತ್ರಶಾಸ್ತ್ರ, ಯುರೋ-ಆಂಕೊಲಾಜಿ ವಿಭಾಗದ ನಿರ್ದೇಶಕ ಡಾ. ಮೋಹನ್ ಕೇಶವಮೂರ್ತಿ, 2018ರಲ್ಲಿ ಮೊದಲ ಬಾರಿಗೆ ಬನ್ನೇರುಘಟ್ಟ ಫೋರ್ಟಿಸ್‌ ಆಸ್ಪತ್ರೆಯಲ್ಲಿ “ಡಾ ವಿನ್ಸಿ ಕ್ಸಿ” ರೋಬೋಟಿಕ್‌ ಶಸ್ತ್ರಚಿಕಿತ್ಸಾ ವ್ಯವಸ್ಥೆಯನ್ನು ಪ್ರಾರಂಭಿಸಲಾಯಿತು. ಅದಾದ 79 ತಿಂಗಳುಗಳಲ್ಲಿ ಬರೋಬ್ಬರಿ 1 ಸಾವಿರಕ್ಕೂ ಹೆಚ್ಚು ರೊಬೊಟಿಕ್ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ.

ಈ ಅತ್ಯಾಧುನಿಕ ತಂತ್ರಜ್ಞಾನದ ರೋಬೋಟಿಕ್‌ ಮೂಲಕ ಯುರೋ-ಆಂಕೊಲಾಜಿ, ಯುರೋ-ಗೈನಕಾಲಜಿ, ಮೂತ್ರಶಾಸ್ತ್ರ, ಮತ್ತು ಕಿಡ್ನಿ ಟ್ರಾನ್ಸ್‌ಪ್ಲಾಂಟೇಶನ್‌ ನಂತಹ ಸಂಕೀರ್ಣ ಕಾರ್ಯವಿಧಾನಗಳ ಶಸ್ತ್ರಚಿಕಿತ್ಸೆಯನ್ನು ಅತಿ ಸುಲಭ ಹಾಗೂ ನಿಖರವಾಗಿ ಮಾಡಲಾಗಿದೆ. ಡಾ ವಿನ್ಸಿ ಕ್ಸಿ ರೋಬೋಟ್ ಮೂಲಕ ನಡೆಸಲಾದ ಶಸ್ತ್ರಚಿಕಿತ್ಸೆಗಳಲ್ಲಿ 92 ರೋಬೋಟಿಕ್ ಕಿಡ್ನಿ ಟ್ರಾನ್ಸ್‌ಪ್ಲಾಂಟ್‌, 398 ನರ-ಸ್ಪೇರಿಂಗ್ ರೋಬೋಟಿಕ್ ರಾಡಿಕಲ್ ಪ್ರಾಸ್ಟೇಟೆಕ್ಟಮಿ, 282 ರೋಬೋಟಿಕ್ ಕಾಂಪ್ಲೆಕ್ಸ್ ಪಾರ್ಶಿಯಲ್ ನೆಫ್ರೆಕ್ಟಮಿಗಳು ಮತ್ತು 54 ಪೀಡಿಯಾಟ್ರಿಕ್ ರೋಬೋಟಿಕ್ ಕಾರ್ಯವಿಧಾನಗಳು ಸೇರಿವೆ.

ಡಾ ವಿನ್ಸಿ ಎಕ್ಸ್ ಒಂದು ಅತ್ಯಾಧುನಿಕ ರೋಬೋಟಿಕ್ ಶಸ್ತ್ರಚಿಕಿತ್ಸಾ ವಿಧಾನವಾಗಿದ್ದು, ರೋಬೋಟ್‌ ಮೂಲಕ ನಿಖರವಾಗಿ ಯಾವುದೇ ರೀತಿಯ ಶಸ್ತ್ರಚಿಕಿತ್ಸೆಯನ್ನೂ ಮಾಡಬಹುದು. ಅಷ್ಟೇ ಅಲ್ಲದೆ, ಈ ಸುಧಾರಿತ ತಂತ್ರಜ್ಞಾನವು ಸುತ್ತಮುತ್ತಲಿನ ಅಂಗಾಂಶಗಳಿಗೆ ಯಾವುದೇ ಹಾನಿ ಮಾಡದೇ ಸುಲಭವಾಗಿ ಶಸ್ತ್ರಚಿಕಿತ್ಸೆಯನ್ನು ಕಡಿಮೆ ಅವಧಿಯಲ್ಲೇ ಮಾಡಬಹುದಾಗಿದೆ ಎಂದು ವಿವರಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಳಗಾವಿ

Siddhagiri Hospital : ರೋಗಿ ಕೊಳಲು ನುಡಿಸುವಾಗಲೇ ಮೆದುಳು ಶಸ್ತ್ರಚಿಕಿತ್ಸೆ; ಸಿದ್ದಗಿರಿ ಆಸ್ಪತ್ರೆ ವೈದ್ಯರ ಕಾರ್ಯಕ್ಕೆ ಮೆಚ್ಚುಗೆ

Siddhagiri Hospital : ರೋಗಿ ಕೈಗೆ ಕೊಳಲು ಕೊಟ್ಟ ವೈದ್ಯರು ಕೊಳಲು ಊದುತ್ತಿರುವಾಗಲೇ ಮೆದುಳು ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿದ್ದಾರೆ. ಸಿದ್ದಗಿರಿ ಆಸ್ಪತ್ರೆ ವೈದ್ಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

VISTARANEWS.COM


on

By

Doctors at Siddagiri Hospital perform brain surgery on patient while playing flute
ಸಾಂದರ್ಭಿಕ ಚಿತ್ರ
Koo

ಬೆಳಗಾವಿ: ರೋಗಿಯ ಕೈಗೆ ಕೊಳಲು ಕೊಟ್ಟು ಊದಲು ಹೇಳಿ ವೈದ್ಯರು ಯಶಸ್ವಿ ಮೆದುಳು ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಬೆಳಗಾವಿಯ ಕೊಲ್ಲಾಪುರದ ಕನ್ಹೇರಿ ಮಠದ ಸಿದ್ದಗಿರಿ ಆಸ್ಪತ್ರೆ (Siddhagiri Hospital) ವೈದ್ಯರು ರೋಗಿಯು ಕೊಳಲು ಊದುವಾಗಲೇ ಮೆದುಳು ಆಪರೇಷನ್ ಮಾಡಿದ್ದಾರೆ.

ವ್ಯಕ್ತಿಯ ಬ್ರೇನ್‌ನಲ್ಲಿ ಬೆಳೆದ ಟ್ಯೂಮರ್‌ ಅನ್ನು ಸುಮಾರು 5 ಗಂಟೆಗಳ ಕಾಲ ಆಪರೇಷನ್ ಮಾಡಿ ಗಡ್ಡೆ ಹೊರ ತೆಗೆದಿದ್ದಾರೆ. ಆಸ್ಪತ್ರೆಯ ನರಶಸ್ತ್ರಚಿಕಿತ್ಸಕ ಡಾ.ಶಿವಶಂಕರ್ ಮರಜಕ್ಕೆ ಹಾಗೂ ಅರವಳಿಗೆ ತಜ್ಞ ಪ್ರಕಾಶ ಭರಮಗೌಡರಿಂದ ಯಶಸ್ವಿ ಶಸ್ತ್ರಚಿಕಿತ್ಸೆ ನಡೆದಿದೆ.

ವೈದ್ಯರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ವೈದ್ಯರ ತಂಡ ಈವರೆಗೂ ಒಟ್ಟು ಮಂದಿಗೆ 103 ಮೆದುಳು ಶಸ್ತ್ರ‌ಚಿಕಿತ್ಸೆ ಮಾಡಿದೆ. ಸಿದ್ದಗಿರಿ ಆಸ್ಪತ್ರೆ ಅವೇಕ್ ಕ್ರೇನಿಯೊಟಮಿ ಶಸ್ತ್ರಚಿಕಿತ್ಸೆಗೆ ಹೆಸರುವಾಸಿಯಾಗಿದೆ. ವೈದ್ಯರ ಸಾಧನೆಗೆ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಶ್ಲಾಘಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಆರೋಗ್ಯ

Colon cancer : ಕರುಳಿನ ಕ್ಯಾನ್ಸರ್ ವಯಸ್ಸಾದವರಿಗೆ ಕಂಟಕ! ಈ ಆಹಾರಗಳನ್ನು ತಿನ್ನಲೇಬೇಡಿ

Colon cancer : ಕರುಳಿನ ಕ್ಯಾನ್ಸರ್‌ ಬಗ್ಗೆ ನಿರ್ಲಕ್ಷ್ಯ ಬೇಡ, ಮುಂಜಾಗೃತಿ ಇರಲಿ ಎಂದು ಹುಬ್ಬಳ್ಳಿಯ ಎಚ್‌ಸಿಜಿ ಎನ್‌ಎಂಆರ್ ಕ್ಯಾನ್ಸರ್ ಕೇಂದ್ರದ ಹಿರಿಯ ಸರ್ಜಿಕಲ್ ಆಂಕೊಲಾಜಿಸ್ಟ್ ಡಾ. ಸಂತೋಷ್ ಚಿಕ್ಕ್‌ರೆಡ್ಡಿ ತಿಳಿಸಿದ್ದಾರೆ.

VISTARANEWS.COM


on

By

Colon cancer is on the rise‌ Those above 50 years of age are targeted
ಸಾಂದರ್ಭಿಕ ಚಿತ್ರ
Koo

ಬದಲಾಗುತ್ತಿರುವ ಜೀವನಶೈಲಿ ಹಾಗೂ ಆಹಾರ ಪದ್ಧತಿಯಿಂದ ಇಂದು ಹಲವು ಕ್ಯಾನ್ಸರ್‌ ನಮ್ಮನ್ನು ಕಾಡಲಾರಂಭಿಸಿವೆ. ಅದರಲ್ಲಿ ಇದೀಗ ಕರುಳಿನ ಕ್ಯಾನ್ಸರ್‌ (Colon cancer ) ಅಥವಾ ಕೊಲೊರೆಕ್ಟಲ್ ಕ್ಯಾನ್ಸರ್ ಕೂಡ ಮುನ್ನೆಲೆಗೆ ಬರುತ್ತಿರುವುದು ಆತಂಕಕಾರಿ. ನಮ್ಮ ಪಚನಕ್ರಿಯೆಯನ್ನು ಸಮತೋಲದಲ್ಲಿ ಇಟ್ಟುಕೊಳ್ಳುವ ಕರುಳಿನ ಆರೋಗ್ಯ ಹದಗೆಟ್ಟರೆ ಇಡೀ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ನಾವು ತಿನ್ನುವ ಆಹಾರ ಮತ್ತು ನಮ್ಮ ಸುತ್ತಮುತ್ತಲಿನ ಪರಿಸರದಿಂದ ಕರುಳಿನ ಕ್ಯಾನ್ಸರ್‌ ಅಭಿವೃದ್ಧಿಗೊಳ್ಳಲಿದೆ. ಕರುಳಿನ ಕ್ಯಾನ್ಸರ್‌ಗೆ ಕಾರಣ ಹಾಗೂ ಅದಕ್ಕೆ ಪರಿಹಾರದ ಕುರಿತು ವೈದ್ಯರು ವಿವರಿಸಿದ್ದಾರೆ.

ಕೊಲೊರೆಕ್ಟಲ್ ಕ್ಯಾನ್ಸರ್ ಎಂದೂ ಕರೆಯಲ್ಪಡುವ ಕರುಳಿನ ಕ್ಯಾನ್ಸರ್‌, ದೊಡ್ಡ ಕರುಳಿನ (ಕೊಲೊನ್ ಮತ್ತು ಗುದನಾಳ) ಮೇಲೆ ಪರಿಣಾಮ ಬೀರುವ ಕ್ಯಾನ್ಸರ್ ಆಗಿದೆ. ಇದು ವಿಶ್ವಾದ್ಯಂತ ಸಾಮಾನ್ಯ ಕ್ಯಾನ್ಸರ್‌ಗಳಲ್ಲಿ ಒಂದಾಗಿದ್ದು, 50 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಈ ಕ್ಯಾನ್ಸರ್‌ ಹೆಚ್ಚಾಗಿ ಕಂಡು ಬರಲಿದೆ. ವಯಸ್ಸಾದಂತೆ ಪಚನಕ್ರಿಯೆ ನಿಧಾನವಾಗುವುದರಿಂದ ಕರುಳಿನ ಆರೋಗ್ಯವೂ ಕ್ಷೀಣಿಸುತ್ತಾ ಬರಲಿದೆ. ಹೀಗಾಗಿ 60 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ಕರುಳಿನ ಕ್ಯಾನ್ಸರ್‌ನ ನಿಯಮಿತ ಸ್ಕ್ರೀನಿಂಗ್‌ಗಳು ಮತ್ತು ತಪಾಸಣೆಗೆ ಒಳಗಾಗುವುದು ಅತ್ಯವಶ್ಯಕವಾಗಿದೆ.

ಅನುವಂಶಿಕ ಪರೀಕ್ಷೆಗೆ ಒಳಗಾಗಿ

ಕೊಲೊರೆಕ್ಟಲ್ ಕ್ಯಾನ್ಸರ್ ಹೆಚ್ಚಾಗಿ ಕುಟುಂಬದ ಇತಿಹಾಸ ಹೊಂದಿರುವವರಲ್ಲಿಯೂ ಕಾಣಿಸಿಕೊಳ್ಳಲಿದೆ. ಫ್ಯಾಮಿಲಿ ಅಡೆನೊಮ್ಯಾಟಸ್ ಪಾಲಿಪೊಸಿಸ್ (FAP) ಅಥವಾ ಲಿಂಚ್ ಸಿಂಡ್ರೋಮ್‌ನಂತಹ ಕೆಲವು ಆನುವಂಶಿಕ ಪರಿಸ್ಥಿತಿಗಳು, ರೋಗವನ್ನು ಅಭಿವೃದ್ಧಿ ಪಡಿಸಲಿದೆ. ನಿಮ್ಮ ಕುಟುಂಬದಲ್ಲಿಯೂ ಯಾರಿಗಾದರು ಕರುಳಿನ ಕ್ಯಾನ್ಸರ್‌ಗೆ ತುತ್ತಾಗಿದ್ದರೆ, ನೀವು ಸಹ ನಿಮ್ಮ ವೈದ್ಯರೊಂದಿಗೆ ಚರ್ಚಿಸಿ, ಅನುವಂಶಿಕ ಪರೀಕ್ಷೆಗೆ ಒಳಗಾಗುವುದು ಉತ್ತಮ

ಕರುಳಿನ ಕ್ಯಾನ್ಸರ್‌ಗೆ ಇತರೆ ಕಾರಣಗಳೇನು?

ಉರಿಯೂತದ ಕರುಳಿನ ಕಾಯಿಲೆ (IBD), ಟೈಪ್ 2 ಮಧುಮೇಹ ಮತ್ತು ಬೊಜ್ಜು ಮುಂತಾದ ಕೆಲವು ಆರೋಗ್ಯ ಸಮಸ್ಯೆಗಳು ಕರುಳಿನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು. ಕರುಳಿನ ಕ್ಯಾನ್ಸರ್ ಸಾಮಾನ್ಯವಾಗಿ ಆನುವಂಶಿಕ ಮತ್ತು ಪರಿಸರ ಅಂಶಗಳ ಸಂಯೋಜನೆಯಿಂದ ಉಂಟಾಗುತ್ತದೆ, ಇದು ಕರುಳಿನಲ್ಲಿ ಪಾಲಿಪ್ಸ್ ಬೆಳವಣಿಗೆಗೆ ಕಾರಣವಾಗುತ್ತದೆ. ಪತ್ತೆ ಮಾಡದೆ ಬಿಟ್ಟರೆ, ಈ ಪಾಲಿಪ್ಸ್ ಕ್ಯಾನ್ಸರ್ ಆಗಬಹುದು. ಹೀಗಾಗಿ ಕ್ಯಾನ್ಸರ್‌ನ ಲಕ್ಷಣ ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.

ಕ್ಯಾನ್ಸರ್‌ನ ಲಕ್ಷಣಗಳೇನು?

  • ಮಲದಲ್ಲಿನ ರಕ್ತ, ಕಡಿಮೆ ಪ್ರಮಾಣದಲ್ಲಿ ಮಲವಿಸರ್ಜನೆ
  • ಕರುಳಿನ ಚಲನೆಗಳಲ್ಲಿನ ಬದಲಾವಣೆಗಳು (ಅತಿಸಾರ ಅಥವಾ ಮಲಬದ್ಧತೆ),
  • ಹೊಟ್ಟೆ ನೋವು ಅಥವಾ ಸೆಳೆತ,
  • ದೌರ್ಬಲ್ಯ, ಆಯಾಸ,
  • ತೂಕ ನಷ್ಟ ಮತ್ತು ಹಸಿವು ಆಗದೇ ಇರುವುದು
  • ಕೆಲವು ತೋಟಗಳಿಗೆ ಸಿಂಪಡಿಸುವ ಕೆಲವು ಕೀಟನಾಶ ಕಣಗಳು ದೇಹಕ್ಕೆ ಸೇರುವುದರಿಂದ

ಕ್ಯಾನ್ಸರ್‌ ತಡೆಗಟ್ಟಲು ಈ ಅಭ್ಯಾಸವಿರಲಿ

ನಾವು ಪ್ರತಿನಿತ್ಯ ತಿನ್ನುವ ಆಹಾರದಿಂದಲೇ ಕೊಲೊರೆಕ್ಟಲ್ ಕ್ಯಾನ್ಸರ್ ಅಭಿವೃದ್ಧಿ ಹೊಂದಲಿದೆ. ಹೌದು, ಕೆಂಪು ಮತ್ತು ಸಂಸ್ಕರಿಸಿದ ಮಾಂಸದಲ್ಲಿ ಹೆಚ್ಚಿನ ಆಹಾರ, ಕಡಿಮೆ ಫೈಬರ್ ಮತ್ತು ಅಗತ್ಯ ಪೋಷಕಾಂಶಗಳ ಕೊರತೆಯು ಕರುಳಿನ ಕ್ಯಾನ್ಸರ್ ಬೆಳವಣಿಗೆಗೆ ಕಾರಣವಾಗಬಹುದು. ಜಡ ಜೀವನಶೈಲಿಯು ಅಪಾಯವನ್ನು ಹೆಚ್ಚಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಹಣ್ಣು, ತರಕಾರಿಗಳು ಮತ್ತು ಧಾನ್ಯಗಳಲ್ಲಿ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ಸೇವಿಸಬೇಕು. ಹೆಚ್ಚು ಆಯಿಲ್‌ಯುಕ್ತ ಆಹಾರ ಸೇವನೆ, ಜಂಕ್‌ ಫುಡ್‌ ಸೇವನೆಯೂ ಸಹ ನಮ್ಮ ಕರುಳಿನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಉತ್ತಮ ಆಹಾರ ಸೇವನೆಯ ಜೊತೆಗೆ ನಿಯಮಿತ ವ್ಯಾಯಾಮವೂ ಅತ್ಯವಶ್ಯಕ. ವ್ಯಾಯಾಮ, ಯೋಗ, ಧ್ಯಾನ ಇತರೆ ದೈಹಿಕ ಚಟುವಟಿಕೆಯನ್ನು ದಿನದಲ್ಲಿ ಕನಿಷ್ಠ ೩೦ ನಿಮಿಷಗಳು ಮಾಡುವುದರಿಂದ ಈ ಕ್ಯಾನ್ಸರ್‌ನ ಅಪಾಯದಿಂದ ಪಾರಾಗಬಹುದು. ಅನುವಂಶಿಕ ಹಿನ್ನೆಲೆ ಇದ್ದರೂ ಸಹ ಉತ್ತಮ ಜೀವನಶೈಲಿ ಹೊಂದಿದ್ದರೆ, ಕೊಲೊರೆಕ್ಟಲ್ ಕ್ಯಾನ್ಸರ್ ಅಪಾಯವನ್ನು ತಡೆಗಟ್ಟಬಹುದು.

Continue Reading
Advertisement
MCC Seat Retention, Opportunity to Cancel KEA Seat Deadline to Cancel Seats by 11 AM on September 20
ಬೆಂಗಳೂರು9 hours ago

KEA : ಎಂಸಿಸಿ ಸೀಟು ಉಳಿಸಿಕೊಂಡು, ಕೆಇಎ ಸೀಟು ರದ್ದತಿಗೆ ಅವಕಾಶ; ಸೀಟು ರದ್ದು ಪಡಿಸಿಕೊಳ್ಳಲು ನಾಳೆವರೆಗೂ ಗಡುವು

Innovative technologies have revolutionized patients with heart valve disorder
ಬೆಂಗಳೂರು10 hours ago

World Heart Day: ಹೃದಯ ಕವಾಟ ಅಸ್ವಸ್ಥತೆ ಹೊಂದಿರುವ ರೋಗಿಗಳ ಪಾಲಿಗೆ ನವೀನ ತಂತ್ರಜ್ಞಾನಗಳು ವರದಾನ

Dr JG Manjunatha has been ranked among the world's top scientists for the fifth time in a row
ಕೊಡಗು10 hours ago

KM Cariappa College : ವಿಶ್ವದ ಅತ್ಯುನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಸತತ 5ನೇ ಬಾರಿ ಸ್ಥಾನ ಪಡೆದ ಡಾ.ಜೆ.ಜಿ.ಮಂಜುನಾಥ

Muslims light aarti to Lord Ganesha Basavakalyana witnessed the confluence of unity
ಬೀದರ್‌10 hours ago

Ganesh Chaturthi: ಗಣೇಶನಿಗೆ ಆರತಿ ಬೆಳಗಿ ಸೌರ್ಹಾದತೆ ಮೆರೆದ ಮುಸ್ಲಿಂರು; ಭಾವೈಕತ್ಯೆಯ ಸಮಾಗಮಕ್ಕೆ ಸಾಕ್ಷಿಯಾದ ಬಸವಕಲ್ಯಾಣ

Breast cancer
ಬೆಂಗಳೂರು10 hours ago

Breast cancer : ಸ್ತನ ಕ್ಯಾನ್ಸರ್‌ ರೋಗಿಗೆ ರೊಬೋಟ್‌ ನೆರವಿನಿಂದ ತನ್ನದೆ ದೇಹದ ಮತ್ತೊಂದು ಭಾಗ ಬಳಸಿ ಸ್ತನ ಪುನರ್‌ ನಿರ್ಮಾಣ; ಫೋರ್ಟಿಸ್‌ ಆಸ್ಪತ್ರೆ ವೈದ್ಯರ ಯಶಸ್ವಿ ಶಸ್ತ್ರಚಿಕಿತ್ಸೆ

Road Accident
ಮಂಡ್ಯ11 hours ago

Road Accident : ಮಂಡ್ಯದಲ್ಲಿ ಕಾರು ಹಾಗೂ ಗೂಡ್ಸ್ ಆಟೋ ನಡುವೆ ಡಿಕ್ಕಿ; 20ಕ್ಕೂ ಹೆಚ್ಚು ಮಂದಿಗೆ ಗಾಯ

Congress expresses displeasure over BJP MLA Munirathnas rape case
ಬೆಂಗಳೂರು12 hours ago

MLA Muniratna: ಬಿಜೆಪಿ ಪಕ್ಷದ ಒಬ್ಬೊಬ್ಬ ನಾಯಕನೂ ಮುನಿರತ್ನನಂತಹ ಮುತ್ತು ರತ್ನಗಳೇ! ಕಾಂಗ್ರೆಸ್‌ ಟೀಕೆ

RDPR Protest
ಬೆಂಗಳೂರು13 hours ago

RDPR Protest: ಅಕ್ಟೋಬರ್ 4ರಿಂದ ರಾಜ್ಯಾದ್ಯಂತ ಗ್ರಾಮ ಪಂಚಾಯತ್ ಸೇವೆ ಸಂಪೂರ್ಣ ಬಂದ್!

Honeytrap by MLA Munirathna
ರಾಜಕೀಯ14 hours ago

MLA Muniratna: ಎದುರಾಳಿಗಳ ಮಟ್ಟ ಹಾಕಲು ಶಾಸಕ ಮುನಿರತ್ನರಿಂದ ಏಡ್ಸ್‌ ಟ್ರ್ಯಾಪ್‌! ಎಫ್‌ಐಆರ್‌ನಲ್ಲಿದೆ ಬೆಚ್ಚಿಬೀಳಿಸುವ ಅಂಶ

Doctors at Siddagiri Hospital perform brain surgery on patient while playing flute
ಬೆಳಗಾವಿ15 hours ago

Siddhagiri Hospital : ರೋಗಿ ಕೊಳಲು ನುಡಿಸುವಾಗಲೇ ಮೆದುಳು ಶಸ್ತ್ರಚಿಕಿತ್ಸೆ; ಸಿದ್ದಗಿರಿ ಆಸ್ಪತ್ರೆ ವೈದ್ಯರ ಕಾರ್ಯಕ್ಕೆ ಮೆಚ್ಚುಗೆ

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ12 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ11 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ10 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 year ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್3 weeks ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್3 weeks ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ4 weeks ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ1 month ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 month ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 month ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 month ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 month ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 months ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 months ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌