Happiness Formulas: ಈ ಎಂಟು ಸೂತ್ರಗಳನ್ನು ನಂಬಿದ್ದರೆ ನೀವು ಸಂತೋಷವಾಗಿದ್ದೀರಿ ಎಂದರ್ಥ! - Vistara News

ಲೈಫ್‌ಸ್ಟೈಲ್

Happiness Formulas: ಈ ಎಂಟು ಸೂತ್ರಗಳನ್ನು ನಂಬಿದ್ದರೆ ನೀವು ಸಂತೋಷವಾಗಿದ್ದೀರಿ ಎಂದರ್ಥ!

ಬದುಕಿನಲ್ಲಿ ಸಂತೋಷದಿಂದ ಇರಬೇಕು (Happiness Formulas) ಎಂಬುದು ಬಹುತೇಕ ಎಲ್ಲರ ಪರಮ ಉದ್ದೇಶವಾದರೂ, ಪ್ರತಿಯೊಬ್ಬರ ಸಂತೋಷವೂ ಭಿನ್ನವೇ. ಕೆಲವರಿಗೆ ಸಣ್ಣ ವಸ್ತುವಿನಲ್ಲಿ, ಬದುಕಿನ ನೆಮ್ಮದಿಯಲ್ಲಿ ಕಂಡ ಸಂತೋಷ ಇನ್ನೊಬ್ಬನಿಗೆ ಇನ್ಯಾವುದೋ ದೊಡ್ಡ ವಸ್ತುವಿನಲ್ಲಿ ಇರಬಹುದು.

VISTARANEWS.COM


on

Happiness formulas
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನೀವು ಸಂತೋಷವಾಗಿದ್ದೀರಾ? (Happiness Formulas) ಇದೇನು ಪ್ರಶ್ನೆ ಎಂದು ಕಳವಳಗೊಳ್ಳಬೇಡಿ. ಸಂತೋಷವಾಗಿರಲು ನೂರು ಕಾರಣಗಳಿರಬಹುದು. ಆದರೆ ದುಃಖಕ್ಕೆ ಒಂದೇ ಒಂದು ಕಾರಣ ಸಾಕು. ಬದುಕಿನಲ್ಲಿ ಸಂತೋಷದಿಂದ ಇರಬೇಕು ಎಂಬುದು ಬಹುತೇಕ ಎಲ್ಲರ ಪರಮ ಉದ್ದೇಶವಾದರೂ, ಪ್ರತಿಯೊಬ್ಬರ ಸಂತೋಷವೂ ಭಿನ್ನವೇ. ಕೆಲವರಿಗೆ ಸಣ್ಣ ವಸ್ತುವಿನಲ್ಲಿ, ಬದುಕಿನ ನೆಮ್ಮದಿಯಲ್ಲಿ ಕಂಡ ಸಂತೋಷ ಇನ್ನೊಬ್ಬನಿಗೆ ಇನ್ಯಾವುದೋ ದೊಡ್ಡ ವಸ್ತುವಿನಲ್ಲಿ ಇರಬಹುದು. ಹೀಗಾಗಿ ಸಂತೋಷದ ವ್ಯಾಖ್ಯಾನ ಒಬ್ಬರಿಂದ ಒಬ್ಬರಿಗೆ ಬೇರೆ ಬೇರೆಯಾಗಿಯೇ ಇರುತ್ತದೆ. ಭಾರತ ಸಂತೋಷವಾಗಿಲ್ಲದ ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ಸುದ್ದಿಯಲ್ಲಿಯೂ ಇದೆ. ಹಾಗಿದ್ದರೆ, ಭಾರತದಲ್ಲಿ ಯಾರೂ ಸಂತೋಷವಾಗಿಯೇ ಇಲ್ಲವೇ ಎಂದು ಪ್ರಶ್ನೆ ಉದ್ಭವವಾಗುತ್ತದೆ. ಬನ್ನಿ, ನೀವು ಸಂತೋಷವಾಗಿದ್ದೀರಾ ಎಂದೊಮ್ಮೆ ನಿಮ್ಮ ಹೆಗಲ ಮುಟ್ಟಿ ನೋಡಿಕೊಳ್ಳಿ!

Smiley Ball on a Wooden Surface

ಪಾಸಿಟಿವ್ ಆರಂಭ

ಕೆಲವರನ್ನು ನೀವು ನೋಡಿರಬಹುದು. ಎದ್ದ ಕೂಡಲೇ, ನಮ್ಮನ್ನು ಇಷ್ಟು ಚೆನ್ನಾಗಿಟ್ಟಿರುವ ಎಲ್ಲರಿಗೂ, ನಂಬಿದ ಭಗವಂತನಿಗೂ ಕೈಮುಗಿದು ಕೃತಜ್ಞತೆ ಸಲ್ಲಿಸುವ ಅಭ್ಯಾಸವನ್ನು ಇಟ್ಟುಕೊಂಡಿರುವುದನ್ನು ಕಂಡಿರಬಹುದು. ಕೆಲವರಿಗೆ ಇದು ವಿಚಿತ್ರ ಅಭ್ಯಾಸವೆಂದು ಕಂಡರೆ ಇನ್ನೂ ಕೆಲವರಿಗೆ ಇದು ನಮ್ಮನ್ನು ಒಂದು ದಿನದ ಪಾಸಿಟಿವ್‌ ಆರಂಭವಾಗಿ ಕಾಣಬಹುದು. ಒಟ್ಟಾರೆಯಾಗಿ, ಸಂತೋಷವೇ ಜೀವನದಲ್ಲಿ ಮುಖ್ಯವಾಗಿರುವಾಗ ನಮ್ಮನ್ನು ಸಂತೋಷವಾಗಿಟ್ಟ ದಿಗೆ ಕೃತಜ್ಞತೆ ಸಲ್ಲಿಸುವುದು ಒಂದೊಳ್ಳೆ ಕ್ರಮವೂ ಹೌದು ತಾನೇ. ಜೀವನದಲ್ಲಿ ನಿಜಕ್ಕೂ ಖುಷಿಯಿಂದಿರುವ ಮಂದಿಯನ್ನು ನೋಡಿ, ಅವರು ತಾವು ಈವರೆಗೆ ಪಡೆದುದಕ್ಕೆ, ಅದು ಸಂತೋಷವಿರಲಿ ದುಃಖವಿರಲಿ, ಒಂದು ಆನಂದದಾಯಕ ಅನುಭೂತಿಯಲ್ಲಿರುತ್ತಾರೆ.

Happy Woman at the Beach with Spread Arms

ಖುಷಿಗಾಗಿ ಸಮಯ ಮೀಸಲಿಡಿ

ನಮ್ಮ ಇಷ್ಟಗಳಿಗೆ, ನಮ್ಮ ಖುಷಿಗಳಿಗೆ ದಿನದ ಒಂದಷ್ಟು ಸಮಯವನ್ನು ಮೀಸಲಿಡುವುದು, ಅದರಿಂದ ಖುಷಿಯನ್ನು ಕಾಣುವುದು ಕೆಲವರಿಗೆ ಅಭ್ಯಾಸವಾಗಿಬಿಟ್ಟಿರುತ್ತದೆ. ಜೀವನ ಎಷ್ಟೇ ಬ್ಯುಸಿಯಾಗಿರಲಿ, ಸಮಯವೇ ಇಲ್ಲದೆ ಇರಲಿ, ಆದರೂ ಒಂದು ಕ್ಷಣದ ಸಂತೋಷದ ಗಳಿಗೆಯನ್ನು ಅವರು ತನಗಾಗಿ ಕಾದಿರಿಸುತ್ತಾರೆ. ಅದೊಂದು ರಾತ್ರಿಯ ಪುಟ್ಟ ವಾಕ್‌ ಇರಬಹುದು, ಒಂದೆರಡು ಪುಟವಾದರೂ ದಿನವೂ ಓದಿಯೇ ಮಲಗುವುದಿರಬಹುದು, ಅಥವಾ ಪ್ರೀತಿಪಾತ್ರರ ಜೊತೆಗೆ ಒಂದ್ಹತ್ತು ನಿಮಿಷ ಮಾತನಾಡುವುದಿರಬಹುದು. ಇಂಥವರು ಸಂತೋಷವಾಗಿರುತ್ತಾರೆ. ತಮ್ಮ ಜೀವನದ ಬಗ್ಗೆ ಅವರಿಗೆ ದೂರುಗಳಿರುವುದಿಲ್ಲ.

Happy happy joy!

ಹೊಸ ಕಲಿಕೆಯ ತುಡಿತ

ತನ್ನ ಬೆಳವಣಿಗೆಯಲ್ಲಿ ನಂಬಿಕೆಯಿಟ್ಟಿರುವ ಇವರು ನಿಂತ ನೀರಾಗಿರುವುದಿಲ್ಲ. ತನ್ನ ಕಷ್ಟಗಳನ್ನು ಹಳಿದುಕೊಂಡು ಅಲ್ಲೇ ನಿಂತಿರುವುದಿಲ್ಲ. ಸಾಧ್ಯತೆಗಳನ್ನು ಹುಡುಕಿಕೊಂಡು ಸದಾ ಹೊಸ ಕಲಿಕೆಯ ತುಡಿತವನ್ನು ಹೊಂದಿರುವ ಮಂದಿ ಸದಾ ಖುಷಿಯಾಗಿರುತ್ತಾರೆ.

Happy Woman Doing Heart Hand Gesture

ಮಿಡಿಯಲಿ ಹೃದಯ

ದಯಾಪರರು ಸದಾ ಒಂದು ಬಗೆಯ ತಾಳ್ಮೆ, ಶಾಂತಿಯನ್ನು ಬದುಕಿನಲ್ಲಿ ರೂಢಿಸಿಕೊಂಡಿರುತ್ತಾರೆ. ಇನ್ನೊಬ್ಬರ ಕಷ್ಟಗಳಿಗೆ ಕರಗುವ ಇವರು ತಮ್ಮ ಕೈಲಾಗುವ ಸಹಾಯ ಮಾಡುತ್ತಾರೆ. ಬೇರೆವರ ಕಷ್ಟಗಳಿಗೆ ಇವರ ಹೃದಯ ಮಿಡಿಯುತ್ತದೆ.

happy woman hand in heart

ಶಾಂತಿ, ಸಮಾಧಾನ

ಜೀವನ ಎಷ್ಟೇ ಬ್ಯುಸಿಯಿರಲಿ, ಇವರು ತಮ್ಮ ಒತ್ತಡದಿಂದ ಹೈರಾಣಾಗುವುದಿಲ್ಲ. ಎಲ್ಲವನ್ನೂ ಶಾಂತಿಯಿಂದ, ಸಮಾಧಾನದಿಂದ ಬ್ಯಾಲೆನ್ಸ್‌ ಮಾಡುತ್ತಾರೆ. ತಮ್ಮ ಕೆಲಸದ ಒತ್ತಡಕ್ಕಾಗಿ ಜವಾಬ್ದಾರಿಗಳಿಂದ ನುಣುಚಿಕೊಳ್ಳುವುದಿಲ್ಲ. ಕೆಲಸದ ಜೊತೆಗೆ ಜವಾಬ್ದಾರಿಗಳನ್ನೂ ನಿಭಾಯಿಸಿಕೊಂಡು, ತಮ್ಮ ಖುಷಿಯನ್ನೂ ಕಂಡುಕೊಳ್ಳುತ್ತಾರೆ. ತೃಪ್ತಿ ಇವರ ಸಂತೋಷದ ಕೀಲಿಕೈ.

Freedom Wellness Happiness Concept - Happy Woman

ಶಾಂತಿ ಸಮಾಧಾನ

ಬದುಕು ಅಂದುಕೊಂಡ ಹಾಗೆ ಇರುವುದಿಲ್ಲ. ಬದಲಾವಣೆಗಳು ಖಂಡಿತ. ಆದರೆ, ಬದಲಾವಣೆಗಳನ್ನು ಸಹಜವಾಗಿ ಸ್ವೀಕರಿಸಿ ಬದುಕನ್ನು ಸಂಪೂರ್ಣವಾಗಿ ಅನುಭವಿಸುವುದು ಬದುಕಿನ ನಿಜವಾದ ಪಯಣ. ಇಂಥವರು ಬದುಕಿನ ಇಂಥನ ಅನಪೇಕ್ಷಿತ ಮಜಲುಗಳನ್ನೂ ಸಮಾಧಾನದಿಂದ ಸ್ವೀಕರಿಸುತ್ತಾರೆ.

Happy Woman

ಸಂತೋಷಮಯ

ಸದಾ ಕ್ರಿಯಾಶೀಲರಾಗಿರುವ ಮಂದಿ ಯಾವಾಗಲೂ ಸಂತೋಷದಿಂದಿರುತ್ತಾರೆ. ಅದು ದೈಹಿಕವಾಗಿ ಇರಬಹುದು, ಮಾನಸಿಕವಾಗಿಯೂ ಇರಬಹುದು. ಸದಾ ತನ್ನನ್ನು ವಿವಿಧ ವಿಚಾರಗಳಲ್ಲಿ ತೊಡಗಿಸಿಕೊಂಡಿರುವ ಮಂದಿ ಯಾವಾಗಲೂ ಸಂತೋಷವಾಗಿರುತ್ತಾರೆ.

Happy Family Together

ಸಂಬಂಧಗಳಿಗಿದೆ ಬೆಲ

ಸಂಬಂಧಗಳಿಗೆ ಬೆಲೆ ಕೊಡುವ, ಪ್ರೀತಿ ಪಾತ್ರರನ್ನು ಸಂತೋಷವಾಗಿಟ್ಟಿರುವ, ಅವರಿಗಾಗಿ ಸಮಯ ಮಾಡಿಕೊಳ್ಳುವ ಮನೋಭಾವ ಹೊಂದಿರುವ, ಅವರ ಖುಷಿಯಲ್ಲಿ ಪ್ರೀತಿಯಲ್ಲಿ ಸಂತೋಷ ಹೊಂದುವ ಮಂದಿ ಖುಷಿಯಾಗಿರುತ್ತಾರೆ. ಇಂಥವರಿಗೆ ಸಂಬಂಧದ ಬೆಲೆ ತಿಳಿದಿರುತ್ತದೆ. ಸಣ್ಣ ಸಣ್ಣ ಖುಷಿಗಳೂ ಇವರನ್ನು ಸುಖವಾಗಿಟ್ಟಿರುತ್ತವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Tongue Reveals Health: ನಮ್ಮ ಆರೋಗ್ಯದ ಚರಿತ್ರೆಯನ್ನು ನಮ್ಮ ನಾಲಿಗೆಯೇ ಹೇಳುತ್ತದೆ!

ದೇಹದೊಳಗೆ ಏನಾಗುತ್ತಿದೆ ಎಂಬುದನ್ನು ತಿಳಿಯಬೇಕಾದರೆ ನಮ್ಮ ನಾಲಿಗೆಯನ್ನೂ ತಿಳಿಯಬೇಕು ನಾವು. ಅದರ ಬಣ್ಣ ಮತ್ತು ಮೇಲ್ಮೈ ಹೇಗಿದೆ ಎನ್ನುವುದರ ಮೇಲೆ ಬಹಳಷ್ಟು ವಿಷಯಗಳನ್ನು ತಿಳಿಯಬಹುದು. ಏನು ಮಾಹಿತಿಯನ್ನು ನೀಡುತ್ತದೆ (Tongue Reveals Health) ನಾಲಿಗೆ? ಈ ಲೇಖನ ಓದಿ.

VISTARANEWS.COM


on

Tongue Reveals Health
Koo

ನಾಲಿಗೆಯು (Tongue Reveals Health) ಆರೋಗ್ಯದ ಕನ್ನಡಿ ಎನ್ನುವ ಮಾತಿದೆ. ನಮ್ಮ ದೇಹದ ಸ್ಥಿತಿ-ಗತಿಗಳ ಬಗ್ಗೆ ಅರಿಯುವುದಕ್ಕೆ ನಾಲಿಗೆ ಸಹಾಯಕ. ಅದರ ಬಣ್ಣ, ಮೇಲ್ನೋಟಗಳಿಂದ ದೇಹದೊಳಗೆ ಹೇಗಿದೆ, ಏನಾಗುತ್ತಿದೆ ಎಂಬುದನ್ನು ಅರಿಯಬಹುದು. ದೇಹಾರೋಗ್ಯದ ದಿಕ್ಸೂಚಿಯಂತೆ ಜಿಹ್ವೆ ಕೆಲಸ ಮಾಡುತ್ತದೆ. ಇದನ್ನು ಸರಿಯಾಗಿ ಅವಲೋಕಿಸಿದರೆ, ನಮಗೆ ತಿಳಿಯುವ ಮಾಹಿತಿಗಳು ಹಲವಾರು. ನಾಲಿಗೆ ತಿಳಿಸುವುದೇನು ಎಂಬ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

Woman's tongue

ಗುಲಾಬಿ ಬಣ್ಣ

ಸುಂದರ ಗುಲಾಬಿ ಬಣ್ಣದ ನಾಲಿಗೆಯಿದ್ದರೆ, ಅದು ಸ್ವಸ್ಥ ಆರೋಗ್ಯದ ಸಂಕೇತ. ಇಷ್ಟೇ ಅಲ್ಲ, ರಸ ಒಸರುವ, ಮೃದುವಾದ ಮೇಲ್ಮೈ ಹೊಂದಿರುವ ನಾಲಿಗೆಯು ದೇಹಕ್ಕೆ ಅಗತ್ಯವಾದ ನೀರಿನಂಶ ಒದಗುತ್ತಿದೆ ಎಂಬುದನ್ನು ಸೂಚಿಸುತ್ತದೆ. ಜೊತೆಗೆ, ಜೀರ್ಣಾಂಗಗಳು ಚೆನ್ನಾಗಿ ಕೆಲಸ ಮಾಡುತ್ತಿವೆ ಎಂಬ ಸಂದೇಶವನ್ನೂ ನೀಡುತ್ತದೆ.

ಬಿಳಿ ನಾಲಿಗೆ

ನಾಲಿಗೆಯ ಮೇಲೆ ಬಿಳಿ ಬಣ್ಣದ ಹೊದಿಕೆಯಿದ್ದರೆ ಇದು ಬಹಳಷ್ಟನ್ನು ಸೂಚಿಸುತ್ತದೆ. ಈ ಬಿಳಿಯ ಬಣ್ಣವು ಬಾಯಿಯ ಭಾಗಕ್ಕೆ ಅಂಟಿಕೊಂಡ ಫಂಗಸ್‌ ಸೋಂಕಿನ ಲಕ್ಷಣವಿರಬಹುದು; ಬಾಯಿಯ ಸ್ವಚ್ಛತೆಯ ಕೊರತೆಯನ್ನು ಸೂಚಿಸಬಹುದು; ಬ್ಯಾಕ್ಟೀರಿಯ ದಾಳಿ ಮಾಡಿದ್ದರಿಂದಲೂ ಇರಬಹುದು. ಇದಲ್ಲದೆ, ದೇಹಕ್ಕೆ ಅಗತ್ಯವಾದಷ್ಟು ನೀರು ದೊರೆಯದಿದ್ದರೆ ಹೀಗಾಗುತ್ತದೆ. ಜೊತೆಗೆ, ಜೀರ್ಣಾಂಗಗಳ ಕೆಲಸದಲ್ಲಿ ಏರುಪೇರಾದರೆ, ಅಜೀರ್ಣ ಅಥವಾ ಮಲಬದ್ಧತೆಯಿದ್ದರೂ ನಾಲಿಗೆಯ ಮೇಲೆ ಬಿಳಿಯ ಹೊದಿಕೆಯನ್ನು ಕಾಣಬಹುದು.

Little kid sticking out his tongue

ಕೆಂಪು ನಾಲಿಗೆ

ಸ್ಟ್ರಾಬೆರಿಯಂಥ ಕೆಂಪು ನಾಲಿಗೆಯು ದೇಹದಲ್ಲಿ ಅಗತ್ಯ ಸತ್ವಗಳ ಕೊರತೆಯನ್ನು ಸೂಚಿಸುತ್ತದೆ. ವಿಟಮಿನ್‌ಗಳ ಕೊರತೆಯಿದ್ದರೆ, ಅದರಲ್ಲೂ ಮುಖ್ಯವಾಗಿ ವಿಟಮಿನ್‌ ಬಿ೧೨ ಕಡಿಮೆಯಿದ್ದರೆ ನಾಲಿಗೆಯು ಹೀಗೆ ಸ್ಟ್ರಾಬೆರಿ ಕೆಂಪಿನ ಬಣ್ಣದಲ್ಲಿ ಗೋಚರಿಸುತ್ತದೆ. ಕಬ್ಬಿಣದಂಶ ಕಡಿಮೆಯಿದ್ದರೂ ನಾಲಿಗೆ ಕೆಂಪಾಗುತ್ತದೆ. ರಕ್ತನಾಳಗಳಲ್ಲಿ ಉರಿಯೂತ ತರುವ ಕವಾಸಾಕಿ ಎನ್ನುವ ರೋಗವೂ ಅಪರೂಪಕ್ಕೆ ಈ ಕೆನ್ನಾಲಗೆಗೆ ಕಾರಣವಾಗಬಹುದು.

ಕಪ್ಪು ನಾಲಿಗೆ

ಕೆಲವೊಮ್ಮೆ ಕಪ್ಪಾದ ರೋಮಭರಿತ ಲಕ್ಷಣಗಳನ್ನು ನಾಲಿಗೆ ತೋರಿಸಬಹುದು. ಇದು ಸಹ ಬ್ಯಾಕ್ಟೀರಿಯ ಸೋಂಕಿನಿಂದ ಆಗುವಂಥದ್ದು. ಕೆಲವು ಔಷಧಿಗಳಿಂದ ನಾಲಿಗೆ ಕಪ್ಪಾಗಬಹುದು. ಧೂಮಪಾನ ಅತಿಯಾದರೂ ನಾಲಿಗೆ ಹೀಗೆ ಬಣ್ಣಗೆಡಬಹುದು. ಆದರೆ ನಾಲಿಗೆಯಲ್ಲಿ ನೋವು, ಊತ ಇದ್ದು, ಬಾಯಿಯ ರುಚಿ ವಾಸನೆಗಳು ಬದಲಾಗಿದ್ದರೆ ವೈದ್ಯರನ್ನು ಕಾಣಬೇಕಾಗುತ್ತದೆ.

ನಕಾಶೆ ನಾಲಿಗೆ

ಅಂದರೆ ನಾಲಿಗೆ ಮೇಲೆ ಕೆಂಪು ಬಣ್ಣದ ಮಚ್ಚೆಯಂಥ ಆಕೃತಿಗಳು ಕಾಣಬಹುದು. ನೋಡುವುದಕ್ಕೆ ಯಾವುದೇ ಭೂಪಟ ಅಥವಾ ನಕಾಶೆಯಂತೆ ಕಾಣುವ ಈ ಕೆಂಪು ಆಕೃತಿಗಳು ಸಾಮಾನ್ಯವಾಗಿ ಅಪಾಯ ಮಾಡುವುದಿಲ್ಲ. ಆದರೆ ಕೆಲವು ಆಹಾರಗಳಿಗೆ ಅಥವಾ ತೀಕ್ಷ್ಣ ರುಚಿಗಳಿಗೆ ಇವು ಪ್ರತಿಕ್ರಿಯಿಸಿ, ನೋವು ನೀಡುತ್ತವೆ. ಇದಕ್ಕೆ ನಿರ್ದಿಷ್ಟವಾದ ಕಾರಣಗಳು ತಿಳಿದಿಲ್ಲ.

Woman with halitosis for candida albicans pointing her tongue

ಸೀಳು ನಾಲಿಗೆ

ನಾಲಿಗೆಯ ಮೇಲ್ಮೈಯಲ್ಲಿ ಸೀಳಿನಂಥ ಆಳವಾದ ಗೆರೆಗಳು ಕಾಣಬಹುದು. ಕೆಲವೊಮ್ಮೆ ಇವು ಆನುವಂಶಿಕವಾಗಿ ಬರಬಹುದು. ಅದಿಲ್ಲದಿದ್ದರೆ, ಸೋರಿಯಾಸಿಸ್‌ ಅಥವಾ ಡೌನ್ಸ್‌ ಸಿಂಡ್ರೋಮ್‌ ಸಹ ಕಾರಣವಾಗಿರಬಹುದು. ಹೆಚ್ಚಿನ ಸಾರಿ ಈ ಗೆರೆಗಳು ಯಾವುದೇ ತೊಂದರೆ ನೀಡುವುದಿಲ್ಲ.

ಹುಣ್ಣುಗಳು

ಬಾಯಲ್ಲಿ ಹುಣ್ಣಾದಂತೆಯೇ ನಾಲಿಗೆ ಮೇಲೂ ಹುಣ್ಣುಗಳಾಗುತ್ತವೆ. ಇದಕ್ಕೆ ಹಲವು ಕಾರಣಗಳಿರಬಹುದು. ಕೆಲವೊಮ್ಮೆ ಸತ್ವಗಳ ಕೊರತೆ, ಸೋಂಕು ಅಥವಾ ಬ್ರೇಸಸ್‌ ಹಾಕಿದ ಕಾರಣಕ್ಕೂ ಆಗಿರಬಹುದು. ಹಲವು ವಾರಗಳಿಂದ ಈ ಹುಣ್ಣುಗಳು ಕಡಿಮೆಯಾಗದೆ ಮುಂದುವರಿಯುತ್ತಿದ್ದರೆ ಬಾಯಿ ಕ್ಯಾನ್ಸರ್‌ ಸೂಚನೆಯೂ ಇರಬಹುದು. ಗುಣವಾಗದ ಹುಣ್ಣುಗಳಿದ್ದರೆ ವೈದ್ಯರಲ್ಲಿ ತೋರಿಸುವುದು ಅಗತ್ಯ.

Woman With Wide Open Mouth and Tongue Out

ಗಮನ ಕೊಡಿ

ಕೆಂಪು, ಬಿಳಿಯ ಮಚ್ಚೆಯಂಥವು ನಾಲಿಗೆಯ ಮೇಲೆ ಕಾಣಿಸಿಕೊಂಡು ನೋವು ಕೊಡುತಿದ್ದರೆ, ಬಾಯಿ ವಾಸನೆ ಬರುತ್ತಿದ್ದರೆ, ಹುಣ್ಣುಗಳು ಗುಣವಾಗದೆ ಉಳಿದಿದ್ದರೆ, ಬಾಯಿ ಅಥವಾ ನಾಲಿಗೆಯಲ್ಲಿ ಕಾಣಿಸಿಕೊಂಡ ಯಾವುದೇ ಹುಣ್ಣು, ವ್ರಣ, ಮಚ್ಚೆಗಳು ಸಾಮಾನ್ಯಕ್ಕಿಂತ ಭಿನ್ನ ಲಕ್ಷಣಗಳನ್ನು ಹೊಂದಿದ್ದರೆ, ವೈದ್ಯರನ್ನು ಕಾಣುವುದು ಸೂಕ್ತ. ಇಂಥ ಯಾವುದೇ ಲಕ್ಷಣಗಳು ಕ್ಯಾನ್ಸರ್‌ನ ಸೂಚಕಗಳಾಗಿರಬಹುದು.

ಇದನ್ನೂ ಓದಿ:Health Tips: ಒಂದೇ ಕಡೆ ಕೂತಿರುತ್ತೀರಾ? ಸಮಸ್ಯೆಗಳು ಒಂದೆರಡಲ್ಲ!

Continue Reading

ಫ್ಯಾಷನ್

Summer Hairstyles: ಸೆಕೆಗಾಲದಲ್ಲಿ ಟ್ರೆಂಡಿಯಾದ 3 ಮಿಕ್ಸ್‌ ಮ್ಯಾಚ್‌ ಹೇರ್‌ಸ್ಟೈಲ್ಸ್!

ಈ ಬಾರಿಯ ಸಮ್ಮರ್‌ ಸೀಸನ್‌ನಲ್ಲಿ ಸೆಕೆಯಾಗದ 3 ಸಮ್ಮರ್‌ ಮಿಕ್ಸ್‌ ಮ್ಯಾಚ್‌ ಹೇರ್‌ಸ್ಟೈಲ್‌ಗಳು (Summer Hairstyles) ಟ್ರೆಂಡಿಯಾಗಿವೆ. ನೋಡಲು ಹಳೆಯ ಹೇರ್‌ಸ್ಟೈಲ್‌ ಎಂದೆನಿಸಿದರೂ ಒಂದರ ಒಳಗೆ ಇನ್ನೊಂದು ಬಗೆಯ ವಿನ್ಯಾಸ ಸೇರಿಕೊಂಡಿವೆ. ಅವು ಯಾವ್ಯುವು? ಇವನ್ನು ಹೇಗೆಲ್ಲಾ ಫಾಲೋ ಮಾಡಬಹುದು? ಎಂಬುದರ ಕುರಿತಂತೆ ಹೇರ್‌ಸ್ಟೈಲಿಸ್ಟ್‌ಗಳು ಇಲ್ಲಿ ತಿಳಿಸಿದ್ದಾರೆ. ‌

VISTARANEWS.COM


on

Summer Hairstyles
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ಸಮ್ಮರ್‌ ಸೀಸನ್‌ನಲ್ಲಿ ಸೆಕೆಯಾಗದ 3 ಬಗೆಯ ಸಮ್ಮರ್‌ ಮಿಕ್ಸ್‌ ಮ್ಯಾಚ್‌ ಹೇರ್‌ಸ್ಟೈಲ್‌ಗಳು (Summer Hairstyles) ಟ್ರೆಂಡಿಯಾಗಿವೆ. ತಕ್ಷಣಕ್ಕೆ ನೋಡಲು ಹಳೆಯ ಹೇರ್‌ಸ್ಟೈಲ್‌ ಎಂದೆನಿಸಿದರೂ ಅವುಗಳ ಜೊತೆಗೆ ನಾನಾ ಬಗೆಯ ವಿನ್ಯಾಸಗಳು ಸೇರಿಕೊಂಡಿವೆ.

Summer Hairstyles

ಸೈಡಿಗೆ ಸರಿದ ಫ್ರೀ ಹೇರ್‌ಸ್ಟೈಲ್‌ಗಳು

“ಈ ಸಮ್ಮರ್‌ನಲ್ಲಿ ಫ್ರೀ ಹೇರ್‌ಸ್ಟೈಲ್‌ಗಳು ಸೈಡಿಗೆ ಸರಿದಿವೆ. ಕೇವಲ ಹೇರ್‌ ಕಂಡೀಷನ್‌ ಕೋಣೆಗಳಲ್ಲಿ ಹಾಗೂ ಇನ್‌ಡೋರ್‌ ಆವರಣದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಮಾತ್ರ ಈ ಹೇರ್‌ ಸ್ಟೈಲ್‌ಗಳಲ್ಲಿ ಹೆಣ್ಣುಮಕ್ಕಳು ಕಾಣಸಿಗುತ್ತಿದ್ದಾರೆ. ಇನ್ನು ಹೊರಾಂಗಣದಲ್ಲಿ ಸೆಕೆಯಾಗದ ಹಾಗೂ ಆರಾಮ ಎಂದೆನಿಸುವ ಕಂಫರ್ಟಬಲ್‌ ಕೂದಲ ವಿನ್ಯಾಸಗಳು ಚಾಲ್ತಿಯಲ್ಲಿವೆ. ಇದು ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವಾಗಿಲ್ಲ! ಟೀನೇಜ್‌ ಹಾಗೂ ಯುವತಿಯರಲ್ಲೂ ಕಾಮನ್‌ ಆಗಿವೆ” ಎನ್ನುತ್ತಾರೆ ಹೇರ್‌ಸ್ಟೈಲಿಸ್ಟ್‌ ನಮಿತಾ. ಅವರ ಪ್ರಕಾರ, ಶಾರ್ಟ್‌ ಹೇರ್‌ಸ್ಟೈಲ್‌ಗಳು ಈ ಸೀಸನ್‌ನಲ್ಲಿ ತೀರಾ ಕಾಮನ್‌ ಆಗಿವೆ ಎನ್ನುತ್ತಾರೆ.

ಹೈ ಬನ್‌ ಹೇರ್‌ಸ್ಟೈಲ್‌

ನೆತ್ತಿಯ ಮೇಲೆ ಹಾಕುವಂತಹ ಹೈ ಬನ್‌ ಹೇರ್‌ಸ್ಟೈಲ್‌ಗಳು ಇದೀಗ ಬಿಸಿಲಿನ ಝಳದಲ್ಲಿ ಹೈಲೈಟ್‌ ಆಗುತ್ತಿವೆ. ಕೆಳಗಿನಿಂದ ಮೇಲಿನವರೆಗೂ ಕೂದಲನ್ನು ಕಟ್ಟಿ ಹಾಕುವಂತಹ ವಿನ್ಯಾಸದಲ್ಲಿ ಹಾಗೂ ನೆತ್ತಿಯ ಮೇಲೆ ಸುತ್ತಿ ಅಥವಾ ಹರಡಿದಂತೆ ಕಾಣುವ ರೀತಿಯಲ್ಲಿ ಹಾಕುವ ಹೇರ್‌ಬನ್‌ಗಳು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಇವು ನೋಡಲು ಕೂಡ ಆಕರ್ಷಕವಾಗಿ ಕಾಣಿಸುತ್ತವೆ. ಜೊತೆಗೆ ಸೆಕೆಯಾಗುವುದಿಲ್ಲ!

Summer Hairstyles

ಪೋನಿಟೈಲ್‌ ವಿತ್‌ ಫ್ರಿಂಝ್‌ ಹೇರ್‌ಸ್ಟೈಲ್‌

ಮುಂಭಾಗದಲ್ಲಿ ಹುಡುಗಿಯರ ಹಣೆಯನ್ನು ಕವರ್‌ ಮಾಡುವ ಫ್ರಿಂಝ್‌ ಹೇರ್‌ಸ್ಟೈಲ್‌ ಹಿಂದೆ ಸಿಂಪಲ್‌ ಪೋನಿಟೈಲ್‌ ಕೂಡ ಈ ಸೀಸನ್‌ನಲ್ಲಿ ಮರಳಿದೆ. ನೋಡಲು ಸಿಂಪಲ್ಲಾಗಿ ಕಾಣಿಸುವ ಈ ಹೇರ್‌ಸ್ಟೈಲ್‌ ನೋಡಿದಾಗ ಖಾಲಿ ಎಂದೆನಿಸುವುದಿಲ್ಲ. ಬದಲಿಗೆ ಎರಡು ಹೇರ್‌ಸ್ಟೈಲ್‌ ಕಾಂಬಿನೇಷನ್‌ ಇದಾಗಿರುತ್ತದೆ.

ಹನ್‌ ಹೇರ್‌ಸ್ಟೈಲ್‌

ಅರ್ಧ ಫ್ರೀ ಹೇರ್‌ಸ್ಟೈಲ್‌ ಹಾಗೂ ಅರ್ಧ ಕಟ್ಟಿದ ಬನ್‌ ಹೇರ್‌ಸ್ಟೈಲ್‌ ಕಾಂಬೀನೇಷನ್‌ ಈ ಸೀಸನ್‌ನ ಹನ್‌ ಹೇರ್‌ಸ್ಟೈಲ್‌ನಲ್ಲಿ ಸೇರಿದೆ. ಇವೆರಡರೊಳಗೆ ಹಣೆ ಮುಂಭಾಗದ ಫಿಂಝ್‌ ಹೇರ್‌ಸ್ಟೈಲ್‌ ಮಿಕ್ಸ್‌ ಆಗಿದೆ. ಇವೆಲ್ಲದರ ಸಮಾಗಮ ಫ್ರಿಂಝ್‌ ಹನ್‌ ಹೇರ್‌ಸ್ಟೈಲ್‌. ಇದು ಈ ಸೀಸನ್‌ನಲ್ಲಿ ಇದು ಹುಡುಗಿಯರ ಫೇವರೇಟ್‌ ಲಿಸ್ಟ್‌ನಲ್ಲಿದೆ.

Summer Hairstyles

ಬೇಸಿಗೆ ಹೇರ್‌ಸ್ಟೈಲ್‌ ಫಾಲೋ ಮಾಡಲು ಹೀಗೆ ಮಾಡಿ

  • ಹೊರಗಡೆ ಹೋಗುವಾಗ ಮೇಲಿನ ಹೇರ್‌ಸ್ಟೈಲ್‌ಗಳನ್ನು ಮಾಡಿ.
  • ಮುಖದ ಆಕಾರಕ್ಕೆ ತಕ್ಕಂತೆ ಇವನ್ನು ಆಯ್ಕೆ ಮಾಡಿ.
  • ಫ್ರಿಂಝ್‌ ಮಾಡದಿದ್ದವರೂ ಸೈಡ್‌ಲಾಕ್ಸ್‌ ಕೂದಲ ವಿನ್ಯಾಸ ಮಾಡಬಹುದು.
  • ತೀರಾ ಟೈಟಾಗಿ ಕಟ್ಟಬೇಡಿ. ತಲೆ ನೋವಾಗಬಹುದು.
  • ಮೇಲಿನ ಹೇರ್‌ಸ್ಟೈಲ್ಸ್‌ ನಿಮಗೆ ಸ್ಲಿಮ್‌ ಲುಕ್‌ ನೀಡಬಹುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Earrings Fashion: ಬಳೆಗಿಂತ ದೊಡ್ಡದಾಯ್ತು ಕಿವಿಯ ಹೂಪ್‌ ರಿಂಗ್‌!

Continue Reading

ಲೈಫ್‌ಸ್ಟೈಲ್

Vastu Tips: ಸುಖ, ಶಾಂತಿ, ಸಮೃದ್ಧಿಗಾಗಿ ಹೀಗಿರಲಿ ಮನೆಯ ಕಿಟಕಿ, ಬಾಗಿಲು

Vastu Tips: ನಮ್ಮ ಪೂರ್ವಜರು ಕೂಡ ಮನೆಯ ಪ್ರತಿಯೊಂದು ಭಾಗವನ್ನು ವಾಸ್ತುವಿನ ದೃಷ್ಟಿಕೋನದಿಂದಲೇ ನೋಡುತ್ತಿದ್ದರು. ಕ್ರಮೇಣ ನಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿದೆವು. ಆದರೆ ಈಗ ಮತ್ತೆ ವಾಸ್ತುವಿಗೆ (Vastu Tips) ಪ್ರಾಮುಖ್ಯತೆ ಹೆಚ್ಚಾಗುತ್ತಿದೆ. ಮನೆಗೆ ಕಿಟಕಿ ಬಾಗಿಲು ಅಳವಡಿಸುವುದಕ್ಕೂ ವಾಸ್ತು ಪಾಲನೆ ಮಾಡುವುದು ಮುಖ್ಯ. ಇದರಿಂದ ಮನೆಯೊಳಗೆ ಧನಾತ್ಮಕ ಶಕ್ತಿ ವೃದ್ಧಿಯಾಗಿಸಬಹುದು.

VISTARANEWS.COM


on

By

Vastu Tips
Koo

ಮನೆಯೊಳಗೆ (home) ಸುಖ, ಶಾಂತಿ, ನೆಮ್ಮದಿ ಇರಬೇಕಾದರೆ ಧನಾತ್ಮಕ ಶಕ್ತಿ (Positive energy) ವೃದ್ಧಿಸಿಕೊಳ್ಳುವುದು ಬಹು ಮುಖ್ಯ. ಇದಕ್ಕಾಗಿ ವಾಸ್ತು ಅಂಶಗಳನ್ನು ನಾವು ಪರಿಗಣಿಸಿಬೇಕು. ನಮ್ಮ ಪೂರ್ವಜರು ಕೂಡ ಮನೆಯ ಪ್ರತಿಯೊಂದು ಭಾಗವನ್ನು ವಾಸ್ತುವಿನ ದೃಷ್ಟಿಕೋನದಿಂದಲೇ ನೋಡುತ್ತಿದ್ದರು. ಕ್ರಮೇಣ ನಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿದೆವು. ಆದರೆ ಈಗ ಮತ್ತೆ ವಾಸ್ತುವಿಗೆ (Vastu Tips) ಪ್ರಾಮುಖ್ಯತೆ ಹೆಚ್ಚಾಗುತ್ತಿದೆ.

ಮನೆಯಾದ್ಯಂತ ಧನಾತ್ಮಕ ಶಕ್ತಿಯನ್ನು ವೃದಿಸುವುದು ಸುಲಭವಲ್ಲ. ವಾಸ್ತು ಪ್ರಕಾರ ಮನೆಗೆ ಬಾಗಿಲು (door) ಮತ್ತು ಕಿಟಕಿಗಳನ್ನು (window) ಅಳವಡಿಸಿದರೆ ಮನೆಯೊಳಗೆ ಧನಾತ್ಮಕ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು.

ವಾಸ್ತು ಪ್ರಕಾರ ಬಾಗಿಲು ಮತ್ತು ಕಿಟಕಿಗಳನ್ನು ಅಳವಡಿಸಿದರೆ ಮುಚ್ಚಿರುವ ಜಾಗದಲ್ಲೂ ಧನಾತ್ಮಕ ಶಕ್ತಿ ಪುನರುತ್ಪಾದನೆಯಾಗುತ್ತದೆ. ಈ ಬಾಗಿಲು ಮತ್ತು ಕಿಟಕಿಗಳ ಮೂಲಕ ಶಕ್ತಿಗಳು ಮನೆಯ ಒಳ ಮತ್ತು ಹೊರಗೆ ಹರಿಯುತ್ತವೆ. ಆರೋಗ್ಯಕರ ಮತ್ತು ಶ್ರೀಮಂತ ಜೀವನಶೈಲಿಯ ವೃದ್ಧಿಗಾಗಿ ಇವುಗಳನ್ನು ಇಡಲು ನಿರ್ದಿಷ್ಟ ಜಾಗಗಳಿವೆ ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ: Vastu Tips: ನಿಮ್ಮ ಮನೆಯಲ್ಲಿ ಸಂತೋಷ ವೃದ್ಧಿಸಬೇಕೆ? ಈ ಸಲಹೆಗಳನ್ನು ಪಾಲಿಸಿ

ಬಾಗಿಲು, ಕಿಟಕಿಗಳಿಗೆ ವಾಸ್ತು ಪಾಲನೆ ಯಾಕೆ?

ಮನೆ ನಿರ್ಮಿಸಲು ಉತ್ಸುಕರಾಗಿರುವ ಮನೆ ಮಾಲೀಕರು ಹಲವಾರು ಕಾರಣಗಳಿಗಾಗಿ ಬಾಗಿಲು ಮತ್ತು ಕಿಟಕಿಗಳನ್ನು ಇಡುವ ಸ್ಥಾನ, ದಿಕ್ಕು ಮತ್ತು ಬಳಸುವ ವಸ್ತುಗಳ ಬಗ್ಗೆ ವಿಶೇಷ ಗಮನವನ್ನು ನೀಡಬೇಕು. ಅವು ಗಾಳಿ ಮತ್ತು ಸೂರ್ಯನ ಬೆಳಕಿಗೆ ಪೂರಕವಾಗಿದೆಯೇ ಎಂಬುದನ್ನು ನೋಡಿಕೊಳ್ಳಬೇಕು. ಇದರಿಂದಲೇ ಮನೆಯೊಳಗೇ ಧನಾತ್ಮಕ ಶಕ್ತಿ ವೃದ್ಧಿಯಾಗುತ್ತದೆ ಮತ್ತು ನಕಾರಾತ್ಮಕ ಶಕ್ತಿ ಮನೆಯೊಳಗೆ ಪ್ರವೇಶಿಸುವುದನ್ನು ತಡೆಯುತ್ತದೆ.
ಹೊಸ ಮನೆಯನ್ನು ನಿರ್ಮಿಸುತ್ತಿದ್ದರೆ ಅಥವಾ ಹಳೆ ಮನೆಯನ್ನು ನವೀಕರಿಸುತ್ತಿದ್ದರೆ ಬಾಗಿಲು ಮತ್ತು ಕಿಟಕಿಗಳ ವಾಸ್ತು ಬಗ್ಗೆ ತಿಳಿದುಕೊಳ್ಳಿ.


ಸರಿಯಾದ ಮುಖ್ಯ ಬಾಗಿಲು

ಮನೆಯ ಮುಖ್ಯ ಬಾಗಿಲು ದೊಡ್ಡ ಬಾಗಿಲಾಗಿರಬೇಕು. ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಒಳಗೆ ತೆರೆದುಕೊಳ್ಳುವ ಎರಡು ಕವಾಟದ ಬಾಗಿಲು ಮಂಗಳಕರ. ಪ್ರಕಾಶಮಾನವಾದ ದೀಪಗಳು ಮತ್ತು ಉತ್ತಮ ಬಣ್ಣಗಳೊಂದಿಗೆ ಮುಖ್ಯ ಬಾಗಿಲಿನ ಮೇಲೆ ಸುಂದರವಾದ ವಿನ್ಯಾಸಗಳನ್ನು ಅಳವಡಿಸಿಕೊಳ್ಳಿ. ನೀರಸವಾದ ಮುಖ್ಯ ಬಾಗಿಲು ಮನೆಗೆ ಶೋಭೆಯಲ್ಲ.

ಬಾಗಿಲುಗಳ ಸರಿಯಾದ ಸಂಖ್ಯೆ

ಸಕಾರಾತ್ಮಕತೆಯು ಸಹ ಸಮ ಸಂಖ್ಯೆಗಳಲ್ಲಿ ಬರುತ್ತದೆ. ಮನೆಯಲ್ಲಿ ಬಾಗಿಲು ಮತ್ತು ಕಿಟಕಿಗಳ ಸಂಖ್ಯೆ ಯಾವಾಗಲೂ ಸಮವಾಗಿರಬೇಕು. ಎರಡು, ನಾಲ್ಕು, ಆರು ಹೀಗೆ ಎರಡರ ಗುಣಕಗಳಲ್ಲಿರಬೇಕು ಎನ್ನುತ್ತಾರೆ ವಾಸ್ತು ತಜ್ಞರು.


ಬಾಗಿಲಿನ ಗಾತ್ರದಲ್ಲಿ ಸ್ಥಿರತೆ

ಮುಂಭಾಗದ ಬಾಗಿಲನ್ನು ಹೊರತುಪಡಿಸಿ ಮನೆಯಲ್ಲಿ ಎಲ್ಲಾ ಆಂತರಿಕ ಬಾಗಿಲುಗಳ ಗಾತ್ರದಲ್ಲಿ ಒಂದೇ ಆಗಿರಬೇಕು. ವಿಭಿನ್ನ ಬಾಗಿಲು ಗಾತ್ರಗಳು ಮನೆಗೆ ಒಳ್ಳೆಯದಲ್ಲ. ಎದ್ದು ಕಾಣಬೇಕಾದ ಏಕೈಕ ಬಾಗಿಲು ಮುಖ್ಯ ಬಾಗಿಲು. ಮನೆಯೊಳಗೆ ಕೆಲವು ಬಾಗಿಲುಗಳನ್ನು ದೊಡ್ಡದಾಗಿ ಮಾಡಲು ಬಯಸಿದರೆ ಅವುಗಳನ್ನು ಉತ್ತರ ಅಥವಾ ಪೂರ್ವಕ್ಕೆ ಬದಲಾಗಿ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇರಿಸಬೇಕು.

ದೋಷರಹಿತವಾಗಿರಲಿ ಮನೆ ಬಾಗಿಲು

ಮನೆಯಲ್ಲಿ ಬಾಗಿಲುಗಳ ಕಾರ್ಯವಿಧಾನದ ವಿಷಯಕ್ಕೆ ಬಂದರೆ ಬಾಗಿಲು ತೆರೆಯುವಾಗ ಅಥವಾ ಮುಚ್ಚುವಾಗ ಕೀಲು ಬಾಗಿಲುಗಳನ್ನು ಹಾಕುವುದು ಉತ್ತಮ. ಮನೆಯಲ್ಲಿ ಬಾಗಿಲುಗಳು ಮತ್ತು ಕಿಟಕಿಗಳೊಂದಿಗೆ ಹೆಚ್ಚು ಜಗಳಗಳು ಇರುತ್ತದೆ. ಸ್ಮೂತ್ ಕೀಲುಗಳು ಮನೆಯಲ್ಲಿ ಉತ್ತಮ ಸಂಬಂಧಗಳನ್ನು ಪ್ರತಿಬಿಂಬಿಸುತ್ತವೆ. ಸ್ವಯಂ-ಮುಚ್ಚುವ ಬಾಗಿಲುಗಳನ್ನು ತಪ್ಪಿಸುವುದು ಒಳ್ಳೆಯದು.

ಕಿಟಕಿಗಳು

ಎಲ್ಲಾ ಕಿಟಕಿಗಳು ಸರಿಯಾದ ಆಕಾರ ಮತ್ತು ಸಮವಾದ ಎತ್ತರವನ್ನು ಹೊಂದಿರಬೇಕು. ಕಿಟಕಿಗಳು ತಾಜಾ ಗಾಳಿ ಮತ್ತು ಸೂರ್ಯನ ಬೆಳಕಿನ ಮೂಲವಾಗಿರುತ್ತದೆ. ಅವುಗಳಿಗೆ ಯಾವಾಗಲೂ ಎದುರು ಬಾಗಿಲುಗಳನ್ನು ಇಡಬೇಕು. ಮನೆಯಲ್ಲಿ ಗರಿಷ್ಠ ವಾತಾಯನವಿದೆ ಎಂದು ಇದು ಖಚಿತಪಡಿಸುತ್ತದೆ. ಮನೆಯಲ್ಲಿರುವ ಕಿಟಕಿಗಳ ಸಂಖ್ಯೆಯೂ ಸಮ ಸಂಖ್ಯೆಯಲ್ಲಿರಬೇಕು. ಕಿಟಕಿಗಳಿಗೆ ಸಾಮಾನ್ಯವಾಗಿ ನೈಋತ್ಯ ದಿಕ್ಕನ್ನು ತಪ್ಪಿಸಿ. ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಕಿಟಕಿಗಳು ದೊಡ್ಡದಾಗಿದ್ದರೆ ಉತ್ತಮ. ಉತ್ತರವು ಸಮೃದ್ಧಿಯನ್ನು ತರುತ್ತದೆ ಆದರೆ ಪೂರ್ವವು ಪ್ರಗತಿ ಮತ್ತು ಆರೋಗ್ಯವನ್ನು ತರುತ್ತದೆ.

ಬಾಗಿಲಿಗೆ ಬಳಸುವ ವಸ್ತುಗಳು

ಬಾಗಿಲುಗಳಿಗೆ ವಸ್ತುಗಳನ್ನು ಎಚ್ಚರಿಕೆಯಿಂದ ಆರಿಸುವುದು ಮುಖ್ಯ. ಏಕೆಂದರೆ ಇದು ಎಷ್ಟು ಮಂಗಳಕರ ಎಂಬುದನ್ನು ನಿರ್ಧರಿಸುತ್ತದೆ. ಬಾಗಿಲುಗಳಿಗೆ ವಸ್ತುಗಳನ್ನು ಆಯ್ಕೆಮಾಡುವಾಗ ಮರದ ಬಾಗಿಲು ಯಾವಾಗಲೂ ಅತ್ಯುತ್ತಮ ಆಯ್ಕೆಯಾಗಿದೆ. ಇದಲ್ಲದೆ ಉತ್ತರ ದಿಕ್ಕಿನ ಬಾಗಿಲುಗಳಿಗೆ ಲೋಹ ಅಥವಾ ಕಬ್ಬಿಣದಂತಹ ಬೆಳ್ಳಿಯನ್ನು ಹೊಂದಿರುವ ಬಾಗಿಲುಗಳನ್ನು ಆಯ್ಕೆ ಮಾಡಿಕೊಳ್ಳಿ. ದಕ್ಷಿಣಕ್ಕೆ ಮರದ ಮತ್ತು ಲೋಹದ ಅಂಶಗಳನ್ನು ಹೊಂದಿರುವ ಬಾಗಿಲುಗಳು ಸೂಕ್ತವಾಗಿದೆ. ಪೂರ್ವ ದಿಕ್ಕಿಗೆ ಮರದಿಂದ ಮಾಡಿದ ಬಾಗಿಲು ಉತ್ತಮ. ಪಶ್ಚಿಮಕ್ಕೆ ಕಬ್ಬಿಣದಂತಹ ಲೋಹದಿಂದ ಪ್ರಧಾನವಾಗಿ ಮಾಡಿದ ಬಾಗಿಲನ್ನು ಆಯ್ಕೆ ಮಾಡಿಕೊಳ್ಳಿ.

ಬಾಗಿಲುಗಳು ಮತ್ತು ಕಿಟಕಿಗಳ ಬಣ್ಣ

ಗಾಢವಾದ ಬಣ್ಣಗಳು ಮನೆಯೊಳಗೆ ಹರ್ಷಚಿತ್ತ ಮತ್ತು ಶಕ್ತಿಯುತ ಮನಸ್ಥಿತಿಗೆ ಕಾರಣವಾಗುತ್ತವೆ. ಆದ್ದರಿಂದ ಮುಂಭಾಗದ ಬಾಗಿಲುಗಳಿಗೆ ಹಳದಿ ಮತ್ತು ನೀಲಿ ಬಣ್ಣಗಳನ್ನು ಆರಿಸಿ.

ಅಲಂಕಾರಿಕ ವಸ್ತುಗಳು

ಬಾಗಿಲಿನ ಮುಂದೆ ಹನುಮಾನ್ ಅಥವಾ ಗಣೇಶನ ವಿಗ್ರಹವನ್ನು ಇರಿಸುವುದರಿಂದ ದುಷ್ಟ ಶಕ್ತಿಗಳನ್ನು ದೂರವಿರಿಸಬಹುದು ಎಂದು ನಂಬಲಾಗಿದೆ. ಹಿತ್ತಾಳೆಯ ಬಟ್ಟಲಿನಲ್ಲಿ ನೀರನ್ನು ಇಟ್ಟುಕೊಳ್ಳುವುದು ಮನೆಯಲ್ಲಿ ನಕಾರಾತ್ಮಕತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಅದೃಷ್ಟ ಮತ್ತು ಸಂಪತ್ತನ್ನು ಆಕರ್ಷಿಸಲು ಬುದ್ಧನ ಪ್ರತಿಮೆ ಅಥವಾ ಗಾಳಿಯ ಚೈಮ್ ಅನ್ನು ಪ್ರವೇಶದ್ವಾರದ ಬಳಿ ಇರಿಸಬಹುದು.


ವಾಸ್ತು ಪರಿಣಾಮ

ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಬಾಗಿಲು, ಕಿಟಕಿಗಳು ತಾಜಾ ಗಾಳಿ ಮತ್ತು ಬೆಳಿಗ್ಗೆ ಒಳ್ಳೆಯದು. ದಿನದ ಆರಂಭದಲ್ಲಿ ಇದು ಮನೆಯ ಶುದ್ಧೀಕರಣ ಪ್ರಕ್ರಿಯೆಯನ್ನು ನಡೆಸುತ್ತದೆ.

ದಕ್ಷಿಣ ದಿಕ್ಕು ಎಲ್ಲಾ ಉತ್ತಮ ಶಕ್ತಿಗಳ ಕೇಂದ್ರ ಎಂದು ಪರಿಗಣಿಸಲಾಗಿದೆ. ದಕ್ಷಿಣಕ್ಕೆ ಎದುರಾಗಿ ನಿಖರವಾಗಿ ಮತ್ತು ಮಧ್ಯದಲ್ಲಿ ಬಾಗಿಲು, ಕಿಟಕಿಗಳನ್ನು ಇರಿಸಿದರೆ ಮನೆಯೊಳಗೆ ಉತ್ತಮ ಶಕ್ತಿ ಸಂಚಾರವಾಗುತ್ತದೆ.

ಪೂರ್ವ ಎಲ್ಲಕ್ಕಿಂತ ಹೆಚ್ಚು ಶಕ್ತಿಶಾಲಿಯಾಗಿದೆ. ಇಲ್ಲಿ ಪ್ರವೇಶದ್ವಾರಗಳು ಸಮೃದ್ಧಿ, ಶಕ್ತಿ ಮತ್ತು ಸಂಪತ್ತನ್ನು ಆಕರ್ಷಿಸುತ್ತದೆ.

ಪಶ್ಚಿಮ ದಿಕ್ಕು ಸೂರ್ಯಾಸ್ತಮಾನವನ್ನು ಆನಂದಿಸುವ ಮನೆಮಾಲೀಕರಿಗೆ ಸೂಕ್ತವಾಗಿದೆ. ಈ ದಿಕ್ಕು ಸಂಪತ್ತು ಮತ್ತು ಸಮೃದ್ಧಿಯನ್ನು ಉತ್ತೇಜಿಸುತ್ತದೆ.

ಏನು ಮಾಡಬೇಕು?

ಮನೆಯ ಮುಖ್ಯ ಬಾಗಿಲು ಹೊಸ್ತಿಲನ್ನು ಹೊಂದಿರಬೇಕು. ಮನೆಗೆ ಸಂಪತ್ತನ್ನು ಆಕರ್ಷಿಸಲು ನಿರ್ದಿಷ್ಟ ಸಂಖ್ಯೆಯಲ್ಲಿ ಹೊಸ್ತಿಲಿನ ಎದುರು ಮೆಟ್ಟಿಲುಗಳನ್ನು ಇರಿಸಬೇಕು.

ಮುಖ್ಯ ಬಾಗಿಲು ಯಾವಾಗಲೂ ನೆಲದ ಮಟ್ಟಕ್ಕಿಂತ ಮೇಲಿರಬೇಕು. ಮಲಗುವ ಕೋಣೆಯ ಬಾಗಿಲುಗಳು ಮುಖ್ಯ ಬಾಗಿಲಿಗಿಂತ ಚಿಕ್ಕದಾಗಿರಬೇಕು. ಮುಖ್ಯ ಬಾಗಿಲನ್ನು ಮನೆಯಲ್ಲಿ ದೊಡ್ಡದಾಗಿಸಬೇಕು. ಎಲ್ಲಾ ಬಾಗಿಲುಗಳು ಪ್ರದಕ್ಷಿಣಾಕಾರವಾಗಿ ತೆರೆದಿರುವುದನ್ನು ಖಚಿತಪಡಿಸಿಕೊಳ್ಳಿ.


ಏನು ಮಾಡಬಾರದು?

ಮುಖ್ಯ ಬಾಗಿಲು ಮತ್ತು ನಿರ್ಗಮನ ಬಾಗಿಲು ಎದುರಾಗಿ ಇರಬಾರದು. ಮುಖ್ಯ ಬಾಗಿಲುಗಳು ಮನೆಯ ಆಯಾವನ್ನು ಬಿಟ್ಟು ಹೊರಗೆ ಇರಬಾರದು. ಮುಖ್ಯ ಬಾಗಿಲನ್ನು ಭೂಗತ ಟ್ಯಾಂಕ್ ಅಥವಾ ಸೆಪ್ಟಿಕ್ ಟ್ಯಾಂಕ್‌ಗಳ ಕೆಳಗೆ ಇಡುವುದನ್ನು ತಪ್ಪಿಸಿ.

ಮುಖ್ಯ ಬಾಗಿಲಿನ ಮುಂದೆ ಶೂ ಅಥವಾ ಕಸವನ್ನು ಇಡಬೇಡಿ. ಮುಖ್ಯ ಬಾಗಿಲಿನ ಮುಂಭಾಗದಲ್ಲಿ ಕಂಬ, ಮರ, ತಂತಿ ಸೇರಿದಂತೆ ಅಡೆತಡೆಗಳನ್ನು ತಪ್ಪಿಸಿ.

ಬಾಗಿಲು ಅಥವಾ ನಿರ್ಗಮನ ಬಾಗಿಲಿನ ಹೊರ ಭಾಗದಲ್ಲಿ ದೇವರ ಚಿತ್ರಗಳನ್ನು ಪ್ರದರ್ಶಿಸಬೇಡಿ. ಬಾಗಿಲಿನ ವಾಸ್ತು ಪ್ರಕಾರ ಇದು ದುಃಖಕ್ಕೆ ಕಾರಣವಾಗಬಹುದು.

ಮನೆಯಲ್ಲಿ ಹೆಚ್ಚಿನ ಮಹಡಿಗಳಿದ್ದರೆ ಪ್ರತಿ ಮಹಡಿಯಲ್ಲಿ ಒಂದರ ಮೇಲೊಂದು ಬಾಗಿಲು ಹಾಕದಂತೆ ನೋಡಿಕೊಳ್ಳಿ.

Continue Reading

ಆರೋಗ್ಯ

Benefits Of Black Raisins: ರಕ್ತದೊತ್ತಡ, ಕೊಲೆಸ್ಟ್ರಾಲ್‌ ನಿಯಂತ್ರಿಸಬೇಕೆ? ಕಪ್ಪು ಒಣದ್ರಾಕ್ಷಿ ನೆನೆಸಿ ತಿನ್ನಿ

ಕಪ್ಪು ಒಣದ್ರಾಕ್ಷಿಗಳನ್ನು ಯಾರಾದರೂ ಕೈಗಿತ್ತರೆ, ನೇರ ಬಾಯಿಯ ದಾರಿಯನ್ನೇ ಕಾಣಿಸುತ್ತೇವೆ ನಾವು. ಎಲ್ಲರಿಗೂ ಇಷ್ಟವಾಗುವ ಈ ಪುಟ್ಟ ತಿನಿಸಿನಲ್ಲಿ ಆರೋಗ್ಯಕ್ಕೆ ಲಾಭವಾಗುವ ಅಂಶಗಳು ಭರಪೂರ ಇವೆ. ಅವುಗಳನ್ನು ನೆನೆಸಿ ತಿಂದರೆ (benefits of black raisins) ಇನ್ನೂ ಒಳ್ಳೆಯದು.

VISTARANEWS.COM


on

Benefits Of Black Raisins
Koo

ಒಣ ಹಣ್ಣುಗಳನ್ನು ಮೆಲ್ಲುವುದನ್ನು ಇಷ್ಟಪಡದವರು ವಿರಳ. ಸುಮ್ಮನೆ ಕೂತಿದ್ದಾಗಲೂ ನಾಲ್ಕು ಒಣ ದ್ರಾಕ್ಷಿ ಕೈಗಿತ್ತರೆ ಬಾಯಿಗೆ ಒಗೆದುಕೊಳ್ಳಲು ಯಾರಿಗೂ ಬೇಸರವಿರುವುದಿಲ್ಲ. ಹಲ್ಲಿಲ್ಲದ ಬಾಯಲ್ಲಿ ಒತ್ತರಿಸಿಟ್ಟುಕೊಳ್ಳುವ ವೃದ್ಧರಿಂದ ಹಿಡಿದು, ಹಲ್ವಾ, ಪಾಯಸದಲ್ಲಿ ಹೆಕ್ಕಿ ತಿನ್ನುವ ಮಕ್ಕಳವರೆಗೆ ಒಣ ದ್ರಾಕ್ಷಿ ಎಲ್ಲರಿಗೂ ಮೆಚ್ಚು. ಸಾಮಾನ್ಯವಾಗಿ ಬಳಸುವ ಹೊಂಬಣ್ಣದ ದ್ರಾಕ್ಷಿಗಳ ಬದಲಿಗೆ ಕಪ್ಪು ದ್ರಾಕ್ಷಿಗಳ ಬಗ್ಗೆ ಇವತ್ತಿನ ನಮ್ಮ ಗಮನ. ಏನಿವುಗಳ ವಿಶೇಷತೆ?
ಒಣ ದ್ರಾಕ್ಷಿಯನ್ನು ನೆನೆಸಿ ತಿನ್ನಬೇಕೆನ್ನುತ್ತದೆ ಪರಂಪರಾಗತ ವೈದ್ಯ ಶಾಸ್ತ್ರ. ಯಾವುದೇ ಒಣ ಹಣ್ಣು, ಬೀಜಗಳನ್ನು ನೆನೆಸಿ ತಿನ್ನುವುದೇ ಶ್ರೇಷ್ಠ ಎಂಬುದನ್ನು ಆಹಾರ ತಜ್ಞರೂ ಅನುಮೋದಿಸುತ್ತಾರೆ. ಇದು ಒಣ ದ್ರಾಕ್ಷಿಯ ಮಟ್ಟಿಗೂ ನಿಜ. ಹಸಿರು, ಹೊಂಬಣ್ಣದ್ದು, ಕಪ್ಪು- ಹೀಗೆ ದ್ರಾಕ್ಷಿಯ ಬಣ್ಣ ಯಾವುದೇ ಇದ್ದರೂ, ಅವುಗಳ ಲಾಭಗಳು ಹೆಚ್ಚಿನ ಪ್ರಮಾಣದಲ್ಲಿ ದೊರೆಯಬೇಕೆಂದರೆ ನೆನೆಸಿ ತಿನ್ನುವುದು, ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಮೆಲ್ಲುವುದು ಇನ್ನೂ ಉತ್ತಮ. ಏನಿದೆ ಇದನ್ನು ತಿನ್ನುವುದರ (benefits of black raisins) ಪ್ರಯೋಜನಗಳು?

ealthy internal organs of human digestive system / highlighted blue organs

ಜೀರ್ಣಾಂಗಗಳು ಸುಸೂತ್ರ

ನಾರಿನಂಶ ಹೆಚ್ಚಿರುವ ಈ ಹಣ್ಣುಗಳನ್ನು ತಿನ್ನುವುದರಿಂದ ಪಚನಾಂಗಗಳ ಮೇಲೆ ಪೂರಕ ಪರಿಣಾಮ ಉಂಟಾಗುತ್ತದೆ. ನೆನೆಸಿದ ಕಪ್ಪುದ್ರಾಕ್ಷಿಯು ಮಲಬದ್ಧತೆಯನ್ನು ನಿವಾರಿಸಿ, ಹೊಟ್ಟೆಯನ್ನು ಶುದ್ಧವಾಗಿಡುತ್ತದೆ. ಆಸಿಡಿಟಿಯನ್ನು ದೂರ ಮಾಡಿ, ಹೊಟ್ಟೆಯ ತೊಂದರೆಯನ್ನು ತಹಬಂದಿಗೆ ತರುತ್ತದೆ.

ಮೂಳೆಗಳು ಸದೃಢ

ಕಪ್ಪು ದ್ರಾಕ್ಷಿಯಲ್ಲಿ ಕ್ಯಾಲ್ಶಿಯಂ ಮತ್ತು ಪೊಟಾಶಿಯಂ ಅಂಶಗಳು ವಿಫುಲವಾಗಿವೆ. ಇದರಿಂದ ಸಣ್ಣ ಪ್ರಮಾಣದಲ್ಲೇ ಆದರೂ, ನಿಯಮಿತ ಸೇವನೆಯಿಂದ ಈ ಖನಿಜಗಳು ದೇಹಕ್ಕೆ ಸದಾ ದೊರೆಯುವಂತೆ ನೋಡಿಕೊಳ್ಳಬಹುದು. ಹೀಗೆ ನಿರಂತರವಾಗಿ ಈ ಪೋಷಕಗಳು ದೊರೆತರೆ, ಕ್ರಮೇಣ ಮೂಳೆಗಳು ಗಟ್ಟಿಯಾಗುತ್ತವೆ. ಅದರಲ್ಲೂ ಬೆಳೆಯುವ ಮಕ್ಕಳಿಗೆ ಮತ್ತು ವೃದ್ಧರಿಗೆ ಮೂಳೆ ಸಬಲವಾಗಿರಬೇಕಾದರೆ ಇಂಥ ಆಹಾರಗಳು ಅಗತ್ಯವಾಗುತ್ತವೆ.

Indian Male Doctor Check BP or Blood Pressure of a Patient L

ರಕ್ತದೊತ್ತಡ ನಿಯಂತ್ರಣ

ಕಪ್ಪು ದ್ರಾಕ್ಷಿಯಲ್ಲಿರುವ ಪೊಟಾಶಿಯಂ ಅಂಶವು ರಕ್ತದಲ್ಲಿರುವ ಸೋಡಿಯಂ ಅಂಶವನ್ನು ತಗ್ಗಿಸುವ ಕೆಲಸವನ್ನು ಮಾಡುತ್ತದೆ. ಇದರಿಂದ ರಕ್ತದ ಒತ್ತಡ ಏರಿಳಿತವಾಗದಂತೆ ನಿರ್ವಹಿಸುವುದು ಸುಲಭವಾಗುತ್ತದೆ. ಇದರಲ್ಲಿರುವ ಕರಗದಿರುವ ನಾರಿನಂಶವು ದೇಹದಲ್ಲಿ ಜಮೆಯಾಗಿರುವ ಕೊಬ್ಬು ಕರಗಿಸುವುದಕ್ಕೂ ಅಳಿಲುಸೇವೆ ಮಾಡುತ್ತದೆ.

ಕೊಲೆಸ್ಟ್ರಾಲ್‌ ನಿಯಂತ್ರಣ

ಶರೀರದಲ್ಲಿ ಕೊಲೆಸ್ಟ್ರಾಲ್‌ ಜಮೆಯಾದರೆ ಆಗುವಂಥ ಸಮಸ್ಯೆಗಳು ಒಂದೆರಡೇ ಅಲ್ಲ. ರಕ್ತನಾಳಗಳಲ್ಲಿ ಜಮೆಯಾಗುವ ಕೊಬ್ಬು ಕ್ರಮೇಣ ಹೃದಯಕ್ಕೆ ಅಳಿಸಲಾಗದ ಬರೆಯನ್ನೇ ಹಾಕಿಬಿಡುತ್ತದೆ. ಹಾಗಾಗಿ ಕೊಲೆಸ್ಟ್ರಾಲ್‌ ಕಡಿಮೆ ಮಾಡುವಂಥ ಆಹಾರಗಳಿಗೆ ಆದ್ಯತೆ ನೀಡುವುದು ಜಾಣತನ. ಕಪ್ಪು ಒಣದ್ರಾಕ್ಷಿಯಲ್ಲಿರುವ ಪಾಲಿಫೆನಾಲ್‌ಗಳಲ್ಲಿ ದೇಹದಲ್ಲಿನ ಕೆಟ್ಟ ಕೊಬ್ಬು ಕಡಿಮೆ ಮಾಡುವ ಗುಣವಿದೆ. ಜೊತೆಗೆ ರಕ್ತದೊತ್ತಡವನ್ನೂ ಇದು ಕಡಿಮೆ ಮಾಡುವುದರಿಂದ, ಹೃದಯದ ಸ್ನೇಹಿತ ಎನಿಸುತ್ತದೆ ಕಪ್ಪು ದ್ರಾಕ್ಷಿ.

ಹಲ್ಲುಗಳ ಆರೋಗ್ಯ ಸುಧಾರಣೆ

ಕಪ್ಪುದ್ರಾಕ್ಷಿಯಲ್ಲಿರುವ ಫೈಟೊ ಕೆಮಿಕಲ್‌ಗಳು ಹಲ್ಲುಗಳಲ್ಲಿ ಹುಳುಕಾಗುವುದನ್ನು ತಪ್ಪಿಸುತ್ತವೆ. ಒಸಡಿನ ಆರೋಗ್ಯವನ್ನೂ ಕಾಪಾಡಿ, ಬಾಯಿಯ ದುರ್ಗಂಧವನ್ನು ನಿವಾರಣೆ ಮಾಡುತ್ತವೆ. ನೆನೆಸಿದ ಕಪ್ಪು ದ್ರಾಕ್ಷಿಗಳನ್ನು ಜಗಿದು ತಿನ್ನುವುದರಿಂದ, ಹಲ್ಲುಗಳ ಎನಾಮಲ್‌ ಹೊದಿಕೆಯನ್ನು ಕ್ಷೇಮವಾಗಿ ಇರಿಸಬಹುದು.

Woman anemia image Coriander Benefits

ರಕ್ತಹೀನತೆ ದೂರ

ದ್ರಾಕ್ಷಿಯಲ್ಲಿ ಕಬ್ಬಿಣದಂಶ ಅಧಿಕವಾಗಿದೆ. ದೇಹದಲ್ಲಿ ಅಗತ್ಯ ಹಿಮೋಗ್ಲೋಬಿನ್‌ ಮಟ್ಟವನ್ನು ಕಾಯ್ದುಕೊಂಡು, ಆಮ್ಲಜನಕದ ಪ್ರಮಾಣದ ಕಡಿಮೆಯಾಗದಂತೆ ನಿರ್ವಹಿಸಲು ಕಬ್ಬಿಣದಂಶ ಅಗತ್ಯ. ಒಂದೊಮ್ಮೆ ಇದು ಕೊರತೆಯಾದರೆ ರಕ್ತಹೀನತೆ ಕಾಡುತ್ತದೆ. ಹಾಗಾಗಿ ನಿಯಮಿತವಾಗಿ ಕಪ್ಪು ದ್ರಾಕ್ಷಿಗಳನ್ನು ಸೇವಿಸುವುದರಿಂದ ಅಗತ್ಯ ಕಬ್ಬಿಣದಂಶವನ್ನು ಪೂರೈಸಿ, ರಕ್ತಹೀನತೆಯನ್ನು ದೂರ ಮಾಡಬಹುದು.

ಕೂದಲು, ಕಣ್ಣುಗಳಿಗೆ ಒಳ್ಳೆಯದು

ಇದರಲ್ಲಿರುವ ವಿಟಮಿನ್‌ ಸಿ ಮತ್ತು ಪಾಲಿಫೆನಾಲ್‌ ಅಂಶಗಳು ದೃಷ್ಟಿಯನ್ನು ಚುರುಕಾಗಿಸುತ್ತವೆ. ಇವುಗಳ ಜೊತೆಗೆ, ಉಳಿದ ಉತ್ಕರ್ಷಣ ನಿರೋಧಕಗಳೂ ಸೇರಿ, ತಲೆಯ ಚರ್ಮದ ಆರೋಗ್ಯವನ್ನು ಸುಧಾರಿಸುತ್ತವೆ. ಇದರಿಂದ ಕೂದಲಿನ ಆರೋಗ್ಯವನ್ನೂ ಸುಧಾರಿಸಲು ಸಾಧ್ಯವಿದೆ. ಕೂದಲು ಉದುರುವುದು, ಬೆಳ್ಳಗಾಗುವುದು, ಸೀಳುಗೂದಲು ಮುಂತಾದವನ್ನು ಕಡಿಮೆ ಮಾಡಲು ಅನುಕೂಲ.

ಇದನ್ನೂ ಓದಿ: Eye Protection: ಡಿಜಿಟಲ್ ಪರದೆಗಳಿಂದ ಕಣ್ಣುಗಳನ್ನು ಕಾಪಾಡಿಕೊಳ್ಳುವುದು ಹೇಗೆ?

Continue Reading
Advertisement
dimond smuggling
ದೇಶ9 seconds ago

Dimond Smuggling : ನೂಡಲ್ಸ್​ ಪ್ಯಾಕೆಟ್​​ನಲ್ಲಿ ಸಿಕ್ಕಿತು 6.46 ಕೋಟಿ ರೂಪಾಯಿ ಮೌಲ್ಯದ ವಜ್ರ!

Tongue Reveals Health
ಆರೋಗ್ಯ46 seconds ago

Tongue Reveals Health: ನಮ್ಮ ಆರೋಗ್ಯದ ಚರಿತ್ರೆಯನ್ನು ನಮ್ಮ ನಾಲಿಗೆಯೇ ಹೇಳುತ್ತದೆ!

HD Devegowda
ಕರ್ನಾಟಕ7 mins ago

HD Devegowda: ನಾನು ಇನ್ನೆರಡು ವರ್ಷ ಬದುಕಬಹುದು ಎಂದು ಕಣ್ಣೀರು ಹಾಕಿದ ದೇವೇಗೌಡರು

Lok Sabha Election 2024 Only a guaranteed wave in Karnataka says Cm Siddaramaiah
ಕರ್ನಾಟಕ13 mins ago

Lok Sabha Election 2024: ಇಲ್ಲಿರೋದು ಗ್ಯಾರಂಟಿ ಅಲೆ ಮಾತ್ರ; ಹಸಿ ಸುಳ್ಳು ಹೇಳುತ್ತಿರುವ ಮೋದಿ, ದೇವೇಗೌಡ: ಸಿಎಂ ಸಿದ್ದರಾಮಯ್ಯ

Virat kohli
ಪ್ರಮುಖ ಸುದ್ದಿ28 mins ago

Virat Kohli : ವಿರಾಟ್ ಕೊಹ್ಲಿಯ 50ನೇ ಏಕದಿನ ಕ್ರಿಕೆಟ್​ ಶತಕಕ್ಕೆ ಅಂತಾರಾಷ್ಟ್ರೀಯ ಗೌರವ

Job Alert
ಉದ್ಯೋಗ30 mins ago

Job Alert: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಮೇ 4ರೊಳಗೆ ಅಪ್ಲೈ ಮಾಡಿ

Murder case In Bengaluur
ಬೆಂಗಳೂರು31 mins ago

Murder Case : ಕೊಲೆಯಾದ ಮಹಿಳೆಗೆ 20 ಹುಡುಗರ ಸಹವಾಸ! ಅವರಿಗೆ ಆಕೆ ಇಟ್ಟಿದ್ದ ಹೆಸರು ಆರೆಂಜ್, ಆ್ಯಪಲ್, ಬನಾನಾ ಇತ್ಯಾದಿ!

Summer Hairstyles
ಫ್ಯಾಷನ್31 mins ago

Summer Hairstyles: ಸೆಕೆಗಾಲದಲ್ಲಿ ಟ್ರೆಂಡಿಯಾದ 3 ಮಿಕ್ಸ್‌ ಮ್ಯಾಚ್‌ ಹೇರ್‌ಸ್ಟೈಲ್ಸ್!

hardik pandya
ಕ್ರೀಡೆ31 mins ago

IPL 2024: ಹಾರ್ದಿಕ್​ ಪಾಂಡ್ಯ ನಿಜವಾಗಿಯೂ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರಾ?; ವಿಚಿತ್ರ ವರ್ತನೆಯ ವಿಡಿಯೊ ವೈರಲ್​

Yuzvendra Chahal
ಪ್ರಮುಖ ಸುದ್ದಿ59 mins ago

Yuzvendra Chahal : ​ ಚಾಹಲ್ ಕೈಬಿಟ್ಟಿರುವುದರ ಹಿಂದಿನ ಕಾರಣ ಬಹಿಂಗ ಮಾಡಿದ ಆರ್​ಸಿಬಿ ಮಾಜಿ ಡೈರೆಕ್ಟರ್​

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ13 hours ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು1 day ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ1 day ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು1 day ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು1 day ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ2 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ3 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ3 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20243 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20243 days ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

ಟ್ರೆಂಡಿಂಗ್‌