Life Lessons: ಜೀವನದಲ್ಲಿ ಬಹಳ ತಡವಾಗಿ ಅರಿವಾಗುವ ಹತ್ತು ಸತ್ಯಗಳಿವು! - Vistara News

ಲೈಫ್‌ಸ್ಟೈಲ್

Life Lessons: ಜೀವನದಲ್ಲಿ ಬಹಳ ತಡವಾಗಿ ಅರಿವಾಗುವ ಹತ್ತು ಸತ್ಯಗಳಿವು!

ಬದುಕಿನಲ್ಲಿ ನಿತ್ಯದ ಧಾವಂತದಲ್ಲಿ, ಬ್ಯುಸಿ ಲೈಫಿನ ಹಳವಂಡಗಳಲ್ಲಿ ಹಿಂದೆಮುಂದೆ ನೋಡದೆ ನಾವು ಓಡುತ್ತಲೇ ಇರುತ್ತೇವೆ. ಬದುಕಿನಲ್ಲಿ ತಡವಾಗಿ ಅರ್ಥವಾಗುವ ಸತ್ಯಗಳು ಹಲವು.

VISTARANEWS.COM


on

life truths
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಜೀವನ ಬಹಳ ಅಮೂಲ್ಯ ಅಂತಾರೆ ಹಿರಿಯರು. ಚಿಕ್ಕವರಾಗಿದ್ದಾಗ ಜೀವನದ ಮರ್ಮಗಳೆಲ್ಲ (life lessons) ಅರಿವಿಗೆ ಬರುವುದಿಲ್ಲ. ಬದುಕಿನ ಒಂದೊಂದೇ ಪಾಠಗಳು ಶುರುವಾಗುವುದೇ ಮೂವತ್ತು ದಾಟಿದ ಮೇಲೆ.

ಹೌದು. ಬದುಕಿನಲ್ಲಿ ನಿತ್ಯದ ಧಾವಂತದಲ್ಲಿ, ಬ್ಯುಸಿ ಲೈಫಿನ ಹಳವಂಡಗಳಲ್ಲಿ ಹಿಂದೆಮುಂದೆ ನೋಡದೆ ನಾವು ಓಡುತ್ತಲೇ ಇರುತ್ತೇವೆ. ಆದರೆ, ಒಂದು ಹಂತದಲ್ಲಿ, ಅಂದರೆ ಬಹುತೇಕ ಬದುಕಿನ್ನು ಹೆಚ್ಚು ಸಮಯ ಇಲ್ಲ ಎಂಬ ಅರಿವಾಗುವ ಹೊತ್ತಿಗೆ, ಛೇ ನಾನು ಇದನ್ನು ಮಾಡಬೇಕಿತ್ತು, ಹೀಗೆ ಬದುಕಬೇಕಿತ್ತು, ಹಾಗಿರಬೇಕಿತ್ತು, ಛೇ ನಾನು ಹೀಗೆ ಯೋಚನೆಯೇ ಮಾಡಿರಲಿಲ್ಲವಲ್ಲ ಎಂಬ ಸತ್ಯಗಳು ಒಂದೊಂದೇ ಅರಿವಾಗಲು ಶುರುವಾಗುತ್ತದೆ. ಆದರೆ, ಆಗ ಸಮಯ ಬಹಳ ಮೀರಿರುತ್ತದೆ, ಅಷ್ಟೇ! ಬನ್ನಿ, ಬದುಕಿನಲ್ಲಿ ತಡವಾಗಿ ಅರ್ಥವಾಗುವ ಸತ್ಯಗಳೇನು (life truths) ಎಂಬುದನ್ನು ನೋಡೋಣ.

1. ಆರೋಗ್ಯವೇ ಭಾಗ್ಯ! ಈ ನಾಣ್ಣುಡಿಯನ್ನು ಬಹಳ ಸಣ್ಣ ವಯಸ್ಸಿನಲ್ಲಿಯೇ ಕೇಳಿರುತ್ತೇವೆ ನಿಜ. ಆದರೆ, ಅದರ ನಿಜವಾದ ಅರ್ಥ ಅರಿವಿಗೆ ಬರುವುದು ಒಂದು ವಯಸ್ಸಿನ ನಂತರವೇ. ಯಾಕೆಂದರೆ, ಸಣ್ಣ ವಯಸ್ಸಿನಲ್ಲಿ ದೇಹ ನಾವು ಹೇಳಿದಂತೆ ಕೇಳುತ್ತಿರುತ್ತದೆ. ಆರೋಗ್ಯದ ಸಮಸ್ಯೆಗಳು ಅಷ್ಟಾಗಿ ಕಾಡುವುದಿಲ್ಲ. ನಮ್ಮ ಬ್ಯುಸಿ ಲೈಫಿನ ಗಡಿಬಿಡಿಯಲ್ಲಿ ನಾವು ಆರೋಗ್ಯವನ್ನು ನಿರ್ಲಕ್ಷಿಸಿ ಬೇರೆ ಕೆಲಸಗಳಿಗಷ್ಟೇ ಗಮನ ಕೊಡಲು ಆರಂಭಿಸುತ್ತೇವೆ. ಆದರೆ, ಒಂದು ಹಂತದ ನಂತರವಷ್ಟೇ, ಛೇ ನಾನು ಆರೋಗ್ಯದ ಕಡೆಗೆ ಗಮನವನ್ನೇ ಕೊಡಲಿಲ್ಲವಲ್ಲ ಎಂಬ ವ್ಯಥೆ ಕಾಡುತ್ತದೆ. ಅದಕ್ಕಾಗಿ, ವಯಸ್ಸೇನೇ ಇರಲಿ, ಆರೋಗ್ಯಕ್ಕೆ ಮೊದಲ ಪ್ರಾಶಸ್ತ್ಯ ಕೊಡಿ. ಆರೋಗ್ಯಕರ ಊಟ ಮಾಡಿ, ವ್ಯಾಯಾಮ ಮಾಡಿ, ದೇಹವನ್ನು ಚುರುಕಾಗಿಡಿ.

Girl walking in Rain

2. ನೋ ಹೇಳುವುದು ಒಕೆ. ಬದುಕಿನಲ್ಲಿ ನಾವು ಮತ್ತೊಬ್ಬರಿಗೆ ನೋ ಹೇಳುವುದನ್ನು ಕಲಿಯುವುದೇ ಇಲ್ಲ. ಇಷ್ಟವಿಲ್ಲದೇ ಇದ್ದರೂ, ಇಲ್ಲ, ಬೇಡ ಎಂದು ನಮ್ಮ ಅಭಿಪ್ರಾಯ ವ್ಯಕ್ತಪಡಿಸುವಲ್ಲಿ ನಾವು ಸೋಲುತ್ತೇವೆ. ನಮ್ಮ ಅಭಿಪ್ರಾಯದಿಂದ ಇನ್ನೊಬ್ಬರಿಗೆ ಬೇಸರವಾದರೆ ಎಂಬ ಅಳುಕು ಕೂಡಾ ಇರುತ್ತದೆ. ಆದರೆ, ಬಹಳ ಸಂದರ್ಭಗಳಲ್ಲಿ ನಮ್ಮ ಕೆಲಸಗಳತ್ತ ನಾವು ಗಮನ ಕೊಡಲು ಸಾಧ್ಯವಾಗುವುದೇ ಇಲ್ಲ. ಅದಕ್ಕಾಗಿ, ನೀವು ನೋ ಹೇಳಿದರೆ ಜಗತ್ತೇನೂ ಕೊನೆಗೊಳ್ಳುವುದಿಲ್ಲ ಎಂಬ ಸತ್ಯವನ್ನು ಮೊದಲು ಅರಿಯಿರಿ. ಕೆಲವಕ್ಕೆ ಸಾಧ್ಯವಿಲ್ಲ ಎಂದು ಹೇಳುವುದೂ ಕೂಡಾ ಸಾಧ್ಯ ಎಂಬುದನ್ನು ಒಪ್ಪಿಕೊಳ್ಳಿ.

3. ಹಣದಿಂದ ಸಂತೋಷ ಕೊಂಡುಕೊಳ್ಳಲು ಸಾಧ್ಯವಿಲ್ಲ. ಸಣ್ಣ ವಯಸ್ಸಿನಲ್ಲಿ ಹಣವೇ ಮುಖ್ಯ ಎಂದು ಹಣದ ಹಿಂದೆ ಬಿದ್ದು, ಆರೋಗ್ಯ, ಸಂಬಂಧಗಳು ಇವೆಲ್ಲ ನಗಣ್ಯವಾಗುವ ಸಂದರ್ಭಗಳೇ ಹೆಚ್ಚು. ಆದರೆ, ಹಣವೆಂಬುದು ಎಲ್ಲವೂ ಅಲ್ಲ ಎಂಬುದನ್ನು ಮೊದಲೇ ಅರಿತುಕೊಳ್ಳಲು ಪ್ರಯತ್ನಿಸಿ.

4. ಸೋಲೇ ಗೆಲುವಿಗೆ ಸೋಪಾನ. ಈ ನಾಣ್ಣುಡಿಯನ್ನು ಕೇಳಿ ಬೆಳೆದಿರುತ್ತೇವೆ ನಿಜ. ಆದರೆ, ಇದನ್ನು ಮನಸ್ಸು ಸುಲಭವಾಗಿ ಸ್ವೀಕರಿಸುವುದಿಲ್ಲ. ಎಲ್ಲದರಲ್ಲೂ ಗೆಲುವು ಬೇಕು ಎಂದು ಮನುಷ್ಯ ಬಯಸುವುದು ಸಾಮಾನ್ಯ. ಆದರೆ, ಸೋಲು ಕೂಡಾ ಸಹಜ ಎಂದು ಸೋಲನ್ನು ಒಪ್ಪಿಕೊಳ್ಳುವುದನ್ನು ಕಲಿತುಕೊಳ್ಳಿ.

5. ಪ್ರೀತಿಪಾತ್ರರೊಂದಿಗೆ ಸಮಯ ಕಳೆಯಿರಿ. ಪ್ರೀತಿಪಾತ್ರರ ಜೊತೆಗೆ ಸಮಯ ಕಳೆಯುವುದು ಸಣ್ಣ ವಯಸ್ಸಿನಲ್ಲಿ ಮುಖ್ಯವಾಗಿ ಕಾಣುವುದಿಲ್ಲ. ನಮ್ಮ ಕೆಲಸದ ಒತ್ತಡಗಳೇ ನಮಗೆ ಮುಖ್ಯವಾಗಿ ಕಾಣುತ್ತದೆ ನಿಜ. ಅವರನ್ನು ನಿಲ್ರಕ್ಷ್ಯವೂ ಮಾಡಿರುತ್ತೇವೆ ನಿಜ. ಆದರೆ, ಬದುಕಿನಲ್ಲಿ ಇವೆಲ್ಲ ಇಲ್ಲವಾದಾಗ, ಯಾರೂ ಜೊತೆಗೆ ಇಲ್ಲದಿದ್ದಾಗ ಪ್ರೀತಿಪಾತ್ರರ ಜೊತೆಗೆ ನಾನು ಸಮಯ ಕಳೆಯಬೇಕಿತ್ತು ಎಂಬ ಹತಾಶಾ ಭಾವ ಕಾಡುತ್ತದೆ.

love

6. ಹೊಸದನ್ನು ಕಲಿಯಲು ವಯಸ್ಸಿನ ಹಂಗಿಲ್ಲ. ಬದುಕಿನಲ್ಲಿ ಎಲ್ಲ ಮುಗಿಯಿತು, ಇನ್ನೇನಿದೆ ಎಂದು ಒಂದು ವಯಸ್ಸಿನಲ್ಲಿ ಅನಿಸುವುದು ಸಹಜ. ಆದರೆ, ಕಲಿಕೆಗೆ ವಯಸ್ಸಿನ ಹಂಗಿಲ್ಲ. ವಯಸ್ಸಾದರೂ ಹೊಸದನ್ನು ಕಲಿಯುವಲ್ಲಿ ಆಸಕ್ತಿ ತೋರಿಸಿದರೆ, ಜೀವನೋತ್ಸಾಹ ಹೆಚ್ಚುತ್ತದೆ. ಲವಲವಿಕೆ ಮೂಡುತ್ತದೆ. ಬದುಕು ಕೊನೆಗೂ ರಮ್ಯವಾಗಿ ಕಾಣಬಹುದು!

7. ಎಲ್ಲದರಲ್ಲೂ ಪರ್ಫೆಕ್ಷನ್‌ ಬೇಕಾಗಿಲ್ಲ. ಬದುಕಿನಲ್ಲಿ ಎಲ್ಲವೂ ಪರ್ಫೆಕ್ಟ್‌ ಆಗಿರಬೇಕು ಎಂದು ಬಯಸುವುದು ತಪ್ಪಲ್ಲ. ಆದರೆ, ಎಲ್ಲವೂ ಪರ್ಫೆಕ್ಟ್‌ ಆಗಿಸುವ ಭರದಲ್ಲಿ ಸಣ್ಣ ಸಣ್ಣ ಸಂತೋಷಗಳನ್ನು ಕಳೆದುಕೊಳ್ಳುತ್ತೇವೆ ಎಂಬುದನ್ನು ನೆನಪಿಡಿ. ಕೊನೆಯ ಗಳಿಗೆಯಲ್ಲಿ ಈ ಅರಿವು ಬರುವು ಮುನ್ನವೇ ಜಾಗೃತರಾಗಿರಿ.

8. ನಮ್ಮನ್ನು ನಾವು ಪ್ರೀತಿಸಬೇಕು. ಎಲ್ಲರೂ ಎಡವುವುದು ಇಲ್ಲಿಯೇ. ನಮ್ಮ ಕುಟುಂಬ, ಮಕ್ಕಳು, ಹಿರಿಯರು, ಗೆಳೆಯರು, ಜವಾಬ್ದಾರಿಗಳು ಹೀಗೆ ಎಲ್ಲವನ್ನೂ ಸಂಭಾಳಿಸಿಕೊಂಡು ಹೆಗಲ ಮೇಲೆ ಹೊತ್ತುಕೊಂಡು ನಡೆಯುವಾಗ ನಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುವುದು, ನಮ್ಮಿಷ್ಟದ ಕೆಲಸಗಳನ್ನು ಮಾಡುವುದನ್ನೇ ನಾವು ಸೈಡಿಗಿಟ್ಟುಬಿಡುತ್ತೇವೆ. ಮೊದಲು ನಮ್ಮನ್ನು ನಾವು ಪ್ರೀತಿಸುವುದು ಕಲಿಯಬೇಕು. ನಮ್ಮಿಷ್ಟದ ಸಂಗತಿಗಳಿಗೂ ಸಮಯ ನೀಡುವುದನ್ನು ಕಲಿಯಬೇಕು.

ಇದನ್ನೂ ಓದಿ: Life tips: ಅಂದುಕೊಂಡದ್ದನ್ನು ಮಾಡಲಾಗದಿದ್ದರೆ ನೀವು ಹೀಗಿದ್ದೀರಿ!

happy couple

9. ಜೀವನ ರೇಸ್‌ ಅಲ್ಲ. ಒಂದೊಂದು ವಯಸ್ಸಿಗೂ ಒಂದೊಂದು ಜವಾಬ್ದಾರಿಗಳು ಸುತ್ತಿಕೊಳ್ಳುತ್ತವೆ ನಿಜ. ಓದಿ ವಿದ್ಯಾವಂತರಾದ ತಕ್ಷಣ ಕೆಲಸ ಹುಡುಕು, ಕಾಲ ಮೇಲೆ ನಿಂತುಕೋ, ಕುಟುಂಬವನ್ನು ನೋಡಿಕೋ, ಮದುವೆಯಾಗಿ, ಮನೆಕಟ್ಟು, ಸಾಲ ತೀರಿಸು, ಇನ್ನೊಂದು ಮನೆ ಕಟ್ಟು, ಸೈಟ್‌ ತೆಗೋ, ಮಕ್ಕಳಿಗೆ ಆಸ್ತಿ ಮಾಡು, ಅವರನ್ನು ಓದಿಸು… ಹೀಗೆ ಬದುಕಿನಲ್ಲಿ ಕೆಲಸಗಳು ಜವಾಬ್ದಾರಿಗಳು ಮುಗಿಯುವುದೇ ಇಲ್ಲ. ಆದರೆ, ಜೀವನ ರೇಸ್‌ ಅಲ್ಲ. ಯಾವುದನ್ನು ಎಷ್ಟು ಮಾಡಬೇಕು ಎಂಬುದು ತಿಳಿದಿರಲಿ. ಇವೆಲ್ಲ ಮಾಡದಿದ್ದರೆ ಬದುಕು ವೇಸ್ಟ್‌ ಅಲ್ಲ. ನಮ್ಮ ಬದುಕಿಗೆ ಯಾವುದು ಅಗತ್ಯ ಎಂಬುದನ್ನು ನೋಡಿಕೊಂಡು, ನಮ್ಮ ಖುಷಿಗಳಿಗೂ ಪ್ರಾಮುಖ್ಯತೆ ಕೊಟ್ಟು ಮಾಡುವುದನ್ನು ಕಲಿಯುವುದು ಮುಖ್ಯ.

10. ಜೀವನವೇ ಒಂದು ಸರ್‌ಪ್ರೈಸ್‌. ಇಲ್ಲಿ ಬಹಳಷ್ಟು ಪ್ರಶ್ನೆಗಳಿಗೆ ನಮಗೆ ಬದುಕು ಅಂತ್ಯವಾಗುವವರೆಗೂ ಉತ್ತರ ದೊರೆಯುವುದಿಲ್ಲ. ಉತ್ತರ ದೊರೆಯದ ಪ್ರಶ್ನೆಗಳ ಬಗೆಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಬದುಕನ್ನು ಬಂದ ಹಾಗೆ ಸ್ವೀಕರಿಸುತ್ತಾ ಇರುವುದರಲ್ಲೇ ಬದುಕಿನ ನಿಜವಾದ ಸತ್ಯ ಅಡಗಿದೆ ಎಂಬುದನ್ನು ಮೊದಲೇ ಅರ್ಥ ಮಾಡಿಕೊಂಡರೆ ಚಿಂತೆಯೇ ಇಲ್ಲ. ಆಗ ಬದುಕು ಸುಂದರವಾಗಿಯೇ ಕಾಣುತ್ತದೆ.

ಇದನ್ನೂ ಓದಿ: Life Tips: ಹೇಗೇ ಇದ್ದರೂ ಬದುಕು ಸುಂದರವಾಗಿ ಕಾಣಬೇಕೆಂದರೆ ಇಲ್ಲಿದೆ ಕೀಲಿಕೈ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಲೈಫ್‌ಸ್ಟೈಲ್

Do You Know: ನಿಮಗಿದು ಗೊತ್ತಾ? ಲವ್‌ ಮಾಡುತ್ತಿದ್ದರೆ ತೂಕ ಜಾಸ್ತಿಯಾಗುತ್ತದೆ!

ಆಶ್ಚರ್ಯವಾದರೂ ಸತ್ಯ. (Do You Know) ಪ್ರೀತಿಸುವುದರಿಂದ ತೂಕದಲ್ಲಿ ಏರಿಕೆಯಾಗುತ್ತದೆ (Weight gain) ಎಂಬುದನ್ನು ಪುಷ್ಟೀಕರಿಸುವ ಹಲವು ಸಂಶೋಧನಾ ವರದಿಗಳು ಬಂದಿವೆ. ಇಂಥದ್ದೇ ಒಂದು ವರದಿಯ ಪ್ರಕಾರ, ಪ್ರೀತಿಯಲ್ಲಿ ಬಿದ್ದ, ಮದುವೆಯಾದ ಸುಮಾರು 8000 ಮಂದಿಯ ತೂಕವನ್ನು ಅಧ್ಯಯನ ಮಾಡಿ ಈ ವರದಿ ಸಿದ್ಧಪಡಿಸಲಾಗಿದೆ. ಮದುವೆಯಾದ ಮಹಿಳೆಯರಲ್ಲಿ ಸಾಮಾನ್ಯವಾಗಿ, ಮದುವೆಯಾಗಿ ಐದೇ ವರ್ಷಗಳಲ್ಲಿ ಅವರು ಸುಮಾರು 11 ಕೆಜಿಗಳಷ್ಟು ತೂಕ ಏರಿಕೆಯಾಗುತ್ತದೆ (Weight gain) ಎನ್ನಲಾಗಿದೆ.

VISTARANEWS.COM


on

Do You Know
Koo

ಪ್ರೀತಿಯಲ್ಲಿರುವುದು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಅತ್ಯಂತ ಮಧುರ ಕ್ಷಣಗಳಲ್ಲಿ ಒಂದು. ಪ್ರೀತಿ ಬದುಕಿನ ಭಾಗ. ಪ್ರೀತಿಯೆಂಬ ಭಾವವಿಲ್ಲದೆ ಬದುಕುವುದು ಕಷ್ಟ. ಇಂತಹ ಪ್ರೀತಿಯ ವ್ಯಾಖ್ಯಾನ ಕಷ್ಟ. ಪ್ರೀತಿಯಲ್ಲಿ ಏರಿಳಿತ ಸಹಜ. ಪ್ರೀತಿಯಲ್ಲಿ ಬಿದ್ದವರಿಗೆ ಇದು ತಿಳಿದಿರುತ್ತದೆ. ಆದರೆ, ಈ ಪ್ರೀತಿಯಲ್ಲಿ ಬೀಳುವುದರಿಂದ (Do You Know) ಆಗುವ ಇನ್ನೊಂದು ಬಹುದೊಡ್ಡ ಸಮಸ್ಯೆ ಎಂದರೆ, ತೂಕ ಏರಿಕೆ (Weight gain)! ಆಶ್ಚರ್ಯವಾದರೂ ಸತ್ಯ. ಹೌದು. ಪ್ರೀತಿಸುವುದರಿಂದ ತೂಕದಲ್ಲಿ ಏರಿಕೆಯಾಗುತ್ತದೆ ಎಂಬುದನ್ನು ಪುಷ್ಟೀಕರಿಸುವ ಹಲವು ಸಂಶೋಧನಾ ವರದಿಗಳು ಬಂದಿವೆ. ಇಂಥದ್ದೇ ಒಂದು ವರದಿಯ ಪ್ರಕಾರ, ಪ್ರೀತಿಯಲ್ಲಿ ಬಿದ್ದ, ಮದುವೆಯಾದ ಸುಮಾರು 8000 ಮಂದಿಯ ತೂಕವನ್ನು ಅಧ್ಯಯನ ಮಾಡಲಾಗಿ ಈ ವರದಿ ಸಿದ್ಧಪಡಿಸಲಾಗಿದೆ. ಮದುವೆಯಾದ ಮಹಿಳೆಯರಲ್ಲಿ ಸಾಮಾನ್ಯವಾಗಿ, ಮದುವೆಯಾಗಿ ಐದೇ ವರ್ಷಗಳಲ್ಲಿ ಅವರು ಸುಮಾರು 11 ಕೆಜಿಗಳಷ್ಟು ತೂಕ ಏರಿಕೆಯಾಗುತ್ತದೆ ಎನ್ನಲಾಗಿದೆ. ಪ್ರೀತಿಸುತ್ತಿರುವ ಆದರೆ ಮದುವೆಯಾಗದೆ ಜೊತೆಗಿರುವ ಜೋಡಿಗಳು ಸುಮಾರು ಎಂಟು ಕೆಜಿ ಏರಿಸಿಕೊಂಡರೆ, ಜೊತೆಯಾಗಿರದ ಅದರೆ ಪ್ರೀತಿಸುತ್ತಿರುವ ಜೋಡಿಗಳ ಪೈಕಿ ಮಹಿಳೆಯರು ಏಳು ಕೆಜಿಗಳಷ್ಟು ತೂಕ ಏರಿಸಿಕೊಳ್ಳುತ್ತಾರಂತೆ. ಹಾಗಾದರೆ ಪ್ರೀತಿಸುವುದರಿಂದ ಮಹಿಳೆಯರ ತೂಕದಲ್ಲಿ ಏರಿಕೆಯಾಗುತ್ತದಾ ಎಂಬ ಸಂಶಯ ನಿಮ್ಮಲ್ಲಿ ಬರಬಹುದು. ಹೌದು ವರದಿಗಳು ಈ ಸಂಶಯವನ್ನು ಅಲ್ಲಗಳೆಯುವುದಿಲ್ಲ. ಹೀಗೆ ತೂಕ ಹೆಚ್ಚಾಗಲು ಸಾಮಾನ್ಯವಾಗಿ ಮೂರು ಕಾರಣಗಳಿವೆ. ಇದು ಪ್ರೀತಿಸುವುದರಿಂದ ತೂಕ ಏರಿಕೆ ಎನ್ನುವುದಕ್ಕಿಂತಲೂ, ಆ ಸಂದರ್ಭ ನಿಮ್ಮ ಆಹಾರ ಕ್ರಮದಿಂದಲೂ ಎಂದು ಹೇಳುತ್ತವೆ ಈ ವರದಿಗಳು. ಸಾಮಾನ್ಯವಾಗಿ ಪ್ರೀತಿಸುವ ಜೋಡಿಗಳು, ಸಾಮಾನ್ಯವಾಗಿ ಈ ಮೂರು ಕಾರಣಗಳಿಂದಾಗಿ ತೂಕ ಏರಿಸಿಕೊಳ್ಳುತ್ತಾರೆ. ಬನ್ನಿ, ಆ ಮೂರು ಕಾರಣಗಳನ್ನು ನೋಡೋಣ.

Strawberry lover

ನಿಮ್ಮ ಸಂಗಾತಿಯ ಕೆಟ್ಟ ಆಹಾರಕ್ರಮ

2007ರಲ್ಲಿ ನಡೆದ ಸಂಶೋಧನಾ ವರದಿಯೊಂದು ಹೇಳುವ ಪ್ರಕಾರ, ಜೋಡಿಯಲ್ಲಿ ಒಬ್ಬರ ತೂಕ ಹೆಚ್ಚಿದ್ದರೆ, ಇನ್ನೊಬ್ಬರ ತೂಕವೂ ಹೆಚ್ಚಾಗುವ ಸಾಧ್ಯತೆ ಶೇ.37ರಷ್ಟು ಹೆಚ್ಚಿರುತ್ತದೆ. ಕಾರಣ ಇಬ್ಬರಲ್ಲಿ ಒಬ್ಬರ ನಡತೆ, ಆಹಾರ ಕ್ರಮ ಮತ್ತೊಬ್ಬರ ಆಹಾರಕ್ರಮದ ಮೇಲೆ ಪರಿಣಾಮ ಬೀರುತ್ತದೆ. ಸಂಗಾತಿಯೊಬ್ಬರು ಹೆಚ್ಚು ಕ್ಯಾಲರಿಯ ಆಹಾರಗಳನ್ನು ಸೇವಿಸುವವರಾಗಿದ್ದರೆ, ಸ್ನ್ಯಾಕ್ಸ್‌, ಸಂಸ್ಕರಿಸಿದ ಆಹಾರ, ಜಂಕ್‌ ಪ್ರಿಯರಾಗಿದ್ದರೆ, ಸಹಜವಾಗಿಯೇ ಅದನ್ನು ಇನ್ನೊಬ್ಬ ಸಂಗಾತಿಯೂ ಅನುಸರಿಸತೊಡಗುತ್ತಾರೆ. ಅವರ ಜೊತೆಗೆ ಎರಡು ತುತ್ತು ಉಂಡರೂ ಕೂಡಾ, ನಿಧಾನವಾಗಿ ಇಬ್ಬರೂ ಒಂದೇ ಅಭ್ಯಾಸವುಳ್ಳವರಾಗಿ ಬದಲಾಗುತ್ತಾರೆ.

ಹೊರಗೆ ತಿನ್ನುವುದು

ಸಂಗಾತಿಗಳಲ್ಲಿ ಒಬ್ಬರು ಫುಡೀ ಅರ್ಥಾತ್‌ ಆಹಾರ ಪ್ರಿಯರಾಗಿದ್ದರಂತೂ ಕತೆ ಮುಗೀತು. ಒಬ್ಬರ ಪರಿಣಾಮ ಇನ್ನೊಬ್ಬರ ಮೇಲೆ ಬೀರುತ್ತದೆ. ಇಬ್ಬರೂ ಹೊರಗೆ ಉಣ್ಣುವುದು ಹೆಚ್ಚಾಗುತ್ತದೆ. ಸಂಜೆಯ ಜೊತ್ತು, ಜೊತೆಗೆ ಸೇರುವ, ಸಮಯ ಕಳೆವ, ಸಿನೆಮಾ ಥಿಯೇಟರ್‌ ಭೇಟಿ ಇತ್ಯಾದಿ ಇತ್ಯಾದಿಗಳ ನೆಪದಲ್ಲಿ ಸಹಜವಾಗಿಯೇ ಹೆಚ್ಚು ಕ್ಯಾಲರಿ ಹೊಟ್ಟೆಗೆ ಹೋಗುತ್ತದೆ. ಅನಾರೋಗ್ಯಕರ ಆಹಾರ ಪದ್ಧತಿ ಹೆಚ್ಚಾಗುತ್ತದೆ, ಪರಿಣಾಮ ತೂಕವೂ ಹೆಚ್ಚುತ್ತದೆ.

Cigarettes and alcohol consumption are known to cause permanent deterioration of bone health Menopause and Bone Loss

ಹೆಚ್ಚು ಆಲ್ಕೋಹಾಲ್‌ ಕುಡಿಯುತ್ತೀರಿ

ಪ್ರೀತಿಯಲ್ಲಿ ಬಿದ್ದಾಗ ಜೊತೆಯಲ್ಲಿ ಸಮಯ ಕಳೆಯುವ ನೆಪದಲ್ಲಿ ಗುಂಡು ಪಾರ್ಟಿಗಳೂ ಹೆಚ್ಚಾಗುತ್ತವೆ. ಆಗಾಗ ಸೇರಿಕೊಂಡು ಆಲ್ಕೋಹಾಲ್‌ ಸೇವಿಸುವುದು ಇತ್ಯಾದಿ ಚಟುವಟಿಕೆಗಳಿಂದ ಸಹಜವಾಗಿಯೇ ತೂಕ ಏರುತ್ತದೆ.

ಹಾಗಾದರೆ ಏನು ಮಾಡಬಹುದು?

  • ನಿಮ್ಮ ಸಂಗಾತಿಯ ಕೆಟ್ಟ ಆಹಾರಕ್ರಮವನ್ನು ನಿಮಗೆ ಸರಿಪಡಿಸಲು ಸಾಧ್ಯವಾಗದಿದ್ದರೂ, ನೀವು ಬದಲಾಗಬೇಡಿ. ನಿಮ್ಮ ಆಹಾರಕ್ರಮದಲ್ಲಿ ಶಿಸ್ತಿರಲಿ.
  • ಪ್ರೀತಿಸುವ ನೆಪದಲ್ಲಿ ಗುಂಡು ಪಾರ್ಟಿ ಮಾಡಿ ಆಲ್ಕೋಹಾಲ್‌ ಸೇವನೆ ಇತ್ಯಾದಿಗಳನ್ನು ಮಾಡುವ ಬದಲು ಪ್ರೀತಿಯಿಂದ ಜೊತೆಯಾಗಿ ಅಡುಗೆ ಮಾಡಿ. ಅದೂ ಕೂಡಾ ಬಹಳ ರೊಮ್ಯಾಂಟಿಕ್‌ ಗಳಿಗೆಗಳನ್ನು ಸೃಷ್ಟಿ ಮಾಡುತ್ತವೆ.
  • ಹೊರಗೆ ಹೋಗಿ ತಿನ್ನುವ ಸಂದರ್ಭ ಹೆಚ್ಚು ಆರ್ಡರ್‌ ಮಾಡಬೇಡಿ. ಅಗತ್ಯಕ್ಕಿಂತ ಕಡಿಮೆ ಆರ್ಡರ್‌ ಮಾಡಿ. ಕಡಿಮೆ ಪ್ರಮಾಣದಲ್ಲಿ ತಿನ್ನಿ. ಒಂದು ಬಗೆಯನ್ನು ಆರ್ಡರ್‌ ಮಾಡಿ ಇಬ್ಬರೂ ಹಂಚಿಕೊಂಡು ತಿನ್ನಿ.
Continue Reading

ಆಹಾರ/ಅಡುಗೆ

Cooking Oils: ಭಾರತೀಯ ಅಡುಗೆ ಶೈಲಿಗೆ ಯೋಗ್ಯವಾದ 7 ಅಡುಗೆ ಎಣ್ಣೆಗಳಿವು

ಎಲ್ಲ ಕೊಬ್ಬೂ ಕೂಡಾ ಸ್ಯಾಚುರೇಟೆಡ್‌ ಹಾಗೂ ಅನ್‌ ಸ್ಯಾಚುರೇಟೆಡ್‌ ಕೊಬ್ಬಿನ ಮಿಶ್ರಣವಾಗಿದ್ದು, ಹೆಚ್ಚು ಸ್ಯಾಚುರೇಟೆಡ್‌ ಕೊಬ್ಬಿರುವ ಎಣ್ಣೆಗಿಂತ, ಅನ್‌ ಸ್ಯಾಚುರೇಟೆಡ್‌ ಕೊಬ್ಬಿರುವ ಎಣ್ಣೆ ಉತ್ತಮ. ಇದು ಕೆಟ್ಟ ಕೊಲೆಸ್ಟೆರಾಲ್‌ ಅನ್ನು ಕಡಿಮೆ ಮಾಡಿ, ಒಳ್ಳೆಯ ಕೊಬ್ಬನ್ನು ದೇಹಕ್ಕೆ ಸೇರುವಂತೆ ಮಾಡುತ್ತದೆ. ಇದರಿಂದ ಇಂತಹ ಎಣ್ಣೆಗಳು ಹೃದಯಕ್ಕೆ ಹೆಚ್ಚು ಕೆಟ್ಟದನ್ನು ಮಾಡಲಾರವು. ಭಾರತೀಯ ಅಡುಗೆಗಳಲ್ಲಿ ಕರಿಯಲು ಯೋಗ್ಯವಾದ ಏಳು ಎಣ್ಣೆಗಳು ಯಾವುವು ಎಂಬುದರ ಬಗ್ಗೆ (Cooking Oils) ಇಲ್ಲಿದೆ ಮಾಹಿತಿ.

VISTARANEWS.COM


on

Cooking Oils
Koo

ಭಾರತೀಯ ಅಡುಗೆಗಳಲ್ಲಿ ಎಣ್ಣೆಗೆ ಮುಖ್ಯ ಸ್ಥಾನವಿದೆ. ನಿತ್ಯವೂ ಏನಾದರೊಂದು ಕರಿಯಲು ಎಣ್ಣೆ ಬೇಕೇ ಬೇಕಾಗುತ್ತದೆ. ಭಾರತೀಯ ಅಡುಗೆಯ ಜೀವಾಳವಾದ ಒಗ್ಗರಣೆಗೂ ಎಣ್ಣೆ ಬೇಕೇ ಬೇಕು. ಬಗೆಬಗೆಯ ಖಾದ್ಯಗಳು, ತರಹೇವಾರಿ ಅಡುಗೆಗಳು, ಕುರುಕಲು ತಿಂಡಿಗಳು ಸೇರಿದಂತೆ ಎಲ್ಲವುಗಳ ತಯಾರಿಯಲ್ಲೂ ಎಣ್ಣೆಗೆ ಪ್ರಮುಖ ಸ್ಥಾನವಿದೆ. ಮಾರುಕಟ್ಟೆಯಲ್ಲಿ ಬೇಕಾದಷ್ಟು ಬಗೆಯ ಅಡುಗೆ ಎಣ್ಣೆಗಳು ಲಭ್ಯವಿವೆ. ಪ್ರತಿ ಎಣ್ಣೆಯೂ ಉಳಿದ ಎಣ್ಣೆಗಳಿಗಿಂತ ತಾನೇ ಶ್ರೇಷ್ಠ, ನಿಮ್ಮ ಆರೋಗ್ಯಕ್ಕೆ ನನ್ನನ್ನೇ ಬಳಸಿ ಎನ್ನುವ ಜಾಹಿರಾತುಗಳು ಗ್ರಾಹಕನನ್ನು ಸಂದಿಗ್ಧಕ್ಕೆ ದೂಡುತ್ತದೆ. ಎಂತಹ ಎಣ್ಣೆಯನ್ನು ಖರೀದಿಸಬೇಕು, ನಿಜಕ್ಕೂ ಯಾವ ಎಣ್ಣೆ ಆರೋಗ್ಯಕ್ಕೆ ಯೋಗ್ಯ ಎಂಬ ಗೊಂದಲದಲ್ಲಿ ತಲೆಕೆಡಿಸಿಕೊಳ್ಳುತ್ತಾನೆ. ಬನ್ನಿ, ಭಾರತೀಯ ಅಡುಗೆಗಳಿಗೆ ಸೂಕ್ತವಾದ ಎಣ್ಣೆ ಯಾವುವು ಎಂಬುದನ್ನು ನೋಡೋಣ.
ಎಲ್ಲ ಕೊಬ್ಬೂ ಕೂಡಾ ಸ್ಯಾಚುರೇಟೆಡ್‌ ಹಾಗೂ ಅನ್‌ ಸ್ಯಾಚುರೇಟೆಡ್‌ ಕೊಬ್ಬಿನ ಮಿಶ್ರಣವಾಗಿದ್ದು, ಹೆಚ್ಚು ಸ್ಯಾಚುರೇಟೆಡ್‌ ಕೊಬ್ಬಿರುವ ಎಣ್ಣೆಗಿಂತ, ಅನ್‌ ಸ್ಯಾಚುರೇಟೆಡ್‌ ಕೊಬ್ಬಿರುವ ಎಣ್ಣೆ ಉತ್ತಮ. ಇದು ಕೆಟ್ಟ ಕೊಲೆಸ್ಟೆರಾಲ್‌ ಅನ್ನು ಕಡಿಮೆ ಮಾಡಿ, ಒಳ್ಳೆಯ ಕೊಬ್ಬನ್ನು ದೇಹಕ್ಕೆ ಸೇರುವಂತೆ ಮಾಡುತ್ತದೆ. ಇದರಿಂದ ಇಂತಹ ಎಣ್ಣೆಗಳು ಹೃದಯಕ್ಕೆ ಹೆಚ್ಚು ಕೆಟ್ಟದನ್ನು ಮಾಡಲಾರವು. ಆದರೆ, ದೇಹಕ್ಕೆ ಒಳ್ಳೆಯ ಕೊಬ್ಬಿನ ಅಗತ್ಯವಿರುವುದು ಹೌದಾದರೂ, ಯಾವುದೇ ಎಣ್ಣೆಯಿರಲಿ, ಅತಿಯಾದ ಸೇವನೆ ಒಳ್ಳೆಯದಲ್ಲ. ಬನ್ನಿ, ಭಾರತೀಯ ಅಡುಗೆಗಳಲ್ಲಿ ಕರಿಯಲು ಯೋಗ್ಯವಾದ ಐದು ಎಣ್ಣೆಗಳು ಯಾವುವು (Cooking Oils) ಎಂಬುದನ್ನು ನೋಡೋಣ.

Rice bran oil

ರೈಸ್‌ ಬ್ರಾನ್‌ ಎಣ್ಣೆ

ರೈಸ್‌ ಬ್ರಾನ್‌ ಅಥವಾ ಅಕ್ಕಿಯ ಹೊರಕವಚದಿಂದ ತಯಾರಿಸಲ್ಪಡುವ ಈ ಎಣ್ಣೆಯಲ್ಲಿ ಒಳ್ಳೆಯ ಕೊಬ್ಬು ಹೆಚ್ಚಿದೆ. ಆಲಿವ್‌ ಎಣ್ಣೆ, ಅವಕಾಡೋ ಎಣ್ಣೆಯಂತೆ ಇದು ಹೃದಯ ಸ್ನೇಹಿ. ಜಪಾನ್‌ನ ಸರ್ಕಾರ ಇದನ್ನು ಆರೋಗ್ಯಕರ ಆಹಾರಗಳ ಪಟ್ಟಿಯಲ್ಲಿ ಸೇರಿಸಿದ್ದು, ಇನ್ಸುಲಿನ್‌ ಮಟ್ಟದ ಮೇಲೆ ಪರಿಣಾಮ ಬೀರದೆ, ದೇಹದಲ್ಲಿ ಸಕ್ಕರೆಯ ಮಟ್ಟವನ್ನು ಇಳಿಸಲೂ ಕೂಡಾ ಇದು ನೆರವಾಗುತ್ತದೆ. ಇದರಲ್ಲಿ ಕ್ಯಾನ್ಸರ್‌ ನಿರೋಧಕ ಗುಣಗಳೂ ಇದ್ದು, ಇದನ್ನು ಭಾರತೀಯ ಅಡುಗೆಗಳಲ್ಲಿ ಇತ್ತೀಚೆಗೆ ಹೇರಳವಾಗಿ ಬಳಸಲಾಗುತ್ತದೆ.

Mustard Oil

ಸಾಸಿವೆ ಎಣ್ಣೆ

ಎರುಸಿಕ್‌ ಆಸಿಡ್‌ ಎಂಬ ಫ್ಯಾಟಿ ಆಸಿಡ್‌ ಅನ್ನು ಹೊಂದಿರುವ ಸಾಸಿವೆ ಎಣ್ಣೆಯನ್ನು ಯುರೋಪ್‌ ಹಾಗೂ ಯುಸ್‌ಗಳಲ್ಲಿ ನಿಷೇಧಿಸಿದ್ದರೂ, ಭಾರತದಲ್ಲಿ ಹೇರಳವಾಗಿ ಬಳಕೆಯಾಗುವ ಎಣ್ಣೆ. ಮುಖ್ಯವಾಗಿ ಉತ್ತರ ಭಾರತದ ಮಂದಿ ಅಡುಗೆಗೆ ಬಳಸುವ ಈ ಸಾಸಿವೆ ಎಣ್ಣೆಯಲ್ಲಿ ಒಮೆಗಾ 3 ಹಾಗೂ ಒಮೆಗಾ 6 ಫ್ಯಾಟಿ ಆಸಿಡ್‌ಗಳಿದ್ದು, ಕಡಿಮೆ ಸ್ಯಾಚುರೆಟೆಡ್‌ ಫ್ಯಾಟ್‌ ಹೊಂದಿದೆ. ಇದರಲ್ಲಿ ಆಂಟಿ ಮೈಕ್ರೋಬಿಯಲ್‌, ಆಂಟಿ ಬಯಾಟಿಕ್‌ ಗುಣಗಳೂ ಇದ್ದು, ಕೆಲವು ಬಗೆಯ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯುವ ಶಕ್ತಿಯನ್ನು ಹೊಂದಿದೆ.

Sunflower oil

ಸೂರ್ಯಕಾಂತಿ ಎಣ್ಣೆ

ಇತ್ತೀಚೆಗಿನ ದಿನಗಳಲ್ಲಿ ಸಾಕಷ್ಟು ಮನೆಗಳಲ್ಲಿ ಸ್ಥಾನ ಪಡೆದಿರುವ ಸೂರ್ಯಕಾಂತಿ ಎಣ್ಣೆಯಲ್ಲಿ ಹೃದಯ ಸ್ನೇಹಿ ಗುಣಗಳಿವೆ. ಇದರಲ್ಲಿ ಪಾಳಿ ಅನ್‌ ಸ್ಯಾಚುರೇಟೆಡ್‌ ಕೊಬ್ಬಿನ ಅಂಶಗಳು ಹೆಚ್ಚಿರುವುದರಿಂದ ಒಳ್ಳೆಯ ಕೊಬ್ಬನ್ನು ಪ್ರೋತ್ಸಾಹಿಸುತ್ತದೆ. ವಿಟಮಿನ್‌ ಇ ಇದರಲ್ಲಿ ಹೇರಳವಾಗಿದ್ದು, ಮಿದುಳಿನ ಆರೋಗ್ಯಕ್ಕೆ ಒಳ್ಳೆಯದು. ಕರಿಯಲು ಈ ಎಣ್ಣೆ ಯೋಗ್ಯವಾಗಿದ್ದು ಬಹಳಷ್ಟು ಮಂದಿ ಇದನ್ನು ನಿತ್ಯವೂ ಬಳಸುತ್ತಾರೆ.

Ghee Testing Method

ತುಪ್ಪ

ಇದರಲ್ಲಿ ಸ್ಯಾಚುರೇಟೆಡ್‌ ಕೊಬ್ಬು ಹೆಚ್ಚಿರುವುದು ಹೌದಾದರೂ, ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿರುವ ಹಾಗೂ ಭಾರತೀಯ ಮನೆಗಳ ಅವಿಭಾಜ್ಯ ಅಂಗ. ಇದರಲ್ಲಿ ವಿಟಮಿನ್‌ ಎ, ಡಿ, ಕೆ ಹಾಗೂ ಇ ಹೇರಳವಾಗಿದ್ದು, ಆಂಟಿ ಕ್ಯಾನ್ಸರ್‌ ಗುಣಗಳನ್ನೂ ಹೊಂದಿದೆ. ಆಂಟಿ ಆಕ್ಸಿಡೆಂಟ್‌ಗಳೂ ಹೇರಳವಾಗಿರುವ ಸಾಕಷ್ಟು ವೈದ್ಯಕೀಯ ಗುಣಗಳನ್ನು ಹೊಂದಿರುವ ಇದು ಭಾರತೀಯ ಆಯುರ್ವೇದ ಚಿಕಿತ್ಸೆಯಲ್ಲಿ ಮಹತ್ವದ ಸ್ಥಾನವನ್ನು ಹೊಂದಿದೆ. ಹೀಗಾಗಿ. ಇದರ ಬಳಕೆ ಭಾರತೀಯ ಅಡುಗೆಗಳಲ್ಲಿ ನಿರಾಕರಿಸುವುದು ಅಸಾಧ್ಯ. ಹಿತಮಿತವಾಗಿ ಬಳಕೆ ಮಾಡಿದಲ್ಲಿ ಉತ್ತಮ ಪ್ರಯೋಜನಗಳನ್ನು ಪಡೆಯಬಹುದು.

Coconut Oil

ತೆಂಗಿನೆಣ್ಣೆ

ಲಾರಿಕ್‌ ಆಸಿಡ್‌ ಎಂಬ ಅಪರೂಪದ ಸ್ಯಾಚುರೇಟೆಡ್‌ ಫ್ಯಾಟ್‌ ತೆಂಗಿನೆಣ್ಣೆಯಲ್ಲಿದ್ದರೂ ಸಾಕಷ್ಟು ಉತ್ತಮ ಆರೋಗ್ಯಕರ ಗುಣಗಳ ಮೂಲಕ ತೆಂಗಿನೆಣ್ನೆ ತಲೆತಲಾಂತರಗಳಿಂದ ಮುಖ್ಯವಾಗಿ ದಕ್ಷಿಣ ಭಾರತೀಯರ ಮನೆಗಳಲ್ಲಿ ಅಡುಗೆಯಲ್ಲಿ ಬಹುಮುಖ್ಯ ಸ್ಥಾಣವನ್ನು ಪಡೆದಿದೆ. ಆಂಟಿ ಆಕ್ಸಿಡೆಂಟ್‌ಗಳೂ ಇದರಲ್ಲಿ ಹೇರಳವಾಗಿದೆ. ಚರ್ಮ ಹಾಗೂ ಕೂದಲ ಆರೋಗ್ಯ ಸೇರಿದಂತೆ ಹಲವು ಲಾಭಗಳು ಇದರಲ್ಲಿವೆ.

Groundnut oil

ನೆಲಗಡಲೆ ಎಣ್ಣೆ

ವಿಟಮಿನ್‌ ಇ ಯಿಂದ ಸಮೃದ್ಧವಾಗಿರುವ ಈ ಎಣ್ಣೆ ಸಾಕಷ್ಟು ಆಂಟಿ ಆಕ್ಸಿಡೆಂಟ್‌ಗಳನ್ನೂ ಹೊಂದಿದೆ. ಸಾಕಷ್ಟು ಪ್ರಮಾಣದಲ್ಲಿ ಇದರಲ್ಲಿ ಸ್ಯಾಚುರೇಟೆಡ್‌ ಕೊಬ್ಬಿದ್ದರೂ, ಇದರ ಇತರ ಆರೋಗ್ಯಕರ ಲಾಭಗಳನ್ನು ಗಮನದಲ್ಲಿಟ್ಟುಕೊಂಡು ಅಡುಗೆಗೆ, ಕರಿಯಲು ಬಳಸಬಹುದು.

Sesame Oil

ಎಳ್ಳೆಣ್ಣೆ

ಭಾರತೀಯ ಆಯುರ್ವೇದದಲ್ಲಿ ಎಳ್ಳೆಣ್ಣೆಗೆ ಮಹತ್ವದ ಸ್ಥಾನವಿದೆ. ದೇಹದಲ್ಲಿ ಕೆಟ್ಟ ಕೊಲೆಸ್ಟೆರಾಲ್‌ ಅನ್ನು ಅಡಿಮೆ ಮಾಡಲು ಈ ಎಣ್ಣೆ ಒಳ್ಳೆಯದು ಎಂಬುದನ್ನು ಸಾಕಷ್ಟು ಸಂಶೋಧನೆಗಳು ಪುಷ್ಠೀಕರಿಸಿವೆ. ಹೃದಯಸ್ನೇಹಿ ಗುಣಗಳನ್ನು ಹೊಂದಿರುವ ಈ ಎಣ್ಣೆಯನ್ನು ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಹಲವೆಡೆ ಅಡುಗೆಗೆ ಬಳಸಲಾಗುತ್ತದೆ. ಹಲವಾರಿ ಆರೋಗ್ಯದ ಲಾಭಗಳನ್ನೂ ಹೊಂದಿರುವ ಇದು ಚರ್ಮ ಹಾಗೂ ಕೂದಲ ಆರೋಗ್ಯಕ್ಕೂ ಒಳ್ಳೆಯದನ್ನೇ ಮಾಡುತ್ತದೆ.
ನೆನಪಿಡಿ: ಉತ್ತಮ ಆರೋಗ್ಯಕ್ಕೆ ಎಣ್ಣೆಗಳು ಬೇಕೇಬೇಕು. ಆದರೆ, ಅತಿಯಾಗಬಾರದು ಅಷ್ಟೇ.

ಇದನ್ನೂ ಓದಿ: Balancing Hormones Naturally: ಹಾರ್ಮೋನು ಸಮತೋಲನಕ್ಕೆ ಬೇಕು ಇಂಥ ಆಹಾರಗಳು

Continue Reading

ದೇಶ

Covishield: ಭಾರತದಲ್ಲಿ ಕೋವಿಶೀಲ್ಡ್‌ ಸೈಡ್‌ ಎಫೆಕ್ಟ್‌ನ ಎಲ್ಲ ಮಾಹಿತಿ ಬಹಿರಂಗ ಎಂದ ಕಂಪನಿ, ಉತ್ಪಾದನೆಯೂ ಸ್ಥಗಿತ!

Covishield: ಅಸ್ಟ್ರಾಜೆನಿಕಾ ಸಹಯೋಗದಲ್ಲಿಯೇ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಕೋವಿಶೀಲ್ಡ್‌ಅನ್ನು ಭಾರತದಲ್ಲಿ ಉತ್ಪಾದನೆ ಮಾಡಿದೆ. ಜಾಗತಿಕವಾಗಿ ಅಡ್ಡ ಪರಿಣಾಮದ ಕುರಿತು ಚರ್ಚಿಸುತ್ತಿರುವ ಬೆನ್ನಲ್ಲೇ ಕಂಪನಿಯು ಸ್ಪಷ್ಟನೆ ನೀಡಿದೆ. ಲಸಿಕೆಯ ಅಡ್ಡ ಪರಿಣಾಮಗಳ ಕುರಿತು ಲಸಿಕೆ ವಿತರಿಸುವಾಗಲೇ ಮಾಹಿತಿ ನೀಡಲಾಗಿದೆ. ಈಗ ಯಾವುದೇ ಮಾಹಿತಿ ಹಂಚಿಕೊಳ್ಳಲು ಬಾಕಿ ಇಲ್ಲ ಎಂಬುದಾಗಿ ಕಂಪನಿ ತಿಳಿಸಿದೆ.

VISTARANEWS.COM


on

Covishield
Koo

ಪುಣೆ: ಲಸಿಕೆಯ ಅಡ್ಡಪರಿಣಾಮದ ಕುರಿತು ಭಾರತ ಸೇರಿ ಜಗತ್ತಿನಾದ್ಯಂತ ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಬ್ರಿಟಿಷ್ ಔಷಧೀಯ ದೈತ್ಯ ಅಸ್ಟ್ರಾಜೆನಿಕಾ (AstraZeneca) ಕಂಪನಿಯು ಕೊರೊನಾ ನಿರೋಧಕ ಲಸಿಕೆ ಕೋವಿಶೀಲ್ಡ್ (Covishield Vaccine)‌ ಅನ್ನು ಜಾಗತಿಕ ಮಟ್ಟದಲ್ಲಿ ಹಿಂಪಡೆಯಲು ಮುಂದಾಗಿದೆ. ಇದರ ಬೆನ್ನಲ್ಲೇ, ಭಾರತದಲ್ಲಿ ಕೋವಿಶೀಲ್ಡ್‌ ಲಸಿಕೆಯನ್ನು ಉತ್ಪಾದಿಸಿದ್ದ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ (SII) ಕಂಪನಿಯು, “ಭಾರತದಲ್ಲಿ ಕೋವಿಶೀಲ್ಡ್‌ ಲಸಿಕೆಯ ಅಡ್ಡ ಪರಿಣಾಮದ ಕುರಿತು ಇದಕ್ಕೂ ಮೊದಲೇ ಬಹಿರಂಗಪಡಿಸಲಾಗಿದೆ” ಎಂದು ಸ್ಪಷ್ಟಪಡಿಸಿದೆ.

ಅಸ್ಟ್ರಾಜೆನಿಕಾ ಸಹಯೋಗದಲ್ಲಿಯೇ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಕೋವಿಶೀಲ್ಡ್‌ಅನ್ನು ಭಾರತದಲ್ಲಿ ಉತ್ಪಾದನೆ ಮಾಡಿದೆ. ಜಾಗತಿಕವಾಗಿ ಅಡ್ಡ ಪರಿಣಾಮದ ಕುರಿತು ಚರ್ಚಿಸುತ್ತಿರುವ ಬೆನ್ನಲ್ಲೇ ಕಂಪನಿಯು ಸ್ಪಷ್ಟನೆ ನೀಡಿದೆ. “ಥ್ರಂಬೋಸಿಸ್ ವಿಥ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (Thrombosis with Thrombocytopenia Syndrome – TTS ಸೇರಿ ಎಲ್ಲ ವಿರಳ ಅಡ್ಡ ಪರಿಣಾಮಗಳ ಕುರಿತು ಈಗಾಗಲೇ ಮಾಹಿತಿ ಬಹಿರಂಗಪಡಿಸಲಾಗಿದೆ” ಎಂದು ಸೀರಂ ಸಂಸ್ಥೆಯ ವಕ್ತಾರರೊಬ್ಬರು ಪ್ರಕಟಣೆ ತಿಳಿಸಿದ್ದಾರೆ.

2021ರಲ್ಲೇ ಉತ್ಪಾದನೆ ಸ್ಥಗಿತ

ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ದೇಶದಲ್ಲಿ ಕೋವಿಶೀಲ್ಡ್‌ ಲಸಿಕೆಯನ್ನು ಕೋಟ್ಯಂತರ ಡೋಸ್‌ಗಳನ್ನು ಜನರಿಗೆ ನೀಡಲಾಗಿದೆ. ಕೊರೊನಾ ಬಿಕ್ಕಟ್ಟಿನ ಬಳಿಕ ಅಂದರೆ, 2021ರ ಡಿಸೆಂಬರ್‌ನಿಂದಲೇ ಭಾರತದಲ್ಲಿ ಕೋವಿಶೀಲ್ಡ್‌ ಲಸಿಕೆಯ ಉತ್ಪಾದನೆಯನ್ನು ನಿಲ್ಲಿಸಲಾಗಿದೆ ಎಂಬುದಾಗಿ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಮಾಹಿತಿ ನೀಡಿದೆ. ಅಷ್ಟೇ ಅಲ್ಲ, ಲಸಿಕೆಯ ಬಾಟಲಿ ಮೇಲೆಯೇ ಅಡ್ಡ ಪರಿಣಾಮದ ಕುರಿತು ಎಚ್ಚರಿಕೆ ನೀಡಿತ್ತು.

ಕೋವಿಶೀಲ್ಡ್‌ ಲಸಿಕೆ ಥ್ರಂಬೋಸಿಸ್ ವಿಥ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (Thrombosis with Thrombocytopenia Syndrome – TTS) ಎಂಬ ಅಪರೂಪದ ಅಡ್ಡ ಪರಿಣಾಮವನ್ನು ಉಂಟುಮಾಡಬಹುದು ಎಂಬುದನ್ನು ಈ ಹಿಂದೆ ಕೋರ್ಟ್‌ನಲ್ಲಿ ಒಪ್ಪಿಕೊಂಡಿದ್ದ ಅಸ್ಟ್ರಾಜೆನಿಕಾ ಕಂಪನಿಯು ಈಗ ವ್ಯಾಪಾರ ಉದ್ದೇಶದಿಂದ ಎಲ್ಲ ಮಾರುಕಟ್ಟೆಗಳಿಂದ ತನ್ನ ಈ ಲಸಿಕೆಯನ್ನು ತೆಗೆದು ಹಾಕುವುದಾಗಿ ಘೋಷಿಸಿದೆ.

ತಜ್ಞರು ಹೇಳುವುದಿಷ್ಟು

ಭಾರತದಲ್ಲಿ ಕೋವಿಶೀಲ್ಡ್‌ ಲಸಿಕೆ ತೆಗೆದುಕೊಂಡವರಲ್ಲಿ ರಕ್ತ ಹೆಪ್ಪುಗಟ್ಟುವ ಅಡ್ಡ ಪರಿಣಾಮದ ಅಪಾಯದ ಸಾಧ್ಯತೆಗಳು ತೀರಾ ಕಡಿಮೆ ಎಂದು ಭಾರತದ ಹಿರಿಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ, ಮಾಜಿ ICMR ವಿಜ್ಞಾನಿ ಡಾ. ರಾಮನ್ ಗಂಗಾಖೇಡ್ಕರ್ ಅವರು ಕೆಲ ದಿನಗಳ ಹಿಂದಷ್ಟೇ ಹೇಳಿದ್ದಾರೆ. ಕೋವಿಶೀಲ್ಡ್ ಅನ್ನು ಸ್ವೀಕರಿಸುವ 10 ಲಕ್ಷ ಜನರಲ್ಲಿ ಏಳರಿಂದ ಎಂಟು ವ್ಯಕ್ತಿಗಳು ಮಾತ್ರ ಥ್ರಂಬೋಸಿಸ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (ಟಿಟಿಎಸ್) ಎಂದು ಕರೆಯಲ್ಪಡುವ ಅಪರೂಪದ ಅಡ್ಡ ಪರಿಣಾಮವನ್ನು ಅನುಭವಿಸುತ್ತಾರೆ. ಭಾರತದಲ್ಲಿ ಇದರ ಪ್ರಮಾಣ ಇನ್ನೂ ಕಡಿಮೆ ಎಂದವರು ತಿಳಿಸಿದ್ದಾರೆ.

ಇದನ್ನೂ ಓದಿ: Covishield vaccine: ಕೋವಿಶೀಲ್ಡ್‌ ಲಸಿಕೆಯಿಂದ ಸೈಡ್‌ ಎಫೆಕ್ಟ್‌ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

Continue Reading

ಆರೋಗ್ಯ

Cancer Risk: ಕ್ಯಾನ್ಸರ್ ಅಪಾಯದಿಂದ ಪಾರಾಗಲು ಯಾವ ಆಹಾರ ಸೇವಿಸಬಾರದು? ಯಾವ ಆಹಾರ ಸೇವಿಸಬೇಕು?

ಜೀನ್‌ಗಳು ಮತ್ತು ಕುಟುಂಬದ ಇತಿಹಾಸವನ್ನು ಹೊರತುಪಡಿಸಿ ಆಹಾರ ಪದ್ಧತಿಯಂತಹ ಬಾಹ್ಯ ಅಂಶಗಳು ಕ್ಯಾನ್ಸರ್ ಹರಡುವಿಕೆಯಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತಿದೆ. ಕ್ಯಾನ್ಸರ್ ಬಾರದಂತೆ (Cancer Risk) ನಾವು ನಮ್ಮನ್ನು ರಕ್ಷಿಸಿಕೊಳ್ಳಲು ಕೆಲವೊಂದು ಆಹಾರವನ್ನು ತ್ಯಜಿಸಲೇಬೇಕು. ಕ್ಯಾನ್ಸರ್‌ ಅಪಾಯದಿಂದ ಪಾರಾಗುವ ಕುರಿತು ಉಪಯುಕ್ತ ಸಲಹೆ ಇಲ್ಲಿದೆ.

VISTARANEWS.COM


on

By

Cancer Risk
Koo

ನಮ್ಮ ಜೀವನ ಶೈಲಿ (life style), ಆಹಾರ (food) ಪದ್ಧತಿಯಿಂದ ಕೆಲವೊಂದು ರೋಗಗಳನ್ನು ಆಹ್ವಾನಿಸುತ್ತಿದ್ದೇವೆ. ಅದರಲ್ಲಿ ಕ್ಯಾನ್ಸರ್ ಕೂಡ ಒಂದು. ಕ್ಯಾನ್ಸರ್‌ಗೆ (Cancer Risk) ಮುಖ್ಯ ಕಾರಣ ನಮ್ಮ ದೈನಂದಿನ ಆಹಾರಗಳು ಎನ್ನುತ್ತಾರೆ ತಜ್ಞರು. ಕ್ಯಾನ್ಸರ್ ಬೆಳವಣಿಗೆಗೆ ಕಾರಣವಾಗುವ ಹಲವಾರು ಅಂಶಗಳಿವೆ. ವಿಶೇಷವಾಗಿ ಪ್ರಸ್ತುತ ಹೆಚ್ಚಿನ ಜನರು ತಮ್ಮ ಆಹಾರದ ಬಗ್ಗೆ ಕಾಳಜಿ ವಹಿಸುತ್ತಿಲ್ಲ.

ಜೀನ್‌ಗಳು ಮತ್ತು ಕುಟುಂಬದ ಇತಿಹಾಸವನ್ನು ಹೊರತುಪಡಿಸಿ ಆಹಾರ ಪದ್ಧತಿಯಂತಹ ಬಾಹ್ಯ ಅಂಶಗಳು ಕ್ಯಾನ್ಸರ್ ಹರಡುವಿಕೆಯಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತಿದೆ. ಕ್ಯಾನ್ಸರ್ ಬಾರದಂತೆ ನಾವು ನಮ್ಮನ್ನು ರಕ್ಷಿಸಿಕೊಳ್ಳಲು ಕೆಲವೊಂದು ಆಹಾರವನ್ನು ತ್ಯಜಿಸಲೇಬೇಕು. ಕ್ಯಾನ್ಸರ್ ಅನೇಕ ಅಪಾಯಕಾರಿ ಅಂಶಗಳನ್ನು ಹೊಂದಿರುವ ಭಯಾನಕ ಕಾಯಿಲೆಯಾಗಿದೆ. ತಜ್ಞರ ಪ್ರಕಾರ, ಈ ಭಯಾನಕ ಕಾಯಿಲೆಯು ನಾವು ಪ್ರತಿದಿನ ಸೇವಿಸುವ ಆಹಾರದಿಂದಲೇ ಬರುತ್ತವೆ. ಈ ಆಹಾರಗಳಲ್ಲಿ ಹೆಚ್ಚಿನವು ರುಚಿಕರ ಮತ್ತು ವ್ಯಸನಕಾರಿಯಾಗಿರುತ್ತದೆ.

ಈ ವರ್ಷದ ಆರಂಭದಲ್ಲಿ ಅಮೆರಿಕನ್ ಕ್ಯಾನ್ಸರ್ ಸೊಸೈಟಿ ಮಾಡಿರುವ ವರದಿ ಪ್ರಕಾರ 55 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕ್ಯಾನ್ಸರ್ ರೋಗಿಗಳ ಸಂಖ್ಯೆ ಒಂದು ದಶಕದ ಹಿಂದೆ ಹೋಲಿಸಿದರೆ ದ್ವಿಗುಣಗೊಂಡಿದೆ. ಹೀಗಾಗಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಕೆಲವು ಆಹಾರಗಳನ್ನು ತ್ಯಜಿಸಬೇಕು.


1. ಕೆಂಪು ಮಾಂಸ

ಹಂದಿ, ಕುರಿ ಮತ್ತು ಗೋಮಾಂಸ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಹಾರ್ವರ್ಡ್ ಹೆಲ್ತ್ ಪ್ರಕಾರ, ಮಾಂಸದ ಹೆಚ್ಚಿನ ಸೇವನೆಯು ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಸೋಡಿಯಂನೊಂದಿಗೆ ಪ್ಯಾಕ್ ಮಾಡಲ್ಪಟ್ಟಿರುವುದರಿಂದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ವಾರದಲ್ಲಿ 18 ಔನ್ಸ್ ಕೆಂಪು ಮಾಂಸವನ್ನು ತಿನ್ನಬಹುದು. ಅದನ್ನು ಬೇಯಿಸುವಾಗ ತಾಪಮಾನವನ್ನು ಗಮನಿಸಬೇಕು. ಯಾಕೆಂದರೆ ಅದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಬರ್ಗರ್‌ ಮತ್ತು ಸ್ಟೀಕ್ಸ್‌ಗಳಂತಹ ಸುಟ್ಟ ಮಾಂಸಗಳು ಬೇಕಿಂಗ್ ಅಥವಾ ಸೌಸ್ ವೈಡ್‌ನಂತಹ ವಿಧಾನಗಳನ್ನು ಬಳಸಿಕೊಂಡು ಕಡಿಮೆ ತಾಪಮಾನದಲ್ಲಿ ತಯಾರಿಸಲಾಗುತ್ತದೆ. ಇದರಿಂದ ಅಪಾಯ ಹೆಚ್ಚಾಗಿರುತ್ತದೆ.


2. ಮದ್ಯ

ಆಲ್ಕೋಹಾಲ್ ಸೇವನೆ ಈಗ ಎಲ್ಲರಲ್ಲೂ ಸಾಮಾನ್ಯವಾಗಿದೆ. ಇದು ವಿಶೇಷವಾಗಿ ಯುವಜನರಲ್ಲಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ವೈದ್ಯರ ಪ್ರಕಾರ, ಆಲ್ಕೋಹಾಲ್ ಸೇವನೆಯು ಹೊಟ್ಟೆ, ಕರುಳು, ಅನ್ನನಾಳ, ಯಕೃತ್ತು, ಪ್ಯಾಂಕ್ರಿಯಾಟಿಕ್ ಮತ್ತು ಸ್ತನ ಕ್ಯಾನ್ಸರ್ ಗಳಿಗೆ ಕಾರಣವಾಗುತ್ತದೆ. ಕಾಲಾನಂತರದಲ್ಲಿ ಇದು ಅಂಗಾಂಶಗಳಿಗೆ ಹಾನಿಯನ್ನು ಉಂಟು ಮಾಡುತ್ತದೆ. ಜೀವಕೋಶದ ಡಿಎನ್ ಎ ಯಲ್ಲಿ ಅನೇಕ ಬದಲಾವಣೆಗಳನ್ನು ಉಂಟುಮಾಡುತ್ತದೆ ಮತ್ತು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಆಲ್ಕೋಹಾಲ್ ಅನ್ನು ಸಂಪೂರ್ಣವಾಗಿ ತ್ಯಜಿಸುವುದು ಒಳ್ಳೆಯದು.


3. ಸಕ್ಕರೆ ಪಾನೀಯಗಳು

ಬೇಸಿಗೆಯಲ್ಲಿ ಹೆಚ್ಚಿನ ಜನರು ಸಕ್ಕರೆ ತುಂಬಿದ ತಂಪಾದ ಪಾನೀಯಗಳನ್ನು ಕುಡಿಯುತ್ತಾರೆ. ಹಾರ್ವರ್ಡ್ ಟಿ ಎಚ್ ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಪ್ರಕಾರ, ದಿನಕ್ಕೆ ಎರಡಕ್ಕಿಂತ ಹೆಚ್ಚು ಸಕ್ಕರೆ ಪಾನೀಯಗಳನ್ನು ಸೇವಿಸಿದವರು ಕೊಲೊರೆಕ್ಟಲ್ ಕ್ಯಾನ್ಸರ್‌ನ ಆರಂಭಿಕ ಹಂತಕ್ಕಿಂತ ಎರಡು ಪಟ್ಟು ಹೆಚ್ಚು ಅಪಾಯವನ್ನು ಹೊಂದಿರುತ್ತಾರೆ. ಅಲ್ಲದೇ ಇದು ತೂಕ ಮತ್ತು ಬೊಜ್ಜಿಗೂ ಕಾರಣವಾಗುವುದು. ಇದರ ಬದಲು ನೀರು, ಹಾಲು ಅಥವಾ ಸಿಹಿಗೊಳಿಸದ ಚಹಾ ಅಥವಾ ಕಾಫಿ ಸೇವನೆ ಸೂಕ್ತ.


4. ಡೇರಿ ಉತ್ಪನ್ನ

ಹಾಲು, ಚೀಸ್ ಮತ್ತು ಮೊಸರುಗಳಂತಹ ಆಹಾರಗಳನ್ನು ಹೆಚ್ಚು ಸೇವಿಸುವುದರಿಂದ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ. ಎಂದು ಅನೇಕ ಅಧ್ಯಯನಗಳು ಹೇಳುತ್ತವೆ. ಸಂಶೋಧನೆಯ ಪ್ರಕಾರ, ಡೈರಿ ಇನ್ಸುಲಿನ್ ತರಹದ ಬೆಳವಣಿಗೆಯ ಅಂಶ 1 (IGF-1) ಮಟ್ಟವನ್ನು ಹೆಚ್ಚಿಸುತ್ತದೆ. ಇದು ಪ್ರಾಸ್ಟೇಟ್ ಕ್ಯಾನ್ಸರ್ ನ ಹೆಚ್ಚಿನ ಅಪಾಯಕ್ಕೆ ಸಂಬಂಧಿಸಿದೆ. IGF-1 ಪ್ರಾಸ್ಟೇಟ್ ಕ್ಯಾನ್ಸರ್ ಕೋಶಗಳ ಪ್ರಸರಣ ಅಥವಾ ಉತ್ಪಾದನೆಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: Fried Oil: ಒಮ್ಮೆ ಕರಿದ ಎಣ್ಣೆಯನ್ನು ಮತ್ತೊಮ್ಮೆ ಬಳಸಬಹುದೆ?

ಕ್ಯಾನ್ಸರ್ ಅಪಾಯ ಕಡಿಮೆ ಮಾಡುವ ಆಹಾರಗಳು ಯಾವವು?

ವೈಜ್ಞಾನಿಕ ಸಂಶೋಧನೆಯು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುವ ಅನೇಕ ಆಹಾರಗಳಿವೆ.


1. ಹಣ್ಣು ಮತ್ತು ತರಕಾರಿಗಳು

ಹೆಚ್ಚಿನ ಹಣ್ಣು ಮತ್ತು ತರಕಾರಿಗಳು ರೋಗ ನಿರೋಧಕ ಗುಣಗಳಿಂದ ತುಂಬಿರುತ್ತವೆ. ಆಕ್ಸಿಡೇಟಿವ್ ಒತ್ತಡ ಮತ್ತು ಡಿಎನ್ಎ ಹಾನಿಯಿಂದ ಜೀವಕೋಶಗಳನ್ನು ರಕ್ಷಿಸುತ್ತವೆ.

2. ಬೀಜಗಳು

ಬೀಜಗಳ ನಿಯಮಿತ ಸೇವನೆಯು ಉರಿಯೂತ ಮತ್ತು ಕ್ಯಾನ್ಸರ್ ಅಪಾಯ ಕಡಿಮೆಯಾಗುತ್ತದೆ.

3. ಬೀನ್ಸ್ ಮತ್ತು ದ್ವಿದಳ ಧಾನ್ಯಗಳು

ಬೀನ್ಸ್, ದ್ವಿದಳ ಧಾನ್ಯಗಳು ಫೈಬರ್‌ನಿಂದ ಕೂಡಿದ್ದು, ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.


4. ಮೀನು

ಬಿಳಿ ಮೀನು ಒಮೆಗಾ-3 ಕೊಬ್ಬಿನಾಮ್ಲಗಳಿಂದ ತುಂಬಿರುತ್ತದೆ. ಇದು ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಕೆಲವು ಕ್ಯಾನ್ಸರ್ ಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

Continue Reading
Advertisement
Mahender Pratap Singh
ದೇಶ4 mins ago

Mahender Pratap Singh: ಪುಲ್ವಾಮಾ ದಾಳಿ ಪಾಕ್‌ ಕುಕೃತ್ಯ ಅಲ್ವಂತೆ; ನಾಲಿಗೆ ಹರಿಬಿಟ್ಟ ಕಾಂಗ್ರೆಸ್‌ ಅಭ್ಯರ್ಥಿ

No one has failed in SSLC says Education Department
ಕರ್ನಾಟಕ7 mins ago

SSLC Result 2024: ಈ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಯಾರೂ ಫೇಲ್‌ ಆಗಿಲ್ಲ! ಶಿಕ್ಷಣ ಇಲಾಖೆ ಹೀಗೆ ಹೇಳಿದ್ದು ಯಾಕೆ?

SSLC Result 2024 what is the reason for most of the students fail in SSLC
ಕರ್ನಾಟಕ29 mins ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Aavesham Releases On OTT Fahadh Faasil Hit Malayalam Film
ಮಾಲಿವುಡ್38 mins ago

Aavesham Releases On OTT: ಸದ್ದಿಲ್ಲದೆ ಒಟಿಟಿಗೆ ಎಂಟ್ರಿ ಕೊಟ್ಟ ಫಹಾದ್ ಫಾಸಿಲ್ ಅಭಿನಯದ ʻಆವೇಶಂʼ!

Sslc exam Result 2024
ಶಿಕ್ಷಣ40 mins ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

T20 World Cup 2024
ಕ್ರೀಡೆ46 mins ago

T20 World Cup 2024: ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸಿದ ಪಪುವಾ ನ್ಯೂಗಿನಿಯಾ, ಐರ್ಲೆಂಡ್

Sunita Williams
ವಿದೇಶ55 mins ago

Sunita Williams: ಸುನೀತಾ ವಿಲಿಯಮ್ಸ್‌ ಗಗನಯಾತ್ರೆ ಮತ್ತೆ ಸ್ಥಗಿತ; ಮೇ 17ಕ್ಕೆ ಮುಂದೂಡಿಕೆ

Ananya Panday Aditya Roy Kapur parties with Sara Ali Khan
ಬಾಲಿವುಡ್57 mins ago

Ananya Panday: ಅನನ್ಯಾ ಪಾಂಡೆ ಜತೆ ಆದಿತ್ಯ ರಾಯ್ ಕಪೂರ್ ಬ್ರೇಕಪ್‌? ಸೈಫ್‌ ಪುತ್ರಿ ಜತೆ ಲವ್‌ ಸ್ಟಾರ್ಟ್‌!

SSLC Result 2024 secret behind 20 percent grace marks
ಕರ್ನಾಟಕ1 hour ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

gold rate today sreeleela
ಚಿನ್ನದ ದರ1 hour ago

Gold Rate Today: ಚಿನ್ನದ ಮಾರುಕಟ್ಟೆ ಇಳಿಮುಖ; 22 ಮತ್ತು 24 ಕ್ಯಾರಟ್‌ ಬಂಗಾರದ ದರಗಳಲ್ಲಿ ಇಳಿಕೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

SSLC Result 2024 what is the reason for most of the students fail in SSLC
ಕರ್ನಾಟಕ29 mins ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ40 mins ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

SSLC Result 2024 secret behind 20 percent grace marks
ಕರ್ನಾಟಕ1 hour ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

SSLC Result 2024 78 schools get zero results in SSLC exams
ಬೆಂಗಳೂರು1 hour ago

SSLC Result 2024: ಎಸ್‌ಎಸ್‌ಎಲ್‌ಸಿ ಎಕ್ಸಾಂನಲ್ಲಿ ಸಿಕ್ಸರ್‌ ಬಾರಿಸಿದ ಗ್ರಾಮೀಣ ಪ್ರತಿಭೆಗಳು; 78 ಶಾಲೆಗಳಲ್ಲಿ ಶೂನ್ಯ ರಿಸಲ್ಟ್‌!

SSLC Result 2024 SSLC students get 20 percent grace marks but result is very poor
ಶಿಕ್ಷಣ2 hours ago

SSLC Result 2024: ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಸಿಕ್ತು 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌! ಆದ್ರೂ ಫಲಿತಾಂಶ ತೀರಾ ಕಳಪೆ

SSLC Exam Result 2024 Announce
ಬೆಂಗಳೂರು3 hours ago

SSLC Result 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಶೇ. 73.40 ವಿದ್ಯಾರ್ಥಿಗಳು ಪಾಸ್‌, ಉಡುಪಿ ಫಸ್ಟ್‌, ಯಾದಗಿರಿ ಲಾಸ್ಟ್‌

Dina Bhavishya
ಭವಿಷ್ಯ1 day ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ2 days ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ2 days ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ2 days ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

ಟ್ರೆಂಡಿಂಗ್‌