Parenting Tips: ನಿಮ್ಮ ಮಕ್ಕಳಿಂದ ಗೌರವ ಸಿಗಬೇಕಾದರೆ ನಿಮ್ಮ ಹೆತ್ತವರನ್ನು ಹೀಗೆ‌ ನಡೆಸಿಕೊಳ್ಳಿ! - Vistara News

ಲೈಫ್‌ಸ್ಟೈಲ್

Parenting Tips: ನಿಮ್ಮ ಮಕ್ಕಳಿಂದ ಗೌರವ ಸಿಗಬೇಕಾದರೆ ನಿಮ್ಮ ಹೆತ್ತವರನ್ನು ಹೀಗೆ‌ ನಡೆಸಿಕೊಳ್ಳಿ!

ನಿಮಗೆ ವಯಸ್ಸಾದಾಗ ನಿಮ್ಮ ಮಕ್ಕಳು ನಿಮ್ಮನ್ನು ಗೌರವ, ಪ್ರೀತಿಯಿಂದ ನಡೆಸಿಕೊಳ್ಳಬೇಕಿದ್ದರೆ, ನೀವು ನಿಮ್ಮ ಹೆತ್ತವರನ್ನೂ ಅಷ್ಟೇ ಪ್ರೀತಿ ಗೌರವದಿಂದ ನೋಡಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಆ ಮಕ್ಕಳು ನಿಮ್ಮ ನಡವಳಿಕೆಯನ್ನೇ ಗಮನಿಸುತ್ತಿರುತ್ತವೆ.

VISTARANEWS.COM


on

three generation
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನಿಮಗೆ ವಯಸ್ಸಾದಾಗ ನಿಮ್ಮ ಮಕ್ಕಳು ನಿಮ್ಮನ್ನು ಗೌರವ, ಪ್ರೀತಿಯಿಂದ ನಡೆಸಿಕೊಳ್ಳಬೇಕಿದ್ದರೆ, ನೀವು ನಿಮ್ಮ ಹೆತ್ತವರನ್ನೂ ಅಷ್ಟೇ ಪ್ರೀತಿ ಗೌರವದಿಂದ ನೋಡಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಆ ಮಕ್ಕಳು ನಿಮ್ಮ ನಡವಳಿಕೆಯನ್ನೇ ಗಮನಿಸುತ್ತಿರುತ್ತವೆ. ಯಾವತ್ತಾದರೂ ನೀವು ನಿಮ್ಮ ಹೆತ್ತವರ ಕಡೆಗೆ ಇರುವ ಜವಾವ್ದಾರಿ ಹಾಗೂ ಕರ್ತವ್ಯಗಳ ಬಗ್ಗೆ ಯೋಚಿಸಿದ್ದೀರಾ? ಇಳಿ ವಯಸ್ಸಿನಲ್ಲಿ ನಾವು ಅವರಿಗೆ ಊರುಗೋಲಾಗಿ ನಿಲ್ಲಬೇಕಾದ ಸಮಯದ ಬಗ್ಗೆ ಮಕ್ಕಳಾಗಿ ಮಾಡಬೇಕಾದ ಕರ್ತವ್ಯಗಳ ಅರಿವು ನಮಗಿದ್ದರೆ ಅವರಿಗೂ ನೆಮ್ಮದಿಯ ಬದುಕು‌ ದಕ್ಕೀತು.

ನಮ್ಮ ಹೆತ್ತವರು ನಮ್ಮನ್ನು ದೊಡ್ಡವರನ್ನಾಗಿ‌ ಮಾಡಲು ಪಟ್ಟಿರುವ ಕಷ್ಟಗಳ ಬಗೆಗೆ ನಮಗಿಂತಲೂ ಹೆಚ್ಚಾಗಿ ಅವರಿಗೇ ಗೊತ್ತು. ಆಗ ನಾವು ಮಕ್ಕಳಾಗಿ ಕೊಟ್ಟ ಸುಖವನ್ನು, ಖುಷಿಯ ಗಳಿಗೆಯನ್ನು ಅವರ ಇಳಿವಯಸ್ಸಿನಲ್ಲಿ ಕೊಡಬೇಕು. ನಮ್ಮನ್ನು ಕಾಳಜಿಯಿಂದ ನೋಡಿಕೊಂಡ‌ ಜೀವಗಳನ್ನು ಅಷ್ಟೇ ಕಾಳಜಿಯಿಂದ ನೋಡಿಕೊಳ್ಳುವುದು ಬಹಳ ಗೌರವದ ಕೆಲಸ. ಹಾಗಾಗಿ‌‌ ನಿಮ್ಮ‌ ಹೆತ್ತವರ ಕಡೆಗಾಲದಲ್ಲಿ ಇವಿಷ್ಟು ನೆನಪಿರಲಿ.

1. ಹೆತ್ತವರನ್ನು ಗೌರವದಿಂದ ನಡೆಸಿಕೊಳ್ಳಿ. ಈ ಭೂಮಿಯ ಮೇಲಿನ ಪ್ರತಿಯೊಂದು ಜೀವಿಗೂ ಗೌರವದ ಹಕ್ಕಿದೆ. ಸಣ್ಣ‌ ಮಗುವಿನಿಂದ ಹಿಡಿದು‌ ವಯಸ್ಸಾದ ಮಂದಿಯವರೆಗೆ ಎಲ್ಲರನ್ನೂ ಗೌರವಯುತವಾಗಿ ನಡೆಸಬೇಕು. ಅವರು ನಮ್ಮ ಹೆತ್ತವರಾಗಿ ಸಂಪಾದಿಸಿರುವ ಗೌರವವನ್ನಾದರೂ ನಾವು‌ ನೀಡದಿದ್ದರೆ ಅದು‌ ಅಮಾನವೀಯವೇ‌ ಸರಿ.

2. ಹಿರಿಯರನ್ನು, ಹೆತ್ತವರನ್ನು‌ ಮಕ್ಕಳ‌ ಹಾಗೆ ನಡೆಸಿಕೊಳ್ಳಬೇಡಿ. ನಮ್ಮ‌ ಸಮಾಜದಲ್ಲಿ ಒಂದು‌ ವಯಸ್ಸಿನ‌ ನಂತರ ಹಿರಿಯರನ್ನು‌ ಮಕ್ಕಳಂತೆ ನಡೆಸಿಕೊಳ್ಳುತ್ತಾರೆ. ಅವರ ಜೊತೆ ಮಾತನಾಡುವ ಶೈಲಿಗೂ ಮಕ್ಕಳ ಜೊತೆಗೆ ವ್ಯವಹರಿಸುವ ಶೈಲಿಗೂ‌ ಹೆಚ್ಚು ವ್ಯತ್ಯಾಸವಿರುವುದಿಲ್ಲ. ಹಾಗಾಗಿ, ನೀವು ವ್ಯವಹರಿಸುವ ಶೈಲಿಯನ್ನೊಮ್ಮೆ ನೀವೇ ಗಮನಿಸಿ. ನೀವೇ ಅವರ ಸ್ಥಾನದಲ್ಲಿದ್ದಂತೆ‌ ಊಹಿಸಿ. ಆಗ ಅವರ ಪರಿಸ್ಥಿತಿ ನಿಮಗೆ ಹೆಚ್ಚು ಅರ್ಥವಾದೀತು.

3. ಅವರ ಮಾತಿಗೆ ಕಿವಿ‌ ಕೊಡಿ.  ಅವರು ನಿಮ್ಮ ಮಾತುಗಳಿಗೆಲ್ಲ ಕಡಿಮೆ ಎಂದರೂ ೧೮ ವರ್ಷಗಳ ಕಾಲ ಕಿವಿಯಾಗಿದ್ದರು‌ ಎಂಬುದನ್ನು ನೆನಪಿಡಿ. ಈಗಲೂ ನಿಮ್ಮ ಮಾತಿಗೆ ಅವರು ಕಿವಿಯಾಗುತ್ತಾರೆ ಎಂಬುದೂ‌ ನೆನಪಿರಲಿ. ನಿಮ್ಮ‌ ಲೆಕ್ಕವಿಲ್ಲದಷ್ಟು ಸಿಲ್ಲಿ ಪ್ರಶ್ನೆಗಳಿಗೆಲ್ಲ ಅವರು ಬೇಸರಿಸದೆ, ಕೇಳಿದ್ದನ್ನೇ‌ ಕೇಳಿದ್ದರೂ ಕೋಪ ಮಾಡದೆ ಉತ್ತರಿಸಿದ್ದರು ಎಂಬುದು ಗೊತ್ತಿರಲಿ. ನಿಮ್ಮ ಶಾಲೆಯಿಂದ ಹಿಡಿದು ಆಟದ ಮೈದಾನದವರೆಗಿನ ಎಲ್ಲ ದೂರುಗಳನ್ನು‌ ಅವರು ತಾಳ್ಮೆಯಿಂದ ಕೇಳುತ್ತಿದ್ದರು‌ ಎಂಬುದೂ ಅಷ್ಟೇ‌ ನಿಜ. ಹಾಗಾಗಿ, ನೀವೆಷ್ಟೇ ಬ್ಯುಸಿ‌ ಇದ್ದರೂ ಈಗ ಅವರಿಗೆ ಕಿವಿಯಾಗುವ ಸರದಿ‌ ನಿಮ್ಮದು‌ ಎಂಬುದು ತಿಳಿದಿರಲಿ.

4. ಅವರಿಗಾಗಿ ಸಮಯ ಮಾಡಿಕೊಳ್ಳಿ. ಎಷ್ಟೇ ಬ್ಯುಸಿ ಜೀವನವಿದ್ದರೂ, ಹೆತ್ತವರಿಗಾಗಿಯೂ ಸಮಯ ಹೊಂದಿಸಬೇಕು. ಹೆತ್ತವರಿಂದ ದೂರ ಇರುವವರಾದಾರೆ ಪ್ರತಿದಿನ ಅವರಿಗೆ ಕರೆ ಮಾಡಿ ಮಾತನಾಡುವಷ್ಟು ತಾಳ್ಮೆ, ಪ್ರೀತಿ‌ ಇಟ್ಟುಕೊಳ್ಳಿ. ತಮ್ಮ‌ ಮಕ್ಕಳು‌ ಬ್ಯುಸಿಯಾಗಿದ್ದಾರೆ ಎಂದು‌ ಅವರಿಗೆ ಗೊತ್ತಿದ್ದರೂ, ಒಂದಿಷ್ಟು ಹೊತ್ತು ಮಕ್ಕಳ ಕಷ್ಟ ಸುಖ ಕೇಳಬೇಕೆಂಬ ಆಸೆ ಅವರಿಗೂ‌ ಇರುತ್ತದೆ.

5. ಹೆತ್ತವರ ಪರವಾಗಿ ನಿಲ್ಲಿ. ವೈದ್ಯರು ಗದರಿದರೆಂದು‌ ನೀವೂ ಅದನ್ನೇ‌ ಮಾಡಬೇಡಿ. ನೆನಪಿಡಿ, ನೀವು ಟೀಚರು‌ ಬೈದರೆಂದೋ, ಗೆಳೆಯ‌ ಮೋಸ‌ ಮಾಡಿದನೆಂದೋ ಅತ್ತಾಗ ಅವರು ನಿಮ್ಮ‌ಜೊತೆಗಿದ್ದರು!

elder abuse

6. ಅವರಿಂದ ಕಲಿಯಿರಿ. ಹೆತ್ತವರಿಗೆ ಯಾವಾಗಲೂ‌ ತಮ್ಮ ಮಕ್ಕಳೊಂದಿಗೆ ಸಮಯ ಕಳೆಯುವುದೆಂದರೆ ಇಷ್ಟ. ಇದನ್ನು‌ ಸದುಪಯೋಗ ಪಡಿಸಿಕೊಳ್ಳಿ. ಅವರ ಬಳಿಯಿಂದ ಕಲಿಯುವುದು‌ ಬಹಳಷ್ಟಿರುತ್ತದೆ. ಎಷ್ಟೋ ವರ್ಷಗಳಿಂದ ಅಮ್ಮ ಮಾಡುತ್ತಲೇ ಬಂದ ರುಚಿಕರ ಚಟ್ನಿಯ ರೆಸಿಪಿಯೋ, ಸಾಂಬಾರಿನ ಘಮವನ್ನೋ ಅವರು ಈ‌ ಲೋಕ ಬಿಟ್ಟು ಹೋದ ಮೇಲೆ ನೆನೆಸಿಕೊಂಡು‌ ಕಣ್ಣೀರಾಗಬೇಡಿ. ಅವರ ಬಳಿಯಿಂದ ಕಲಿಯಿರಿ. ಅವರು ಖುಷಿ ಪಡುತ್ತಾರೆ!

ಇದನ್ನೂ ಓದಿ: Parenting Tips: ತಾಯಂದಿರೇ, ಮಕ್ಕಳ ದೇಹಕ್ಕೆ ಕ್ಯಾಲ್ಶಿಯಂ ಈ ಎಲ್ಲ ಆಹಾರಗಳಿಂದಲೂ ಸಿಗುತ್ತವೆ!

7. ಅವರಿಗೂ ಕಲಿಸಿ: ಹಳಬರು ಹೊಸತನ್ನು ಕಲಿಯುವುದಿಲ್ಲ, ಅವರಿಗೆ‌ ತಲೆಗೆ ಹತ್ತಲಾರದು‌ ಎಂಬ ತಪ್ಪು‌ ತಿಳುವಳಿಕೆ ಯುವಜನರಿಗೆ ಸಾಮಾನ್ಯ. ಆದರೆ, ಇಂತಹ ಉಡಾಫೆ ಮಿಶ್ರಿತ ನಿರ್ಲಕ್ಷ್ಯ ಅವರೆಡೆಗೆ ತೋರದೆ, ಹೊಸ ಫೋನು ಬಳಕೆಯೋ, ಕ್ಯಾಮೆರಾ‌ ಬಳಕೆಯನ್ನೋ‌ ಕಲಿಸಿಕೊಡಿ. ಹತ್ತಿರದ‌ ಅಂಗಡಿಯಲ್ಲಿ ಅವರ ಕೈಯಲ್ಲೇ ಪೇಟಿಯಂ ಮಾಡಿಸಿ ಅವರ ಕಣ್ಣಲ್ಲಿ ಖುಷಿಯನ್ನು ಕಾಣಿ.

8. ಅವರದೇ ಮನೆಯಲ್ಲಿ ಅವರಿಗೆ ಸ್ವಾತಂತ್ರ್ಯವಿರಲಿ. ಮನೆ ಎಂಬುದು‌ ಕೇವಲ ತಲೆಯ‌ ಮೇಲಿನ‌ ಸೂರಲ್ಲ. ಅವರಿಗೆ ನಿಮ್ಮ‌ ಜೊತೆ ಇರಲು ಇಚ್ಛೆಯಿದ್ದರೆ‌ ಅದನ್ನು‌ ಪೂರೈಸಿ. ಅವರನ್ನು ಮನೆಯಿಲ್ಲದವರನ್ನಾಗಿ‌ ಮಾಡಬೇಡಿ. ಅವರಾಗಿಯೇ ವೃದ್ಧಾಶ್ರಮ‌ ಬಯಸಿದರೂ, ಅಲ್ಲಿಗೆ‌ ನಿಮ್ಮ ಜವಾಬ್ದಾರಿ‌ ಮುಗಿಯಲಿಲ್ಲ ಎಂದು‌ ನೆನಪಿಡಿ.

9. ಅವರಿಗೆ‌ ಕೊನೆಗಾಲದಲ್ಲಿ‌ ಆಸೆಗಳೇನಾದರೂ ಇದ್ದರೆ ಪೂರೈಸಲು ಪ್ರಾಮಾಣಿಕ‌ ಪ್ರಯತ್ನ‌ ಮಾಡಿ. ಅವರ ಜೊತೆ ಕೂತು‌ ಮಾತಾಡಿ. ಕಷ್ಟವೇ ಇರಬಹುದು. ಆದರೆ, ಅವರು‌ ನಿಮಗೆ ಕಷ್ಟ ಕೊಟ್ಟು ಯಾವುದನ್ನೂ ಬಯಸಲಾರರು‌ ಎಂಬುದು ತಿಳಿದಿರಲಿ.

10. ನೀವು ಅವರಿಗಾಗಿ ಮಾಡಿದ ತ್ಯಾಗಗಳನ್ನು ನೆನಪಿಸುತ್ತಲೇ‌ ಇರಬೇಡಿ. ನಿಮ್ಮನ್ನು ಮನೆಯಲ್ಲಿಟ್ಟುಕೊಂಡು‌ ತಾನು ಕಷ್ಟ‌ಪಡುತ್ತಿದ್ದೇನೆ ಎಂಬರ್ಥದ ಮಾತುಗಳನ್ನು ಹೇಳಬೇಡಿ. ಅವರು‌ ನಿಮಗೆ‌ ಭಾರ ಅನ್ನಿಸುವಂತ ಮಾತುಗಳು‌ ಹಿರಿಯ‌ ಜೀವಗಳನ್ನು‌ ಅತೀವ ದುಃಖಕ್ಕೀಡು‌ ಮಾಡಬಹುದು. ಮಕ್ಕಳಿಗೆ ಭಾರವಾಗಿರಲು ಯಾವ ಹೆತ್ತವರೂ‌ ಬಯಸುವುದಿಲ್ಲ. 

ಇದನ್ನೂ ಓದಿ: Parenting Tips: ನೀವು ಆಲಸಿಗಳೇ? ನಿಮ್ಮ ಮಕ್ಕಳು ಬುದ್ಧಿವಂತರಾದಾರು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Toxic Shawarma: ಚಿಕನ್‌ ಶವರ್ಮಾ ತಿಂದರೆ ಸಾಯುತ್ತಾರೆಯೆ? ಏನು ಕಾರಣ?

2022ರ ಏಪ್ರಿಲ್‌ನಲ್ಲಿ ‘ವಿಷಕಾರಿ’ ಶವರ್ಮಾ ಸೇವಿಸಿ 52ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು. ಕೇರಳದ ಚೆರುವತ್ತೂರ್‌ನಲ್ಲಿ ಯುವಕ, ಕಳೆದ ವರ್ಷ ತಮಿಳುನಾಡಿನಲ್ಲಿ ಬಾಲಕಿಯೊಬ್ಬಳು ಮೃತಪಟ್ಟಿದ್ದಳು. ಹಾಗಾದರೆ ಶವರ್ಮಾ ಆಹಾರ ಪ್ರಿಯರಿಗೆ ವಿಷಕಾರಿವಾಗುತ್ತಿರುವುದು (Toxic Shawarma) ಯಾಕೆ? ಈ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

Toxic Shawarma
Koo

ಮುಂಬಯಿನ (mumbai) ಮಂಖುರ್ದ್ ಪ್ರದೇಶದಲ್ಲಿ 19 ವರ್ಷದ ಯುವಕನೊಬ್ಬ ರಸ್ತೆ ಬದಿಯ ವ್ಯಾಪಾರಿಯಿಂದ ಚಿಕನ್‌ ಶವರ್ಮಾ ಸೇವಿಸಿದ (Toxic Shawarma) ಬಳಿಕ ಹೊಟ್ಟೆನೋವು (stomach pain), ವಾಂತಿ (vomiting) ಕಾಣಿಸಿಕೊಂಡು ಸಾವನ್ನಪ್ಪಿದ ಘಟನೆ ನಡೆದಿತ್ತು. ಶವರ್ಮಾಗೆ ಬಳಸಿದ ಚಿಕನ್ ಕೆಟ್ಟುಹೋಗಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.

ಪ್ರಥಮೇಶ್ ಭೋಕ್ಸೆ ಮೃತ ಯುವಕ. ಆತ ಸೇವಿಸಿದ ಆಹಾರ ವಿಷಪೂರಿತವಾಗಿತ್ತು ಎಂದು ವೈದ್ಯರು ಹೇಳಿದ್ದಾರೆ. ಹೊಟ್ಟೆ ನೋವು ಮತ್ತು ವಾಂತಿ ಕಾಣಿಸಿಕೊಂಡ ಬಳಿಕ ಭೋಕ್ಸೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ಬಾರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಅವರು ಮೂರನೇ ಬಾರಿಗೆ ಮತ್ತೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಗ ಮಂಗಳವಾರ ಮೃತಪಟ್ಟಿದ್ದಾರೆ.

ಸ್ಥಳೀಯ ಪೊಲೀಸರು ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಮತ್ತು ಇಬ್ಬರು ಆಹಾರ ಮಾರಾಟಗಾರರನ್ನು ಬಂಧಿಸಿದ್ದಾರೆ. ಆನಂದ್ ಕಾಂಬ್ಳೆ ಮತ್ತು ಅಹ್ಮದ್ ಶೇಖ್ ಬಂಧಿತರು. ಇವರ ವಿರುದ್ಧ ವಿವಿಧ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.

ಇದೇ ಮೊದಲಲ್ಲ

ಶವರ್ಮಾದಿಂದ ಸಾವು ಸಂಭವಿಸಿರುವುದು ಇದೇ ಮೊದಲ ಘಟನೆಯಲ್ಲ. 2022ರ ಏಪ್ರಿಲ್‌ನಲ್ಲಿ 52ಕ್ಕೂ ಹೆಚ್ಚು ಮಂದಿ ಶವರ್ಮಾ ಸೇವಿಸಿ ಅಸ್ವಸ್ಥರಾಗಿದ್ದರು. ಕೇರಳದ ಚೆರುವತ್ತೂರಿನಲ್ಲಿ ಶವರ್ಮಾವನ್ನು ತಿಂದು ಒಬ್ಬರು ಮೃತಪಟ್ಟಿದ್ದರು. 16 ವರ್ಷದ ದೇವಾನಂದ ಎಂಬ ಬಾಲಕಿ ಶವರ್ಮಾ ಖಾದ್ಯವನ್ನು ಸೇವಿಸಿದ ಬಳಿಕ ಪ್ರಾಣ ಕಳೆದುಕೊಂಡಿದ್ದಳು.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ತಮಿಳುನಾಡಿನ ನಾಮಕ್ಕಲ್‌ನ ರೆಸ್ಟೋರೆಂಟ್‌ನಲ್ಲಿ ಚಿಕನ್ ಶವರ್ಮಾ ಸೇವಿಸಿದ 14 ವರ್ಷದ ಬಾಲಕಿ ತನ್ನ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಳು. ಇದಲ್ಲದೆ, ಖಾದ್ಯವನ್ನು ಸೇವಿಸಿದ ಅನಂತರ ಸಂತ್ರಸ್ತೆಯ ಕುಟುಂಬದ ನಾಲ್ವರು ಸೇರಿದಂತೆ ಒಟ್ಟು 43 ಮಂದಿ ತೀವ್ರ ಜ್ವರ, ವಾಂತಿ, ಹೊಟ್ಟೆ ನೋವು ಮತ್ತು ಅತಿಸಾರದಿಂದ ಆಸ್ಪತ್ರೆಗೆ ದಾಖಲಾಗಿದ್ದರು.

2023ರ ಅಕ್ಟೋಬರ್‌ನಲ್ಲಿ ಕೊಚ್ಚಿಯ ಯುವಕ ಕೇರಳದ ಮಾವೇಲಿಪುರಂನಲ್ಲಿರುವ ರೆಸ್ಟೋರೆಂಟ್‌ನಿಂದ ಶವರ್ಮಾ ಸೇವಿಸಿದ ಅನಂತರ ಸಾವನ್ನಪ್ಪಿದರು. 22 ವರ್ಷದ ಯುವಕನ ಮರಣೋತ್ತರ ಪರೀಕ್ಷೆಯ ವರದಿಯು ಅವನ ಸಾವಿಗೆ ಕಾರಣವನ್ನು ಸೆಪ್ಟಿಸೆಮಿಯಾ ಎಂದು ಉಲ್ಲೇಖಿಸಿದೆ. ಇದು ಗಂಭೀರ ರಕ್ತಪ್ರವಾಹದ ಸೋಂಕಾಗಿದೆ.


ಶವರ್ಮಾ ಏಕೆ ಸಾವಿಗೆ ಕಾರಣ?

ಶವರ್ಮಾ ಭಕ್ಷ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಅದರಲ್ಲಿ ಬಳಸುವ ಪದಾರ್ಥಗಳು ಇದಕ್ಕೆ ಕಾರಣವಾಗಿದೆ. ವಿಶೇಷವಾಗಿ ಕೋಳಿಮಾಂಸವನ್ನು ತಯಾರಿಸುವ, ನಿರ್ವಹಿಸುವ ಮತ್ತು ಸಂಗ್ರಹಿಸುವ ವಿಧಾನ ಸರಿಯಾಗಿ ಇಲ್ಲದೇ ಇದ್ದುದರಿಂದ ಶವರ್ಮಾವನ್ನು ತಿಂದ ಬಳಿಕ ಹಲವು ಮಂದಿ ಸಾವನ್ನಪ್ಪಿದ್ದಾರೆ. ಕಡಿಮೆ ಬೇಯಿಸಿದ ಮಾಂಸ ಅಥವಾ ಮಾಂಸದ ಅಸಮರ್ಪಕ ಶೈತ್ಯೀಕರಣದ ಕಾರಣದಿಂದಾಗಿ ಆಹಾರ ವಿಷವಾಗಿದೆ.

ಬೇಯಿಸದ ಮಾಂಸ ಕಾರಣ

ಶವರ್ಮಾಕ್ಕೆ ಬಳಸಲಾಗುವ ಮಾಂಸವನ್ನು ಆಳವಾಗಿ ಭೇದಿಸದ ಜ್ವಾಲೆಯನ್ನು ಬಳಸಿ ಗಂಟೆಗಳ ಕಾಲ ನಿಧಾನವಾಗಿ ಹುರಿಯಲಾಗುತ್ತದೆ. ಇದರಿಂದ ಹೆಚ್ಚಿನ ಗ್ರಾಹಕರು ಹಲವು ಸಂದರ್ಭದಲ್ಲಿ ಸರಿಯಾಗಿ ಬೇಯಿಸದ ಮಾಂಸವನ್ನು ಪಡೆಯುತ್ತಾರೆ. ಶವರ್ಮಾದಿಂದ ಆಹಾರ ವಿಷಕ್ಕೆ ಮಾಂಸದ ಅಸಮರ್ಪಕ ಶೈತ್ಯೀಕರಣ, ಮಾಲಿನ್ಯ, ಅಥವಾ ಸಾಲ್ಮೊನೆಲ್ಲಾ ಅಥವಾ ಇ. ಕೋಲಿಯಂತಹ ಹಾನಿಕಾರಕ ಬ್ಯಾಕ್ಟೀರಿಯಾಕ್ಕೆ ಕಾರಣವಾಗುತ್ತದೆ. ಇದು ಆಹಾರವನ್ನು ವಿಷಗೊಳಿಸುವುದು ಮಾತ್ರವಲ್ಲ ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ವೈದ್ಯರೊಬ್ಬರು ಹೇಳುತ್ತಾರೆ.

ಅನೈರ್ಮಲ್ಯ, ಸರಿಯಾಗಿ ಬೇಯಿಸದ ಅಥವಾ ಕಲುಷಿತ ಆಹಾರ ಕರುಳಿನ ಸೋಂಕನ್ನು ಉಂಟುಮಾಡಬಹುದು. ಅದು ತುಂಬಾ ಸಾಂಕ್ರಾಮಿಕವಾಗಿರುತ್ತದೆ. ಅಲ್ಲದೇ ಕಲುಷಿತ ಪಾತ್ರೆಗಳು, ಅಸಮರ್ಪಕ ಸಾಸ್ ಅಥವಾ ಪದಾರ್ಥಗಳ ಬಳಕೆ ಗಂಭೀರ ಆರೋಗ್ಯ ಪರಿಸ್ಥಿತಿಗಳಿಗೆ ಕಾರಣವಾಗಬಹುದು. ಫ್ರಿಡ್ಜ್‌ ನಲ್ಲಿ ಮಾಂಸವನ್ನು ದೀರ್ಘಕಾಲದವರೆಗೆ ಬಿಟ್ಟರೂ ಅದು ಹಾನಿಕಾರಕ ಬ್ಯಾಕ್ಟೀರಿಯಾಗಳ ಸಂತಾನೋತ್ಪತ್ತಿಗೆ ಕಾರಣವಾಗುತ್ತದೆ.

ಇದನ್ನೂ ಓದಿ: Juices Side Effect: ಅಂಗಡಿಯಲ್ಲಿ ಸಿಗುವ ಜ್ಯೂಸ್‌ ಕುಡಿದರೆ ಏನಾಗುತ್ತದೆ?

ಸುರಕ್ಷಿತ ಶವರ್ಮಾ ಸೇವಿಸಿ

ಶವರ್ಮಾ ತಿನ್ನಬೇಕಿದ್ದರೆ ಉತ್ತಮ ಆಹಾರ ಸುರಕ್ಷತಾ ಅಭ್ಯಾಸಗಳ ಇತಿಹಾಸ ಹೊಂದಿರುವ ಆರೋಗ್ಯಕರ ಮತ್ತು ಪ್ರತಿಷ್ಠಿತ ಆಹಾರ ಮಳಿಗೆಗಳು ಮತ್ತು ಮಾರಾಟಗಾರರನ್ನು ಆಯ್ಕೆ ಮಾಡಿ. ಹೊಟೇಲ್‌ನಲ್ಲಿನ ಶುಚಿತ್ವ ಮತ್ತು ಆಹಾರ ನಿರ್ವಹಣೆಯ ಬಗ್ಗೆ ಗಮನ ಕೊಡಿ. ಮಾಂಸದ ಬಗ್ಗೆ ಜಾಗರೂಕರಾಗಿರಿ. ವಿಶೇಷವಾಗಿ ಅದು ಕಚ್ಚಾ ಅಥವಾ ಕಡಿಮೆ ಬೇಯಿಸಿರುವುದನ್ನು ತಿನ್ನಬೇಡಿ.

Continue Reading

ಆರೋಗ್ಯ

Dietary Guidelines: ಭಾರತೀಯರ ಆಹಾರ ಹೇಗಿರಬೇಕು? ಐಸಿಎಂಆರ್ ಮಾರ್ಗಸೂಚಿ ಹೀಗಿದೆ

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಭಾರತೀಯರ ಆಹಾರದಲ್ಲಿ ಏನೆಲ್ಲಾ ಒಳಗೊಂಡಿರಬೇಕು ಎಂಬ ಮಾರ್ಗಸೂಚಿಯನ್ನು (Dietary Guidelines) ಬಿಡುಗಡೆ ಮಾಡಿದ್ದು, ಇದನ್ನು ಪಾಲಿಸಿದರೆ ರೋಗಗಳಿಂದ ದೂರವಿರಬಹುದು ಎನ್ನುತ್ತದೆ ಅಧ್ಯಯನ. ಈ ಕುರಿತ ವಿಸ್ತೃತ ಮಾಹಿತಿ ಇಲ್ಲಿದೆ.

VISTARANEWS.COM


on

By

Dietary Guidelines
Koo

ತರಕಾರಿ, ಧಾನ್ಯ, ಕಾಳುಗಳು, ಬೀನ್ಸ್, ಬೀಜಗಳು, ಮೊಸರು ಭಾರತೀಯರಿಗೆ (indians) ಉತ್ತಮ ಆಹಾರ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ತಿಳಿಸಿದೆ. ಆಧುನಿಕ ಆಹಾರ ಪದ್ಧತಿಗೆ ಸರಿ ಹೊಂದುವಂತೆ ಭಾರತೀಯರಿಗೆ ನವೀಕರಿಸಿದ ಆಹಾರ ಮಾರ್ಗ ಸೂಚಿಗಳನ್ನು (Dietary Guidelines) ಬಿಡುಗಡೆ ಮಾಡಿದೆ.

ICMRನ ಆಹಾರ ಮಾರ್ಗಸೂಚಿಗಳ ಪ್ರಕಾರ, ಆರೋಗ್ಯಕರ ಊಟವು ಹೆಚ್ಚಿನ ತರಕಾರಿಗಳು, ಸಾಕಷ್ಟು ಧಾನ್ಯ, ಕಾಳು, ಬೀನ್ಸ್, ಬೀಜಗಳು, ಹಣ್ಣುಗಳೊಂದಿಗೆ ಸರಿಯಾದ ವಿಧಾನದಲ್ಲಿ ಮಾಡಿರುವ ಮೊಸರು ಉತ್ತಮ ಆಯ್ಕೆಯಾಗಿದೆ. ಇದು ಹೆಚ್ಚುವರಿ ಸಕ್ಕರೆಗಳಿಂದ ಮುಕ್ತವಾಗಿದೆ ಅಥವಾ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಎಣ್ಣೆ, ಕೊಬ್ಬು ಮತ್ತು ಉಪ್ಪನ್ನು ಹೊಂದಿರುತ್ತದೆ.

ಹೈದರಾಬಾದ್ ಮೂಲದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ (ಎನ್‌ಐಎನ್‌) ನ ಸಂಶೋಧಕರು ತಯಾರಿಸಿರುವ ಆಧುನಿಕ ಆಹಾರ ಮಾರ್ಗಸೂಚಿಗಳು ಜನರು ದೈಹಿಕವಾಗಿ ಸಕ್ರಿಯವಾಗಿರಲು, ನಿಯಮಿತವಾಗಿ ವ್ಯಾಯಾಮ ಮಾಡಲು, ಉಪ್ಪು ಸೇವನೆಯನ್ನು ನಿರ್ಬಂಧಿಸಲು, ಹೆಚ್ಚಿನ ಕೊಬ್ಬು, ಸಕ್ಕರೆ ಮತ್ತು ಸಂಸ್ಕರಿಸಿದ ಆಹಾರಗಳನ್ನು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡುತ್ತವೆ. ಈ ಆಹಾರ ಕ್ರಮವು ಹೊಟ್ಟೆಯ ಬೊಜ್ಜು, ಅಧಿಕ ತೂಕವನ್ನು ನಿಯಂತ್ರಿಸುತ್ತದೆ.


ಆಹಾರ ಮಾರ್ಗಸೂಚಿ

ಎನ್‌ಐಎನ್‌ 17 ಆಹಾರ ಮಾರ್ಗಸೂಚಿಗಳನ್ನು ರೂಪಿಸಿದೆ. ಅದು ಆರೋಗ್ಯಕರ ಆಹಾರದ ಮೇಲೆ ವಿಶೇಷ ಗಮನವನ್ನು ಹೊಂದಿರುವ ಎಲ್ಲಾ ವಯೋಮಾನದವರಲ್ಲಿ ಆರೋಗ್ಯಕರ ಜೀವನ ಮತ್ತು ರೋಗ ತಡೆಗಟ್ಟಲು ಒತ್ತು ನೀಡುತ್ತದೆ. ಐಸಿಎಂಆರ್‌ನ ಡಿಜಿ ಡಾ. ರಾಜೀವ್ ಬಹ್ಲ್ ಅವರು ವರದಿಯನ್ನು ಬಿಡುಗಡೆ ಮಾಡಿದ್ದು, ಕಳೆದ ದಶಕಗಳಲ್ಲಿ ಭಾರತೀಯರ ಆಹಾರ ಪದ್ಧತಿಯು ಗಮನಾರ್ಹ ಬದಲಾವಣೆಗಳಿಗೆ ಒಳಗಾಗಿದೆ. ಇದು ಸಾಂಕ್ರಾಮಿಕವಲ್ಲದ ರೋಗಗಳ ಹರಡುವಿಕೆ ಹೆಚ್ಚಳಕ್ಕೆ ಕಾರಣವಾಗಿದೆ.

ತಾಜಾ ಆಹಾರದ ಮಾರ್ಗಸೂಚಿಗಳು ಆಹಾರ ಸುರಕ್ಷತೆಯನ್ನು ನಿಭಾಯಿಸಲು ಪ್ರಾಯೋಗಿಕ ಸಂದೇಶಗಳು ಮತ್ತು ಸಲಹೆಗಳನ್ನು ಸೇರಿಸುವುದರೊಂದಿಗೆ ಬದಲಾಗುತ್ತಿರುವ ಆಹಾರದ ಸನ್ನಿವೇಶಕ್ಕೆ ಪ್ರಸ್ತುತವಾಗಿವೆ. ಕನಿಷ್ಠ ಸಂಸ್ಕರಿಸಿದ ಆಹಾರಗಳ ಆಯ್ಕೆ, ಆಹಾರ ಲೇಬಲ್‌ಗಳ ಪ್ರಾಮುಖ್ಯತೆ ಮತ್ತು ದೈಹಿಕ ಚಟುವಟಿಕೆ ಅತ್ಯಗತ್ಯ ಎಂಬುದಾಗಿ ಆಹಾರ ಮಾರ್ಗ ಸೂಚಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Covishield: ಭಾರತದಲ್ಲಿ ಕೋವಿಶೀಲ್ಡ್‌ ಸೈಡ್‌ ಎಫೆಕ್ಟ್‌ನ ಎಲ್ಲ ಮಾಹಿತಿ ಬಹಿರಂಗ ಎಂದ ಕಂಪನಿ, ಉತ್ಪಾದನೆಯೂ ಸ್ಥಗಿತ!

ದೈಹಿಕ ಚಟುವಟಿಕೆ ಅತ್ಯಗತ್ಯ

ಮಾರ್ಗಸೂಚಿಗಳ ಪ್ರಕಾರ ಎಲ್ಲಾ ವಯಸ್ಸಿನ ವ್ಯಕ್ತಿಗಳು ಉತ್ತಮ ಆರೋಗ್ಯಕ್ಕಾಗಿ ಕನಿಷ್ಠ 30 ರಿಂದ 45 ನಿಮಿಷಗಳ ದೈಹಿಕ ಚಟುವಟಿಕೆಯನ್ನು ಮಧ್ಯಮ ತೀವ್ರತೆಯ ದೈಹಿಕ ಚಟುವಟಿಕೆಯನ್ನು ಅನುಸರಿಸಬೇಕು. ಮಕ್ಕಳಲ್ಲಿ ದಿನಕ್ಕೆ ಕನಿಷ್ಠ 60 ನಿಮಿಷಗಳ ನಿಯಮಿತ ದೈಹಿಕ ಚಟುವಟಿಕೆಯು ಅಧಿಕ ತೂಕ ಮತ್ತು ಸ್ಥೂಲಕಾಯತೆಯನ್ನು ತಡೆಯುತ್ತದೆ.

ಉಪ್ಪಿನ ಬಳಕೆಗೆ ಮಿತಿ ಇರಲಿ

ಐಸಿಎಂಆರ್-ಎನ್ಐಎನ್ ಜನರಿಗೆ ಅಯೋಡಿಕರಿಸಿದ ಉಪ್ಪನ್ನು ಸೇವಿಸುವಂತೆ ಸಲಹೆ ನೀಡಿದೆ. ದಿನಕ್ಕೆ ಗರಿಷ್ಠ 5 ಗ್ರಾಂಗಿಂತ ಹೆಚ್ಚು ಉಪ್ಪನ್ನು ಸೇವಿಸುವುದನ್ನು ನಿರ್ಬಂಧಿಸುತ್ತದೆ. ಚಿಕ್ಕ ವಯಸ್ಸಿನಿಂದಲೇ ಉಪ್ಪು ಕಡಿಮೆ ಇರುವ ಆಹಾರಗಳ ಬಗ್ಗೆ ಅಭಿರುಚಿಯನ್ನು ಬೆಳೆಸಿಕೊಳ್ಳುವಂತೆ ಜನರನ್ನು ಒತ್ತಾಯಿಸಿದೆ.

Continue Reading

ಫ್ಯಾಷನ್

New Fashion Trend: ಕ್ವೀನ್‌ ಲುಕ್‌ ನೀಡುವ ಡಿಸೈನರ್‌ ಪರ್ಲ್ ಶೈಲಿಯ ಹೆಡ್‌ಬ್ಯಾಂಡ್‌

ಕ್ವೀನ್‌ ಲುಕ್‌ ನೀಡುವ (New fashion Trend) ನಾನಾ ಬಗೆಯ ಮುತ್ತಿನ ಹೆಡ್‌ಬ್ಯಾಂಡ್‌ಗಳು ಇಂದು ಆಕ್ಸೆಸರೀಸ್‌ ಲೋಕಕ್ಕೆ ಲಗ್ಗೆ ಇಟ್ಟಿವೆ. ಚಿಣ್ಣರು ಬಳಸುತ್ತಿದ್ದ ಈ ಶೈಲಿಯ ಹೆಡ್‌ಬ್ಯಾಂಡ್‌ಗಳು ಇದೀಗ ಮಾನಿನಿಯರ ಹೇರ್‌ಸ್ಟೈಲ್‌ಗೆ ಸಾಥ್‌ ನೀಡುತ್ತಿವೆ. ಯಾವ್ಯಾವ ಬಗೆಯವನ್ನು ಹೇಗೆಲ್ಲಾ ಧರಿಸಬಹುದು ಎಂಬುದರ ಬಗ್ಗೆ ಹೇರ್‌ ಸ್ಟೈಲಿಸ್ಟ್‌ಗಳು ಇಲ್ಲಿ ಒಂದಿಷ್ಟು ವಿವರ ನೀಡಿದ್ದಾರೆ.

VISTARANEWS.COM


on

New fashion Trend
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕ್ವೀನ್‌ ಲುಕ್‌ಗೆ (New fashion Trend) ಸಾಥ್ ನೀಡುವ ಪರ್ಲ್ ಹೆಡ್‌ಬ್ಯಾಂಡ್‌ಗಳು ಇದೀಗ ಆಕ್ಸೆಸರೀಸ್‌ ಲೋಕಕ್ಕೆ ಎಂಟ್ರಿ ನೀಡಿವೆ. ಧರಿಸಿದಾಗ ನೋಡಲು ರಾಣಿ-ಮಹಾರಾಣಿಯಂತೆ ಬಿಂಬಿಸುವ ನಾನಾ ವಿನ್ಯಾಸದ ಮುತ್ತಿನ ಹೆಡ್‌ಬ್ಯಾಂಡ್‌ಗಳು ಇಂದು ಆಕ್ಸೆಸರೀಸ್‌ ಲೋಕಕ್ಕೆ ಲಗ್ಗೆ ಇಟ್ಟಿದ್ದು, ಒಂದಕ್ಕಿಂತ ಒಂದು ಡಿಸೈನ್‌ನವು ಆಕರ್ಷಕವಾದ ವಿನ್ಯಾಸದಲ್ಲಿ ಆಗಮಿಸಿವೆ. ಈ ಹಿಂದೆ ಚಿಣ್ಣರು ಬಳಸುತ್ತಿದ್ದ, ಈ ಶೈಲಿಯ ಹೆಡ್‌ಬ್ಯಾಂಡ್‌ಗಳು ಇದೀಗ ಹೊಸ ರೂಪ ಪಡೆದು ಮಾನಿನಿಯರ ಹೇರ್‌ಸ್ಟೈಲ್‌ಗೆ ಸಾಥ್‌ ನೀಡುತ್ತಿವೆ. ಅದರಲ್ಲೂ ಪಾರ್ಟಿವೇರ್‌ ಜೊತೆಗೆ, ವೀಕೆಂಡ್‌ ಔಟ್‌ಫಿಟ್‌ಗಳೊಂದಿಗೆ ಹಾಗೂ ಫೋಟೋಶೂಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಿವೆ ಎನ್ನುತ್ತಾರೆ ಹೇರ್‌ ಸ್ಟೈಲಿಸ್ಟ್ ಜಯಾ ಶರ್ಮಾ. ಅವರ ಪ್ರಕಾರ, ಪರ್ಲ್ ಹೆಡ್‌ಬ್ಯಾಂಡ್‌ಗಳು ಡೀಸೆಂಟ್‌ ಲುಕ್‌ ನೀಡುವುದರೊಂದಿಗೆ ಹೇರ್‌ಸ್ಟೈಲನ್ನು ಅತ್ಯಾಕರ್ಷಕವಾಗಿಸುತ್ತವೆ ಎನ್ನುತ್ತಾರೆ.

New fashion Trend

ಟ್ರೆಂಡಿಯಾಗಿರುವ ಪರ್ಲ್ ಹೆಡ್‌ಬ್ಯಾಂಡ್ಸ್

ಮಿನಿ ಪರ್ಲ್ ಹೆಡ್‌ಬ್ಯಾಂಡ್, ಕ್ರಿಸ್ಟಲ್‌-ಪರ್ಲ್ ಹೆಡ್‌ಬ್ಯಾಂಡ್‌, ಮಲ್ಟಿಲೈನ್‌ ಪರ್ಲ್ ಹೆಡ್‌ಬ್ಯಾಂಡ್‌, ಸಿಂಗಲ್‌ ಲೈನ್‌ ಬೀಡ್ಸ್ ಸ್ಟೈಲ್‌ ಹೆಡ್‌ಬ್ಯಾಂಡ್‌, ಬಿಗ್‌ ಪರ್ಲ್ ಹೆಡ್‌ಬ್ಯಾಂಡ್, ಟೈನಿ ಪರ್ಲ್ ಹೆಡ್‌ಬ್ಯಾಂಡ್‌ ಸೇರಿದಂತೆ ಬೀಡ್ಸ್ ಮಿಕ್ಸ್ ಇರುವಂತವು ಈ ದಿನಗಳಲ್ಲಿ ಹೆಚ್ಚು ಚಾಲ್ತಿಯಲ್ಲಿವೆ. ಶ್ವೇತ ವರ್ಣದವು, ಹಾಫ್‌ ವೈಟ್‌, ಕ್ರೀಮಿಶ್‌ ಶೇಡ್‌ನ ಪರ್ಲ್ ಹೆಡ್‌ಬ್ಯಾಂಡ್‌ಗಳು ಬೇಡಿಕೆ ಹೆಚ್ಚಿಸಿಕೊಂಡಿವೆ. ಅಂದಹಾಗೆ, ಇವೆಲ್ಲಾ ರಿಯಲ್‌ ಮುತ್ತಿನ ಹೆಡ್‌ಬ್ಯಾಂಡ್‌ಗಳಲ್ಲ, ಹೌದು. ಮುತ್ತಿನಂತೆ ಕಾಣುವ ಕೃತಕ ಮಣಿಯಂತಹ ಬೀಡ್ಸ್‌ಗಳ ಹೆಡ್‌ಬ್ಯಾಂಡ್‌ಗಳಿವು. ಹಾಗಾಗಿ ಇವುಗಳ ಬೆಲೆಯೂ ಕಡಿಮೆ. ಸುಮಾರು 50 ರೂ. ಗಳಿಂದ ಆರಂಭಗೊಂಡು 300 ರೂ.ಗಳವರೆಗೂ ಇದೆ. ಆಯಾ ಡಿಸೈನ್‌ ಹಾಗೂ ಪರ್ಲ್ ಸೈಝಿಗೆ ತಕ್ಕಂತೆ ಬೆಲೆ ನಿಗಧಿಯಾಗಿರುತ್ತದೆ ಎನ್ನುತ್ತಾರೆ ಹೇರ್‌ ಸ್ಟೈಲಿಸ್ಟ್‌ಗಳು. ಎಲ್ಲಾ ಫ್ಯಾನ್ಸಿ ಶಾಪ್‌ಗಳಲ್ಲೂ ಇವು ದೊರೆಯುತ್ತಿವೆ. ಅಷ್ಟೇಕೆ! ಸ್ಟ್ರೀಟ್‌ ಶಾಪಿಂಗ್‌ ಮಾಡುವವರಾದಲ್ಲಿ, ಬೀದಿ ಬದಿಯ ಶಾಪ್‌ಗಳಲ್ಲೂ ಇವು ದೊರೆಯುತ್ತವೆ. ಬೆಲೆ ಕಡಿಮೆ ಎನ್ನುತ್ತಾರೆ.

New fashion Trend

ಪರ್ಲ್ ಹೆಡ್‌ಬ್ಯಾಂಡ್‌ ಪ್ರಿಯರ ಗಮನಕ್ಕೆ

ಇನ್ನು, ಮಕ್ಕಳಾದಲ್ಲಿ ಯಾವುದೇ ಉಡುಪಿಗಾದರೂ ಈ ಪರ್ಲ್ ಡಿಸೈನ್‌ನ ಹೆಡ್‌ಬ್ಯಾಂಡ್‌ ಧರಿಸಬಹುದು. ಆದರೆ, ದೊಡ್ಡವರ ವಿಷಯದಲ್ಲಿ ಹಾಗೆ ಆಗುವುದಿಲ್ಲ. ಹಾಗಾಗಿ, ಧರಿಸುವ ಉಡುಪು ಹಾಗೂ ಹೇರ್‌ಸ್ಟೈಲ್‌ಗೆ ಅನುಗುಣವಾಗಿ ಧರಿಸಬೇಕಾಗುತ್ತದೆ. ಉದಾಹರಣೆಗೆ., ಫ್ರೀ ಹೇರ್‌ಸ್ಟೈಲ್‌ ಮಾಡಿದಾಗ ಧರಿಸಬಹುದು. ಚೆನ್ನಾಗಿ ಹೊಂದುತ್ತದೆ.

New fashion Trend
  • ಸೀರೆಗೆ ಇವನ್ನು ಧರಿಸುವುದು ನಾಟ್‌ ಓಕೆ.
  • ಪಾರ್ಟಿವೇರ್‌ ಗೌನ್‌ಗಳಿಗೆ ಧರಿಸಬಹುದು.
  • ಇತರೇ ಪರ್ಲ್ ಆಕ್ಸೆಸರೀಸ್‌ಗೂ ಮ್ಯಾಚ್‌ ಮಾಡಬಹುದು.
  • ಎಥ್ನಿಕ್ ಉಡುಪಿಗೆ ಹೊಂದುವುದಿಲ್ಲ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Torn Jeans Styling Tips: ಟೊರ್ನ್‌ ಜೀನ್ಸ್‌ ಪ್ಯಾಂಟ್‌ ಪ್ರಿಯರು ನೆನಪಿನಲ್ಲಿಟ್ಟುಕೊಳ್ಳಬೇಕಾದ 5 ಪ್ರಮುಖ ಸಂಗತಿಗಳು

Continue Reading

ಆರೋಗ್ಯ

Silent Heart Attack: ಏನಿದು ಸೈಲೆಂಟ್‌ ಹಾರ್ಟ್‌ ಅಟ್ಯಾಕ್‌? ಇದರ ಲಕ್ಷಣಗಳೇನು?

ಮಧ್ಯಪ್ರದೇಶದ ಇಂದೋರ್‌ನಲ್ಲಿ ಯುವಕನೊಬ್ಬ ಮೌನ ಹೃದಯಾಘಾತವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಯಾವುದೇ ಹೃದಯಾಘಾತದ ಲಕ್ಷಣವಿಲ್ಲದೆಯೇ ಸಾವನ್ನಪ್ಪುತ್ತಿರುವ (Silent Heart Attack) ಪ್ರಕರಣ ಇತ್ತೀಚೆಗೆ ಹೆಚ್ಚಾಗುತ್ತಿದ್ದು ಆತಂಕ ಮೂಡಿಸಿದೆ. ಏನು ಈ ಬಗೆಯ ಹೃದಯಾಘಾತದ ಲಕ್ಷಣ? ಇಲ್ಲಿದೆ ವರದಿ.

VISTARANEWS.COM


on

By

Silent Heart Attack
Koo

ಮಧ್ಯಪ್ರದೇಶದ ಇಂದೋರ್‌ನ 35 ವರ್ಷದ ವ್ಯಕ್ತಿಯೊಬ್ಬರು ತೀವ್ರ ಎದೆನೋವಿನ ಲಕ್ಷಣಗಳು ಇಲ್ಲದೆಯೇ ಹೃದಯಾಘಾತದಿಂದ (Silent Heart Attack) ಸಾವನ್ನಪ್ಪಿದ್ದಾರೆ. ಸೌಮ್ಯವಾದ ರೋಗಲಕ್ಷಣ ಅಥವಾ ಯಾವುದೇ ತೀವ್ರವಾದ ಎದೆನೋವಿನಂತಹ ವಿಶಿಷ್ಟ ಲಕ್ಷಣಗಳಿಲ್ಲದೆಯೇ ಹೃದಯಾಘಾತಗಳು ಸಂಭವಿಸುತ್ತದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.

ಸಾಮಾನ್ಯವಾಗಿ ಎದೆ ನೋವಿನ ಲಕ್ಷಣಗಳು ಕಂಡು ಬಂದರೆ ECGಯಿಂದ ರೋಗ ಲಕ್ಷಣಗಳು ಪತ್ತೆಯಾಗುತ್ತದೆ. ಎಚ್ಚರಿಕೆಯ ಚಿಹ್ನೆಗಳು ಎದೆಯ ಮಧ್ಯದಲ್ಲಿ ಅಥವಾ ದೇಹದ ಮೇಲ್ಭಾಗದ ಅಸ್ವಸ್ಥತೆ, ಉಸಿರಾಟದ ತೊಂದರೆ ಮತ್ತು ತಣ್ಣನೆಯ ಬೆವರು ಕಂಡು ಬರುತ್ತದೆ. ಆದರೆ ಇದ್ಯಾವುದು ಇಲ್ಲದೆಯೇ ಸಾವನ್ನಪ್ಪುತ್ತಿರುವವರು ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬ ಯಾವ ಸೂಚನೆಯೂ ಇಲ್ಲದೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ತೀರ್ಥ ರಾಮ್ (35) ಮೃತರು.

ತೀರ್ಥ ರಾಮ್ ಬೈಕ್‌ನಲ್ಲಿ ಹೋಗುತ್ತಿದ್ದಾಗ ರಸ್ತೆ ಮಧ್ಯೆ ಏಕಾಏಕಿ ಕೆಳಗೆ ಬಿದ್ದಿದ್ದಾನೆ. ರಸ್ತೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಆತನನ್ನು ಗಮನಿಸಿದ ಸ್ಥಳೀಯರು ಕೂಡಲೇ ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಅವರು ಆಸ್ಪತ್ರೆಗೆ ತಲುಪುವ ಮೊದಲು ನಿಧನರಾಗಿದ್ದಾರೆ. ಮೃತನ ಕುಟುಂಬದವರು ಆತನ ಮರಣೋತ್ತರ ಪರೀಕ್ಷೆಗೆ ನಿರಾಕರಿಸಿದ್ದಾರೆ. ಗೋವಿಂದ್ ನಗರದ ನಿವಾಸಿ ಬಿಹಾರಿ ಲಾಲ್ ಸೋನ್ವಾನೆ ಅವರ ಪುತ್ರ ತೀರ್ಥ ರಾಮ್ ಎಂದು ಮೃತನನ್ನು ಗುರುತಿಸಲಾಗಿದೆ.

ಮಂಗಳವಾರ ಬೆಳಗ್ಗೆ ಯಾವುದೋ ಕೆಲಸದ ನಿಮಿತ್ತ ತೀರ್ಥರಾಮ್ ಮನೆಯಿಂದ ಬೈಕ್ ನಲ್ಲಿ ತೆರಳಿದ್ದರು. ಕೆಲವೇ ನಿಮಿಷಗಳಲ್ಲಿ ಆತ ರಸ್ತೆಯಲ್ಲಿ ಪ್ರಜ್ಞಾಹೀನನಾಗಿ ಬಿದ್ದಿದ್ದಾನೆ ಎಂಬ ಸುದ್ದಿ ಮನೆಯವರಿಗೆ ತಿಳಿಯಿತು. ಕುಟುಂಬ ಸದಸ್ಯರು ಸ್ಥಳಕ್ಕೆ ಧಾವಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅವರು ಬರುವಷ್ಟರಲ್ಲಿ ಆತ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಮೌನ ಹೃದಯಾಘಾತವೇ (ಸೈಲೆಂಟ್‌ ಹಾರ್ಟ್‌ ಆಟ್ಯಾಕ್‌) ಆತನ ಸಾವಿಗೆ ಎಂದು ಪ್ರಾಥಮಿಕ ವರದಿಗಳಿಂದ ತಿಳಿದು ಬಂದಿದೆ.


ಸೈಲೆಂಟ್‌ ಹಾರ್ಟ್‌ ಅಟ್ಯಾಕ್‌ ಎಂದರೇನು?

ಮೌನ ಹೃದಯಾಘಾತವನ್ನು ಸಾಮಾನ್ಯವಾಗಿ ವೈದ್ಯಕೀಯ ಪರಿಭಾಷೆಯಲ್ಲಿ ಸೈಲೆಂಟ್ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ (SMI) ಎಂದು ಕರೆಯಲಾಗುತ್ತದೆ. ಈ ಸ್ಥಿತಿಯಲ್ಲಿ ಹೃದಯಾಘಾತ ಸಂಭವಿಸಿದಾಗ ವ್ಯಕ್ತಿ ಎದೆಯಲ್ಲಿ ನೋವಿನ ಸಂವೇದನೆಯನ್ನು ಅನುಭವಿಸುವುದಿಲ್ಲ. ಆದರೆ ಇತರ ಕೆಲವು ಲಕ್ಷಣಗಳು ಕಂಡುಬರುತ್ತವೆ.

ಇದನ್ನೂ ಓದಿ: Self Harming: ಅಪ್ಪನಿಗೆ ಗುಡ್ ಬೈ ಹೇಳಿಸಿ ಮಗುವನ್ನು ಕೊಂದ ತಾಯಿ!

ಮೌನ ಹೃದಯಾಘಾತದ ಲಕ್ಷಣಗಳು

ಮೌನ ಹೃದಯಾಘಾತದ ಲಕ್ಷಣಗಳು ಇಂತಿವೆ. ಶೀತ ಜ್ವರ, ಎದೆಯ ಬಳಿ ಅಥವಾ ಭುಜಗಳ ಬಳಿ ಮೇಲಿನ ಬೆನ್ನಿನ ಬಳಿ ಊತ, ಪಾದದ ಬಳಿ ನೋವು, ತೋಳು ಅಥವಾ ಮೇಲಿನ ಬೆನ್ನಿನಲ್ಲಿ ಸ್ನಾಯು ನೋವು, ಸುಸ್ತಾಗಿರುವ ಭಾವನೆ ಕಂಡು ಬರುತ್ತದೆ.

ಸಾಮಾನ್ಯ ಹೃದಯಾಘಾತದ ಲಕ್ಷಣಗಳು

ಕೆಲವು ನಿಮಿಷಗಳಿಗಿಂತ ಹೆಚ್ಚು ಎದೆ ನೋವು, ಉಸಿರಾಟದ ತೊಂದರೆ, ಚಡಪಡಿಕೆ ಭಾವನೆ, ಲಘುವಾದ ಹಠಾತ್ ಬೆವರುವಿಕೆ, ವಾಂತಿ, ತುಂಬಾ ದಣಿದ ಭಾವನೆ ಮತ್ತು ಸುಸ್ತು ಕೆಲವು ದಿನಗಳವರೆಗೆ ಇರುತ್ತದೆ.

Continue Reading
Advertisement
Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ38 mins ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

T20 World Cup 2024
ಪ್ರಮುಖ ಸುದ್ದಿ43 mins ago

T20 World Cup : ವಿಶ್ವ ಕಪ್​ಗೆ ತಂಡ ಪ್ರಕಟಿಸಿದ ಶ್ರೀಲಂಕಾ, ಸಿಎಸ್​​ಕೆ ಆಟಗಾರನಿಗೂ ಚಾನ್ಸ್​​

ಉತ್ತರ ಕನ್ನಡ53 mins ago

SSLC Result 2024: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾರ್ವಭೌಮ ಗುರುಕುಲಕ್ಕೆ ಶೇ.100 ಫಲಿತಾಂಶ

Yallapur Vishwadarshana Group of institutions performed well in SSLC Result 2024
ಉತ್ತರ ಕನ್ನಡ1 hour ago

SSLC Result 2024: ಯಲ್ಲಾಪುರದ ವಿಶ್ವದರ್ಶನ ಶಿಕ್ಷಣ ಸಮೂಹ ಪ್ರೌಢಶಾಲೆಗಳ ಉತ್ತಮ ಸಾಧನೆ

women's Cricket team
ಕ್ರೀಡೆ1 hour ago

Womens Cricket Team : ಬಾಂಗ್ಲಾ ವಿರುದ್ಧ 5-0 ಕ್ಲೀನ್​ ಸ್ವೀಪ್ ಸಾಧನೆ ಮಾಡಿದ ಭಾರತದ ವನಿತೆಯರು

Mother passed SSLC exam with her son in Hassan
ಕರ್ನಾಟಕ1 hour ago

SSLC Result 2024: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಗನ ಜತೆ ತಾಯಿಯೂ ಪಾಸ್!

Failed in SSLC Exam Student suicide in mandya
ಮಂಡ್ಯ2 hours ago

SSLC Result 2024: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲ್‌; ನೇಣಿಗೆ ಶರಣಾದ ವಿದ್ಯಾರ್ಥಿ

Ranveer Singh
Latest2 hours ago

Ranveer Singh: 2 ಕೋಟಿ ರೂ. ಮೌಲ್ಯದ ವಜ್ರದ ನೆಕ್ಲೇಸ್ ಧರಿಸಿ ಗಮನ ಸೆಳೆದ ರಣವೀರ್ ಸಿಂಗ್

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ2 hours ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Racial Comments
ಪ್ರಮುಖ ಸುದ್ದಿ2 hours ago

Racist Comment : ಭಾರತದಲ್ಲಿ ನೀಗ್ರೊಗಳಿದ್ದಾರೆ…; ಇದೀಗ ಬಂಗಾಳ ಕಾಂಗ್ರೆಸ್​​ ಅಧ್ಯಕ್ಷರ ಸರದಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ38 mins ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ2 hours ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ3 hours ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ9 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ9 hours ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

SSLC Result 2024 secret behind 20 percent grace marks
ಕರ್ನಾಟಕ10 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

SSLC Result 2024 78 schools get zero results in SSLC exams
ಬೆಂಗಳೂರು10 hours ago

SSLC Result 2024: ಎಸ್‌ಎಸ್‌ಎಲ್‌ಸಿ ಎಕ್ಸಾಂನಲ್ಲಿ ಸಿಕ್ಸರ್‌ ಬಾರಿಸಿದ ಗ್ರಾಮೀಣ ಪ್ರತಿಭೆಗಳು; 78 ಶಾಲೆಗಳಲ್ಲಿ ಶೂನ್ಯ ರಿಸಲ್ಟ್‌!

SSLC Result 2024 SSLC students get 20 percent grace marks but result is very poor
ಶಿಕ್ಷಣ10 hours ago

SSLC Result 2024: ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಸಿಕ್ತು 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌! ಆದ್ರೂ ಫಲಿತಾಂಶ ತೀರಾ ಕಳಪೆ

SSLC Exam Result 2024 Announce
ಬೆಂಗಳೂರು12 hours ago

SSLC Result 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಶೇ. 73.40 ವಿದ್ಯಾರ್ಥಿಗಳು ಪಾಸ್‌, ಉಡುಪಿ ಫಸ್ಟ್‌, ಯಾದಗಿರಿ ಲಾಸ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

ಟ್ರೆಂಡಿಂಗ್‌