ಫ್ಯಾಷನ್
Puneeth Rajkumar: ಅಪ್ಪು ಸ್ಟೈಲಿಂಗ್ ಕುರಿತು ಸೆಲೆಬ್ರಿಟಿ ಡಿಸೈನರ್-ಸ್ಟೈಲಿಸ್ಟ್ ರಾಜೇಶ್ ಶೆಟ್ಟಿ ನೆನಪಿನಾಳದ ಮಾತು
ಫ್ಯಾಷನ್ ಶೋ ಡೈರೆಕ್ಟರ್, ಸೆಲೆಬ್ರೆಟಿ ಸ್ಟೈಲಿಸ್ಟ್, ಡಿಸೈನರ್ ರಾಜೇಶ್ ಶೆಟ್ಟಿಯವರು ನಮ್ಮೆಲ್ಲರ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರನ್ನು ಈ ದಿನ ನೆನಪಿಸಿಕೊಂಡಿದ್ದಾರೆ. ಅಪ್ಪು ಅವರಿಗಿದ್ದ ಸಿಂಪಲ್ ಫ್ಯಾಷನ್ (Puneeth Rajkumar Fashion Memories) ಅಭಿರುಚಿ ಕುರಿತಂತೆ ವಿಸ್ತಾರದೊಂದಿಗೆ ಹಂಚಿಕೊಂಡಿದ್ದಾರೆ.
ಸಂದರ್ಶನ: ಶೀಲಾ ಸಿ. ಶೆಟ್ಟಿ
ನಮ್ಮೆಲ್ಲರ ಪ್ರೀತಿಯ ಅಪ್ಪು ಅವರನ್ನು ನೆನಪಿಸಿಕೊಳ್ಳಲು ಕಾರಣ ಬೇಕಿಲ್ಲ! ಆ ಮಟ್ಟಿಗೆ ಅವರು ಕನ್ನಡಿಗರ ಹೃದಯಲ್ಲಿ ನೆಲೆಸಿದ್ದಾರೆ. ಇಂದು ಎಲ್ಲರ ಮನದಲ್ಲೂ ಚಿರಸ್ಥಾಯಿಯಾಗಿ ನೆಲೆಸಿರುವ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಹುಟ್ಟಿದ ದಿನವಾದ ಇಂದು ಕೇವಲ ಸಿನಿಮಾ ಕ್ಷೇತ್ರದವರು ಮಾತ್ರವಲ್ಲ, ಫ್ಯಾಷನ್ ಕ್ಷೇತ್ರದವರು ಕೂಡ ನೆನಪಿಸಿಕೊಳ್ಳುತ್ತಾರೆ. ಇದಕ್ಕೆ ಕಾರಣವೂ ಇದೆ. ಪುನೀತ್ ಅವರಿಗಿದ್ದ ಸಿಂಪಲ್ ಡ್ರೆಸ್‌ಕೋಡ್ ಕಾಳಜಿ. ಪ್ರತಿ ಸಿನಿಮಾದಲ್ಲೂ ನಟಿಸುವಾಗ ನಾನಾ ಸ್ಟೈಲಿಸ್ಸ್ಟ್ ಹಾಗೂ ಡಿಸೈನರ್‌ಗಳ ಸಲಹೆ ಹಾಗೂ ಅಭಿಪ್ರಾಯಗಳನ್ನು ತೆಗೆದುಕೊಳ್ಳುತ್ತಿದ್ದರಂತೆ (Puneeth Rajkumar Fashion Memories). ಅವರಲ್ಲೊಬ್ಬರಾದ ಕನ್ನಡಿಗರಾದ ಸೆಲೆಬ್ರೆಟಿ ಡಿಸೈನರ್, ಸ್ಟೈಲಿಸ್ಟ್ ರಾಜೇಶ್ ಶೆಟ್ಟಿಯವರು ಅಪ್ಪು ಅವರೊಂದಿಗಿನ ಆಪ್ತ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ಸ್ಟೈಲಿಂಗ್ ಸಮಯದಲ್ಲಿ ಅವರೊಂದಿಗೆ ಕಳೆದ ಒಂದಿಷ್ಟು ವಿಚಾರಗಳನ್ನು ವಿಸ್ತಾರ ನ್ಯೂಸ್‌ನೊಂದಿಗೆ ಹಂಚಿಕೊಂಡಿದ್ದಾರೆ.
-ಸ್ಯಾಂಡಲ್‌ವುಡ್‌ನ ಮರೆಯಲಾಗದ ಮಾಣಿಕ್ಯ ಪುನೀತ್ ರಾಜ್‌ಕುಮಾರ್ ಅವರಿಗೂ ಒಮ್ಮೆ ಸ್ಟೈಲಿಂಗ್ ಮಾಡಿದ್ದೀರಲ್ಲ! ಆ ಕುರಿತು ಹೇಳುವಿರಾ?
-ಖಂಡಿತಾ. ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ತಾರೆಯರಿಗೆ ನಾನು ಸ್ಟೈಲಿಂಗ್ ಮಾಡಿದ್ದೇನೆ. ಈ ಮಧ್ಯೆ ಒಮ್ಮೆ ಅಪ್ಪು ಅವರಿಗೂ ಸ್ಟೈಲಿಂಗ್ ಮಾಡುವ ಅವಕಾಶ ದೊರೆತಿತ್ತು. ನಿಜ ಹೇಳುವುದಾದರೇ ಅವರದ್ದು ತೀರಾ ಸಿಂಪಲ್ ಫ್ಯಾಷನ್ ಸ್ಟೇಟ್‌ಮೆಂಟ್ಸ್. ಸಿನಿಮಾ ಹೊರತುಪಡಿಸಿದಲ್ಲಿ, ಅವರು ಎಂದಿಗೂ ಬಣ್ಣಬಣ್ಣದ ಉಡುಪುಗಳನ್ನು ಆಯ್ಕೆ ಮಾಡಿದವರಲ್ಲ! ತಮ್ಮ ಔಟ್‌ಲುಕ್ ಆದಷ್ಟೂ ಸಿಂಪಲ್ ಹಾಗೂ ಎಲಿಗೆಂಟ್ ಲುಕ್ ನೀಡುವಂತದ್ದಾಗಿರಬೇಕು ಎಂದು ಬಯಸುತ್ತಿದ್ದರು.
-ಸ್ಟೈಲಿಂಗ್‌ನಲ್ಲಿ ಅವರ ಆಯ್ಕೆಗೆ ಉದಾಹರಣೆ ನೀಡುವೀರಾ?
-ಧರಿಸುವ ಔಟ್‌ಫಿಟ್‌ನಲ್ಲಿ ಗ್ರೇ, ಬ್ರೌನ್, ಬ್ಲಾಕ್, ಗ್ರೀನ್ ಲೈಟ್ ಟೋನ್ಸ್ ಶೇಡ್‌ಗಳನ್ನು ಹೆಚ್ಚು ಆಯ್ಕೆ ಮಾಡುತ್ತಿದ್ದರು.
-ಸ್ಟಾರ್‌ಗಳಿಗೆ ಸ್ಟೈಲಿಂಗ್ ಮಾಡುವ ನಿಮಗೆ ಅಂದು ಪುನೀತ್ ರಾಜ್‌ಕುಮಾರ್ ಅವರು ವಿಭಿನ್ನ ಅನಿಸಿದ್ದೇಕೆ?
-ಕನ್ನಡ ಮಾತ್ರವಲ್ಲ, ನಾನಾ ಭಾಷೆಗಳ ತಾರೆಯರಿಗೂ ನಾನು ಡಿಸೈನ್ ಜೊತೆಗೆ ಸ್ಟೈಲಿಂಗ್ ಕೂಡ ಮಾಡಿದ್ದೇನೆ. ಅವರೆಲ್ಲರಿಗಿಂತ ಇಷ್ಟವಾಗಿದ್ದು ಹಾಗೂ ವಿಭಿನ್ನವಾಗಿ ಕಂಡದ್ದು ಅಪ್ಪು ಸರ್. ಯಾಕೆಂದರೇ, ಅಂತಹ ದೊಡ್ಡ ಸ್ಟಾರ್ ಆದರೂ ಕೂಡ ಅವರು ಎಲ್ಲರೊಂದಿಗೂ ವಿನಯದಿಂದ ವರ್ತಿಸುತ್ತಿದ್ದರು. ಯಾವತ್ತೂ ಖದರ್ ತೋರಿಸಿದವರಲ್ಲ. ಅಷ್ಟೊಂದು ಸ್ನೇಹಪೂರ್ವಕವಾಗಿ ಬೆರೆಯುತ್ತಿದ್ದರು.
-ಸ್ಟೈಲಿಂಗ್ ಕುರಿತಂತೆ ಚರ್ಚಿಸುತ್ತಿದ್ದರಾ?
-ಹೌದು. ಸಾಮಾನ್ಯ ವ್ಯಕ್ತಿಯಂತೆ, ಚಿಕ್ಕ ಮಗುವಿನಂತೆ ಪ್ರಶ್ನೆಗಳನ್ನು ಕೇಳುತ್ತಿದ್ದರು. ತನಗೇನು ಚೆನ್ನಾಗಿ ಕಾಣಿಸುತ್ತದೆ? ಯಾವುದು ಬೆಸ್ಟ್? ಸೂಟ್ ಆಗುತ್ತದೆ ಎಂದೆಲ್ಲಾ ಕೇಳುತ್ತಿದ್ದರು. ಇದು ಅವರ ದೊಡ್ಡತನ ತಾನೇ!
-ಅಪ್ಪು ಅವರ ಸ್ಟಾರ್ ಸ್ಟೈಲಿಂಗ್‌ಗೆ ತಕ್ಕಂತೆ ನೀವು ಹೇಗೆ ಅಂದು ಬದಲಾಗಿದ್ದೀರಿ?
-ಬದಲಾಗುವ ಪ್ರಸಂಗವೇ ಎದುರಾಗಲಿಲ್ಲ. ನನಗೆ ಸಿಕ್ಕಿದ್ದ ಒಂದು ಅವಕಾಶದಲ್ಲಿ ಮುಂದೊಮ್ಮೆ ಅವರ ಸಿನಿಮಾವೊಂದಕ್ಕೆ ಸ್ಟೈಲಿಂಗ್ ಮಾಡುವ ಕನಸೊಂದನ್ನು ಕಂಡಿದೆ. ಅದು ನನಸಾಗಲಿಲ್ಲ! ಆದರೆ, ಅವರಿಗೆ ಸ್ಟೈಲಿಂಗ್ ಮಾಡುವ ಅವಕಾಶ ಸಿಕ್ಕಿದ್ದನ್ನು ನೆನಪಿಸಿಕೊಂಡು ಸಮಾಧಾನಪಟ್ಟುಕೊಳ್ಳುತ್ತೇನೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Fashion Interview: ಕಿರುತೆರೆಯ ಸ್ಟೈಲಿಶ್ ಐಕಾನ್‌ಗಳ ಟಾಪ್ ಲಿಸ್ಟ್‌ಗೆ ಸೇರಿದ ನಿರಂಜನ್ ದೇಶಪಾಂಡೆ
ಫ್ಯಾಷನ್
Summer Fashion: ಬೇಸಿಗೆ ಫ್ಯಾಷನ್‌ಗೆ ಎಂಟ್ರಿ ಕೊಟ್ಟ ಹುಡುಗಿಯರ ಫಂಕಿ ಪ್ರಿಂಟೆಡ್ ಕ್ರಾಪ್ ಶರ್ಟ್ಸ್
ಬೇಸಿಗೆಯ ಫ್ಯಾಷನ್‌ಗೆ (Summer Fashion) ಲೆಕ್ಕವಿಲ್ಲದಷ್ಟು ಟ್ರೆಂಡಿವೇರ್‌ಗಳು ಎಂಟ್ರಿ ನೀಡುತ್ತವೆ. ಅವುಗಳಲ್ಲಿ ಇದೀಗ ಫಂಕಿ ಲುಕ್ ನೀಡುವ ಫ್ಲೋರಲ್ ಹಾಗೂ ವೈಬ್ರೆಂಟ್ ಶೇಡ್ಸ್‌ನ ಜೆಮೆಟ್ರಿಕಲ್ ಪ್ರಿಂಟೆಡ್ ಶರ್ಟ್‌ಗಳು ಸೇರಿವೆ. ಹುಡುಗಿಯರ ಫ್ಯಾಷನ್‌ನಲ್ಲಿರುವ ಇವುಗಳ ಬಗ್ಗೆ ಸ್ಟೈಲಿಸ್ಟ್ಸ್ ಒಂದಿಷ್ಟು ವಿವವರ ನೀಡಿದ್ದಾರೆ.
ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬೇಸಿಗೆಗೆ ಇದೀಗ (Summer Fashion) ಕ್ರಾಪ್ ಟೀ ಶರ್ಟ್‌ನ ನಂತರ ಕ್ರಾಪ್ ಫ್ಲೋರಲ್ ಹಾಗೂ ವೈಬ್ರೆಂಟ್ ಶೇಡ್‌ನ ಜೆಮೆಟ್ರಿಕಲ್ ಪ್ರಿಂಟ್ಸ್‌ನ ಶರ್ಟ್‌ಗಳು ಎಂಟ್ರಿ ನೀಡಿವೆ. ನೋಡಲು ಬಿಂದಾಸ್ ಹಾಗೂ ಲೈವ್ಲಿಯಾಗಿ ಕಾಣುವ ಈ ಫಂಕಿ ಶರ್ಟ್ಸ್ ಈಗಾಗಲೇ ಟಿನೇಜ್ ಹುಡುಗಿಯರ ಮನ ಗೆದ್ದಿವೆ. ಅದರಲ್ಲೂ ಔಟಿಂಗ್‌ಗೆ ಹೇಳಿಮಾಡಿಸಿದಂತಿವೆ.
ಫಂಕಿ ಹೂಗಳ ಚಿತ್ತಾರದ ಶರ್ಟ್
ಕೆಲವು ಫಂಕಿ ಶರ್ಟ್‌ಗಳಲ್ಲಿ ನಾನಾ ಬಗೆಯ ಹೂವುಗಳ ಚಿತ್ತಾರ ಕಾಣಬಹುದು. ಗುಲಾಬಿ, ಸೇವಂತಿ, ಕಮಲ, ಬ್ರಹ್ಮಕಮಲ. ಸೂರ್ಯಕಾಂತಿ, ಮಲ್ಲಿಗೆ, ಕನಾಕಾಂಬರ, ಜಾಜಿ ಸೇರಿದಂತೆ ದೇಸಿ ಹೂವುಗಳ ಪ್ರಿಂಟ್ಸ್ ಮಾತ್ರವಲ್ಲ, ವಿದೇಶಿ ಹೂವುಗಳ ಚಿತ್ತಾರವು ಮೆಳೈಸಿವೆ. ಬೇಸಿಗೆಯ ಉರಿ ಬಿಸಿಲಲ್ಲಿ ತಂಪನ್ನೆರೆಯುವ ವಿನ್ಯಾಸಗಳಲ್ಲಿ ಮೂಡಿಬಂದಿವೆ ಎನ್ನುತ್ತಾರೆ ಸ್ಟೈಲಿಸ್ಟ್ ಹಾಗೂ ಡಿಸೈನರ್ ರಿಜಿನಾ ವರ್ಗೀಸ್. ಅವರ ಪ್ರಕಾರ, ಟೀ ಶರ್ಟ್‌ಗಳನ್ನು ಧರಿಸಲು ಇಚ್ಛಿಸದವರು ಈ ಶರ್ಟ್‌ಗಳನ್ನು ಟ್ರೈ ಮಾಡಬಹುದು ಎನ್ನುತ್ತಾರೆ.
ವೈಬ್ರೆಂಟ್ ಶೇಡ್ಸ್‌ನ ಜೆಮೆಟ್ರಿಕಲ್ ಪ್ರಿಂಟೆಡ್ ಶರ್ಟ್
ಜೆಮೆಟ್ರಿಕಲ್ ವಿನ್ಯಾಸದ ಕೆಟಗರಿಯಲ್ಲಿ ನಾನಾ ಕಲರ್ ಬ್ಲಾಕ್ ಡಿಸೈನ್‌ವು ಹಾಗೂ ಪೆಂಟಾಗನ್, ಅಕ್ಟಾಗನ್, ಚೌಕಾಕಾರ, ತ್ರೀಕೋನ ಸೇರಿದಂತೆ ನಾನಾ ವಿನ್ಯಾಸದ ಪ್ರಿಂಟೆಡ್ ಶರ್ಟ್‌ಗಳು ಲಭ್ಯ. ಅಷ್ಟು ಮಾತ್ರವಲ್ಲದೇ ಈ ಜೆಮಿಟ್ರಿಕಲ್ ಪ್ರಿಂಟ್‌ನ ಜೊತೆಗೆ ಮಿಕ್ಸ್ ಮ್ಯಾಚ್ ಇರುವಂತಹ ಹೂವುಗಳ ಹಾಗೂ ಇಲ್ಯೂಷನ್ ಕ್ರಿಯೆಟ್ ಮಾಡುವಂತಹ ವಿನ್ಯಾಸದವು ಇಂದು ಚಾಲ್ತಿಯಲ್ಲಿವೆ.
ರಂಗೋಲಿ ಡಿಸೈನ್ ಪ್ರಿಂಟ್ಸ್
ಇನ್ನು ಕೆಲವು ಡಿಸೈನರ್ ಕ್ರಾಪ್ ಶರ್ಟ್‌ಗಳಲ್ಲಿ ರಂಗೋಲಿ ಡಿಸೈನವು ಲಭ್ಯ. ತ್ರಿಡಿ ಆರ್ಟ್ ಎಫೆಕ್ಟ್ ಇರುವಂತವು ಪ್ರಚಲಿತದಲ್ಲಿವೆ. ಇನ್ನು ಸಾದಾ ಕ್ರಾಪ್ ಶರ್ಟ್‌ನವು ಈ ಸೀಸನ್‌ನಲ್ಲಿ ಅಷ್ಟಾಗಿ ಕಾಣಸಿಗುತ್ತಿಲ್ಲ. ಸಿಕ್ಕರೂ ಕಾರ್ಪೋರೇಟ್ ಕ್ಷೇತ್ರದ ಮಾನಿನಿಯರು ಧರಿಸುವುದು ಕಾಮನ್ ಆಗಿದೆ ಎನ್ನುತ್ತಾರೆ ಡಿಸೈನರ್ಸ್ ರಿಚಾ ಹಾಗೂ ರಾಧಾ..
ಕ್ರಾಪ್ ಶರ್ಟ ಅನ್ನು ಹೇಗೆಲ್ಲಾ ಸ್ಟೈಲಿಂಗ್ ಮಾಡಬಹುದು?
- ಫಾರ್ಮಲ್ ಪ್ಯಾಂಟ್ ಜೊತೆಗೂ ಧರಿಸಬಹುದು.
- ಜೀನ್ಸ್, ಸ್ಕರ್ಟ್, ಕೇಪ್ರೀಸ್ ನೊಂದಿಗೂ ಧರಿಸಬಹುದು.
- ಕಾಲರ್ ಇರುವುದರಿಂದ ಮಿನಿಮಲ್ ಆಕ್ಸೆಸರೀಸ್ ಧರಿಸುವುದು ಉತ್ತಮ.
- ಹೇರ್‌ಸ್ಟೈಲ್ ಟ್ರೈ ಮಾಡಿದರೇ ಉತ್ತಮ.
- ಫಂಕಿ ಪ್ರಿಂಟ್ ಶರ್ಟ ಅನ್ನು ಟೈ ಮಾಡಿದಲ್ಲಿ ಕ್ರಾಪ್ ಟಾಪ್ ನಂತೆ ಕಾಣುವುದು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Summer Swimsuit Fashion: ಬೇಸಿಗೆಯ ಫ್ಯಾಷನ್‌ಗೆ ಲಗ್ಗೆ ಇಟ್ಟ ವೈಬ್ರೆಂಟ್ ಶೇಡ್ಸ್‌ನ ಟ್ರೆಂಡಿ ಸ್ವಿಮ್‌ಸೂಟ್ಸ್
ಫ್ಯಾಷನ್
Star Fashion: ‘ಜೆಂಡರ್ ಬಾರ್ಡರ್’ ಮುರಿದ ನಟ ಮಾಡೆಲ್ ವಿಜಯ್ ವರ್ಮಾ ಮೆಟಲ್ ಸೀರೆ ಕಹಾನಿ!
ಬಾಲಿವುಡ್ ನಟ ಹಾಗೂ ಮಾಡೆಲ್ ವಿಜಯ್‌ವರ್ಮಾ ಪ್ರತಿಷ್ಠಿತ ಫ್ಯಾಷನ್ ವೀಕ್‌ಗಳಲ್ಲಿ (Star Fashion) ವಾಕ್ ಮಾಡುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಇದೀಗ ಅವರು ಜೆಂಡರ್ ಬಾರ್ಡರ್ ಮುರಿದು ಡಿಸೈನರ್ ರಿಮ್‌ಜಿಮ್ ದಾದು ಅವರ ಮೆಟಲ್ ಸೀರೆಯಲ್ಲಿ ಕಾಣಿಸಿಕೊಂಡು ಫ್ಯಾಷನ್ ಪ್ರಿಯರ ಹುಬ್ಬೇರಿಸಿದ್ದಾರೆ.
ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಾಲಿವುಡ್ ನಟ ಹಾಗೂ ಮಾಡೆಲ್ ವಿಜಯ್ ವರ್ಮಾ ಪ್ರತಿಷ್ಠಿತ ಫ್ಯಾಷನ್ ವೀಕ್‌ಗಳಲ್ಲಿ (Star Fashion) ರೆಗ್ಯುಲರ್ ಆಗಿ ವಾಕ್ ಮಾಡುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಇದೀಗ ಅವರು ವಿಭಿನ್ನ ವೇಷದಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ. ಫ್ಯಾಷನ್ ಪ್ರಿಯರ ಹುಬ್ಬೇರಿಸಿದ್ದಾರೆ. ಹೌದು. ಜೆಂಡರ್ ಫ್ಯಾಷನ್ ರೂಲ್ಸ್ ಮುರಿದಿದ್ದಾರೆ. ಅಂದರೆ, ಮಹಿಳೆಯರಿಗೆಂದು ಮೀಸಲಾಗಿರುವ ಸೀರೆಯನ್ನು ಉಟ್ಟು ಫ್ಯಾಷನ್ ಫೋಟೋಶೂಟ್‌ನಲ್ಲಿ ಪಾಲ್ಗೊಂಡು ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡುವ ಮೂಲಕ ಫ್ಯಾಷನ್ ಲೋಕದಲ್ಲಿ ಸುದ್ದಿಯಾಗಿದ್ದಾರೆ. ಜೊತೆಗೆ ಫ್ಯಾಷನ್‌ಗೆ ಯಾವುದೇ ಜೆಂಡರ್ ಡಿಸ್ಕ್ರಿಮಿನೇಷನ್ ಸಲ್ಲದು ಎಂದು ಮಾತನಾಡದೇ ಪ್ರತಿಪಾದಿಸಿದ್ದಾರೆ. ಇದು ಫ್ಯಾಷನ್ ಲೋಕದಲ್ಲಿ ನಟರ ಹೊಸ ಟ್ರೆಂಡ್‌ಗೆ ನಾಂದಿ ಹಾಡಿದೆ.
ವಿಜಯವರ್ಮಾ ಧರಿಸಿರುವ ಮೆಟಲ್ ಸೀರೆ
ಅಂದಹಾಗೆ, ನಟ ವಿಜಯ್ ವರ್ಮಾ ಧರಿಸಿರುವ ಡಿಸೈನರ್‌ವೇರ್ ಎನ್ನುವುದಕ್ಕಿಂತ ಅದು ಮೆಟಲ್ ಸೀರೆ ಎನ್ನಬಹುದು. ನೋಡಲು ತಕ್ಷಣಕ್ಕೆ ಇದೇನಿದು ಸೀರೆಯಾ ಎಂದುಕೊಳ್ಳಬಹುದು. ಆದರೆ, ಇದು ಸೀರೆಯೇ ಹಾಗೆ ಇದನ್ನು ಡಿಸೈನರ್ ರಿಮ್‌ಜಿಮ್ ದಾದು ವಿನ್ಯಾಸಗೊಳಿಸಿದ್ದಾರೆ.
ನಟ ವಿಜಯ್ ವರ್ಮಾ ಹೇಳುವುದೇನು?
ನಟನಾದವನು ಎಲ್ಲಾ ಬಗೆಯ ನಟನೆ ಹಾಗೂ ಫ್ಯಾಷನ್‌ಗೂ ರೆಡಿಯಾಗಬೇಕಾಗುತ್ತದೆ. ನನಗಂತೂ ಫ್ಯಾಷನ್ ವೀಕ್‌ಗಳಲ್ಲಿ ವಾಕ್ ಮಾಡುವುದು ಕ್ರಿಯಾತ್ಮಕ ಡಿಸೈನರ್‌ವೇರ್‌ಗಳಲ್ಲಿ ಕಾಣಿಸಿಕೊಳ್ಳುವುದು ಇಷ್ಟವಾಗುತ್ತದೆ. ಮೆಟಲ್ ಸೀರೆ ಒಂದು ಕಲಾ ಪ್ರಕಾರ, ಅದನ್ನು ಧರಿಸಿ, ಫ್ಯಾಷನ್ ಫೋಟೋಶೂಟ್‌ನಲ್ಲಿ ಕಾಣಿಸಿಕೊಂಡಿದ್ದೇನೆ ಅಷ್ಟೇ! ಎಂದು ವಿಜಯ್ ವರ್ಮಾ ಹೇಳಿಕೊಂಡಿದ್ದಾರೆ.
ಆರ್ಟ್ ಇನ್ ಮೋಷನ್ ಹೆಸರಿನಲ್ಲಿ ಥೀಮ್ ಸೀರೆ
ಆರ್ಟ್ ಆಫ್ ಮೋಷನ್ ಹೆಸರಲ್ಲಿ ಈ ಥೀಮ್ ಸೀರೆ ಸಿದ್ಧಪಡಿಸಿರುವ ಅವರು ಎಲ್ಲರಿಗೂ ಅರ್ಥವಾಗುವಂತೆ ಮೆಟಲ್ ಸೀರೆ ಎಂದು ಹೇಳಿದ್ದಾರೆ. ಇದಕ್ಕಾಗಿ ಸಾಕಷ್ಟು ಹಾರ್ಡ್ವರ್ಕ್ ಮಾಡಿದ್ದಾರಂತೆ ಕೂಡ. ಯಾವುದೇ ಫ್ಯಾಷನ್‌ಗೆ ಸೀಸನ್ ಎಂಬ ಬೌಂಡರಿ ಇಲ್ಲ, ಜೆಂಡರ್ ಬೌಂಡರಿ ಇಲ್ಲ ಹಾಗೂ ಯಾವುದೇ ವಿನ್ಯಾಸದ ಬೌಂಡರಿ ಇಲ್ಲ ಎಂದು ಡಿಸೈನರ್ ರಿಮ್‌ಜಿಮ್ ದಾದೂ ಪ್ರತಿಪಾದಿಸಿದ್ದಾರೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Star Fashion Interview: ಯೂನಿಕ್ ಫ್ಯಾಷನ್‌ಗೆ ನಟಿ ಸಾನ್ಯ ಅಯ್ಯರ್ ಫಿದಾ!
ಫ್ಯಾಷನ್
Summer Nail Colours Trend: ಸಮ್ಮರ್ ಸೀಸನ್‌ನಲ್ಲಿ ಬದಲಾಯ್ತು ನೇಲ್ ಕಲರ್ಸ್ ಟ್ರೆಂಡ್
ಬೇಸಿಗೆ ಆಗಮಿಸುತ್ತಿದ್ದಂತೆ ಫ್ಯಾಷನ್‌ನಿಂದಿಡಿದು ಬ್ಯೂಟಿ ಪ್ರಾಡಕ್ಟ್‌ಗಳು ಕೂಡ ಬಣ್ಣ ಬದಲಾಯಿಸಿವೆ. ಇದು ನೇಲ್ ಕಲರ್ಸ್‌ಗೂ ಹೊರತಾಗಿಲ್ಲ! ನಾನಾ ಬಗೆಯ ಎದ್ದು ಕಾಣುವಂತಹ ವಿಭಿನ್ನ ವರ್ಣಗಳ ನೇಲ್ ಶೇಡ್ಸ್ (Summer Nail Colours Trend) ಬ್ಯೂಟಿ ಲೋಕಕ್ಕೆ ಕಾಲಿಟ್ಟಿವೆ. ಈ ಬಗ್ಗೆ ಇಲ್ಲಿದೆ ವರದಿ.
ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬೇಸಿಗೆ ಬಂದಾಯ್ತು, ಇನ್ನೇನಿದ್ದರೂ ಲೈಟ್ ಹಾಗೂ ಬ್ರೈಟ್ ನೇಲ್ ಕಲರ್‌ಗಳ ಹಾವಳಿ. ಯಾವ ಫ್ಯಾಷನ್ ಪ್ರಿಯ ಹೆಣ್ಮಕ್ಕಳನ್ನು ನೋಡಿದರೂ ಸಾಕು, ಟ್ರೆಂಡಿಯಾಗಿರುವ ನೇಲ್ ಕಲರ್ ಹಾಗೂ ಶೇಡ್‌ಗಳನ್ನು ಹಚ್ಚಿರುವ ಉಗುರುಗಳು ಮನ ಸೆಳೆಯುತ್ತವೆ. ಆ ಮಟ್ಟಿಗೆ ಈ ಬಾರಿ ಭಿನ್ನ-ವಿಭಿನ್ನ ಮಾನೋಕ್ರೋಮಾಟಿಕ್ ಶೇಡ್‌ಗಳು ಹಾಗೂ ಲೈಟ್ ವರ್ಣಗಳು ಬ್ಯೂಟಿ ಲೋಕಕ್ಕೆ ಕಾಲಿಟ್ಟಿವೆ.
ಟ್ರೆಂಡ್‌ನಲ್ಲಿ ಕಾಲಿಟ್ಟ ನೇಲ್ ಬಣ್ಣಗಳು
ಪಿಸ್ತಾ ಗ್ರೀನ್, ನಿಯಾನ್, ಪ್ಯಾಂಟಾನ್, ರೇಡಿಯಂ, ಪಾಸ್ಟೆಲ್, ಡಾರ್ಕ್ ಪಿಂಕ್, ರಾಯಲ್ ಬ್ಲ್ಯೂ, ಡಿಫರೆಂಟ್ ಶೇಡ್ಸ್‌ನ ಪೀಚ್ ಸೇರಿದಂತೆ ಇಮ್ಯಾಜಿನೇಷನ್‌ಗೂ ಸಿಗದ ವರ್ಣಗಳು ಈ ಬಾರಿಯ ಸಮ್ಮರ್ ನೇಲ್ ಕಲರ್ಸ್ ಕಲೆಕ್ಷನ್‌ನಲ್ಲಿ ಎಂಟ್ರಿ ನೀಡಿವೆ. ನೋಡಲು ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ಕೆಲವು ಮ್ಯಾಟ್ ಫಿನಿಶಿಂಗ್‌ನಲ್ಲಿ ಬಂದಿದ್ದರೆ, ಮತ್ತೆ ಕೆಲವು ಶೈನಿಂಗ್ ಕಲರ್‌ಗಳಲ್ಲೂ ಲಭ್ಯ ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪಟ್ರ್ಸ್.
ಸಿಂಪಲ್ ಲುಕ್ ನೀಡುವ ಕಲರ್ಸ್
ನನಗೆ ಅತಿಯಾಗಿರುವ ನೇಲ್ ಡಿಸೈನ್ ಬೇಡ. ನೋಡಲು ಆಕರ್ಷಕವಾಗಿ ಕಾಣಬೇಕು ಹಾಗೂ ಸಿಂಪಲ್ಲಾಗಿರಬೇಕು ಎನ್ನುವವರಿಗೆ ಈ ಸೀಸನ್‌ನ ಸಾಕಷ್ಟು ನೇಲ್ ಕಲರ್‌ಗಳು ಹೊಂದುತ್ತವೆ ಎನ್ನುವ ನೇಲ್ ಆರ್ಟಿಸ್ಟ್ ರಿಚಾ ಪ್ರಕಾರ, ಇವು ಡಿಫರೆಂಟ್ ಆಗಿ ಹಚ್ಚಿದಲ್ಲಿ ಮೋಡಲು ವಿಭಿನ್ನವಾಗಿ ಕಾಣುತ್ತವೆ. ಇದಕ್ಕೆ ಉದಾಹರಣೆ ಮಾನೋಕ್ರೋಮ್ಯಾಟಿಕ್ ನೇಲ್ ಡಿಸೈನ್ ಎನ್ನುತ್ತಾರೆ.
ಕಲರ್‌ಫುಲ್ ನೇಲ್ ಶೇಡ್ಸ್
ಸಾವಿರಗಟ್ಟಲೇ ಕೊಟ್ಟು ನೇಲ್ ಆರ್ಟ್ ಮಾಡಿಸಲು ಸಾಧ್ಯವಾಗದು ಎನ್ನುವವರಿಗೆ ಈ ನೇಲ್ ಶೇಡ್ಸ್ ಹೊಸ ಲುಕ್ ನೀಡುತ್ತವೆ ಎನ್ನಬಹುದು. ಹಚ್ಚುವವರ ಕ್ರಿಯಾತ್ಮಕತೆ ಮೇಲೆ ಡಿಪೆಂಡ್ ಆಗುತ್ತದೆ ಎನ್ನುತ್ತಾರೆ ನೇಲ್ ಆರ್ಟ್ ಡಿಸೈನರ್. ಇನ್ನು ಇದೀಗ ಒಂದೊಂದು ಉಗುರುಗಳಿಗೂ ಒಂದೊಂದು ಬಗೆಯ ಬಣ್ಣ ಹಚ್ಚುವುದು ಕೂಡ ಫ್ಯಾಷನ್ ಆಗಿದೆ. ಇದರೊಂದಿಗೆ ಇದೀಗ ಈ ಬಣ್ಣಗಳನ್ನು ಅಡ್ಡಡ್ಡ, ಉದ್ದುದ್ದವಾಗಿ ಹಚ್ಚುವ ಫ್ಯಾಷನ್ ಕೂಡ ಆರಂಭವಾಗಿದೆಯಂತೆ ಎನ್ನುತ್ತಾರೆ. ಇನ್ನು ಯಾವುದೇ ನೇಲ್ ವರ್ಣಗಳು ಚೆನ್ನಾಗಿ ಕಾಣಬೇಕೆಂದಲ್ಲಿ ಒಂದಿಷ್ಟು ಸಲಹೆಗಳನ್ನು ಪಾಲಿಸಲೇಬೇಕು ಎಂಬುದು ಬ್ಯೂಟಿ ಎಕ್ಸ್ಪಟ್ರ್ಸ್ ಅಭಿಪ್ರಾಯ. ಇದಕ್ಕಾಗಿ ಉಗುರುಗಳಿಗೆ ಆಕಾರ ನೀಡುವುದು ಅಗತ್ಯ ಎನ್ನುತ್ತಾರೆ.
ಮರೆಯಾದ ನೇಲ್ ಶೇಡ್ಸ್
ಬೋಲ್ಡ್ ಕಲರ್‌ಗಳಾದ ಬರ್ಗ್ಯಾಂಡಿ, ರೆಡ್‌ವೈನ್, ಶೇಡಿ ಬ್ಲಾಕ್, ಗೋಲ್ಡನ್ ಟ್ರೆಂಡಿ ಕಲರ್‌ಗಳು ಕಳೆದ ಸಾಲಿಗೆ ಕೊನೆಯಾಗಿವೆ. ಆದರೆ, ಮೆಟಾಲಿಕ್ ಕಲರ್ಸ್ ಈ ಸೀಸನ್‌ನ ನೇಲ್ ಫ್ಯಾಷನ್‌ನಲ್ಲಿಮಾತ್ರವಲ್ಲ, ಈ ಸಾಲಿಗೂ ಮುಂದುವರೆದಿವೆ.
ನೀಲಿ, ಹಸಿರು, ಗೋಲ್ಡ್, ಸಿಲ್ವರ್ ಕಲರ್‌ಗಳು ಕಾಂಟ್ರಾಸ್ಟ್ ಮ್ಯಾಚ್‌ನೊಂದಿಗೆ ಮುಂದುವರೆದಿವೆ ಎನ್ನುತ್ತಾರೆ ನೇಲ್ ಆರ್ಟ್ ಡಿಸೈನರ್ ರಕ್ಷಾ.
ನೇಲ್ ಕಲರ್ಸ್ ಪ್ರಿಯರಿಗೆ ಟಿಪ್ಸ್
- ನಿಮ್ಮ ಸ್ಕಿನ್ ಟೋನ್‌ಗೆ ಮ್ಯಾಚ್ ಆಗುವುದನ್ನು ಆಯ್ಕೆ ಮಾಡಿ.
- ಪ್ರತಿ ಬಾರಿ ರಿಮೂವರ್‌ನಿಂದ ಹಳೆಯದ್ದನ್ನು ಅಳಿಸಿ.
- ಡಬ್ಬಲ್ ಶೇಡ್ಸ್ ಹಚ್ಚಿ, ಹೊಸ ಲುಕ್ ನೀಡಿ.
- ಅಲಂಕಾರಕ್ಕೆ ಸ್ಟಿಕ್ಕರ್ ಕ್ರಿಸ್ಟಲ್ ಬಳಸಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Wedding Fashion: ಮದುವೆಯ ಟ್ರೆಂಡಿ ಆಕರ್ಷಕ ಬ್ರೈಡಲ್‌ವೇರ್ ಆಯ್ಕೆಗೆ ಪಾಲಿಸಬೇಕಾದ 7 ರೂಲ್ಸ್ ಯಾವವು?
ಫ್ಯಾಷನ್
Summer Swimsuit Fashion: ಬೇಸಿಗೆಯ ಫ್ಯಾಷನ್‌ಗೆ ಲಗ್ಗೆ ಇಟ್ಟ ವೈಬ್ರೆಂಟ್ ಶೇಡ್ಸ್‌ನ ಟ್ರೆಂಡಿ ಸ್ವಿಮ್‌ಸೂಟ್ಸ್
ಬಿಸಿಲ ಧಗೆಗೆ ಹಿರಿಯರು ಕಿರಿಯರೆನ್ನದೇ ಸ್ವಿಮ್ಮಿಂಗ್ ಮಾಡುವವರು ಹೆಚ್ಚಾಗಿದ್ದಾರೆ. ಇವರಿಗೆಂದೇ ಈ ಬಾರಿ ನಾನಾ ಬಗೆಯ ವೈಬ್ರೆಂಟ್ ಶೇಡ್ಸ್‌ನ ಸ್ವಿಮ್‌ಸೂಟ್‌ಗಳು (Summer Swimsuit Fashion) ಬಿಡುಗಡೆಯಾಗಿವೆ. ಗ್ಲಾಮರಸ್ ಲುಕ್ ನೀಡುವ ಬಿಕಿನಿಗಳಿಂದಿಡಿದು, ಬಾಡಿ ಕವರ್ ಮಾಡುವ ಕೋ ಆರ್ಡ್ ಸೆಟ್‌ಗಳು ಆಗಮಿಸಿವೆ. ಯಾವುದೆಲ್ಲಾ ಈ ಬಾರಿ ಟ್ರೆಂಡಿಯಾಗಿವೆ ಎಂಬುದನ್ನು ಸ್ಟೈಲಿಸ್ಟ್‌ಗಳು ವಿವರಿಸಿದ್ದಾರೆ.
ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬೇಸಿಗೆಯಲ್ಲಿ ಸ್ವಿಮ್ಮಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಪೂರಕ ಎಂಬಂತೆ, ಮಾರುಕಟ್ಟೆಯಲ್ಲಿ ನಾನಾ ಬಗೆಯ ವೈಬ್ರೆಂಟ್ ಶೇಡ್‌ನ ಸ್ವಿಮ್ ಸೂಟ್‌ಗಳು, ಬಿಕಿನಿಗಳು ಹಾಗೂ ಫ್ರಾಕ್ ಶೈಲಿಯ ಸ್ವಿಮ್ ಕೋ ಆರ್ಡ್ ಸೆಟ್‌ಗಳು ಮಾರುಕಟ್ಟೆಗೆ (Summer Swimsuit Fashion) ಲಗ್ಗೆ ಇಟ್ಟಿವೆ.
ಗ್ಲಾಮರ್ ಸ್ವಿಮ್ ಸೂಟ್‌ನಿಂದ ಫ್ರಾಕ್ ಶೈಲಿಯವಕ್ಕೆ ಬೇಡಿಕೆ
ಸ್ವಿಮ್‌ಸೂಟ್ ಎಂದರೇ ಮೂಗು ಮುರಿಯುವ ಕಾಲ ಈಗಿಲ್ಲ! ನೋಡಲು ಗೌರಮ್ಮನಂತಿದ್ದರೂ ಈಜುವ ಹವ್ಯಾಸ ಸಾಕಷ್ಟು ಮಂದಿಗೆ ಉಂಟು. ಜೀವನದ ಭಾಗವಾಗಿರುವ ಈ ಹವ್ಯಾಸ ಇದೀಗ ಕೇವಲ ಗಂಡಸರು ಹಾಗೂ ಮಕ್ಕಳ ಕ್ರೇಝ್ ಆಗಿ ಉಳಿದಿಲ್ಲ! ಮಾನಿನಿಯರು ಕೂಡ ಆಕರ್ಷಿತರಾಗಿದ್ದಾರೆ. ಇದಕ್ಕೆ ಪೂರಕ ಎಂಬಂತೆ, ಸ್ವಿಮ್ಮಿಂಗ್ ಪ್ರೇಮಿಗಳಿಗೆಂದೇ ವೈಬ್ರೆಂಟ್ ಶೇಡ್ಸ್‌ನ ಸ್ವಿಮ್ ಸೂಟ್‌ಗಳು ಬಿಡುಗಡೆಗೊಂಡಿವೆ. ಎಕ್ಸ್‌ಪೋಸ್ ಮಾಡಲು ಬಯಸದವರಿಗೂ ಕೂಡ ಬಾಡಿ ಕವರ್ ಮಾಡುವ ಕೋ ಆರ್ಡ್ ಸೆಟ್‌ಗಳು ಆಗಮಿಸಿವೆ ಎನ್ನುತ್ತಾರೆ ಸ್ಟೈಲಿಸ್ಟ್ ರಜತ್.
ಟ್ರೆಂಡ್‌ನಲ್ಲಿರುವ ಸ್ವಿಮ್‌ಸೂಟ್ ಶೇಡ್ಸ್
ಸಿಂಗಲ್ ಪೀಸ್, ಡಬ್ಬಲ್ ಪೀಸ್, ಫ್ರಾಕ್ ಸ್ಟೈಲ್ ಬಿಕಿನಿ, ಫುಲ್ ಕವರ್ಡ್ ಟೈಟ್ಸ್ ಜೊತೆಗಿರುವ ಸ್ವಿಮ್ ಸೂಟ್ಸ್, ಶಾಟ್ರ್ಸ್ ಜೊತೆಗೆ ಟ್ಯಾಂಕ್ ಟೈಪ್, ಹಾಲ್ಟರ್ ನೆಕ್ ಸೆಟ್, ಕೋ ಆರ್ಡ್ ಸೆಟ್ ಸ್ವಿಮ್‌ಸೂಟ್‌ಗಳು ಬಿಕಿನಿ, ಮಿನಿ ಸಿಂಗಲ್ ಪೀಸ್ ಫ್ರಾಕ್ ಸೇರಿದಂತೆ ನಾನಾ ಶೈಲಿಯವು ಕಲರ್ ಬ್ಲಾಕ್ ಶೇಡ್ಸ್, ಬಟರ್ ಪ್ಲೈಯ್ಸ್ ಪ್ರಿಂಟ್ಸ್, ಫ್ಲೋರಲ್ ಪ್ರಿಂಟ್ಸ್, ಮಾನೋಕ್ರೋಮ್ ಸಿಂಗಲ್ ಶೇಡ್, ಡಬ್ಬಲ್-ತ್ರಿಬಲ್ ಶೇಡ್ನವು ಪ್ರಚಲಿತದಲ್ಲಿವೆ.
ತಾರೆಯರ ನೆಚ್ಚಿನ ಸ್ವಿಮ್‌ಸೂಟ್‌ನಲ್ಲಿ ಬಿಕಿನಿಗೆ ಅಗ್ರಸ್ಥಾನ
ತಾರೆಯರು ಗ್ಲಾಮರಸ್ ಲುಕ್‌ಗೆ ಹೆಚ್ಚು ಪ್ರಾಮುಖ್ಯತೆ ನೀಡುವುದರಿಂದ ಹಾಗೂ ಅವರನ್ನು ಹಾಟ್ ಆಗಿ ಬಿಂಬಿಸುವುದರಿಂದ ಸ್ವಿಮ್‌ಸೂಟ್‌ನಲ್ಲಿ ಬಿಕಿನಿಗೆ ಮೊದಲ ಸ್ಥಾನ. ಅದರಲ್ಲೂ ಇತ್ತೀಚಿನ ನಟಿಯರಾದ ಅನನ್ಯಾ, ಸಾರಾ, ತಾರಾ ಸುತಾರಿಯಾ, ಕೃತಿ, ಜಾನ್ವಿ ಕಪೂರ್ ಸೇರಿದಂತೆ ನಾನಾ ನಟಿಯರು ಸ್ವಿಮ್‌ಸೂಟ್‌ನಲ್ಲಿ ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡುವುದನ್ನು ಕಾಣಬಹುದು. ಇಂದಿನ ಸಾಕಷ್ಟು ಹೊಸ ಟ್ರೆಂಡನ್ನು ಇವರುಗಳಿಂದಲೇ ತಿಳಿಯಬಹುದು ಎನ್ನುತ್ತಾರೆ ಸ್ಟೈಲಿಸ್ಟ್ ಧೀರಜ್.
ಸ್ವಿಮ್‌ಸೂಟ್ ಪ್ರಿಯರಿಗೆ 5 ಸಲಹೆಗಳು
- ಗ್ಲಾಮರ್ ಪ್ರಪಂಚದವರು ನೀವಾಗಿದ್ದಲ್ಲಿ ಮಾತ್ರ ಗ್ಲಾಮರಸ್ ಬಿಕಿನಿಗೆ ಮೊರೆ ಹೋಗಬಹುದು.
- ಮಕ್ಕಳಿಗಾಗಿ ಇದೀಗ ನಾನಾ ಕಾರ್ಟೂನ್ ಹಾಗೂ ಚಿತ್ತಾರವಿರುವ ಸ್ವಿಮ್‌ಸೂಟ್ ಆಗಮಿಸಿದೆ.
- ಗುಣಮಟ್ಟದ ಸ್ವಿಮ್‌ಸೂಟ್‌ಗಳನ್ನು ಖರೀದಿಸಿ. ಇಲ್ಲವಾದಲ್ಲಿ ಚರ್ಮದ ಸಮಸ್ಯೆಯಾಗಬಹುದು.
- ಎಲ್ಲಾ ಬಗೆಯ ಬಾಡಿಟೈಪ್‌ನವರಿಗೂ ಸ್ವಿಮ್‌ಸೂಟ್ ದೊರೆಯಲಾರಂಭಿಸಿದೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Summer Fashion Shopping: ಸಮ್ಮರ್ ಫ್ಯಾಷನ್‌ವೇರ್ ಶಾಪಿಂಗ್ ಮಾಡುವವರ ಗಮನದಲ್ಲಿರಬೇಕಾದ 5 ಸಂಗತಿಗಳು
-
ಕರ್ನಾಟಕ13 hours ago
Karnataka Election: ಮೇ 10ರಂದು ಕರ್ನಾಟಕ ಚುನಾವಣೆ; ಮೇ 13ಕ್ಕೆ ಫಲಿತಾಂಶ ಎಂದು ಘೋಷಿಸಿದ ಚುನಾವಣಾ ಆಯೋಗ
-
ಕರ್ನಾಟಕ14 hours ago
Karnataka Election 2023 LIVE: ಕರ್ನಾಟಕದಲ್ಲಿ ಮೇ 10ಕ್ಕೆ ಮತದಾನ, 13ಕ್ಕೆ ರಿಸಲ್ಟ್, ಒಂದೇ ಹಂತದ ಎಲೆಕ್ಷನ್
-
ಕರ್ನಾಟಕ17 hours ago
Karnataka Election: ಕರ್ನಾಟಕ ಚುನಾವಣೆ ದಿನಾಂಕ ಇಂದು ಘೋಷಣೆ, ಇಂದಿನಿಂದಲೇ ನೀತಿ ಸಂಹಿತೆ ಜಾರಿ
-
ಕರ್ನಾಟಕ12 hours ago
Karnataka Election: ನೀತಿ ಸಂಹಿತೆಗೆ ಮೊದಲೇ ತುಂಬಿತು ಅಕ್ರಮದ ಪಾತ್ರೆ: 2018ರ ಹಣದ ಹೊಳೆಯನ್ನು ಈಗಲೇ ಮೀರಿಸಿದ ಕರ್ನಾಟಕ !
-
ಪ್ರಮುಖ ಸುದ್ದಿ8 hours ago
UPI transactions : ಯುಪಿಐ ಬಳಕೆ ಗ್ರಾಹಕರಿಗೆ ಸಂಪೂರ್ಣ ಉಚಿತ ಎಂದ ಎನ್ಪಿಸಿಐ, ಹಾಗಾದರೆ 1.1% ಶುಲ್ಕ ಯಾರಿಗೆ?
-
ಗ್ಯಾಜೆಟ್ಸ್9 hours ago
Google: ಗೂಗಲ್ಗೆ 1337 ಕೋಟಿ ರೂ. ದಂಡ, 30 ದಿನದಲ್ಲಿ ಪಾವತಿಸಲು ನ್ಯಾಯಮಂಡಳಿ ಆದೇಶ!
-
ಕರ್ನಾಟಕ11 hours ago
Karnataka Elections 2023 : ವಲಸಿಗ ಸಚಿವರ ಮೇಲೆ ಬೊಮ್ಮಾಯಿ ನಿಗಾ; ಹೆಬ್ಬಾರ್, ಮುನಿರತ್ನ ಕರೆಸಿಕೊಂಡು ಚರ್ಚೆ
-
ಕರ್ನಾಟಕ15 hours ago
Karnataka Elections 2023 : 8 ಸಚಿವರ ಸಹಿತ 35 ಶಾಸಕರಿಗೆ ಸೋಲಿನ ಭೀತಿ, ಈ ಬಾರಿ ಬಿಜೆಪಿಯಲ್ಲಿ 50 ಹೊಸ ಮುಖ?