ಫ್ಯಾಷನ್
Sandalwood Star Fashion : ಅಜೆರ್ಬೈಜಾನ್‌ನ ವಿಂಟರ್ ಸ್ಟ್ರೀಟ್ ಫ್ಯಾಷನ್‌ಗೆ ಸೈ ಎಂದ ನಟಿ ಶ್ರದ್ಧಾ ಶ್ರೀನಾಥ್
ಸ್ಯಾಂಡಲ್‌ವುಡ್ ನಟಿ ಶ್ರದ್ಧಾ ಶ್ರೀನಾಥ್, ಅಜೆರ್ಬೈಜಾನ್ ದೇಶದ ವಿಂಟರ್ ಟ್ರಾವೆಲ್ ಫ್ಯಾಷನ್‌ಗೆ ಸೈ ಎಂದಿದ್ದಾರೆ. ಅವರ ಆಕರ್ಷಕ ಲೇಯರ್ ಲುಕ್‌ಗೆ ಫ್ಯಾಷನ್ ವಿಮರ್ಶಕರು ಫುಲ್ ಮಾರ್ಕ್ಸ್ ನೀಡಿದ್ದಾರೆ. ಈ ಬಗ್ಗೆ ಇಲ್ಲಿದೆ ಡಿಟೇಲ್ಸ್.
ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ಯಾಂಡಲ್‌ವುಡ್ ನಟಿ ಶ್ರದ್ಧಾ ಶ್ರೀನಾಥ್ ಅವರು ಅಜೆರ್ಬೈಜಾನ್ ದೇಶದ ಬಾಕು ಸ್ಟ್ರೀಟ್‌ಗಳಲ್ಲಿ ಬೆಚ್ಚನೆಯ ವಿಂಟರ್ ಟ್ರಾವೆಲ್ ಫ್ಯಾಷನ್‌ಗೆ ಸೈ ಎಂದಿದ್ದು, ಅವರು ಧರಿಸಿರುವ ಶಿಯರ್ಲಿಂಗ್ ಫರ್ ಜಾಕೆಟ್, ಟ್ರಾವೆಲ್ ಫ್ಯಾಷನ್ ಪ್ರಿಯರ ಮನ ಸೆಳೆದಿದೆ. ಅಲ್ಲಿನ ಪರಿಸರಕ್ಕೆ ಹೊಂದುವಂತಹ ನಾನಾ ಟ್ರೆಂಡಿ ವಿಂಟರ್ ಸ್ಟ್ರೀಟ್ ಫ್ಯಾಷನ್‌ನಲ್ಲಿ ಕಾಣಿಸಿಕೊಂಡಿರುವ ಶ್ರದ್ಧಾ ತಮ್ಮದೇ ಆದ ವಿಂಟರ್ ಟ್ರಾವೆಲ್ ಸ್ಟೈಲ್ ಸ್ಟೇಟ್‌ಮೆಂಟ್ ಹುಟ್ಟು ಹಾಕಿದ್ದಾರೆ.
ಶ್ರದ್ಧಾ ವಿಂಟರ್ ಸ್ಟ್ರೀಟ್ ಫ್ಯಾಷನ್
ಅಂದಹಾಗೆ, ಶ್ರದ್ಧಾ ಶ್ರೀನಾಥ್ ಬಹುಭಾಷಾ ತಾರೆ. ಕನ್ನಡ ಮಾತ್ರವಲ್ಲ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲೂ ನಟಿಸುತ್ತಾ ಬಿಜಿಯಾಗಿರುವ ನಟಿ. ಟ್ರಾವೆಲ್ ಪ್ರೇಮಿ ಕೂಡ. ಚಿಕ್ಕದೊಂದು ಬ್ರೇಕ್ ಸಿಕ್ಕರೂ ಟ್ರಾವೆಲ್ ಮಾಡುವ ಇವರು ಆಯಾ ಹವಾಮಾನಕ್ಕೆ ತಕ್ಕಂತೆ ತಮ್ಮ ಸ್ಟೈಲ್‌ಸ್ಟೇಟ್‌ಮೆಂಟ್ ಬದಲಿಸುವ ನಟಿ. ಇದೀಗ ಅಜೆರ್ಬೈಜಾನ್‌ಗೆ ಹಾರಿರುವ ಶ್ರದ್ಧಾ, ಸದ್ಯಕ್ಕೆ ಗ್ಲಾಮರಸ್ ಔಟ್‌ಫಿಟ್‌ಗಳಿಗೆ ಬ್ರೇಕ್ ಹಾಕಿದ್ದಾರೆ. ಕಂಪ್ಲೀಟ್ ಕವರ್ ಆಗುವಂತಹ ಹಾಗೂ ಜೊತೆಗೆ ಟ್ರೆಂಡಿ ಲೇಯರ್ ವಿಂಟರ್ ಫ್ಯಾಷನ್‌ವೇರ್ ಮೊರೆ ಹೋಗಿದ್ದಾರೆ. ಬಾಕು ಸ್ಟ್ರೀಟ್‌ಗಳಲ್ಲಿ ಸುತ್ತಮುತ್ತಲ ಪ್ರವಾಸಿ ತಾಣಗಳಲ್ಲಿ ಬಿಂದಾಸ್ ಲೇಯರ್ ಸ್ಟೈಲ್ ಸ್ಟೇಟ್‌ಮೆಂಟ್‌ನಲ್ಲಿ ಅಲೆದಾಡಿದ್ದಾರೆ. ಅವರ ಫ್ಯಾಷೆನಬಲ್ ಫೋಟೋಗಳೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಎನ್ನಬಹುದು.
ಆಕರ್ಷಕ ಶಿಯರ್ಲಿಂಗ್ ಫರ್ ಜಾಕೆಟ್
ನಟಿ ಶ್ರದ್ಧಾ ಧರಿಸಿರುವ ಸನ್ ಕಲರ್‌ನ ಆಕರ್ಷಕ ಶಿಯರ್ಲಿಂಗ್ ಫರ್ ಕಾಲರ್ ಕ್ಯಾಪ್ ಜಾಕೆಟ್, ಇಡೀ ಟ್ರಾವೆಲ್ ಮೋಡ್‌ನ ಎನರ್ಜಿ ಹೆಚ್ಚಿಸಿದೆ ಎನ್ನಬಹುದು. ಇನ್ನು ಸ್ನೋ ಫಾಲ್ ಪ್ರದೇಶಗಳಲ್ಲಿ ದೇಹವನ್ನು ಬೆಚ್ಚಗಿಡಲು ಸಹಕಾರಿಯಾಗಿದೆ. ಪಫರ್ ಹಾಗೂ ಫರ್ ಎರಡೂ ವಿನ್ಯಾಸ ಹೊಂದಿರುವ ಈ ಜಾಕೆಟ್‌ಗೆ ಬ್ಲ್ಯೂ ಜೀನ್ಸ್ ಪ್ಯಾಂಟ್ ಹಾಗೂ ಚಾಕೋಲೇಟ್ ಬ್ರೌನ್ ವರ್ಣದ ಸ್ಟೋಲ್ ಪರ್ಫೆಕ್ಟ್ ಟ್ರಾವೆಲಿಂಗ್ ಲುಕ್‌ಗೆ ಮ್ಯಾಚ್ ಆಗಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಇನ್ನು ಸ್ಲಿಂಗ್ ಬ್ಯಾಗ್ ಹಾಗೂ ಬ್ಯಾಕ್‌ಪ್ಯಾಕ್ ಎರಡೂ ಶ್ರದ್ಧಾ ಟ್ರಾವೆಲ್ ಫ್ಯಾಷನ್‌ಗೆ ಸಾಥ್ ನೀಡಿವೆ. ಇದು ಶ್ರದ್ಧಾ ಅಡ್ವೆಂಚರಸ್ ಹುಡುಗಿ ಎಂಬುದನ್ನು ತೋರ್ಪಡಿಸುತ್ತದೆ ಎನ್ನುತ್ತಾರವರು.
ಟ್ರಾವೆಲ್‌ನ ಇನ್ನಿತರೆ ದಿನಗಳಲ್ಲಿ ಧರಿಸಿರುವ ಪಿಂಕ್ ಕ್ರಾಪ್ ಟಾಪ್ ಹಾಗೂ ರೌಂಡ್ ನೆಕ್‌ನ ಕ್ರೀಮಿಶ್ ಶ್ರಗ್ ಕ್ಯಾಶುವಲ್ ಲುಕ್ ಕಲ್ಪಿಸಿದೆ. ಇದರೊಂದಿಗೆ ಕೆಲವೊಮ್ಮೆ ಮಿಕ್ಸ್ ಮ್ಯಾಚ್ ಮಾಡಿ ಧರಿಸಿರುವ ರೆಡ್ ಫ್ರೆಂಚ್ ಕ್ಯಾಪ್ ಹಾಗೂ ಸ್ಟೋಲ್‌ಗಳು ವೆಸ್ಟರ್ನ್ ಲುಕ್‌ಗೆ ಫುಲ್ ಮಾಕ್ರ್ಸ್ ನೀಡಿದೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Stars Desi Fashion : ಖಾದಿ-ಕಾಟನ್-ತ್ರಿವರ್ಣ ಶೇಡ್‌ನ ದೇಸಿ ಉಡುಗೆಗಳಲ್ಲಿ ಗಣರಾಜ್ಯೋತ್ಸವ ಸಂಭ್ರಮಿಸಿದ ಸೆಲೆಬ್ರಿಟಿಗಳು
ಫ್ಯಾಷನ್
Wedding Fashion: ಗ್ರ್ಯಾಂಡ್ ವೆಡ್ಡಿಂಗ್ ಫ್ಯಾಷನ್‌ವೇರ್‌ಗೆ ಡಿಸೈನರ್ ಕ್ಲಚ್ ಸಾಥ್
ವೆಡ್ಡಿಂಗ್ ಸೀಸನ್‌ನಲ್ಲಿ ಗ್ರ್ಯಾಂಡ್‌ಲುಕ್ ನೀಡುವ ಡಿಸೈನರ್ ಕ್ಲಚ್‌ಗಳು ಕಾಲಿಟ್ಟಿವೆ. ಮದುವೆಯ ಸಂಭ್ರಮಕ್ಕೆ (Wedding Fashion) ಧರಿಸುವ ಎಥ್ನಿಕ್‌ವೇರ್‌ಗೆ ಈ ಕ್ಲಚ್‌ಗಳು ಸಾಥ್ ನೀಡುತ್ತಿವೆ. ಈ ಬಗ್ಗೆ ಇಲ್ಲಿದೆ ಡಿಟೇಲ್ಸ್.
ಶೀಲಾ ಸಿ. ಶೆಟ್ಟಿ, ಬೆಂಗಳೂರು
ವೆಡ್ಡಿಂಗ್ ಸೀಸನ್‌ನಲ್ಲಿ ಧರಿಸುವ ಗ್ರ್ಯಾಂಡ್ ಎಥ್ನಿಕ್‌ವೇರ್‌ಗಳಿಗೆ ಮ್ಯಾಚ್ ಆಗುವಂತಹ ಬಗೆಬಗೆಯ ಡಿಸೈನರ್ ಕ್ಲಚ್‌ಗಳು ಮಾರುಕಟ್ಟೆಗೆ (Wedding Fashion) ಕಾಲಿಟ್ಟಿವೆ. ನೋಡಿದರೇ ಕೊಳ್ಳಬೇಕೆನಿಸುವ ಡಿಸೈನ್‌ಗಳಲ್ಲಿ ಲಭ್ಯವಿರುವ ಈ ಕ್ಲಚ್‌ಗಳು ಇಂದು ಎಥ್ನಿಕ್ ಪ್ರಿಯರನ್ನು ಸೆಳೆದಿವೆ.
ವೆಡ್ಡಿಂಗ್‌ವೇರ್‌ಗೆ ಕ್ಲಚ್ ಸಾಥ್
ಗ್ರ್ಯಾಂಡ್ ಉಡುಪು ಧರಿಸಿ ಮದುವೆಯಲ್ಲಿ ಭಾಗವಹಿಸುವವರಿಗೆ ಈ ಕ್ಲಚ್ ಸಾಥ್ ನೀಡುತ್ತಿವೆ. ರೇಷ್ಮೆ ಸೀರೆ ಮಾತ್ರವಲ್ಲ, ಡಿಸೈನರ್ ಲೆಹೆಂಗಾ, ದಾವಣಿ-ಲಂಗ, ಗಾಗ್ರ, ಸಲ್ವಾರ್, ಕಮೀಝ್ ಹೀಗೆ ನಾನಾ ಬಗೆಯ ಡಿಸೈನರ್ ಉಡುಪುಗಳಿಗೆ ಮ್ಯಾಚ್ ಆಗುವ ವಿನ್ಯಾಸದಲ್ಲಿ ದೊರೆಯುತ್ತಿವೆ.
ಯಾವ್ಯಾವ ಬಗೆಯ ಕ್ಲಚ್‌ಗಳು ಲಭ್ಯ
ಕುಂದನ್ ಡಿಸೈನ್‌ನವು, ನಾನಾ ವರ್ಣಗಳ ಅಮೆರಿಕನ್ ಡೈಮಂಡ್ ಇಮಿಟೇಟ್ ಮಾಡುವಂತಹ ಕ್ರಿಸ್ಟಲ್ ಕ್ಲಚ್‌ಗಳು, ಬೀಡ್ಸ್ ಕ್ಲಚ್, ಪರ್ಲ್ ಕ್ಲಚ್, ವೆಲ್ವೆಟ್ ಕ್ಲಚ್, ಪರ್ಸ್ ಶೈಲಿಯವು, ಸ್ವಿಂಗ್ ಶೈಲಿಯ ಚೈನ್ ಇರುವಂತಹ ಕ್ಲಚ್‌ಗಳು ಹೆಚ್ಚು ಚಾಲ್ತಿಯಲ್ಲಿವೆ. ಡಿಸೈನರ್ ವೇರ್‌ಗಳೊಂದಿಗೆ ಹಾಕಿಕೊಂಡಾಗ ಆಕರ್ಷಕವಾಗಿ ಕಾಣುತ್ತವೆ. ಈ ಸೀಸನ್‌ನಲ್ಲಿ ಬೇಸಿಕ್ ಮೇಕಪ್ ಆಕ್ಸೆಸರೀಸ್ ಹಾಗೂ ಮೊಬೈಲ್ ಇರಿಸಿಕೊಳ್ಳುವಂತಹ ಕ್ಲಚ್‌ಗಳಿಗೆ ಇಂದು ಬೇಡಿಕೆ ಹೆಚ್ಚಾಗಿದೆ ಎನ್ನುತ್ತಾರೆ ಡಿಸೈನರ್ಸ್. ಇನ್ನು ಕ್ಲಚ್‌ಗಳಲ್ಲಿಕುಂದನ್ ವರ್ಕ್, ಮಿರರ್ ವರ್ಕ್, ಪ್ಯಾಚ್ ವರ್ಕ್, ಮಿಕ್ಸ್ ಮ್ಯಾಚ್ ಕ್ಲಚ್‌ಗಳು ಹೆಚ್ಚು ಬೇಡಿಕೆ ಸೃಷ್ಠಿಸಿಕೊಂಡಿವೆ.
ಕ್ಲಚ್‌ಗಳ ಬಗ್ಗೆ ತಿಳಿದಿರಿ
ಕ್ಲಚ್‌ಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಎಷ್ಟು ಕಂಪಾರ್ಟ್‌ಮೆಂಟ್‌ಗಳು ಇವೆ ಎಂದು ಪರೀಕ್ಷಿಸಿ. ಶಾಪಿಂಗ್‌ಗೆ ಹೋಗುವಾಗ ಕ್ಲಚ್ ಬೇಡ. ವ್ಯಾನಿಟಿ ಬ್ಯಾಗ್ ಸೂಕ್ತ. ಕ್ಲಚ್‌ಗಳನ್ನು ಪ್ರವಾಸಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಎಂಬುದು ನೆನಪಿರಲಿ. ಯಾಕೆಂದರೆ, ಅದರಲ್ಲಿಹೆಚ್ಚಿನ ವಸ್ತುಗಳನ್ನು ಇಡಲಾಗದು.
ನಿರ್ವಹಣೆ ಹೀಗೆ ಮಾಡಿ
ಕುಂದನ್ ವರ್ಕ್ ಅಥವಾ ಇನ್ಯಾವುದೇ ಡಿಸೈನರ್ ವರ್ಕ್ ಇರುವ ಕ್ಲಚ್‌ಗಳನ್ನು ವೈಟ್ ಕಾಟನ್ ಬಟ್ಟೆಯಲ್ಲಿಸುತ್ತಿ ಇಟ್ಟರೆ ತುಂಬ ದಿನ ಬಾಳಿಕೆ ಬರುತ್ತದೆ. ಮದುವೆ ಸಮಾರಂಭದಿಂದ ಬಂದ ತಕ್ಷ ಣ ಕ್ಲಚ್‌ನಲ್ಲಿ ಏನಾದರೂ ಇದ್ದರೆ ಖಾಲಿ ಮಾಡಿ ಇಡಿ. ಕ್ಲಚ್‌ಗಳನ್ನು ತೊಳೆಯಬೇಡಿ. ಚಿಕ್ಕ ಟಿಶ್ಯೂ ಪೇಪರ್‌ನಿಂದ ನಿಧಾನವಾಗಿ ಕ್ಲೀನ್ ಮಾಡಿ ಪ್ಯಾಕ್ ಮಾಡಿ ಇಡಿ.
ಆಕರ್ಷಕವಾಗಿ ಕಾಣಿಸಲು ಕ್ಲಚ್
- ಗ್ರ್ಯಾಂಡ್ ಸೀರೆಗಳಿಗೆ ಹಾಗೂ ಡಿಸೈನರ್ ವೇರ್‌ಗೆ ಅಂದವಾದ ಕ್ಲಚ್ ಕೈಯಲ್ಲಿಹಿಡಿಯುವುದು ಇಂದಿನ ಟ್ರೆಂಡ್.
- ಕ್ಲಚ್ ಆದಷ್ಟೂ ಕಾಂಪಾಕ್ಟ್ ಆಗಿದ್ದಷ್ಟೂ ಚೆನ್ನಾಗಿ ಕಾಣುತ್ತದೆ.
- ಗೋಲ್ಡ್, ಸಿಲ್ವರ್ ಕ್ಲಚ್‌ಗಳು ಎಲ್ಲಾ ಡಿಸೈನರ್‌ವೇರ್‌ಗೂ ಸೂಟ್ ಆಗುತ್ತವೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Wedding Fashion: ಮದುವೆಯ ಟ್ರೆಂಡಿ ಆಕರ್ಷಕ ಬ್ರೈಡಲ್‌ವೇರ್ ಆಯ್ಕೆಗೆ ಪಾಲಿಸಬೇಕಾದ 7 ರೂಲ್ಸ್ ಯಾವವು?
ಫ್ಯಾಷನ್
Dior Pre Fall Fashion Show: ಭಾರತದಲ್ಲಿ ಮೊಟ್ಟ ಮೊದಲ ಬಾರಿ ನಡೆದ ಡಿಯೊರ್ ಪ್ರಿ ಫಾಲ್ ಫ್ಯಾಷನ್ ಶೋ
ಮೊದಲ ಬಾರಿ ಭಾರತದಲ್ಲಿ ನಡೆದ ಡಿಯೋರ್ ಪ್ರಿ ಫಾಲ್ ಫ್ಯಾಷನ್ ಶೋನಲ್ಲಿ (Dior Pre Fall Fashion Show), ವೈಬ್ರೆಂಟ್ ಶೇಡ್ ಡಿಸೈನರ್‌ವೇರ್‌ಗಳನ್ನು ಧರಿಸಿದ ಮಾಡೆಲ್‌ಗಳು ರ‍್ಯಾಂಪ್ ವಾಕ್ ಮಾಡಿದರು. ಈ ಬಗ್ಗೆ ಇಲ್ಲಿದೆ ವರದಿ.
ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಣ್ಣಿಗೆ ಎದ್ದು ಕಾಣಿಸುವಂತಹ ಬಣ್ಣಬಣ್ಣದ ಡಿಸೈನರ್ ವೇರ್‌ಗಳು, ಬ್ರೈಟ್ ಡ್ರೆಸ್‌ಗಳು, ಈ ಕಲರ್‌ಗಳಲ್ಲೂ ಉಡುಗೆಗಳೂ ಇದ್ದವಾ! ಎಂದುಕೊಳ್ಳುವಷ್ಟರ ಮಟ್ಟಿಗೆ ಡಿಸೈನರ್ ವೇರ್‌ಗಳು ರ್ಯಾಂಪ್ ಮೇಲೆ ಅನಾವರಣಗೊಂಡವು. ನೋಡಲು (Dior Pre Fall Fashion Show) ಕಣ್ಮನ ಸೆಳೆಯುವಂತಹ ಡ್ರೆಸ್‌ಗಳು ನೆರೆದಿದ್ದ ಗಣ್ಯರನ್ನು ಸೆಳೆದವು.
ಭಾರತದಲ್ಲಿ ಡಿಯೋರ್‌ನ ಮೊದಲ ಫ್ಯಾಷನ್ ಶೋ
ಮುಂಬಯಿಯ ಗೇಟ್ ವೇ ಆಫ್ ಇಂಡಿಯಾ ಬಳಿ ನಡೆದ ಡಿಯೋರ್‌ನ ಮೊಟ್ಟ ಮೊದಲ ಫ್ಯಾಷನ್ ಶೋ ಕಲ್ಚರ್ ಹಾಗೂ ವಿನ್ಯಾಸದ ಸಮಾಗಮವಾಗಿತ್ತು. ಡಿಯೋರ್ ನಿರ್ದೇಶಕಿ ಮಾರಿಯಾ ಗ್ರಾಝಿಯಾ ಅವರ ಐಡಿಯಾದಂತೆ ಈ ಫ್ಯಾಷನ್ ಶೋವನ್ನು ಆಯೋಜಿಸಲಾಗಿತ್ತು.
ರ್ಯಾಂಪ್‌ನಲ್ಲಿ ಕ್ಲಾಸಿಕಲ್ ಮ್ಯೂಸಿಕ್
ಎಲ್ಲಾ ಫ್ಯಾಷನ್ ಶೋಗಳಲ್ಲಿ ಹಿಟ್ ರ್ಯಾಪ್ ಅಥವಾ ಶೋಗೆ ಸೂಟ್ ಆಗುವಂತಹ ಮ್ಯೂಸಿಕ್ ಹಾಕುವುದು ಕಾಮನ್. ಆದರೆ ಈ ಡಿಯೋರ್ ಶೋನಲ್ಲಿ ಮಾತ್ರ ಡೈರೆಕ್ಟರ್ ಮಾರಿಯಾ ಅವರ ಅಭಿಲಾಷೆಯಂತೆ ಇಂಡಿಯನ್ ಕ್ಲಾಸಿಕಲ್ ಮ್ಯೂಸಿಕ್ ರ್ಯಾಂಪ್ ವಾಕ್‌ನ ಹಿನ್ನೆಲೆ ಸಂಗೀತವಾಗಿ ಬಳಸಲಾಯಿತು. ಎಲ್ಲರಿಗೂ ಆಶ್ಚರ್ಯ ಮೂಡಿಸಿದ ವಿಷಯವೆಂದರೇ, ರ್ಯಾಂಪ್‌ನಲ್ಲಿ ಮೊದಲ ಮಹಿಳಾ ತಬಲಾ ವಾದಕಿ ಅನುರಾಧ ಪಾಲ್ ಅವರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಇಂಡಿಯನ್ ಮಾಡೆಲ್‌ಗಳಿಗಿಂತ ಹೊರಗಡೆಯವರೇ ಹೆಚ್ಚು
ಡಿಯೋರ್ ಫ್ಯಾನ್ ಶೋನಲ್ಲಿ ಕೇವಲ ಬೆರಳೆಣಿಕೆಯಷ್ಟರ ಮಟ್ಟಿಗೆ ಮಾತ್ರ ಭಾರತೀಯ ಮಾಡೆರಲ್‌ಗಳು ಕಣ್ಣಿಗೆ ಬಿದ್ದರು. ಇನ್ನುಳಿದಂತೆ ಎಲ್ಲರೂ ಹೊರಗಡೆಯವರಾಗಿದ್ದರು. ಈ ವಿಷಯ ಅಸಮಾಧಾನ ತರಿಸಿತು ಎನ್ನುತ್ತಾರೆ ಹೆಸರನ್ನು ಹೇಳಲು ಇಚ್ಛಿಸದ ಸ್ಟೈಲಿಸ್ಟ್. ಭಾರತೀಯ ಸಂಸ್ಕೃತಿಯನ್ನು ಪ್ರತಿಯೊಂದರಲ್ಲೂ ಎತ್ತಿ ಹಿಡಿದು ಕೊನೆಗೆ ರ್ಯಾಂಪ್ ಶೋನಲ್ಲಿ ಮಾತ್ರ ವಿದೇಶಿಯರಿಗೆ ಮಣೆ ಹಾಕಿದ್ದು ಸ್ಥಳಿಯರಲ್ಲಿ ಕೊಂಚ ಅಸಮಾಧಾನ ವ್ಯಕ್ತಪಡಿಸಿತು.
ಬಾಲಿವುಡ್ ಸೆಲೆಬ್ರೆಟಿಗಳ ದಂಡು
ಕ್ರಿಕೆಟಿಗ ವಿರಾಟ್ ಕೋಹ್ಲಿ, ನಟಿ ಅನುಷ್ಕಾ ಶರ್ಮಾ ಜೋಡಿ, ಅನನ್ಯಾ ಪಾಂಡೇ, ಸೋನಂ ಕಪೂರ್, ಅಭಿಷೇಕ್ ಬಚ್ಚನ್. ಅಥಿಯಾ ಶೆಟ್ಟಿ ಸೇರಿದಂತೆ ನಾನಾ ತಾರೆಯರು ಈ ಫ್ಯಾಷನ್ ಶೋನಲ್ಲಿ ಗೆಸ್ಟ್ ಲಿಸ್ಟ್‌ನಲ್ಲಿದ್ದರು. ಟ್ರೆಂಡಿ ವೈಬ್ರೆಂಟ್ ಶೇಡ್‌ಗಳಲ್ಲಿ ಕಾಣಿಸಿಕೊಂಡರು. ಬೇಸಿಗೆ ಬಂದರೂ ಇನ್ನೂ ಸಾಟೀನ್ ಫ್ಯಾಬ್ರಿಕ್‌ನ ಲೆಯರ್ ಔಟ್‌ಫಿಟ್‌ನಲ್ಲೆ ಕಾಣಿಸಿಕೊಂಡದ್ದು ಬಹುತೇಕರಲ್ಲಿ ಅಚ್ಚರಿ ಮೂಡಿಸಿತು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Fashion Photoshoot: ವೆಡ್ಡಿಂಗ್ ಸೀಸನ್‌ನಲ್ಲಿ ಟ್ರೆಂಡಿಯಾದ ಕಪಲ್ ಎಂಗೇಜ್‌ಮೆಂಟ್ ಫ್ಯಾಷನ್ ಫೋಟೊಶೂಟ್
ಫ್ಯಾಷನ್
Star Summer Fashion: ಬೇಸಿಗೆ ಔಟ್‌ಫಿಟ್ಸ್‌ಗೆ ಸೈ ಎಂದ ಗ್ಲಾಮರಸ್ ನಟಿ ರಾಯ್ ಲಕ್ಷ್ಮಿ
ಬಹುಭಾಷಾ ತಾರೆ ರಾಯ್ ಲಕ್ಷ್ಮಿ, ಬೇಸಿಗೆ ಔಟ್‌ಫಿಟ್ಸ್‌ಗೆ (Star Summer Fashion) ಸೈ ಎಂದಿದ್ದಾರೆ. ಈ ಸೀಸನ್‌ಗೆ ಸೂಟ್ ಆಗುವಂತಹ ಗ್ಲಾಮರಸ್ ಉಡುಗೆಗಳಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ಸೀಸನ್ ಎಂಜಾಯ್ ಮಾಡುತ್ತಿದ್ದಾರೆ. ಈ ಬಗ್ಗೆ ಇಲ್ಲಿದೆ ಡಿಟೇಲ್ಸ್.
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬೇಸಿಗೆ ಸೀಸನ್‌ಗೆ ಸಾಕಷ್ಟು ತಾರೆಯರ ಫ್ಯಾಷನ್ ಬದಲಾಗಿದೆ. ಪರಿಣಾಮ, ಆಯಾ ಹವಾಮಾನಕ್ಕೆ ತಕ್ಕಂತೆ ಅವರು ಧರಿಸುವ ಉಡುಪುಗಳು ಬದಲಾಗುತ್ತಿವೆ. ಇದೀಗ ಈ ಸಾಲಿಗೆ ಸ್ಯಾಂಡಲ್‌ವುಡ್ ಹಾಗೂ ಬಹುಭಾಷಾ ತಾರೆ ರಾಯ್ ಲಕ್ಷ್ಮಿ ಅವರು ಸೇರಿದ್ದಾರೆ. ಸಮ್ಮರ್ ಔಟ್‌ಫಿಟ್ಸ್‌ಗೆ ಸೈ ಎಂದಿದ್ದಾರೆ.
ಸಮ್ಮರ್‌ಗೆ ಟೊರ್ನ್ ಜೀನ್ಸ್
ನನ್ನದು ಮಿನಿಮಲ್ ಫ್ಯಾಷನ್ ಈ ಸೀಸನ್ ಮಂತ್ರ ಎನ್ನುವ ಅವರ ಚಾಯ್ಸ್ ಬಿಂದಾಸ್ ಕೆಟಗರಿಗೆ ಸೇರಿದೆ. ಒಮ್ಮೊಮ್ಮೆ ಡಿಸೆಂಟ್ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಅವರು ಕೆಲವೊಮ್ಮೆ ಹಾಟ್ ಆಗಿಯೂ ಕಾಣಿಸಿಕೊಂಡು, ಅಭಿಮಾನಿಗಳನ್ನು ಆಗಾಗ್ಗೆ ಸೆಳೆಯುತ್ತಿರುತ್ತಾರೆ. ಇತ್ತೀಚೆಗೆ ಅವರು ಟ್ರಾವೆಲ್ ಸಮಯದಲ್ಲಿ ಧರಿಸಿದ್ದ ಟೊರ್ನ್ ಜೀನ್ಸ್, ಅವರ ಸೋಷಿಯಲ್ ಮೀಡಿಯಾ ಅಕೌಂಟನ್ನು ಕಾಮೆಂಟ್‌ಗಳಿಂದ ತುಂಬಿಸಿತ್ತಂತೆ. ಇದಕ್ಕೆ ಪೂರಕ ಎಂಬಂತೆ, ರಾಯ್ ಲಕ್ಷ್ಮಿ, ನನ್ನದು ಮಾತ್ರ ಬಿಂದಾಸ್ ಫ್ಯಾಷನ್ ಎಂದು ಮುಂಬಯಿಯಲ್ಲಿ ಆನ್‌ಲೈನ್ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಬ್ಲ್ಯೂ ಟ್ರೆಂಡಿ ಸ್ಟೈಲ್‌ನಲ್ಲಿ ಕಾಣಿಸಿಕೊಂಡ ರಾಯ್ ಲಕ್ಷ್ಮಿ
ಅಂದಹಾಗೆ, ರಾಯ್ ಲಕ್ಷ್ಮಿ ಮೂಲತಃ ಸ್ಯಾಂಡಲ್‌ವುಡ್ ತಾರೆ. ಕನ್ನಡ , ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿರುವುದು ಮಾತ್ರವಲ್ಲದೇ ಇದೀಗ ಅವರ ಬಾಲಿವುಡ್‌ನಲ್ಲೂ ಕಾಣಿಸಿಕೊಂಡಿದ್ದಾರೆ. ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಅವರು ಮುಂಬಯಿಯಲ್ಲಿ ಬಿಝಿಯಾಗಿದ್ದಾರೆ. ನಿನ್ನೆಯಷ್ಟೇ ನಟಿ ಕಾಜಲ್‌ರೊಂದಿಗೆ ಸಿನಿಮಾ ಕುರಿತ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ರಾಯ್ ಲಕ್ಷ್ಮಿಯವರು ಈ ಸೀಸನ್‌ನ ಟ್ರೆಂಡಿ ಬ್ಲ್ಯೂ ಗ್ಲಾಮರಸ್ ಉಡುಪಿನಲ್ಲಿದ್ದರು. ಸಮ್ಮರ್ ಫ್ಯಾಷನ್‌ಗೆ ಸೂಟ್ ಆಗುವಂತಹ ಶೇಡ್ ಹಾಗೂ ವಿನ್ಯಾಸದ ಔಟ್‌ಫಿಟ್‌ನಲ್ಲಿ ಎಲ್ಲರ ಗಮನಸೆಳೆದರು.
ಇದನ್ನೂ ಓದಿ: Summer Fashion: ಬೇಸಿಗೆ ಫ್ಯಾಷನ್‌ಗೆ ಎಂಟ್ರಿ ಕೊಟ್ಟ ಹುಡುಗಿಯರ ಫಂಕಿ ಪ್ರಿಂಟೆಡ್ ಕ್ರಾಪ್ ಶರ್ಟ್ಸ್
ಪ್ಲೋರಲ್ ಪ್ರಿಂಟ್ಸ್ ಪ್ರಿಯೆ
ರಾಯ್ ಲಕ್ಷ್ಮಿ ಫ್ಲೋರಲ್ ಪ್ರಿಂಟ್ಸ್ ಪ್ರಿಯೆ ಎನ್ನಬಹುದು. ಯಾಕೆಂದರೆ, ಅವರು ಹಾಲಿಡೇ ಔಟ್‌ಫಿಟ್‌ಗಳಲ್ಲಿ ಈ ವಿನ್ಯಾಸದ ಔಟ್‌ಫಿಟ್‌ಗಳಲ್ಲೇ ಸಾಕಷ್ಟು ಬಾರಿ ಕಾಣಿಸಿಕೊಂಡಿದ್ದಾರೆ. ಇನ್ನು ಬೀಚ್‌ವೇರ್‌ಗಳಲ್ಲೂ ಅಷ್ಟೇ! ಈ ಪ್ರಿಂಟ್ಸ್ ಉಡುಗೆಯಲ್ಲೆ ಹಲವಾರು ಬಾರಿ ಕಾಣಿಸಿಕೊಂಡಿರುವುದನ್ನು ಗಮನಿಸಬಹುದು.
ಸ್ಟೈಲಿಸ್ಟ್‌ಗಳ ಪ್ರಕಾರ, ರಾಯ್ ಲಕ್ಷ್ಮಿ ಸಖತ್ ಫ್ಯಾಷೆನಬಲ್ ತಾರೆ. ಸೀಸನ್‌ಗೆ ತಕ್ಕಂತೆ ಸ್ಟೈಲಿಶ್ ಆಗಿದ್ದಾರೆ. ಅವರ ಪರ್ಸನಾಲಿಟಿಯೂ ಕೂಡ ಹಾಗೆಯೇ ಇದೆ. ಯಾವುದೇ ಇಮೇಜ್ ಬದಲಿಸುವ ಉಡುಪು ಕೂಡ ಮ್ಯಾಚ್ ಆಗಬಲ್ಲದು. ಹಾಗಿದೆ ಅವರ ಬಾಡಿ ಮಾಸ್ ಇಂಡೆಕ್ಸ್ ಎನ್ನುತ್ತಾರೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಫ್ಯಾಷನ್
Fashion Photoshoot: ವೆಡ್ಡಿಂಗ್ ಸೀಸನ್‌ನಲ್ಲಿ ಟ್ರೆಂಡಿಯಾದ ಕಪಲ್ ಎಂಗೇಜ್‌ಮೆಂಟ್ ಫ್ಯಾಷನ್ ಫೋಟೊಶೂಟ್
ಕೇವಲ ಮದುವೆ ಹಾಗೂ ಪ್ರಿ ವೆಡ್ಡಿಂಗ್‌ಗೆ ಮಾತ್ರ ಸೀಮಿತವಾಗಿದ್ದ ಫೋಟೊಶೂಟ್(Fashion Photoshoot) ಕಾನ್ಸೆಪ್ಟ್ ಇದೀಗ ನಿಶ್ಚಿತಾರ್ಥ ಅಥವಾ ಎಂಗೇಜ್‌ಮೆಂಟ್ ಸಮಾರಂಭಕ್ಕೆ ಧುಮ್ಮಿಕ್ಕಿದೆ. ಅದರಲ್ಲೂ ಎಥ್ನಿಕ್‌ವೇರ್ಸ್ ಧರಿಸಿದ ಫ್ಯಾಷೆನಬಲ್ ಫೋಟೊಶೂಟ್ ಕಾನ್ಸೆಪ್ಟ್ ಟ್ರೆಂಡಿಯಾಗಿದೆ. ಈ ಬಗ್ಗೆ ಇಲ್ಲಿದೆ ವಿವರ.
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮದುವೆಯಾಗುವ ಜೋಡಿಯ ನಿಶ್ಚಿತಾರ್ಥದ ಸಮಾರಂಭದಲ್ಲಿ ಎಥ್ನಿಕ್‌ವೇರ್ ಫೋಟೊಶೂಟ್ (Fashion Photoshoot) ಟ್ರೆಂಡ್ ಇದೀಗ ಹೆಚ್ಚಾಗಿದೆ. ಕೇವಲ ಮದುವೆ ಹಾಗೂ ಪ್ರಿ-ವೆಡ್ಡಿಂಗ್‌ಗೆ ಮಾತ್ರ ಸೀಮಿತವಾಗಿದ್ದ ಫೋಟೊಶೂಟ್ ಕಾನ್ಸೆಪ್ಟ್ ಇದೀಗ ನಿಶ್ಚಿತಾರ್ಥ ಅಥವಾ ಎಂಗೇಜ್‌ಮೆಂಟ್ ಸಮಾರಂಭಕ್ಕೂ ಧುಮ್ಮಿಕ್ಕಿದೆ. ಅದರಲ್ಲೂ ಟ್ರೆಂಡಿ ಎಥ್ನಿಕ್‌ವೇರ್ ಧರಿಸಿದ ಜೋಡಿಗಳ ಫ್ಯಾಷೆನಬಲ್ ಲವ್ ಪ್ರಪೋಸಿಂಗ್, ಎಂಗೇಜ್‌ಮೆಂಟ್ ರಿಂಗ್ ಹಾಕುವ ಹಾಗೂ ರಿಂಗ್ ತೋರಿಸುವ ಫೋಟೊಶೂಟ್ ಕಾನ್ಸೆಪ್ಟ್ ವೆಡ್ಡಿಂಗ್ ಸೀಸನ್‌ನಲ್ಲಿ ಸಾಕಷ್ಟು ಟ್ರೆಂಡಿಯಾಗಿದೆ.
ಎಂಗೇಜ್‌ಮೆಂಟ್ ಫೋಟೊಶೂಟ್
ವೆಡ್ಡಿಂಗ್ ಹಾಗೂ ಪ್ರಿ-ವೆಡ್ಡಿಂಗ್ ಫೋಟೋ ಶೂಟ್‌ಗಳು ಸಾಮಾನ್ಯ. ಆದರೆ, ಇವೆಲ್ಲದಕ್ಕಿಂತ ಮುನ್ನವೇ ನಡೆಯುವ ನಿಶ್ಚಿತಾರ್ಥ ಅಂದರೆ, ಸಾಮಾನ್ಯರ ಆಡು ಭಾಷೆಯಲ್ಲಿ ಕರೆಯಲ್ಪಡುವ ಎಂಗೇಜ್‌ಮೆಂಟ್ ಸಮಾರಂಭದ ದಿನವೇ ನಡೆಸುವ ಫೋಟೋಶೂಟ್ ಇದೀಗ ಸಾಮಾನ್ಯವಾಗುತ್ತಿದೆ. ಎಥ್ನಿಕ್‌ವೇರ್‌ನಲ್ಲಿಯೇ ಹುಡುಗ-ಹುಡುಗಿಯನ್ನು ಪ್ರಪೋಸ್ ಮಾಡುವ, ಕೈ ಬೆರಳುಗಳಿಗೆ ರಿಂಗ್ ಹಾಕುವ, ಇಲ್ಲವೇ ಉಂಗುರ ತೋರಿಸುವ ಹಾಗೂ ಹೂವು ಮುಡಿಸುವ ಶಾಸ್ತ್ರಗಳನ್ನೊಳಗೊಂಡಂತಹ ಫೋಟೊಶೂಟ್‌ಗೆ ಎಲ್ಲರೂ ಶರಣಾಗಿದ್ದಾರೆ. ಜತೆಗೆ ಇದಕ್ಕಾಗಿ ಸಮಾರಂಭದ ಸನ್ನಿವೇಶಗಳನ್ನು ಥೀಮ್ ಆಗಿ ಬಳಸಿಕೊಳ್ಳುವುದು ಅಧಿಕಗೊಳ್ಳುತ್ತಿದೆ.
“ಮದುವೆ ಹಾಗೂ ಪ್ರೀ ವೆಡ್ಡಿಂಗ್ ಫೋಟೋ ಶೂಟ್‌ಗಳು ತೀರಾ ಕಾಮನ್. ಇದೀಗ ಮದುವೆಯಾಗುವ ಜೋಡಿಗಳು ಈ ಎಂಗೇಜ್‌ಮೆಂಟ್ ಸಮಾರಂಭಕ್ಕೂ ಫೋಟೊಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ. ಖುಷಿಯ ವಿಚಾರ ಎಂದರೇ, ವೆಸ್ಟರ್ನ್ ಉಡುಪುಗಳನ್ನು ಸೈಡಿಗಿರಿಸಿ, ಇದೀಗ ಕಂಪ್ಲೀಟ್ ನಮ್ಮ ಸಂಸ್ಕೃತಿಗೆ ಮ್ಯಾಚ್ ಆಗುವಂತಹ ಉಡುಪುಗಳಲ್ಲಿ ಕಾಣಿಸಿಕೊಂಡು ಫೋಟೊಶೂಟ್ ಮಾಡಿಸುತ್ತಿದ್ದಾರೆ. ತಾವು ಎಂಗೇಜ್ ಆಗಿರುವುದನ್ನು ಇಂತಹ ಫೋಟೊಗಳ ಮೂಲಕ ಸಾರ್ವಜನಿಕರಿಗೆ ತಿಳಿಸುವುದು ಉದ್ದೇಶವಾಗಿದೆ. ಇದು ಉತ್ತಮ ಬೆಳವಣಿಗೆ” ಎನ್ನುತ್ತಾರೆ ಫ್ಯಾಷನ್ ಫೋಟೊಗ್ರಾಫರ್ ನಕುಲ್ ಹಾಗು ರಾಜನ್.
ಇದನ್ನೂ ಓದಿ: Summer Fashion: ಬೇಸಿಗೆ ಫ್ಯಾಷನ್‌ಗೆ ಎಂಟ್ರಿ ಕೊಟ್ಟ ಹುಡುಗಿಯರ ಫಂಕಿ ಪ್ರಿಂಟೆಡ್ ಕ್ರಾಪ್ ಶರ್ಟ್ಸ್
ಫೋಟೊಶೂಟ್‌ನಲ್ಲಿ ಎಥ್ನಿಕ್‌ವೇರ್‌ಗಳ ಸಂಭ್ರಮ
ಎಂಗೇಜ್‌ಮೆಂಟ್‌ನಲ್ಲಿ ಕೇವಲ ಹುಡುಗ-ಹುಡುಗಿಯರ ಫೋಟೊಶೂಟ್ ಮಾತ್ರವಲ್ಲ, ನೆರೆದಿರುವ ಕುಟುಂಬದವರನ್ನು ಸೇರಿಸಿ ಫೋಟೊಶೂಟ್ ಮಾಡುವುದು ಇಂದು ಕಾಮನ್ ಆಗಿದೆ. ಸಾಂಪ್ರಾದಾಯಿಕ ಉಡುಗೆ-ತೊಡುಗೆಗಳನ್ನು ಧರಿಸಿದ ಕುಟುಂಬದವರೊಂದಿಗೆ ಸಂಭ್ರಮಿಸುವಂತಹ ಫೋಟೋಶೂಟ್ ಕೂಡ ಪ್ರಚಲಿತದಲ್ಲಿದೆ. ಇವೆಲ್ಲವನ್ನು ಮದುವೆಯ ದಿನ ಆನ್‌ಸ್ಕ್ರೀನ್‌ನಲ್ಲಿ ತೋರಿಸುವುದು ಇದೀಗ ಚಾಲ್ತಿಯಲ್ಲಿದೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
-
ದೇಶ18 hours ago
Chenab Bridge | ಐಫೆಲ್ ಟವರ್ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ಕರ್ನಾಟಕ18 hours ago
SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
-
ಗ್ಯಾಜೆಟ್ಸ್8 hours ago
Aadhaar Update: ಆನ್‌ಲೈನ್‌ನಲ್ಲಿ ಆಧಾರ್ ಅಪ್ಡೇಟ್ ಉಚಿತ; ಈ ಸೌಲಭ್ಯ ಜೂನ್ 14ರವರೆಗೆ ಮಾತ್ರ
-
ಅಂಕಣ19 hours ago
ಗೋ ಸಂಪತ್ತು: ಆಹಾರವಾಗಿ ಮಾತ್ರವಲ್ಲ, ಔಷಧವಾಗಿಯೂ ಮಜ್ಜಿಗೆಗೆ ಮಹತ್ವವಿದೆ!
-
ಅಂಕಣ19 hours ago
Brand story : ಚೀನಾದ ಇ-ಕಾಮರ್ಸ್ ದಿಗ್ಗಜ ಅಲಿಬಾಬಾ, 6 ಕಂಪನಿಗಳಾಗಿ ವಿಭಜನೆಯಾಗುತ್ತಿರುವುದೇಕೆ?
-
ಕರ್ನಾಟಕ9 hours ago
B.Y. Vijayendra: ಯಾವುದೇ ಕಾರಣಕ್ಕೆ ವರುಣಾದಿಂದ ವಿಜಯೇಂದ್ರ ಸ್ಪರ್ಧಿಸಲ್ಲ: ಗೊಂದಲಕ್ಕೆ ತೆರೆಯೆಳೆದ ಯಡಿಯೂರಪ್ಪ
-
ದೇಶ10 hours ago
Gujarat High Court: ಪಿಎಂ ಮೋದಿ ಪದವಿ ಸರ್ಟಿಫಿಕೇಟ್ ಕೇಳಿದ್ದ ದಿಲ್ಲಿ ಸಿಎಂ ಕೇಜ್ರಿವಾಲ್ಗೆ 25 ಸಾವಿರ ರೂ. ದಂಡ!
-
ಕರ್ನಾಟಕ12 hours ago
SSLC Exam 2023: ಕಲಬುರಗಿಯಲ್ಲಿ ಎಸ್ಎಸ್ಎಲ್ಸಿ ಪ್ರಶ್ನೆಪತ್ರಿಕೆ ಸೋರಿಕೆ ಶಂಕೆ; ವಾಟ್ಸಾಪ್ನಲ್ಲಿ ಹರಿದಾಡಿದ ಕನ್ನಡ ಪೇಪರ್