Lok Sabha Election 2024: ಪಂಜಾಬ್‌ನಲ್ಲೂ ಕಾಂಗ್ರೆಸ್‌ಗೆ ಶಾಕ್‌; ಬಿಜೆಪಿ ಸೇರಿದ ಪಟಿಯಾಲ ಸಂಸದೆ ಪ್ರಣೀತ್​ ಕೌರ್ - Vistara News

Lok Sabha Election 2024

Lok Sabha Election 2024: ಪಂಜಾಬ್‌ನಲ್ಲೂ ಕಾಂಗ್ರೆಸ್‌ಗೆ ಶಾಕ್‌; ಬಿಜೆಪಿ ಸೇರಿದ ಪಟಿಯಾಲ ಸಂಸದೆ ಪ್ರಣೀತ್​ ಕೌರ್

Lok Sabha Election 2024: ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿ ಕಾಂಗ್ರೆಸ್‌ಗೆ ಬಹು ದೊಡ್ಡ ಹೊಡೆತ ಬಿದ್ದಿದೆ. ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪತ್ನಿ, ಪಟಿಯಾಲ ಸಂಸದೆ ಪ್ರಣೀತ್​ ಕೌರ್ ಬಿಜೆಪಿ ಸೇರ್ಪಡೆಯಾಗಿದ್ದಾರೆ.

VISTARANEWS.COM

on

pranith kaur
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024)ಗೆ ಸಿದ್ಧತೆ ನಡೆಸುತ್ತಿರುವ ಕಾಂಗ್ರೆಸ್‌ (Congress)ಗೆ ಮತ್ತೊಂದು ಹೊಡೆತ ಬಿದ್ದಿದೆ. ನಿನ್ನೆ (ಮಾರ್ಚ್‌ 13) ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಅಜಯ್ ಕಪೂರ್ (Ajay Kapoor) ಬಿಜೆಪಿಗೆ ಸೇರ್ಪಡೆಯಾಗುವ ಮೂಲಕ ಕೈ ಪಡೆಗೆ ಶಾಕ್‌ ಕೊಟ್ಟಿದ್ದರು. ಇಂದು (ಗುರುವಾರ) ಕಾಂಗ್ರೆಸ್‌ಗೆ ಮತ್ತೊಂದು ಹಿನ್ನಡೆಯಾಗಿದ್ದು, ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪತ್ನಿ, ಪಟಿಯಾಲ ಸಂಸದೆ ಪ್ರಣೀತ್​ ಕೌರ್ (Preneet Kaur) ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ 2023ರ ಫೆಬ್ರವರಿಯಲ್ಲಿ ಪ್ರಣೀತ್ ಕೌರ್ ಕಾಂಗ್ರೆಸ್‌ನಿಂದ ಅಮಾನತುಗೊಂಡಿದ್ದರು. ಲೋಕಸಭೆ ಸದಸ್ಯತ್ವ ಕಳೆದುಕೊಳ್ಳಲು ಇಷ್ಟವಿಲ್ಲದ ಕಾರಣ ಅಂದು ಪ್ರಣೀತ್ ಕೌರ್ ಪಕ್ಷಕ್ಕೆ ರಾಜೀನಾಮೆ ನೀಡಿರಲಿಲ್ಲ. ಬಹಳ ಹಿಂದೆಯೇ ಅವರು ಬಿಜೆಪಿ ಸೇರುವ ಬಗ್ಗೆ ಸುದ್ದಿ ಹರಿದಾಡುತ್ತಿದ್ದವು. ಬಿಜೆಪಿಯ ಹಿರಿಯ ಮುಖಂಡರು ಪ್ರಣೀತ್​ ಕೌರ್ ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡರು. ಈ ವೇಳೆ ಹಿಂದೆ ಕಾಂಗ್ರೆಸ್‌ನಲ್ಲಿದ್ದ, ಪ್ರಸ್ತುತ ಬಿಜೆಪಿ ಪಂಜಾಬ್ ಘಟಕದ ಮುಖ್ಯಸ್ಥ ಸುನಿಲ್ ಜಖರ್ ಮತ್ತಿತರರು ಹಾಜರಿದ್ದರು.

ನಿರಂತರ ಸೇವೆ

ಪ್ರಣೀತ್ ಕೌರ್ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ತಮ್ಮ ಕ್ಷೇತ್ರ, ರಾಜ್ಯ ಮತ್ತು ದೇಶಕ್ಕಾಗಿ ಸೇವೆ ಸಲ್ಲಿಸುವುದನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ. ʼʼನಾನು ಕಳೆದು ಹೋದ ದಿನಗಳ ಬಗ್ಗೆ ಚಿಂತಿಸುವುದಿಲ್ಲ. ಕಾಂಗ್ರೆಸ್‌ನಲ್ಲಿ ನನ್ನ ಇನ್ನಿಂಗ್ಸ್‌ ಚೆನ್ನಾಗಿತ್ತು. ಬಿಜೆಪಿಯಲ್ಲಿ ಇನ್ನೂ ಉತ್ತಮವಾಗಿರಲಿದೆ ಎನ್ನುವ ವಿಶ್ವಾಸವಿದೆ. ನಾನು ಸ್ಪರ್ಧಿಸಬೇಕೆ ಎನ್ನುವುದನ್ನು ಪಕ್ಷ ನಿರ್ಧರಿಸಲಿದೆʼʼ ಎಂದು ಅವರು ಹೇಳಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಪ್ರಣೀತ್ ಕೌರ್ ಅವರು ತೃಣಮೂಲ ಕಾಂಗ್ರೆಸ್‌ನ ಮಹುವಾ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಛಾಟಿಸುವ ಪರವಾಗಿ ಮತ ಚಲಾಯಿಸುವ ಮೂಲಕ ಸಂಚಲನ ಸೃಷ್ಟಿಸಿದ್ದರು. ಬಳಿಕ ಮಹುವಾ ಮೊಯಿತ್ರಾ ಅವರ ಸದನದ ಸದಸ್ಯತ್ವವನ್ನು ರದ್ದು ಪಡಿಸಲಾಗಿತ್ತು. ಪ್ರಣೀತ್ ಕೌರ್ ಪಂಜಾಬ್‌ನ ಪಟಿಯಾಲಾ ಕ್ಷೇತ್ರದಿಂದ ನಾಲ್ಕು ಬಾರಿ ಕಾಂಗ್ರೆಸ್ ಸಂಸದರಾಗಿದ್ದಾರೆ. ಕಳೆದ 25 ವರ್ಷಗಳಿಂದ ಪಟಿಯಾಲಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ಅವರ ನಿರ್ಗಮನದಿಂದ ಕಾಂಗ್ರೆಸ್‌ಗೆ ಬಹು ದೊಡ್ಡ ಹೊಡೆತ ಬೀಳಲಿದೆ ಮತ್ತು ಬಿಜೆಪಿಗೆ ಲಾಭವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: Lok Sabha Election 2024: ಕಾಂಗ್ರೆಸ್‌ಗೆ ಮತ್ತೊಂದು ಆಘಾತ; ಬಿಜೆಪಿ ಸೇರಿದ ರಾಷ್ಟ್ರೀಯ ಕಾರ್ಯದರ್ಶಿ ಅಜಯ್ ಕಪೂರ್

ಪ್ರಣೀತ್ ಕೌರ್ ಅವರ ಪತಿ ಅಮರಿಂದರ್ ಸಿಂಗ್ ಕಾಂಗ್ರೆಸ್‌ನಿಂದ ಎರಡು ಬಾರಿ ಪಂಜಾಬ್ ಮುಖ್ಯಮಂತ್ರಿಯಾಗಿದ್ದರು. 2021ರಲ್ಲಿ ಅವರು ಕಾಂಗ್ರೆಸ್‌ನಿಂದ ಹೊರ ಬಂದು ತಮ್ಮದೇ ಆದ ಪಂಜಾಬ್ ಲೋಕ ಕಾಂಗ್ರೆಸ್ (Punjab Lok Congress) ಅನ್ನು ಸ್ಥಾಪಿಸಿದ್ದರು. ಬಳಿಕ 2022ರ ಸೆಪ್ಟೆಂಬರ್ ಅದನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದರು. ಪ್ರಣೀತ್ ಕೌರ್ – ಅಮರಿಂದರ್ ಸಿಂಗ್ ದಂಪತಿಯ ಪುತ್ರಿ ಜೈ ಇಂದರ್ ಕೌರ್ ಕೂಡ ಬಿಜೆಪಿಯಲ್ಲಿದ್ದಾರೆ. ಈ ಬಾರಿ ಜೈ ಇಂದರ್ ಅವರನ್ನು ಬಿಜೆಪಿ ಪಟಿಯಾಲದಿಂದ ಕಣಕ್ಕಿಳಿಸಬಹುದು ಎಂಬ ಊಹಾಪೋಹಗಳಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

Lok Sabha Election 2024

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

CM Siddaramaiah: ರಾಜ್ಯದಲ್ಲಿ ನನಗೆ ಮಾಡಲು ಬೇಕಾದಷ್ಟು ಕೆಲಸ ಇದೆ. ಆದರೆ, ನನ್ನನ್ನು ಸ್ಟಾರ್‌ ಪ್ರಚಾರಕನನ್ನಾಗಿ ಮಾಡಿಯಾಗಿದೆ. ಜತೆಗೆ ಹೈಕಮಾಂಡ್‌ನವರು ಪ್ರಚಾರಕ್ಕೆ ಬರುವಂತೆ ಕರೆದಿದ್ದಾರೆ. ಪ್ರಚಾರಕ್ಕೆ ಹೋಗಲು ವೈಯಕ್ತಿಕವಾಗಿ ನನಗೆ ಇಷ್ಟ ಇಲ್ಲ ಎಂದು ಹೊರ ರಾಜ್ಯಗಳಿಗೆ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಹೋಗುವ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರು ಈ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಹೈಕಮಾಂಡ್‌ ಒತ್ತಾಯ ಇರುವುದರಿಂದ ಪ್ರಚಾರಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆ ಎಂಬ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.

VISTARANEWS.COM

on

I dont want to go to other states for Lok Sabha Election 2024 campaign for Congress says CM Siddaramaiah
Koo

ಮೈಸೂರು: ಹೊರ ರಾಜ್ಯಗಳ ಲೋಕಸಭಾ ಚುನಾವಣೆಗೆ (Lok Sabha Election 2024) ನನ್ನನ್ನು ಸ್ಟಾರ್ ಪ್ರಚಾರಕನನ್ನಾಗಿ ಮಾಡಿದ್ದಾರೆ. ಸಾಮಾನ್ಯವಾಗಿ ನಾನು ಹೊರ ರಾಜ್ಯಗಳಿಗೆ ಹೋಗಲ್ಲ. ನನಗೆ ಅದು ಇಷ್ಟವೂ ಆಗುವುದಿಲ್ಲ. ಇಲ್ಲೇ ಬೇಕಾದಷ್ಟು ಕೆಲಸ ಇದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ನನಗೆ ಮಾಡಲು ಬೇಕಾದಷ್ಟು ಕೆಲಸ ಇದೆ. ಆದರೆ, ನನ್ನನ್ನು ಸ್ಟಾರ್‌ ಪ್ರಚಾರಕನನ್ನಾಗಿ ಮಾಡಿಯಾಗಿದೆ. ಜತೆಗೆ ಹೈಕಮಾಂಡ್‌ನವರು ಪ್ರಚಾರಕ್ಕೆ ಬರುವಂತೆ ಕರೆದಿದ್ದಾರೆ. ಪ್ರಚಾರಕ್ಕೆ ಹೋಗಲು ವೈಯಕ್ತಿಕವಾಗಿ ನನಗೆ ಇಷ್ಟ ಇಲ್ಲ ಎಂದು ಹೊರ ರಾಜ್ಯಗಳಿಗೆ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಹೋಗುವ ವಿಚಾರವಾಗಿ ಈ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ನಮ್ಮ ಸರ್ಕಾರ ಸುಭದ್ರವಾಗಿದೆ. ಹೊರಗೂ, ಒಳಗೂ ಭಿನ್ನಮತ ಇಲ್ಲ. ಒಳಜಗಳ ಇದ್ದರೆ ಲೋಕಸಭೆ ಚುನಾವಣೆಯಲ್ಲಿ ಇಷ್ಟೊಂದು ಒಗ್ಗಟ್ಟಿನಿಂದ ಕೆಲಸ ಮಾಡಲು ಆಗುತ್ತಿತ್ತಾ? ಸರ್ಕಾರ ಸುಭದ್ರವಾಗಿದೆ. ಇನ್ನೂ ಏಕನಾಥ್ ಶಿಂಧೆ ಸರ್ಕಾರ ಇರುತ್ತದೆಯೋ? ಇಲ್ಲವೋ ನೋಡಿಕೊಳ್ಳಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕುಮಾರಸ್ವಾಮಿಗೆ ಸಿಎಂ ತಿರುಗೇಟು

ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರದ್ದು ಯಾವಾಗಲೂ ಹಿಟ್ ಆ್ಯಂಡ್ ರನ್ ಕೇಸ್. ಅವರ ಬಗ್ಗೆ ಹೆಚ್ಚು ಮಾತನಾಡಲ್ಲ ಎಂದು ಹೇಳಿದರು.

ಇದನ್ನೂ ಓದಿ: HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

ಎಂಎಲ್‌ಸಿ ಚುನಾವಣೆಯಲ್ಲಿ ಉತ್ತಮ ವಾತಾವರಣ

ಎಂಎಲ್‌ಸಿ ಚುನಾವಣೆಯಲ್ಲಿ ನಮಗೆ ವಾತಾವರಣ ಉತ್ತಮವಾಗಿದೆ. ಆರು ತಿಂಗಳು ಮುಂಚಿತವಾಗಿಯೇ ಅಭ್ಯರ್ಥಿ ಘೋಷಿಸಿದ್ದೇವೆ. ಇದರಿಂದ ಮತ ಕೇಳಲು ಸಮಯ ಸಿಕ್ಕಿದೆ. ಮೈತ್ರಿಯಿಂದ ನಮಗೆ ಎಫೆಕ್ಟ್ ಆಗಲ್ಲ. ಪಾರ್ಲಿಮೆಂಟ್ ಚುನಾವಣೆಯಲ್ಲೂ ಮೈತ್ರಿ ಆಗಿತ್ತು. ಆದರೆ, ನಮಗೆ ಯಾವುದೇ ಪರಿಣಾಮ ಆಗಲಿಲ್ಲ. ಈ ಚುನಾವಣೆಯಲ್ಲಿ ಪದವೀಧರರು, ಶಿಕ್ಷಕರು, ಮತದಾರರು ರಾಜಕೀಯವಾಗಿ ಪ್ರಬುದ್ಧರಿದ್ದಾರೆ. ಯಾವುದು ಸರಿ, ಸರಿಯಲ್ಲ ಎಂಬುದನ್ನು ತೀರ್ಮಾನ ಮಾಡುತ್ತಾರೆ. ಕೇಂದ್ರ ಸರ್ಕಾರ 10 ವರ್ಷದಲ್ಲಿ ಏನೂ ಮಾಡಿಲ್ಲ. ನಮ್ಮ ಸರ್ಕಾರದ ಸಾಧನೆಗಳನ್ನು ತುಲನೆ ಮಾಡುವ ಶಕ್ತಿ ಮತದಾರರಿಗೆ ಇದೆ ಎಂದು ಹೇಳಿದರು.

Continue Reading

ಪ್ರಮುಖ ಸುದ್ದಿ

PM Narendra Modi: ಪಿಎಂ ಮೋದಿ ನಾಮಪತ್ರ ಅನುಮೋದಿಸಿದ ನಾಲ್ವರ ಹಿನ್ನೆಲೆ ಏನು?

PM Narendra Modi: ಪ್ರಧಾನಿ ಮೋದಿಯವರು ವಾರಣಾಸಿಯಿಂದ ನಾಮಪತ್ರ ಸಲ್ಲಿಸುವಾಗ ಅವರ ಜೊತೆಗೆ ನಾಲ್ಕು ಅನುಮೋದಕರು (proposers) ಇದ್ದರು. ಆ ನಾಲ್ವರು ಯಾರು? ಅವರು ಹೆಸರುಗಳು ಇಲ್ಲಿವೆ. ಈ ನಾಲ್ವರೂ ಆರೆಸ್ಸೆಸ್‌ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ನಾಲ್ವರೂ ವಾರಾಣಸಿ ಲೋಕಸಭೆ ಕ್ಷೇತ್ರದವರಾಗಿರಬೇಕು ಎಂಬ ನಿಯಮ ಇರುವುದರಿಂದ, ಅಲ್ಲಿಯವರನ್ನು ಅಯ್ದುಕೊಳ್ಳಲಾಗಿದೆ.

VISTARANEWS.COM

on

pm narendra modi nomination
Koo

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂದು ವಾರಣಾಸಿಯಿಂದ ಲೋಕಸಭೆ ಚುನಾವಣೆಗೆ (Lok Sabha Election 2024) ನಾಮಪತ್ರ (Narendra modi nomination) ಸಲ್ಲಿಸಿದ್ದಾರೆ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಈ ಸಂದರ್ಭದಲ್ಲಿ ಅವರೊಂದಿಗೆ ಇದ್ದರು. ನಿನ್ನೆ ಪ್ರಧಾನಿ ಮೋದಿ ವಾರಾಣಸಿಯಲ್ಲಿ ಭರ್ಜರಿ ರೋಡ್‌ ಶೋ ನಡೆಸಿದ್ದರು.

ಪ್ರಧಾನಿ ಮೋದಿಯವರು ವಾರಣಾಸಿಯಿಂದ ನಾಮಪತ್ರ ಸಲ್ಲಿಸುವಾಗ ಅವರ ಜೊತೆಗೆ ನಾಲ್ಕು ಅನುಮೋದಕರು (proposers) ಇದ್ದರು. ಆ ನಾಲ್ವರು ಯಾರು? ಅವರು ಹೆಸರುಗಳು ಇಲ್ಲಿವೆ. ಈ ನಾಲ್ವರೂ ಆರೆಸ್ಸೆಸ್‌ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ನಾಲ್ವರೂ ವಾರಾಣಸಿ ಲೋಕಸಭೆ ಕ್ಷೇತ್ರದವರಾಗಿರಬೇಕು ಎಂಬ ನಿಯಮ ಇರುವುದರಿಂದ, ಅಲ್ಲಿಯವರನ್ನು ಅಯ್ದುಕೊಳ್ಳಲಾಗಿದೆ.

ಪಂಡಿತ್ ಗಣೇಶ್ವರ ಶಾಸ್ತ್ರಿ: ಬ್ರಾಹ್ಮಣ ಸಮುದಾಯದ ಸದಸ್ಯ. ಅಯೋಧ್ಯೆಯಲ್ಲಿ ರಾಮಮಂದಿರದ ಪ್ರತಿಷ್ಠಾಪನೆಗೆ ಮಂಗಳಕರ ಸಮಯವನ್ನು ನಿರ್ಧರಿಸಿದವರು.

ಬೈಜನಾಥ್ ಪಟೇಲ್: ಹಿರಿಯ RSS ಸ್ವಯಂಸೇವಕ, OBC ಸಮುದಾಯಕ್ಕೆ ಸೇರಿದವರು.

ಲಾಲ್‌ಚಂದ್ ಕುಶ್ವಾಹಾ: ಲಾಲ್‌ಚಂದ್ ಕುಶ್ವಾಹಾ ಕೂಡ ಒಬಿಸಿ ಸಮುದಾಯದವರು.

ಸಂಜಯ್ ಸೋಂಕರ್: ಇವರು ದಲಿತ ಸಮುದಾಯದಿಂದ ಬಂದವರು.

“… ನಮಗೆ ಬೆಳಿಗ್ಗೆ ಮಾಹಿತಿ ಸಿಕ್ಕಿತು. ಪಕ್ಷದ ಕಾರ್ಯಕರ್ತನಾಗಿ ನನಗೆ ವಹಿಸಿದ ಕೆಲಸಗಳನ್ನು ಮಾಡುತ್ತಿದ್ದೇನೆ. ನನಗೆ ಇಷ್ಟು ದೊಡ್ಡ ಜವಾಬ್ದಾರಿ ನೀಡಿದ ಪಕ್ಷಕ್ಕೆ ನಾನು ಆಭಾರಿಯಾಗಿದ್ದೇನೆ…, ”ಎಂದು ಸೋಂಕರ್ ಮಾಧ್ಯಮಗಳಿಗೆ ತಿಳಿಸಿದರು. ಕಳೆದ ಲೋಕಸಭೆ ಚುನಾವಣೆಯಲ್ಲಿ, ಪ್ರಧಾನಿ ಮೋದಿಯವರ ಪ್ರತಿಪಾದಕರು ಕೃಷಿ ವಿಜ್ಞಾನಿ, ಬಿಎಚ್‌ಯು ಮಹಿಳಾ ಮಹಾವಿದ್ಯಾಲಯದ ಮಾಜಿ ಪ್ರಾಂಶುಪಾಲರು, ಆರ್‌ಎಸ್‌ಎಸ್ ಕಾರ್ಯಕರ್ತ ಮತ್ತು ವಾರಣಾಸಿ ಘಾಟ್‌ಗಳ ಮುಖ್ಯ ದಹನಕಾರ ಹೀಗೆ ವಿವಿಧ ಹಿನ್ನೆಲೆಗಳಿಂದ ಬಂದವರಾಗಿದ್ದರು.

ಪ್ರತಿಯೊಬ್ಬ ಚುನಾವಣಾ ಅಭ್ಯರ್ಥಿಯು ಅನುಮೋದಕರನ್ನು ಹೊಂದಿರಬೇಕು. ಚುನಾವಣಾ ಆಯೋಗದ ನಿಯಮಗಳ ಪ್ರಕಾರ, ಇವರು ಅಭ್ಯರ್ಥಿಯ ನಾಮನಿರ್ದೇಶನವನ್ನು ಅನುಮೋದಿಸುವ ಅಸೆಂಬ್ಲಿ ಅಥವಾ ಸಂಸದೀಯ ಕ್ಷೇತ್ರದ ನೋಂದಾಯಿತ ಮತದಾರರಾಗಿರಬೇಕು. ಅಭ್ಯರ್ಥಿಯ ನಾಮನಿರ್ದೇಶನ ಪತ್ರಗಳಿಗೆ ಪ್ರಸ್ತಾವನೆದಾರರು ಮತ್ತು ಅಭ್ಯರ್ಥಿ ಸಹಿ ಮಾಡಬೇಕು. ಜನತಾ ಪ್ರಾತಿನಿಧ್ಯ ಕಾಯಿದೆ, 1951ರ ಪ್ರಕಾರ, ಮಾನ್ಯತೆ ಪಡೆದ ರಾಜ್ಯ ಅಥವಾ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗೆ ಒಬ್ಬ ಅನುಮೋದಕರ ಅಗತ್ಯವಿರುತ್ತದೆ. ಆದರೆ ಸ್ವತಂತ್ರ ಅಥವಾ ಗುರುತಿಸದ ಪಕ್ಷದ ಅಭ್ಯರ್ಥಿಗೆ 10 ಜನರ ಅಗತ್ಯವಿದೆ.

ನಾಮಪತ್ರ ಸಲ್ಲಿಕೆಯ ಸಮಯ ನಿಗದಿ ಹೇಗೆ?

ಪ್ರಧಾನಿ ಮೋದಿ ನಾಮಪತ್ರವನ್ನು ಬೆಳಗ್ಗೆ 11:40 ರಿಂದ ಮಧ್ಯಾಹ್ನ 12:00 ರ ಅವಧಿಯಲ್ಲಿ ಸಲ್ಲಿಸುತ್ತಿದ್ದಾರೆ. ಈ ಸಮಯವು ಮಂಗಳಕರವಾದ ಪುಷ್ಯ ನಕ್ಷತ್ರ ಮತ್ತು ಗಂಗಾ ಸಪ್ತಮಿಯೊಂದಿಗೆ ಹೊಂದಿಕೆಯಾಗುತ್ತದೆ. ಜ್ಯೋತಿಷಿ ಪಂ. ರಿಷಿ ದ್ವಿವೇದಿ ಅವರ ಪ್ರಕಾರ, ಈ ತಾರಾ ಜೋಡಣೆಯು ಶುಭ ಮತ್ತು ಇಷ್ಟಾರ್ಥಗಳ ನೆರವೇರಿಕೆಯನ್ನು ಸೂಚಿಸುತ್ತದೆ. ಪುಷ್ಯ ನಕ್ಷತ್ರದ ಸಮಯದಲ್ಲಿ ಚಟುವಟಿಕೆಗಳನ್ನು ಕೈಗೊಳ್ಳುವುದು ಅವುಗಳ ಯಶಸ್ವಿ ಪೂರ್ಣಗೊಳಿಸುವಿಕೆಯನ್ನು ಖಚಿತಪಡಿಸುತ್ತದೆ ಎಂದು ನಂಬಲಾಗಿದೆ.

ನಾಮಪತ್ರ ಸಲ್ಲಿಕೆಗೂ ಮುನ್ನ ವಾರಾಣಸಿಯಲ್ಲಿರುವ ದಶಾಶ್ವಮೇಧ ಘಾಟ್‌ಗೆ ಭೇಟಿ ಕೊಟ್ಟ ಮೋದಿ ಗಂಗಾ ನದಿಗೆ ಪೂಜೆ ಸಲ್ಲಿಸಿದರು. ಐದು ಅರ್ಚಕರ ನೇತೃತ್ವದಲ್ಲಿ ಪೂಜೆ ನಡೆದಿದ್ದು, ಗಂಗಾ ನದಿ(Ganga River)ಗೆ ಪ್ರಧಾನಿ ಆರತಿ ಬೆಳಗಿದರು.

ಇನ್ನು ಇದಕ್ಕೂ ಮುನ್ನ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಪ್ರಧಾನಿ ಗಂಗಾ ನದಿಯ ಜೊತೆಗಿನ 10 ವರ್ಷಗಳ ನಂಟಿಗೆ ಸಂಬಂಧಿಸಿದ ವಿಡಿಯೋವೊಂದನ್ನು ಹರಿಬಿಟ್ಟಿದ್ದಾರೆ. ಅಲ್ಲದೇ ಗಂಗಾ ಮಾತೆ ನನ್ನನ್ನು ದತ್ತು ಪಡೆದಿದ್ದಾಳೆ. ಈ ಹತ್ತು ವರ್ಷಗಲ್ಲಿ ನನ್ನ ಮತ್ತು ಗಂಗಾಮಾತೆಯ ಜೊತೆಗಿನ ನಂಟು ಮತ್ತಷ್ಟು ಬಲಿಷ್ಠವಾಗಿದೆ ಎಂದು ಬರೆದಿಕೊಂಡಿದ್ದಾರೆ. ದಶಾಶ್ವಮೇಧ ಘಾಟ್‌ ಭೇಟಿ ಬಳಿಕ ಪ್ರಧಾನಿ ವಾರಾಣಸಿಯಲ್ಲಿರುವ ಕಾಲಭೈರವೇಶ್ವರ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.

ನಾಮಪತ್ರ ಸಲ್ಲಿಕೆಗೂ ಮುನ್ನ ದಿನ ಅಂದರೆ ಸೋಮವಾರ ಇಲ್ಲಿನ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ದ್ವಾರದಿಂದ ಅದ್ಧೂರಿ ರೋಡ್‌ ಶೋ ನಡೆಸಿದರು. ಸರಿಸುಮಾರು 5 ಕಿಮೀ ವರೆಗೆ ರೋಡ್ ಶೋನಲ್ಲಿ ವಾರಣಾಸಿ ಲೋಕಸಭಾ ಕ್ಷೇತ್ರದ 1 ಲಕ್ಷಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು, ಕಾಶಿ ನಿವಾಸಿಗಳು, ಕ್ರೀಡಾಪಟುಗಳು, ಕಲಾವಿದರು ಮತ್ತು ಸ್ಥಳೀಯರಲ್ಲದೇ ಇತರ ಪ್ರಮುಖರು ಭಾಗವಹಿಸಲಿದ್ದರು. ಮರಾಠಿ, ಗುಜರಾತಿ, ಬೆಂಗಾಲಿ, ಮಾಹೇಶ್ವರಿ, ಮಾರ್ವಾಡಿ, ತಮಿಳು ಮತ್ತು ಪಂಜಾಬಿ ಸಮುದಾಯಗಳ ಗುಂಪು ಪ್ರಧಾನಿ ಮೋದಿಯನ್ನು ತಮ್ಮ ಸಾಂಪ್ರದಾಯಿಕ ಉಡುಗೆಯಲ್ಲಿ ಸ್ವಾಗತಿಸದರು. 5,000 ಕ್ಕೂ ಹೆಚ್ಚು ಬಿಜೆಪಿ ಮಹಿಳಾ ಘಟಕದ ಕಾರ್ಯಕರ್ತರು ಭಾಗಿಯಾಗಿದ್ದು, 100 ಪಾಯಿಂಟ್‌ಗಳಲ್ಲಿ ಪುಷ್ಪವೃಷ್ಟಿ ಮಾಡಲಾಯಿತು. ಮುಸ್ಲಿಂ ಸಮುದಾಯದವರೂ ಮೋದಿಗೆ ವಿಶೇಷ ಸ್ವಾಗತ ಕೋರಿದ್ದರು. ರೋಡ್‌ ಶೋ ಬಳಿಕ ಮೋದಿ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದರು.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಇಂಡಿಯಾ ಒಕ್ಕೂಟದ ಅಭ್ಯರ್ಥಿಯಾಗಿ ಅಜಯ್ ರೈ ಕಣದಲ್ಲಿದ್ದಾರೆ. ಅಜಯ್ ರೈ ಉತ್ತರ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದು, ಕಳೆದ ಎರಡು ಬಾರಿಯೂ ಮೋದಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಈ ಬಾರಿ ಪ್ರಧಾನಿ ಮೋದಿಯವರ ಗೆಲುವಿನ ಅಂತರವನ್ನು 7 ಲಕ್ಷಕ್ಕೂ ಮೀರಿ ಹೆಚ್ಚಿಸುವ ಗುರಿಯನ್ನು ಬಿಜೆಪಿ ಹೊಂದಿದೆ. 2019ರಲ್ಲಿ 64% ಮತ ಹಂಚಿಕೆಯೊಂದಿಗೆ ಮೋದಿಯವರು 4.8 ಲಕ್ಷ ಅಂತದಲ್ಲಿ ಗೆಲುವು ಸಾಧಿಸಿದ್ದರು. 2014ರಲ್ಲಿ ಅವರು 3.7 ಲಕ್ಷ ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು.

ಇದನ್ನೂ ಓದಿ: Narendra Modi: ನಾಮಪತ್ರ ಸಲ್ಲಿಕೆಗೂ ಮುನ್ನ ಗಂಗಾರತಿ ಮಾಡಿದ ಮೋದಿ-ಇಲ್ಲಿದೆ ಲೈವ್‌

Continue Reading

ಪ್ರಮುಖ ಸುದ್ದಿ

PM Narendra Modi: ವಾರಾಣಸಿಯಲ್ಲಿ ನರೇಂದ್ರ ಮೋದಿ ನಾಮಪತ್ರ ಅನುಮೋದಿಸುವ ನಾಲ್ವರು ಯಾರು?

PM Narendra Modi: ಪ್ರಧಾನಿ ಮೋದಿಯವರು ವಾರಣಾಸಿಯಿಂದ ನಾಮಪತ್ರ ಸಲ್ಲಿಸುವಾಗ ಅವರಿಗೆ ನಾಲ್ಕು ಪ್ರತಿಪಾದಕರು (proposers) ಬೇಕು. ಆ ನಾಲ್ವರು ಯಾರು? ಅವರು ಹೆಸರುಗಳು ಇಲ್ಲಿವೆ. ಈ ನಾಲ್ವರೂ ಆರೆಸ್ಸೆಸ್‌ ದಿನಗಳಿಂದಲೂ ಮೋದಿಯವರಿಗೆ ಆಪ್ತರಾದವರು ಎನ್ನಲಾಗಿದೆ.

VISTARANEWS.COM

on

pm narendra modi nomination varanasi
Koo

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂದು ವಾರಣಾಸಿಯಿಂದ ಲೋಕಸಭೆ ಚುನಾವಣೆಗೆ (Lok Sabha Election 2024) ನಾಮಪತ್ರ ಸಲ್ಲಿಸುತ್ತಿದ್ದಾರೆ. ರಾಜನಾಥ್ ಸಿಂಗ್, ಅಮಿತ್ ಶಾ ಸೇರಿದಂತೆ ಕೇಂದ್ರ ಸಚಿವರು, 12 ರಾಜ್ಯಗಳ ಸಿಎಂಗಳು ಮತ್ತು ಎನ್‌ಡಿಎ ಮೈತ್ರಿಕೂಟದ ನಾಯಕರು ಅವರೊಂದಿಗೆ ಭಾಗವಹಿಸುತ್ತಿದ್ದಾರೆ.

ಪ್ರಧಾನಿ ಮೋದಿಯವರು ವಾರಣಾಸಿಯಿಂದ ನಾಮಪತ್ರ ಸಲ್ಲಿಸುವಾಗ ಅವರಿಗೆ ನಾಲ್ಕು ಪ್ರತಿಪಾದಕರು (proposers) ಬೇಕು. ಆ ನಾಲ್ವರು ಯಾರು? ಅವರು ಹೆಸರುಗಳು ಇಲ್ಲಿವೆ. ಈ ನಾಲ್ವರೂ ಆರೆಸ್ಸೆಸ್‌ ದಿನಗಳಿಂದಲೂ ಮೋದಿಯವರಿಗೆ ಆಪ್ತರಾದವರು ಎನ್ನಲಾಗಿದೆ.

ಪಂಡಿತ್ ಗಣೇಶ್ವರ ಶಾಸ್ತ್ರಿ: ಬ್ರಾಹ್ಮಣ ಸಮುದಾಯದ ಸದಸ್ಯ. ಅಯೋಧ್ಯೆಯಲ್ಲಿ ರಾಮಮಂದಿರದ ಪ್ರತಿಷ್ಠಾಪನೆಗೆ ಮಂಗಳಕರ ಸಮಯವನ್ನು ನಿರ್ಧರಿಸಿದವರು.

ಬೈಜನಾಥ್ ಪಟೇಲ್: ಹಿರಿಯ RSS ಸ್ವಯಂಸೇವಕ, OBC ಸಮುದಾಯಕ್ಕೆ ಸೇರಿದವರು.

ಲಾಲ್‌ಚಂದ್ ಕುಶ್ವಾಹಾ: ಲಾಲ್‌ಚಂದ್ ಕುಶ್ವಾಹಾ ಕೂಡ ಒಬಿಸಿ ಸಮುದಾಯದವರು.

ಸಂಜಯ್ ಸೋಂಕರ್: ಇವರು ದಲಿತ ಸಮುದಾಯದಿಂದ ಬಂದ ಹಿರಿಯ ನಾಯಕ.

ನಾಮಪತ್ರ ಸಲ್ಲಿಕೆಯ ಸಮಯ ನಿಗದಿ ಹೇಗೆ?

ಪ್ರಧಾನಿ ಮೋದಿ ನಾಮಪತ್ರವನ್ನು ಬೆಳಗ್ಗೆ 11:40 ರಿಂದ ಮಧ್ಯಾಹ್ನ 12:00 ರ ಅವಧಿಯಲ್ಲಿ ಸಲ್ಲಿಸುತ್ತಿದ್ದಾರೆ. ಈ ಸಮಯವು ಮಂಗಳಕರವಾದ ಪುಷ್ಯ ನಕ್ಷತ್ರ ಮತ್ತು ಗಂಗಾ ಸಪ್ತಮಿಯೊಂದಿಗೆ ಹೊಂದಿಕೆಯಾಗುತ್ತದೆ. ಜ್ಯೋತಿಷಿ ಪಂ. ರಿಷಿ ದ್ವಿವೇದಿ ಅವರ ಪ್ರಕಾರ, ಈ ತಾರಾ ಜೋಡಣೆಯು ಶುಭ ಮತ್ತು ಇಷ್ಟಾರ್ಥಗಳ ನೆರವೇರಿಕೆಯನ್ನು ಸೂಚಿಸುತ್ತದೆ. ಪುಷ್ಯ ನಕ್ಷತ್ರದ ಸಮಯದಲ್ಲಿ ಚಟುವಟಿಕೆಗಳನ್ನು ಕೈಗೊಳ್ಳುವುದು ಅವುಗಳ ಯಶಸ್ವಿ ಪೂರ್ಣಗೊಳಿಸುವಿಕೆಯನ್ನು ಖಚಿತಪಡಿಸುತ್ತದೆ ಎಂದು ನಂಬಲಾಗಿದೆ.

ನಾಮಪತ್ರ ಸಲ್ಲಿಕೆಗೂ ಮುನ್ನ ವಾರಾಣಸಿಯಲ್ಲಿರುವ ದಶಾಶ್ವಮೇಧ ಘಾಟ್‌ಗೆ ಭೇಟಿ ಕೊಟ್ಟ ಮೋದಿ ಗಂಗಾ ನದಿಗೆ ಪೂಜೆ ಸಲ್ಲಿಸಿದರು. ಐದು ಅರ್ಚಕರ ನೇತೃತ್ವದಲ್ಲಿ ಪೂಜೆ ನಡೆದಿದ್ದು, ಗಂಗಾ ನದಿ(Ganga River)ಗೆ ಪ್ರಧಾನಿ ಆರತಿ ಬೆಳಗಿದರು.

ಇನ್ನು ಇದಕ್ಕೂ ಮುನ್ನ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಪ್ರಧಾನಿ ಗಂಗಾ ನದಿಯ ಜೊತೆಗಿನ 10 ವರ್ಷಗಳ ನಂಟಿಗೆ ಸಂಬಂಧಿಸಿದ ವಿಡಿಯೋವೊಂದನ್ನು ಹರಿಬಿಟ್ಟಿದ್ದಾರೆ. ಅಲ್ಲದೇ ಗಂಗಾ ಮಾತೆ ನನ್ನನ್ನು ದತ್ತು ಪಡೆದಿದ್ದಾಳೆ. ಈ ಹತ್ತು ವರ್ಷಗಲ್ಲಿ ನನ್ನ ಮತ್ತು ಗಂಗಾಮಾತೆಯ ಜೊತೆಗಿನ ನಂಟು ಮತ್ತಷ್ಟು ಬಲಿಷ್ಠವಾಗಿದೆ ಎಂದು ಬರೆದಿಕೊಂಡಿದ್ದಾರೆ. ದಶಾಶ್ವಮೇಧ ಘಾಟ್‌ ಭೇಟಿ ಬಳಿಕ ಪ್ರಧಾನಿ ವಾರಾಣಸಿಯಲ್ಲಿರುವ ಕಾಲಭೈರವೇಶ್ವರ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.

ನಾಮಪತ್ರ ಸಲ್ಲಿಕೆಗೂ ಮುನ್ನ ದಿನ ಅಂದರೆ ಸೋಮವಾರ ಇಲ್ಲಿನ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ದ್ವಾರದಿಂದ ಅದ್ಧೂರಿ ರೋಡ್‌ ಶೋ ನಡೆಸಿದರು. ಸರಿಸುಮಾರು 5 ಕಿಮೀ ವರೆಗೆ ರೋಡ್ ಶೋನಲ್ಲಿ ವಾರಣಾಸಿ ಲೋಕಸಭಾ ಕ್ಷೇತ್ರದ 1 ಲಕ್ಷಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು, ಕಾಶಿ ನಿವಾಸಿಗಳು, ಕ್ರೀಡಾಪಟುಗಳು, ಕಲಾವಿದರು ಮತ್ತು ಸ್ಥಳೀಯರಲ್ಲದೇ ಇತರ ಪ್ರಮುಖರು ಭಾಗವಹಿಸಲಿದ್ದರು. ಮರಾಠಿ, ಗುಜರಾತಿ, ಬೆಂಗಾಲಿ, ಮಾಹೇಶ್ವರಿ, ಮಾರ್ವಾಡಿ, ತಮಿಳು ಮತ್ತು ಪಂಜಾಬಿ ಸಮುದಾಯಗಳ ಗುಂಪು ಪ್ರಧಾನಿ ಮೋದಿಯನ್ನು ತಮ್ಮ ಸಾಂಪ್ರದಾಯಿಕ ಉಡುಗೆಯಲ್ಲಿ ಸ್ವಾಗತಿಸದರು. 5,000 ಕ್ಕೂ ಹೆಚ್ಚು ಬಿಜೆಪಿ ಮಹಿಳಾ ಘಟಕದ ಕಾರ್ಯಕರ್ತರು ಭಾಗಿಯಾಗಿದ್ದು, 100 ಪಾಯಿಂಟ್‌ಗಳಲ್ಲಿ ಪುಷ್ಪವೃಷ್ಟಿ ಮಾಡಲಾಯಿತು. ಮುಸ್ಲಿಂ ಸಮುದಾಯದವರೂ ಮೋದಿಗೆ ವಿಶೇಷ ಸ್ವಾಗತ ಕೋರಿದ್ದರು. ರೋಡ್‌ ಶೋ ಬಳಿಕ ಮೋದಿ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದರು.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಇಂಡಿಯಾ ಒಕ್ಕೂಟದ ಅಭ್ಯರ್ಥಿಯಾಗಿ ಅಜಯ್ ರೈ ಕಣದಲ್ಲಿದ್ದಾರೆ. ಅಜಯ್ ರೈ ಉತ್ತರ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದು, ಕಳೆದ ಎರಡು ಬಾರಿಯೂ ಮೋದಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಈ ಬಾರಿ ಪ್ರಧಾನಿ ಮೋದಿಯವರ ಗೆಲುವಿನ ಅಂತರವನ್ನು 7 ಲಕ್ಷಕ್ಕೂ ಮೀರಿ ಹೆಚ್ಚಿಸುವ ಗುರಿಯನ್ನು ಬಿಜೆಪಿ ಹೊಂದಿದೆ. 2019ರಲ್ಲಿ 64% ಮತ ಹಂಚಿಕೆಯೊಂದಿಗೆ ಮೋದಿಯವರು 4.8 ಲಕ್ಷ ಅಂತದಲ್ಲಿ ಗೆಲುವು ಸಾಧಿಸಿದ್ದರು. 2014ರಲ್ಲಿ ಅವರು 3.7 ಲಕ್ಷ ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು.

ಇದನ್ನೂ ಓದಿ: Narendra Modi: ನಾಮಪತ್ರ ಸಲ್ಲಿಕೆಗೂ ಮುನ್ನ ಗಂಗಾರತಿ ಮಾಡಿದ ಮೋದಿ-ಇಲ್ಲಿದೆ ಲೈವ್‌

Continue Reading

ದೇಶ

Narendra Modi Live: ವಾರಾಣಸಿಯಲ್ಲಿ ನಮೋ ನಾಮಿನೇಶನ್‌; ಹ್ಯಾಟ್ರಿಕ್‌ ಗೆಲುವಿನ ಹುಮ್ಮಸ್ಸಿನಲ್ಲಿ ಮೋದಿ

Narendra Modi:ಮಂಗಳವಾರ ಬೆಳಗ್ಗೆ 11:40ಕ್ಕೆ ಪ್ರಧಾನಿ ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ಸಲ್ಲಿಕೆಯ ಮುಹೂರ್ತವು ಹಿಂದೂ ಪಂಚಾಂಗದ ಪ್ರಕಾರ ʼಅಭಿಜಿತ್ ಮಹೂರ್ತ’ವಾಗಿದೆ. ಇದು ʼಆನಂದ ಯೋಗ’ದ ಅಡಿಯಲ್ಲಿ ಬರುತ್ತಿದ್ದು ಅತ್ಯಂತ ಮಂಗಳಕರ ಅವಧಿ ಎನ್ನಲಾಗಿದೆ. ನಾಮಪತ್ರ ಸಲ್ಲಿಕೆಗೂ ಮುನ್ನವೇ ಅವರು ಸೋಮವಾರ ರೋಡ್‌ ಶೋ ನಡೆಸಿ ಜನರ ಗಮನ ಸೆಳೆದಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿಯ ಕೆಲ ನಾಯಕರು ಮೋದಿ ಅವರಿಗೆ ಸಾಥ್‌ ನೀಡಿದ್ದರು.

VISTARANEWS.COM

on

Narendra Modi
Koo

ವಾರಾಣಸಿ: ಲೋಕಸಭೆ ಚುನಾವಣೆ(Lok Sabha Election 2024) ರಂಗೇರಿದ್ದು, ವಾರಾಣಸಿ ಕ್ಷೇತ್ರದಿಂದ ಕಣಕ್ಕಿಳಿದಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ನಾಮಪತ್ರ ಸಲ್ಲಿಸಿದ್ದಾರೆ. ಕಾಲಭೈರವನಿಗೆ ಪೂಜೆ ಸಲ್ಲಿಸಿದ ಬಳಿಕ ನೇರವಾಗಿ ವಾರಾಣಸಿಯ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರಧಾನಿ, ನಾಮಪತ್ರ ಸಲ್ಲಿಸಿದರು. ಪ್ರಧಾನಿ ಸತತ 3ನೇ ಅವಧಿಗೆ ವಾರಣಾಸಿ(Varanasi)ಯಿಂದಲೇ ಸ್ಪರ್ಧಿಸುತ್ತಿದ್ದು, ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಮಂಗಳವಾರ ಬೆಳಗ್ಗೆ 11:40ಕ್ಕೆ ಪ್ರಧಾನಿ ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ಸಲ್ಲಿಕೆಯ ಮುಹೂರ್ತವು ಹಿಂದೂ ಪಂಚಾಂಗದ ಪ್ರಕಾರ ʼಅಭಿಜಿತ್ ಮಹೂರ್ತ’ವಾಗಿದೆ. ಇದು ʼಆನಂದ ಯೋಗ’ದ ಅಡಿಯಲ್ಲಿ ಬರುತ್ತಿದ್ದು ಅತ್ಯಂತ ಮಂಗಳಕರ ಅವಧಿ ಎನ್ನಲಾಗಿದೆ. ನಾಮಪತ್ರ ಸಲ್ಲಿಸುವ ವೇಳೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್‌ ಜೊತೆಗಿದ್ದರು. ನಾಮಪತ್ರ ಸಲ್ಲಿಕೆಗೂ ಮುನ್ನವೇ ಅವರು ಸೋಮವಾರ ರೋಡ್‌ ಶೋ ನಡೆಸಿ ಜನರ ಗಮನ ಸೆಳೆದಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಕೇಂದ್ರ ಸಚಿವರು, ಬಿಜೆಪಿ ನಾಯಕರು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ 25ಕ್ಕೂ ಅಧಿಕ ನಾಯಕರು ಪ್ರಧಾನಿ ಮೋದಿಗೆ ಸಾಥ್‌ ಕೊಟ್ಟರು.

ನರೇಂದ್ರ ಮೋದಿ ಅವರು ವಾರಾಣಸಿ ಲೋಕಸಭೆ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆಗೂ ಮೊದಲು ಬೆಳಗ್ಗೆ 10.45ಕ್ಕೆ ಕಾಲಭೈರವ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಇದಾದ ಬಳಿಕ ಮೋದಿ ಅವರು ಲೋಕಸಭೆ ಚುನಾವಣೆ ದೃಷ್ಟಿಯಿಂದ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರ ಜತೆ ಮಹತ್ವದ ಸಭೆ ನಡೆಸಿದ್ದು, ಲೋಕಸಭೆ ಚುನಾವಣೆ ಗೆಲುವು, ಪಕ್ಷ ಸಂಘಟನೆ ಸೇರಿ ಹಲವು ವಿಷಯಗಳ ಕುರಿತು ನಾಯಕರು ಹಾಗೂ ಕಾರ್ಯಕರ್ತರ ಜತೆ ಮೋದಿ ಚರ್ಚಿಸಿದ್ದಾರೆ.

ನಾಮಪತ್ರ ಸಲ್ಲಿಕೆಗೂ ಮುನ್ನ ದಿನ ಅಂದರೆ ಸೋಮವಾರ ಇಲ್ಲಿನ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ದ್ವಾರದಿಂದ ಅದ್ಧೂರಿ ರೋಡ್‌ ಶೋ ನಡೆಸಿದರು. ಸರಿಸುಮಾರು 5 ಕಿಮೀ ವರೆಗೆ ರೋಡ್ ಶೋನಲ್ಲಿ ವಾರಣಾಸಿ ಲೋಕಸಭಾ ಕ್ಷೇತ್ರದ 1 ಲಕ್ಷಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು, ಕಾಶಿ ನಿವಾಸಿಗಳು, ಕ್ರೀಡಾಪಟುಗಳು, ಕಲಾವಿದರು ಮತ್ತು ಸ್ಥಳೀಯರಲ್ಲದೇ ಇತರ ಪ್ರಮುಖರು ಭಾಗವಹಿಸಲಿದ್ದರು. ಮರಾಠಿ, ಗುಜರಾತಿ, ಬೆಂಗಾಲಿ, ಮಾಹೇಶ್ವರಿ, ಮಾರ್ವಾಡಿ, ತಮಿಳು ಮತ್ತು ಪಂಜಾಬಿ ಸಮುದಾಯಗಳ ಗುಂಪು ಪ್ರಧಾನಿ ಮೋದಿಯನ್ನು ತಮ್ಮ ಸಾಂಪ್ರದಾಯಿಕ ಉಡುಗೆಯಲ್ಲಿ ಸ್ವಾಗತಿಸದರು. 5,000 ಕ್ಕೂ ಹೆಚ್ಚು ಬಿಜೆಪಿ ಮಹಿಳಾ ಘಟಕದ ಕಾರ್ಯಕರ್ತರು ಭಾಗಿಯಾಗಿದ್ದು, 100 ಪಾಯಿಂಟ್‌ಗಳಲ್ಲಿ ಪುಷ್ಪವೃಷ್ಟಿ ಮಾಡಲಾಯಿತು. ಮುಸ್ಲಿಂ ಸಮುದಾಯದವರೂ ಮೋದಿಗೆ ವಿಶೇಷ ಸ್ವಾಗತ ಕೋರಿದ್ದರು. ರೋಡ್‌ ಶೋ ಬಳಿಕ ಮೋದಿ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದರು.

ಇದನ್ನೂ ಓದಿ: PM Narendra Modi: ವಾರಾಣಸಿಯಲ್ಲಿ ನರೇಂದ್ರ ಮೋದಿ ನಾಮಪತ್ರ ಅನುಮೋದಿಸುವ ನಾಲ್ವರು ಯಾರು?

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಇಂಡಿಯಾ ಒಕ್ಕೂಟದ ಅಭ್ಯರ್ಥಿಯಾಗಿ ಅಜಯ್ ರೈ ಕಣದಲ್ಲಿದ್ದಾರೆ. ಅಜಯ್ ರೈ ಉತ್ತರ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದು, ಕಳೆದ ಎರಡು ಬಾರಿಯೂ ಮೋದಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಈ ಬಾರಿ ಪ್ರಧಾನಿ ಮೋದಿಯವರ ಗೆಲುವಿನ ಅಂತರವನ್ನು 7 ಲಕ್ಷಕ್ಕೂ ಮೀರಿ ಹೆಚ್ಚಿಸುವ ಗುರಿಯನ್ನು ಬಿಜೆಪಿ ಹೊಂದಿದೆ. 2019ರಲ್ಲಿ 64% ಮತ ಹಂಚಿಕೆಯೊಂದಿಗೆ ಮೋದಿಯವರು 4.8 ಲಕ್ಷ ಅಂತದಲ್ಲಿ ಗೆಲುವು ಸಾಧಿಸಿದ್ದರು. 2014ರಲ್ಲಿ ಅವರು 3.7 ಲಕ್ಷ ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು.

Continue Reading
Advertisement
I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20246 mins ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

pm narendra modi nomination
ಪ್ರಮುಖ ಸುದ್ದಿ13 mins ago

PM Narendra Modi: ಪಿಎಂ ಮೋದಿ ನಾಮಪತ್ರ ಅನುಮೋದಿಸಿದ ನಾಲ್ವರ ಹಿನ್ನೆಲೆ ಏನು?

Viral Video
Latest20 mins ago

Viral Video: ಇಲ್ಲಿ ಸಿಗೋದು ಡಿಸೇಲ್ ಪರಾಠಾ!

Love Failure
ಬೆಂಗಳೂರು ಗ್ರಾಮಾಂತರ22 mins ago

Love Failure : ಪ್ರೀತಿಸಿದ ಹುಡುಗಿ ಕೈಕೊಟ್ಟಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ

HD Revanna Bail I am not happy that Revanna has been released says HD Kumaraswamy
ರಾಜಕೀಯ42 mins ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

Bomb threat
ದೇಶ44 mins ago

Bomb Threat: ದಿಲ್ಲಿಯ ನಾಲ್ಕು ಆಸ್ಪತ್ರೆಗಳಿಗೆ ಬಾಂಬ್‌ ಬೆದರಿಕೆ; ಇ-ಮೇಲ್‌ ಮೂಲಕ ಸಂದೇಶ ರವಾನೆ

T20 World Cup 2024
ಕ್ರಿಕೆಟ್48 mins ago

T20 World Cup 2024: ನೆದರ್ಲೆಂಡ್ಸ್‌ ಟಿ20 ವಿಶ್ವಕಪ್ ತಂಡದಲ್ಲಿ ಮೂವರು ಭಾರತೀಯ ಆಟಗಾರರಿಗೆ ಸ್ಥಾನ

Davanagere News Marriage at an early age
ದಾವಣಗೆರೆ49 mins ago

Davanagere News : ಇಳಿ ವಯಸ್ಸಿನಲ್ಲಿ ಕೂಡಿ ಬಂದ ಕಂಕಣ ಭಾಗ್ಯ; ದೂರಾಯಿತು ಒಂಟಿತನ

Ramayana Movie
ಸಿನಿಮಾ50 mins ago

Ramayana Movie: ದೇಶದ ಅತ್ಯಂತ ದುಬಾರಿ ಚಿತ್ರ ಎನಿಸಿಕೊಳ್ಳಲಿದೆ ʼರಾಮಾಯಣʼ; ಬಜೆಟ್‌ ನಿಮ್ಮ ಊಹೆಗೂ ನಿಲುಕದ್ದು

gold rate today
ಚಿನ್ನದ ದರ58 mins ago

Gold Rate Today: ಬಂಗಾರದ ಬೆಲೆ ಇನ್ನೂ ಇಳಿಕೆ; ಇಂದಿನ ಮಾರುಕಟ್ಟೆ ದರಗಳನ್ನು ಇಲ್ಲಿ ಗಮನಿಸಿಕೊಳ್ಳಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20246 mins ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ42 mins ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು2 hours ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ8 hours ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ19 hours ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ19 hours ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

Prajwal Revanna Case Revanna bail plea to be heard Judge reprimands SIT cops for their behaviour
ಕ್ರೈಂ19 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಎಸ್‌ಐಟಿ ಪೊಲೀಸರ ವರ್ತನೆಗೆ ಜಡ್ಜ್‌ ಗರಂ!

Karnataka Weather Forecast
ಮಳೆ20 hours ago

Karnataka Weather : ನಾಳೆ ಮುಕ್ಕಾಲು ಕರ್ನಾಟಕದಲ್ಲಿ ಬಿರುಗಾಳಿ ಜತೆಗೆ ವಿಪರೀತ ಮಳೆ

Modi Roadshow Live
ದೇಶ20 hours ago

Modi Roadshow Live: ವಾರಾಣಸಿಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ1 day ago

Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

ಟ್ರೆಂಡಿಂಗ್‌