Modi in Karnataka: ನಾಳೆ ರಾಜ್ಯಕ್ಕೆ ಮೋದಿ, ಬೆಳಗಾವಿಯಲ್ಲಿ ವಾಸ್ತವ್ಯ; 2 ದಿನ ಪ್ರವಾಸ, 5 ಕಡೆ ಬೃಹತ್‌ ಸಮಾವೇಶ - Vistara News

Lok Sabha Election 2024

Modi in Karnataka: ನಾಳೆ ರಾಜ್ಯಕ್ಕೆ ಮೋದಿ, ಬೆಳಗಾವಿಯಲ್ಲಿ ವಾಸ್ತವ್ಯ; 2 ದಿನ ಪ್ರವಾಸ, 5 ಕಡೆ ಬೃಹತ್‌ ಸಮಾವೇಶ

Modi in Karnataka: ಏಪ್ರಿಲ್ 28 ರಂದು ಬೆಳಗಾವಿ ಸೇರಿದಂತೆ ರಾಜ್ಯದ ನಾಲ್ಕು ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗಲಿದ್ದಾರೆ. ಆದರೆ, ಏಪ್ರಿಲ್ 29ರಂದು ಒಂದೇ ಸಮಾವೇಶದಲ್ಲಿ ಭಾಗಿಯಾಗಲಿದ್ದು, ಬಳಿಕ ಅಲ್ಲಿಂದ ಮಹಾರಾಷ್ಟ್ರಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಹೀಗಾಗಿ ಮೋದಿ ಕರ್ನಾಟಕದ ಕೆಲವು ಕ್ಷೇತ್ರಗಳಲ್ಲಿ ಪ್ರಚಾರವನ್ನು ಕೈಬಿಟ್ಟಿದ್ದಾರೆ. ಇದಕ್ಕೂ ಮುಂಚೆ ಮೋದಿ ಪ್ರವಾಸದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಹೀಗಾಗಿ ಕಲಬುರಗಿ, ಕೊಪ್ಪಳ, ರಾಯಚೂರು ಜಿಲ್ಲೆಗಳಿಗೆ ಮೋದಿ ಸಮಾವೇಶ ಇತ್ತು ಎನ್ನಲಾಗಿತ್ತು. ಆದರೆ, ಅದರಲ್ಲೀಗ ಬದಲಾವಣೆಯಾಗಿದೆ.

VISTARANEWS.COM


on

Modi in Karnataka stay in Belagavi tomorrow and Huge gatherings at five places
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಈಗಾಗಲೇ ಒಂದು ಸುತ್ತಿನ ಮತ ಬೇಟೆ ಮುಗಿಸಿ ತೆರಳಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಎರಡನೇ ಹಂತದ ಚುನಾವಣೆಗೆ ರಿಎಂಟ್ರಿ ಕೊಡಲಿದ್ದಾರೆ. ಈ ವೇಳೆ ಮೋದಿ (Modi in Karnataka) ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಏಪ್ರಿಲ್‌ 28 ಹಾಗೂ 29ರಂದು ಕರ್ನಾಟಕದಲ್ಲಿ ಜನರನ್ನು ಮೋಡಿ ಮಾಡಲು ಮೋದಿ ಮುಂದಾಗಿದ್ದಾರೆ. ಈ ಸಂಬಂಧ ಶನಿವಾರ ರಾತ್ರಿಯೇ ಬೆಳಗಾವಿಗೆ ಆಗಮಿಸಲಿದ್ದು, ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.

ಏಪ್ರಿಲ್ 28 ರಂದು ಬೆಳಗಾವಿ ಸೇರಿದಂತೆ ರಾಜ್ಯದ ನಾಲ್ಕು ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗಲಿದ್ದಾರೆ. ಆದರೆ, ಏಪ್ರಿಲ್ 29ರಂದು ಒಂದೇ ಸಮಾವೇಶದಲ್ಲಿ ಭಾಗಿಯಾಗಲಿದ್ದು, ಬಳಿಕ ಅಲ್ಲಿಂದ ಮಹಾರಾಷ್ಟ್ರಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಹೀಗಾಗಿ ಮೋದಿ ಕರ್ನಾಟಕದ ಕೆಲವು ಕ್ಷೇತ್ರಗಳಲ್ಲಿ ಪ್ರಚಾರವನ್ನು ಕೈಬಿಟ್ಟಿದ್ದಾರೆ.

ಶನಿವಾರ (ಏಪ್ರಿಲ್‌ 27) ರಾತ್ರಿ 8:45ಕ್ಕೆ ಬೆಳಗಾವಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಹೀಗಾಗಿ ಬೆಳಗಾವಿಯಲ್ಲೇ ಪ್ರಧಾನಿ ಮೋದಿ ವಾಸ್ತವ್ಯ ಹೂಡಲಿದ್ದಾರೆ. ಏಪ್ರಿಲ್‌ 28ರ ಬೆಳಗ್ಗೆ 11 ಗಂಟೆಗೆ ಬೆಳಗಾವಿಯ ಸಮಾವೇಶದಲ್ಲಿ ಮೋದಿ ಭಾಗಿಯಾಗಲಿದ್ದಾರೆ. 11:40ರ ವರೆಗೂ ಬೆಳಗಾವಿಯಲ್ಲಿ ಸಮಾವೇಶ ನಡೆಯಲಿದ್ದು, ಬಳಿಕ ಅಲ್ಲಿಂದ ಉತ್ತರ ಕನ್ನಡ ಜಿಲ್ಲೆಗೆ ಮೋದಿ ಪ್ರಯಾಣ ಬೆಳೆಸಲಿದ್ದಾರೆ.

ಶಿರಸಿಯಲ್ಲಿ ಬೃಹತ್‌ ಸಮಾವೇಶ

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪಕ್ಷದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಮತಯಾಚನೆ ಮಾಡಲಿದ್ದಾರೆ. ಅಲ್ಲಿ ಮಧ್ಯಾಹ್ನ 1 ರಿಂದ 1.50ರ ವರೆಗೂ ನಡೆಯಲಿರುವ ಬೃಹತ್‌ ಸಮಾವೇಶದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಅಲ್ಲಿಂದ ದಾವಣಗೆರೆ ಜಿಲ್ಲೆಗೆ ಪ್ರಯಾಣ ಬೆಳೆಸಲಿರುವ ಪ್ರಧಾನಿ ನರೇಂದ್ರ ಮೋದಿ, ಮಧ್ಯಾಹ್ನ 3 ರಿಂದ 3.50 ವರೆಗೂ ನಡೆಯಲಿರುವ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಬಳ್ಳಾರಿ ಜಿಲ್ಲೆಗೆ ಪ್ರಧಾನಿ ಮೋದಿ ಪ್ರಯಾಣಿಸಲಿದ್ದಾರೆ. ಅಲ್ಲಿನ ಪುನೀತ್ ರಾಜ್‍ಕುಮಾರ್ ಆಟದ ಮೈದಾನದಲ್ಲಿ ಸಂಜೆ 5ರಿಂದ 5.50ರ ವರೆಗೂ ಮೋದಿ ಸಮಾವೇಶದಲ್ಲಿ ಮಾತನಾಡಲಿದ್ದಾರೆ.

ಏಪ್ರಿಲ್ 28ರಂದು ರಾತ್ರಿ ಬಳ್ಳಾರಿಯ ಹೊಸಪೇಟೆಯಲ್ಲೇ ನರೇಂದ್ರ ಮೋದಿ ವಾಸ್ತವ್ಯ ಹೂಡಲಿದ್ದಾರೆ. ಮರುದಿನ ಏಪ್ರಿಲ್‌ 29ರಂದು ಬಳ್ಳಾರಿಯಿಂದ ಬಾಗಲಕೋಟೆಗೆ ಪ್ರವಾಸ ಮಾಡಲಿರುವ ಮೋದಿ, ಬಾಗಲಕೋಟೆಯಲ್ಲಿ ಮಧ್ಯಾಹ್ನ 12 ರಿಂದ, 12.55 ರವರೆಗೂ ನಡೆಯಲಿರುವ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಬಾಗಲಕೋಟೆಯಿಂದ ಮಹಾರಾಷ್ಟ್ರಕ್ಕೆ‌ ಮೋದಿ ಪ್ರಯಾಣ ಬೆಳೆಸಲಿದ್ದಾರೆ.

2ನೇ ಹಂತದ ಚುನಾವಣೆಗೆ ಬಿಜೆಪಿ ಪ್ಲ್ಯಾನ್‌ ರೆಡಿ

ಮೊದಲ ಹಂತದ ಚುನಾವಣೆಗೆ ಏಪ್ರಿಲ್‌ 26ರಂದು ಮತದಾನ ನಡೆಯುವುದರಿಂದ ಕರ್ನಾಟಕದಲ್ಲಿನ 2ನೇ ಹಂತದ ಚುನಾವಣೆ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸಲಾಗುತ್ತಿದೆ. ಉತ್ತರ ಕರ್ನಾಟಕ ಸೇರಿದಂತೆ ಹಲವು ಕಡೆ ಮೋದಿ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅಲ್ಲದೆ, ಯುವ ಸಮುದಾಯಕ್ಕೆ ಮೋದಿ ಅಚ್ಚುಮೆಚ್ಚು. ಇಂತಹ ಯುವ ವರ್ಗದ ಮತಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಸೆಳೆಯಲು ಪ್ಲ್ಯಾನ್‌ ಮಾಡಿಕೊಳ್ಳಲಾಗಿದೆ.

ಇವಿಎಂನಲ್ಲಿ ನಿಮ್ಮ ಮತ ದಾಖಲಾಗುವುದು ಹೇಗೆ? ವಿವಿಪ್ಯಾಟ್‌ ಕೆಲಸ ಏನು? ಇಲ್ಲಿದೆ ಸಮಗ್ರ ವಿವರ

ವಿದ್ಯುನ್ಮಾನ ಮತಯಂತ್ರಗಳ (EVM- ಇವಿಎಂ) ಕುರಿತು ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಕಾನೂನು ಹೋರಾಟದ ನಡುವೆಯೇ ಲೋಕಸಭೆ ಚುನಾವಣೆ (Lok Sabha Election 2024) ಮೊದಲ ಹಂತದ ಮತದಾನ (1st phase Voting) ನಡೆಯುತ್ತಿದೆ. ಇವಿಎಂಗಳಲ್ಲಿ ಚಲಾವಣೆಯಾದ 100% ಮತಗಳನ್ನೂ ವಿವಿಪ್ಯಾಟ್ (VVPAT) ವ್ಯವಸ್ಥೆಯ ಮೂಲಕ ಪರಿಶೀಲಿಸುವ ವ್ಯವಸ್ಥೆ ಜಾರಿ ಮಾಡಬೇಕು (VVPAT Verification) ಎಂದು ಅರ್ಜಿದಾರರು ಕೋರಿದ್ದಾರೆ. ಈ ಸಂದರ್ಭದಲ್ಲಿ, ಇವಿಎಂ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ, ವಿವಿಪ್ಯಾಟ್‌ ಮೂಲಕ ಅದರ ಪರಿಶೀಲನೆ ಹೇಗೆ, ಎಂಬುದನ್ನು ವಿವರವಾಗಿ ತಿಳಿಯೋಣ.

ಕೋರ್ಟ್‌ನಲ್ಲಿ ನಡೆಸದ ವಾದವಿವಾದಗಳ ಸಮಯದಲ್ಲಿ, ಬ್ಯಾಲೆಟ್ ವೋಟಿಂಗ್ ಸಿಸ್ಟಮ್‌ಗೆ ಹಿಂತಿರುಗಲು ಸಲಹೆಗಳು ಬಂದಿವೆ. ಅರ್ಜಿದಾರರು ಯುರೋಪಿಯನ್ ರಾಷ್ಟ್ರಗಳ ಉದಾಹರಣೆ ತೋರಿಸಿದ್ದಾರೆ. ಆದರೆ, “ಪಶ್ಚಿಮ ಬಂಗಾಳದ ಜನಸಂಖ್ಯೆಯೇ ಜರ್ಮನಿಗಿಂತ ಹೆಚ್ಚಿರುವುದನ್ನು ಗಮನಿಸಿ. ಇಂತಹ ಹೋಲಿಕೆಗಳನ್ನು ಮಾಡಬೇಡಿ” ಎಂದು ನ್ಯಾಯಾಲಯವು ಅರ್ಜಿದಾರರಿಗೆ ಹೇಳಿದೆ. ನಿನ್ನೆ, ಭಾರತೀಯ ಚುನಾವಣಾ ಆಯೋಗದ ವಕೀಲರು ಇವಿಎಂ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಯಾವುದೇ ರೀತಿಯ ಟ್ಯಾಂಪರಿಂಗ್ ವಿರುದ್ಧ ಹೇಗೆ ದೋಷರಹಿತವಾಗಿದೆ ಎಂಬುದನ್ನು ವಿವರಿಸಿದರು.

ಇವಿಎಂ ಕೆಲಸ ಮಾಡುವುದು ಹೇಗೆ?

EVM ಎರಡು ಘಟಕಗಳನ್ನು ಹೊಂದಿದೆ- ನಿಯಂತ್ರಣ ಘಟಕ ಮತ್ತು ಮತದಾನ ಘಟಕ. ಇವುಗಳನ್ನು ಕೇಬಲ್ ಮೂಲಕ ಸಂಪರ್ಕಿಸಲಾಗಿದೆ. ಇವಿಎಂ ನಿಯಂತ್ರಣ ಘಟಕವು ಪೋಲಿಂಗ್ ಆಫೀಸರ್‌ ಬಳಿ ಇರುತ್ತದೆ. ಮತಯಂತ್ರ ಸಾಮಾನ್ಯವಾಗಿ ಮತದಾರನ ಖಾಸಗಿತನಕ್ಕಾಗಿ ಮುಚ್ಚಿದ ಆವರಣದೊಳಗೆ ಇರುತ್ತದೆ.

ಮತಗಟ್ಟೆಯಲ್ಲಿ, ಮತಗಟ್ಟೆ ಅಧಿಕಾರಿಯು ನಿಮ್ಮ ಗುರುತನ್ನು ಪರಿಶೀಲಿಸುತ್ತಾರೆ. ನಂತರ ನೀವು ಮತ ​​ಚಲಾಯಿಸಲು ಅನುವು ಮಾಡಿಕೊಡುವ ಬ್ಯಾಲೆಟ್ ಬಟನ್ ಅನ್ನು ಒತ್ತುತ್ತಾರೆ. ಬ್ಯಾಲೆಟ್ ಯೂನಿಟ್‌ನಲ್ಲಿ ಅಭ್ಯರ್ಥಿಗಳ ಹೆಸರುಗಳು ಮತ್ತು ಚಿಹ್ನೆಗಳು ಅವುಗಳ ಪಕ್ಕದಲ್ಲಿ ನೀಲಿ ಬಟನ್‌ಗಳಿರುತ್ತವೆ. ಮತದಾರರು ತಮ್ಮ ಆಯ್ಕೆಯ ಅಭ್ಯರ್ಥಿಯ ಹೆಸರಿನ ಮುಂದಿನ ಬಟನ್ ಅನ್ನು ಒತ್ತಬೇಕು.

ಮತದಾನ ಪ್ರಕ್ರಿಯೆ

ಮತಗಟ್ಟೆ ಅಧಿಕಾರಿಯ ನಿಯಂತ್ರಣ ಘಟಕವು ಬಹು ಬಟನ್‌ಗಳನ್ನು ಹೊಂದಿದೆ. ಅವುಗಳಲ್ಲಿ ಒಂದು ʼballot’ ಎಂಬ ಶೀರ್ಷಿಕೆಯಿದು. ಒಮ್ಮೆ ಅಧಿಕಾರಿಯು ಈ ಗುಂಡಿಯನ್ನು ಒತ್ತಿದರೆ, ʼಬ್ಯುಸಿ’ ಎಂಬ ಶೀರ್ಷಿಕೆಯ ಕೆಂಪು ದೀಪವು ಬೆಳಗುತ್ತದೆ. ಒಂದು ಮತವನ್ನು ದಾಖಲಿಸಲು ನಿಯಂತ್ರಣ ಘಟಕ ಸಿದ್ಧವಾಗಿದೆ ಎಂದು ಇದು ಸೂಚಿಸುತ್ತದೆ. ಮತದಾರ ಇರುವ ಬ್ಯಾಲೆಟ್ ಯೂನಿಟ್‌ನಲ್ಲಿ ಹಸಿರು ದೀಪ ಆನ್ ಆಗಿದ್ದು, ಮತದಾನಕ್ಕೆ ಯಂತ್ರ ಸಿದ್ಧವಾಗಿದೆ ಎಂದು ಸಂಕೇತಿಸುತ್ತದೆ. ನಂತರ ಮತದಾರನು ತನ್ನ ಆಯ್ಕೆಯ ಅಭ್ಯರ್ಥಿಯ ಹೆಸರಿನ ಮುಂದಿನ ಬಟನ್ ಅನ್ನು ಒತ್ತುತ್ತಾನೆ. ಬ್ಯಾಲೆಟ್ ಯೂನಿಟ್ ದೃಷ್ಟಿಹೀನ ಮತದಾರರಿಗೆ ಬ್ರೈಲ್ ಲಿಪಿಯನ್ನು ಸಹ ಹೊಂದಿದೆ.

ಮತದಾರರು ಮತದಾನ ಮಾಡಿದ ನಂತರ, ನಿಯಂತ್ರಣ ಘಟಕವು ಬೀಪ್ ಧ್ವನಿಯನ್ನು ಹೊರಸೂಸುತ್ತದೆ. ಇದು ಮತದಾನ ಪೂರ್ಣಗೊಂಡಿದೆ ಎಂದು ಸೂಚಿಸುತ್ತದೆ. ನಿಯಂತ್ರಣ ಘಟಕವು ಎಲ್‌ಇಡಿ ಪರದೆ ಮತ್ತು ಬಟನ್‌ಗಳನ್ನು ಹೊಂದಿದ್ದು, ಅದರಲ್ಲಿ ದಾಖಲಾಗಿರುವ ಒಟ್ಟು ಮತಗಳ ಸಂಖ್ಯೆಯನ್ನು ನೋಡಲು ಬಳಸಬಹುದು. ಎಲ್ಲಾ ಮತಗಳು ದಾಖಲಾದ ನಂತರ, ಮತಗಟ್ಟೆ ಅಧಿಕಾರಿಯು ನಿಯಂತ್ರಣ ಘಟಕದ ಬದಿಯಲ್ಲಿರುವ ಗುಂಡಿಯನ್ನು ಒತ್ತಿ, ಯಂತ್ರವನ್ನು ಮುಚ್ಚುತ್ತಾರೆ. ಎಣಿಕೆಯ ದಿನದಂದು, ಪ್ರತಿ ಅಭ್ಯರ್ಥಿ ಪಡೆದ ಒಟ್ಟು ಮತಗಳನ್ನು ನೋಡಲು ʼresult’ ಶೀರ್ಷಿಕೆಯ ಬಟನ್ ಅನ್ನು ಬಳಸಲಾಗುತ್ತದೆ. ನಿಯಂತ್ರಣ ಘಟಕದಿಂದ ಎಲ್ಲಾ ಡೇಟಾವನ್ನು ಅಳಿಸಲು ಬಳಸಬಹುದಾದ ʼclear’ ಬಟನ್ ಕೂಡ ಇದೆ.

VVPAT ಎಂದರೇನು?

VVPAT ಎಂದರೆ ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್. ಮತವನ್ನು ಸರಿಯಾಗಿ ಚಲಾಯಿಸಲಾಗಿದೆಯೇ ಮತ್ತು ಮತದಾರ ಚಲಾಯಿಸಿದ ಅಭ್ಯರ್ಥಿಗೇ ಆ ಮತ ಹೋಗಿದೆಯೇ ಎಂದು ನೋಡಲು ಅವಕಾಶವಿರುವ ಯಂತ್ರ. ಮತದಾರರು ತಮ್ಮ ಆಯ್ಕೆಯ ಅಭ್ಯರ್ಥಿಯ ಹೆಸರಿನ ಮುಂದಿನ ಬಟನ್ ಅನ್ನು ಒಮ್ಮೆ ಒತ್ತಿದರೆ, ಕಂಟ್ರೋಲ್ ಯೂನಿಟ್ ಮತ್ತು ಬ್ಯಾಲೆಟ್ ಯೂನಿಟ್‌ಗೆ ಸಂಪರ್ಕಗೊಂಡಿರುವ VVPAT, ಏಳು ಸೆಕೆಂಡುಗಳ ಕಾಲ ಮತದಾರರಿಗೆ ಗೋಚರಿಸುವ ಕಾಗದದ ಸ್ಲಿಪ್ ಅನ್ನು ಉತ್ಪಾದಿಸುತ್ತದೆ. ಅದರ ನಂತರ, ಪೇಪರ್ ಸ್ಲಿಪ್ VVPAT ಯಂತ್ರದಲ್ಲಿರುವ ಡ್ರಾಪ್ ಬಾಕ್ಸ್‌ಗೆ ಬೀಳುತ್ತದೆ.

ಪ್ರಸ್ತುತ, ಪ್ರತಿ ಅಸೆಂಬ್ಲಿ ವಿಭಾಗದಲ್ಲಿಯೂ 5 ವಿವಿಪ್ಯಾಟ್ ಯಂತ್ರಗಳಲ್ಲಿ ದಾಖಲಾದ ಮತಗಳನ್ನು ಇವಿಎಂಗಳೊಂದಿಗೆ ಕ್ರಾಸ್-ಚೆಕ್ ಮಾಡಲಾಗುತ್ತದೆ. 100 ಶೇಕಡ ಇವಿಎಂಗಳಲ್ಲಿ ದಾಖಲಾದ ಮತಗಳೊಂದಿಗೆ ವಿವಿಪ್ಯಾಟ್ ಸ್ಲಿಪ್‌ಗಳನ್ನು ಕ್ರಾಸ್ ಚೆಕ್ ಮಾಡಬೇಕೆಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಗಳು ಬಯಸಿವೆ. ವಿವಿಪ್ಯಾಟ್‌ನಲ್ಲಿ ಏಳು ಸೆಕೆಂಡ್ ಲೈಟ್ ಆನ್ ಆಗಿದ್ದು, ಮತದಾರರು ತಮ್ಮ ಮತವನ್ನು ಸರಿಯಾಗಿ ದಾಖಲಿಸಲಾಗಿದೆಯೇ ಎಂದು ಪರಿಶೀಲಿಸಬಹುದು ಎಂದು ಅರ್ಜಿದಾರರು ಕೋರಿದ್ದಾರೆ. ಪೇಪರ್ ಸ್ಲಿಪ್ ಅನ್ನು ಮತದಾರರಿಗೆ ನೀಡುವುದು ಮತ್ತೊಂದು ಸಲಹೆಯಾಗಿದೆ. ಚುನಾವಣಾ ಆಯೋಗ ಇದನ್ನು ವಿರೋಧಿಸಿದೆ. ಇದು ಮತದಾನದ ಗೌಪ್ಯತೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ದುರ್ಬಳಕೆಯಾಗಬಹುದು ಎಂದು ಹೇಳಿದೆ.

ಇದನ್ನೂ ಓದಿ: Lok Sabha Election 2024: ಚಾಮರಾಜನಗರದಲ್ಲಿ ಮತ ಯಂತ್ರ ಪೀಸ್‌ ಪೀಸ್‌; ಮತಗಟ್ಟೆ ಧ್ವಂಸ, ಲಾಠಿ ಚಾರ್ಜ್‌!

ಸಮಯ ಉಳಿಕೆ

ಚುನಾವಣಾ ಆಯೋಗದ ಪ್ರಕಾರ ಇವಿಎಂ ವ್ಯವಸ್ಥೆ ಫೂಲ್ ಪ್ರೂಫ್ ಆಗಿದೆ. ಇದು ಮತ ಎಣಿಕೆ ಸಮಯವನ್ನು ಉಳಿಸುತ್ತದೆ, ಟ್ಯಾಂಪರ್ ಪ್ರೂಫ್ ಮತ್ತು ಬಳಕೆದಾರ ಸ್ನೇಹಿಯಾಗಿದೆ ಎಂದು ಚುನಾವಣಾ ಸಂಸ್ಥೆ ಹೇಳಿದೆ. ಇವಿಎಂಗಳು ಹಗುರವಾಗಿವೆ ಮತ್ತು ಸದೃಢವಾಗಿವೆ- ಮತಗಟ್ಟೆ ಅಧಿಕಾರಿಗಳು ದೂರದ ಕುಗ್ರಾಮಗಳು, ಗುಡ್ಡಗಾಡು ಪ್ರದೇಶಗಳನ್ನು ತಲುಪಲು ಟ್ರೆಕ್ಕಿಂಗ್‌ ಮಾಡಬೇಕಾದ ದೇಶದಲ್ಲಿ ಇದು ನಿರ್ಣಾಯಕವಾಗಿದೆ.

ಎಲ್ಲರ ಸಮ್ಮುಖದಲ್ಲಿ ಪರಿಶೀಲನೆ

ಇವಿಎಂಗಳಿಗೆ ವಿದ್ಯುತ್ ಅಗತ್ಯವಿಲ್ಲ ಮತ್ತು ಬ್ಯಾಟರಿ/ಪವರ್ ಪ್ಯಾಕ್‌ ಇದರೊಂದಿಗೆ ಬರುತ್ತದೆ. ಸ್ಥಿರವಾದ ವಿದ್ಯುತ್ ಸರಬರಾಜನ್ನು ಹೊಂದಿರದ ಪ್ರದೇಶಗಳಲ್ಲಿ ಮತದಾನವನ್ನು ಸಕ್ರಿಯಗೊಳಿಸಲು ಇದು ಮತ್ತೊಂದು ನಿರ್ಣಾಯಕ ವೈಶಿಷ್ಟ್ಯ. ಪ್ರತಿ ಚುನಾವಣೆಗೂ ಮುನ್ನ ಇವಿಎಂ ಮತ್ತು ವಿವಿಪ್ಯಾಟ್‌ಗಳ ಮೊದಲ ಹಂತದ ತಪಾಸಣೆ (ಎಫ್‌ಎಲ್‌ಸಿ) ನಡೆಸಲಾಗುತ್ತದೆ. ಈ ಪರಿಶೀಲನೆಯ ಸಮಯದಲ್ಲಿ, ಇವಿಎಂಗಳಲ್ಲಿನ ಡೇಟಾವನ್ನು ಅಳಿಸಲಾಗುತ್ತದೆ ಮತ್ತು ವಿವಿಧ ಘಟಕಗಳ ಕಾರ್ಯವನ್ನು ಪ್ರದರ್ಶಿಸಲಾಗುತ್ತದೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಈ ಪರಿಶೀಲನೆ ನಡೆಸಲಾಗುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Lok Sabha Election 2024: ಮೊದಲೆರಡು ಗಂಟೆಗಳ ಮತದಾನ ನಿರೀಕ್ಷೆಗಿಂತ ಕಡಿಮೆ, ಇನ್ನೂ ಇಳಿಯುವ ಆತಂಕ; ಎಲ್ಲಿ ಎಷ್ಟು?

Lok Sabha Election 2024: ಶಿವಮೊಗ್ಗದಲ್ಲಿ 11.45, ಉತ್ತರ ಕನ್ನಡ ಕ್ಷೇತ್ರದಲ್ಲಿ ಶೇ. 11.42, ಚಿಕ್ಕೋಡಿಯಲ್ಲಿ ಶೇ. 10.81, ಬಳ್ಳಾರಿಯಲ್ಲಿ ಶೇ. 10.37, ಬೆಳಗಾವಿಯಲ್ಲಿ ಶೇ. 9.31, ಧಾರವಾಡದಲ್ಲಿ ಶೇ.9.38, ವಿಜಯಪುರದಲ್ಲಿ 9.22%, ರಾಯಚೂರಿನಲ್ಲಿ ಶೇ. 8.83 , ಹಾವೇರಿಯಲ್ಲಿ ಶೇ. 8.2, ಕಲಬುರಗಿಯಲ್ಲಿ ಶೇ. 8.71 ಮತದಾನ ದಾಖಲಾಯಿತು. ಸರಾಸರಿ ಶೇ. 9.5 ಎಂದು ಅಂದಾಜಿಸಲಾಗಿದೆ. ಇದು ನಿರೀಕ್ಷೆಗಿಂತ ಕಡಿಮೆಯಾಗಿದೆ.

VISTARANEWS.COM


on

lok sabha election 2024 voting second phase
Koo

ಬೆಂಗಳೂರು: ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ 14 ಲೋಕಸಭೆ ಕ್ಷೇತ್ರಗಳಲ್ಲಿ (lok sabha constituency) ನಡೆಯುತ್ತಿರುವ ಲೋಕಸಭೆ ಚುನಾವಣೆ (lok sabha election 2024) ಮತದಾನ (voting) ಬೆಳಗ್ಗಿನ ಮೊದಲ ಎರಡು ಗಂಟೆಗಳಲ್ಲಿ ಸರಾಸರಿ 9.5% ಮತದಾನ ದಾಖಲಿಸಿತು. ಮೊದಲ ಹಂತದ ಚುನಾವಣೆಗೆ ಹೋಲಿಸಿದರೆ ಈ ಪ್ರತಿಕ್ರಿಯೆ ನೀರಸವಾಗಿದೆ. ಮೊದಲ ಹಂತದ ಮತದಾನದಲ್ಲಿ ಮೊದಲ ಎರಡು ಗಂಟೆಗಳಲ್ಲಿ ಸರಾಸರಿ 10% ಮತದಾನ ಕಂಡುಬಂದಿತ್ತು. ಮುಂಜಾನೆ 7 ಗಂಟೆಗೆ ಮತದಾನ ಶುರುವಾಗಿದೆ.

ಶಿವಮೊಗ್ಗದಲ್ಲಿ 11.45, ಉತ್ತರ ಕನ್ನಡ ಕ್ಷೇತ್ರದಲ್ಲಿ ಶೇ. 11.42, ಚಿಕ್ಕೋಡಿಯಲ್ಲಿ ಶೇ. 10.81, ಬಳ್ಳಾರಿಯಲ್ಲಿ ಶೇ. 10.37, ಬೆಳಗಾವಿಯಲ್ಲಿ ಶೇ. 9.31, ಧಾರವಾಡದಲ್ಲಿ ಶೇ.9.38, ವಿಜಯಪುರದಲ್ಲಿ 9.22%, ರಾಯಚೂರಿನಲ್ಲಿ ಶೇ. 8.83 , ಹಾವೇರಿಯಲ್ಲಿ ಶೇ. 8.2, ಕಲಬುರಗಿಯಲ್ಲಿ ಶೇ. 8.71 ಮತದಾನ ದಾಖಲಾಯಿತು. ಸರಾಸರಿ ಶೇ. 9.5 ಎಂದು ಅಂದಾಜಿಸಲಾಗಿದೆ. ಇದು ನಿರೀಕ್ಷೆಗಿಂತ ಕಡಿಮೆಯಾಗಿದೆ.

ಹತ್ತು ಗಂಟೆಯ ಬಳಿಕ ಬಿಸಿಲು ಏರುವುದರಿಂದ, ಬಿಸಿಲಿನ ಹೊಡೆತ ತಪ್ಪಿಸಿಕೊಳ್ಳಲು ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸಿದರು. ಮಧ್ಯಾಹ್ನದ ಹೊತ್ತಿನಲ್ಲಿ ಮತದಾನ ಇನ್ನಷ್ಟು ಇಳಿಕೆಯಾಗುವ ಆತಂಕ ಕಂಡುಬಂದಿದೆ. ಸಂಜೆಯ ವೇಳೆ ಮಳೆ ಬರುವ ಸಾಧ್ಯತೆಯೂ ಇರುವುದರಿಂದ, ಸಂಜೆಯೂ ಮತದಾನ ನಿರೀಕ್ಷಿತ ಪ್ರಮಾಣದಲ್ಲಿ ನಡೆಯದ ಆತಂಕ ತಲೆದೋರಿದೆ.

ಹಾವೇರಿಯಲ್ಲಿ ಬಸವರಾಜ ಬೊಮ್ಮಾಯಿ, ಶಿವಮೊಗ್ಗದಲ್ಲಿ ಬಿಎಸ್‌ ಯಡಿಯೂರಪ್ಪ, ವಿಜಯೇಂದ್ರ, ರಾಘವೇಂದ್ರ, ಈಶ್ವರಪ್ಪ, ಹುಬ್ಬಳ್ಳಿಯಲ್ಲಿ ಪ್ರಹ್ಲಾದ್‌ ಜೋಶಿ, ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ ಖರ್ಗೆ, ಕಾರವಾರದಲ್ಲಿ ಅಂಜಲಿ ನಿಂಬಾಳ್ಕರ್ ಸೇರಿದಂತೆ ಹಲವಾರು ಗಣ್ಯರು ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.

ಕೆಲವೆಡೆ ಮತಯಂತ್ರ ಕೈಕೊಟ್ಟು ಮತದಾರರು ಗಂಟೆಗಟ್ಟಲೆ ಕಾಯುವಂತಾಯಿತು. ತಂತ್ರಜ್ಞರು ಆಗಮಿಸಿ ಸರಿಪಡಿಸಿದ ಬಳಿಕ ಮತ ಹಾಕಲಾಯಿತು. ಮಹಿಳೆಯರಿಗಾಗಿ ಏರ್ಪಡಿಸಿದ ಪಿಂಕ್‌ ಬೂತ್‌ಗಳಲ್ಲಿಯೂ ಉತ್ತಮ ಸ್ಪಂದನ ವ್ಯಕ್ತವಾಯಿತು. ಹಲವು ಕಡೆಗಳಲ್ಲಿ ಮತದಾರರು ಬಹಿಷ್ಕಾರ ವ್ಯಕ್ತಡಿಸಿದರು. ಹಲವೆಡೆ ಶತಾಯುಷಿಗಳು ಆಗಮಿಸಿ ಮತ ಹಾಕುವ ಉತ್ಸಾಹ ತೋರಿದರು. ಒಂದು ಕಡೆ ದಿವ್ಯಾಂಗ ಯುವತಿ ಮೊದಲ ಮತ ಹಾಕಿದಳು. ಉತ್ತರ ಕನ್ನಡದಲ್ಲಿ ನವದುರ್ಗೆಯರ ರೂಪದಲ್ಲಿ ಮೊದಲ ಮತದಾನ ನಡೆದುದು ವಿಶಿಷ್ಟವಾಗಿತ್ತು.

ರಾಜ್ಯದಲ್ಲಿ ಎರಡನೇ ಹಂತದಲ್ಲಿ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. 14 ಕ್ಷೇತ್ರಗಳಲ್ಲಿ 28,269 ಮತಗಟ್ಟೆ ಸ್ಥಾಪಿಸಿದ್ದು, ಶಾಂತಿಯುತ ಚುನಾವಣೆ ನಡೆಸಲು ಸುಮಾರು 40 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಮತದಾನ ಕೇಂದ್ರದಲ್ಲಿ ಮತದಾರರ ಅನುಕೂಲಕ್ಕಾಗಿ ಕುಡಿಯುವ ನೀರು ಸೇರಿ ಅಗತ್ಯ ವ್ಯವಸ್ಥೆ ಮಾಡಲಾಗಿದ್ದು, ಮತಗಟ್ಟೆಗಳ ಸುತ್ತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸೂಕ್ತ ಭದ್ರತೆ ಏರ್ಪಡಿಸಲಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸಿದ್ದರೆ, ಬಿಎಸ್‌ಪಿ 9, ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳು 23, ಸ್ವತಂತ್ರ ಅಭ್ಯರ್ಥಿಗಳು 117 ಸೇರಿ ಒಟ್ಟು 227 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ. ಇದರಲ್ಲಿ 206 ಪುರುಷ, 21 ಮಹಿಳಾ ಅಭ್ಯರ್ಥಿಗಳಿದ್ದಾರೆ. ಈ ಕ್ಷೇತ್ರಗಳಲ್ಲಿ 2,59,52,958 ಮತದಾರರಿದ್ದು, 1,29,48,978 ಪುರುಷ, 1,29,64,570 ಮಹಿಳಾ ಹಾಗೂ 1,945 ತೃತೀಯ ಲಿಂಗಿ ಮತದಾರರು ಇದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅತೀ ಕಡಿಮೆ 16,41,156 ಮತದಾರರಿದ್ದರೆ, ಅತಿ ಹೆಚ್ಚು ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ 20,98,202 ಮತದಾರರಿದ್ದಾರೆ.

ದೇಶದ 11 ರಾಜ್ಯ ಮತ್ತು ಕೇಂದ್ರಾಡಳಿತದ ಪ್ರದೇಶಗಳ 93 ಕ್ಷೇತ್ರಗಳಲ್ಲಿ ಮೂರನೇ ಹಂತದ ಮತದಾನ ಆರಂಭವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಗುಜರಾತ್‌ನ ಅಹಮದಾಬಾದ್‌ನಲ್ಲಿ ಮತದಾನ ಮಾಡಿದರು. ಮೂರನೇ ಹಂತದಲ್ಲಿ ಸುಮಾರು 120 ಮಹಿಳೆಯರು ಸೇರಿದಂತೆ 1,300ಕ್ಕೂ ಹೆಚ್ಚು ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. 8.39 ಕೋಟಿ ಮಹಿಳೆಯರು ಸೇರಿದಂತೆ 17.24 ಕೋಟಿ ಜನರು ಮತ ಚಲಾಯಿಸಲು ಅರ್ಹರಾಗಿದ್ದು, 18.5 ಲಕ್ಷ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. 1.85 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಇದನ್ನೂ ಓದಿ: Lok Sabha Election 2024: ಮತ ಹಕ್ಕು ಚಲಾಯಿಸಿದ ಪ್ರಧಾನಿ ಮೋದಿ; ಮತದಾನ ಮಾಡಲು ಕನ್ನಡದಲ್ಲೇ ಕರೆ

Continue Reading

ದೇಶ

Narendra Modi: ಮತದಾನದ ಬಳಿಕ ಮಗುವನ್ನು ಎತ್ತಿ ಆಡಿಸಿದ ಪ್ರಧಾನಿ ಮೋದಿ; ವಿಡಿಯೋ ನೋಡಿ

Narendra Modi: ಪ್ರಧಾನಿಯನ್ನು ಕಾಣಲೆಂದು ನೆರೆದಿದ್ದ ಜನರ ಬಳಿ ತೆರಳಿದ್ದ ಪ್ರಧಾನಿಯನ್ನು ಮಹಿಳೆಯ ಕೈಯಲ್ಲಿದ್ದ ಮಗುವೊಂದು ಸೆಳೆದಿತ್ತು. ಮಗುವಿನತ್ತ ಹೋದ ಪ್ರಧಾನಿ ಅದನ್ನು ಎತ್ತಿಕೊಂಡು ಮುದ್ದಾಡಿದರು. ಕೆಲ ಹೊತ್ತು ಮಗುವಿನ ಜೊತೆ ಆಟ ಆಡಿದರು. ಮಗುವಿನ ತಾಯಿಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಅಲ್ಲಿ ನೆರೆದಿದ್ದ ಜನ ಮೋದಿ, ಮೋದಿ ಎಂದು ಹರ್ಷೋದ್ಘಾರ ಹಾಕಿದ್ದರು. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

VISTARANEWS.COM


on

Narendra Modi
Koo

ಅಹ್ಮದಾಬಾದ್‌: ದೇಶಾದ್ಯಂತ ಲೋಕಸಭೆ ಚುನಾವಣೆ(Lok Sabha Election 2024)ಯ ಮೂರನೇ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ(Narendra Modi), ಗೃಹಸಚಿವ ಅಮಿತ್‌ ಶಾ(Amit shah) ಸೇರಿದಂತೆ ಅನೇಕರು ಬೆಳ್ಳಂಬೆಳಗ್ಗೆ ತಮ್ಮ ಮತ ಹಕ್ಕನ್ನು ಚಲಾಯಿಸಿದ್ದಾರೆ. ಗುಜರಾತ್‌ನ ಅಹಮದಾಬಾದ್‌ನ ನಿಶಾನ್‌ ಹೈಯರ್‌ ಸೆಕಂಡರಿ ಶಾಲೆ (Nishan Higher Secondary School)ಯ ಮತದಾನ ಕೇಂದ್ರದಲ್ಲಿ ಬೆಳಗ್ಗೆ 7.45ರ ಸುಮಾರಿಗೆ ತಮ್ಮ ಹಕ್ಕು ಚಲಾಯಿಸಿದ ಪ್ರಧಾನಿ ಮೋದಿಯನ್ನು ನೋಡಲೆಂದು ಸಹಸ್ರಾರು ಸಂಖ್ಯೆಯಲ್ಲಿ ಜನ ನೆರೆದಿದ್ದರು. ಈ ವೇಳೆ ಅಲ್ಲೇ ಇದ್ದ ಮಹಿಳೆಯ ಮಗುವೊಂದನ್ನು ಎತ್ತಿಕೊಂಡ ಪ್ರಧಾನಿ ಮುದ್ದಾಡಿದ್ದಾರೆ.

ಪ್ರಧಾನಿ ಮೋದಿಗೆ ಮಕ್ಕಳ ಜೊತೆಗೆ ಅವಿನಾಭಾವ ಸಂಬಂಧವಿದೆ. ಅನೇಕ ಬಾರಿ ಮಕ್ಕಳೊಂದಿಗೆ ತಾವೊಬ್ಬ ಪ್ರಧಾನಿ ಎಂಬುದನ್ನೂ ಮರೆತು ಅತ್ಯಂತ ಪ್ರೀತಿಯಿಂದ ಮಕ್ಕಳ ಜೊತೆ ಬೆರೆಯುವುದನ್ನು ಆಗಾಗ ಕಾಣಬಹುದಾಗಿದೆ. ಕಳೆದ ಬಾರಿ ಕಲಬುರಗಿಯಲ್ಲಿ ಪ್ರಚಾರ ಕಾರ್ಯಕ್ರಮಕ್ಕೆಂದು ಆಗಮಿಸಿದ್ದ ಅವರನ್ನು ಕಾಣಲೆಂದೇ ಬಂದಿದ್ದ ಮಕ್ಕಳ ಜೊತೆ ಕೆಲ ಸಮಯ ಕಳೆದು, ಮಕ್ಕಳಿಗೆ ಕೆಲವೊಂದು ಬೆರಳಿಗೆ ಮಾಡುವ ವ್ಯಾಯಾಮಗಳನ್ನು ತೋರಿಸಿಕೊಟ್ಟಿದ್ದರು. ಇದೀಗ ಮತ್ತೆ ಅಂತಹದ್ದೇ ವಿಶೇಷ ಕ್ಷಣದೊಂದಿಗೆ ಪ್ರಧಾನಿ ಮೋದಿ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ:Road rage: BMW ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದು ಪುಂಡರ ಅಟ್ಟಹಾಸ, ಇಲ್ಲಿದೆ ವಿಡಿಯೋ

ಪ್ರಧಾನಿಯನ್ನು ಕಾಣಲೆಂದು ನೆರೆದಿದ್ದ ಜನರ ಬಳಿ ತೆರಳಿದ್ದ ಪ್ರಧಾನಿಯನ್ನು ಮಹಿಳೆಯ ಕೈಯಲ್ಲಿದ್ದ ಮಗುವೊಂದು ಸೆಳೆದಿತ್ತು. ಮಗುವಿನತ್ತ ಹೋದ ಪ್ರಧಾನಿ ಅದನ್ನು ಎತ್ತಿಕೊಂಡು ಮುದ್ದಾಡಿದರು. ಕೆಲ ಹೊತ್ತು ಮಗುವಿನ ಜೊತೆ ಆಟ ಆಡಿದರು. ಮಗುವಿನ ತಾಯಿಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಅಲ್ಲಿ ನೆರೆದಿದ್ದ ಜನ ಮೋದಿ, ಮೋದಿ ಎಂದು ಹರ್ಷೋದ್ಘಾರ ಹಾಕಿದ್ದರು. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಮತದಾನ ಕೇಂದ್ರದ ಬಳಿಗೆ ಪ್ರಧಾನಿ ಸುಮಾರು 7.30ರ ಹೊತ್ತಿಗೆ ಆಗಮಿಸಿದ್ದರು. ಅಮಿತ್‌ ಶಾ ಪ್ರಧಾನಿಯನ್ನು ಸ್ವಾಗತಿಸಿದರು. ಬಳಿಕ ಇಬ್ಬರು ನಾಯಕರು ಸುತ್ತ ನೆರೆದಿದ್ದ ಸಾವರ್ಜನಿಕರತ್ತ ಕೈ ಬೀಸುತ್ತ ಮತಗಟ್ಟೆಗೆ ತೆರಳಿದರು. ರಸ್ತೆಯುದ್ದಕ್ಕೂ ನಿಂತಿದ್ದ ಜನರು ಮೋದಿ ಪರ ಘೋಷಣೆ ಕೂಗಿದರು. ಈ ಮಧ್ಯೆ ಅಭಿಮಾನಿಗಳಿಗೆ ಮೋದಿ ಆಟೋಗ್ರಾಫ್‌ ನೀಡುವುದನ್ನೂ ಮರೆಯಲಿಲ್ಲ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಮೋದಿ ಅವರು, ಈ ಮೂರನೇ ಹಂತದಲ್ಲಿ ಎಲ್ಲರೂ ಹಕ್ಕು ಚಲಾಯಿಸುವ ಮೂಲಕ ದಾಖಲೆ ಪ್ರಮಾಣದ ಮತದಾನಕ್ಕೆ ಕಾರಣವಾಗಬೇಕು ಎಂದು ಕರೆ ನೀಡಿದ್ದಾರೆ. ʼʼಚುನಾವಣೆಯ ಇಂದಿನ ಹಂತದಲ್ಲಿ ಮತದಾನ ಮಾಡುವ ಎಲ್ಲರೂ ದಾಖಲೆ ಸಂಖ್ಯೆಯಲ್ಲಿ ತಮ್ಮ ಹಕ್ಕು ಚಲಾಯಿಸಬೇಕೆಂದು ಮನವಿ ಮಾಡುತ್ತೇನೆ. ಮತದಾರರ ಸಕ್ರಿಯ ಭಾಗವಹಿಸುವಿಕೆಯು ಖಂಡಿತವಾಗಿ ಚುನಾವಣೆಯನ್ನು ಮತ್ತಷ್ಟು ರೋಮಾಂಚಕಗೊಳಿಸುತ್ತದೆ” ಎಂದು ಅವರು ಬರೆದುಕೊಂಡಿದ್ದಾರೆ.

Continue Reading

Lok Sabha Election 2024

Lok Sabha Election 2024: ಮತ ಹಕ್ಕು ಚಲಾಯಿಸಿದ ಪ್ರಧಾನಿ ಮೋದಿ; ಮತದಾನ ಮಾಡಲು ಕನ್ನಡದಲ್ಲೇ ಕರೆ

Lok Sabha Election 2024: ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಆರಂಭವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುಜರಾತ್‌ನ ಅಹಮದಾಬಾದ್‌ನ ನಿಶಾನ್‌ ಹೈಯರ್‌ ಸೆಕಂಡರಿ ಶಾಲೆಯ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದ್ದಾರೆ. ಸುತ್ತ ನೆರೆದಿದ್ದ ಸಾವಿರಾರು ಜನರತ್ತ ಕೈ ಬೀಸುತ್ತ ಮತದಾನ ಕೇಂದ್ರಕ್ಕೆ ತೆರಳಿ ವೋಟು ಮಾಡಿದರು. ರಸ್ತೆಯುದ್ದಕ್ಕೂ ನಿಂತಿದ್ದ ಜನರು ಮೋದಿ ಪರ ಘೋಷಣೆ ಕೂಗಿದರು.

VISTARANEWS.COM


on

Lok Sabha Election 2024
Koo

ಗಾಂಧಿನಗರ: ಲೋಕಸಭಾ ಚುನಾವಣೆ (Lok Sabha Election 2024)ಯ ಮೂರನೇ ಹಂತದ ಮತದಾನ ಆರಂಭವಾಗಿದೆ. 93 ಕ್ಷೇತ್ರಗಳಲ್ಲಿ ಮತದಾರರು ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. ಅದರಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಗುಜರಾತ್‌ನ ಅಹಮದಾಬಾದ್‌ನ ನಿಶಾನ್‌ ಹೈಯರ್‌ ಸೆಕಂಡರಿ ಶಾಲೆ (Nishan Higher Secondary School)ಯ ಮತದಾನ ಕೇಂದ್ರದಲ್ಲಿ ಬೆಳಗ್ಗೆ 7.45ರ ಸುಮಾರಿಗೆ ತಮ್ಮ ಹಕ್ಕು ಚಲಾಯಿಸಿದರು. ಕೇಂದ್ರ ಸಚಿವ ಅಮಿತ್‌ ಶಾ (Amit Shah) ಅವರೊಂದಿಗೆ ಆಗಮಿಸಿದ ಅವರು ಸುತ್ತ ನೆರೆದಿದ್ದ ಸಾವಿರಾರು ಜನರತ್ತ ಕೈ ಬೀಸುತ್ತ ಮತದಾನ ಕೇಂದ್ರಕ್ಕೆ ತೆರಳಿ ವೋಟು ಮಾಡಿದರು. ಈ ಮಧ್ಯೆ ಎಲ್ಲರೂ ಮತದಾನ ಮಾಡುವಂತೆ ಅವರು ಕನ್ನಡದಲ್ಲೇ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಮತದಾನ ಕೇಂದ್ರದ ಬಳಿಗೆ ಪ್ರಧಾನಿ ಸುಮಾರು 7.30ರ ಹೊತ್ತಿಗೆ ಆಗಮಿಸಿದ್ದರು. ಅಮಿತ್‌ ಶಾ ಪ್ರಧಾನಿಯನ್ನು ಸ್ವಾಗತಿಸಿದರು. ಬಳಿಕ ಇಬ್ಬರು ನಾಯಕರು ಸುತ್ತ ನೆರೆದಿದ್ದ ಸಾವರ್ಜನಿಕರತ್ತ ಕೈ ಬೀಸುತ್ತ ಮತಗಟ್ಟೆಗೆ ತೆರಳಿದರು. ರಸ್ತೆಯುದ್ದಕ್ಕೂ ನಿಂತಿದ್ದ ಜನರು ಮೋದಿ ಪರ ಘೋಷಣೆ ಕೂಗಿದರು. ಈ ಮಧ್ಯೆ ಅಭಿಮಾನಿಗಳಿಗೆ ಮೋದಿ ಆಟೋಗ್ರಾಫ್‌ ನೀಡುವುದನ್ನೂ ಮರೆಯಲಿಲ್ಲ. ಅಮಿತ್‌ ಶಾ ಸ್ಪರ್ಧಿಸುತ್ತಿರುವ ಗಾಂಧಿನಗರದಲ್ಲಿಯೂ ಇಂದು ಮತದಾನ ನಡೆಯಲಿದ್ದು, ಕೆಲ ಹೊತ್ತಿನಲ್ಲೇ ಅವರು ಹಕ್ಕು ಚಲಾಯಿಸಲಿದ್ದಾರೆ.

ಹಕ್ಕು ಚಲಾಯಿಸಿದ ಗಣ್ಯರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಬಾರಾಮತಿಯಲ್ಲಿ ಮತ ಚಲಾಯಿಸಿದರು. ಅಜಿತ್ ಅವರ ಪತ್ನಿ ಸುನೇತ್ರಾ ಮತ್ತು ತಾಯಿ ಕೂಡ ಬಾರಾಮತಿಯ ಕಟೇವಾಡಿ ಮತಗಟ್ಟೆಯಲ್ಲಿ ಬೆಳಿಗ್ಗೆ ಮತದಾನ ಮಾಡಿದರು.

ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಲು ಕರೆ

ಮಂಗಳವಾರ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಮೋದಿ ಅವರು, ಈ ಮೂರನೇ ಹಂತದಲ್ಲಿ ಎಲ್ಲರೂ ಹಕ್ಕು ಚಲಾಯಿಸುವ ಮೂಲಕ ದಾಖಲೆ ಪ್ರಮಾಣದ ಮತದಾನಕ್ಕೆ ಕಾರಣವಾಗಬೇಕು ಎಂದು ಕರೆ ನೀಡಿದ್ದಾರೆ. ʼʼಚುನಾವಣೆಯ ಇಂದಿನ ಹಂತದಲ್ಲಿ ಮತದಾನ ಮಾಡುವ ಎಲ್ಲರೂ ದಾಖಲೆ ಸಂಖ್ಯೆಯಲ್ಲಿ ತಮ್ಮ ಹಕ್ಕು ಚಲಾಯಿಸಬೇಕೆಂದು ಮನವಿ ಮಾಡುತ್ತೇನೆ. ಮತದಾರರ ಸಕ್ರಿಯ ಭಾಗವಹಿಸುವಿಕೆಯು ಖಂಡಿತವಾಗಿ ಚುನಾವಣೆಯನ್ನು ಮತ್ತಷ್ಟು ರೋಮಾಂಚಕಗೊಳಿಸುತ್ತದೆ” ಎಂದು ಅವರು ಬರೆದುಕೊಂಡಿದ್ದಾರೆ.

ಕರ್ನಾಟಕ ಸೇರಿ ಒಟ್ಟು 93 ಕ್ಷೇತ್ರಗಳಲ್ಲಿ ಮೂರನೇ ಹಂತದ ಮತದಾನ ನಡೆಯುತ್ತಿದೆ. ಇದರಲ್ಲಿ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೂ ಸೇರಿವೆ. ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: Lok Sabha Election 2024: ಮೂರನೇ ಹಂತದ ಮತದಾನ ಆರಂಭ; ಇಂದು ವೋಟು ಮಾಡಲಿದ್ದಾರೆ ಮೋದಿ, ಅಮಿತ್‌ ಶಾ

ಮತದಾನ ನಡೆಯುವ ರಾಜ್ಯಗಳು

ನಗರ್ ಹವೇಲಿ ಮತ್ತು ದಮನ್ ಮತ್ತು ದಿಯು (2), ಅಸ್ಸಾಂ (4), ಬಿಹಾರ (5), ಛತ್ತೀಸ್‌ಗಢ (7), ದಾದ್ರಾ, ಗೋವಾ (2), ಗುಜರಾತ್ (25), ಕರ್ನಾಟಕ (14), ಮಹಾರಾಷ್ಟ್ರ (11), ಮಧ್ಯಪ್ರದೇಶ (8), ಉತ್ತರ ಪ್ರದೇಶ (10) ಮತ್ತು ಪಶ್ಚಿಮ ಬಂಗಾಳ (4)ಗಳಲ್ಲಿ ಮತದಾನ ನಡೆಯುತ್ತಿದೆ. ಸೂರತ್ ಕ್ಷೇತ್ರದಲ್ಲಿ ಬಿಜೆಪಿ ಈಗಾಗಲೇ ಅವಿರೋಧವಾಗಿ ಗೆಲುವು ಸಾಧಿಸಿದೆ. ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್‌-ರಾಜೌರಿ ಲೋಕಸಭಾ ಕ್ಷೇತ್ರಕ್ಕೂ ಇಂದೇ ಮತದಾನ ನಿಗದಿಯಾಗಿತ್ತು. ಆದರೆ ಪ್ರತಿಕೂಲ ಹವಾಮಾನ ಕಾರಣದಿಂದ ಚುನಾವಣಾ ಆಯೋಗ ಇತ್ತೀಚೆಗೆ ಇದನ್ನು ಮೇ 25ಕ್ಕೆ ಮುಂದೂಡಿತ್ತು.

Continue Reading

ದೇಶ

Lok Sabha Elections 2024: ಗೂಗಲ್‌ ಡೂಡಲ್‌ನಲ್ಲೂ ಪ್ರಜಾಪ್ರಭುತ್ವ ಹಬ್ಬದ ಸಂಭ್ರಮ

Lok Sabha Elections 2024:ಗೂಗಲ್‌ ಇಂದು ಹೊಸ ಡೂಡಲ್‌ ಅನ್ನು ಪ್ರಕಟಿಸಿದ್ದು, ತನ್ನ ಲೋಗೋದಲ್ಲಿ ಮತದಾನವನ್ನು ಸಾಂಕೇತಿಕವಾಗಿ ತೋರಿಸುವ ಶಾಯಿ ಇರುವ ಬೆರಳಿನ ಚಿತ್ರವನ್ನು ಇಟ್ಟಿದೆ. ಆ ಲೋಗೋವನ್ನು ಕ್ಲಿಕ್‌ ಮಾಡಿದರೆ ಗೂಗಲ್‌ ಬಳಕೆದಾರರಿಗೆ ಚುನಾವಣೆ, ಮತದಾನಕ್ಕೆ ಸಂಬಂಧಿಸಿದ ಸುದ್ದಿಗಳು ಲಭ್ಯವಾಗಲಿವೆ.

VISTARANEWS.COM


on

Google doodle
Koo

ನವದೆಹಲಿ: ದೇಶಾದ್ಯಂತ ಇಂದು ಲೋಕಸಭೆ ಚುನಾವಣೆ(Lok Sabha Elections 2024)ಯ ಮೂರನೇ ಹಂತ ಮತದಾನ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದೆ. ಮತದಾರರು ಬಹಳಷ್ಟು ಉತ್ಸಾಹದಿಂದಲೇ ಮತ ಚಲಾಯಿಸುತ್ತಿದ್ದರೆ, ಇತ್ತ ಈ ಪ್ರಜಾಪ್ರಭುತ್ವದ ಹಬ್ಬವನ್ನು ಗೂಗಲ್‌(Google) ಕೂಡ ಸಂಭ್ರಮಿಸುತ್ತಿದೆ. ಗೂಗಲ್‌ ಇಂದು ಹೊಸ ಡೂಡಲ್‌(Google Doodle) ಅನ್ನು ಪ್ರಕಟಿಸಿದ್ದು, ತನ್ನ ಲೋಗೋದಲ್ಲಿ ಮತದಾನವನ್ನು ಸಾಂಕೇತಿಕವಾಗಿ ತೋರಿಸುವ ಶಾಯಿ ಇರುವ ಬೆರಳಿನ ಚಿತ್ರವನ್ನು ಇಟ್ಟಿದೆ. ಆ ಲೋಗೋವನ್ನು ಕ್ಲಿಕ್‌ ಮಾಡಿದರೆ ಗೂಗಲ್‌ ಬಳಕೆದಾರರಿಗೆ ಚುನಾವಣೆ, ಮತದಾನಕ್ಕೆ ಸಂಬಂಧಿಸಿದ ಸುದ್ದಿಗಳು ಲಭ್ಯವಾಗಲಿವೆ.

ಏನಿದು ಗೂಗಲ್‌ ಡೂಡಲ್‌?

ಗೂಗಲ್‌ ಲೋಗೋವನ್ನು ತಾತ್ಕಾಲಿಕವಾಗಿ ಬದಲಾಯಿಸುವುದನ್ನು ಗೂಗಲ್‌ ಡೂಡಲ್‌ ಎಂದು ಕರೆಯಲಾಗುತ್ತದೆ. ಇದು ಜಾಗತಿಕ ಮತ್ತು ಸ್ಥಳೀಯ ರಜಾದಿನಗಳು, ಪ್ರಮುಖ ದಿನಾಚರಣೆಗಳು, ಸಮಾಜಕ್ಕೆ ಕೊಡುಗೆ ನೀಡಿರುವ ಪ್ರಸಿದ್ದ ವ್ಯಕ್ತಿಗಳುಗೆ ಗೌರವ ನೀಡುವ ಉದ್ದೇಶದಿಂದ ಗೂಗಲ್‌ ಈ ಡೂಡಲ್‌ ಅನ್ನು ಪರಿಚಯಿಸಿದೆ. ಆಯಾಯ ದಿನದಂದು ಲೋಗೋವನ್ನು ಬದಲಾಯಿಸಲಾಗುತ್ತದೆ. ಅದನ್ನು ಕ್ಲಿಕ್‌ ಮಾಡಿದಾಗ ಅದಕ್ಕೆ ಸಂಬಂಧಿಸಿದ ಮಾಹಿತಿ ಲಭ್ಯವಾಗಲಿದೆ.

ಕರ್ನಾಟಕ ಸೇರಿ ದೇಶದ ವಿವಿಧ ಕಡೆ ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಆರಂಭವಾಗಿದೆ. ದೇಶದ 11 ರಾಜ್ಯ ಮತ್ತು ಕೇಂದ್ರಾಡಳಿತದ ಪ್ರದೇಶಗಳ 93 ಕ್ಷೇತ್ರಗಳಲ್ಲಿನ ಮತದಾನ ನಡೆಯುತ್ತಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆದ್ದಿದ್ದ ಆಡಳಿತಾರೂಢ ಬಿಜೆಪಿಗೆ ಈ ಹಂತ ಪ್ರಮುಖ ಎನಿಸಿಕೊಂಡಿದೆ. ಮೂರನೇ ಹಂತದಲ್ಲಿ ಸುಮಾರು 120 ಮಹಿಳೆಯರು ಸೇರಿದಂತೆ 1,300ಕ್ಕೂ ಹೆಚ್ಚು ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕೇಂದ್ರ ಸಚಿವರಾದ ಅಮಿತ್ ಶಾ, ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಮನ್ಸುಖ್ ಮಾಂಡವಿಯಾ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಗಳಾದ ಶಿವರಾಜ್ ಸಿಂಗ್ ಚೌಹಾಣ್ (ವಿದಿಶಾ) ಮತ್ತು ದಿಗ್ವಿಜಯ್ ಸಿಂಗ್ (ರಾಜ್‌ಗಢ) ಅವರ ಭವಿಷ್ಯ ಇಂದೇ ನಿರ್ಧಾರವಾಗಲಿದೆ. ಜತೆಗೆ ಪ್ರಮುಖ ಬಿಜೆಪಿ ನಾಯಕರಾದ ಪುರುಷೋತ್ತಮ್ ರೂಪಾಲಾ (ರಾಜ್‌ಕೋಟ್‌), ಪ್ರಹ್ಲಾದ್ ಜೋಶಿ (ಧಾರವಾಡ) ಮತ್ತು ಎಸ್‌.ಪಿ. ಸಿಂಗ್ ಬಘೇಲ್ (ಆಗ್ರಾ) ಅವರಿಗೂ ಈ ಹಂತ ನಿರ್ಣಾಯಕವಾಗಲಿದೆ.

ಗುಜರಾತ್‌ನಲ್ಲಿ ಒಟ್ಟು 26 ಕ್ಷೇತ್ರಗಳಲ್ಲಿ ಈ ಪೈಕಿ ಒಂದು ಕಡೆ ಈಗಾಗಲೇ ಬಿಜೆಪಿ ಅವಿರೋಧವಾಗಿ ಆಯ್ಕೆಯಾಗಿದೆ. ಇನ್ನು ಉಳಿದ 25, ಮಹಾರಾಷ್ಟ್ರದ 11, ಉತ್ತರ ಪ್ರದೇಶದ 10, ಕರ್ನಾಟಕದ 28 ಸ್ಥಾನಗಳ ಪೈಕಿ 14, ಛತ್ತೀಸ್‌ಗಢದ 7, ಬಿಹಾರದ 5, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ತಲಾ 4 ಮತ್ತು ಗೋವಾದ ಎಲ್ಲ 2, ಮಧ್ಯಪ್ರದೇಶದ 9 ಸ್ಥಾನಗಳಿಗೆ ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ. ಜತೆಗೆ ಕೇಂದ್ರಾಡಳಿತ ಪ್ರದೇಶಗಳಾದ ದಾದ್ರಾ ಮತ್ತು ನಗರ್ ಹವೇಲಿ, ದಮನ್ ಮತ್ತು ದಿಯು (2 ಸ್ಥಾನಗಳು)ಗಳಲ್ಲಿಯೂ ಇಂದು ವೋಟಿಂಗ್‌ ನಡೆಯಲಿದೆ. ಪಶ್ಚಿಮ ಬಂಗಾಳದಲ್ಲಿ ನಾಲ್ಕು ಮುಸ್ಲಿಂ ಬಹುಸಂಖ್ಯಾತ ಕ್ಷೇತ್ರಗಳಿಗೆ ಮಂಗಳವಾರ ಮತದಾನ ನಡೆಯಲಿದ್ದು, ಎಡ ಪಕ್ಷ-ಕಾಂಗ್ರೆಸ್ ಒಕ್ಕೂಟ ಮತ್ತು ಟಿಎಂಸಿ ನಡುವೆ ಅಲ್ಪಸಂಖ್ಯಾತ ಮತಗಳ ವಿಭಜನೆ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯ ಪ್ರಚಾರ ಫಲಿತಾಂಶವನ್ನು ನಿರ್ಣಯಿಸುವ ಸಾಧ್ಯತೆ ಇದೆ.

ಇದನ್ನೂ ಓದಿ:http:Lok Sabha Election 2024: ಮುಂಜಾನೆಯಿಂದಲೇ ಮತದಾನ ಬಿರುಸು, ಎಲ್ಲೆಡೆ ಶಾಂತಿಯುತ

ಉತ್ತರ ಪ್ರದೇಶದ 10 ಲೋಕಸಭಾ ಕ್ಷೇತ್ರಗಳಿಗೆ ಮೂರನೇ ಹಂತದಲ್ಲಿ ಮತದಾನ ನಡೆಯಲಿದ್ದು, ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಕುಟುಂಬ ಎಲ್ಲರ ಗಮನ ಸೆಳೆದಿದೆ. ಡಿಂಪಲ್ ಯಾದವ್ ಅವರು ತಮ್ಮ ಮಾವ ಮುಲಾಯಂ ಸಿಂಗ್ ಯಾದವ್ ಅವರ ನಿಧನದ ನಂತರ ನಡೆದ ಉಪಚುನಾವಣೆಯಲ್ಲಿ ಗೆದ್ದ ಮೈನ್ಪುರಿ ಲೋಕಸಭಾ ಸ್ಥಾನವನ್ನು ಉಳಿಸಿಕೊಳ್ಳುವ ಗುರಿ ಹೊಂದಿದ್ದಾರೆ. ಸಮಾಜವಾದಿ ಪಕ್ಷದ ರಾಷ್ಟ್ರೀಯ ಪ್ರಧಾನ ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವ್ ಅವರ ಪುತ್ರ ಅಕ್ಷಯ ಯಾದವ್ ಅವರು ಗೆದ್ದಿದ್ದ ಫಿರೋಜಾಬಾದ್ ಸ್ಥಾನವನ್ನು ಮರಳಿ ಪಡೆಯಲು ಪ್ರಯತ್ನಿಸಲಿದ್ದಾರೆ.

Continue Reading
Advertisement
Job Alert
ಉದ್ಯೋಗ18 mins ago

Job Alert: ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ

LIQUID NITROGEN
ಬೆಂಗಳೂರು20 mins ago

Liquid Nitrogen : ಕಾಟನ್ ಕ್ಯಾಂಡಿ ಬಳಿಕ ಕರ್ನಾಟಕದಲ್ಲಿ ಲಿಕ್ವಿಡ್ ನೈಟ್ರೋಜನ್ ಬಳಕೆ ನಿಷೇಧ

IPL 2024
ಕ್ರೀಡೆ24 mins ago

IPL 2024: ಬಸ್‌ ಕಂಡಕ್ಟರ್‌ಗಳಿಗೆ ವಿಶೇಷ ಉಡುಗೊರೆ ನೀಡಿದ ಚೆನ್ನೈ ಸೂಪರ್​ ಕಿಂಗ್ಸ್

prajwal ravanna case dk shivakumar poster
ಪ್ರಮುಖ ಸುದ್ದಿ39 mins ago

Prajwal Revanna Case: ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಪೋಸ್ಟರ್ ವಾರ್‌

Naxal activities
ದೇಶ57 mins ago

Naxal activities: 6 ಕುಕ್ಕರ್‌ ಬಾಂಬ್‌, IED ಸ್ಫೋಟಕಗಳು ಪತ್ತೆ; ತಪ್ಪಿದ ಭಾರೀ ನಕ್ಸಲ್‌ ಅಟ್ಯಾಕ್‌

Rohit Sharma
ಕ್ರೀಡೆ1 hour ago

Rohit Sharma: ರೋಹಿತ್ ಶರ್ಮ​ ಕಣ್ಣೀರಿಗೆ ಅಸಲಿ ಕಾರಣ ಇದಂತೆ!

lok sabha election 2024 voting second phase
ಪ್ರಮುಖ ಸುದ್ದಿ1 hour ago

Lok Sabha Election 2024: ಮೊದಲೆರಡು ಗಂಟೆಗಳ ಮತದಾನ ನಿರೀಕ್ಷೆಗಿಂತ ಕಡಿಮೆ, ಇನ್ನೂ ಇಳಿಯುವ ಆತಂಕ; ಎಲ್ಲಿ ಎಷ್ಟು?

T20 World Cup 2024
ಕ್ರೀಡೆ2 hours ago

T20 World Cup 2024: ಮಿನಿ ವಿಶ್ವಕಪ್​ ಸಮರಕ್ಕೆ ಡ್ರಾಪ್ -ಇನ್ ಪಿಚ್ ಅಳವಡಿಕೆ ಕಾರ್ಯ ಪೂರ್ಣ; ವಿಡಿಯೊ ವೈರಲ್​

Ramana Avatara Movie
ಸಿನಿಮಾ2 hours ago

Ramana Avatara Movie: ಬಂಪರ್ ಆಫರ್; ಕೇವಲ 99 ರೂ.ಗೆ ಸಿಗಲಿದೆ ‘ರಾಮನ ಅವತಾರ’ ಸಿನಿಮಾ ಟಿಕೆಟ್

Narendra Modi
ದೇಶ2 hours ago

Narendra Modi: ಮತದಾನದ ಬಳಿಕ ಮಗುವನ್ನು ಎತ್ತಿ ಆಡಿಸಿದ ಪ್ರಧಾನಿ ಮೋದಿ; ವಿಡಿಯೋ ನೋಡಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ17 hours ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ17 hours ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ17 hours ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ2 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ2 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ2 days ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ3 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ4 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

ಟ್ರೆಂಡಿಂಗ್‌