Money Guide: 20 ವರ್ಷಗಳ ಮನೆ ಸಾಲವನ್ನು 10 ವರ್ಷಗಳಲ್ಲೇ ತೀರಿಸಬಹುದು! ಹೀಗೆ ಮಾಡಿ... - Vistara News

ಮನಿ-ಗೈಡ್

Money Guide: 20 ವರ್ಷಗಳ ಮನೆ ಸಾಲವನ್ನು 10 ವರ್ಷಗಳಲ್ಲೇ ತೀರಿಸಬಹುದು! ಹೀಗೆ ಮಾಡಿ…

Money Guide: ಇತ್ತೀಚೆಗೆ ಗೃಹಸಾಲದ ಮೇಲಿನ ಬಡ್ಡಿದರ ಹೆಚ್ಚಾಗಿದೆ. ಇದರಿಂದಾಗಿ ನಾವು ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ. ಆದರೆ ಕಡಿಮೆ ಅವಧಿಯಲ್ಲಿ ಸಾಲ ಪಾವತಿಸಿದರೆ ನಮಗೆ ಲಾಭ ಅಧಿಕ. ಅದು ಹೇಗೆ ಎನ್ನುವುದರ ವಿವರ ಇಲ್ಲಿದೆ.

VISTARANEWS.COM


on

home loan
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ʼಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡುʼ ಎನ್ನುವ ಮಾತಿದೆ. ಅಂದರೆ ಈ ಎರಡೂ ಕೆಲಸ ಮಾಡುವುದು ಎಷ್ಟು ಕಷ್ಟ ಎನ್ನುವುದನ್ನು ಈ ಮಾತು ಸೂಚ್ಯವಾಗಿ ತಿಳಿಸುತ್ತದೆ. ಪ್ರಸ್ತುತ ಮನೆ ಕಟ್ಟಬೇಕಾದರೆ ಬ್ಯಾಂಕ್‌ನಲ್ಲಿ ಸಾಲ ಮಾಡಲೇಬೇಕು ಎನ್ನುವ ಅನಿವಾರ್ಯ ಪರಿಸ್ಥಿತಿಗೆ ಬಂದಿದ್ದೇವೆ. ಹಾಗಾದರೆ ಮನೆಸಾಲವನ್ನು ಬೇಗ ಮುಗಿಸುವುದು ಹೇಗೆ? ಎನ್ನುವುದನ್ನು ಮನಿಗೈಡ್‌ (Money Guide) ತಿಳಿಸಲಿದೆ. ನೀವು ಮನೆ ಕಟ್ಟಲು ಬ್ಯಾಂಕ್‌ನಿಂದ 20 ವರ್ಷಕ್ಕೆ 50 ಲಕ್ಷ ರೂ. ಸಾಲ ಪಡೆದಿದ್ದೀರಿ ಎಂದಿಟ್ಟುಕೊಳ್ಳೋಣ. ಅದನ್ನು 10 ವರ್ಷಗಳಲ್ಲೇ ಮುಗಿಸುವುದು ಹೇಗೆ? ಬಡ್ಡಿಯಲ್ಲಿ ಸುಮಾರು 30 ಲಕ್ಷ ರೂ. ಉಳಿಸಿಕೊಳ್ಳುವುದು ಹೇಗೆ? ಎನ್ನುವುದನ್ನು ವಿಸ್ತಾರ ನ್ಯೂಸ್‌ನ ಎಕ್ಸಿಕ್ಯುಟಿವ್‌ ಎಡಿಟರ್‌ ಶರತ್‌ ಎಂ.ಎಸ್‌. ವಿವರಿಸುತ್ತಾರೆ.

ಹೋಮ್‌ ಲೋನ್‌ ಹೇಗೆ ಕೆಲಸ ಮಾಡುತ್ತದೆ?

ಆರಂಭಿಕ ದಿನಗಳಲ್ಲಿ ಹೋಮ್‌ ಲೋನ್‌ಗೆ ಬಡ್ಡಿ ಅತ್ಯಧಿಕ ವಿಧಿಸಲಾಗುತ್ತದೆ. ನಾವು ಪ್ರತಿ ತಿಂಗಳು ಕಟ್ಟುವ ದುಡ್ಡಿನಲ್ಲಿ ಶೇ. 90ರಿಂದ 95ರಷ್ಟು ಬಡ್ಡಿಗೇ ಹೋಗುತ್ತದೆ. ಸಾಮಾನ್ಯವಾಗಿ ಮೊದಲ 10 ವರ್ಷಗಳ ಕಾಲ ನಮ್ಮ ಶೇ. 75-95ರಷ್ಟು ಹಣ ಬಡ್ಡಿಗೆಂದು ಹೋಗುತ್ತದೆ. ಆದ್ದರಿಂದ ಗೃಹಸಾಲವನ್ನು ಆದಷ್ಟು ಬೇಗ ಮುಗಿಸಲು ಯೋಜನೆ ರೂಪಿಸಬೇಕು. ಕೋವಿಡ್‌ ಮೊದಲು ದೇಶದಲ್ಲಿ ಗೃಹಸಾಲದ ಬಡ್ಡಿ ದರ ಸುಮಾರು 6.7% ಆಸುಪಾಸಿನಲ್ಲಿತ್ತು. ಇದೀಗ ಅದು 9-9.5%ಕ್ಕೆ ಬಂದು ನಿಂತಿದೆ. ಉಹಾಹರಣೆಗೆ 2020ರಲ್ಲಿ ನೀವು 6.7% ಬಡ್ಡಿದರದಲ್ಲಿ 20 ವರ್ಷಕ್ಕೆ 50 ಲಕ್ಷ ರೂ. ಸಾಲ ತೆಗೆದುಕೊಂಡಿದ್ದರೆ ಮಾಸಿಕ 37,870 ರೂ. ಪಾವತಿಸಬೇಕಾಗಿತ್ತು. ಈಗ ಅದೇ ಸಾಲಕ್ಕೆ ಮಾಸಿಕ ಕಂತು 44,976 ರೂ. ಆಗುತ್ತದೆ. ಇಎಂಐ ಲೆಕ್ಕದಲ್ಲಿ 7,000 ರೂ. ಜಾಸ್ತಿಯಾಗಿದೆ. ಅಂದರೆ ವರ್ಷಕ್ಕೆ 84,000 ರೂ., 20 ವರ್ಷಕ್ಕೆ 16 ಲಕ್ಷ ರೂ. ಅಧಿಕವಾದಂತಾಯ್ತು ಎಂದು ಶರತ್‌ ಹೇಳುತ್ತಾರೆ.

50 ಲಕ್ಷ ರೂ. ಗೃಹಸಾಲದ ಬಡ್ಡಿ ಲೆಕ್ಕಾಚಾರ

ಸಾಲದ ಮೊತ್ತ-50 ಲಕ್ಷ ರೂ., ಬಡ್ಡಿ ದರ-9%, ಸಾಲದ ಅವಧಿ-20 ವರ್ಷ, ಮಾಸಿಕ ಕಂತು-44,986 ರೂ., ಪಾವತಿಸುವ ಒಟ್ಟು ಬಡ್ಡಿ-57,96,711 ರೂ., ಪಾವತಿಸುವ ಅಸಲು-50 ಲಕ್ಷ ರೂ., ಅಸಲು ಮತ್ತು ಬಡ್ಡಿ ಸೇರಿ ಒಟ್ಟು ಪಾವತಿ-1,07,96,711 ರೂ. ಹೀಗಾಗಿ ಗೃಹಸಾಲ ನಾವು ಬೇಗ ಮುಗಿಸಿದರೆ ಲಾಭ ಅಧಿಕ. ಸಾಲ ಪಡೆದು 6 ತಿಂಗಳ ಬಳಿಕ ಹೋಮ್‌ಲೋನ್‌ ಪ್ರೀ ಪೇಮೆಂಟ್‌ ಮಾಡಬಹುದು. ಅಂದರೆ 7 ತಿಂಗಳು ಸಾಧ್ಯವಾದರೆ ನೀವು ಸಾಲದ ಎಲ್ಲ ಮೊತ್ತವನ್ನು ಒಮ್ಮಲೇ ಬೇಕಾದರೂ ತೀರಿಸಬಹುದು ಎಂದು ಶರತ್‌ ವಿವರಿಸುತ್ತಾರೆ.

1ನೇ ವರ್ಷ ಸಾಲದ ಅಸಲಿನ ಪಾಲು-93,636 ರೂ., ಸಾಲದ ಮೇಲಿನ ಬಡ್ಡಿಯ ಪಾಲು-4,46,200 ರೂ., ಒಟ್ಟು ಪಾವತಿ-5,39,836 ರೂ., ಬಾಕಿ ಇರುವ ಸಾಲದ ಮೊತ್ತ 49,06,364 ರೂ., ಪಾವತಿಯಾಗಿರುವ ಸಾಲ-1.87%
2ನೇ ವರ್ಷ ಸಾಲದ ಅಸಲಿನ ಪಾಲು-1,02,419 ರೂ., ಸಾಲದ ಮೇಲಿನ ಬಡ್ಡಿಯ ಪಾಲು-4,37,416 ರೂ., ಒಟ್ಟು ಪಾವತಿ-5,39,836 ರೂ., ಬಾಕಿ ಇರುವ ಸಾಲದ ಮೊತ್ತ 48,03,364 ರೂ., ಪಾವತಿಯಾಗಿರುವ ಸಾಲ-3.92%
2ನೇ ವರ್ಷ ಸಾಲದ ಅಸಲಿನ ಪಾಲು-1,02,419 ರೂ., ಸಾಲದ ಮೇಲಿನ ಬಡ್ಡಿಯ ಪಾಲು-4,37,416 ರೂ., ಒಟ್ಟು ಪಾವತಿ-5,39,836 ರೂ., ಬಾಕಿ ಇರುವ ಸಾಲದ ಮೊತ್ತ 48,03,364 ರೂ., ಪಾವತಿಯಾಗಿರುವ ಸಾಲ-3.92%
3ನೇ ವರ್ಷ ಸಾಲದ ಅಸಲಿನ ಪಾಲು-1,12,027 ರೂ., ಸಾಲದ ಮೇಲಿನ ಬಡ್ಡಿಯ ಪಾಲು-4,27,809 ರೂ., ಒಟ್ಟು ಪಾವತಿ-5,39,836 ರೂ., ಬಾಕಿ ಇರುವ ಸಾಲದ ಮೊತ್ತ 46,91,919 ರೂ., ಪಾವತಿಯಾಗಿರುವ ಸಾಲ-6.16%
20ನೇ ವರ್ಷ ಸಾಲದ ಅಸಲಿನ ಪಾಲು-5,14,414 ರೂ., ಸಾಲದ ಮೇಲಿನ ಬಡ್ಡಿಯ ಪಾಲು-25,421 ರೂ., ಒಟ್ಟು ಪಾವತಿ-5,39,836 ರೂ., ಬಾಕಿ ಇರುವ ಸಾಲದ ಮೊತ್ತ 0, ಪಾವತಿಯಾಗಿರುವ ಸಾಲ-100%
ಹೀಗಾಗಿ ನಿಮ್ಮ ಕೈಯಲ್ಲಿ ಯಾವಾಗೆಲ್ಲ ಹೆಚ್ಚುವರಿ ಹಣ ಇರುತ್ತೊ ಆಗೆಲ್ಲ ಸಾಲದ ಹೆಚ್ಚುವರಿ ಪಾವತಿ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಶರತ್‌ ಸಲಹೆ ನೀಡುತ್ತಾರೆ.

ಅವಧಿ ಕಡಿಮೆ ಮಾಡುವುದು ಹೇಗೆ?

ಬರುವ ಆದಾಯದಲ್ಲಿ ಸಾಲದ ಅವಧಿಯನ್ನು ಹೇಗೆ ಕಡಿಮೆ ಮಾಡಬಹುದು ಎನ್ನುವುದನ್ನು ನೋಡೋಣ. ಮೊದಲೇ ಹೇಳಿದಂತೆ ಆದಾಯ ಹೆಚ್ಚು ಬಂದಾಗ (ಬೋನಸ್‌, ಹೈಕ್‌ ಇತ್ಯಾದಿ ಕಾರಣಗಳಿಂದ) ಸಾಲ ಕಟ್ಟುವ ಮೊತ್ತವನ್ನು ಹೆಚ್ಚಿಸಿ. ಉದಾಹರಣೆಗೆ-ಸಾಲದ ಮೊತ್ತ 50 ಲಕ್ಷ ರೂ., ಸಾಲ ಪಡೆದಿರುವ ಅವಧಿ 20 ವರ್ಷ, ಮಾಸಿಕ ಕಂತು 44,986 ರೂ., ನೀವು ವಾರ್ಷಿಕವಾಗಿ 1 ಹೆಚ್ಚುವರಿ ಕಂತು ಕಟ್ಟಿದಾಗ ತಗ್ಗುವ ಬಡ್ಡಿ ದರ 13 ಲಕ್ಷ ರೂ., ಇಳಿಕೆಯಾಗುವ ಮರುಪಾವತಿ ವರ್ಷ 3 ವರ್ಷ. 2 ಕಂತು ಕಟ್ಟಿದಾಗ 21 ಲಕ್ಷ ರೂ. ಮತ್ತು 5 ವರ್ಷ ಉಳಿತಾಯವಾಗುತ್ತದೆ. ಹೀಗೆ ಹೆಚ್ಚುವರಿಯಾಗಿ ವರ್ಷಕ್ಕೆ 4 ಕಂತು ಕಟ್ಟಿದರೆ 30 ಲಕ್ಷದ 50 ಸಾವಿರ ರೂ. ಮತ್ತು 10 ವರ್ಷ ಉಳಿತಾಯವಾಗಲಿದೆ. ಅಂದರೆ 20 ವರ್ಷಗಳ ಸಾಲ 10 ವರ್ಷಗಳಲ್ಲೇ ತೀರಿದಂತಾಗುತ್ತದೆ ಎಂದು ಶರತ್‌ ತಿಳಿಸುತ್ತಾರೆ.

ಇದನ್ನೂ ಓದಿ: Money Guide: ಹೆಲ್ತ್‌ ಇನ್ಶೂರೆನ್ಸ್‌ ಕೊಳ್ಳುವಾಗ ಈ ತಪ್ಪುಗಳನ್ನು ಮಾಡಬೇಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಾಣಿಜ್ಯ

PAN Card Safety: ಪಾನ್ ಕಾರ್ಡ್ ದುರ್ಬಳಕೆಯಿಂದ ಪಾರಾಗುವುದು ಹೇಗೆ?

ಭಾರತದಲ್ಲಿ ಪಾನ್ ಕಾರ್ಡ್ ದುರ್ಬಳಕೆ ಹೆಚ್ಚಾಗುತ್ತಿದೆ. ಅದರಲ್ಲೂ ಹಿರಿಯ ನಾಗರಿಕರು, ದುರ್ಬಲರು ಈ ವಂಚನೆಗೆ ಬಲಿಯಾಗುತ್ತಿದ್ದಾರೆ. ವಂಚಕರು ಪಾನ್ (PAN Card Safety) ವಿವರಗಳನ್ನು ಹೇಗೆ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ, ವಂಚನೆಗಳನ್ನು ಹೇಗೆ ಗುರುತಿಸಬಹುದು ಮತ್ತು ಆರ್ಥಿಕ ಯೋಗಕ್ಷೇಮವನ್ನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವ ಮಾಹಿತಿ ಇಲ್ಲಿದೆ.

VISTARANEWS.COM


on

By

PAN Card Safety
Koo

ಪಾನ್ ಕಾರ್ಡ್‌ಗಳ (PAN Card Safety) ದುರುಪಯೋಗ ಭಾರತದಲ್ಲಿ (india) ಹೆಚ್ಚಾಗುತ್ತಿದೆ. ವಿಶೇಷವಾಗಿ ಹಿರಿಯ ನಾಗರಿಕರು (senior citizens), ರೈತರು (farmers), ವಿದ್ಯಾರ್ಥಿಗಳು (students) ಇದಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ನಾವು ಎಚ್ಚರಿಕೆಯಿಂದ ಇರಬೇಕಾದ ಅಗತ್ಯವಿದೆ. ಅದರಲ್ಲೂ ಪಾನ್ ಕಾರ್ಡ್ (pan card) ಬಳಕೆ, ಮಾಹಿತಿ ಹಂಚಿಕೆ ವಿಚಾರದಲ್ಲಿ ಸಾಕಷ್ಟು ಮುನ್ನೆಚ್ಚರಿಕೆಯನ್ನು ವಹಿಸಬೇಕಿದೆ.

ಪಾನ್ ಕಾರ್ಡ್ ಭಾರತದಲ್ಲಿನ ಹಣಕಾಸಿನ ವಹಿವಾಟುಗಳಿಗೆ ಪ್ರಮುಖ ದಾಖಲೆಯಾಗಿದೆ. ಹೀಗಾಗಿ ಇದನ್ನು ವಿವಿಧ ರೀತಿಯಲ್ಲಿ ದುರುಪಯೋಗಪಡಿಸಿಕೊಳ್ಳಬಹುದಾದ ಸಾಧ್ಯತೆಗಳಿವೆ. ಮುಂಬಯಿಯ ಹಿರಿಯ ನಾಗರಿಕರೊಬ್ಬರ ಪಾನ್ ವಿವರಗಳನ್ನು 1.3 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಮಾರಾಟವನ್ನು ನೋಂದಾಯಿಸಲು ಬಳಸಿದ್ದಾರೆ ಎನ್ನುವುದು ಆದಾಯ ತೆರಿಗೆ ಇಲಾಖೆಯಿಂದ ತನಿಖೆಗೆ ಬಂದ ಬಳಿಕ ಗೊತ್ತಾಗಿದೆ.

ವಂಚಕರು ಸಾಮಾನ್ಯವಾಗಿ ತಂತ್ರಜ್ಞಾನದ ಬಗ್ಗೆ ತಿಳಿದಿರುತ್ತಾರೆ. ಹೀಗಾಗಿ ಅವರು ಹೆಚ್ಚು ಜಾಗರೂಕರಾಗಿರದ ವ್ಯಕ್ತಿಗಳನ್ನು ಗುರಿಯಾಗಿಸುತ್ತಾರೆ. ಅವರು ವಿವಿಧ ವಿಧಾನಗಳ ಮೂಲಕ ಪಾನ್ ವಿವರಗಳನ್ನು ಪಡೆದು ಅನಂತರ ಅವುಗಳನ್ನು ಕಾನೂನುಬಾಹಿರವಾಗಿ ಬಳಸುತ್ತಾರೆ.

ವಂಚನೆ ಹೇಗೆ?

ನಕಲಿ ಆಸ್ತಿ ನೋಂದಣಿ

ಮುಂಬಯಿ ಪ್ರಕರಣದಂತೆ ವಂಚಕರು ನಕಲಿ ಆಸ್ತಿ ಮಾರಾಟವನ್ನು ನೋಂದಾಯಿಸಲು ಪಾನ್ ಕಾರ್ಡ್‌ಗಳನ್ನು ದುರುಪಯೋಗಪಡಿಸಿಕೊಳ್ಳಬಹುದು. ಇದು ಸಂತ್ರಸ್ತರಿಗೆ ತೆರಿಗೆ ನೊಟೀಸ್ ಜಾರಿಯಾಗಲು ಕಾರಣವಾಗಬಹುದು.

ಸಾಲ ಪಡೆಯಲು

ಕ್ರಿಮಿನಲ್‌ಗಳು ಫಿನ್‌ಟೆಕ್ ಅಪ್ಲಿಕೇಶನ್‌ಗಳ ಮೂಲಕ ಸಾಲಗಳನ್ನು ಪಡೆಯಲು ಪಾನ್ ವಿವರಗಳನ್ನು ಬಳಸಿಕೊಳ್ಳಬಹುದು. ಇದರಿಂದ ಸಂತ್ರಸ್ತರು ಅನಿರೀಕ್ಷಿತವಾಗಿ ಸಾಲಗಾರರಾಗಬಹುದು.


ಪಾನ್ ರಕ್ಷಿಸುವುದು ಹೇಗೆ?

ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಪಾನ್ ಮಾಹಿತಿಯನ್ನು ಹಂಚಿಕೊಳ್ಳುವಾಗ ತೀವ್ರ ಎಚ್ಚರಿಕೆಯಿಂದ ಇರಲು ಸೂಚಿಸಿದೆ. ಪಾನ್ ವಿವರಗಳನ್ನು ಸರ್ಕಾರದಿಂದ ಅಧಿಕೃತವಾಗಿರುವ ಘಟಕಗಳೊಂದಿಗೆ ಮಾತ್ರ ಹಂಚಿಕೊಳ್ಳಿ. ಪಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದರಿಂದ ದುರುಪಯೋಗದ ವಿರುದ್ಧ ಸ್ವಲ್ಪ ರಕ್ಷಣೆ ಪಡೆಯಬಹುದು.

ಪ್ಯಾನ್ ಕಾರ್ಡ್ ದುರುಪಯೋಗವನ್ನು ಪರಿಶೀಲಿಸುವುದು ಹೇಗೆ?

ಪಾನ್ ಕಾರ್ಡ್ ಹಗರಣವನ್ನು ಗುರುತಿಸಲು ತೆಗೆದುಕೊಳ್ಳಬೇಕಾದ ಕೆಲವು ಕ್ರಮಗಳಿವೆ.
ವಾರ್ಷಿಕ ಮಾಹಿತಿ ಪರಿಶೀಲಿಸಿ (AIS)

ಆದಾಯ ತೆರಿಗೆ ಇಲಾಖೆಯಿಂದ ನೀಡಲಾದ ಈ ಡಾಕ್ಯುಮೆಂಟ್, ಬ್ಯಾಂಕ್‌ಗಳು ಮತ್ತು ಇತರ ಸಂಸ್ಥೆಗಳು ವರದಿ ಮಾಡಿರುವ ನಿಮ್ಮ ಹಣಕಾಸಿನ ವಹಿವಾಟಿನ ವಿವರವಾದ ದಾಖಲೆಯನ್ನು ಒದಗಿಸುತ್ತದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆಗಾಗಿ ನಿಮ್ಮ ವಾರ್ಷಿಕ ಮಾಹಿತಿಯನ್ನು ನಿಯಮಿತವಾಗಿ ಪರಿಶೀಲಿಸಿ.

ಕ್ರೆಡಿಟ್ ಸ್ಕೋರ್ ಮೇಲ್ವಿಚಾರಣೆ ಮಾಡಿ

CIBIL, Equifax, Experian ಅಥವಾ CRIF ಹೈ ಮಾರ್ಕ್ ನಂತಹ ಏಜೆನ್ಸಿಗಳ ಮೂಲಕ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸಿ. ನಿಮಗೆ ತಿಳಿಯದೆ ನಿಮ್ಮ ಹೆಸರಿನಲ್ಲಿ ತೆಗೆದುಕೊಂಡ ಯಾವುದೇ ಸಾಲಗಳನ್ನು ಗುರುತಿಸಿ.

ಇದನ್ನೂ ಓದಿ: Elon Musk: ಟೆಸ್ಲಾದಲ್ಲಿ ಎಲಾನ್ ಮಸ್ಕ್ ಒಬ್ಬರ ಸಂಬಳ ಟಾಟಾ ಮೋಟಾರ್ಸ್‌ ಒಟ್ಟು ಆದಾಯಕ್ಕಿಂತ ಹೆಚ್ಚು!

ಹಣಕಾಸು ವರದಿಗಳನ್ನು ಪರೀಕ್ಷಿಸಿ

ಪೇಟಿಎಂ ಅಥವಾ ಬ್ಯಾಂಕ್ ಬಜಾರ್‌ನಂತಹ ಫಿನ್‌ಟೆಕ್ ಪ್ಲಾಟ್‌ಫಾರ್ಮ್‌ಗಳು ಹಣಕಾಸು ವರದಿಗಳನ್ನು ಪಡೆಯಲು ಅನುಮತಿಸುತ್ತವೆ. ಈ ವರದಿಗಳನ್ನು ನಿಯಮಿತವಾಗಿ ಪರಿಶೀಲಿಸುವುದರಿಂದ ಯಾವುದೇ ಅನಧಿಕೃತ ವಹಿವಾಟುಗಳನ್ನು ಪತ್ತೆಹಚ್ಚಲು ಸಹಾಯವಾಗುವುದು.

ಜಾಗರೂಕರಾಗಿರಿ ಮತ್ತು ಕ್ರಮ ಕೈಗೊಳ್ಳಿ

ಪಾನ್ ಕಾರ್ಡ್ ಹಂಚಿಕೆ ವಿಚಾರದಲ್ಲಿ ಜಾಗರೂಕರಾಗಿರಿ. ಅನುಮಾನಾಸ್ಪದವಾಗಿ ಕಂಡು ಬಂದರೆ ಕೂಡಲೇ ಕ್ರಮ ಕೈಗೊಳ್ಳಿ. ಇದರಿಂದ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ಪಾನ್ ಕಾರ್ಡ್ ವಂಚನೆಗೆ ಬಲಿಯಾದರೆ ತಕ್ಷಣ ಪೊಲೀಸ್ ಇಲಾಖೆಗೆ ದೂರು ನೀಡಿ. ಆರ್ಥಿಕ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಪಾನ್ ವಿವರಗಳನ್ನು ರಕ್ಷಿಸುವುದು ಬಹಳ ಮುಖ್ಯ.

Continue Reading

ವಾಣಿಜ್ಯ

Income Tax Returns Filing: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಈ ತಪ್ಪುಗಳನ್ನು ಮಾಡಬೇಡಿ!

ಆದಾಯ ತೆರಿಗೆ ರಿಟರ್ನ್ಸ್ (Income Tax Returns Filing) ಸಲ್ಲಿಸುವ ಮೊದಲು ಎಲ್ಲವೂ ಸರಿಯಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು, ದಂಡವನ್ನು ತಪ್ಪಿಸಲು ನಿಖರವಾಗಿ ಮತ್ತು ಸಮಯೋಚಿತವಾಗಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವುದು ಅತ್ಯಗತ್ಯ. ಸಾಮಾನ್ಯ ತಪ್ಪುಗಳಿಗೆ ಇದರಲ್ಲಿ ಅವಕಾಶ ನೀಡಬೇಡಿ. ಈ ಬಗ್ಗೆ ಯಾವುದೇ ಸಂದೇಹವಿದ್ದರೆ ತೆರಿಗೆ ವೃತ್ತಿಪರರಿಂದ ಸಹಾಯವನ್ನು ಪಡೆಯಿರಿ.

VISTARANEWS.COM


on

By

Income Tax Returns Filing
Koo

ಉದ್ಯೋಗಿಗಳಿಗೆ (employees) ಫಾರ್ಮ್ 16 (form 16) ಈಗಾಗಲೇ ಸಿಕ್ಕಿದ್ದು, 2024-25 ಅಥವಾ ಹಣಕಾಸು ವರ್ಷ (financial year) 2023-24ರ ಮೌಲ್ಯಮಾಪನ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ಸ್ (Income Tax Returns Filing) ಸಲ್ಲಿಸಬಹುದು. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಕೆಲವು ಸಾಮಾನ್ಯ ತಪ್ಪುಗಳನ್ನು (mistake) ಮಾಡುವುದು ಸಹಜ. ಆದರೆ ಈ ರೀತಿ ತಪ್ಪು ಆಗದಂತೆ ಎಚ್ಚರ ವಹಿಸುವುದು ಕೂಡ ಮುಖ್ಯ.

ತಪ್ಪುಗಳನ್ನು ಮಾಡದಂತೆ ಖಚಿತಪಡಿಸಿಕೊಳ್ಳಲು ಮತ್ತು ತೆರಿಗೆ ಅಧಿಕಾರಿಗಳೊಂದಿಗೆ ಅನಗತ್ಯ ತೊಂದರೆಗಳನ್ನು ತಪ್ಪಿಸಲು ಆದಾಯ ತೆರಿಗೆ ರಿಟರ್ನ್ಸ್ ಅನ್ನು ನಿಖರವಾಗಿ ಮತ್ತು ಸಮಯಕ್ಕೆ ಸರಿಯಾಗಿ ಸಲ್ಲಿಸುವುದು ಬಹಳ ಮುಖ್ಯ.
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಮಾಡಲೇಬಾರದ ಹತ್ತು ತಪ್ಪುಗಳು ಯಾವುದು ಎನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ವೈಯಕ್ತಿಕ ಮಾಹಿತಿ

ಹೆಸರು, ವಿಳಾಸ, ಪಾನ್ ಮತ್ತು ಬ್ಯಾಂಕ್ ವಿವರಗಳಂತಹ ತಪ್ಪಾದ ವೈಯಕ್ತಿಕ ಮಾಹಿತಿಯನ್ನು ನಮೂದಿಸುವುದು ಸಾಮಾನ್ಯ ತಪ್ಪುಗಳಲ್ಲಿ ಒಂದಾಗಿದೆ. ಇದು ಪ್ರಕ್ರಿಯೆ ಅಥವಾ ಮರುಪಾವತಿಯನ್ನು ವಿಳಂಬಗೊಳಿಸುವ ಸಾಧ್ಯತೆ ಇದೆ. ಇಂತಹ ಯಾವುದೇ ವ್ಯತ್ಯಾಸಗಳನ್ನು ತಪ್ಪಿಸಲು ಅಧಿಕೃತ ದಾಖಲೆಗಳು ಮತ್ತು ಬ್ಯಾಂಕ್ ದಾಖಲೆಗಳಲ್ಲಿನ ವಿವರಗಳು ಹೊಂದಿಕೆಯಾಗುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಮೊದಲು ಎಲ್ಲಾ ವೈಯಕ್ತಿಕ ಮಾಹಿತಿಯನ್ನು ಎರಡು ಬಾರಿ ಪರಿಶೀಲಿಸಿ. ಯಾವುದೇ ತಪ್ಪುಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.

ತಪ್ಪಾದ ಆದಾಯ ತೆರಿಗೆ ರಿಟರ್ನ್ಸ್

ವಿವಿಧ ರೀತಿಯ ತೆರಿಗೆದಾರರು ಮತ್ತು ಆದಾಯದ ಮೂಲಗಳಿಗಾಗಿ ವಿವಿಧ ಆದಾಯ ತೆರಿಗೆ ರಿಟರ್ನ್ಸ್ ಫಾರ್ಮ್‌ಗಳಿವೆ. ತಪ್ಪು ಫಾರ್ಮ್ ಅನ್ನು ಬಳಸುವುದರಿಂದ ನಿರಾಕರಣೆ ಅಥವಾ ಪ್ರಕ್ರಿಯೆ ವಿಳಂಬಕ್ಕೆ ಕಾರಣವಾಗಬಹುದು.

50 ಲಕ್ಷದವರೆಗಿನ ಆದಾಯ ಹೊಂದಿರುವವರಿಗೆ ITR-1 (ಸಹಜ್), ವ್ಯಾಪಾರ ಅಥವಾ ವೃತ್ತಿಯಿಂದ ಆದಾಯವನ್ನು ಹೊಂದಿರದವರಿಗೆ ಮತ್ತು ಎಚ್‌ಯುಎಫ್‌ಗಳಿಗೆ ITR-2, ವ್ಯಾಪಾರ ಅಥವಾ ವೃತ್ತಿಯಿಂದ ಆದಾಯ ಹೊಂದಿರುವವರಿಗೆ ಮತ್ತು ಎಚ್‌ಯುಎಫ್‌ಗಳಿಗೆ ITR-3, I ವ್ಯಾಪಾರ ಮತ್ತು ವೃತ್ತಿಯಿಂದ ಊಹೆಯ ಆದಾಯ ಪಡೆಯುವವರಿಗೆ TR-4 (ಸುಗಮ) ಮೂಲಕವೇ ಅರ್ಜಿ ಸಲ್ಲಿಸಬೇಕಾಗುತ್ತದೆ.

ಆದಾಯದ ಮೂಲ ವರದಿ

ಉಳಿತಾಯ ಖಾತೆಗಳು, ಸ್ಥಿರ ಠೇವಣಿಗಳು, ಬಾಡಿಗೆ ಆದಾಯ ಅಥವಾ ಬಂಡವಾಳ ಲಾಭಗಳಂತಹ ಹೆಚ್ಚುವರಿ ಆದಾಯದ ಮೂಲಗಳನ್ನು ವರದಿ ಮಾಡಲು ಅನೇಕ ತೆರಿಗೆದಾರರು ಮರೆಯುತ್ತಾರೆ. ಇವುಗಳನ್ನು ಬಿಟ್ಟುಬಿಡುವುದರಿಂದ ಪೆನಾಲ್ಟಿಗಳು ಮತ್ತು ಪಾವತಿಸದ ತೆರಿಗೆಗಳ ಮೇಲಿನ ಬಡ್ಡಿಗೆ ಕಾರಣವಾಗಬಹುದು.ಎಲ್ಲಾ ಮೂಲಗಳು ವರದಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಬಡ್ಡಿ, ಲಾಭಾಂಶಗಳು ಮತ್ತು ಬಾಡಿಗೆ ಆದಾಯ ಸೇರಿದಂತೆ ಎಲ್ಲಾ ಹಣಕಾಸಿನ ದಾಖಲೆಗಳು ಮತ್ತು ಆದಾಯ ಹೇಳಿಕೆಗಳನ್ನು ಒಟ್ಟುಗೂಡಿಸಿ.

ಅರ್ಹವಾದ ಕಡಿತ

ತೆರಿಗೆದಾರರು ಸಾಮಾನ್ಯವಾಗಿ 80C, 80D, 80E, ಇತ್ಯಾದಿಗಳಂತಹ ವಿವಿಧ ವಿಭಾಗಗಳ ಅಡಿಯಲ್ಲಿ ಕಡಿತಗಳನ್ನು ಕ್ಲೈಮ್ ಮಾಡುವುದನ್ನು ತಪ್ಪಿಸಿಕೊಳ್ಳುತ್ತಾರೆ. ಇದು ಅವರ ತೆರಿಗೆಯ ಆದಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಆದಾಯ ತೆರಿಗೆ ಕಾಯ್ದೆಯಡಿ ಲಭ್ಯವಿರುವ ಎಲ್ಲಾ ಕಡಿತಗಳ ಬಗ್ಗೆ ತಿಳಿದಿರಲಿ ಮತ್ತು ಅವುಗಳನ್ನು ಸೂಕ್ತವಾಗಿ ಕ್ಲೈಮ್ ಮಾಡಿ. ಸಾಮಾನ್ಯ ಕಡಿತಗಳಲ್ಲಿ ಪಿಪಿಎಫ್ , ಎನ್ ಎಸ್ ಸಿ, ವಿಮಾ ಪ್ರೀಮಿಯಂಗಳು, ಗೃಹ ಸಾಲದ ಬಡ್ಡಿ ಮತ್ತು ಬೋಧನಾ ಶುಲ್ಕಗಳಲ್ಲಿ ಹೂಡಿಕೆಗಳು ಸೇರಿವೆ.

ಟಿಡಿಎಸ್ ವಿವರ

ಫಾರ್ಮ್ 26ಎಎಸ್ ನಲ್ಲಿನ ಟಿಡಿಎಸ್ ವಿವರಗಳ ನಡುವೆ ಹೊಂದಿಕೆಯಾಗುವುದಿಲ್ಲ ಮತ್ತು ಆದಾಯ ತೆರಿಗೆ ರಿಟರ್ನ್ಸ್ ನಲ್ಲಿ ಕ್ಲೈಮ್ ಮಾಡಲಾದ ಟಿಡಿಎಸ್ ಪ್ರಕ್ರಿಯೆಯಲ್ಲಿ ವ್ಯತ್ಯಾಸಗಳು ಮತ್ತು ವಿಳಂಬಗಳಿಗೆ ಕಾರಣವಾಗಬಹುದು. ಅಲ್ಲದೆ, ಪಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ಟಿಡಿಎಸ್ ಅನ್ನು ಅನ್ವಯಿಸುವ ದರಕ್ಕಿಂತ ಎರಡು ಪಟ್ಟು ಕಡಿತಗೊಳಿಸಬೇಕಾಗುತ್ತದೆ. ಫಾರ್ಮ್ 26ಎಎಸ್ ನಲ್ಲಿ ನಿಮ್ಮ ಟಿಡಿಎಸ್ ವಿವರಗಳನ್ನು ಪರಿಶೀಲಿಸಿ ಮತ್ತು ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ ನಲ್ಲಿ ನೀವು ನಮೂದಿಸಿದ ವಿವರಗಳಿಗೆ ಅವು ಹೊಂದಾಣಿಕೆಯಾಗುತ್ತವೆ ಎಂದು ಖಚಿತಪಡಿಸಿಕೊಳ್ಳಿ.

ಆದಾಯ ತೆರಿಗೆ ರಿಟರ್ನ್ಸ್ ಪರಿಶೀಲಿಸಿ

ಆದಾಯ ತೆರಿಗೆ ರಿಟರ್ನ್ಸ್ ಅನ್ನು ಸಲ್ಲಿಸಿದ ಅನಂತರ ಅದನ್ನು ವಿದ್ಯುನ್ಮಾನವಾಗಿ ಅಥವಾ 120 ದಿನಗಳಲ್ಲಿ ಕೇಂದ್ರೀಕೃತ ಸಂಸ್ಕರಣಾ ಕೇಂದ್ರಕ್ಕೆ (ಸಿಪಿಸಿ) ಸಹಿ ಮಾಡಿದ ಭೌತಿಕ ನಕಲನ್ನು ಕಳುಹಿಸುವ ಮೂಲಕ ಪರಿಶೀಲಿಸುವುದು ಬಹಳ ಮುಖ್ಯ. ಪರಿಶೀಲಿಸದ ಆದಾಯ ತೆರಿಗೆ ರಿಟರ್ನ್ಸ್ ಗಳನ್ನು ಅಮಾನ್ಯವೆಂದು ಪರಿಗಣಿಸಲಾಗುತ್ತದೆ. ತ್ವರಿತ ಪ್ರಕ್ರಿಯೆಗಾಗಿ ಆಧಾರ್ ಒಟಿಪಿ, ನೆಟ್ ಬ್ಯಾಂಕಿಂಗ್ ಅಥವಾ ಲಭ್ಯವಿರುವ ಇತರ ವಿಧಾನಗಳನ್ನು ಬಳಸಿಕೊಂಡು ಇ-ಪರಿಶೀಲನೆಗೆ ಆದ್ಯತೆ ನೀಡಿ.


ಹಿಂದಿನ ಆದಾಯ ನಮೂದಿಸಿ

ಆರ್ಥಿಕ ವರ್ಷದಲ್ಲಿ ಉದ್ಯೋಗಗಳನ್ನು ಬದಲಾಯಿಸಿದ್ದರೆ ಹಿಂದಿನ ಉದ್ಯೋಗದಾತರಿಂದ ಆದಾಯವನ್ನು ಸೇರಿಸುವುದನ್ನು ಖಚಿತಪಡಿಸಿಕೊಳ್ಳಿ. ಇದನ್ನು ನಿರ್ಲಕ್ಷಿಸುವುದರಿಂದ ಆದಾಯವನ್ನು ಕಡಿಮೆ ವರದಿ ಮಾಡಿದ್ದಕ್ಕಾಗಿ ತೆರಿಗೆ ಇಲಾಖೆಯಿಂದ ನೋಟಿಸ್‌ಗೆ ಕಾರಣವಾಗಬಹುದು. ಎಲ್ಲಾ ಉದ್ಯೋಗದಾತರಿಂದ ಫಾರ್ಮ್ 16 ಅನ್ನು ಸಂಗ್ರಹಿಸಿ ಮತ್ತು ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ ನಲ್ಲಿ ಒಟ್ಟು ಆದಾಯವನ್ನು ವರದಿ ಮಾಡಿ.

ತಪ್ಪಾದ ಬ್ಯಾಂಕ್ ಖಾತೆ ವಿವರಗಳು

ತಪ್ಪಾದ ಬ್ಯಾಂಕ್ ಖಾತೆ ವಿವರಗಳನ್ನು ಒದಗಿಸುವುದರಿಂದ ಮರುಪಾವತಿಯನ್ನು ವಿಳಂಬಗೊಳಿಸಬಹುದು. ಖಾತೆ ಸಂಖ್ಯೆ ಮತ್ತು ಐಎಫ್ ಎಸ್ ಸಿ ಕೋಡ್ ನಿಖರವಾಗಿದೆ ಮತ್ತು ನವೀಕರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಐಟಿಆರ್ ಫಾರ್ಮ್‌ನಲ್ಲಿ ಬ್ಯಾಂಕ್ ಖಾತೆ ವಿವರಗಳನ್ನು ನವೀಕರಿಸಿ ಮತ್ತು ಸಲ್ಲಿಸುವ ಮೊದಲು ಅವುಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ.

ಇದನ್ನೂ ಓದಿ: Money Guide: ಹಿರಿಯ ನಾಗರಿಕರಿಗಾಗಿ ಅತ್ಯಾಕರ್ಷಕ ಉಳಿತಾಯ ಯೋಜನೆ

ವಿದೇಶಿ ಆದಾಯ

ವಿದೇಶಿ ಮೂಲಗಳಿಂದ ಆದಾಯವನ್ನು ಹೊಂದಿದ್ದರೆ ಅದನ್ನು ಆದಾಯ ತೆರಿಗೆ ರಿಟರ್ನ್ಸ್ ನಲ್ಲಿ ವರದಿ ಮಾಡಬೇಕು. ಹಾಗೆ ಮಾಡಲು ವಿಫಲವಾದರೆ ಪೆನಾಲ್ಟಿಗಳು ಮತ್ತು ಕಾನೂನು ಸಮಸ್ಯೆಗಳಿಗೆ ಕಾರಣವಾಗಬಹುದು. ವಿಶೇಷವಾಗಿ ಎನ್‌ಆರ್‌ಐಗಳಿಗೆ ಅಥವಾ ಸಾಗರೋತ್ತರ ಹೂಡಿಕೆ ಹೊಂದಿರುವವರಿಗೆ. ಆದಾಯ ತೆರಿಗೆ ರಿಟರ್ನ್ಸ್ ನಲ್ಲಿ ಎಲ್ಲಾ ವಿದೇಶಿ ಆದಾಯ ಮತ್ತು ಆಸ್ತಿಗಳನ್ನು ಸೇರಿಸಿ ಮತ್ತು ಅಗತ್ಯವಿದ್ದರೆ ವೃತ್ತಿಪರ ಸಲಹೆಯನ್ನು ಪಡೆಯಿರಿ.

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಲ್ಲಿ ವಿಳಂಬ

ಗಡುವಿನ ಅನಂತರ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಸಲ್ಲಿಸುವುದು ತಡವಾಗಿ ಫೈಲಿಂಗ್ ಶುಲ್ಕಗಳು, ಬಾಕಿ ಇರುವ ತೆರಿಗೆಯ ಮೇಲಿನ ಬಡ್ಡಿ ಮತ್ತು ಅಗತ್ಯವಿದ್ದರೆ ರಿಟರ್ನ್ ಅನ್ನು ಪರಿಷ್ಕರಿಸಲು ಕಡಿಮೆ ಸಮಯವನ್ನು ಆಕರ್ಷಿಸಬಹುದು. ಕೊನೆಯ ನಿಮಿಷದ ವಿಪರೀತ ಮತ್ತು ಸಂಭಾವ್ಯ ದೋಷಗಳನ್ನು ತಪ್ಪಿಸಲು ಗಡುವಿನ ಮೊದಲು ಆದಾಯ ತೆರಿಗೆ ರಿಟರ್ನ್ಸ್ ಅನ್ನು ಫೈಲ್ ಮಾಡಿ.

Continue Reading

ಮನಿ-ಗೈಡ್

Money Guide: ಹಿರಿಯ ನಾಗರಿಕರಿಗಾಗಿ ಅತ್ಯಾಕರ್ಷಕ ಉಳಿತಾಯ ಯೋಜನೆ

ಅತ್ಯಾಕರ್ಷಕ ಬಡ್ಡಿ ದರದೊಂದಿಗೆ ಅಂಚೆ ಇಲಾಖೆ ಒದಗಿಸಿರುವ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರು ಹೂಡಿಕೆ (Money Guide) ಮಾಡಬಹುದು. ಖಾತ್ರಿ ಮರುಪಾವತಿ ನೀಡುವ ಯೋಜನೆ ಇದಾಗಿದ್ದು, ಇದರಲ್ಲಿ ಹೂಡಿಕೆ ಮಾಡುವುದರಿಂದ ಏನು ಲಾಭ, ಸಿಗುವ ಬಡ್ಡಿ ದರ ಎಷ್ಟಿದೆ ಗೊತ್ತೇ? ಹಿರಿಯ ನಾಗರಿಕರಿಗೆ ಉಪಯುಕ್ತವಾದ ಮಾಹಿತಿ ಇಲ್ಲಿದೆ.

VISTARANEWS.COM


on

By

Money Guide
Koo

ಹಿರಿಯ ನಾಗರಿಕರ (Senior Citizen) ಉಳಿತಾಯ ಯೋಜನೆಯು (SCSS) 60 ವರ್ಷಕ್ಕಿಂತ ಮೇಲ್ಪಟ್ಟವರು ಹೂಡಿಕೆ (Money Guide) ಮಾಡಬಹುದಾದ ಖಾತ್ರಿ ಮರುಪಾವತಿ (guaranteed return) ನೀಡುವ ಯೋಜನೆಯಾಗಿದೆ. ಇದರಲ್ಲಿ ಜಂಟಿ ಖಾತೆಯನ್ನು ಸಂಗಾತಿಯೊಂದಿಗೆ ಮಾತ್ರ ತೆರೆಯಬಹುದು.

ಅಂಚೆ ಇಲಾಖೆಯು (post office) ಈ ಸಣ್ಣ ಉಳಿತಾಯ ಯೋಜನೆಗೆ (small savings scheme) ವಾರ್ಷಿಕ ಶೇ. ಶೇ. 8.2 ಬಡ್ಡಿ ದರವನ್ನು (interest rate) ನೀಡುತ್ತಿದೆ. ನೀವು ಈ ಯೋಜನೆಯನ್ನು 5 ವರ್ಷಗಳವರೆಗೆ ತೆರೆಯಬಹುದು. ಆದರೆ ಮೆಚ್ಯೂರಿಟಿಯ ದಿನಾಂಕದಿಂದ ಮುಂದಿನ 3 ವರ್ಷಗಳವರೆಗೆ ಇದನ್ನು ವಿಸ್ತರಿಸಬಹುದು.

ಎಷ್ಟು ಹೂಡಿಕೆ ಮಾಡಬಹುದು?

ಒಂದು ಬಾರಿಯ ಮೊತ್ತದ ಹೂಡಿಕೆಯನ್ನು ಮಾಡಬೇಕು. ಇದರಲ್ಲಿ ಕನಿಷ್ಠ 1,000 ರೂ. ನಿಂದ ಗರಿಷ್ಠ 30 ಲಕ್ಷ ರೂ. ವರೆಗೆ ಹೂಡಿಕೆ ಮಾಡಲು ಅವಕಾಶವಿದೆ. ಇದರಲ್ಲಿ ಮಾಡಿದ ಠೇವಣಿಗಳ ಮೇಲೆ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು.

ಬಡ್ಡಿ ದರ

ತ್ರೈಮಾಸಿಕ ಆಧಾರದಲ್ಲಿ ಬಡ್ಡಿಯನ್ನು ಪಾವತಿಸಲಾಗುತ್ತದೆ. ಠೇವಣಿ ಮಾಡಿದ ದಿನಾಂಕದಿಂದ ಮಾರ್ಚ್ 31, ಜೂನ್ 30, ಸೆಪ್ಟೆಂಬರ್ 30, ಡಿಸೆಂಬರ್ 31ರಂದು ಬಡ್ಡಿಯನ್ನು ಪಾವತಿಸಲಾಗುತ್ತದೆ. ಯಾವುದೇ ತ್ರೈಮಾಸಿಕದಲ್ಲಿ ಬಡ್ಡಿಯನ್ನು ಕ್ಲೈಮ್ ಮಾಡದಿದ್ದರೆ ಹೆಚ್ಚುವರಿ ಬಡ್ಡಿಯನ್ನು ಗಳಿಸಲು ಸಾಧ್ಯವಾಗುವುದಿಲ್ಲ. ಉಳಿತಾಯ ಖಾತೆಗೆ ಸ್ವಯಂ ಕ್ರೆಡಿಟ್ ಮೂಲಕ ಬಡ್ಡಿಯನ್ನು ಡ್ರಾ ಮಾಡಬಹುದು.


ಬಡ್ಡಿಗೆ ತೆರಿಗೆ

ಎಲ್ಲಾ ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಖಾತೆಗಳಲ್ಲಿನ ಒಟ್ಟು ಬಡ್ಡಿಯು 50,000 ರೂ. ಗಳನ್ನು ಮೀರಿದರೆ ಬಡ್ಡಿಗೆ ತೆರಿಗೆ ವಿಧಿಸಲಾಗುತ್ತದೆ. ಅನಂತರ ಬಡ್ಡಿಯ ಮೇಲೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಫಾರ್ಮ್ 15 ಜಿ /15ಹೆಚ್ ಅನ್ನು ಸಲ್ಲಿಸಿದರೆ ಮತ್ತು ಸಂಚಿತ ಬಡ್ಡಿಯು 50,000 ರೂ. ಗಿಂತ ಹೆಚ್ಚಿಲ್ಲದಿದ್ದರೆ ಯಾವುದೇ ಟಿಡಿಎಸ್ ಅನ್ನು ಕಡಿತಗೊಳಿಸಲಾಗುವುದಿಲ್ಲ.

ಎಷ್ಟು ಲಾಭ?

ಪ್ರಸ್ತುತ ಪೋಸ್ಟ್ ಆಫೀಸ್ ಎಸ್‌ಸಿಎಸ್‌ಎಸ್‌ನಲ್ಲಿ ತಲಾ 1 ಲಕ್ಷ, 2 ಲಕ್ಷ, 5 ಲಕ್ಷ ಮತ್ತು 10 ಲಕ್ಷ ರೂ. ಹೂಡಿಕೆ ಮಾಡಿದರೆ ಎಷ್ಟು ಲಾಭ ಸಿಗುತ್ತದೆ ಎಂಬುದರ ಮಾಹಿತಿ ಇಲ್ಲಿದೆ. ಯೋಜನೆಯ ಒಟ್ಟು ಅವಧಿಯು 5 ವರ್ಷಗಳು ಮತ್ತು ಬಡ್ಡಿ ದರವು ವಾರ್ಷಿಕ ಶೇ. 8.2. ಗಳಾದರೆ 1 ಲಕ್ಷ ರೂ. ಹೂಡಿಕೆ ಮಾಡಿದರೆ ಒಟ್ಟು ಬಡ್ಡಿ 41,000, 2,050 ತ್ರೈಮಾಸಿಕ ಬಡ್ಡಿ ಹಾಗೂ ಐದು ವರ್ಷಗಳಲ್ಲಿ ಮುಕ್ತಾಯದ ಮೊತ್ತ 1,41,000 ರೂ. ಅನ್ನು ಪಡೆಯಬಹುದು. ಅದೇ ರೀತಿ 2 ಲಕ್ಷ ರೂ. ಹೂಡಿಕೆ ಮಾಡಿದರೆ 82,000, 4,100, 2,82,000, 3 ಲಕ್ಷ ಹೂಡಿಕೆ ಮಾಡಿದರೆ 1,23,000, 6,150, 4,23,000, 4 ಲಕ್ಷ ಹೂಡಿಕೆ ಮಾಡಿದರೆ 1,64,000, 8,200, 5,64,000, 5 ಲಕ್ಷ ರೂ. ಹೂಡಿಕೆ ಮಾಡಿದರೆ 2,05,000, 10,250, 7,05,000, 10 ಲಕ್ಷ ರೂ. ಹೂಡಿಕೆ ಮಾಡಿದರೆ 4,10,000, 20500, 14,10,000, 20 ಲಕ್ಷ ರೂ. ಹೂಡಿಕೆ ಮಾಡಿದರೆ 8,20,000, 41,000, 28,20,000, 30 ಲಕ್ಷ ಹೂಡಿಕೆ ಮಾಡಿದರೆ 12,30,000, 61,500, 42,30,000 ಪಡೆಯಬಹುದು.

ಇದನ್ನೂ ಓದಿ: Money Guide: ಅಸಂಘಟಿತ ವಲಯದ ಕಾರ್ಮಿಕರು ಪ್ರತಿ ತಿಂಗಳು 3 ಸಾವಿರ ರೂ. ಪಿಂಚಣಿ ಪಡೆಯಲು ಹೀಗೆ ಮಾಡಿ

ಅಕಾಲಿಕ ಮುಚ್ಚುವಿಕೆ

ಹಿರಿಯ ನಾಗರಿಕರ ಉಳಿತಾಯ ಯೋಜನೆಯನ್ನು ಯಾವುದೇ ಸಮಯದಲ್ಲಿ ಅಕಾಲಿಕವಾಗಿ ಮುಚ್ಚಬಹುದು. ಆದರೂ ಖಾತೆಯನ್ನು ತೆರೆಯುವ 1 ವರ್ಷದ ಮೊದಲು ಮುಚ್ಚಿದ್ದರೆ ಯಾವುದೇ ಬಡ್ಡಿಯನ್ನು ಪಾವತಿಸಲಾಗುವುದಿಲ್ಲ. ಅಂಚೆ ಕಚೇರಿಯು ಒಟ್ಟು ಮೊತ್ತದಿಂದ ಪಾವತಿಸಿದ ಬಡ್ಡಿಯನ್ನು ಸಹ ಪಡೆಯುತ್ತದೆ. 1 ವರ್ಷದಿಂದ 2 ವರ್ಷಗಳ ಅವಧಿಯಲ್ಲಿ ಖಾತೆಯನ್ನು ಮುಚ್ಚಿದ್ದರೆ, ಮೊತ್ತದ ಶೇ. 1.5ರಷ್ಟನ್ನು ಕಡಿತಗೊಳಿಸಿದ ಅನಂತರ ಮೂಲ ಮೊತ್ತವನ್ನು ಪಾವತಿಸಲಾಗುತ್ತದೆ.

Continue Reading

ಮನಿ-ಗೈಡ್

Life Insurance: ಜೀವ ವಿಮೆ ನಿಯಮಗಳಲ್ಲಿ ಹಲವು ಬದಲಾವಣೆ; ಐಆರ್‌ಡಿಎಐಯಿಂದ ಗ್ರಾಹಕಸ್ನೇಹಿ ಕ್ರಮ

ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ಜೀವನ ಮತ್ತು ಸಾಮಾನ್ಯ ವಿಮಾ ಪಾಲಿಸಿಗಳಲ್ಲಿ (Life Insurance) ಹಲವು ಪ್ರಮುಖ ಬದಲಾವಣೆಗಳನ್ನು ಮಾಡಿ ಆದೇಶ ನೀಡಿದೆ. ಇದರಲ್ಲಿ ಇನ್ನು ಮುಂದೆ ಎಲ್ಲ ಪಾಲಿಸಿಗಳಲ್ಲೂ ಸಾಲ ಆಯ್ಕೆಯ ಯೋಜನೆಯನ್ನು ಒಳಗೊಂಡಿದೆ. ಮಾತ್ರವಲ್ಲದೇ ಮಾಡಿರುವ ವಿಮಾ ಪಾಲಿಸಿಗಳನ್ನು ರದ್ದುಗೊಳಿಸಲು 30 ದಿನಗಳವರೆಗೆ ಕಾಲಾವಕಾಶವನ್ನು ವಿಸ್ತರಿಸಿದೆ.

VISTARANEWS.COM


on

By

Life Insurance
Koo

ಗ್ರಾಹಕ ಸ್ನೇಹಿಯಾಗಿರುವ (customer friendly) ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (IRDAI) ಪಾಲಿಸಿದಾರರಿಗೆ ಉತ್ತಮ ಸೇವೆ ನೀಡಲು ಜೀವನ (Life Insurance) ಮತ್ತು ಸಾಮಾನ್ಯ ವಿಮಾ ಪಾಲಿಸಿಗಳಲ್ಲಿ (life and general insurance policies) ಪ್ರಮುಖ ಬದಲಾವಣೆಯೊಂದನ್ನು ಮಾಡಿ ಪ್ರಕಟಣೆ ಹೊರಡಿಸಿದೆ. ಇತ್ತೀಚೆಗೆ ಮಾಡಿರುವ ಈ ನವೀಕರಣದಿಂದ ಸಾಕಷ್ಟು ಮಂದಿಗೆ ಇದರ ಪ್ರಯೋಜನ ಲಭ್ಯವಾಗಲಿದೆ.

ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ಮಾಡಿರುವ ಬದಲಾವಣೆಯಲ್ಲಿ ಇನ್ನು ಮುಂದೆ ಎಲ್ಲಾ ಜೀವ ವಿಮಾ ಯೋಜನೆಗಳಲ್ಲಿ ಸಾಲ ಆಯ್ಕೆಯನ್ನು (loan option) ಕಡ್ಡಾಯಗೊಳಿಸಿದೆ.

ಇದು ಇಷ್ಟು ಮಾತ್ರವಲ್ಲ ಐಆರ್‌ಡಿಎಐ ಜೀವ ವಿಮಾ ಪಾಲಿಸಿಗಳಿಗಾಗಿ ಕಾಯುವ ಉಚಿತ ಅವಧಿಯನ್ನು 15 ದಿನಗಳಿಂದ 30 ದಿನಗಳವರೆಗೆ ವಿಸ್ತರಿಸಿದೆ. ಖರೀದಿ ಮಾಡಿರುವ ವಿಮಾ ಪಾಲಿಸಿಯನ್ನು ರದ್ದುಗೊಳಿಸಲು ಯಾವುದೇ ಶುಲ್ಕವನ್ನು ಪಾವತಿಸದೆ 30 ದಿನಗಳವರೆಗೆ ಇನ್ನು ಅವಕಾಶವಿರುತ್ತದೆ.

ಇದು ಪಾಲಿಸಿದಾರರಿಗೆ ತಮ್ಮ ಪಾಲಿಸಿಯ ನಿಯಮಗಳು ಮತ್ತು ಷರತ್ತುಗಳನ್ನು ಪರಿಶೀಲಿಸಲು ಮತ್ತು ಹೆಚ್ಚು ತಿಳುವಳಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಹೆಚ್ಚಿನ ಸಮಯವನ್ನು ನೀಡುತ್ತದೆ. ಈ ಹೊಸ ನಿಯಮಗಳು ಜೀವ ವಿಮೆ ಮತ್ತು ಸಾಮಾನ್ಯ ವಿಮೆಗೆ ಸಂಬಂಧಿಸಿದ ಎಲ್ಲಾ ನಿಯಮಗಳನ್ನು ಒಂದೇ ಮಾಡಿದೆ.


ಪಿಂಚಣಿ ಭಾಗಶಃ ವಾಪಸಾತಿ ಆಯ್ಕೆ

ಇನ್ನೊಂದು ಮಹತ್ವದ ನವೀಕರಣವೆಂದರೆ ಪಿಂಚಣಿ ಸೌಲಭ್ಯಗಳನ್ನು ಭಾಗಶಃ ವಾಪಸಾತಿ ಆಯ್ಕೆಗಳನ್ನು ಪರಿಚಯಿಸಲಾಗಿದೆ. ಉನ್ನತ ಶಿಕ್ಷಣ, ಮಕ್ಕಳ ಮದುವೆ, ಮನೆ ಖರೀದಿಸುವುದು ಅಥವಾ ನಿರ್ಮಿಸುವುದು ಅಥವಾ ನಿರ್ಣಾಯಕ ಕಾಯಿಲೆಗಳಿಗೆ ವೈದ್ಯಕೀಯ ವೆಚ್ಚಗಳನ್ನು ಭರಿಸುವುದು ಮುಂತಾದ ನಿರ್ದಿಷ್ಟ ಹಣಕಾಸಿನ ಅಗತ್ಯಗಳನ್ನು ಪೂರೈಸಲು ಪಾಲಿಸಿದಾರರು ಈಗ ಹಣವನ್ನು ಹಿಂತೆಗೆದುಕೊಳ್ಳಬಹುದು.

ನಿಯಮಗಳು

ಪಾಲಿಸಿ ಶರಣಾಗತಿ ಪ್ರಕ್ರಿಯೆಯು ನ್ಯಾಯಯುತವಾಗಿರಬೇಕು ಮತ್ತು ಗ್ರಾಹಕರಿಗೆ ಮೌಲ್ಯವನ್ನು ಒದಗಿಸಬೇಕು ಎಂದು ಐಆರ್ ಡಿಎಐ ಕಡ್ಡಾಯಗೊಳಿಸಿದೆ. ಪಾಲಿಸಿದಾರರ ಕುಂದುಕೊರತೆಗಳನ್ನು ನಿಭಾಯಿಸಲು ದೃಢವಾದ ವ್ಯವಸ್ಥೆಗಳನ್ನು ಹೊಂದಿರಬೇಕು ಎಂದು ಹೇಳಿದೆ.

ವಿಮಾದಾರರ ಮೇಲೆ ದಂಡ

ವಿಮಾ ಒಂಬುಡ್ಸ್‌ಮನ್ ನೀಡುವ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸದ ವಿಮಾ ಕಂಪನಿಗಳ ಮೇಲೆ ದಂಡವನ್ನು ವಿಧಿಸುವುದು ಇನ್ನೊಂದು ಪ್ರಮುಖ ಬದಲಾವಣೆಯಾಗಿದೆ. ಒಂಬುಡ್ಸ್‌ಮನ್‌ ಆದೇಶವನ್ನು 30 ದಿನಗಳಲ್ಲಿ ಕಾರ್ಯಗತಗೊಳಿಸಲು ವಿಫಲವಾದರೆ ಅವರು ದಿನಕ್ಕೆ 5,000 ರೂ. ಅನ್ನು ದೂರುದಾರರಿಗೆ ಪಾವತಿಸಬೇಕಾಗುತ್ತದೆ.

ಹಕ್ಕು ನಿರಾಕರಣೆ

ಸಾಮಾನ್ಯ ವಿಮಾ ಪಾಲಿಸಿಗಳ ಬಗ್ಗೆ ಸಂಬಂಧಿತ ಪ್ರಕಟಣೆಯಲ್ಲಿ ದಾಖಲೆಗಳು ಕಾಣೆಯಾದ ಕಾರಣ ಹಕ್ಕುಗಳನ್ನು ತಿರಸ್ಕರಿಸಲಾಗುವುದಿಲ್ಲ ಎಂದು ಐಆರ್‌ಡಿಎಐ ಹೇಳಿದೆ. ಪ್ರಸ್ತಾವನೆಯನ್ನು ಅಂಡರ್ ರೈಟ್ ಮಾಡುವಾಗ ಅಗತ್ಯವಾದ ದಾಖಲೆಗಳನ್ನು ಸಂಗ್ರಹಿಸಬೇಕು ಮತ್ತು ಹಕ್ಕು ಇತ್ಯರ್ಥದ ಸಮಯದಲ್ಲಿ ಅಗತ್ಯ ದಾಖಲೆಗಳನ್ನು ಮಾತ್ರ ಕೋರಬೇಕು.

ಇದನ್ನೂ ಓದಿ: ATM Cash Withdrawal Fee: ಎಟಿಎಂ ನಗದು ಹಿಂಪಡೆಯುವಿಕೆ ಶುಲ್ಕ 21 ರೂ.ಗೆ ಏರಿಕೆ?

ಕಟ್ಟುನಿಟ್ಟಾದ ಸಮಯಸೂಚಿಗಳು

ಸರ್ವೇಯರ್‌ಗಳ ನೇಮಕ ಮತ್ತು ಅವರ ವರದಿಗಳನ್ನು ಸಲ್ಲಿಸುವುದು ಸೇರಿದಂತೆ ವಿಮೆದಾರರ ಹಕ್ಕುಗಳಿಗೆ ಸಂಬಂಧಿಸಿ ಐಆರ್‌ಡಿಎಐ ಕಟ್ಟುನಿಟ್ಟಾದ ಸಮಯವನ್ನು ಸಹ ನಿಗದಿಪಡಿಸಿದೆ.

Continue Reading
Advertisement
Swamji Murder
ಪ್ರಮುಖ ಸುದ್ದಿ13 mins ago

Swamji Murder : ಆಸ್ತಿ, ಅಧಿಕಾರಕ್ಕಾಗಿ ಗಲಾಟೆ; ಸ್ವಾಮೀಜಿಯೊಬ್ಬರನ್ನು ಕೊಲೆ ಮಾಡಿದ ಸ್ವಾಮೀಜಿಗಳ ಗುಂಪು

Child Death
ಬೆಳಗಾವಿ19 mins ago

Child Death : ಮಕ್ಕಳ ಮಾರಾಟ ಜಾಲದಲ್ಲಿ ರಕ್ಷಣೆಯಾಗಿದ್ದ ಮಗು ಮೃತ್ಯು; ಅಂತ್ಯ ಸಂಸ್ಕಾರ ನೆರವೇರಿಸಿದ ಪೊಲೀಸರು

Shobha Shetty car gift to yashwanth birthday
ಟಾಲಿವುಡ್37 mins ago

Shobha Shetty: ಭಾವಿ ಪತಿಗೆ ಕಾರ್ ಗಿಫ್ಟ್ ನೀಡಿದ ‘ಅಗ್ನಿಸಾಕ್ಷಿ’ ಖ್ಯಾತಿಯ ನಟಿ!

IND vs BAN
ಕ್ರೀಡೆ44 mins ago

IND vs BAN: ಕೊಹ್ಲಿ ಬ್ಯಾಟಿಂಗ್​ ಬಗ್ಗೆ ಸ್ವತಃ ಬೇಸರ ವ್ಯಕ್ತಪಡಿಸಿದ ಬ್ಯಾಟಿಂಗ್​ ಕೋಚ್​

Job Alert
ಉದ್ಯೋಗ51 mins ago

Job Alert: ಗುಡ್‌ನ್ಯೂಸ್‌; ರೈಲ್ವೆ ಇಲಾಖೆಯಲ್ಲಿ ಖಾಲಿ ಇದೆ ಬರೋಬ್ಬರಿ 18,799 ಹುದ್ದೆ: ಅಪ್ಲೈ ಮಾಡುವ ವಿಧಾನ ಇಲ್ಲಿದೆ

ITMS Corridor
Latest57 mins ago

Mysore News in Kannada: ಬೆಂಗಳೂರು-ಮೈಸೂರು ಸಂಚಾರ ನಿಯಂತ್ರಣ ಜು.1ರಿಂದ ಸಂಪೂರ್ಣ ಹೈಟೆಕ್‌

DCM D K Shivakumar statement about new advertising policy
ಕರ್ನಾಟಕ1 hour ago

DK Shivakumar: ವಾರದೊಳಗೆ ಹೊಸ ಜಾಹೀರಾತು ನೀತಿಯ ಕರಡು ಪ್ರತಿ ಬಿಡುಗಡೆ

2nd Puc Exam 3
ಶಿಕ್ಷಣ1 hour ago

2nd PUC Exam 3: ಸೋಮವಾರದಿಂದ ದ್ವಿತೀಯ ಪಿಯುಸಿ ಪರೀಕ್ಷೆ-3 ಶುರು; ವಿದ್ಯಾರ್ಥಿಗಳಿಗೆ ಬಸ್‌ ಪ್ರಯಾಣ ಉಚಿತ

Actor darshan Satish Reddy On Darshan Case
ರಾಜಕೀಯ1 hour ago

Actor Darshan: ನಾನು ದರ್ಶನ್ ಸೇಫ್ ಮಾಡ್ತಿರೋದು ಸುಳ್ಳು; ಬಿಜೆಪಿ ಶಾಸಕ ಸತೀಶ್ ರೆಡ್ಡಿ !

govt employees
ಕರ್ನಾಟಕ1 hour ago

Govt Employees: ಸರ್ಕಾರಿ ನೌಕರರಿಗೆ ಅಲರ್ಟ್‌; ಬೆಳಗ್ಗೆ 9.15ಕ್ಕೆ ಆಫೀಸ್‌ ತಲುಪದಿದ್ರೆ ಅರ್ಧ ದಿನ ರಜೆ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ21 hours ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ1 day ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ2 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು5 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು5 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ6 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ6 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ6 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 week ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

ಟ್ರೆಂಡಿಂಗ್‌