Hardeep Singh Nijjar: ಖಲಿಸ್ತಾನಿ ಉಗ್ರ ನಿಜ್ಜಾರ್‌ಗೆ ಕೆನಡಾ ಸಂಸತ್ತು ಗೌರವ; ಭಾರತ ಆಕ್ರೋಶ - Vistara News

ದೇಶ

Hardeep Singh Nijjar: ಖಲಿಸ್ತಾನಿ ಉಗ್ರ ನಿಜ್ಜಾರ್‌ಗೆ ಕೆನಡಾ ಸಂಸತ್ತು ಗೌರವ; ಭಾರತ ಆಕ್ರೋಶ

Hardeep Singh Nijjar: ಕೆನಡಾದಲ್ಲಿದ್ದ ಭಾರತದ ಮೋಸ್ಟ್‌ ವಾಂಟೆಡ್‌ ಉಗ್ರ, ಖಲಿಸ್ತಾನಿ ಪರ ಹೋರಾಟಗಾರ ಹರ್ದೀಪ್‌ ಸಿಂಗ್‌ ನಿಜ್ಜಾರ್‌ ಹತನಾಗಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಕೆನಡಾ ಸಂಸತ್ತು ಮಂಗಳವಾರ (ಜೂನ್‌ 18) ಹೌಸ್ ಆಫ್ ಕಾಮನ್ಸ್‌ನಲ್ಲಿ ಒಂದು ನಿಮಿಷ ಮೌನ ಆಚರಿಸಿ ಆತನಿಗೆ ಗೌರವ ಸಲ್ಲಿಸಿದೆ. ಕೆನಡಾ ನಿರ್ಧಾರಕ್ಕೆ ಭಾರತ ಈಗ ತೀವ್ರ ಖಂಡನೆ ವ್ಯಕ್ತಪಡಿಸಿದೆ.

VISTARANEWS.COM


on

Hardeep Singh Nijjar
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಖಲಿಸ್ತಾನಿ ಉಗ್ರ, ಖಲಿಸ್ತಾನಿ ಟೈಗರ್ ಫೋರ್ಸ್‌ನ (Khalistani Tiger Force) ಹರ್ದೀಪ್‌ ಸಿಂಗ್‌ ನಿಜ್ಜಾರ್‌ (Hardeep Singh Nijjar) ಹತ್ಯೆಗೀಡಾಗಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಕೆನಡಾ ಸರ್ಕಾರವು ಸಂಸತ್‌ನಲ್ಲಿಯೇ ಆತನಿಗೆ ‘ಮೌನಾಚರಣೆ’ ಮೂಲಕ ಗೌರವ ಸಲ್ಲಿಸಿರುವುದನ್ನು ಭಾರತ ಸರ್ಕಾರವು (India) ತೀರ್ವವಾಗಿ ಖಂಡಿಸಿದೆ. ಕೆನಡಾದ (Canada) ಹೌಸ್‌ ಆಫ್‌ ಕಾಮನ್ಸ್‌ನಲ್ಲಿ ಕಳೆದ ಮಂಗಳವಾರ (ಜೂನ್‌ 18) ಎಲ್ಲರೂ ಎದ್ದು ನಿಂತು, ಮೌನಾಚರಣೆ ಮೂಲಕ ನಿಜ್ಜಾರ್‌ಗೆ ಗೌರವ ಸಲ್ಲಿಸಿದ್ದರು. ಇದಕ್ಕೆ ಭಾರತ ಅಸಮಾಧಾನ ವ್ಯಕ್ತಪಡಿಸಿದೆ.

“ತೀವ್ರವಾದಕ್ಕೆ ರಾಜಕೀಯ ವ್ಯವಸ್ಥೆಯಲ್ಲಿ ಜಾಗ ನೀಡುವುದನ್ನು ನಾವು ನಿಶ್ಚಿತವಾಗಿಯೂ ಖಂಡಿಸುತ್ತೇವೆ. ಯಾರು ಹಿಂಸಾಚಾರದ ಪರವಾಗಿದ್ದಾರೋ, ಯಾರು ತೀವ್ರವಾದದಲ್ಲಿ ನಂಬಿಕೆ ಇರಿಸಿದ್ದಾರೋ, ಅಂತಹವರಿಗೆ ರಾಜಕೀಯ ಕ್ಷೇತ್ರದಲ್ಲಿ ಜಾಗ ನೀಡುವುದನ್ನು ಭಾರತ ವಿರೋಧಿಸುತ್ತದೆ. ಇದು ನಮ್ಮ ನಿಲುವಾಗಿದೆ” ಎಂಬುದಾಗಿ ಸುದ್ದಿಗೋಷ್ಠಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ತಿಳಿಸಿದ್ದಾರೆ.

ಕಳೆದ ವರ್ಷ ಜೂನ್‌ 18ರಂದು ಕೆನಡಾದ ಸುರ‍್ರೆ ನಗರದಲ್ಲಿ ಹರ್ದೀಪ್‌ ಸಿಂಗ್‌ ನಿಜ್ಜಾರ್‌ ಅಪರಿಚಿತರ ಗುಂಡಿಗೆ ಬಲಿಯಾಗಿದ್ದ. ಈ ಘಟನೆ ನಡೆದು ಒಂದು ವರ್ಷವಾದ ಹಿನ್ನೆಲೆಯಲ್ಲಿ ಕೆನಡಾ ಸಂಸತ್ತು ಎದ್ದು ನಿಂತು, ಮೌನ ಆಚರಿಸಿತು. ಈ ಬಗ್ಗೆ ಸ್ಪೀಕರ್ ಗ್ರೆಗ್ ಫರ್ಗುಸ್ ಮಾತನಾಡಿ, “ಒಂದು ವರ್ಷದ ಹಿಂದೆ ಸುರ‍್ರೆ ಹತ್ಯೆಗೀಡಾದ ಹರ್ದೀಪ್ ಸಿಂಗ್ ನಿಜ್ಜರ್ ಅವರ ಸ್ಮರಣಾರ್ಥ ಮೌನ ಆಚರಿಸೋಣʼʼ ಎಂದು ಘೋಷಿಸಿದರು. ಅದರಂತೆ ಎಲ್ಲ ಸದಸ್ಯರು ಎದ್ದು ನಿಂತುಕೊಳ್ಳುವುದು ವಿಡಿಯೊದಲ್ಲಿ ಕಂಡು ಬಂದಿದೆ.

ಖಲಿಸ್ತಾನ್‌ ಟೈಗರ್‌ ಫೋರ್ಸ್‌ (KTF) ಉಗ್ರ ಸಂಘಟನೆಯ ಮುಖ್ಯಸ್ಥನಾಗಿದ್ದ ಈತ ಪ್ರತ್ಯೇಕವಾದಿಗಳಿಗೆ ಹೆಚ್ಚಿನ ನೆರವು ಒದಗಿಸುತ್ತಿದ್ದ. ಭಾರತದಲ್ಲಿ ಹಲವು ಉಗ್ರ ಚಟುವಟಿಕೆಗಳ ಹಿಂದೆ ಈತನ ಕೈವಾಡವಿದೆ. ಕೆನಡಾದಲ್ಲೂ ಸಿಖ್‌ ಸಮುದಾಯದವರನ್ನು ಎತ್ತಿ ಕಟ್ಟುತ್ತಿದ್ದ. ಹಾಗಾಗಿ ಈತನು ಸೇರಿ ಸುಮಾರು 40 ಉಗ್ರರನ್ನು ಭಾರತವು ಮೋಸ್ಟ್‌ ವಾಂಟೆಡ್‌ ಉಗ್ರರ ಪಟ್ಟಿಗೆ ಸೇರಿಸಿತ್ತು. ಇದಕ್ಕೂ ಮೊದಲು ಖಲಿಸ್ತಾನಿ ಉಗ್ರ, ಖಲಿಸ್ತಾನ್‌ ನಾಯಕ, ಬಂಧಿತ ಅಮೃತ್‌ಪಾಲ್‌ ಸಿಂಗ್‌ನ ಆಪ್ತ, ಲಂಡನ್‌ನಲ್ಲಿರುವ ಭಾರತದ ಹೈಕಮಿಷನ್‌ ಕಚೇರಿ ಮೇಲೆ ಖಲಿಸ್ತಾನಿಗಳು ದಾಳಿ ನಡೆಸಿದ್ದರ ರೂವಾರಿ ಅವತಾರ್‌ ಸಿಂಗ್‌ ಖಂಡಾ ಲಂಡನ್‌ನಲ್ಲಿ ಮೃತಪಟ್ಟಿದ್ದ. ಅಮೃತ್‌ಪಾಲ್‌ ಸಿಂಗ್‌ ಬಂಧನದ ಬಳಿಕ ಕೆನಡಾದಲ್ಲಿರುವ ಖಲಿಸ್ತಾನಿಗಳು ಇನ್ನಷ್ಟು ತೀವ್ರವಾಗಿ ಉಗ್ರ ಚಟುವಟಿಕೆಗಳಲ್ಲಿ ತೊಡಗಿದ್ದರು.

ಇದನ್ನೂ ಓದಿ: Hardeep Singh Nijjar: ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜಾರ್‌ ಹತ್ಯೆಯಾಗಿ ಒಂದು ವರ್ಷ; ಮೌನ ಆಚರಿಸಿ ಗೌರವ ಸಲ್ಲಿಸಿದ ಕೆನಡಾ ಸಂಸತ್ತು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರವಾಸ

Khajjiar Tour: ಖಜ್ಜಿಯಾರ್! ಇದು ಹಿಮಾಲಯದ ತಪ್ಪಲಿನಲ್ಲಿರುವ ಮಿನಿ ಸ್ವಿಟ್ಜರ್ಲೆಂಡ್!

ಏಕಾಂಗಿಯಾಗಿ ಪ್ರವಾಸ ಮಾಡಲು ಬಯಸುವವರು ಖಜ್ಜಿಯಾರ್‌ಗೆ (Khajjiar Tour) ಭೇಟಿ ನೀಡಬಹುದು. ಆದರೆ ಪ್ರವಾಸಕ್ಕಾಗಿ ಎಚ್ಚರಿಕೆಯ ಯೋಜನೆಗಳನ್ನು ಮಾಡುವ ಮೂಲಕ, ಸ್ಥಳೀಯ ಅಭ್ಯಾಸಗಳಿಂದ ಕಲಿಯುವ ಮೂಲಕ ಮತ್ತು ಆ ಸ್ಥಳದ ಸಂಸ್ಕೃತಿಯೊಂದಿಗೆ ಬೆರೆಯುವ ಮೂಲಕ ಪ್ರವಾಸವನ್ನು ಸ್ಮರಣೀಯಗೊಳಿಸಬಹುದು. ಇಲ್ಲಿನ ಬೆಟ್ಟಗಳ ಮಾಂತ್ರಿಕ ಸೌಂದರ್ಯ, ಏಕಾಂತ ಅನುಭವ ಕೊಡುವ ಸುರಕ್ಷಿತ ಮತ್ತು ಆನಂದದಾಯಕ ತಾಣಗಳಲ್ಲಿ ಸುತ್ತಾಡಲು ಮರೆಯದಿರಿ.

VISTARANEWS.COM


on

By

Khajjiar Tour
Koo

ಈ ಗಿರಿಧಾಮವು ಹಸಿರು ಹುಲ್ಲುಗಾವಲುಗಳು, ದಟ್ಟವಾದ ಪೈನ್ ಕಾಡುಗಳು ಮತ್ತು ಶಾಂತವಾದ ಸರೋವರದಂತಹ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಏಕಾಂಗಿಯಾಗಿ ಪ್ರಕೃತಿಯ ಮಡಿಲಲ್ಲಿ ಅನ್ವೇಷಿಸಲು ಬಯಸುವ ಪ್ರವಾಸ ಪ್ರಿಯರಿಗೆ ಇದು ಆಯ್ಕೆ ಮಾಡಿಕೊಳ್ಳಬಹುದಾದ ಸೂಕ್ತವಾದ ತಾಣವಾಗಿದೆ.

ಹಿಮಾಲಯದ ತಪ್ಪಲಿನಲ್ಲಿರುವ ಖಜ್ಜಿಯಾರ್ (Khajjiar Tour) ಹಿಮಾಚಲ ಪ್ರದೇಶದಲ್ಲಿರುವ (himachal pradesh  hill station) ಅತ್ಯಾಕರ್ಷಕ ಗಿರಿಧಾಮವಾಗಿದೆ. ಇದನ್ನು ಸಾಮಾನ್ಯವಾಗಿ “ಮಿನಿ ಸ್ವಿಟ್ಜರ್ಲೆಂಡ್ ಆಫ್ ಇಂಡಿಯಾ” (Mini Switzerland of India) ಎಂದು ಕರೆಯಲಾಗುತ್ತದೆ. ನೆಮ್ಮದಿ ಮತ್ತು ಸಾಹಸವನ್ನು ಬಯಸುವ ಪ್ರವಾಸಿಗಳಿಗೆ ಇದು ಸೂಕ್ತ ತಾಣವಾಗಿದೆ.

ಖಜ್ಜಿಯಾರ್‌ಗೆ ಒಂಟಿಯಾಗಿ ಪ್ರವಾಸ ಮಾಡಬೇಕು ಎಂದು ಬಯಸುವವರು ಮೊದಲು ಸರಿಯಾದ ಸಿದ್ಧತೆ, ಸ್ಥಳದ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಳ್ಳುವುದು ಉತ್ತಮ. ಇದರಿಂದ ಪ್ರವಾಸವನ್ನು ಸುರಕ್ಷಿತವಾಗಿ ಮತ್ತು ಹೆಚ್ಚು ಆನಂದದಾಯಕವಾಗಿ ಕಳೆಯಬಹುದು.

Khajjiar Tour
Khajjiar Tour


ಸರಿಯಾದ ಯೋಜನೆ ಹಾಕಿಕೊಳ್ಳಿ

ಖಜ್ಜಿಯಾರ್‌ಗೆ ಪ್ರವಾಸ ಹೊರಡುವ ಮೊದಲು ಪ್ರವಾಸವನ್ನು ಹೆಚ್ಚು ಆನಂದದಾಯಕವಾಗಿಸಲು ತಯಾರಿಯನ್ನು ಮುಂಚಿತವಾಗಿಯೇ ಮಾಡಿಕೊಳ್ಳಬೇಕು. ಅದರಲ್ಲಿ ಮುಖ್ಯವಾಗಿ ಋತುವಿನ ಆಯ್ಕೆ. ಖಜ್ಜಿಯಾರ್‌ಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಮಾರ್ಚ್‌ನಿಂದ ಜೂನ್‌ವರೆಗಿನ ಬೇಸಿಗೆಕಾಲ ಅಥವಾ ಸೆಪ್ಟೆಂಬರ್ ಮತ್ತು ನವೆಂಬರ್ ನಡುವಿನ ಶರತ್ಕಾಲದ ಆರಂಭ ಹೆಚ್ಚು ಸೂಕ್ತವಾಗಿದೆ. ಈ ಸಂದರ್ಭದಲ್ಲಿ ಇಲ್ಲಿ ಹೆಚ್ಚು ಬಿಸಿಯಾಗಿರುವುದಿಲ್ಲ ಅಥವಾ ತಂಪಾಗಿರುವುದಿಲ್ಲ ಆದರೆ ಸ್ಪಷ್ಟವಾದ ಆಕಾಶದ ಜೊತೆಗೆ ಆರಾಮದಾಯಕವಾದ ತಾಪಮಾನ ಸುಂದರ ಪ್ರವಾಸದ ಅನುಭವವನ್ನು ಕೊಡುತ್ತದೆ.

ವಸತಿ ವ್ಯವಸ್ಥೆ ಮೊದಲೇ ಮಾಡಿಕೊಳ್ಳಿ. ಖಜ್ಜಿಯಾರ್‌ನಲ್ಲಿ ಸಾಕಷ್ಟು ಹೊಟೇಲ್ , ರೆಸಾರ್ಟ್‌ ಅಥವಾ ಹೋಮ್ ಸ್ಟೇಗಳಿವೆ. ಕೆಲವು ಕಾರಣಗಳಿಗಾಗಿ ಏಕಾಂಗಿ ಪ್ರಯಾಣಿಕರು ಹೋಮ್‌ಸ್ಟೇಗಳನ್ನೇ ಇಷ್ಟಪಡುತ್ತಾರೆ. ಪೀಕ್ ಸೀಸನ್‌ಗಳಲ್ಲಿ ಈ ಸ್ಥಳದಲ್ಲಿ ವಾಸ್ತವ್ಯವನ್ನು ಆನಂದಿಸಲು ಬಯಸಿದರೆ ಸಾಕಷ್ಟು ಮುಂಚಿತವಾಗಿ ಬುಕ್ ಮಾಡಲು ಮರೆಯದಿರಿ.

ಸಾರಿಗೆ ವಿಧಾನ ಆಯ್ಕೆ ಮೊದಲೇ ಮಾಡಿಕೊಳ್ಳಿ. ಖಜ್ಜಿಯಾರ್‌ನಿಂದ ಸುಮಾರು 24 ಕಿಲೋಮೀಟರ್ ದೂರದಲ್ಲಿರುವ ಡಾಲ್‌ಹೌಸಿಯು ಅತ್ಯಂತ ಹತ್ತಿರದ ಮಹತ್ವದ ನಗರವಾಗಿದೆ. ಟ್ಯಾಕ್ಸಿ ಅಥವಾ ಸ್ಥಳೀಯ ಬಸ್ಸು ಮೂಲಕ ಡಾಲ್ ಹೌಸಿಯಿಂದ ಖಜ್ಜಿಯಾರ್‌ಗೆ ತಲುಪಬಹುದು. ಏಕಾಂಗಿಯಾಗಿ ಖಜ್ಜಿಯಾರ್ ಗೆ ಪ್ರಯಾಣಿಸುತ್ತಿದ್ದರೆ, ಟ್ಯಾಕ್ಸಿಗಳು ಸುಲಭವಾಗಿ ಲಭ್ಯವಿರುತ್ತವೆ. ಇದು ಸುತ್ತಮುತ್ತಲಿನ ಇತರ ಆಸಕ್ತಿದಾಯಕ ಸ್ಥಳಗಳಿಗೆ ಭೇಟಿ ನೀಡುವುದನ್ನು ಸುಲಭಗೊಳಿಸುತ್ತದೆ.

Khajjiar Tour
Khajjiar Tour


ವಿವಿಧ ಚಟುವಟಿಕೆಯನ್ನು ಆನಂದಿಸಿ

ಖಜ್ಜಿಯಾರ್ ಅದ್ಭುತವಾದ ಪ್ರಶಾಂತತೆಯನ್ನು ಹೊಂದಿದ್ದು, ಇಲ್ಲಿ ಏಕಾಂಗಿ ಪ್ರವಾಸ ಮಾಡುವವರು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಬಹುದು.

ಹಸಿರು ಹುಲ್ಲುಗಾವಲು ಮತ್ತು ದೇವದಾರು ಮರಗಳ ನಡುವೆ ನೆಲೆಗೊಂಡಿರುವ ಖಜ್ಜಿಯಾರ್ ಸರೋವರಕ್ಕೆ ಭೇಟಿ ನೀಡುವ ಮೂಲಕ ಇಲ್ಲಿ ಪ್ರಯಾಣವನ್ನು ಪ್ರಾರಂಭಿಸಬಹುದು. ಸರೋವರದ ಸುತ್ತಲೂ ಕಾಲ್ನಡಿಗೆಯಲ್ಲಿ ಅಥವಾ ಅದರ ದಡದಲ್ಲಿ ಪ್ಯಾಡಲ್ ಬೋಟ್ ಅನ್ನು ಬಾಡಿಗೆಗೆ ತೆಗೆದುಕೊಳ್ಳುವ ಮೂಲಕ ಇಲ್ಲಿ ಮಾಡಬಹುದಾದ ಕೆಲವು ಚಟುವಟಿಕೆಗಳು ಅಥವಾ ಸುಮ್ಮನೆ ಕುಳಿತು ಪ್ರಶಾಂತತೆಯನ್ನು ಆನಂದಿಸಬಹುದು.

ಐತಿಹಾಸಿಕ ಖಜ್ಜಿಯಾರ್ ನಾಗ್ ದೇವಾಲಯದಲ್ಲಿ ಹಾವಿಗೆ ಪೂಜೆ ಸಲ್ಲಿಸಲಾಗುತ್ತದೆ. ಇತಿಹಾಸ ಮತ್ತು ಸಂಸ್ಕೃತಿಯನ್ನು ಪ್ರೀತಿಸುತ್ತಿದ್ದರೆ ಇದು ಸೂಕ್ತ ಪ್ರವಾಸ ಸ್ಥಳವಾಗಿದೆ. ಪ್ರಕೃತಿ ಪ್ರಿಯರು ಕಲಾಟಾಪ್ ವನ್ಯಜೀವಿ ಅಭಯಾರಣ್ಯದಲ್ಲಿ ಪಾದಯಾತ್ರೆಯನ್ನು ನಡೆಸಬಹುದು. ಹಿಮಾಲಯನ್ ಕಪ್ಪು ಕರಡಿಗಳು ಮತ್ತು ಹಲವಾರು ಪಕ್ಷಿಗಳು ಸೇರಿದಂತೆ ವಿವಿಧ ರೀತಿಯ ಪ್ರಾಣಿ ಮತ್ತು ಸಸ್ಯಗಳನ್ನು ಇಲ್ಲಿ ಕಾಣಬಹುದು. ಏಕಾಂಗಿಯಾಗಿ ಪ್ರವಾಸ ಮಾಡಲು ಬಯಸುವವರು ನೆಮ್ಮದಿಯನ್ನು ಹುಡುಕುತ್ತಿದ್ದರೆ ಇಲ್ಲಿ ಅದನ್ನು ಪಡೆಯಬಹುದು.

ಖಜ್ಜಿಯಾರ್‌ನಲ್ಲಿ ಸಾಹಸವನ್ನು ಹುಡುಕುವವರಿಗೆ ಇಲ್ಲಿ ಝೋರ್ಬಿಂಗ್ ಮತ್ತು ಪ್ಯಾರಾಗ್ಲೈಡಿಂಗ್‌ಗೆ ಅವಕಾಶಗಳಿವೆ. ಸುತ್ತಲಿನ ಕಣಿವೆಗಳು ಮತ್ತು ಬೆಟ್ಟಗಳ ನಡುವೆ ರೋಮಾಂಚಕ ಅನುಭವವನ್ನು ಪಡೆಯಬಹುದು.

Khajjiar Tour
Khajjiar Tour


ಸುರಕ್ಷತೆಯ ಕಡೆ ಗಮನವಿರಲಿ

ಏಕಾಂಗಿ ಪ್ರಯಾಣಿಕರು ಖಜ್ಜಿಯಾರ್‌ಗೆ ಭೇಟಿ ನೀಡುವಾಗ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಏಕಾಂಗಿಯಾಗಿ ಹೊರಗೆ ಹೋಗುವವರು, ಹಿಂತಿರುಗುವ ಬಗ್ಗೆ ವಸತಿ ಒದಗಿಸುವವರು ಅಥವಾ ನಂಬಲರ್ಹ ವ್ಯಕ್ತಿಗೆ ತಿಳಿಸಿ ಹೋಗಬೇಕು.

ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಾಗ ಡ್ರೆಸ್ಸಿಂಗ್ ಮಾಡುವಂತಹ ಸ್ಥಳೀಯ ಪದ್ಧತಿ ಮತ್ತು ಸಂಪ್ರದಾಯಗಳನ್ನು ಗಮನಿಸಿ. ಯಾವುದೇ ಅನಿರೀಕ್ಷಿತ ಸಂದರ್ಭಗಳಲ್ಲಿ ಸ್ಥಳೀಯ ಅಧಿಕಾರಿಗಳು ಅಥವಾ ದೇಶದ ರಾಯಭಾರ ಕಚೇರಿ/ದೂತಾವಾಸ ಕಚೇರಿಗಳು ಸೇರಿದಂತೆ ತುರ್ತು ಸಂಪರ್ಕ ಸಂಖ್ಯೆಗಳನ್ನು ನೆನಪಿಡಿ. ಆರೋಗ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ.ನೀರು, ಅಗತ್ಯವಿರುವ ಔಷಧಗಳು ಜೊತೆಯಲ್ಲಿ ಇರಲಿ.

ಇದನ್ನೂ ಓದಿ: Varanasi Tour: ವಾರಣಾಸಿಗೆ ಹೋದಾಗ ನೋಡಲೇಬೇಕಾದ ಅದ್ಭುತ ಸ್ಥಳಗಳಿವು

Khajjiar Tour
Khajjiar Tour


ಸ್ಥಳೀಯ ಸಂಸ್ಕೃತಿಯನ್ನು ಆನಂದಿಸಿ

ಹಿಮಾಚಲ ಪ್ರದೇಶದ ಸ್ಥಳೀಯ ಆಹಾರ ಮತ್ತು ಅದರ ಸರಳತೆ ಮತ್ತು ರುಚಿಗೆ ಹೆಸರುವಾಸಿಯಾಗಿದೆ. ಹೀಗಾಗಿ ಇಲ್ಲಿನ ವಿವಿಧ ಭಕ್ಷ್ಯಗಳನ್ನು ಪ್ರಯತ್ನಿಸಿ. ಸ್ಥಳೀಯರೊಂದಿಗೆ ಸಂವಹನ ನಡೆಸಿ ಅವರ ಜೀವನ, ಪದ್ಧತಿಗಳು ಮತ್ತು ಜಾನಪದದ ಬಗ್ಗೆ ತಿಳಿದುಕೊಳ್ಳಿ. ಇದು ಖಜ್ಜಿಯಾರ್‌ಗೆ ಸಂಬಂಧಿಸಿದ ಒಳನೋಟಗಳನ್ನು ನೀಡುತ್ತದೆ. ಕೈಯಿಂದ ಮಾಡಿದ ಉಣ್ಣೆಬಟ್ಟೆಗಳು, ಕರಕುಶಲ ವಸ್ತುಗಳು ಅಥವಾ ಸ್ಮಾರಕಗಳ ಸ್ಥಳೀಯ ಮಾರುಕಟ್ಟೆಗಳು ಇಲ್ಲಿ ಸಾಕಷ್ಟು ನೆನಪುಗಳನ್ನು ಕಟ್ಟಿಕೊಡುತ್ತದೆ.

Continue Reading

ದೇಶ

INDIA Bloc To Protest: ಬಜೆಟ್‌ ತಾರತಮ್ಯ ಖಂಡಿಸಿ ನಾಳೆ ಸಂಸತ್ತಿನಲ್ಲಿ ‘ಇಂಡಿಯಾ’ ಒಕ್ಕೂಟದಿಂದ ಪ್ರತಿಭಟನೆ

INDIA Bloc To Protest: ಮೂಲಗಳ ಪ್ರಕಾರ, ವಿರೋಧ ಪಕ್ಷದ ಸಂಸದರು ಬುಧವಾರ ಬೆಳಗ್ಗೆ 10.30ಕ್ಕೆ ಸಂಸತ್ತಿನ ಮೆಟ್ಟಿಲುಗಳ ಬಳಿ ಪ್ರತಿಭಟನೆ ಆರಂಭಿಸಲಿದ್ದಾರೆ ಎನ್ನಲಾಗಿದೆ.

VISTARANEWS.COM


on

INDIA Bloc To Protest
Koo

ನವದೆಹಲಿ: ಕಳೆದ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಸ್ಪಷ್ಟ ಬಹುಮತ ಪಡೆದ ಎನ್‌ಡಿಎ ಮೈತ್ರಿಕೂಟವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಇದೇ ಮೊದಲ ಬಜೆಟ್‌ ಅನ್ನು ಜನರ ಮುಂದಿಟ್ಟಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಮಂಗಳವಾರ ಏಳನೇ ಬಾರಿಗೆ ಬಜೆಟ್‌ (Union Budget 2024) ಮಂಡಿಸಿದರು. ಆದರೆ ಈ ಬಜೆಟ್​ ಆಂಧ್ರಪ್ರದೇಶ ಹಾಗೂ ಬಿಹಾರ ಹೊರತುಪಡಿಸಿ ಬೇರೆ ರಾಜ್ಯಗಳಿಗೆ ಬಜೆಟ್‌ನಿಂದ ಯಾವುದೇ ಅನುಕೂಲ ಆಗಿಲ್ಲ ಎಂದು ಆರೋಪಿಸಿರುವ ವಿರೋಧ ಪಕ್ಷದ ಇಂಡಿಯಾ(INDIA) ಒಕ್ಕೂಟ ನಾಳೆ (ಬುಧವಾರ) ಸಂಸತ್ತಿನಲ್ಲಿ ಪ್ರತಿಭಟನೆ(INDIA Bloc To Protest) ನಡೆಸಲು ನಿರ್ಧರಿಸಿದೆ. ಇದೊಂದು “ತಾರತಮ್ಯ”ದ ಬಜೆಟ್​ ಎಂದು ಕರೆದಿದೆ.

ಬಜೆಟ್​ ಮುಕ್ತಾಯದ ಬಳಿಕ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Congress chief Mallikarjun Kharge) ಅವರ ನಿವಾಸದಲ್ಲಿ ಭಾರತ ಬ್ಲಾಕ್ ಪಕ್ಷಗಳ ಉನ್ನತ ನಾಯಕರು ಸಭೆ ನಡೆಸಿ ನಾಳೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಖರ್ಗೆ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಸಂಸದರಾದ ರಾಹುಲ್ ಗಾಂಧಿ ಮತ್ತು ಕೆಸಿ ವೇಣುಗೋಪಾಲ್, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್, ಶಿವಸೇನೆ (ಯುಬಿಟಿ) ಸಂಸದರಾದ ಸಂಜಯ್ ರಾವುತ್ ಮತ್ತು ಅರವಿಂದ್ ಸಾವಂತ್, ಡಿಎಂಕೆ ಸಂಸದರಾದ ಟಿಆರ್ ಬಾಲು ಮತ್ತು ತಿರುಚಿ ಶಿವ, ಜಾರ್ಖಂಡ್ ಮುಕ್ತಿ ಮುಂತಾದ ನಾಯಕರು ಭಾಗವಹಿಸಿದ್ದರು. ಮೋರ್ಚಾ ಸಂಸದ ಮಹುವಾ ಮಜಿ, ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ, ಆಮ್ ಆದ್ಮಿ ಪಕ್ಷದ ಸಂಸದರಾದ ಸಂಜಯ್ ಸಿಂಗ್ ಮತ್ತು ರಾಘವ್ ಚಡ್ಡಾ ಮತ್ತಿತರರು ಭಾಗಿಯಾಗಿದ್ದರು.

ಇದನ್ನೂ ಓದಿ CM Siddaramaiah: ರೈತರು, ರಾಜ್ಯಕ್ಕೆ ಕೇಂದ್ರ ಪಂಗನಾಮ; ತಿಂಡಿ ತಿನ್ನುತ್ತಲೇ ಬಜೆಟ್‌ ಬಗ್ಗೆ ಸಿದ್ದರಾಮಯ್ಯ ಆಕ್ರೋಶ

ಮೂಲಗಳ ಪ್ರಕಾರ, ವಿರೋಧ ಪಕ್ಷದ ಸಂಸದರು ಬುಧವಾರ ಬೆಳಗ್ಗೆ 10.30ಕ್ಕೆ ಸಂಸತ್ತಿನ ಮೆಟ್ಟಿಲುಗಳ ಬಳಿ ಪ್ರತಿಭಟನೆ ಆರಂಭಿಸಲಿದ್ದಾರೆ ಎನ್ನಲಾಗಿದೆ. ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕೆ.ಸಿ.ವೇಣುಗೋಪಾಲ್, ಈ ಬಾರಿಯ ಕೇಂದ್ರ ಬಜೆಟ್‌ನಿಂದ ಈಗಾಗಲೇ ಬಜೆಟ್ ಪರಿಕಲ್ಪನೆಯನ್ನು ನಾಶಪಡಿಸಿದೆ. ಅವರು ಬಹುತೇಕ ರಾಜ್ಯಗಳನ್ನು ಸಂಪೂರ್ಣವಾಗಿ ತಾರತಮ್ಯ ಮಾಡಿದ್ದಾರೆ, ಆದ್ದರಿಂದ ನಾವು ಪ್ರತಿಭಟನೆಗೆ ಮುಂದಾಗಿದ್ದೇವೆ ಎಂದು ತಿಳಿಸಿದರು.

ಮೋದಿ ಮೆಚ್ಚುಗೆ


ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಈ ಬಜೆಟ್​ಗೆ ಮೆಚ್ಚುಗೆ ಸೂಚಿಸಿದ್ದಾರೆ.​ “ದೇಶದ ಸರ್ವಾಂಗೀಣ ಏಳಿಗೆಗೆ ಈ ಬಜೆಟ್‌ ಏಣಿಯಾಗಿದೆ” ಎಂಬುದಾಗಿ ವಿಡಿಯೊ ಸಂದೇಶದ ಮೂಲಕ ಬಣ್ಣಿಸಿದ್ದಾರೆ. “ದೇಶದ ಎಲ್ಲ ವರ್ಗದವರನ್ನು ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್‌ ಮಂಡಿಸಲಾಗಿದೆ. ಯುವಕರಿಗೆ ಉದ್ಯೋಗ, ಬಡವರಿಗೆ ಮನೆ ನಿರ್ಮಾಣ, ಸಣ್ಣ ಉದ್ಯಮಗಳು, ಶಿಕ್ಷಣ ಸೇರಿ ಎಲ್ಲ ಕ್ಷೇತ್ರಗಳ ಏಳಿಗೆಯನ್ನು ಗಮನದಲ್ಲಿಟ್ಟುಕೊಂಡು ಮಂಡಿಸಲಾಗಿದೆ. ಅಷ್ಟೇ ಅಲ್ಲ, ಭಾರತವು ಮೂಲ ಸೌಕರ್ಯ ಉತ್ಪಾದಿಸುವಲ್ಲಿ ಜಾಗತಿಕ ಮಳಿಗೆಯಾಗುತ್ತದೆ. ಭಾರತದ ಅಭಿವೃದ್ಧಿಗೆ ಹೊಸ ವೇಗ ಸಿಗಲಿದೆ. ಅಷ್ಟರಮಟ್ಟಿಗೆ, ಪ್ರಸಕ್ತ ಸಾಲಿನ ಮುಂಗಡಪತ್ರವು ದೇಶದ ಏಳಿಗೆಯನ್ನು ಪ್ರತಿನಿಧಿಸುತ್ತದೆ” ಎಂಬುದಾಗಿ ಹೇಳಿದ್ದಾರೆ.

ಶಿಕ್ಷಣ ಹಾಗೂ ಕೌಶಲ ವೃದ್ಧಿಯ ದೃಷ್ಟಿಯಿಂದಲೂ ಬಜೆಟ್‌ ಪ್ರಮುಖವಾಗಿದೆ. ಶಿಕ್ಷಣ ಹಾಗೂ ಕೌಶಲಾಭಿವೃದ್ಧಿಯಿಂದ ಮಧ್ಯಮ ವರ್ಗದ ಜನರಿಗೆ ಭಾರಿ ಅನುಕೂಲವಾಗಲಿದೆ. ಅವರಿಗೆ ಹೊಸ ಶಕ್ತಿಯೇ ಸಿಗಲಿದೆ. ದಲಿತರು ಹಾಗೂ ಬುಡಕಟ್ಟು ಸಮುದಾಯದವರಿಗೂ ಇದರಿಂದ ಸಹಕಾರಿಯಾಗಲಿದೆ. ಹಣಕಾಸು ನೆರವು ಕೂಡ ಸಿಗುವುದರಿಂದ ದಮನಿತರು ಏಳಿಗೆಯ ಹಾದಿ ಹಿಡಿಯಲು ಸಾಧ್ಯವಾಗಲಿದೆ” ಎಂದು ತಿಳಿಸಿದರು.

Continue Reading

ಕರ್ನಾಟಕ

Pralhad Joshi: ನವಭಾರತ ನಿರ್ಮಾಣಕ್ಕೆ ಅತ್ಯುತ್ತಮ ಬಜೆಟ್: ಸಚಿವ ಪ್ರಲ್ಹಾದ್‌ ಜೋಶಿ ಶ್ಲಾಘನೆ

Pralhad Joshi: ಭಾರತದ ಆರ್ಥಿಕ ಪ್ರಗತಿ, ಸಾಮರ್ಥ್ಯದ ಜತೆಗೆ ಯುವಜನತೆ, ಮಹಿಳೆಯರು ಮತ್ತು ರೈತರ ಅಭಿವೃದ್ಧಿಯ ಬದ್ಧತೆಯನ್ನು ಈ ಬಜೆಟ್ ಸಾಬೀತುಪಡಿಸಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

VISTARANEWS.COM


on

Union Minister Pralhad Joshi statement about Union Budget
Koo

ನವದೆಹಲಿ: ಎನ್‌ಡಿಎ ಸರ್ಕಾರ ನವಭಾರತ ನಿರ್ಮಾಣಕ್ಕೆ ಪ್ರಸ್ತುತದಲ್ಲಿ ಅತ್ಯುತ್ತಮ ಬಜೆಟ್ ಸಮರ್ಪಿಸಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ತಿಳಿಸಿದ್ದಾರೆ.

ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಭಾರತದ ಆರ್ಥಿಕ ಪ್ರಗತಿ, ಸಾಮರ್ಥ್ಯದ ಜತೆಗೆ ಯುವಜನತೆ, ಮಹಿಳೆಯರು ಮತ್ತು ರೈತರ ಅಭಿವೃದ್ಧಿಯ ಬದ್ಧತೆಯನ್ನು ಈ ಬಜೆಟ್ ಸಾಬೀತುಪಡಿಸಿದೆ ಎಂದು ಪ್ರತಿಪಾದಿಸಿದರು.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಈ ಬಜೆಟ್ ವಿಶೇಷವಾಗಿ ಯುವ ಜನರಲ್ಲಿ ವಿಶ್ವಾಸವನ್ನು ತುಂಬುತ್ತದೆ ಎಂದ ಅವರು, ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ ಮಧ್ಯಮ, ಕೆಳ ವರ್ಗ ಮತ್ತು ಬಡ ಜನರಿಗೆ ಪ್ರಯೋಜನಕಾರಿ ಹಾಗೂ ವಿಶ್ವದ ಅತ್ಯುತ್ತಮ ಯೋಜನೆಗಳಲ್ಲಿ ಇದು ಒಂದಾಗಿದೆ ಎಂದು ಹೇಳಿದರು.

ಇದನ್ನೂ ಓದಿ: R Ashok: ರೈತ ಸ್ನೇಹಿ, ತೆರಿಗೆ ಹೊರೆ ರಹಿತ, ಸರ್ವ ಜನಕೇಂದ್ರಿತ, ಸುಭದ್ರ ಬಜೆಟ್‌: ಆರ್‌. ಅಶೋಕ್‌ ಶ್ಲಾಘನೆ

ಪ್ರಸ್ತುತ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಶಿಕ್ಷಣ, ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ಈ ಮೂಲಕ ವಿಕಸಿತ ಭಾರತಕ್ಕೆ ಮಾರ್ಗ ತೋರಿದ್ದಾರೆ ಎಂದು ತಿಳಿಸಿದರು.

ಎಂಎನ್‌ಆರ್‌ಇ ವಲಯದ ಬಗ್ಗೆ ಪ್ರತಿಕ್ರಿಯಿಸಿ, ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಈಗಾಗಲೇ 1.28 ಕೋಟಿಗೂ ಹೆಚ್ಚು ನೋಂದಣಿ ಮತ್ತು 14 ಲಕ್ಷ ಅರ್ಜಿ ಸಲ್ಲಿಕೆಯಾಗಿವೆ. ಮೇಲ್ಛಾವಣಿ ಸೌರ ಫಲಕ ಅಳವಡಿಸಲು ಅನುಕೂಲ ಆಗುವಂತೆ ಈ ಯೋಜನೆ ಪ್ರಾರಂಭಿಸಲಾಗಿದೆ ಎಂದು ಸಚಿವ ಜೋಶಿ ಮಾಹಿತಿ ನೀಡಿದರು.

300 ಯುನಿಟ್‌ವರೆಗೆ ಉಚಿತ ವಿದ್ಯುತ್

ಸೂರ್ಯ ಘರ್ ಯೋಜನೆ ಒಂದು ಕೋಟಿ ಮನೆಗಳಿಗೆ ಪ್ರತಿ ತಿಂಗಳು 300 ಯೂನಿಟ್‌ವರೆಗೆ ಉಚಿತ ವಿದ್ಯುತ್ ಕಲ್ಪಿಸಲಿದೆ ಎಂದು ತಿಳಿಸಿದರು.

ನಿರ್ಣಾಯಕ ಮತ್ತು ಕಡಲಾಚೆಯ ಖನಿಜಗಳ ಗಣಿಗಾರಿಕೆ: 25 ನಿರ್ಣಾಯಕ ಖನಿಜಗಳ ಮೇಲಿನ ಕಸ್ಟಮ್ಸ್ ವಿನಾಯಿತಿ ಮತ್ತು 2 ಖನಿಜಗಳ ಮೇಲೆ ಮೂಲಭೂತ ಕಸ್ಟಮ್ ಸುಂಕವನ್ನು (ಬಿಸಿಡಿ) ಕಡಿತಗೊಳಿಸಲಾಗಿದೆ. ಇದು ನಿರ್ಣಾಯಕ ಖನಿಜಗಳ ಪೂರೈಕೆಯನ್ನು ಸರಳ ಮತ್ತು ಸುವ್ಯವಸ್ಥಿತಗೊಳಿಸಲಿ ಎಂದು ಹೇಳಿದರು.

ಇದನ್ನೂ ಓದಿ: Bengaluru Power Cut: ಜು.25ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಇಂಧನ ಪರಿವರ್ತನಾ ಮಾರ್ಗಗಳ ಕುರಿತು ವಿವರಿಸಿದ ಸಚಿವರು, ನವೀಕರಿಸಬಹುದಾದ ಇಂಧನವನ್ನು ಕೇಂದ್ರೀಕರಿಸುವ ಬಹು ವಲಯದ ದಾಖಲೆಯಾಗಿದೆ ಎಂದು ಅವರು ತಿಳಿಸಿದರು.

Continue Reading

ವಿದೇಶ

Kimberly Cheatle: ಯುಎಸ್ ಸೀಕ್ರೆಟ್ ಸರ್ವೀಸ್ ಡೈರೆಕ್ಟರ್ ಹುದ್ದೆಗೆ ಕಿಂಬರ್ಲಿ ಚೀಟಲ್ ದಿಢೀರ್​ ರಾಜೀನಾಮೆ

Kimberly Cheatle: ಭದ್ರತಾ ಲೋಪದ ಸಂಪೂರ್ಣ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ. ಜತೆಗೆ ನನ್ನ ನಿರ್ದೇಶಕ ಸ್ಥಾನದಿಂದ ಕೆಳಗಿಳಿಯುವ ಕಠಿಣ ನಿರ್ಧಾರವನ್ನು ನಾನು ತೆಗೆದುಕೊಂಡಿದ್ದೇನೆ ಎಂದು ಮೇಲ್‌ನಲ್ಲಿ ಬರೆಯುವ ಮೂಲಕ ಚೀಟಲ್ ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದಾರೆ.

VISTARANEWS.COM


on

kimberly cheatle
Koo

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆ(US Presidential Election) ಪ್ರಚಾರದಲ್ಲಿ ಭಾಗಿಯಾಗಿದ್ದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌(Donald Trump Assassination Bid) ಮೇಲಿನ ಗುಂಡಿನ ದಾಳಿ(Shootout) ಯತ್ನವನ್ನು ತಡೆಯುವ ಕಾರ್ಯಾಚರಣೆಯಲ್ಲಿ ತನ್ನ ಸಂಸ್ಥೆ ವಿಫಲವಾದ ಕಾರಣದಿಂದ ಯುಎಸ್ ಸೀಕ್ರೆಟ್ ಸರ್ವೀಸ್ ಡೈರೆಕ್ಟರ್(US Secret Service Director ) ಕಿಂಬರ್ಲಿ ಚೀಟಲ್ (Kimberly Cheatle) ಅವರು ತಮ್ಮ ಹುದ್ದೆಗೆ ಮಂಗಳವಾರ ರಾಜೀನಾಮೆ ಸಲ್ಲಿಸಿದ್ದಾರೆ.

ಪ್ರಚಾರ ಸಭೆಯಲ್ಲಿ 20 ವರ್ಷದ ಬಂದೂಕುಧಾರಿ ಮಾಜಿ ರಿಪಬ್ಲಿಕನ್ ಅಧ್ಯಕ್ಷ ಮತ್ತು ಪ್ರಸ್ತುತ ಶ್ವೇತಭವನದ ಅಭ್ಯರ್ಥಿಯನ್ನು ಗಾಯಗೊಳಿಸಿದ ಪ್ರಕರಣದಲ್ಲಿ ಚೀಟಲ್ ರಾಜೀನಾಮೆ ನೀಡಬೇಕು ಎಂದು ರಾಜಕೀಯ ಪಕ್ಷಗಳು ಒತ್ತಾಯಿಸಿದ್ದವು. ಇದೀಗ ಚೀಟಲ್ ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದಾರೆ.

“ಭದ್ರತಾ ಲೋಪದ ಸಂಪೂರ್ಣ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ. ಜತೆಗೆ ನನ್ನ ನಿರ್ದೇಶಕ ಸ್ಥಾನದಿಂದ ಕೆಳಗಿಳಿಯುವ ಕಠಿಣ ನಿರ್ಧಾರವನ್ನು ನಾನು ತೆಗೆದುಕೊಂಡಿದ್ದೇನೆ” ಎಂದು ಮೇಲ್‌ನಲ್ಲಿ ಬರೆಯುವ ಮೂಲಕ ಚೀಟಲ್ ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದಾರೆ.

ಜುಲೈ 13 ಶನಿವಾರದಂದು ಪೆನ್ಸಿಲ್ವೇನಿಯಾದ ಬಟ್ಲರ್ನ್‌ನಲ್ಲಿ ಸಂಜೆ ನಡೆದ ರ್ಯಾಲಿಯಲ್ಲಿ ಟ್ರಂಪ್‌ ಮಾತನಾಡುತ್ತಿದ್ದ ವೇಳೆ ಈ ಗುಂಡಿನ ದಾಳಿ ನಡೆದಿದ್ದು, ಟ್ರಂಪ್ ಅವರ ಬಲ ಕಿವಿಗೆ ಗುಂಡು ತಗುಲಿತ್ತು. ದಾಳಿಯಿಂದ ಟ್ರಂಪ್‌ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು.

ಪ್ರಧಾನಿ ನರೇಂದ್ರ ಮೋದಿ ಕೂಡ ಟ್ರಂಪ್ ಮೇಲಿನ ದಾಳಿಯನ್ನು ಖಂಡಿಸಿದ್ದರು. ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ‘ನನ್ನ ಸ್ನೇಹಿತ ಡೊನಾಲ್ಡ್‌ ಟ್ರಂಪ್‌ ಮೇಲೆ ನಡೆದಿರುವ ದಾಳಿ ನಿಜಕ್ಕೂ ಆಘಾತಕಾರಿ ವಿಚಾರ. ಈ ಘಟನೆಯನ್ನು ನಾನು ಖಂಡಿಸುತ್ತೇನೆ. ರಾಜಕೀಯ ಮತ್ತು ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಅವಕಾಶ ಇಲ್ಲ. ಅವರು ಶೀಘ್ರವೇ ಚೇತರಿಸಿಕೊಳ್ಳಲಿ. ಇನ್ನು ಘಟನೆಯಲ್ಲಿ ಗಾಯಗೊಂಡವರು ಕೂಡ ಗುಣಮುಖರಾಗಲಿ ಎಂದು ಹಾರೈಸುತ್ತೇನೆ’ ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ Donald Trump: ಅಮೆರಿಕವೂ ಐರನ್ ಡೋಮ್ ಕ್ಷಿಪಣಿ ತಯಾರಿಸಲಿದೆ; ಡೊನಾಲ್ಡ್‌ ಟ್ರಂಪ್‌ ಸೂಚನೆ

ಎದುರಾಳಿಗಳಿಗೆ ಎಚ್ಚರಿಕೆ


ನವೆಂಬರ್‌ನಲ್ಲಿ ನಡೆಯುವ ಚುನಾವಣೆಯ ನಂತರ ತಾವು ಶ್ವೇತಭವನಕ್ಕೆ ಮರಳುವ ಮೊದಲು ಅಮೆರಿಕದ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು 78 ವರ್ಷದ ಟ್ರಂಪ್ ವಿರೋಧಿಗಳಿಗೆ ಕಠಿಣ ಎಚ್ಚರಿಕೆಯನ್ನೂ ನೀಡಿದ್ದಾರೆ.

ತಮ್ಮ ಸುದೀರ್ಘ ಭಾಷಣದಲ್ಲಿ ಟ್ರಂಪ್ ಹಣದುಬ್ಬರ, ಅಕ್ರಮ ವಲಸೆ ಮತ್ತು ಹಲವು ಅಂತಾರಾಷ್ಟ್ರೀಯ ಬಿಕ್ಕಟ್ಟುಗಳಿಗೆ ಜೋ ಬೈಡನ್ ಆಡಳಿತವನ್ನು ದೂಷಿಸಿದರು. “ನಾವು ನಮ್ಮ ಸೈನ್ಯವನ್ನು ಇನ್ನಷ್ಟು ಬಲಪಡಿಸುತ್ತೇವೆ ಮತ್ತು ಯಾವುದೇ ಶತ್ರು ನಮ್ಮ ತಾಯ್ನಾಡಿನ ಮೇಲೆ ದಾಳಿ ಮಾಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಐರನ್ ಡೋಮ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ನಿರ್ಮಿಸುತ್ತೇವೆ” ಎಂದು ಘೋಷಿಸಿದರು. ಅದಾಗ್ಯೂ ಟ್ರಂಪ್ ಪ್ರಸ್ತಾಪಿಸಿದ ಐರನ್ ಡೋಮ್ ವ್ಯವಸ್ಥೆಯ ಉದ್ದೇಶವು ಅಸ್ಪಷ್ಟವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಯಾಕೆಂದರೆ ಇದನ್ನು ಅಲ್ಪ-ಶ್ರೇಣಿಯ ರಾಕೆಟ್‌ಗಳನ್ನು ತಡೆಹಿಡಿಯಲು ವಿನ್ಯಾಸಗೊಳಿಸಲಾಗುತ್ತದೆ. ಆದರೆ ಅಮೆರಿಕ ಗಡಿಗಳಲ್ಲಿ ಅಂತಹ ಯಾವುದೇ ಬೆದರಿಕೆಗಳಿಲ್ಲ ಎಂದಿದ್ದಾರೆ.

Continue Reading
Advertisement
karnataka Weather Forecast
ಮಳೆ5 mins ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

Khajjiar Tour
ಪ್ರವಾಸ11 mins ago

Khajjiar Tour: ಖಜ್ಜಿಯಾರ್! ಇದು ಹಿಮಾಲಯದ ತಪ್ಪಲಿನಲ್ಲಿರುವ ಮಿನಿ ಸ್ವಿಟ್ಜರ್ಲೆಂಡ್!

Allergies During Monsoon
ಆರೋಗ್ಯ35 mins ago

Allergies During Monsoon: ಮಳೆಗಾಲದಲ್ಲಿ ಅಲರ್ಜಿ ಸಮಸ್ಯೆಯಿಂದ ಪಾರಾಗುವುದು ಹೇಗೆ?

Dina Bhavishya
ಭವಿಷ್ಯ2 hours ago

Dina Bhavishya : ಈ ರಾಶಿಯವರಿಗೆ ಸಂಗಾತಿಯ ಮಧುರ ಪ್ರೀತಿ ಸಿಗಲಿದೆ

INDIA Bloc To Protest
ದೇಶ7 hours ago

INDIA Bloc To Protest: ಬಜೆಟ್‌ ತಾರತಮ್ಯ ಖಂಡಿಸಿ ನಾಳೆ ಸಂಸತ್ತಿನಲ್ಲಿ ‘ಇಂಡಿಯಾ’ ಒಕ್ಕೂಟದಿಂದ ಪ್ರತಿಭಟನೆ

Paris Olympics
ಕ್ರೀಡೆ8 hours ago

Paris Olympics: ಪ್ಯಾರಿಸ್​ ಒಲಿಂಪಿಕ್ಸ್​ಗೂ ವಕ್ಕರಿಸಿದ ಕೊರೊನಾ ಸೋಂಕು; ಮೊದಲ ಪ್ರಕರಣ ಪತ್ತೆ

Union Minister Pralhad Joshi statement about Union Budget
ಕರ್ನಾಟಕ8 hours ago

Pralhad Joshi: ನವಭಾರತ ನಿರ್ಮಾಣಕ್ಕೆ ಅತ್ಯುತ್ತಮ ಬಜೆಟ್: ಸಚಿವ ಪ್ರಲ್ಹಾದ್‌ ಜೋಶಿ ಶ್ಲಾಘನೆ

The Kaftan kannada Album Song Release
ಕರ್ನಾಟಕ8 hours ago

The Kaptan Song: ‘ದ ಕಪ್ತಾನ್’ ಆಲ್ಬಂ ಸಾಂಗ್ ಬಿಡುಗಡೆ

kimberly cheatle
ವಿದೇಶ8 hours ago

Kimberly Cheatle: ಯುಎಸ್ ಸೀಕ್ರೆಟ್ ಸರ್ವೀಸ್ ಡೈರೆಕ್ಟರ್ ಹುದ್ದೆಗೆ ಕಿಂಬರ್ಲಿ ಚೀಟಲ್ ದಿಢೀರ್​ ರಾಜೀನಾಮೆ

Womens Asia Cup
ಕ್ರೀಡೆ9 hours ago

Womens Asia Cup: ಶಫಾಲಿ ಬ್ಯಾಟಿಂಗ್​ ಆರ್ಭಟ; ಭಾರತಕ್ಕೆ ಹ್ಯಾಟ್ರಿಕ್​ ಜಯ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ5 mins ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ12 hours ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

Udupi News
ಉಡುಪಿ13 hours ago

Udupi News : ಹಳೆ ಲಾರಿ ಚಾಸ್ಸಿಯಲ್ಲೇ ಕಿರು ಸೇತುವೆ ನಿರ್ಮಾಣ! ಬೈಂದೂರು ಶಾಸಕರ ಪರಿಕಲ್ಪನೆಗೆ ಜನರು ಫಿದಾ

murder case
ರಾಮನಗರ17 hours ago

Murder Case : ರಾಮನಗರದಲ್ಲೊಂದು ಪೈಶಾಚಿಕ ಕೃತ್ಯ; ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ4 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ5 days ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ5 days ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ6 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ6 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

ಟ್ರೆಂಡಿಂಗ್‌