Motivational story | ಖುಷಿಪಡಲು ಕೂಡಾ ಸಮಯ ಇಲ್ಲದಿದ್ದರೆ ಯಾವ ಸಾಧನೆ ಮಾಡಿ ಏನು ಪ್ರಯೋಜನ? - Vistara News

ಪ್ರಮುಖ ಸುದ್ದಿ

Motivational story | ಖುಷಿಪಡಲು ಕೂಡಾ ಸಮಯ ಇಲ್ಲದಿದ್ದರೆ ಯಾವ ಸಾಧನೆ ಮಾಡಿ ಏನು ಪ್ರಯೋಜನ?

Motivational story | ನಿರಂತರವಾದ ಪರಿಶ್ರಮದಿಂದ ವಿಶ್ವನಾಥ ರಾವ್‌ ದೊಡ್ಡ ಸಾಧನೆ ಮಾಡಿದರು. ಆದರೆ, ಅನುಭವಿಸುವ ಹೊತ್ತಿಗೆ ಅವರೇ ಇರಲಿಲ್ಲ! ಎಲ್ಲರೂ ತಿಳಿದುಕೊಳ್ಳಬೇಕಾದ ಬದುಕಿನ ಕಥೆ ಇದು.

VISTARANEWS.COM


on

life
ಪ್ರಾತಿನಿಧಿಕ ಚಿತ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೃಷ್ಣ ಭಟ್‌ ಅಳದಂಗಡಿ-motivational story
ವಿಶ್ವನಾಥ ರಾವ್ ತುಂಬ ಪರಿಶ್ರಮಿ. ತನ್ನ ಕುಟುಂಬ ಖುಷಿಯಾಗಿರಬೇಕು ಎನ್ನುವ ಕಾರಣಕ್ಕಾಗಿ ಹಗಲಿರುಳು ಕಷ್ಟಪಟ್ಟು ದುಡಿಯೋ ಮನುಷ್ಯ. ಹೆಂಡತಿ ಮತ್ತು ಮೂರು ಜನ ಮಕ್ಕಳು ಚೆನ್ನಾಗಿರಬೇಕು, ಹಾಗಾಗಿ ಒಳ್ಳೆಯ ಸಂಪಾದನೆ ಮಾಡಬೇಕು ಎನ್ನುವುದು ಅವರ ಮಹದಾಸೆ.

ಅವರು ಆರಂಭದಲ್ಲಿ ಒಂದು ಸಣ್ಣ ಉದ್ಯೋಗದಲ್ಲಿದ್ದರು. ಉನ್ನತ ಅಧ್ಯಯನ ನಡೆಸಿದರೆ ದೊಡ್ಡ ವೇತನದ ದೊಡ್ಡ ಕೆಲಸ ಸಿಕ್ಕೀತು ಎಂದು ಅಧ್ಯಯನಕ್ಕೆ ತೊಡಗಿದರು. ಅವರ ನಿರೀಕ್ಷೆ ತಪ್ಪಾಗಲಿಲ್ಲ. ಮೊದಲಿನದಕ್ಕಿಂತ ಸ್ವಲ್ಪ ಒಳ್ಳೆಯ ಕೆಲಸ ಸಿಕ್ಕಿತು. ಆದರೆ, ರಾಯರಿಗೆ ಇನ್ನೂ ಸ್ವಲ್ಪ ಹೆಚ್ಚು ವೇತನದ ಕೆಲಸ ಬೇಕು ಎನ್ನುವ ಆಸೆ.

ರಾಯರ ಓದು ಮತ್ತು ಕೆಲಸದ ಆಸೆಗಳಿಂದಾಗಿ ಅವರು ವಾರವಿಡೀ ಹೆಂಡತಿಗಾಗಲೀ, ಮಕ್ಕಳಿಗಾಗಲಿ ಸಿಗುತ್ತಲೇ ಇರಲಿಲ್ಲ. ಸಂಜೆ ಬಂದು ಓದಲಿಕ್ಕೆ ಕುಳಿತುಕೊಳ್ಳುತ್ತಿದ್ದರು. ಭಾನುವಾರವೂ ಏನಾದರೂ ಕೆಲಸ ಹಿಡಿದುಕೊಂಡು ಕುಳಿತುಕೊಳ್ಳುತ್ತಿದ್ದರು.

ಹೆಂಡತಿ ಕೆಲವೊಮ್ಮೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ನೀವು ನಮಗೆ ಸಿಗುವುದೇ ಇಲ್ಲ, ಮಕ್ಕಳೂ ಬೇಜಾರು ಮಾಡ್ತಾರೆ ಅಂತ ಹೇಳುತ್ತಿದ್ದರು. ಆದರೆ, `ಇದೆಲ್ಲ ನಿಮಗಾಗಿಯೇ ಕಣೆ. ಒಳ್ಳೆಯ ಉದ್ಯೋಗ ಸಿಗಲಿ, ಒಳ್ಳೆಯ ವೇತನ ಬರಲಿ. ಆಮೇಲೆ ನಾನು ನಿಮಗೆ ಫುಲ್ ಟೈಮ್ ಕೊಡ್ತೇನೆ. ಸಾಧನೆಗೆ ಒಂದಿಷ್ಟು ತ್ಯಾಗ ಮಾಡಬೇಕಾಗುತ್ತದೆ ಅಂತ ಹೇಳುವುದನ್ನು ನೀನೂ ಕೇಳಿದ್ದೀಯಲ್ವಾ’ ಎಂದು ಅವರನ್ನು ಒಪ್ಪಿಸುತ್ತಿದ್ದರು.

ಪರೀಕ್ಷೆಗಳು ನಡೆದು ಡಿಸ್ಟಿಂಕ್ಷನ್ ಅಂಕ ಸಿಕ್ಕಿ ಒಳ್ಳೆಯ ಉದ್ಯೋಗವೂ ದೊರೆಯಿತು ರಾಯರಿಗೆ. ರಾಯರು ಹೆಂಡತಿ, ಮಕ್ಕಳಿಗೆ ಒಳ್ಳೆಯ ಡ್ರೆಸ್ ಕೊಡಿಸಿದರು. ವಿದೇಶ ಪ್ರವಾಸಕ್ಕೆ ಬೇಕಾದರೂ ಹೋಗುವಷ್ಟು ಅವಕಾಶವಿತ್ತು. ಆದರೆ, ರಾಯರಿಗೆ ಇನ್ನೊಂದು ಪ್ರಮೋಷನ್ ಪಡೆದು ಮ್ಯಾನೇಜರ್ ಆಗುವ ಆಸೆ. ಹಾಗಾಗಿ ಅವರು ರಾತ್ರಿ ಹಗಲು ದುಡಿದರು. ಅವರ ವರ್ಕ್‍ಹಾಲಿಕ್ ಗುಣಕ್ಕೆ ಕಂಪನಿಯೂ ತಲೆದೂಗಿತು.

ಅವರ ನಿರೀಕ್ಷೆಯಂತೆ ಪ್ರಮೋಷನ್ ಕೂಡಾ ಸಿಕ್ಕಿತು. ಅವರೀಗ ಮ್ಯಾನೇಜರ್. ಮೊದಲೇ ಒಳ್ಳೆಯ ಮನೆ ಮಾಡಿದ್ದರು. ಹೆಂಡತಿ ಬೇಡ ಎಂದು ಹೇಳಿದರೂ ಮನೆ ಕೆಲಸಕ್ಕೆ ಜನ ಮಾಡಿದರು. ಹೆಂಡತಿಗೆ ಯಾವ ರೀತಿಯಲ್ಲೂ ತೊಂದರೆ ಆಗಬಾರದು ಎಂಬ ಕಾಳಜಿ ಅವರದ್ದು. ಮಕ್ಕಳಿಗೂ ಕೂಡಾ ಬೇಕಾದ್ದನ್ನು ಕೊಡಿಸಿದರು. ಈ ನಡುವೆ, ಮ್ಯಾನೇಜರ್ ಆಗಿದ್ದರಿಂದ ಕ್ಲೈಂಟ್ ಮೀಟ್ ಸೇರಿದಂತೆ ಹಲವು ಕಾರಣಕ್ಕೆ ಭಾನುವಾರವೂ ಮನೆಯಲ್ಲಿ ಇರಲು ಆಗುತ್ತಿರಲಿಲ್ಲ.

ಹೆಂಡತಿ ಮತ್ತು ಮಕ್ಕಳು ತುಂಬ ಒತ್ತಾಯ ಮಾಡಿದ ಬಳಿಕ ವಿಶ್ವನಾಥ ರಾಯರು ಇನ್ನು ಕೆಲಸ ಮಾಡಿದ್ದು ಸಾಕು ಎಂಬ ತೀರ್ಮಾನಕ್ಕೆ ಬಂದರು. ಅವರಿಗೆ ಅವರ ಸಾಧನೆಯ ಬಗ್ಗೆ ಹೆಮ್ಮೆ ಇತ್ತು. ರಾತ್ರಿ ಹಗಲು ದುಡಿದೆ, ವಿದ್ಯಾಭ್ಯಾಸ ಮಾಡಿದೆ, ಒಳ್ಳೆಯ ಉದ್ಯೋಗ ಮಾಡಿ ಫ್ಲ್ಯಾಟ್, ಭೂಮಿ ಎಲ್ಲ ಖರೀದಿಸಿದೆ. ಇನ್ನು ಸಾಕು, ಮನೆ ಮಂದಿಯೊಂದಿಗೆ ಖುಷಿಯಾಗಿ ಕಾಲ ಕಳೆಯಬೇಕು ಎಂದು ತೀರ್ಮಾನಿಸಿದರು.

ಆವತ್ತು ಮನೆ ಮಂದಿಯನ್ನೆಲ್ಲ ಕರೆದರು. ಸ್ನೇಹಿತರಿಗೂ ಆಹ್ವಾನ ನೀಡಿ ತನ್ನ ಕನಸಿನ ಬದುಕನ್ನು ತೋರಿಸಿದರು. ಎಲ್ಲರೂ ಚೆನ್ನಾಗಿ ಊಟ ಮಾಡಿ ಶುಭ ಹಾರೈಸಿದರು. ರಾತ್ರಿ ತುಂಬ ಹೊತ್ತು ಪಾರ್ಟಿ ನಡೆದು ಎಲ್ಲರೂ ತಮ್ಮ ಮನೆಗೆ ತೆರಳಿದರು. ವಿಶ್ವನಾಥ ರಾಯರು ತಮ್ಮ ಸಾರ್ಥಕ ಬದುಕಿನ ಸಂಭ್ರಮದಲ್ಲಿ ಹಾಗೇ ನಿರಾಳವಾಗಿ ನಿದ್ದೆ ಹೋದರು.

ಬೆಳಗ್ಗೆ ತುಂಬ ಹೊತ್ತಾದರೂ ವಿಶ್ವನಾಥ ರಾಯರು ಏಳಲೇ ಇಲ್ಲ. ಹೆಂಡತಿ ಹಲವು ಬಾರಿ ಎಬ್ಬಿಸಿದರೂ ಸುದ್ದಿ ಇಲ್ಲ.

ಇದನ್ನೂ ಓದಿ | Motivational story | ಅವನು ದೋಣಿಗೆ ಬಣ್ಣ ಹಚ್ಚಿದ್ದಷ್ಟೇ ಅಲ್ಲ ಎಷ್ಟೋ ಪ್ರಾಣಗಳನ್ನೂ ಉಳಿಸಿದ್ದ, ಹೇಗೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral Video: ಹಾವನ್ನೇ ಮಣಿಸಿ ʼಸ್ನೇಹಿತʼನ ಜೀವ ಉಳಿಸಿದ ಹಲ್ಲಿ! ಅದ್ಭುತ ವಿಡಿಯೊ; ತಪ್ಪದೇ ನೋಡಿ!

Viral Video: ಹಲ್ಲಿಯೊಂದನ್ನು ಬಂಡೆಯ ಅಂಚಿನ ಮೇಲೆ ಹಾವೊಂದು ಹಿಡಿದು ಅದರ ದೇಹವನ್ನು ಸುತ್ತಿಕೊಂಡಿತ್ತು. ಹಾವಿನ ಬಿಗಿಯಾದ ಹಿಡಿತದಿಂದ ಒದ್ದಾಡುತ್ತಾ ಆ ಹಲ್ಲಿ ತನ್ನ ಜೀವಕ್ಕಾಗಿ ಹೋರಾಡುತ್ತಿತ್ತು. ಆದರೆ ಹಾವಿನ ಬಿಗಿಯಾದ ಹಿಡಿತದೊಂದಿಗೆ ಹೋರಾಡುತ್ತಿರುವ ಹಲ್ಲಿಗೆ ಇನ್ನು ಆಯುಷ್ಯವಿದ್ದಿರಬೇಕು. ಹಾಗಾಗಿ ಈ ಸಮಯದಲ್ಲಿ ಅಲ್ಲಿಗೆ ಬಂದ ಮತ್ತೊಂದು ಹಲ್ಲಿ ಧೈರ್ಯದಿಂದ ತನ್ನ ಸ್ನೇಹಿತನಿಗೆ ಸಹಾಯ ಮಾಡಲು ಮುಂದಾಗುವುದನ್ನು ನೋಡಿದರೆ ಎಂಥವರಿಗೂ ಆಶ್ಚರ್ಯವಾಗುವುದು ಖಂಡಿತ.

VISTARANEWS.COM


on

Viral Video
Koo


ಸಾಮಾನ್ಯವಾಗಿ ಮನುಷ್ಯರಲ್ಲಿ ಸ್ನೇಹಿತನೊಬ್ಬ ಸಂಕಷ್ಟದಲ್ಲಿದ್ದಾಗ ಮತ್ತೊಬ್ಬ ಸ್ನೇಹಿತ ಸಹಾಯಕ್ಕೆ ಬರುವುದನ್ನು ನಾವು ಹೆಚ್ಚಾಗಿ ನೋಡುತ್ತೇವೆ. ಹಾಗೇ ಪ್ರಾಣಿಗಳು ಸಹ ತಮ್ಮ ಸ್ನೇಹಿತನ ಮೇಲೆ ಆಕ್ರಮಣ ನಡೆದರೆ ಅದನ್ನು ಕಾಪಾಡಲು ಬರುವುದನ್ನು ನಾವು ಹಲವು ಬಾರಿ ನೋಡಿರುತ್ತೇವೆ. ಆದರೆ ಚಿಕ್ಕ ಪುಟ್ಟ ಜೀವಿಗಳು ಕೂಡ ತಮ್ಮ ಸಹಚರರು ಸಂಕಷ್ಟದಲ್ಲಿದ್ದಾಗ ಸಹಾಯಕ್ಕೆ ಬರುವುದನ್ನು ನೋಡಿದಾಗ ಆಶ್ಚರ್ಯವಾಗುವುದು ಖಂಡಿತ. ಇದೀಗ ಹಲ್ಲಿಯೊಂದು ಸಂಕಷ್ಟದಲ್ಲಿರುವ ತನ್ನ ಸ್ನೇಹಿತನ ಸಹಾಯಕ್ಕೆ ಬಂದು ಅದರ ಜೀವ ಉಳಿಸಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ. ಇದನ್ನು ಕಂಡು ಅನೇಕರು ಆಶ್ಚರ್ಯಚಕಿತರಾಗಿದ್ದಾರೆ.

ಹಲ್ಲಿಯೊಂದನ್ನು ಬಂಡೆಯ ಅಂಚಿನ ಮೇಲೆ ಹಾವೊಂದು ಹಿಡಿದು ಅದರ ದೇಹವನ್ನು ಸುತ್ತಿಕೊಂಡಿತ್ತು. ಹಾವಿನ ಬಿಗಿಯಾದ ಹಿಡಿತದಿಂದ ಒದ್ದಾಡುತ್ತಾ ಆ ಹಲ್ಲಿ ತನ್ನ ಜೀವಕ್ಕಾಗಿ ಹೋರಾಡುತ್ತಿತ್ತು. ಆದರೆ ಹಾವಿನ ಬಿಗಿಯಾದ ಹಿಡಿತದೊಂದಿಗೆ ಹೋರಾಡುತ್ತಿರುವ ಹಲ್ಲಿಗೆ ಇನ್ನು ಆಯುಷ್ಯವಿದ್ದಿರಬೇಕು. ಹಾಗಾಗಿ ಈ ಸಮಯದಲ್ಲಿ ಅಲ್ಲಿಗೆ ಬಂದ ಮತ್ತೊಂದು ಹಲ್ಲಿ ಧೈರ್ಯದಿಂದ ತನ್ನ ಸ್ನೇಹಿತನಿಗೆ ಸಹಾಯ ಮಾಡಲು ಮುಂದಾಗುವುದನ್ನು ನೋಡಿದರೆ ಎಂತವರಿಗೂ ಆಶ್ಚರ್ಯವಾಗುವುದು ಖಂಡಿತ.

ಹಲ್ಲಿ ಹಾವನ್ನು ಮುಖಾಮುಖಿಯಾಗಿ ಎದುರಿಸಿದೆ. ಹಾವು ಅದಕ್ಕೆ ಕಚ್ಚುತ್ತಿದ್ದರೂ ತನ್ನ ಸುರಕ್ಷತೆಯನ್ನು ಪಣಕ್ಕಿಟ್ಟು, ಸಿಕ್ಕಿಬಿದ್ದ ತನ್ನ ಸಹಚರನನ್ನು ಉಳಿಸಲು ಅದು ಧೈರ್ಯಶಾಲಿಯಾಗಿ ಹೋರಾಡಲು ಪ್ರಾರಂಭಿಸಿದೆ. ಆಗ ಹಾವು ತನ್ನ ಹಿಡಿತ ಕಳೆದುಕೊಂಡು ಕೆಳಗೆ ಬಿದ್ದಿದೆ. ಧೈರ್ಯಶಾಲಿ ಹಲ್ಲಿಯ ಪಟ್ಟುಬಿಡದ ದೃಢನಿಶ್ಚಯವು ಈ ಜಯಕ್ಕೆ ಕಾರಣವಾಗಿದೆ ಮತ್ತು ಇದರಿಂದ ಸ್ನೇಹಿತನ ಜೀವ ಉಳಿದಿದೆ. ಕೊನೆಗೂ ಸ್ನೇಹವು ಶತ್ರುವಿನ ಮೇಲೆ ಜಯ ಸಾಧಿಸಿದೆ.

ಇದನ್ನೂ ಓದಿ: ಕಚೇರಿಯ ಟೇಬಲ್‌ನೊಳಗೆ ಅಡಗಿದ್ದ ಬೃಹತ್‌ ಹಾವನ್ನು ಹಿಡಿದ ಮಹಿಳಾ ಸಿಬ್ಬಂದಿ! ವಿಡಿಯೊ ನೋಡಿ

ಈ ಅದ್ಭುತವಾದ ವಿಡಿಯೊವು ನಿಜವಾದ ಸ್ನೇಹಿತರು ಒಬ್ಬರಿಗೊಬ್ಬರು ಸಹಾಯ ಮಾಡಲು ಯಾವ ಮಟ್ಟಕ್ಕೂ ಬೇಕಾದರೂ ಹೋಗುತ್ತಾರೆ ಎಂಬುದನ್ನು ಸೂಚಿಸುತ್ತದೆ. ಸ್ನೇಹಕ್ಕಾಗಿ ಮನುಷ್ಯರು ಮಾತ್ರವಲ್ಲ ಪ್ರಾಣಿಗಳು ಹಾಗೂ ಇತರ ಜೀವಿಗಳು ಕೂಡ ಹೋರಾಡುತ್ತವೆ ಎಂಬುದನ್ನು ಈ ವಿಡಿಯೊದಲ್ಲಿ ನಾವು ಕಾಣಬಹುದು. ಅಲ್ಲದೇ ಈ ವಿಡಿಯೊದಲ್ಲಿ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದು ಸಹ ಸಾಬೀತಾಗಿದೆ. ಶತ್ರುವಿನ ಜೊತೆ ಜೊತೆಯಾಗಿ ನಿಂತು ಹೋರಾಡಿದರೆ ಅವರ ಮೇಲೆ ಜಯ ಸಾಧಿಸಬಹುದು ಎಂಬುದನ್ನು ಈ ವಿಡಿಯೊ ತಿಳಿಸುತ್ತದೆ.

Continue Reading

Latest

Street Girlfriends: 115 ರೂ.ಗೆ ಚುಂಬನ, 11 ರೂ.ಗೆ ಬಿಸಿ ಅಪ್ಪುಗೆಯ ಸುಖ; ಸ್ಟ್ರೀಟ್‌ ಗರ್ಲ್‌ಫ್ರೆಂಡ್ ಟ್ರೆಂಡ್‌!

Street Girlfriends: ಕೆಲವೊಮ್ಮೆ ಹೆಗಲ ಮೇಲೆ ಬಿದ್ದ ಜವಾಬ್ದಾರಿಗಳ ಹೊರೆ ಯಾವುದೇ ಕೆಲಸವಾದರೂ ಸೈ ಅನ್ನುವ ಹಾಗೇ ಮಾಡುತ್ತದೆ. ಇದಕ್ಕೆ ನಿದರ್ಶನವೆಂಬಂತೆ ಚೀನಾದಲ್ಲಿ ಈಗ ಸ್ಟ್ರೀಟ್ ಗರ್ಲ್‌ಫ್ರೆಂಡ್‌ ಟ್ರೆಂಡ್ ಹುಟ್ಟಿಕೊಂಡಿದೆ. ಚೀನಾದ ಯುವತಿಯರು ಹಣಕ್ಕಾಗಿ ಮುತ್ತು ಕೊಡುವುದು, ಅಪ್ಪಿಕೊಳ್ಳುವುದು, ಒಟ್ಟಿಗೆ ಸಿನಿಮಾ ನೋಡುವುದು, ಮನೆಗೆಲಸಕ್ಕೆ ಸಹಾಯ ಮಾಡುವುದು, ಒಟ್ಟಿಗೆ ಮದ್ಯಪಾನ ಮಾಡುವುದು ಮುಂತಾದವುಗಳ ಮೂಲಕ ಯುವಕರನ್ನು ಆಕರ್ಷಿಸುತ್ತಿದ್ದಾರೆ. ಆದರೆ ಇದರಲ್ಲಿ ಮಹಿಳೆಯರು ಯಾವುದೇ ರೀತಿಯ ದೈಹಿಕ ಸಂಬಂಧ ಹೊಂದುವುದಿಲ್ಲ ಎಂಬುದಾಗಿ ತಿಳಿಸಿದ್ದಾರೆ.

VISTARANEWS.COM


on

Viral News
Koo


ಕೆಲವು ಜನರ ಪರಿಸ್ಥಿತಿ ಹೇಗಿರುತ್ತದೆ ಅಂದರೆ ಜೀವನ ನಡೆಸಲು ಒಂದು ದಿನದ ಊಟಕ್ಕೂ ಪರದಾಡಬೇಕಾಗುತ್ತದೆ. ತಮ್ಮ ಜೊತೆಗೆ ತಮ್ಮ ಕುಟುಂಬದ ಜವಾಬ್ದಾರಿಯನ್ನು ತೆಗೆದುಕೊಂಡರ ಕತೆ ಇನ್ನೂ ಶೋಚನೀಯವಾಗಿದೆ. ಹಾಗಾಗಿ ಚೀನಾದಲ್ಲಿ ಕೆಲಸದ ಜೊತೆಗೆ ಕುಟುಂಬದ ಜವಾಬ್ದಾರಿಗಳನ್ನು ನಿಭಾಯಿಸುವ ಒತ್ತಡ ಚೀನಾದ ಯುವತಿಯರಿಗೆ ಹೆಚ್ಚಾಗಿದ್ದ ಪರಿಣಾಮ ಅವರು ಬೀದಿಯಲ್ಲಿ ಹೋಗುವ ದಾರಿಹೋಕರ ಜೊತೆ ಭಾವನಾತ್ಮಕ ಸಂಪರ್ಕಗಳನ್ನು ಬೆಳೆಸುವ ವ್ಯಾಪಾರ ಮಾಡುತ್ತಿದ್ದಾರೆ. ಹುಡುಗಿಯರು ಹಣಕ್ಕಾಗಿ ಇಂತಹ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Street Girlfriends) ಆಗಿದೆ.

Viral News
Viral News

ಚೀನಾದ ಯುವತಿಯರು ಹಣಕ್ಕಾಗಿ ಮುತ್ತು ಕೊಡುವುದು, ಅಪ್ಪಿಕೊಳ್ಳುವುದು, ಒಟ್ಟಿಗೆ ಸಿನಿಮಾ ನೋಡುವುದು, ಮನೆಗೆಲಸಕ್ಕೆ ಸಹಾಯ ಮಾಡುವುದು, ಒಟ್ಟಿಗೆ ಮದ್ಯಪಾನ ಮಾಡುವುದು ಮುಂತಾದವುಗಳ ಮೂಲಕ ಯುವಕರನ್ನು ಆಕರ್ಷಿಸುತ್ತಿದ್ದಾರೆ. ಆದರೆ ಇದರಲ್ಲಿ ಮಹಿಳೆಯರು ಯಾವುದೇ ರೀತಿಯ ದೈಹಿಕ ಸಂಬಂಧ ಹೊಂದುವುದಿಲ್ಲ ಎಂಬುದಾಗಿ ಖಡಕ್‌ ಹಾಕಿ ತಿಳಿಸುತ್ತಿದ್ದಾರೆ. ಬೀದಿಗಳಲ್ಲಿ ಕುಳಿತ ಯುವತಿಯರು ಒಂದು ಬೋರ್ಡ್‌ನಲ್ಲಿ ದರಗಳನ್ನು ಪಟ್ಟಿ ಮಾಡಿದ್ದಾರೆ ಮತ್ತು ಅದರ ಜೊತೆಗೆ ‘ನೋ ಸೆಕ್ಸ್’ ಎಂದು ಸ್ಪಷ್ಟವಾಗಿ ಬರೆದಿದ್ದಾರೆ. ಇವರದೇನಿದ್ದರೂ ʼಸ್ಪರ್ಶ ಸುಖʼದ ವ್ಯವಹಾರ ಮಾತ್ರ!

Viral News
Viral News

ಇತ್ತೀಚೆಗೆ, ಖ್ಯಾತ ಇಂಟರ್ನೆಟ್ ಬಳಕೆದಾರರು ಶೆನ್ಜೆನ್‍ನ ಗದ್ದಲದ ಬೀದಿಗಳಲ್ಲಿ ಯುವತಿಯರ ಈ ರೀತಿಯ ವ್ಯಾಪಾರವನ್ನು ನೋಡಿದ್ದಾರೆ. ಯುವತಿಯರು ಹಣಕ್ಕಾಗಿ ಬೀದಿಯಲ್ಲಿ ಅಪ್ಪುಗೆ, ಚುಂಬನ ಮುಂತಾದವುಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಡಿದ್ದು, ಚರ್ಚೆಗೆ ಕಾರಣವಾಗಿದೆ. ಶೆನ್ಜೆನ್‍ನ ಸುರಂಗಮಾರ್ಗ ನಿಲ್ದಾಣದ ಪಕ್ಕದಲ್ಲಿ, ಯುವತಿಯೊಬ್ಬಳು “ಅಪ್ಪುಗೆಗೆ ಒಂದು ಯುವಾನ್ (14 ಯುಎಸ್ ಸೆಂಟ್ಸ್), ಚುಂಬನಕ್ಕಾಗಿ 10 ಯುವಾನ್, ಒಟ್ಟಿಗೆ ಚಲನಚಿತ್ರವನ್ನು ವೀಕ್ಷಿಸಲು 15 ಯುವಾನ್, ಮನೆಕೆಲಸಗಳಲ್ಲಿ ಸಹಾಯ ಮಾಡಲು 20 ಯುವಾನ್ (ಯುಎಸ್ $ 2.8), ನಿಮ್ಮೊಂದಿಗೆ ಕುಡಿಯಲು ಗಂಟೆಗೆ 40 ಯುವಾನ್” ಎಂಬ ಫಲಕದೊಂದಿಗೆ ಸ್ಟಾಲ್ ಅನ್ನು ಹಾಕಿದ್ದಾಳೆ. ಆಕೆಯ ಜೊತೆಗೆ ಇತರ ಇಬ್ಬರು ಮಹಿಳೆಯರು ಈ ಫಲಕದೊಂದಿಗೆ ಪಾದಚಾರಿಗಳು ನಡೆದಾಡುವ ಬೀದಿ ಚೌಕದಲ್ಲಿ ಮಳಿಗೆಗಳನ್ನು ಸ್ಥಾಪಿಸಿದ್ದಾರೆ ಎನ್ನಲಾಗಿದೆ. ಇದರಿಂದ ಅವರು ದಿನಕ್ಕೆ 100 ಯುವಾನ್ ಗಳಿಸಬಹುದು ಎಂದು ವರದಿಯಾಗಿದೆ. 1 ಯುವಾನ್‌ ಅಂದರೆ 11.55 ರೂಪಾಯಿ.

Viral News
Viral News

ಸ್ಟ್ರೀಟ್ ಗರ್ಲ್‌ಫ್ರೆಂಡ್‌ ಸೋಶಿಯಲ್ ಮೀಡಿಯಾದಲ್ಲಿ ಜನರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. “ಇದರಿಂದ ಈ ಹುಡುಗಿಯರು ವಾರಾಂತ್ಯದಲ್ಲಿ ಸಮಯವನ್ನು ಕಳೆಯಬಹುದು ಮತ್ತು ಅನೇಕ ಆಸಕ್ತಿದಾಯಕ ಜನರನ್ನು ಭೇಟಿಯಾಗಬಹುದು. ನಾನು ಅವರೊಂದಿಗೆ ಚಾಟ್ ಮಾಡಲು ಪ್ರಯತ್ನಿಸಲು ಇಷ್ಟಪಡುತ್ತೇನೆ” ಎಂದು ಒಬ್ಬರು ಬರೆದಿದ್ದಾರೆ.

“ಸ್ಟ್ರೀಟ್ ಗರ್ಲ್‌ಫ್ರೆಂಡ್ ಚಟುವಟಿಕೆಯು ಗ್ರಾಹಕರು ಮತ್ತು ಹುಡುಗಿಯರಿಬ್ಬರಿಗೂ ಸ್ವಯಂಪ್ರೇರಿತವಾಗಿದೆ. ಅಲ್ಲದೆ, ಒತ್ತಡವನ್ನು ನಿವಾರಿಸಲು ಮತ್ತು ಸಾಮಾಜಿಕವಾಗಿ ಬೆರೆಯಲು ಇದನ್ನು ಒಂದು ಮಾರ್ಗವೆಂದು ಪರಿಗಣಿಸಬಹುದು” ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ. ಆದರೆ ಇನ್ನೊಬ್ಬರು “ಮಹಿಳೆಯರ ಒಡನಾಟಕ್ಕೆ ಬೆಲೆ ತೆರುವುದು ಅಗೌರವ ಮತ್ತು ಅವರ ಘನತೆಯನ್ನು ದುರ್ಬಲಗೊಳಿಸುತ್ತದೆ.” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ವಿಚ್ಛೇದನದ ಬಳಿಕ ಪತ್ನಿಗೆ ದುಬಾರಿ ʼಜೀವನಾಂಶʼ ನೀಡಿದ ಬಾಲಿವುಡ್ ಸ್ಟಾರ್‌ಗಳಿವರು!

“ಇದು ಕಾನೂನುಬಾಹಿರವಾಗಿರಬಹುದು. ಹುಡುಗಿಯರು ತಮ್ಮ ಸುರಕ್ಷತೆಯ ಬಗ್ಗೆ ಎಚ್ಚರಿಕೆ ವಹಿಸಬೇಕು” ಎಂದು ಇನ್ನೊಬ್ಬ ವ್ಯಕ್ತಿ ಹೇಳಿದ್ದಾರೆ. ಈ ಬಗ್ಗೆ ವಕೀಲರೊಬ್ಬರು ಪೋಸ್ಟ್ ಮಾಡಿ, “ಸ್ಟ್ರೀಟ್ ಗರ್ಲ್‍ಫ್ರೆಂಡ್’ ಸೇವೆಯು ಪ್ರಸ್ತುತ ಅಸ್ತಿತ್ವದಲ್ಲಿರುವ ಕಾನೂನುಗಳ ಚೌಕಟ್ಟಿನ ಹೊರಗೆ ಕಾರ್ಯನಿರ್ವಹಿಸುತ್ತದೆ ಮತ್ತು ಇದು ವೇಶ್ಯಾವಾಟಿಕೆ ಅಥವಾ ಲೈಂಗಿಕ ಸೇವಾ ವಹಿವಾಟುಗಳಾಗಿ ರೂಪಾಂತರಗೊಳ್ಳುವ ಅಪಾಯವನ್ನು ಹೊಂದಿದೆ ಎಂಬುದಾಗಿ ತಿಳಿಸಿದ್ದಾರೆ.

Continue Reading

ವಿದೇಶ

Pavel Durov: ಮದುವೆಯಾಗದೆ 100 ಮಕ್ಕಳಿಗೆ ತಂದೆಯಾದ ಟೆಲಿಗ್ರಾಂ ಸಿಇಒ ಪಾವೆಲ್‌ ದುರೋವ್! ಈತ ರಿಯಲ್‌ ಲೈಫ್‌ ‘ವಿಕ್ಕಿ ಡೋನರ್’

Pavel Durov: 15 ವರ್ಷದ ಹಿಂದೆ ನನ್ನ ಗೆಳೆಯನೊಬ್ಬ ವಿಚಿತ್ರ ಮನವಿಯೊಂದಿಗೆ ನನ್ನ ಬಳಿ ಬಂದ. ಫಲವತ್ತತೆ (Fertility) ಸಮಸ್ಯೆಯಿಂದ ಬಳಲುತ್ತಿದ್ದು, ನಾನು ನನ್ನ ಹೆಂಡತಿ ಮಕ್ಕಳನ್ನು ಹೊಂದಲು ನೀನು ವೀರ್ಯ ದಾನ ಮಾಡಬೇಕು ಎಂದ. ಇದೆಲ್ಲ ತಮಾಷೆ ಎಂಬುದಾಗಿ ನಾನು ನಕ್ಕೆ. ಆದರೆ, ಆತ ಸೀರಿಯಸ್‌ ಆಗಿದ್ದ ಎಂಬುದಾಗಿ ಪಾವೆಲ್‌ ದುರೋವ್‌ ಅವರು ವೀರ್ಯದಾನದ ಕುರಿತ ಕುತೂಹಲಕರ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ.

VISTARANEWS.COM


on

Pavel Durov
Koo

ಮಾಸ್ಕೋ: ವಾಟ್ಸ್‌ಆ್ಯಪ್‌ ರೀತಿಯ ಮೆಸೆಂಜರ್‌ ಆ್ಯಪ್‌ ಆಗಿರುವ ಟೆಲಿಗ್ರಾಂ ಸಿಇಒ ಪಾವೆಲ್‌ ದುರೋವ್‌ (Pavel Durov) ಅವರು ಸ್ಫೋಟಕ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. “ನಾನು ಮದುವೆಯನ್ನೇ ಆಗದೆ 100 ಮಕ್ಕಳ ತಂದೆಯಾಗಿದ್ದೇನೆ” ಎಂದು ಟೆಲಿಗ್ರಾಂ ಆ್ಯಪ್‌ನಲ್ಲಿಯೇ (Telegram App) ಹಂಚಿಕೊಂಡಿದ್ದಾರೆ. ಹೌದು, ವೀರ್ಯ ದಾನದ ಮೂಲಕ ಪಾವೆಲ್‌ ದುರೋವ್‌ ಅವರು 100 ಮಕ್ಕಳ ಜನನಕ್ಕೆ ಕಾರಣರಾಗಿದ್ದಾರೆ. ಆ ಮೂಲಕ ಬಾಲಿವುಡ್‌ ನಟ ಆಯುಷ್ಮಾನ್‌ ಖುರಾನ ನಟನೆಯ ವಿಕ್ಕಿ ಡೋನರ್‌ ಸಿನಿಮಾದಂತೆ 39 ವರ್ಷದ ಪಾವೆಲ್‌ ದುರೋವ್‌ ಕೂಡ ನಿಜ ಜೀವನದ ವಿಕ್ಕಿ ಡೋನರ್‌ ಎನಿಸಿದ್ದಾರೆ.

“ನಾನು 100 ಮಕ್ಕಳ ತಂದೆ ಎಂಬುದಾಗಿ ತಿಳಿಸಿದ್ದಾರೆ. ಒಮ್ಮೆಯೂ ಮದುವೆಯಾಗದ, ಏಕಾಂಗಿಯಾಗಿಯೇ ಬದುಕಲು ಇಚ್ಛಿಸಿರುವ ನನಗೆ ಇದು ಹೇಗೆ ಸಾಧ್ಯ” ಎಂದು ಅವರು ಪ್ರಶ್ನೆ ಹಾಕಿದ್ದಾರೆ. ಬಳಿಕ ಇದು ಹೇಗೆ ಸಾಧ್ಯ ಎಂಬುದನ್ನು ವಿವರಿಸಿದ್ದಾರೆ. “15 ವರ್ಷದ ಹಿಂದೆ ನನ್ನ ಗೆಳೆಯನೊಬ್ಬ ವಿಚಿತ್ರ ಮನವಿಯೊಂದಿಗೆ ನನ್ನ ಬಳಿ ಬಂದ. ಫಲವತ್ತತೆ (Fertility) ಸಮಸ್ಯೆಯಿಂದ ಬಳಲುತ್ತಿದ್ದು, ನಾನು ನನ್ನ ಹೆಂಡತಿ ಮಕ್ಕಳನ್ನು ಹೊಂದಲು ನೀನು ವೀರ್ಯ ದಾನ ಮಾಡಬೇಕು” ಎಂದ. “ಇದೆಲ್ಲ ತಮಾಷೆ ಎಂಬುದಾಗಿ ನಾನು ನಕ್ಕೆ. ಆದರೆ, ಆತ ಸೀರಿಯಸ್‌ ಆಗಿದ್ದ” ಎಂಬುದಾಗಿ ಪಾವೆಲ್‌ ದುರೋವ್‌ ತಿಳಿಸಿದ್ದಾರೆ.

“ಮಕ್ಕಳ ಜನನಕ್ಕೆ ಕಾರಣವಾಗುವ ಸಾಮರ್ಥ್ಯ ಇರುವ ವ್ಯಕ್ತಿಯಿಂದ ವೀರ್ಯ ಪಡೆಯಬೇಕು ಎಂಬುದಾಗಿ ವೈದ್ಯರು ಹೇಳಿದ್ದಾರೆ” ಎಂದು ಗೆಳೆಯ ಮನವರಿಕೆ ಮಾಡಿದ. “ವೈದ್ಯರು ಕೂಡ ವೀರ್ಯ ದಾನ ಮಾಡುವುದು ನಾಗರಿಕ ಕರ್ತವ್ಯವಾಗಿದೆ” ಎಂಬುದಾಗಿ ನನ್ನನ್ನು ಒಪ್ಪಿಸಿದರು. “ವೈದ್ಯರು ಮನವರಿಕೆ ಮಾಡಿದ ಬಳಿಕ ನಾನು ವೀರ್ಯ ದಾನ ಮಾಡುತ್ತಲೇ ಬಂದೆ. ಈಗ ನಾನು 100 ಮಕ್ಕಳ ಜನನಕ್ಕೆ ಕಾರಣನಾಗಿದ್ದೇನೆ” ಎಂಬುದಾಗಿ ಟೆಲಿಗ್ರಾಂನಲ್ಲಿ ಪಾವೆಲ್‌ ದುರೋವ್‌ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

“ನಿಯಮಿತವಾಗಿ ನಾನು ವೀರ್ಯವನ್ನು ದಾನ ಮಾಡುತ್ತಲೇ ಬಂದೆ. ಸುಮಾರು 12 ದೇಶಗಳಲ್ಲಿ 100ಕ್ಕೂ ಅಧಿಕ ಮಕ್ಕಳು ನನ್ನಿಂದಾಗಿ ಜನಿಸಿದ್ದಾರೆ ಎಂಬ ಸಂಗತಿ ಗೊತ್ತಾಯಿತು. ಕೆಲ ವರ್ಷಗಳ ಹಿಂದೆ ನಾನು ವೀರ್ಯವನ್ನು ದಾನ ಮಾಡುವುದನ್ನು ನಿಲ್ಲಿಸಿದೆ. ಆದರೆ, ಐವಿಎಫ್‌ ಕ್ಲಿನಿಕ್‌ಗಳಲ್ಲಿ ಈಗಲೂ ನನ್ನ ವೀರ್ಯವನ್ನು ಸಂಗ್ರಹಿಸಿ ಇಟ್ಟಿದ್ದಾರೆ. ನನ್ನ ವೀರ್ಯದಿಂದ ಮಕ್ಕಳು ಜನಿಸುವ ಚಟುವಟಿಕೆಯು ನಡೆಯುತ್ತಲೇ ಇದೆ. ನಾನು ಮಾಡಿದ ಕೆಲಸಕ್ಕೆ ನನಗೆ ಹೆಮ್ಮೆ ಇದೆ. ಬೇರೆಯವರು ಕೂಡ ಇದನ್ನು ಮಾಡಬೇಕು ಎಂಬುದಾಗಿ ವಿನಂತಿಸುತ್ತೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Rajendra Nagar Tragedy: ನೆಲಮಾಳಿಗೆ ಗೇಟ್‌ಗೆ SUV ಕಾರು ಡಿಕ್ಕಿ ಹೊಡೆದಿದ್ದ ಚಾಲಕ ಅರೆಸ್ಟ್‌- ವಿಡಿಯೋ ವೈರಲ್‌

Continue Reading

ಕ್ರೀಡೆ

Manu Bhaker: ಒಂದೇ ಆವೃತ್ತಿಯಲ್ಲಿ 2 ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಮನು ಭಾಕರ್

Manu Bhaker: 22 ವರ್ಷದ ಮನು ಭಾಕರ್ ಈ ಬಾರಿಯ ಒಲಿಂಪಿಕ್ಸ್​ ಪದಕ ನಿರೀಕ್ಷೆಯ ಕ್ರೀಡಾಪಟುಗಳ ಪಟ್ಟಿಯಲ್ಲಿ ಒಬ್ಬರಾಗಿ ಕಾಣಿಸಿಕೊಂಡಿದ್ದರು. ಇದೀಗ ಭಾರತೀಯರು ನಿರೀಕ್ಷೆ ಮಾಡಿದಂತೆ ಅವರು ಒಂದಲ್ಲ 2 ಪದಕ ಗೆದ್ದು ತಮ್ಮ ಮೇಲಿಟ್ಟ ನಿರೀಕ್ಷೆಯನ್ನು ಹುಸಿಯಾಗದಂತೆ ನೋಡಿಕೊಂಡಿದ್ದಾರೆ.

VISTARANEWS.COM


on

Manu Bhaker
Koo

ಪ್ಯಾರಿಸ್​: ಭಾನುವಾರವಷ್ಟೇ 10 ಮೀಟರ್ ಮಹಿಳಾ ಏರ್ ಪಿಸ್ತೂಲ್ ವಿಭಾಗದಲ್ಲಿ ಕಂಚಿನ(Bronze Medalist Manu Bhaker) ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದ ಶೂಟರ್​ ಮನು ಭಾಕರ್(Manu Bhaker)​ ಇದೀಗ ಮತ್ತೊಂದು ಕಂಚಿನ ಪದಕ ಗೆದ್ದು ಐತಿಹಾಸಿಕ ಸಾಧನೆಯೊಂದನ್ನು ಮಾಡಿದ್ದಾರೆ.

ಮಂಗಳವಾರ ನಡೆದ 10 ಮೀ. ಏರ್‌ ಪಿಸ್ತೂಲ್‌ ಮಿಶ್ರ ತಂಡ ವಿಭಾಗದ ಸ್ಪರ್ಧೆಯಲ್ಲಿ ಸರಬ್ಜೋತ್‌ ಸಿಂಗ್‌ ಜತೆಗೂಡಿ ಮನು ಭಾಕರ್​ ಕಂಚಿನ ಪದಕ ಗೆಲ್ಲುವ ಮೂಲಕ  ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಜಯಿಸಿದ ಭಾರತದ ಮೊದಲ ಕ್ರೀಡಾಪಟು ಎಂಬ ಐತಿಹಾಸಿಕ ಸಾಧನೆ ಮಾಡಿದರು. ಭಾರತೀಯ ಜೋಡಿ ದಕ್ಷಿಣ ಕೊರಿಯಾದ ಯೆ ಜಿನ್ ಒಹ್ ಮತ್ತು ವೊನೊಹೊ ಲೀ ವಿರುದ್ಧ  16-10 ಅಂಕಗಳಿಂದ ಗೆದ್ದು ಕಂಚಿನ ಪದಕ ತನ್ನದಾಗಿಸಿಕೊಂಡಿತು.

22 ವರ್ಷದ ಮನು ಭಾಕರ್ ಈ ಬಾರಿಯ ಒಲಿಂಪಿಕ್ಸ್​ ಪದಕ ನಿರೀಕ್ಷೆಯ ಕ್ರೀಡಾಪಟುಗಳ ಪಟ್ಟಿಯಲ್ಲಿ ಒಬ್ಬರಾಗಿ ಕಾಣಿಸಿಕೊಂಡಿದ್ದರು. ಇದೀಗ ಭಾರತೀಯರು ನಿರೀಕ್ಷೆ ಮಾಡಿದಂತೆ ಅವರು ಒಂದಲ್ಲ 2 ಪದಕ ಗೆದ್ದು ತಮ್ಮ ಮೇಲಿಟ್ಟ ನಿರೀಕ್ಷೆಯನ್ನು ಹುಸಿಯಾಗದಂತೆ ನೋಡಿಕೊಂಡಿದ್ದಾರೆ.

ಕಳೆದ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲುವ ಕನಸಿನೊಂದಿಗೆ ಟೋಕಿಯೋಗೆ ಆಗಮಿಸಿದ್ದ ಮನು ಭಾಕರ್​ಗೆ ಅದೃಷ್ಟ ಕೈಕೊಟ್ಟಿತ್ತು. ಕೂಟದ ಮೊದಲ ಸ್ಪರ್ಧೆಯಲ್ಲೇ ಅವರ ಪಿಸ್ತೂಲ್​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಅವರಿಗೆ ಫೈನಲ್​ಗೇರುವ ಅವಕಾಶ ಕೈತಪ್ಪಿತ್ತು. ಮೊದಲ ಸುತ್ತಿನಲ್ಲಿ ಎದುರಾಗ ಈ ಆಘಾತದಿಂದ ಚೇತರಿಕೊಳ್ಳದ ಮನು ಆ ಬಳಿಕ ಆಡಿದ 2 ಸ್ಪರ್ಧೆಗಳಲ್ಲಿಯೂ ಏಕಾಗ್ರತೆ ಸಾಧಿಸಲು ವಿಫಲರಾಗಿ ಸೋಲು ಕಂಡಿದ್ದರು. ಇದು ಅವರ ಪದಾರ್ಪಣ ಒಲಿಂಪಿಕ್ಸ್​ ಕೂಟವಾಗಿತ್ತು. ಅಂದಿನ ಸೋಲಿನಿಂದ ಮನನೊಂದು ಶೂಟಿಂಗ್​ಗೆ ವಿದಾಯ ಹೇಳಲು ಬಯಸಿದ್ದ ಮನು ತಂದೆಯ ಆತ್ಮವಿಶ್ವಾಸದ ಮಾತಿನಂತೆ ಶೂಟಿಂಗ್​ನಲ್ಲಿ ಮುಂದುವರಿದಿದ್ದರು. ಈ ಬಾರಿ ಪ್ಯಾರಿಸ್​ನಲ್ಲಿ 2 ಪದಕ ಗೆದ್ದು ಭಾರತೀಯ ಒಲಿಂಪಿಕ್ಸ್​ ಕ್ರೀಡಾ ಇತಿಹಾಸದಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ.

ಮೋದಿ ಅಭಿನಂದನೆ 


ಪದಕ ಗೆದ್ದ ಸರಬ್ಜೋತ್‌ ಸಿಂಗ್‌ ಮತ್ತು ಮನು ಭಾಕರ್​ಗೆ ಪ್ರಧಾನಿ ನರೇಂದ್ರ ಮೋದಿ ಟ್ವಿಟರ್​ ಎಕ್ಸ್​ನಲ್ಲಿ ಅಭಿನಂದನೆ ಸಲ್ಲಿದ್ದಾರೆ. ‘ಒಲಿಂಪಿಕ್ಸ್​ನಲ್ಲಿ ನಮ್ಮ ಶೂಟರ್‌ಗಳು ನಮ್ಮನ್ನು ಹೆಮ್ಮೆ ಪಡಿಸುವುದನ್ನು ಮುಂದುವರೆಸಿದ್ದಾರೆ! ಇಬ್ಬರೂ ಶೂಟರ್​ಗಳು ಉತ್ತಮ ಕೌಶಲ್ಯ ಮತ್ತು ಟೀಮ್ ವರ್ಕ್ ತೋರಿದ್ದಾರೆ. ನಿಮ್ಮ ಈ ಸಾಧನೆಯಿಂದ ಭಾರತ ಸಂತಸಗೊಂಡಿದೆ. 2ನೇ ಪದಕ ಗೆದ್ದ ಮನು ಅವರಿಗೆ ವಿಶೇಷ ಅಭಿನಂದನೆಗಳು” ಎಂದು ಮೋದಿ ಬರೆದುಕೊಂಡಿದ್ದಾರೆ.

Continue Reading
Advertisement
Wayanad Landslide
ಕರ್ನಾಟಕ15 seconds ago

Wayanad Landslide: ಕೇರಳಕ್ಕೆ ಅಗತ್ಯವಿರುವ ಎಲ್ಲಾ ನೆರವನ್ನು ನಮ್ಮ ಸರ್ಕಾರ ನೀಡಲಿದೆ: ಸಿಎಂ ಸಿದ್ದರಾಮಯ್ಯ

Viral Video
Latest10 mins ago

Viral Video: ಹಾವನ್ನೇ ಮಣಿಸಿ ʼಸ್ನೇಹಿತʼನ ಜೀವ ಉಳಿಸಿದ ಹಲ್ಲಿ! ಅದ್ಭುತ ವಿಡಿಯೊ; ತಪ್ಪದೇ ನೋಡಿ!

Double Ismart
ಸಿನಿಮಾ14 mins ago

Double Ismart: ‘ಡಬಲ್ ಇಸ್ಮಾರ್ಟ್’ ಚಿತ್ರದ ಮೂರನೇ ಹಾಡು ರಿಲೀಸ್; ರೋಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿದ ರಾಮ್ ಪೋತಿನೇನಿ-ಕಾವ್ಯಾ ಥಾಪರ್

Olympics 2024
ಕ್ರೀಡೆ24 mins ago

Olympics 2024: ಕಂಚು ಗೆದ್ದ ಮನು-ಸರಬ್ಜೋತ್​ ಜೋಡಿಗೆ ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ, ಐಒಸಿ ಸದಸ್ಯೆ ನೀತಾ ಅಂಬಾನಿ ಅಭಿನಂದನೆ

Viral News
Latest26 mins ago

Street Girlfriends: 115 ರೂ.ಗೆ ಚುಂಬನ, 11 ರೂ.ಗೆ ಬಿಸಿ ಅಪ್ಪುಗೆಯ ಸುಖ; ಸ್ಟ್ರೀಟ್‌ ಗರ್ಲ್‌ಫ್ರೆಂಡ್ ಟ್ರೆಂಡ್‌!

Pavel Durov
ವಿದೇಶ31 mins ago

Pavel Durov: ಮದುವೆಯಾಗದೆ 100 ಮಕ್ಕಳಿಗೆ ತಂದೆಯಾದ ಟೆಲಿಗ್ರಾಂ ಸಿಇಒ ಪಾವೆಲ್‌ ದುರೋವ್! ಈತ ರಿಯಲ್‌ ಲೈಫ್‌ ‘ವಿಕ್ಕಿ ಡೋನರ್’

UGCET 2024
ಬೆಂಗಳೂರು33 mins ago

UGCET 2024 : ಯುಜಿಸಿಇಟಿ ಆಪ್ಶನ್ ದಾಖಲಿಸಲು ಮತ್ತಷ್ಟು ದಿನ ಅವಕಾಶ

Viral Video
Latest34 mins ago

Viral Video: ಪ್ರೇಮಿಯೊಂದಿಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮಹಿಳೆ; ಗ್ರಾಮಸ್ಥರು ನೀಡಿದರು ಅಮಾನುಷ ಶಿಕ್ಷೆ

Murder Attempt
ಕ್ರೈಂ44 mins ago

Murder Attempt: ದಟ್ಟ ಅರಣ್ಯದಲ್ಲಿ ಮಹಿಳೆಯನ್ನು ಸರಪಳಿಯಿಂದ ಕಟ್ಟಿ ಪರಾರಿಯಾದ ಮಾಜಿ ಪತಿ!

Viral Video
ವೈರಲ್ ನ್ಯೂಸ್50 mins ago

Viral Video: ಯೋಗಿ ಆದಿತ್ಯನಾಥ್‌ ಕಾಲಿಗೆ ಎರಗಿದ ರಾಜಾ ಭಯ್ಯಾ; ಉತ್ತರ ಪ್ರದೇಶ ರಾಜಕೀಯದಲ್ಲಿ ಹೊಸ ಅಧ್ಯಾಯ ಎಂದ ನೆಟ್ಟಿಗರು

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ2 hours ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ3 hours ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ22 hours ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ23 hours ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ1 day ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ2 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ2 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ2 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ2 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ3 days ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ಟ್ರೆಂಡಿಂಗ್‌