Motivational story: ಅಪ್ಪನ ಆಸೆಯಂತೆಯೇ ಅವಳು ಡಾಕ್ಟರ್‌ ಆಗಿ ಮರಳಿದ್ದಳು.. ಆದರೆ.. - Vistara News

ಪ್ರಮುಖ ಸುದ್ದಿ

Motivational story: ಅಪ್ಪನ ಆಸೆಯಂತೆಯೇ ಅವಳು ಡಾಕ್ಟರ್‌ ಆಗಿ ಮರಳಿದ್ದಳು.. ಆದರೆ..

Motivational story: ಬಡತನವೇ ಹೊದ್ದು ಮಲಗಿದ್ದರೂ ಹೆತ್ತವರ ಕನಸುಗಳಿಗೆ ಬರವಿರುವುದಿಲ್ಲ. ಅದನ್ನು ಈಡೇರಿಸಲು ಯಾವ ತ್ಯಾಗಕ್ಕಾದರೂ ಸಿದ್ಧರಾಗುತ್ತಾರೆ. ಆದರೆ, ಹೆಚ್ಚಿನ ಮಕ್ಕಳಿಗೆ ಇದ್ಯಾವುದೂ ಅರ್ಥವಾಗುವುದಿಲ್ಲ.

VISTARANEWS.COM


on

Father-daughter story
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೃಷ್ಣ ಭಟ್‌ ಅಳದಂಗಡಿ- Motivational story

ಅದೊಂದು ಬಡ ಕುಟುಂಬ. ತಂದೆ, ತಾಯಿ ಮತ್ತು ಮಗಳು. ಅಪ್ಪ ದಿನಗೂಲಿ ಮಾಡಿ ಬರುತ್ತಿದ್ದ ಹಣದಲ್ಲಿ ಬದುಕು ಹೇಗೋ ಸಾಗುತ್ತಿತ್ತು. ಕಾಲಿಗೆಳೆದರೆ ತಲೆಗಿಲ್ಲ, ತಲೆಗೆಳೆದರೆ ಕಾಲಿಗಿಲ್ಲ ಎಂಬ ಪರಿಸ್ಥಿತಿ ಇತ್ತು. ಅವರಿಗೆ ಬದುಕುವುದಕ್ಕೇ ಬೇಕಾದಷ್ಟು ಹಣವಿರಲಿಲ್ಲ. ಆದರೂ ಅಪ್ಪನಿಗೆ ತನ್ನ ಮಗಳನ್ನು ಒಬ್ಬ ದೊಡ್ಡ ಡಾಕ್ಟರ್‌ ಮಾಡಬೇಕು ಅಂತ ಆಸೆ. ಆಕೆಯ ಮೇಲೆ ಅಪಾರವಾದ ಪ್ರೀತಿ ಮತ್ತು ಭರವಸೆ ಅವನಿಗೆ.

ಮಗಳು ಕೂಡಾ ತುಂಬ ವಿಧೇಯ ಹುಡುಗಿ. ಅಪ್ಪನ ಆಸೆಯನ್ನು ಈಡೇರಿಸಬೇಕು ಅಂತ ಆಕೆ ಕಷ್ಟಪಟ್ಟು ಓದುತ್ತಿದ್ದಳು. ಆವತ್ತು ಅವಳ ಎಸ್ಸೆಸ್ಸೆಲ್ಸಿ ರಿಸಲ್ಟ್‌ ಬಂದಿತ್ತು. ಮಗಳು ಒಳ್ಳೆಯ ಮಾರ್ಕ್ಸ್‌ ಪಡೆದು ರಾಜ್ಯಕ್ಕೇ ಫಸ್ಟ್‌ ಬರಬೇಕು ಅಂತ ಅವಳ ಅಪ್ಪನಿಗೆ ಆಸೆ ಇತ್ತು. ಆಕೆ ಅದನ್ನು ಸಾಧಿಸಿ ಬಿಟ್ಟಿದ್ದಳು. 625ರಲ್ಲಿ 625 ಅಂಕ. ʻಬಡ ಕೂಲಿಕಾರನ ಮಗಳು ರಾಜ್ಯಕ್ಕೇ ಫಸ್ಟ್‌ʼ ಅಂತ ಪತ್ರಿಕೆಗಳಲ್ಲಿ ಫೋಟೊ ಸಹಿತ ಸುದ್ದಿ ಬಂದಿತ್ತು. ಅವನು ಅದನ್ನು ಮತ್ತು ಅವಳನ್ನು ಇಬ್ಬರನ್ನೂ ಎತ್ತಿ ಕುಣಿದಾಡಿದ.

ಅಪ್ಪನಿಗೆ ತುಂಬ ಸಂತೋಷದಿಂದ ಮಗಳನ್ನು ಕೇಳಿದ: ಮಗಳೇ… ನಿನ್ನ ಬಗ್ಗೆ ನನಗೆ ಹೆಮ್ಮೆ ಆಗುತ್ತಿದೆ. ಏನು ಬೇಕಾದರೂ ಕೇಳು ಕೊಡಿಸ್ತೇನೆ- ಅಂದ.

ಮಗಳು ಹೇಳಿದ್ಳು: ಅಪ್ಪಾ ಅವತ್ತೊಂದು ದಿನ ಪೇಟೆಗೆ ಹೋದಾಗ ನಾನೊಂದು ಡ್ರೆಸ್‌ ತೋರಿಸಿದ್ದೆ. ಅದನ್ನು ತಂದು ಕೊಡ್ತೀಯಾ? ಆದರೆ ಅದಕ್ಕೆ 8000 ರೂ. ರೇಟ್‌ ಇತ್ತು ಆಗಲೇ.. ಈಗ ಜಾಸ್ತಿ ಆಗಿದೆಯೋ ಏನೋ..

ಅಪ್ಪನ ಬಳಿ ಅಷ್ಟೊಂದು ಹಣ ಇರಲಿಲ್ಲ. ಆದರೂ ಮಗಳಿಗೆ ನಿರಾಸೆ ಮಾಡಬಾರದು ಎಂದು ಇದ್ದೆಲ್ಲ ಹಣವನ್ನು ಜೋಡಿಸಿ ಪೇಟೆಗೆ ಹೋಗಿ ಆ ಡ್ರೆಸ್‌ ತಂದು ಮಗಳ ಮುಂದಿಟ್ಟ.  ಆಗ ಹೆಂಡತಿಗೆ ಅನುಮಾನ. ʻʻಅಲ್ಲಾರಿ ಇಷ್ಟೊಂದು ದುಡ್ಡು ಎಲ್ಲಿಂದ ಬಂತುʼʼ- ಕೇಳಿದಳು.
ಆಗ ಅವನಂದ: ಅಲ್ಲಿಂದ ಇಲ್ಲಿಂದ ಸ್ವಲ್ಪ ಎಜಸ್ಟ್‌ ಆಯಿತು. ಕೊನೆಗೂ ಕಡಿಮೆ ಬಿತ್ತು. ಆಗ ಯಾರಿಗೋ ರಕ್ತ ಬೇಕು ಅನ್ನುವ ಸುದ್ದಿ ಸಿಕ್ಕಿತು. ನಂದು ಅಪರೂಪದ ರಕ್ತವಂತೆ. 4000 ರೂ. ಕೊಟ್ರು. ತೊಂದ್ರೆ ಇಲ್ಲ.. ಮಗಳಿಗೆ ಖುಷಿ ಆದ್ರೆ ಸಾಕು.

ಇದಾಗಿ ಎರಡು ವರ್ಷದ ಬಳಿಕ ಮಗಳು ಪಿಯುಸಿಯಲ್ಲಿ ಒಳ್ಳೆಯ ಅಂಕ ಪಡೆದಳು. ಮೆಡಿಕಲ್‌ ಸೀಟು ಕೂಡಾ ಸಿಕ್ಕಿತು. ಎಸ್ಸೆಸ್ಸೆಲ್ಸಿಯಲ್ಲಿ ರ‍್ಯಾಂಕ್‌ ಬಂದಾಗ, ಪಿಯುಸಿಯಲ್ಲಿ ಒಳ್ಳೆಯ ಮಾರ್ಕ್ಸ್‌ ಸಿಕ್ಕಾಗ ಕೆಲವರು ನೆರವು ನೀಡಿದ್ದರು. ಅದನ್ನೆಲ್ಲ ಬಳಸಿಕೊಂಡು ಕಾಲೇಜಿಗೆ ಸೇರಿಸಿದರು. ಆದರೆ, ವರ್ಷಗಳು ಕಳೆಯುತ್ತಿದ್ದಂತೆಯೇ ಫೀಸ್‌ ತುಂಬುವುದೆಲ್ಲ ಕಷ್ಟವಾಗತೊಡಗಿತು. ಆದರೂ ಕಷ್ಟಪಟ್ಟು ದುಡಿದು, ಸಾಲ ಮಾಡಿ ಹೇಗೋ ಅದನ್ನು ಭರಿಸುತ್ತಿದ್ದ ತಂದೆ.

ಅದು ಎಂಬಿಬಿಎಸ್‌ನ ಕೊನೆಯ ವರ್ಷ. ಕೊನೆಯ ಫೀಸು 80000 ರೂಪಾಯಿ ಕಟ್ಟಬೇಕಂತೆ.. ಕಳುಹಿಸಿಕೊಡ್ತೀಯಾ ಅಪ್ಪ ಅಂತ ಮಗಳು ಕರೆ ಮಾಡಿದ್ದಳು. ನಿಜ ಅಂದರೆ ಅಪ್ಪನ ಬಳಿ ಹಣವೇ ಇರಲಿಲ್ಲ. ಆದರೂ ಹೇಗೋ ಹಣ ಹೊಂದಿಸಿ ಮಗಳಿಗೆ ಕಳುಹಿಸಿದ.

ಮನೆಗೆ ಬಂದ ಕೂಡಲೇ ಹೆಂಡತಿ ಕೇಳಿದಳು: ದುಡ್ಡಿಗೆ ಏನು ಮಾಡಿದ್ರಿ? ನಿಮ್ಮ ಹತ್ರ ನಯಾಪೈಸೆಯೂ ಇರಲಿಲ್ಲವಲ್ಲ.. ಎಂದಳು.

ಆಗ ಅಪ್ಪ ಹೇಳಿದ: ದೇವರು ನಮ್ಮ ಕೈ ಬಿಡಲ್ಲ ಕಣೆ.. ಯಾರೋ ಪಾಪ.. ಕಿಡ್ನಿ ಫೈಲ್ಯೂರ್‌ ಆಗಿತ್ತಂತೆ.. ಕಿಡ್ನಿ ಬೇಕು ಅಂತಿದ್ದರು. ಕೊಟ್ಟು ಬಿಟ್ಟೆ.. ಹಣ ಬಂತು ಕಳುಹಿಸಿದೆ.. ಅಂತ ಹೊಟ್ಟೆಯ ಭಾಗದ ಬ್ಯಾಂಡೇಜ್‌ ತೋರಿಸುತ್ತಾ ಅತ್ಯಂತ ನಿರಾಯಾಸವಾಗಿ ಹೇಳಿದ.

ʻʻದಯವಿಟ್ಟು ಮಗಳಿಗೆ ಹೇಳಬೇಡ. ಅವಳಿಗೆ ಬೇಜಾರಾದೀತು. ಅವಳು ಒಮ್ಮೆ ಡಾಕ್ಟರ್‌ ಆಗಿಬಿಟ್ಟರೆ ಸಾಕು.. ನಂಗಷ್ಟೇ ಸಾಕುʼʼ ಎಂದ ಅಪ್ಪ. ಅಮ್ಮ ಕಣ್ಣೀರು ಒರೆಸಿಕೊಂಡಳು.

ಆವತ್ತು ಅವಳ ಮೆಡಿಕಲ್‌ ಕಾಲೇಜಿನಲ್ಲಿ ಗ್ಯಾಜುಯೇಷನ್‌ ಡೇ ಇತ್ತು. ತಮ್ಮ ಮಗಳು ಡಾಕ್ಟರ್‌ ಆಗಿ ಮನೆಗೆ ಬರುತ್ತಾಳೆ ಎಂದು ಅಪ್ಪ-ಅಮ್ಮ ಕಾತರದಿಂದ ಕಾಯುತ್ತಿದ್ದರು. ಅಪ್ಪ ಮಗಳಿಗೊಂದು ಮಲ್ಲಿಗೆ ಹಾರ ಕೂಡಾ ತಂದಿಟ್ಟಿದ್ದ.

ಅಷ್ಟು ಹೊತ್ತಿಗೆ ಒಂದು ಕಾರು ಬಂತು. ಮಗಳು ಕಾರಿನಲ್ಲಿ ಬಂದಿದ್ದಳು. ಅಪ್ಪ-ಅಮ್ಮ ಇಬ್ಬರೂ ಓಡಿಕೊಂಡು ಹೊರಗೆ ಬಂದರು. ನಾಲ್ಕು ಮಂದಿ ಸೇರಿ ಮಗಳನ್ನು ಎತ್ತಿಕೊಂಡು ಬಂದು ಅಪ್ಪನ ಮುಂದೆ ಮಲಗಿಸಿದರು. ಕೈಯಲ್ಲಿದ್ದ ಮಲ್ಲಿಗೆ ಮಾಲೆ ಅವಳ ಮೇಲೆ ಬಿತ್ತು.

ಬಂದವರಲ್ಲಿ ಒಬ್ಬ ಹೇಳಿದ: ಕ್ಷಮಿಸಿ ಸರ್‌, ನಾನು ತುಂಬ ಪ್ರೀತಿಸುತ್ತಿರುವ ಹುಡುಗ ಮೋಸ ಮಾಡಿದ್ದಾನೆ ಎಂದು ಚೀಟಿ ಬರೆದಿಟ್ಟು ಇವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ..

ಇದನ್ನೂ ಓದಿ| Motivational story: ಅತ್ತೆಗೆ ಕೊಡಬೇಕಾಗಿರುವುದು ವಿಷ ಅಲ್ಲ ಮಗಳೇ, ಪ್ರೀತಿ!

ಇದನ್ನೂ ಓದಿ| Motivational story: ಸ್ಕೂಟರ್‌ನಡಿಗೆ ಸಿಲುಕಿದ ಪುಟಾಣಿ ನಾಯಿ ಮತ್ತು ಅವನು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಆಗಸ್ಟ್​​ 2ರಂದು ಭಾರತದ ಅಥ್ಲೀಟ್​ಗಳ ಸ್ಪರ್ಧೆಯ ವಿವರ ಇಲ್ಲಿದೆ

Paris Olympics 2024: ಸ್ವಪ್ನಿಲ್ ಕುಸಾಲೆ 2024 ರ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಮೂರನೇ ಪದಕ ಗೆಲ್ಲುವ ಮೂಲಕ ದಿನದ ಅತ್ಯುತ್ತಮ ಆರಂಭ ನೀಡಿದರು. ಪುರುಷರ 50 ಮೀಟರ್ ರೈಫಲ್ 3 ಪೊಸಿಷನ್​ ಸ್ಪರ್ಧೆಯಲ್ಲಿ ಅವರು ಕಂಚಿನ ಪದಕ ಗೆದ್ದರು. ಅಥ್ಲೆಟಿಕ್ಸ್, ಶೂಟಿಂಗ್ ಮತ್ತು ಬಿಲ್ಲುಗಾರಿಕೆಯಲ್ಲಿ ಇನ್ನೂ ಹೆಚ್ಚಿನ ರೋಮಾಂಚಕಾರಿ ಆಟ ಉಳಿದಿರುವುದರಿಂದ ಭಾರತೀಯ ತಂಡವು ನಿರಾಶೆಯನ್ನು ಮರೆಯಬಹುದು

VISTARANEWS.COM


on

Paris Olympics 202
Koo

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ (Paris Olympics 2024 ) ಗುರುವಾರ ಭಾರತಕ್ಕೆ ನಿರಾಶಾದಾಯಕ ದಿನವಾಗಿತ್ತು. ಪದಕ ಗೆಲ್ಲಬಹುದು ಎಂದು ನಿರೀಕ್ಷೆ ಮಾಡಿದ್ದ ಭಾರತೀಯ ಸ್ಪರ್ಧಿಗಳು ಆರಂಭಿಕ ಹಂತದಲ್ಲೇ ಸೋಲನ್ನು ಅನುಭವಿಸಿದರು. ಆದಾಗ್ಯೂ ಶೂಟಿಂಗ್​ನಲ್ಲಿ ಸ್ವಪ್ನಿಲ್ ಕುಸಾಲೆ ಕಂಚಿನ ಪದಕ ತಂದುಕೊಟ್ಟರು. ಬಾಕ್ಸಿಂಗ್ಸ್​​ನಲ್ಲಿ ನಿಖತ್ ಝರೀನ್ ಮತ್ತು ಶೂಟಿಂಗ್​​ನಲ್ಲಿ ಸಿಫ್ಟ್ ಕೌರ್ ಸಮ್ರಾ ಬರಿಗೈಯಲ್ಲಿ ಬಂದಿರುವುದು ಬೇಸರದ ವಿಷಯವಾಗಿದೆ. ಬ್ಯಾಡ್ಮಿಂಟನ್​ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಕ್ವಾರ್ಟರ್​ ಫೈನಲ್ಸ್​​ನಿಂದ ಅಚ್ಚರಿಯ ನಿರ್ಗಮನ ಕಂಡರು.

ಸ್ವಪ್ನಿಲ್ ಕುಸಾಲೆ 2024 ರ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಮೂರನೇ ಪದಕ ಗೆಲ್ಲುವ ಮೂಲಕ ದಿನದ ಅತ್ಯುತ್ತಮ ಆರಂಭ ನೀಡಿದರು. ಪುರುಷರ 50 ಮೀಟರ್ ರೈಫಲ್ 3 ಪೊಸಿಷನ್​ ಸ್ಪರ್ಧೆಯಲ್ಲಿ ಅವರು ಕಂಚಿನ ಪದಕ ಗೆದ್ದರು. ಅಥ್ಲೆಟಿಕ್ಸ್, ಶೂಟಿಂಗ್ ಮತ್ತು ಬಿಲ್ಲುಗಾರಿಕೆಯಲ್ಲಿ ಇನ್ನೂ ಹೆಚ್ಚಿನ ರೋಮಾಂಚಕಾರಿ ಆಟ ಉಳಿದಿರುವುದರಿಂದ ಭಾರತೀಯ ತಂಡವು ನಿರಾಶೆಯನ್ನು ಮರೆಯಬಹುದು. ಏಷ್ಯನ್ ಪದಕ ವಿಜೇತರಾದ ತಜಿಂದರ್ ಪಾಲ್ ಸಿಂಗ್ ತೂರ್ ಮತ್ತು ಪಾರುಲ್ ಚೌಧರಿ ನಾಳೆ ತಮ್ಮ ಅಭಿಯಾನ ಪ್ರಾರಂಭಿಸಲಿದ್ದಾರೆ. ಹೀಗೆ ಆಗಸ್ಟ್ 2ರಂದು ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತದ ಸ್ಪರ್ಧೆಗಳ ವಿವರ ಇಲ್ಲಿದೆ.

ಇದನ್ನೂ ಓದಿ: Paris Olympics 2024 : ಒಲಿಂಪಿಕ್ಸ್​ನಲ್ಲಿ ವಿವಾದ; ಮಹಿಳೆ ವಿರುದ್ಧ ಸ್ಪರ್ಧಿಸಲು ಬಾಕ್ಸಿಂಗ್​ ಕಣಕ್ಕೆ ಇಳಿದ ಪುರುಷ!

ಆರ್ಚರಿ

ಆರ್ಚರಿ ಮಿಶ್ರ ತಂಡ ಆರ್ 16 : ಭಾರತ ವಿರುದ್ಧ ಇಂಡೋನೇಷ್ಯಾ – ಮಧ್ಯಾಹ್ನ 1:19ಕ್ಕೆ
ಮಿಶ್ರ ತಂಡ ಕ್ವಾರ್ಟರ್ ಫೈನಲ್ : ಸಂಜೆ 5:45ಕ್ಕೆ
ಮಿಶ್ರ ತಂಡ ಸೆಮಿಫೈನಲ್ – ಸಂಜೆ 7:00ಕ್ಕೆ
ಮಿಶ್ರ ತಂಡ ಪದಕ ಪಂದ್ಯಗಳು – 7:54ಕ್ಕೆ

ಅಥ್ಲೆಟಿಕ್ಸ್

ಮಹಿಳೆಯರ 5000 ಓಟ: ಮೀಟರ್ ರೌಂಡ್ -1 – ಪಾರುಲ್ ಚೌಧರಿ, ಅಂಕಿತಾ ಧ್ಯಾನಿ – ರಾತ್ರಿ 9:40
ಪುರುಷರ ಶಾಟ್ ಪುಟ್ ಅರ್ಹತಾ ಸುತ್ತು: ತಜಿಂದರ್ ಪಾಲ್ ಸಿಂಗ್ ತೂರ್ – 11:40 PM

ಬ್ಯಾಡ್ಮಿಂಟನ್

ಪುರುಷರ ಸಿಂಗಲ್ಸ್ : ಲಕ್ಷ್ಯ ಸೇನ್​, 11 :40ಕ್ಕೆ

ಗಾಲ್ಫ್​

ಗಾಲ್ಫ್ ಪುರುಷರ ವೈಯಕ್ತಿಕ ಸುತ್ತು 2 : ಮಧ್ಯಾಹ್ನ 12:30
ಹಾಕಿ
ಭಾರತೀಯ ಪುರುಷರ ತಂಡದ ವಿರುದ್ಧ ಆಸ್ಟ್ರೇಲಿಯಾ. ಸಂಜೆ 4:45

ಜೂಡೋ

ಮಹಿಳೆಯರ 78+ ಕೆ.ಜಿ ವಿಭಾಗದ 32ನೇ ಸುತ್ತು; ತುಲಿಕಾ ಮಾನ್ ವಿರುದ್ಧ ಇಡಾಲಿಸ್ ಒರ್ಟಿಜ್

ರೋಯಿಂಗ್

ಪುರುಷರ ಸಿಂಗಲ್ಸ್ ಸ್ಕಲ್ಸ್ ಫೈನಲ್ – ಮಧ್ಯಾಹ್ನ 1:48
ಸೇಲಿಂಗ್ ಮಹಿಳಾ ಡಿಂಗಿ ರೇಸ್ (3,4) – ಮಧ್ಯಾಹ್ನ 3:45ಕ್ಕೆ
ಮಧ್ಯಾಹ್ನ ಪುರುಷರ ಡಿಂಗಿ ರೇಸ್ (3,4) – 7:05 ಸಂಜೆ ಕ್ಕೆ

ಶೂಟಿಂಗ್

ಮಹಿಳೆಯರ 25 ಮೀಟರ್ ಪಿಸ್ತೂಲ್ ಮಹಿಳಾ ಅರ್ಹತಾ ಸುತ್ತು : ಮಧ್ಯಾಹ್ನ 12:30
ಪುರುಷರ ಸ್ಕೀಟ್ ಅರ್ಹತಾ ದಿನ 1 – ಮಧ್ಯಾಹ್ನ 1:00 ಗಂಟೆಗೆ
ಮಹಿಳೆಯರ 25 ಮೀಟರ್ ಪಿಸ್ತೂಲ್, ಅರ್ಹತಾ; ಮಧ್ಯಾಹ್ನ 3:30ಕ್ಕೆ

Continue Reading

ತಂತ್ರಜ್ಞಾನ

Alternative to Whatsapp: ವಾಟ್ಸಾಪ್ ಸ್ಥಗಿತಗೊಂಡರೆ ಏನ್‌ ಮಾಡೋದು? ಇಲ್ಲಿದೆ ಪರ್ಯಾಯ ಆ್ಯಪ್‌ಗಳ ಪಟ್ಟಿ

ವಾಟ್ಸಾಪ್ ಭಾರತಕ್ಕೆ ಬಂದಾಗಿನಿಂದ ಜನರು ಪರಸ್ಪರ ಮಾಹಿತಿಯನ್ನು ಹಂಚಿಕೊಳ್ಳುವುದು ಸುಲಭವಾಗಿದೆ. ಪಠ್ಯ ಸಂದೇಶಗಳು, ಆಡಿಯೋ, ವಿಡಿಯೋ ಸೇರಿದಂತೆ ಹಲವು ವಿಷಯಗಳನ್ನು ಹಂಚಿಕೊಳ್ಳುವ ವೇದಿಕೆಯಾಗಿತ್ತು. ಈಗಾಗಲೇ ಹಲವಾರು ಬಾರಿ ಭಾರತದಲ್ಲಿ ವಾಟ್ಸಾಪ್ ನಿಷೇಧವಾಗುವ (Whatsapp Shutdown) ಬೆದರಿಕೆ ಹಾಕಲಾಗಿತ್ತು. ಒಂದು ವೇಳೆ ವಾಟ್ಸಾಪ್ ನಿಷೇಧಿಸಲ್ಪಟ್ಟರೆ ಭಾರತೀಯರಿಗೆ ಇರುವ ಮುಂದಿನ ಆಯ್ಕೆ ಏನು? ಎನ್ನುವ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

Whatsapp Shutdown
Koo

ಹೊಸ ಐಟಿ ನಿಯಮಗಳು (New IT Rules) ಬಂದಾಗಿನಿಂದ ದೇಶದಲ್ಲಿ (Alternative to Whatsapp) ವಾಟ್ಸಾಪ್ ನಿಷೇಧವಾಗುವ (Whatsapp Shutdown) ಆತಂಕ ಎದುರಾಗಿದೆ. 53.58 ಕೋಟಿಗಿಂತಲೂ ಹೆಚ್ಚು ಭಾರತೀಯ ಗ್ರಾಹಕರು (Indian customers) ಬಳಸಲ್ಪಡುತ್ತಿರುವ ವಾಟ್ಸಾಪ್ (whatsapp) ಒಂದು ವೇಳೆ ನಿಷೇಧಿಸಲ್ಪಟ್ಟರೆ ಮುಂದೇನು ಎನ್ನುವ ಚಿಂತೆ ಹೆಚ್ಚಿನವರನ್ನು ಕಾಡಲಾರಂಭಿಸಿದೆ.

ವಾಟ್ಸಾಪ್ ಭಾರತಕ್ಕೆ ಬಂದಾಗಿನಿಂದ ಜನರು ಪರಸ್ಪರ ಮಾಹಿತಿಯನ್ನು ಹಂಚಿಕೊಳ್ಳುವುದು ಸುಲಭವಾಗಿದೆ. ಅದು ಪಠ್ಯ ಸಂದೇಶಗಳು ಅಥವಾ ಆಡಿಯೋ, ವಿಡಿಯೋ ಹೀಗೆ ಎಲ್ಲವನ್ನೂ ಸುಲಭವಾಗಿ ಹಂಚಿಕೊಳ್ಳಲು ವೇದಿಕೆಯನ್ನು ಸೃಷ್ಟಿಸಿತ್ತು. ಈಗಾಗಲೇ ಹಲವಾರು ಬಾರಿ ಭಾರತದಲ್ಲಿ ವಾಟ್ಸಾಪ್ ನಿಷೇಧವಾಗುವ ಬೆದರಿಕೆ ಹಾಕಲಾಗಿತ್ತು. ಒಂದು ವೇಳೆ ವಾಟ್ಸಾಪ್ ನಿಷೇಧಿಸಲ್ಪಟ್ಟರೆ ಭಾರತೀಯರಿಗೆ ಇರುವ ಮುಂದಿನ ಆಯ್ಕೆ ಏನು?

Whatsapp Shutdown
Whatsapp Shutdown


ವಾಟ್ಸಾಪ್ ದೇಶದಲ್ಲಿ ಸ್ಥಗಿತಗೊಂಡರೆ ಗ್ರಾಹಕರು ಉಳಿದ ಚಾಟಿಂಗ್ ಆಪ್‌ಗಳತ್ತ ಹೊರಳುವ ಸಾಧ್ಯತೆ ಇದೆ. ಭಾರತದಲ್ಲಿ ವಾಟ್ಸಾಪ್‌ಗೆ ಪರ್ಯಾಯವಾಗಿ ಹಲವು ಆಯ್ಕೆಗಳಿವೆ.

Whatsapp Shutdown
Whatsapp Shutdown


ಟೆಲಿಗ್ರಾಮ್

ಟೆಲಿಗ್ರಾಮ್ ವಾಟ್ಸಾಪ್‌ಗೆ ಪರ್ಯಾಯವಾಗಿರಬಹುದು. ಟೆಲಿಗ್ರಾಮ್ ಚಾಟಿಂಗ್, ಗ್ರೂಪ್ ಚಾಟ್, ಧ್ವನಿ, ವಿಡಿಯೋ ಕರೆಗಳು ಮತ್ತು ವಾಟ್ಸಾಪ್‌ನಂತೆಯೇ ಫೈಲ್ ಹಂಚಿಕೆಯಂತಹ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಇದಲ್ಲದೆ ಟೆಲಿಗ್ರಾಮ್ ಚಾನೆಲ್ ಮೂಲಕ ಹೆಚ್ಚಿನ ಜನರನ್ನು ಸಂಪರ್ಕಿಸುವುದು ಸಾಧ್ಯವಿದೆ.

Whatsapp Shutdown
Whatsapp Shutdown


ಸಿಗ್ನಲ್

ಸಿಗ್ನಲ್ ಮೆಸೇಜಿಂಗ್ ಅಪ್ಲಿಕೇಶನ್ ಆಗಿದ್ದು, ಇದು ಭಾರತದಲ್ಲಿ ನಿಧಾನವಾಗಿ ಜನಪ್ರಿಯವಾಗುತ್ತಿದೆ. ಇದು ವಾಟ್ಸಾಪ್ ನಂತೆಯೇ ಹಲವು ವೈಶಿಷ್ಟ್ಯಗಳನ್ನು ಗ್ರಾಹಕರಿಗೆ ನೀಡುತ್ತದೆ.

Whatsapp Shutdown
Whatsapp Shutdown


ಸ್ನ್ಯಾಪ್ ಚಾಟ್

ವಾಟ್ಸಾಪ್‌ಗೆ ಪರ್ಯಾಯವಾಗಿ ಸ್ನ್ಯಾಪ್ ಚಾಟ್ ಅನ್ನು ಅತ್ಯುತ್ತಮ ಆಯ್ಕೆಯಾಗಿ ಇರಿಸಬಹುದು. ಇದರ ಮೂಲಕ ಪರಸ್ಪರ ಚಿತ್ರಗಳು ಮತ್ತು ಫೈಲ್‌ಗಳನ್ನು ಹಂಚಿಕೊಳ್ಳಬಹುದು.


ಇದನ್ನೂ ಓದಿ: Whatsapp Shutdown: ಭಾರತದಲ್ಲಿ ಇನ್ಮುಂದೆ ಬಂದ್‌ ಆಗುತ್ತಾ ವಾಟ್ಸ್‌ಆ್ಯಪ್‌? ಕೇಂದ್ರ ಸರ್ಕಾರ ಹೇಳೋದೇನು?

ವಾಟ್ಸಾಪ್ ಸ್ಥಗಿತವಾದರೆ ಏನು ಸಮಸ್ಯೆ?

ಭಾರತದಲ್ಲಿ ವಾಟ್ಸಾಪ್ ತನ್ನ ಸೇವೆಯನ್ನು ಸ್ಥಗಿತಗೊಳಿಸಿದರೆ ಗ್ರಾಹಕರು ಮುಖ್ಯವಾಗಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಯಾಕೆಂದರೆ ಈ ಆಪ್ ಅನ್ನು ಸಾಕಷ್ಟು ಗ್ರಾಹಕರು ಹಲವಾರು ವರ್ಷಗಳಿಂದ ಬಳಸುತ್ತಿದ್ದಾರೆ. ಇದರಿಂದ ಬೇರೆ ಆಪ್ ಗೆ ಹೊಂದಿಕೊಳ್ಳಲು ಸಾಕಷ್ಟು ಕಾಲಾವಕಾಶ ಬೇಕಾಗಬಹುದು. ಆಗ ಕೆಲವೊಂದು ಸಮಸ್ಯೆಗಳು ಎದುರಾಗಬಹುದು. ಆದರೂ ಪರ್ಯಾಯ ಆಪ್‌ಗಳಿಗೆ ಜನ ಕ್ರಮೇಣ ಒಗ್ಗಿಕೊಳ್ಳಬಹುದು.

Continue Reading

ದೇಶ

Kerala Floods: ಕೇರಳದಲ್ಲಿ ಪ್ರವಾಹ; ಪ್ರಾಣವನ್ನೇ ಒತ್ತೆ ಇಟ್ಟು ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ದ ಪತಿ, Video ಇದೆ

Kerala Floods: ಇಡುಕ್ಕಿ ಜಿಲ್ಲೆಯಲ್ಲಿ ನದಿಯೊಂದು ಉಕ್ಕಿ ಹರಿಯುತ್ತಿದೆ. ಸೇತುವೆ ಮೇಲೆಯೂ ನೀರು ರಭಸವಾಗಿ ಹರಿಯುತ್ತಿದೆ. ಆದರೆ, ಗರ್ಭಿಣಿ ಪತ್ನಿಯನ್ನು ತುರ್ತಾಗಿ ಆಸ್ಪತ್ರೆಗೆ ಸೇರಿಸಬೇಕಾದ ಕಾರಣ ವ್ಯಕ್ತಿಯು ಪತ್ನಿಯನ್ನು ಕಾರಿನಲ್ಲಿ ಕೂರಿಸಿಕೊಂಡು ಇಡುಕ್ಕಿ ಆಸ್ಪತ್ರೆಯತ್ತ ಹೊರಟಿದ್ದಾರೆ. ಸೇತುವೆಯ ಮೇಲೆಯೂ ನೀರು ಹರಿಯುವುದನ್ನು ಕಂಡ ಅವರು ಆತಂಕಕ್ಕೀಡಾಗಿದ್ದಾರೆ. ಆದರೂ, ಪ್ರವಾಹವನ್ನು ಲೆಕ್ಕಿಸದೆ ಅವರು ಕಾರು ಚಲಾಯಿಸಿ, ಪತ್ನಿಯನ್ನು ಸುರಕ್ಷಿತವಾಗಿ ಆಸ್ಪತ್ರೆ ಸೇರಿಸಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

VISTARANEWS.COM


on

Kerala Floods
Koo

ತಿರುವನಂತಪುರಂ: ದೇವರ ನಾಡು ಕೇರಳ ಈಗ ವರುಣನ (Kerala Floods) ಆರ್ಭಟಕ್ಕೆ ತತ್ತರಿಸಿ ಹೋಗಿದೆ. ವಯನಾಡಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹ ಮತ್ತು ಭೂಕುಸಿತ (Wayanad Floods) ಉಂಟಾಗಿದ್ದು, ಸಾವಿನ ಸಂಖ್ಯೆ 300 ಸಮೀಪಿಸಿದೆ. 200ಕ್ಕೂ ಅಧಿಕ ಜನ ನಾಪತ್ತೆಯಾಗಿದ್ದು, ಕಾರ್ಯಾಚರಣೆ ನಡೆಯುತ್ತಲೇ ಇದೆ. ಇನ್ನು, ವಯನಾಡು ಮಾತ್ರವಲ್ಲ, ಇಡುಕ್ಕಿ ಜಿಲ್ಲೆಯಲ್ಲೂ ಭಾರಿ ಮಳೆಯಾಗುತ್ತಿದ್ದು, ಪ್ರವಾಹದಿಂದ ಜನ ತತ್ತರಿಸಿ ಹೋಗಿದ್ದಾರೆ. ಇನ್ನು, ಇಡುಕ್ಕಿಯಲ್ಲಿ ವ್ಯಕ್ತಿಯೊಬ್ಬರು ಉಕ್ಕಿ ಹರಿಯುತ್ತಿರುವ ನದಿಯ ಸೇತುವೆ ಮೇಲೆಯೇ ಪ್ರಾಣವನ್ನೂ ಲೆಕ್ಕಿಸದೆ ಕಾರಿನಲ್ಲಿ ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವಿಡಿಯೊ (Viral Video) ಈಗ ಭಾರಿ ವೈರಲ್‌ ಆಗಿದೆ.

ಹೌದು, ಇಡುಕ್ಕಿ ಜಿಲ್ಲೆಯಲ್ಲಿ ನದಿಯೊಂದು ಉಕ್ಕಿ ಹರಿಯುತ್ತಿದೆ. ಸೇತುವೆ ಮೇಲೆಯೂ ನೀರು ರಭಸವಾಗಿ ಹರಿಯುತ್ತಿದೆ. ಆದರೆ, ಗರ್ಭಿಣಿ ಪತ್ನಿಯನ್ನು ತುರ್ತಾಗಿ ಆಸ್ಪತ್ರೆಗೆ ಸೇರಿಸಬೇಕಾದ ಕಾರಣ ವ್ಯಕ್ತಿಯು ಪತ್ನಿಯನ್ನು ಕಾರಿನಲ್ಲಿ ಕೂರಿಸಿಕೊಂಡು ಇಡುಕ್ಕಿ ಆಸ್ಪತ್ರೆಯತ್ತ ಹೊರಟಿದ್ದಾರೆ. ಸೇತುವೆಯ ಮೇಲೆಯೂ ನೀರು ಹರಿಯುವುದನ್ನು ಕಂಡ ಅವರು ಆತಂಕಕ್ಕೀಡಾಗಿದ್ದಾರೆ.

ಪತ್ನಿಯನ್ನು ಆಸ್ಪತ್ರೆಗೆ ಸೇರಿಸಲೇಬೇಕಾದ ಕಾರಣ ಅವರು ರಭಸವಾಗಿ ಹರಿಯುತ್ತಿದ್ದ ನೀರನ್ನೂ ಲೆಕ್ಕಿಸದೆ, ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗಿದ್ದಾರೆ. ಇಬ್ಬರೂ ಸುರಕ್ಷಿತವಾಗಿ ಇಡುಕ್ಕಿ ಆಸ್ಪತ್ರೆ ತಲುಪಿದ್ದಾರೆ. ವ್ಯಕ್ತಿಯ ಪತ್ನಿ ಈಗ ಆರೋಗ್ಯದಿಂದ ಇದ್ದಾರೆ ಎಂದು ತಿಳಿದುಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ವೈರಲ್‌ ಆಗುತ್ತಲೇ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪತ್ನಿಗಾಗಿ ಶೌರ್ಯತನ ಮೆರೆದ ಈತನೇ ನಿಜವಾದ ಪತಿ ಎಂದೆಲ್ಲ ಹೊಗಳಿದ್ದಾರೆ.

ವಯನಾಡಿಗೆ ರಾಹುಲ್‌ ಗಾಂಧಿ ಭೇಟಿ

ವಯನಾಡು ಜಿಲ್ಲೆಯ ಮೆಪ್ಪಾಡಿ ಹಾಗೂ ಚೂರಲ್‌ಮಲ ಪ್ರದೇಶಗಳ ಗ್ರಾಮಗಳು ಸಂಪೂರ್ಣವಾಗಿ ಮಸಣದಂತಾಗಿವೆ. ಈ ಪ್ರದೇಶಗಳಿಗೆ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಅವರು ಭೇಟಿ ನೀಡಿದ್ದಾರೆ. ಪ್ರವಾಹದಲ್ಲಿ ಕುಟುಂಬಸ್ಥರನ್ನು ಕಳೆದುಕೊಂಡಿರುವ, ನೀರಿನಲ್ಲಿ ಮನೆಗಳು ಕೊಚ್ಚಿ ಹೋಗಿ ನಿರಾಶ್ರಿತರಾಗಿರುವ ಸಂತ್ರಸ್ತರನ್ನು ಭೇಟಿಯಾದ ಅವರು, ಆತ್ಮಸ್ಥೈರ್ಯ ತುಂಬಿದರು. ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಹಾನಿಯ ವೀಕ್ಷಣೆ ಮಾಡಿದರು.

ವಯನಾಡು ಜಿಲ್ಲೆಯ ಹಲವೆಡೆ ಸಂಚರಿಸಿದ ಬಳಿಕ ರಾಹುಲ್‌ ಗಾಂಧಿ ಅವರು ಮಾಧ್ಯಮಗಳ ಜತೆ ಮಾತನಾಡಿದರು. “ವಯನಾಡು ಜನರ ಸ್ಥಿತಿಯನ್ನು ನೋಡಿದಾಗ ನನ್ನ ತಂದೆ ಸಾವಿನ ದಿನ, ಆ ದುಃಖವೇ ಆಯಿತು. ಜನರು ತಂದೆ, ತಾಯಿ ಜತೆಗೆ ಇಡೀ ಕುಟುಂಬವನ್ನೇ ಕಳೆದುಕೊಂಡಿದ್ದಾರೆ. ಇಡೀ ದೇಶದ ಗಮನವೇ ಈಗ ವಯನಾಡು ಮೇಲಿದೆ. ನಾವೆಲ್ಲರೂ ವಯನಾಡು ಪರವಾಗಿ ನಿಲ್ಲೋಣ. ಇದು ಕೇವಲ ವಯನಾಡಿನ ದುರಂತ ಅಲ್ಲ, ರಾಜ್ಯ ಹಾಗೂ ದೇಶದ ದುರಂತವಾಗಿದೆ” ಎಂದು ಭಾವುಕರಾಗಿ ಹೇಳಿದರು.

ಪ್ರಿಯಾಂಕಾ ವಾದ್ರಾ ಅವರು ಪರಿಹಾರ ಕೇಂದ್ರಗಳಿಗೂ ತೆರಳಿ, ಸಂತ್ರಸ್ತರ ಜತೆ ಮಾತನಾಡಿದರು. ಇದಾದ ಬಳಿಕ ಮಾತನಾಡಿದ ಅವರು, “ನಾವು ಜನರಿಗೆ ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ನೆರವಾಗಲು ಬಂದಿದ್ದೇವೆ. ಪರಿಸ್ಥಿತಿ ತುಂಬ ಭೀಕರವಾಗಿದೆ” ಎಂದು ಹೇಳಿದರು. ಭಾರಿ ಮಳೆಯ ಬಳಿಕ ವಯನಾಡಿನ ಸುಮಾರು 80 ಸಾವಿರ ಚದರ ಮೀಟರ್‌ ಭೂಮಿಯು ಕುಸಿದಿದ್ದು, ಸುಮಾರು 8 ಕಿಲೋಮೀಟರ್‌ವರೆಗೆ ಅವಶೇಷವು ಹರಿದುಕೊಂಡು ಹೋಗಿದೆ. ಇದರಿಂದಾಗಿ ಸಾವಿನ ಸಂಖ್ಯೆ ದಿನೇದಿನೆ ಜಾಸ್ತಿಯಾಗುತ್ತಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Wayanad Landslide: ವಯನಾಡು ಸ್ಥಿತಿ ನೋಡಿ ತಂದೆ ಸಾವು ನೆನಪಾಯ್ತು ಎಂದ ರಾಹುಲ್‌ ಗಾಂಧಿ; ಸಾವಿನ ಸಂಖ್ಯೆ 300ರ ಸನಿಹ

Continue Reading

ಪ್ರಮುಖ ಸುದ್ದಿ

Paris Olympics 2024 : ಒಲಿಂಪಿಕ್ಸ್​ನಲ್ಲಿ ವಿವಾದ; ಮಹಿಳೆ ವಿರುದ್ಧ ಸ್ಪರ್ಧಿಸಲು ಬಾಕ್ಸಿಂಗ್​ ಕಣಕ್ಕೆ ಇಳಿದ ಪುರುಷ!

Paris Olympics 2024: ಕಳೆದ ವರ್ಷ ಲಿಂಗ ಅರ್ಹತಾ ಪರೀಕ್ಷೆಯಲ್ಲಿ ವಿಫಲರಾಗಿದ್ದ ಅಲ್ಜೀರಿಯಾದ ಬಾಕ್ಸರ್ ಇಮಾನೆ ಖೇಲಿಫ್ ವಿವಾದಕ್ಕೆ ಕಾರಣವಾದ ಬಾಕ್ಸರ್​. ಒಲಿಂಪಿಕ್ಸ್​ ಸ್ಪರ್ಧೆಯಲ್ಲಿ ಇಟಲಿಯ ಎದುರಾಳಿ ಏಂಜೆಲಾ ಕ್ಯಾರಿನಿ ಅವರನ್ನು 46 ಸೆಕೆಂಡುಗಳಲ್ಲಿ ಸೋಲಿಸಿದ್ದರು. ಪೆಟ್ಟು ತಿಂದ ಇಟಲಿಯ ಸ್ಪರ್ಧಿ ಬಾಕ್ಸಿಂಗ್ ರಿಂಗ್​ನೊಳಗೆ ಕಣ್ಣೀರಿಟ್ಟ ಪ್ರಸಂಗವೂ ನಡೆಯಿತು. ಏಂಜೆಲಾ ಕ್ಯಾರಿನಿ ನಂತರ ಖೇಲಿಫ್ ಅವರ ಕೈ ಕುಲುಕುವುದಕ್ಕೂ ನಿರಾಕರಿಸಿದರು.

VISTARANEWS.COM


on

Paris Olympics 2024
Koo

ಪ್ಯಾರಿಸ್: ಕುಂದು ಕೊರತೆಗಳ ಕಾರಣಕ್ಕೆ ಚರ್ಚೆಗೆ ಒಳಗಾಗುತ್ತಿದ್ದ ಪ್ಯಾರಿಸ್​ ಒಲಿಂಪಿಕ್ಸ್ (Paris Olympics 2024) ಕ್ರೀಡಾಕೂಟ ಇದೀಗ ದೊಡ್ಡ ವಿವಾದವೊಂದಕ್ಕೆ ಕಾರಣವಾಗಿದೆ. ಮಹಿಳೆಯರ ಬಾಕ್ಸಿಂಗ್ ಸ್ಪರ್ಧೆಯೊಂದಕ್ಕೆ ಪುರುಷ ಸ್ಪರ್ಧಿಯೊಬ್ಬರು ಇಳಿದು ಕೇವಲ 46 ಸೆಕೆಂಡ್​ಗಳಲ್ಲಿ ಎದುರಾಳಿಯನ್ನು ಸೋಲಿಸಿದ್ದು ಜಾಗತಿಕವಾಗಿ ಕಿಡಿ ಹಚ್ಚಿಸಿದೆ. ಸೋಶೀಯಲ್ ಮೀಡಿಯಾಗಳಲ್ಲಿ ಇದು ದೊಡ್ಡ ಮಟ್ಟಿಗೆ ಚರ್ಚೆಯಾಗುತ್ತಿದ್ದು ಆಯೋಜಕರ ವಿರುದ್ಧ ಟೀಕೆಗಳ ಸುರಿಮಳೆ ಸುರಿಯುತ್ತಿವೆ. ಸ್ವತಃ ಇಟಲಿಯ ಸ್ಪರ್ಧಿ ರಿಂಗ್​ನಲ್ಲಿ ಕಣ್ಣೀರು ಹಾಕುವ ಜತೆಗೆ ಬಳಿಕ ಮಾಧ್ಯಮದ ಮುಂದೆಯೂ ಬೇಸರ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಲಿಂಗ ಅರ್ಹತಾ ಪರೀಕ್ಷೆಯಲ್ಲಿ ವಿಫಲರಾಗಿದ್ದ ಅಲ್ಜೀರಿಯಾದ ಬಾಕ್ಸರ್ ಇಮಾನೆ ಖೇಲಿಫ್ ವಿವಾದಕ್ಕೆ ಕಾರಣವಾದ ಬಾಕ್ಸರ್​. ಒಲಿಂಪಿಕ್ಸ್​ ಸ್ಪರ್ಧೆಯಲ್ಲಿ ಇಟಲಿಯ ಎದುರಾಳಿ ಏಂಜೆಲಾ ಕ್ಯಾರಿನಿ ಅವರನ್ನು 46 ಸೆಕೆಂಡುಗಳಲ್ಲಿ ಸೋಲಿಸಿದ್ದಾರೆ ಅವರು. ಪೆಟ್ಟು ತಿಂದ ಇಟಲಿಯ ಸ್ಪರ್ಧಿ ಬಾಕ್ಸಿಂಗ್ ರಿಂಗ್​ನೊಳಗೆ ಕಣ್ಣೀರಿಟ್ಟ ಪ್ರಸಂಗವೂ ನಡೆಯಿತು. ಏಂಜೆಲಾ ಕ್ಯಾರಿನಿ ನಂತರ ಖೇಲಿಫ್ ಅವರ ಕೈ ಕುಲುಕುವುದಕ್ಕೂ ನಿರಾಕರಿಸಿದರು. ಅಂದ ಹಾಗೆ ಅಲ್ಜೀರಿಯಾದ ಅಥ್ಲೀಟ್ ಕಳೆದ ವರ್ಷ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಲಿಂಗ ಪರೀಕ್ಷೆಯಲ್ಲಿ ವಿಫಲರಾಗಿದ್ದರು.ಆದಾಗ್ಯೂ ಅವರಿಗೆ ಒಲಿಂಪಿಕ್ಸ್​ನಲ್ಲಿ ಅವಕಾಶ ಕೊಟ್ಟಿರುವುದು ವಿವಾದ ಹುಟ್ಟುಹಾಕಿದೆ. 25 ವರ್ಷದ ಖೆಲಿಫಾ ಅವರ ದೇಹದಲ್ಲಿ ಟೆಸ್ಟೋಸ್ಟೆರಾನ್ ಮಟ್ಟ ಹೆಚ್ಚಾಗಿದೆ ಎಂದು ಕಳೆದ ವರ್ಷ ಬೆಳಕಿಗೆ ಬಂದಿತ್ತು. ಇದು ಪುರುಷರ ದೇಹದಲ್ಲಿರುವ ಅಂಶವಾಗಿದೆ.

ಮಹಿಳೆಯರ 66 ಕೆ.ಜಿ ವಿಭಾಗದಲ್ಲಿ ಖೇಲಿಫ್ ಕ್ವಾರ್ಟರ್ ಫೈನಲ್​ಗೆ ಪ್ರವೇಶಿಸಿದ್ದರು. ಅಲ್ಲಿ ಅವರು ಕ್ಯಾರಿನಿ ಮೂಗಿಗೆ ಕೊಟ್ಟ ಪಂಚ್ ಅವರನ್ನು ಗಂಭೀರವಾಗಿ ಗಾಯಗೊಳ್ಳುವಂತೆ ಮಾಡಿತು. ಅವರು ತಕ್ಷಣ ಸ್ಪರ್ಧೆಯನ್ನು ನಿಲ್ಲಿಸಿ ಶರಣಾದರು. ಅಲ್ಲದೆ ಪುರುಷ ಸ್ಪರ್ಧಿಗೆ ಅವಕಾಶ ನೀಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಏಕಪಕ್ಷೀಯ ಪಂದ್ಯದ ಬಗ್ಗೆ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಪ್ರತಿಕ್ರಿಯೆ ನೀಡಿದ್ದಾರೆ. ಇದು ಸರಿಯಾದ ರೀತಿಯ ಸ್ಪರ್ಧೆಯಲ್ಲ ಎಂದು ಹೇಳಿದ್ದಾರೆ.

ನನ್ನ ಮೂಗಿನಲ್ಲಿ ನೋವು ಇದೆ. ಮತ್ತು ನಾನು ನಿಲ್ಲಿಸಿ ಎಂದು ಹೇಳಿದೆ. ಮೊದಲ ಹೊಡೆತದಿಂದ ನನ್ನ ಮೂಗಿನಿಂದ ರಕ್ತ ಸೋರಲು ಪ್ರಾರಂಭಿಸಿತು ಎಂದು ದುಃಖಿತ ಕ್ಯಾರಿನಿ ಹೇಳಿದ್ದಾರೆ. 25ರ ಹರೆಯದ ಕ್ಯಾರಿನಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ನಾನು ರಾಷ್ಟ್ರೀಯ ತಂಡದಲ್ಲಿ ಆಗಾಗ್ಗೆ ಪುರುಷರ ಜತೆ ಸ್ಪರ್ಧೆ ಮಾಡಿದ್ದೆ . ನಾನು ನನ್ನ ಸಹೋದರನೊಂದಿಗೆ ತರಬೇತಿ ಪಡೆಯುತ್ತೇನೆ. ಆದರೆ ಇಂದು ನಾನು ತುಂಬಾ ಆಘಾತಕಾರಿ ಎಂದು ಕ್ಯಾರಿನಿ ಹೇಳಿದ್ದಾರೆ.

ಇದನ್ನೂ ಓದಿ: Paris Olympics 2024 : ಭಾರತದವರೇ ಆದ ಎಚ್​ಎಸ್​ ಪ್ರಣಯ್​ ಸೋಲಿಸಿ ಕ್ವಾರ್ಟರ್​​ ಫೈನಲ್ಸ್​ಗೇರಿದ ಲಕ್ಷ್ಯ ಸೇನ್​

ನಾನು ಅಗಲಿರುವ ತಂದೆಗಾಗಿ ಇಲ್ಲಿ ಸ್ಪರ್ಧೆಗೆ ಬಂದಿದ್ದೆ. ಆದರೆ, ಇದು ಅನ್ಯಾಯ. ಪುರುಷ ಸ್ಪರ್ಧಿಯ ಪಂಚ್ ಎದುರಿಸುವುದು ಅಸಾಧ್ಯ ಎಂದು ಕ್ಯಾರಿನಿ ಹೇಳಿಕೊಂಡಿದ್ದಾರೆ.

ಆಯೋಜಕರ ಪ್ರಮಾದ

ಶುಕ್ರವಾರ 57 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಖೇಲಿಫ್ ಮತ್ತು ತೈವಾನ್ ನ ಲಿನ್ ಯು-ಟಿಂಗ್ ಕಳೆದ ವರ್ಷ ವಿಶ್ವ ಚಾಂಪಿಯನ್ ಶಿಪ್ ಗೆ ಅನರ್ಹರಾಗಿದ್ದರು ಆದರೆ ಪ್ಯಾರಿಸ್ ನಲ್ಲಿ ನಡೆದ ಮಹಿಳಾ ಸ್ಪರ್ಧೆಯಲ್ಲಿ ಸ್ಪರ್ಧಿಸಲು ಅವರಿಗೆ ಅವಕಾಶ ಕೊಡಲಾಗಿದೆ. ಟೆಸ್ಟೋಸ್ಟೆರಾನ್ ಮಟ್ಟದ ಅರ್ಹತಾ ಮಾನದಂಡಗಳನ್ನು ಪೂರೈಸಲು ವಿಫಲವಾದ ನಂತರ 25 ವರ್ಷದ ಖೇಲಿಫ್ ಅವರನ್ನು ಅನರ್ಹಗೊಳಿಸಲಾಗಿತ್ತು.

ಪುರುಷ ಆನುವಂಶಿಕ ಗುಣಲಕ್ಷಣಗಳನ್ನು ಹೊಂದಿರುವ ಕ್ರೀಡಾಪಟುಗಳನ್ನು ಮಹಿಳಾ ಸ್ಪರ್ಧೆಗಳಿಗೆ ಸೇರಿಸಬಾರದು ಎಂದು ನಾನು ಭಾವಿಸುತ್ತೇನೆ ಎಂದು ಇಟಲಿ ಪ್ರಧಾನಿ ಮೆಲೋನಿ ಹೇಳಿದ್ದಾರೆ.

ಮಹಿಳೆಯರ ಮೇಲಿನ ಹಿಂಸಾಚಾರದ ಬಗ್ಗೆ ವಿಶ್ವಸಂಸ್ಥೆಯ ವಿಶೇಷ ವರದಿಗಾರ ರೀಮ್ ಅಲ್ಸಲೇಮ್ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. . ಕ್ಯಾರಿನಿ ಮತ್ತು ಇತರ ಮಹಿಳಾ ಕ್ರೀಡಾಪಟುಗಳು ದೈಹಿಕ ಮತ್ತು ಮಾನಸಿಕ ಹಿಂಸೆ ಒಳಗಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಖೇಲಿಫ್, “ಅಂತಹ ಪ್ರಮುಖ ಸ್ಪರ್ಧೆಯಲ್ಲಿ ಗೆಲ್ಲುವುದು ಯಾವಾಗಲೂ ತೃಪ್ತಿಕರವಾಗಿದೆ, ಆದರೆ ನಾನು ಪದಕದ ಗುರಿಯತ್ತ ಗಮನ ಹರಿಸಿದ್ದೇನೆ” ಎಂದು ಹೇಳಿದರು.

ಅಲ್ಜೀರಿಯಾದ ಒಲಿಂಪಿಕ್ ಸಮಿತಿ (ಸಿಒಎ) “ನಮ್ಮ ಅಥ್ಲೀಟ್ ಇಮಾನೆ ಖೇಲಿಫ್ ವಿರುದ್ಧ ಕೆಲವು ವಿದೇಶಿ ಮಾಧ್ಯಮಗಳು ದುರುದ್ದೇಶಪೂರಿತ ಮತ್ತು ಅನೈತಿಕ ದಾಳಿಗಳನ್ನು ನಡೆಸಿವೆ” ಎಂದು ಕರೆದಿದೆ.

ವೃತ್ತಿಪರ ಬಾಕ್ಸರ್​

ಖೇಲಿಫ್ ಅವರು ಮೇ 2, 1999 ರಂದು ಅಲ್ಜೀರಿಯಾದ ಟಿಯಾರೆಟ್​ನಲ್ಲಿ ಜನಿಸಿದ್ದಾರೆ, ಅವರು ಮೊದಲ ಬಾರಿಗೆ 2018 ರಲ್ಲಿ ಎಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್​ಶಿಪ್​ನಲ್ಲಿ ವೃತ್ತಿಪರ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಕಾಣಿಸಿಕೊಂಡಿದ್ದರು. ಖೇಲಿಫ್ 2021 ರ ಟೋಕಿಯೊ ಒಲಿಂಪಿಕ್ಸ್​​ನ ಕ್ವಾರ್ಟರ್ ಫೈನಲ್​ಗೆ ಪ್ರವೇಶಿಸಿದರು ಮತ್ತು ಮುಂದಿನ ವರ್ಷ ಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್​ಶಿಫ್​ ಫೈನಲ್​​ನಲ್ಲಿ ಸ್ಥಾನ ಪಡೆದ ಮೊದಲ ಅಲ್ಜೀರಿಯಾದ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 2023 ರ ಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್​ಶಿಪ್​ನಿಂದ ಅವರು ಅನರ್ಹಗೊಂಡಿದ್ದರು.

Continue Reading
Advertisement
Paris Olympics 202
ಪ್ರಮುಖ ಸುದ್ದಿ10 seconds ago

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಆಗಸ್ಟ್​​ 2ರಂದು ಭಾರತದ ಅಥ್ಲೀಟ್​ಗಳ ಸ್ಪರ್ಧೆಯ ವಿವರ ಇಲ್ಲಿದೆ

Former minister B Sriramulu alleged that the Congress government is not interested in the construction of the Kampli bridge
ಬಳ್ಳಾರಿ6 mins ago

Ballari News: ಕಂಪ್ಲಿ ಸೇತುವೆ ನಿರ್ಮಿಸಲು ಆಸಕ್ತಿ ವಹಿಸದ ಕಾಂಗ್ರೆಸ್ ಸರ್ಕಾರ; ಶ್ರೀರಾಮುಲು ಆರೋಪ

Whatsapp Shutdown
ತಂತ್ರಜ್ಞಾನ11 mins ago

Alternative to Whatsapp: ವಾಟ್ಸಾಪ್ ಸ್ಥಗಿತಗೊಂಡರೆ ಏನ್‌ ಮಾಡೋದು? ಇಲ್ಲಿದೆ ಪರ್ಯಾಯ ಆ್ಯಪ್‌ಗಳ ಪಟ್ಟಿ

Kerala Floods
ದೇಶ58 mins ago

Kerala Floods: ಕೇರಳದಲ್ಲಿ ಪ್ರವಾಹ; ಪ್ರಾಣವನ್ನೇ ಒತ್ತೆ ಇಟ್ಟು ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ದ ಪತಿ, Video ಇದೆ

Paris Olympics 2024
ಪ್ರಮುಖ ಸುದ್ದಿ1 hour ago

Paris Olympics 2024 : ಒಲಿಂಪಿಕ್ಸ್​ನಲ್ಲಿ ವಿವಾದ; ಮಹಿಳೆ ವಿರುದ್ಧ ಸ್ಪರ್ಧಿಸಲು ಬಾಕ್ಸಿಂಗ್​ ಕಣಕ್ಕೆ ಇಳಿದ ಪುರುಷ!

vyasana mukta dinacharane programme in hosapete
ವಿಜಯನಗರ1 hour ago

Vijayanagara News: ಹೊಸಪೇಟೆಯಲ್ಲಿ ವ್ಯಸನ ಮುಕ್ತ ದಿನಾಚರಣೆ; ಜನ ಜಾಗೃತಿ

utthana vaarshika katha spardhe the last date for submission of the story is october 10
ಬೆಂಗಳೂರು1 hour ago

Utthana Katha Spardhe 2024: ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆ; ಕಥೆ ತಲುಪಿಸಲು ಅ.10 ಕೊನೆಯ ದಿನ

World Breastfeeding Week
ಆರೋಗ್ಯ2 hours ago

World Breastfeeding Week: ವಿಶ್ವ ಸ್ತನ್ಯಪಾನ ಸಪ್ತಾಹ; ಹಾಲುಣಿಸಿದರೆ ಮಗುವಿಗೆ ಮಾತ್ರವಲ್ಲ, ತಾಯಿಗೂ ಲಾಭ!

Saree Fashion
ಫ್ಯಾಷನ್2 hours ago

Saree Fashion: ಕಂಟೆಂಪರರಿ ಪ್ರಿಂಟೆಡ್‌ ವಿನ್ಯಾಸದಲ್ಲೂ ಬಂತು ಆರ್ಗನ್ಜಾ ಸೀರೆ!

kotak bank smart watch
ವಾಣಿಜ್ಯ2 hours ago

kotak bank smart watch: ಮೊಬೈಲ್‌ ಬೇಕಿಲ್ಲ, ವಾಚ್‌ನಲ್ಲೇ ಆನ್‌ಲೈನ್‌ ಪೇಮೆಂಟ್‌! ಬಂದಿದೆ ಕೋಟಕ್-ಜಿಓಕ್ಯೂಐಐ ಸ್ಮಾರ್ಟ್ ವಾಚ್!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ8 hours ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ9 hours ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ9 hours ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ2 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ2 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ3 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ3 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ3 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ4 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

ಟ್ರೆಂಡಿಂಗ್‌