ವಾರಾಣಸಿ ದೇವಾಲಯದಲ್ಲಿ ಸ್ಫೋಟ ನಡೆದ 16 ವರ್ಷಗಳ ಬಳಿಕ ಉಗ್ರನಿಗೆ ಶಿಕ್ಷೆ - Vistara News

ದೇಶ

ವಾರಾಣಸಿ ದೇವಾಲಯದಲ್ಲಿ ಸ್ಫೋಟ ನಡೆದ 16 ವರ್ಷಗಳ ಬಳಿಕ ಉಗ್ರನಿಗೆ ಶಿಕ್ಷೆ

ವಾರಾಣಸಿ ದೇವಾಲಯದಲ್ಲಿ ಸರಣಿ ಸ್ಫೋಟ ಸಂಭವಿಸಿದ 16 ವರ್ಷಗಳ ಬಳಿಕ ಉಗ್ರನಿಗೆ ಕೋರ್ಟ್‌ ತಪ್ಪಿತಸ್ಥ ಎಂದು ತೀರ್ಪು ನೀಡಿದೆ. ಶಿಕ್ಷೆ ಪ್ರಕಟವಾಗಲಿದೆ.

VISTARANEWS.COM


on

court judgement
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಗಾಜಿಯಾಬಾದ್:‌ ವಾರಾಣಸಿ ದೇವಾಲಯದಲ್ಲಿ ಹಾಗೂ ರೈಲ್ವೆ ನಿಲ್ದಾಣದಲ್ಲಿ ಸರಣಿ ಸ್ಫೋಟ ಸಂಭವಿಸಿ 16 ವರ್ಷಗಳ ಬಳಿಕ ಕೊನೆಗೂ ಉಗ್ರ ವಲಿವುಲ್ಲಾ ಖಾನ್‌ ತಪ್ಪಿತಸ್ಥ ಎಂದು ಗಾಜಿಯಾಬಾದ್‌ ಕೋರ್ಟ್‌ ಶನಿವಾರ ತೀರ್ಪು ಕೊಟ್ಟಿದೆ. ಶಿಕ್ಷೆಯ ಪ್ರಮಾಣ ಜೂನ್‌ 6ಕ್ಕೆ ಪ್ರಕಟವಾಗಲಿದೆ.

ವಾರಾಣಸಿಯ ಸಂಕಟ ಮೋಚನ ದೇವಾಲಯದಲ್ಲಿ 2006ರಲ್ಲಿ ಸ್ಫೋಟ ಸಂಭವಿಸಿತ್ತು. ಕಂಟೋನ್‌ಮೆಂಟ್‌ ರೈಲ್ವೆ ನಿಲ್ದಾಣದಲ್ಲೂ ಸ್ಫೋಟವಾಗಿತ್ತು. 20 ಮಂದಿ ಸಾವಿಗೀಡಾಗಿದ್ದರು. ನೂರಾರು ಜನ ಗಾಯಗೊಂಡಿದ್ದರು. ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಜಿತೇಂದ್ರ ಕುಮಾರ್‌, ವಲಿವುಲ್ಲಾ ಖಾನ್‌ ಎರಡು ಪ್ರಕರಣಗಳಲ್ಲಿ ದೋಷಿ ಎಂದು ತೀರ್ಪು ಪ್ರಕಟಿಸಿದರು. ಮತ್ತೊಂದು ಪ್ರಕರಣದಲ್ಲಿ ಈತನನ್ನು ದೋಷಮುಕ್ತಗೊಳಿಸಲಾಗಿದೆ.

ಸಂಕಟ ಮೋಚನ ದೇವಾಲಯದಲ್ಲಿ 2006ರ ಮಾರ್ಚ್‌ 7ರಂದು ಸಂಜೆ 6.15ಕ್ಕೆ ಸ್ಫೋಟ ಸಂಭವಿಸಿತ್ತು. ಇದಾದ 15 ನಿಮಿಷಗಳಲ್ಲಿ ರೈಲ್ವೆ ನಿಲ್ದಾಣದಲ್ಲಿ ಬಾಂಬ್‌ ಸ್ಫೋಟವಾಗಿತ್ತು. ಒಟ್ಟು 121 ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

2006ರ ಏಪ್ರಿಲ್‌ ನಲ್ಲಿ ವಿಶೇಷ ಕಾರ್ಯಪಡೆಯನ್ನು ರಷಿಸಲಾಗಿತ್ತು. ಇದು ಘಟನೆಯ ತನಿಖೆ ನಡೆಸಿತ್ತು. ವಲಿವುಲ್ಲಾ ಖಾನ್‌ ಬಾಂಗ್ಲಾದೇಶದ ಹರ್ಕತ್‌ ಜಿಹಾದ್‌ ಇಸ್ಲಾಮಿ ಎಂಬ ಭಯೋತ್ಪಾದಕ ಸಂಘಟನೆ ಜತೆ ಸಂಪರ್ಕ ಹೊಂದಿರುವುದು ತನಿಖೆಯಲ್ಲಿ ಗೊತ್ತಾಗಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Jairam Ramesh: 150 ಡಿಸಿಗಳಿಗೆ ಅಮಿತ್‌ ಶಾ ಕರೆ; ಜೈರಾಮ್‌ ರಮೇಶ್‌ ಆರೋಪಕ್ಕೆ ಇಸಿ ಪ್ರತಿಕ್ರಿಯೆ- ಏನಿದು ವಿವಾದ?

Jairam Ramesh:ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದ ಜೈರಾಮ್‌ ಶಂಕರ್‌, ಚುನಾವಣೆ ಫಲಿತಾಂಶಕ್ಕೂ ಮುನ್ನ ಅಮಿತ್‌ ಶಾ, ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅಥವಾ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿದ್ದಾರೆ. ಇದುವರೆಗೆ ಅವರು 150 ಡಿಸಿಗಳ ಜೊತೆ ಮಾತನಾಡಿ, ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಲು ಯತ್ನಿಸಿದ್ದಾರೆ. ಇದರಿಂದ ಗೆಲುವಿನ ಬಗ್ಗೆ ಬಿಜೆಪಿ ಎಷ್ಟು ಹತಾಶೆಯಾಗಿದೆ ಎಂಬುದು ಬಯಲಾಗಿದೆ. ಅಧಿಕಾರಿಗಳ ಮೇಲೆ ಮೋದಿ ಮತ್ತು ಶಾ ಬಣ ಬಹಳ ಒತ್ತಡ ಹೇರುತ್ತಿದೆ. ಮತ ಎಣಿಕೆ ಪ್ರಕ್ರಿಯೆಯಲ್ಲಿ ಭಾರೀ ಮಧ್ಯಪ್ರವೇಶ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು.

VISTARANEWS.COM


on

Jairam Ramesh
Koo

ನವದೆಹಲಿ: ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ(Lok Sabha Election 2024) ಎಲ್ಲರ ಚಿತ್ತ ಫಲಿತಾಂಶದ ಇದೆ. ಇದರ ನಡುವೆ ರಾಜಕೀಯ ನಾಯಕರ ವಿವಾದಾತ್ಮಕ ಹೇಳಿಕೆ, ಆರೋಪ-ಪ್ರತ್ಯಾರೋಪಗಳಂತೂ ನಿಲ್ಲುತ್ತಲೇ ಇಲ್ಲ. ಇದೀಗ ಚುನಾವಣಾ ಫಲಿತಾಂಶ(Election Result)ದ ಮೇಲೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ(Amith Shah) ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತಾರೆ ಎಂದು ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್‌ ಮುಖಂಡ ಜೈರಾಮ್‌ ರಮೇಶ್‌(Jairam Ramesh) ಪಚೀತಿಗೆ ಬಿದ್ದಿದ್ದಾರೆ. ಈ ಬಗ್ಗೆ ದಾಖಲೆ ಒದಗಿಸುವಂತೆ ಚುನಾವಣಾ ಆಯೋಗ(EC) ಕೇಳಿದೆ.

ಜೈರಾಮ್‌ ರಮೇಶ್‌ ಆರೋಪ?

ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದ ಜೈರಾಮ್‌ ಶಂಕರ್‌, ಚುನಾವಣೆ ಫಲಿತಾಂಶಕ್ಕೂ ಮುನ್ನ ಅಮಿತ್‌ ಶಾ, ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅಥವಾ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿದ್ದಾರೆ. ಇದುವರೆಗೆ ಅವರು 150 ಡಿಸಿಗಳ ಜೊತೆ ಮಾತನಾಡಿ, ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಲು ಯತ್ನಿಸಿದ್ದಾರೆ. ಇದರಿಂದ ಗೆಲುವಿನ ಬಗ್ಗೆ ಬಿಜೆಪಿ ಎಷ್ಟು ಹತಾಶೆಯಾಗಿದೆ ಎಂಬುದು ಬಯಲಾಗಿದೆ. ಅಧಿಕಾರಿಗಳ ಮೇಲೆ ಮೋದಿ ಮತ್ತು ಶಾ ಬಣ ಬಹಳ ಒತ್ತಡ ಹೇರುತ್ತಿದೆ. ಮತ ಎಣಿಕೆ ಪ್ರಕ್ರಿಯೆಯಲ್ಲಿ ಭಾರೀ ಮಧ್ಯಪ್ರವೇಶ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು.

EC ಪ್ರತಿಕ್ರಿಯೆ ಏನು?

ಜೈರಾಮ್‌ ರಮೇಶ್‌ ಹೇಳಿಕೆ ಎಲ್ಲೆಡೆ ವೈರಲ್‌ ಆಗುತ್ತಿದ್ದಂತೆ ಈ ವಿಚಾರವನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿದೆ. ಅಲ್ಲದೇ ಈ ಬಗ್ಗೆ ದಾಖಲೆ ಸಮೇತ ಸಂಪೂರ್ಣ ಮಾಹಿತಿ ನೀಡುವಂತೆ ಸೂಚನೆ ನೀಡಿದೆ. ಇದುವರೆಗೆ ಯಾವುದೇ ಒಬ್ಬ ಜಿಲ್ಲಾಧಿಕಾರಿಯಾಗಲಿ ಅಥವಾ ಜಿಲ್ಲಾ ಮ್ಯಜಿಸ್ಟ್ರೇಟ್‌ ಆಗಲಿ ತಮ್ಮ ಮೇಲೆ ಒತ್ತಡ ಬರುತ್ತಿರುವ ಬಗ್ಗೆ ಯಾವುದೇ ಆರೋಪ ಮಾಡಿಲ್ಲ. ಮತ ಎಣಿಕೆ ಎಂಬುದು ಪ್ರಜಾಪ್ರಭುತ್ವ ವ್ಯವಸ್ಥೆಯ ಪವಿತ್ರ ಕಾರ್ಯ. ಜೈರಾಮ್‌ ರಮೇಶ್‌ರಂತಹ ಹಿರಿಯ ನಾಯಕರು ನೀಡುವಂ ಇಂತಹದ ಹೇಳಿಕೆಗಳಿಂದ ಮತ ಎಣಿಕೆ ಬಗ್ಗೆ ಜನರಲ್ಲಿ ಅನುಮಾನಗಳು ಮೂಡುತ್ತವೆ. ಹೀಗಾಗಿ ತಮ್ಮ ಆರೋಪಗಳಿಗೆ ಪುಷ್ಠಿ ನೀಡುವಂತಹ ದಾಖಲೆಗಳನ್ನು ತಕ್ಷಣ ಒದಗಿಸಿ ಎಂದು ಚುನಾವಣಾ ಆಯೋಗ ಆದೇಶಿಸಿದೆ.

ಇದನ್ನೋ ಓದಿ: CET Ranking : 3 ಸಾವಿರ ಅಭ್ಯರ್ಥಿಗಳಿಗೆ ಸಿಕ್ಕಿಲ್ಲ ಸಿಇಟಿ ರ‍್ಯಾಂಕ್‌! ಮುಂದೇನು ಮಾಡ್ಬೇಕು?

Continue Reading

ದೇಶ

Assembly Election Results 2024: ಸಿಕ್ಕಿಂ ಮತ್ತೆ ಎಸ್‌ಕೆಎಂ ತೆಕ್ಕೆಗೆ; 32 ಸ್ಥಾನಗಳ ಪೈಕಿ 31 ಕಡೆ ಗೆಲುವು

Assembly Election Results 2024: ಕುತೂಹಲ ಮೂಡುಸಿದ್ದ ಸಿಕ್ಕಿಂ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (SKM) 32 ಕ್ಷೇತ್ರಗಳ ಪೈಕಿ 31 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಆ ಮೂಲಕ ಎಸ್‌ಕೆಎಂ ಈ ಬಾರಿ ಪ್ರಚಂಡ ಗೆಲುವು ದಾಖಲಿಸಿದೆ. ಇನ್ನು ಒಂದು ಕಡೆ ಸಿಕ್ಕಿಂ ಡೆಮಾಕ್ರಾಟಿಕ್‌ ಫ್ರಂಟ್‌ (SDF) ಗೆಲುವು ಪಡೆದಿದೆ.

VISTARANEWS.COM


on

Assembly Election Results 2024
Koo

ನವದೆಹಲಿ: ಲೋಕಸಭೆ ಚುನಾವಣೆ(Lok Sabha Election 2024) ಜತೆಗೆ ದೇಶದ ಗಮನ ಸೆಳೆದಿದ್ದ ಅರುಣಾಚಲ ಪ್ರದೇಶ (Aruchal Pradesh) ಮತ್ತು ಸಿಕ್ಕಿಂ(Sikkim) ವಿಧಾನಸಭೆ ಚುನಾವಣೆ (Assembly Election Results 2024) ಫಲಿತಾಂಶ ಹೊರ ಬಿದ್ದಿದೆ. ಅರುಣಾಚಲ ಪ್ರದೇಶದಲ್ಲಿ 60 ಕ್ಷೇತ್ರಗಳ ಪೈಕಿ ಬಿಜೆಪಿ 42 ಸ್ಥಾನಗಳನ್ನು ಗೆದ್ದುಕೊಂಡಿದೆ. ಇತ್ತ ಸಿಕ್ಕಿಂನಲ್ಲಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (SKM) 32 ಕ್ಷೇತ್ರಗಳ ಪೈಕಿ 31 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಆ ಮೂಲಕ ಎಸ್‌ಕೆಎಂ ಈ ಬಾರಿ ಪ್ರಚಂಡ ಗೆಲುವು ದಾಖಲಿಸಿದೆ. ಒಂದು ಕಡೆ ಸಿಕ್ಕಿಂ ಡೆಮಾಕ್ರಾಟಿಕ್‌ ಫ್ರಂಟ್‌ (SDF) ಗೆಲುವು ಪಡೆದಿದೆ. 2019ರ ಚುನಾವಣೆಯಲ್ಲಿ ಎಸ್‌ಕೆಎಂಯೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದ ಬಿಜೆಪಿ ರಾಜ್ಯದ ಯಾವುದೇ ಸ್ಥಾನಗಳಲ್ಲಿ ಗೆಲುವು ಸಾಧಿಸಿಲ್ಲ.

ರಾಜ್ಯದಲ್ಲಿ ಅಧಿಕಾರ ಹಿಡಿಯಲು ಅಗತ್ಯವಾದ ಮ್ಯಾಜಿಕ್‌ ನಂಬರ್‌ 16. ಇನ್ನು ಎಸ್‌ಕೆಎಂನ ನಾಯಕ, ಹಾಲಿ ಮುಖ್ಯಮಂತ್ರಿ ಪ್ರೇಮ್‌ ಸಿಂಗ್‌ ತಮಾಂಗ್‌ ಪ್ರಚಂಡ ಗೆಲುವು ದಾಖಲಿಸಿದ್ದಾರೆ. ಅವರು ರೆನಾಕ್ ವಿಧಾನಸಭಾ ಕ್ಷೇತ್ರದಿಂದ ಸೋಮ್ ನಾಥ್ ಪೌಡ್ಯಾಲ್ ಅವರನ್ನು 7,000ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದಾರೆ.

ರಾಜ್ಯಾದ್ಯಂತ ಎಸ್‌ಕೆಎಂ ಕಾರ್ಯಕರ್ತರ ಸಂಭ್ರಮಾಚರಣೆ ಆರಂಭವಾಗಿದೆ. ಪ್ರಚಂಡ ಗೆಲುವಿಗಾಗಿ ಪ್ರೇಮ್‌ ಸಿಂಗ್‌ ತಮಾಂಗ್‌ ಅವರು ಕಾರ್ಯಕರ್ತರನ್ನು ಅಭಿನಂದಿಸಿದ್ದಾರೆ. ʼʼಜನರ ಪ್ರೀತಿ ಮತ್ತು ವಿಶ್ವಾಸದಿಂದಾಗಿ ನಮ್ಮ ಸರ್ಕಾರ ಐದು ವರ್ಷಗಳಲ್ಲಿ ಯಶಸ್ವಿಯಾಗಿ ಆಡಳಿತ ನಡೆಸಿದೆ. ಈ ಗೆಲುವಿಗಾಗಿ ಪಕ್ಷದ ಕಾರ್ಯಕರ್ತರು ತುಂಬಾ ಶ್ರಮಿಸಿದ್ದಾರೆ. ಈಗ ಸಿಕ್ಕಿಂನ ಜನರಿಗೆ ನಮ್ಮ ಸೇವೆಯನ್ನು ನೀಡಲು ಮುಂದಿನ ಐದು ವರ್ಷಗಳು ಸಿಕ್ಕಿವೆ” ಎಂದು ಅವರು ಗ್ಯಾಂಗ್ಟಾಕ್‌ನ ಪಾಲ್ಜೋರ್ ಕ್ರೀಡಾಂಗಣದಲ್ಲಿ ನಡೆದ ಸಭೆಯಲ್ಲಿ ಹೇಳಿದರು.

2019ರಲ್ಲಿ ಎಸ್‌ಕೆಎಂ 17 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆ ಮೂಲಕ ಸತತ 25 ವರ್ಷಗಳ ಕಾಲ ರಾಜ್ಯವನ್ನು ಆಳಿದ್ದ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ ಪಕ್ಷದಿಂದ ಅಧಿಕಾರ ಪಡೆದುಕೊಂಡಿತ್ತು. ಪ್ರೇಮ್ ಸಿಂಗ್ ತಮಾಂಗ್ ಅವರೇ ಮುಖ್ಯಮಂತ್ರಿ ಆಗಿ ಮುಂದುವರಿಯುವ ನಿರೀಕ್ಷೆ ಇದೆ.

ಅರುಣಾಚಲ ಪ್ರದೇಶದಲ್ಲಿ ಬಿಜೆಪಿಗೆ ಪ್ರಚಂಡ ಬಹುಮತ

ಚುನಾವಣಾ ಆಯೋಗದ ಪ್ರಕಾರ ಅರುಣಾಚಲ ಪ್ರದೇಶದಲ್ಲಿ 60 ಕ್ಷೇತ್ರಗಳ ಪೈಕಿ 42 ಸ್ಥಾನಗಳನ್ನು ಬಿಜೆಪಿ ಪಡೆದುಕೊಂಡಿದೆ. 10 ಕ್ಷೇತ್ರಗಳಲ್ಲಿ ಬಿಜೆಪಿ ಅವಿರೋಧವಾಗಿ ಆಯ್ಕೆಯಾಗಿದೆ. ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಇಪಿ) ಎರಡು ಸ್ಥಾನಗಳನ್ನು ಗೆದ್ದು, ಒಂದರಲ್ಲಿ ಮುನ್ನಡೆ ಸಾಧಿಸಿದೆ. ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ (ಪಿಪಿಎ) ಎರಡು ಸ್ಥಾನಗಳನ್ನು ಗೆದ್ದಿದ್ದರೆ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಒಂದನ್ನು ಪಡೆದುಕೊಂಡು ಎರಡು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇಸಿಐ ಅಂಕಿಅಂಶಗಳ ಪ್ರಕಾರ ಸ್ವತಂತ್ರ ಅಭ್ಯರ್ಥಿಗಳು ಮೂರು ಸ್ಥಾನಗಳನ್ನು ಗೆದ್ದಿದ್ದಾರೆ.

ಮುಕ್ತೋ ಕ್ಷೇತ್ರದಲ್ಲಿ ಪೇಮಾ ಖಂಡು, ಬೊಮ್ಡಿಲದಲ್ಲಿ ಡೊಂಗ್ರು ಸಿಯೊಂಗ್ಜು, ಚೌಕಂನಲ್ಲಿ ಚೌನಾ ಮೇ ಹಯುಲಿಯಾಂಗ್‌ನಲ್ಲಿ ದಸಾಂಗ್ಲು ಪುಲ್, ಇಟಾನಗರದಲ್ಲಿ ಟೆಚಿ ಕಾಸೊ, ರೋಯಿಂಗ್‌ದಲ್ಲಿ ಮುಚ್ಚು ಮಿಥಿ, ಸಾಗಲೀ ಕ್ಷೇತ್ರದಲ್ಲಿ ರತು ಟೆಚಿ, ತಾಲಿ ಕ್ಷೇತ್ರದಲ್ಲಿ ಜಿಕ್ಕೆ ಟಾಕೊ, ತಾಲಿಹಾದಲ್ಲಿ ನ್ಯಾತೋ ದುಕಮ್ ಜಿರೋ, ಹಾಪೋಲಿ ಕ್ಷೇತ್ರದಲ್ಲಿ ಹಗೆ ಅಪ್ಪಾ ಅರುಣಾಚಲ ಪ್ರದೇಶದಲ್ಲಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

Continue Reading

ದೇಶ

Bhavya Narasimhamurthy: ಕಾಂಗ್ರೆಸ್‌ ವಕ್ತಾರೆ ಭವ್ಯಾ ನರಸಿಂಹಮೂರ್ತಿ ಈಗ ಸೇನಾಧಿಕಾರಿ!

ಪ್ರಾದೇಶಿಕ ಸೇನೆಯಲ್ಲಿ ಕಮಿಷನ್‌ಡ್ ಆಫೀಸರ್ ಆಗಿ ನಿಯೋಜನೆಯಾಗಿರುವ ಭವ್ಯಾ ನರಸಿಂಹಮೂರ್ತಿ (Bhavya Narasimhamurthy) ಅವರು. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಭಾರತೀಯ ಸೇನೆ ಸಮವಸ್ತ್ರದಲ್ಲಿ ತರಬೇತಿ ಪಡೆಯುತ್ತಿರುವ ಚಿತ್ರಗಳನ್ನು ಹಂಚಿಕೊಂಡಿರುವ ಅವರು ಇದು ನನ್ನ ಜೀವನದ ಹೆಮ್ಮೆಯ ಸಂದರ್ಭ ಎಂದು ಹೇಳಿದ್ದಾರೆ.

VISTARANEWS.COM


on

By

Bhavya Narasimhamurthy
Koo

ಅಖಿಲ ಭಾರತ ಕಾಂಗ್ರೆಸ್ ಸಮಿತಿ (All India Congress Committee) ರಾಷ್ಟ್ರೀಯ ಸಂಯೋಜಕಿ ಹಾಗೂ ಕರ್ನಾಟಕ ಕಾಂಗ್ರೆಸ್ (congress) ವಕ್ತಾರರಾದ ಭವ್ಯಾ ನರಸಿಂಹಮೂರ್ತಿ (Bhavya Narasimhamurthy) ಅವರು ದಕ್ಷಿಣ ಭಾರತದಿಂದ (south india) ಪ್ರಾದೇಶಿಕ ಸೇನೆಗೆ (Territorial Army officer) ಆಯ್ಕೆಯಾದ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಡೈರೆಕ್ಟರೇಟ್ ಜನರಲ್ ಟೆರಿಟೋರಿಯಲ್ ಆರ್ಮಿ 2022ರಲ್ಲಿ ನಡೆಸಿದ ಟೆರಿಟೋರಿಯಲ್ ಆರ್ಮಿ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾದ ಏಕೈಕ ಮಹಿಳಾ ಅಭ್ಯರ್ಥಿಯಾದ ಭವ್ಯಾ ಅವರ ಮಿಲಿಟರಿ ವೃತ್ತಿ ಜೀವನದ ಪ್ರಯಾಣ ಇದರೊಂದಿಗೆ ಪ್ರಾರಂಭವಾಯಿತು.

2024ರ ಮೇನಲ್ಲಿ ಭವ್ಯಾ ಅವರನ್ನು ಇಂಡೋ-ಪಾಕ್ ನಿಯಂತ್ರಣ ರೇಖೆಯ (LOC) ಬಳಿ ಇರುವ ಸೇನಾ ಘಟಕಕ್ಕೆ ನಿಯೋಜಿಸಲಾಯಿತು. ಅವರ ಪೋಸ್ಟಿಂಗ್ ಸಮಯದಲ್ಲಿ ಅವರು ಕಠಿಣ ತರಬೇತಿಯನ್ನು ಪಡೆದರು ಮತ್ತು ಅನಂತರ ಟೆರಿಟೋರಿಯಲ್ ಆರ್ಮಿಯಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡರು. ಅವರ ಸೇರ್ಪಡೆಯು ಒಂದು ಅದ್ಭುತ ಕ್ಷಣವನ್ನು ಸೂಚಿಸುತ್ತದೆ. ಯಾಕೆಂದರೆ ಅವರು ಪ್ರಾದೇಶಿಕ ಸೈನ್ಯದಲ್ಲಿ ಈ ಶ್ರೇಣಿಯನ್ನು ಪಡೆದ ದಕ್ಷಿಣ ಭಾರತದ ಮೊದಲ ಮಹಿಳೆಯಾಗಿದ್ದಾರೆ.


ಪ್ರಾದೇಶಿಕ ಸೇನೆಯಲ್ಲಿ ಭಾರತೀಯ ನಾಗರಿಕರು ತಮ್ಮ ನಾಗರಿಕ ವೃತ್ತಿಯೊಂದಿಗೆ ಭಾರತೀಯ ಸೇನೆಯ ಭಾಗವಾಗಿ ತಮ್ಮ ದೇಶಕ್ಕೆ ಸೇವೆ ಸಲ್ಲಿಸಲು ಅವಕಾಶವಿದೆ. ಪ್ರಸ್ತುತ ಟೆರಿಟೋರಿಯಲ್ ಆರ್ಮಿಯಲ್ಲಿರುವ ಕೆಲವು ಪ್ರಮುಖ ವ್ಯಕ್ತಿಗಳಲ್ಲಿ ಕ್ರಿಕೆಟಿಗ ಎಂ.ಎಸ್. ಧೋನಿ, ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್, ಮಾಜಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಸೇರಿದ್ದಾರೆ.


ಪ್ರಾದೇಶಿಕ ಸೇನೆಯಲ್ಲಿ ಕಮಿಷನ್ಡ್‌ ಆಫೀಸರ್ ಆಗಿ ನಿಯೋಜನೆಯಾಗಿರುವ ಭವ್ಯಾ ನರಸಿಂಹಮೂರ್ತಿ ಅವರು ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಭಾರತೀಯ ಸೇನೆ ಸಮವಸ್ತ್ರದಲ್ಲಿ ತರಬೇತಿ ಪಡೆಯುತ್ತಿರುವ ಚಿತ್ರಗಳನ್ನು ಹಂಚಿಕೊಂಡಿರುವ ಅವರು ಇದು ನನ್ನ ಜೀವನದ ಹೆಮ್ಮೆಯ ಸಂದರ್ಭ ಎಂದು ಹೇಳಿದ್ದಾರೆ. ರಾಜಕಾರಣಿಯಾಗಿ ಮತ್ತು ಸೇನಾ ಅಧಿಕಾರಿಯಾಗಿ ನಾನು ಈ ಮೂಲಕ ನನ್ನ ದೇಶಕ್ಕೆ ಸೇವೆ ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Education News : ನೀಟ್ ಪರೀಕ್ಷೆ ಬಳಿಕ ಎಂಜಿನಿಯರ್ ಸೀಟು ಹಂಚಿಕೆ; 1.24 ಲಕ್ಷ ಸೀಟುಗಳು ಲಭ್ಯ, ಆನ್ ಲೈನ್ ಪ್ರಕ್ರಿಯೆ

ಏನಿದು ಪ್ರಾದೇಶಿಕ ಸೇನೆ?

ಪ್ರಾದೇಶಿಕ ಸೇನೆ ಎನ್ನುವುದು ನಿರಂತರ ಸೇವೆಯಲ್ಲಿರುವ ಸೈನ್ಯವಲ್ಲ. ಭಾರತದ ನಾಗರಿಕರಿಗೆ ತಮ್ಮ ವೃತ್ತಿಯೊಂದಿಗೆ ಭಾರತೀಯ ಸೇನೆಯ ಭಾಗವಾಗಿ ದೇಶ ಸೇವೆ ಮಾಡುವ ಅವಕಾಶವನ್ನು ಕಲ್ಪಿಸಲಾಗುತ್ತದೆ. ವರ್ಷದಲ್ಲಿ ಎರಡು ತಿಂಗಳ ಕಾಲ ಪ್ರಾದೇಶಿಕ ಸೇನೆಯಲ್ಲಿ ಆಯ್ಕೆಯಾದವರು ಕಾರ್ಯ ನಿರ್ವಹಿಸಬೇಕಾಗುತ್ತದೆ.

Continue Reading

ದೇಶ

Assembly Election Results 2024: ಅರುಣಾಚಲ ಪ್ರದೇಶದಲ್ಲಿ ಬಿಜೆಪಿ, ಸಿಕ್ಕಿಂನಲ್ಲಿ SKMಗೆ ಪ್ರಚಂಡ ಗೆಲುವು

Assembly Election Results 2024: ಚುನಾವಣಾ ಆಯೋಗದ ಪ್ರಕಾರ ಅರುಣಾಚಲ ಪ್ರದೇಶದಲ್ಲಿ 60 ಕ್ಷೇತ್ರಗಳ ಪೈಕಿ 42ಸ್ಥಾನಗಳನ್ನು ಬಿಜೆಪಿ ಪಡೆದಿದೆ. 10 ಕ್ಷೇತ್ರಗಳಲ್ಲಿ ಬಿಜೆಪಿ ಅವಿರೋಧವಾಗಿ ಆಯ್ಕೆಯಾಗಿದೆ. ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಇಪಿ) ಎರಡು ಸ್ಥಾನಗಳನ್ನು ಗೆದ್ದು, ಒಂದರಲ್ಲಿ ಮುನ್ನಡೆ ಸಾಧಿಸಿದೆ. ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ (ಪಿಪಿಎ) ಎರಡು ಸ್ಥಾನಗಳನ್ನು ಗೆದ್ದಿದ್ದರೆ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಒಂದನ್ನು ಪಡೆದುಕೊಂಡು ಎರಡು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇಸಿಐ ಅಂಕಿಅಂಶಗಳ ಪ್ರಕಾರ ಸ್ವತಂತ್ರ ಅಭ್ಯರ್ಥಿಗಳು ಮೂರು ಸ್ಥಾನಗಳನ್ನು ಗೆದ್ದಿದ್ದಾರೆ.

VISTARANEWS.COM


on

Assembly election 2024
Koo

ನವದೆಹಲಿ: ಲೋಕಸಭೆ ಚುನಾವಣೆ(Lok Sabha Election 2024)ಯಷ್ಟೇ ದೇಶದ ಗಮನ ಸೆಳೆದಿದ್ದ ಅರುಣಾಚಲ ಪ್ರದೇಶ(Aruchal Pradesh) ಮತ್ತು ಸಿಕ್ಕಿಂ(Sikkim) ವಿಧಾನಸಭೆ ಚುನಾವಣೆ(Assembly Election Results 2024) ಫಲಿತಾಂಶ ಹೊರಬಿದ್ದಿದೆ. ಅರುಣಾಚಲಪ್ರದೇಶದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯುವ ಮೂಲಕ ಮೂರನೇ ಬಾರಿ ಗದ್ದುಗೆ ಹಿಡಿದಿದೆ. ಮತ್ತೊಂದೆಡೆ ಸಿಕ್ಕಿಂನಲ್ಲಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ(SKM) 32 ಕ್ಷೇತ್ರಗಳ ಪೈಕಿ 31 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಆಮೂಲಕ SKM ಈ ಬಾರಿ ಪ್ರಚಂಡ ಗೆಲುವಿನೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಇನ್ನು ದೇಶ ಅತಿ ಹೆಚ್ಚು ಅವಧಿ ಸಿಎಂ ಆಗಿ ಸೇವೆ ಸಲ್ಲಿಸಿದ್ದ ಪವನ್‌ ಕುಮಾರ್‌ ಚಾರ್ಮ್ಲಿಂಗ್‌ ಪೋಕ್ಲೋಕ್-ಕಮ್ರಾಂಗ್ ಕ್ಷೇತ್ರದಲ್ಲಿ ಮೊದಲ ಬಾರಿಗೆ ಸೋಲುಂಡಿದ್ದಾರೆ.

ಚುನಾವಣಾ ಆಯೋಗದ ಪ್ರಕಾರ ಅರುಣಾಚಲ ಪ್ರದೇಶದಲ್ಲಿ 60 ಕ್ಷೇತ್ರಗಳ ಪೈಕಿ 42ಸ್ಥಾನಗಳನ್ನು ಬಿಜೆಪಿ ಪಡೆದಿದೆ. 10 ಕ್ಷೇತ್ರಗಳಲ್ಲಿ ಬಿಜೆಪಿ ಅವಿರೋಧವಾಗಿ ಆಯ್ಕೆಯಾಗಿದೆ. ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಇಪಿ) ಎರಡು ಸ್ಥಾನಗಳನ್ನು ಗೆದ್ದು, ಒಂದರಲ್ಲಿ ಮುನ್ನಡೆ ಸಾಧಿಸಿದೆ. ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ (ಪಿಪಿಎ) ಎರಡು ಸ್ಥಾನಗಳನ್ನು ಗೆದ್ದಿದ್ದರೆ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಒಂದನ್ನು ಪಡೆದುಕೊಂಡು ಎರಡು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇಸಿಐ ಅಂಕಿಅಂಶಗಳ ಪ್ರಕಾರ ಸ್ವತಂತ್ರ ಅಭ್ಯರ್ಥಿಗಳು ಮೂರು ಸ್ಥಾನಗಳನ್ನು ಗೆದ್ದಿದ್ದಾರೆ.

ಸಿಕ್ಕಿಂನಲ್ಲಿ ಸಂಭ್ರಮಾಚರಣೆ

ಸಿಕ್ಕಿಂನ 32 ಸ್ಥಾನಗಳಲ್ಲಿ ಆಡಳಿತಾರೂಢ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ 31 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದಂತೆ ರಾಜ್ಯಾದ್ಯಂತ ಸಂಭ್ರಮಾಚರಣೆಗಳು ಆರಂಭವಾಗಿವೆ. ಇಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ತಮ್ಮ ಖಾತೆ ತೆರೆಯುವಲ್ಲಿ ವಿಫಲವಾಗಿದೆ. ಇನ್ನು ಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ. ಹೀಗಾಗಿ ಸಿಕ್ಕಿಂನಲ್ಲಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಕ್ಲೀನ್‌ ಸ್ವೀಪ್‌ ಮಾಡೋದ್ರಲ್ಲಿ ಡೌಟೇ ಇಲ್ಲ.

ಅವಿರೋಧ ಆಯ್ಕೆ ಆದ ಬಿಜೆಪಿ ಶಾಸಕರು ಯಾರು?

ಮುಕ್ತೋ ಕ್ಷೇತ್ರದಲ್ಲಿ ಪೇಮಾ ಖಂಡು, ಬೊಮ್ಡಿಲದಲ್ಲಿ ಡೊಂಗ್ರು ಸಿಯೊಂಗ್ಜು, ಚೌಕಂನಲ್ಲಿ ಚೌನಾ ಮೇ ಹಯುಲಿಯಾಂಗ್‌ನಲ್ಲಿ ದಸಾಂಗ್ಲು ಪುಲ್, ಇಟಾನಗರದಲ್ಲಿ ಟೆಚಿ ಕಾಸೊ, ರೋಯಿಂಗ್‌ದಲ್ಲಿ ಮುಚ್ಚು ಮಿಥಿ, ಸಾಗಲೀ ಕ್ಷೇತ್ರದಲ್ಲಿ ರತು ಟೆಚಿ, ತಾಲಿ ಕ್ಷೇತ್ರದಲ್ಲಿ ಜಿಕ್ಕೆ ಟಾಕೊ, ತಾಲಿಹಾದಲ್ಲಿ ನ್ಯಾತೋ ದುಕಮ್ ಜಿರೋ, ಹಾಪೋಲಿ ಕ್ಷೇತ್ರದಲ್ಲಿ ಹಗೆ ಅಪ್ಪಾ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

Continue Reading
Advertisement
Kannada Upcoming Movies KD Martin Bheema Movies
ಸ್ಯಾಂಡಲ್ ವುಡ್11 mins ago

Kannada Upcoming Movies: ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಲು ಬರುತ್ತಿವೆ ಕನ್ನಡ ಸಿನಿಮಾಗಳು!

KMF T20 World Cup
ಕ್ರೀಡೆ14 mins ago

KMF T20 World Cup: ಟಿ20 ವಿಶ್ವಕಪ್​ನಲ್ಲಿ ‘ನಂದಿನಿ’ ಲಾಂಛನ; ಹರ್ಷ ವ್ಯಕ್ತಪಡಿಸಿದ ಕೆಎಂಎಫ್‌

Jairam Ramesh
ದೇಶ28 mins ago

Jairam Ramesh: 150 ಡಿಸಿಗಳಿಗೆ ಅಮಿತ್‌ ಶಾ ಕರೆ; ಜೈರಾಮ್‌ ರಮೇಶ್‌ ಆರೋಪಕ್ಕೆ ಇಸಿ ಪ್ರತಿಕ್ರಿಯೆ- ಏನಿದು ವಿವಾದ?

Assembly Election Results 2024
ದೇಶ31 mins ago

Assembly Election Results 2024: ಸಿಕ್ಕಿಂ ಮತ್ತೆ ಎಸ್‌ಕೆಎಂ ತೆಕ್ಕೆಗೆ; 32 ಸ್ಥಾನಗಳ ಪೈಕಿ 31 ಕಡೆ ಗೆಲುವು

Bhavya Narasimhamurthy
ದೇಶ35 mins ago

Bhavya Narasimhamurthy: ಕಾಂಗ್ರೆಸ್‌ ವಕ್ತಾರೆ ಭವ್ಯಾ ನರಸಿಂಹಮೂರ್ತಿ ಈಗ ಸೇನಾಧಿಕಾರಿ!

Lok Sabha Election
ಕಲಬುರಗಿ38 mins ago

Lok Sabha Election: ಕಲಬುರಗಿ ಲೋಕಸಭೆ ಕ್ಷೇತ್ರ: ಖರ್ಗೆ ಅಳಿಯ Vs ಜಾಧವ್;‌ ಯಾರಿಗೆ ಗೆಲುವಿನ ಸಿಹಿ?

Kannada New Movie chef chidambara Trailer out
ಸ್ಯಾಂಡಲ್ ವುಡ್55 mins ago

Kannada New Movie: ‘ಶೆಫ್​ ಚಿದಂಬರ’ ಸಿನಿಮಾ ಟ್ರೈಲರ್‌​ ಅನಾವರಣ ಮಾಡಿ ಹಾರೈಸಿದ ರಮೇಶ್ ಅರವಿಂದ್!

Virat Kohli
ಕ್ರೀಡೆ1 hour ago

Virat Kohli: ಸಿಕ್ಸ್​ ಪ್ಯಾಕ್​ ತೋರಿಸಿ ಡ್ಯಾನ್ಸ್​ ಮಾಡಿದ ವಿರಾಟ್​ ಕೊಹ್ಲಿ; ವಿಡಿಯೊ ವೈರಲ್​

CET Ranking
ಬೆಂಗಳೂರು1 hour ago

CET Ranking : 3 ಸಾವಿರ ಅಭ್ಯರ್ಥಿಗಳಿಗೆ ಸಿಕ್ಕಿಲ್ಲ ಸಿಇಟಿ ರ‍್ಯಾಂಕ್‌! ಮುಂದೇನು ಮಾಡ್ಬೇಕು?

Valmiki Corporation Scam
ಕರ್ನಾಟಕ1 hour ago

Valmiki Corporation Scam: ವಾಲ್ಮೀಕಿ ನಿಗಮ ಹಗರಣ; ವರ್ಗಾವಣೆಯಾದ ಹಣ ಹಿಂಪಡೆಯಲು ಸರ್ಕಾರ ಕಸರತ್ತು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ5 hours ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು24 hours ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ3 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ5 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು5 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ6 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ7 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು7 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

ಟ್ರೆಂಡಿಂಗ್‌