ಛತ್ತೀಸ್‌ಗಢದಲ್ಲಿ ಶುಕ್ರವಾರ ಕೊನೇ ಹಂತದ ಮತದಾನ; ಪಕ್ಷಗಳ ಬಲಾಬಲ, ರಣತಂತ್ರ ಹೇಗಿದೆ? Vistara News

EXPLAINER

ಛತ್ತೀಸ್‌ಗಢದಲ್ಲಿ ಶುಕ್ರವಾರ ಕೊನೇ ಹಂತದ ಮತದಾನ; ಪಕ್ಷಗಳ ಬಲಾಬಲ, ರಣತಂತ್ರ ಹೇಗಿದೆ?

ಛತ್ತೀಸ್‌ಗಢದಲ್ಲಿ ನವೆಂಬರ್‌ 17ರಂದು ಎರಡನೇ ಹಾಗೂ ಕೊನೆಯ ಹಂತದ ಮತದಾನ ನಡೆಯಲಿದೆ. ಲೋಕಸಭೆ ಚುನಾವಣೆ ದೃಷ್ಟಿಯಿಂದಲೂ ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯು ಮಹತ್ವ ಪಡೆದಿದೆ.

VISTARANEWS.COM


on

Exit poll predicts Congress will retain power in Chhattisgarh
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಾಯ್‌ಪುರ: ಛತ್ತೀಸ್‌ಗಢದಲ್ಲಿ ವಿಧಾನಸಭೆ ಚುನಾವಣೆಯ ಎರಡನೇ ಹಾಗೂ ಕೊನೆಯ ಹಂತದ ಮತದಾನವು ಶುಕ್ರವಾರ (ನವೆಂಬರ್‌ 17) ನಡೆಯಲಿದೆ. ಈಗಾಗಲೇ ಮೊದಲ ಹಂತದ ಮತದಾನ ಮುಗಿದಿದ್ದು, ಎರಡನೇ ಹಂತದಲ್ಲೂ ಮುನ್ನಡೆ ಸಾಧಿಸುವ ಮೂಲಕ ಅಧಿಕಾರದ ಗದ್ದುಗೆ ಹಿಡಿಯಲು ಬಿಜೆಪಿ ಹಾಗೂ ಕಾಂಗ್ರೆಸ್‌ ಸೇರಿ ಎಲ್ಲ ಪಕ್ಷಗಳು ರಣತಂತ್ರ ರೂಪಿಸಿವೆ. 2024ರಲ್ಲಿ ನಡೆಯುವ ಲೋಕಸಭೆ ಚುನಾವಣೆಯ (Lok Sabha Election 2024) ಸೆಮಿಫೈನಲ್‌ ಎಂದೇ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯನ್ನು ಕರೆಯಲಾಗುತ್ತಿದೆ. ಇನ್ನು ಛತ್ತೀಸ್‌ಗಢದಲ್ಲಿ ಅಧಿಕಾರ ಉಳಿಸಿಕೊಳ್ಳುವ ತವಕದಲ್ಲಿ ಕಾಂಗ್ರೆಸ್‌ ಇದ್ದರೆ, ಮರಳಿ ಗದ್ದುಗೆ ಪಡೆಯುವ ಉತ್ಸಾಹ ಬಿಜೆಪಿಯಲ್ಲಿದೆ. ಸ್ಥಳೀಯ ಪಕ್ಷಗಳು ಕೂಡ ಪೈಪೋಟಿ ನೀಡಲು ಸಜ್ಜಾಗಿವೆ. ಇದರಿಂದಾಗಿ ಛತ್ತೀಸ್‌ಗಢ ವಿಧಾನಸಭೆ ಚುನಾವಣೆ ಕಣವು ರಂಗೇರಿದೆ.

ಕಾಂಗ್ರೆಸ್‌ ಪ್ಲಸ್‌-ಮೈನಸ್‌ ಏನೇನು?

ರಾಜಸ್ಥಾನ, ಹಿಮಾಚಲ ಪ್ರದೇಶ, ಕರ್ನಾಟಕದ ನಂತರ ಕಾಂಗ್ರೆಸ್‌ ಬಲಿಷ್ಠವಾಗಿರುವ ಏಕೈಕ ರಾಜ್ಯವೆಂದರೆ ಅದು ಛತ್ತೀಸ್‌ಗಢ. ವಿಧಾನಸಭೆಯ 90 ಸದಸ್ಯ ಬಲದ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವಿದ್ದು, ಭೂಪೇಶ್‌ ಬಘೇಲ್‌ ಮುಖ್ಯಮಂತ್ರಿಯಾಗಿದ್ದಾರೆ. ಅಷ್ಟೇ ಅಲ್ಲ, ಉತ್ತಮ ಆಡಳಿತವನ್ನು ನೀಡುವ ಮೂಲಕ ಜನರ ವಿಶ್ವಾಸವನ್ನೂ ಗಳಿಸಿದ್ದಾರೆ. ರೈತರ ಏಳಿಗೆಗೆ ಭೂಪೇಶ್‌ ಬಘೇಲ್‌ ಜಾರಿಗೆ ತಂದ ಯೋಜನೆಗಳು, ಸಾಫ್ಟ್‌ ಹಿಂದುತ್ವ ಪಾಲನೆಯು ಕಾಂಗ್ರೆಸ್‌ಗೆ ಸಕಾರಾತ್ಮಕ ಆಗಲಿದೆ.

ಸಹಜವಾಗಿಯೇ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ಗೆ ಆಡಳಿತ ವಿರೋಧಿ ಅಲೆಯು ಸವಾಲಾಗಲಿದೆ. ಅದರಲ್ಲೂ, ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರ ವಿರುದ್ಧ 500 ಕೋಟಿ ರೂ. ಲಂಚದ ಆರೋಪ ಕೇಳಿಬಂದಿರುವುದು, ಪಕ್ಷದ ಆಂತರಿಕ ಬಿಕ್ಕಟ್ಟು ಕಾಂಗ್ರೆಸ್‌ಗೆ ತಲೆನೋವಾಗಿ ಪರಿಣಮಿಸಲಿದೆ.

ಬಿಜೆಪಿ ಬಲ-ದೌರ್ಬಲ್ಯ ಏನೇನು?

ಛತ್ತೀಸ್‌ಗಢದಲ್ಲಿ ಗೆಲುವು ಸಾಧಿಸಲು ಬಿಜೆಪಿಯು ರಣತಂತ್ರ ರೂಪಿಸಿದೆ. 2003, 2008 ಹಾಗೂ 2013ರ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿಯು 2018ರಲ್ಲಿ ಹೀನಾಯವಾಗಿ ಸೋತಿದೆ. ಆದರೆ, ಈ ಬಾರಿ ಗೆದ್ದು ಮತ್ತೆ ಅಧಿಕಾರದ ಗದ್ದುಗೆ ಏರಲು ತುದಿಗಾಲ ಮೇಲೆ ನಿಂತಿದೆ. ರಮಣ್‌ ಸಿಂಗ್‌ ಅವರ ನಾಯಕತ್ವ, ಆಡಳಿತ ವಿರೋಧಿ ಅಲೆ, ನರೇಂದ್ರ ಮೋದಿ ಅವರ ವರ್ಚಸ್ಸಿನ ಫಲವಾಗಿ ಬಿಜೆಪಿ ಮುನ್ನಡೆ ಸಾಧಿಸಿದರೂ ಅಚ್ಚರಿ ಇಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

pm narendra modi

ರಮಣ್‌ ಸಿಂಗ್‌ ಹೊರತಾಗಿ ರಾಜ್ಯದಲ್ಲಿ ಬಲಿಷ್ಠ ನಾಯಕ ಇರದಿರುವುದು, ಇದುವರೆಗೆ ಮುಖ್ಯಮಂತ್ರಿ ಅಭ್ಯರ್ಥಿಯನ್ನೇ ಬಿಜೆಪಿ ಘೋಷಿಸದಿರುವುದು ಬಿಜೆಪಿಗೆ ಮುಳುವಾಗುವ ಸಾಧ್ಯತೆ ಇದೆ. ನರೇಂದ್ರ ಮೋದಿ ಅವರೊಬ್ಬರ ವರ್ಚಸ್ಸಿನಿಂದ ರಾಜ್ಯದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸ ಬಿಜೆಪಿ ನಾಯಕರಲ್ಲಿಯೇ ಕಾಣಿಸುತ್ತಿಲ್ಲ. ಅದರಲ್ಲೂ, ಪ್ರತಿಪಕ್ಷವಾಗಿ ಬಿಜೆಪಿಯು ಸರ್ಕಾರದ ವೈಫಲ್ಯಗಳನ್ನು ಜನರಿಗೆ ಮುಟ್ಟಿಸಿಲ್ಲ. ಇವೆಲ್ಲ ಅಂಶಗಳು ಬಿಜೆಪಿಗೆ ತಲೆನೋವಾಗಿವೆ ಎನ್ನಲಾಗುತ್ತಿದೆ.

ಒಟ್ಟು ಕ್ಷೇತ್ರ: 90
ಮ್ಯಾಜಿಕ್‌ ನಂಬರ್‌: 46

ಕಳೆದ ಚುನಾವಣೆ ಫಲಿತಾಂಶ ಹೀಗಿದೆ

2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಭರ್ಜರಿ ಗೆಲುವು ಸಾಧಿಸಿತ್ತು. ಒಟ್ಟು 90 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ 68 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದರೆ, ಬಿಜೆಪಿಯು 15 ಸೀಟುಗಳಿಗೆ ಮಾತ್ರ ತೃಪ್ತಿಪಟ್ಟುಕೊಂಡಿತ್ತು. ಜನತಾ ಕಾಂಗ್ರೆಸ್‌ ಛತ್ತೀಸ್‌ಗಢ (J) ಪಕ್ಷವು ಐದು ಹಾಗೂ ಬಿಎಸ್‌ಪಿ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆಡಳಿತಾರೂಢ ಬಿಜೆಪಿಯನ್ನು ಸೋಲಿಸಿ ಜನ ಕಾಂಗ್ರೆಸ್‌ಗೆ ಅಧಿಕಾರ ನೀಡಿದ್ದರು.

ಇದನ್ನೂ ಓದಿ: Rahul Gandhi : ಛತ್ತೀಸ್​​ಗಢದಲ್ಲಿ ಬಡವರಿಗೆ 10 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆಯ ಭರವಸೆ ಕೊಟ್ಟ ರಾಹುಲ್​

ಲೋಕಸಭೆ ಚುನಾವಣೆಯ ಸೆಮಿಫೈನಲ್

2023ರ ಲೋಕಸಭೆ ಚುನಾವಣೆಗೆ ಐದೂ ರಾಜ್ಯಗಳ ವಿಧಾನಸಭೆ ಚುನಾವಣೆಯು ಸೆಮಿಫೈನಲ್‌ ಎಂದೇ ಹೇಳಲಾಗುತ್ತಿದೆ. ಛತ್ತೀಸ್‌ಗಢ 11, ಮಧ್ಯಪ್ರದೇಶ 29, ಮಿಜೋರಾಂ 1, ರಾಜಸ್ಥಾನ 25 ಹಾಗೂ ತೆಲಂಗಾಣದ 17 ಲೋಕಸಭೆ ಕ್ಷೇತ್ರ ಸೇರಿ ಐದೂ ರಾಜ್ಯಗಳಲ್ಲಿ ಒಟ್ಟು 83 ಲೋಕಸಭೆ ಕ್ಷೇತ್ರಗಳಿವೆ. ಈ ರಾಜ್ಯಗಳಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆಯೋ, ಆ ಪಕ್ಷವು ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಕ್ಷೇತ್ರ ಗೆಲ್ಲಲು ಸಾಧ್ಯವಾಗಲಿದೆ. ಹಾಗೆಯೇ, ಜನರ ಒಲವು ಯಾವ ಪಕ್ಷದ ಕಡೆ ಇದೆ ಎಂಬುದರ ಮುನ್ಸೂಚನೆಯು ವಿಧಾನಸಭೆ ಚುನಾವಣೆಯಲ್ಲಿಯೇ ತಿಳಿಯಲಿದೆ. ಲೋಕಸಭೆ ಚುನಾವಣೆಯ ಪ್ರಚಾರಕ್ಕೂ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಮುನ್ನುಡಿ ಬರೆಯಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

EXPLAINER

Vistara Explainer: ಹುಸಿ ಬೆದರಿಕೆಯ ಇಮೇಲ್‌; ಶಾಲೆಗಳಿಗೆ ಬೇಕು ಉತ್ತಮ ಸುರಕ್ಷಾ ಕ್ರಮಗಳು

Vistara Explainer: ಇತ್ತೀಚಿನ ದಿನಗಳಲ್ಲಿ, ಬೆಂಗಳೂರು ನಗರದಲ್ಲಿ ಶಾಲೆಗಳಲ್ಲಿ ಬಾಂಬ್ ಇಡಲಾಗಿದೆ ಎಂಬ ಹುಸಿ ಇಮೇಲ್‌ಗಳ ಪ್ರಮಾಣ ದಿನೇ ದಿನೇ ಹೆಚ್ಚತೊಡಗಿದೆ. ಈ ಹಿನ್ನಲೆಯಲ್ಲಿ ಯಾವೆಲ್ಲ ಸುರಕ್ಷಿತಾ ಕ್ರಮಗಳನ್ನು ಕೈಗೊಳ್ಳಬಹುದು ಎನ್ನುವುದರ ವಿವರ ಇಲ್ಲಿದೆ.

VISTARANEWS.COM


on

bomb threat
Koo

| ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು

ಗುರುವಾರ, ಡಿಸೆಂಬರ್ 1ರಂದು ಬೆಂಗಳೂರಿನ ವಿವಿಧ ಶಾಲೆಗಳಲ್ಲಿ ಬಾಂಬ್ ಇಡಲಾಗಿದೆ (Bomb Threat) ಎಂಬ ಹುಸಿ ಇಮೇಲ್ ಬೆದರಿಕೆ ನಗರದಾದ್ಯಂತ ಭಯ, ಆತಂಕಗಳನ್ನು ಉಂಟು ಮಾಡಿತು. ಈ ಇಮೇಲ್ ಅನ್ನು ಐಪಿ ಅಡ್ರೆಸ್ ಬಚ್ಚಿಟ್ಟಿದ್ದ, ಇನ್ನೂ ಗುರುತಿಸಲಾಗಿರದ ವ್ಯಕ್ತಿ ಕಳುಹಿಸಿದ್ದ. ಪೊಲೀಸರು ಈ ಪ್ರಕರಣದ ಹಿಂದೆ ಬಿದ್ದಿದ್ದು, ಸಂದೇಶ ಕಳುಹಿಸಿದ ವ್ಯಕ್ತಿಯನ್ನು ಪತ್ತೆಹಚ್ಚಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ (Vistara Explainer).

ಇತ್ತೀಚಿನ ದಿನಗಳಲ್ಲಿ, ಬೆಂಗಳೂರು ನಗರದಲ್ಲಿ ಶಾಲೆಗಳಲ್ಲಿ ಬಾಂಬ್ ಇಡಲಾಗಿದೆ ಎಂಬ ಹುಸಿ ಇಮೇಲ್‌ಗಳ ಪ್ರಮಾಣ ದಿನೇ ದಿನೇ ಹೆಚ್ಚತೊಡಗಿದೆ. ಈ ದುರುದ್ದೇಶಪೂರಿತ ಸಂದೇಶಗಳು ಹೆತ್ತವರಲ್ಲಿ ಗಂಭೀರ ಚಿಂತೆ ಉಂಟುಮಾಡಿದ್ದು, ಮಕ್ಕಳಲ್ಲಿ ಮತ್ತು ಹಿರಿಯರಲ್ಲಿ ಸಮಾನವಾಗಿ ಭಯ ಮತ್ತು ಆತಂಕಕ್ಕೆ ದಾರಿ ಮಾಡಿವೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಈ ಸಂದೇಶಗಳ ಹಿಂದಿರುವ ಮೂಲ ಮತ್ತು ಅವರ ಉದ್ದೇಶಗಳನ್ನು ಪತ್ತೆಹಚ್ಚಿ, ಶಾಲೆಗಳು ಮತ್ತು ಸಾರ್ವಜನಿಕರ ಸುರಕ್ಷತೆಗೆ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಈ ಅಂಕಣದಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಇರುವ ಸವಾಲುಗಳು ಮತ್ತು ಈ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಎದುರಿಸುವ ಬಗೆಯನ್ನು ಗಮನಿಸೋಣ.

ಸಂದೇಶದ ಮೂಲ ಪತ್ತೆಹಚ್ಚುವುದು, ಸೈಬರ್ ಭದ್ರತೆ ಹೆಚ್ಚಿಸುವುದು

ಇಂತಹ ಹುಸಿ ಬೆದರಿಕೆ ಒಡ್ಡುವ ಇಮೇಲ್‌ಗಳ ವಿರುದ್ಧ ಹೋರಾಡಲು ಇಡಬೇಕಾದ ಪ್ರಮುಖ ಹೆಜ್ಜೆಯೆಂದರೆ ಸೈಬರ್ ಸೆಕ್ಯುರಿಟಿ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸಿ, ಇಮೇಲ್ ಮತ್ತು ಅಂತರ್ಜಾಲ ಸೇವಾ ಪೂರೈಕೆದಾರರ ಮೇಲೆ ಹೆಚ್ಚಿನ ನಿಗಾ ಇಡುವುದು. ಐಪಿ ವಿಳಾಸವನ್ನು ಪತ್ತೆ ಹಚ್ಚುವುದರಿಂದ ಮತ್ತು ದುರುದ್ದೇಶ ಪೂರ್ವಕ ಸಂದೇಶ ಕಳುಹಿಸಿದವರನ್ನು ಪತ್ತೆಹಚ್ಚುವ ಮೂಲಕ ಪೊಲೀಸರು ಈ ಅಪರಾಧಿಗಳನ್ನು ಗುರುತಿಸಿ, ಅವರಿಗೆ ಶಿಕ್ಷೆ ವಿಧಿಸಬಹುದು. ತಂತ್ರಜ್ಞಾನ ತಜ್ಞರು ಮತ್ತು ಗುಪ್ತಚರ ಸಂಸ್ಥೆಗಳೊಡನೆ ಸಹಯೋಗ ಹೊಂದುವ ಮೂಲಕ, ಇಂತಹ ಕುಕೃತ್ಯಗಳನ್ನು ನಡೆಸುವವರನ್ನು ಪತ್ತೆಹಚ್ಚಿ, ಸೆರೆಹಿಡಿಯಲು, ಇದರ ಹಿಂದಿರುವ ಸಂಕೀರ್ಣ ಜಾಲವನ್ನು ಅಸ್ಥಿರಗೊಳಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.

ಶಾಲೆಗಳು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳೊಡನೆ ಸಮನ್ವಯ ಸಾಧಿಸುವುದು

ಪೊಲೀಸ್ ಇಲಾಖೆ ಶಾಲೆಗಳು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳೊಡನೆ ಉತ್ತಮ ಸಮನ್ವಯ ಸಾಧಿಸಿ, ಇಂತಹ ಸನ್ನಿವೇಶಗಳನ್ನು ಎದುರಿಸಲು ಸೂಕ್ತ ಮಾರ್ಗಸೂಚಿಗಳು ಮತ್ತು ನಿಯಮಾವಳಿಗಳನ್ನು ಸಿದ್ಧಪಡಿಸಬೇಕು. ಶಾಲೆಗಳಲ್ಲೂ ತುರ್ತು ಪ್ರತಿಕ್ರಿಯಾ ತಂಡವನ್ನು ನಿರ್ಮಿಸಿ, ಅವರಿಗೆ ಸಂಭಾವ್ಯ ಹುಸಿ ಬೆದರಿಕೆಯನ್ನು ಗುರುತಿಸುವುದು ಹೇಗೆ ಎಂಬ ತರಬೇತಿ ನೀಡುವುದರಿಂದ, ಸರಿಯಾದ ಸಮಯದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ಬರುವ ಇಮೇಲ್‌ಗಳ ಅಧಿಕೃತತೆಯನ್ನು ಗುರುತಿಸುವುದು, ಕಾನೂನು ಜಾರಿ ಸಂಸ್ಥೆಗಳಿಗೆ ವಿವರವನ್ನು ತಲುಪಿಸುವುದು, ಹಾಗೂ ಅಗತ್ಯ ಬಿದ್ದರೆ ಬೆದರಿಕೆ ಇರುವ ಸ್ಥಳವನ್ನು ಜನರಹಿತವನ್ನಾಗಿಸುವ ಕ್ರಮಗಳನ್ನು ಕೈಗೊಳ್ಳುವುದರಿಂದ, ಅಪಾಯದ ಸಾಧ್ಯತೆಗಳನ್ನು ಕಡಿಮೆಗೊಳಿಸಿ, ಮಕ್ಕಳು ಮತ್ತು ಪೋಷಕರಿಗೆ ಧೈರ್ಯ ತುಂಬಲು ಸಾಧ್ಯವಾಗುತ್ತದೆ. ನಿರಂತರವಾಗಿ ಅಣಕು ಕಾರ್ಯಾಚರಣೆಗಳನ್ನು ನಡೆಸುವುದರಿಂದ, ಶಾಲಾ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳಿಗೆ ತುರ್ತು ಪರಿಸ್ಥಿತಿಯಲ್ಲಿ ಹೇಗೆ ವರ್ತಿಸಬೇಕೆಂಬುದು ಅರಿವಿಗೆ ಬರುತ್ತದೆ.

ಸಾರ್ವಜನಿಕರಲ್ಲಿ ಎಚ್ಚರಿಕೆ, ಅರಿವು ಮೂಡಿಸುವುದು

ಹುಸಿ ಇಮೇಲ್ ಬೆದರಿಕೆಗಳು ಮತ್ತೆ ಮತ್ತೆ ಮರುಕಳಿಸದಂತೆ ಮಾಡಲು ಸಾರ್ವಜನಿಕರಲ್ಲಿ ಈ ಕುರಿತು ಹೆಚ್ಚಿನ ಜಾಗೃತಿ ಮತ್ತು ಅರಿವು ರೂಪಿಸುವ ಅವಶ್ಯಕತೆಯಿದೆ. ಪೊಲೀಸ್ ಇಲಾಖೆ ಮತ್ತು ಶಿಕ್ಷಣ ಸಂಸ್ಥೆಗಳು ಕೈಜೋಡಿಸಿ, ವಿದ್ಯಾರ್ಥಿಗಳಲ್ಲಿ ಇಂತಹ ಕೆಟ್ಟ ಹುಸಿ ಬೆದರಿಕೆಗಳ ಗಂಭೀರತೆಯ ಕುರಿತು ಅರಿವು ಮೂಡಿಸಬೇಕಿದೆ. ಇಂತಹ ಕುಕೃತ್ಯಗಳನ್ನು ನಡೆಸುವುದರಿಂದ, ಅದು ಸಾರ್ವಜನಿಕರ ಮೇಲೆ, ಸಮಾಜದ ಮೇಲೆ ಬೀರುವ ಪರಿಣಾಮಗಳನ್ನು ವಿದ್ಯಾರ್ಥಿಗಳಿಗೆ ಅರ್ಥ ಮಾಡಿಸುವುದರಿಂದ, ಅವರು ಇಂತಹ ಕೃತ್ಯಗಳಲ್ಲಿ ತೊಡಗದಂತೆ ತಡೆಯಬಹುದು. ಜಾಗೃತಿ ಅಭಿಯಾನಗಳನ್ನು ಆಯೋಜಿಸುವುದು, ಕಾರ್ಯಾಗಾರಗಳನ್ನು ನಡೆಸುವುದು, ವಿಚಾರ ಸಂಕಿರಣಗಳನ್ನು ನಡೆಸುವುದರಿಂದ ಈ ಕುರಿತು ಹೆಚ್ಚಿನ ಅರಿವು, ಮಾಹಿತಿ ಮೂಡಿಸಲು ಸಾಧ್ಯವಾಗುತ್ತದೆ.

ಕಾನೂನು ಕ್ರಮಗಳು ಮತ್ತು ಶಿಕ್ಷೆ

ಸಂಭಾವ್ಯ ಅಪರಾಧಿಗಳು ಇಂತಹ ಕೃತ್ಯಗಳನ್ನು ನಡೆಸದಂತೆ ತಡೆಗಟ್ಟುವ ಸಲುವಾಗಿ ಇಂತಹ ಹುಸಿ ಇಮೇಲ್ ಬೆದರಿಕೆಗಳನ್ನು ಹಂಚಿಕೊಳ್ಳುವವರ ವಿರುದ್ಧ ಕಾನೂನು ಕ್ರಮಗಳನ್ನು ಜರುಗಿಸಬೇಕು. ಇಂತಹ ಕೆಲಸಗಳಿಂದ ಸಾರ್ವಜನಿಕರ ಜೀವನಕ್ಕೆ ತೊಂದರೆ ನೀಡಿ, ಜೀವಕ್ಕೆ ಅಪಾಯ ಉಂಟಾಗುವಂತೆ ಮಾಡುವವರಿಗೆ ಕಠಿಣ ದಂಡನೆ ವಿಧಿಸಬೇಕು. ಇಂತಹ ದಂಡನೆಗಳ ಮೂಲಕ, ಕಾನೂನು ಇಲಾಖೆ ಇಂತಹ ಸಮಾಜ ವಿರೋಧಿ ಕೃತ್ಯಗಳಲ್ಲಿ ತೊಡಗುವವರನ್ನು ಭಯಪಡಿಸಿ, ಶಿಕ್ಷಣ ಸಂಸ್ಥೆಗಳ ಪಾವಿತ್ರ್ಯತೆ ರಕ್ಷಿಸಬಹುದು. ಪೊಲೀಸ್ ಇಲಾಖೆ, ಕಾನೂನು ಇಲಾಖೆ, ಮತ್ತು ಈ ಕುರಿತು ಜ್ಞಾನ ಹೊಂದಿರುವವರ ನಡುವೆ ಸಹಯೋಗ ಸಾಧಿಸುವುದರಿಂದ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಬಹುದು.

ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಸದ್ಬಳಕೆ

ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯನ್ನು (ಆರ್ಟಿಫಿಶಿಯಲ್ ಇಂಟಲಿಜೆನ್ಸ್ – ಎಐ) ಬಳಸಿಕೊಳ್ಳುವುದು ಇಂತಹ ಹುಸಿ ಬೆದರಿಕೆಗಳ ಸವಾಲು ಎದುರಿಸಲು ನೆರವು ನೀಡಬಲ್ಲದು. ಆಧುನಿಕ ಫಿಲ್ಟರಿಂಗ್ ವ್ಯವಸ್ಥೆಗಳನ್ನು ಅಳವಡಿಸಿ, ಅನುಮಾನಸ್ಪದ ಮಾದರಿಗಳು ಮತ್ತು ಕೀವರ್ಡ್‌ಗಳನ್ನು ಗುರುತಿಸಲು ಸಾಧ್ಯವಾಗುವುದರಿಂದ ಇಂತಹ ಹುಸಿ ಬೆದರಿಕೆಗಳ ಸಂದೇಶ ಹರಡದಂತೆ ತಡೆಯಲು ಸಾಧ್ಯವಾಗುತ್ತದೆ. ಅದರೊಡನೆ, ಮೆಷಿನ್ ಲರ್ನಿಂಗ್ ಆಲ್ಗಾರಿತಂಗಳನ್ನು ಬಳಸುವ ಮೂಲಕ ಹುಸಿ ಬೆದರಿಕೆ ಇಮೇಲ್‌‌ಗಳ ಅಪಾಯವನ್ನು ತಡೆಗಟ್ಟಲು, ಅದು ಮರುಕಳಿಸದಂತೆ ತಡೆಯಲು ಸಾಧ್ಯವಾಗುತ್ತದೆ.

ಸಮುದಾಯದ ಪಾಲ್ಗೊಳ್ಳುವಿಕೆ

ಒಂದು ಉತ್ತಮ, ಸದೃಢ, ಸುರಕ್ಷಿತ ಸಮಾಜವನ್ನು ನಿರ್ಮಿಸಲು ಸಾರ್ವಜನಿಕರ ಸಕ್ರಿಯ ಪಾಲ್ಗೊಳ್ಳುವಿಕೆ ಅತ್ಯಂತ ಮುಖ್ಯವಾಗಿರುತ್ತದೆ. ಇಂತಹ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಅಥವಾ ಇಮೇಲ್‌ಗಳನ್ನು ಗುರುತಿಸಿ, ಪೊಲೀಸರಿಗೆ ವರದಿ ಮಾಡುವಂತೆ ಉತ್ತೇಜಿಸುವುದರಿಂದ ಇಂತಹ ಸನ್ನಿವೇಶಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ. ನಮ್ಮ ನೆರೆಹೊರೆಯನ್ನು ಗಮನಿಸುವಂತಹ ಸಾರ್ವಜನಿಕ ಕಾರ್ಯಕ್ರಮಗಳನ್ನು ರೂಪಿಸುವುದರಿಂದ, ಒಟ್ಟಾರೆ ಸಮಾಜದ ಎಲ್ಲ ಸಾರ್ವಜನಿಕರಲ್ಲೂ ಜವಾಬ್ದಾರಿಯ ಭಾವನೆ ಹೆಚ್ಚಿಸಿ, ಸಂಭಾವ್ಯ ಅಪಾಯಗಳನ್ನು ಗುರುತಿಸುವಂತೆ ಮಾಡಬಹುದು. ಸಾರ್ವಜನಿಕರು ಮತ್ತು ಪೊಲೀಸರು ಪರಸ್ಪರ ಸಹಕಾರ ನೀಡಿದರೆ, ಇಂತಹ ಹುಸಿ ಬೆದರಿಕೆ ಇಮೇಲ್‌ಗಳು ಹರಡುವುದನ್ನು ಸಂಪೂರ್ಣವಾಗಿ ನಿಲ್ಲಿಸಬಹುದು.

ದುರದೃಷ್ಟವಶಾತ್, ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಬೆದರಿಕೆಯ ಹುಸಿ ಇಮೇಲ್‌ಗಳು ದಿನೇ ದಿನೇ ಹೆಚ್ಚುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ಇದನ್ನು ತಡೆಗಟ್ಟಲು ಪೊಲೀಸರು ಮತ್ತು ಸಂಬಂಧಪಟ್ಟ ಇಲಾಖೆ ಕ್ಷಿಪ್ರ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ಸೈಬರ್ ಸುರಕ್ಷತಾ ಕ್ರಮಗಳಿಗೆ ಆದ್ಯತೆ ನೀಡಿ, ಶಾಲೆಗಳೊಡನೆ ಸಮನ್ವಯ ಸಾಧಿಸಿ, ಜನರಲ್ಲಿ ಜಾಗೃತಿ ಮೂಡಿಸಿ, ಕಠಿಣ ದಂಡಗಳನ್ನು ವಿಧಿಸಿ, ಮತ್ತು ನೂತನ ತಂತ್ರಜ್ಞಾನಗಳನ್ನು ಸಮರ್ಪಕವಾಗಿ ಬಳಕೆಗೆ ತರುವುದರಿಂದ ಅಧಿಕಾರಿಗಳು ಈ ಸಮಸ್ಯೆಯನ್ನು ಕೊನೆಗೊಳಿಸಬಹುದು. ಪೋಷಕರು ಮತ್ತು ಮಕ್ಕಳು ಎದುರಿಸುವ ಒತ್ತಡ, ಆತಂಕಗಳನ್ನು ನಿವಾರಿಸುವ ನಿಟ್ಟಿನಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಸುರಕ್ಷಿತ ಮತ್ತು ಭದ್ರತೆಯ ವಾತಾವರಣ ಮೂಡಿಸುವುದು ಅತ್ಯಂತ ಮುಖ್ಯವಾಗಿದೆ. ಜನರೆಲ್ಲ ಜವಾಬ್ದಾರಿಯುತವಾಗಿ, ಒಗ್ಗಟ್ಟಿನಿಂದ ಕಾರ್ಯಾಚರಿಸಿದರಷ್ಟೇ ನಾವು ನಮ್ಮ ಶಿಕ್ಷಣ ಸಂಸ್ಥೆಗಳನ್ನು, ಸಮಾಜವನ್ನು ಇಂತಹ ಹುಸಿ ಬೆದರಿಕೆಗಳ ದಾಳಿಯಿಂದ ರಕ್ಷಿಸಿಕೊಳ್ಳಲು ಸಾಧ್ಯ.

ಇದನ್ನೂ ಓದಿ: Bomb Threat : 48 ಶಾಲೆಗಳಿಗೆ ಬಂದ ಬೆದರಿಕೆ EMail ಮೂಲ ಪತ್ತೆ, ಏನಿದು ಜರ್ಮನಿ ಕನೆಕ್ಷನ್?‌

Continue Reading

EXPLAINER

ಮತಗಟ್ಟೆ ಸಮೀಕ್ಷೆ; ಇದಕ್ಕೂ ಮೊದಲಿನ ಸಮೀಕ್ಷೆಗಳು ಏನು ಹೇಳಿದ್ದವು? ಫಲಿತಾಂಶ ಏನಾಗಿತ್ತು?

Exit Poll Results 2023: ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಮುಕ್ತಾಯಗೊಂಡಿದ್ದು, ಮತಗಟ್ಟೆ ಸಮೀಕ್ಷೆಗಳ ಕುರಿತ ಚರ್ಚೆ ಜೋರಾಗಿದೆ. ಇದಕ್ಕೂ ಮೊದಲಿನ ಚುನಾವಣೆಯಲ್ಲಿ ಮತಗಟ್ಟೆ ಸಮೀಕ್ಷೆ ಏನು ಹೇಳಿದ್ದವು, ಫಲಿತಾಂಶ ಏನಾಗಿತ್ತು ಎಂಬುದರ ಮಾಹಿತಿ ಇಲ್ಲಿದೆ.

VISTARANEWS.COM


on

Exit Poll Results 2023
Koo

ನವದೆಹಲಿ: 2024ರಲ್ಲಿ ನಡೆಯುವ ಲೋಕಸಭೆ ಚುನಾವಣೆಯ (Lok Sabha Election 2023) ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಮುಕ್ತಾಯಗೊಂಡಿದೆ. ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ ಹಾಗೂ ಮಿಜೋರಾಂನಲ್ಲಿ ಚುನಾವಣೆ ಮುಗಿಯುತ್ತಲೇ ಮತಗಟ್ಟೆ ಸಮೀಕ್ಷಾ ವರದಿಗಳು (Exit Polls Result 2023) ಲಭ್ಯವಾಗಿವೆ. ಮತಗಟ್ಟೆ ಸಮೀಕ್ಷೆಗಳ ಕುರಿತು ಚರ್ಚೆಯೂ ಜೋರಾಗಿ ನಡೆಯುತ್ತಿದೆ. ಹಾಗಾದರೆ, ಇದಕ್ಕೂ ಮೊದಲು ನಡೆದ ಪ್ರಮುಖ ಚುನಾವಣೆಗಳಲ್ಲಿ ಮತಗಟ್ಟೆ ಸಮೀಕ್ಷೆ ಏನು ಹೇಳಿದ್ದವು? ಮತಗಟ್ಟೆ ಸಮೀಕ್ಷೆಗೂ, ಚುನಾವಣೆ ಫಲಿತಾಂಶಕ್ಕೂ ಏನು ವ್ಯತ್ಯಾಸವಾಗಿತ್ತು ಎಂಬುದರ ಕಿರು ಮಾಹಿತಿ ಇಲ್ಲಿದೆ.

2019ರ ಲೋಕಸಭೆ ಚುನಾವಣೆ

ದೇಶವೇ ಕುತೂಹಲದಿಂದ ಎದುರು ನೋಡುತ್ತಿದ್ದ 2019ರ ಲೋಕಸಭೆ ಚುನಾವಣೆ ಬಳಿಕ ಬಹಿರಂಗವಾಗಿದ್ದ ಮತಗಟ್ಟೆ ಸಮೀಕ್ಷೆಗಳು ಬಹುತೇಕ ನಿಜವಾಗಿದ್ದವು. ಟೈಮ್ಸ್‌ ನೌ, ಚಾಣಕ್ಯ, ಇಂಡಿಯಾ ಟುಡೇ, ನ್ಯೂಸ್‌ 18 ಹಾಗೂ ಜನ್‌ ಕೀ ಬಾತ್‌ ಸಮೀಕ್ಷೆಗಳ ಪ್ರಕಾರ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು 300ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತದೆ ಎಂದು ತಿಳಿಸಿದ್ದವು. ಯಾವೊಂದು ಸಮೀಕ್ಷೆಯೂ ಕಾಂಗ್ರೆಸ್‌ ಗೆಲುವು ಸಾಧಿಸುತ್ತದೆ ಎಂದು ತಿಳಿಸಿರಲಿಲ್ಲ.

ಚುನಾವಣೆ ಫಲಿತಾಂಶ ಪ್ರಕಟವಾದಾಗ ಎನ್‌ಡಿಎ 353 (ಬಿಜೆಪಿ 303) ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತು. ಇನ್ನು ಕಾಂಗ್ರೆಸ್‌ 52 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿತು. ಕಾಂಗ್ರೆಸ್‌ ಸರಾಸರಿ 100-120 ಕ್ಷೇತ್ರಗಳಲ್ಲಿ ಜಯಿಸಲಿದೆ ಎಂದು ಬಹುತೇಕ ಸಮೀಕ್ಷೆಗಳು ತಿಳಿಸಿದ್ದವು. ಆದರೆ, ಸಮೀಕ್ಷಾ ವರದಿ ತಿಳಿಸಿದ ಅರ್ಧದಷ್ಟು ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್‌ ಜಯಿಸಿತ್ತು.

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ 2022

2022ರಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ವಿಧಾನಸಭೆ ಚುನಾವಣೆ ಬಳಿಕ ಸಮೀಕ್ಷಾ ವರದಿಗಳ ಅಂದಾಜೇ ನಿಜವಾಗಿತ್ತು. ಬಹುತೇಕ ಸಮೀಕ್ಷೆಗಳು ಬಿಜೆಪಿಯೇ ರಾಜ್ಯದಲ್ಲಿ ಮತ್ತೆ ಅಧಿಕಾರದ ಗದ್ದುಗೆ ಏರಲಿದೆ ಎಂದು ತಿಳಿಸಿದ್ದವು. ಬಿಜೆಪಿ 288-326 ಕ್ಷೇತ್ರ, ಎಸ್‌ಪಿ 71-101, ಕಾಂಗ್ರೆಸ್‌ 1-3 ಕ್ಷೇತ್ರಗಳಲ್ಲಿ ಎಂದು ಇಂಡಿಯಾ ಟುಡೇ, ಬಿಜೆಪಿ 225, ಎಸ್‌ಪಿ 151, ಕಾಂಗ್ರೆಸ್‌ 9 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಟೈಮ್ಸ್‌ ನೌ ಮತಗಟ್ಟೆ ಸಮೀಕ್ಷೆ ತಿಳಿಸಿತ್ತು. ಬಹುತೇಕ ಸಮೀಕ್ಷೆಗಳು ಇದನ್ನೇ ನುಡಿದಿದ್ದವು.

ಉತ್ತರ ಪ್ರದೇಶದಲ್ಲಿ ಚುನಾವಣೆ ಫಲಿತಾಂಶ ಪ್ರಕಟವಾದಾಗ ಬಿಜೆಪಿ 255 ಕ್ಷೇತ್ರಗಳಲ್ಲಿ, ಸಮಾಜವಾದಿ ಪಕ್ಷ 111, ಕಾಂಗ್ರೆಸ್‌ 2, ಬಿಎಸ್‌ಪಿ 1 ಹಾಗೂ ಸ್ವತಂತ್ರ ಅಭ್ಯರ್ಥಿಗಳು 34 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರು. ಇದರೊಂದಿಗೆ ಯೋಗಿ ಆದಿತ್ಯನಾಥ್‌ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾದರು.

ಪಂಜಾಬ್‌ ವಿಧಾನಸಭೆ ಚುನಾವಣೆ 2022

2022ರಲ್ಲಿ ವಿಧಾನಸಭೆ ಚುನಾವಣೆ ಬಳಿಕ ಮತಗಟ್ಟೆ ಸಮೀಕ್ಷೆಗಳ ವರದಿಯು ಭಾಗಶಃ ನಿಜವಾಗಿತ್ತು. ಇಂಡಿಯಾ ಟುಡೇ-ಆ್ಯಕ್ಸಿಸ್‌ ಮೈ ಇಂಡಿಯಾ ಮತಗಟ್ಟೆ ಸಮೀಕ್ಷೆಯು ಆಮ್‌ ಆದ್ಮಿ ಪಕ್ಷ 76-90 ಸೀಟು ಗೆಲ್ಲಲಿದೆ ಎಂದು ತಿಳಿಸಿತ್ತು. ಆಪ್‌ 62-70, ಕಾಂಗ್ರೆಸ್‌ 21-31, ಅಕಾಲಿ ದಳ 16-24 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ರಿಪಬ್ಲಿಕ್-‌ಪಿ ಮಾರ್ಕ್‌ ಮತಗಟ್ಟೆ ಸಮೀಕ್ಷೆ ತಿಳಿಸಿತ್ತು.

ಪಂಜಾಬ್‌ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದಾಗ ಆಮ್‌ ಆದ್ಮಿ ಪಕ್ಷವು ನಿರೀಕ್ಷೆಗೂ ಮೀರಿ ಗೆಲುವು ಸಾಧಿಸಿತ್ತು. ಒಟ್ಟು 117 ಕ್ಷೇತ್ರಗಳ ಪೈಕಿ 92 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್‌ 18 ಕ್ಷೇತ್ರಗಳಲ್ಲಿ ಹಾಗೂ ಭಾರಿ ಪ್ರಯೋಗಕ್ಕೆ ಮುಂದಾಗಿದ್ದ ಬಿಜೆಪಿ ಕೇವಲ 2 ಕ್ಷೇತ್ರಗಳಲ್ಲಿ ಜಯಿಸಿತ್ತು.

ಗುಜರಾತ್‌ ವಿಧಾನಸಭೆ ಚುನಾವಣೆ 2022

ದೇಶದ ಗಮನ ಸೆಳೆದಿದ್ದ 2022ರ ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲೂ ಮತಗಟ್ಟೆ ಸಮೀಕ್ಷೆಗಳ ವರದಿಗಳೇ ನಿಜವಾಗಿದ್ದವು. ಟೈಮ್ಸ್‌ ನೌ-ಇಟಿಜಿಯು ಬಿಜೆಪಿ 131, ಕಾಂಗ್ರೆಸ್‌ 41 ಹಾಗೂ ಆಪ್‌ 6 ಕ್ಷೇತ್ರಗಳಲ್ಲಿ ಜಯಿಸಲಿದೆ ಎಂದು ಹೇಳಿತ್ತು. ಸಿ ವೋಟರ್‌ ಕೂಡ ಬಿಜೆಪಿ 134, ಕಾಂಗ್ರೆಸ್‌ 37 ಹಾಗೂ ಆಪ್‌ 7 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿತ್ತು. ಇನ್ನು ಗುಜರಾತ್‌ನಲ್ಲಿ ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಂತೆ ಬಿಜೆಪಿ 156 ಕ್ಷೇತ್ರ, ಆಪ್‌ 5 ಹಾಗೂ ಕಾಂಗ್ರೆಸ್‌ 17 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, ಬಿಜೆಪಿ ಮತ್ತೆ ಅಧಿಕಾರದ ಗದ್ದುಗೆ ಹಿಡಿದಿತ್ತು.

ಕರ್ನಾಟಕ ವಿಧಾನಸಭೆ ಚುನಾವಣೆ 2023

ದೇಶದ ಗಮನ ಸೆಳೆದಿದ್ದ ಕರ್ನಾಟಕ ವಿಧಾನಸಭೆ ಚುನಾವಣೆ ಬಳಿಕ ಪ್ರಕಟವಾದ ಮತಗಟ್ಟೆ ಸಮೀಕ್ಷೆ ವರದಿಗಳನ್ನು ಮೀರಿ ಫಲಿತಾಂಶ ಪ್ರಕಟವಾಗಿತ್ತು. ಕಾಂಗ್ರೆಸ್‌ ಮುನ್ನಡೆ ಸಾಧಿಸಿದರೂ ಸುಲಭವಾಗಿ ಬಹುಮತ ಸಿಗುವುದಿಲ್ಲ ಎಂದೇ ಬಹುತೇಕ ಸಮೀಕ್ಷೆಗಳು ತಿಳಿಸಿದ್ದವು. ಬಿಜೆಪಿಯು 83-95, ಕಾಂಗ್ರೆಸ್‌ 100-112, ಜೆಡಿಎಸ್‌ 21-29 ಹಾಗೂ ಪಕ್ಷೇತರರು 02-06 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಟಿವಿ 9 ಸಿ ವೋಟರ್‌ ಸಮೀಕ್ಷೆ ತಿಳಿಸಿತ್ತು. ಬಿಜೆಪಿಯು 94-117, ಕಾಂಗ್ರೆಸ್‌ 91-106, ಜೆಡಿಎಸ್‌ 14-24 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಜನ್‌ ಕೀ ಬಾತ್‌ ಸಮೀಕ್ಷೆ ತಿಳಿಸಿತ್ತು.

ಇದನ್ನೂ ಓದಿ: Assembly Elections: ‘ಉಚಿತ ಗ್ಯಾರಂಟಿ’ಗಿಂತ 4 ರಾಜ್ಯಗಳ ಚುನಾವಣೆಯಲ್ಲಿ ಜಾತಿ ಮತಗಳೇ ನಿರ್ಣಾಯಕ!

ಚುನಾವಣೆ ಫಲಿತಾಂಶವು ಬಿಜೆಪಿ, ಜೆಡಿಎಸ್‌ ಬಿಡಿ, ಖುದ್ದು ಕಾಂಗ್ರೆಸ್‌ಗೇ ಅಚ್ಚರಿ ಮೂಡಿಸಿತ್ತು. ಕಾಂಗ್ರೆಸ್‌ ನಿರೀಕ್ಷೆಗೂ ಮೀರಿ ಕಾಂಗ್ರೆಸ್‌ 135 ಸ್ಥಾನಗಳನ್ನು ಗೆದ್ದರೆ, ಬಿಜೆಪಿ ಕೇವಲ 66 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿತ್ತು. ಜೆಡಿಎಸ್‌ ಕೇವಲ 19 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತ್ತು. ಮತಗಟ್ಟೆ ಸಮೀಕ್ಷೆಯ ಅಂದಾಜನ್ನೂ ಮೀರಿ ಫಲಿತಾಂಶ ಪ್ರಕಟವಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

EXPLAINER

150 ಮೀಟರ್‌ ಸುರಂಗ ಕುಸಿತ, 57 ಮೀಟರ್‌ ಕೊರೆತ! 41 ಕಾರ್ಮಿಕರನ್ನು ರಕ್ಷಿಸಿದ್ದು ಹೇಗೆ?

12 ದಿನಗಳವರೆಗೆ ಸತತವಾಗಿ ಕಾರ್ಯಾಚರಣೆ ನಡೆಸಿ ಸುರಂಗದಲ್ಲಿ ಸಿಲುಕಿದ 41 ಕಾರ್ಮಿಕರನ್ನು ರಕ್ಷಿಸಲಾಗಿದೆ. ಹಾಗಾದರೆ, ಇದುವರೆಗೆ ನಡೆದ ಕಾರ್ಯಾಚರಣೆ ಹೇಗಿತ್ತು? ಯಾವ ಸವಾಲುಗಳು ಎದುರಾದವು? ಆದರೂ ಮುನ್ನಡೆ ಸಾಧಿಸಿದ್ದು ಹೇಗೆ ಎಂಬುದರ ಕಿರು ಮಾಹಿತಿ ಇಲ್ಲಿದೆ.

VISTARANEWS.COM


on

Uttarakhand Tunnel Collapse
Koo

ಡೆಹ್ರಾಡೂನ್:‌ ‌ಉತ್ತರಾಖಂಡದ ಉತ್ತರಕಾಶಿ (Uttarkashi Tunnel Collapse)ಜಿಲ್ಲೆಯಲ್ಲಿ ಸುರಂಗ ಕುಸಿದು ಅಪಾಯಕ್ಕೆ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ(Uttarkashi Tunnel Rescue). ನವೆಂಬರ್‌ 12ರಂದೇ ಸುರಂಗ ಕುಸಿದಿದ್ದು, ಸತತವಾಗಿ 17 ದಿನ ಕಾರ್ಯಾಚರಣೆ (Rescue Operation) ಕೈಗೊಂಡು ಜನರನ್ನು ರಕ್ಷಣೆ ಮಾಡಲಾಗಿದೆ. ಹಾಗಂತ ಈ 17 ದಿನಗಳ ರಕ್ಷಣಾ ಕಾರ್ಯಾಚರಣೆಯು ಸುಲಭವಾಗಿರಲಿಲ್ಲ. ಭೂಕುಸಿತ, ರಕ್ಷಣೆಗೆ ಬಳಸಿದ ಪೈಪ್‌ಗಳು ಕತ್ತರಿಸುವುದು ಸೇರಿ ಹಲವು ಸವಾಲುಗಳು ಎದುರಾದವು. ಹಾಗಾದರೆ, 17 ದಿನಗಳ ಕಾರ್ಯಾಚರಣೆ ಹೇಗಿತ್ತು? ಇಲ್ಲಿದೆ ಮಾಹಿತಿ.

ಇಲಿ ಬಿಲ ಗಣಿಗಾರಿಕೆ ತಂತ್ರದಿಂದಲೇ ಸಕ್ಸೆಸ್

56 ಮೀಟರ್ ಉದ್ದ ಅವಶೇಷಗಳ ನಡುವೆ ಡ್ರಿಲಿಂಗ್ ಮಾಡಲು ಆಗರ್ ಯಂತ್ರ ಪ್ರಯತ್ನಿಸಿದು. ಆದರೆ, ಇನ್ನು 20 ಮೀಟರ್ ಬಾಕಿ ಇದೆ ಎನ್ನುವಾಗಲೇ ಆ ಡ್ರಿಲಿಂಗ್ ಯಂತ್ರ ಕೈಕೊಟ್ಟಿತು. ಆಗ ರಕ್ಷಣಾ ಸಂಸ್ಥೆಗಳು ರೂಪಿಸಿದ್ದೇ ‘ರ‍್ಯಾಟ್‌ ಹೋಲ್’‌ ಮೈನಿಂಗ್‌. ಅಂತಿಮವಾಗಿ ಇಲಿ ಬಿಲ ಮೈನಿಂಗ್ ತಂತ್ರದ ಮೂಲಕವೇ ಸಿಲುಕಿದ್ದ ಕಾರ್ಮಿಕರನ್ನು ತಲುಪಲು ಸಾಧ್ಯವಾಯಿತು ಮತ್ತು ಮಂಗಳವಾರ 8 ಗಂಟೆ ಹೊತ್ತಿಗೆ ಎಲ್ಲ 41 ಕಾರ್ಮಿಕರನ್ನು ರಕ್ಷಣೆ ಮಾಡಲು ಸಾಧ್ಯವಾಯಿತು.

ರ‍್ಯಾಟ್‌ ಹೋಲ್‌ ಮೈನಿಂಗ್‌ ಎಂದರೆ, ಇಲಿಯಂತೆಯೇ ಚಿಕ್ಕದಾದ ರಂಧ್ರಗಳನ್ನು ಕೊರೆಯುವುದು. ಮನುಷ್ಯರು ಸುಲಭವಾಗಿ ಆ ರಂಧ್ರದಿಂದ ಹೊರಬರಲು ಈ ರೀತಿಯ ರಂಧ್ರಗಳನ್ನು ಕೊರೆಯುತ್ತಾರೆ. ಉತ್ತರಕಾಶಿ ಸುರಂಗದಲ್ಲಿ ಯಂತ್ರಗಳಿಂದಲೂ ಕೊರೆಯಲು ಸಾಧ್ಯವಾಗದ ಕಾರಣ ಈ ಪ್ಲಾನ್‌ ರೂಪಿಸಿ ಯಶಸ್ಸು ಕಾಣಲಾಗಿದೆ. ಇದಕ್ಕೂ ಮೊದಲು ಲಂಬವಾಗಿ 86 ಮೀಟರ್‌ ಕೊರೆಯುವ ಪ್ಲ್ಯಾನ್ ಕೂಡ ಜಾರಿ ಮಾಡಲಾಗಿತ್ತು. ಅಲ್ಲದೇ ಲಂಬವಾಗಿ 36 ಮೀಟರ್‌ ಕೂಡ ಕೊರೆಯಲಾಗಿತ್ತು. ಬಳಿಕ ರ‍್ಯಾಟ್‌ ಹೋಲ್‌ ಮೈನಿಂಗ್‌ ತಂತ್ರದ ಮೂಲಕ ಕೊರೆಯುವ ಕೆಲಸ ಆರಂಭಿಸಲಾಯಿತು. ಅಂತಿಮವಾಗಿ ಮಂಗಳವಾರ ಸಕ್ಸೆಸ್ ದೊರೆಯಿತು.

57 ಮೀಟರ್‌ ಸುರಂಗ ಕೊರೆತ

41 ಕಾರ್ಮಿಕರನ್ನು ಸುರಂಗದಿಂದ ರಕ್ಷಿಸಲು 17 ದಿನಗಳಲ್ಲಿ 57 ಮೀಟರ್‌ ಸುರಂಗವನ್ನು ಕೊರೆಯಲಾಗಿದೆ. ಜೆಸಿಬಿ, ಅತ್ಯಾಧುನಿಕ ಡ್ರಿಲ್ಲಿಂಗ್‌ ಯಂತ್ರಗಳು, ನುರಿತ ಸಿಬ್ಬಂದಿಯು ಇಷ್ಟು ಮೀಟರ್‌ ಸುರಂಗ ಕೊರೆದು, ಅದರ ಅವಶೇಷಗಳನ್ನು ಹೊರಗೆ ಹಾಕಿ, ಕೊನೆಗೂ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ಸುಮಾರು 150 ಮೀಟರ್‌ ಸುರಂಗ ಕುಸಿದಿತ್ತು. ಇಷ್ಟೂ ಮೀಟರ್‌ ಸುರಂಗ ಕೊರೆಯಲು ಸಾಧ್ಯವಾಗದ ಕಾರಣ ಉಪಾಯ ಮಾಡಿ, ಕೇವಲ 57 ಮೀಟರ್‌ ಸುರಂಗವನ್ನಷ್ಟೇ ಕೊರೆದು ಜನರನ್ನು ರಕ್ಷಣೆ ಮಾಡಲಾಗಿದೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ ಏಜೆನ್ಸಿಗಳು

ಸುರಂಗದಲ್ಲಿ ಡ್ರಿಲ್ಲಿಂಗ್‌, ವರ್ಟಿಕಲ್‌ ಡ್ರಿಲ್ಲಿಂಗ್‌ ಸೇರಿ ಹಲವು ರೀತಿಯಲ್ಲಿ ಕಾರ್ಯಾಚರಣೆ ನಡೆಸಲು ದೇಶದ ಐದು ಏಜೆನ್ಸಿಗಳು ಭಾಗಿಯಾದವು. ಆಯಿಲ್‌ ಆ್ಯಂಡ್‌ ನ್ಯಾಚುರಲ್‌ ಗ್ಯಾಸ್‌ ಕಾರ್ಪೊರೇಷನ್‌ (ONGC), ಸತ್ಲುಜ್‌ ಜಲ ವಿದ್ಯುತ್‌ ನಿಗಮ (SJVNL), ರೈಲ್‌ ವಿಕಾಸ ನಿಗಮ ಲಿಮಿಟೆಡ್‌ (RVNL), ನ್ಯಾಷನಲ್‌ ಹೈವೇಸ್‌ ಆ್ಯಂಡ್‌ ಇನ್‌ಫ್ರಾಸ್ಟ್ರಕ್ಚರ್‌ ಡೆವಲಪ್‌ಮೆಂಟ್‌ ಕಾರ್ಪೊರೇಷನ್‌ ಲಿಮಿಟೆಡ್‌ (NHIDCL) ಹಾಗೂ ಟೆಹ್ರಿ ಹೈಡ್ರೋ ಡೆವಲಪ್‌ಮೆಂಟ್‌ ಕಾರ್ಪೊರೇಷನ್‌ ಲಿಮಿಟೆಡ್‌ (THDCL) ಏಜೆನ್ಸಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದವು.

ವಿದೇಶಿ ತಜ್ಞರ ಎಂಟ್ರಿ

ಭೂಕುಸಿತ, ಅವಶೇಷಗಳ ಪ್ರಮಾಣ ಜಾಸ್ತಿ ಇರುವುದು ಸೇರಿ ಹಲವು ಸವಾಲುಗಳು ಎದುರಾದ ಕಾರಣ ವಿದೇಶಿ ತಜ್ಞರನ್ನು ಕರೆಸಲಾಯಿತು. ಇಂಟರ್‌ನ್ಯಾಷನಲ್‌ ಟನೆಲಿಂಗ್‌ ಅಂಡರ್‌ಗ್ರೌಂಡ್‌ ಸ್ಪೇಸ್‌ ಪ್ರೊಫೆಸರ್‌ ಸಂಸ್ಥೆಯ ಅಧ್ಯಕ್ಷ ಅರ್ನಾಲ್ಡ್‌ ಡಿಕ್ಸ್‌ ಅವರ ತಂಡವು ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭಿಸಿತು. ಇನ್ನು ಅಮೆರಿಕದಲ್ಲಿ ತಯಾರಾದ ಯಂತ್ರಗಳು, ಡ್ರಿಲ್ಲಿಂಗ್‌ ಮಷೀನ್‌ಗಳು, ಪುಶ್‌ ಇನ್‌ ಪೈಪ್‌ಗಳು ಸೇರಿ ಹಲವು ಅತ್ಯಾಧುನಿಕ ಉಪಕರಣಗಳನ್ನು ಬಳಸಲಾಯಿತು.

ಕಾರ್ಯಾಚರಣೆಗೆ ಮುನ್ನಡೆ ಸಿಕ್ಕಿದ್ದು ಎಲ್ಲಿ?

ಸುರಂಗ ಕುಸಿಯುತ್ತಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿ, ಕಾರ್ಮಿಕರು ಯಾವ ಜಾಗದಲ್ಲಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ, ಪೈಪ್‌ ಮೂಲಕ ಅವರನ್ನು ಸಂಪರ್ಕಿಸಿದ್ದೇ ಕಾರ್ಯಾಚರಣೆಗೆ ಸಿಕ್ಕ ಬಹುದೊಡ್ಡ ಮುನ್ನಡೆ ಎಂದು ತಿಳಿದುಬಂದಿದೆ. ಕ್ಷಿಪ್ರವಾಗಿ ಕಾರ್ಮಿಕರಿದ್ದ ಸ್ಥಳವನ್ನು ಗುರುತಿಸಿದ್ದು, ಅವರ ಜತೆ ಸಂಪರ್ಕ ಸಾಧಿಸಿದ ಕಾರಣ ಅವರಿಗೆ ಆಹಾರ ಸೇರಿ ಅಗತ್ಯ ಮೂಲ ಸೌಕರ್ಯಗಳನ್ನು ನೀಡಲು ಸಾಧ್ಯವಾಯಿತು. ಅವರಿಗೆ ಧೈರ್ಯ ತುಂಬಿ, ಯೋಗ ಮಾಡಲು ಸಲಹೆ ಕೊಟ್ಟು, ಒತ್ತಡ ನಿರೋಧಕ ಮಾತ್ರೆಗಳನ್ನು ಪೂರೈಸಿ 12 ದಿನವೂ ಅವರು ಯಾವುದೇ ಒತ್ತಡಕ್ಕೆ ಸಿಲುಕದಂತೆ ನೋಡಿಕೊಳ್ಳಲಾಯಿತು. ಇದು ಕಾರ್ಯಾಚರಣೆಗೆ ಸಿಕ್ಕ ಬಹುದೊಡ್ಡ ಮುನ್ನಡೆ ಎನ್ನಲಾಗಿದೆ.

ಉತ್ತರಕಾಶಿ ಜಿಲ್ಲೆಯ ಸಿಲ್‌ಕ್ಯಾರ ಹಾಗೂ ದಂಡಲ್‌ಗಾಂವ್‌ಗೆ ಸಂಪರ್ಕ ಕಲ್ಪಿಸಲು ಚಾರ್‌ ಧಾಮ್‌ ರಸ್ತೆ ಯೋಜನೆ ಅಡಿಯಲ್ಲಿ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ. ಸುಮಾರು 4.5 ಕಿಲೋ ಮೀಟರ್‌ ದೂರದ ಸುರಂಗ ನಿರ್ಮಾಣದ ವೇಳೆ ಸುಮಾರು 150 ಮೀಟರ್‌ ಉದ್ದದ ಸುರಂಗ ಕುಸಿದಿತ್ತು. ನವೆಂಬರ್‌ 12ರಂದು ಜಾವ 4 ಗಂಟೆ ಸುಮಾರಿಗೆ ಸುರಂಗ ಕುಸಿದಿದ್ದು, ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು. ಇಷ್ಟಾದರೂ ಕ್ಷಿಪ್ರವಾಗಿ ಕಾರ್ಮಿಕರನ್ನು ರಕ್ಷಣೆ ಮಾಡಲು ಆಗಿರಲಿಲ್ಲ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಬೃಹತ್ ಕಾಮಗಾರಿ ವೇಳೆ ಕಾರ್ಮಿಕರ ಸುರಕ್ಷತೆ ಖಾತರಿಪಡಿಸಿ

ಉತ್ತರಕಾಶಿಯಿಂದ ಯಮುನೋತ್ರಿಗೆ 26 ಕಿಲೋಮೀಟರ್‌ ಸಂಚರಿಸುವುದನ್ನು ಕಡಿಮೆಗೊಳಿಸಲು ಸುರಂಗ ನಿರ್ಮಿಸಲಾಗುತ್ತಿದೆ. ಸುರಂಗ ಕುಸಿಯುತ್ತಲೇ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರು ಒಳಗೆ ಸಿಲುಕಿದ್ದರು. ಏಕಾಏಕಿ ಸುರಂಗ ಕುಸಿದ ಕಾರಣ ಒಬ್ಬ ಕಾರ್ಮಿಕರೂ ಹೊರಗೆ ಬರಲು ಸಾಧ್ಯವಾಗಿರಲಿಲ್ಲ. ಉತ್ತರಾಖಂಡ ಪೊಲೀಸರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದೆ. ಭೂಕುಸಿತ, ಡ್ರಿಲ್ಲಿಂಗ್‌ ಯಂತ್ರಗಳು ಕೈಕೊಟ್ಟಿರುವುದು ಸೇರಿ ಹಲವು ಕಾರಣಗಳಿಂದಾಗಿ ಕಾರ್ಮಿಕರ ರಕ್ಷಣೆಯು ಕಷ್ಟವಾಗಿತ್ತು. ವಿದೇಶಿ ತಜ್ಞರನ್ನೂ ಜನರ ರಕ್ಷಣೆಗೆ ಕರೆಸಲಾಗಿತ್ತು. ಈಗ ಕೊನೆಗೆ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

EXPLAINER

Vistara Explainer: ಎತ್ತ ಸಾಗುತ್ತಿದೆ ಮಯನ್ಮಾರ್ ದಂಗೆ ಮತ್ತು ರೋಹಿಂಗ್ಯಾ ಬಿಕ್ಕಟ್ಟು?

Vsitara Explainer: ಇಡೀ ಜಗತ್ತು ಇಸ್ರೇಲ್-ಹಮಾಸ್ ನಡುವಿನ ಸಂಘರ್ಷದ ಬಗ್ಗೆ ಚಿಂತಿತವಾಗಿದೆ. ಆದರೆ ಸದ್ದಿಲ್ಲದೆ, ನಮ್ಮ ನೆರೆಯ ಮಯನ್ಮಾರ್‌ನಲ್ಲಿ ಜನಾಂಗೀಯ ಕದನ ಸ್ಫೋಟಗೊಳ್ಳುವ ಹಂತಕ್ಕೆ ಬಂದು ತಲುಪಿದೆ. ಅಂತಾರಾಷ್ಟ್ರೀಯ ಸಮುದಾಯ ಇತ್ತ ಚಿತ್ತ ಹರಿಸುವುದೇ?

VISTARANEWS.COM


on

vistara explainer about Myanmar insurgency and Rohingya crisis on the rise
Koo
Girish-Linganna

| ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು
ಕಳೆದ ಶನಿವಾರ ಇಸ್ರೇಲಿ ಸೇನೆ ಉತ್ತರ ಗಾಜಾದ ಜಬಾಲಿಯಾದಲ್ಲಿನ (Israel-Palestine War) ವಿಶ್ವಸಂಸ್ಥೆಯ ನಿರಾಶ್ರಿತ ಶಿಬಿರದ ಮೇಲೆ ನಡೆಸಿದ ವಾಯುದಾಳಿಯಲ್ಲಿ 80ಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್ನರು ಸಾವನ್ನಪ್ಪಿದರು. ಅಲ್ಲಿನ ಸಾವಿರಾರು ನಾಗರಿಕರಲ್ಲಿ ಭೀತಿ ಮೂಡಿಸಿದೆ. ಆದರೆ ನಾಗರಿಕರ ಸಾವಿಗೆ ಕಾರಣವಾದ ಈ ದಾಳಿಯನ್ನು ಜಗತ್ತು ಪ್ರಶ್ನಿಸಿದೆ. ಅದೇ ದಿನ, ಇಸ್ರೇಲಿ ಸೇನೆಯ ವಾಯುದಾಳಿಯಲ್ಲಿ, ಜಬಾಲಿಯ ನಿರಾಶ್ರಿತ ಶಿಬಿರದಲ್ಲಿ ವಿಶ್ವಸಂಸ್ಥೆಯ ಏಜೆನ್ಸಿ (UNRWA) ಪ್ಯಾಲೆಸ್ತೀನಿಯನ್ ನಿರಾಶ್ರಿತರಿಗಾಗಿ ನಡೆಸುತ್ತಿರುವ ಅಲ್-ಫಖೌರಾ ಶಾಲೆಯ ಮೇಲೆ ನಡೆದ ವಾಯುದಾಳಿಯಲ್ಲಿ ಮತ್ತು ಉತ್ತರ ಗಾಜಾದಲ್ಲಿನ ತಾಲ್ ಅಜ಼್ ಜ಼ಾತಾರ್ ಶಾಲೆಯ ಮೇಲೆ ನಡೆದ ದಾಳಿಯಲ್ಲಿ 50 ಪ್ಯಾಲೆಸ್ತೀನಿಯನ್ನರು ಸಾವಿಗೀಡಾದರು. ಈ ಘಟನೆಗಳಿಗೆ ಜಗತ್ತಿನಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಯಿತು. ಆದರೆ, ಕಳೆದ ವಾರದ ಮಧ್ಯಭಾಗದಲ್ಲಿ ನೆರೆಯ ಮಯನ್ಮಾರ್(Myanmar) ದೇಶದ, ಚಿನ್ ಸ್ಟೇಟ್‌ನ ಪರ್ವತ ಪ್ರದೇಶದ ವುಯ್ಲು ಗ್ರಾಮದ ಶಾಲೆಯ ಬಳಿ ಮಿಲಿಟರಿ ಜೆಟ್ ಬಾಂಬ್ ದಾಳಿ(Military Jet bomb attack) ನಡೆಸಿದ ಪರಿಣಾಮವಾಗಿ ಹನ್ನೊಂದು ಜನರು ಸಾವನ್ನಪ್ಪಿದರು. ಅವರಲ್ಲಿ ಎಂಟು ಜನ ಏಳರಿಂದ ಹನ್ನೊಂದರ ಹರೆಯದ ಮಕ್ಕಳಾಗಿದ್ದರು. ಆದರೆ ಈ ಘಟನೆ ಯಾಕೋ ಜಗತ್ತಿನ ಗಮನಕ್ಕೇ ಬರಲಿಲ್ಲ.(Vistara Explainer)

ಈ ವರ್ಷದ ಅಕ್ಟೋಬರ್ ತಿಂಗಳ ಆರಂಭದಲ್ಲಿ, ಉತ್ತರ ಮಯನ್ಮಾರ್‌ನ ಕಚಿನ್ ಸ್ಟೇಟ್ ಪ್ರದೇಶದ ಲಾಯ್ಜಾ ಪಟ್ಟಣದ ಬಳಿ, ಚೀನಾ ಗಡಿಯ ಸಮೀಪ, ಆಂತರಿಕವಾಗಿ ಸ್ಥಳಾಂತರಗೊಂಡ ಜನರಿಗಾಗಿ ಇರುವ ಶಿಬಿರದಲ್ಲಿ ಮಕ್ಕಳೂ ಸೇರಿದಂತೆ ಕನಿಷ್ಠ 29 ನಾಗರಿಕರನ್ನು ಮಿಲಿಟರಿ ದಾಳಿಯೊಂದರಲ್ಲಿ ಕೊಲೆಗೈಯಲಾಯಿತು. ಇದೂ ಜಗತ್ತಿನ ಗಮನದಿಂದ ದೂರವೇ ಉಳಿಯಿತು.

ಆಗ್ನೇಯ ಏಷ್ಯಾದ, 5.4 ಕೋಟಿ ಜನಸಂಖ್ಯೆ ಹೊಂದಿರುವ ರಾಷ್ಟ್ರವಾದ ಮಯನ್ಮಾರ್, ಈಗ ಆಂತರಿಕ ಯುದ್ಧದ ದಳ್ಳುರಿಗೆ ಸಿಲುಕಿ ನರಳುತ್ತಿದೆ. ಅಸಂಖ್ಯಾತ ಶಸ್ತ್ರಸಜ್ಜಿತ ಜನಾಂಗೀಯ ಗುಂಪುಗಳು ಮತ್ತು ಪ್ರಜಾಪ್ರಭುತ್ವ ಪರ ಗುಂಪುಗಳು 2021ರಲ್ಲಿ ಕ್ಷಿಪ್ರ ಕ್ರಾಂತಿ ನಡೆಸಿ, ಜನಾದೇಶ ಹೊಂದಿದ್ದ ಸರ್ಕಾರವನ್ನು ಕಿತ್ತಸೆದಿದ್ದ ಮಿಲಿಟರಿ ಜುಂಟಾ ವಿರುದ್ಧ ಕದನಕ್ಕಿಳಿದಿವೆ. ಭಾರತದ ಮಿಜೋರಾಂ ರಾಜ್ಯದ ಜೌಖಾತರ್ ಪ್ರದೇಶಕ್ಕೆ ಸನಿಹದಲ್ಲಿರುವ ಚಿನ್ ಸ್ಟೇಟ್ ಮಿಲಿಟರಿ ಆಡಳಿತದ ವಿರುದ್ಧ ನಿರಂತರವಾಗಿ ತನ್ನ ಪ್ರತಿರೋಧ ವ್ಯಕ್ತಪಡಿಸುತ್ತಾ ಬಂದಿದೆ. ಕಳೆದ ಮೂರು ವಾರಗಳಿಂದ ಮಿಲಿಟರಿ ಆಡಳಿತಕ್ಕೆ ದೇಶಾದ್ಯಂತ ವಿರೋಧಿ ಗುಂಪುಗಳಿಂದ ಭಾರೀ ಪ್ರತಿರೋಧ ವ್ಯಕ್ತವಾಗಿದ್ದು, ಸೇನೆ ಸಾಕಷ್ಟು ಹಿನ್ನಡೆ ಅನುಭವಿಸಿದೆ. ಆದ್ದರಿಂದ ಅದು ಮೇಲುಗೈ ಸಾಧಿಸಲು ಬಹುತೇಕ ವಾಯುಪಡೆಯ ಮೇಲೆ ಅವಲಂಬಿತವಾಗಿದೆ. ಚಿನ್ ಜನಾಂಗೀಯ ಗುಂಪು ಇತ್ತೀಚೆಗೆ ಗಡಿ ಪಟ್ಟಣವಾದ ರಿಖಾವ್ದರ್ ಅನ್ನು ವಶಪಡಿಸಿಕೊಂಡಿದೆ.

ಇತ್ತೀಚಿನ ವಾರಗಳಲ್ಲಿ, ಮಯನ್ಮಾರ್ ಆದ್ಯಂತ ಮಿಲಿಟರಿ ಆಡಳಿತ ಭಾರೀ ಪ್ರತಿರೋಧ ಎದುರಿಸಿದೆ. ಚೀನಾ ಗಡಿಯಾದ್ಯಂತ ಶಾನ್ ಸ್ಟೇಟ್ ಪ್ರದೇಶದಲ್ಲಿರುವ ಮೂರು ದೀರ್ಘಕಾಲೀನ ಜನಾಂಗೀಯ ಅಲ್ಪಸಂಖ್ಯಾತ ಶಸ್ತ್ರಸಜ್ಜಿತ ಗುಂಪುಗಳು ಮತ್ತು ದೇಶಾದ್ಯಂತ ಇರುವ ಪ್ರಜಾಪ್ರಭುತ್ವ ಪರ ಹೋರಾಟಗಾರರ ಕೂಟ ಸೇನೆ ಮತ್ತು ಪೊಲೀಸರನ್ನು ತಮ್ಮ ಪ್ರದೇಶಗಳಿಂದ ಹೊರಹಾಕುತ್ತಿವೆ. ಆಪರೇಶನ್ 1027 ಎಂಬ ರಹಸ್ಯ ಹೆಸರು ಹೊಂದಿರುವ ಹೊಸ ಆಕ್ರಮಣ ಅಕ್ಟೋಬರ್ 27ರಂದು ಆರಂಭಗೊಂಡಿತು. ಇದನ್ನು ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ ಆರ್ಮಿ, ಅರಾಕನ್ ಆರ್ಮಿ, ಹಾಗೂ ಟಾಂಗ್ ನ್ಯಾಷನಲ್ ಲಿಬರೇಶನ್ ಆರ್ಮಿಗಳನ್ನು ಒಳಗೊಂಡ ತ್ರೀ ಬ್ರದರ್‌ಹುಡ್ ಅಲಯನ್ಸ್ ಕೈಗೊಳ್ಳುತ್ತಿವೆ.

ಸೇನಾಡಳಿತಕ್ಕೆ ತೀವ್ರ ವಿರೋಧ

ಶಾನ್ ಸ್ಟೇಟ್‌ನಲ್ಲಿ ಮೂರು ಸಶಸ್ತ್ರ ಜನಾಂಗೀಯ ಗುಂಪುಗಳು ಸಾಧಿಸಿರುವ ಭಾರೀ ಯಶಸ್ಸು ಮಯನ್ಮಾರ್‌ನ ಇತರ ವಿರೋಧೀ ಪಡೆಗಳಿಗೆ ಇನ್ನಷ್ಟು ಧೈರ್ಯ ತುಂಬಿದೆ. ಮಯನ್ಮಾರ್ ಮಿಲಿಟರಿ ಆಡಳಿತ ತಾನು ಕಳೆದ ತಿಂಗಳ ಕೊನೆಯ ಭಾಗದಿಂದ ದಂಗೆ ವಿರೋಧಿ ಪಡೆಗಳಿಂದ ಪ್ರಬಲ ಪ್ರತಿರೋಧ ಎದುರಿಸುತ್ತಿದ್ದು, ಅವರು ಹಲವು ಗಡಿ ಪಟ್ಟಣಗಳು ಮತ್ತು ಬಹಳಷ್ಟು ಸೇನಾ ಹೊರಠಾಣೆಗಳನ್ನು ವಶಪಡಿಸಿಕೊಂಡಿವೆ ಎಂದು ಒಪ್ಪಿಕೊಂಡಿದೆ. ಮಯನ್ಮಾರ್ ಸೇನೆ ಭಾರತದ ಗಡಿಯಾದ್ಯಂತ ಬಹುತೇಕ ಪ್ರದೇಶಗಳ ಮೇಲೆ ತನ್ನ ನಿಯಂತ್ರಣ ಕಳೆದುಕೊಂಡಿದೆ.

ಮಯನ್ಮಾರ್ ಪೂರ್ವದಲ್ಲಿ ಕಯಾ ಸ್ಟೇಟ್‌ನ ಕ್ರಾಂತಿಕಾರಿಗಳು, ಪಶ್ಚಿಮದಲ್ಲಿ ರಖಿನ್ ಸ್ಟೇಟ್ ಕ್ರಾಂತಿಕಾರಿಗಳು, ಮತ್ತು ವಿಶೇಷವಾಗಿ ಉತ್ತರದ ಶಾನ್ ಸ್ಟೇಟ್‌ನ ಪ್ರಜಾಪ್ರಭುತ್ವ ಪರ ಹೋರಾಟಗಾರರು ಸೇನೆಯ ಮೇಲೆ ಭಾರೀ ದಾಳಿ ನಡೆಸುತ್ತಿದ್ದಾರೆ ಎಂದು ಸರ್ಕಾರ ಒಪ್ಪಿಕೊಂಡಿದೆ. ಈ ಹೋರಾಟಗಾರರು ನೂರಾರು ಡ್ರೋನ್‌ಗಳನ್ನು ಬಳಸಿಕೊಂಡು, ಸೇನಾ ನೆಲೆಗಳ ಮೇಲೆ ಬಾಂಬ್‌ಗಳನ್ನು ಸುರಿಸುತ್ತಿದ್ದಾರೆ. ಮಿಲಿಟರಿ ಬೆಂಬಲಿತ ಮಯನ್ಮಾರ್ ಅಧ್ಯಕ್ಷ ವಿನ್ ಮೀಂಟ್ ಅವರು, ಒಂದು ವೇಳೆ ಸರ್ಕಾರ ಏನಾದರೂ ಗಲಭೆ ಪೀಡಿತ ಶಾನ್ ಸ್ಟೇಟ್ ಪ್ರದೇಶದಲ್ಲಿ ಹಿಡಿತ ಬಿಗಿಪಡಿಸಿಕೊಳ್ಳಲು ಸಾಧ್ಯವಾಗದಿದ್ದರೆ ದೇಶ ವಿಭಜನೆಗೊಳ್ಳುವ ಅಪಾಯವಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ವಿಶ್ವ ಸಂಸ್ಥೆ ಕಳವಳ

ಇಸ್ರೇಲ್ – ಹಮಾಸ್ ಯುದ್ಧದ ರೀತಿಯಲ್ಲೇ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್ ಅವರು ಮಯನ್ಮಾರ್‌ನಲ್ಲಿ ಹೆಚ್ಚುತ್ತಿರುವ ಹಿಂಸಾಚಾರಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ. ಮಯನ್ಮಾರ್ ಅಂತರ್ಯುದ್ಧದಲ್ಲಿ ಬಹುತೇಕ ಇಪ್ಪತ್ತು ಲಕ್ಷ ಜನರು ಸ್ಥಳಾಂತರಗೊಂಡಿದ್ದು, ಮಕ್ಕಳೂ ಸೇರಿದಂತೆ 75 ನಾಗರಿಕರು ಸಾವಿಗೀಡಾಗಿದ್ದಾರೆ. ಗುಟೆರೆಸ್ ಎಲ್ಲ ಯುದ್ಧದಲ್ಲಿ ಭಾಗವಹಿಸುವವರಿಗೂ ಸಾಮಾನ್ಯ ನಾಗರಿಕರನ್ನು ರಕ್ಷಿಸಲು ಮತ್ತು ಪರಿಹಾರ ಸಾಮಗ್ರಿಗಳನ್ನು ಪೂರೈಸಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.

ತಾಮಡವ್ ಎಂದು ಕರೆಯಲಾಗುವ ಮಯನ್ಮಾರ್ ಸೇನೆ ಕ್ಷಿಪ್ರ ಕ್ರಾಂತಿ ನಡೆಸಿ, ಫೆಬ್ರವರಿ 1, 2021ರಂದು ನಾಗರಿಕ ನಾಯಕಿ ಆ್ಯಂಗ್ ಸಾನ್ ಸೂಕಿ ಅವರ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್ಎಲ್‌ಡಿ) ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆದ ಬಳಿಕ, ಮಯನ್ಮಾರ್‌ನಲ್ಲಿ ವ್ಯಾಪಕ ಹಿಂಸಾಚಾರ ಆರಂಭಗೊಂಡಿತು.

2021ರ ದಂಗೆ, ಕಳೆದ ಹತ್ತು ವರ್ಷಗಳಿಂದ ಮಿಲಿಟರಿ ಮತ್ತು ನಾಗರಿಕ ಸರ್ಕಾರದ ನಡುವೆ ನಡೆಯುತ್ತಿದ್ದ ಅಧಿಕಾರದ ಸ್ಪರ್ಧೆಗೆ ಅಂತ್ಯ ಹಾಡಿತು. ಅವೆರಡೂ 2008ರಲ್ಲಿ ಮಿಲಿಟರಿ ರಚಿಸಿದ ಸಂವಿಧಾನದಡಿ ಅಧಿಕಾರ ಹಂಚಿಕೊಂಡಿದ್ದವು. ಈ ಸಂವಿಧಾನ, ಮಯನ್ಮಾರ್ ಸೇನೆಗೆ ಸಂಸತ್ತಿನಲ್ಲಿ ಕಾಲು ಭಾಗ ಸದಸ್ಯತ್ವವನ್ನು, ಪ್ರಮುಖ ಸಚಿವಾಲಯಗಳ ನಿಯಂತ್ರಣ, ಸಂವಿಧಾನ ತಿದ್ದುಪಡಿಗಳ ಮೇಲೆ ವಿಟೋ ಅಧಿಕಾರ ನೀಡಿತ್ತು ಮತ್ತು ಆ್ಯಂಗ್ ಸಾನ್ ಸೂಕಿ ಅವರಿಗಿದ್ದ ವಿದೇಶೀ ಕುಟುಂಬ ಸಂಬಂಧದ ಕಾರಣದಿಂದ ಅವರಿಗೆ ಅಧ್ಯಕ್ಷರಾಗುವ ಅಧಿಕಾರವನ್ನು ನಿರಾಕರಿಸಿತ್ತು.

ಮಯನ್ಮಾರ್ ಮಿಲಿಟರಿ ಜುಂಟಾ ನವೆಂಬರ್ 2020ರ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದಯ ಆರೋಪಿಸಿ, ತಾನು ನಡೆಸಿದ ಕ್ಷಿಪ್ರ ಕ್ರಾಂತಿಯನ್ನು ಸಮರ್ಥಿಸಿಕೊಂಡಿತ್ತು. ಆದರೆ ಸೇನೆಯ ಆರೋಪಗಳನ್ನು ಚುನಾವಣಾ ಆಯೋಗ ಮತ್ತು ಅಂತಾರಾಷ್ಟ್ರೀಯ ವೀಕ್ಷಕರು ನಿರಾಕರಿಸಿ, ಚುನಾವಣೆ ಮುಕ್ತವಾಗಿ, ನ್ಯಾಯಯುತವಾಗಿ ನಡೆದಿತ್ತು ಎಂದಿದ್ದರು. ಅಂತಾರಾಷ್ಟ್ರೀಯ ಸಮುದಾಯ ಸೇನಾ ಕ್ರಾಂತಿಯನ್ನು ಖಂಡಿಸಿ, ಸೇನೆಯ ಮೇಲೆ ನಿರ್ಬಂಧಗಳನ್ನು ಹೇರಿ, ಚೀನಾ ಮತ್ತು ರಷ್ಯಾಗಳಂತಹ ಮಿತ್ರರಾಷ್ಟ್ರಗಳಿಗೆ ಈ ಬಿಕ್ಕಟ್ಟನ್ನು ಕೊನೆಗೊಳಿಸಲು ನೆರವಾಗುವಂತೆ ಕೋರಿತ್ತು.

ಈ ದಂಗೆಗೆ ಪ್ರತಿಕ್ರಿಯೆಯಾಗಿ, ಮಯನ್ಮಾರ್ ನಾಗರಿಕರು ಬೃಹತ್ ಕ್ರಾಂತಿಯನ್ನೇ ಆರಂಭಿಸಿದರು. ಅವರು ತಮ್ಮ ಚುನಾಯಿತ ಸರ್ಕಾರದ ಮರುಸ್ಥಾಪನೆಯಾಗಬೇಕು ಮತ್ತು ಮಾನವ ಹಕ್ಕುಗಳು ಲಭ್ಯವಾಗಬೇಕು ಎಂದು ಆಗ್ರಹಿಸತೊಡಗಿದರು. ಈ ಹೋರಾಟದಲ್ಲಿ ಜನಾಂಗೀಯ ಅಲ್ಪಸಂಖ್ಯಾತರು, ಮಹಿಳೆಯರು, ಯುವಕರು ಮತ್ತು ನಾಗರಿಕ ಸೇವಾ ಉದ್ಯೋಗಿಗಳು ಸೇರಿದಂತೆ, ಎಲ್ಲಾ ಸ್ತರಗಳ ಜನರೂ ಭಾಗಿಯಾಗಿ, ಶಾಂತಿಯುತ ರೀತಿಯಲ್ಲಿ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸತೊಡಗಿದರು. ಆದರೆ ಮಯನ್ಮಾರ್ ಸೇನೆ ಇದಕ್ಕೆ ಭಾರೀ ಬಲಪ್ರಯೋಗದ ಮೂಲಕ ಪ್ರತಿಕ್ರಿಯಿಸಿ, ಕ್ಷೋಭೆಯನ್ನು ಇನ್ನಷ್ಟು ಹೆಚ್ಚಿಸಿ, ಮಾನವ ಹಕ್ಕುಗಳನ್ನು ದಮನಿಸಲು ಆರಂಭಿಸಿತು.

ಮಿಲಿಟರಿ ಜುಂಟಾ ಪ್ರತಿಭಟನಾಕಾರರನ್ನು ಚದುರಿಸಲು ಮಾರಣಾಂತಿಕ ಪ್ರಹಾರ ನಡೆಸಿದ ಪರಿಣಾಮವಾಗಿ, ಸಾಕಷ್ಟು ಜನರು ಪ್ರಾಣ ಕಳೆದುಕೊಂಡರು. ಮಹಿಳೆಯರು, ಮಕ್ಕಳು, ವೈದ್ಯರು, ಪತ್ರಕರ್ತರು, ವೈದ್ಯರು, ಶಿಕ್ಷಕರು ಮತ್ತು ರಾಜಕಾರಣಿಗಳು ಸೇರಿದಂತೆ ಸಾವಿರಾರು ಜನರನ್ನು ವಶಪಡಿಸಿಕೊಂಡು, ಅವರಿಗೆ ಚಿತ್ರಹಿಂಸೆ ನೀಡಿ ಸಾಯಿಸಲಾಯಿತು. ಮಯನ್ಮಾರ್ ಸೇನೆ ಜನಾಂಗೀಯ ಸಶಸ್ತ್ರ ಸಂಘಟನೆಗಳನ್ನು ಗುರಿಯಾಗಿಸಿ ಅವರ ಮೇಲೆ ವಾಯುದಾಳಿ, ಭೂ ಕಾರ್ಯಾಚರಣೆ ಮತ್ತು ವ್ಯಾಪಕ ಸ್ಥಳಾಂತರಗಳನ್ನು ನಡೆಸತೊಡಗಿತು. ಇದು ಭಾರೀ ಮಾನವೀಯ ಬಿಕ್ಕಟ್ಟು ಸೃಷ್ಟಿಸಿತು.

ಈ ಎಲ್ಲ ಕ್ರೌರ್ಯಗಳ ಹೊರತಾಗಿಯೂ, ನಾಗರಿಕ ಪ್ರತಿರೋಧ ಮುಂದುವರಿದಿದೆ. ಆಡಳಿತದಿಂದ ಕಿತ್ತು ಹಾಕಲ್ಪಟ್ಟ ಜನಪ್ರತಿನಿಧಿಗಳು, ವಿವಿಧ ಗುಂಪುಗಳು, ಸಂಘಟನೆಗಳ ಪ್ರತಿನಿಧಿಗಳು ಜೊತೆಯಾಗಿ, ನ್ಯಾಷನಲ್ ಯುನಿಟಿ ಗವರ್ನಮೆಂಟ್ (ಎನ್‌ಯುಜಿ) ಎಂಬ ಪರ್ಯಾಯ ಸರ್ಕಾರವನ್ನು ಸ್ಥಾಪಿಸಿದರು. ಸೇನಾ ಆಡಳಿತವನ್ನು ಕೊನೆಗೊಳಿಸಲು ಮತ್ತು ಪ್ರಜಾಪ್ರಭುತ್ವವನ್ನು ಮರಳಿ ಸ್ಥಾಪಿಸಲು ಅವರು ಪೀಪಲ್ಸ್ ಡಿಫೆನ್ಸ್ ಫೋರ್ಸ್ (ಪಿಡಿಎಫ್) ಎಂಬ ಗೆರಿಲ್ಲಾ ಸೇನೆಯನ್ನು ಸ್ಥಾಪಿಸಿ, ಮಿಲಿಟರಿಯ ದಮನಕಾರಿ ನೀತಿಯ ವಿರುದ್ಧ ಹೋರಾಟ ಆರಂಭಿಸಿದರು. ಎನ್‌ಯುಜಿ ಮಯನ್ಮಾರ್ ನಾಗರಿಕರನ್ನು ರಕ್ಷಿಸಲು, ಶಾಂತಿ ಮರುಸ್ಥಾಪಿಸಲು ಅಂತಾರಾಷ್ಟ್ರೀಯ ಮಾನ್ಯತೆ ಮತ್ತು ಬೆಂಬಲವನ್ನು ಎದುರು ನೋಡುತ್ತಿದೆ.

ಮಯನ್ಮಾರ್ ಆಂತರಿಕ ದಳ್ಳುರಿಯನ್ನು ಎದುರಿಸುತ್ತಿರುವಾಗಲೇ, ರೊಹಿಂಗ್ಯಾದ ಜನಾಂಗೀಯ ಅಲ್ಪಸಂಖ್ಯಾತರಿಗೆ, ಅದರಲ್ಲೂ ಪ್ರಮುಖವಾಗಿ ಮುಸ್ಲಿಮರಿಗೆ ಕಿರುಕುಳ ಮುಂದುವರಿಯುತ್ತಿದೆ. ಮುಖ್ಯವಾಗಿ ರಖಿನ್ ಸ್ಟೇಟ್‌ನಲ್ಲಿ ವಾಸಿಸುತ್ತಿರುವ ರೊಹಿಂಗ್ಯಾಗಳು ಅಪಾರ ತಾರತಮ್ಯಗಳನ್ನು ಎದುರಿಸಿದ್ದು, ಅವರಿಗೆ ಪೌರತ್ವ ನಿರಾಕರಿಸಿ, ಮೂಲಭೂತ ಹಕ್ಕುಗಳಿಂದಲೂ ವಂಚಿಸಲಾಗಿದೆ. ಹಿಂಸಾಚಾರ ಮತ್ತು ಮಿಲಿಟರಿ ಆಕ್ರಮಣ ಅಪಾರ ಸಂಖ್ಯೆಯಲ್ಲಿ ರೊಹಿಂಗ್ಯನ್ನರು ನೆರೆ ರಾಷ್ಟ್ರಗಳಲ್ಲಿ ಆಶ್ರಯ ಕೋರುವಂತೆ ಮಾಡಿದೆ. ಹೆಚ್ಚಿನ ಸಂಖ್ಯೆಯ ರೊಹಿಂಗ್ಯನ್ನರು ಬಾಂಗ್ಲಾದೇಶ ಮತ್ತು ಭಾರತದ ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

ಮಯನ್ಮಾರ್‌ನಲ್ಲಿ ಚೀನಾ ಕಿತಾಪತಿ

ಮಯನ್ಮಾರ್‌ನ ರಾಜಕೀಯ ಚಿತ್ರಣದಲ್ಲಿ ಅದರ ಪ್ರಮುಖ ಮಿತ್ರ ರಾಷ್ಟ್ರವಾದ ಚೀನಾ ಮಹತ್ವದ ಪಾತ್ರ ವಹಿಸಿದೆ. ಚೀನಾ ಸಾರ್ವಜನಿಕವಾಗಿ ಮಯನ್ಮಾರ್‌ನಲ್ಲಿ ಸ್ಥಿರತೆಗಾಗಿ ಕರೆ ನೀಡಿದರೂ, ಅದು ಸೇನಾ ದಂಗೆಯನ್ನು ಖಂಡಿಸದಿರುವುದಕ್ಕೆ ಮತ್ತು ಮಿಲಿಟರಿ ಆಡಳಿತದೊಡನೆ ವ್ಯವಹಾರ ಮುಂದುವರಿಸಿರುವುದಕ್ಕೆ ವ್ಯಾಪಕ ಟೀಕೆ ಎದುರಿಸಿದೆ. ಚೀನಾದ ನಡೆಯ ಹಿಂದೆ, ಮೂಲ ಸೌಕರ್ಯ ನಿರ್ಮಾಣ ಯೋಜನೆಗಳು, ಪ್ರಮುಖ ವ್ಯಾಪಾರ ಮಾರ್ಗದ ಮೇಲಿನ ನಿಯಂತ್ರಣ ಸೇರಿದಂತೆ ಚೀನಾದ ಆರ್ಥಿಕ ಮತ್ತು ಕಾರ್ಯತಂತ್ರದ ಹಿತಾಸಕ್ತಿಗಳಿವೆ ಎಂದು ಹಲವರು ಆರೋಪಿಸಿದ್ದಾರೆ. ದಂಗೆಗೆ ಚೀನಾ ಬೆಂಬಲ ನೀಡಿರುವುದು ಪ್ರಜಾಪ್ರಭುತ್ವ ಪರ ಹೋರಾಟಗಾರರು ಮತ್ತು ಅಂತಾರಾಷ್ಟ್ರೀಯ ಸಮುದಾಯದೊಡನೆ ಚೀನಾದ ಸಂಬಂಧವನ್ನು ಹಾಳುಗೆಡವಿದೆ.

ಕಳೆದ ವಾರ ಭಾರತ ಅನಿರೀಕ್ಷಿತವಾಗಿ ಮಯನ್ಮಾರ್ ಸೇನೆಗೆ ನೆರವು ನೀಡಲು ಮುಂದೆ ಬಂತು. ಭಾರತ 46 ಮಯನ್ಮಾರ್ ಸೈನಿಕರಿಗೆ ಮಿಜೋರಾಂ ಒಳಗೆ ಪ್ರವೇಶಿಸಲು ಅನುಮತಿ ನೀಡಿತು. ಈ ಸೈನಿಕರು ಮಿಜೋರಾಂ ಗಡಿಯಾಚೆ ಪ್ರಜಾಪ್ರಭುತ್ವ ಪರ ಹೋರಾಟಗಾರರು ಚಿನ್ ಸ್ಟೇಟ್‌ನಲ್ಲಿ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿ, ಧ್ವಂಸಗೊಳಿಸಿದಾಗ ಅವರಿಂದ ತಪ್ಪಿಸಿಕೊಂಡು ಜೀವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಬಹುಶಃ ಭಾರತ ಇದೇ ಮೊದಲ ಬಾರಿಗೆ ಅವರದೇ ನೆಲದಲ್ಲಿ ಹೋರಾಡುತ್ತಿದ್ದ ಇನ್ನೊಂದು ದೇಶದ ಸೈನಿಕರನ್ನು ರಕ್ಷಿಸುವ ಕೆಲಸಕ್ಕೆ ಮುಂದಾಗಿತ್ತು. ಇದು ಬಹುಶಃ ಭಾರತ ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಮಯನ್ಮಾರ್ ಮಿಲಿಟರಿ ಆಡಳಿತದೊಡನೆ ಸಹಕರಿಸಲು ಸಿದ್ಧವಾಗಿದೆ ಎಂಬ ಸಂಕೇತವೂ ಆಗಿರಬಹುದು ಎಂದು ಅಂದಾಜಿಸಲಾಗಿದೆ.

ಕಳವಳ ವ್ಯಕ್ತಪಡಿಸಿದ ಭಾರತ

ಮಯನ್ಮಾರ್ ನೆರೆ ರಾಷ್ಟ್ರವಾಗಿ, ಭಾರತ ಅಲ್ಲಿನ ಬಿಕ್ಕಟ್ಟಿನ ಕುರಿತು ಕಳವಳ ವ್ಯಕ್ತಪಡಿಸಿದ್ದು, ಪ್ರಾದೇಶಿಕ ಸ್ಥಿರತೆಗಾಗಿ ಆಗ್ರಹಿಸಿದೆ. ಭಾರತ ಇದಕ್ಕೆ ಒಂದು ಶಾಂತಿಯುತ ಪರಿಹಾರ ಕಂಡುಕೊಳ್ಳಲು ಕರೆ ನೀಡಿದ್ದು, ಅದಕ್ಕಾಗಿ ಮಯನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪನೆಯಾಗಬೇಕು, ಹಿಂಸಾಚಾರ ಕೊನೆಯಾಗಬೇಕು ಎಂದಿದೆ. ಅದರಲ್ಲೂ ಭಾರತದ ಈಶಾನ್ಯ ಮತ್ತು ಪೂರ್ವದ ರಾಜ್ಯಗಳಿಗೆ ಬರುತ್ತಿರುವ ನಿರಾಶ್ರಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದು ಸ್ಥಳೀಯ ಸಂಪನ್ಮೂಲ, ಮೂಲಭೂತ ಸೌಕರ್ಯಗಳ ಮೇಲೆ ಹೆಚ್ಚಿನ ಒತ್ತಡ ಹೇರುತ್ತಿದೆ. ಫೆಬ್ರವರಿ 2021ರ ಕ್ಷಿಪ್ರ ದಂಗೆಯ ಬಳಿಕ 40,000ಕ್ಕೂ ಹೆಚ್ಚು ಚಿನ್ ನಿರಾಶ್ರಿತರು ಮಿಜೋರಾಂ ಪ್ರವೇಶಿಸಿರುವುದರಿಂದ, ಮಯನ್ಮಾರ್ ದಂಗೆಯ ಕಹಿ ಅನುಭವ ಭಾರತವನ್ನೂ ತಟ್ಟತೊಡಗಿದೆ.

ಅದರೊಡನೆ, ಭಾರತ ಮತ್ತು ಮಯನ್ಮಾರ್ ನಡುವಿನ ವ್ಯಾಪಾರ ಮತ್ತು ಆರ್ಥಿಕ ಸಂಬಂಧಕ್ಕೆ ಎದುರಾಗಿರುವ ಅಡಚಣೆ, ಗಡಿಯಾಚೆಗಿನ ವ್ಯಾಪಾರ ವಹಿವಾಟು ಮತ್ತು ಹೂಡಿಕೆಗಳ ಮೇಲೆ ಪರಿಣಾಮ ಬೀರಿದೆ. ಈ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಭಾರತದ ಕಾಳಜಿ ಗಡಿ ವ್ಯವಹಾರವನ್ನು ಮೀರಿದ್ದು, ಈ ಪ್ರದೇಶದಲ್ಲಿ ಶಾಂತಿ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವ ಮಹತ್ವವನ್ನು ಸಾರುತ್ತಿದೆ.

ಮಯನ್ಮಾರ್ ಬಿಕ್ಕಟ್ಟು ಹಲವು ಆಯಾಮಗಳನ್ನು ಹೊಂದಿದ್ದು, ಪ್ರಸ್ತುತ ಕ್ರಾಂತಿ, ದಮನಕಾರಿ ಆಡಳಿತ, ರೊಹಿಂಗ್ಯನ್ ಅಲ್ಪಸಂಖ್ಯಾತರ ಪಾಡು, ಮತ್ತು ಪ್ರಾದೇಶಿಕ ಶಕ್ತಿಯಾಗಿರುವ ಚೀನಾದ ಮಧ್ಯಪ್ರವೇಶಗಳು ಅದರಲ್ಲಿ ಪ್ರಮುಖವಾಗಿವೆ. ಭಾರತವೂ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯ ಈ ಸವಾಲುಗಳನ್ನು ಎದುರಿಸಲು ಜೊತೆಯಾಗಿ ಕಾರ್ಯಾಚರಿಸಿ, ಮಯನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪಿಸಿ, ಮಾನವ ಹಕ್ಕುಗಳನ್ನು ರಕ್ಷಿಸಲು ಮುಂದಾಗಬೇಕು. ಅದರೊಡನೆ, ರೊಹಿಂಗ್ಯನ್ನರ ಪರಿಸ್ಥಿತಿಯೆಡೆಗೂ ಗಮನ ಹರಿಸಿ, ಅವರ ದಮನವನ್ನು ಕೊನೆಗಾಣಿಸಿ, ಅವರಿಗೂ ಹಕ್ಕುಗಳು ಮತ್ತು ಸುರಕ್ಷತೆಯನ್ನು ಒದಗಿಸಬೇಕು. ಈ ಸಮಸ್ಯೆಗಳನ್ನು ಜೊತೆಯಾಗಿ ಎದುರಿಸುವ ಮೂಲಕ, ಮಯನ್ಮಾರ್ ಮತ್ತು ಸುತ್ತಲಿನ ಪ್ರದೇಶಗಳಿಗೆ ಶಾಂತಿಯುತ, ಸ್ಥಿರ ಭವಿಷ್ಯ ಒದಗಿಸಲು ಸಾಧ್ಯ.

ಈ ಸುದ್ದಿಯನ್ನೂ ಓದಿ: Vistara Explainer: ಇಸ್ರೇಲಿ ಗುಪ್ತಚರಕ್ಕೆ ಹಮಾಸ್ ಚಳ್ಳೆಹಣ್ಣು ತಿನ್ನಿಸಿದ್ದು ಹೇಗೆ? ಕತೆ ರೋಚಕವಾಗಿದೆ!

Continue Reading
Advertisement
Rajastan Elections: 10 reasons for BJP Win
ದೇಶ32 seconds ago

Rajastan Elections 2023 : ರಾಜಸ್ಥಾನದಲ್ಲಿ ಬಿಜೆಪಿ ಭರ್ಜರಿ ಮುನ್ನಡೆ; ದಿಗ್ವಿಜಯಕ್ಕೆ 10 ಕಾರಣ

raman singh bhupesh baghel
ದೇಶ1 min ago

Election Result 2023: ಛತ್ತೀಸ್‌ಗಢದಲ್ಲಿ ಸುಳ್ಳಾದ ಎಕ್ಸಿಟ್‌ ಪೋಲ್‌, ಗೆಲುವಿನತ್ತ ಬಿಜೆಪಿ ದಾಪುಗಾಲು

Ration card not cancelled and Vidhanasoudha
ಕರ್ನಾಟಕ13 mins ago

Ration Card : ಆರು ತಿಂಗಳಿಂದ ರೇಷನ್‌ ಪಡೆದಿಲ್ಲವೇ? ನಿಮ್ಮ ಕಾರ್ಡ್‌ ರದ್ದಾಗುವ ಭಯ ಬೇಡ! ಆದರೆ..?

Sachin Tendulkar says he is super impressed by Vicky Kaushal
ಕ್ರಿಕೆಟ್22 mins ago

Sachin Tendulkar: ವಿಕ್ಕಿ ಕೌಶಲ್‌ ಸಿನಿಮಾ ಕಂಡು ʻಸೂಪರ್ ಇಂಪ್ರೆಸ್ಡ್ʼ ಆದ ಸಚಿನ್ ತೆಂಡೂಲ್ಕರ್‌!

Crime Sense Murder Case
ಕರ್ನಾಟಕ48 mins ago

Murder Case : ವ್ಯಕ್ತಿಯ ತಲೆ ಸೀಳಿ ಮೋರಿಗೆ ಶವ ಎಸೆದ ಹಂತಕರು!

election five states
ದೇಶ53 mins ago

Election Results 2023: ಲೋಕಸಭೆ 65 ಸ್ಥಾನಗಳ ಮೇಲೆ ಇದೀಗ ಬಿಜೆಪಿ ಹಿಡಿತ! ಮೋದಿ ಹಾದಿ ಸುಲಭ!

Police call off protest FIR against lawyer who slapped police
ಕರ್ನಾಟಕ1 hour ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Shivraj Singh Chouhan
ದೇಶ1 hour ago

Ladli Behna: ಚೌಹಾಣ್‌ ‘ಗ್ಯಾರಂಟಿ’ಗೆ ಜೈ ಎಂದ ಮಧ್ಯಪ್ರದೇಶ ಜನ;‌ ಏನಿದು ಲಾಡ್ಲಿ ಬೆಹ್ನಾ?

Bobby Deol cries after paparazzi praise him as Animal
ಬಾಲಿವುಡ್1 hour ago

Bobby Deol: ʻಅನಿಮಲ್‌ʼ ಸಕ್ಸೆಸ್‌ ಹೊಗಳಿಕೆಗೆ ಕಣ್ಣೀರಿಟ್ಟ ನಟ ಬಾಬಿ ಡಿಯೋಲ್

R Ashok
ಕರ್ನಾಟಕ1 hour ago

Election Results 2023 : ತೆಲಂಗಾಣ ಶಾಸಕರನ್ನು ರೆಸಾರ್ಟ್‌ಗೆ ಕರೆತಂದು ಸೇವೆ ಮಾಡಿದ್ರೆ ಉಗ್ರ ಪ್ರತಿಭಟನೆ; ಆರ್.‌ ಅಶೋಕ್

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Bigg Boss- Saregamapa 20 average TRP
ಕಿರುತೆರೆ1 month ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Police call off protest FIR against lawyer who slapped police
ಕರ್ನಾಟಕ1 hour ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ8 hours ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ20 hours ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ1 day ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ2 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ2 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ3 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ3 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

ಟ್ರೆಂಡಿಂಗ್‌