National Film Awards 2023: ಯಾರಿಗೆಲ್ಲ ಸಿಕ್ಕಿದೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ? ಇಲ್ಲಿದೆ ಸಂಪೂರ್ಣ ಪಟ್ಟಿ - Vistara News

South Cinema

National Film Awards 2023: ಯಾರಿಗೆಲ್ಲ ಸಿಕ್ಕಿದೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ? ಇಲ್ಲಿದೆ ಸಂಪೂರ್ಣ ಪಟ್ಟಿ

National Film Awards 2023: ಪ್ರಾದೇಶಿಕ ಸಿನಿಮಾ ವಿಭಾಗದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಕನ್ನಡದ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ವಿಜೇತರ ಪಟ್ಟಿ ಇಲ್ಲಿದೆ.

VISTARANEWS.COM


on

National Film Awards 2023
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೊಸದಿಲ್ಲಿ: 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು (69th National Film Awards ) ಗುರುವಾರ (National Film Awards 2023) ದೆಹಲಿಯ ನ್ಯಾಷನಲ್ ಮೀಡಿಯಾ ಸೆಂಟರ್‌ನಲ್ಲಿ ಪ್ರಕಟಿಸಲಾಗಿದೆ. 2021ರಲ್ಲಿ ಬಿಡುಗಡೆ ಆದ ಅಥವಾ ಸೆನ್ಸಾರ್ ಆದ ಸಿನಿಮಾಗಳಲ್ಲಿ ಅತ್ಯುತ್ತಮವಾದ ಸಿನಿಮಾ, ನಟ-ನಟಿ ಹಾಗೂ ತಂತ್ರಜ್ಞರನ್ನು ಗುರುತಿಸಿ ಪ್ರಶಸ್ತಿ ಘೋಷಿಸಲಾಗಿದೆ. ಪ್ರಾದೇಶಿಕ ಸಿನಿಮಾ ವಿಭಾಗದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ʼ777 ಚಾರ್ಲಿʼ ಕನ್ನಡದ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಅತ್ಯುತ್ತಮ ನಟಿ ಪ್ರಶಸ್ತಿಗೆ ಆಲಿಯಾ ಭಟ್ (Best Actress Alia Bhatt) ಹಾಗೂ ಕೃತಿ ಸನೂನ್ (Best Acrtess Kriti Sanon) ಭಾಜನರಾಗಿದ್ದಾರೆ. ಅದೇ ರೀತಿ, ಅತ್ಯುತ್ತಮ ನಟ ಪ್ರಶಸ್ತಿಯನ್ನು ಅಲ್ಲು ಅರ್ಜುನ್ (Best Actor Allu Arjun) ಪಡೆದುಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ (Pushpa Moive) ಚಿತ್ರದ ಅಭಿನಯಕ್ಕಾಗಿ ಈ ಪ್ರಶಸ್ತಿ ದೊರೆತಿದೆ. ಅದೇ ರೀತಿ, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಗಂಗೂಬಾಯಿ ಕಾಥಿಯಾವಾಡಿ (gangubai kathiawadi) ಚಿತ್ರದ ಅಭಿನಯಕ್ಕಾಗಿ ಆಲಿಯಾ ಭಟ್ ಹಾಗೂ ಮಿಮಿ (Mimi Movie) ಚಿತ್ರದ ಅಭಿನಯಕ್ಕಾಗಿ ಕೃತಿ ಸನೂನ್ ಅವರು ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.

ಇನ್ನುಳಿದಂತೆ ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಅಭಿನಯಕ್ಕಾಗಿ ಪಲ್ಲವಿ ಜೋಶಿ ಅತ್ಯುತ್ತಮ ಪೋಷಕ ನಟಿ ಹಾಗೂ ಮಿಮಿ ಚಿತ್ರದ ಅಭಿನಯಕ್ಕಾಗಿ ಕಂಪಜ್ ತ್ರಿಪಾಠಿ ಅವರಿಗೆ ಅತ್ಯುತ್ತಮ ಪೋಷಕ ನಟ ಸಂದಿದೆ. ಆರ್ ಮಾಧವನ್ ಅಭಿನಯ ಹಾಗೂ ನಿರ್ದೇಶನದ ರಾಕೇಟರಿ ಚಿತ್ರವು ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಗಂಗೂಬಾಯಿ ಕಾಟೇವಾಡಿ ಚಿತ್ರ ಎಡಿಟಿಂಗ್‌ಗಾಗಿ ಸಂಜಯ್ ಲೀಲಾ ಬನ್ಸಾಲಿ ಅವರು ಬೆಸ್ಟ್ ಎಡಿಟರ್ ಪ್ರಶಸ್ತಿಗೆ ಪಾತ್ರವಾಗಿದ್ದಾರೆ. ಅವರು ಈ ಚಿತ್ರದ ನಿರ್ದೇಶಕರೂ ಹೌದು. ಪುಷ್ಪ ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ದೇವಿಶ್ರೀ ಪ್ರಸಾದ್ ಅವರಿಗೆ ಬೆಸ್ಟ್ ಮ್ಯೂಸಿಕ್ ಪ್ರಶಸ್ತಿ ಲಭಿಸಿದೆ. 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿಯ ಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಂಪೂರ್ಣ ಪಟ್ಟಿ

  • ಅತ್ಯುತ್ತಮ ಮಿಶಿಂಗ್ (mishing) ಚಿತ್ರ: ಬೂಂಬಾ ರೈಡ್ ( Boomba Ride)
  • ಅತ್ಯುತ್ತಮ ಅಸ್ಸಾಮಿ ಚಿತ್ರ: ಅನುರ್ (Anur)
  • ಅತ್ಯುತ್ತಮ ಬಂಗಾಳಿ ಚಿತ್ರ: ಕಲ್ಕೋಹೊ (Kalkkoho)
  • ಅತ್ಯುತ್ತಮ ಹಿಂದಿ ಚಿತ್ರ: ಸರ್ದಾರ್ ಉದಾಮ್ (Sardar Udham)
  • ಅತ್ಯುತ್ತಮ ಕನ್ನಡ ಚಿತ್ರ: 777 ಚಾರ್ಲಿ (777 Charlie)
  • ಅತ್ಯುತ್ತಮ ಗುಜರಾತಿ ಚಿತ್ರ: ಚೆಲೋ ಶೋ ( Chello Show)
  • ಅತ್ಯುತ್ತಮ ಮೈಥಿಲಿ ಚಿತ್ರ: ಸಮನಾಂತರ ( Samanantar)
  • ಅತ್ಯುತ್ತಮ ಮರಾಠಿ ಚಿತ್ರ: ಎಕ್ದಾ ಕೇ ಜಲಾ (Ekda Kay Zala)
  • ಅತ್ಯುತ್ತಮ ಮಲಯಾಳಂ ಚಿತ್ರ: ಹೋಮ್ (Home)

ನಾನ್-ಫೀಚರ್ (Non-Feature) ಸಿನಿಮಾಗಳ ಪಟ್ಟಿ

ಸ್ಪೆಷಲ್‌ ಮೆನ್ಷನ್: ಬಾಳೆ ಬಂಗಾರ (ಕನ್ನಡ)

  • ಅತ್ಯುತ್ತಮ ನಾನ್-ಫೀಚರ್ ಚಿತ್ರ – ಏಕ್ ಥಾ ಗಾಂವ್ (ಗಢ್ವಾಲಿ ಮತ್ತು ಹಿಂದಿ) (Ek Tha Gaon (Garhwali & Hindi))
  • ಅತ್ಯುತ್ತಮ ನಿರ್ದೇಶಕ – ಸ್ಮೈಲ್ ಪ್ಲೀಸ್ (ಹಿಂದಿ) ಚಿತ್ರಕ್ಕಾಗಿ ಬಾಕುಲ್ ಮತೀಯಾನಿ ( Bakual Matiyani )
  • ಕೌಟುಂಬಿಕ ಮೌಲ್ಯಗಳ ಮೇಲಿನ ಅತ್ಯುತ್ತಮ ಚಲನಚಿತ್ರ – ಚಾಂದ್ ಸಾನ್ಸೆ (Chand Saanse ) (ಹಿಂದಿ)
  • ಅತ್ಯುತ್ತಮ ಛಾಯಾಗ್ರಾಹಕ – ಬಿಟ್ಟು ರಾವತ್ ಅವರಿಗೆ ಭೋಟಿಯಾ (Bhotiya) ಚಿತ್ರಕ್ಕಾಗಿ.
  • ಅತ್ಯುತ್ತಮ ತನಿಖಾ ಚಿತ್ರ – ಲುಕಿಂಗ್ ಫಾರ್ ಚಲನ್ (Looking For Challan ) (ಇಂಗ್ಲಿಷ್)
  • ಅತ್ಯುತ್ತಮ ಶೈಕ್ಷಣಿಕ ಚಿತ್ರ – ಸಿರ್ಪಿಗಲಿನ್ ಸಿಪಂಗಲ್ (ತಮಿಳು) ( Sirpigalin Sipangal (Tamil)
  • ಸಾಮಾಜಿಕ ಸಮಸ್ಯೆಗಳ ಮೇಲಿನ ಅತ್ಯುತ್ತಮ ಚಲನಚಿತ್ರ – ಮಿಥು ದಿ (Mithu Di ) (ಇಂಗ್ಲಿಷ್), ತ್ರೀ ಟೂ ಒನ್ (Three Two One) (ಮರಾಠಿ ಮತ್ತು ಹಿಂದಿ)
  • ಅತ್ಯುತ್ತಮ ಪರಿಸರ ಚಲನಚಿತ್ರಗಳು – ಮುನ್ನಂ ವಲವು (ಮಲಯಾಳಂ) (Munnam Valavu (Malayalam))

ಇದನ್ನೂ ಓದಿ: National Film Awards 2023: ಆಲಿಯಾ, ಕೃತಿ ಅತ್ಯುತ್ತಮ ನಟಿ, ಅಲ್ಲು ಅರ್ಜುನ್ ಬೆಸ್ಟ್ ಆ್ಯಕ್ಟರ್, ರಾಕೆಟ್ರಿ ಅತ್ಯುತ್ತಮ ಸಿನಿಮಾ!

Special Mentions in Feature Films category

  • ಕಡೈಸಿ ವಿವಾಸಾಯಿ – ದಿವಂಗತ ಶ್ರೀ ನಲ್ಲಂಡಿ (Late Shri Nallandi)
  • ಜಿಲ್ಲಿ – ಅರಣ್ಯ ಗುಪ್ತಾ ಮತ್ತು ಬಿಥಾನ್ ಬಿಸ್ವಾಸ್ (Aranya Gupta & Bithan Biswas)
  • ಹೋಮ್‌ – ಇಂದ್ರನ್ಸ್
  • ಆನೂರು – ಜಹನಾರಾ ಬೇಗಂ (ahanara Begum)

ಇನ್ನಿತರ ಪ್ರಶಸ್ತಿಗಳ ಪಟ್ಟಿ

  • ಅತ್ಯುತ್ತಮ ಪೋಷಕ ನಟಿ: ಪಲ್ಲವಿ ಜೋಶಿ (ದಿ ಕಾಶ್ಮೀರ್ ಫೈಲ್ಸ್)
  • ಅತ್ಯುತ್ತಮ ಪೋಷಕ ನಟ: ಪಂಕಜ್ ತ್ರಿಪಾಠಿ (ಮಿಮಿ ಸಿನಿಮಾ)
  • ಅತ್ಯುತ್ತಮ ನಟ: ಅಲ್ಲು ಅರ್ಜುನ್ (ಪುಷ್ಪ)
  • ಅತ್ಯುತ್ತಮ ನಟಿ: ಆಲಿಯಾ (ಗಂಗೂಬಾಯಿ ಕಾಥಿಯಾವಾಡಿ) ಮತ್ತು ಕೃತಿ ಸನೂನ್‌ (ಮಿಮಿ)
  • ಅತ್ಯುತ್ತಮ ಸಿನಿಮಾ: ರಾಕೆಟ್ರಿ: ದಿ ನಂಬಿ ಎಫೆಕ್ಟ್ (ತಮಿಳು)
  • ಅತ್ಯುತ್ತಮ ಮನೊರಂಜನಾ ಚಿತ್ರ: ಆರ್​ಆರ್​ಆರ್ ಸಿನಿಮಾ
  • ಅತ್ಯುತ್ತಮ ನಿರ್ದೇಶಕ: ನಿಖಿಲ್ ಮಹಾಜನ್ (ಗೋಧಾವರಿ: ಮರಾಠಿ)
  • ಅತ್ಯುತ್ತಮ ಸಂಗೀತ: ದೇಶ್ರೀಪ್ರಸಾದ್ (ಪುಷ್ಪ)
  • ಅತ್ಯುತ್ತಮ ಗಾಯಕ: RRR (ಕೋಮುರಂ ಭೀಮುಡು)
  • ಅತ್ಯುತ್ತಮ ಗಾಯಕಿ: ಇರವಿನ್ ನಿಜಾಲ್ (ಶ್ರೆಯಾ ಘೋಷಾಲ್)
  • ಅತ್ಯುತ್ತಮ ಸಾಮಾಜಿಕ ಕಳಕಳಿ ಸಿನಿಮಾ: ಅನುನಾದ್ (ಅಸ್ಸಾಮಿ)
  • ಅತ್ಯುತ್ತಮ ಎಡಿಟಿಂಗ್: ಗಂಗೂಬಾಯಿ ಕಾಥಿಯಾವಾಡಿ
  • ಅತ್ಯುತ್ತಮ ಮಕ್ಕಳ ಚಿತ್ರ: ಗಾಂಧಿ ಆ್ಯಂಡ್ ಕಂಪೆನಿ (ಗುಜರಾತಿ)
  • ಅತ್ಯುತ್ತಮ ಚಿತ್ರಕತೆ: ನಯಾಟ್ಟು (ಮಲಯಾಳಂ)
  • ಅತ್ಯುತ್ತಮ ಸಂಭಾಷಣೆ: ಗಂಗೂಬಾಯಿ ಕಾಥಿಯಾವಾಡಿ
  • ಅತ್ಯುತ್ತಮ ಪರಿಸರ ಕಾಳಜಿ ಸಿನಿಮಾ: ಅವಸ್ಯವ್ಯೂಹಂ (ಮಲಯಾಳಂ)
  • ತೀರ್ಪುಗಾರರ ವಿಶೇಷ ಬಹುಮಾನ: ಶೇರ್​ಷಾ
  • ಅತ್ಯುತ್ತಮ ಸಿನಿಮಾಟೊಗ್ರಫಿ: ಸರ್ದಾರ್ ಉದ್ಧಮ್ (ಮುಖ್ಯೋಫಾಧ್ಯಾಯ್)
  • ಅತ್ಯುತ್ತಮ ಆಕ್ಷನ್ ಕೊರಿಯೋಗ್ರಫಿ: ಆರ್​ಆರ್​ಆರ್ (ತೆಲುಗು)
  • ಡ್ಯಾನ್ಸ್ ಕೊರಿಯೋಗ್ರಫಿ: ಪ್ರೇಮ್ ರಕ್ಷಿತ್
  • ಅತ್ಯುತ್ತಮ ಮೇಕಪ್​: ಗಂಗೂಬಾಯಿ ಕಾಥಿಯಾವಾಡಿ (ಸಿಂಗ್ ಡಿಸೋಜಾ)
  • ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್: ಸರ್ದಾರ್ ಉದ್ಧಮ್ (ದಿಮತ್ರಿ ಮಲ್ಲಿಚ್-ಮಾನ್ಸಿ ದ್ರುವ್ ಮೆಹ್ತಾ)
  • ಅತ್ಯುತ್ತಮ ರೀ-ರೆಕಾರ್ಡಿಂಗ್: ಸರ್ದಾರ್ ಉದ್ಧಮ್
  • ಅತ್ಯುತ್ತಮ ಸಾಹಿತ್ಯ: ಕೊಂಡಪೋಲಂ (ಚಂದ್ರಭೋಸ್)

ಇದನ್ನೂ ಓದಿ: National Film Awards 2023: 777 ಚಾರ್ಲಿ ಕನ್ನಡದ ಅತ್ಯುತ್ತಮ ಸಿನಿಮಾ

  • ಕಲೆ ಸಂಸ್ಕೃತಿ ಬಗೆಗಿನ ಸಿನಿಮಾ: ಟಿಎನ್ ಕೃಷ್ಣನ್
  • ಅತ್ಯುತ್ತಮ ಸಿನಿಮಾ ವಿಮರ್ಶೆ: ಪುರುಷೋತ್ತಮ ಚಾರ್ಯಾಲು, ತೆಲುಗು
  • ಸಿನಿಮಾ ವಿಮರ್ಶೆ ಜ್ಯೂರಿ ಬಹುಮಾನ: ಶುಭಮನ್ಯುಮ್ ಬಡೂರು, ಕನ್ನಡ
  • ಸಿನಿಮಾ ಬಗ್ಗೆ ಅತ್ಯುತ್ತಮ ಪುಸ್ತಕ: ದಿ ಇಂಕ್ರೀಡಿಬಲ್ ಮೆಲೋಡಿ ಆಫ್ ಜರ್ನಿ
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಒಟಿಟಿ

The Goat Life: ಪೃಥ್ವಿರಾಜ್ ಸುಕುಮಾರನ್ ಅಭಿನಯದ ʻಆಡುಜೀವಿತಂʼ ಒಟಿಟಿ ರಿಲೀಸ್‌ ಎಲ್ಲಿ?

The Goat Life ಆಡು ಜೀವಿತಂʼ (Aadujeevitham Movie ) `ದಿ ಗೋಟ್ ಲೈಫ್’ ಸಿನಿಮಾದಲ್ಲಿ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೆನ್ಯಾಮಿನ್ ಅವರ ಗೋಟ್ ಡೇಸ್ ಕಾದಂಬರಿ ಆಧರಿಸಿದ ಸಿನಿಮಾ ಇದಾಗಿದೆ.

VISTARANEWS.COM


on

The Goat Life OTT Release Date Fix
Koo

ಬೆಂಗಳೂರು: ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಬ್ಲೆಸ್ಸಿ ಅವರ ಮಲಯಾಳಂ ಚಿತ್ರ ʻಆಡುಜೀವಿತಂʼ (The Goat Life) ಬಿಡುಗಡೆಯಾದ ದಿನವೇ ಒಳ್ಳೆಯ ಗಳಿಕೆ ಕಂಡಿತ್ತು. ಪೃಥ್ವಿರಾಜ್ ಸುಕುಮಾರನ್ ಮುಖ್ಯ ಭೂಮಿಕೆಯಯ ಈ ಸಿನಿಮಾ 150 ಕೋಟಿ ರೂ. ಗಳಿಕೆ ಕಂಡಿತ್ತು. ನೈಜ ಘಟನೆಗಳನ್ನು ಆಧರಿಸಿ ಬರೆದ ಕಾದಂಬರಿಯನ್ನು ತೆರೆಗೆ ತಂದು ಚಿತ್ರತಂಡ ಸಕ್ಸಸ್ ಕಂಡಿತ್ತು. ಸಾಕಷ್ಟು ಜನ ಈ ಚಿತ್ರವನ್ನು ಒಟಿಟಿಯಲ್ಲಿ ವೀಕ್ಷಿಸಲು ಕಾಯುತ್ತಿದ್ದಾರೆ. ಡಿಸ್ನಿ ಪ್ಲಸ್ ಹಾಟ್‌ಸ್ಟರ್‌ಗೆ ಚಿತ್ರದ ಒಟಿಟಿ ರೈಟ್ಸ್ ಮಾರಾಟವಾಗಿದೆ ಎನ್ನುವ ಚರ್ಚೆ ನಡೀತಿದೆ.

ಬ್ಲೆಸ್ಸಿ ನಿರ್ದೇಶನದ ಈ ಚಿತ್ರ ಆರು ದಿನಗಳಲ್ಲಿ ಭಾರತದಲ್ಲಿ ಸುಮಾರು 40.4 ಕೋಟಿ ರೂ. ಸಂಗ್ರಹಿಸಿತ್ತು. ಮೊದಲ ದಿನ, ʻಆಡುಜೀವಿತಂʼ ಭಾರತದಲ್ಲಿ ಒಟ್ಟು ಎಲ್ಲಾ ಭಾಷೆಗಳು ಸೇರಿದಂತೆ 7.6 ಕೋಟಿ ರೂ. ಸಂಗ್ರಹಿಸಿದರೆ, ಎರಡನೇ ದಿನ ದಿನ 6.25 ಕೋಟಿ ರೂ. ಮೂರನೇ ದಿನ 7.75 ಕೋಟಿ ರೂ. ನಾಲ್ಕು ಮತ್ತು ಐದನೇ ದಿನ 8.7 ಕೋಟಿ ರೂ. ಮತ್ತು ಆರನೇ ದಿನ 4. 5 ಕೋಟಿ ರೂ. ವ್ಯವಹಾರ ಮಾಡಿತ್ತು.

ಆಡು ಜೀವಿತಂʼ (Aadujeevitham Movie ) `ದಿ ಗೋಟ್ ಲೈಫ್’ ಸಿನಿಮಾದಲ್ಲಿ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೆನ್ಯಾಮಿನ್ ಅವರ ಗೋಟ್ ಡೇಸ್ ಕಾದಂಬರಿ ಆಧರಿಸಿದ ಸಿನಿಮಾ ಇದಾಗಿದೆ. ಒಂದು ದಶಕದ ಪ್ರಯತ್ನದ ನಂತರ, ಮಲಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಅಭಿನಯದ ಈ ಸಿನಿಮಾ ನೈಜ ಕಥೆ ಆಧರಿಸಿದ ಚಿತ್ರವಾಗಿದೆ.

ಆಡು ಜೀವಿತಂʼ ಚಿತ್ರದ ಕಥೆ ವಲಸಿಗರ ಸಮಸ್ಯೆ ಸುತ್ತ ಸುತ್ತುತ್ತದೆ. ದುಡಿಮೆಗಾಗಿ ಸೌದಿ ಅರೇಬಿಯಾಗೆ ವಲಸೆ ಹೋಗುವ ನಸೀಬ್ ಮೊಹಮ್ಮದ್ ಎನ್ನುವ ಕೇರಳದ ವ್ಯಕ್ತಿ ಅಲ್ಲಿ ಪಟ್ಟಂತ ಕಷ್ಟಗಳು ಆತನ ಪಾಸ್‌ಪೋರ್ಟ್‌ ಕಸಿದು ಆತನಿಗೆ ಕೊಟ್ಟಂತಹ ಹಿಂಸೆಗಳು, ಆ ಬಿಸಿಲಿನ ಮರುಭೂಮಿಯಲ್ಲಿ ಆತ ಅನುಭವಿಸಿದ ಸಂಕಷ್ಟಗಳ ಕಥನವೇ ಈ ಆಡು ಜೀವಿತಂ.

ಇದನ್ನೂ ಓದಿ: Ranjani Raghavan: ರಂಜನಿ ರಾಘವನ್ ಸಿನಿಮಾದಲ್ಲಿ ಇರಲಿದೆ ಪಂಜುರ್ಲಿ ದೈವದ ಕಥೆ! ಬಿಡುಗಡೆ ಯಾವಾಗ?

ಒಟಿಟಿಗೆ ಯಾವಾಗ?

ಮೇ 10ಕ್ಕೆ ಸಿನಿಮಾ ಒಟಿಟಿ ಬರುತ್ತದೆ ಎನ್ನಲಾಗುತ್ತಿದೆ. ಮೇ 26ಕ್ಕೆ ಡಿಸ್ನಿ ಹಾಟ್‌ಸ್ಟರ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಎನ್ನುವ ಚರ್ಚೆ ಕೂಡ ಇದೆ. ಆದರೆ ಯಾವಾಗ ಎನ್ನುವುದು ಶೀಘ್ರದಲ್ಲೇ ರಿವೀಲ್ ಆಗಲಿದೆ.

ಏನಿದೆ ಆಡುಜೀವಿತಂ ಸಿನಿಮಾ ಕಥೆ?

ಹಣ ಸಂಪಾದಿಸಲು ಸೌದಿ ಅರೇಬಿಯಾಕ್ಕೆ ಹೋದ ಭಾರತೀಯ ವಲಸೆ ಕಾರ್ಮಿಕ ನಜೀಬ್ ಮುಹಮ್ಮದ್ ನಿಜ ಜೀವನದ ಘಟನೆ ಇದು ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ. ವಿಧಿಯ ವೈಚಿತ್ರ್ಯದಿಂದಾಗಿ ನಜೀಬ್‌ ಗುಲಾಮನ ಬದುಕನ್ನು ಬದುಕಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಅವನು ಮರುಭೂಮಿಯ ಮಧ್ಯದಲ್ಲಿ ಮೇಕೆಗಳನ್ನು ಮೇಯಿಸಬೇಕಾಗುತ್ತದೆ. ಆಡು ಜೀವಿತಂ ಅಂದರೆ ಆಡಿನ ಬದುಕು ಅಂಥ ಅರ್ಥ. ಇಂಗ್ಲಿಷ್‌ನಲ್ಲಿ ಇದರ ಟೈಟಲ್‌ GOAT LIFE ಎಂದಿದೆ.

ಪರ್ಷಿಯನ್ ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡಿ ಮನೆಗೆ ಕಳುಹಿಸುವಷ್ಟು ಹಣ ಸಂಪಾದಿಸುವುದು ನಜೀಬ್ ಅವರ ಕನಸಾಗಿತ್ತು. ಆದರೆ, ಸೌದಿ ಮರುಭೂಮಿಯ ಮಧ್ಯದಲ್ಲಿ ಆಡುಗಳನ್ನು ಮೇಯಿಸುವ ಗುಲಾಮಗಿರಿಯ ಕೆಲಸಕ್ಕೆ ಒಡ್ಡಿಕೊಳ್ಳಬೇಕಾದ ಅನಿವಾರ್ಯತೆ ಏನು ಬಂತು? ಅವನು ಕೊನೆಗೂ ತನ್ನನ್ನು ತಾನು ಹೇಗೆ ಬಂಧಮುಕ್ತಗೊಳಿಸಿಕೊಳ್ಳುತ್ತಾನೆ ಎನ್ನುವುದೊಂದು ದೊಡ್ಡ ಹೋರಾಟದ ಕಥೆ. ಅವನು ಸೆರೆಮನೆ ಸೇರಿ, ಅಲ್ಲಿಂದ ತಪ್ಪಿಸಿಕೊಳ್ಳುವ ಸಾಹಸ ಈ ಚಿತ್ರದಲ್ಲಿ ಇರಲಿದೆ ಎನ್ನಲಾಗಿದೆ.

ಈ ಸಿನಿಮಾಕ್ಕಾಗಿ ನಿರ್ದೇಶಕ ಬ್ಲೆಸ್ಸಿ ಅವರು ತುಂಬಾ ಅಧ್ಯಯನ ಮಾಡಿದ್ದಾರೆ. ಈ ಕಥೆ ಅವರನ್ನು ಕಳೆದ 15 ವರ್ಷಗಳಿಂದ ಕೊರೆಯುತ್ತಿತ್ತಂತೆ. ಅಂತೆಯೇ ಅವರ ಕನಸಿನಲ್ಲಿ ಬಂದ ಚಿತ್ರದಂತೆ ತಮ್ಮನ್ನು ಮಾರ್ಪಾಡು ಮಾಡಿಕೊಂಡು ಹೊಸ ವ್ಯಕ್ತಿಯ ರೂಪದಲ್ಲಿ ಹೊಸ ಲುಕ್‌ನಲ್ಲಿ ಬಂದಿದ್ದಾರೆ ನಟ ಪೃಥ್ವಿರಾಜ್ ಸುಕುಮಾರನ್.

Continue Reading

ಸಿನಿಮಾ

Cauvery Theatre: ಬೆಂಗಳೂರಿನಲ್ಲಿ ಪ್ರದರ್ಶನ ನಿಲ್ಲಿಸಿದ ʻಕಾವೇರಿʼ ಥಿಯೇಟರ್! ಮುಂದೇನು?

Cauvery Theatre: ಡಾ.ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಸೇರಿದಂತೆ ಕನ್ನಡದ ದಿಗ್ಗಜರ ಸಿನಿಮಾಗಳು ಇದೇ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿತ್ತು. ಸಿಂಗಲ್ ಸ್ಕ್ರೀನ್ ಆಗಿದ್ದರೂ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಈ ಚಿತ್ರಮಂದಿರದಲ್ಲಿ ಇತ್ತು. ಈ ವರ್ಷ ಜನವರಿ 11ಕ್ಕೆ 50 ವರ್ಷ ಪೂರೈಸಿ, ಗೋಲ್ಡನ್ ಜ್ಯುಬಿಲಿ ಸಂಭ್ರಮಾಚರಣೆಯಲ್ಲಿತ್ತು. ಕಮಲ್ ಹಾಸನ್ ಅವರ ಇಂಡಿಯನ್ (1996) 100 ದಿನ, ಕಾಂತಾರ 50-ದಿನಗಳ ಪ್ರದರ್ಶನ ಕಂಡಿದೆ.

VISTARANEWS.COM


on

Cauvery Theatre bengaluru another single screen close
Koo

ಬೆಂಗಳೂರು: ಒಟಿಟಿ , ಮಲ್ಟಿಪ್ಲೆಕ್ ಇತ್ಯಾದಿ ಕಾರಣಗಳಿಂದ ಇತ್ತೀಚೆಗೆ ಚಿತ್ರಮಂದಿರಗಳು ಮುಚ್ಚುತ್ತಿವೆ. ಕಲೆಕ್ಷನ್ ಕೂಡ ಕಡಿಮೆಯಾಗಿದ್ದು, ಹಲವು ಚಿತ್ರಮಂದಿರಗಳು ಮುಚ್ಚುವ ನಿರ್ಧಾರಕ್ಕೆ ಬಂದಿದೆ. 1974ರ ಜನವರಿ 11ರಂದು ಡಾ. ರಾಜ್‌ಕುಮಾರ್ ನಟನೆಯ ‘ಬಂಗಾರದ ಪಂಜರ’ (Bangarada Panjara) ಸಿನಿಮಾ ಪ್ರದರ್ಶನದ ಮೂಲಕ ʻʻಕಾವೇರಿʼʼ ಚಿತ್ರಮಂದಿರ ಶುರುವಾಗಿತ್ತು. 50 ವರ್ಷದ ಇತಿಹಾಸ ಹೊಂದಿದ್ದ, ಬೆಂಗಳೂರಿನ ಅತಿದೊಡ್ಡ ಚಿತ್ರಮಂದಿರಗಳಲ್ಲಿ ಒಂದಾಗಿದ್ದ ಸ್ಯಾಂಕಿ ರಸ್ತೆಯ ʻಕಾವೇರಿʼ ಚಿತ್ರಮಂದಿರ ಈಗ ಶಾಶ್ವತವಾಗಿ ಮುಚ್ಚಿದೆ.

ಚಿತ್ರಮಂದಿರ ನಡೆಸುವುದು ಕಷ್ಟ ಎಂಬ ಕಾರಣಕ್ಕೆ ಮಾಲೀಕರು ಪ್ರದರ್ಶನ ನಿಲ್ಲಿಸಿದ್ದಾರೆ. ಆ ಜಾಗದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣವಾಗಲಿದೆ ಎನ್ನಲಾಗಿದೆ. ಮೆಜೆಸ್ಟಿಕ್‌ನ ʻಕಪಾಲಿʼ ಚಿತ್ರಮಂದಿರದ ನಂತರ ಅತಿ ಹೆಚ್ಚು ಸಿಟ್ಟಿಂಗ್‌ ವ್ಯವಸ್ಥೆ ಇದ್ದ ಈ ಚಿತ್ರಮಂದಿರ ಆರಂಭವಾಗಿದ್ದಾಗ 1300ರಷ್ಟು ಸೀಟುಗಳ ವ್ಯವಸ್ಥೆ ಇತ್ತು. ಜತೆಗೆ ಮಿನಿ ಬಾಲ್ಕನಿ ಇದ್ದ ಕೆಲವೇ ಚಿತ್ರಮಂದಿರಗಳಲ್ಲಿ ಇದೂ ಒಂದಾಗಿತ್ತು.

ಇದನ್ನೂ ಓದಿ: Ranjani Raghavan: ರಂಜನಿ ರಾಘವನ್ ಸಿನಿಮಾದಲ್ಲಿ ಇರಲಿದೆ ಪಂಜುರ್ಲಿ ದೈವದ ಕಥೆ! ಬಿಡುಗಡೆ ಯಾವಾಗ?

ಪರಭಾಷೆಯ ಸಿನಿಮಾಗಳು ಪ್ರದರ್ಶನ

ಇಲ್ಲಿ ಕನ್ನಡವೂ ಸೇರಿದಂತೆ ಹಿಂದಿ ಹಾಗೂ ಪರಭಾಷೆಯ ಸಿನಿಮಾಗಳು ಪ್ರದರ್ಶನ ಕಾಣುತ್ತಿದ್ದವು. ಡಾ. ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಸೇರಿದಂತೆ ಕನ್ನಡದ ದಿಗ್ಗಜರ ಸಿನಿಮಾಗಳು ಇದೇ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿತ್ತು. ಸಿಂಗಲ್ ಸ್ಕ್ರೀನ್ ಆಗಿದ್ದರೂ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಈ ಚಿತ್ರಮಂದಿರದಲ್ಲಿ ಇತ್ತು. ಈ ಚಿತ್ರಮಂದಿರದಲ್ಲಿ ಸಿನಿಮಾದ ಚಿತ್ರೀಕರಣ ಕೂಡ ನಡೆದಿದೆ. ಪುನೀತ್ ರಾಜ್‌ಕುಮಾರ್ ಅಭಿನಯದ ‘ಪರಮಾತ್ಮ’ ಸಿನಿಮಾದ ಆರಂಭಿಕ ಸೀನ್ ಅನ್ನು ಇಲ್ಲಿಯೇ ಶೂಟಿಂಗ್ ಮಾಡಲಾಗಿತ್ತು.

ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲಿನ ವಿಶೇಷತೆಯಾಗಿತ್ತು. ಎಲ್ಲಾ ಭಾಷೆಗಳ ಸಿನಿಮಾ ಪ್ರದರ್ಶನ ನಡೆಯುತ್ತಿದ್ದು, ಉತ್ತರ ಬೆಂಗಳೂರಿಗರಿಗೆ ಇದೊಂದು ಸಾಂಸ್ಕೃತಿಕ ಸ್ಥಳವೇ ಆಗಿತ್ತು. ‘ಬಂಗಾರದ ಪಂಜರ, ‘ಶಂಕರಾಭರಣಂ’, ‘ದಿಲ್‌ವಾಲೆ ದುಲ್ಹನಿಯಾ ಲೇ ಜಾಯೆಂಗೆ’ ಸಿನಿಮಾಗಳು ಇಲ್ಲಿ 25 ವಾರ ಪ್ರದರ್ಶನ ಕಂಡಿದ್ದವು. ಈ ವರ್ಷ ಜನವರಿ 11ಕ್ಕೆ 50 ವರ್ಷ ಪೂರೈಸಿ, ಗೋಲ್ಡನ್ ಜ್ಯುಬಿಲಿ ಸಂಭ್ರಮಾಚರಣೆಯಲ್ಲಿತ್ತು. ಕಮಲ್ ಹಾಸನ್ ಅವರ ʼಇಂಡಿಯನ್ʼ (1996) 100 ದಿನ, ʼಕಾಂತಾರʼ 50 ದಿನಗಳ ಪ್ರದರ್ಶನ ಕಂಡಿದೆ. ಮುಂದೆ ಇಲ್ಲಿ ವಾಣಿಜ್ಯ ಕಟ್ಟಡ ತಲೆ ಎತ್ತುವ ಸಾಧ್ಯತೆ ಇದೆ. ಅದರಲ್ಲಿ ಮಲ್ಟಿ ಪ್ಲೆಕ್ಸ್‌ ಚಿತ್ರ ಮಂದಿರ ನಿರ್ಮಾಣ ಆಗುವ ಸಾಧ್ಯತೆಯೂ ಇದೆ.

Continue Reading

ಸ್ಯಾಂಡಲ್ ವುಡ್

Ranjani Raghavan: ರಂಜನಿ ರಾಘವನ್ ಸಿನಿಮಾದಲ್ಲಿ ಇರಲಿದೆ ಪಂಜುರ್ಲಿ ದೈವದ ಕಥೆ! ಬಿಡುಗಡೆ ಯಾವಾಗ?

Ranjani Raghavan: ಸಂತೋಷ್ ಬಾಲರಾಜ್ ನಾಯಕನಾಗಿ ನಟಿಸಿರುವ ಚಿತ್ರ. ಕನ್ನಡತಿ ಖ್ಯಾತಿಯ ʻರಂಜಿನಿ ರಾಘವನ್ʼ ನಾಯಕಿಯಾಗಿ ಜತೆಯಾಗಿದ್ದಾರೆ. ಈ ಹಿಂದೆ ರಂಗಿತರಂಗ, ʻಕಾಂತಾರʼ ಚಿತ್ರಗಳಲ್ಲಿ ತುಳುನಾಡಿನ ದೈವಾರಾಧನೆಯ ಕಥೆಯಿತ್ತು. ಆ ಎರಡು ಸಿನಿಮಾಗಳ ದೊಡ್ಡ ಮಟ್ಟದ ಗೆಲುವಿನ ಶಕ್ತಿಯೂ ಅದೇ. ಅಂಥಾದ್ದೊಂದು ನೆಲದ ಘಮಲಿನ ಕಥೆಯನ್ನೊಳಗೊಂಡಿರುವ ಚಿತ್ರ `ಸತ್ಯಂ’.

VISTARANEWS.COM


on

Ranjani Raghavan Starrer Sathyam Kannada Movie Gets UA Certificate
Koo

ಬೆಂಗಳೂರು: ಇದುವರೆಗೂ ಭಿನ್ನ ಪಥದ ಮೂಲಕ ತಮ್ಮದೇ ಆದ ಛಾಪು ಮೂಡಿಸಿರುವವರು ಅಶೋಕ್ ಕಡಬ. ಇದೀಗ ಅವರು ʻಸತ್ಯಂ’ ಚಿತ್ರದ ಮೂಲಕ ವಿಭಿನ್ನ ಕಥೆಯನ್ನು ಹೇಲ ಹೊರಟ್ಟಿದ್ದಾರೆ. ಈ ಹಿಂದೆ ಸತ್ಯಂ ಟೀಸರ್ ಬಿಕಡುಗಡೆಯಾದಾಗಲೇ ಭಾರಿ ವೀಕ್ಷಣೆಗಳು (Ranjani Raghavan) ಸಿಕ್ಕಿ, ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಬಿಡುಗಡೆಯ ಹೊಸ್ತಿಲಿನಲ್ಲಿರುವ ಸತ್ಯಂ ಸೆನ್ಸಾರ್ ಸರ್ಟಿಫಿಕೇಟ್ ಪಡೆದುಕೊಂಡಿದೆ. ಈ ವಿಚಾರವನ್ನು ನಿರ್ಮಾಪಕರಾದ ಮಹಾಂತೇಶ್ ವಿ.ಕೆ ಹಂಚಿಕೊಂಡಿದ್ದಾರೆ. ʻಯು\ಎʼ ಸರ್ಟಿಫಿಕೇಟ್‌ ಸಿಕ್ಕಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಸಂತೋಷ್ ಬಾಲರಾಜ್ ನಾಯಕನಾಗಿ ನಟಿಸಿರುವ ಚಿತ್ರ. ಕನ್ನಡತಿ ಖ್ಯಾತಿಯ ʻರಂಜಿನಿ ರಾಘವನ್ʼ ನಾಯಕಿಯಾಗಿ ಜತೆಯಾಗಿದ್ದಾರೆ. ಈ ಹಿಂದೆ ರಂಗಿತರಂಗ, ʻಕಾಂತಾರʼ ಚಿತ್ರಗಳಲ್ಲಿ ತುಳುನಾಡಿನ ದೈವಾರಾಧನೆಯ ಕಥೆಯಿತ್ತು. ಆ ಎರಡು ಸಿನಿಮಾಗಳ ದೊಡ್ಡ ಮಟ್ಟದ ಗೆಲುವಿನ ಶಕ್ತಿಯೂ ಅದೇ. ಅಂಥಾದ್ದೊಂದು ನೆಲದ ಘಮಲಿನ ಕಥೆಯನ್ನೊಳಗೊಂಡಿರುವ ಚಿತ್ರ `ಸತ್ಯಂ’. ಹಾಗೆಂದ ಮಾತ್ರಕ್ಕೆ ಇದು ಆ ಎರಡು ಸಿನಿಮಾಗಳ ಗೆಲುವಿನ ಪ್ರಭೆಯಲ್ಲಿ ರೂಪುಗೊಂಡಿರುವ ಚಿತ್ರ ಅಂದುಕೊಳ್ಳುವಂತಿಲ್ಲ. ಕಾಂತಾರಕ್ಕೂ ಮುನ್ನವೇ ಸತ್ಯಂ ಕಥೆ ಸಿದ್ಧವಾಗಿತ್ತೆಂಬ ವಿಚಾರವನ್ನು ಖುದ್ದು ನಿರ್ದೇಶಕರು ಖಚಿತಪಡಿಸಿದ್ದಾರೆ. ಇಂಥಾ ಭಿನ್ನ ಕಥಾನಕವನ್ನು ಕಂಡು ಸೆನ್ಸಾರ್ ಅಧಿಕಾರಿಗಳು ಖುಷಿಗೊಂಡಿದ್ದಾರೆ. ಒಂದು ಅತ್ಯಪರೂಪದ ಚಿತ್ರ ನೋಡಿದ ತುಂಬು ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral News: ಕಾಳಿಂಗ ಸರ್ಪವನ್ನು ಈ ಕುಟುಂಬ ಹೇಗೆ ಪೂಜಿಸುತ್ತಿದೆ ನೋಡಿ!

ಸಾಮಾನ್ಯವಾಗಿ, ಸೆನ್ಸಾರ್ ಅಧಿಕಾರಿಗಳು ಅದೆಷ್ಟೋ ಸಿನಿಮಾಗಳನ್ನು ವೀಕ್ಷಿಸುತ್ತಾರೆ. ಅವರ ಪಾಲಿಗೆ ಅದೊಂದು ಯಾಂತ್ರಿಕ ಕೆಲಸದಂತಾಗಿ ಬಿಡುವ ಸಾಧ್ಯತೆಗಳೇ ಹೆಚ್ಚು. ಅಂಥಾದ್ದರ ನಡುವೆ ಒಂದು ಸಿನಿಮಾ ಎಲ್ಲ ರೀತಿಯಿಂದಲೂ ಹೊಸತನದಿಂದ ಕಂಗೊಳಿಸಿದಾಗ ಅವರಲ್ಲೊಂದು ಖುಷಿ ಮೂಡಿಕೊಳ್ಳುತ್ತೆ. ಹೀಗೆ ಒಟ್ಟಾರೆ ಚಿತ್ರದ ಬಗ್ಗೆ ತುಂಬು ಮೆಚ್ಚುಗೆ ಸೂಚಿಸುತ್ತಲೇ, ಸೆನ್ಸಾರ್ ಮಂಡಳಿ ಕಡೆಯಿಂದ ಸತ್ಯಂಗೆ ಯು\ಎ ಸರ್ಟಿಫಿಕೇಟು ಸಿಕ್ಕಿದೆ. ಅಂದಹಾಗೆ, ಯಾವುದೇ ಕಟ್, ಎಡಿಟ್ ಇಲ್ಲದೆಯೇ ಈ ಸಿನಿಮಾ ಸೆನ್ಸಾರ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದೆ.

ಇದುವರೆಗೂ ನಿರ್ದೇಶಕರಾಗಿ ಒಂದಷ್ಟು ಪ್ರಯೋಗಗಳನ್ನು ಮಾಡುತ್ತಾ ಬಂದವರು, ಅದರಲ್ಲಿಯೂ ತಮ್ಮ ತನದ ಮೂಲಕ ಗೆಲುವು ದಾಖಲಿಸಿರುವವರು ಅಶೋಕ್ ಕಡಬ. ಇಂಥಾ ನಿರ್ದೇಶಕರು ಪಕ್ಕಾ ಮಾಸ್ ಕಥನದತ್ತ ಹೊರಳಿದಾಗ ಸಹಜವಾಗಿಯೇ ಕುತೂಹಲ ಮೂಡಿಕೊಳ್ಳುತ್ತೆ. ಅಶೋಕ್ ಕಡಬ ʻಸತ್ಯಂʼ ಎಂಬ ಪಕ್ಕಾ ಮಾಸ್ ಥ್ರಿಲ್ಲರ್ ಕಥಾನಕವನ್ನು ಕೈಗೆತ್ತಿಕೊಂಡಾಗಲೂ ಇಂಥಾದ್ದೇ ಛಳುಕು ಮೂಡಿಕೊಂಡಿತ್ತು. ಅದು ಟೀಸರ್ ಬಿಡುಗಡೆಯಾದಾಕ್ಷಣ ಮತ್ತಷ್ಟು ತೀವ್ರಗೊಂಡಿತ್ತು. ಮಿಲಿಯನ್ನುಗಟ್ಟಲೆ ವೀವ್ಸ್ ಪಡೆದುಕೊಳ್ಳುವ ಮೂಲಕ ಸತ್ಯಂ ಸೃಷ್ಟಿಸಿದ್ದ ಸಂಚಲನ ಸಣ್ಣದ್ದೇನಲ್ಲ.

ವಿಶೇಷವೆಂದರೆ, ಈ ಸಿನಿಮಾದಲ್ಲಿಯೂ ಪಂಜುರ್ಲಿ ದೈವದ ಆರಾಧನೆಯ ಕಥೆಯಿದೆ. ಅದರ ಸುತ್ತ ಮೈನವಿರೇಳಿಸುವ, ಸಲೀಸಾಗಿ ಅಂದಾಜಿಸಲಾಗದ ಕಥನವನ್ನು ಅಶೋಕ್ ಕಡಬ ದೃಷ್ಯವಾಗಿಸಿದ್ದಾರಂತೆ.
ಶ್ರೀ ಮಾತಾ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ಮಹಾಂತೇಶ್ ವಿ.ಕೆ ನಿರ್ಮಾಣ ಮಾಡಿರುವ ಸತ್ಯಂ ಕುಟುಂಬ ಸಮೇತರಾಗಿ ನೋಡುವ, ಎಲ್ಲ ವರ್ಗದ ಪ್ರೇಕ್ಷಕರನ್ನೂ ಆವರಿಸಿಕೊಳ್ಳುವ ಗುಣ ಹೊಂದಿರುವ ಚಿತ್ರವಂತೆ.

ವಿಶೇಷವೆಂದರೆ, ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಸತ್ಯಂಗೂ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿನೆಟೆಕ್ ಸೂರಿ ಛಾಯಾಗ್ರಹಣ, ಸಂತೋಷ್ ಬಾಲರಾಜ್, ರಂಜಿನಿ ರಾಘವನ್, ಸುಮನ್, ಸೈಯಾಜಿ ಶಿಂಧೆ, ಪವಿತ್ರಾ ಲೋಕೇಶ್, ಅವಿನಾಶ್, ವಿನಯಾ ಪ್ರಸಾದ್, ಮುಖ್ಯಮಂತ್ರಿ ಚಂದ್ರು, ಎಂ.ಎನ್ ಲಕ್ಷ್ಮಿದೇವಿ, ಶೃಂಗೇರಿ ರಾಮಣ್ಣ, ತನುಶ್ರೀ, ಎಂ.ಎಸ್ ಉಮೇಶ್, ಬಸವರಾಜ್ ಕಟ್ಟಿ, ಮೀನಾಕ್ಷಿ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಇದೀಗ ಪೋಸ್ಟ್ ಪ್ರಡಕ್ಷನ್ ಕೆಲಸ ಕಾರ್ಯ ಸಂಪೂರ್ಣವಾಗಿ ಮುಗಿದಿದೆ. ಚುನಾವಣಾ ಭರಾಟೆ, ಐಪಿಎಲ್ ಹಂಗಾಮದ ನಡುವೆ ತಿಂಗಳೊಪ್ಪತ್ತಿನಲ್ಲಿಯೇ ಸತ್ಯಂ ಅನ್ನು ತೆರೆಗಾಣಿಸಲು ಚಿತ್ರ ತಂಡ ತಯಾರಿ ನಡೆಸುತ್ತಿದೆ. ಅತೀ ಶೀಘ್ರದಲ್ಲಿ ಸತ್ಯಂ ಬಿಡುಗಡೆ ದಿನಾಂಕ ಜಾಹೀರಾಗಲಿದೆ.

Continue Reading

ಟಾಲಿವುಡ್

Samantha Ruth Prabhu: ಬೆತ್ತಲೆ ಫೋಟೊ ಅಪ್​ಲೋಡ್ ಮಾಡಿದ್ರಾ ಸಮಂತಾ?

Samantha Ruth Prabhu: ಇತ್ತೀಚೆಗಷ್ಟೇ ಸಮಂತಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ‘ಫಾರ್ ಇನ್‌ಫ್ರಾರೆಡ್ ಸೌನಾ'(Far Infrared Sauna) ಉಪಯೋಗಗಳು ಎಂದು ಬರೆದು ಅರೆಬೆತ್ತಲೆ ಇರುವ ಫೋಟೊ ಶೇರ್‌ ಮಾಡಿಕೊಂಡಿದ್ದರು. ಯುವತಿ ಸಂಪೂರ್ಣ ಬೆತ್ತಲಾಗಿ ಬಾತ್‌ಟಬ್‌ನಲ್ಲಿ ಕುಳಿತಿರುವಂತೆ ಫೋಟೊ ವೈರಲ್ ಆಗುತ್ತಿದೆ. ಆದರೆ ಮುಖ ಮಾತ್ರ ಕಾಣುತ್ತಿರಲಿಲ್ಲ. .ಖುದ್ದು ಸಮಂತಾ ಈ ಫೋಟೊ ಹಾಕಿ ಡಿಲೀಟ್ ಮಾಡಿದ್ದಾರೆ ಎಂದು ಕೆಲವರು ವೈರಲ್ ಮಾಡುತ್ತಿದ್ದಾರೆ.

VISTARANEWS.COM


on

Samantha Ruth Prabhu Fake Viral Nude Pic
Koo

ಬೆಂಗಳೂರು: ಸಮಂತಾ (Samantha Ruth Prabhu) ಮಯೋಸಿಟಿಸ್‌ ಕಾಯಿಲೆಯಿಂದ ಬಳಲುತ್ತಿರುವುದು ಗೊತ್ತೇ ಇದೆ. ಸಮಂತಾ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಬಗ್ಗೆ ಮಾಹಿತಿ ನೀಡುತ್ತಾರೆ. ಈ ಬಗ್ಗೆ ಪಾಡ್‌ಕಾಸ್ಟ್‌ ನಡೆಸುತ್ತಾರೆ. ಈ ಮಧ್ಯೆ ಸಮಂತಾ ಅರೆಬೆತ್ತಲೆ ಫೋಟೊ ಒಂದು ವೈರಲ್ ಆಗಿದೆ. ಸಮಂತಾ ಇನ್​ಸ್ಟಾಗ್ರಾಮ್ ಸ್ಟೇಟಸ್​ಗೆ ಹಾಕಿ ನಂತರ ಡಿಲೀಟ್ ಮಾಡಿದ್ದಾರೆ ಎಂದು ಕೆಲವರು ಹೇಳಿದ್ದಾರೆ. ಆದರೆ ಈ ಫೋಟೊ ನಕಲಿ ಎಂದು ಹೇಳಲಾಗುತ್ತಿದೆ.

ಇತ್ತೀಚೆಗಷ್ಟೇ ಸಮಂತಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ‘ಫಾರ್ ಇನ್‌ಫ್ರಾರೆಡ್ ಸೌನಾ'(Far Infrared Sauna) ಉಪಯೋಗಗಳು ಎಂದು ಬರೆದು ಫೋಟೊ ಹೀಗೆ ಮುಂತಾದ ವಿವಿಧ ಉದ್ದೇಶಗಳಿಗಾಗಿ ಜನರು ಬಾತ್‌ ಟಬ್‌ನಲ್ಲಿ ಸ್ವಲ್ಪ ಸಮಯ ಇರುತ್ತಾರೆ ಎಂದು ಬರೆದುಕೊಂಡಿದ್ದಾರೆ. ಆದರೆ ಈ ಫೋಟೊ ಜತಗೆ ಸಮಂತಾ ಸಂಪೂರ್ಣ ಬೆತ್ತಲಾಗಿರುವ ಫೋಟೊ ಪೋಸ್ಟ್ ಮಾಡಿ ಕೂಡಲೇ ಡಿಲೀಟ್ ಮಾಡಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ.

ಯುವತಿ ಸಂಪೂರ್ಣ ಬೆತ್ತಲಾಗಿ ಬಾತ್‌ಟಬ್‌ನಲ್ಲಿ ಕುಳಿತಿರುವಂತೆ ಫೋಟೊ ವೈರಲ್ ಆಗುತ್ತಿದೆ. ಆದರೆ ಮುಖ ಮಾತ್ರ ಕಾಣುತ್ತಿರಲಿಲ್ಲ. .ಖುದ್ದು ಸಮಂತಾ ಈ ಫೋಟೊ ಹಾಕಿ ಡಿಲೀಟ್ ಮಾಡಿದ್ದಾರೆ ಎಂದು ಕೆಲವರು ವೈರಲ್ ಮಾಡುತ್ತಿದ್ದಾರೆ. ಆದರೆ ಇದೆಲ್ಲಾ ಸುಳ್ಳು. ಆಕೆಯ ಅಂತಹ ಯಾವುದೇ ಫೋಟೊ ಪೋಸ್ಟ್ ಮಾಡಿಲ್ಲ. ಕಿಡಿಗೇಡಿಗಳು ಈ ರೀತಿ ಫೋಟೊ ವೈರಲ್ ಮಾಡುತ್ತಿದ್ದಾರೆ ಎನ್ನುವ ಚರ್ಚೆಯೂ ನಡೀತಿದೆ.

ಈ ಬಗ್ಗೆ ಟ್ವಟರ್‌ನಲ್ಲಿ ಭಾರಿ ಚರ್ಚೆಗಳು ಆಗುತ್ತಿದೆ. “ದಯವಿಟ್ಟು ಈ ರೀತಿಯ ಚಟುವಟಿಕೆಗಳನ್ನು ಮಾಡುವ ಮೂಲಕ ನಿಮ್ಮ ಮೆಚ್ಚಿನ ನಟಿಯ ಹೆಸರನ್ನು ಹಾಳು ಮಾಡಬೇಡಿ! ಅವರೂಕೂ ಮಹಿಳೆ. ಅಗೌರವ ಮಾಡಬೇಡಿʼʼಎಂದು ಕಮೆಂಟ್‌ ಮಾಡುತ್ತಿದ್ದಾರೆ. ʻʻನಾವೆಲ್ಲರೂ ನಿಮ್ಮೊಂದಿಗೆ ನಿಲ್ಲುತ್ತೇವೆʼʼಎಂದು ನಟಿಗೆ ಸಾಥ್‌ ಕೊಟ್ಟಿದ್ದಾರೆ. ಈ ಪೋಸ್ಟ್ ಬಗ್ಗೆ ಸಮಂತಾ ಇನ್ನೂ ಪ್ರತಿಕ್ರಿಯಿಸಿಲ್ಲ.

ಇದನ್ನೂ ಓದಿ: Urfi Javed: ಉರ್ಫಿ ʻಮ್ಯಾಜಿಕ್ʼ ಡ್ರೆಸ್‌ಗೆ ಸಮಂತಾ ಮೆಚ್ಚುಗೆ; ಗೌನ್‌ನಿಂದ ಹಾರಿತು ಬಣ್ಣದ ಚಿಟ್ಟೆ!

ನಟಿ ಇತ್ತೀಚೆಗೆ ತಮ್ಮ 37 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ತನ್ನ ಆತ್ಮೀಯ ಸ್ನೇಹಿತರೊಂದಿಗೆ ಅಥೆನ್ಸ್‌ನಲ್ಲಿ ಭರ್ಜರಿಯಾಗಿ ಜನುಮದಿನ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ʻಬಂಗಾರಂʼ ಸಿನಿಮಾವನ್ನು ನಿರ್ಮಿಸಿ ನಟಿಸಲಿದ್ದೇನೆ ಎಂದು ಅವರು ಬಹಿರಂಗಪಡಿಸಿದ್ದಾರೆ.

ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ ನಟಿ ಸಮಂತಾ ಯೋಗ, ಧ್ಯಾನ, ಕುದುರೆ ಸವಾರಿ ಮತ್ತು ಕಿಕ್ ಬಾಕ್ಸಿಂಗ್ ಕಡೆಗೆ ಗಮನಹರಿಸುತ್ತಿದ್ದಾರೆ. ತಾವು ಕಲಿತ ಸಮರ ಕಲೆಗಳ ಪ್ರದರ್ಶನದ ವಿಡಿಯೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ನಟಿ ಸಮಂತಾ (Samantha Kickboxing) ಇದಕ್ಕೆ ‘ಒನ್ ಡೇ ಎಟ್ ಅ ಟೈಮ್ ‘ ಎಂಬ ಶೀರ್ಷಿಕೆ ನೀಡಿದ್ದಾರೆ.

ನಟಿ ಸಮಂತಾ ನಟನಾ ವೃತ್ತಿಗೆ ವಿದಾಯ ಹೇಳಿಲ್ಲ, ಬದಲಾಗಿ ಸ್ವಲ್ಪ ವಿರಾಮ ತೆಗೆದುಕೊಂಡಿದ್ದಾರೆ ಅಷ್ಟೇ. ನಟಿ ಈಗಾಗಲೇ ʻಸಿಟಾಡೆಲ್ ಇಂಡಿಯಾ: ಹನಿ ಬನ್ನಿʼ ವೆಬ್ ಸರಣಿಯಲ್ಲಿ ನಟಿಸಿದ್ದು ಅದರ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇದರಲ್ಲಿ ಸಮಂತಾ ಜತೆ ವರುಣ್ ಧವನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಜತೆಗೆ ಸಿಕಂದರ್ ಖೇರ್, ಸಾಕಿಬ್ ಸಲೀಮ್ ಮತ್ತು ಕೇ ಕೇ ಮೆನನ್ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ.

Continue Reading
Advertisement
Lok Sabha Election 2024
ಪ್ರಮುಖ ಸುದ್ದಿ6 mins ago

Lok Sabha Election 2024: ಸಂಜೆ 5ಗಂಟೆವರೆಗೆ ಶೇ.66.05 ವೋಟಿಂಗ್‌; ಚಿಕ್ಕೋಡಿಯಲ್ಲಿ ಅತಿ ಹೆಚ್ಚು

School Jobs
ಪ್ರಮುಖ ಸುದ್ದಿ11 mins ago

School Jobs: 25 ಸಾವಿರ ಶಿಕ್ಷಕರ ವಜಾ ಆದೇಶಕ್ಕೆ ಸುಪ್ರೀಂ ತಡೆ; ಮಮತಾ ಸರ್ಕಾರಕ್ಕೆ ಚಾಟಿ

Karnataka Weather Forecast
ಮಳೆ15 mins ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Akshaya Tritiya 2024
ಫ್ಯಾಷನ್17 mins ago

Akshaya Tritiya 2024: ಅಕ್ಷಯ ತೃತೀಯದಂದು ಬಂಗಾರ ಖರೀದಿಸುವವರಿಗೆ ಇಲ್ಲಿದೆ ಉಪಯುಕ್ತ ಟಿಪ್ಸ್‌

T20 world Cup
ಪ್ರಮುಖ ಸುದ್ದಿ25 mins ago

T20 World Cup : ಬುಮ್ರಾಗೆ ವಿಶ್ರಾಂತಿ ನೀಡಲು ನಿರಾಕರಿಸಿದ ಮುಂಬೈ ಇಂಡಿಯನ್ಸ್​; ವಿಶ್ವ ಕಪ್​ ಆಡಲು ಸಮಸ್ಯೆ

Lok Sabha Election 2024
ಬೀದರ್‌36 mins ago

Lok Sabha Election 2024: ಭಾಲ್ಕಿಯಲ್ಲಿ ಖಂಡ್ರೆ ಕುಟುಂಬದಿಂದ ತಾತ, ಮಗ, ಮೊಮ್ಮಗ ಮತದಾನ

lok sabha Election 2024 Actor Rishb Shetty
Lok Sabha Election 202438 mins ago

Lok Sabha Election 2024: ಓದಿದ ಶಾಲೆಯಲ್ಲಿ ಮತ ಹಾಕಿದ ನಟ ರಿಷಬ್‌ ಶೆಟ್ಟಿ; ಕಾಂತಾರ 2 ಸೀಕ್ರೆಟ್‌ ರಿವೀಲ್‌!

Prajwal Revanna Case Victim found at relative house Not in a farmhouse Sa Ra Mahesh Explosive Information
ರಾಜಕೀಯ46 mins ago

Prajwal Revanna Case: ಸಂತ್ರಸ್ತ ಮಹಿಳೆ ಸಿಕ್ಕಿದ್ದು ಸಂಬಂಧಿಕರ ಮನೆಯಲ್ಲಿ! ತೋಟದ ಮನೆಯಲ್ಲಲ್ಲ; ಸಾ.ರಾ. ಮಹೇಶ್‌ ಸ್ಫೋಟಕ ಮಾಹಿತಿ

MS Dhoni
ಪ್ರಮುಖ ಸುದ್ದಿ1 hour ago

MS Dhoni : ಮಹೇಂದ್ರ ಸಿಂಗ್​ ಧೋನಿಗೆ ಗಾಯ, ಆಂತರಿಕ ಮಾಹಿತಿ ಬಹಿರಂಗ

Lok sabha Election 2024
Lok Sabha Election 20241 hour ago

Lok Sabha Election 2024: ಮತದಾನಕ್ಕೆ ಬಂದು ಇವಿಎಂಗೆ ಬೆಂಕಿ ಹಾಕಿದ ಯುವಕ; ಸುರಪುರದಲ್ಲಿ ಕಲ್ಲು ತೂರಾಟ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ15 mins ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ2 hours ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ23 hours ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ24 hours ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ1 day ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ2 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ2 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ2 days ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

ಟ್ರೆಂಡಿಂಗ್‌