Supreme Court: ಜಡ್ಜ್ ನೇಮಕಾತಿ, ಮತ್ತೆ ಕೇಂದ್ರ-ಸುಪ್ರೀಂ ಜಟಾಪಟಿ! 10 ತಿಂಗಳಾದ್ರೂ ಶಿಫಾರಸು ಕ್ಲಿಯರ್ ಮಾಡಿಲ್ಲ ಸರ್ಕಾರ Vistara News

ಕೋರ್ಟ್

Supreme Court: ಜಡ್ಜ್ ನೇಮಕಾತಿ, ಮತ್ತೆ ಕೇಂದ್ರ-ಸುಪ್ರೀಂ ಜಟಾಪಟಿ! 10 ತಿಂಗಳಾದ್ರೂ ಶಿಫಾರಸು ಕ್ಲಿಯರ್ ಮಾಡಿಲ್ಲ ಸರ್ಕಾರ

Supreme Court: ಜಡ್ಜ್ ನೇಮಕಾತಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ಶಿಫಾರಸು ಮಾಡಿರುವ ಹೆಸರಗಳನ್ನು ವಾಪಸ್ ಕೊಲಿಜಿಯಂಗೆ ಕಳುಹಿಸಲು ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ.

VISTARANEWS.COM


on

Supreme Court
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಜಡ್ಜ್‌ಗಳ ನೇಮಕಾತಿ ವಿಷಯಕ್ಕೆ (Appointment of Judges) ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ (Supreme Court) ಹಾಗೂ ಕೇಂದ್ರ ಸರ್ಕಾರ (Central Government) ನಡುವೆ ಮತ್ತೊದು ಸುತ್ತಿನ ಜಟಾಪಟಿ ಶುರುವಾಗುವ ಸಾಧ್ಯತೆಗಳಿವೆ. ಹೈಕೋರ್ಟ್‌ ಶಿಫಾರಸಗಳನ್ನು (High court Recommendations) ಕೊಲಿಜಿಯಂಗೆ (Collegium) ಏಕೆ ಕಳುಹಿಸಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಮಂಗಳವಾರ ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಹೈಕೋರ್ಟ್‌ ನ್ಯಾಯಮೂರ್ತಿಗಳ ಹೆಸರು ಅಂತಿಮಗೊಳಿಸುವ ಸಂಬಂಧ ಕೇಂದ್ರ ಸರ್ಕಾರವು ವಿಳಂ ಧೋರಣೆಯನ್ನು ಅನುಸರಿಸುತ್ತಿದೆ ಎಂದು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರಿದ್ದ ಪೀಠವು ಹೇಳಿದೆ. ಅಲ್ಲದೇ ಈ ವಿಷಯವನ್ನು ಸುಪ್ರೀಂ ಕೋರ್ಟ್ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ತಿಳಿಸಿದೆ.

ಹೆಸರುಗಳನ್ನು ತೆರವುಗೊಳಿಸುವಲ್ಲಿ ಕೇಂದ್ರವು ವಿಳಂಬ ಮಾಡುತ್ತಿದೆ ಎಂದು ಆರೋಪಿಸಿರುವ ಅರ್ಜಿಗಳನ್ನು ಆಲಿಸಿದ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರ ಪೀಠವು ಈ ವಿಷಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದರು. ಹೈಕೋರ್ಟ್‌ನಿಂದ ಶಿಫಾರಸು ಮಾಡಿದ 80 ಹೆಸರುಗಳು 10 ತಿಂಗಳ ಅವಧಿಗೆ ಬಾಕಿ ಉಳಿದಿವೆ ಎಂದು ನ್ಯಾಯಮೂರ್ತಿ ಕೌಲ್ ಕೇಂದ್ರ ಸರ್ಕಾರವನ್ನು ಉದ್ದೇಶಿಸಿ ಹೇಳಿದರು.

ಹೆಸರನ್ನು ತೆರವುಗೊಳಿಸುವುದರಲ್ಲಿ ಕೇಂದ್ರ ಸರ್ಕಾರದ ವಿಳಂಭವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠವು, 26 ನ್ಯಾಯಾಧೀಶರ ವರ್ಗಾವಣೆ ಮತ್ತು ‘ಸೂಕ್ಷ್ಮ ಹೈಕೋರ್ಟ್’ನಲ್ಲಿ ಮುಖ್ಯ ನ್ಯಾಯಮೂರ್ತಿ ನೇಮಕ ಬಾಕಿ ಇದೆ ಎಂದು ಪೀಠ ಹೇಳಿದೆ. ಹೈಕೋರ್ಟ್ ಶಿಫಾರಸು ಮಾಡಿದ್ದರೂ ಕೊಲಿಜಿಯಂಗೆ ಕಳುಹಿಸಲಾಗದ ಎಷ್ಟು ಹೆಸರುಗಳು ಬಾಕಿ ಉಳಿದಿವೆ ಎಂಬ ಮಾಹಿತಿ ನನ್ನ ಬಳಿ ಇದೆ ಎಂದು ನ್ಯಾಯಮೂರ್ತಿ ಕೌಲ್ ಹೇಳಿದರು.

ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು ಕೇಂದ್ರ ಸರ್ಕಾರದ ಪ್ರತಿಕ್ರಿಯೆಗೆ ವಾರ ಕಾಲ ಸಮಯ ಕೇಳಿದರು. ಪೀಠವು ಕೇಂದ್ರ ಸರ್ಕಾರಕ್ಕೆ ಎರಡು ವಾರಗಳ ಸಮಯವನ್ನು ನೀಡಿದೆ. ಅಲ್ಲದೇ, ಕೇಂದ್ರ ಸರ್ಕಾರದ ಪ್ರತಿಕ್ರಿಯೆಯೊಂದಿಗೆ ಮರಳಬೇಕು ಎಂದು ಅಟಾರ್ನಿ ಜನರಲ್‌ಗೆ ಸೂಚಿಸಿ, ವಿಚಾರಣೆಯನ್ನು ಅಕ್ಟೋಬರ್ 9ಕ್ಕೆ ಮುಂದೂಡಿತು.

ಈ ಸುದ್ದಿಯನ್ನೂ ಓದಿ: Supreme Court: ಮುಸ್ಲಿಂ ಬಾಲಕನಿಗೆ ಶಾಲೆಯಲ್ಲಿ ಕಪಾಳ ಮೋಕ್ಷ, ಇದು ದೇಶದ ಅಂತಃಸಾಕ್ಷಿ ಅಲುಗಾಡಿಸುವ ಕೇಸ್!

ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ನಡೆದುಕೊಳ್ಳುತ್ತಿರುವ ರೀತಿಗೆ ನಾನು ಬಹಳಷ್ಟು ಹೇಳಬೇಕಿದೆ. ಆದರೆ, ನನ್ನಷ್ಟಕ್ಕೆ ತಡೆದುಕೊಳ್ಳುತ್ತಿದ್ದೇನೆ. ನಾನು ಶಾಂತವಾಗಿದ್ದೇನೆ. ಯಾಕೆಂದರೆ, ಅಟಾರ್ನಿ ಜನರಲ್ ಒಂದು ವಾರ ಸಮಯ ಕೇಳಿದ್ದಾರೆ. ಆದರೆ, ಮುಂದಿನ ದಿನಾಂಕದಲ್ಲಿ ನಾನು ಸುಮ್ಮನೆ ಇರಲಾರೆ ಎಂದು ಜಸ್ಟೀಸ್ ಕೌಲ್ ಅವರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

ನ್ಯಾಯಮೂರ್ತಿಗಳ ನೇಮಕಾತಿ ವಿಷಯವು ಯಾವಾಗಲೂ ಸುಪ್ರೀಂ ಕೋರ್ಟ್ ಹಾಗೂ ಕಾರ್ಯಾಂಗದ ನಡುವಿನ ಜಟಾಪಟಿ ವಿಷಯವಾಗಿ ಮಾರ್ಪಟ್ಟಿದೆ. ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಕೇಂದ್ರ ಸರ್ಕಾರದ ಪಾತ್ರ ಇರಬೇಕು ಎಂದು ಕೆಲವು ಕೇಂದ್ರ ಸಚಿವರು ವಾದಿಸುತ್ತಾರೆ. ನ್ಯಾಯಾಧೀಶರ ನೇಮಕಾತಿಯಲ್ಲಿ ಸರ್ಕಾರದ ದೊಡ್ಡ ಪಾತ್ರವನ್ನು ನೀಡುವ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ಅಕ್ಟೋಬರ್ 2015 ರಲ್ಲಿ ರದ್ದುಗೊಳಿಸಿತ್ತು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Atrocity on Lawyer: ವಕೀಲರ ಮೇಲಿನ ಹಲ್ಲೆಗೆ ಹೈಕೋರ್ಟ್‌ ಗರಂ; 6 ಪೊಲೀಸರ ಅಮಾನತು

Atrocity on Lawyer : ಚಿಕ್ಕಮಗಳೂರಿನ ವಕೀಲ ಪ್ರೀತಂ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಆರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಒಟ್ಟಾರೆ ಘಟನೆಯ ಬಗ್ಗೆ ಹೈಕೋರ್ಟ್‌ ಗರಂ ಆಗಿದೆ.

VISTARANEWS.COM


on

Lawyer preetham
Koo

ಬೆಂಗಳೂರು: ಚಿಕ್ಕಮಗಳೂರಿನ (Chikkamagaluru News) ವಕೀಲ ಪ್ರೀತಂ ಅವರ ಮೇಲಿನ ಪೊಲೀಸರ ದೌರ್ಜನ್ಯ (Atrocity on Lawyer) ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್‌ (Karnataka High court) ಶುಕ್ರವಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತುರ್ತು ವಿಚಾರಣೆ ನಡೆಸಿತು. ಈ ನಡುವೆ ಪ್ರಕರಣಕ್ಕೆ ಸಂಬಂದಿಸಿ ಆರು ಪೊಲೀಸರನ್ನು ಅಮಾನತು (6 police suspended) ಮಾಡಲಾಗಿದೆ.

“ಪ್ರೀತಂ ಮೇಲಿನ ಪೊಲೀಸರ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುವುದು” ಎಂದು ಅಡ್ವೊಕೇಟ್‌ ಜನರಲ್‌ ಅವರು ಮೆಮೊದಲ್ಲಿ ತಿಳಿಸಿರುವುದರಿಂದ ಅರ್ಜಿ ವಿಚಾರಣೆಯನ್ನು ಮುಂದಿನ ಮಂಗಳವಾರಕ್ಕೆ ಮುಂದೂಡಲಾಗಿದೆ ಎಂದು ನ್ಯಾಯಾಲಯ ತಿಳಿಸಿತು.

ವಕೀಲ ಪ್ರೀತಂ ಮೇಲಿನ ಅಮಾನವೀಯ ಹಲ್ಲೆಗೆ ಸಂಬಂಧಿಸಿದಂತೆ ಬೆಂಗಳೂರಿನ ವಕೀಲರ ಸಂಘ ನೀಡಿದ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ತಕ್ಷಣ ಕಾರ್ಯಪ್ರವೃತ್ತವಾಗಿ ಸ್ವಯಂಪ್ರೇರಿತ ಪ್ರಕರಣವನ್ನಾಗಿಸಿ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಸಂತ್ರಸ್ತ ವಕೀಲ ಪ್ರೀತಂ ಅವರ ಹೇಳಿಕೆ ದಾಖಲಿಸಿಕೊಳ್ಳಲಾಗಿದ್ದು, ಅದರ ಅನ್ವಯ ಐಪಿಸಿ ಸೆಕ್ಷನ್‌ಗಳಾದ 506, 341, 307, 324, 326 ಮತ್ತು 504 ಜೊತೆಗೆ 149 ಅಡಿ ಚಿಕ್ಕಮಗಳೂರು ಟೌನ್‌ ಠಾಣೆಯಲ್ಲಿ ಡಿಸೆಂಬರ್‌ 1ರ ಮಧ್ಯರಾತ್ರಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಗಂಭೀರತೆ ಅರಿತು ಮತ್ತು ಕರ್ತವ್ಯಲೋಪದ ಮೇಲೆ ಆರು ಮಂದಿ ಪೊಲೀಸರನ್ನು ಡಿಸೆಂಬರ್‌ 1ರಂದು ಅಮಾನತು ಮಾಡಲಾಗಿದೆ. ಈ ಪೈಕಿ ಒಬ್ಬರು ಪಿಎಸ್‌ಐ, ಒಬ್ಬರು ಸಹಾಯಕ ಪೊಲೀಸ್‌ ಇನ್‌ಸ್ಪೆಕ್ಟರ್‌ ಮತ್ತು ನಾಲ್ವರು ಪೇದೆಗಳಾಗಿದ್ದಾರೆ. ಪ್ರಕರಣದ ತನಿಖೆಯನ್ನು ಚಿಕ್ಕಮಗಳೂರು ಉಪವಿಭಾಗದ ಡಿವೈಎಸ್‌ಪಿ ಎಚ್‌ ಎಂ ಶೈಲೇಂದ್ರ ಅವರಿಗೆ ವಹಿಸಲಾಗಿದೆ. ಚಿಕ್ಕಮಗಳೂರಿನ ಮಲ್ಲೇಗೌಡ ಜಿಲ್ಲಾಸ್ಪತ್ರೆಯ ವೈದ್ಯಕೀಯ ಅಧಿಕಾರಿ ಅವರಿಂದ ವರದಿಯನ್ನೂ ತರಿಸಿಕೊಳ್ಳಲಾಗಿದೆ ಎಂದು ಎಜಿ ಸಲ್ಲಿಸಿರುವ ಮೆಮೊದಲ್ಲಿ ವಿವರಿಸಲಾಗಿದೆ.

ನ್ಯಾಯಾಲಯದಲ್ಲಿ ಹಾಜರಿದ್ದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಆರ್‌ ಹಿತೇಂದ್ರ ಅವರಿಂದ ಸೂಚನೆಯನ್ನು ಪಡೆದ ಅಡ್ವೊಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ ಅವರು ಎಫ್‌ಐಆರ್‌ ದಾಖಲಿಸಿದ ಬಳಿಕ ಪ್ರಕರಣವನ್ನು ನೋಂದಾಯಿಸಲಾಗಿದೆ ಎನ್ನುವ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಿದ್ದಾರೆ. ಡಿವೈಎಸ್‌ಪಿ ಅವರು ಅತ್ಯಂತ ಕಡಿಮೆ ಅವಧಿಯಲ್ಲಿ ಸೂಕ್ತ ಕ್ರಮಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ ಎಂಬ ಅಂಶವನ್ನು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿತು.

ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ಅಧ್ಯಕ್ಷ ವಿಶಾಲ್‌ ರಘು ಮತ್ತು ಕೆಎಸ್‌ಬಿಸಿ ಕಾರ್ಯದರ್ಶಿ ಹಾಗೂ ಹಿರಿಯ ವಕೀಲ ಎಸ್‌ ಬಸವರಾಜ ಅವರು ವಕೀಲರ ಮೇಲಿನ ದೌರ್ಜನ್ಯ ನಿಷೇಧ ಮಸೂದೆಯು ಸಕ್ಷಮ ಪ್ರಾಧಿಕಾರದ ಮುಂದೆ ಪರಿಗಣನೆಗೆ ಬಾಕಿ ಇದೆ ಎಂದು ತಿಳಿಸಿದ್ದಾರೆ. ಹೀಗಾಗಿ, ಈ ಹಂತದಲ್ಲಿ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಲು ಅಥವಾ ಯಾವುದೇ ನಿರ್ದೇಶನ ನೀಡುವುದು ನಮಗೆ ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಚಿಕ್ಕಮಗಳೂರಿನ ಪ್ರತಿಭಟನಾ ಸ್ಥಳದಿಂದ ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾಗಿದ್ದ ಎಎಬಿ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ ಅವರಿಗೆ ಅಡ್ವೊಕೇಟ್‌ ಜನರಲ್‌ ಅವರು ವೈಯಕ್ತಿಕವಾಗಿ ಪ್ರಕರಣ ಪರಿಶೀಲಿಸುತ್ತಿದ್ದು, ಯಾವುದೇ ತೆರನಾದ ಗಂಭೀರ ಕ್ರಮಗಳನ್ನು ಕೈಗೊಳ್ಳದಂತೆ ವಕೀಲರಿಗೆ ತಿಳಿಸಲಾಗಿದೆ. ನ್ಯಾಯಾಲಯದ ಕೆಲಸದಿಂದ ದೂರ ಉಳಿಯದಂತೆ ವಕೀಲರಿಗೆ ತಿಳಿಸುವಂತೆಯೂ ಸೂಚಿಸಲಾಗಿದೆ. ಇದಕ್ಕೆ ರೆಡ್ಡಿ ಅವರು ಚಿಕ್ಕಮಗಳೂರಿನ ವಕೀಲರ ಸಂಘಕ್ಕೆ ನ್ಯಾಯಾಲಯದ ವಿಚಾರಗಳನ್ನು ತಿಳಿಸಿ, ಕರ್ತವ್ಯಕ್ಕೆ ಮರಳುವಂತೆ ಕೋರಲಾಗುವುದು ಎಂದಿದ್ದಾರೆ ಎಂದು ಆದೇಶದಲ್ಲಿ ದಾಖಲಿಸಲಾಗಿದೆ.

ಏನಿದು ಹೆಲ್ಮೆಟ್‌ ವಿವಾದ, ಪೊಲೀಸರಿಂದ ಹಲ್ಲೆ?

ಯುವ ವಕೀಲ ಪ್ರೀತಂ ಅವರು ಗುರುವಾರ ಹೆಲ್ಮೆಟ್‌ ಧರಿಸದೇ ದ್ವಿಚಕ್ರ ವಾಹನ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರೀತಂ ನಡುವೆ ವಾಕ್ಸಮರ ನಡೆದಿದೆ. ದಂಡ ಪಾವತಿಸುವುದಾಗಿ ಪ್ರೀತಂ ಹೇಳಿದರೂ ಕೇಳದ ಪೊಲೀಸರು ಅವರನ್ನು ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಚಿಕ್ಕಮಗಳೂರಿನಲ್ಲಿ ವಕೀಲರು ನ್ಯಾಯಾಲಯದ ಕಲಾಪದಿಂದ ದೂರ ಉಳಿದು ಪ್ರತಿಭಟನೆ ನಡೆಸಿದ್ದರು. ಈ ಪ್ರಕರಣವನ್ನು ವಕೀಲರು ಗಂಭೀರವಾಗಿ ಪರಿಗಣಿಸಿ‌ ಹೈಕೋರ್ಟ್‌ ಮೊರೆ ಹೊಕ್ಕಿದ್ದರು.

Continue Reading

ಕರ್ನಾಟಕ

Lawyers office : ಮಂಗಳೂರಿನ ಖ್ಯಾತ ನ್ಯಾಯವಾದಿ ಜಿನೇಂದ್ರ ಕುಮಾರ್‌ ಕಚೇರಿ ಈಗ ಬೆಂಗಳೂರಿನಲ್ಲಿ ಆರಂಭ

Lawyers office : ಕಳೆದ ಮೂರು ದಶಕಗಳಿಂದ ಮಂಗಳೂರಿನಲ್ಲಿ ನ್ಯಾಯವಾದಿಯಾಗಿ ದೊಡ್ಡ ಹೆಸರು ಮಾಡಿದ ಜಿನೇಂದ್ರ ಕುಮಾರ್‌ ಅವರು ಈಗ ಹೈಕೋರ್ಟ್‌ ನ್ಯಾಯವಾದಿಯಾಗಿ ಹೆಚ್ಚಿನ ಸೇವೆ ಸಲ್ಲಿಸಲು ಬೆಂಗಳೂರಿನಲ್ಲಿ ಕಚೇರಿಯನ್ನು ಆರಂಭಿಸಿದ್ದಾರೆ.

VISTARANEWS.COM


on

Advocate jinendra kumar office in Bangalore
Koo

ಬೆಂಗಳೂರು: ಮಂಗಳೂರಿನ ಖ್ಯಾತ ನ್ಯಾಯವಾದಿ ಬಿ.‌ ಜಿನೇಂದ್ರ ಕುಮಾರ್‌ (Advocate Jinendra Kumar) ಅವರು ತಮ್ಮ ಕಾರ್ಯ ಚಟುವಟಿಕೆಗಳನ್ನು (Lawyers office) ಬೆಂಗಳೂರಿಗೆ ವಿಸ್ತರಿಸಿದ್ದಾರೆ. ಹೈಕೋರ್ಟ್ ನ್ಯಾಯವಾದಿಯಾಗಿರುವ (High court Advocate) ಜಿನೇಂದ್ರ ಕುಮಾರ್ ಮತ್ತು ವಸುಧಾ ಬಿ ಹಾಗೂ ತಂಡದವರ ನೂತನ ಕಚೇರಿಯನ್ನು (Bangalore office) ಬೆಂಗಳೂರಿನ ಮಲ್ಲೇಶ್ವರದ ಮಂತ್ರಿ ಮಾಲ್ ಎದುರುಗಡೆ ಇರುವ ಶಿರೂರ್ ಪಾರ್ಕ್ ಪಕ್ಕ ಆರಂಭಿಸಲಾಗಿದೆ.

ಕರ್ನಾಟಕ ಸರ್ಕಾರದ ಮಾಹಿತಿ ಹಕ್ಕು ಆಯೋಗದ ಮುಖ್ಯ ಆಯುಕ್ತ ಹಾಗೂ ಕರ್ನಾಟಕ ಸರ್ಕಾರದ ಮಾಜಿ ಕಾನೂನು ಪ್ರಧಾನ ಕಾರ್ಯದರ್ಶಿಯಾಗಿದ್ದ ಎನ್.ಸಿ ಶ್ರೀನಿವಾಸ್ ಕಚೇರಿಯನ್ನು ಉದ್ಘಾಟಿಸಿದರು. ಈ ವೇಳೆ, ಮಂಗಳೂರ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ಪೃಥ್ವಿರಾಜ್ ರೈ, ಆಂತರಿಕ ಭದ್ರತೆಯ ಎಸ್ಪಿ ಐಪಿಎಸ್ ಅಧಿಕಾರಿ ಜಿನೇಂದ್ರ ಖನಗಾವಿ, ರೇಡಿಯೋಲಾಜಿಸ್ಟ್, ಮಣಿಪಾಲ್ ಹೆಲ್ತ್ ಮ್ಯಾಪ್ ಡಯಾಗ್ನಾಸ್ಟಿಕ್ ಮುಖ್ಯಸ್ಥ ಸಂದೀಪ್ ಬಲ್ಲಾಳ್, ಖ್ಯಾತ ಜ್ಯೋತಿಷಿ ಹಾಗೂ ಹಿರಿಯ ಲೆಕ್ಕಪರಿಶೋಧಕ ಎಚ್ ಟಿ ರಾಧಾಕೃಷ್ಣ ಶಾಸ್ತ್ರಿ, ಮತ್ತು ಆದಾಯ ಇಲಾಖೆಯ ಜಂಟಿ ಆಯುಕ್ತಾರಾದ ಸುಧೀಂದ್ರ ರಾವ್ ಉಪಸ್ಥಿತರಿದ್ದರು.

ಕಾನೂನಿನ ಸೇವೆಗೆ ವ್ಯಾಪ್ತಿಯಿಲ್ಲ: ಎನ್ ಸಿ ಶ್ರೀನಿವಾಸ್

ಕಚೇರಿ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಸರ್ಕಾರದ ಮಾಹಿತಿ ಹಕ್ಕು ಆಯೋಗದ ಮುಖ್ಯ ಆಯುಕ್ತ ಎನ್‌.ಸಿ ಶ್ರೀನಿವಾಸ್ ಅವರು, “ಕಾನೂನಿನ ಸೇವೆಗೆ ಯಾವುದೇ ವ್ಯಾಪ್ತಿಗಳಿಲ್ಲ.‌ ವಿದ್ಯಾರ್ಥಿ ಜೀವನದಿಂದ ಹಲವು ಸಮಾಜಮುಖಿ ಹೋರಾಟ ಮಾಡುತ್ತಾ ಬಂದಿರುವ ಜಿನೇಂದ್ರ ಕುಮಾರ್ ಮತ್ತು ತಂಡದರವರು ಸತತವಾಗಿ ಮಂಗಳೂರಿನಲ್ಲಿ ಮೂರು ದಶಕಗಳಿಂದ ಕಾನೂನು ಸೇವೆಯಲ್ಲಿ ಜನಾನುರಾಗಿಯಾಗಿದ್ದಾರೆ. ಈಗ ತಮ್ಮ ಸೇವೆಯನ್ನು ಹೈಕೋರ್ಟ್‌ ನ್ಯಾಯವಾದಿಗಳ ಅವರ ತಂಡ ಬೆಂಗಳೂರಿಗೆ ವಿಸ್ತರಿಸಿದೆʼʼ ಎಂದರು. ಕಳೆದ ಒಂದು ದಶಕಗಳ ಹಿಂದೆ ತಾವು ಮಂಗಳೂರಿನಲ್ಲಿ ನ್ಯಾಯಾಧೀಶರಾಗಿ ಸೇವೆ ಮಾಡಿದ ಸಂದರ್ಭದಲ್ಲಿ ಜಿನೇಂದ್ರ ಅವರ ಒಡನಾಟದ ಬಗ್ಗೆ ನೆನಪು ಮಾಡಿಕೊಂಡರು.

ಜನರ ಸೇವೆಗಾಗಿ ಬೆಂಗಳೂರಿನಲ್ಲಿ ಕಚೇರಿ: ಜಿನೇಂದ್ರ ಖನಗಾವಿ

ಕಚೇರಿಯ ಬಗ್ಗೆ ಮಾತನಾಡಿದ ಐಪಿಎಸ್ ಅಧಿಕಾರಿ ಜಿನೇಂದ್ರ ಖನಗಾವಿ ಇತ್ತೀಚಿನ ದಿನಗಳಲ್ಲಿ ಕಾನೂನಿನ ಬಗ್ಗೆ ಸಾರ್ವಜನಿಕರಿಗೆ ಅಪಾರ ನಂಬಿಕೆ ಹಾಗೂ ಗೌರವವನ್ನು ನ್ಯಾಯವಾದಿಗಳು ದೊರಕಿಸಿಕೊಟ್ಟಿದ್ದಾರೆ. ಇದರಲ್ಲಿ‌ ಜಿನೇಂದ್ರ ಕುಮಾರ್ ಹಾಗೂ ತಂಡದವರೂ ಸೇರಿದ್ದಾರೆ ಎಂದರು.

ಇದನ್ನೂ ಓದಿ: High court : ನಿಮಗೆ ಆಗದಿದ್ದರೆ, ಬೇರೆಯವರ ವೀರ್ಯ, ಅಂಡಾಣುನಿಂದ ಮಗು ಮಾಡ್ಕೊಬಹುದು!

ಈ ವೇಳೆ ಮಾತನಾಡಿದ ಬಿಜೆಕೆ ಅಸೋಸಿಯೇಟ್ಸ್ ಮುಖ್ಯಸ್ಥರಾದ ಜಿನೇಂದ್ರ ಕುಮಾರ್, ಕಾನೂನು ಸೇವೆ ನೀಡುವಲ್ಲಿ ನನ್ನ ತಂಡದವರ ಸಾಥ್ ಬಹಳಷ್ಟಿದೆ.‌ ಇದೀಗ ನಮ್ಮ‌ಸೇವೆ ರಾಜಧಾನಿಯಲ್ಲೂ ನಡೆಸಲು ಉತ್ಸುಕರಾಗಿದ್ದೇವೆ. ತಮ್ಮೆಲ್ಲರ ಸಹಕಾರ ಬೇಕು ಎಂದು ಕೇಳಿಕೊಂಡರು.

ಕಾರ್ಯಕ್ರಮದಲ್ಲಿ ಬಿಜೆಕೆ ಅಸೋಯೇಟ್ಸ್‌ನ ಬಂಧುವರ್ಗ, ಜಿನೇಂದ್ರ ಕುಮಾರ್ ಅವರ ಕುಟುಂಬ, ಸ್ನೇಹಿತರು, ಅಭಿಮಾನಿ ವರ್ಗ ಉಪಸ್ಥಿತರಿದ್ದರು.‌ ಕಚೇರಿಯ ರಚನೆ ಮತ್ತು ವಿನ್ಯಾಸದ ಬಗ್ಗೆ ಮಾತೃಶ್ರೀ ಬಿಲ್ಡರ್ಸ್ ಮತ್ತು ಇಂಟೀರಿಯರ್ಸ್ ಮಾಲಕರಾದ ಮಾಳ‌ ಹರ್ಷೇಂದ್ರ ಜೈನ್ ಮಾತನಾಡಿದರು. ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಹಿತರಕ್ಷಕ ಘಟಕ ನಿರ್ದೇಶಕ ಸೋಮಶೇಖರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Continue Reading

ಕೋರ್ಟ್

Hate Speeches: ದ್ವೇಷ ಭಾಷಣಗಳ ವಿರುದ್ಧ ಕ್ರಮ ಜರುಗಿಸಲೇಬೇಕು! ಸರ್ಕಾರಗಳಿಗೆ ಸುಪ್ರೀಂ ತಾಕೀತು

Hate Speeches: ದ್ವೇಷ ಭಾಷಣಗಳ ಪ್ರಕರಣಗಳ ಕುರಿತು ಕ್ರಮ ಕೈಗೊಳ್ಳುವಂತೆ ನಿರ್ದೇಶನ ಕೋರಿ ಹಲವರು ಮತ್ತು ಸಂಘ ಸಂಸ್ಥೆಗಳು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದವು.

VISTARANEWS.COM


on

Supreme Court Says than actions must be taken against hate speeches
Koo

ನವದೆಹಲಿ: ಯಾವುದೇ ಮತ್ತು ಎಲ್ಲಾ ರೀತಿಯ ದ್ವೇಷ ಭಾಷಣಗಳ (hate speeches) ವಿರುದ್ಧ ಸರ್ಕಾರಗಳು ಕ್ರಮ ಕೈಗೊಳ್ಳಬೇಕು (Action Must) ಎಂದು ಸುಪ್ರೀಂ ಕೋರ್ಟ್ (Supreme Court) ಬುಧವಾರ ಸ್ಪಷ್ಟವಾಗಿ ಹೇಳಿದೆ. ದ್ವೇಷದ ಭಾಷಣಗಳನ್ನು ನಿಗ್ರಹಿಸಲು ಕಾರ್ಯವಿಧಾನವನ್ನು ಜಾರಿಗೆ ತರಲು ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಫೆಬ್ರುವರಿಯಲ್ಲಿ ವಿಚಾರಣೆ ಮಾಡಲು ಒಪ್ಪಿಗೆ ಸೂಚಿಸಿ, ಈ ಖಡಕ್ ಸೂಚನೆ ನೀಡಿದೆ.

ದ್ವೇಷದ ಭಾಷಣಗಳ ಹಲವಾರು ನಿದರ್ಶನಗಳನ್ನು ಉಲ್ಲೇಖಿಸಿ ಹಲವರು ಮತ್ತು ಗುಂಪುಗಳು ಸಲ್ಲಿಸಿದ ಅರ್ಜಿಗಳ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠವು, “ದ್ವೇಷ ಭಾಷಣಗಳ ಸಮಸ್ಯೆಯ ಬಗ್ಗೆ ನಾವು ಸಮಗ್ರ ಭಾರತದ ಮೇಲ್ವಿಚಾರಣೆಯನ್ನು ಹೊಂದಲು ಸಾಧ್ಯವಿಲ್ಲ. ಭಾರತದಂತಹ ದೊಡ್ಡ ದೇಶದಲ್ಲಿ ಸಮಸ್ಯೆಗಳಿರುತ್ತವೆ. ಆದರೆ ಅದನ್ನು ಎದುರಿಸಲು ನಮಗೆ ಆಡಳಿತಾತ್ಮಕ ಕಾರ್ಯವಿಧಾನವಿದೆಯೇ ಎಂಬುದು ಕೇಳಬೇಕಾದ ಪ್ರಶ್ನೆಯಾಗಿದೆ” ಎಂದು ಹೇಳಿತು.

ಮುಂದಿನ ವರ್ಷದ ಫೆಬ್ರವರಿಯಲ್ಲಿ ಪ್ರಕರಣವನ್ನು ವಿಚಾರಣೆಗೆ ಮುಂದೂಡಿದ ನ್ಯಾಯಮೂರ್ತಿ ಎಸ್‌ವಿಎನ್ ಭಟ್ಟಿ ಅವರನ್ನೊಳಗೊಂಡ ಪೀಠವು, ಕಾನೂನು ಉಲ್ಲಂಘಿಸಿದರೆ ಮುಂದಿನ ಕ್ರಮವು ಏನಾಗಿರುತ್ತದೆ ಎಂಬ ಮಾಹಿತಿ ಸಮಾಜಕ್ಕೆ ಗೊತ್ತಿರಬೇಕು. ನಾವು ಸಮಗ್ರ ಭಾರತದ ಆಧಾರದ ಮೇಲೆ ಈ ಪ್ರಕ್ರಿಯೆಗಳನ್ನು ಹೊಂದಲು ಸಾಧ್ಯವಿಲ್ಲ ಅಥವಾ ಪ್ರತಿ ದಿನ ನಿರ್ವಹಿಸಲು ಸಾಧ್ಯವಿಲ್ಲ. ಯಾಕೆಂದರೆ, ಈ ಕುರಿತಾದ ಅರ್ಜಿಗಳು ದಾಖಲಾಗುತ್ತಲೇ ಇರುತ್ತವೆ. ಹಾಗಾಗಿ, ಇದಕ್ಕೊಂದು ಕಾರ್ಯವಿಧಾನವು ಅಗತ್ಯವಿದೆ ಎಂದು ಹೇಳಿತು.

2018ರ ತೆಹ್ಸೀನ್ ಪೂನಾವಾಲಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿಸ್ತೃತ ನಿರ್ದೇಶನಗಳನ್ನು ಈ ಸಂಬಂಧ ನೀಡಿತ್ತು. ದ್ವೇಷದ ಅಪರಾಧಗಳನ್ನು ತಡೆಗಟ್ಟಲು ಮತ್ತು ಅಪರಾಧಗಳನ್ನು ದಾಖಲಿಸಲು ಸಹ ಜವಾಬ್ದಾರಿಯುತ ನೋಡಲ್ ಅಧಿಕಾರಿಯನ್ನು ನೇಮಿಸುವಂತೆ ನಿರ್ದೇಶ ನೀಡಿತ್ತು.

ಗೋ ರಕ್ಷಕ ಗುಂಪುಗಳಿಂದ ಗುಂಪು ಹತ್ಯೆ ಮತ್ತು ದ್ವೇಷದ ಅಪರಾಧಗಳ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ತೀರ್ಪು ಹೊರ ಬಂದಿತ್ತು. ಗುಂಪು ಹತ್ಯೆ ಮತ್ತು ದ್ವೇಷದ ಅಪರಾಧಗಳ ವಿರುದ್ಧ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳಲು ದೇಶದ ಪ್ರತಿ ಜಿಲ್ಲೆಯಲ್ಲೂ ಪೊಲೀಸ್ ಸೂಪರಿಂಟೆಂಡೆಂಟ್ (ಎಸ್‌ಪಿ) ಶ್ರೇಣಿಗಿಂತ ಕಡಿಮೆಯಿಲ್ಲದ ನೋಡಲ್ ಅಧಿಕಾರಿಯನ್ನು ಹೊಂದಿರಬೇಕೆಂದು ನ್ಯಾಯಾಲಯ ಆಗ ಆದೇಶಿಸಿತ್ತು.

ಈ ನಿರ್ದೇಶನಗಳು ಜಾರಿಯಾಗದ ಕಾರಣ ಅಂದಿನಿಂದ ಅನೇಕ ನ್ಯಾಯಾಂಗ ನಿಂದನಾ ಅರ್ಜಿಗಳು ದಾಖಲಾಗಿವೆ. ಅರ್ಜಿಗಳು ಈಗ ನಡೆಯುತ್ತಿರುವ ವಿಚಾರಣೆಯ ಭಾಗವೇ ಆಗಿವೆ. ಹೀಗೆ ದಾಖಲಾದ ಅರ್ಜಿಗಳಲ್ಲಿ 2018ರ ನಿರ್ದೇಶಗಳನ್ನು ಪಾಲಿಸಲು ವಿಫಲವಾದ ರಾಜ್ಯಗಳ ವಿರುದ್ಧ, ನ್ಯಾಯಾಂಗ ನಿಂದನೆಯ ಅಡಿ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.

ಕಳೆದ ಏಪ್ರಿಲ್‌ನಲ್ಲಿ ಸುಪ್ರೀಂ ಕೋರ್ಟ್, ದೇಶದ ಜಾತ್ಯತೀತ ಸ್ವರೂಪವನ್ನು ಕಾಪಾಡುವ ಅಗತ್ಯವಾಗಿದೆ ಎಂದು ಒತ್ತಿ ಹೇಳುತ್ತಾ, ಯಾವುದೇ ಧರ್ಮದ ಜನರು ಮಾಡಿದ ದ್ವೇಷ ಭಾಷಣಗಳ ವಿರುದ್ಧ ಸ್ವಯಂಪ್ರೇರಿತವಾಗಿ (ಸ್ವಯಂ) ಮೊಕದ್ದಮೆಗಳನ್ನು ದಾಖಲಿಸುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿತ್ತು ಮತ್ತು ಎಚ್ಚರಿಕೆ ಕೂಡ ನೀಡಿತ್ತು.

ಈ ಸುದ್ದಿಯನ್ನೂ ಓದಿ: Karnataka Politics: ದ್ವೇಷ ಭಾಷಣ; ಬಿಜೆಪಿ ಶಾಸಕರಾದ ಅಶ್ವತ್ಥನಾರಾಯಣ, ಹರೀಶ್ ಪೂಂಜಾ ವಿರುದ್ಧ ಎಫ್‌ಐಆರ್‌

Continue Reading

ಕೋರ್ಟ್

ಆರೈಕೆ ಮಾಡದ ಮಗನಿಗೆ ತಾಯಿಯ ಫ್ಲ್ಯಾಟ್ ಖಾಲಿ ಮಾಡಲು ಬಾಂಬೆ ಹೈಕೋರ್ಟ್ ಆದೇಶ

Bombay High court: ಬಾಂಬೆ ಹೈಕೋರ್ಟ್ ಮಹತ್ವದ ಆದೇಶ ನೀಡಿದ್ದು, ತಾಯಿಯನ್ನು ಆರೈಕೆ ಮಾಡದ ಮಗನಿಗೆ ತಾಯಿಯ ಫ್ಲ್ಯಾಟ್ ಖಾಲಿ ಮಾಡುವಂತೆ ಸೂಚಿಸಿದೆ.

VISTARANEWS.COM


on

Bombay High court orders to son to vacate his mother flat
Koo

ಮುಂಬೈ: ತಾಯಿಯನ್ನು (Mother) ಆರೈಕೆ ಮಾಡದ ಪುತ್ರನಿಗೆ, ತಾಯಿಯ ಫ್ಲ್ಯಾಟ್‌ ಖಾಲಿ (Flat Vacate) ಮಾಡುವಂತೆ ಬಾಂಬೆ ಹೈಕೋರ್ಟ್ (Bombay High Court) ಆದೇಶ ಮಾಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ನಾಗರಿಕ ನ್ಯಾಯಮಂಡಳಿಯ (senior citizen tribunal) ಆದೇಶವನ್ನು ಎತ್ತಿ ಹಿಡಿದಿರುವ ಬಾಂಬೆ ಹೈಕೋರ್ಟ್, ಪರೇಲ್‌ನಲ್ಲಿನ (Mumbai Parel) ಬಹುಮಹಡಿಯಲ್ಲಿರುವ ತನ್ನ ತಾಯಿಯ ಫ್ಲ್ಯಾಟ್ ಅನ್ನು ತೆರವು ಮಾಡುವಂತೆ ಮಗನಿಗೆ (Son) ಸ್ಪಷ್ಟವಾಗಿ ಸೂಚಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ನಾಗರಿಕ ನ್ಯಾಯಮಂಡಳಿ ತೀರ್ಪು ನೀಡಿ, ಭೋಯಿವಾಡದ ಸಂಪದಾ ಹೈಟ್ಸ್‌ನಲ್ಲಿರುವ ತನ್ನ ತಾಯಿಯ ಫ್ಲಾಟ್ ಅನ್ನು ಖಾಲಿ ಮಾಡುವಂತೆ ಸೂಚಿಸಿತ್ತು. ನ್ಯಾಯಮಂಡಳಿಯ ತೀರ್ಪನ್ನು ಬಾಂಬ್ ಹೈಕೋರ್ಟ್‌ನಲ್ಲಿ ಪುತ್ರ ಪ್ರಶ್ನಿಸಿದ್ದರು. ಅಂತಿಮವಾಗಿ ನವೆಂಬರ್ 9ರಂದು ತೀರ್ಪು ನೀಡಿದ ಬಾಂಬೆ ಹೈಕೋರ್ಟ್‌ನ ಜಸ್ಟೀಸ್ ಸಂದೀಪ್ ಮಾರ್ನೆ ಅವರು, ನ್ಯಾಯಮಂಡಳಿ ಆದೇಶವನ್ನು ಎತ್ತಿ ಹಿಡಿದರು.

ನಿಸ್ಸಂದೇಹವಾಗಿ, ಅನಾರೋಗ್ಯ ಪೀಡಿತ ತಾಯಿಯು ಫ್ಲಾಟ್ ನಂ.1301ರ ಮಾಲೀಕರಾಗಿದ್ದಾರೆ. ಅವರಿಗೆ ಬೇರೆ ಯಾವುದೇ ವಾಸಸ್ಥಳ ಇಲ್ಲ. ಫ್ಲಾಟ್‌ನಲ್ಲಿ ತನ್ನೊಂದಿಗೆ ಯಾರು ಇರಬೇಕು ಎಂಬುದನ್ನು ನಿರ್ಧರಿಸುವ ಹಕ್ಕು ಮತ್ತು ಅರ್ಹತೆ ತಾಯಿಗೆ ಇದೆ ಎಂದು ನ್ಯಾಯಮೂರ್ತಿ ಮಾರ್ನೆ ಅವರು ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.

ತನಗೆ ವಾಸಿಸಲು ಬೇರೆ ಮನೆ ಇಲ್ಲ. ಪತ್ನಿ ಮತ್ತು ಇಬ್ಬರು ಅಪ್ರಾಪ್ತ ಮಕ್ಕಳಿದ್ದಾರೆ. ಹಾಗಾಗಿ, ಫ್ಲ್ಯಾಟ್‌ನಲ್ಲಿ ವಾಸಿಸಲು ಅವಕಾಶ ನೀಡಬೇಕು ಎಂದು ಪುತ್ರನ ಪರ ವಕೀಲರು ವಾದಿಸಿದರು. ಅಲ್ಲದೇ, ಅನಾರೋಗ್ಯ ಪೀಡಿತ ತಾಯಿಯನ್ನು ಆರೈಕೆ ಮಾಡುತ್ತಿದ್ದೇನೆ. ಮುಂದೆಯೇ ಕೂಡ ಮಾಡುತ್ತೇನೆ ಎಂದು ಪುತ್ರ ಮನವಿ ಮಾಡಿಕೊಂಡರು.

ಆದರೆ, ಪುತ್ರನ ಈ ವಾದವನ್ನು ತಿರಸ್ಕರಿಸಿದ ತಾಯಿಯ ಪರ ವಕೀಲರು, ಶಹಾಪುರದಲ್ಲಿ ಒಂದು ಬೆಡ್‌ರೂಮ್‌-ಹಾಲ್‌-ಕಿಚನ್‌ ಫ್ಲ್ಯಾಟ್‌ ಖರೀದಿಸಿದ್ದಾಗಿ ನ್ಯಾಯಾಧಿಕರಣದ ಮುಂದೆ ಒಪ್ಪಿಕೊಂಡಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಇದಲ್ಲದೆ, ನ್ಯಾಯಮಂಡಳಿ ತನ್ನ ಆದೇಶವನ್ನು ನೀಡುವಾಗ, ಮಗ ಮದ್ಯವ್ಯಸನಿಯಾಗಿದ್ದು, ಆತ ತಾಯಿಯೊಂದಿಗೆ ಕೆಟ್ಟದಾಗಿ ವರ್ತಿಸುತ್ತಿದ್ದ ಎಂಬುದನ್ನು ಗಣನೆಗೆ ತೆಗೆದುಕೊಂಡಿತ್ತು. ಈ ಸಂಗತಿಯನ್ನು ಗಮನಿಸಿದ ಹೈಕೋರ್ಟ್, ತನಗೆ ಉಳಿದುಕೊಳ್ಳಲು ಬೇರೆ ಸ್ಥಳವಿಲ್ಲ ಎಂದು ಹೇಳುವ ಮೂಲಕ ಮಗ ವಾಸ್ತವಿಕವಾಗಿ ತಪ್ಪು ಹೇಳಿಕೆ ನೀಡಿದ್ದಾನೆ ಎಂದು ಆರೋಪಿಸಿತು.

ಮದ್ಯವ್ಯಸನಿಯಾಗಿರುವ ಪುತ್ರ, ತನ್ನ ತಾಯಿಯ ಖಾತೆಗಳಿಂದ ಹಣವನ್ನು ಡ್ರಾ ಮಾಡುತ್ತಿದ್ದಾನೆ. ಅಲ್ಲದೇ, ಅನಾರೋಗ್ಯಪೀಡಿತ ತಾಯಿಯನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾನೆ. ಹಾಗಾಗಿ, ಮನೆ ಖಾಲಿ ಮಾಡುವಂತೆ ಸೂಚಿಸಬೇಕು ಎಂದು ವಕೀಲರು ವಾದ ಮಂಡಿಸಿದರು. ಅಂತಿಮವಾಗಿ, ಕೋರ್ಟ್ ವಾದ ಮತ್ತು ಪ್ರತಿವಾದವನ್ನು ಆಲಿಸಿ ನ್ಯಾಯಮಂಡಳಿ ನೀಡಿದ್ದ ಆದೇಶವನ್ನು ಎತ್ತಿ ಹಿಡಿಯುವ ಮೂಲಕ, ಪ್ರಮುಖ ತೀರ್ಪು ನೀಡಿತು.

ಈ ಸುದ್ದಿಯನ್ನೂ ಓದಿ: ಶಾರ್ಟ್ ಸ್ಕರ್ಟ್ ಧರಿಸಿ ಡ್ಯಾನ್ಸ್‌ ಮಾಡುವುದು ಅಶ್ಲೀಲವಲ್ಲ ಎಂದ ಬಾಂಬೆ ಹೈಕೋರ್ಟ್

Continue Reading
Advertisement
cm siddaramaih respect captain pranjal
ಕರ್ನಾಟಕ33 mins ago

CM Siddaramaiah: ಹುತಾತ್ಮ ಯೋಧ ಪ್ರಾಂಜಲ್‌ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ 50 ಲಕ್ಷ ರೂ. ಪರಿಹಾರ

Canara Bank Ammembala Subbarao Pai
ಅಂಕಣ41 mins ago

Raja Marga Column: ಹಿಡಿಯಕ್ಕಿ ಸಂಗ್ರಹಿಸಿ ಕೆನರಾ ಬ್ಯಾಂಕ್ ಕಟ್ಟಿದ ಅಮ್ಮೆಂಬಳ ಸುಬ್ಬರಾವ್ ಪೈ

CBSE Board Exam 2024 and many more changes proposed implemented in this year
ದೇಶ42 mins ago

ಸಿಬಿಎಸ್‌ಇ ಬೋರ್ಡ್‌ ಎಕ್ಸಾಂಗೆ ಘೋಷಿಸಿದ ಪ್ರಮುಖ ಬದಲಾವಣೆಗಳೇನು?

Saurav Gangly
ಕ್ರಿಕೆಟ್1 hour ago

Virat Kohli : ಕೊಹ್ಲಿಯನ್ನು ನಾಯಕತ್ವದಿಂದ ಇಳಿಸಿದ್ದಕ್ಕೆ ಕಾರಣ ತಿಳಿಸಿದ ಸೌರವ್​ ಗಂಗೂಲಿ

Physical Education Teacher
ಉದ್ಯೋಗ1 hour ago

Teachers Recruitment : ಪ್ರಾಥಮಿಕ ಶಾಲೆಯಲ್ಲಿ 2120 ದೈಹಿಕ ಶಿಕ್ಷಕರ ಹುದ್ದೆ ಭರ್ತಿಗೆ ತೀರ್ಮಾನ

sufi
ಅಂಕಣ1 hour ago

ನನ್ನ ದೇಶ ನನ್ನ ದನಿ ಅಂಕಣ: ಸಯ್ಯಿದ್ ರಿಜ್ವಿ ಸ್ವತಃ ಹೇಳಿದ ಸೂಫಿಗಳ ನಿಜ ಕಥನ

Rain in Karnataka woman listening to music with an umbrella
ಕರ್ನಾಟಕ1 hour ago

Karnataka Weather : ಇಂದು – ನಾಳೆ ಬೆಂಗಳೂರು ಸೇರಿ ದಕ್ಷಿಣ ಒಳನಾಡಲ್ಲಿ ಭಾರಿ ಮಳೆ; ಇದು ಮಿಚುಂಗ್ ಎಫೆಕ್ಟ್‌

Congress party directed kamal nath to resign Madhya Pradesh Congress president post
ದೇಶ2 hours ago

ಎಂಪಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕಮಲ್ ನಾಥ್‌ಗೆ ಸೂಚನೆ!

Dasara Elephant Arjuna
ಕರ್ನಾಟಕ2 hours ago

ವಿಸ್ತಾರ ಸಂಪಾದಕೀಯ: ದಸರಾ ಹೀರೊ ‘ಅರ್ಜುನ’ ದಾರುಣ ಸಾವು, ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ

Foods To Avoid Eating With Bananas
ಆರೋಗ್ಯ2 hours ago

Foods To Avoid Eating With Bananas: ತಿಳಿದಿರಲಿ, ಬಾಳೆಹಣ್ಣಿನ ಜೊತೆಗೆ ಈ ಆಹಾರಗಳನ್ನು ಸೇರಿಸಿ ತಿನ್ನಬಾರದು!

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

dina bhavishya read your daily horoscope predictions for December 5 2023
ಪ್ರಮುಖ ಸುದ್ದಿ3 hours ago

Dina Bhavishya : ಈ ರಾಶಿಯವರ ಅದೃಷ್ಟ ಸಂಖ್ಯೆ 1, 3! ನಿಮ್ಮ ಲಕ್ಕಿ ನಂಬರ್‌ ಏನು?

ead your daily horoscope predictions for december 4th 2023
ಪ್ರಮುಖ ಸುದ್ದಿ1 day ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ2 days ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ2 days ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ3 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ3 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ4 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ4 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ5 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ5 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

ಟ್ರೆಂಡಿಂಗ್‌