Chandrayaan 3: ತಿರುಪತಿ ತಿಮ್ಮಪ್ಪನ ಕಿರೀಟದಂತೆ ಗೋಚರಿಸಿದ ಚಂದ್ರಯಾನ 3 ಲ್ಯಾಂಡರ್! - Vistara News

ದೇಶ

Chandrayaan 3: ತಿರುಪತಿ ತಿಮ್ಮಪ್ಪನ ಕಿರೀಟದಂತೆ ಗೋಚರಿಸಿದ ಚಂದ್ರಯಾನ 3 ಲ್ಯಾಂಡರ್!

Chandrayaan 3: ಚಂದ್ರಯಾನ-3 ಮಿಷನ್‌ನ ಸಕ್ಸೆಸ್ ಆಗಿದ್ದು, ಇಸ್ರೋದ ಈ ಸಾಧನೆಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

VISTARANEWS.COM


on

Lander looks Like Tirupati Venkateshwa Crown
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ನವದೆಹಲಿ: ಚಂದ್ರನ ಅಂಗಳದಲ್ಲಿ ಚಂದ್ರಯಾನ-3 (Chandrayaan 3) ಲ್ಯಾಂಡರ್ (Vikram Lander) ಅನ್ನು ಸುರಕ್ಷಿತವಾಗಿ ಇಳಿಸುವ ಮೂಲಕ ಭಾರತವು ಹೊಸ ಇತಿಹಾಸವನ್ನು ಬರೆದಿದೆ. ಈ ಸಂಭ್ರಮವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಸೆಲೆಬ್ರೇಟ್ ಮಾಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO), ಚಂದ್ರಯಾನ – 3 ಮಿಷನ್; ಭಾರತ, ನಾನು ನನ್ನು ಗಮ್ಯ ಸ್ಥಾನವನ್ನು ತಲುಪಿದ್ದೇನೆ ಮತ್ತು ನೀವು ಕೂಡ!; ಚಂದ್ರನ ಮೇಲೆ ಚಂದ್ರಯಾನ – 3 ಮಿಷನ್ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ (Soft Landing on Moon) ಮಾಡಿದೆ. ಶುಭಾಶಯಗಳು ಭಾರತ ಎಂದು ಬರೆದುಕೊಂಡಿದೆ. ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ(Viral Post). ಈ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ ಒಂದಿಷ್ಟು ಮೀಮ್ಸ್‌ಗಳು ಸಖತ್ ವೈರಲ್ ಆಗುತ್ತಿವೆ(Memes Viral).

ತಿರುಪತಿ ತಿಮ್ಮಪ್ಪನ ಕಿರೀಟದಂತೆ ಗೋಚರಿಸಿದ ಲ್ಯಾಂಡರ್!

ಈ ಮಧ್ಯೆ, ಸೋಷಿಯಲ್ ಮೀಡಿಯಾದಲ್ಲಿ ಮೀಮ್ಸ್ ಮಹಾಪೂರ ಹರಿದುಬಂದಿದೆ. ತಿರುಪತಿ ತಿರುಮಲ ವೆಂಕಟೇಶ್ವರ ಕಿರೀಟ ರೀತಿಯಲ್ಲಿ ಚಂದ್ರನ ಮೇಲೆ ಲ್ಯಾಂಡ್ ಆದ, ಚಂದ್ರಯಾನ-3 ಲ್ಯಾಂಡರ್ ಕಾಣುತ್ತಿದೆ ಎಂದು ಕೆಲವರು ಪೋಟೋದೊಂದಿಗೆ ಹಂಚಿಕೊಂಡಿದ್ದಾರೆ.

Tirupati Timmappa and  Lander Memes

ಭೂಮಿಗೆ ಕಳುಹಿಸಿದ ಮೊದಲ ಚಿತ್ರ ಯಾವುದು?

ಮತ್ತೊಂದು ಮೀಮ್ ಕೂಡ ಮಜವಾಗಿದೆ. ಚಂದ್ರಯಾನ ಕುರಿತಾದ ಹಳೆಯ ಜೋಕ್‌ವೊಂದನ್ನು ಹಂಚಿಕೊಂಡು ತೀವ್ರ ಟೀಕೆಗೆ ಗುರಿಯಾಗಿದ್ದ ಬಹುಭಾಷಾ ನಟ ಪ್ರಕಾಶ್ ರೈ ಅವರಿಗೆ ಸಂಬಂಧಿಸಿದ್ದಾಗಿದೆ. ಕನ್ನಡ ‘ಅಜಯ್’ ಚಿತ್ರದ ದೃಶ್ಯವೊಂದನ್ನು ಷೇರ್ ಮಾಡಿ, ಲ್ಯಾಂಡರ್ ಭೂಮಿಗೆ ಕಳುಹಿಸಿದ ಮೊದಲ ಚಿತ್ರ ಎಂದು ಬರೆದುಕೊಳ್ಳಲಾಗಿದೆ. ಅಜಯ್ ಚಿತ್ರದ ದೃಶ್ಯವೊಂದರಲ್ಲಿ ಪ್ರಕಾಶ್ ರಾಜ್ ಮೈ ಪೂರ್ತಿ ಕೆಸರು ಅಂಟಿಕೊಂಡಿರುತ್ತದೆ. ಅದೇ ಚಿತ್ರವನ್ನು ಷೇರ್ ಮಾಡಲಾಗಿದೆ.

Prakash Raj and Lander Memes

ಚಂದ್ರನಿಗೆ ಆಟಿಕೆ ನೀಡಿದ ಭೂತಾಯಿ!

ಇನ್ನೂ ಭೂತಾಯಿ ಚಂದಿರನ ಕೈಗೆ ಲ್ಯಾಂಡರ್ ಎಂಬ ಆಟಿಕೆಯನ್ನು ನೀಡಿರುವಂತೆ ಇರುವ ಚಿತ್ರವೊಂದನ್ನು ಸಾಕಷ್ಟು ಜನರು ಷೇರ್ ಮಾಡಿಕೊಂಡಿದ್ದಾರೆ. ಇದೇ ರೀತಿ ಹಲವು ಜನರು ನಾನಾ ರೀತಿಯ ಮೀಮ್ಸ್‌ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿಕೊಂಡಿದ್ದು, ಸಾಕಷ್ಟು ಜನರು ಎಂಜಾಯ್ ಮಾಡುತ್ತಿದ್ದಾರೆ.

Earth and Moon memes

ಈ ಸುದ್ದಿಯನ್ನೂ ಓದಿ: Chandrayaan 3: ನಾನು ಚಂದ್ರನೂರಿಗೆ ಸುರಕ್ಷಿತವಾಗಿ ತಲುಪಿದ್ದೇನೆ! ವೈರಲ್ ಆಯ್ತು ಇಸ್ರೋ ಟ್ವೀಟ್

ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಭಾರತ

ಚಂದ್ರಯಾನ-3 ಲ್ಯಾಂಡರ್ ಸೇಫ್ ಲ್ಯಾಂಡಿಂಗ್ ಪ್ರಕ್ರಿಯೆ ಲೈವ್ ಮಾಡಲಾಗಿತ್ತು. 5.20 ನಿಮಿಷಕ್ಕೆ ಸೇಫ್ ಲ್ಯಾಂಡಿಂಗ್ ಪ್ರಕ್ರಿಯೆ ಆರಂಭಿಸಲಾಯಿತು. ಚಂದ್ರನ ಮೇಲ್ಮೈ ಮೇಲೆ ಲ್ಯಾಂಡರ್ ಇಳಿಯುವ ಮುಂಚೆ ಅದು ನಾಲ್ಕು ಕಠಿಣ ಹಂತಗಳನ್ನು ಪೂರೈಸಿತು. ಪ್ರತಿ ಹಂತದಲ್ಲೂ ವಿಕ್ರಮ್ ಲ್ಯಾಂಡರ್ ನಿಧಾನವಾಗಿ ಚಂದ್ರನತ್ತ ತೆರಳುತ್ತಾ, ಚಂದ್ರನ ಮೇಲ್ಮೈಗೆ ಲಂಭವಾಗಿ ಇಳಿಯುವ ಪ್ರಕ್ರಿಯೆ ಆರಂಭಿಸಿತು. ಪ್ರತಿ ಹಂತದ ಯಶಸ್ಸು ವಿಜ್ಞಾನಿಗಳಲ್ಲಿ ಹುಮ್ಮಸ್ಸು ತುಂಬಿತು. ಮಿಷನ್ ಕಂಟ್ರೋಲ್ ರೂಮ್‌ನಲ್ಲಿ ಸಂಭ್ರಮ ಮನೆ ಮಾಡಿತ್ತು. ಅಂತಿಮವಾಗಿ ಚಂದ್ರನ ಮೇಲೆ ಲ್ಯಾಂಡರ್ ಲ್ಯಾಂಡ್ ಬಳಿಕ, ವಿಜ್ಞಾನಿಗಳು ಸಂತೋಷದಿಂದ ಕುಣಿದಾಡಿದರು. ಇದೇ ವೇಳೆ, ದಕ್ಷಿಣಾ ಆಫ್ರಿಕಾದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ವಿಡಿಯೋ ಲೈವ್ ಮೂಲಕ ಮಾತನಾಡಿ, ಇಸ್ರೋ ತಂಡಕ್ಕೆ ಶುಭಾಶಯ ಕೋರಿದರು. ಪ್ರಾಜೆಕ್ಟ್ ಡೈರೆಕ್ಟರ್ ಪಿ ವೀರಮುತ್ತುವೇಲ್ ಮಾತನಾಡಿ, ಲ್ಯಾಂಡರ್ ಎಲ್ಲಾ ಹಂತಗಳನ್ನು ಯಾವುದೇ ದೋಷವಿಲ್ಲದೇ ಪೂರ್ಣಗೊಳಿಸಿತು ಎಂದು ಹೇಳಿ ಸಂಭ್ರಮಪಟ್ಟರು. 2019ರಲ್ಲಿ ಚಂದ್ರಯಾನ -2 ಮಿಷನ್ ವೈಫಲ್ಯ ಕಂಡ ಬಳಿಕ ಇಸ್ರೋ ಚಂದ್ರಯಾನ-3 ಕೈಗೊಂಡಿತ್ತು. ಈ ಮಿಷನ್‌ಗದೆ ಸುಮಾರು 600 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಜುಲೈ 14ರಂದು ಮಿಷನ್‌ಗೆ ಚಾಲನೆ ನೀಡಲಾಗಿತ್ತು. ಎಲ್‌ವಿಎಂ ಮಾರ್ಕ್ 3 ರಾಕೆಟ್ ಚಂದ್ರಯಾನ ನೌಕೆಯನ್ನು ಭೂ ಕಕ್ಷೆಗೆ ಸೇರಿಸಿತ್ತು. ಅಲ್ಲಿಂದ ಈ ನೌಕೆ ತನ್ನ ಗಮ್ಯ ಸ್ಥಾನವನ್ನು ತಲುಪಲು 44 ದಿನಗಳನ್ನು ತೆಗೆದುಕೊಂಡಿತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Latest

ಮಹಿಳಾ ಮೀಸಲಾತಿ ವಿರೋಧಿಸಿದ ಕಾಂಗ್ರೆಸ್‌ ವಿರುದ್ಧ ಸಿಎಂ ಯೋಗಿ ಆದಿತ್ಯನಾಥ ಆಕ್ರೋಶ

VISTARANEWS.COM


on

ಲಖನೌ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಯನ್ನು ವಿರೋಧಿಸುವ ಮೂಲಕ ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷಗಳು ತಮ್ಮ ಮಹಿಳಾ ವಿರೋಧಿ ನೀತಿಯನ್ನು ಪ್ರದರ್ಶಿಸಿವೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಲಖನೌದಲ್ಲಿ ಇಂದು ನಡೆದ ಜನ ಆಕ್ರೋಶ ಮಹಿಳಾ ಪಾದಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿರು. ದೇಶಾದ್ಯಂತ ಮಹಿಳೆಯರು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ವಿರುದ್ಧ ಬೀದಿಬೀದಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಂಗ್ರೆಸ್, ಸಮಾಜವಾದಿ, ಟಿಎಂಸಿ ಮತ್ತು ಡಿಎಂಕೆ ಪಕ್ಷಗಳ ಮಹಿಳಾ ವಿರೋಧಿ ನೀತಿಯನ್ನು ಖಂಡಿಸಿ ಮಹಿಳೆಯರು ಆಕ್ರೋಶ ಹೊರಹಾಕುತ್ತಿದ್ದಾರೆ. ಅವರ ಅಸಮಾಧಾನ ಈ ಪಾದಯಾತ್ರೆಯಲ್ಲಿ ಕಂಡುಬರುತ್ತಿದೆ ಎಂದರು. ಮಹಿಳಾ ಮೀಸಲಾತಿಗೆ ಸಂಬಂಧಿಸಿದ ನಿರ್ಣಾಯಕ ತಿದ್ದುಪಡಿ ಮಸೂದೆಗೆ ಕಾಂಗ್ರೆಸ್‌ ನೇತೃತ್ವದ ಪಕ್ಷಗಳ ನಡೆ ವಿರುದ್ಧ ಈ ಪಾದಯಾತ್ರೆಯನ್ನು ಉತ್ತರಪ್ರದೇಶ ರಾಜ್ಯ ಸರ್ಕಾರ ಆಯೋಜಿಸಿತ್ತು.

Continue Reading

Latest

ಭಾರತ ಈಗ ‘ವಿಶ್ವಗುರು’ ಅಲ್ಲ, ಆ ಪದ ಬಳಸಬೇಡಿ: ಮುರಳಿ ಮನೋಹರ ಜೋಶಿ ಪ್ರತಿಪಾದನೆ

VISTARANEWS.COM


on

ನವದೆಹಲಿ: ಭಾರತವು ಪ್ರಸ್ತುತ ‘ವಿಶ್ವಗುರು’ ಆಗಿ ಉಳಿದಿಲ್ಲ, ಆದ್ದರಿಂದ ಆ ಪದವನ್ನು ಬಳಸುವುದರಿಂದ ನಾವು ದೂರವಿರಬೇಕು ಎಂದು ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ ಜೋಶಿ ಹೇಳಿದ್ದಾರೆ. ದೆಹಲಿಯಲ್ಲಿ ಆರ್‌ಎಸ್‌ಎಸ್ ಅಂಗಸಂಸ್ಥೆಯಾದ ‘ಸಂಸ್ಕೃತ ಭಾರತಿ’ ಕೇಂದ್ರ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಈ ವಿಚಾರವಾಗಿ ತಮ್ಮ ವೈಯಕ್ತಿಕ ಮತ್ತು ವಾಸ್ತವಿಕ ನಿಲುವನ್ನು ಬಿಚ್ಚಿಟ್ಟರು.

ಸತ್ಯವನ್ನು ಒಪ್ಪಿಕೊಳ್ಳಬೇಕು:
ಭಾರತವು ‘ವಿಶ್ವಗುರು’ ಆಗುತ್ತಿರುವ ಮತ್ತು ಎ.ಐ (AI) ಕೇಂದ್ರವಾಗುತ್ತಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, “ನಾವು ಒಂದು ಕಾಲದಲ್ಲಿ ವಿಶ್ವಗುರು ಆಗಿದ್ದೆವು ಎಂಬುದು ಸತ್ಯ. ಆದರೆ ಇಂದು ನಾವು ಹಾಗಿಲ್ಲ ಎಂಬ ವಾಸ್ತವವನ್ನು ಒಪ್ಪಿಕೊಳ್ಳಬೇಕು. ಈ ಹಂತದಲ್ಲಿ ನಾವು ವಿಶ್ವಗುರು ಅಲ್ಲ, ಬದಲಾಗಿ ಆ ಸ್ಥಾನಕ್ಕೇರಲು ಪ್ರಯತ್ನಿಸಬೇಕಷ್ಟೇ,” ಎಂದು ಮಾರ್ಮಿಕವಾಗಿ ನುಡಿದರು.

ಸಂಸ್ಕೃತಕ್ಕೆ ಅಗ್ರಸ್ಥಾನ ನೀಡಲು ಕರೆ:
ಸಂಸ್ಕೃತ ಭಾಷೆಯ ಮಹತ್ವದ ಬಗ್ಗೆ ಮಾತನಾಡಿದ ಜೋಶಿ, ಕ್ವಾಂಟಮ್ ಕಂಪ್ಯೂಟಿಂಗ್‌ನಂತಹ ಆಧುನಿಕ ತಂತ್ರಜ್ಞಾನಗಳಲ್ಲಿ ಸಂಸ್ಕೃತವನ್ನು ಬಳಸಬೇಕು ಎಂದು ಆಶಿಸಿದರು. ಸಂಸ್ಕೃತವನ್ನು ಭಾರತದ ಅಧಿಕೃತ ಭಾಷೆಯನ್ನಾಗಿ ಮಾಡಲು ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಅನೇಕ ಮಹನೀಯರು ಶ್ರಮಿಸಿದ್ದರು. ಸಂಸ್ಕೃತದ ಹೆಚ್ಚಿನ ಪ್ರಚಾರ ಮತ್ತು ಬಳಕೆಯಿಂದ ಮಾತ್ರ ಭಾರತವು ತನ್ನ ಪ್ರಾಚೀನ ಗೌರವವನ್ನು ಮರಳಿ ಪಡೆಯಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

Continue Reading

Latest

ಮಹಿಳಾ ಮೀಸಲು ಮಸೂದೆ ಕಾಂಗ್ರೆಸ್‌ ಪಕ್ಷದ ಕನಸು ಮತ್ತು ಕೂಸು: ಡಿ.ಕೆ.ಶಿವಕುಮಾರ್

VISTARANEWS.COM


on

ಬೆಂಗಳೂರು, ಏ.19: ತರಾತುರಿಯಲ್ಲಿ ಸಂವಿಧಾನ ತಿದ್ದುಪಡಿ ಮಾಡಲು ಹೋದ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಮುಖಭಂಗವಾಗಿದೆ. ಇಂಡಿಯಾ ಒಕ್ಕೂಟಕ್ಕೆ ಜಯವಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಪ್ರತಿಕ್ರಿಯಿಸಿದರು.
ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರು ಹಾಗೂ ಕ್ಷೇತ್ರ ವಿಂಗಡಣೆ ವಿರುದ್ದ ಪ್ರತಿಭಟಿಸಿದ ದಕ್ಷಿಣ ಭಾರತದ ಎಲ್ಲಾ ಮುಖ್ಯಮಂತ್ರಿಗಳ ಹೋರಾಟಕ್ಕೆ, ಪ್ರಜಾಪ್ರಭುತ್ವಕ್ಕೆ ಸಿಕ್ಕಂತಹ ದೊಡ್ಡ ಜಯ. ಮಹಿಳೆಯರ ಪರವಾಗಿ ಕಾಂಗ್ರೆಸ್ ಪಕ್ಷ ಹಾಗೂ ಇಂಡಿಯಾ ಒಕ್ಕೂಟ ನಿಂತಿದೆ. ಇಲ್ಲಿ ಯಾರಿಗೂ ಅವಮಾನವಾಗಿಲ್ಲ” ಎಂದರು.
ಸಂವಿಧಾನ ತಿದ್ದುಪಡಿ ಮಾಡುವಾಗ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಮಹಿಳಾ ಮೀಸಲಾತಿ ಕಾಯ್ದೆ ಕಾಂಗ್ರೆಸ್ ಪಕ್ಷದ ಕನಸು ಮತ್ತು ಕೂಸು. ಇದರ ಪರವಾಗಿ ಕೆಲಸ ಮಾಡಿದ್ದು ಕಾಂಗ್ರೆಸ್ ಪಕ್ಷ. ಆದರೆ ಈಗ ಬಿಜೆಪಿ ಸರ್ಕಾರ ಮಾಡಿರುವ ನಿರ್ಧಾರ ಸರಿಯಾದ ಸಮಯವಲ್ಲ. ನಮ್ಮದು ಹಿಟ್ಲರ್ ಆಡಳಿತವಲ್ಲ” ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳ ಜೊತೆ ಚರ್ಚೆ ನಡೆಸಬೇಕಿತ್ತು. ಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲೇ ತರುವ ಪ್ರಮೇಯವೇನಿತ್ತು. ಇಂಡಿಯಾ ಒಕ್ಕೂಟದ ಎಲ್ಲಾ ಸದಸ್ಯರಿಗೆ ನಾನು ಶುಭಾಶಯಗಳನ್ನು ತಿಳಿಸುತ್ತೇನೆ ಎಂದೂ ಶಿವಕುಮಾರ್‌ ಹೇಳಿದ್ದಾರೆ.
ಸೋಲುತ್ತದೆ ಎಂದರೂ ಬಿಲ್ ತಂದಿದ್ದು ಬಿಜೆಪಿ
ವಿಪಕ್ಷಗಳ ವಿರುದ್ದ ಬಿಜೆಪಿ ಪ್ರತಿಭಟನೆ ಬಗ್ಗೆ ಕೇಳಿದಾಗ, “ಬಿಲ್ ಸೋಲುತ್ತದೆ ಎಂದು ಗೊತ್ತಿದ್ದರೂ ತಂದವರು ಅವರು. ಅವರುಗಳು ಮಹಿಳಾ ವಿರೋಧಿಗಳು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೆಲ್ಲರೂ ಪ್ರತಿನಿಧಿಗಳಲ್ಲವೇ? ಇವರುಗಳು ಜನರಿಂದ ಗೆದ್ದಿಲ್ಲವೇ? ಅವರುಗಳು ಇದರ ಬಗ್ಗೆ ಮಾತನಾಡಬೇಕಿತ್ತು, ಚರ್ಚೆ ಮಾಡಬೇಕಿತ್ತು. ಮಹಿಳಾ ಮೀಸಲಾತಿ ಬಿಲ್ ಅವರ ಆಸ್ತಿಯಲ್ಲ. ದೇಶದ ಆಸ್ತಿ” ಎಂದರು.
“ಈ ಹಿಂದೆ ರಾಜೀವ್ ಗಾಂಧಿಯವರು ಶೇ 50 ರಷ್ಟು ಮೀಸಲಾತಿ ತಂದಿದ್ದರು. ಸೋನಿಯಾಗಾಂಧಿ ಅವರ ನೇತೃತ್ವದಲ್ಲಿ ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಬಿಲ್ ಪಾಸ್ ಆಗಿತ್ತು. ಈ ಬಿಲ್ ಅಡಿಯಲ್ಲಿ ದಕ್ಷಿಣ ಭಾರತದ ಕ್ಷೇತ್ರಗಳನ್ನು ಕತ್ತರಿಸಿ ಉತ್ತರ ಭಾರತದ ಕ್ಷೇತ್ರಗಳನ್ನು ಹೆಚ್ಚು ಮಾಡಲು ಹೊರಟಿರುವುದು ಸರಿಯಲ್ಲ. ಇದನ್ನು ಸಹಿಸಲು ಸಾಧ್ಯವಿಲ್ಲ. ನಮ್ಮನ್ನೆಲ್ಲಾ ಕರೆದು ಚರ್ಚೆ ಮಾಡಬೇಕಿತ್ತು” ಎಂದು ಹೇಳಿದರು.

Continue Reading

ದೇಶ

ದೇಶದ ಪ್ರಧಾನಿಗೆ ಕೈಯಾರ ಚುರುಮುರಿ ಕೊಟ್ಟರೂ ಇಲ್ಲ ಖುಷಿ! ಆ ತಪ್ಪು ಮಾಡಬಾರದಿತ್ತು ಅಂದ ವ್ಯಾಪಾರಿ

VISTARANEWS.COM


on

ಪಶ್ಚಿಮ ಬಂಗಾಳದ ಜಾರ್ಗ್ರಾಮ್‌ನಲ್ಲಿ ಚುರುಮುರಿ (ಝಲ್ಮುರಿ) ವ್ಯಾಪಾರ ಮಾಡುವ ವಿಕ್ರಮ್ ಶಾ ಅವರ ಬದುಕಿನಲ್ಲಿ ಮರೆಯಲಾಗದ ಘಟನೆಯೊಂದು ನಡೆದಿದೆ. ಚುನಾವಣಾ ಪ್ರಚಾರದ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಅಚಾನಕ್ಕಾಗಿ ವಿಕ್ರಮ್ ಅವರ ಪುಟ್ಟ ಅಂಗಡಿಯ ಮುಂದೆ ಬಂದು ನಿಂತಿದ್ದರು. ದೇಶದ ಪ್ರಧಾನಿಯೇ ತಮ್ಮ ಅಂಗಡಿಗೆ ಬಂದಿದ್ದನ್ನು ಕಂಡು ವಿಕ್ರಮ್ ಮೊದಲು ಗಾಬರಿಯಾದರೂ, ಮೋದಿ ಅವರು ಅತ್ಯಂತ ಸರಳವಾಗಿ ಮಾತುಕತೆ ನಡೆಸಿ ವಿಕ್ರಮ್ ಕೈಯಾರೆ ಸಿದ್ಧಪಡಿಸಿದ ಚುರುಮುರಿಯನ್ನು ಇಷ್ಟಪಟ್ಟು ಸವಿದರು.

ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಕೇವಲ ವಿಕ್ರಮ್ ಕೊಟ್ಟ ತಿಂಡಿ ತಿಂದಿದ್ದಲ್ಲದೇ ಅವರ ಕುಟುಂಬ ಮತ್ತು ಜೀವನದ ಬಗ್ಗೆಯೂ ವಿಚಾರಿಸಿದರು. ಬಡತನದ ಕಾರಣ 9ನೇ ತರಗತಿಗೆ ಓದು ಬಿಟ್ಟಿದ್ದ ವಿಕ್ರಮ್, ಪ್ರಧಾನಿಯವರ ಆತ್ಮೀಯತೆಗೆ ಮನಸೋತರು. ತಿಂಡಿ ತಿಂದ ನಂತರ ಮೋದಿ ಅವರು ಹಠ ಹಿಡಿದು ಹಣ ಪಾವತಿಸಿ ವಿಕ್ರಮ್ ಅವರ ಪ್ರಾಮಾಣಿಕತೆಯನ್ನು ಮೆಚ್ಚಿಕೊಂಡರು. ಪ್ರಧಾನಿಯವರ ಈ ಸರಳತೆಯನ್ನು ಕಂಡು ಅಲ್ಲಿದ್ದ ಜನಸಮೂಹ ಚಪ್ಪಾಳೆ ತಟ್ಟಿ ಸಂಭ್ರಮಿಸಿತು.

ಆದರೆ, ಈ ಇಡೀ ಘಟನೆಯಲ್ಲಿ ವಿಕ್ರಮ್ ಶಾ ಅವರಿಗೆ ಒಂದು ಸಣ್ಣ ವಿಷಾದ ಉಳಿದುಬಿಟ್ಟಿದೆ. ಪ್ರಧಾನಿ ತಮ್ಮ ಮುಂದೆಯೇ ಅಷ್ಟು ಹೊತ್ತು ನಿಂತಿದ್ದರೂ, ಆತಂಕದ ನಡುವೆ ಅವರಿಂದ ಒಂದು ಹಸ್ತಾಕ್ಷರ (Autograph) ಪಡೆಯಲು ಅವರಿಗೆ ಸಾಧ್ಯವಾಗಲಿಲ್ಲ. “ಒಂದು ವೇಳೆ ನಾನು ಅವರ ಸಹಿ ಕೇಳಿದ್ದರೆ ಅದು ನನ್ನ ಜೀವನದ ದೊಡ್ಡ ಆಸ್ತಿಯಾಗಿರುತ್ತಿತ್ತು” ಎಂದು ವಿಕ್ರಮ್ ಈಗ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆದರೂ, ದೇಶದ ಪ್ರಧಾನಿ ತಮ್ಮ ಅಂಗಡಿಗೆ ಬಂದು ಚುರುಮುರಿ ತಿಂದ ಆ ಕ್ಷಣಗಳು ಮಾತ್ರ ವಿಕ್ರಮ್ ಅವರ ಬದುಕಿನ ಸುವರ್ಣ ನೆನಪಾಗಿ ಉಳಿದಿವೆ.

Continue Reading
Advertisement
Latest11 ನಿಮಿಷಗಳು ago

ಮಹಿಳಾ ಮೀಸಲಾತಿ ವಿರೋಧಿಸಿದ ಕಾಂಗ್ರೆಸ್‌ ವಿರುದ್ಧ ಸಿಎಂ ಯೋಗಿ ಆದಿತ್ಯನಾಥ ಆಕ್ರೋಶ

Latest21 ನಿಮಿಷಗಳು ago

ನಟ, ರಾಜಕಾರಣಿ ವಿಜಯ್‌ ವಿರುದ್ಧ ಕಮಲ್‌ ಹಾಸನ್‌ ಆಕ್ರೋಶ; ಕಾರಣ ಏನು?

Latest33 ನಿಮಿಷಗಳು ago

ಮಹಿಳಾ ಮೀಸಲಾತಿ ಕಾಂಗ್ರೆಸ್ ವಿರುದ್ಧ ಏಪ್ರಿಲ್. 25ರಂದು ಆಕ್ರೋಶ ಯಾತ್ರೆ: ಬಿಜೆಪಿ

Latest1 ಗಂಟೆ ago

ಭಾರತ ಈಗ ‘ವಿಶ್ವಗುರು’ ಅಲ್ಲ, ಆ ಪದ ಬಳಸಬೇಡಿ: ಮುರಳಿ ಮನೋಹರ ಜೋಶಿ ಪ್ರತಿಪಾದನೆ

Latest2 ಗಂಟೆಗಳು ago

ಇಡಿ ದಾಳಿ: ಕೇಂದ್ರ ಸರ್ಕಾರ ಕಾಂಗ್ರೆಸ್ ಅನ್ನು ಗುರಿಯಾಗಿಸಿದೆ: ಸಿಎಂ ಸಿದ್ದರಾಮಯ್ಯ ಆರೋಪ

Latest2 ಗಂಟೆಗಳು ago

ಅಮೆರಿಕ ಜತೆ ಮಾತುಕತೆಗೆ ಇರಾನ್‌ ಒಪ್ಪಿಗೆ; ಇಸ್ಲಾಮಾಬಾದ್‌ನತ್ತ ಜಗತ್ತಿನ ಕಣ್ಣು; ಬಗೆಹರಿಯಲಿದೆಯೇ ಬಿಕ್ಕಟ್ಟು?

Latest2 ಗಂಟೆಗಳು ago

ಸಮಾಜದ ಪರಿವರ್ತನೆಗೆ ಬಸವಣ್ಣನ ವಿಚಾರಗಳು ಅತ್ಯಗತ್ಯ: ಸಿಎಂ ಸಿದ್ದರಾಮಯ್ಯ

Latest3 ಗಂಟೆಗಳು ago

ಕೃಷ್ಣಗಿರಿ ಜಿಲ್ಲೆಯಲ್ಲಿ ಕಾಂಗ್ರೆಸ್-ಡಿಎಂಕೆ ಅಭ್ಯರ್ಥಿಗಳ ಪರ ಸಚಿವ ಈಶ್ವರ ಖಂಡ್ರೆ ಪ್ರಚಾರ

Latest3 ಗಂಟೆಗಳು ago

ಸಿಇಟಿ ಪರೀಕ್ಷೆ: ವಸ್ತ್ರ ಸಂಹಿತೆ ಕಡ್ಡಾಯ; ಅಭ್ಯರ್ಥಿಗಳೂ ಈ ಸೂಚನೆಗಳನ್ನು ಪಾಲಿಸಿದರೆ ಕ್ಷೇಮ

Latest3 ಗಂಟೆಗಳು ago

ಎಸ್‌ಎಸ್‌ಎಲ್‌ಸಿ ಹಿಂದಿ ಪರೀಕ್ಷೆ: ಗ್ರೇಡ್ ಬದಲು ಅಂಕ ನೀಡಲು ಹೈಕೋರ್ಟ್ ಆದೇಶ

galipata neetu
ಕಿರುತೆರೆ2 ವರ್ಷಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 ವರ್ಷಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 ವರ್ಷಗಳು ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 ವರ್ಷಗಳು ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 ವರ್ಷಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 ವರ್ಷಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ2 ವರ್ಷಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 ವರ್ಷಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 ವರ್ಷಗಳು ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 ವರ್ಷಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 ವರ್ಷಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 ವರ್ಷಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 ವರ್ಷಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 ವರ್ಷಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ವರ್ಷಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ವರ್ಷಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ವರ್ಷಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ವರ್ಷಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ವರ್ಷಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ವರ್ಷಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌