ಮಹಿಳಾ ಮೀಸಲಾತಿ ವಿರೋಧಿಸಿದ ಕಾಂಗ್ರೆಸ್‌ ವಿರುದ್ಧ ಸಿಎಂ ಯೋಗಿ ಆದಿತ್ಯನಾಥ ಆಕ್ರೋಶ - Vistara News

Latest

ಮಹಿಳಾ ಮೀಸಲಾತಿ ವಿರೋಧಿಸಿದ ಕಾಂಗ್ರೆಸ್‌ ವಿರುದ್ಧ ಸಿಎಂ ಯೋಗಿ ಆದಿತ್ಯನಾಥ ಆಕ್ರೋಶ

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಲಖನೌ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಯನ್ನು ವಿರೋಧಿಸುವ ಮೂಲಕ ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷಗಳು ತಮ್ಮ ಮಹಿಳಾ ವಿರೋಧಿ ನೀತಿಯನ್ನು ಪ್ರದರ್ಶಿಸಿವೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಲಖನೌದಲ್ಲಿ ಇಂದು ನಡೆದ ಜನ ಆಕ್ರೋಶ ಮಹಿಳಾ ಪಾದಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿರು. ದೇಶಾದ್ಯಂತ ಮಹಿಳೆಯರು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ವಿರುದ್ಧ ಬೀದಿಬೀದಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಂಗ್ರೆಸ್, ಸಮಾಜವಾದಿ, ಟಿಎಂಸಿ ಮತ್ತು ಡಿಎಂಕೆ ಪಕ್ಷಗಳ ಮಹಿಳಾ ವಿರೋಧಿ ನೀತಿಯನ್ನು ಖಂಡಿಸಿ ಮಹಿಳೆಯರು ಆಕ್ರೋಶ ಹೊರಹಾಕುತ್ತಿದ್ದಾರೆ. ಅವರ ಅಸಮಾಧಾನ ಈ ಪಾದಯಾತ್ರೆಯಲ್ಲಿ ಕಂಡುಬರುತ್ತಿದೆ ಎಂದರು. ಮಹಿಳಾ ಮೀಸಲಾತಿಗೆ ಸಂಬಂಧಿಸಿದ ನಿರ್ಣಾಯಕ ತಿದ್ದುಪಡಿ ಮಸೂದೆಗೆ ಕಾಂಗ್ರೆಸ್‌ ನೇತೃತ್ವದ ಪಕ್ಷಗಳ ನಡೆ ವಿರುದ್ಧ ಈ ಪಾದಯಾತ್ರೆಯನ್ನು ಉತ್ತರಪ್ರದೇಶ ರಾಜ್ಯ ಸರ್ಕಾರ ಆಯೋಜಿಸಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Latest

ಬೇಸಿಗೆಯಲ್ಲೂ ಸಣ್ಣ ನೀರಾವರಿ ಕೆರೆಗಳಲ್ಲಿ ಸಮೃದ್ದ ನೀರು ಸಂಗ್ರಹ: ಸಚಿವ ಎನ್‌ ಎಸ್‌ ಭೋಸರಾಜು

VISTARANEWS.COM


on

ಬೆಂಗಳೂರು : ರಾಜ್ಯದಾದ್ಯಂತ ಇರುವ ಸಣ್ಣ ನೀರಾವರಿ ಇಲಾಖೆಯ ಕೆರೆಗಳಲ್ಲಿ ಉತ್ತಮ ನೀರಿನ ಸಂಗ್ರಹವಿದ್ದು, ಇಲಾಖೆಯ ವ್ಯಾಪ್ತಿಯಲ್ಲಿರುವ 𝟯,𝟳𝟴𝟴 ಕೆರೆಗಳ ಮೂಲಕ ಸುಮಾರು 𝟰,𝟰𝟱,𝟬𝟬𝟵 ಹೆಕ್ಟೇರ್‌ಗಳಷ್ಟು ಬೃಹತ್ ಕೃಷಿ ಅಚ್ಚುಕಟ್ಟು ಪ್ರದೇಶಕ್ಕೆ ಜೀವಜಲ ಒದಗಿಸುತ್ತಿವೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌ ಎಸ್‌ ಭೋಸರಾಜು ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಅವರು, ಇಲಾಖೆಯು ಬಿಡುಗಡೆ ಮಾಡಿರುವ ಇತ್ತೀಚಿನ ದತ್ತಾಂಶಗಳ ಪ್ರಕಾರ, ರಾಜ್ಯದಲ್ಲಿರುವ ಒಟ್ಟು 𝟯,𝟳𝟴𝟴 ಸಣ್ಣ ನೀರಾವರಿ ಕೆರೆಗಳ ಪೈಕಿ ಬಹುಪಾಲು ಕೆರೆಗಳು ಈಗಲೂ ಉತ್ತಮ ನೀರಿನ ಮಟ್ಟವನ್ನು ಕಾಯ್ದುಕೊಂಡಿವೆ. ನೀರಿನ ಸಂಗ್ರಹಣಾ ಸಾಮರ್ಥ್ಯವನ್ನು ವಿವರಿಸಿರುವ ವರದಿಯ ಪ್ರಕಾರ, ಬೇಸಿಗೆಯಲ್ಲೂ ರಾಜ್ಯದ 𝟭𝟲𝟱 ಕೆರೆಗಳು ಭರ್ತಿಯಾಗಿಯೇ. ಇದಲ್ಲದೆ, 𝟭,𝟯𝟱𝟱 ಕೆರೆಗಳು ಸುಮಾರು ಶೇ. 𝟱𝟭 ಕ್ಕೂ ಹೆಚ್ಚು. ಹಾಗೆಯೇ 𝟭,𝟭𝟰𝟯 ಕೆರೆಗಳು ಸುಮಾರು ಶೇ. 𝟱𝟬 ರವರೆಗೆ ನೀರಿನ ಮಟ್ಟವನ್ನು ಕಾಯ್ದುಕೊಂಡಿವೆ. 𝟵𝟱𝟵 ಕೆರೆಗಳಲ್ಲಿ ಸುಮಾರು ಶೇ. 𝟯𝟬 ರಷ್ಟು ಸಾಮರ್ಥ್ಯದ ಸಂಗ್ರಹವಾಗಿದೆ.

ಜಿಲ್ಲಾವಾರು ಸಾಧನೆಯನ್ನು ವಿಶ್ಲೇಷಿಸುವುದಾದರೆ, ದಾವಣಗೆರೆ ಜಿಲ್ಲೆಯು ಅತ್ಯುತ್ತಮ ನೀರಿನ ಸಂಗ್ರಹದೊಂದಿಗೆ ರಾಜ್ಯದಲ್ಲೇ ಮುಂಚೂಣಿಲ್ಲಿದ್ದು, ಬೇಸಿಗೆಯಲ್ಲೂ ಜಿಲ್ಲೆಯ 𝟮𝟳 ಕೆರೆಗಳು ಭರ್ತಿಯಾಗಿವೆ. ಇದರ ಬೆನ್ನಲ್ಲೇ ಚಿಕ್ಕಮಗಳೂರು ಜಿಲ್ಲೆಯ 𝟰𝟲 ಕೆರೆಗಳು ಭರ್ತಿಯಾಗಿದ್ದು ಅತ್ಯುತ್ತಮ ಜಲ ಸಂಗ್ರಹವನ್ನು ಕಾಯ್ದುಕೊಂಡಿವೆ. ಇತರ ಉತ್ತಮ ಸಾಧನೆ ತೋರಿದ ಜಿಲ್ಲೆಗಳಲ್ಲಿ ಹಾಸನ, ತುಮಕೂರು, ಮತ್ತು ಕೋಲಾರ ಸೇರಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಬೋಸರಾಜು ಅವರು, ಸಣ್ಣ ನೀರಾವರಿ ಇಲಾಖೆಯ ಅಡಿಯಲ್ಲಿ 145 ಕೆರೆ ತುಂಬಿಸುವ ಏತ ನೀರಾವರಿ ಯೋಜನೆಗಳ ಮೂಲಕ 1073 ಕೆರೆಗಳನ್ನು ತುಂಬಿಸಲಾಗುತ್ತಿದೆ. ಉತ್ತಮ ಮುಂಗಾರು ಮಳೆ ಹಾಗೂ ಸರ್ಕಾರದ ಜಲ ನಿರ್ವಹಣಾ ಕಾರ್ಯತಂತ್ರಗಳು ಈ ಉತ್ತಮ ನೀರಿನ ಮಟ್ಟಕ್ಕೆ ಕಾರಣವಾಗಿದೆ ಎಂದು ಬಣ್ಣಿಸಿದ್ದಾರೆ.

“ಮಾರ್ಚ್ ಅಂತ್ಯದ ವೇಳೆಗೆ ನಮ್ಮ ಸಣ್ಣ ನೀರಾವರಿ ಕೆರೆಗಳಾದ್ಯಂತ ಇಷ್ಟೊಂದು ಪ್ರಮಾಣದ ನೀರು ಯಶಸ್ವಿಯಾಗಿ ಸಂಗ್ರಹವಾಗಿರುವುದು ಹಾಗೂ ಬೇಸಿಗೆಯಲ್ಲೂ ಬತ್ತದೆ ಉಳಿದುಕೊಂಡಿರುವುದು ಅತ್ಯಂತ ಪ್ರೋತ್ಸಾಹದಾಯಕ ವಿಚಾರ. 𝟭,𝟯𝟱𝟱 ಕೆರೆಗಳು ಬಹುಪಾಲು ತುಂಬಿರುವುದು ಮತ್ತು 𝟭𝟲𝟱 ಕೆರೆಗಳು ಭರ್ತಿಯಾಗಿರುವುದು ನಮ್ಮ ಮಹತ್ವಾಕಾಂಕ್ಷೆಯ ಕೆರೆ ತುಂಬಿಸುವ ಕಾರ್ಯಕ್ರಮಗಳು ಹಾಗೂ ಕೆರೆಗಳ ಪುನರುಜ್ಜೀವನ ಯೋಜನೆಗಳ ಯಶಸ್ಸಿಗೆ ಸಾಕ್ಷಿಯಾಗಿದೆ,” ಎಂದು ಸಚಿವ ಎನ್.ಎಸ್. ಬೋಸರಾಜು ವಿವರಿಸಿದ್ದಾರೆ.

“ಈ ಕೆರೆಗಳಿಗೆ ಏತ ನೀರಾವರಿ ಯೋಜನೆಗಳ (ಸಣ್ಣ ನೀರಾವರಿ ಹಾಗೂ ಇತರೆ ಇಲಾಖೆಯಗಳ ಯೋಜನೆ) ಮೂಲಕ ಶುದ್ದ ನೀರು ಹಾಗೂ ಬಯಲು ಸೀಮೆಯ ಜಿಲ್ಲೆಗಳಲ್ಲಿ ಸಂಸ್ಕರಿಸಿದ ಮತ್ತು ಮೇಲ್ಮೈ ನೀರಿನ ನಿರಂತರ ಹರಿವನ್ನು ಖಚಿತಪಡಿಸುವ ಮೂಲಕ, ಬೇಸಿಗೆಯ ತಿಂಗಳುಗಳಲ್ಲಿ ಅವು ಬತ್ತಿಹೋಗದಂತೆ ಕ್ರಮಗಳನ್ನು ಕೈಗೊಂಡಿದ್ದೇವೆ. ಜಲ-ಸುರಕ್ಷಿತ ಕರ್ನಾಟಕವನ್ನು ನಿರ್ಮಿಸುವ ನಮ್ಮ ಸಮಗ್ರ ಪ್ರಯತ್ನಗಳು ತಳಮಟ್ಟದಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತಿವೆ ಎನ್ನುವುದನ್ನು ಈ ದತ್ತಾಂಶಗಳು ಪುಷ್ಟೀಕರಿಸುತ್ತವೆ. ಕೆರೆಗಳಲ್ಲಿ ಈಗಲೂ ಉಳಿದುಕೊಂಡಿರುವ ಈ ಜಲಸಂಪತ್ತು ನಮ್ಮ 𝟰.𝟰𝟱 ಲಕ್ಷ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶದ ಲಕ್ಷಾಂತರ ರೈತರಿಗೆ ನೇರ ಪ್ರಯೋಜನವನ್ನು ತಂದುಕೊಡಲಿದೆ,” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಮುಖ ಅಂಕಿ-ಅಂಶಗಳು:
•ರಾಜ್ಯದಲ್ಲಿರುವ ಒಟ್ಟು ಸಣ್ಣ ನೀರಾವರಿ ಕೆರೆಗಳು: 𝟯,𝟳𝟴𝟴
•ಕೆರೆಗಳಲ್ಲಿರುವ ಒಟ್ಟು ನೀರಿನ ಸಂಗ್ರಹ: ಸುಮಾರು 𝟱𝟬.𝟵𝟳 𝗧𝗠𝗖
•ಸಂಪೂರ್ಣ ಭರ್ತಿಯಾಗಿರುವ ಕೆರೆಗಳು: ಸುಮಾರು 𝟭𝟲𝟱
•ಸುಮಾರು ಶೇ. 𝟱𝟭 ಕ್ಕೂ ಹೆಚ್ಚು ಭರ್ತಿಯಾಗಿರುವ ಕೆರೆಗಳು: 𝟭,𝟯𝟱𝟱
•ಪ್ರಯೋಜನ ಪಡೆಯುತ್ತಿರುವ ಒಟ್ಟು ಅಚ್ಚುಕಟ್ಟು ಪ್ರದೇಶ: 𝟰,𝟰𝟱,𝟬𝟬𝟵 ಹೆಕ್ಟೇರ್

Continue Reading

Latest

ಗುಜರಾತ್‌ ನಲ್ಲಿ ಬೃಹತ್‌ ಸೈಬರ್‌ ವಂಚನೆ ಜಾಲ ಪತ್ತೆ: 2,500 ಕೋಟಿ ಹಣ ವಂಚನೆ

VISTARANEWS.COM


on

ಗುಜರಾತ್‌: ಗುಜರಾತ್‌ನಲ್ಲಿ ಪತ್ತೆಯಾದ ಈ ಬೃಹತ್ ಸೈಬರ್ ವಂಚನೆ ಪ್ರಕರಣವು ದೇಶದ ಬ್ಯಾಂಕಿಂಗ್ ವ್ಯವಸ್ಥೆಯನ್ನೇ ಆತಂಕಕ್ಕೆ ತಳ್ಳಿದೆ. ಸುಮಾರು 2,500 ಕೋಟಿ ರೂ. ಮೊತ್ತದ ಈ ಹಗರಣದಲ್ಲಿ ಭಾಗಿಯಾಗಿದ್ದ 20 ಆರೋಪಿಗಳನ್ನು ರಾಜ್‌ಕೋಟ್ ಪೊಲೀಸರು ಬಂಧಿಸಿದ್ದು, ಇವರಲ್ಲಿ ಎಚ್.ಡಿಎಫ್.ಸಿ, ಯೆಸ್ ಮತ್ತು ಆಕ್ಸಿಸ್ ಬ್ಯಾಂಕ್‌ನಂತಹ ಪ್ರತಿಷ್ಠಿತ ಸಂಸ್ಥೆಗಳ ಅಧಿಕಾರಿಗಳೂ ಸೇರಿರುವುದು ಗಂಭೀರ ವಿಚಾರವಾಗಿದೆ.

ಈ ಬ್ಯಾಂಕ್ ಅಧಿಕಾರಿಗಳು ಸೈಬರ್ ಕ್ರಿಮಿನಲ್‌ಗಳೊಂದಿಗೆ ಶಾಮೀಲಾಗಿ, ನಕಲಿ ದಾಖಲೆಗಳನ್ನು ಬಳಸಿ ಸುಮಾರು 85ಕ್ಕೂ ಹೆಚ್ಚು ‘ಮ್ಯೂಲ್ ಅಕೌಂಟ್’ಗಳನ್ನು (ನಕಲಿ ಖಾತೆ) ತೆರೆದಿದ್ದರು. ಆರ್‌ಬಿಐ ನಿಯಮಗಳನ್ನು ಉಲ್ಲಂಘಿಸಿ ದೊಡ್ಡ ಮೊತ್ತದ ಹಣ ವರ್ಗಾವಣೆ ಮಾಡುತ್ತಿದ್ದ ಇವರು, ವ್ಯವಸ್ಥೆಯಲ್ಲಿ ಬರುವ ಎಚ್ಚರಿಕೆಗಳನ್ನು (Internal Alerts) ಬೇಕೆಂದೇ ನಿರ್ಲಕ್ಷಿಸುತ್ತಿದ್ದರು. ಬಳಿಕ ಈ ಹಣವನ್ನು ಹವಾಲಾ ದಂಧೆಯ ಮೂಲಕ ಬೇರೆಡೆ ರವಾನಿಸಿ, ವಂಚಕರಿಂದ ದೊಡ್ಡ ಮೊತ್ತದ ಕಮಿಷನ್ ಪಡೆಯುತ್ತಿದ್ದರು.

ಗೊಂಡಲ್ ಮಾರ್ಕೆಟಿಂಗ್ ಯಾರ್ಡ್‌ನ ಕಂಪನಿಯೊಂದರ ಖಾತೆಯಲ್ಲಿ ನಡೆದ 200 ಕೋಟಿ ರೂ.ಗಳ ಸಂಶಯಾಸ್ಪದ ವ್ಯವಹಾರವು ಈ ಮಹಾ ಹಗರಣವನ್ನು ಬಯಲಿಗೆಳೆದಿದೆ. ಪ್ರಸ್ತುತ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ 535 ದೂರುಗಳು ದಾಖಲಾಗಿದ್ದು, 35 ನಕಲಿ ಸಂಸ್ಥೆಗಳನ್ನು ಪೊಲೀಸರು ಗುರುತಿಸಿದ್ದಾರೆ. ತನಿಖೆ ಮುಂದುವರಿದಂತೆ ಇನ್ನೂ ಹೆಚ್ಚಿನ ಬ್ಯಾಂಕ್ ನೌಕರರು ಸಿಕ್ಕಿಬೀಳುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading

Latest

ನಟ, ರಾಜಕಾರಣಿ ವಿಜಯ್‌ ವಿರುದ್ಧ ಕಮಲ್‌ ಹಾಸನ್‌ ಆಕ್ರೋಶ; ಕಾರಣ ಏನು?

VISTARANEWS.COM


on

ತಿರುಚಿರಾಪಳ್ಳಿ: ಬಾಲ್ಯದಲ್ಲಿ ಮೇರುನಟ ಮತ್ತು ರಾಜಕಾರಣಿ ಎಂ.ಜಿ. ರಾಮಚಂದ್ರನ್, ಶಿವಾಜಿ ಗಣೇಶನ್ ಅವರ ಮಡಿಲಲ್ಲಿ ಬೆಳೆದಿದ್ದರೂ ನಾನು ರಾಜಕೀಯ ಲಾಭ ಮಾಡಿಕೊಳ್ಳಲಿಲ್ಲ ಎಂದು ನಟ ಹಾಗೂ ಮಕ್ಕಳ ನೀಧಿ ಮೈಯಂ ಪಕ್ಷದ ಅಧ್ಯಕ್ಷ ಕಮಲ್ ಹಾಸನ್ ಹೇಳಿದ್ದಾರೆ. ಟಿವಿಕೆ ಮುಖ್ಯಸ್ಥ ವಿಜಯ್‌ ಅವರನ್ನು ಗುರಿಯಾಗಿಸಿಕೊಂಡೇ ಕಮಲ್‌ ಹಾಸನ್‌ ಈ ಟೀಕೆ ಮಾಡಿದ್ದಾರೆ.

ಪೂರ್ವ ತಿರುಚಿರಾಪಳ್ಳಿ ಕ್ಷೇತ್ರದ ಡಿಎಂಕೆ ಅಭ್ಯರ್ಥಿ ಇನಿಗೋ ಎಸ್.ಇರುದಯರಾಜ್ ಪರವಾಗಿ ಪ್ರಚಾರ ನಡೆಸಿದ ಕಮಲ್ ಹಾಸನ್ ಅವರು ವಿಜಯ್‌ ಅವರ ವಿರುದ್ಧ ವಾಗ್ದಾಳಿ ನಡೆಸಿದರು. ಇತ್ತೀಚೆಗೆ ರಾಜಕೀಯ ಪ್ರವೇಶಿಸಿರುವ ನಟ ವಿಜಯ್ ತಮ್ಮನ್ನು ಎಂಜಿಆರ್ ಅವರ ಉತ್ತರಾಧಿಕಾರಿ ಎಂಬಂತೆ ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿರುವುದಕ್ಕೆ ಕಮಲ್ ಹಾಸನ್ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

ನಾನು ಕೂಡ ಬಾಲ್ಯದಲ್ಲೇ ಚಿತ್ರರಂಗ ಪ್ರವೇಶಿಸಿದೆ. ಎಂಜಿ ರಾಮಚಂರನ್‌ ಅವರಿಗೆ ನಾನು ಎಂದರೆ ತುಂಬಾ ಪ್ರೀತಿ ಇತ್ತು. ಆದರೂ ನಾನು ಆ ಸಂಪರ್ಕವನ್ನು ಎಲ್ಲೂ ಪ್ರದರ್ಶಿಸಿಕೊಳ್ಳಲಿಲ್ಲ ಅಥವಾ ದುರುಪಯೋಗಪಡಿಸಿಕೊಳ್ಳಲಿಲ್ಲ’ ಎಂದು ಹೇಳಿದ್ದಾರೆ. ತಮಿಳುನಾಡಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 23 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ.

Continue Reading

Latest

ಮಹಿಳಾ ಮೀಸಲಾತಿ ಕಾಂಗ್ರೆಸ್ ವಿರುದ್ಧ ಏಪ್ರಿಲ್. 25ರಂದು ಆಕ್ರೋಶ ಯಾತ್ರೆ: ಬಿಜೆಪಿ

VISTARANEWS.COM


on

ಬೆಂಗಳೂರು: ಮಹಿಳಾ ವಿರೋಧಿ ಕಾಂಗ್ರೆಸ್ ಮತ್ತು ಇಂಡಿ ಕೂಟದ ವಿರುದ್ಧ ರಾಜ್ಯಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಏಪ್ರಿಲ್. 25ರಂದು ಆಕ್ರೋಶ ಯಾತ್ರೆ ಮತ್ತು ಪ್ರತಿಭಟನಾ ಸಭೆಗಳನ್ನು ಏರ್ಪಡಿಸಲಾಗುವುದು ಎಂದು ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಕು.ಸಿ.ಮಂಜುಳಾ ತಿಳಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಇದೇ 27ರಿಂದ ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮತ್ತು ಬಿಜೆಪಿಯ 300 ಸಂಘಟನಾತ್ಮಕ ಮಂಡಲಗಳಲ್ಲಿ ಹೋರಾಟ ನಡೆಯಲಿದೆ. ಬಳಿಕ ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಇಂದಿನಿಂದ ಕೇಂದ್ರ ಸಚಿವರು, ಸಂಸದರು ವಿಭಾಗ ಕೇಂದ್ರಗಳಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಇಂದು ಶಿವಮೊಗ್ಗದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಮಂಗಳೂರಿನಲ್ಲಿ ಸಂಸದ ಬೃಜೇಶ್ ಚೌಟ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ನಾಳೆ ಮತ್ತು ನಾಡಿದ್ದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್- ಬೆಳಗಾವಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾವೇರಿಯಲ್ಲಿ, ಕೇಂದ್ರ ಸಚಿವ ವಿ.ಸೋಮಣ್ಣ ಅವರು 23ರಂದು ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್ ಮತ್ತು ಅವರ ಮಿತ್ರಪಕ್ಷಗಳ ಮಹಿಳಾ ವಿರೋಧಿ ನೀತಿಯ ಕುರಿತು ತಿಳಿಸಲಿದ್ದಾರೆ ಎಂದು ವಿವರ ನೀಡಿದರು. ಕಾಂಗ್ರೆಸ್ ಪಕ್ಷವು ಇತಿಹಾಸದ ಉದ್ದಕ್ಕೂ ತನ್ನ ಮಹಿಳಾ ವಿರೋಧಿ ಧೋರಣೆ ಪ್ರದರ್ಶನ ಮಾಡಿದ ಕುರಿತು ತಿಳಿಸಲಿದ್ದಾರೆ ಎಂದು ಹೇಳಿದರು. ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ ಅವರು ಮಾತ್ರ ಮಹಿಳೆಯರು ಎಂದು ಕಾಂಗ್ರೆಸ್ ಭಾವಿಸಿದಂತಿದೆ. ಸಾಮಾನ್ಯ ಮಹಿಳೆಯರಿಗೆ ಸಿಗುವ ಅವಕಾಶಗಳನ್ನು ಅದು ಕಿತ್ತುಕೊಂಡಿದೆ ಎಂದು ಆಕ್ಷೇಪಿಸಿದರು. ಭಾರತದ ನಾರಿಯರು ಕೇವಲ ಹೂವಲ್ಲ; ಅವರು ಜ್ವಾಲೆ ಕೂಡ ಎಂಬ ನಿಟ್ಟಿನಲ್ಲಿ ಈ ಆಕ್ರೋಶವನ್ನು ನಾವು ವ್ಯಕ್ತಪಡಿಸಲಿದ್ದೇವೆ ಎಂದು ಪ್ರಶ್ನೆಗೆ ಉತ್ತರ ನೀಡಿದರು.

Continue Reading
Advertisement
Latest5 ನಿಮಿಷಗಳು ago

ಬೇಸಿಗೆಯಲ್ಲೂ ಸಣ್ಣ ನೀರಾವರಿ ಕೆರೆಗಳಲ್ಲಿ ಸಮೃದ್ದ ನೀರು ಸಂಗ್ರಹ: ಸಚಿವ ಎನ್‌ ಎಸ್‌ ಭೋಸರಾಜು

Latest14 ನಿಮಿಷಗಳು ago

ಗುಜರಾತ್‌ ನಲ್ಲಿ ಬೃಹತ್‌ ಸೈಬರ್‌ ವಂಚನೆ ಜಾಲ ಪತ್ತೆ: 2,500 ಕೋಟಿ ಹಣ ವಂಚನೆ

Latest1 ಗಂಟೆ ago

ಮಹಿಳಾ ಮೀಸಲಾತಿ ವಿರೋಧಿಸಿದ ಕಾಂಗ್ರೆಸ್‌ ವಿರುದ್ಧ ಸಿಎಂ ಯೋಗಿ ಆದಿತ್ಯನಾಥ ಆಕ್ರೋಶ

Latest1 ಗಂಟೆ ago

ನಟ, ರಾಜಕಾರಣಿ ವಿಜಯ್‌ ವಿರುದ್ಧ ಕಮಲ್‌ ಹಾಸನ್‌ ಆಕ್ರೋಶ; ಕಾರಣ ಏನು?

Latest1 ಗಂಟೆ ago

ಮಹಿಳಾ ಮೀಸಲಾತಿ ಕಾಂಗ್ರೆಸ್ ವಿರುದ್ಧ ಏಪ್ರಿಲ್. 25ರಂದು ಆಕ್ರೋಶ ಯಾತ್ರೆ: ಬಿಜೆಪಿ

Latest2 ಗಂಟೆಗಳು ago

ಭಾರತ ಈಗ ‘ವಿಶ್ವಗುರು’ ಅಲ್ಲ, ಆ ಪದ ಬಳಸಬೇಡಿ: ಮುರಳಿ ಮನೋಹರ ಜೋಶಿ ಪ್ರತಿಪಾದನೆ

Latest3 ಗಂಟೆಗಳು ago

ಇಡಿ ದಾಳಿ: ಕೇಂದ್ರ ಸರ್ಕಾರ ಕಾಂಗ್ರೆಸ್ ಅನ್ನು ಗುರಿಯಾಗಿಸಿದೆ: ಸಿಎಂ ಸಿದ್ದರಾಮಯ್ಯ ಆರೋಪ

Latest3 ಗಂಟೆಗಳು ago

ಅಮೆರಿಕ ಜತೆ ಮಾತುಕತೆಗೆ ಇರಾನ್‌ ಒಪ್ಪಿಗೆ; ಇಸ್ಲಾಮಾಬಾದ್‌ನತ್ತ ಜಗತ್ತಿನ ಕಣ್ಣು; ಬಗೆಹರಿಯಲಿದೆಯೇ ಬಿಕ್ಕಟ್ಟು?

Latest3 ಗಂಟೆಗಳು ago

ಸಮಾಜದ ಪರಿವರ್ತನೆಗೆ ಬಸವಣ್ಣನ ವಿಚಾರಗಳು ಅತ್ಯಗತ್ಯ: ಸಿಎಂ ಸಿದ್ದರಾಮಯ್ಯ

Latest4 ಗಂಟೆಗಳು ago

ಕೃಷ್ಣಗಿರಿ ಜಿಲ್ಲೆಯಲ್ಲಿ ಕಾಂಗ್ರೆಸ್-ಡಿಎಂಕೆ ಅಭ್ಯರ್ಥಿಗಳ ಪರ ಸಚಿವ ಈಶ್ವರ ಖಂಡ್ರೆ ಪ್ರಚಾರ

galipata neetu
ಕಿರುತೆರೆ2 ವರ್ಷಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 ವರ್ಷಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 ವರ್ಷಗಳು ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 ವರ್ಷಗಳು ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 ವರ್ಷಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 ವರ್ಷಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ2 ವರ್ಷಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 ವರ್ಷಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 ವರ್ಷಗಳು ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 ವರ್ಷಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 ವರ್ಷಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 ವರ್ಷಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 ವರ್ಷಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 ವರ್ಷಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ವರ್ಷಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ವರ್ಷಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ವರ್ಷಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ವರ್ಷಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ವರ್ಷಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ವರ್ಷಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌