Congress And Muslims: ಮುಸ್ಲಿಮರು ಕಾಂಗ್ರೆಸ್‌ ನಾಯಕರ ಗುಲಾಮರಲ್ಲ! ಪಕ್ಷದ ಮುಖಂಡ ಖುರೇಶಿ ವಾರ್ನಿಂಗ್‌ - Vistara News

ದೇಶ

Congress And Muslims: ಮುಸ್ಲಿಮರು ಕಾಂಗ್ರೆಸ್‌ ನಾಯಕರ ಗುಲಾಮರಲ್ಲ! ಪಕ್ಷದ ಮುಖಂಡ ಖುರೇಶಿ ವಾರ್ನಿಂಗ್‌

ಉತ್ತರ ಪ್ರದೇಶದ ರಾಜ್ಯಪಾಲ, ಮಧ್ಯಪ್ರದೇಶದ ಸಚಿವ ಮತ್ತು ಲೋಕಸಭೆಯ ಸದಸ್ಯರಾಗಿದ್ದ 82 ವರ್ಷದ ಖುರೇಶಿ ಅವರ ಹೇಳಿಕೆಗಳು ಕಾಂಗ್ರೆಸ್‌ ಪಕ್ಷವನ್ನು (Congress and muslims) ಮುಜುಗರಕ್ಕೀಡುಮಾಡಿದೆ.

VISTARANEWS.COM


on

Congress And Muslims aziz qureshi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಭೋಪಾಲ್‌: ಮಧ್ಯಪ್ರದೇಶದ ಹಿರಿಯ ಕಾಂಗ್ರೆಸ್‌ ನಾಯಕ ಅಜೀಜ್‌ ಖುರೇಶಿ ತಮ್ಮದೇ ಪಕ್ಷದ (Congress and muslims) ನಿಲುವುಗಳ ವಿರುದ್ಧ ಕಿಡಿಕಾರಿದ್ದು, ಮುಸ್ಲಿಮರು ಕಾಂಗ್ರೆಸ್‌ ನಾಯಕರ ಆದೇಶಕ್ಕೆ ಅನುಸಾರವಾಗಿ ವರ್ತಿಸುವ ಗುಲಾಮರಲ್ಲ ಎಂದಿದ್ದಾರೆ.

ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಜನ್ಮದಿನಾಚರಣೆಯ ಸಂದರ್ಭದಲ್ಲಿ ವಿದಿಶಾದಲ್ಲಿ ನಡೆದ ಕಾಂಗ್ರೆಸ್‌ನ ಮುಸ್ಲಿಂ ಮುಖಂಡರ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು. ಉತ್ತರ ಪ್ರದೇಶದ ರಾಜ್ಯಪಾಲ, ಮಧ್ಯಪ್ರದೇಶದ ಸಚಿವ ಮತ್ತು ಲೋಕಸಭೆಯ ಸದಸ್ಯರಾಗಿದ್ದ 82 ವರ್ಷದ ಖುರೇಶಿ ಅವರ ಹೇಳಿಕೆಗಳು ಕಾಂಗ್ರೆಸ್‌ ಪಕ್ಷವನ್ನು ಮುಜುಗರಕ್ಕೀಡುಮಾಡಿದೆ.

“ಕಾಂಗ್ರೆಸ್‌ ಸೇರಿದಂತೆ ಎಲ್ಲಾ ಪಕ್ಷಗಳು, ಅವರ ಆಜ್ಞಾನುಸಾರ ವರ್ತಿಸುವಂಥ ಗುಲಾಮರಲ್ಲ ಮುಸ್ಲಿಮರು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಪೊಲೀಸ್‌, ಸೇನೆ, ಬ್ಯಾಂಕ್‌ ಮುಂತಾದೆಡೆಗಳಲ್ಲಿ ಮುಸ್ಲಿಮರಿಗೆ ಉದ್ಯೋಗವಿಲ್ಲ ಎಂದಾದರೆ ನಿಮಗಾಗಿ ಅವರೇಕೆ ಮತ ಹಾಕಬೇಕು? ಬ್ಯಾಂಕ್‌ ಸಾಲದ ಖಾತ್ರಿಯಿಲ್ಲ ಎಂದಾದರೆ ಅವರೇಕೆ ನಿಮಗೆ ಮತ ನೀಡಬೇಕು? ಅವರ ಮನೆ, ಅಂಗಡಿಗಳನ್ನು ಸುಡಲಾಗುತ್ತದೆ ಎಂದಾದರೆ, ಅವರ ಮಕ್ಕಳು ಅನಾಥರಾಗುತ್ತಾರೆ ಎಂದಾದರೆ ಅದನ್ನು ಸಹಿಸುವುದು ಹೇಗೆ? ಅವರೇನು ಹೇಡಿಗಳಲ್ಲ, ಜೀವ ತೆರಲೂ ಸಿದ್ಧರಿದ್ದಾರೆ” ಎಂದು ಅಜೀಜ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ಈಗ ಹಿಂದುತ್ವದ ಬಗ್ಗೆ ಮಾತಾಡುತ್ತಿದೆ. ಜೈ ಗಂಗಾ ಮಾತೆ, ಜೈ ನರ್ಮದಾ ಮಾತೆ ಮುಂತಾದ ಘೋಷಣೆಗಳನ್ನು ಕಾಂಗ್ರೆಸಿಗರು ಮೊಳಗಿಸುತ್ತಿದ್ದಾರೆ. ಧಾರ್ಮಿಕ ಯಾತ್ರೆಗಳ ಮಾಡುತ್ತಿದ್ದಾರೆ. ಮಧ್ಯಪ್ರದೇಶ ಕಾಂಗ್ರೆಸ್‌ ಕಚೇರಿಯಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸುತ್ತಿದ್ದಾರೆ. ಇದು ನಾಚಿಕೆಗೇಡು. ಇದಕ್ಕಾಗಿ ಪಕ್ಷದಿಂದ ಕಿತ್ತು ಹಾಕಿದರೂ ತಮಗೇನೂ ಭಯವಿಲ್ಲ ಎಂದು ಖರೇಶಿ ಗುಡುಗಿದ್ದಾರೆ.

ಈ ಬಗ್ಗೆ ಕಾಂಗ್ರೆಸ್‌ ಸುರಕ್ಷಿತ ಅಂತರ ಕಾಯ್ದುಕೊಂಡಿದ್ದು, “ಅದು ಅವರ ವೈಯಕ್ತಿಕ ಅಭಿಪ್ರಾಯ. ಜಾತ್ಯತೀತತೆಯಲ್ಲಿ ಕಾಂಗ್ರೆಸ್‌ಗೆ ನಂಬಿಕೆಯಿದೆ” ಎಂದು ಪಕ್ಷದ ಮಧ್ಯಪ್ರದೇಶದ ವಕ್ತಾರ ಕೆ.ಕೆ. ಮಿಶ್ರಾ ಹೇಳಿದ್ದಾರೆ. ಇತ್ತ, ಈ ಅವಕಾಶವನ್ನು ಕೈ ಚೆಲ್ಲದ ಬಿಜೆಪಿ, “ಅಲ್ಪಸಂಖ್ಯಾತರ ಓಲೈಕೆಯನ್ನೇ ಕಾಂಗ್ರೆಸ್‌ ನೆಚ್ಚಿಕೊಂಡಿದೆ ಎಂಬುದು ಇದರಿಂದಲೇ ತಿಳಿಯುತ್ತದೆ. ಖರೇಶಿ ಅವರ ಪ್ರಚೋದನಕಾರಿ ಹೇಳಿಕೆಗಳ ಬಗ್ಗೆ ತನ್ನ ನಿಲುವನ್ನು ಕಾಂಗ್ರೆಸ್‌ ಸ್ಪಷ್ಟಪಡಿಸಬೇಕು” ಎಂದು ರಾಜ್ಯದ ಬಿಜೆಪಿ ವಕ್ತಾರ ನರೇಂದ್ರ ಸಲುಜಾ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Congress Party: ಗುಲಾಮ್ ನಬಿ ಆಜಾದ್‌ಗೆ ‘ಕೈ’ಕೊಟ್ಟರು! ಮರಳಿ ಕಾಂಗ್ರೆಸ್ ಕೈ ಹಿಡಿದ ಜಮ್ಮು-ಕಾಶ್ಮೀರ ನಾಯಕರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ

Latest

ಬಿಜೆಪಿ ಬಂಗಾಳ ಗೆದ್ದಾಯ್ತು, ಸಿಎಂ ರೇಸ್‌ನಲ್ಲಿ ಯಾರು?

VISTARANEWS.COM


on

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಭರ್ಜರಿ 206 ಸೀಟುಗಳನ್ನು ಗೆದ್ದಿದೆ. ಮೂರನೇ ಎರಡರಷ್ಟು ಬಹುಮತ ಪಕ್ಷಕ್ಕೆ ಸಿಕ್ಕಿದೆ. ಮಮತಾ ಬ್ಯಾನರ್ಜಿ ತನ್ನ ತವರು ಕ್ಷೇತ್ರ ಭವಾನಿಪುರದಲ್ಲೇ ಸೋತಿದ್ದಾರೆ. ಮಮತಾ ಬ್ಯಾನರ್ಜಿಯನ್ನೇ ಸೋಲಿಸಿ ಬಿಜೆಪಿಯ ಸುವೇಂದು ಅಧಿಕಾರಿ, ರಣಧೀರ ಅನ್ನಿಸಿಕೊಂಡಿದ್ದಾರೆ. ನಂದಿಗ್ರಾಮದಲ್ಲೂ ಸುವೇಂದು ಅಧಿಕಾರಿ ಜಯಭೇರಿ ಬಾರಿಸಿದ್ದಾರೆ. ಹಾಗಾದರೆ, ಸುವೇಂದು ಅಧಿಕಾರಿ ಪಶ್ಚಿಮ ಬಂಗಾಳದ ಮುಂದಿನ ಮುಖ್ಯಮಂತ್ರಿಯಾ?. ಬಿಜೆಪಿಯ ಯಾವತ್ತಿಗೂ ಅಚ್ಚರಿಯ ನಿರ್ಧಾರ ಪ್ರಕಟಿಸುವಲ್ಲಿ ಎತ್ತಿದ ಕೈ. ಹಾಗಾಗಿ, ಪಶ್ಚಿಮ ಬಂಗಾಳದ ಸಿಎಂ ಯಾರಾಗಬಹುದು? ರೇಸ್‌ನಲ್ಲಿ ಇರೋರು ಯಾರು?
1. ಸುವೇಂದು ಅಧಿಕಾರಿ:
ಸದ್ಯ ಪಶ್ಚಿಮ ಬಂಗಾಳದ ಪ್ರತಿಪಕ್ಷ ನಾಯಕ. ಒಂದು ಕಾಲದಲ್ಲಿ ಟಿಎಂಸಿಯಲ್ಲಿದ್ದಾಗ ಮಮತಾ ಬ್ಯಾನರ್ಜಿ ಪರಮಾಪ್ತ. ಬಿಜೆಪಿಗೆ ಬಂದ ನಂತರ ದೀದಿಯ ಪ್ರಥಮ ಎದುರಾಳಿ. ದೀದಿಯನ್ನು ಅವರ ಭದ್ರಕೋಟೆ ಭವಾನಿಪುರದಲ್ಲೇ ಸೋಲಿಸಿದ ಖ್ಯಾತಿ. ನಂದಿಗ್ರಾಮವನ್ನೂ ಸಹ ಗೆದ್ದಿದ್ದಾರೆ. ಬಿಜೆಪಿಯ ಚುನಾವಣಾ ಯಂತ್ರ ಮುನ್ನಡೆಸಿದ ನೇತಾರ. ಮಮತಾಗೆ ತಕ್ಕ ಟಕ್ಕರ್‌ ಕೊಡಬಲ್ಲ ಬಿಜೆಪಿಯ ಫೈರ್‌ಬ್ರಾಂಡ್‌ ನಾಯಕ. ಸದ್ಯ ರೇಸ್‌ನಲ್ಲಿ ಮುಂಚೂಣಿಯಲ್ಲಿರುವುದು ಸುವೇಂದು ಅಧಿಕಾರಿ.
2. ಶಮಿಕ್‌ ಭಟ್ಟಾಚಾರ್ಯ:
ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ. ಬಿಜೆಪಿಯನ್ನು ತಳಮಟ್ಟದಲ್ಲಿ ಸಂಘಟಿಸಿದ ಲೀಡರ್‌. ಬೂತ್‌ ಮ್ಯಾನೇಜ್ಮೆಂಟ್‌, ಚುನಾವಣಾ ರಣತಂತ್ರ, ಕಾರ್ಯಕರ್ತರ ನಾಡಿ ಮಿಡಿತ ಅರಿಯಬಲ್ಲ ನಾಯಕ. ಗುಪ್ತಗಾಮಿನಿಯಾಗಿ ಬಿಜೆಪಿಯ ಪ್ರಚಾರ ತಂತ್ರ ನಿರ್ವಹಿಸಿದ್ದರು.
3. ದಿಲೀಪ್‌ ಘೋಷ್‌:
2019ರಿಂದ ಬಂಗಾಳದಲ್ಲಿ ಬಿಜೆಪಿಯನ್ನು ಸಂಘಟಿಸಿದ್ದವರು ದಿಲೀಪ್‌ ಘೋಷ್‌. ಬಿಜೆಪಿ ಬಂಗಾಳದಲ್ಲಿ ಮೂರು ಸ್ಥಾನಗಳಿಂದ 206 ಸ್ಥಾನಗಳಿಗೇರುವಲ್ಲಿ ದಿಲೀಪ್‌ ಘೋಷ್‌ ಪಾತ್ರ ದೊಡ್ಡದು. ಕಾರ್ಯಕರ್ತರಿಗೆ ಕನೆಕ್ಟ್‌ ಆಗುವ ಅನುಭವಿ ನಾಯಕ.
4. ರೂಪಾ ಗಂಗೂಲಿ:
ಮಹಾಭಾರತ ಧಾರಾವಾಹಿಯ “ದ್ರೌಪದಿ” ಪಾತ್ರಧಾರಿಯೇ ರೂಪಾ ಗಂಗೂಲಿ. ಕಿರುತೆರೆ ಧಾರಾವಾಹಿ ಕಾರಣದಿಂದ ಜನಮನದಲ್ಲಿರುವ ನಾಯಕಿ. ಮಮತಾಗೆ ಪರ್ಯಾಯವಾಗಿ ಮಹಿಳಾ ನಾಯಕಿಯನ್ನೇ ಬೆಳೆಸಬೇಕು ಎಂಬ ರಣತಂತ್ರ ಬಿಜೆಪಿಯಲ್ಲಿದ್ದರೆ, ರೂಪಾ ಗಂಗೂಲಿ ಹೆಸರು ಪ್ರಸ್ತಾಪವಾದರೆ ಅಚ್ಚರಿಯಿಲ್ಲ.
5. ಅಗ್ನಿಮಿತ್ರಾ ಪೌಲ್‌:
ಬಿಜೆಪಿಯ ಹೊಸ ತಲೆಮಾರಿನ ಫೈರ್‌ ಬ್ರಾಂಡ್‌ ನಾಯಕಿ. ಮಹಿಳಾ ವಿಷಯಗಳ ಬಗ್ಗೆ ಖಡಕ್‌ ಧ್ವನಿ ಎತ್ತುವ ಅಗ್ನಿಮಿತ್ರಾ, ಮಾಧ್ಯಮಗಳಲ್ಲಿ ಬಿಜೆಪಿ ಇಮೇಜ್‌ ಬೆಳೆಸುವಲ್ಲಿ ದೊಡ್ಡ ಹೆಸರು. ಮಹಿಳಾ ನಾಯಕಿ ಎಂಬ ಕೆಟಗರಿಯಲ್ಲಿ ಅಗ್ನಿಮಿತ್ರಾ ಪೌಲ್‌ ಸ್ಪರ್ಧೆಯಲ್ಲಿದ್ದಾರಂತೆ.

Continue Reading

Latest

ತಮಿಳುನಾಡು: ಬಹುಮತ ಪಡೆಯಲು ದಳಪತಿ ಮುಂದಿರುವ ತಂತ್ರಗಳೇನು?

VISTARANEWS.COM


on

ವಿಜಯ್‌ ತಮಿಳುನಾಡಿನ ಮುಂದಿನ ಮುಖ್ಯಮಂತ್ರಿ. ಇದು ನಿಚ್ಚಳವಾಗುತ್ತಿದೆ. ಸರ್ಕಾರ ರಚನೆಗೆ ಈಗಾಗಲೇ ಟಿವಿಕೆ ಹಕ್ಕು ಮಂಡಿಸಿದೆ. ಎರಡು ವಾರಗಳಲ್ಲಿ ಬಹುಮತ ಸಾಬೀತು ಪಡಿಸುವುದಾಗಿಯೂ ಹೇಳಿದೆ. 234 ಸದಸ್ಯ ಬಲದ ತಮಿಳುನಾಡಿನ ಅಸೆಂಬ್ಲಿಯಲ್ಲಿ ಟಿವಿಕೆಗೆ ಸಿಕ್ಕಿದ್ದು 108 ಕ್ಷೇತ್ರ ಮಾತ್ರ. ಸರಳ ಬಹುಮತದ ನಂಬರ್‌ 118 ತಲುಪಲು ವಿಜಯ್‌ಗೆ ಇನ್ನೂ 10 ಶಾಸಕರು ಬೇಕು. ಬಹುಮತ ಸಾಬೀತು ಪಡಿಸುವುದಷ್ಟೇ ಅಲ್ಲ, ಭವಿಷ್ಯದಲ್ಲಿ ಸರ್ಕಾರವೂ ಸುಭದ್ರವಾಗಿರಬೇಕು. ಈ ನಿಟ್ಟಿನಲ್ಲಿ ನಟ ವಿಜಯ್‌ ಮುಂದಿರುವ ಆಯ್ಕೆಗಳೇನು?
1. ತಮಿಳುನಾಡಿನ ಸಣ್ಣ ಪಕ್ಷಗಳೊಂದಿಗೆ ಮೈತ್ರಿ:
ಹತ್ತು ಶಾಸಕರಿಗಾಗಿ ವಿಜಯ್‌ ತಮಿಳುನಾಡಿನ ಸಣ್ಣ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಬಹುದು. ಕಾಂಗ್ರೆಸ್‌ 5, ಪಿಎಂಕೆ 4, ಮುಸ್ಲಿಂ ಲೀಗ್‌ 2, ಸಿಪಿಐ 2, ವಿಸಿಕೆ 2, ಸಿಪಿಐಎಂ 2, ಡಿಎಂಡಿಕೆ 1, AMMKMNKZ 1 ಗೆದ್ದಿವೆ. ಈ ಎಲ್ಲಾ ಸಣ್ಣ ಪಕ್ಷಗಳನ್ನು ಸೇರಿಸಿದರೆ, ವಿಜಯ್‌ಗೆ 19 ಶಾಸಕರ ಬೆಂಬಲ ಸಿಗಲಿದೆ. ಕಾಂಗ್ರೆಸ್‌ ಈಗಾಗಲೇ ಟಿವಿಕೆಗೆ ಬೆಂಬಲದ ಮಾತುಗಳನ್ನಾಡಿದೆ.
೨. ಎಐಎಡಿಎಂಕೆ ಜೊತೆ ಮೈತ್ರಿ:
ಎಐಎಡಿಎಂಕೆ ಜೊತೆ ಟಿವಿಕೆ ಮೈತ್ರಿಯ ಸಾಧ್ಯತೆಯೂ ಎರಡನೇ ಆಯ್ಕೆ. ಬಿಜೆಪಿ ಹೊರತುಪಡಿಸಿ ಮೈತ್ರಿಗೆ ಟಿವಿಕೆ ಷರತ್ತು ಹಾಕಬಹುದು. ಎಐಎಡಿಎಂಕೆ 47 ಸ್ಥಾನಗಳನ್ನು ಗೆದ್ದಿದೆ. ಟಿವಿಕೆ-ಎಐಎಡಿಎಂಕೆ ಮೈತ್ರಿಯಾದರೆ ಸುಭದ್ರ ಸರ್ಕಾರ ನೀಡಬಹುದು.
೩. ಡಿಎಂಕೆ ಬಾಹ್ಯ ಬೆಂಬಲ ಸಾಧ್ಯತೆ
ಸಣ್ಣ ಪಕ್ಷಗಳೂ ಸಿಗಲಿಲ್ಲ. ಎಐಎಡಿಎಂಕೆ ಜೊತೆ ಮೈತ್ರಿ ಕುದುರಲಿಲ್ಲ ಎಂದಾದರೆ, ಡಿಎಂಕೆ ಬಾಹ್ಯ ಬೆಂಬಲ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಎಐಎಡಿಎಂಕೆಯನ್ನು ಅಧಿಕಾರದಿಂದ ದೂರ ಇಡಲು, ಡಿಎಂಕೆ ಈ ನಿರ್ಧಾರಕ್ಕೆ ಬಂದರೂ ಬರಬಹುದು ಎನ್ನಲಾಗುತ್ತಿದೆ. ಆದರೆ, ಡಿಎಂಕೆ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸಲಿದೆ ಎಂದು ಈಗಾಗಲೇ ಸ್ಟಾಲಿನ್‌ ಹೇಳಿದ್ದಾರೆ.

Continue Reading

Latest

ಪಶ್ಚಿಮ ಬಂಗಾಳದಲ್ಲಿ ಕೇಸರಿ, ತಮಿಳುನಾಡಲ್ಲಿ ದಳಪತಿ, ಕೇರಳಂನಲ್ಲಿ ಕಾಂಗ್ರೆಸ್‌ ದರ್ಬಾರ್‌

VISTARANEWS.COM


on

ಪಂಚರಾಜ್ಯಗಳ ಫಲಿತಾಂಶ ಹೊರಬಿದ್ದಿದೆ. ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿಯಲ್ಲಿ ಬಿಜೆಪಿ ಭರ್ಜರಿ ಗೆಲುವಿನ ನಗೆ ಬೀರಿದೆ. ತಮಿಳುನಾಡಿನಲ್ಲಿ ಟಿವಿಕೆ ಅಚ್ಚರಿ ಮೂಡಿಸಿದ್ದು, ಅಧಿಕಾರದ ಸನಿಹದಲ್ಲಿದೆ. ಕೇರಳಂ ಸೋಲಿನೊಂದಿಗೆ ಭಾರತದಲ್ಲಿ ಎಡರಂಗದ ಅಧಿಕಾರ ಕೊನೆಗೊಂಡಿದೆ. ಮಲೆಯಾಳಿಗಳ ರಾಜ್ಯದಲ್ಲಿ ಹತ್ತು ವರ್ಷಗಳ ಬಳಿಕ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಅಧಿಕಾರಕ್ಕೆ ಬಂದಿದೆ.
ಪಶ್ಚಿಮ ಬಂಗಾಳದಲ್ಲಿ 15 ವರ್ಷಗಳ ಮಮತಾ ಆಡಳಿತವನ್ನು ಬಿಜೆಪಿ ಕೊನೆಗಾಣಿಸಿದೆ. ಪಶ್ಚಿಮ ಬಂಗಾಳ ಗೆಲುವಿಗಾಗಿ ಹಠವಿಡಿದ ಬಿಜೆಪಿ ಕೊನೆಗೂ ಯಶ ಸಾಧಿಸಿದೆ. 294 ಸದಸ್ಯ ಬಲದ ಪಶ್ಚಿಮ ಬಂಗಾಳ ಅಸೆಂಬ್ಲಿಯಲ್ಲಿ, ಬಿಜೆಪಿ ಮೂರನೇ ಎರಡು ಭಾಗದಷ್ಟು ಸೀಟುಗಳನ್ನು ಗೆದ್ದಿದೆ. ಕಾಂಗ್ರೆಸ್‌, ಎಡರಂಗ ತಲಾ ಎರಡು ಸೀಟುಗಳಿಗೆ ತೃಪ್ತಿಪಡಬೇಕಾಗಿದೆ. ಇದು ಬಿಜೆಪಿಯ ಅತಿದೊಡ್ಡ ಗೆಲುವಾಗಿದೆ.
ನಟ ವಿಜಯ್‌ ಸುನಾಮಿಗೆ ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ಕೊಚ್ಚಿ ಹೋಗಿದೆ. ಸ್ಟಾಲಿನ್‌, ಉದಯನಿಧಿ ಸ್ಟಾಲಿನ್‌ ಸೇರಿದಂತೆ ಘಟಾನುಘಟಿ ನಾಯಕರು ನೆಲಕಚ್ಚಿದ್ದಾರೆ. ನಟ ವಿಜಯ್‌ ನೇತೃತ್ವದ ಟಿವಿಕೆ ತನ್ನ ಚೊಚ್ಚಲ ಚುನಾವಣೆಯಲ್ಲೇ ಅಧಿಕಾರಕ್ಕೆ ಹತ್ತಿರದಲ್ಲಿದೆ. 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಟಿವಿಕೆ 108 ಕ್ಷೇತ್ರಗಳನ್ನು ಗೆದ್ದಿದೆ. ಡಿಎಂಕೆ 79 ಮತ್ತು ಎಐಎಡಿಎಂಕೆ 54 ಕಡೆ ಗೆಲುವು ದಾಖಲಿಸಿವೆ. ದ್ರಾವಿಡ ನಾಡಲ್ಲಿ ನಟ ವಿಜಯ್‌ ಇತಿಹಾಸ ಸೃಷ್ಟಿಸಿದ್ದಾರೆ.
ಇನ್ನು ಕೇರಳಂನಲ್ಲಿ ಆಡಳಿತ ವಿರೋಧಿ ಅಲೆಗೆ ಆಡಳಿತಾರೂಢ ಲೆಫ್ಟ್‌ ಡೆಮಾಕ್ರಾಟಿಕ್‌ ಫ್ರಂಟ್‌ ನೆಲಕಚ್ಚಿದೆ. ಕೇರಳಂ ಫಲಿತಾಂಶ ಮಾತ್ರ ಕಾಂಗ್ರೆಸ್‌ ಖುಷಿಗೆ ಕಾರಣವಾಗಿದೆ. 140 ಸದಸ್ಯ ಬಲದ ವಿಧಾನಸಭೆಯಲ್ಲಿ ಯುಡಿಎಫ್‌ 100 ಕ್ಷೇತ್ರಗಳನ್ನು ಗೆದ್ದಿದೆ. ಎಲ್‌ಡಿಎಫ್‌ 35ಕ್ಕೆ ಸ್ಥಾನಗಳಿಗೆ ಸೀಮಿತವಾಗಿದೆ. ಇದರೊಂದಿಗೆ ದೇಶದಲ್ಲಿ ಎಡರಂಗದ ಆಡಳಿತ ಅಂತ್ಯವಾಗಿದೆ.
ಅಸ್ಸಾಂನಲ್ಲಿ ಬಿಜೆಪಿ ಗೆಲುವಿನ ಹ್ಯಾಟ್ರಿಕ್‌ ಬಾರಿಸಿದೆ. ಹಿಮಂತ ಬಿಸ್ವ ಶರ್ಮಾ ನಾಯಕತ್ವದ ಮುಂದೆ ಗೌರವ್‌ ಗೊಗೊಯಿ ನೇತೃತ್ವದ ಕಾಂಗ್ರೆಸ್‌ ಹೀನಾಯವಾಗಿ ಸೋತಿದೆ. 126 ಸದಸ್ಯ ಬಲದ ಅಸ್ಸಾಂ ಅಸೆಂಬ್ಲಿಯಲ್ಲಿ ಬಿಜೆಪಿ 102 ಸ್ಥಾನಗಳಲ್ಲಿ ಜಯಭೇರಿ ದಾಖಲಿಸಿದೆ. ಕಾಂಗ್ರೆಸ್‌ 21 ಕ್ಷೇತ್ರಗಳನ್ನು ಗೆದ್ದುಕೊಂಡಿದೆ.
ಇನ್ನು ಪುದುಚೇರಿಯಲ್ಲಿ ಎನ್‌ಡಿಎ ಅಧಿಕಾರ ಉಳಿಸಿಕೊಂಡಿದೆ. 30 ಸದಸ್ಯ ಬಲದ ಅಸೆಂಬ್ಲಿಯಲ್ಲಿ ಎನ್‌ಡಿಎ 18 ಸ್ಥಾನಗಳನ್ನು ಗೆದ್ದಿದೆ. ಡಿಎಂಕೆ ಮೈತ್ರಿಕೂಟ 7 ಹಾಗೂ ಟಿವಿಕೆಯ ಮೂವರು ಗೆಲುವಿನ ನಗೆ ಬೀರಿದ್ದಾರೆ.

Continue Reading

Latest

ಜನಪ್ರಿಯತೆಯಲ್ಲಿ ಪ್ರಧಾನಿ ಮೋದಿ ಈಗಲೂ ನಂ.1

VISTARANEWS.COM


on

ಅಸ್ಸಾಂ, ಪುದುಚೇರಿಯಲ್ಲಿ ಬಿಜೆಪಿ ಪ್ರಚಂಡ ಜಯಭೇರಿ ಸಾಧ್ಯತೆ, ಪಶ್ಚಿಮ ಬಂಗಾಳದಲ್ಲಿ ದೀದಿಗೆ ಸಮಬಲದ ಟಕ್ಕರ್‌, ತಮಿಳುನಾಡು-ಕೇರಳಂನಲ್ಲಿ ವೋಟ್‌ ಶೇರ್‌ ಹೆಚ್ಚಳ – ಪಂಚ ರಾಜ್ಯಗಳ ಎಕ್ಸಿಟ್‌ ಪೋಲ್‌ನಲ್ಲಿ ಬಿಜೆಪಿ ಕುರಿತ ಈ ಸಮೀಕ್ಷೆ ನಿಜವಾದರೆ ಅದು ಮತ್ತೊಮ್ಮೆ ಮೋದಿ ಮ್ಯಾಜಿಕ್‌ ಎಂದೇ ಹೇಳಬಹುದು.
ಪಂಚ ರಾಜ್ಯಗಳ ಚುನಾವಣಾ ಸನ್ನಿವೇಶವೇ ಮೋದಿ ನೇತೃತ್ವದ ಬಿಜೆಪಿಗೆ ಒಂದು ಸವಾಲಾಗಿತ್ತು. ಮಧ್ಯಪ್ರಾಚ್ಯ ಯುದ್ಧದ ಪರಿಣಾಮಗಳು ಪ್ರಧಾನಿ ಮೋದಿಯವರಿಗೆ ಅತಿದೊಡ್ಡ ಸವಾಲು ಸೃಷ್ಟಿಸಿತ್ತು. ಏಕಾಏಕಿ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ, ಹೊಟೇಲು-ಇತರ ಉದ್ಯಮಗಳಿಗೆ ಕಮರ್ಶಿಯಲ್‌ ಗ್ಯಾಸ್‌ ಪೂರೈಕೆ ಬುಡಮೇಲು, ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತ. ಇವೆಲ್ಲಾ ಚುನಾವಣೆಯ ಮುಖ್ಯ ವಿಷಯಗಳಾಗಿದ್ದವು. ಹರಿಯಾಣ, ಮಹಾರಾಷ್ಟ್ರ, ದೆಹಲಿ, ಬಿಹಾರ ಗೆಲುವಿನ ನಂತರ ಅಸ್ಸಾಂ, ಪುದುಚೇರಿ, ಮುಖ್ಯವಾಗಿ ಪಶ್ಚಿಮ ಬಂಗಾಳವನ್ನು ಗೆಲ್ಲಲ್ಲೇ ಬೇಕಾದ ಹಠಕ್ಕೆ ಬಿಜೆಪಿ ಬಿದ್ದಿತ್ತು. ಈ ಗೆಲುವಿಗೆ ಬಿಜೆಪಿ ಅವಲಂಬಿಸಿದ್ದು ಪ್ರಧಾನಿ ಮೋದಿಯವರ ಜನಪ್ರಿಯತೆಯನ್ನು. ಸಂಕಷ್ಟದ ಕಾಲದಲ್ಲಿ ಮೋದಿ ಸರ್ಕಾರ ನಿರ್ವಹಿಸಿದ ರೀತಿ ಜನ ಮೆಚ್ಚುಗೆಗೆ ಪಾತ್ರವಾಗಿತ್ತು. ಗೃಹ ಬಳಕೆ ಗ್ಯಾಸ್‌ ಪೂರೈಕೆ ವ್ಯತ್ಯಯವಾಗಲು ಮೋದಿ ಸರ್ಕಾರ ಬಿಡಲಿಲ್ಲ. ಬಹುತೇಕ ದೇಶಗಳು ಪೆಟ್ರೋಲ್‌, ಡೀಸೆಲ್‌ ಬೆಲೆ ಶೇಕಡಾ 20ರಿಂದ 30 ರಷ್ಟು ಏರಿಕೆ ಮಾಡಿದರೂ, ಮೋದಿ ಸರ್ಕಾರ ಸಾಧಾರಣ ಪೆಟ್ರೋಲ್‌ ಡೀಸೆಲ್‌ ಬೆಲೆ ಏರಿಸಲಿಲ್ಲ. ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ನೇರ ಜನರ ಮೇಲೆ ಬೀಳಲು ಮೋದಿ ಸರ್ಕಾರ ಬಿಡಲಿಲ್ಲ.
ಪ.ಬಂಗಾಳ ಗೆದ್ದರೆ ಅತಿ ದೊಡ್ಡ ಸಾಧನೆ:
ದೀದಿ ನಾಡನ್ನು ಗೆಲ್ಲಲು ಬಿಜೆಪಿ ಕಳೆದ 15 ವರ್ಷಗಳಿಂದ ಶಕ್ತಿ ಮೀರಿ ಶ್ರಮಿಸುತ್ತಿದೆ. ಈ ಸಲ, ದೀದಿ ನಾಡಲ್ಲಿ ಮೋದಿ ಹವಾ ಸೃಷ್ಟಿಯಾಗಿದೆ ಎಂದೇ ಎಕ್ಸಿಟ್‌ ಪೋಲ್‌ಗಳು ಹೇಳುತ್ತಿವೆ. ಬಂಗಾಳವನ್ನು ಗೆದ್ದರೆ ಬಿಜೆಪಿಯ ದಿಗ್ವಿಜಯದ ಪಟ್ಟಿಯಲ್ಲೊಂದು ಮೈಲಿಗಲ್ಲು. ಮೋದಿ ಜನಪ್ರಿಯತೆ ಕಡಿಮೆಯಾಗಿಲ್ಲ, ಬದಲಿಗೆ ಇನ್ನಷ್ಟು ಗಟ್ಟಿಯಾಗುತ್ತಿದೆ ಎನ್ನುವುದರ ಸೂಚಕ.
ಇನ್ನು ಪುದುಚೇರಿ, ತಮಿಳುನಾಡು, ಕೇರಳಂನಲ್ಲೂ ಮೋದಿ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿರೋದು ಎಕ್ಸಿಟ್‌ ಪೋಲ್‌ ದತ್ತಾಂಶಗಳು ಹೇಳುತ್ತಿವೆ. ತಮಿಳುನಾಡು, ಕೇರಳಂನಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಸಾಧ್ಯತೆಗಳು ಇಲ್ಲದೇ ಹೋದರೂ ಕೂಡಾ, ಬಿಜೆಪಿಯ ಮತ ಪ್ರಮಾಣ ಏರಿಕೆಯಾಗಿದೆ ಎನ್ನುತ್ತಿವೆ ಸಮೀಕ್ಷೆಗಳು.
ಹಾಗೇ ನೋಡಿದರೆ, ಜಾಗತಿಕ ಮಟ್ಟದಲ್ಲಿ ಮೋದಿ ಅತಿ ಜನಪ್ರಿಯ ವ್ಯಕ್ತಿ. ಮಾರ್ಚ್‌ 2026ರ ಅವಧಿಯಲ್ಲಿ ಮೋದಿ ಅಪ್ರೂವಲ್‌ ರೇಟ್‌ ಶೇ 70ರಷ್ಟಿತ್ತು. ವಿಶ್ವದ ಜನಪ್ರಿಯ ನಾಯಕರ ಸಾಲಿನಲ್ಲಿ ಪ್ರಧಾನಿ ಮೋದಿಯೇ ಮೊದಲಿಗರಾಗಿದ್ದಾರೆ.

Continue Reading
Advertisement
Latest11 seconds ago

ಬಿಜೆಪಿ ಬಂಗಾಳ ಗೆದ್ದಾಯ್ತು, ಸಿಎಂ ರೇಸ್‌ನಲ್ಲಿ ಯಾರು?

Latest10 minutes ago

ತಮಿಳುನಾಡು: ಬಹುಮತ ಪಡೆಯಲು ದಳಪತಿ ಮುಂದಿರುವ ತಂತ್ರಗಳೇನು?

Latest20 hours ago

ಪಶ್ಚಿಮ ಬಂಗಾಳದಲ್ಲಿ ಕೇಸರಿ, ತಮಿಳುನಾಡಲ್ಲಿ ದಳಪತಿ, ಕೇರಳಂನಲ್ಲಿ ಕಾಂಗ್ರೆಸ್‌ ದರ್ಬಾರ್‌

Latest21 hours ago

ಕೇರಳಂ: ಯುಡಿಎಫ್‌ ಗೆಲುವಿನ ಹಿಂದಿನ ಏಳು ರಣತಂತ್ರ!

Latest21 hours ago

ದಾವಣಗೆರೆ ದಕ್ಷಿಣ ʼಕೈʼ ವಶ, ಸಮರ್ಥ್‌ಗೆ ವಿಜಯಮಾಲೆ

Latest22 hours ago

ಬಾಗಲಕೋಟೆಯಲ್ಲಿ ಕಾಂಗ್ರೆಸ್‌‌‌ನ ಉಮೇಶ್‌ ಮೇಟಿ ಭರ್ಜರಿ ಗೆಲುವು

Latest24 hours ago

ದ್ರಾವಿಡ ನಾಡಲ್ಲಿ ʼದಳಪತಿʼ ಯುಗಾರಂಭ

Rakshit Shetty Richard Anthony Produce By Hombale
ಅವಿಭಾಗೀಕೃತ1 day ago

ಪಂಚರಾಜ್ಯ ವಿಧಾನಸಭಾ ಚುನಾವಣೆ , ಕರ್ನಾಟಕ ಉಪಚುನಾವಣೆ ಫಲಿತಾಂಶದ ಕ್ಷಣಕ್ಷಣದ ಅಪ್‌ಡೇಟ್‌

Latest2 days ago

‘ಟಾಕ್ಸಿಕ್’ ಸಿನಿಮಾದಲ್ಲಿ ಬೋಲ್ಡ್ ದೃಶ್ಯಕ್ಕೆ ಕತ್ತರಿ ಹಾಕಿ ಕಿಯಾರಾ ಅಡ್ವಾಣಿ ಮನವಿ?

Latest3 days ago

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಬಾಂಗ್ಲಾದೇಶಕ್ಕೆ ಏಕೆ ಟೆನ್ಶನ್‌?

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌