ಪೊನ್ನಿಯಿನ್‌ ಸೆಲ್ವನ್‌ ಟೀಸರ್‌ ಬಿಡುಗಡೆ ಬೆನ್ನಿಗೇ ಮಣಿರತ್ನಂಗೆ ಕೋವಿಡ್‌, ಆಸ್ಪತ್ರೆಗೆ ದಾಖಲು - Vistara News

ಕಾಲಿವುಡ್

ಪೊನ್ನಿಯಿನ್‌ ಸೆಲ್ವನ್‌ ಟೀಸರ್‌ ಬಿಡುಗಡೆ ಬೆನ್ನಿಗೇ ಮಣಿರತ್ನಂಗೆ ಕೋವಿಡ್‌, ಆಸ್ಪತ್ರೆಗೆ ದಾಖಲು

ಖ್ಯಾತ ಚಿತ್ರ ನಿರ್ದೇಶಕ ಮಣಿರತ್ನಂ ಅವರಿಗೆ ಕೋವಿಡ್‌ ಲಕ್ಷಣಗಳು ಕಾಣಿಸಿಕೊಂಡಿವೆ. ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರ ಜತೆಗೇ ಅವರ ಹೊಸ ಚಿತ್ರಕ್ಕೆ ಸಂಬಂಧಿಸಿ ವಿವಾದವೊಂದು ಹುಟ್ಟಿಕೊಂಡಿದೆ.

VISTARANEWS.COM


on

Manirathnam
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚೆನ್ನೈ: ಆರು ಬಾರಿ ರಾಷ್ಟ್ರಪ್ರಶಸ್ತಿ ಪಡೆದ ಚಿತ್ರ ನಿರ್ದೇಶಕ, ಪೊನ್ನಿಯಿನ್‌ ಸೆಲ್ವನ್‌ ಎಂಬ ಚಾರಿತ್ರಿಕ ಕಥಾನಕವನ್ನು ಅಣಿ ಮಾಡಿ ಬಿಡುಗಡೆಗೆ ಕಾಯುತ್ತಿರುವ ಮಣಿರತ್ನಂ ಅವರು ಕೋವಿಡ್‌ ಸೋಂಕಿಗೆ ಒಳಗಾಗಿದ್ದಾರೆ. ಅವರನ್ನು ಇಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ.
ಅವರಲ್ಲಿ ಕೋವಿಡ್‌ ಲಕ್ಷಣಗಳು ಕಾಣಿಸಿಕೊಂಡಿವೆ. ಹಾಗಂತ ಪಾಸಿಟಿವ್‌ ಎಂದು ದೃಢಪಟ್ಟಿಲ್ಲ. ಆದರೆ, ಅವರ ಮನೆಯಲ್ಲಿ ೯೦ ವರ್ಷ ಮೀರಿದ ತಂದೆ-ತಾಯಿ ಇರುವುದರಿಂದ ಐಸೊಲೇಟ್‌ ಆಗುವ ಉದ್ದೇಶದಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಮ್ಮ ಮಹತ್ವಾಕಾಂಕ್ಷೆಯ ಪೊನ್ನಿಯಿನ್‌ ಸೆಲ್ವನ್‌ ಚಿತ್ರದ ಟೀಸರ್‌ ಬಿಡುಗಡೆಯಾದ ಬಿಡುಗಡೆಯಾದ ಬೆನ್ನಿಗೇ ಅವರಿಗೆ ಕೆಲವೊಂದು ಕೋವಿಡ್‌ ಲಕ್ಷಣಗಳು ಕಾಣಿಸಿಕೊಂಡಿವೆ. ಚೋಳರ ಕಾಲದ ಚಾರಿತ್ರಿಕ ಕಥಾನಕ ಹೊಂದಿರುವ ಈ ಚಿತ್ರದಲ್ಲಿ ವಿಕ್ರಮ್‌, ಐಶ್ವರ್ಯ ರೈ, ಜಯಂ ರವಿ, ಕಾರ್ತಿ, ತೃಷಾ, ಜಯರಾಂ, ಐಶ್ವರ್ಯ ಲಕ್ಷ್ಮಿ, ಶರತ್‌ ಕುಮಾರ್‌, ಶೋಭಿತಾ ಧುಲಿಪಾಲಾ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಚಿತ್ರದ ಟೀಸರ್‌ ಮತ್ತು ಪೋಸ್ಟರ್‌ಗಳು ಸಾಕಷ್ಟು ಜನಪ್ರಿಯತೆ ಪಡೆದಿವೆ.

ವಿವಾದದ ಸುಳಿಯಲ್ಲಿ ಚಿತ್ರ
ಈ ನಡುವೆ ಪೊನ್ನಿಯಿನ್‌ ಸೆಲ್ವನ್‌ ಚಿತ್ರಕ್ಕೆ ಸಂಬಂಧಿಸಿ ವಿವಾದವೊಂದು ಎದ್ದಿದೆ. ವಿಕ್ರಮ್‌ ನಿರ್ವಹಿಸಿರುವ ಆದಿತ್ಯ ಕರಿಕಾಳನ್‌ ಪಾತ್ರಕ್ಕೆ ಸಂಬಂಧಿಸಿ ಕೆಲವೊಂದು ಐತಿಹಾಸಿಕ ಸತ್ಯಗಳನ್ನು ಹಾಳುಗೆಡವಲಾಗಿದೆ ಎಂದು ಆರೋಪಿಸಿ ವಕೀಲರೊಬ್ಬರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ.

ಪೊನ್ನಿಯಿನ್‌ ಸೆಲ್ವನ್‌ ಚಿತ್ರದಲ್ಲಿ ಕರಿಕಾಳನ್‌ ತಿಲಕ ಧರಿಸಿರುವಂತೆ ತೋರಿಸಲಾಗಿದೆ. ಆದರೆ, ಚೋಳರ ಕಾಲದಲ್ಲಿ ತಿಲಕ ಧರಿಸುವ ಪದ್ಧತಿಯೇ ಇರಲಿಲ್ಲ ಎಂದು ವಕೀಲರು ವಾದಿಸಿದ್ದಾರೆ.

ಇದನ್ನೂ ಓದಿ| ಯೂಟ್ಯೂಬ್​ನಲ್ಲಿ ಟ್ರೆಂಡ್​ ಆದ ಪೊನ್ನಿಯನ್ ಸೆಲ್ವನ್ ಟೀಸರ್, ನಟಿ ಐಶ್ವರ್ಯಾ ರೈ ಲುಕ್‌ಗೆ ಜನ ಫಿದಾ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕಾಲಿವುಡ್

Prakash Raj: ಧನುಷ್ ನಿರ್ದೇಶನದಲ್ಲಿ ಪ್ರಕಾಶ್ ರಾಜ್‌: ಮತ್ತೆ ಒಂದಾದ್ರೂ ‘ತಿರುಚಿತ್ರಂಬಲಂ’ ಜೋಡಿ

Prakash Raj: ಪಾತ್ರ ಚಿಕ್ಕದೇ ಇರಲಿ, ದೊಡ್ಡದ್ದೇ ಇರಲಿ ಅದಕ್ಕೆ ಪ್ರಕಾಶ್ ರಾಜ್ ನ್ಯಾಯ ಒದಗಿಸುತ್ತಾರೆ. ಹೀಗಾಗಿ ಕಾಲಿವುಡ್ ನಟ ಧನುಷ್ ತಮ್ಮ ನಿರ್ದೇಶನದಲ್ಲಿ ಪ್ರಕಾಶ್ ರಾಜ್ ಅವರಿಗೊಂದು ತೂಕದ ಪಾತ್ರ ನೀಡಿದ್ದಾರೆ.

VISTARANEWS.COM


on

prakash Raj dhanush raayan
Koo

ಬೆಂಗಳೂರು: ಕನ್ನಡದ ನಟ, ಪರಭಾಷೆಗಳಲ್ಲಿಯೂ ಕರುನಾಡನ್ನು ಪ್ರತಿನಿಧಿಸುವ ಪ್ರಕಾಶ್ ರಾಜ್, ತಮ್ಮ ಅಭಿನಯದ ಮೂಲಕವೇ ಎಲ್ಲರನ್ನೂ ಸೆಳೆದವರು. ಯಾವುದೇ ಪಾತ್ರ ಕೊಟ್ಟರು ಅವರು ಲೀಲಾಜಾಲವಾಗಿ ನಟಿಸುತ್ತಾರೆ. ಕೆಲವೊಮ್ಮೆ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಪಕ್ಕಾ ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸಿದ್ದೂ ಇದೆ. ಪಾತ್ರ ಚಿಕ್ಕದೇ ಇರಲಿ ದೊಡ್ಡದ್ದೇ ಇರಲಿ ಅದಕ್ಕೆ ಪ್ರಕಾಶ್ ರಾಜ್ ನ್ಯಾಯ ಒದಗಿಸುತ್ತಾರೆ. ಹೀಗಾಗಿ ಕಾಲಿವುಡ್ ನಟ ಧನುಷ್ ತಮ್ಮ ನಿರ್ದೇಶನದಲ್ಲಿ ಪ್ರಕಾಶ್ ರಾಜ್ ಅವರಿಗೊಂದು ತೂಕದ ಪಾತ್ರ ನೀಡಿದ್ದಾರೆ.

2017ರಲ್ಲಿ ತೆರೆಕಂಡ ‘ಪಾ ಪಂಡಿ’ ಸಿನಿಮಾದ ಮೂಲಕ ಪ್ರಕಾಶ್ ರಾಜ್ ನಿರ್ದೇಶಕರಾಗಿಯೂ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಒಂದಷ್ಟು ಗ್ಯಾಪ್ ಬಳಿಕ “ನಿಲವುಕ್ಕು ಎನ್ ಮೆಲ್ ಎನ್ನಡಿ ಕೋಬಮ್” ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಇದೀಗ ರಾಯನ್ ಚಿತ್ರದ ಮೂಲಕ ಧನುಷ್ ಮತ್ತೊಮ್ಮ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಇದು ಅವರ 50ನೇ ಚಿತ್ರ ಅನ್ನೋದು ವಿಶೇಷ. ಸನ್ ಪಿಕ್ಚರ್ಸ್ ನಡಿ ಮೂಡಿ ಬರ್ತಿರುವ ರಾಯನ್ ಬಳಗಕ್ಕೀಗ ಕನ್ನಡದ ಪ್ರಕಾಶ್ ರಾಜ್ ಎಂಟ್ರಿ ಕೊಟ್ಟಿದ್ದಾರೆ.

ಇದನ್ನೂ ಓದಿ: Actor Prakash Raj: ಮಾರ್ಚ್ 15ಕ್ಕೆ ಪ್ರೇಕ್ಷಕರ ಎದುರು ಬರ್ತಿದೆ ʻಫೋಟೋʼಸಿನಿಮಾ!

ಪ್ರಕಾಶ್ ರಾಜ್ ಹಾಗೂ ಧನುಷ್ ‘ತಿರುಚಿತ್ರಂಬಲಂ’ ಸಿನಿಮಾದಲ್ಲಿ ಕಮಾಲ್ ಮಾಡಿದ್ದರು. ಅಪ್ಪ ಮಗನಾಗಿ ಪ್ರೇಕ್ಷಕರನ್ನು ರಂಜಿಸಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಈಗ ರಾಯನ್ ಚಿತ್ರದ ಮೂಲಕ ಮತ್ತೊಂದು ಸುಂದರ ಪಯಣಕ್ಕೆ ಧನುಷ್ ಪ್ರಕಾಶ್ ರಾಜ್ ಸಜ್ಜಾಗಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರಕಾಶ್ ರಾಜ್ ಅವರ ಆನ್ ಬೋರ್ಡ್ ಲುಕ್ ಹಂಚಿಕೊಂಡು ಧನುಷ್ ತಮ್ಮ ತಂಡಕ್ಕೆ ಸ್ವಾಗತಿಸಿದ್ದಾರೆ.

ಕುರ್ಚಿ ಮೇಲೆ ಕುಳಿತಿರುವ ಪ್ರಕಾಶ್ ರಾಜ್ ಯಾವುದೋ ಗಾಢ ಯೋಚನೆಯಲ್ಲಿ ಮಗ್ನರಾಗಿದ್ದಾರೆ. ಪೋಸ್ಟರ್ ನಲ್ಲಿ ಕಪ್ಪು ಬೆಳಕಿನ ಆಟವಿದೆ. ಎಆರ್ ರೆಹಮಾನ್ ಸಂಗೀತ ಸಂಯೋಜನೆಯಲ್ಲಿ ತಯಾರಾಗುತ್ತಿರುವ ರಾಯನ್ ಚಿತ್ರದಲ್ಲಿ ದೊಡ್ಡ ತಾರಾಬಗಳವಿದೆ.

Continue Reading

ಕಾಲಿವುಡ್

Jailer 2: ʻಜೈಲರ್‌ 2ʼ ಬರೋದು ಕನ್‌ಫರ್ಮ್‌? ನಟಿ ಮಿರ್ನಾ ಮೆನನ್ ಹೇಳಿದ್ದೇನು?

Jailer 2: ನಟಿ ಮಿರ್ನಾ ಮೆನನ್ ತಮ್ಮ ಮುಂಬರುವ ಸಿನಿಮಾ ʻಬರ್ತ್ ಮಾರ್ಕ್ʼ ಪ್ರಚಾರ ಮಾಡುವಾಗ, ʻಜೈಲರ್ 2ʼ ಸಿನಿಮಾ ಆಗಲಿದೆ ಎಂದು ಹೇಳಿದ್ದಾರೆ. ಜೈಲರ್ ಚಿತ್ರದಲ್ಲಿ ರಜನಿಯ ಸೊಸೆಯಾಗಿ ನಟಿಸಿದ್ದರು ನಟಿ ಮಿರ್ನಾ ಮೆನನ್.

VISTARANEWS.COM


on

Mirnaa Menon gives a big update about Jailer 2
Koo

ಬೆಂಗಳೂರು: ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರ ʻಜೈಲರ್‌ʼ ಸಿನಿಮಾ (Jailer 2) ಹಿಟ್‌ ಕಂಡ ಬಳಿಕ ಜೈಲರ್‌ ಸೀಕ್ವೆಲ್ ಬರುತ್ತದೆ ಎಂದು ವರದಿಯಾಗಿತ್ತು. ರಜನಿಕಾಂತ್, ನೆಲ್ಸನ್ ದಿಲೀಪ್ ಕುಮಾರ್ ಹಾಗೂ ಅನಿರುದ್ಧ್ ಮೂವರ ಕಾಂಬಿನೇಷನ್‌ನಲ್ಲಿ ‘ಜೈಲರ್ 2’ ಬರಲಿದೆ ಎನ್ನಲಾಗುತ್ತಿದೆ. ಶೀಘ್ರದಲ್ಲಿಯೇ ‘ಜೈಲರ್ 2’ ಸೆಟ್ಟೇರಲಿದೆ ಎನ್ನುವ ಮಾತು ಕೂಡ ಕೇಳಿ ಬಂದಿತ್ತು. ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಸ್ಕ್ರಿಪ್ಟ್ ವರ್ಕ್ ಶುರು ಮಾಡಿದ್ದಾರೆ ಎನ್ನಲಾಗಿದೆ.

ಇಲ್ಲಿಯವರೆಗೆ, ಚಿತ್ರತಂಡದಿಂದ ಅಧಿಕೃತ ಮಾಹಿತಿ ಬಂದಿಲ್ಲ. ಆದರೆ ನಟಿ ಮಿರ್ನಾ ಮೆನನ್ ತಮ್ಮ ಮುಂಬರುವ ಸಿನಿಮಾ ʻಬರ್ತ್ ಮಾರ್ಕ್ʼ ಪ್ರಚಾರ ಮಾಡುವಾಗ, ʻಜೈಲರ್ 2ʼ ಸಿನಿಮಾ ಆಗಲಿದೆ ಎಂದು ಹೇಳಿದ್ದಾರೆ. ಜೈಲರ್ ಚಿತ್ರದಲ್ಲಿ ರಜನಿಯ ಸೊಸೆಯಾಗಿ ನಟಿಸಿದ್ದರು ನಟಿ ಮಿರ್ನಾ ಮೆನನ್.

ಮಿರ್ನಾ ಮೆನನ್ ಮಾತನಾಡಿ, “ನಾನು ಇತ್ತೀಚೆಗೆ ನೆಲ್ಸನ್ ಸರ್ ಅವರೊಂದಿಗೆ ಮಾತನಾಡಿದ್ದೇನೆ. ಜೈಲರ್ 2 ಸಿನಿಮಾ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ ಎಂದು ಅವರು ನನಗೆ ಹೇಳಿದರು. ನಾನು ಜೈಲರ್ 2 ಸಿನಿಮಾದಲ್ಲಿ ಇದ್ದೇನೋ ಇಲ್ಲವೋ ಗೊತ್ತಿಲ್ಲ. ಅದು ನಿರ್ದೇಶಕರ ಆಯ್ಕೆ. ಒಂದು ವೇಳೆ ನನ್ನ ಪಾತ್ರವನ್ನು ವಿಸ್ತರಿಸಲು ಬಯಸಿದರೆ, ನಾನು ಮುಂದಿನ ಭಾಗದದಲ್ಲಿ ಇರಬಹುದುʼʼಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Jailer Movie: `ಜೈಲರ್‌ 2’ನಲ್ಲಿ ಸೂಪರ್‌ ಸ್ಟಾರ್‌ ರಜನಿ ಜತೆ ದಳಪತಿ ವಿಜಯ್‌?

`ಜೈ ಭೀಮ್‌’ ಖ್ಯಾತಿಯ ನಿರ್ದೇಶಕ ಟಿ.ಜೆ. ಜ್ಞಾನವೇಲ್ ನಿರ್ದೇಶನದ ʼತಲೈವರ್ 170ʼ ಸಿನಿಮಾಗೆ ʼವೆಟ್ಟಯ್ಯನ್’ ಎಂದು ಟೈಟಲ್‌ ಇಡಲಾಗಿದೆ. ವೆಟ್ಟಯ್ಯನ್ (Vettaiyan) ಎಂದರೆ ತಮಿಳಿನಲ್ಲಿ ʼಬೇಟೆಗಾರ (Hunter) ಎಂದು ಅರ್ಥ. ಇದು ಮಲ್ಟಿಸ್ಟಾರರ್‌ ಚಿತ್ರವಾಗಿದ್ದು, ಅಮಿತಾಬ್ ಬಚ್ಚನ್, ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್ ಸೇರಿದಂತೆ ಪ್ರಮುಖ ಕಲಾವಿದರು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ ಚಿತ್ರೀಕರಣ ಕೂಡ ಭರದಿಂದ ಸಾಗುತ್ತಿದೆ. ಲೈಕಾ ಪ್ರೊಡಕ್ಷನ್ಸ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದು,‌ ಸಿನಿಮಾಗೆ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಇರಲಿದೆ.

ಸಿನಿಮಾದಲ್ಲಿ ರಜನಿಕಾಂತ್ ನಿವೃತ್ತ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದು, ಪ್ರಕರಣವೊಂದನ್ನು ರಿ ಓಪನ್ ಮಾಡಿ ನ್ಯಾಯ ಒದಗಿಸುವ ಕೆಲಸವನ್ನು ಮಾಡಲಿದ್ದಾರೆ ಎನ್ನಲಾಗಿದೆ. ಇದಾದ ಬಳಿಕ ರಜನಿಕಾಂತ್‌ ಅವರು ಲೋಕೇಶ್ ಕನಕರಾಜ್ ಜತೆ ಸಿನಿಮಾ ಮಾಡಲಿದ್ದಾರೆ. ಹಾಗಾಗಿ, ಈ ಎರಡು ಚಿತ್ರಗಳು ಮುಗಿದ ನಂತರ ʻಜೈಲರ್ 2ʼ ಪ್ರಾರಂಭವಾಗಬಹುದು.

Continue Reading

ಕಾಲಿವುಡ್

Actor Dhanush: ಧುನುಷ್‌ ಸಿನಿಮಾಗೆ ʻಎಸ್‌ಜೆ ಸೂರ್ಯʼ ವಿಲನ್‌: ರಗಡ್‌ ಲುಕ್‌ ಔಟ್‌!

Actor Dhanush: ಈ ಚಿತ್ರದಲ್ಲಿ ನಟ ಎಸ್‌ಜೆ ಸೂರ್ಯ ಅವರು ವಿಲನ್‌ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅವರ ಫಸ್ಟ್ ಲುಕ್ ಪೋಸ್ಟರ್ ಇದೀಗ ಔಟ್‌ ಆಗಿದೆ. ‘ರಾಯನ್‌’ ತಮಿಳು, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

VISTARANEWS.COM


on

Rayaan SJ Suryah joins Dhanush starrer
Koo

ಬೆಂಗಳೂರು: ಧನುಷ್ (Actor Dhanush) ಅವರ ಎರಡನೇ ನಿರ್ದೇಶನದ ಸಿನಿಮಾ ‘ಡಿ 50’ಗೆ ಟೈಟಲ್‌ ಫಿಕ್ಸ್‌ ಆಗಿದೆ. ಈ ಸಿನಿಮಾಗೆ ‘ರಾಯನ್‌’ (Raayan) ಎಂದು ಶೀರ್ಷಿಕೆ ಇಟ್ಟಿದ್ದಾರೆ. ಫೆಬ್ರವರಿ 19ರ ಸೋಮವಾರದಂದು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಗೊಳಿಸಿದ್ದರು. ಇದೀಗ ಚಿತ್ರದ ಎರಡನೇ ಪೋಸ್ಟರ್‌ ಲುಕ್‌ ಅನಾವರಣಗೊಳಿಸಿದ್ದಾರೆ. ಈ ಚಿತ್ರದಲ್ಲಿ ನಟ ಎಸ್‌ಜೆ ಸೂರ್ಯ ಅವರು ವಿಲನ್‌ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅವರ ಫಸ್ಟ್ ಲುಕ್ ಪೋಸ್ಟರ್ ಇದೀಗ ಔಟ್‌ ಆಗಿದೆ. ‘ರಾಯನ್‌’ ತಮಿಳು, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಎಸ್‌ಜೆ ಸೂರ್ಯ ಕೈಯಲ್ಲಿ ಗ್ಲಾಸ್ ಹಿಡಿದಿರುವ ಪೋಸ್ಟರ್ ಔಟ್‌ ಆಗಿದೆ. ಎಸ್‌ಜೆ ಸೂರ್ಯ ಕೂಡ ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡರು. ತಮ್ಮ ಎಕ್ಸ್‌ನಲ್ಲಿ ʻʻಧನುಷ್‌ ಸರ್‌ ಅವಕಾಶಕ್ಕಾಗಿ ಧನ್ಯವಾದ. ನಾನು ಮೊದಲೇ ಹೇಳಿದಂತೆ ʻರಾಯನ್‌ʼ ರಗಡ್‌ ಆಗಿ, ಭಾವನಾತ್ಮಕ ಕಥೆಯನ್ನು ಹೊಂದಿದೆ. ಚಿತ್ರದ ನಿರ್ಮಾಣ ಸಂಸ್ಥೆ ಸನ್ ಪಿಕ್ಚರರ್ಸ್‌ಗೆ ಧನ್ಯವಾದʼʼಎಂದು ಬರೆದುಕೊಂಡಿದ್ದಾರೆ.

ಧನುಷ್ ಕಳೆದ ವರ್ಷ ಜುಲೈನಲ್ಲಿ ಈ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು. ಈ ಸಿನಿಮಾಗಾಗಿ ನಟ ತಲೆಯನ್ನು ಬೋಳಿಸಿಕೊಂಡಿದ್ದಾರೆ. ಇನ್ನು ಸಿನಿಮಾದ ನಾಯಕಿ ಹಾಗೂ ಇನ್ನುಳಿದ ಪಾತ್ರವರ್ಗದ ಬಗ್ಗೆ ಮುಂದಿನ ದಿನಗಳಲ್ಲಿ ಅಪ್‌ಡೇಟ್‌ ನೀಡುವುದಾಗಿ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. 2017 ರಲ್ಲಿ ತೆರೆಕಂಡ ‘ಪಾ ಪಾಂಡಿ’ ಚಿತ್ರದ ಮೂಲಕ ಧನುಷ್ ನಿರ್ದೇಶಕರಾಗಿ ಪದಾರ್ಪಣೆ ಮಾಡಿದರು. ಈ ಚಿತ್ರಕ್ಕಾಗಿ ಫಿಲ್ಮ್‌ಫೇರ್‌ನಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಇದೀಗ ʻರಾಯನ್‌ʼ ಅವರ ಎರಡನೇ ನಿರ್ದೇಶನದ ಸಿನಿಮಾ.,

ಧನುಷ್‌ ಕೊನೆಯದಾಗಿ ‘ಕ್ಯಾಪ್ಟನ್ ಮಿಲ್ಲರ್’ ಚಿತ್ರದಲ್ಲಿ ಕಾಣಿಸಿಕೊಂಡರು. ಅರುಣ್ ಮಾಥೇಶ್ವರನ್ ನಿರ್ದೇಶನದ ಈ ಚಿತ್ರದಲ್ಲಿ ಶಿವ ರಾಜ್‌ಕುಮಾರ್, ಪ್ರಿಯಾಂಕಾ ಮೋಹನ್, ನಿವೇದಿತಾ ಸತೀಶ್, ಜಾನ್ ಕೊಕ್ಕೆನ್ ಮತ್ತು ಮೂರ್ ಪ್ರಮುಖ ಪಾತ್ರಗಳಲ್ಲಿದ್ದರು.

ಇದನ್ನೂ ಓದಿ: Actor Dhanush: ಧನುಷ್ ಎರಡನೇ ನಿರ್ದೇಶನದ ಸಿನಿಮಾಗೆ ಟೈಟಲ್‌ ಫಿಕ್ಸ್‌; ಫಸ್ಟ್ ಲುಕ್ ಔಟ್‌!

ಸೂಪರ್ ಸ್ಟಾರ್ ಧನುಷ್ (Actor Dhanush) ಅವರು ಇತ್ತೀಚೆಗೆ ತಿರುಪತಿಗೆ ಭೇಟಿ ನೀಡಿದ್ದರು. ನಿರ್ದೇಶಕ ಶೇಖರ್ ಕಮ್ಮುಲ ಜತೆ ಧನುಷ್‌ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ‘D 51’ ಎಂದು ಶೀರ್ಷಿಕೆ ಇಡಲಾಗಿದೆ.. ಧನುಷ್ ಅವರ ಚಿತ್ರದಲ್ಲಿ ನಾಗಾರ್ಜುನ ಮತ್ತು ಶೇಖರ್ ಕೂಡ ನಟಿಸಿದ್ದಾರೆ. ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ.ಶ್ರೀವೆಂಕಟೇಶ್ವರ ಸಿನಿಮಾಸ್​ ಮತ್ತು ಒಮಿಗೋಸ್​ ಕ್ರಿಯೇಷನ್ಸ್​ ಬ್ಯಾನರ್​ ಮೂಲಕ ಈ ಚಿತ್ರ ನಿರ್ಮಾಣ ಆಗಲಿದೆ. ಧನುಷ್‌​​ ಮತ್ತು ರಶ್ಮಿಕಾ ಮಂದಣ್ಣ ಅವರನ್ನು ಹೊರತುಪಡಿಸಿ ಬೇರೆ ಯಾವೆಲ್ಲ ಕಲಾವಿದರು ನಟಿಸುತ್ತಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ತಾಂತ್ರಿಕ ವರ್ಗದ ಬಗ್ಗೆಯೂ ಹೆಚ್ಚಿನ ಮಾಹಿತಿ ಹೊರಬರುವುದು ಬಾಕಿ ಇದೆ.

Continue Reading

South Cinema

Anjali Menon: ʻಬೆಂಗಳೂರು ಡೇಸ್’ ಖ್ಯಾತಿಯ ನಿರ್ದೇಶಕಿ ಅಂಜಲಿ ಮೆನನ್ ತಮಿಳು ಸಿನಿಮಾಗೆ ಕೆಆರ್‌ಜಿ ಸ್ಟುಡಿಯೋಸ್‌ ಸಾಥ್‌!

Anjali Menon: ಕೆ ಆರ್ ಜಿ ಸ್ಟುಡಿಯೋಸ್ ತನ್ನ ಸಿನಿಮಾ ವಿತರಣೆಯನ್ನು 2017ರಲ್ಲಿ‌ ಆರಂಭಿಸಿ, ಇಲ್ಲಿಯ ವರೆಗೂ ಸರಿಸುಮಾರು 100 ಚಿತ್ರಗಳನ್ನು ವಿತರಿಸಿದೆ. ನಿರ್ದೇಶಕಿ ಅಂಜಲಿ‌ ಮೆನನ್ ಇದೀಗ ತಮಿಳು‌ ಚಿತ್ರವನ್ನು ನಿರ್ದೇಶಿಸಲು ಸಜ್ಜಾಗಿದ್ದಾರೆ.

VISTARANEWS.COM


on

Anjali Menon announces her Tamil film with KRG Studios
Koo

ಬೆಂಗಳೂರು: ಕೆ ಆರ್ ಜಿ ಸ್ಟುಡಿಯೋಸ್ ಇದೀಗ ಖ್ಯಾತ ಮಲಯಾಳಂ ನಿರ್ದೇಶಕಿ ಅಂಜಲಿ‌ ಮೆನನ್ (Anjali Menon) ಅವರೊಂದಿಗೆ ಹೊಸ ತಮಿಳು ಚಿತ್ರಕ್ಕಾಗಿ ಕೈ ಜೋಡಿಸಿದೆ. “ಬೆಂಗಳೂರು ಡೇಸ್”, “ಉಸ್ತಾದ್ ಹೊಟೇಲ್”, “ಮಂಜಡಿಕುರು”, “ಕೂಡೆ” ಮತ್ತು ಇತ್ತೀಚಿನ “ವಂಡರ್ ವುಮನ್” ಅಂತಹ ಹಿಟ್‌ ಚಿತ್ರಗಳನ್ನು ಕೊಡುಗೆಯಾಗಿ ನೀಡಿರುವ ನಿರ್ದೇಶಕಿ ಅಂಜಲಿ‌ ಮೆನನ್ ಇದೀಗ ತಮಿಳು‌ ಚಿತ್ರವನ್ನು ನಿರ್ದೇಶಿಸಲು ಸಜ್ಜಾಗಿದ್ದಾರೆ.

ಕೆ ಆರ್ ಜಿ ಸ್ಟುಡಿಯೋಸ್ ಈ ಸಹಯೋಗದ‌ ಮೂಲಕ ಕನ್ನಡ ಚಿತ್ರರಂಗಕ್ಕೂ ಹಾಗೂ ಇನ್ನಿತರ ಚಿತ್ರರಂಗಕ್ಕೂ ಇರುವ ಅಂತರವನ್ನು ಕಡಿಮೆ ಮಾಡಿ, ಸಮಗ್ರ ನಿರ್ಮಾಣದ ಮೂಲಕ ಹೊಸ ಮೈಲುಗಲ್ಲನ್ನು ಸಾಧಿಸುತ್ತಿದೆ ಎಂದರೆ ತಪ್ಪಾಗಲಾರದು. ಕೆ ಆರ್ ಜಿ ಸ್ಟುಡಿಯೋಸ್ ತನ್ನ ಸಿನಿಮಾ ವಿತರಣೆಯನ್ನು 2017ರಲ್ಲಿ‌ ಆರಂಭಿಸಿ, ಇಲ್ಲಿಯ ವರೆಗೂ ಸರಿಸುಮಾರು 100 ಚಿತ್ರಗಳನ್ನು ವಿತರಿಸಿದೆ.

ಈ ಸಂಸ್ಥೆ 2020ರಲ್ಲಿ, “ರತ್ನನ್ ಪ್ರಪಂಚ” ಚಿತ್ರದ ಮೂಲಕ ಚಿತ್ರ ನಿರ್ಮಾಣವನ್ನು ಆರಂಭಿಸಿತು. ರೋಹಿತ್ ಪದಕಿಯವರ ನಿರ್ದೇಶನದಲ್ಲಿ, ಡಾಲಿ‌ ಧನಂಜಯ್ ಅಭಿನಯದಲ್ಲಿ ಮೂಡಿ‌ಬಂದ ಈ‌ ಚಿತ್ರ ಅಮೆಜಾನ್‌ ಪ್ರೈಂನಲ್ಲಿ ಬಿಡುಗಡೆಗೊಂಡು ಎಲ್ಲರ ಮನೆ ಮಾತಾಗಿತ್ತು‌. ನಂತರದಲ್ಲಿ , ಮಾರ್ಚ್ 2023ರಲ್ಲಿ ತೆರೆ ಕಂಡ “ಗುರುದೇವ್ ಹೊಯ್ಸಳ” ಬಹಳ ದೊಡ್ಡ ಮಟ್ಟದಲ್ಲಿ ಮೆಚ್ಚುಗೆಯನ್ನು ಗಳಿಸಿತ್ತು. ಕೆ ಆರ್ ಜಿ ಸ್ಟುಡಿಯೋಸ್‌ನ‌ ಈ ಸಹಯೋಗ ವಿಭಿನ್ನ ಕಥಾ ವಸ್ತುವನ್ನು ಒಳಗೊಂಡಿರುವ ಚಿತ್ರಗಳನ್ನು ಸಿನಿ ಪ್ರೇಮಿಗಳಿಗೆ ಉಣಬಡಿಸುವ ಮುಖ್ಯ ಉದ್ದೇಶವನ್ನು ಹೊಂದಿದೆ. ಅಷ್ಟೇ ಅಲ್ಲದೆ, ದಕ್ಷಿಣ ಭಾರತದ 4 ಭಾಷೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ: Actor Dhanush: ಧನುಷ್ ಎರಡನೇ ನಿರ್ದೇಶನದ ಸಿನಿಮಾಗೆ ಟೈಟಲ್‌ ಫಿಕ್ಸ್‌; ಫಸ್ಟ್ ಲುಕ್ ಔಟ್‌!

ಈ ಕುರಿತು ನಿರ್ದೇಶಕಿ ಅಂಜಲಿ‌ ಮೆನನ್ ಮಾತನಾಡಿ, ʻʻಸಿನಿಮಾಗಳು ಭಾಷೆ ಎಂಬ ಗೋಡೆಯನ್ನು ದಾಟಿ ಎಲ್ಲರನ್ನೂ ತಲುಪುತ್ತಿರುವ‌ ಈ ಕಾಲದಲ್ಲಿ ಕೆ ಆರ್ ಜಿ ಸ್ಟುಡಿಯೋಸ್ ಅಂತಹ ಸಂಸ್ಥೆಯೊಡನೆ ನಾನು ಕೈ ಜೋಡಿಸಿರುವುದು ಸೂಕ್ತ ಎನಿಸುತ್ತಿದೆ. ನಮ್ಮ ಈ ಸಹಯೋಗದಲ್ಲಿ ಉನ್ನತ ಮಟ್ಟದ ಚಿತ್ರ ನಿರ್ಮಾಣ ಹಾಗೂ ನಿರ್ದೇಶನವನ್ನು ಎದುರು ನೋಡುತ್ತಿದ್ದೇನೆʼʼ ಎಂದರು‌.

ಕೆ ಆರ್ ಜಿ ಸ್ಟುಡಿಯೋಸ್ ಸಂಸ್ಥಾಪಕರು ಮತ್ತು ನಿರ್ಮಾಪಕರು ಆದ ಕಾರ್ತಿಕ್ ಗೌಡ ಮಾತನಾಡಿ, ʻʻಅಂಜಲಿ ಮೆನನ್ ಮತ್ತು ನಮ್ಮ ಸಹಯೋಗ ಕೆ ಆರ್ ಜಿ ಸ್ಟುಡಿಯೋಸ್‌ನಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ ಎಂದರೆ ಉತ್ಪ್ರೇಕ್ಷೆಯಲ್ಲ. “ಸಿನಿಮಾ”ಗೆ ಇರುವ‌ ಶಕ್ತಿಯನ್ನು ನಾವು ನಂಬುತ್ತೇವೆ. ಅದು ತೆರೆಯ ಮೇಲೆ ಯಾವ ರೀತಿಯ ಜಾದುವನ್ನಾದರೂ ಸೃಷ್ಟಿಸಬಲ್ಲದು. ಈ ನಿಟ್ಟಿನಲ್ಲಿ ನಮ್ಮ ಸಹಯೋಗ ಬಹಳ ಅರ್ಥಪೂರ್ಣವಾಗಲಿದೆ ಎಂದು ನಂಬಿದ್ದೇನೆʼʼ ಎಂದರು.

ʻʻಕೆ ಆರ್ ಜಿ ಸ್ಟುಡಿಯೋಸ್ ಸಂಸ್ಥೆಯ ಈ‌ ಸಹಯೋಗ ಕೇವಲ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸುವುದಷ್ಟೇ ಅಲ್ಲದೆ, ಕಥಾ ನಿರೂಪಣೆಯಲ್ಲಿ‌ ಹೊಸ ಆವಿಷ್ಕಾರಗಳನ್ನು ಸ್ಥಳೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ತರಲಿದೆ ಎಂಬ ಭರವಸೆಯನ್ನು ನಾವು ಹೊಂದಿದ್ದೇವೆ. ದಕ್ಷಿಣ ಭಾರತೀಯ ಸಿನಿಮಾದ ಭವಿಷ್ಯವನ್ನು ರೂಪಿಸಲು ಸಜ್ಜಾಗಿರುವ‌ ಕೆ ಆರ್ ಜಿ ಸ್ಟುಡಿಯೋಸ್ ಸಂಸ್ಥೆಗೆ ಗುಣಮಟ್ಟದ ಕಥಾ ವಸ್ತು ಹಾಗೂ ನವೀನ ಕಥಾ ನಿರೂಪಣೆಗೆ ಅಂಜಲಿ ಮೆನನ್ ಜೊತೆಗಿನ ಸಹಯೋಗ ಬಲು ದೊಡ್ಡ ಉದಾಹರಣೆ ಮತ್ತು ಮಾದರಿಯಾಗಲಿದೆʼʼ ಎಂದರು.

Continue Reading
Advertisement
Yuvraj Singh
ಕ್ರೀಡೆ7 mins ago

Yuvraj Singh: ಲೋಕಸಭಾ ಸ್ಪರ್ಧೆ ಬಗ್ಗೆ ಅಧಿಕೃತ ಮಾಹಿತಿ ನೀಡಿದ ಯುವರಾಜ್​ ಸಿಂಗ್​

Anant Ambani wedding bollywood celebrities Pose
ಬಾಲಿವುಡ್11 mins ago

Anant Ambani: ಅಂಬಾನಿ ಫ್ಯಾಮಿಲಿಯ ಪ್ರಿ-ವೆಡ್ಡಿಂಗ್‌ಗೆ ಬಾಲಿವುಡ್‌ ಸೆಲೆಬ್ರಿಟಿಗಳು ಪೋಸ್‌ ಕೊಟ್ಟಿದ್ದು ಹೀಗೆ!

Share Market
ದೇಶ11 mins ago

Stock Market: ರಜಾ ದಿನವೂ ಸ್ಪೆಷಲ್‌ ಟ್ರೇಡಿಂಗ್, ಸೆನ್ಸೆಕ್ಸ್‌, ನಿಫ್ಟಿ ಅಬ್ಬರ ಜೋರು

Blast in Bengaluru NIA to take over probe into Rameswaram Cafe bomb blast case
ಕ್ರೈಂ18 mins ago

Blast in Bengaluru: ರಾಮೇಶ್ವರಂ ಕೆಫೆ ಬಾಂಬ್‌ ಬ್ಲಾಸ್ಟ್ ಕೇಸ್‌ ತನಿಖೆ NIA ಹೆಗಲಿಗೆ? ಇಂದೇ ಹಸ್ತಾಂತರ!

no abuse
ಕ್ರೈಂ19 mins ago

ಮಾತು ಬಾರದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ; ಗುದ ದ್ವಾರಕ್ಕೆ ಪೆನ್‌ ತುರುಕಿಸಿ ವಿಕೃತಿ ಮೆರೆದ ಸಂಬಂಧಿಕರು

ಕ್ರೀಡೆ36 mins ago

BCCI Annual Contract: ಅಯ್ಯರ್, ಇಶಾನ್​ಗೆ ಗುತ್ತಿಗೆ ಪಟ್ಟಿ ಸೇರಲು ಇನ್ನೂ ಇದೆ ಅವಕಾಶ; ಈ ಷರತ್ತು ಅನ್ವಯ!

Minister MB Patil important meeting with senior officers of Lulu Group
ಕರ್ನಾಟಕ1 hour ago

Bengaluru News: ವಿಜಯಪುರದಲ್ಲಿ ರಫ್ತು ಆಧಾರಿತ ಆಹಾರ ಸಂಸ್ಕರಣ ಘಟಕ, ಸಚಿವ ಎಂ.ಬಿ.ಪಾಟೀಲ್ ಮಹತ್ವದ ಸಭೆ

Rameswaram Cafe blast sketched for 3 months without using a mobile phone
ಬೆಂಗಳೂರು1 hour ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌ಗೆ 3 ತಿಂಗಳಿಂದಲೇ ಸ್ಕೆಚ್‌? ಮೊಬೈಲ್‌ ಬಳಸದೇ ಕೃತ್ಯ!

Bjp Karnataka Former minister Manohar Tahsildar join BJP Is Haveri stronger
ರಾಜಕೀಯ1 hour ago

‌BJP Karnataka: ಬಿಜೆಪಿ ಸೇರಿದ ಮಾಜಿ ಸಚಿವ ಮನೋಹರ್‌ ತಹಸೀಲ್ದಾರ್; ಹಾವೇರಿ ಮತ್ತಷ್ಟು ಸ್ಟ್ರಾಂಗ್?

Unleashing the rage of Yuva The First Single
ಸ್ಯಾಂಡಲ್ ವುಡ್2 hours ago

Yuva Rajkumar: ಇಂದು ಚಾಮರಾಜನಗರದಲ್ಲಿ ‘ಯುವ’ ಪರ್ವ; ಅತಿಥಿಯಾಗಿ ಬರುವ ನಟ ಯಾರು?

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Rameswaram Cafe Blast Suspected travels in BMTC Volvo bus
ಬೆಂಗಳೂರು2 hours ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ವೋಲ್ವೋ ಬಸ್‌ನಲ್ಲಿ ಬಾಂಬರ್ ಸಂಚಾರ, ಸಿಸಿಟಿವಿಯಲ್ಲಿ ಸೆರೆ

Blast in Bengaluru Time bomb planted in rameshwaram cafe Important evidence found
ಬೆಂಗಳೂರು21 hours ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು23 hours ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ1 day ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ1 day ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

dina bhavishya read your daily horoscope predictions for February 28 2024
ಭವಿಷ್ಯ2 days ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ4 days ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

Ghar Wapsi ST Somashekhar and Shivaram Hebbar to quit BJP
ರಾಜಕೀಯ4 days ago

Ghar Wapsi: ಎಸ್‌.ಟಿ. ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಬಿಜೆಪಿಗೆ ಗುಡ್‌ ಬೈ? ಇಂದೇ ರಾಜೀನಾಮೆ?

Rajyasabha Elections 42 Congress MLAs contacted by JDS candidate says DK Shivakumar
ರಾಜಕೀಯ4 days ago

Rajya sabha Election: ಕಾಂಗ್ರೆಸ್‌ನ 42 ಶಾಸಕರನ್ನು ಸಂಪರ್ಕ ಮಾಡಿದ್ದಾರೆ: ಡಿ.ಕೆ. ಶಿವಕುಮಾರ್

ಟ್ರೆಂಡಿಂಗ್‌