Fact Check: ಸೌದಿ ಅರೇಬಿಯಾದಲ್ಲಿ ನರೇಂದ್ರ ಮೋದಿ ಚಿನ್ನದ ಪುತ್ಥಳಿ ಕೆತ್ತನೆ ಮಾಡಲಾಗಿದೆಯೇ? Vistara News

Fact Check

Fact Check: ಸೌದಿ ಅರೇಬಿಯಾದಲ್ಲಿ ನರೇಂದ್ರ ಮೋದಿ ಚಿನ್ನದ ಪುತ್ಥಳಿ ಕೆತ್ತನೆ ಮಾಡಲಾಗಿದೆಯೇ?

Fact Check: ಪ್ರಧಾನಿ ನರೇಂದ್ರ ಮೋದಿ ಅವರ ಚಿನ್ನದ ಪುತ್ಥಳಿಯನ್ನು ಸೌದಿ ಅರೇಬಿಯಾದಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಆದರೆ, ಈ ಸುದ್ದಿ ಎಷ್ಟು ನಿಜ?

VISTARANEWS.COM


on

Narendra Modi Gold Bust
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಸಾಮಾಜಿಕ ಜಾಲತಾಣವು ಸಕಲ ಮಾಹಿತಿಯ ಕಣಜ ಆಗಿದೆ. ಎಲ್ಲರಿಗೂ ಈಗ ಸಾಮಾಜಿಕ ಜಾಲತಾಣಗಳು ಅವಿಭಾಜ್ಯವಾಗಿವೆ. ಸಮಾಜದ ಮೇಲೆ, ಸರ್ಕಾರದ ಮೇಲೆ ಪರಿಣಾಮ ಬೀರುವಷ್ಟು ಸಾಮಾಜಿಕ ಜಾಲತಾಣಗಳು ಪ್ರಬಲವಾಗಿವೆ. ಹಾಗೆಯೇ, ನಕಲಿ ಸುದ್ದಿಗಳ ಹರಡುವಿಕೆಯ ಫ್ಯಾಕ್ಟರಿಗಳಾಗಿಯೂ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ, ಸೌದಿ ಅರೇಬಿಯಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚಿನ್ನದ ಪುತ್ಥಳಿಯನ್ನು (Narendra Modi Gold Bust) ಕೆತ್ತಲಾಗಿದೆ ಎಂಬ ಸುದ್ದಿ ಹರಡಿದೆ. ಆದರೆ ಈ ಸುದ್ದಿ ವಾಸ್ತವಕ್ಕೆ ಹತ್ತಿರವಾಗಿಲ್ಲ ಎಂಬುದು ಮಹತ್ವದ (Fact Check) ಸಂಗತಿಯಾಗಿದೆ.

ಏನಿದು ವದಂತಿ?

ಸೌದಿ ಅರೇಬಿಯಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚಿನ್ನದ ಮೂರ್ತಿಯನ್ನು ಕೆತ್ತಲಾಗಿದೆ. ಇದು 156 ಗ್ರಾಂ ಇದೆ ಎಂಬ ಫೋಟೊ ಹಾಗೂ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗಿದೆ. ಕೆಲ ದಿನಗಳ ಹಿಂದಷ್ಟೇ ಸೌದಿ ಅರೇಬಿಯಾ ರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಅವರು ದೆಹಲಿಯಲ್ಲಿ ನಡೆದ ಜಿ 20 ಶೃಂಗಸಭೆಗೆ ಬಂದು, ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ, ಭಾರತ ಹಾಗೂ ಸೌದಿ ಅರೇಬಿಯಾ ಸಂಬಂಧದ ಪ್ರತೀಕವಾಗಿ ಮೋದಿ ಚಿನ್ನದ ಪುತ್ಥಳಿ ಕೆತ್ತಲಾಗಿದೆ ಎಂಬ ವದಂತಿ ಹರಡಿಸಲಾಗಿದೆ.

ವಾಸ್ತವ ಏನು?

ಸೂರತ್​: 2022ರ ಡಿಸೆಂಬರ್​​ನಲ್ಲಿ ನಡೆದಿದ್ದ ಗುಜರಾತ್ ವಿಧಾನಸಭಾ​​ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ್ದಕ್ಕೆ ಫುಲ್​ ಖುಷಿಯಾದ ಸೂರತ್​​ನ ಆಭರಣ ವ್ಯಾಪಾರಿಯೊಬ್ಬರು, 18 ಕ್ಯಾರೆಟ್​ ಚಿನ್ನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪುತ್ಥಳಿಯನ್ನು ಕೆತ್ತನೆ ಮಾಡಿಸಿದ್ದಾರೆ. ಆದರೆ ಈ ವಿಡಿಯೊವನ್ನು ಸೌದಿ ಅರೇಬಿಯಾದಲ್ಲಿ ಮೋದಿ ಚಿನ್ನದ ಮೂರ್ತಿಯನ್ನು ಕೆತ್ತಲಾಗಿದೆ ಎಂದು ಸುಳ್ಳು ಹರಡಿಸಲಾಗಿದೆ ಎಂದು ಹಲವು ಮಾಧ್ಯಮ ಸಂಸ್ಥೆಗಳು ನಡೆಸಿದ ಫ್ಯಾಕ್ಟ್‌ಚೆಕ್‌ನಲ್ಲಿ ಗೊತ್ತಾಗಿದೆ.

8 ತಿಂಗಳ ಹಿಂದಿನ ವಿಡಿಯೊ

ಇದನ್ನೂ ಓದಿ: Fact Check: ಜಿ20 ಸಭೆಗೂ ಮುನ್ನ ಮೋದಿಯ ಬೃಹತ್‌ ಕಟೌಟ್‌ ಫೋಟೊ ವೈರಲ್;‌ ಈ ಸುದ್ದಿ ನಿಜವೇ?

ಸೂರತ್​ನ ಚಿನ್ನಾಭರಣ ಉದ್ಯಮಿಯಾದ, ರಾಧಿಕಾ ಚೈನ್ಸ್​​ನ ಮಾಲೀಕ ಬಸಂತ್​ ಬೋಹ್ರಾ ಎಂಬುವರು ಈಗ ಪ್ರಧಾನಿ ನರೇಂದ್ರ ಮೋದಿಯವರ ಚಿನ್ನದ ಪ್ರತಿಮೆ ಕೆತ್ತನೆ ಮಾಡಿಸಿ ಸುದ್ದಿಯಾಗಿದ್ದರು. ಗುಜರಾತ್​​ನ​​ 182 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 156 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಮಟ್ಟದ ಗೆಲವು ಸಾಧಿಸಿದೆ. ಹಾಗಾಗಿ ಈ ಪ್ರತಿಮೆಯನ್ನು ಕೂಡ 156 ಗ್ರಾಂಗಳಷ್ಟು ಚಿನ್ನದಲ್ಲಿಯೇ ನಿರ್ಮಿಸಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Fact check: ಹುತಾತ್ಮ ಮಗನ ಕುರಿತು ಭಾವಪೂರ್ಣ ಕವಿತೆ ಬರೆದರೆ ಪ್ರಾಂಜಲ್‌ ತಾಯಿ?

Fact Check: ರಜೌರಿ ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ ಕರುನಾಡಿನ ವೀರ ಯೋಧ ಕ್ಯಾಪ್ಟನ್‌ ಎಂ.ವಿ. ಪ್ರಾಂಜಲ್‌ ಅವರ ಕುರಿತಂತೆ ಭಾವುಕ ಕವನವೊಂದು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಅದನ್ನು ಅವರ ತಾಯಿಯೇ ಬರೆದರಾ?

VISTARANEWS.COM


on

Captain pranjal mother poem fact check
Koo

ನಮ್ಮ ಕಣ್ಣೆದುರೇ ಬೆಳೆದ ಈ ಕಂದ ಪ್ರಾಂಜಲನ
ಜೀವ ಕಸಿಯುವ ಹಕ್ಕ ನಿಮಗೆ ನೀಡಿದವರಾರು?
ಕೇಳಿಸದೇ ನಿಮಗೆ ಹೊತ್ತು ಹೆತ್ತ ತಾಯಿಯ ಆಕ್ರಂದನ?
ಕಾಣಿಸದೇ, ದುಃಖವ ನುಂಗಿ ಕಣ್ಣೀರು ತಡೆದುಕೊಂಡ ತಂದೆಯ ದುಮ್ಮಾನ?
ಅನಿಸುವುದಿಲ್ಲವೇ, ಕೈಹಿಡಿದ ಬಾಳ ಸಂಗಾತಿಯ ಎಣೆಯಿಲ್ಲದ ಗೋಳು?
– ಇದು ಜಮ್ಮು-ಕಾಶ್ಮೀರದ ರಜೌರಿಯ ಕಾಡಿನಲ್ಲಿ (Rajouri Encounter) ಅಡಗಿಕೊಂಡಿದ್ದ ಉಗ್ರಗಾಮಿಗಳ ಹುಟ್ಟಡಗಿಸಲು ಮುನ್ನುಗ್ಗುವ ವೇಳೆ ಹುತಾತ್ಮರಾದ ಕ್ಯಾಪ್ಟನ್‌ ಎಂ.ವಿ ಪ್ರಾಂಜಲ್‌ (Captain MV Pranjal) ಅವರ ಬಗ್ಗೆ ಬರೆಯಲಾದ ಭಾವುಕ ಕವನವೊಂದರ (Emotional Poem) ಕೆಲವು ಸಾಲು (Fact Check).

ಕಳೆದ ನವೆಂಬರ್‌ 22ರಂದು ರಜೌರಿ ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ ಈ 29 ವರ್ಷದ ತರುಣನಿಗೆ ಇಡೀ ಕನ್ನಡ ನಾಡು ಅಶ್ರುತರ್ಪಣ ಸಲ್ಲಿಸಿದೆ. ಬೆಂಗಳೂರಂತೂ ವೀರ ಯೋಧನಿಗೆ ಸೆಲ್ಯೂಟ್‌ ಹೊಡೆದು, ಪುಷ್ಟಾಂಜಲಿ ಸಲ್ಲಿಸಿ ಕಳುಹಿಸಿಕೊಟ್ಟಿದೆ. ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಆಡಳಿತ ನಿರ್ದೇಶಕರಾಗಿದ್ದ ಎಂ.ವೆಂಕಟೇಶ್‌ (Pranjal Father M Venkatesh) ಮತ್ತು ಅನುರಾಧಾ ವೆಂಕಟೇಶ್‌ (Pranjal Mother Anuradha Venkatesh) ದಂಪತಿಯ ಏಕೈಕ ಪುತ್ರ ಪ್ರಾಂಜಲ್‌. ಸಣ್ಣ ವಯಸ್ಸಿನಲ್ಲೇ ಸೈನಿಕನಾಗುವ ಹಂಬಲ ಹೊತ್ತು ಅದನ್ನು ಸಾಕಾರಗೊಳಿಸಿಕೊಂಡಿದ್ದ ಎಲ್ಲರ ಮೆಚ್ಚಿನ ಅಕ್ಕರೆಯ ಹುಡುಗ. ಎರಡು ವರ್ಷದ ಹಿಂದೆ ಅದಿತಿ ಅವರನ್ನು ಕೈ ಹಿಡಿದು ಹೊಸ ಬಾಳಿನ ಹೊಸಿಲೂ ತುಳಿದಿದ್ದರು.

Family of Captain MV Pranjal
ಕ್ಯಾಪ್ಟನ್‌ ಫ್ಯಾಮಿಲಿ ಕ್ಯಾ ಪ್ರಾಂಜಲ್‌ ಅದಿತಿ ಪ್ರಾಂಜಲ್‌ ಅನುರಾಧಾ ವೆಂಕಟೇಶ್‌ ಎಂ ವೆಂಕಟೇಶ್‌

ಅವರು ಹುತಾತ್ಮರಾಗಿದ್ದಾರೆಂಬ ಸುದ್ದಿಯನ್ನು ಕೇಳುತ್ತಲೇ ಕುಟುಂಬ ವರ್ಗ, ಸ್ನೇಹಿತರು, ಶಿಕ್ಷಕರು ಕಣ್ಣೀರು ಹಾಕಿದ್ದರು. ಆದರೆ, ತಂದೆ ಎಂ.ವೆಂಕಟೇಶ್‌, ತಾಯಿ ಅನುರಾಧಾ ಮತ್ತು ಪತ್ನಿ ಅದಿತಿ ಮಾತ್ರ ಉಕ್ಕಿ ಬರುವ ಅಳುವನ್ನು ಗಂಟಲಲ್ಲೇ ಕಟ್ಟಿಕೊಂಡು ಸೈನಿಕನ ಮನೆಯವರು ತಾವು ಎಂಬುದನ್ನು ತೋರಿಸುವ ಸ್ಥಿತಪ್ರಜ್ಞತೆಯನ್ನು ಮೆರೆದಿದ್ದರು.

Family of Captain MV Pranjal
ಕ್ಯಾಪ್ಟನ್‌ ಗೆ ಅಂತಿಮ ನಮನ ಇದು ಕುಟುಂಬಕ್ಕೆ ಭಾವುಕ ಕ್ಷಣ

ಇದೀಗ ಎಲ್ಲ ಮುಗಿದು ಒಂದು ನೀರವ ಮೌನವಷ್ಟೇ ಉಳಿದೆ. ಬಹುಶಃ ಮನೆಯಲ್ಲಿ ಪ್ರಾಂಜಲ ನೆನಪುಗಳು ಹರಿದಾಡುತ್ತಿರಬಹುದು. ಒಬ್ಬನೇ ಮಗನನ್ನು ಕಳೆದುಕೊಂಡ ನೋವಿಗೆ ಪರಸ್ಪರ ಸಾಂತ್ವನ ಹೇಳುತ್ತಿರಬಹುದು. ಇದರ ನಡುವೆಯೇ ಆಕ್ರೋಶ, ಸಂಕಟಗಳು ನಾನಾ ರೂಪದಲ್ಲಿ ಪ್ರಕಟಗೊಳ್ಳುತ್ತಿರಬಹುದು.

ಇಂಥ ಹೊತ್ತಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಒಂದು ಭಾವಪೂರ್ಣ ಕವನ ಎಲ್ಲರ ಮನಸ್ಸನ್ನು ಹಿಂಡುತ್ತಿದೆ, ಉಗ್ರರ ಮೇಲೆ ಆಕ್ರೋಶ ಹೆಚ್ಚಿಸುತ್ತಿದೆ.

Captain pranjal mother poem fact check

ಆ ಕವನ ಹೀಗಿದೆ..

ಓ ಪ್ರಕೃತಿಯೇ ಹಣ್ಣೆಲೆಗಳು ಸರದಿಯಲ್ಲಿರುವಾಗ
ನೀನೇಕೆ ಎಳೆ ಚಿಗುರ ಕಸಿದುಕೊಂಡೆ?
ಬೆಳೆದು ಹೆಮ್ಮರವಾಗಬೇಕಾದ ಚಿಕ್ಕ ಗಿಡವ
ಚಿವುಟಿ ನೀನೇನ ಪಡೆದುಕೊಂಡೆ?

ಓ ರಕ್ತ ಪಿಪಾಸು ಉಗ್ರಗಾಮಿಗಳೇ…..
ನಿಮಗೇಕೆ ಈ ಕೊನೆಯಿಲ್ಲದ ದಾಹ?
ಎಂದೆಂದಿಗೂ ಸಾಧಿಸಲಾಗದ, ನಿಮಗೆಂದಿಗೂ ದೊರಕದ
ನಮ್ಮೀ ಮಾತೃಭೂಮಿಯ ಮೇಲೆ ಏಕೀ ವ್ಯಾಮೋಹ?

ನಿಮ್ಮನು ಪ್ರಚೋದಿಸಿ ಕಳುಹಿಸಿದ ಸ್ವಾರ್ಥಿಗಳಿಗೆ
ಎಂದು ಆಗುವುದು ಜ್ಞಾನೋದಯ?
ಎಲ್ಲರಿಗೂ ಬದುಕುವ ಹಕ್ಕು ಪ್ರಕೃತಿಯು ನೀಡಿರುವಾಗ
ನಿಮಗೇಕೆ ಅತಿಕ್ರಮಿಸುವ ಈ ದುಷ್ಟ ಸಂಪ್ರದಾಯ?

ನಮ್ಮ ಕಣ್ಣೆದುರೇ ಬೆಳೆದ ಈ ಕಂದ ಪ್ರಾಂಜಲನ
ಜೀವ ಕಸಿಯುವ ಹಕ್ಕ ನಿಮಗೆ ನೀಡಿದವರಾರು?
ಕೇಳಿಸದೇ ನಿಮಗೆ ಹೊತ್ತು ಹೆತ್ತ ತಾಯಿಯ ಆಕ್ರಂದನ?
ಕಾಣಿಸದೇ, ದುಃಖವ ನುಂಗಿ ಕಣ್ಣೀರು ತಡೆದುಕೊಂಡ ತಂದೆಯ ದುಮ್ಮಾನ?
ಅನಿಸುವುದಿಲ್ಲವೇ, ಕೈಹಿಡಿದ ಬಾಳ ಸಂಗಾತಿಯ ಎಣೆಯಿಲ್ಲದ ಗೋಳು?

-ಇದು ತಾಯಿ ಹೃದಯವೊಂದರ ಸಂಕಟದಂತೆ ಕಾಣುತ್ತಿದೆ. ಉಗ್ರರನ್ನು ರಕ್ತಪಿಪಾಸುಗಳೆಂದು ಕರೆದ ಈ ಕವನ, ನಿಮಗೆಂದೂ ದೊರಕದ ನಮ್ಮೀ ಮಾತೃಭೂಮಿಯ ಮೇಲೆ ಯಾಕೆ ವ್ಯಾಮೋಹ ಎಂದು ಕೇಳುತ್ತದೆ. ಕೊನೆಗೆ ಮನೆಯವರ ಸಂಕಟ ನಿಮಗೆ ಅರ್ಥವಾಗುವುದಿಲ್ಲವೇ ಎಂದು ಕೇಳಲಾಗಿದೆ.

ಹಾಗಿದ್ದರೆ ಈ ಕವನ ಬರೆದವರು ಯಾರು?

ಸಾಮಾಜಿಕ ಜಾಲತಾಣದಲ್ಲಿ ಈ ಕವನವನ್ನು ಓದಿದಾಗ ಮೂಡುವ ಭಾವವೇನೆಂದರೆ, ಇದು ತಾಯಿ ಕರುಳಿನ ರೋದನ ಮತ್ತು ಆಕ್ರೋಶ. ಈ ಕವನವನ್ನು ಪ್ರಾಂಜಲ್‌ ಅವರ ತಾಯಿ ಅನುರಾಧಾ ವೆಂಕಟೇಶ್‌ ಅವರು ಷೇರ್‌ ಮಾಡಿಕೊಂಡಿದ್ದಾರೆ. ಹೀಗಾಗಿ ಅವರೇ ಬರೆದಿದ್ದಾರೆ ಎಂದು ಹೆಚ್ಚಿನ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಪ್ರಾಂಜಲ್‌ ಅವರ ತಾಯಿ ಇದು ತಾನು ಬರೆದಿದ್ದಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Raja Marga Column : ಕ್ಯಾ. ಪ್ರಾಂಜಲ್‌ ಮಾತ್ರವಲ್ಲ ಅವರ ಹೆತ್ತವರು, ಪತ್ನಿ ಕೂಡಾ ವೀರ ಯೋಧರೆ!

ಪ್ರಾಂಜಲ್‌ ತಾಯಿ ವಿಸ್ತಾರ ನ್ಯೂಸ್‌ಗೆ ಹೇಳಿದ್ದೇನು?

ನಮ್ಮ ಮಗ ಪ್ರಾಂಜಲ್‌ ಕುರಿತು ಯಾರೋ ಬರೆದ ಭಾವಪೂರ್ಣ ಕವಿತೆಯನ್ನು ಓದಿರುವೆ. ಅದು ಖಂಡಿತವಾಗಿಯೂ ನಾನು ಬರೆದಿದ್ದಲ್ಲ. ಆದರೆ ಸೋಷಿಯಲ್‌ ಮೀಡಿಯಾಗಳಲ್ಲಿ ಈ ಕವನ ನಾನೇ ಬರೆದಿದ್ದು ಎಂಬಂತೆ ನನ್ನ ಹೆಸರಲ್ಲಿ ಪ್ರಸಾರ ಮಾಡುತ್ತಿದ್ದಾರೆ. ಹೀಗೆ ಮಾಡುವುದು ಸರಿಯಲ್ಲ ಎಂದು ಪ್ರಾಂಜಲ್‌ ಅವರ ತಾಯಿ ಅನುರಾಧಾ ಅವರು ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯಿಸಿದ್ದಾರೆ.

ಈ ಕವಿತೆಯ ಭಾವಾರ್ಥ ಚೆನ್ನಾಗಿದೆ. ಹಾಗಾಗಿ ನಾನು ಇದನ್ನು ನನ್ನ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಶೇರ್‌ ಮಾಡಿದ್ದೆ ಅಷ್ಟೆ. ಇದನ್ನು ಬರೆದ ಕವಿಗೆ ಕೃತಜ್ಞತೆ ಸಲ್ಲಿಸುವೆ. ಆದರೆ ಈ ಕವನದ ಕುರಿತು ಸೋಷಿಯಲ್‌ ಮೀಡಿಯಾಗಳಲ್ಲಿ ತಪ್ಪು ಮಾಹಿತಿ ಕೊಡುವುದು ಸರಿಯಲ್ಲ ಎಂದು ಅವರು ಹೇಳಿದರು.

ಇದು ಮಗನ ಕುರಿತು ಪ್ರಾಂಜಲ್‌ ತಾಯಿ ಬರೆದ ಭಾವಪೂರ್ಣ ಕವಿತೆ ಎಂದು ಪೇಸ್‌ಬುಕ್‌, ವಾಟ್ಸ್‌ಆಪ್‌ ಇತ್ಯಾದಿ ಕಡೆ ಪ್ರಸಾರ ಆಗುತ್ತಿರುವುದನ್ನು ಕಂಡು ನನಗೆ ಬೇಸರವಾಗಿದೆ. ನನ್ನ ಮಗನ ಕುರಿತು ಇರುವ ಜನರ ಅಭಿಮಾನಕ್ಕೆ ನಾವು ಚಿರಋಣಿ. ಆದರೆ ದಯವಿಟ್ಟು ಯಾರೂ ಯಾವುದೇ ರೀತಿಯ ತಪ್ಪು ಮಾಹಿತಿ ಹರಡಬೇಡಿ ಎಂದು ಅನುರಾಧಾ ಅವರು ಸಾರ್ವಜನಿಕರಲ್ಲಿ ವಿನಂತಿ ಮಾಡಿದರು.

Continue Reading

Fact Check

Fact Check: ಪವಿತ್ರ ಗಂಗಾಜಲಕ್ಕೂ 18% ಜಿಎಸ್‌ಟಿ? ಖರ್ಗೆ ಆರೋಪ ಎಷ್ಟು ಸತ್ಯ? ಇಲ್ಲಿದೆ ವಾಸ್ತವ

Fact Check: ಕೇಂದ್ರ ಸರ್ಕಾರವು ಗಂಗಾಜಲಕ್ಕೂ ಶೇ.18ರಷ್ಟು ಜಿಎಸ್‌ಟಿ ವಿಧಿಸಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಟ್ವೀಟ್‌ ಮಾಡಿದ್ದಾರೆ. ಆದರೆ, ಇದರ ವಾಸ್ತವ ಎಷ್ಟು ಎಂಬುದರ ಮಾಹಿತಿ ಹೀಗಿದೆ.

VISTARANEWS.COM


on

Mallikarjun Kharge On GST
Koo

ನವದೆಹಲಿ: ಇದೇನಿದ್ದರೂ ಸಾಮಾಜಿಕ ಜಾಲತಾಣಗಳ ಯುಗ. ಒಂದೇ ಒಂದು ಮಾಹಿತಿಯನ್ನು ಫೇಸ್‌ಬುಕ್‌, ಟ್ವಿಟರ್‌ ಸೇರಿ ಯಾವುದೇ ಜಾಲತಾಣಗಳಲ್ಲಿ ಹಂಚಿಕೊಂಡರೆ ಸಾಕು, ಲಕ್ಷಾಂತರ ಜನರಿಗೆ ಅದು ಕ್ಷಣಮಾತ್ರದಲ್ಲಿ ತಲುಪುತ್ತದೆ. ಅದರಲ್ಲೂ, ರಾಜಕಾರಣಿಗಳು, ಗಣ್ಯರು ಸೇರಿ ಲಕ್ಷಾಂತರ ಫಾಲೋವರ್‌ಗಳನ್ನು ಹೊಂದಿದವರು ಒಂದು ಮಾಹಿತಿ ಹಂಚಿಕೊಂಡರೆ, ಅದರ ರೀಚ್‌ ದೊಡ್ಡ ಮಟ್ಟದಲ್ಲಿ ಇರುತ್ತದೆ. ಇದೇ ಕಾರಣಕ್ಕೆ ಜಾಲತಾಣಗಳನ್ನು ಈಗ ನಕಲಿ ಸುದ್ದಿ ಹರಡಿಸಲು ಅಸ್ತ್ರವನ್ನಾಗಿ ಮಾಡಿಕೊಳ್ಳಲಾಗುತ್ತಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು, ಕೇಂದ್ರ ಸರ್ಕಾರವು ಪವಿತ್ರ ಗಂಗಾಜಲಕ್ಕೂ (Gangajal) ಶೇ.18ರಷ್ಟು ಜಿಎಸ್‌ಟಿ ವಿಧಿಸಿದೆ ಎಂದು ಟ್ವೀಟ್‌ ಮಾಡಿದ್ದು, ಇವರ ಮಾಹಿತಿ ಎಷ್ಟು ಸತ್ಯದಿಂದ (Fact Check) ಕೂಡಿದೆ ಎಂಬುದು ಬಯಲಾಗಿದೆ.

ಖರ್ಗೆ ಮಾಡಿದ ಆರೋಪವೇನು?

“ನರೇಂದ್ರ ಮೋದಿ ಅವರೇ, ಗಂಗಾ ಮಾತೆಯನ್ನು ಮೋಕ್ಷ ನೀಡುವ ಕಾರಣಕ್ಕಾಗಿ ಹೆಚ್ಚು ಪ್ರಾಮುಖ್ಯತೆಯಿಂದ ನೋಡಲಾಗುತ್ತದೆ. ಪ್ರತಿಯೊಬ್ಬರೂ ಹುಟ್ಟಿನಿಂದ ಸಾವಿನವರೆಗೆ ಗಂಗೆಯನ್ನು ಗೌರವಿಸುತ್ತಾರೆ. ಆದರೆ, ನೀವು ಇಂದು ಉತ್ತರಾಖಂಡಕ್ಕೆ ತೆರಳಿದ್ದೀರಿ. ಇಂತಹ ಹೊತ್ತಿನಲ್ಲಿಯೇ ನಿಮ್ಮ ಸರ್ಕಾರವು ಪವಿತ್ರ ಗಂಗಾ ಜಲಕ್ಕೆ ಶೇ.18ರಷ್ಟು ಜಿಎಸ್‌ಟಿ ವಿಧಿಸಿದೆ. ಮನೆಗಳಲ್ಲಿ ಗಂಗಾ ನದಿ ನೀರು ಇಟ್ಟುಕೊಳ್ಳುವವರನ್ನೂ ನೀವು ಬಿಡುತ್ತಿಲ್ಲ. ನಿಮ್ಮ ಸರ್ಕಾರ ಅವರಿಗೂ ಜಿಎಸ್‌ಟಿ ವಿಧಿಸಿ, ಹಣವನ್ನು ಲೂಟಿ ಮಾಡುತ್ತಿದೆ” ಎಂದು ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ ಪೋಸ್ಟ್‌ ಮಾಡಿದ್ದಾರೆ.

ಅಷ್ಟಕ್ಕೂ ವಾಸ್ತವ ಏನು?

ಮಲ್ಲಿಕಾರ್ಜುನ ಖರ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಗಂಗಾಜಲಕ್ಕೆ ಜಿಎಸ್‌ಟಿ ವಿಧಿಸಿರುವ ಕುರಿತು ಪೋಸ್ಟ್‌ ಮಾಡುತ್ತಲೇ ಕೇಂದ್ರೀಯ ಪರೋಕ್ಷ ತೆರಿಗೆಗಳು ಹಾಗೂ ಕಸ್ಟಮ್ಸ್‌ ಮಂಡಳಿಯು (CBIC) ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದೆ. “ಗಂಗಾಜಲಕ್ಕೆ ಯಾವುದೇ ಜಿಎಸ್‌ಟಿ ವಿಧಿಸಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಮಾಹಿತಿ ಹರಡುತ್ತಿರುವ ಕಾರಣ ಸ್ಪಷ್ಟನೆ ನೀಡಲಾಗುತ್ತಿದೆ” ಎಂದು ತಿಳಿಸಿದೆ.

ಇದನ್ನೂ ಓದಿ: Fact Check: ಕೇರಳ ಯೋಧನ ಮೇಲೆ ಪಿಎಫ್ಐ ದಾಳಿ! ಪ್ರಸಿದ್ಧಿಗಾಗಿ ‘ಫೇಕ್’ ಅಟ್ಯಾಕ್ ಕತೆ ಕಟ್ಟಿದ್ನಾ ಸೈನಿಕ?

“ದೇಶಾದ್ಯಂತ ಗಂಗಾಜಲವನ್ನು ಪೂಜೆಯ ವೇಳೆ ಬಳಸುತ್ತಾರೆ. ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಗಂಗಾಜಲವನ್ನು ಇಟ್ಟುಕೊಳ್ಳುತ್ತಾರೆ. ಹಾಗೆಯೇ, ದೇಶದಲ್ಲಿ ಪೂಜಾ ಸಾಮಗ್ರಿಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ. 2017ರ ಮೇ 18, 19 ಹಾಗೂ 2017ರ ಜೂನ್‌ 3ರಂದು ನಡೆದ ಜಿಎಸ್‌ಟಿ ಸಭೆಗಳಲ್ಲಿ ಈ ಕುರಿತು ವಿಸ್ತೃತವಾಗಿ ಚರ್ಚಿಸಲಾಗಿದೆ. ಇದಾದ ಬಳಿಕವೇ ಪೂಜಾ ಸಾಮಗ್ರಿಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ” ಎಂದು ಸ್ಪಷ್ಟನೆ ನೀಡಿದೆ. ಹಾಗಾಗಿ, ಮಲ್ಲಿಕಾರ್ಜುನ ಖರ್ಗೆ ಅವರು ಮಾಡಿದ ಪೋಸ್ಟ್‌ ಸತ್ಯಕ್ಕೆ ದೂರವಾಗಿದೆ.

Continue Reading

Fact Check

Fact Check: ಕೇರಳ ಯೋಧನ ಮೇಲೆ ಪಿಎಫ್ಐ ದಾಳಿ! ಪ್ರಸಿದ್ಧಿಗಾಗಿ ‘ಫೇಕ್’ ಅಟ್ಯಾಕ್ ಕತೆ ಕಟ್ಟಿದ್ನಾ ಸೈನಿಕ?

Fact Check: ಆರು ಜನರು ತನ್ನ ಮೇಲೆ ದಾಳಿ ನಡೆಸಿ, ಬೆನ್ನ ಮೇಲೆ ಪಿಎಫ್ಐ ಎಂದು ಬರೆದಿದ್ದಾರೆಂದು ಭಾರತೀಯ ಸೇನೆಯ ಯೋಧ ಕೇರಳ ಪೊಲೀಸರಿಗೆ ದೂರು ನೀಡಿದ್ದ. ವಿಚಾರಣೆ ನಡೆಸಿದಾಗ ಪಿಎಫ್ಐ ಫೇಕ್ ಅಟ್ಯಾಕ್ ಕತೆ ಬಯಲಾಗಿದೆ.

VISTARANEWS.COM


on

Fact Check, PFI Attack on Soldier is Fake Says Kerala Police
Koo

ನವದೆಹಲಿ: ಕೇರಳದಲ್ಲಿ ನಿಷೇಧಿತ ಪಿಎಫ್ಐ ಭಾರತೀಯ ಸೇನಾ ಯೋಧನ ಮೇಲೆ ದಾಳಿ (PFI Attack) ನಡೆಸಿದ ಸುದ್ದಿ ಎರಡ್ಮೂರು ದಿನಗಳಿಂದ ಭಾರೀ ವೈರಲ್ ಆಗಿತ್ತು. ಆದರೆ, ಅದು ಫೇಕ್ ಘಟನೆ ಎಂದು ಸಾಬೀತಾಗಿದ್ದು, ಕೇರಳ ಪೊಲೀಸರು (Kerala Police) ‘ಸಂತ್ರಸ್ತ’ ಯೋಧ ಹಾಗೂ ಆತನ ಸ್ನೇಹಿತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ‘ಸಂತ್ರಸ್ತ’ ಯೋಧ (Indian Army Soldier) ತನ್ನ ಮನೆಯ ಸಮೀಪ ಆರು ಮಂದಿ ಹಲ್ಲೆ ನಡೆಸಿದ್ದಾರೆ ಮತ್ತು ತನ್ನ ಬೆನ್ನ ಮೇಲೆ ‘ಪಿಎಫ್‌ಐ’ ಎಂದು ಬರೆಯಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದ. ಈ ಕುರಿತು ವಿಚಾರಣ ನಡೆದಾಗ, ದಿಢೀರ್ ಖ್ಯಾತಿ ಗಳಿಸಲು ಯೋಧನೇ ಈ ರೀತಿಯ ಫೇಕ್ ಪಿಎಫ್ಐ ದಾಳಿ ಘಟನೆ ರೂಪಿಸಿದ್ದು ಬಹಿರಂಗವಾಗಿದೆ(Fact Check).

ಕೇರಳದ ಕೊಲ್ಲಮ್ ಜಿಲ್ಲೆ ಹಿರಿಯ ಪೊಲೀಸ್ ಅಧಿಕಾರಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಅರೆಸ್ಟ್ ಮಾಡಿಲ್ಲ. ಆದರೆ, ಯೋಧ ಶೈನ್ ಕುಮಾರ್ ಮತ್ತು ಆತನ ಗೆಳೆಯನನ್ನು ವಶಕ್ಕೆ ಪಡೆದುಕೊಂಡು ಹೇಳಿಕೆಯನ್ನು ದಾಖಲಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಅವರ ಹೇಳಿಕೆಗಳನ್ನು, ವಿಷಯಗಳನ್ನು ಪರಿಶೀಲಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ದಿಢೀರ್ ಪ್ರಸಿದ್ಧಿಯನ್ನು ಪಡೆಯುವುದಕ್ಕಾಗಿ ಶೈನ್ ಕುಮಾರ್ ಪ್ರಸಿದ್ಧರಾಗಲು ಬಯಸಿದ್ದರು. ಅದಕ್ಕಾಗಿಯೇ ಈ ಪಿಎಫ್ಐ ದಾಳಿಯ ಫೇಕ್ ಕೃತ್ಯವನ್ನು ಮಾಡಿದ್ದರು ಎಂದು ಯೋಧನ ಸ್ನೇಹಿತ ಹೇಳಿದ್ದಾನೆ. ಆತನ ಹೇಳಿಕೆಯನ್ನು ಪೊಲೀಸರು ದಾಖಲಿಸಿದ್ದಾರೆ.

ಯೋಧ ಶೈನ್ ಕುಮಾರ್ ಅವರು ಕಡಕ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ನಡೆಸಿದಾಗ ಅವರ ದೂರು ಸುಳ್ಳು ಎಂದು ತಿಳಿದುಬಂದಿದೆ. ಅದರ ಆಧಾರದ ಮೇಲೆ ಈಗ ಯೋಧ ಹಾಗೂ ಆತನ ಸ್ನೇಹಿತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಘಟನೆಯಿಂದ ದೇಶದ ಗಮನ ಸೆಳೆಯಲು ತನಗೆ ಬೇಕಾದ ಪೋಸ್ಟಿಂಗ್ ಪಡೆಯಲು ಶೈನ್ ಕುಮಾರ್ ಮುಂದಾಗಿದ್ದ ಎಂದು ಪೊಲೀಸ್ ವಿಚಾರಣೆ ವೇಳೆ ಗೊತ್ತಾಗಿದೆ ಎಂದು ಕೊಲ್ಲಮ್ ಗ್ರಾಮಾಂತರದ ಹೆಚ್ಚುವರಿ ಎಸ್‌ಪಿ ಆರ್ ಪ್ರತಾಪನ್ ನಾಯರ್ ಹೇಳಿದ್ದಾರೆ.

ಈ ಕೃತ್ಯಕ್ಕೆ ಬಳಸಲಾದ ಹಸಿರು ಪೇಂಟ್, ಬ್ರಷ್ ಮತ್ತು ಟೇಪ್ ಅನ್ನು ಶೈನ್ ಕುಮಾರ್ ಸ್ನೇಹಿತನ ಮನೆಯಿಂದ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಪಿಎಎಫ್ ದಾಳಿ ನಡದೆ ರೀತಿ ಹೇಗೆ?

ಶೈನ್ ಕುಮಾರ್ ಅವರು ಹೇಗೆ ಪಿಎಫ್ಐ ನಕಲಿ ದಾಳಿಯ ಕೃತ್ಯವನ್ನು ಜಾರಿಗೆ ತಂದರು ಕತೆಯನ್ನು ಆತನ ಸ್ನೇಹಿತ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ. “ನಾನು ಕುಡಿದಿದ್ದೆ, ಆದ್ದರಿಂದ ನಾನು ಆರಂಭದಲ್ಲಿ ಡಿಎಫ್‌ಐ ಅನ್ನು ಬರೆದ. ಆದರೆ ಅವನು (ಕುಮಾರ್) ಪಿಎಫ್‌ಐ ಬರೆಯಲು ಹೇಳಿದ. ಹಾಗಾಗಿ ನಾನು ಅದನ್ನು ಪಿಎಫ್‌ಐ ಮಾಡಿದೆ. ನಂತರ ಅವನು ನನ್ನನ್ನು ಹೊಡೆಯಲು ಕೇಳಿದ. ಆದರೆ ನಾನು ಕುಡಿದಿದ್ದರಿಂದ ನನಗೆ ಸಾಧ್ಯವಿಲ್ಲ ಎಂದೆ. ಆಗ ಅವನು ನೆಲದ ಮೇಲೆ ಎಳೆದುಕೊಂಡು ಹೋಗಲು ಹೇಳಿದನು. ಆದರೆ ನನ್ನ ಅಮಲಿನಲ್ಲಿದ್ದೆ ಅದು ನನಗೆ ಸಾಧ್ಯವಾಗಲಿಲ್ಲ. ಆದ್ದರಿಂದ ಅವನು ತನ್ನ ಬಾಯಿ ಮತ್ತು ಕೈಗಳನ್ನು ಟೇಪ್‌ನಿಂದ ಬಂಧಿಸಿ ಹೊಗುವಂತೆ ತಿಳಿಸಿದ. ನಾನು ಹಾಗೆ ಮಾಡಿದೆ ಎಂದು ಆರೋಪಿಯ ಸ್ನೇಹಿತ ಹೇಳಿದ್ದಾನೆ.

ಈ ಸುದ್ದಿಯನ್ನೂ ಓದಿ: Army Jawan: ಯೋಧನ ಮೇಲೆ ಹಲ್ಲೆ ನಡೆಸಿ, ಬೆನ್ನಿನ ಮೇಲೆ ‘ಪಿಎಫ್‌ಐ’ ಎಂದು ಬರೆದ ದುರುಳರು!

ಭಾನುವಾರ ರಾತ್ರಿ ತನ್ನ ಮನೆಯ ಬಳಿ ಆರು ಜನರಿಂದ ಥಳಿಸಿದರು ಮತ್ತು ತನ್ನ ಬೆನ್ನಿನ ಮೇಲೆ ಹಸಿರು ಬಣ್ಣದಿಂದ ‘ಪಿಎಫ್‌ಐ’ ಎಂದು ಬರೆದಿದ್ದಾರೆ ಎಂದು ಸೈನಿಕನು ತನ್ನ ದೂರಿನಲ್ಲಿ ತಿಳಿಸಿದ್ದ. ಕೇರಳದ ಕಡಕ್ಕಲ್‌ನಲ್ಲಿರುವ ಅವರ ಮನೆಯ ಸಮೀಪವೇ ಈ ಘಟನೆ ನಡೆದಿದೆ ಎಂದು ಹೇಳಿಕೊಂಡಿದ್ದ. ಈ ವಿಷಯವು ಭಾರೀ ಗಮನ ಸೆಳೆದಿತ್ತು. ಆದರೆ, ಕೇರಳ ಪೊಲೀಸರು ವಿಚಾರಣೆ ನಡೆಸಿದಾಗ ಇಡೀ ಘಟನೆ ನಕಲಿ ಎಂದು ಗೊತ್ತಾಗಿದ್ದು, ಕೇವಲ ಪ್ರಚಾರಕ್ಕಾಗಿ ಭಾರತೀಯ ಸೇನೆಯ ಯೋಧ ಫೇಕ್ ಪಿಎಫ್ಐ ದಾಳಿಯನ್ನು ರೂಪಿಸಿದ್ದ ಎಂದು ಗೊತ್ತಾಗಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Continue Reading

Fact Check

Fact Check: ಕೆನಡಾ ಆರೋಪದ ಬಳಿಕ ರಾಷ್ಟ್ರಪತಿ ಭವನದ ಸಿಖ್‌ ಭದ್ರತಾ ಸಿಬ್ಬಂದಿಗೆ ಕೊಕ್?‌

Fact Check: ಭಾರತೀಯ ಸೇನೆಯಲ್ಲಿ ಸಿಖ್ಖರನ್ನು ತುಚ್ಚವಾಗಿ ನಡೆಸಿಕೊಳ್ಳಲಾಗುತ್ತಿದೆ, ಅವರಿಗೆ ರಜೆ ಕೊಡುತ್ತಿಲ್ಲ ಎಂಬೆಲ್ಲ ವದಂತಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಕೆಲವು ಪಾಕಿಸ್ತಾನಿಯರೂ ಇದರಲ್ಲಿ ಶಾಮೀಲಾಗಿದ್ದಾರೆ ಎಂದು ತಿಳಿದುಬಂದಿದೆ.

VISTARANEWS.COM


on

Fact Check
Koo

ನವದೆಹಲಿ: ಕೆನಡಾದಲ್ಲಿ ಖಲಿಸ್ತಾನಿಗಳ ನಾಯಕ ಹರ್ದೀಪ್‌ ಸಿಂಗ್‌ ನಿಜ್ಜರ್‌ನನ್ನು (Hardeep Singh Nijjar) ಹತ್ಯೆ ಮಾಡಿದ್ದರ ಹಿಂದೆ ಭಾರತ ಸರ್ಕಾರದ ಕೈವಾಡವಿದೆ ಎಂದು ಪ್ರಧಾನಿ ಜಸ್ಟಿನ್‌ ಟ್ರುಡೋ (Justin Trudeau) ಆರೋಪಿಸಿದ ಬಳಿಕ ಭಾರತದಲ್ಲಿ ಸಿಖ್‌ ಸಮುದಾಯದವರ ಕುರಿತು ವದಂತಿ ಹರಡಿಸಲಾಗುತ್ತಿದೆ. ಸಿಖ್‌ ಸಮುದಾಯದವರ ಮೇಲೆ ಕೇಂದ್ರ ಸರ್ಕಾರ ದೌರ್ಜನ್ಯ ಎಸಗುತ್ತಿದೆ ಎಂಬೆಲ್ಲ ಆರೋಪಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಾಡಲಾಗುತ್ತಿದೆ. ಆದರೆ, ಪಿಐಬಿ ಫ್ಯಾಕ್ಟ್‌ಚೆಕ್‌ ಘಟಕವು (Fact Check) ಎಲ್ಲ ಆರೋಪಗಳನ್ನು ತಿರಸ್ಕರಿಸಿದೆ. ಸೇನೆಯೂ ವದಂತಿಗಳನ್ನು ಅಲ್ಲಗಳೆದಿದೆ.

ಏನಿದು ವದಂತಿ?

ಹರ್ದೀಪ್‌ ಸಿಂಗ್‌ ನಿಜ್ಜರ್‌ ಕೊಲೆಯ ಕೈವಾಡದ ಕುರಿತು ಜಸ್ಟಿನ್‌ ಟ್ರುಡೋ ಆರೋಪಿಸುತ್ತಲೇ ಭಾರತದಲ್ಲಿ ಸಿಖ್ಖರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ರಾಷ್ಟ್ರಪತಿ ಭವನ ಹಾಗೂ ರಾಷ್ಟ್ರಪತಿಯವರ ಅಧಿಕೃತ ನಿವಾಸದಿಂದ ಸಿಖ್‌ ಸಮುದಾಯದ ಸಿಬ್ಬಂದಿಯನ್ನು ತೆಗೆಯಲಾಗಿದೆ. ಅವರನ್ನು ಬೇರೆಡೆ ನಿಯೋಜಿಸಲಾಗಿದೆ. ಅಷ್ಟೇ ಅಲ್ಲ, ಭಾರತೀಯ ಸೇನೆಯಲ್ಲಿರುವ ಸಿಖ್‌ ಸಮುದಾಯದವರಿಗೆ ರಜೆಗಳನ್ನು ನೀಡುತ್ತಿಲ್ಲ. ಅವರ ರಜೆಯನ್ನು ರದ್ದುಗೊಳಿಸಲಾಗಿದೆ. ಇಂದಿರಾ ಗಾಂಧಿ ಅವರನ್ನು ಹತ್ಯೆಗೈದಂತೆ ನನ್ನನ್ನೂ ಹತ್ಯೆ ಮಾಡಲಾಗುತ್ತದೆ ಎಂಬ ಭಯ ಮೋದಿ ಅವರನ್ನು ಕಾಡುತ್ತಿದೆ ಎಂದೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹರಡಿಸಲಾಗಿದೆ. ಕೆಲವರು ಪಾಕಿಸ್ತಾನದಿಂದ ಇಂತಹ ವದಂತಿ ಹರಡಿಸಲಾಗಿದೆ ಎಂದು ತಿಳಿದುಬಂದಿದೆ.

ವಾಸ್ತವಾಂಶ ಏನು?

ನಕಲಿ ಸುದ್ದಿಗಳನ್ನು ಪರಿಶೀಲಿಸಿ, ವಾಸ್ತವವನ್ನು ಜನರಿಗೆ ತಿಳಿಸುವ ಪಿಐಬಿ ಫ್ಯಾಕ್ಟ್‌ಚೆಕ್‌ ಘಟಕವು ಈ ವದಂತಿಗಳನ್ನು ಅಲ್ಲಗಳೆದಿದೆ. “ರಾಷ್ಟ್ರಪತಿ ಭವನದಿಂದ ಸಿಖ್‌ ಭದ್ರತಾ ಸಿಬ್ಬಂದಿಯನ್ನು ತೆರವುಗೊಳಿಸಲಾಗಿದೆ ಹಾಗೂ ಸೇನೆಯಲ್ಲಿರುವ ಸಿಖ್‌ ಯೋಧರಿಗೆ ರಜೆಗಳನ್ನು ನೀಡುತ್ತಿಲ್ಲ ಎಂಬ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪಸರಿಸಿರುವ ಮಾಹಿತಿಯು ಸತ್ಯಕ್ಕೆ ದೂರವಾಗಿದೆ. ಇಂತಹ ಯಾವುದೇ ಆದೇಶ ಹೊರಡಿಸಿಲ್ಲ” ಎಂದು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ: India Canada Row: ಮಣಿಪುರ, ಕಾಶ್ಮೀರಕ್ಕೆ ಹೋಗದಿರಿ; ಕೆನಡಾ ಮತ್ತೊಂದು ಉದ್ಧಟತನ

ಭಾರತೀಯ ಸೇನೆಯೂ ಇಂತಹ ವದಂತಿಗಳ ಕುರಿತು ಸ್ಪಷ್ಟನೆ ನೀಡಿದೆ. “ಭಾರತೀಯ ಸೇನೆಯ ಕುರಿತ ಯಾವುದೇ ನಕಲಿ ಮಾಹಿತಿಯನ್ನು, ದ್ವೇಷ ಹರಡುವ ಪೋಸ್ಟ್‌ಗಳನ್ನು ನಂಬದಿರಿ” ಎಂದು ಆರೋಪಗಳನ್ನು ಅಲ್ಲಗಳೆದಿದೆ. ಕೆನಡಾದಲ್ಲಿರುವ ಭಾರತೀಯರ ರಕ್ಷಣೆ ಮಾಡಬೇಕು ಹಾಗೂ ಭಾರತ ವಿರೋಧಿ ಚಟುವಟಿಕೆಗಳನ್ನು ನಿಗ್ರಹಿಸಬೇಕು ಎಂದು ನರೇಂದ್ರ ಮೋದಿ ಅವರು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಅವರಿಗೆ ಸೂಚಿಸಿದ ಬಳಿಕ ಎರಡೂ ದೇಶಗಳ ಸಂಬಂಧದ ಮಧ್ಯೆ ಬಿರುಕು ಬಿಟ್ಟಿದೆ. ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸುದ್ದಿ ಹರಡಿಸುವ, ಭಾರತದ ವಿರುದ್ಧ ಷಡ್ಯಂತ್ರ ಮಾಡುವತನಕ ಮುಂದುವರಿದಿದೆ.

Continue Reading
Advertisement
waiter beaten to death, tray of used plates touched guests in marriage
ಕ್ರೈಂ15 seconds ago

ಬಳಸಿದ ಪ್ಲೇಟ್‌ಗಳಿದ್ದ ಟ್ರೆ ತಾಗಿದ್ದಕ್ಕೆ ವೇಟರ್‌ನನ್ನು ಹೊಡೆದು ಕೊಂದೇ ಬಿಟ್ರು!

Krishna Byregowda Central assistance
ಕರ್ನಾಟಕ28 mins ago

Assembly Session : ಕೇಂದ್ರ ಅನುದಾನ ವರ್ಷದಿಂದ ವರ್ಷಕ್ಕೆ ಇಳಿಕೆ; ಪೈಸೆ ಪೈಸೆ ಲೆಕ್ಕ ಕೊಟ್ಟ ಕೃಷ್ಣ ಬೈರೇಗೌಡ

Karnataka Drought
ಕರ್ನಾಟಕ38 mins ago

Karnataka Drought: ಮುಂದಿನ ವಾರ ಡಿಬಿಟಿ ಮೂಲಕ ರೈತರಿಗೆ ಬರ ಪರಿಹಾರ; 2 ಸಾವಿರ ರೂ.ವರೆಗೆ ಜಮೆ

IT raids on liquor traders across Odisha and Jharkhand
ದೇಶ40 mins ago

ತೆರಿಗೆಗಳ್ಳರ ಮೇಲೆ ಐಟಿ ದಾಳಿ; ನೋಟು ಎಣಿಸಿ ಎಣಿಸಿ ಕೌಂಟಿಂಗ್ ಮೆಷಿನ್‌ಗೆ ಸುಸ್ತು!

Attendance Araga Jnanendra UT Khader Araga jnanendra
ಕರ್ನಾಟಕ1 hour ago

Belagavi Winter Session : ನಾವೂ ಟೈಮಿಗೆ ಸರಿಯಾಗಿ ಬಂದಿದ್ದೀವಿ; ಸ್ಪೀಕರ್‌ ಜತೆ ಶಾಸಕರ ಜಗಳ!

Madhu Bangarappa in Belagavi Winter Session
ಕರ್ನಾಟಕ1 hour ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Pressmeet for Demand for construction of bypass road in Yallapur
ಉತ್ತರ ಕನ್ನಡ1 hour ago

Uttara Kannada News: ಯಲ್ಲಾಪುರ ಪಟ್ಟಣದಲ್ಲಿ ಬೈಪಾಸ್‌ ರಸ್ತೆ ನಿರ್ಮಾಣಕ್ಕೆ ಒತ್ತಾಯ

Israel
ಪ್ರಮುಖ ಸುದ್ದಿ1 hour ago

Israel Palestine War: ಅರ್ಧದಷ್ಟು ಹಮಾಸ್ ಕಮಾಂಡರ್‌ಗಳು ಫಿನಿಷ್! ಇಸ್ರೇಲ್ ಹೇಳಿಕೆ

bengaluru bulls kiccha sudeep
ಕ್ರೀಡೆ1 hour ago

ಬೆಂಗಳೂರು ಬುಲ್ಸ್​ಗೆ ಫುಲ್ ಚಾರ್ಜ್​ ಮಾಡಲು ಬರಲಿದ್ದಾರೆ ಕಿಚ್ಚ ಸುದೀಪ್

self harming by wadi Acc cement Depute Director
ಕರ್ನಾಟಕ2 hours ago

Self Harming : ಅದಾನಿ ಗ್ರೂಪ್‌ ಕಾರ್ಖಾನೆಯ ಡೆಪ್ಯೂಟಿ ಮ್ಯಾನೇಜರ್ ಸೂಸೈಡ್‌!

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Madhu Bangarappa in Belagavi Winter Session
ಕರ್ನಾಟಕ1 hour ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Veer Savarkar and Priyank Kharge
ಕರ್ನಾಟಕ2 hours ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

CM-Siddaramaiah
ಕರ್ನಾಟಕ8 hours ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

Dina Bhavihsya
ಪ್ರಮುಖ ಸುದ್ದಿ15 hours ago

Dina Bhavishya: ಮದುವೆಗಿದ್ದ ಅಡೆತಡೆಗಳು ಮಾಯ; ಈ ರಾಶಿಯವರಿಗೆ ವಿವಾಹ ಯೋಗ!

R ashok and CM siddaramiah in Karnataka Assembly Session
ಕರ್ನಾಟಕ23 hours ago

Belagavi Winter Session: ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡ್ತೀರಿ; ರೈತರಿಗೆ 2000 ರು. ಮಾತ್ರವೇ? ಬಿಜೆಪಿ ಕಿಡಿ

CM Siddaramaiah and Tanveer
ಕರ್ನಾಟಕ1 day ago

CM Siddaramaiah: ಸಿಎಂ ಪಕ್ಕ ಐಸಿಸ್‌ ಸಂಪರ್ಕಿತ ಆರೋಪಕ್ಕೆ ಫೋಟೊ ಸಾಕ್ಷಿ ಕೊಟ್ಟ ಯತ್ನಾಳ್!

MLA Basanagouda Patil Yatnal and CM Siddaramaiah
ಕರ್ನಾಟಕ1 day ago

CM Siddaramaiah: ಮುಸ್ಲಿಂ ಸಮಾವೇಶದಲ್ಲಿ ಸಿಎಂ ಪಕ್ಕ ಕುಳಿತಿದ್ದ ಐಸಿಸ್‌ ಸಂಪರ್ಕಿತ; ಸಾಕ್ಷಿ ಕೊಡುವೆನೆಂದ ಯತ್ನಾಳ್‌

We will catch the wild elephant that killed Arjuna
ಕರ್ನಾಟಕ1 day ago

ಕಾರ್ಯಾಚರಣೆ ಸ್ಥಗಿತ; ಅರ್ಜುನನ ಕೊಂದ ಕಾಡಾನೆಯನ್ನು ಹಿಡಿದೇ ತೀರುವೆ-ಮಾವುತನ ಶಪಥ!

Government Job Vistara Exclusive and CM Siddaramaiah
ಉದ್ಯೋಗ1 day ago

Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ

Government Job Vistara Exclusive
ಉದ್ಯೋಗ1 day ago

Government Job : ‘ಖಾಲಿ’ ಸರ್ಕಾರದಲ್ಲಿ ಉದ್ಯೋಗಕ್ಕಿಲ್ಲ ಗ್ಯಾರಂಟಿ; ಭರ್ತಿಯಾಗದ 2.47 ಲಕ್ಷ ಹುದ್ದೆ!

ಟ್ರೆಂಡಿಂಗ್‌