Covid 19 Updates: ದೇಶದಲ್ಲಿ ಇಂದು 6 ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್​ಗಳು ಪತ್ತೆ; ಆರೋಗ್ಯ ಸಚಿವರಿಂದ ಉನ್ನತ ಮಟ್ಟದ ಸಭೆ - Vistara News

ಆರೋಗ್ಯ

Covid 19 Updates: ದೇಶದಲ್ಲಿ ಇಂದು 6 ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್​ಗಳು ಪತ್ತೆ; ಆರೋಗ್ಯ ಸಚಿವರಿಂದ ಉನ್ನತ ಮಟ್ಟದ ಸಭೆ

ದೇಶದಲ್ಲಿ ಪ್ರತಿದಿನ ದಾಖಲಾಗುವ ಕೊವಿಡ್​ 19 ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ದಿನದಿಂದ ದಿನಕ್ಕೆ 1000 ಗಳಷ್ಟು ಹೆಚ್ಚುತ್ತಿದೆ. ಹೀಗಾಗಿ ದೇಶದಲ್ಲಿನ ಕೋವಿಡ್ 19 ಪರಿಸ್ಥಿತಿ ಪರಿಶೀಲನೆ ನಡೆಸಲು ಇಂದು ಕೇಂದ್ರ ಆರೋಗ್ಯ ಸಚಿವ ಡಾ. ಮನ್​ಸುಖ್​ ಮಾಂಡವಿಯಾ ಪರಿಶೀಲನಾ ಸಭೆ ನಡೆಸಲಿದ್ದಾರೆ.

VISTARANEWS.COM


on

India Reports Over 6000 Covid 19 cases in 24 hours
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಭಾರತದಲ್ಲಿ ಕೊರೊನಾ ಸೋಂಕಿನ (Coronavirus) ಸನ್ನಿವೇಶ ಕೈಮೀರುತ್ತಿರುವಂತೆ ಭಾಸವಾಗುತ್ತಿದೆ. ಕಳೆದ 24ಗಂಟೆಯಲ್ಲಿ 6050 ಕೋವಿಡ್​ ಕೇಸ್​ಗಳು ದಾಖಲಾಗಿವೆ. ನಿನ್ನೆ ಗುರುವಾರ 5,333 ಕೊರೊನಾ ಸೋಂಕಿತರು ಪತ್ತೆಯಾಗಿದ್ದರು. ನಿನ್ನೆಗಿಂತಲೂ ಇಂದು ಕೋವಿಡ್ 19 ಸೋಂಕಿತರ (Covid 19 Updates) ಸಂಖ್ಯೆಯಲ್ಲಿ ಶೇ.13ರಷ್ಟು ಹೆಚ್ಚಳವಾಗಿದೆ. ದೇಶದಲ್ಲೀಗ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 28,303. ಹಾಗೇ, 24ಗಂಟೆಯಲ್ಲಿ 14 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, ಕೊರೊನಾ ಸಾಂಕ್ರಾಮಿಕ ಶುರುವಾದಾಗಿನಿಂದ ಇಲ್ಲಿಯವರೆಗೆ ಸೋಂಕಿನಿಂದ ಜೀವ ಕಳೆದುಕೊಂಡವರು 5,30,943 ಮಂದಿ.

ದೇಶದಲ್ಲಿ ಕೊರೊನಾ ಮತ್ತೊಂದು ಅಲೆ ಶುರುವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಈಗ ಸೋಂಕು ಹರಡುತ್ತಿದ್ದರೂ ಅಷ್ಟೊಂದು ಮಾರಣಾಂತಿಕವಾಗಿಲ್ಲ. ಕೋವಿಡ್​ 19ನಿಂದ ಸಾವನ್ನಪ್ಪುವವರ ಮತ್ತು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಅತ್ಯಂತ ಕಡಿಮೆ ಇದೆ ಎಂದು ಹೇಳಲಾಗಿದ್ದರೂ, ಹರಡುವಿಕೆ ಜೋರಾಗಿಯೇ ಇದೆ. ದೈನಂದಿನ ಪಾಸಿಟಿವಿಟಿ ರೇಟ್​ ಶೇ.3.39ರಷ್ಟಿದ್ದು, ವಾರದ ಪಾಸಿಟಿವಿಟಿ ರೇಟ್​ ಶೇ.3.0 ಇದೆ. ಜತೆಜತೆಗೆ ಲಸಿಕೀಕರಣ ಕೂಡ ನಡೆಯುತ್ತಿದೆ. ದೇಶದ ಕಟ್ಟಕಡೆಯ ವ್ಯಕ್ತಿಗೂ ಕೋವಿಡ್ 19 ಲಸಿಕೆ ಸಿಗುವಂತೆ ಮಾಡುವುದೇ ಕೇಂದ್ರದ ಸಂಕಲ್ಪವಾಗಿದೆ.

ಇಂದು ಉನ್ನತ ಮಟ್ಟದ ಸಭೆ
ದೇಶದಲ್ಲಿ ಪ್ರತಿದಿನ ದಾಖಲಾಗುವ ಕೊವಿಡ್​ 19 ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ದಿನದಿಂದ ದಿನಕ್ಕೆ 1000 ಗಳಷ್ಟು ಹೆಚ್ಚುತ್ತಿದೆ. ಹೀಗಾಗಿ ದೇಶದಲ್ಲಿನ ಕೋವಿಡ್ 19 ಪರಿಸ್ಥಿತಿ ಪರಿಶೀಲನೆ ನಡೆಸಲು ಇಂದು ಕೇಂದ್ರ ಆರೋಗ್ಯ ಸಚಿವ ಡಾ. ಮನ್​ಸುಖ್​ ಮಾಂಡವಿಯಾ ಅವರು ಎಲ್ಲ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರೊಟ್ಟಿಗೆ ವರ್ಚ್ಯುವಲ್ ಸಭೆ ನಡೆಸಲಿದ್ದಾರೆ. ‘ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ, ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಇಂದು ಆರೋಗ್ಯ ಸಚಿವರು ಉನ್ನತ ಮಟ್ಟದ ಸಭೆ ನಡೆಸಿ, ಎಲ್ಲ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಪರಿಸ್ಥಿತಿಯ ಬಗ್ಗೆ ವರದಿ ಪಡೆಯಲಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ರಾಜ್ಯ ಸಚಿವೆ ಡಾ.ಭಾರತಿ ಪ್ರವೀಣ್​ ಪವಾರ್​​ ತಿಳಿಸಿದ್ದಾರೆ. ಇನ್ನೊಂದೆಡೆ ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡ ಈಗಾಗಲೇ ಸಭೆ ನಡೆಸಿದ್ದಾರೆ.

ಇದನ್ನೂ ಓದಿ: Covid 19 Updates: ಇಂದು 5000ಕ್ಕೂ ಅಧಿಕ ಕೊರೊನಾ ಕೇಸ್​ಗಳು ದಾಖಲು; ಐದು ತಿಂಗಳಲ್ಲೇ ಗರಿಷ್ಠ ಸಂಖ್ಯೆ ಇದು!

ಮಹಾರಾಷ್ಟ್ರ-ದೆಹಲಿಯಲ್ಲಿ ಕೊರೊನಾ ಹೆಚ್ಚಳ
ಇಡೀ ದೇಶದಲ್ಲಿ ಕೊರೊನಾ ವೈರಸ್​ ಮಿತಿಮೀರುತ್ತಿದ್ದು, ಒಟ್ಟಾರೆ ಹೆಚ್ಚಳದಲ್ಲಿ ಬಹುಪಾಲು ಮಹಾರಾಷ್ಟ್ರ ಮತ್ತು ದೆಹಲಿಯಿಂದಲೇ ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ಕಳೆದ 24ಗಂಟೆಯಲ್ಲಿ 803 ಕೊರೊನಾ ಕೇಸ್​ಗಳು ಪತ್ತೆಯಾಗಿದ್ದಾರೆ. ಹಾಗೇ, ಮೂವರು ಮೃತಪಟ್ಟಿದ್ದಾರೆ. ಇದರಲ್ಲಿ 216 ಸೋಂಕಿತರು ಮುಂಬಯಿಯಲ್ಲಿ ಪತ್ತೆಯಾಗಿದ್ದಾರೆ. ಅದು ಬಿಟ್ಟರೆ ದೆಹಲಿಯಲ್ಲಿ ಕಳೆದ 24ಗಂಟೆಯಲ್ಲಿ 606 ಕೊರೊನಾ ಕೇಸ್​​ಗಳು ದಾಖಲಾಗಿವೆ. ಕಳೆದ ವರ್ಷದ ಆಗಸ್ಟ್​ನಲ್ಲಿ ಬಿಟ್ಟರೆ, ದೆಹಲಿಯಲ್ಲಿ ಇಷ್ಟು ಸಂಖ್ಯೆಯಲ್ಲಿ ಸೋಂಕಿತರು ಇಂದಿನವರೆಗೆ ಪತ್ತೆಯಾಗಿರಲಿಲ್ಲ. ಅದರಾಚೆ, ಉತ್ತರ ಪ್ರದೇಶ, ಕೇರಳ, ಕರ್ನಾಟಕಗಳಲ್ಲೂ ಕೊರೊನಾ ಪ್ರಮಾಣ ಜಾಸ್ತಿ ಇದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

World Malaria Day: ಮಲೇರಿಯಾದಿಂದ ಮಕ್ಕಳನ್ನು ರಕ್ಷಿಸಿಕೊಳ್ಳುವುದು ಹೇಗೆ?

ಮಲೇರಿಯಾವನ್ನು (World Malaria Day) ನಿಯಂತ್ರಿಸಲು ಮತ್ತು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಜಾಗತಿಕ ಮಟ್ಟದಲ್ಲಿ ಜಾಗೃತಿಯನ್ನು ಮೂಡಿಸುವ ಹಿನ್ನೆಲೆಯಲ್ಲಿ ಪ್ರತಿವರ್ಷ ಏಪ್ರಿಲ್ 25 ರಂದು ʼವಿಶ್ವ ಮಲೇರಿಯಾ ದಿನʼವನ್ನು ಆಚರಿಸಲಾಗುತ್ತದೆ. ಪ್ರಸಕ್ತ ವರ್ಷ ಈ ದಿನವನ್ನು ʼಜಗತ್ತಿನಾದ್ಯಂತ ಮಲೇರಿಯಾ ವಿರುದ್ಧದ ಹೋರಾಟಕ್ಕೆ ಒತ್ತುʼ ಎಂಬ ಥೀಮ್‌ನೊಂದಿಗೆ ಆಚರಿಸಲಾಗುತ್ತಿದೆ. ಮಲೇರಿಯಾ ಕಾಯಿಲೆಯು ಮಕ್ಕಳ ಮೇಲೆ ಬೀರುವ ಪರಿಣಾಮ ಮತ್ತು ಪೋಷಕರು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಇಲ್ಲಿದೆ ಉಪಯುಕ್ತ ಮಾಹಿತಿ.

VISTARANEWS.COM


on

World Malaria Day April 25
Koo

ಪ್ರಪಂಚದಾದ್ಯಂತ ಮಲೇರಿಯಾವನ್ನು (World Malaria Day) ನಿಯಂತ್ರಿಸಲು ಮತ್ತು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಜಾಗತಿಕ ಮಟ್ಟದಲ್ಲಿ ಜಾಗೃತಿಯನ್ನು ಮೂಡಿಸುವ ಹಿನ್ನೆಲೆಯಲ್ಲಿ ಪ್ರತಿವರ್ಷ ಏಪ್ರಿಲ್ 25 ರಂದು ʼವಿಶ್ವ ಮಲೇರಿಯಾ ದಿನʼವನ್ನು ಆಚರಿಸಲಾಗುತ್ತದೆ. ಪ್ರಸಕ್ತ ವರ್ಷ ಈ ದಿನವನ್ನು ʼಜಗತ್ತಿನಾದ್ಯಂತ ಮಲೇರಿಯಾ ವಿರುದ್ಧದ ಹೋರಾಟಕ್ಕೆ ಒತ್ತುʼ ಎಂಬ ಥೀಮ್‌ನೊಂದಿಗೆ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಲೇರಿಯಾ ಕಾಯಿಲೆಯು ಮಕ್ಕಳ ಮೇಲೆ ಬೀರುವ ಪರಿಣಾಮ ಜೊತೆಗೆ ಪೋಷಕರು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಬೆಂಗಳೂರಿನ ಕಿಂಡರ್ ಆಸ್ಪತ್ರೆಯ ಮಕ್ಕಳ ತಜ್ಞರಾದ ಶಿಲ್ಪಾ ಪಾಂಡ್ಯ ಅವರು ವಿವರಿಸಿದ್ದಾರೆ.

Dr. Shilpa Pandya Consultant Neonatology and Paediatrics

ಪ್ರಶ್ನೆ: ಮಲೇರಿಯಾ ಹರಡುವುದು ಹೇಗೆ?

ಉತ್ತರ: ಮಲೇರಿಯಾವು ಸೊಳ್ಳೆಯಿಂದ ಹರಡುವ ರೋಗವಾಗಿದ್ದು, ಪ್ಲಾಸ್ಮೋಡಿಯಂ ಫಾಲ್ಸಿಪಾರಮ್‌ ಎಂಬುದು ಇದಕ್ಕೆ ಕಾರಣವಾಗಿದೆ. ಈ ಕಾಯಿಲೆಯು ಮಕ್ಕಳು ಮತ್ತು ವಯಸ್ಕರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ವ್ಯಕ್ತಿಯು ಸೊಳ್ಳೆಯ ಕಡಿತಕ್ಕೆ ಒಳಗಾದ ನಂತರ ಮಲೇರಿಯಾದ ಪರಾವಲಂಬಿಗಳು ಆ ವ್ಯಕ್ತಿಯ ಯಕೃತ್ ಅನ್ನು ಸೇರಿಕೊಂಡು ಯಕೃತ್ತಿನ ಜೀವಕೋಶಗಳಲ್ಲಿ ದ್ವಿಗುಣಗೊಂಡು ಕೆಂಪು ರಕ್ತ ಕಣಗಳನ್ನು ಸೋಂಕಿಗೆ ಒಳಪಡಿಸುತ್ತವೆ. ಜ್ವರ, ತಲೆನೋವು, ವಾಕರಿಕೆ, ವಾಂತಿ ಮತ್ತು ಕೆಲವೊಮ್ಮೆ ಅತಿಸಾರ ಬೇಧಿಯಾಗುವುದು ಈ ಕಾಯಿಲೆಯ ಲಕ್ಷಣಗಳು. ಕಾಯಿಲೆ ಅತಿಯಾದಾಗ ಅಂಗಾಂಗ ವೈಫಲ್ಯಕ್ಕೆ ಕಾರಣವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಸಕಾಲಕ್ಕೆ ಚಿಕಿತ್ಸೆ ತೆಗೆದುಕೊಳ್ಳುವುದು ಅತ್ಯಗತ್ಯ ಎನ್ನುತ್ತಾರೆ ಮಕ್ಕಳ ತಜ್ಞರಾದ ಶಿಲ್ಪಾ ಪಾಂಡ್ಯ.

ಪ್ರಶ್ನೆ: ಮಕ್ಕಳಲ್ಲಿ ಕಂಡುಬರುವ ಮಲೇರಿಯಾದ ಸಾಮಾನ್ಯ ಲಕ್ಷಣಗಳೇನು?

ಉತ್ತರ: ಮಲೇರಿಯಾ ಸೋಂಕಿತ ಮಕ್ಕಳು ಸಾಮಾನ್ಯವಾಗಿ ಜ್ವರದಿಂದ ಬಳಲುತ್ತಿರುತ್ತಾರೆ. ಅದಲ್ಲದೆ ಶೀತ, ತಲೆನೋವು, ವಾಕರಿಕೆ, ವಾಂತಿ ಮತ್ತು ಭೇದಿ ಲಕ್ಷಣಗಳು ಕೂಡ ಕಾಣಿಸಿಕೊಳ್ಳುತ್ತದೆ. ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಮಲೇರಿಯಾ ಹೊಂದಿರುವ ಎಲ್ಲಾ ಮಕ್ಕಳು ಜ್ವರದ ಜೊತೆಗೆ ಶೀತವನ್ನು ಹೊಂದಿರುವುದಿಲ್ಲ. ಆದರೆ ಅಸ್ವಸ್ಥತೆ ಅಥವಾ ಆಯಾಸದಂತಹ ಇತರ ರೋಗಲಕ್ಷಣಗಳನ್ನೂ ಹೊಂದಿರಬಹುದು.

Image Of Foods For Fight Against Dengue Fever

ಪ್ರಶ್ನೆ: ಮಲೇರಿಯಾ ಪೀಡಿತ ಮಗುವಿನ ಆರೈಕೆ ಹೇಗಿರಬೇಕು?

ಉತ್ತರ: ಮಲೇರಿಯಾ ಪೀಡಿತ ಮಗುವಿನ ಆರೈಕೆಯಲ್ಲಿ ಪೋಷಕರು ಪ್ರಮುಖ ಪಾತ್ರವಹಿಸುತ್ತಾರೆ. ಕಾಯಿಲೆಯಿಂದ ಕೂಡಿರುವ ಮಗುವಿಗೆ ಪ್ಯಾರಾಸಿಟಮಾಲ್‌ನಂತಹ ಜ್ವರ ನಿಯಂತ್ರಿಸುವ ಔಷಧಗಳನ್ನು ನೀಡುವುದು, ಮಗುವಿಗೆ ಸಾಕಷ್ಟು ವಿಶ್ರಾಂತಿ ನೀಡುವುದು ಮತ್ತು ಮಗುವಿನ ದೇಹ ಹೈಡ್ರೇಟೆಡ್ ಆಗಿರಲು ಸಾಕಷ್ಟು ನೀರು ಕುಡಿಯಲು ಅವರನ್ನು ಪ್ರೋತ್ಸಾಹಿಸುವುದರ ಜೊತೆಗೆ ಉತ್ತಮ ಆರೈಕೆಯನ್ನು ಒದಗಿಸುವುದು ಅತ್ಯಗತ್ಯ. ಮುಖ್ಯವಾಗಿ ವೈದ್ಯರ ಸಲಹೆಯ ಮೇರೆಗೆ ಮಗುವನ್ನು ಆರೈಕೆ ಮಾಡುವ ಮೂಲಕ ಸೋಂಕು ಮುಕ್ತವಾಗುವಂತೆ ನೋಡಿಕೊಳ್ಳುವುದು ಪೋಷಕರ ಜವಾಬ್ದಾರಿ.

ಪ್ರಶ್ನೆ: ಮಲೇರಿಯಾ ಪೀಡಿತ ಮಗುವಿನಲ್ಲಿ ಕಂಡುಬರುವ ಅಪಾಯಕಾರಿ ಚಿಹ್ನೆಗಳು ಯಾವುವು?

ಉತ್ತರ: ಮಲೇರಿಯಾದಿಂದ ಬಳಲುತ್ತಿರುವ ಮಗುವು ಕಾಮಾಲೆ (ಚರ್ಮ ಮತ್ತು ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುವುದು), ರೋಗಗ್ರಸ್ತವಾಗುವಿಕೆ, ಮೂತ್ರ ಅಥವಾ ಮಲದಲ್ಲಿ ರಕ್ತ ಕಂಡುಬರುವುದು ಅಥವಾ ಸೂಕ್ತ ಔಷಧಿಗಳನ್ನು ತೆಗೆದುಕೊಂಡರೂ ನಿರಂತರವಾಗಿ ಜ್ವರ ಕಾಣಿಸಿಕೊಳ್ಳುವಂತಹ ಅಪಾಯಕಾರಿ ಚಿಹ್ನೆಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯರ ಸಲಹೆ ತೆಗೆದುಕೊಳ್ಳುವುದು ಪೋಷಕರ ಕರ್ತವ್ಯ.

ಪ್ರಶ್ನೆ: ಮಲೇರಿಯಾದ ಬಗೆಗೆ ಪೋಷಕರಲ್ಲಿ ಇರುವ ತಪ್ಪುಕಲ್ಪನೆಗಳೇನು?

ಉತ್ತರ: ಮಲೇರಿಯಾ ಕಾಯಿಲೆಯ ಬಗೆಗೆ ಪೋಷಕರಲ್ಲಿ ಹಲವಾರು ತಪ್ಪುಕಲ್ಪನೆಗಳಿವೆ. ಅವುಗಳ ಕುರಿತಾಗಿ ಮಕ್ಕಳ ತಜ್ಞೆ ಶಿಲ್ಪಾ ಪಾಂಡ್ಯ ಅವರು ಹೇಳುತ್ತಾರೆ.

ತಪ್ಪುಕಲ್ಪನೆ: ಮಲೇರಿಯಾವು ಕಲುಷಿತ ನೀರಿನ ಸೇವನೆ ಅಥವಾ ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ಹರಡುತ್ತದೆ.
ಸತ್ಯಾಂಶ: ಮಲೇರಿಯಾವು ಸೊಳ್ಳೆ ಕಡಿತ ಅಥವಾ ರಕ್ತ ವರ್ಗಾವಣೆಯ ಮೂಲಕ ಮಾತ್ರ ಹರಡುತ್ತದೆ. ನೀರು ಅಥವಾ ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ಹರಡುವುದಿಲ್ಲ.

ತಪ್ಪುಕಲ್ಪನೆ: ಮಲೇರಿಯಾ ಸೋಂಕಿತ ತಾಯಂದಿರು ಸ್ತನ್ಯಪಾನ ಮಾಡಬಾರದು!
ಸತ್ಯಾಂಶ: ಮಲೇರಿಯಾ ಪರಾವಲಂಬಿಗಳು ಎದೆ ಹಾಲಿನ ಮೂಲಕ ಹರಡುವುದಿಲ್ಲ. ಆದರೆ ತಾಯಿಯು ಮಗುವಿಗೆ ಹಾಲುಣಿವಾಗ ಕೆಲವು ಔಷಧಿಗಳ ಸೇವನೆ ಬಗೆಗೆ ಎಚ್ಚರಿಕೆವಹಿಸುವುದು ಅತ್ಯಗತ್ಯ.

ತಪ್ಪುಕಲ್ಪನೆ: ಸೋಂಕಿತ ಮಗುವಿನ ಸಂಪರ್ಕದಿಂದ ಮಕ್ಕಳಿಗೆ ಮಲೇರಿಯಾ ಹರಡುತ್ತದೆ.
ಸತ್ಯಾಂಶ: ಸೋಂಕಿತ ಮಗುವಿನ ಸಂಪರ್ಕದಿಂದ, ಸೋಂಕಿತ ಮಗು ಬಳಸುವ ಬಟ್ಟೆ ಅಥವಾ ಪಾತ್ರೆಗಳಂತಹ ವಸ್ತುಗಳನ್ನು ಹಂಚಿಕೊಳ್ಳುವುದರಿಂದ ಮಕ್ಕಳಿಗೆ ಮಲೇರಿಯಾ ಹರಡುವುದಿಲ್ಲ.

ತಪ್ಪುಕಲ್ಪನೆ: ಮಲೇರಿಯಾ ಸೋಂಕು ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತದೆ.
ಸತ್ಯಾಂಶ: ವಿಭಿನ್ನ ಜಾತಿಯ ಪರಾವಲಂಬಿಗಳಿಂದ ಮನುಷ್ಯರಲ್ಲಿ ಮತ್ತೆ ಮಲೇರಿಯಾ ಸೋಂಕು ಕಾಣಿಸಿಕೊಳ್ಳಬಹುದು. ಹೀಗಾಗಿ ರೋಗನಿರೋಧಕ ಶಕ್ತಿ ಶಾಶ್ವತವಲ್ಲ.

ತಪ್ಪುಕಲ್ಪನೆ: ಮಲೇರಿಯಾ ಕಾಯಿಲೆಗೆ ಲಸಿಕೆ ಲಭ್ಯವಿದೆ!
ಸತ್ಯಾಂಶ: ಈ ಕಾಯಿಲೆಗೆ ಲಸಿಕೆ ಕಂಡುಹಿಡಿಯಲು ಸಂಶೋಧನೆ ನಡೆಯುತ್ತಿದ್ದು, ಸದ್ಯ ಮಾರುಕಟ್ಟೆಯಲ್ಲಿ ಯಾವುದೇ ಲಸಿಕೆ ಲಭ್ಯವಿಲ್ಲ.

How to control mosquitoes?

ಪ್ರಶ್ನೆ: ಪೋಷಕರು ತಮ್ಮ ಮಕ್ಕಳನ್ನು ಮಲೇರಿಯಾದಿಂದ ಹೇಗೆ ರಕ್ಷಿಸಿಕೊಳ್ಳಬಹುದು ?

ಉತ್ತರ: ಪೋಷಕರು ತಮ್ಮ ಮಕ್ಕಳನ್ನು ಮಲೇರಿಯಾದಿಂದ ರಕ್ಷಿಸಿಕೊಳ್ಳಲು ಹಲವು ಕ್ರಮಗಳನ್ನು ತೆಗೆದುಕೊಳ್ಳಬಹುದು. ಅವುಗಳೆಂದರೆ

  • ಸೊಳ್ಳೆಗಳನ್ನು ದೂರವಿಡಲು ಸೊಳ್ಳೆ ನಿವಾರಕಗಳು ಮತ್ತು ಸೊಳ್ಳೆ ಬತ್ತಿಗಳನ್ನು ಬಳಸುವುದು.
  • ಬೆಳಗ್ಗೆ ಮತ್ತು ಮುಸ್ಸಂಜೆ ವೇಳೆ ಸೊಳ್ಳೆಗಳು ಹೆಚ್ಚು, ಹೀಗಾಗಿ ಮಕ್ಕಳು ಮೈತಂಬಾ ಉಡುಪುಗಳನ್ನು ಧರಿಸುವಂತೆ ನೋಡಿಕೊಳ್ಳಬೇಕು.
  • ಮನೆಯ ಆವರಣದಲ್ಲಿ ನೀರು ನಿಂತಿದ್ದರೆ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಹಾಗಾಗಿ ಮನೆಯ ಸುತ್ತ ನಿಂತ ನೀರನ್ನು ಸ್ವಚ್ಛಗೊಳಿಸುವುದು ಪ್ರಮುಖವಾದುದು.
  • ಎರಡು ತಿಂಗಳೊಳಗಿನ ಶಿಶುಗಳಿಗೆ ಸೊಳ್ಳೆ ಪರದೆಗಳನ್ನು ಬಳಸುವುದು ಮುಖ್ಯ.
  • ಸೊಳ್ಳೆಗಳು ಹೆಚ್ಚಿರುವ ಮುಂಜಾನೆ ಮತ್ತು ಮುಸ್ಸಂಜೆ ಸಮಯದಲ್ಲಿ ಮಕ್ಕಳು ಹೊರಾಂಗಣ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಪೋಷಕರು ನೋಡಿಕೊಳ್ಳಬೇಕು.
  • ಸೊಳ್ಳೆ ಕಡಿತ ಮತ್ತು ನೈರ್ಮಲ್ಯ ಅಭ್ಯಾಸಗಳ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡಬೇಕು ಎನ್ನುವುದು ತಜ್ಞರ ಸಲಹೆ.
Mosquitoes Dangerous Animal Mosquitoes: Responsible for transmitting diseases like malaria, dengue fever, and Zika virus, mosquitoes are considered one of the most dangerous animals due to the diseases they carry.

ಈ ವರ್ಷ 2024ರ ಥೀಮ್/ವಿಷಯದ ಕುರಿತಾಗಿ “ಮಲೇರಿಯಾವು ತಡೆಗಟ್ಟಬಹುದಾದ ಕಾಯಿಲೆಯಾಗಿದೆ. ಆದರೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಮಲೇರಿಯಾದಿಂದ ಮೃತಹೊಂದುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮಲೇರಿಯಾ ನಿಯಂತ್ರಣಕ್ಕೆ ಮುಂದಾಗೋಣ ಮತ್ತು ಅನಗತ್ಯ ಜೀವಹಾನಿಯನ್ನು ತಡೆಗಟ್ಟೋಣ” ಎಂದು ವೈದ್ಯೆ ಶಿಲ್ಪಾ ಪಾಂಡ್ಯ (ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು: 6364409651, 6364466240) ಅಭಿಪ್ರಾಯ ಪಡುತ್ತಾರೆ.

ಇದನ್ನೂ ಓದಿ: World Malaria Day: ಮಲೇರಿಯಾ ಮತ್ತು ಡೆಂಗ್ಯು ನಡುವಿನ ವ್ಯತ್ಯಾಸ ಏನು? ಗುರುತಿಸುವುದು ಹೇಗೆ?

Continue Reading

ಆರೋಗ್ಯ

World Malaria Day: ಮಲೇರಿಯಾ ಮತ್ತು ಡೆಂಗ್ಯು ನಡುವಿನ ವ್ಯತ್ಯಾಸ ಏನು? ಗುರುತಿಸುವುದು ಹೇಗೆ?

ಸೊಳ್ಳೆಯಿಂದ ಬರುವಂಥ ರೋಗಗಳೆಲ್ಲ (World Malaria Day) ಒಂದೇ ರೀತಿಯವು ಎನ್ನುವಂತಿಲ್ಲ. ಪ್ರತಿಯೊಂದು ರೋಗಕ್ಕೂ ಅದರದ್ದೇ ಆದ ಭಿನ್ನ ಸ್ವರೂಪವಿದೆ, ಲಕ್ಷಣಗಳಿವೆ, ಹಾಗಾಗಿ ಚಿಕಿತ್ಸೆಯೂ ಬೇರೆ ಆಗಬೇಕು. ಹಾಗಾಗಿ ಈ ಬಗ್ಗೆ ಸರಿಯಾದ ಮಾಹಿತಿಯ ಕೊರತೆಯಿದ್ದರೆ, ಸಮಸ್ಯೆ ಬಿಗಡಾಯಿಸುತ್ತದೆ. ಸೊಳ್ಳೆಗಳಿಂದಲೇ ಪ್ರಸರಣವಾಗುವ ಮಲೇರಿಯ ಮತ್ತು ಡೆಂಗು ರೋಗಗಳಿಗೆ ವ್ಯತ್ಯಾಸವೇನು ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

World Malaria Day
Koo

ಈ ಬೇಸಿಗೆಯಲ್ಲಿ ಸೊಳ್ಳೆಗಳ ಹಾವಳಿ (World Malaria Day) ಹೆಚ್ಚಿನ ಕಡೆಗಳಲ್ಲಿ ತೀವ್ರವಾಗಿ ಕಾಣುತ್ತಿದೆ. ಮುಂಗಾರು ಬರುವ ಮೊದಲೇ ಸೊಳ್ಳೆಗಳು ದಾಂಗುಡಿಯಿಟ್ಟಿವೆ. ಬೇಸಿಗೆ ರಜೆಯೆಂಬ ನೆವದಲ್ಲಿ ಪ್ರಯಾಣ ಮಾಡುವಾಗ ಸೊಳ್ಳೆಗಳ ಕಾಟವಿರುವ ಊರು ಎದುರಾದರೆ ಆತಂಕವಾಗುವುದು ಸಹಜ. ಸೊಳ್ಳೆಯಿಂದ ಬರುವಂಥ ರೋಗಗಳೆಲ್ಲ ಒಂದೇ ರೀತಿಯವು ಎನ್ನುವಂತಿಲ್ಲ. ಪ್ರತಿಯೊಂದು ರೋಗಕ್ಕೂ ಅದರದ್ದೇ ಆದ ಭಿನ್ನ ಸ್ವರೂಪವಿದೆ, ಲಕ್ಷಣಗಳಿವೆ, ಹಾಗಾಗಿ ಚಿಕಿತ್ಸೆಯೂ ಬೇರೆ ಆಗಬೇಕು. ಹಾಗಾಗಿ ಈ ಬಗ್ಗೆ ಸರಿಯಾದ ಮಾಹಿತಿಯ ಕೊರತೆಯಿದ್ದರೆ, ಸಮಸ್ಯೆ ಬಿಗಡಾಯಿಸುತ್ತದೆ. ಈ ನಿಟ್ಟಿನಲ್ಲಿ, ಸೊಳ್ಳೆಗಳಿಂದಲೇ ಪ್ರಸರಣವಾಗುವ ಮಲೇರಿಯ ಮತ್ತು ಡೆಂಗು ರೋಗಗಳಿಗೆ ವ್ಯತ್ಯಾಸವೇನು ಎಂಬ ಅರಿವಿನ ಲೇಖನವಿದು.

World Malaria Day

ಪ್ರಸರಣ ಹೇಗೆ?

ಮಲೇರಿಯ

ಅನಾಫಿಲಿಸ್‌ ಸೊಳ್ಳೆಯಿಂದ ದೇಹ ಪ್ರವೇಶಿಸುವ ಪ್ಲಾಸ್ಮೋಡಿಯಂ ಎಂಬ ಏಕಕೋಶ ಜೀವಿಯಿಂದ ಬರುವ ರೋಗವಿದು. ಮಲೇರಿಯ ಹೆಚ್ಚಿರುವ ಪ್ರದೇಶಗಳಿಗೆ ಹೋದಾಗ ಇದಕ್ಕೆ ತುತ್ತಾಗುವ ಸಂಭವ ಹೆಚ್ಚು.

ಡೆಂಗ್ಯು

ಈಡಿಸ್‌ ಸೊಳ್ಳೆಯು ದೇಹಕ್ಕೆ ಚುಚ್ಚುವ ಡೆಂಗ್ಯು ವೈರಸ್‌ನಿಂದ ಬರುವ ರೋಗವಿದು. ಅಂದರೆ ಮಲೇರಿಯ ಬರುವುದು ಪರಾವಲಂಬಿ ಜೀವಿಯಿಂದಾದರೆ, ಡೆಂಗ್ಯು ಬರುವುದು ವೈರಸ್‌ನಿಂದ. ಯಾವುದೇ ಪ್ರದೇಶದಲ್ಲೂ ಡೆಂಗು ಸೊಳ್ಳೆಗಳು ಕಾಣಬಹುದು, ಸೊಳ್ಳೆ ಕಚ್ಚಿದಾಗ ಬರಬಹುದು.

ಲಕ್ಷಣಗಳೇನು?

ಮಲೇರಿಯ

ಜ್ವರ, ನಡುಕ, ಬೆವರು, ತಲೆನೋವು, ಮೈಕೈ ನೋವು, ಹೊಟ್ಟೆ ತೊಳೆಸುವುದು, ವಾಂತಿ.

ಡೆಂಗ್ಯು

ಇದ್ದಕ್ಕಿದ್ದಂತೆ ತೀವ್ರವಾದ ಜ್ವರ, ತೀಕ್ಷ್ಣ ತಲೆನೋವು, ಕಣ್ಣು ನೋವು, ಮೈಮೇಲೆಲ್ಲ ದದ್ದುಗಳು, ಕೀಲು, ಸ್ನಾಯುಗಳಲ್ಲಿ ತೀವ್ರ ನೋವು. ಜೊತೆಗೆ ಪ್ಲೇಟ್‌ಲೆಟ್‌ ಸಂಖ್ಯೆ ಕುಸಿಯುತ್ತದೆ. ಅಂದರೆ ಮಲೇರಿಯ ಫ್ಲೂ ಮಾದರಿಯ ಲಕ್ಷಣಗಳನ್ನು ತೋರಿಸಿದರೆ, ಡೆಂಗು ಜ್ವರದಲ್ಲಿ ತಲೆನೋವು ಮತ್ತು ಕೀಲು-ಸ್ನಾಯುಗಳ ನೋವು ತೀವ್ರವಾಗಿರುತ್ತದೆ.

dengue flue

ಪತ್ತೆ ಹೇಗೆ?

ಎರಡೂ ಮಾದರಿಯ ಜ್ವರಗಳಿಗೆ ರಕ್ತ ಪರೀಕ್ಷೆಯೇ ಪತ್ತೆ ಮಾಡುವುದಕ್ಕೆ ನಿಖರವಾದ ಆಧಾರ.

ಚಿಕಿತ್ಸೆ ಏನು?

ಮಲೇರಿಯ

ಕ್ಲೊರೊಕ್ವಿನ್‌ನಂಥ ಔಷಧಿಗಳು ಇದಕ್ಕಾಗಿಯೇ ಇವೆ. ಪ್ಲಾಸ್ಮೋಡಿಯಂನಂಥ ಪರಾವಲಂಬಿಗಳ ಹತೋಟಿಗೆ ಔಷಧಿ ನೀಡಲಾಗುತ್ತದೆ. ಉಳಿದಂತೆ, ಲಕ್ಷಣಗಳನ್ನು ಆಧರಿಸಿ ಚಿಕಿತ್ಸೆ ಬೇಕಾಗುತ್ತದೆ.

ಡೆಂಗ್ಯು

ಈ ವೈರಸ್‌ಗೆ ಪ್ರತ್ಯೇಕವಾದ ಆಂಟಿವೈರಸ್‌ ಚಿಕಿತ್ಸೆ ಲಭ್ಯವಿಲ್ಲ. ರೋಗಿಯ ಲಕ್ಷಣಗಳನ್ನು ಆಧರಿಸಿ ಅದಕ್ಕೆ ಔಷಧಿಯನ್ನು ನೀಡಲಾಗುತ್ತದೆ. ಪ್ಲೇಟ್‌ಲೆಟ್‌ ಕುಸಿದಂಥ ಸಂದರ್ಭಗಳಲ್ಲಿ ರೋಗಿಯ ಆಹಾರ ಪದ್ಧತಿ ಅತ್ಯಂತ ಮಹತ್ವದ್ದು.

Malaria

ಸಾವಿನ ಪ್ರಮಾಣ

ಮಲೇರಿಯ

ಸೂಕ್ತ ಸಮಯಲ್ಲೆ ಸರಿಯಾದ ಚಿಕಿತ್ಸೆ ದೊರೆಯದಿದ್ದರೆ, ಮಲೇರಿಯ ಪ್ರಾಣಕ್ಕೆ ಎರವಾಗುತ್ತದೆ. ವಿಶ್ವದಲ್ಲಿ ಇಂದಿಗೂ ಮಲೇರಿಯಕ್ಕೆ ತುತ್ತಾಗು ಜೀವ ಕಳೆದುಕೊಳ್ಳುತ್ತಿರುವವರ ಸಾವಿನ ಸಂಖ್ಯೆ ಬಹಳಷ್ಟಿದೆ.

ಡೆಂಗ್ಯು

ಈ ಜ್ವರವೂ ಪ್ರಾಣಾಪಾಯ ತರಬಹುದಾದರೂ, ಮಲೇರಿಯಕ್ಕೆ ಹೋಲಿಸಿದರೆ ಸಾವಿನ ಪ್ರಮಾಣ ಇದರಲ್ಲಿ ಕಡಿಮೆ.

World Malaria Day, Mosquito eradication is essential to prevent the disease

ತಡೆ ಹೇಗೆ?

ಈ ಎರಡೂ ರೋಗಗಳಲ್ಲಿ ಸೊಳ್ಳೆ ನಿರ್ಮೂಲನೆಯೇ ಮುಖ್ಯವಾಗಿದ್ದು. ಎಲ್ಲಾದರೂ ನೀರು ನಿಂತಿದ್ದರೆ ಅಲ್ಲೆಲ್ಲ ಕೀಟನಾಶಕ ಸಿಂಪಡಿಸಿ ತುರ್ತಾಗಿ ಸೊಳ್ಳೆಗಳ ಹೆಚ್ಚಳ ನಿಲ್ಲಿಸಬೇಕು. ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇರಿಸಿಕೊಳ್ಳಬೇಕು. ಸೊಳ್ಳೆಗಳು ಕಚ್ಚದಂತೆ ರೆಪೆಲ್ಲೆಂಟ್‌ಗಳನ್ನು ಬಳಸುವುದು ಅಗತ್ಯ. ಕಿಟಕಿಗಳಿಗೆ ಸೊಳ್ಳೆ ಪ್ರವೇಶಿಸದಂಥ ಪರದೆಗಳು ಮತ್ತು ರಾತ್ರಿ ಮಲಗುವಾಗಲೂ ಪರದೆ ಬಳಸುವುದು ಸೂಕ್ತ. ತುಂಬು ಬಟ್ಟೆಗಳನ್ನು ಧರಿಸುವುದು ಸರಿಯಾದ ಕ್ರಮ. ಸೊಳ್ಳೆಗಳು ಹೆಚ್ಚು ಚಟುವಟಿಕೆಯಲ್ಲಿರುವ ಹೊತ್ತಿನಲ್ಲಿ ಮನೆಯೊಳಗೇ ಇರಬೇಕು.

ಇದನ್ನೂ ಓದಿ: World Malaria Day: ಭಾರತದಲ್ಲಿ ಮಲೇರಿಯಾಗೆ ಪ್ರತಿವರ್ಷ 20 ಸಾವಿರ ಬಲಿ; ಸೊಳ್ಳೆಗಳು ಭಾರಿ ಡೇಂಜರ್‌!

Continue Reading

ದೇಶ

Horlicks Label: ಹಾರ್ಲಿಕ್ಸ್‌ ಇನ್ನು ಹೆಲ್ತ್‌ ಡ್ರಿಂಕ್ಸ್‌ ಅಲ್ಲ ಎಂದ ಹಿಂದುಸ್ತಾನ್‌ ಯುನಿಲಿವರ್;‌ ಕಾರಣ ಏನು?

Horlicks Label: ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯವು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಹಾರ್ಲಿಕ್ಸ್‌ ಸೇರಿ ಹಲವು ಮಾಲ್ಟ್‌ ಆಧಾರಿತ ಪಾನೀಯಗಳ ಮೇಲಿನ ಹೆಲ್ತ್‌ ಫುಡ್‌ ಡ್ರಿಂಕ್ಸ್‌ ಎಂಬ ಲೇಬಲ್‌ ತೆಗೆದುಹಾಕಲಾಗಿದೆ. ಇನ್ನು ಇವು ಕ್ರಿಯಾತ್ಮಕ ಪೌಷ್ಟಿಕ ಪಾನೀಯ ಎನಿಸಿಕೊಳ್ಳಲಿವೆ. ಇದರಿಂದ ಜನರ ದಾರಿ ತಪ್ಪಿಸುವ ಜಾಹೀರಾತು, ಗ್ರಾಹಕರ ಗೊಂದಲ ನಿವಾರಣೆಯಾಗಲಿದೆ ಎಂದು ಹೇಳಲಾಗುತ್ತಿದೆ.

VISTARANEWS.COM


on

Horlicks Label
Koo

ನವದೆಹಲಿ: ಭಾರತದಲ್ಲಿ ಹಾರ್ಲಿಕ್ಸ್‌ ಕುಡಿಯದವರೇ ಇರಲಿಕ್ಕಿಲ್ಲ. ಚಿಕ್ಕ ಮಕ್ಕಳಿಂದ ಹಿಡಿದು, ದೊಡ್ಡವರವರೆಗೆ ಕುಡಿಯುತ್ತಾರೆ. ಅದರಲ್ಲೂ, ಯಾರು ಬಾಲ್ಯದಲ್ಲಿ ಹಾರ್ಲಿಕ್ಸ್‌ ಕುಡಿದಿಲ್ಲವೋ, ಅಷ್ಟರಮಟ್ಟಿಗೆ ಅವರ ಬಾಲ್ಯ ‘ಸಪ್ಪೆ’ ಎಂದೇ ಹೇಳಲಾಗುತ್ತಿದೆ. ಇಂತಹ ನೆನಪುಗಳ ಹಿನ್ನೆಲೆ ಹೊಂದಿರುವ ಹಾರ್ಲಿಕ್ಸ್‌ ಬಾಟಲಿ ಮೇಲಿನ ಹೆಲ್ತ್‌ ಫುಡ್‌ ಡ್ರಿಂಕ್ಸ್‌ (Health Food Drinks) ಎಂಬ ಲೇಬಲ್‌ಅನ್ನು (Horlicks Label) ಹಿಂದುಸ್ತಾನ್‌ ಯುನಿಲಿವರ್‌ (HUL) ತೆಗೆದುಹಾಕಿದೆ. ಇತ್ತೀಚಿನ ನಿಯಮಗಳ ಬದಲಾವಣೆ ಭಾಗವಾಗಿ ಲೇಬಲ್‌ಅನ್ನು ತೆಗೆದುಹಾಕಿದೆ ಎಂದು ಹೇಳಲಾಗುತ್ತಿದೆ.

ಹಾರ್ಲಿಕ್ಸ್‌ ಬಾಟಲಿ ಮೇಲಿನ ಹೆಲ್ತ್‌ ಫುಡ್‌ ಡ್ರಿಂಕ್ಸ್‌ ಲೇಬೆಲ್‌ ತೆಗೆದುಹಾಕಲಾಗಿದ್ದು, ಈಗ ಹಾರ್ಲಿಕ್ಸ್‌ ಸೇರಿ ಹಲವು ರೀತಿಯ ಪಾನೀಯಗಳನ್ನು ಕ್ರಿಯಾತ್ಮಕ ಪೌಷ್ಟಿಕ ಪಾನೀಯ (Functional Nutritional Drinks) ಎಂಬ ಹೊಸ ಕೆಟಗರಿಗೆ ಸೇರಿಸಲಾಗಿದೆ. ಪಾನೀಯಗಳನ್ನು ಹೆಲ್ತ್‌ ಫುಡ್‌ ಡ್ರಿಂಕ್ಸ್‌ ಕೆಟಗರಿಯಿಂದ ತೆಗೆದು, ಕ್ರಿಯಾತ್ಮಕ ಪೌಷ್ಟಿಕ ಪಾನೀಯಗಳ ಪಟ್ಟಿಗೆ ಸೇರಿಸಬೇಕು. ವೆಬ್‌ಸೈಟ್‌ ಸೇರಿ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲೂ ಇದನ್ನೇ ನಮೂದಿಸಬೇಕು ಎಂಬುದಾಗಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯವು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಹಿಂದುಸ್ತಾನ್‌ ಯುನಿಲಿವರ್‌ ಈ ಕ್ರಮ ತೆಗೆದುಕೊಂಡಿದೆ.

“ಸಚಿವಾಲಯದ ಸೂಚನೆಯಂತೆ ನಾವು ಹೆಲ್ತ್‌ ಫುಡ್‌ ಡ್ರಿಂಕ್ಸ್‌ ಕೆಟಗರಿಯನ್ನು ಕ್ರಿಯಾತ್ಮಕ ಪೌಷ್ಟಿಕ ಪಾನೀಯ ಎಂಬುದಾಗಿ ಬದಲಾಯಿಸಿದ್ದೇವೆ. ಈ ಹೆಸರಿನಿಂದಲೇ ಕರೆಯುವುದು ಸಮಂಜಸ ಎಂಬ ನಿರ್ಧಾರಕ್ಕೆ ಬರಲಾಗಿದೆ. ಹಾಗೆಯೇ, ಹೊಸ ಹೆಸರು ಪಾರ್ದರ್ಶಕವಾಗಿಯೂ ಇದೆ. ಹಾಗಾಗಿ, ಹೊಸ ಹೆಸರನ್ನು ಇಡಲಾಗಿದೆ” ಎಂದು ಹಿಂದುಸ್ತಾನ್‌ ಯುನಿಲಿವರ್‌ನ ಚೀಫ್‌ ಫೈನಾನ್ಶಿಯಲ್‌ ಆಫೀಸರ್‌ ರಿತೇಶ್‌ ತಿವಾರಿ ಮಾಹಿತಿ ನೀಡಿದ್ದಾರೆ. ಇದರಿಂದ ದಾರಿತಪ್ಪಿಸುವ ಜಾಹೀರಾತುಗಳ ತಡೆಯಾಗುವುದರ ಜತೆಗೆ ಗ್ರಾಹಕರಿಗೂ ಗೊಂದಲ ಇರುವುದಿಲ್ಲ ಎಂಬುದು ಸಚಿವಾಲಯದ ಚಿಂತನೆಯಾಗಿದೆ ಎಂದು ತಿಳಿದುಬಂದಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟಗಳ ಕಾಯ್ದೆ ಅಡಿಯಲ್ಲಿ ಹೆಲ್ತ್‌ ಡ್ರಿಂಕ್ಸ್‌ ಎಂಬ ಪದಕ್ಕೆ ಸರಿಯಾದ ವ್ಯಾಖ್ಯಾನ ಸಿಗದ ಕಾರಣ ಹೊಸ ಹೆಸರು ಸೂಚಿಸಲಾಗಿದೆ. ಇದೇ ಕಾರಣಕ್ಕಾಗಿ ಇತ್ತೀಚೆಗೆ ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರವು (FSSAI) ಇತ್ತೀಚೆಗೆ ಎಲ್ಲ ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳಿಗೆ ಹೆಲ್ತ್‌ ಡ್ರಿಂಕ್ಸ್‌ ಅಥವಾ ಎನರ್ಜಿ ಡ್ರಿಂಕ್ಸ್‌ ಎಂಬ ಕೆಟಗರಿಯನ್ನು ತೆಗೆದುಹಾಕಬೇಕು ಎಂದು ಸೂಚಿಸಿತ್ತು. ಡೇರಿ, ಸಿರೀಲ್‌ ಅಥವಾ ಮಾಲ್ಟ್‌ ಆಧಾರಿತ ಪಾನೀಯಗಳ ಮೇಲಿನ ಲೇಬೆಲ್‌ ತೆಗೆದುಹಾಕಲು ಸೂಚಿಸಿತ್ತು. ಅದರಂತೆ, ಕೆಟಗರಿಯನ್ನು ತೆಗೆದುಹಾಕಲಾಗಿದೆ.

ಇದನ್ನೂ ಓದಿ: MDH, Everest Spices: ಎವರೆಸ್ಟ್‌, ಎಂಡಿಎಚ್‌ ಮಸಾಲೆ ಪೌಡರ್‌ಗಳ ಗುಣಮಟ್ಟ ತಪಾಸಣೆಗೆ ಸೂಚನೆ

Continue Reading

ಆರೋಗ್ಯ

Baking Soda: ಅಡುಗೆ ಸೋಡಾ ನಿಜಕ್ಕೂ ಆರೋಗ್ಯಕ್ಕೆ ಕೆಟ್ಟದ್ದಾ?

ಬೇಕಿಂಗ್‌ ಸೋಡಾವನ್ನು (Baking Soda) ವಿಷದಂತೆ ಪರಿಗಣಿಸುವ ಧೋರಣೆಯೂ ನಮ್ಮ ಮನಸ್ಸಿನಿಂದ ಬದಲಾಗಬೇಕಿದೆ. ಯಾವಾಗಲಾದರೊಮ್ಮೆ ಬೇಖಿಂಗ್‌ ಸೋಡಾ ಅಡುಗೆಯಲ್ಲಿ ಬಳಸಿದರೆ, ಅದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರದು. ಅತಿಯಾದರೆ ಮಾತ್ರ ಸಮಸ್ಯೆಗಳು ಬರುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ವೈದ್ಯರು.

VISTARANEWS.COM


on

Baking Soda
Koo

ಅಡುಗೆಯಲ್ಲಿ ಆಸಕ್ತಿ ಇರುವ ಮಂದಿಗೆ, ಮೇಲಾಗಿ ಬೇಕಿಂಗ್‌ನಲ್ಲಿ ಅಭಿರುಚಿ ಇರುವ ಮಂದಿಗೆ ಬೇಕಿಂಗ್‌ ಸೋಡಾ (Baking Soda) ಎಂಬ ವಸ್ತು ಅತ್ಯಂತ ಮುಖ್ಯವಾದ ವಸ್ತು. ಮಿದುವಾದ ಸ್ಪಾಂಜೀಯಾಗಿರುವ ಕೇಕ್‌ಗಳನ್ನು ಮಾಡಲು ಬೇಕಿಂಗ್‌ ಸೋಡಾ ಇಲ್ಲದಿದ್ದರೆ ಹೇಗೆ? ಕೇವಲ ಕೇಕ್‌ ಅಂತಲ್ಲ. ಸಾಕಷ್ಟು ಅಡುಗೆಗಳಿಗೆ, ದಿಢೀರ್‌ ತಿಂಡಿಗಳಿಗೆ, ಹುಳಿಬರಿಸುವಷ್ಟು ಸಮಯ ಇಲ್ಲದಾದಾಗ ಮಾಡುವ ಡೋಕ್ಲಾ, ಇಡ್ಲಿ ಮತ್ತಿತರ ಬೆಳಗಿನ ಉಪಾಹಾರಕ್ಕೂ ಬಹಳ ಸಲ ಇಂದಿನ ಧಾವಂತದ ಯುಗದಲ್ಲಿ ಬೇಕಿಂಗ್‌ ಸೋಡಾ ಬೇಕೇ ಬೇಕು. ಹಾಗಾಗಿ ಇದು ಎಲ್ಲರ ಅಡುಗೆ ಮನೆಗಳಲ್ಲಿ ಇರುವ ಸಾಮಾನ್ಯ ವಸ್ತು.
ಎಲ್ಲ ಆಹಾರ ವಸ್ತುಗಳಂತೆ ಬೇಕಿಂಗ್‌ ಸೋಡಾದ ಬಗೆಯೂ ಹಲವು ಗೊಂದಲಗಳಿವೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಬಾವನೆಯೂ ಹಲವರಲ್ಲಿ ಇದೆ. ಸೋಡಾ ಬಳಸಿದರೆ, ಹೊಟ್ಟೆಯುಬ್ಬರ, ಅಸಿಡಿಟಿ ಹೆಚ್ಚಾಗುತ್ತದೆ, ಹುಳಿತೇಗು ಬರುತ್ತದೆ, ಹೊಟ್ಟೆಯಲ್ಲಿ ಗ್ಯಾಸ್‌ ತುಂಬಿದಂತಾಗುತ್ತದೆ ಎಂಬ ಅಳಲು ಹಲವರದ್ದು. ಇವು ನಿಜವೇ ಆಗಿದ್ದರೂ, ಇದರ ಬಗ್ಗೆ ಹಲವು ತಪ್ಪು ತಿಳುವಳಿಕೆಗಳಿವೆ. ನಾವು ಅಂದುಕೊಳ್ಳುವಷ್ಟು ಬೇಕಿಂಗ್‌ ಸೋಡಾ ನಿಜಕ್ಕೂ ಕೆಟ್ಟದ್ದೇ? ಎಂಬ ಪ್ರಶ್ನೆ ಕಾಡಿರಬಹುದು. ಹಾಗಾದರೆ ಬನ್ನಿ, ಬೇಕಿಂಗ್‌ ಸೋಡಾದ ಸಾಧಕ ಬಾಧಕಗಳ ಬಗ್ಗೆ ತಿಳಿಯೋಣ.

Baking soda

ಗ್ಯಾಸ್‌ ಸಮತೋಲನಗೊಳಿಸುತ್ತದೆ

ಬೇಕಿಂಗ್‌ ಸೋಡಾ ನೈಸರ್ಗಿಕವಾದ ಎಂಟಾಸಿಡ್‌ನಂತೆ ವರ್ತಿಸುವ ಮೂಲಕ ಹೊಟ್ಟೆಯಲ್ಲಿರುವ ಅತಿಯಾದ ಗ್ಯಾಸ್‌ ಅನ್ನು ಸಮತೋಲನಗೊಳಿಸುತ್ತದೆ. ಇದು ಎದೆಯುರಿ, ಆಸಿಡಿಟಿ ಹಾಗೂ ಜೀರ್ಣಕ್ರಿಯೆ ಸರಿಯಾಗಿ ಆಗದೆ ಇರುವ ಸಮಸ್ಯೆಯೂ ಸೇರಿದಂತೆ ಇದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ!

Baking soda

ಬೇಗನೆ ಬೇಯುತ್ತದೆ

ಬೇಕಿಂಗ್‌ ಸೋಡಾ ಆಹಾರದಲ್ಲಿರುವ ಪೋಷಕಾಂಶಗಳನ್ನು ಕೊಲ್ಲುವುದಿಲ್ಲ. ಚಿಟಿಕೆಯಷ್ಟು ಬೇಕಿಂಗ್‌ ಸೋಡಾವನ್ನು ಧಾನ್ಯಗಳು ಹಾಗೂ ಬೇಳೆಕಾಳುಗಳು ಬೇಯುವಾಗ ಹಾಕಿದರೆ ಅದು ಬೇಗನೆ ಬೇಯುತ್ತದೆ.
ಇವೆರಡು ಲಾಭಗಳು ಬೇಕಿಂಗ್‌ ಸೋಡಾದಿಂದ ಇವೆಯಾದರೂ, ಇದರಿಂದಾಗುವ ಸಮಸ್ಯೆಗಳೂ ಇವೆ. ಬನ್ನಿ, ಬೇಕಿಂಗ್‌ ಸೋಡಾದ ಅತಿಯಾದ ಬಳಕೆಯಿಂದ ನಾವು ನಮಗೇ ಅರಿವಿಲ್ಲದೆ ಯಾವ ಸಮಸ್ಯೆಗಳನ್ನು ಆಹ್ವಾನಿಸಬಹುದು ಎಂಬುದನ್ನು ನೋಡೋಣ.

ಹೈಪರ್‌ಟೆನ್ಶನ್‌ ಸಮಸ್ಯೆ

ಬೇಕಿಂಗ್‌ ಸೋಡಾದಲ್ಲಿ ಹೆಚ್ಚು ಸೋಡಿಯಂ ಇರುವುದರಿಂದ, ಇದರ ಹೆಚ್ಚಿನ ಸೇವನೆಯಿಂದ ದೇಹದಲ್ಲಿ ನೀರಿನಂಶ ಶೇಖರಣೆಯಾಗುವುದು, ಎಲೆಕ್ಟ್ರೋಲೈಟ್‌ ಅಸಮತೋಲನ, ಹೈಪರ್‌ಟೆನ್ಶನ್‌ನಂತಹ ಸಮಸ್ಯೆಗಳು ಉಂಟಾಗಬಹುದು.

Woman anemia image Coriander Benefits

ವಾಂತಿ, ತಲೆಸುತ್ತುವಿಕೆ

ಪ್ರತಿದಿನವೂ ಬೇಕಿಂಗ್‌ ಸೋಡ ಸೇವಿಸುವುದರಿಂದ ಕೆಲವು ಮಂದಿಗೆ ಅಲ್ಕಲೋಸಿಸ್‌ ಎಂಬ ಸಮಸ್ಯೆ ಬರಬಹುದು. ಇದು ದೇಹದ ಆಸಿಡ್‌ ಸಮತೋಲನವನ್ನೇ ಹದಗೆಡಿಸಿ, ವಾಂತಿ, ತಲೆಸುತ್ತುವಿಕೆ, ಮಾಂಸಖಂಡಗಳಲ್ಲಿ ಸೆಳೆತ, ಮತ್ತಿತರ ಸಮಸ್ಯೆಗಳಿಗೆ ಕಾರಣವಾಗಬಹುದು.

Thigh muscles are strengthened by walking Benefits Of Walking

ಮಾಂಸಖಂಡಗಳ ಸೆಳೆತ

ಅತೀ ಕಡಿಮೆ ಮಂದಿಯಲ್ಲಿ ಈ ಬೇಕಿಂಗ್‌ ಸೋಡಾ ಇನ್ನೂ ಒಂದು ಸಮಸ್ಯೆ ಹುಟ್ಟುಹಾಕಬಹುದು. ಹೈಪೋಕಲೇಮಿಯಾ ಎಂಬ ಈ ಸಮಸ್ಯೆಯಲ್ಲಿ ದೇಹದ ಪೊಟಾಶಿಯಂ ಮಟ್ಟವೇ ಇಳಿಯುತ್ತದೆ. ಪೊಟಾಶಿಯಂ ಮಟ್ಟದ ಇಳಿಕೆಯಿಂದ ಮಾಂಸಖಂಡಗಳ ಸೆಳೆತ, ದುರ್ಬಲತೆ, ಪಾರ್ಶ್ವವಾಯು, ದೇಹದಲ್ಲಿ ಅಲ್ಲಲ್ಲಿ ನೋವುಗಳು ಇತ್ಯಾದಿ ಸಮಸ್ಯೆಗಳು ಬರಬಹುದು. ಇದು ಕೆಲವೊಮ್ಮೆ ಮಾರಣಾಂತಿಕ ಸಮಸ್ಯೆಯಾಗಿಯೂ ಪರಿಣಮಿಸಬಹುದಾದ್ದರಿಂದ ವೈದ್ಯರ ನೆರವು ಅತ್ಯಗತ್ಯ.
ಆದರೆ, ಬೇಕಿಂಗ್‌ ಸೋಡಾವನ್ನು ವಿಷದಂತೆ ಪರಿಗಣಿಸುವ ಧೋರಣೆಯೂ ನಮ್ಮ ಮನಸ್ಸಿನಿಂದ ಬದಲಾಗಬೇಕಿದೆ. ಯಾವಾಗಲಾದರೊಮ್ಮೆ ಬೇಖಿಂಗ್‌ ಸೋಡಾ ಅಡುಗೆಯಲ್ಲಿ ಬಳಸಿದರೆ, ಅದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರದು. ಅತಿಯಾದರೆ ಮಾತ್ರ ಸಮಸ್ಯೆಗಳು ಬರುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ವೈದ್ಯರು.

ಇದನ್ನೂ ಓದಿ: Food Poisoning: ಬಟರ್‌ ಚಿಕನ್‌ ತಿಂದಿದ್ದಕ್ಕೂ ದಿಢೀರ್‌ ಸಾವಿಗೂ ಏನು ಸಂಬಂಧ? ಇದೊಂದು ವಿಚಿತ್ರ ಕಾಯಿಲೆ!

Continue Reading
Advertisement
Minister Dinesh Gundurao latest statement
ಕರ್ನಾಟಕ24 mins ago

Lok Sabha Election 2024: ಮುಸ್ಲಿಂ ಮೀಸಲಾತಿ ಬಗ್ಗೆ ಮೋದಿ ಹೇಳಿದ್ದು ಸುಳ್ಳು: ದಿನೇಶ್ ಗುಂಡೂರಾವ್

Namma metro
ಕ್ರೀಡೆ44 mins ago

TCS World 10K Run : ಈ ದಿನದಂದು ಮೆಟ್ರೊ ರೈಲು ಸೇವೆ ಬೆಳಗ್ಗೆ 4.10ಕ್ಕೆ ಆರಂಭ

Job Alert
ಉದ್ಯೋಗ1 hour ago

Job Alert: ಹಟ್ಟಿ ಚಿನ್ನದ ಗಣಿ ಕಂಪೆನಿಯಲ್ಲಿದೆ ಸುವರ್ಣಾವಕಾಶ; 168 ಹುದ್ದೆಗಳಿಗೆ ಐಟಿಐ, ಡಿಪ್ಲೋಮಾ ಪಾಸಾದವರು ಅಪ್ಲೈ ಮಾಡಿ

Viral Video
ವೈರಲ್ ನ್ಯೂಸ್1 hour ago

Viral Video: ಮಕ್ಕಳ ಮುಗ್ಧ ನಗುವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಶಿಕ್ಷಕಿ ಏನು ಮಾಡಿದ್ದಾರೆ ನೋಡಿ…

world record
ಕ್ರೀಡೆ2 hours ago

World Record : ಒಂದೇ ಒಂದು ರನ್​ ನೀಡದೇ 7 ವಿಕೆಟ್​ ಉರುಳಿಸಿದ ಬೌಲರ್​​; ಕ್ರಿಕೆಟ್​ ಕ್ಷೇತ್ರದಲ್ಲಿ ವಿಶ್ವ ದಾಖಲೆ

Viral Video
ವೈರಲ್ ನ್ಯೂಸ್2 hours ago

Viral Video: ಸ್ಕೂಟರ್‌ನಲ್ಲೇ ಆನ್‌ಲೈನ್‌ ಮೀಟಿಂಗ್‌ ನಡೆಸಿದ ಮಹಿಳೆ; ಇದು ವರ್ಕ್‌ ಫ್ರಮ್‌ ಟ್ರಾಫಿಕ್‌ ಬ್ರೋ!

driver lost control and the jeep hit a tree driver died on the spot
ಕ್ರೈಂ2 hours ago

Road Accident: ಚಾಲಕನ ನಿಯಂತ್ರಣ ತಪ್ಪಿ ಜೀಪ್ ಮರಕ್ಕೆ ಡಿಕ್ಕಿ; ಚಾಲಕ ಸ್ಥಳದಲ್ಲೇ ಸಾವು

2nd PUC Exam 2 KSRTC BMTC bus travel free for students in exam timing
Lok Sabha Election 20242 hours ago

2nd PUC Exam: ದ್ವಿತೀಯ ಪಿಯುಸಿ ಪರೀಕ್ಷೆ-2 ಬರೆಯುತ್ತೀರಾ? ಹಾಗಿದ್ರೆ ನಿಮ್ಗೆ ಬಸ್‌ ಪ್ರಯಾಣ ಫ್ರೀ!

Money Guide
ಮನಿ-ಗೈಡ್3 hours ago

Money Guide: ಮೇ 31ರೊಳಗೆ ಪ್ಯಾನ್‌-ಆಧಾರ್‌ ಲಿಂಕ್‌ ಆಗದಿದ್ದರೆ ಟಿಡಿಎಸ್ ದುಪ್ಪಟ್ಟು ಕಡಿತ; ಲಿಂಕ್‌ ಮಾಡುವ ವಿಧಾನ ಇಲ್ಲಿದೆ

2nd PUC Exam 2 from April 29 and make Another mistake
ಶಿಕ್ಷಣ3 hours ago

2nd PUC Exam: ಏಪ್ರಿಲ್‌ 29ರಿಂದ ದ್ವಿತೀಯ ಪಿಯುಸಿ ಪರೀಕ್ಷೆ-2; ಮತ್ತೊಂದು ಎಡವಟ್ಟು!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder Case in hubblli
ಹುಬ್ಬಳ್ಳಿ6 hours ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ6 hours ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ9 hours ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 202411 hours ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ2 days ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು3 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ3 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು3 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET 2024 Exam
ಬೆಂಗಳೂರು3 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

ಟ್ರೆಂಡಿಂಗ್‌