Aditya- L1 : ಇಸ್ರೊದ ಮೊದಲ ಸೌರ ಯೋಜನೆ ಆದಿತ್ಯ ಎಲ್​-1 ಯಶಸ್ವಿ ಕಕ್ಷೆಗೆ ಸೇರ್ಪಡೆ - Vistara News

ದೇಶ

Aditya- L1 : ಇಸ್ರೊದ ಮೊದಲ ಸೌರ ಯೋಜನೆ ಆದಿತ್ಯ ಎಲ್​-1 ಯಶಸ್ವಿ ಕಕ್ಷೆಗೆ ಸೇರ್ಪಡೆ

ತನ್ನ ಗಮ್ಯಸ್ಥಾನವನ್ನು ತಲುಪಿದ ಹಿನ್ನೆಲೆಯಲ್ಲಿ ಈ ಬಾಹ್ಯಾಕಾಶ ನೌಕೆಯ (Aditya- L1) ಮೂಲಕ ಯಾವುದೇ ಅಡೆತಡೆಯಿಲ್ಲದ ಸೂರ್ಯನನ್ನು ವೀಕ್ಷಿಸಲು ಸಾಧ್ಯವಾಗುತ್ತದೆ.

VISTARANEWS.COM


on

Aditya L1 Mission
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಚೊಚ್ಚಲ ಸೌರ ಯೋಚನೆ ಆದಿತ್ಯ ಎಲ್ 1 ತನ್ನ ಗಮ್ಯಸ್ಥಾನವನ್ನು ತಲುಪಿದೆ. ಶನಿವಾರ ಅದು ತನ್ನ ಅಂತಿಮ ಕಕ್ಷೆಗೆ ಸೇಕೊಂಡಿರುವುದಾಗಿ ಇಸ್ರೊ ಘೋಷಿಸಿದೆ. ಜನವರಿ 6 ರಂದು ಸಂಜೆ 4 ಗಂಟೆಗೆ ಆದಿತ್ಯ-ಎಲ್ 1 ತನ್ನ ಎಲ್ 1 ಬಿಂದುವನ್ನು ತಲುಪಲಿದೆ ಮತ್ತು ಅದನ್ನು ಅಲ್ಲಿಯೇ ಉಳಿಸಿಕೊಳ್ಳಲು ನಾವು ಅಂತಿಮ ತಂತ್ರವನ್ನು ಮಾಡಲಿದ್ದೇವೆ ಎಂದು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ತಿಳಿಸಿದ್ದರು

ತನ್ನ ಅಂತಿಮ ಗಮ್ಯಸ್ಥಾನವನ್ನು ತಲುಪಿದ ನಂತರ, ಬಾಹ್ಯಾಕಾಶ ನೌಕೆಯು ಯಾವುದೇ ಅಡೆತಡೆಗಳು ಇಲ್ಲದೇ ಸೂರ್ಯನ ಕುರಿತು ಅಧ್ಯಯನ ನಡೆಸಲಿದೆ. ಭಾರತದ ಬಾಹ್ಯಾಕಾಶ ಸಂಶೋಧಕರು ಯಾವುದೇ ಗ್ರಹಣಗಳು ಇಲ್ಲದೆ ಸೂರ್ಯನನ್ನು ವೀಕ್ಷಿಸಲಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್ 2ರಂದು ಉಡಾವಣೆಯಾದ ಈ ಬಾಹ್ಯಾಕಾಶ ನೌಕೆಯು ಭೂಮಿಗೆ ಸಂಬಂಧಿಸಿದ ನಾಲ್ಕು ಮ್ಯಾನೋವರ್​ಗಳು ಮತ್ತು ಟ್ರಾನ್ಸ್-ಲ್ಯಾಗ್ರಾಂಜಿಯನ್ ಪಾಯಿಂಟ್ 1 ಸೇರ್ಪಡೆ (ಟಿಎಲ್ 1 ಐ) ಮ್ಯಾನೋವರ್​ಗಳಿಗೆ ಒಳಗಾಗಿದೆ. ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿ.ಮೀ ದೂರದಲ್ಲಿರುವ ಮೊದಲ ಸೂರ್ಯ-ಭೂಮಿಯ ಲ್ಯಾಗ್ರಾಂಜಿಯನ್ ಬಿಂದು (ಎಲ್ 1) ಸುತ್ತಲಿನ ಹ್ಯಾಲೋ ಕಕ್ಷೆಯಿಂದ ಸೂರ್ಯನ ಕರೋನಾವನ್ನು ವೀಕ್ಷಿಸುವ ಮತ್ತು ಅದರ ತೀವ್ರ ಶಾಖವನ್ನು ಅರ್ಥಮಾಡಿಕೊಳ್ಳುವ ಗುರಿಯನ್ನು ಈ ಮಿಷನ್ ಹೊಂದಿದೆ.

ಲ್ಯಾಗ್ರೇಂಜ್ ಪಾಯಿಂಟ್ ಒಂದು ವಿಶಿಷ್ಟ ಪ್ರದೇಶವಾಗಿದ್ದು, ಅಲ್ಲಿ ಭೂಮಿ ಮತ್ತು ಸೂರ್ಯನ ನಡುವಿನ ಗುರುತ್ವಾಕರ್ಷಣ ಬಲಗಳು ಸಮತೋಲನವನ್ನು ತಲುಪುತ್ತವೆ. ಚಂದ್ರ, ಮಂಗಳ ಮತ್ತು ಶುಕ್ರದಂತಹ ಇತರ ಆಕಾಶಕಾಯಗಳ ಪ್ರಭಾವಕ್ಕೆ ಒಳಗಾಗುವುದಿಲ್ಲ. ಜತೆಗೆ ಎಲ್ 1 ಬಿಂದು ವೀಕ್ಷಣಾ ಉದ್ದೇಶಗಳಿಗಾಗಿ ಸ್ಥಿರ ಸ್ಥಾನವನ್ನು ಒದಗಿಸುತ್ತದೆ.

ಇದನ್ನೂ ಓದಿ : Medicine side effect : ಗುಣಮಟ್ಟಕ್ಕೆ ಆದ್ಯತೆ; ಔಷಧ ಕಂಪನಿಗಳಿಗೆ ಹೊಸ ಮಾನದಂಡ ರೂಪಿಸಿದ ಕೇಂದ್ರ ಸರ್ಕಾರ

ಸೂರ್ಯನು ಬಹಳ ಕ್ರಿಯಾತ್ಮಕ ನಕ್ಷತ್ರವಾಗಿದ್ದು, ಅದು ನಾವು ನೋಡುವುದಕ್ಕಿಂತ ಮೀರಿ ವಿಸ್ತರಿಸಿದೆ. ಇದು ಹಲವಾರು ಸ್ಫೋಟಕ ವಿದ್ಯಮಾನಗಳನ್ನು ತೋರಿಸುತ್ತದೆ. ಸೌರವ್ಯೂಹದಲ್ಲಿ ಅಪಾರ ಪ್ರಮಾಣದ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ. ಸೌರ ವಿದ್ಯಮಾನಗಳನ್ನು ಭೂಮಿಯ ಕಡೆಗೆ ನೋಡಿದರೆ ಅದು ಭೂಮಿಯ ಹತ್ತಿರದ ಬಾಹ್ಯಾಕಾಶ ಪರಿಸರದಲ್ಲಿ ವಿವಿಧ ರೀತಿಯ ತೊಂದರೆಗಳನ್ನು ಉಂಟುಮಾಡಬಹುದು” ಎಂದು ಇಸ್ರೋ ಹೇಳಿದೆ.

ಆದಿತ್ಯ ಎಲ್ 1 ಕತೆ ಮುಂದೇನು?

ಆದಿತ್ಯ-ಎಲ್ 1 ಮುಂದಿನ ಐದು ವರ್ಷಗಳವರೆಗೆ ಉಳಿಯುವ ನಿರೀಕ್ಷೆಯಿದೆ. ಭೂಮಿಯಿಂದ 1.5 ಮಿಲಿಯನ್ ಕಿ.ಮೀ ದೂರದಲ್ಲಿರುವ ಆದಿತ್ಯ-ಎಲ್ 1 ಉಪಗ್ರಹವು ಸೆಪ್ಟೆಂಬರ್ 2 ರಂದು ಶ್ರೀಹರಿಕೋಟಾದಿಂದ ಉಡಾವಣೆಯಾಗಿದ್ದು, ಎಲ್ 1 ತಲುಪಿದ ನಂತರ ನಿರ್ಣಾಯಕ ಕಾರ್ಯವನ್ನು ನಿರ್ವಹಿಸುತ್ತದೆ.

ಆದಿತ್ಯ-ಎಲ್ 1 ಹೇಗಿದೆ?

ಆದಿತ್ಯ ಎಲ್ 1 ನ ಏಳು ಪೇಲೋಡ್​ಗಳನ್ನು ದೇಶದ ವಿವಿಧ ಪ್ರಯೋಗಾಲಯಗಳು ದೇಶೀಯವಾಗಿ ಅಭಿವೃದ್ಧಿಪಡಿಸಿವೆ. ಇದರ ವಿಇಎಲ್​ಸಿ ಉಪಕರಣವನ್ನು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ನಲ್ಲಿ ತಯಾರಿಸಲಾಗುತ್ತದೆ. ಪುಣೆಯ ಅಂತರ್ ವಿಶ್ವವಿದ್ಯಾಲಯ ಖಗೋಳಶಾಸ್ತ್ರ ಮತ್ತು ಖಗೋಳ ಭೌತಶಾಸ್ತ್ರ ಕೇಂದ್ರದಲ್ಲಿ ಸೂಟ್ ಉಪಕರಣ; ಅಹಮದಾಬಾದ್​ನ ಸಂಶೋಧನಾ ಪ್ರಯೋಗಾಲಯದಲ್ಲಿ ಆಸ್ಪೆಕ್ಸ್ ಉಪಕರಣ; ತಿರುವನಂತಪುರಂನ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ಬಾಹ್ಯಾಕಾಶ ಭೌತಶಾಸ್ತ್ರ ಪ್ರಯೋಗಾಲಯದಲ್ಲಿ ಪಿಎಪಿಎ ಪೇಲೋಡ್; ಬೆಂಗಳೂರಿನ ಯು.ಆರ್.ರಾವ್ ಉಪಗ್ರಹ ಕೇಂದ್ರದಲ್ಲಿ ಸೋಲೆಕ್ಸ್ ಮತ್ತು ಎಚ್ಇಎಲ್1ಒಎಸ್ ಪೇಲೋಡ್ಗಳು ಮತ್ತು ಬೆಂಗಳೂರಿನ ಲ್ಯಾಬೊರೇಟರಿ ಫಾರ್ ಎಲೆಕ್ಟ್ರೋ ಆಪ್ಟಿಕ್ಸ್ ಸಿಸ್ಟಮ್ಸ್ನಲ್ಲಿ ಮ್ಯಾಗ್ನೆಟೋಮೀಟರ್ ಪೇಲೋಡ್​ಗಳನ್ನು ತಯಾರಿಸಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Amul Milk: ಗ್ರಾಹಕರಿಗೆ ಬಿಗ್‌ ಶಾಕ್‌; ಹಾಲಿನ ಬೆಲೆ ಲೀಟರ್‌ಗೆ 2 ರೂ. ಹೆಚ್ಚಳ

Amul Milk: ಲೋಕಸಭಾ ಚುನಾವಣೆಯ ಫಲಿತಾಂಶದತ್ತ ಇಡೀ ದೇಶದ ಗಮನ ನೆಟ್ಟಿದೆ. ಈ ಮಧ್ಯೆ ಜನತೆಗೆ ಅಮುಲ್‌ ಕಂಪನಿ ಬೆಲೆ ಏರಿಕೆಯ ಶಾಕ್‌ ಕೊಟ್ಟಿದೆ. ಎಲ್ಲ ರೀತಿಯ ಹಾಲಿನ ಬೆಲೆಯನ್ನು ಲೀಟರ್‌ಗೆ 2 ರೂ.ಗಳಷ್ಟು ಹೆಚ್ಚಿಸಿದೆ. ಬೆಲೆ ಏರಿಕೆ ಇಂದಿನಿಂದಲೇ (ಜೂನ್ 3) ಜಾರಿಗೆ ಬರಲಿದೆ. ಉತ್ಪಾದನೆಯ ಒಟ್ಟಾರೆ ವೆಚ್ಚದ ಹೆಚ್ಚಳದಿಂದಾಗಿ ಅಮುಲ್ ಹಾಲಿನ ಬೆಲೆಯನ್ನು ಹೆಚ್ಚಿಸಲಾಗಿದೆ ಎಂದು ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ (GCMMF) ತಿಳಿಸಿದೆ. ಜಿಸಿಎಂಎಂಎಫ್ ಕೊನೆಯ ಬಾರಿಗೆ ಹಾಲಿನ ಬೆಲೆಯನ್ನು 2023ರ ಫೆಬ್ರವರಿಯಲ್ಲಿ ಹೆಚ್ಚಿಸಿತ್ತು.

VISTARANEWS.COM


on

Amul Milk
Koo

ನವದೆಹಲಿ: ಲೋಕಸಭಾ ಚುನಾವಣೆಯ ಫಲಿತಾಂಶದತ್ತ ಇಡೀ ದೇಶದ ಗಮನ ನೆಟ್ಟಿದೆ. ಈ ಮಧ್ಯೆ ಜನತೆಗೆ ಅಮುಲ್‌ ಕಂಪನಿ ಬೆಲೆ ಏರಿಕೆಯ ಶಾಕ್‌ ಕೊಟ್ಟಿದೆ (Amul Milk). ಎಲ್ಲ ರೀತಿಯ ಹಾಲಿನ ಬೆಲೆಯನ್ನು ಲೀಟರ್‌ಗೆ 2 ರೂ.ಗಳಷ್ಟು ಹೆಚ್ಚಿಸಿದೆ. ಬೆಲೆ ಏರಿಕೆ ಸೋಮವಾರದಿಂದಲೇ (ಜೂನ್ 3) ಜಾರಿಗೆ ಬರಲಿದೆ.

ಉತ್ಪಾದನೆಯ ಒಟ್ಟಾರೆ ವೆಚ್ಚದ ಹೆಚ್ಚಳದಿಂದಾಗಿ ಅಮುಲ್ ಹಾಲಿನ ಬೆಲೆಯನ್ನು ಹೆಚ್ಚಿಸಲಾಗಿದೆ ಎಂದು ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ (GCMMF) ತಿಳಿಸಿದೆ. ಜಿಸಿಎಂಎಂಎಫ್ ಕೊನೆಯ ಬಾರಿಗೆ ಹಾಲಿನ ಬೆಲೆಯನ್ನು 2023ರ ಫೆಬ್ರವರಿಯಲ್ಲಿ ಹೆಚ್ಚಿಸಿತ್ತು.

‘ಅಮುಲ್’ ಬ್ರ್ಯಾಂಡ್‌ ಅಡಿಯಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ ಜಿಸಿಎಂಎಂಎಫ್‌ನ ಎಂ.ಡಿ. ಜಯೇನ್ ಮೆಹ್ತಾ ಈ ಬಗ್ಗೆ ಮಾತನಾಡಿ, ʼʼಹೆಚ್ಚಿದ ಉತ್ಪಾದನಾ ವೆಚ್ಚವನ್ನು ಸರಿದೂಗಿಸಲು ಬೆಲೆ ಏರಿಕೆ ಅನಿವಾರ್ಯʼʼ ಎಂದು ತಿಳಿಸಿದ್ದಾರೆ.

ಪರಿಷ್ಕೃತ ದರ ಹೀಗಿದೆ

ಬೆಲೆ ಏರಿಕೆಯೊಂದಿಗೆ 500 ಎಂಎಲ್‌ನ ಅಮುಲ್ ಎಮ್ಮೆ ಹಾಲು, 500 ಎಂಎಲ್‌ನ ಅಮುಲ್ ಗೋಲ್ಡ್ ಹಾಲು ಮತ್ತು 500 ಎಂಎಲ್‌ನ ಅಮುಲ್ ಶಕ್ತಿ ಹಾಲಿನ ದರ ಕ್ರಮವಾಗಿ 36 ರೂ., 33 ರೂ. ಮತ್ತು 30 ರೂ. ಆಗಲಿದೆ. “ಪ್ರತಿ ಲೀಟರ್‌ಗೆ 2 ರೂ.ಗಳ ಹೆಚ್ಚಳದೊಂದಿಗೆ ದರ ಶೇ. 3-4ರಷ್ಟು ಅಧಿಕವಾಗಲಿದೆ. 2023ರ ಫೆಬ್ರವರಿಯಿಂದ ಅಮುಲ್ ತಾಜಾ ಹಾಲಿನ ಬೆಲೆಯನ್ನು ಹೆಚ್ಚಿಸಿರಲಿಲ್ಲ. ಸುಮಾರು ಒಂದೂವರೆ ವರ್ಷಗಳ ಬಳಿಕ ಈ ಹೆಚ್ಚಳ ಕಂಡು ಬಂದಿದೆʼʼ ಎಂದು ಜಿಸಿಎಂಎಂಎಫ್‌ನ ಪ್ರಕಟಣೆ ತಿಳಿಸಿದೆ.

ಹಾಲು ಉತ್ಪಾದನೆಯ ಒಟ್ಟಾರೆ ವೆಚ್ಚದ ಹೆಚ್ಚಳದಿಂದಾಗಿ ಈ ಬೆಲೆ ಏರಿಕೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಅದು ಹೇಳಿದೆ. ಜಿಸಿಎಂಎಂಎಫ್ ಪ್ರಕಾರ, ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಗ್ರಾಹಕರು ಪಾವತಿಸುವ ಪ್ರತಿ ರೂಪಾಯಿಯಲ್ಲಿ ಸುಮಾರು 80 ಪೈಸೆಯನ್ನು ಅಮುಲ್ ಹಾಲು ಉತ್ಪಾದಕರಿಗೆ ವರ್ಗಾಯಿಸುತ್ತದೆ. “ಬೆಲೆ ಪರಿಷ್ಕರಣೆಯು ನಮ್ಮ ಹಾಲು ಉತ್ಪಾದಕರ ನಷ್ಟವನ್ನು ಸರಿದೂಗಿಸಲು ಸಹಾಯ ಮಾಡುತ್ತದೆ ಮತ್ತು ಹೆಚ್ಚಿನ ಹಾಲು ಉತ್ಪಾದನೆಗೆ ರೈತರನ್ನು ಪ್ರೋತ್ಸಾಹಿಸುತ್ತದೆ” ಎಂದು ಹೇಳಿದೆ.

ಇದನ್ನೂ ಓದಿ: Nandini milk: ಅಮುಲ್‌ಗೆ ನಂದಿನಿ ಸೆಡ್ಡು; ಇಂದಿರಾ ಕ್ಯಾಂಟೀನ್‌ಗಳಲ್ಲೂ ಹಾಲು ಮಾರಾಟಕ್ಕೆ ಪ್ಲಾನ್‌!

ಕಮರ್ಷಿಯಲ್ ಅಡುಗೆ ಅನಿಲ ದರ ಇಳಿಕೆ

ಜೂನ್‌ 1ರಂದು ಕಮರ್ಷಿಯಲ್ ಅಡುಗೆ ಅನಿಲ ದರ ಇಳಿಕೆಯಾಗಿ ಗ್ರಾಹಕರ ಮೊಗದಲ್ಲಿ ನಗು ಮೂಡಿತ್ತು. ಜೂನ್‌ 1ರಿಂದ ಜಾರಿಗೆ ಬರುವಂತೆ ತೈಲ ಮಾರುಕಟ್ಟೆ ಕಂಪನಿಗಳು (OMCs) ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಬೆಲೆಯನ್ನು 69.50 ರೂ. ಕಡಿಮೆ ಮಾಡಿದ್ದವು (LPG Price Cut). ಇದರೊಂದಿಗೆ 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಬೆಲೆ ಬೆಂಗಳೂರಿನಲ್ಲಿ 69.50 ರೂ. ಕಡಿತಗೊಂಡು 1,756 ರೂ.ಗೆ ತಲುಪಿದೆ. ಕಳೆದ ತಿಂಗಳು ಕೂಡ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು ಕಡಿತಗೊಳಿಸಲಾಗಿತ್ತು. ಮೇ 1ರಂದು ದರ ಪರಿಷ್ಕರಿಸಿ 19 ರೂ. ಇಳಿಕೆ ಮಾಡಲಾಗಿತ್ತು. ಏಪ್ರಿಲ್‌ನಲ್ಲಿಯೂ 19 ಕೆಜಿಯ ಸಿಲಿಂಡರ್‌ ಬೆಲೆಯನ್ನು 30.50 ರೂ. ಇಳಿಸಲಾಗಿತ್ತು.

Continue Reading

ದೇಶ

Odisha Assembly Election: ಒಡಿಶಾ ವಿಧಾನಸಭಾ ಚುನಾವಣೆ; ಬಿಜೆಡಿ-ಬಿಜೆಪಿ ನಡುವೆ ತೀವ್ರ ಹಣಾಹಣಿ: ಹಳೆ ದೋಸ್ತಿಗೆ ಠಕ್ಕರ್‌ ಕೊಡುತ್ತಾ ಕಮಲ ಪಡೆ?

Odisha Assembly Election: ಒಡಿಶಾದಲ್ಲಿ ಲೋಕಸಭೆ ಚುನಾವಣೆ ಜತೆಗೆ ವಿಧಾನಸಭೆ ಚುನಾವಣೆಯೂ ನಡೆದಿದೆ. ಸದ್ಯ ಎಕ್ಸಿಟ್‌ ಪೋಲ್‌ ಫಲಿತಾಂಶ ಹೊರ ಬಿದ್ದಿದೆ. ಅದರ ಪ್ರಕಾರ ಈ ಬಾರಿ ಆಡಳಿತರೂಢ ಬಿಜು ಜನತಾ ದಳ ಮತ್ತು ಬಿಜೆಪಿ ನಡುವೆ ತೀವ್ರ ಹಣಾಹಣಿ ಇದೆ. 147 ಸದಸ್ಯರ ವಿಧಾನಸಭೆಯಲ್ಲಿ ಎರಡೂ ಪಕ್ಷಗಳಿಗೆ ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ 62-80 ಸ್ಥಾನಗಳನ್ನು ನೀಡಿದೆ.

VISTARANEWS.COM


on

Odisha Assembly Election
Koo

ಭುವನೇಶ್ವರ: ಒಡಿಶಾದಲ್ಲಿ ಲೋಕಸಭೆ ಚುನಾವಣೆ ಜತೆಗೆ ವಿಧಾನಸಭೆ ಚುನಾವಣೆಯೂ ನಡೆದಿದೆ (Odisha Assembly Election). ಸದ್ಯ ಎಕ್ಸಿಟ್‌ ಪೋಲ್‌ ಫಲಿತಾಂಶ ಹೊರ ಬಿದ್ದಿದೆ. ಅದರ ಪ್ರಕಾರ ಈ ಬಾರಿ ಆಡಳಿತರೂಢ ಬಿಜು ಜನತಾ ದಳ (BJD) ಮತ್ತು ಬಿಜೆಪಿ (BJP) ನಡುವೆ ತೀವ್ರ ಹಣಾಹಣಿ ಇದೆ. 147 ಸದಸ್ಯರ ವಿಧಾನಸಭೆಯಲ್ಲಿ ಎರಡೂ ಪಕ್ಷಗಳಿಗೆ ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ 62-80 ಸ್ಥಾನಗಳನ್ನು ನೀಡಿದೆ.

2019ರಲ್ಲಿ ಬಿಜೆಪಿ ಶೇ. 32.49ರಷ್ಟು ಮತ ಪಡೆದುಕೊಂಡಿತ್ತು. ಸಮೀಕ್ಷೆ ಪ್ರಕಾರ ಈ ಬಾರಿ ಕಮಲ ಪಡೆಗೆ ಶೇ. 42ರಷ್ಟು ವೋಟು ಲಭಿಸಲಿದೆ. ಅಂದರೆ ವೋಟಿನ ಪ್ರಮಾಣ ಸುಮಾರು ಶೇ. 10ರಷ್ಟು ವೃದ್ಧಿಸಲಿದೆ. ಕಾಂಗ್ರೆಸ್ 5ರಿಂದ 8 ಸ್ಥಾನಗಳು ಮತ್ತು ಶೇ. 12ರಷ್ಟು ಮತಗಳೊಂದಿಗೆ ಮೂರನೇ ಸ್ಥಾನದಲ್ಲಿರಲಿದೆ ಎಂದು ಅಂಕಿಅಂಶಗಳು ಹೇಳಿದೆ.

2019ರ ಚಿತ್ರಣ

2019ರ ವಿಧಾನಸಭಾ ಚುನಾವಣೆಯಲ್ಲಿ ಬಿಜು ಜನತಾ ದಳಕ್ಕೆ 117, ಬಿಜೆಪಿಗೆ 23 ಮತ್ತು ಕಾಂಗ್ರೆಸ್‌ಗೆ 9 ಸ್ಥಾನ ಸಿಕ್ಕಿತ್ತು. 2000ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದ ಬಿಜೆಡಿ ಅಧ್ಯಕ್ಷ ನವೀನ್ ಪಟ್ನಾಯಕ್ ಅವರು ಸತತ ಐದನೇ ಅವಧಿಗೆ ಮರು ಆಯ್ಕೆಯಾಗಿದ್ದರು. 77 ವರ್ಷದ ಪಟ್ನಾಯಕ್‌ ಅವರು ಈ ಬಾರಿ ಬಿಜೆಪಿಯಿಂದ ಕಠಿಣ ಸ್ಪರ್ಧೆ ಎದುರಿಸಲಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಬಿಜೆಡಿಯ ಮಾಜಿ ಮಿತ್ರ ಪಕ್ಷವಾದ ಬಿಜೆಪಿ ಇತ್ತೀಚಿನ ವರ್ಷಗಳಲ್ಲಿ ಪ್ರಮುಖ ವಿರೋಧ ಪಕ್ಷವಾಗಿ ಗುರುತಿಸಿಕೊಂಡಿದೆ. ಬಿಜೆಪಿಯು 2000 ಮತ್ತು 2009ರ ನಡುವೆ ಬಿಜೆಡಿಯೊಂದಿಗೆ ಅಧಿಕಾರವನ್ನು ಹಂಚಿಕೊಂಡಿತ್ತು. ಆ ಅವಧಿಯಲ್ಲಿ ಈ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸಿದ್ದವು. 2009ರ ಚುನಾವಣೆಗೂ ಮೊದಲು ಮೈತ್ರಿ ಮುರಿದು ಬಿದ್ದು, ಬಿಜೆಪಿ ರಾಜ್ಯದಲ್ಲಿ ಮೂರನೇ ಪ್ರಮುಖ ರಾಜಕೀಯ ಶಕ್ತಿಯಾಗಿ ಬೆಳೆಯಿತು.

ನವೀನ್‌ ಪಟ್ನಾಯಕ್‌ ಅವರ ಉತ್ತರಾಧಿಕಾರಿಯಾಗಿ ವಿ.ಕೆ.ಪಾಂಡಿಯನ್‌ ಆಯ್ಕೆಯಾಗಬಹುದು ಎಂಬ ಮಾತು ಸದ್ಯ ಕೇಳಿ ಬರುತ್ತಿವೆ. ಒಂದು ವೇಳೆ ಬಿಜೆಡಿ ಮತ್ತೆ ಅಧಿಕಾರಕ್ಕೆ ಬಂದಿದ್ದೇ ಆದರೆ ನವೀನ್‌ ಪಟ್ನಾಯಕ್‌ ಮುಖ್ಯಮಂತ್ರಿ ಸ್ಥಾನವನ್ನು ಪಾಂಡಿಯನ್‌ಗೆ ಬಿಟ್ಟು ಕೊಡುತ್ತಾರಾ ಎಂಬ ಚರ್ಚೆ ಕೂಡ ಜೋರಾಗಿದೆ.

ಒಡಿಶಾದಲ್ಲಿ ಈ ಬಾರಿ ಚುನಾವಣಾ ಫಲಿತಾಂಶವು ಬಹುತೇಕ 2019ರ ರೀತಿಯಲ್ಲೇ ಇರಲಿದೆ ಎಂದೂ ಅಂದಾಜಿಸಲಾಗುತ್ತಿದೆ. ಜತೆಗೆ ಬಿಜೆಪಿ ಮತಗಳಿಕೆಯನ್ನು ಹೆಚ್ಚಿಸಿಕೊಳ್ಳಬಹುದು ಹಾಗೂ ವಿಧಾನಸಭಾ ಸ್ಥಾನಗಳನ್ನು ಹೆಚ್ಚಿಸಬಹುದು ಎಂದೂ ವಿಶ್ಲೇಷಕರು ಹೇಳುತ್ತಿದ್ದಾರೆ.

ಒಡಿಶಾ ವಿಧಾನಸಭಾ ಚುನಾವಣೆಯನ್ನು ನಾಲ್ಕು ಹಂತಗಳಲ್ಲಿ ನಡೆಸಲಾಗಿತ್ತು. ಲೋಕಸಭಾ ಚುನಾವಣೆಯ ಫಲಿತಾಂಶದ ಜತೆಗೆ ಒಡಿಶಾ ವಿಧಾನಸಭಾ ಚುನಾವಣೆಯ ರಿಸಲ್ಟ್‌ ಹೊರ ಬೀಳಲಿದೆ. ಮೇ 13ರಿಂದ ಜೂನ್‌ 1ರ ವರೆಗೆ ನಾಲ್ಕು ಹಂತಗಳಲ್ಲಿ ನಡೆದ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇನ್ನು ಒಡಿಶಾದ ಲೋಕಸಭಾ ಸೀಟುಗಳ ಪೈಕಿ ಬಿಜೆಪಿ ಬಹುತೇಕ ಕಡೆ ಜಯ ದಾಖಲಿಸಲಿದೆ ಎಂದು ಎಕ್ಸಿಟ್‌ ಪೋಲ್‌ ತಿಳಿಸಿದೆ. ಎನ್‌ಡಿಎ 15ಕ್ಕಿಂತ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ ಎಂದು ಊಹಿಸಲಾಗಿದೆ. ಇಲ್ಲಿ ಒಟ್ಟು 21 ಲೋಕಸಭಾ ಕ್ಷೇತ್ರಗಳಿವೆ.

ಇದನ್ನೂ ಓದಿ: Assembly Election Results 2024: ಸಿಕ್ಕಿಂ ಮತ್ತೆ ಎಸ್‌ಕೆಎಂ ತೆಕ್ಕೆಗೆ; 32 ಸ್ಥಾನಗಳ ಪೈಕಿ 31 ಕಡೆ ಗೆಲುವು

Continue Reading

ಪ್ರಮುಖ ಸುದ್ದಿ

Mysore lok sabha Constituency : ಕಿಂಗ್​​ ವರ್ಸಸ್​ ಆರ್ಡಿನರಿ ಸಿಟಿಜನ್​ ಫೈಟ್​​ನಲ್ಲಿ ಗೆಲುವು ಯಾರಿಗೆ?

Mysore lok sabha Constituency :ಇತ್ತೀಚಿನ ಎರಡು ಚುನಾವಣೆಗಳಲ್ಲಿ ಬಿಜೆಪಿ ಪ್ರತಾಪ್ ಸಿಂಹ ಈ ಕ್ಷೇತ್ರದಲ್ಲಿ ಬಿಜೆಪಿ ಸ್ಥಾನ ಭದ್ರಪಡಿಸಿಕೊಂಡಿದ್ದರು. ಈ ಕ್ಷೇತ್ರವು ಮೈಸೂರು ಜಿಲ್ಲೆಯ ಭಾಗ ಮತ್ತು ಇಡೀ ಕೊಡಗು ಜಿಲ್ಲೆಯನ್ನು ಒಳಗೊಂಡಿದೆ. ಭಾರತದ ಚುನಾವಣಾ ಆಯೋಗದ ಪ್ರಕಾರ, 2019 ರಲ್ಲಿ ಒಟ್ಟು 18,96,333 ಮತದಾರರಿದ್ದರು.

VISTARANEWS.COM


on

Mysore lok sabha constituency
Koo

ಬೆಂಗಳೂರು: ಕಾಂಗ್ರೆಸ್ ಪ್ರಾಬಲ್ಯದ ಮೈಸೂರು ಲೋಕ ಸಭಾ ಕ್ಷೇತ್ರವು (Mysore lok sabha Constituency) ಕಳೆದ ಎರಡು ಚುನಾವಣೆಗಳಲ್ಲಿ ಸಂಪೂರ್ಣ ಬದಲಾವಣೆಗೆ ಸಾಕ್ಷಿಯಾಗಿದೆ. ಪ್ರತಾಪ್ ಸಿಂಹ (Pratap Simha) ಸತತ ಎರಡು ಬಾರಿ ಗೆದ್ದಿರುವ ಕ್ಷೇತ್ರದಲ್ಲಿ ಬಿಜೆಪಿ ತನ್ನ ಬಲವನ್ನು ಸಾಬೀತುಪಡಿಸಿದೆ. ಅದಕ್ಕಿಂತ ಹಿಂದೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸೇರಿದಂತೆ ಹಿಂದಿನ ಮೈಸೂರು ರಾಜಮನೆತನದ ಸದಸ್ಯರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದರು. ಈ ಬಾರಿ ಮೈಸೂರು ಕ್ಷೇತ್ರದಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಮೈಸೂರಿನ ಕೆಲವು ಪ್ರದೇಶಗಳಲ್ಲಿ ಹಿಡಿತ ಹೊಂದಿರುವ ಬಿಜೆಪಿಯ ಮೈತ್ರಿ ಪಾಲುದಾರ ಜೆಡಿಎಸ್ ಅವರ ಗೆಲುವಿನ ಅಭಿಯಾನದಲ್ಲಿ ಸಾಥ್ ನೀಡಿದೆ. ಹೀಗಾಗಿ ಈ ಬಾರಿಯ ಚುನಾವಣೆ ‘ಕಿಂಗ್ ವರ್ಸಸ್ ಆರ್ಡಿನರಿ ಸಿಟಿಜನ್’ ಎಂಬ ಟ್ಯಾಗ್ ಲೈನ್ ಹೊಂದಿದೆ. ಕಾಂಗ್ರೆಸ್​ನಿಂದ ಆ ಪಕ್ಷದ ರಾಜ್ಯ ವಕ್ತಾರ ಲಕ್ಷ್ಮಣ ಕಣದಲ್ಲಿದ್ದಾರೆ.

1977 ರಲ್ಲಿ ರಚನೆಯಾದ ಮೈಸೂರು ಲೋಕಸಭಾ ಕ್ಷೇತ್ರವು ಮುಖ್ಯವಾಗಿ ಕಾಂಗ್ರೆಸ್ ಪ್ರಭಾವ ಹೊಂದಿತ್ತು. ಎಚ್.ಡಿ.ತುಳಸೀದಾಸ್, ಎಂ. ರಾಜಶೇಖರಮೂರ್ತಿ ಮತ್ತು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರಂತಹ ಗಮನಾರ್ಹ ನಾಯಕರು ಇಲ್ಲಿ ಗೆದ್ದಿದ್ದರು. ಇತ್ತೀಚಿನ ಎರಡು ಚುನಾವಣೆಗಳಲ್ಲಿ ಬಿಜೆಪಿ ಪ್ರತಾಪ್ ಸಿಂಹ ಈ ಕ್ಷೇತ್ರದಲ್ಲಿ ಬಿಜೆಪಿ ಸ್ಥಾನ ಭದ್ರಪಡಿಸಿಕೊಂಡಿದ್ದರು. ಈ ಕ್ಷೇತ್ರವು ಮೈಸೂರು ಜಿಲ್ಲೆಯ ಭಾಗ ಮತ್ತು ಇಡೀ ಕೊಡಗು ಜಿಲ್ಲೆಯನ್ನು ಒಳಗೊಂಡಿದೆ. ಭಾರತದ ಚುನಾವಣಾ ಆಯೋಗದ ಪ್ರಕಾರ, 2019 ರಲ್ಲಿ ಒಟ್ಟು 18,96,333 ಮತದಾರರಿದ್ದರು.

ಕ್ಷೇತ್ರದ ವ್ಯಾಪ್ತಿಯೇನು?

ಮೈಸೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಡಿಕೇರಿ, ವಿರಾಜಪೇಟೆ, ಪಿರಿಯಾಪಟ್ಟಣ, ಹುಣಸೂರು, ಚಾಮುಂಡೇಶ್ವರಿ, ಕೃಷ್ಣರಾಜ, ಚಾಮರಾಜ ಮತ್ತು ನರಸಿಂಹರಾಜ ವಿಧಾನಸಭಾ ಕ್ಷೇತ್ರಗಳಿವೆ. ಕಾಂಗ್ರೆಸ್ 5, ಜೆಡಿಎಸ್ 2, ಬಿಜೆಪಿ 1 ಸ್ಥಾನ ಹೊಂದಿವೆ. ಸರಾಸರಿ ಸಾಕ್ಷರತಾ ಪ್ರಮಾಣವು ಸುಮಾರು 67,65% ರಷ್ಟಿದೆ. ಸುಮಾರು 977500 ನಗರ ಮತದಾರರು 51.6% ರಷ್ಟಿದ್ದಾರೆ. ಎಸ್ಸಿ ಮತ್ತು ಎಸ್ಟಿ ಮತದಾರರು ಸುಮಾರು 13.9% ರಷ್ಟಿದ್ದಾರೆ.

ಹಿಂದಿನ ಮೂರು ಚುನಾವಣಾ ಫಲಿತಾಂಶಗಳು

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಪ್ರತಾಪ್ ಸಿಂಹ ಅವರು ಕಾಂಗ್ರೆಸ್​​ನ ಸಿ.ಎಚ್.ವಿಜಯಶಂಕರ್ ಅವರನ್ನು 1,38,647 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. 2019ರ ಚುನಾವಣೆಯಲ್ಲಿ ಬಿಜೆಪಿ ಶೇ.52.27ರಷ್ಟು ಮತಗಳನ್ನು ಪಡೆದಿತ್ತು.

ಇದನ್ನೂ ಓದಿ : Kolar lok sabha constituency : ಕೋಲಾರವನ್ನು ವಾಪಸ್​ ತನ್ನ ತೆಕ್ಕೆಗೆ ತೆಗೆದುಕೊಳ್ಳುವುದೇ ಕಾಂಗ್ರೆಸ್​

2014ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಾಪ್ ಸಿಂಹ ಅವರು ಕಾಂಗ್ರೆಸ್​ನ ಅಡಗೂರು ಎಚ್.ವಿಶ್ವನಾಥ್ ಅವರನ್ನು 31,608 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಈ ಕ್ಷೇತ್ರದಲ್ಲಿ ಬಿಜೆಪಿ ಶೇ.43.46ರಷ್ಟು ಮತಗಳನ್ನು ಗಳಿಸಿದೆ

2009ರ ಸಾರ್ವತ್ರಿಕ ಚುನಾವಣೆಯಲ್ಲಿ ಅಡಗೂರು ಎಚ್.ವಿಶ್ವನಾಥ್ ಅವರು ಬಿಜೆಪಿಯ ಸಿ.ಎಚ್.ವಿಜಯಶಂಕರ್ ಅವರನ್ನು 7,691 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ 36.42% ಮತಗಳನ್ನು ಪಡೆದಿತ್ತು.

ಬೌಗೋಳಿಕ ಗಡಿಗಳು

ಮೈಸೂರು ಲೋಕಸಭೆ ಕ್ಷೇತ್ರ ಭಾರತದ ದಕ್ಷಿಣ ಪ್ರದೇಶ ಮತ್ತು ಕರ್ನಾಟಕದ ದಕ್ಷಿಣ ಕರ್ನಾಟಕ ಪ್ರದೇಶದಲ್ಲಿದೆ. ಈ ಸ್ಥಾನವು ಕರ್ನಾಟಕದ ಕೊಡಗು, ಮೈಸೂರು ಜಿಲ್ಲೆಗಳನ್ನು ಒಳಗೊಂಡಿದೆ.

Continue Reading

ಪ್ರಮುಖ ಸುದ್ದಿ

Hyderabad City : ಹೈದರಾಬಾದ್​ ಇನ್ನು ತೆಲಂಗಾಣಕ್ಕಷ್ಟೇ ರಾಜಧಾನಿ; ಏನಿದು ವಿಂಗಡಣೆ?

Hyderabad City : ನಿಗದಿತ ದಿನದಂದು (ಜೂನ್ 2ರಂದು) ಅಸ್ತಿತ್ವದಲ್ಲಿರುವ ಆಂಧ್ರಪ್ರದೇಶದ ಹೈದರಾಬಾದ್, ಹತ್ತು ವರ್ಷಗಳ ಕಾಲ ಮೀರದೇ ತೆಲಂಗಾಣ ರಾಜ್ಯ ಮತ್ತು ಆಂಧ್ರಪ್ರದೇಶ ರಾಜ್ಯದ ಸಾಮಾನ್ಯ ರಾಜಧಾನಿಯಾಗಲಿದೆ” ಎಂದು ಆಂಧ್ರಪ್ರದೇಶ ಮರುವಿಂಗಡಣೆ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ.

VISTARANEWS.COM


on

Hyderabad City : Hyderabad no longer joint capital of Andhra Pradesh, Telangana from today
Koo

ಬೆಂಗಳೂರು : ಅಖಂಡ ಆಂಧ್ರಪ್ರದೇಶವನ್ನು ತೆಲಂಗಾಣ ಮತ್ತು ಆಂಧ್ರಪ್ರದೇಶವವೆಂದು ಮರು ವಿಂಗಡಣೆ ಮಾಡುವ ಕಾಯ್ದೆ, 2014 ರ ಪ್ರಕಾರ ಮುತ್ತಿನ ನಗರವಾಗಿರುವ ಹೈದರಾಬಾದ್ (Hyderabad City), ಭಾನುವಾರದಿಂದ ತೆಲಂಗಾಣ ಮತ್ತು ಆಂಧ್ರಪ್ರದೇಶದ ಜಂಟಿ ರಾಜಧಾನಿಯಾಗಿರುವುದಿಲ್ಲ. ಜೂನ್ 2 ರಿಂದ ಹೈದರಾಬಾದ್ ಕೇವಲ ತೆಲಂಗಾಣದ ರಾಜಧಾನಿಯಾಗಿರಲಿದೆ.

2014ರಲ್ಲಿ ಅವಿಭಜಿತ ಆಂಧ್ರಪ್ರದೇಶದ ವಿಭಜನೆಯಾದಾಗ ಹೈದರಾಬಾದ್ ಅನ್ನು 10 ವರ್ಷಗಳ ಕಾಲ ಎರಡು ರಾಜ್ಯಗಳ ರಾಜಧಾನಿಯನ್ನಾಗಿ ಆಯ್ಕೆ ಮಾಡಲಾಗಿತ್ತು. ಅಂತೆಯೇ ತೆಲಂಗಾಣ ಜೂನ್ 2, 2014 ರಂದು ಅಸ್ತಿತ್ವಕ್ಕೆ ಬಂದಿತ್ತು.

ನಿಗದಿತ ದಿನದಂದು (ಜೂನ್ 2ರಂದು) ಅಸ್ತಿತ್ವದಲ್ಲಿರುವ ಆಂಧ್ರಪ್ರದೇಶದ ಹೈದರಾಬಾದ್, ಹತ್ತು ವರ್ಷಗಳ ಕಾಲ ಮೀರದೇ ತೆಲಂಗಾಣ ರಾಜ್ಯ ಮತ್ತು ಆಂಧ್ರಪ್ರದೇಶ ರಾಜ್ಯದ ಸಾಮಾನ್ಯ ರಾಜಧಾನಿಯಾಗಲಿದೆ” ಎಂದು ಆಂಧ್ರಪ್ರದೇಶ ಮರುವಿಂಗಡಣೆ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ.

“ಉಪ-ವಿಭಾಗ (1) ರಲ್ಲಿ ಉಲ್ಲೇಖಿಸಲಾದ ಅವಧಿ ಮುಗಿದ ನಂತರ, ಹೈದರಾಬಾದ್ ತೆಲಂಗಾಣ ರಾಜ್ಯದ ರಾಜಧಾನಿಯಾಗಲಿದೆ ಮತ್ತು ಆಂಧ್ರಪ್ರದೇಶ ರಾಜ್ಯಕ್ಕೆ ಹೊಸ ರಾಜಧಾನಿ ಇರುತ್ತದೆ” ಎಂದು ಅದು ಹೇಳಿದೆ. ಅಮರಾವತಿ ನಗರವನ್ನು ಆಂಧ್ರಪ್ರದೇಶ ತನ್ನ ರಾಜಧಾನಿಯಾಗಿ ಆಯ್ಕೆ ಮಾಡಿದೆ.

ಫೆಬ್ರವರಿ 2014ರಲ್ಲಿ ಸಂಸತ್ತಿನಲ್ಲಿ ಆಂಧ್ರಪ್ರದೇಶ ಮರುಸಂಘಟನೆ ಮಸೂದೆಯನ್ನು ಅಂಗೀಕರಿಸಲಾಗಿತ್ತು. ನಂತರ ಜೂನ್ 2, 2014 ರಂದು ತೆಲಂಗಾಣ ರಚನೆಯು ದಶಕಗಳ ಬೇಡಿಕೆಯ ಈಡೇರಿಕೆಯಾಗಿತ್ತು. ಆಂಧ್ರಪ್ರದೇಶದ ಆಡಳಿತಕ್ಕಾಗಿ 10 ವರ್ಷಗಳ ಅವಧಿಗೆ ನೀಡಲಾದ ಹೈದರಾಬಾದ್​ನ ಲೇಕ್ ವ್ಯೂ ಸರ್ಕಾರಿ ಅತಿಥಿ ಗೃಹದಂತಹ ಕಟ್ಟಡಗಳನ್ನು ಜೂನ್ 2 ರ ನಂತರ ಸ್ವಾಧೀನಪಡಿಸಿಕೊಳ್ಳುವಂತೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಕಳೆದ ತಿಂಗಳು ಅಧಿಕಾರಿಗಳಿಗೆ ತಿಳಿಸಿದ್ದರು.

ಇದನ್ನೂ ಓದಿ: Lok Sabha Election 2024: ಮತ ಎಣಿಕೆಗೆ 1 ದಿನವಷ್ಟೇ ಬಾಕಿ; ಚುನಾವಣಾ ಆಯೋಗದ ಕದ ತಟ್ಟಿದ ಎನ್‌ಡಿಎ, ʼಇಂಡಿಯಾʼ ಮೈತ್ರಿಕೂಟ

ಪ್ರತ್ಯೇಕಗೊಂಡು ಹತ್ತು ವರ್ಷಗಳ ನಂತರವೂ, ಆಂಧ್ರಪ್ರದೇಶ ಮತ್ತು ತೆಲಂಗಾಣ ನಡುವೆ ಆಸ್ತಿಗಳ ವಿಭಜನೆಯಂತಹ ಹಲವಾರು ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ. ತೆಲಂಗಾಣ ಸರ್ಕಾರವು ಕ್ಯಾಬಿನೆಟ್ ಸಭೆಯಲ್ಲಿ ವಿಭಜನೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲು ಪ್ರಯತ್ನಿಸಿತ್ತು. ಆದರೆ ಲೋಕಸಭಾ ಚುನಾವಣೆಯ ನೀತಿ ಸಂಹಿತೆಯನ್ಮಾನು ಗಮನದಲ್ಲಿಟ್ಟುಕೊಂಡು ಚುನಾವಣಾ ಆಯೋಗವು ಅದಕ್ಕೆ ಅನುಮೋದನೆ ನೀಡಿಲ್ಲ.

Continue Reading
Advertisement
Amul Milk
ದೇಶ4 hours ago

Amul Milk: ಗ್ರಾಹಕರಿಗೆ ಬಿಗ್‌ ಶಾಕ್‌; ಹಾಲಿನ ಬೆಲೆ ಲೀಟರ್‌ಗೆ 2 ರೂ. ಹೆಚ್ಚಳ

Odisha Assembly Election
ದೇಶ5 hours ago

Odisha Assembly Election: ಒಡಿಶಾ ವಿಧಾನಸಭಾ ಚುನಾವಣೆ; ಬಿಜೆಡಿ-ಬಿಜೆಪಿ ನಡುವೆ ತೀವ್ರ ಹಣಾಹಣಿ: ಹಳೆ ದೋಸ್ತಿಗೆ ಠಕ್ಕರ್‌ ಕೊಡುತ್ತಾ ಕಮಲ ಪಡೆ?

Mysore lok sabha constituency
ಪ್ರಮುಖ ಸುದ್ದಿ6 hours ago

Mysore lok sabha Constituency : ಕಿಂಗ್​​ ವರ್ಸಸ್​ ಆರ್ಡಿನರಿ ಸಿಟಿಜನ್​ ಫೈಟ್​​ನಲ್ಲಿ ಗೆಲುವು ಯಾರಿಗೆ?

Haveri Lok Sabha Constituency
ಹಾವೇರಿ6 hours ago

Haveri Lok Sabha Constituency: ಹಾವೇರಿಯಲ್ಲಿ ಅನುಭವಿ vs ಉತ್ಸಾಹಿ; ಯಾರಿಗೆ ಜಯದ ಮಾಲೆ?

Hyderabad City : Hyderabad no longer joint capital of Andhra Pradesh, Telangana from today
ಪ್ರಮುಖ ಸುದ್ದಿ6 hours ago

Hyderabad City : ಹೈದರಾಬಾದ್​ ಇನ್ನು ತೆಲಂಗಾಣಕ್ಕಷ್ಟೇ ರಾಜಧಾನಿ; ಏನಿದು ವಿಂಗಡಣೆ?

Loksabha Election 2024
Lok Sabha Election 20246 hours ago

Lok Sabha Election 2024: ಮತ ಎಣಿಕೆಗೆ 1 ದಿನವಷ್ಟೇ ಬಾಕಿ; ಚುನಾವಣಾ ಆಯೋಗದ ಕದ ತಟ್ಟಿದ ಎನ್‌ಡಿಎ, ʼಇಂಡಿಯಾʼ ಮೈತ್ರಿಕೂಟ

Chikballapur lok sabha constituency
ಪ್ರಮುಖ ಸುದ್ದಿ7 hours ago

Chikballapur lok sabha constituency : ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಗೆ ಇನ್ನಷ್ಟು ಬಲ ತರುವರೇ ಸುಧಾಕರ್​?

Bangalore Rain
ಕರ್ನಾಟಕ7 hours ago

Bangalore Rain: ಬೆಂಗಳೂರಲ್ಲಿ ವರುಣನ ಅಬ್ಬರ; ಅಂಡರ್ ಪಾಸ್‌ನಲ್ಲಿ ಸಿಲುಕಿದ ಬಸ್‌, 20 ಪ್ರಯಾಣಿಕರ ರಕ್ಷಣೆ

Kannada New Movie
ಸಿನಿಮಾ7 hours ago

Kannada New Movie: ಎಸ್. ನಾರಾಯಣ್ ನಿರ್ದೇಶನದ ಹೊಸ ಚಿತ್ರದಲ್ಲಿ ಒಂದಾದ ದುನಿಯಾ ವಿಜಯ್, ಶ್ರೇಯಸ್ ಮಂಜು

Koppal Lok Sabha Constituency
ಕೊಪ್ಪಳ7 hours ago

Koppal Lok Sabha Constituency: ಮಾಜಿ ಶಾಸಕರ ಪುತ್ರರ ನಡುವಿನ ಸ್ಪರ್ಧೆಯಲ್ಲಿ ಯಾರಾಗುವರು ಸಂಸದ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ17 hours ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 day ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ4 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ5 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು6 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ6 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ2 weeks ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

ಟ್ರೆಂಡಿಂಗ್‌