Republic Day 2023: ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ಕೊಟ್ಟು, ಹುತಾತ್ಮ ಯೋಧರಿಗೆ ನಮಿಸಿದ ಪ್ರಧಾನಿ ಮೋದಿ Vistara News

ಗಣರಾಜ್ಯೋತ್ಸವ

Republic Day 2023: ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ಕೊಟ್ಟು, ಹುತಾತ್ಮ ಯೋಧರಿಗೆ ನಮಿಸಿದ ಪ್ರಧಾನಿ ಮೋದಿ

ದೇಶದ ಜನರಿಗೆ ಗಣರಾಜ್ಯೋತ್ಸವದ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ, ಭಾರತ ಸ್ವಾತಂತ್ರ್ಯೋತ್ಸವದ 75ನೇ ವರ್ಷದ (ಅಮೃತಮಹೋತ್ಸವ) ಆಚರಣೆಯ ಸಂಭ್ರಮದಲ್ಲಿದ್ದು, ಈ ಸಲದ ಗಣರಾಜ್ಯೋತ್ಸವ ವಿಶೇಷ ಎನ್ನಿಸಿದೆ ಎಂದು ಹೇಳಿದ್ದಾರೆ.

VISTARANEWS.COM


on

PM Modi paying homage to the soldiers In National War Memorial
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: 74ನೇ ಗಣರಾಜ್ಯೋತ್ಸವ (Republic 2023) ನಿಮಿತ್ತ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ಕೊಟ್ಟು, ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದರು. ಅವರೊಂದಿಗೆ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಮತ್ತು ಇತರ ರಕ್ಷಣಾ ಸಿಬ್ಬಂದಿ ಇದ್ದರು. ಇಂದು ಪ್ರಧಾನಿ ಮೋದಿಯವರು ಕಪ್ಪು ಕೋಟ್​ ಧರಿಸಿ, ಬಿಳಿ ಶಾಲನ್ನು ಕುತ್ತಿಗೆಗೆ ಹೊದ್ದಿದ್ದಾರೆ. ಹಾಗೇ, ಕೇಸರಿ, ಕೆಂಪು-ಹಳದಿ ಮಿಶ್ರಿತ ರುಮಾಲನ್ನು ತಲೆಗೆ ಕಟ್ಟಿದ್ದಾರೆ. ಪ್ರತಿವರ್ಷ ಸ್ವಾತಂತ್ರ್ಯೋತ್ಸವದಂದು ಪ್ರಧಾನಿಯವರು ಕೆಂಪು ಕೋಟೆ ಮೇಲೆ ಧ್ವಜಾರೋಹಣ ಮಾಡಿದರೆ, ಗಣರಾಜ್ಯೋತ್ಸವದಂದು ರಾಷ್ಟ್ರಪತಿ ಧ್ವಜಾರೋಹಣ ಮಾಡುತ್ತಾರೆ.

ದೆಹಲಿಯ ಇಂಡಿಯಾ ಗೇಟ್​ ಬಳಿ ಇರುವ ಅಮರ್​ ಜವಾನ್​ ಜ್ಯೋತಿಯನ್ನು ಕಳೆದ ವರ್ಷ ರಾಷ್ಟ್ರೀಯ ಯುದ್ಧ ಸ್ಮಾರಕದೊಂದಿಗೆ ವಿಲೀನ ಗೊಳಿಸಲಾಗಿದೆ. ಆ ಸ್ಮಾರಕಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ ಅಲ್ಲಿಂದ ಕರ್ತವ್ಯ ಪಥಕ್ಕೆ ಆಗಮಿಸಿದ್ದಾರೆ. ಹಾಗೇ, ಉಪರಾಷ್ಟ್ರಪತಿ ದ್ರೌಪದಿ ಮುರ್ಮು, ರಾಷ್ಟ್ರಪತಿ ದ್ರೌಪದಿ ಮುರ್ಮು, ಮುಖ್ಯ ಅತಿಥಿಯಾಗಿರುವ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಕರ್ತವ್ಯ ಪಥಕ್ಕೆ ಆಗಮಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಧ್ವಜಾರೋಹಣ, ಪರೇಡ್ ಪ್ರಾರಂಭವಾಗಲಿದೆ.

ಇಂದು ಬೆಳಗ್ಗೆ ದೇಶದ ಜನರಿಗೆ ಗಣರಾಜ್ಯೋತ್ಸವದ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ, ಭಾರತ ಸ್ವಾತಂತ್ರ್ಯೋತ್ಸವದ 75ನೇ ವರ್ಷದ (ಅಮೃತಮಹೋತ್ಸವ) ಆಚರಣೆಯ ಸಂಭ್ರಮದಲ್ಲಿದೆ. ದೇಶಕ್ಕಾಗಿ ತ್ಯಾಗ-ಬಲಿದಾನ ಮಾಡಿ ಮಹಾನ್​ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ನನಸಾಗಿಸಿ, ಅವರ ಧ್ಯೇಯವನ್ನು ಅನುಷ್ಠಾನಕ್ಕೆ ತರಲು ನಾವೆಲ್ಲ ಒಗ್ಗಟ್ಟಾಗಿ ಮುನ್ನಡೆಯಬೇಕು’ ಎಂಬ ಆಶಯ ವ್ಯಕ್ತಪಡಿಸಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಗಣರಾಜ್ಯೋತ್ಸವ

Beating Retreat 2023: ತುಂತುರು ಮಳೆ ಮಧ್ಯೆ ಗಣರಾಜ್ಯೋತ್ಸವ ಸಮಾರೋಪ, ಇಲ್ಲಿವೆ ರಮಣೀಯ ಫೋಟೊಗಳು

Beating Retreat 2023: ಪ್ರಸಕ್ತ ಗಣರಾಜ್ಯೋತ್ಸವದ ಸಮಾರೋಪ ಸಮಾರಂಭವು ದೆಹಲಿ ವಿಜಯ ಚೌಕ್‌ನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಬೃಹತ್‌ ಡ್ರೋನ್‌ ಶೋ ಈ ಬಾರಿ ಗಮನ ಸೆಳೆಯಿತು.

VISTARANEWS.COM


on

Beating Retreat Ceremony
Koo

ನವದೆಹಲಿ: ಗಣರಾಜ್ಯೋತ್ಸವದಂತೆ ಗಣರಾಜ್ಯೋತ್ಸವದ ಸಮಾರೋಪ (Beating Retreat 2023) ಸಮಾರಂಭವೂ ಅದ್ಧೂರಿಯಾಗಿ ನೆರವೇರಿದೆ. ವಿಜಯ್‌ ಚೌಕ್‌ನಲ್ಲಿ ಸುಮಾರು 3,500ಕ್ಕೂ ಅಧಿಕ ಡ್ರೋನ್‌ಗಳ ಹಾರಾಟ, ಸಾಂಸ್ಕೃತಿಕ ಕಾರ್ಯಕ್ರಮ, ರಂಗಿನ ಬೆಳಕು ಸೇರಿ ಹಲವು ಚಟುವಟಿಕೆಗಳೊಂದಿಗೆ 2023ನೇ ಗಣರಾಜ್ಯೋತ್ಸವಕ್ಕೆ ಅದ್ಧೂರಿಯಾಗಿ ತೆರೆ ಎಳೆಯಲಾಯಿತು. ಕೊನೆಗೆ ಸಾರೇ ಜಹಾಂಸೆ ಅಚ್ಛಾ ಗೀತೆ ಹಾಡಲಾಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು. ತುಂತುರ ಮಳೆಯನ್ನೂ ಲೆಕ್ಕಿಸದೆ ಸಾರ್ವಜನಿಕರು ಸಮಾರೋಪ ಸಮಾರಂಭ ಕಣ್ತುಂಬಿಕೊಂಡರು. ಕಾರ್ಯಕ್ರಮದ ಕೆಲವು ಫೋಟೊಗಳು ಇಲ್ಲಿವೆ.

ದ್ರೌಪದಿ ಮುರ್ಮು
ನರೇಂದ್ರ ಮೋದಿ ರಾಜನಾಥ್‌ ಸಿಂಗ್‌ ಭಾಗಿ
ರಂಗಿನ ರಾಷ್ಟ್ರಪತಿ ಭವನ
ಬೆಳಕಿನ ಚಿತ್ತಾರ
ಸಮಾರೋಪ ಸಮಾರಂಭದ ಬ್ಯಾಂಡ್‌ ನುಡಿಸಲಾಯಿತು
ಮಳೆಯ ಮಧ್ಯೆ ಸಮಾರಂಭ ವೀಕ್ಷಿಸಿದ ಜನ
ಸೇನೆಯ ಶಿಸ್ತು
ಸೈನಿಕರ ಬ್ಯಾಂಡ್‌

ಇದನ್ನೂ ಓದಿ: Republic Day : ಗಣರಾಜ್ಯೋತ್ಸವ ಹಿನ್ನೆಲೆ ಸಿಹಿ ಹಂಚಿಕೊಂಡ ಭಾರತ, ಪಾಕಿಸ್ತಾನದ ಸೈನಿಕರು

Continue Reading

ಕರ್ನಾಟಕ

Republic Day 2023: ಭಾರತವು ಬಲಿಷ್ಠ ಸಂವಿಧಾನವನ್ನು ಹೊಂದಿದೆ: ಪ್ರಸನ್ನನಾಥ ಸ್ವಾಮೀಜಿ

Republic Day 2023: ಸ್ವಾತಂತ್ರ್ಯಾ ನಂತರ ಆಡಳಿತ ವೈಖರಿ ಯಾವ ರೀತಿ ನಡೆಯಬೇಕು ಎಂಬುದನ್ನು ತೋರಿಸಿಕೊಡುವ ಸಲುವಾಗಿ ಸಂವಿಧಾನವನ್ನು ರಚನೆ ಮಾಡಲಾಯಿತು ಎಂದು ಪ್ರಸನ್ನನಾಥ ಸ್ವಾಮೀಜಿ ಹೇಳಿದರು.

VISTARANEWS.COM


on

BGS School shivamogga rupublic day
ಬಿಜಿಎಸ್ ಶಾಲಾ ಕಾಲೇಜಿನಲ್ಲಿ ನಡೆದ 74 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿದರು.
Koo

ಶಿವಮೊಗ್ಗ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು ಎಂಬುದನ್ನು ತೋರಿಸಿಕೊಟ್ಟಂತಹ ಸಂವಿಧಾನ (Republic Day 2023) ನಮ್ಮ ದೇಶದ್ದು, ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಗುರುಪುರದಲ್ಲಿರುವ ಬಿಜಿಎಸ್ ಶಾಲಾ ಕಾಲೇಜಿನಲ್ಲಿ ನಡೆದ ೭೪ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಸ್ವಾತಂತ್ರ್ಯಾ ನಂತರ ಭಾರತದ ಪ್ರಜೆಗಳಾದ ನಾವು ಹೇಗೆ ಬದುಕಬೇಕು, ನಮ್ಮ ಆಡಳಿತ ವೈಖರಿ ಯಾವ ರೀತಿ ನಡೆಯಬೇಕು ಎಂಬುದನ್ನು ತೋರಿಸಿಕೊಡುವ ಸಲುವಾಗಿ ನಿಯಮಗಳನ್ನು ರೂಪಿಸಲಾಯಿತು. ಅದುವೇ ನಮ್ಮ ಸಂವಿಧಾನ ಎಂದರು.


ಈ ಸಂವಿಧಾನ ರಚಿಸಲು ಡಾ. ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಯಿತು. ಅವರು ನೀಡಿದಂತಹ ವರದಿಯ ಅನುಸಾರ ನಮ್ಮ ಸಂವಿಧಾನ ಜಾರಿಗೆ ಬಂದಿತು. ಅತ್ಯಂತ ಬಲಿಷ್ಠವಾದ ಮತ್ತು ಪ್ರಬುದ್ಧವಾದ ಸಂವಿಧಾನವನ್ನು ನಮ್ಮ ದೇಶ ಹೊಂದಿದೆ. ವಿಶ್ವದಲ್ಲಿಯೇ ಅತ್ಯಂತ ಉತ್ತಮವಾದ ಸಂವಿಧಾನವನ್ನು ಹೊಂದಿರುವ ದೇಶ ಭಾರತವಾಗಿದೆ ಎಂದರು.

ಇದನ್ನೂ ಓದಿ | Washington Sundar | ನಿಮ್ಮಿಷ್ಟದ ಬಿರಿಯಾನಿ ಸಿಗಲ್ಲ ಎಂದಾದರೆ ಹೋಟೆಲ್​ ಬದಲಿಸುತ್ತೀರಾ? ಸುಂದರ್ ಕೇಳಿದ್ದು ಯಾರಿಗೆ?

ಇದೇ ತಿಂಗಳು ನಾವು ಮತದಾರರ ದಿನಾಚರಣೆಯನ್ನು ಆಚರಿಸಿದ್ದೇವೆ, ನಮ್ಮ ಜನಪ್ರತಿನಿಧಿಯನ್ನು ಮತ್ತು ನಮ್ಮ ದೇಶವನ್ನು ಮುನ್ನಡೆಸುವಂತಹ ನಾಯಕರನ್ನು ಆರಿಸಿಕೊಳ್ಳುವಂತಹ ಅವಕಾಶ ಮತ್ತು ಹೊಣೆಗಾರಿಕೆ ನಮ್ಮ ಮೇಲೆಯೇ ಇದೆ. ದುರಂತವೆಂದರೆ ಮತದಾನದಲ್ಲಿ ಪಾಲ್ಗೊಳ್ಳದೇ ಇರುವುದು ನಮಗೆ ನಾವೇ ದ್ರೋಹ ಮಾಡಿಕೊಂಡಂತಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮತವನ್ನು ಚಲಾಯಿಸುವ ಮೂಲಕ ಉತ್ತಮ ಜನನಾಯಕರನ್ನು ಆಯ್ಕೆ ಮಾಡಿ ದೇಶದ ಹಾಗೂ ರಾಜ್ಯದ ಭವಿಷ್ಯವನ್ನು ಭದ್ರಗೊಳಿಸುವಂತಹ ಗುರುತರ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದರು.

ಧ್ವಜಾರೋಹಣ ನೇರವೇರಿಸಿದ ನಿವೃತ್ತ ಪ್ರಾಧ್ಯಾಪಕ ಪ್ರೊ.ಗೌರಿಶಂಕರ್ ಮಾತನಾಡಿ, ಪ್ರತಿಯೊಂದು ಮಗುವಿನಲ್ಲಿಯೂ ಕೌಶಲ್ಯ ಮತ್ತು ಜ್ಞಾನ ಅಡಗಿರುತ್ತದೆ. ಇಂದು ವಿದ್ಯಾರ್ಥಿಗಳಾಗಿರುವ ನೀವು ಭವಿಷ್ಯದಲ್ಲಿ ಮಹಾತ್ಮ ಗಾಂಧಿ, ನೆಹರೂ, ಸುಭಾಷ್ ಚಂದ್ರಬೋಸ್, ಐನ್‌ಸ್ಟೀನ್ ಸೇರಿದಂತೆ ಮಹಾನ್ ವ್ಯಕ್ತಿಗಳಾಗಬಹುದಾಗಿದೆ ಎಂದರು.

ಪ್ರತಿಯೊಬ್ಬ ವಿದ್ಯಾರ್ಥಿಯೂ ನಿರಂತರ ಶ್ರಮವನ್ನು ನಡೆಸಿದ್ದೇ ಆದಲ್ಲಿ ನಿಮ್ಮ ಗುರಿಯನ್ನು ತಲುಪಬಹುದಾಗಿದೆ. ಇದರೊಂದಿಗೆ ಅದೃಷ್ಟವೂ ಬೇಕಾಗಿದೆ. ಇದರಲ್ಲಿ ಕೇವಲ ಒಂದನ್ನು ನಂಬಿ ಕೂರುವಂತಿಲ್ಲ. ನಿಮ್ಮಲ್ಲಿರುವ ಪ್ರತಿಭೆಯನ್ನು ಹೊರ ತೆಗೆಯುವಂತಹ ಕೆಲಸವನ್ನು ಪೋಷಕರು ಹಾಗೂ ಶಿಕ್ಷಕರು ಮಾಡಬೇಕಾಗಿದೆ ಎಂದರು.

ಇದನ್ನೂ ಓದಿ | Masaba Gupta: ಫ್ಯಾಮಿಲಿ ಗೆಟ್‌ ಟು ಗೆದರ್‌ನಲ್ಲಿ ಸಂಭ್ರಮಿಸಿದ ನವದಂಪತಿ ಮಸಾಬಾ-ಸತ್ಯದೀಪ್

ವೇದಿಕೆ ಭಯವನ್ನು ಬಿಟ್ಟರೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಎಂತಹ ಸಮಾರಂಭವನ್ನು ಸಮರ್ಥವಾಗಿ ಎದುರಿಸುತ್ತೀರಿ ಎಂದು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಅವರು, ನಿಮ್ಮಲಿರುವ ಜ್ಞಾನವನ್ನು ಸದುಪಯೋಗಪಡಿಸಿಕೊಂಡು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ರಾಜ್ಯ ಹಾಗೂ ರಾಷ್ಟ್ರದ ಪ್ರಜೆಗಳಾಗಿ ಎಂದು ಹಾರೈಸಿದರು. ಸಮಾರಂಭದಲ್ಲಿ ಪ್ರಾಂಶುಪಾಲ ಎಸ್.ಎಚ್.ಸುರೇಶ್, ಉಪನ್ಯಾಸಕ ರಮೇಶ್, ಅಧ್ಯಾಪಕ ಹರೀಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಕ ರಾ.ಹ.ತಿಮ್ಮೇನಹಳ್ಳಿ ಗಣರಾಜ್ಯೋತ್ಸವ ಕಾರ‍್ಯಕ್ರಮ ನಿರ್ವಹಿಸಿದರು.

Continue Reading

ಕರ್ನಾಟಕ

Siddeshwara Swamiji: ಶಾಲಾ ವಿದ್ಯಾರ್ಥಿಗಳಿಂದ ಸಿದ್ದೇಶ್ವರ ಶ್ರೀಗಳ ಮರುಸೃಷ್ಟಿ; ದೃಶ್ಯ ರೂಪಕ ವೈರಲ್‌

Siddeshwara Swamiji: ಇತ್ತೀಚೆಗೆ ಲಿಂಗೈಕ್ಯರಾದ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಯವರ ಮರುಸೃಷ್ಟಿಯನ್ನು ಶಾಲಾ ವಿದ್ಯಾರ್ಥಿಗಳು ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ. ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಶ್ರೀಗಳ ದೃಶ್ಯ ರೂಪಕದ ಮೂಲಕ ಮಹಾಚೇತನವನ್ನು ವಿಶೇಷವಾಗಿ ಸ್ಮರಿಸಿದರು.

VISTARANEWS.COM


on

By

Koo

ವಿಜಯಪುರ: ನಡೆದಾಡುವ ದೇವರೆಂದೇ ಭಕ್ತ ಜನರು ನಂಬಿದ್ದ ಮಹಾ ಸಂತ ಸಿದ್ದೇಶ್ವರ ಸ್ವಾಮೀಜಿಯವರ (Siddeshwara Swamiji) ದೃಶ್ಯ ರೂಪಕ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಗಣರಾಜ್ಯೋತ್ಸವದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಂದ ಸಿದ್ದೇಶ್ವರ ದೃಶ್ಯ ರೂಪಕ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಇಲ್ಲಿನ ಚಡಚಣ ತಾಲೂಕಿನ ಮಣಂಕಲಗಿ ಗ್ರಾಮದ ಶಾಲಾ ವಿದ್ಯಾರ್ಥಿಗಳು, ಸಂತನೆಂದರೆ ಯಾರು ಎನ್ನುವ ಹಾಡಿನೊಂದಿಗೆ ಶ್ರೀಗಳ ದೃಶ್ಯ ರೂಪಕವನ್ನು ಮಾಡಿ ತೋರಿಸಿದ್ದಾರೆ. ತಮ್ಮ ಮಾತಿನ ಮೂಲಕವೇ ಜಗವನ್ನು ಗೆದ್ದ ಶ್ರೀಗಳು ಇಂದು ನಮ್ಮೊಂದಿಗೆ ಇಲ್ಲವಾದರೂ, ಅವರ ನಡೆ-ನುಡಿ, ಅವರ ಆದರ್ಶಗಳು ಜೀವಂತವಾಗಿವೆ.

ಇದನ್ನೂ ಓದಿ: Ola Cab Compensation: ಓಲಾ ಕ್ಯಾಬ್‌ನಲ್ಲಿ ಎಸಿ ಇಲ್ಲದ್ದಕ್ಕೆ ದೂರು, ಬೆಂಗಳೂರು ವ್ಯಕ್ತಿಗೆ 15 ಸಾವಿರ ರೂ. ಪರಿಹಾರ

ಅವರಾಡುವ ಮಾತುಗಳೆಲ್ಲ ದಿವ್ಯವಾಣಿ ಎಂತಿದ್ದವು. ೮೨ ವರ್ಷಗಳ ಸಾರ್ಥಕ ಬದುಕಿನ ಉದ್ದಕ್ಕೂ ಸ್ವಂತದ ಬಗ್ಗೆ ಸಾಸಿವೆಯಷ್ಟೂ ಯೋಚಿಸದ ಶ್ರೀಗಳು, ಜಗತ್ತಿನ ಜನರ ಒಳಿತಿನ ಬಗ್ಗೆಯೇ ಧೇನಿಸಿದರು. ತಾವು ಬಿಟ್ಟು ಹೋದ ಉದಾತ್ತ ಆದರ್ಶಗಳ ಮೂಲಕ ಶತಮಾನಗಳ ಆಚೆಗೂ ಚಿರಂತನವಾಗಿ ಉಳಿದಿದ್ದಾರೆ.

ಈಗ ಮಕ್ಕಳ ಈ ದೃಶ್ಯ ರೂಪಕ ಸಾಮಾಜಿಕ ಜಾಲತಾಣದಲ್ಲಿ ಜನರ ಮೆಚ್ಚುಗೆಯನ್ನು ಗಳಿಸುತ್ತಿದೆ. ನೆಟ್ಟಿಗರು ಮಕ್ಕಳ ನಟನೆಗೆ ಸೈ ಎಂದಿದ್ದಾರೆ.

Continue Reading

ಗಣರಾಜ್ಯೋತ್ಸವ

Republic Day : ಗಣರಾಜ್ಯೋತ್ಸವ ಹಿನ್ನೆಲೆ ಸಿಹಿ ಹಂಚಿಕೊಂಡ ಭಾರತ, ಪಾಕಿಸ್ತಾನದ ಸೈನಿಕರು

ಗಣರಾಜ್ಯೋತ್ಸವ ಖುಷಿಯಲ್ಲಿದ್ದ ಭಾರತದ ಸೈನಿಕರು ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಗಡಿ ಭದ್ರತಾ ಪಡೆಯ ಸಿಬ್ಬಂದಿಗೆ ಸಿಹಿ ಹಂಚಿದರು.

VISTARANEWS.COM


on

INDIA PAKISTAN BORDER
Koo

ನವ ದೆಹಲಿ : ದೇಶಾದ್ಯಂತ ಗುರುವಾರ (ಜನವರಿ 26ರಂದು) ಗಣರಾಜ್ಯೋತ್ಸವ (Republic Day) ಆಚರಣೆ ಮಾಡಲಾಯಿತು. ಅಂತೆಯೇ ಗಡಿಯಲ್ಲೂ ಭಾರತದ ಗಡಿ ಭದ್ರತಾ ಸಿಬ್ಬಂದಿಗಳು ಸಂಭ್ರಮಾಚರಣೆ ನಡೆಸಿದರು. ಇದೇ ವೇಳೆ ಭಾರತ ಹಾಗೂ ಪಾಕಿಸ್ತಾನದ (India-Pak soldiers) ಸೇನಾ ಸಿಬ್ಬಂದಿಗಳು ಪರಸ್ಪರ ಸಿಹಿ ಹಂಚಿಕೊಂಡು ಖುಷಿ ಹಂಚಿಕೊಂಡರು.

ಜಮ್ಮು ಕಾಶ್ಮೀರದ ಆರ್​ಎಸ್​ಪುರ ಪ್ರದೇಶದಲ್ಲಿ ಪಾಕಿಸ್ತಾನ ಹಾಗೂ ಭಾರತದ ಸೇನಾ ಸಿಬ್ಬಂದಿಗಳು ಸಿಹಿ ಹಂಚಿಕೊಂಡರು. ಭಾರತದ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರೂ ಸಿಹಿ ಸೈನಿಕರಿಗೆ ಸಿಹಿ ವಿತರಣೆ ಮಾಡಿದರು. ಈ ಮಾಹಿತಿಯನ್ನು ಅವರು ಟ್ವೀಟ್​ ಮೂಲಕ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : ವಿಸ್ತಾರ TOP 10 NEWS : ದೇಶಾದ್ಯಂತ ಗಣರಾಜ್ಯೋತ್ಸವ ಸಂಭ್ರಮದಿಂದ, ಹಾಸನದಲ್ಲಿ ʼದಳʼ ತಳಮಳವರೆಗಿನ ಪ್ರಮುಖ ಸುದ್ದಿಗಳಿವು

ಇದೇ ವೇಳೆ ಭಾರತ ಹಾಗೂ ಬಾಂಗ್ಲಾದೇಶದ ಗಡಿಭಾಗದ ಸಿಲಿಗುರಿಯ ಫುಲ್ಬಾರಿ ಪ್ರದೇಶದಲ್ಲೂ ಬಿಎಸ್​ಎಫ್​ ಹಾಗೂ ಬಾರ್ಡರ್ ಗಾರ್ಡ್​ ಬಾಂಗ್ಲಾದೇಶ್​ ಸಿಬ್ಬಂದಿಗಳು ಸಿಹಿ ಹಂಚಿಕೊಂಡರು. ಈ ಬಗ್ಗೆ ಮಾತನಾಡಿದ 176ನೇ ಬೆಟಾಲಿಯನ್​ನ ಕಂಪನಿ ಕಮಾಂಡರ್​ ಶೈಲೇಂದ್ರ ಸಿಂಗ್​, ಎರಡೂ ದೇಶಗಳ ನಡುವಿನ ಸಂಬಂಧ ವೃದ್ಧಿಗಾಗಿ ಸಿಹಿ ಹಂಚಿಕೊಂಡಿದ್ದೇವೆ ಎಂದು ಹೇಳಿದರು.

Continue Reading
Advertisement
Vistara News impact, Governmet to scrap 7 d rule of SCSP and TSP act
ಕರ್ನಾಟಕ5 hours ago

ವಿಸ್ತಾರ ನ್ಯೂಸ್ ಇಂಪ್ಯಾಕ್ಟ್; ಎಸ್ಸಿ, ಎಸ್ಟಿ‌ ಹಣ ಅನ್ಯ ಕಾರ್ಯದ ಬಳಕೆಗೆ ತಡೆ, ಕಾಯ್ದೆ ತಿದ್ದುಪಡಿಗೆ ಸಂಪುಟ ನಿರ್ಧಾರ

WPL Auction 2024
ಕ್ರಿಕೆಟ್6 hours ago

WPL Auction 2024: ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಗೆ ಕೇವಲ 2 ದಿನ ಬಾಕಿ

Supreme Court will deliver judgment on Dece 11 about J and K Special Status scrap
ಕೋರ್ಟ್6 hours ago

ಆರ್ಟಿಕಲ್ 370 ರದ್ದು ಸಿಂಧುವೇ?; ಡಿ.11ಕ್ಕೆ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು

Pro Kabaddi
ಕ್ರೀಡೆ6 hours ago

Pro Kabaddi: ಗುಜರಾತ್ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದ ಪಾಟ್ನಾ

Is 500 note with star symbol is fake, What Fact Check says?
Fact Check7 hours ago

Fact Check: ಸ್ಟಾರ್ ಗುರುತಿರುವ 500 ರೂಪಾಯಿ ನೋಟು ನಕಲಿಯೇ?

kavya maran
ಐಪಿಎಲ್ 20237 hours ago

ಸ್ಟಾರ್​​ ಆಟಗಾರನ ಖರೀದಿಗೆ ಸ್ಕೆಚ್​ ಹಾಕಿದ ಸಖತ್ ಕ್ಯೂಟ್ ಓನರ್ ಕಾವ್ಯ ಮಾರನ್

Inauguration of Hulleshwar Jnana vikas Center at Yakshi Village
ಶಿವಮೊಗ್ಗ8 hours ago

Shivamogga News: ಯಕ್ಷಿ ಗ್ರಾಮದಲ್ಲಿ ಹುಲ್ಲೇಶ್ವರ ಜ್ಞಾನ ವಿಕಾಸ ಕೇಂದ್ರ ಉದ್ಘಾಟನೆ

14 Medium and Large Irrigation Projects Completed in Kalyana Karnataka says Minister Ramalinga reddy
ಕರ್ನಾಟಕ8 hours ago

ಕಲ್ಯಾಣ ಕರ್ನಾಟಕ ಭಾಗದಲ್ಲಿ 14 ಮಧ್ಯಮ, ಬೃಹತ್ ನೀರಾವರಿ ಯೋಜನೆಗಳು ಪೂರ್ಣ: ರಾಮಲಿಂಗಾರೆಡ್ಡಿ

More than a hundred people from Kiravatti have joined the Congress party
ಉತ್ತರ ಕನ್ನಡ8 hours ago

Uttara Kannada News: ಕಿರವತ್ತಿ ಭಾಗದ 100ಕ್ಕೂ ಹೆಚ್ಚು ಜನ ಕಾಂಗ್ರೆಸ್‌ಗೆ ಸೇರ್ಪಡೆ

Vistara Top 10 News 7-12
ಕರ್ನಾಟಕ8 hours ago

VISTARA TOP 10 NEWS : ಮೌಲ್ವಿ ಐಸಿಸ್‌ ಸಂಪರ್ಕ ನಿಜವೇ? ಹಳೆಪಿಂಚಣಿ ಮರುಜಾರಿ ಖಚಿತವೇ? ಇತರ ಪ್ರಮುಖ ಸುದ್ದಿ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Madhu Bangarappa in Belagavi Winter Session
ಕರ್ನಾಟಕ10 hours ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Veer Savarkar and Priyank Kharge
ಕರ್ನಾಟಕ11 hours ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

CM-Siddaramaiah
ಕರ್ನಾಟಕ17 hours ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

Dina Bhavihsya
ಪ್ರಮುಖ ಸುದ್ದಿ1 day ago

Dina Bhavishya: ಮದುವೆಗಿದ್ದ ಅಡೆತಡೆಗಳು ಮಾಯ; ಈ ರಾಶಿಯವರಿಗೆ ವಿವಾಹ ಯೋಗ!

R ashok and CM siddaramiah in Karnataka Assembly Session
ಕರ್ನಾಟಕ1 day ago

Belagavi Winter Session: ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡ್ತೀರಿ; ರೈತರಿಗೆ 2000 ರು. ಮಾತ್ರವೇ? ಬಿಜೆಪಿ ಕಿಡಿ

CM Siddaramaiah and Tanveer
ಕರ್ನಾಟಕ2 days ago

CM Siddaramaiah: ಸಿಎಂ ಪಕ್ಕ ಐಸಿಸ್‌ ಸಂಪರ್ಕಿತ ಆರೋಪಕ್ಕೆ ಫೋಟೊ ಸಾಕ್ಷಿ ಕೊಟ್ಟ ಯತ್ನಾಳ್!

MLA Basanagouda Patil Yatnal and CM Siddaramaiah
ಕರ್ನಾಟಕ2 days ago

CM Siddaramaiah: ಮುಸ್ಲಿಂ ಸಮಾವೇಶದಲ್ಲಿ ಸಿಎಂ ಪಕ್ಕ ಕುಳಿತಿದ್ದ ಐಸಿಸ್‌ ಸಂಪರ್ಕಿತ; ಸಾಕ್ಷಿ ಕೊಡುವೆನೆಂದ ಯತ್ನಾಳ್‌

We will catch the wild elephant that killed Arjuna
ಕರ್ನಾಟಕ2 days ago

ಕಾರ್ಯಾಚರಣೆ ಸ್ಥಗಿತ; ಅರ್ಜುನನ ಕೊಂದ ಕಾಡಾನೆಯನ್ನು ಹಿಡಿದೇ ತೀರುವೆ-ಮಾವುತನ ಶಪಥ!

Government Job Vistara Exclusive and CM Siddaramaiah
ಉದ್ಯೋಗ2 days ago

Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ

Government Job Vistara Exclusive
ಉದ್ಯೋಗ2 days ago

Government Job : ‘ಖಾಲಿ’ ಸರ್ಕಾರದಲ್ಲಿ ಉದ್ಯೋಗಕ್ಕಿಲ್ಲ ಗ್ಯಾರಂಟಿ; ಭರ್ತಿಯಾಗದ 2.47 ಲಕ್ಷ ಹುದ್ದೆ!

ಟ್ರೆಂಡಿಂಗ್‌