Abdel Fattah el Sisi: ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ಆಗಮಿಸಿದ ಈಜಿಪ್ಟ್ ಅಧ್ಯಕ್ಷ; ರಾಷ್ಟ್ರಪತಿ, ಪ್ರಧಾನಿಯಿಂದ ಸ್ವಾಗತ Vistara News

ಗಣರಾಜ್ಯೋತ್ಸವ

Abdel Fattah el Sisi: ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ಆಗಮಿಸಿದ ಈಜಿಪ್ಟ್ ಅಧ್ಯಕ್ಷ; ರಾಷ್ಟ್ರಪತಿ, ಪ್ರಧಾನಿಯಿಂದ ಸ್ವಾಗತ

Republic Day 2023: ಭಾರತ ತಲುಪಿದ ಈಜಿಪ್ಟ್​ ಅಧ್ಯಕ್ಷರನ್ನು ಸ್ವಾಗತಿಸುವ ವೇಳೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ಕೇಂದ್ರ ವಿದೇಶಾಂಗ ಇಲಾಖೆ ಸಚಿವ ಎಸ್​. ಜೈಶಂಕರ್​, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​ ಸೇರಿ ಮತ್ತಿತರ ಗಣ್ಯರೂ ಇದ್ದರು.

VISTARANEWS.COM


on

Republic day 2023 Egyptian President Abdel Fattah El Sisi Arrived Delhi
ಈಜಿಪ್ಟ್ ಅಧ್ಯಕ್ಷರನ್ನು ಸ್ವಾಗತಿಸಿದ ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ ಈ ಸಲದ ಗಣರಾಜ್ಯೋತ್ಸವ (Republic Day 2023)ಕ್ಕೆ ಮುಖ್ಯ ಅತಿಥಿಯಾಗಿರುವ ಈಜಿಪ್ಟ್​ ಅಧ್ಯಕ್ಷ ಅಬ್ದೆಲ್​ ಫತ್ತಾಹ್​ ಎಲ್​-ಸಿಸಿ (Abdel Fattah el-Sisi) ಅವರು ದೆಹಲಿ ರಾಷ್ಟ್ರಪತಿ ಭವನ ತಲುಪಿದ್ದು, ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ(PM Modi) ಸ್ವಾಗತಿಸಿದರು. 2014ರಲ್ಲಿ ಈಜಿಪ್ಟ್​​ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಅಬ್ದೆಲ್ಲ ಫತ್ತಾಹ್​ ಅವರು ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ಕೊಡುತ್ತಿದ್ದಾರೆ. ಭಾರತ-ಈಜಿಪ್ಟ್​ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧ 75ನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲೇ, ಭಾರತದ 74ನೇ ಗಣರಾಜ್ಯೋತ್ಸವಕ್ಕೆ ಈಜಿಪ್ಟ್​ ಅಧ್ಯಕ್ಷರು ಆಗಮಿಸುತ್ತಿರುವುದು ಬಹಳ ಪ್ರಾಮುಖ್ಯತೆ ಪಡೆದಿದೆ. ಹಾಗೇ, ಭಾರತ-ಈಜಿಪ್ಟ್​ ರಾಜತಾಂತ್ರಿಕ, ವ್ಯಾವಹಾರಿಕ ಸಂಬಂಧದ ದೃಷ್ಟಿಯಿಂದ ಇದೊಂದು ಐತಿಹಾಸಿಕ ಭೇಟಿ ಎಂದೇ ವಿಶ್ಲೇಷಿಸಲಾಗುತ್ತಿದೆ.

ಅಬ್ದುಲ್​ ಫತ್ತಾಹ್​ ಎಲ್​-ಸಿಸಿ ಅವರು ಮಂಗಳವಾರ ಸಂಜೆ, ತಮ್ಮ ದೇಶದ ಐವರು ಸಚಿವರು, ಹಿರಿಯ ಅಧಿಕಾರಿಗಳೊಂದಿಗೆ ದೆಹಲಿಗೆ ಬಂದಿಳಿದಿದ್ದಾರೆ. ಇವರು ಜನವರಿ 27ರವರೆಗೆ ಭಾರತದಲ್ಲೇ ಇರಲಿದ್ದು, ಜ.26ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದು ಗೌರವ ಸ್ವೀಕರಿಸುವರು. ಪಥಸಂಚಲನ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೆಲ್ಲ ವೀಕ್ಷಿಸಲಿದ್ದಾರೆ.

ಇದನ್ನೂ ಓದಿ: Republic Day: ಈ ಬಾರಿ ಗಣರಾಜ್ಯೋತ್ಸವದಂದು ರಾಷ್ಟ್ರಪತಿಗೆ ಸಿಗಲಿದೆ ಸ್ವದೇಶಿ ಕುಶಾಲ ತೋಪು ಗೌರವ; ಇದು ಹೇಗೆ?

ಭಾರತ ತಲುಪಿದ ಈಜಿಪ್ಟ್​ ಅಧ್ಯಕ್ಷರನ್ನು ಸ್ವಾಗತಿಸುವ ವೇಳೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ಕೇಂದ್ರ ವಿದೇಶಾಂಗ ಇಲಾಖೆ ಸಚಿವ ಎಸ್​.ಜೈಶಂಕರ್​, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​, ಆರೋಗ್ಯ ಸಚಿವ ಮನ್ಸುಖ್​ ಮಾಂಡವಿಯಾ, ವಾಣಿಜ್ಯ ಇಲಾಖೆ ಸಚಿವ ಪಿಯುಷ್​ ಗೋಯೆಲ್​, ದೆಹಲಿ ಲೆಫ್ಟಿನೆಂಟ್​ ಗವರ್ನರ್​ ವಿ.ಕೆ. ಸಕ್ಸೇನಾ ಅವರೂ ಇದ್ದರು. ಸಕಲ ಮಿಲಿಟರಿ ಗೌರವದೊಂದಿಗೆ ಅವರನ್ನು ಬರಮಾಡಿಕೊಳ್ಳಲಾಯಿತು. ಈಜಿಪ್ಟ್​ ಅಧ್ಯಕ್ಷರು ರಾಷ್ಟ್ರಪತಿ-ಪ್ರಧಾನಿಯೊಂದಿಗೆ ವಿವಿಧ ಮೀಟಿಂಗ್​, ಮಾತುಕತೆ ನಡೆಸಲಿದ್ದಾರೆ. ಹಾಗೇ, ಉಪರಾಷ್ಟ್ರಪತಿ ಜಗದೀಪ್ ಧನಕರ್​ ಅವರನ್ನೂ ಭೇಟಿಯಾಗಲಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಗಣರಾಜ್ಯೋತ್ಸವ

Beating Retreat 2023: ತುಂತುರು ಮಳೆ ಮಧ್ಯೆ ಗಣರಾಜ್ಯೋತ್ಸವ ಸಮಾರೋಪ, ಇಲ್ಲಿವೆ ರಮಣೀಯ ಫೋಟೊಗಳು

Beating Retreat 2023: ಪ್ರಸಕ್ತ ಗಣರಾಜ್ಯೋತ್ಸವದ ಸಮಾರೋಪ ಸಮಾರಂಭವು ದೆಹಲಿ ವಿಜಯ ಚೌಕ್‌ನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಬೃಹತ್‌ ಡ್ರೋನ್‌ ಶೋ ಈ ಬಾರಿ ಗಮನ ಸೆಳೆಯಿತು.

VISTARANEWS.COM


on

Beating Retreat Ceremony
Koo

ನವದೆಹಲಿ: ಗಣರಾಜ್ಯೋತ್ಸವದಂತೆ ಗಣರಾಜ್ಯೋತ್ಸವದ ಸಮಾರೋಪ (Beating Retreat 2023) ಸಮಾರಂಭವೂ ಅದ್ಧೂರಿಯಾಗಿ ನೆರವೇರಿದೆ. ವಿಜಯ್‌ ಚೌಕ್‌ನಲ್ಲಿ ಸುಮಾರು 3,500ಕ್ಕೂ ಅಧಿಕ ಡ್ರೋನ್‌ಗಳ ಹಾರಾಟ, ಸಾಂಸ್ಕೃತಿಕ ಕಾರ್ಯಕ್ರಮ, ರಂಗಿನ ಬೆಳಕು ಸೇರಿ ಹಲವು ಚಟುವಟಿಕೆಗಳೊಂದಿಗೆ 2023ನೇ ಗಣರಾಜ್ಯೋತ್ಸವಕ್ಕೆ ಅದ್ಧೂರಿಯಾಗಿ ತೆರೆ ಎಳೆಯಲಾಯಿತು. ಕೊನೆಗೆ ಸಾರೇ ಜಹಾಂಸೆ ಅಚ್ಛಾ ಗೀತೆ ಹಾಡಲಾಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು. ತುಂತುರ ಮಳೆಯನ್ನೂ ಲೆಕ್ಕಿಸದೆ ಸಾರ್ವಜನಿಕರು ಸಮಾರೋಪ ಸಮಾರಂಭ ಕಣ್ತುಂಬಿಕೊಂಡರು. ಕಾರ್ಯಕ್ರಮದ ಕೆಲವು ಫೋಟೊಗಳು ಇಲ್ಲಿವೆ.

ದ್ರೌಪದಿ ಮುರ್ಮು
ನರೇಂದ್ರ ಮೋದಿ ರಾಜನಾಥ್‌ ಸಿಂಗ್‌ ಭಾಗಿ
ರಂಗಿನ ರಾಷ್ಟ್ರಪತಿ ಭವನ
ಬೆಳಕಿನ ಚಿತ್ತಾರ
ಸಮಾರೋಪ ಸಮಾರಂಭದ ಬ್ಯಾಂಡ್‌ ನುಡಿಸಲಾಯಿತು
ಮಳೆಯ ಮಧ್ಯೆ ಸಮಾರಂಭ ವೀಕ್ಷಿಸಿದ ಜನ
ಸೇನೆಯ ಶಿಸ್ತು
ಸೈನಿಕರ ಬ್ಯಾಂಡ್‌

ಇದನ್ನೂ ಓದಿ: Republic Day : ಗಣರಾಜ್ಯೋತ್ಸವ ಹಿನ್ನೆಲೆ ಸಿಹಿ ಹಂಚಿಕೊಂಡ ಭಾರತ, ಪಾಕಿಸ್ತಾನದ ಸೈನಿಕರು

Continue Reading

ಕರ್ನಾಟಕ

Republic Day 2023: ಭಾರತವು ಬಲಿಷ್ಠ ಸಂವಿಧಾನವನ್ನು ಹೊಂದಿದೆ: ಪ್ರಸನ್ನನಾಥ ಸ್ವಾಮೀಜಿ

Republic Day 2023: ಸ್ವಾತಂತ್ರ್ಯಾ ನಂತರ ಆಡಳಿತ ವೈಖರಿ ಯಾವ ರೀತಿ ನಡೆಯಬೇಕು ಎಂಬುದನ್ನು ತೋರಿಸಿಕೊಡುವ ಸಲುವಾಗಿ ಸಂವಿಧಾನವನ್ನು ರಚನೆ ಮಾಡಲಾಯಿತು ಎಂದು ಪ್ರಸನ್ನನಾಥ ಸ್ವಾಮೀಜಿ ಹೇಳಿದರು.

VISTARANEWS.COM


on

BGS School shivamogga rupublic day
ಬಿಜಿಎಸ್ ಶಾಲಾ ಕಾಲೇಜಿನಲ್ಲಿ ನಡೆದ 74 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿದರು.
Koo

ಶಿವಮೊಗ್ಗ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು ಎಂಬುದನ್ನು ತೋರಿಸಿಕೊಟ್ಟಂತಹ ಸಂವಿಧಾನ (Republic Day 2023) ನಮ್ಮ ದೇಶದ್ದು, ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಗುರುಪುರದಲ್ಲಿರುವ ಬಿಜಿಎಸ್ ಶಾಲಾ ಕಾಲೇಜಿನಲ್ಲಿ ನಡೆದ ೭೪ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಸ್ವಾತಂತ್ರ್ಯಾ ನಂತರ ಭಾರತದ ಪ್ರಜೆಗಳಾದ ನಾವು ಹೇಗೆ ಬದುಕಬೇಕು, ನಮ್ಮ ಆಡಳಿತ ವೈಖರಿ ಯಾವ ರೀತಿ ನಡೆಯಬೇಕು ಎಂಬುದನ್ನು ತೋರಿಸಿಕೊಡುವ ಸಲುವಾಗಿ ನಿಯಮಗಳನ್ನು ರೂಪಿಸಲಾಯಿತು. ಅದುವೇ ನಮ್ಮ ಸಂವಿಧಾನ ಎಂದರು.


ಈ ಸಂವಿಧಾನ ರಚಿಸಲು ಡಾ. ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಯಿತು. ಅವರು ನೀಡಿದಂತಹ ವರದಿಯ ಅನುಸಾರ ನಮ್ಮ ಸಂವಿಧಾನ ಜಾರಿಗೆ ಬಂದಿತು. ಅತ್ಯಂತ ಬಲಿಷ್ಠವಾದ ಮತ್ತು ಪ್ರಬುದ್ಧವಾದ ಸಂವಿಧಾನವನ್ನು ನಮ್ಮ ದೇಶ ಹೊಂದಿದೆ. ವಿಶ್ವದಲ್ಲಿಯೇ ಅತ್ಯಂತ ಉತ್ತಮವಾದ ಸಂವಿಧಾನವನ್ನು ಹೊಂದಿರುವ ದೇಶ ಭಾರತವಾಗಿದೆ ಎಂದರು.

ಇದನ್ನೂ ಓದಿ | Washington Sundar | ನಿಮ್ಮಿಷ್ಟದ ಬಿರಿಯಾನಿ ಸಿಗಲ್ಲ ಎಂದಾದರೆ ಹೋಟೆಲ್​ ಬದಲಿಸುತ್ತೀರಾ? ಸುಂದರ್ ಕೇಳಿದ್ದು ಯಾರಿಗೆ?

ಇದೇ ತಿಂಗಳು ನಾವು ಮತದಾರರ ದಿನಾಚರಣೆಯನ್ನು ಆಚರಿಸಿದ್ದೇವೆ, ನಮ್ಮ ಜನಪ್ರತಿನಿಧಿಯನ್ನು ಮತ್ತು ನಮ್ಮ ದೇಶವನ್ನು ಮುನ್ನಡೆಸುವಂತಹ ನಾಯಕರನ್ನು ಆರಿಸಿಕೊಳ್ಳುವಂತಹ ಅವಕಾಶ ಮತ್ತು ಹೊಣೆಗಾರಿಕೆ ನಮ್ಮ ಮೇಲೆಯೇ ಇದೆ. ದುರಂತವೆಂದರೆ ಮತದಾನದಲ್ಲಿ ಪಾಲ್ಗೊಳ್ಳದೇ ಇರುವುದು ನಮಗೆ ನಾವೇ ದ್ರೋಹ ಮಾಡಿಕೊಂಡಂತಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮತವನ್ನು ಚಲಾಯಿಸುವ ಮೂಲಕ ಉತ್ತಮ ಜನನಾಯಕರನ್ನು ಆಯ್ಕೆ ಮಾಡಿ ದೇಶದ ಹಾಗೂ ರಾಜ್ಯದ ಭವಿಷ್ಯವನ್ನು ಭದ್ರಗೊಳಿಸುವಂತಹ ಗುರುತರ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದರು.

ಧ್ವಜಾರೋಹಣ ನೇರವೇರಿಸಿದ ನಿವೃತ್ತ ಪ್ರಾಧ್ಯಾಪಕ ಪ್ರೊ.ಗೌರಿಶಂಕರ್ ಮಾತನಾಡಿ, ಪ್ರತಿಯೊಂದು ಮಗುವಿನಲ್ಲಿಯೂ ಕೌಶಲ್ಯ ಮತ್ತು ಜ್ಞಾನ ಅಡಗಿರುತ್ತದೆ. ಇಂದು ವಿದ್ಯಾರ್ಥಿಗಳಾಗಿರುವ ನೀವು ಭವಿಷ್ಯದಲ್ಲಿ ಮಹಾತ್ಮ ಗಾಂಧಿ, ನೆಹರೂ, ಸುಭಾಷ್ ಚಂದ್ರಬೋಸ್, ಐನ್‌ಸ್ಟೀನ್ ಸೇರಿದಂತೆ ಮಹಾನ್ ವ್ಯಕ್ತಿಗಳಾಗಬಹುದಾಗಿದೆ ಎಂದರು.

ಪ್ರತಿಯೊಬ್ಬ ವಿದ್ಯಾರ್ಥಿಯೂ ನಿರಂತರ ಶ್ರಮವನ್ನು ನಡೆಸಿದ್ದೇ ಆದಲ್ಲಿ ನಿಮ್ಮ ಗುರಿಯನ್ನು ತಲುಪಬಹುದಾಗಿದೆ. ಇದರೊಂದಿಗೆ ಅದೃಷ್ಟವೂ ಬೇಕಾಗಿದೆ. ಇದರಲ್ಲಿ ಕೇವಲ ಒಂದನ್ನು ನಂಬಿ ಕೂರುವಂತಿಲ್ಲ. ನಿಮ್ಮಲ್ಲಿರುವ ಪ್ರತಿಭೆಯನ್ನು ಹೊರ ತೆಗೆಯುವಂತಹ ಕೆಲಸವನ್ನು ಪೋಷಕರು ಹಾಗೂ ಶಿಕ್ಷಕರು ಮಾಡಬೇಕಾಗಿದೆ ಎಂದರು.

ಇದನ್ನೂ ಓದಿ | Masaba Gupta: ಫ್ಯಾಮಿಲಿ ಗೆಟ್‌ ಟು ಗೆದರ್‌ನಲ್ಲಿ ಸಂಭ್ರಮಿಸಿದ ನವದಂಪತಿ ಮಸಾಬಾ-ಸತ್ಯದೀಪ್

ವೇದಿಕೆ ಭಯವನ್ನು ಬಿಟ್ಟರೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಎಂತಹ ಸಮಾರಂಭವನ್ನು ಸಮರ್ಥವಾಗಿ ಎದುರಿಸುತ್ತೀರಿ ಎಂದು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಅವರು, ನಿಮ್ಮಲಿರುವ ಜ್ಞಾನವನ್ನು ಸದುಪಯೋಗಪಡಿಸಿಕೊಂಡು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ರಾಜ್ಯ ಹಾಗೂ ರಾಷ್ಟ್ರದ ಪ್ರಜೆಗಳಾಗಿ ಎಂದು ಹಾರೈಸಿದರು. ಸಮಾರಂಭದಲ್ಲಿ ಪ್ರಾಂಶುಪಾಲ ಎಸ್.ಎಚ್.ಸುರೇಶ್, ಉಪನ್ಯಾಸಕ ರಮೇಶ್, ಅಧ್ಯಾಪಕ ಹರೀಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಕ ರಾ.ಹ.ತಿಮ್ಮೇನಹಳ್ಳಿ ಗಣರಾಜ್ಯೋತ್ಸವ ಕಾರ‍್ಯಕ್ರಮ ನಿರ್ವಹಿಸಿದರು.

Continue Reading

ಕರ್ನಾಟಕ

Siddeshwara Swamiji: ಶಾಲಾ ವಿದ್ಯಾರ್ಥಿಗಳಿಂದ ಸಿದ್ದೇಶ್ವರ ಶ್ರೀಗಳ ಮರುಸೃಷ್ಟಿ; ದೃಶ್ಯ ರೂಪಕ ವೈರಲ್‌

Siddeshwara Swamiji: ಇತ್ತೀಚೆಗೆ ಲಿಂಗೈಕ್ಯರಾದ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಯವರ ಮರುಸೃಷ್ಟಿಯನ್ನು ಶಾಲಾ ವಿದ್ಯಾರ್ಥಿಗಳು ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ. ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಶ್ರೀಗಳ ದೃಶ್ಯ ರೂಪಕದ ಮೂಲಕ ಮಹಾಚೇತನವನ್ನು ವಿಶೇಷವಾಗಿ ಸ್ಮರಿಸಿದರು.

VISTARANEWS.COM


on

By

Koo

ವಿಜಯಪುರ: ನಡೆದಾಡುವ ದೇವರೆಂದೇ ಭಕ್ತ ಜನರು ನಂಬಿದ್ದ ಮಹಾ ಸಂತ ಸಿದ್ದೇಶ್ವರ ಸ್ವಾಮೀಜಿಯವರ (Siddeshwara Swamiji) ದೃಶ್ಯ ರೂಪಕ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಗಣರಾಜ್ಯೋತ್ಸವದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಂದ ಸಿದ್ದೇಶ್ವರ ದೃಶ್ಯ ರೂಪಕ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಇಲ್ಲಿನ ಚಡಚಣ ತಾಲೂಕಿನ ಮಣಂಕಲಗಿ ಗ್ರಾಮದ ಶಾಲಾ ವಿದ್ಯಾರ್ಥಿಗಳು, ಸಂತನೆಂದರೆ ಯಾರು ಎನ್ನುವ ಹಾಡಿನೊಂದಿಗೆ ಶ್ರೀಗಳ ದೃಶ್ಯ ರೂಪಕವನ್ನು ಮಾಡಿ ತೋರಿಸಿದ್ದಾರೆ. ತಮ್ಮ ಮಾತಿನ ಮೂಲಕವೇ ಜಗವನ್ನು ಗೆದ್ದ ಶ್ರೀಗಳು ಇಂದು ನಮ್ಮೊಂದಿಗೆ ಇಲ್ಲವಾದರೂ, ಅವರ ನಡೆ-ನುಡಿ, ಅವರ ಆದರ್ಶಗಳು ಜೀವಂತವಾಗಿವೆ.

ಇದನ್ನೂ ಓದಿ: Ola Cab Compensation: ಓಲಾ ಕ್ಯಾಬ್‌ನಲ್ಲಿ ಎಸಿ ಇಲ್ಲದ್ದಕ್ಕೆ ದೂರು, ಬೆಂಗಳೂರು ವ್ಯಕ್ತಿಗೆ 15 ಸಾವಿರ ರೂ. ಪರಿಹಾರ

ಅವರಾಡುವ ಮಾತುಗಳೆಲ್ಲ ದಿವ್ಯವಾಣಿ ಎಂತಿದ್ದವು. ೮೨ ವರ್ಷಗಳ ಸಾರ್ಥಕ ಬದುಕಿನ ಉದ್ದಕ್ಕೂ ಸ್ವಂತದ ಬಗ್ಗೆ ಸಾಸಿವೆಯಷ್ಟೂ ಯೋಚಿಸದ ಶ್ರೀಗಳು, ಜಗತ್ತಿನ ಜನರ ಒಳಿತಿನ ಬಗ್ಗೆಯೇ ಧೇನಿಸಿದರು. ತಾವು ಬಿಟ್ಟು ಹೋದ ಉದಾತ್ತ ಆದರ್ಶಗಳ ಮೂಲಕ ಶತಮಾನಗಳ ಆಚೆಗೂ ಚಿರಂತನವಾಗಿ ಉಳಿದಿದ್ದಾರೆ.

ಈಗ ಮಕ್ಕಳ ಈ ದೃಶ್ಯ ರೂಪಕ ಸಾಮಾಜಿಕ ಜಾಲತಾಣದಲ್ಲಿ ಜನರ ಮೆಚ್ಚುಗೆಯನ್ನು ಗಳಿಸುತ್ತಿದೆ. ನೆಟ್ಟಿಗರು ಮಕ್ಕಳ ನಟನೆಗೆ ಸೈ ಎಂದಿದ್ದಾರೆ.

Continue Reading

ಗಣರಾಜ್ಯೋತ್ಸವ

Republic Day : ಗಣರಾಜ್ಯೋತ್ಸವ ಹಿನ್ನೆಲೆ ಸಿಹಿ ಹಂಚಿಕೊಂಡ ಭಾರತ, ಪಾಕಿಸ್ತಾನದ ಸೈನಿಕರು

ಗಣರಾಜ್ಯೋತ್ಸವ ಖುಷಿಯಲ್ಲಿದ್ದ ಭಾರತದ ಸೈನಿಕರು ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಗಡಿ ಭದ್ರತಾ ಪಡೆಯ ಸಿಬ್ಬಂದಿಗೆ ಸಿಹಿ ಹಂಚಿದರು.

VISTARANEWS.COM


on

INDIA PAKISTAN BORDER
Koo

ನವ ದೆಹಲಿ : ದೇಶಾದ್ಯಂತ ಗುರುವಾರ (ಜನವರಿ 26ರಂದು) ಗಣರಾಜ್ಯೋತ್ಸವ (Republic Day) ಆಚರಣೆ ಮಾಡಲಾಯಿತು. ಅಂತೆಯೇ ಗಡಿಯಲ್ಲೂ ಭಾರತದ ಗಡಿ ಭದ್ರತಾ ಸಿಬ್ಬಂದಿಗಳು ಸಂಭ್ರಮಾಚರಣೆ ನಡೆಸಿದರು. ಇದೇ ವೇಳೆ ಭಾರತ ಹಾಗೂ ಪಾಕಿಸ್ತಾನದ (India-Pak soldiers) ಸೇನಾ ಸಿಬ್ಬಂದಿಗಳು ಪರಸ್ಪರ ಸಿಹಿ ಹಂಚಿಕೊಂಡು ಖುಷಿ ಹಂಚಿಕೊಂಡರು.

ಜಮ್ಮು ಕಾಶ್ಮೀರದ ಆರ್​ಎಸ್​ಪುರ ಪ್ರದೇಶದಲ್ಲಿ ಪಾಕಿಸ್ತಾನ ಹಾಗೂ ಭಾರತದ ಸೇನಾ ಸಿಬ್ಬಂದಿಗಳು ಸಿಹಿ ಹಂಚಿಕೊಂಡರು. ಭಾರತದ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರೂ ಸಿಹಿ ಸೈನಿಕರಿಗೆ ಸಿಹಿ ವಿತರಣೆ ಮಾಡಿದರು. ಈ ಮಾಹಿತಿಯನ್ನು ಅವರು ಟ್ವೀಟ್​ ಮೂಲಕ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : ವಿಸ್ತಾರ TOP 10 NEWS : ದೇಶಾದ್ಯಂತ ಗಣರಾಜ್ಯೋತ್ಸವ ಸಂಭ್ರಮದಿಂದ, ಹಾಸನದಲ್ಲಿ ʼದಳʼ ತಳಮಳವರೆಗಿನ ಪ್ರಮುಖ ಸುದ್ದಿಗಳಿವು

ಇದೇ ವೇಳೆ ಭಾರತ ಹಾಗೂ ಬಾಂಗ್ಲಾದೇಶದ ಗಡಿಭಾಗದ ಸಿಲಿಗುರಿಯ ಫುಲ್ಬಾರಿ ಪ್ರದೇಶದಲ್ಲೂ ಬಿಎಸ್​ಎಫ್​ ಹಾಗೂ ಬಾರ್ಡರ್ ಗಾರ್ಡ್​ ಬಾಂಗ್ಲಾದೇಶ್​ ಸಿಬ್ಬಂದಿಗಳು ಸಿಹಿ ಹಂಚಿಕೊಂಡರು. ಈ ಬಗ್ಗೆ ಮಾತನಾಡಿದ 176ನೇ ಬೆಟಾಲಿಯನ್​ನ ಕಂಪನಿ ಕಮಾಂಡರ್​ ಶೈಲೇಂದ್ರ ಸಿಂಗ್​, ಎರಡೂ ದೇಶಗಳ ನಡುವಿನ ಸಂಬಂಧ ವೃದ್ಧಿಗಾಗಿ ಸಿಹಿ ಹಂಚಿಕೊಂಡಿದ್ದೇವೆ ಎಂದು ಹೇಳಿದರು.

Continue Reading
Advertisement
pro kabaddi
ಕ್ರೀಡೆ1 min ago

Pro Kabaddi: ಜಿದ್ದಾಜಿದ್ದಿನ ಪಂದ್ಯದಲ್ಲಿ ಬೆಂಗಾಲ್​, ಹರ್ಯಾಣಗೆ ಒಲಿದ ಗೆಲುವು

Nagamurthy Swamy
ಕರ್ನಾಟಕ24 mins ago

Ayodhya Ram Mandir: ರಾಮಮಂದಿರ ನಿರ್ಮಾಣಕ್ಕೆ ತೆರಳಿದ ಗದಗದ ಯುವ ಶಿಲ್ಪಿ

Saika Ishaque ran through the England middle order
ಕ್ರಿಕೆಟ್37 mins ago

ENGW vs INDW; ಅಂತಿಮ ಪಂದ್ಯದಲ್ಲಿ ಗೆದ್ದು ನಿಟ್ಟುಸಿರು ಬಿಟ್ಟ ಭಾರತ ಮಹಿಳಾ ಕ್ರಿಕೆಟ್​ ತಂಡ

CLAT Result 2024 announced
ದೇಶ39 mins ago

CLAT Result 2024: ಕಾನೂನು ಪ್ರವೇಶ ಪರೀಕ್ಷೆ ಸಿಎಲ್ಎಟಿ ರಿಸಲ್ಟ್ ಪ್ರಕಟ

girl students fall ill
ಕರ್ನಾಟಕ1 hour ago

Raichur News: ಮಾನ್ವಿ ಹಾಸ್ಟೆಲ್‌ನಲ್ಲಿ ಊಟ ಸೇವಿಸಿ 14 ವಿದ್ಯಾರ್ಥಿನಿಯರು ಅಸ್ವಸ್ಥ

Fans brave the dampness, waiting for India's tour of South Africa to kick off
ಕ್ರಿಕೆಟ್1 hour ago

IND vs SA: ಮಳೆಗೆ ಕೊಚ್ಚಿ ಹೋದ ಭಾರತ-ದಕ್ಷಿಣ ಆಫ್ರಿಕಾ ಮೊದಲ ಟಿ20 ಪಂದ್ಯ

Gautam Gambhir
ಕ್ರಿಕೆಟ್2 hours ago

Gautam Gambhir: ಮತ್ತೆ ಪಾಕ್​ ಆಟಗಾರನ ಬೆಂಬಲಕ್ಕೆ ನಿಂತ ಗೌತಮ್​ ಗಂಭೀರ್

Shakti Scheme
ಕರ್ನಾಟಕ2 hours ago

Shakti Scheme: ಒಂದೇ ಆಧಾರ್‌ ಕಾರ್ಡ್‌ ಬಳಸಿ ಇಬ್ಬರ ಪ್ರಯಾಣ; ಸಿಕ್ಕಿಬಿದ್ದ ಬುರ್ಕಾಧಾರಿ ಮಹಿಳೆಯರು!

Supreme Court verdict on Article 370 and Know about this article
ದೇಶ3 hours ago

ನಾಳೆ ಆರ್ಟಿಕಲ್ 370 ರದ್ದು ತೀರ್ಪು; ಅದಕ್ಕೂ ಮೊದಲು ಈ ಸಂಗತಿ ತಿಳಿದುಕೊಂಡಿರಿ

WPL 2024 Auction
ಕ್ರಿಕೆಟ್3 hours ago

ಬಿಡ್ಡಿಂಗ್​ ಹಣದಲ್ಲಿ ತಂದೆ-ತಾಯಿಗೆ ವಿಶೇಷ ಉಡುಗೊರೆ ನೀಡಲು ಮುಂದಾದ ಕರ್ನಾಟಕದ ​ ವೃಂದಾ ದಿನೇಶ್​

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ1 week ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

DCC Bank Recruitment 2023
ಉದ್ಯೋಗ11 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ3 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Actor Shivarajkumar rejects DKS offer
ಕರ್ನಾಟಕ8 hours ago

Shiva Rajkumar: ಲೋಕಸಭೆಗೆ ಸ್ಪರ್ಧಿಸಿ ಎಂದ ಡಿಕೆಶಿ; ನಾನು ರಾಜಕೀಯಕ್ಕೆ ಬರಲ್ಲ ಎಂದ ಶಿವರಾಜ್‌ಕುಮಾರ್!

HD Kumaraswamy attack on congress
ಕರ್ನಾಟಕ10 hours ago

HD Kumaraswamy: ಬಿಜೆಪಿಗೆ ‌50 ಶಾಸಕರ ಕರ್ಕೊಂಡು ಬರ್ತೇವೆ ಎಂದಿರುವ ಕಾಂಗ್ರೆಸ್‌ ನಾಯಕ!

Dina Bhavishya
ಪ್ರಮುಖ ಸುದ್ದಿ18 hours ago

Dina Bhavishya : ಈ ರಾಶಿಯವರ ಲೆಕ್ಕಾಚಾರವು ಇಂದು ಉಲ್ಟಾ ಪಲ್ಟಾ!

read your daily horoscope predictions for december 9 2023
ಪ್ರಮುಖ ಸುದ್ದಿ2 days ago

Dina bhavishya: ಗೌಪ್ಯ ವಿಷಯ ಹೇಳುವಾಗ ಈ ರಾಶಿಯವರು ಎಚ್ಚರ!

Actress Leelavathi felicitated
South Cinema2 days ago

Actress Leelavathi: ನಮ್ಮಮ್ಮ ಲೀಲಮ್ಮ-ನಿಮ್ಮೊಳಗೆ ನಾವಮ್ಮ ಪ್ರಶಸ್ತಿ ನೀಡಿ ಗೌರವಿಸಿದ್ದ ಫಿಲ್ಮ್‌ ಚೇಂಬರ್

Actress Leelavati and Rajkumar film
South Cinema2 days ago

Actress Leelavathi: ಲೀಲಾವತಿಗೆ ಸಂದ ಪ್ರಶಸ್ತಿಗಳ ಗರಿ; ಇಲ್ಲಿದೆ ಸಿನಿ ಜರ್ನಿ ಲಿಸ್ಟ್‌

Actress Leelavati and Rajkumar film
South Cinema2 days ago

Actress Leelavathi: ತೆರೆಯಲ್ಲಿ ಮೋಡಿ ಮಾಡಿದ್ದ ಡಾ.ರಾಜ್‌ಕುಮಾರ್‌-ಲೀಲಾವತಿ ಜೋಡಿ!

PM Narenda modi and Moulvi thanveer Peera
ಕರ್ನಾಟಕ2 days ago

CM Siddaramaiah: ಮೌಲ್ವಿ ಫೋಟೊ ಹಾಕಿ ಮೋದಿ ಟಾರ್ಗೆಟ್‌ ಮಾಡಿದ ಯತ್ನಾಳ್‌ ಎಂದ ಸಿದ್ದರಾಮಯ್ಯ

Dina Bhavishya
ಪ್ರಮುಖ ಸುದ್ದಿ3 days ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ3 days ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

ಟ್ರೆಂಡಿಂಗ್‌