ಗಣರಾಜ್ಯೋತ್ಸವ
Republic Day Tableau: ಕರ್ತವ್ಯಪಥದಲ್ಲಿ 23 ಸ್ತಬ್ಧಚಿತ್ರ ಪ್ರದರ್ಶನಕ್ಕೆ ಸಿದ್ಧತೆ; ಯಾವ ರಾಜ್ಯಗಳ ಥೀಮ್ ಏನು? ಇಲ್ಲಿದೆ ಮಾಹಿತಿ
17 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು 6 ವಿವಿಧ ಸಚಿವಾಲಯಗಳ ಸ್ತಬ್ಧಚಿತ್ರಗಳು ಸೇರಿ ಒಟ್ಟು 23 ಟ್ಯಾಬ್ಲೋಗಳು ಈ ಸಲದ ಗಣರಾಜ್ಯೋತ್ಸವದಂದು ಪ್ರದರ್ಶನಗೊಳ್ಳಲಿವೆ.
ನವ ದೆಹಲಿ, ವಿಸ್ತಾರ ನ್ಯೂಸ್ ವರದಿ: ಗಣರಾಜ್ಯೋತ್ಸವಕ್ಕೆ (Republic Day 2023) ರಾಷ್ಟ್ರರಾಜಧಾನಿ ದೆಹಲಿ ಸಜ್ಜಾಗಿದೆ. ಈ ಬಾರಿ ಕರ್ತವ್ಯಪಥದಲ್ಲಿ ಸಾಗಲು 17 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಮತ್ತು ವಿವಿಧ ಸಚಿವಾಲಯಗಳ 6 ಸ್ತಬ್ಧಚಿತ್ರಗಳು (Republic Day Tableau) ಸಿದ್ಧಗೊಂಡಿವೆ. ಕರ್ನಾಟಕದಿಂದ ಈ ಬಾರಿ ನಾರಿಶಕ್ತಿ ಮತ್ತು ಮಹಿಳಾ ಸಬಲೀಕರಣದ ಸ್ತಬ್ಧಚಿತ್ರ (Republic Day Tableau) ಪ್ರದರ್ಶನಗೊಳ್ಳಲಿದೆ. ಇನ್ನುಳಿದಂತೆ ಅಸ್ಸಾಂ, ಅರುಣಾಚಲ ಪ್ರದೇಶ, ತ್ರಿಪುರ, ಪಶ್ಚಿಮ ಬಂಗಾಳ, ಜಮ್ಮು ಕಾಶ್ಮೀರ, ಲಡಾಖ್, ದಾದರ್ ನಗರ್ ಹವೇಲಿ, ಡೀಯು&ದಾಮನ್, ಗುಜರಾತ್, ಹರಿಯಾಣ, ಉತ್ತರ ಪ್ರದೇಶ, ಉತ್ತರಾಖಂಡ್, ಜಾರ್ಖಂಡ್, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳ, ಕೇಂದ್ರ ಗೃಹ ಸಚಿವಾಲಯದ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, ಕೃಷಿ ಸಚಿವಾಲಯ, ಬುಡಕಟ್ಟು ವ್ಯವಹಾರ ಹಾಗೂ ಸಂಸ್ಕೃತಿ ಸಚಿವಾಲಯಗಳಿಂದ ವಿವಿಧ ಟ್ಯಾಬ್ಲೋಗಳು ಪ್ರದರ್ಶನಗೊಳ್ಳಲಿವೆ.
ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳ ಥೀಮ್ ವಿವರ ಇಲ್ಲಿದೆ.
ಅಸ್ಸಾಂ: ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿರುವಂತಹ ಅಹೋಮ್ ಜನರಲ್ ಲಚಿತ್ ಬೋರ್ಫುಕನ್ ಮತ್ತು ಕಾಮಾಕ್ಯ ದೇವಾಲಯದಂತಹ ಸಾಂಸ್ಕೃತಿಕ ಪ್ರತಿಮೆಗಳನ್ನು ಅಸ್ಸಾಂ ರಾಜ್ಯ ಸರ್ಕಾರ ಈ ಸಲ ಕರ್ತವ್ಯಪಥ್ನಲ್ಲಿ ಪ್ರದರ್ಶನ ಮಾಡಲಿದೆ.
ಅರುಣಾಚಲ ಪ್ರದೇಶ: ಈ ರಾಜ್ಯಪ್ರವಾಸೋದ್ಯಮಕ್ಕೆ ವಿಶೇಷ ಆದ್ಯತೆ ನೀಡುತ್ತಿದ್ದು, ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಪಟ್ಟ ಸ್ತಬ್ಧಚಿತ್ರವನ್ನ ಪ್ರದರ್ಶನ ಮಾಡಲಿದೆ. 1962ರ ಥವಾಂಗ್ ಯುದ್ಧ, ರಾಜ್ಯದ ಸುಪ್ರಸಿದ್ಧ ಶಿಂಗ್ಫೋ ಹಬ್ಬ ಹಾಗೂ ಡೋನ್ಯಿ ಪೋಲೊ ವಿಮಾನ ನಿಲ್ದಾಣ ಈ ಬಾರಿಯ ಥೀಮ್ ಆಗಿರಲಿದೆ.
ತ್ರಿಪುರ: ತ್ರಿಪುರ ರಾಜ್ಯವೂ ಸಹ ಈ ಬಾರಿ ನಾರಿಶಕ್ತಿ ಥೀಮ್ ಉಳ್ಳ ಸ್ತಬ್ಧಚಿತ್ರವನ್ನ ಪ್ರದರ್ಶನ ಮಾಡಲು ಸಿದ್ಧತೆ ಮಾಡಿಕೊಂಡಿದೆ
ಪಶ್ಚಿಮ ಬಂಗಾಳ: ಈ ರಾಜ್ಯದ ವಿಶೇಷವಾಗಿರುವ ದುರ್ಗಾ ಪೂಜೆಯನ್ನು ಬಿಂಬಿಸುವ ಸ್ತಬ್ಧಚಿತ್ರವನ್ನೇ ಪಶ್ಚಿಮ ಬಂಗಾಳ ರಾಜ್ಯವು ಗಣರಾಜ್ಯೋತ್ಸವದಲ್ಲಿ ಪ್ರದರ್ಶಿಸಲಿದೆ. ಹಾಗೇ, ಇಲ್ಲಿನ ದುರ್ಗಾ ಪೂಜೆ ಯುನೆಸ್ಕೋದ ಸಾಂಸ್ಕೃತಿಕ ಪಟ್ಟಿಗೆ ಸೇರಿರುವುದನ್ನೂ ಈ ಸಲ ಟ್ಯಾಬ್ಲೋದಲ್ಲಿ ಉಲ್ಲೇಖ ಮಾಡಲಾಗಿದೆ.
ಜಮ್ಮು ಮತ್ತು ಕಾಶ್ಮೀರ: ಇಲ್ಲಿನ ಅನಂತ್ನಾಗ್ ಜಿಲ್ಲೆಯಲ್ಲಿರುವ ಹಿಂದೂ ಪವಿತ್ರ ಯಾತ್ರಾ ಸ್ಥಳವಾದ ಅಮರನಾಥ್ದ ಶಿವಲಿಂಗ ಈ ಬಾರಿ ಆ ರಾಜ್ಯದ ಟ್ಯಾಬ್ಲೋ ಆಗಿದೆ.
ದಾದರ್ ಆ್ಯಂಡ್ ನಗರ ಹವೇಲಿ: ಈ ಕೇಂದ್ರಾಡಳಿತ ಪ್ರದೇಶವೂ ಕೂಡ ಪ್ರವಾಸೋದ್ಯಮಕ್ಕೆ ಒತ್ತು ಕೊಡುವ ಸ್ತಬ್ಧಚಿತ್ರವನ್ನು ಗಣರಾಜ್ಯೋತ್ಸವದಲ್ಲಿ ಪ್ರದರ್ಶನಕ್ಕೆ ಇಟ್ಟಿದೆ. ಇಲ್ಲಿನ ಪ್ರವಾಸಿ ತಾಣಗಳ ವೈಶಿಷ್ಟ್ಯತೆ ಬಿಂಬಿಸುವ ತಮಾಮ್ ದೀವ್ ಥೀಮ್ನ್ನು ಟ್ಯಾಬ್ಲೋದಲ್ಲಿ ಅಳವಡಿಸಲಾಗಿದೆ.
ಹರಿಯಾಣ: ಭಗವಾನ್ ಶ್ರೀಕೃಷ್ಣ, ಮಹಾಭಾರತ ಕಾಲದಲ್ಲಿ ದ್ರೋಣಚಾರ್ಯರು ಅವರ ಶಿಷ್ಯರಿಗೆ ವಿದ್ಯೆ ಹೇಳಿಕೊಟ್ಟ ಪರಿ ಹಾಗೂ ಕುರುಕ್ಷೇತ್ರವನ್ನು ಬಿಂಬಿಸುವ ಸ್ತಬ್ಧಚಿತ್ರವನ್ನು ಈ ಸಲ ಹರಿಯಾಣ ಪ್ರದರ್ಶಿಸಲಿದೆ.
ಉತ್ತರಾಖಂಡ್: ಇಲ್ಲಿನ ಆಲ್ಮೋರಾ ರಾಜ್ಯದ ಹಿಂದೂಗಳ ಪವಿತ್ರ ಸ್ಥಳದಲ್ಲಿ ಒಂದಾದ ಜಾಗೇಶ್ವರ್ ಧಾಮ್ ದೇವಾಲಯ, ಜ್ಯೋತಿರ್ಲಿಂಗ ಹಾಗೂ ಸುತ್ತಲಿನ ಸ್ವಚ್ಛಂದ ಪರಿಸರವನ್ನು ಬಿಂಬಿಸುವ ಸ್ತಬ್ಧಚಿತ್ರ ಪ್ರದರ್ಶನಗೊಳ್ಳಲಿದೆ.
ಮಹಾರಾಷ್ಟ್ರ: ರಾಜ್ಯದಲ್ಲಿ ಬಹು ಪ್ರಸಿದ್ಧಿ ಪಡೆದಿರುವ ಸಾಡೆ ತೀನ್ ಶಕ್ತಿ ಪೀಠದ ಮಹತ್ವ ಹಾಗೂ ಸ್ತ್ರೀಶಕ್ತಿ ಮಹತ್ವವನ್ನ ಸಾರುವ ಟ್ಯಾಬ್ಲೋ ಪ್ರದರ್ಶನಕ್ಕೆ ಮಹಾರಾಷ್ಟ್ರ ಸಿದ್ಧತೆ ನಡೆಸಿದೆ.
ಇದನ್ನೂ ಓದಿ: Republic Day 2023: ಕರ್ನಾಟಕದ ನಾರಿಶಕ್ತಿ ಟ್ಯಾಬ್ಲೋ ಜತೆ ಉತ್ತರ ಕನ್ನಡದ ಹಾಲಕ್ಕಿ ಸುಗ್ಗಿ ಕುಣಿತ
ತಮಿಳುನಾಡು: ಈ ಬಾರಿ ರಾಜ್ಯದಲ್ಲಿನ ನಾರಿಶಕ್ತಿ ಪ್ರದರ್ಶನಕ್ಕೆ ತಮಿಳುನಾಡು ಮುಂದಾಗಿದೆ. ಸಂಗೀತ ವಾದ್ಯದೊಂದಿಗೆ ಎಂಎಸ್ ಸುಬ್ಬುಲಕ್ಷ್ಮಿ ಹಾಗೂ ವೈದ್ಯರ ಬ್ಯಾಗ್ ಹಿಡಿದಿರುವ ಡಾ ಮುತ್ತುಲಕ್ಷ್ಮಿ ರೆಡ್ಡಿ ಅಮ್ಮಯ್ಯರ್, ತಂಜಾವೂರು ಬಾಲಸರಸ್ವತಿ ನೃತ್ಯ, ಮುವಲೂರಿನ ರಾಮಾಮೃತಮ್ಮನ ಪ್ರತಿಮೆ ಇರಲಿದೆ.
ಕೇರಳ: ತೆಂಗಿನ ನಾರು ಮತ್ತು ಮರದಿಂದ ತಯಾರಾದ ಬೇಪೋರ್ ಉರು ಎಂಬ ಸಾಂಪ್ರದಾಯಿಕವಾದ ದೋಣಿ, 96 ನೇ ವಯಸ್ಸಿನಲ್ಲಿ ಸಾಕ್ಷರತೆ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದು ಉತ್ತೀರ್ಣರಾಗಿ, ನಂತರ ಕೇಂದ್ರ ಸರ್ಕಾರದಿಂದಲೂ ನಾರಿಶಕ್ತಿ ಪ್ರಶಸ್ತಿಗೆ ಭಾಜನರಾಗಿದ್ದ ಕಾರ್ತ್ಯಾಯಿನಿ ಅಮ್ಮನವರ ಪ್ರತಿಮೆಯನ್ನೊಳಗೊಂಡ ಸ್ತಬ್ಧಚಿತ್ರವನ್ನು ಕೇರಳ ಸರ್ಕಾರ ಸಿದ್ಧಪಡಿಸಿಕೊಂಡಿದೆ.
ಸಂಸ್ಕೃತಿ ಸಚಿವಾಲಯ: ಈ ಸಚಿವಾಲಯವು ಪಶ್ಚಿಮ ಬಂಗಾಳದ ಪುಡುದಿಯಾ, ಚಾವು ನೃತ್ಯ ಹಾಗೂ ಕೇರಳದ ನೃತ್ಯ ಪ್ರಕಾರಗಳನ್ನ ತನ್ನ ಸ್ತಬ್ಧಚಿತ್ರದಲ್ಲಿ ಪ್ರದರ್ಶಿಸಲಿದೆ.
ಕೇಂದ್ರ ಗೃಹ ಸಚಿವಾಲಯದ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ: ಭಾರತೀಯ ವಾಯುಪಡೆ, ಯುದ್ಧ ವಿಮಾನಗಳು ಹಾಗೂ ಭಾರತೀಯ ಸೇನೆ, ಇಲ್ಲಿನ ಮಹಿಳಾ ಸೈನಿಕರನ್ನೊಳಗೊಂಡ ನಾರಿಶಕ್ತಿ ಥೀಮ್ ಉಳ್ಳ ಸ್ತಬ್ಧಚಿತ್ರವನ್ನು ಪ್ರದರ್ಶನ ಮಾಡಲಿದೆ.
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ: Together we can do it ಎಂಬ ಘೋಷ ವಾಕ್ಯದೊಂದಿಗೆ ನಶಾ ಮುಕ್ತ ಭಾರತ ನಮ್ಮ ಗುರಿ ಎಂಬ ಟ್ಯಾಬ್ಲೋವನ್ನು ಪ್ರದರ್ಶಿಸಲಿದೆ.
ಬುಡಕಟ್ಟು ವ್ಯವಹಾರ ಹಾಗೂ ಸಂಸ್ಕೃತಿ ಸಚಿವಾಲಯ: ಈ ಸಚಿವಾಲಯವು ಆಧುನಿಕ ವಸತಿ ಶಾಲೆ (Modern residential school) ಹಾಗೂ ಬುಡಕಟ್ಟು ಜನಾಂಗದ ಮಕ್ಕಳಿಗೆ ಉಚಿತ ಶಿಕ್ಷಣ ಎಂಬುದರ ಬಗೆಗಿನ ಟ್ಯಾಬ್ಲೋ ಪ್ರದರ್ಶನ ಮಾಡಲಿದೆ.
ಗಣರಾಜ್ಯೋತ್ಸವ
Beating Retreat 2023: ತುಂತುರು ಮಳೆ ಮಧ್ಯೆ ಗಣರಾಜ್ಯೋತ್ಸವ ಸಮಾರೋಪ, ಇಲ್ಲಿವೆ ರಮಣೀಯ ಫೋಟೊಗಳು
Beating Retreat 2023: ಪ್ರಸಕ್ತ ಗಣರಾಜ್ಯೋತ್ಸವದ ಸಮಾರೋಪ ಸಮಾರಂಭವು ದೆಹಲಿ ವಿಜಯ ಚೌಕ್‌ನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಬೃಹತ್ ಡ್ರೋನ್ ಶೋ ಈ ಬಾರಿ ಗಮನ ಸೆಳೆಯಿತು.
ನವದೆಹಲಿ: ಗಣರಾಜ್ಯೋತ್ಸವದಂತೆ ಗಣರಾಜ್ಯೋತ್ಸವದ ಸಮಾರೋಪ (Beating Retreat 2023) ಸಮಾರಂಭವೂ ಅದ್ಧೂರಿಯಾಗಿ ನೆರವೇರಿದೆ. ವಿಜಯ್ ಚೌಕ್‌ನಲ್ಲಿ ಸುಮಾರು 3,500ಕ್ಕೂ ಅಧಿಕ ಡ್ರೋನ್‌ಗಳ ಹಾರಾಟ, ಸಾಂಸ್ಕೃತಿಕ ಕಾರ್ಯಕ್ರಮ, ರಂಗಿನ ಬೆಳಕು ಸೇರಿ ಹಲವು ಚಟುವಟಿಕೆಗಳೊಂದಿಗೆ 2023ನೇ ಗಣರಾಜ್ಯೋತ್ಸವಕ್ಕೆ ಅದ್ಧೂರಿಯಾಗಿ ತೆರೆ ಎಳೆಯಲಾಯಿತು. ಕೊನೆಗೆ ಸಾರೇ ಜಹಾಂಸೆ ಅಚ್ಛಾ ಗೀತೆ ಹಾಡಲಾಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು. ತುಂತುರ ಮಳೆಯನ್ನೂ ಲೆಕ್ಕಿಸದೆ ಸಾರ್ವಜನಿಕರು ಸಮಾರೋಪ ಸಮಾರಂಭ ಕಣ್ತುಂಬಿಕೊಂಡರು. ಕಾರ್ಯಕ್ರಮದ ಕೆಲವು ಫೋಟೊಗಳು ಇಲ್ಲಿವೆ.
ಇದನ್ನೂ ಓದಿ: Republic Day : ಗಣರಾಜ್ಯೋತ್ಸವ ಹಿನ್ನೆಲೆ ಸಿಹಿ ಹಂಚಿಕೊಂಡ ಭಾರತ, ಪಾಕಿಸ್ತಾನದ ಸೈನಿಕರು
ಕರ್ನಾಟಕ
Republic Day 2023: ಭಾರತವು ಬಲಿಷ್ಠ ಸಂವಿಧಾನವನ್ನು ಹೊಂದಿದೆ: ಪ್ರಸನ್ನನಾಥ ಸ್ವಾಮೀಜಿ
Republic Day 2023: ಸ್ವಾತಂತ್ರ್ಯಾ ನಂತರ ಆಡಳಿತ ವೈಖರಿ ಯಾವ ರೀತಿ ನಡೆಯಬೇಕು ಎಂಬುದನ್ನು ತೋರಿಸಿಕೊಡುವ ಸಲುವಾಗಿ ಸಂವಿಧಾನವನ್ನು ರಚನೆ ಮಾಡಲಾಯಿತು ಎಂದು ಪ್ರಸನ್ನನಾಥ ಸ್ವಾಮೀಜಿ ಹೇಳಿದರು.
ಶಿವಮೊಗ್ಗ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು ಎಂಬುದನ್ನು ತೋರಿಸಿಕೊಟ್ಟಂತಹ ಸಂವಿಧಾನ (Republic Day 2023) ನಮ್ಮ ದೇಶದ್ದು, ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಗುರುಪುರದಲ್ಲಿರುವ ಬಿಜಿಎಸ್ ಶಾಲಾ ಕಾಲೇಜಿನಲ್ಲಿ ನಡೆದ ೭೪ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಸ್ವಾತಂತ್ರ್ಯಾ ನಂತರ ಭಾರತದ ಪ್ರಜೆಗಳಾದ ನಾವು ಹೇಗೆ ಬದುಕಬೇಕು, ನಮ್ಮ ಆಡಳಿತ ವೈಖರಿ ಯಾವ ರೀತಿ ನಡೆಯಬೇಕು ಎಂಬುದನ್ನು ತೋರಿಸಿಕೊಡುವ ಸಲುವಾಗಿ ನಿಯಮಗಳನ್ನು ರೂಪಿಸಲಾಯಿತು. ಅದುವೇ ನಮ್ಮ ಸಂವಿಧಾನ ಎಂದರು.
ಈ ಸಂವಿಧಾನ ರಚಿಸಲು ಡಾ. ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಯಿತು. ಅವರು ನೀಡಿದಂತಹ ವರದಿಯ ಅನುಸಾರ ನಮ್ಮ ಸಂವಿಧಾನ ಜಾರಿಗೆ ಬಂದಿತು. ಅತ್ಯಂತ ಬಲಿಷ್ಠವಾದ ಮತ್ತು ಪ್ರಬುದ್ಧವಾದ ಸಂವಿಧಾನವನ್ನು ನಮ್ಮ ದೇಶ ಹೊಂದಿದೆ. ವಿಶ್ವದಲ್ಲಿಯೇ ಅತ್ಯಂತ ಉತ್ತಮವಾದ ಸಂವಿಧಾನವನ್ನು ಹೊಂದಿರುವ ದೇಶ ಭಾರತವಾಗಿದೆ ಎಂದರು.
ಇದನ್ನೂ ಓದಿ | Washington Sundar | ನಿಮ್ಮಿಷ್ಟದ ಬಿರಿಯಾನಿ ಸಿಗಲ್ಲ ಎಂದಾದರೆ ಹೋಟೆಲ್ ಬದಲಿಸುತ್ತೀರಾ? ಸುಂದರ್ ಕೇಳಿದ್ದು ಯಾರಿಗೆ?
ಇದೇ ತಿಂಗಳು ನಾವು ಮತದಾರರ ದಿನಾಚರಣೆಯನ್ನು ಆಚರಿಸಿದ್ದೇವೆ, ನಮ್ಮ ಜನಪ್ರತಿನಿಧಿಯನ್ನು ಮತ್ತು ನಮ್ಮ ದೇಶವನ್ನು ಮುನ್ನಡೆಸುವಂತಹ ನಾಯಕರನ್ನು ಆರಿಸಿಕೊಳ್ಳುವಂತಹ ಅವಕಾಶ ಮತ್ತು ಹೊಣೆಗಾರಿಕೆ ನಮ್ಮ ಮೇಲೆಯೇ ಇದೆ. ದುರಂತವೆಂದರೆ ಮತದಾನದಲ್ಲಿ ಪಾಲ್ಗೊಳ್ಳದೇ ಇರುವುದು ನಮಗೆ ನಾವೇ ದ್ರೋಹ ಮಾಡಿಕೊಂಡಂತಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮತವನ್ನು ಚಲಾಯಿಸುವ ಮೂಲಕ ಉತ್ತಮ ಜನನಾಯಕರನ್ನು ಆಯ್ಕೆ ಮಾಡಿ ದೇಶದ ಹಾಗೂ ರಾಜ್ಯದ ಭವಿಷ್ಯವನ್ನು ಭದ್ರಗೊಳಿಸುವಂತಹ ಗುರುತರ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದರು.
ಧ್ವಜಾರೋಹಣ ನೇರವೇರಿಸಿದ ನಿವೃತ್ತ ಪ್ರಾಧ್ಯಾಪಕ ಪ್ರೊ.ಗೌರಿಶಂಕರ್ ಮಾತನಾಡಿ, ಪ್ರತಿಯೊಂದು ಮಗುವಿನಲ್ಲಿಯೂ ಕೌಶಲ್ಯ ಮತ್ತು ಜ್ಞಾನ ಅಡಗಿರುತ್ತದೆ. ಇಂದು ವಿದ್ಯಾರ್ಥಿಗಳಾಗಿರುವ ನೀವು ಭವಿಷ್ಯದಲ್ಲಿ ಮಹಾತ್ಮ ಗಾಂಧಿ, ನೆಹರೂ, ಸುಭಾಷ್ ಚಂದ್ರಬೋಸ್, ಐನ್‌ಸ್ಟೀನ್ ಸೇರಿದಂತೆ ಮಹಾನ್ ವ್ಯಕ್ತಿಗಳಾಗಬಹುದಾಗಿದೆ ಎಂದರು.
ಪ್ರತಿಯೊಬ್ಬ ವಿದ್ಯಾರ್ಥಿಯೂ ನಿರಂತರ ಶ್ರಮವನ್ನು ನಡೆಸಿದ್ದೇ ಆದಲ್ಲಿ ನಿಮ್ಮ ಗುರಿಯನ್ನು ತಲುಪಬಹುದಾಗಿದೆ. ಇದರೊಂದಿಗೆ ಅದೃಷ್ಟವೂ ಬೇಕಾಗಿದೆ. ಇದರಲ್ಲಿ ಕೇವಲ ಒಂದನ್ನು ನಂಬಿ ಕೂರುವಂತಿಲ್ಲ. ನಿಮ್ಮಲ್ಲಿರುವ ಪ್ರತಿಭೆಯನ್ನು ಹೊರ ತೆಗೆಯುವಂತಹ ಕೆಲಸವನ್ನು ಪೋಷಕರು ಹಾಗೂ ಶಿಕ್ಷಕರು ಮಾಡಬೇಕಾಗಿದೆ ಎಂದರು.
ಇದನ್ನೂ ಓದಿ | Masaba Gupta: ಫ್ಯಾಮಿಲಿ ಗೆಟ್ ಟು ಗೆದರ್‌ನಲ್ಲಿ ಸಂಭ್ರಮಿಸಿದ ನವದಂಪತಿ ಮಸಾಬಾ-ಸತ್ಯದೀಪ್
ವೇದಿಕೆ ಭಯವನ್ನು ಬಿಟ್ಟರೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಎಂತಹ ಸಮಾರಂಭವನ್ನು ಸಮರ್ಥವಾಗಿ ಎದುರಿಸುತ್ತೀರಿ ಎಂದು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಅವರು, ನಿಮ್ಮಲಿರುವ ಜ್ಞಾನವನ್ನು ಸದುಪಯೋಗಪಡಿಸಿಕೊಂಡು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ರಾಜ್ಯ ಹಾಗೂ ರಾಷ್ಟ್ರದ ಪ್ರಜೆಗಳಾಗಿ ಎಂದು ಹಾರೈಸಿದರು. ಸಮಾರಂಭದಲ್ಲಿ ಪ್ರಾಂಶುಪಾಲ ಎಸ್.ಎಚ್.ಸುರೇಶ್, ಉಪನ್ಯಾಸಕ ರಮೇಶ್, ಅಧ್ಯಾಪಕ ಹರೀಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಕ ರಾ.ಹ.ತಿಮ್ಮೇನಹಳ್ಳಿ ಗಣರಾಜ್ಯೋತ್ಸವ ಕಾರ‍್ಯಕ್ರಮ ನಿರ್ವಹಿಸಿದರು.
ಕರ್ನಾಟಕ
Siddeshwara Swamiji: ಶಾಲಾ ವಿದ್ಯಾರ್ಥಿಗಳಿಂದ ಸಿದ್ದೇಶ್ವರ ಶ್ರೀಗಳ ಮರುಸೃಷ್ಟಿ; ದೃಶ್ಯ ರೂಪಕ ವೈರಲ್
Siddeshwara Swamiji: ಇತ್ತೀಚೆಗೆ ಲಿಂಗೈಕ್ಯರಾದ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಯವರ ಮರುಸೃಷ್ಟಿಯನ್ನು ಶಾಲಾ ವಿದ್ಯಾರ್ಥಿಗಳು ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ. ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಶ್ರೀಗಳ ದೃಶ್ಯ ರೂಪಕದ ಮೂಲಕ ಮಹಾಚೇತನವನ್ನು ವಿಶೇಷವಾಗಿ ಸ್ಮರಿಸಿದರು.
ವಿಜಯಪುರ: ನಡೆದಾಡುವ ದೇವರೆಂದೇ ಭಕ್ತ ಜನರು ನಂಬಿದ್ದ ಮಹಾ ಸಂತ ಸಿದ್ದೇಶ್ವರ ಸ್ವಾಮೀಜಿಯವರ (Siddeshwara Swamiji) ದೃಶ್ಯ ರೂಪಕ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಗಣರಾಜ್ಯೋತ್ಸವದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಂದ ಸಿದ್ದೇಶ್ವರ ದೃಶ್ಯ ರೂಪಕ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಇಲ್ಲಿನ ಚಡಚಣ ತಾಲೂಕಿನ ಮಣಂಕಲಗಿ ಗ್ರಾಮದ ಶಾಲಾ ವಿದ್ಯಾರ್ಥಿಗಳು, ಸಂತನೆಂದರೆ ಯಾರು ಎನ್ನುವ ಹಾಡಿನೊಂದಿಗೆ ಶ್ರೀಗಳ ದೃಶ್ಯ ರೂಪಕವನ್ನು ಮಾಡಿ ತೋರಿಸಿದ್ದಾರೆ. ತಮ್ಮ ಮಾತಿನ ಮೂಲಕವೇ ಜಗವನ್ನು ಗೆದ್ದ ಶ್ರೀಗಳು ಇಂದು ನಮ್ಮೊಂದಿಗೆ ಇಲ್ಲವಾದರೂ, ಅವರ ನಡೆ-ನುಡಿ, ಅವರ ಆದರ್ಶಗಳು ಜೀವಂತವಾಗಿವೆ.
ಇದನ್ನೂ ಓದಿ: Ola Cab Compensation: ಓಲಾ ಕ್ಯಾಬ್‌ನಲ್ಲಿ ಎಸಿ ಇಲ್ಲದ್ದಕ್ಕೆ ದೂರು, ಬೆಂಗಳೂರು ವ್ಯಕ್ತಿಗೆ 15 ಸಾವಿರ ರೂ. ಪರಿಹಾರ
ಅವರಾಡುವ ಮಾತುಗಳೆಲ್ಲ ದಿವ್ಯವಾಣಿ ಎಂತಿದ್ದವು. ೮೨ ವರ್ಷಗಳ ಸಾರ್ಥಕ ಬದುಕಿನ ಉದ್ದಕ್ಕೂ ಸ್ವಂತದ ಬಗ್ಗೆ ಸಾಸಿವೆಯಷ್ಟೂ ಯೋಚಿಸದ ಶ್ರೀಗಳು, ಜಗತ್ತಿನ ಜನರ ಒಳಿತಿನ ಬಗ್ಗೆಯೇ ಧೇನಿಸಿದರು. ತಾವು ಬಿಟ್ಟು ಹೋದ ಉದಾತ್ತ ಆದರ್ಶಗಳ ಮೂಲಕ ಶತಮಾನಗಳ ಆಚೆಗೂ ಚಿರಂತನವಾಗಿ ಉಳಿದಿದ್ದಾರೆ.
ಈಗ ಮಕ್ಕಳ ಈ ದೃಶ್ಯ ರೂಪಕ ಸಾಮಾಜಿಕ ಜಾಲತಾಣದಲ್ಲಿ ಜನರ ಮೆಚ್ಚುಗೆಯನ್ನು ಗಳಿಸುತ್ತಿದೆ. ನೆಟ್ಟಿಗರು ಮಕ್ಕಳ ನಟನೆಗೆ ಸೈ ಎಂದಿದ್ದಾರೆ.
ಗಣರಾಜ್ಯೋತ್ಸವ
Republic Day : ಗಣರಾಜ್ಯೋತ್ಸವ ಹಿನ್ನೆಲೆ ಸಿಹಿ ಹಂಚಿಕೊಂಡ ಭಾರತ, ಪಾಕಿಸ್ತಾನದ ಸೈನಿಕರು
ಗಣರಾಜ್ಯೋತ್ಸವ ಖುಷಿಯಲ್ಲಿದ್ದ ಭಾರತದ ಸೈನಿಕರು ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಗಡಿ ಭದ್ರತಾ ಪಡೆಯ ಸಿಬ್ಬಂದಿಗೆ ಸಿಹಿ ಹಂಚಿದರು.
ನವ ದೆಹಲಿ : ದೇಶಾದ್ಯಂತ ಗುರುವಾರ (ಜನವರಿ 26ರಂದು) ಗಣರಾಜ್ಯೋತ್ಸವ (Republic Day) ಆಚರಣೆ ಮಾಡಲಾಯಿತು. ಅಂತೆಯೇ ಗಡಿಯಲ್ಲೂ ಭಾರತದ ಗಡಿ ಭದ್ರತಾ ಸಿಬ್ಬಂದಿಗಳು ಸಂಭ್ರಮಾಚರಣೆ ನಡೆಸಿದರು. ಇದೇ ವೇಳೆ ಭಾರತ ಹಾಗೂ ಪಾಕಿಸ್ತಾನದ (India-Pak soldiers) ಸೇನಾ ಸಿಬ್ಬಂದಿಗಳು ಪರಸ್ಪರ ಸಿಹಿ ಹಂಚಿಕೊಂಡು ಖುಷಿ ಹಂಚಿಕೊಂಡರು.
ಜಮ್ಮು ಕಾಶ್ಮೀರದ ಆರ್ಎಸ್ಪುರ ಪ್ರದೇಶದಲ್ಲಿ ಪಾಕಿಸ್ತಾನ ಹಾಗೂ ಭಾರತದ ಸೇನಾ ಸಿಬ್ಬಂದಿಗಳು ಸಿಹಿ ಹಂಚಿಕೊಂಡರು. ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೂ ಸಿಹಿ ಸೈನಿಕರಿಗೆ ಸಿಹಿ ವಿತರಣೆ ಮಾಡಿದರು. ಈ ಮಾಹಿತಿಯನ್ನು ಅವರು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : ವಿಸ್ತಾರ TOP 10 NEWS : ದೇಶಾದ್ಯಂತ ಗಣರಾಜ್ಯೋತ್ಸವ ಸಂಭ್ರಮದಿಂದ, ಹಾಸನದಲ್ಲಿ ʼದಳʼ ತಳಮಳವರೆಗಿನ ಪ್ರಮುಖ ಸುದ್ದಿಗಳಿವು
ಇದೇ ವೇಳೆ ಭಾರತ ಹಾಗೂ ಬಾಂಗ್ಲಾದೇಶದ ಗಡಿಭಾಗದ ಸಿಲಿಗುರಿಯ ಫುಲ್ಬಾರಿ ಪ್ರದೇಶದಲ್ಲೂ ಬಿಎಸ್ಎಫ್ ಹಾಗೂ ಬಾರ್ಡರ್ ಗಾರ್ಡ್ ಬಾಂಗ್ಲಾದೇಶ್ ಸಿಬ್ಬಂದಿಗಳು ಸಿಹಿ ಹಂಚಿಕೊಂಡರು. ಈ ಬಗ್ಗೆ ಮಾತನಾಡಿದ 176ನೇ ಬೆಟಾಲಿಯನ್ನ ಕಂಪನಿ ಕಮಾಂಡರ್ ಶೈಲೇಂದ್ರ ಸಿಂಗ್, ಎರಡೂ ದೇಶಗಳ ನಡುವಿನ ಸಂಬಂಧ ವೃದ್ಧಿಗಾಗಿ ಸಿಹಿ ಹಂಚಿಕೊಂಡಿದ್ದೇವೆ ಎಂದು ಹೇಳಿದರು.
-
ವಿದೇಶ17 hours ago
Akshardham : ವಿದೇಶದಲ್ಲಿನ ಅತೀ ದೊಡ್ಡ ದೇವಾಲಯ ಉದ್ಘಾಟನೆಗೆ ಸಜ್ಜು; ಏನಿದರ ವಿಶೇಷ?
-
ಕರ್ನಾಟಕ15 hours ago
PSI Scam : ಪಿಎಸ್ಐ ನೇಮಕಾತಿ ಅಕ್ರಮ; ಕೊನೆಗೂ ಅಮೃತ್ ಪಾಲ್ಗೆ ಜಾಮೀನು
-
ದೇಶ10 hours ago
Swara Bhasker: ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಸ್ವರಾ ಭಾಸ್ಕರ್, ಮಗಳ ಹೆಸರು ‘ರಾಬಿಯಾ’
-
ಕರ್ನಾಟಕ10 hours ago
Weather Update: ಭಾರತದಲ್ಲಿ ಮುಗೀತು ಮಳೆಗಾಲ! ಎಷ್ಟು ಮಳೆ ಕೊರತೆ, ಬರಗಾಲ ಪಕ್ಕಾ?
-
ಅಂಕಣ17 hours ago
ವಿಧಾನಸೌಧ ರೌಂಡ್ಸ್: ಜೆಡಿಎಸ್ಗೆ ಸಂಜೀವಿನಿಯಾದ ಬಿಜೆಪಿ ಮೈತ್ರಿ; ಬೆಂಗಳೂರು ದಕ್ಷಿಣದಿಂದ ಕಾಂಗ್ರೆಸ್ ಅಚ್ಚರಿ ಅಭ್ಯರ್ಥಿ?
-
South Cinema13 hours ago
Darshan Thoogudeepa: ನಟ ದರ್ಶನ್ ವಿರುದ್ಧ ಮಂಡ್ಯದಲ್ಲಿ ರೈತರ ಆಕ್ರೋಶ; ಕ್ಷಮೆಗೆ ಆಗ್ರಹ
-
ದೇಶ15 hours ago
Army Jawan: ಯೋಧನ ಮೇಲೆ ಹಲ್ಲೆ ನಡೆಸಿ, ಬೆನ್ನಿನ ಮೇಲೆ ‘ಪಿಎಫ್ಐ’ ಎಂದು ಬರೆದ ದುರುಳರು!
-
ದೇಶ9 hours ago
Sanatan Dharma row: ತಮಿಳುನಾಡು ಸಿಎಂ ಪುತ್ರ ಉದಯನಿಧಿ ವಿರುದ್ಧ ದಿಲ್ಲಿಯಲ್ಲಿ ಸಂತರ ಪ್ರತಿಭಟನೆ, ಕ್ರಮಕ್ಕೆ ಆಗ್ರಹ