Yasin Bhatkal: ಪರಮಾಣು ಬಾಂಬ್‌‌ಗಿಂತ ಮುಂಚೆ ಸೂರತ್‌ ಮುಸ್ಲಿಮರ ಸ್ಥಳಾಂತರಕ್ಕೆ ಮುಂದಾಗಿದ್ದ ಉಗ್ರ ಯಾಸೀನ್ ಭಟ್ಕಳ್! - Vistara News

ದೇಶ

Yasin Bhatkal: ಪರಮಾಣು ಬಾಂಬ್‌‌ಗಿಂತ ಮುಂಚೆ ಸೂರತ್‌ ಮುಸ್ಲಿಮರ ಸ್ಥಳಾಂತರಕ್ಕೆ ಮುಂದಾಗಿದ್ದ ಉಗ್ರ ಯಾಸೀನ್ ಭಟ್ಕಳ್!

Yasin Bhatkal: ಇಂಡಿಯನ್ ಮುಜಾಹಿದ್ದೀನ್ ಉಗ್ರ ಯಾಸೀನ್ ಭಟ್ಕಳ್, ಸೂರತ್‌ನಲ್ಲಿ ಅಣು ಬಾಂಬ್ ಪ್ಲಾಂಟ್ ಮಾಡುವ ಮುಂಚೆ ಅಲ್ಲಿರುವ ಎಲ್ಲ ಮುಸ್ಲಿಮರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡುವ ಪ್ಲ್ಯಾನ್ ಮಾಡಿದ್ದ ಎಂಬ ಸಂಗತಿ ಸಾಬೀತಾಗಿದೆ ಎಂದು ಕೋರ್ಟ್ ಹೇಳಿದೆ.

VISTARANEWS.COM


on

Yasin Bhatkal planned evacuate muslims from Surat before Nuclear bomb
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಇಂಡಿಯನ್ ಮುಜಾಹಿದ್ದೀನ್ (Indian Mujahideen) ಉಗ್ರ ಯಾಸೀನ್ ಭಟ್ಕಳ್ (Yasin Bhatkal) ಮತ್ತು ಇತರ 10 ಜನರ ವಿರುದ್ಧ ದಿಲ್ಲಿಯ ಪಟಿಯಾಲ ಹೌಸ್ ಕೋರ್ಟ್, ಯುಎಪಿಎ (UAPA) ಅಡಿ ಭಾರತದ ವಿರುದ್ಧ ಯುದ್ಧ ಸಾರಲು ಭಯೋತ್ಪಾದಕ ಸಂಚು ರೂಪಿಸಿ ಮತ್ತು ಕಾರ್ಯಗತಗೊಳಿಸಿದ ಆರೋಪಗಳನ್ನು ಹೊರಿಸಿದೆ. ಯಾಸೀನ್ ಮತ್ತು ಆತನ ಸಹಚರರು, ಪರಮಾಣು ಬಾಂಬ್ ಪ್ಲಾಂಟ್ ಮಾಡುವುದಕ್ಕಿಂತಲೂ ಮುಂಚೆ ಸೂರತ್‌ನಿಂದ ಮುಸ್ಲಿಮರನ್ನು ಸ್ಥಳಾಂತರ ಮಾಡುವ ಪ್ಲ್ಯಾನ್ ಮಾಡಿಕೊಂಡಿದ್ದರು ಎನ್ನಲಾಗಿದೆ.

ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ಎನ್ಐಎ ಜಡ್ಜ್ ಶೈಲೇಂದ್ರ ಮಲಿಕ್, ಈ ಪ್ರಕರಣ ಸಂಬಂಧ ಮೂವರನ್ನು ಖುಲಾಸೆ ಮಾಡಿದ್ದಾರೆ. ಆದರೆ, ಯಾಸೀನ್ ಭಟ್ಕಳ್ ಭಾರತದ ವಿರುದ್ಧ ಸಮರ ಸಾರಲು ನಿರಂತರವಾಗಿ ಭಯೋತ್ಪಾದನ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆಂದು ಹೇಳಿದ್ದಾರೆ.

ಸಿಇಆರ್‌ಟಿ-ಇನ್(CERT-In) ವರದಿಯ ಪ್ರಕಾರ A-6 ಆರೋಪಿಯಿಂದ ವಶಪಡಿಸಿಕೊಂಡ ಡಿಜಿಟಲ್ ಸಾಧನಗಳಲ್ಲಿ ಬಹಳಷ್ಟು ಮಾಹಿತಿ ದೊರೆತಿದೆ. ಜಿಹಾದಿಯ ಹೆಸರಿನಲ್ಲಿ ಮುಸ್ಲಿಮೇತರರನ್ನು ಕೊಲ್ಲುವುದನ್ನು ಸಮರ್ಥಿಸುವ ಬರಹಗಳು ಸೇರಿದಂತೆ ಜಿಹಾದಿ ಸಾಹಿತ್ಯದ ವೀಡಿಯೊ ಕ್ಲಿಪ್‌ಗಳನ್ನು ಹೊಂದಿರುವ ಅನೇಕ ಫೋಲ್ಡರ್‌ಗಳಿವೆ. ಹಿಂಸಾತ್ಮಕ ಜಿಹಾದ್‌ನ ಅಗತ್ಯತೆಯ ಕುರಿತು ತಾಲಿಬ್ ಮತ್ತು ಅಲ್ ಖೈದಾ ವೀಡಿಯೊಗಳು ಕೂಡ ಕಂಡು ಬಂದಿವೆ ಎಂದು ಎಂಬುದನ್ನು ನ್ಯಾಯಾಲಯವು ಗಮನಿಸಿದೆ.

ಇದನ್ನೂ ಓದಿ: Bomb Blast Conspiracy: ಬಾಂಬ್‌ ಸ್ಫೋಟಕ್ಕೆ ಸಂಚು; ಭಟ್ಕಳದ ಅಬ್ದುಲ್ ವಾಹಿದ್ ಸಿದ್ಧಿಬಾಪಾ ದೋಷಮುಕ್ತ

ಎಲೆಕ್ಟ್ರಾನಿಕ್ಸ್ ಮತ್ತು ಡಿಜಿಟಲ್ ಸಾಧನಗಳನ್ನು ಪರಿಶೀಲಿಸಿದ ನಂತರ, ಯಾಸೀನ್ ಭಟ್ಕಳ್ ಕೇವಲ ಭಯೋತ್ಪಾದನಾ ಕೃತ್ಯಗಳ ಸಂಚು ರೂಪಿಸಿದ್ದು ಮಾತ್ರವಲ್ಲದೇ, ಐಇಡಿಗಳು ಮತ್ತು ಸ್ಪೋಟಕಗಳ ತಯಾರಿಯ ರೂವಾರಿಯೂ ಎಂಬುದು ಸಾಬೀತಾಗುತ್ತದೆ ಎಂದು ನ್ಯಾಯಾಲಯವು ಹೇಳಿದೆ. ಯಾಸೀನ್ ಭಟ್ಕಳ್ ಮತ್ತು ಮೊಹಮ್ಮದ್ ಸಾಜೀದ್(ಬಾಬಾ ಸಾಜೀದ್) ನಡುವಿನ ಚಾಟ್‌ಗಳನ್ನು ಗಮನಿಸಿದರೆ, ಸೂರತ್‌ನಲ್ಲಿ ಪರಮಾಣು ಬಾಂಬ್ ಪ್ಲಾಂಟ್ ಮಾಡುವ ಮುಂಚೆ ಅಲ್ಲಿನ ಮುಸ್ಲಿಮರನ್ನು ಬೇರೇಡೆಗೆ ಸ್ಥಳಾಂತರಿಸಲು ಪ್ಲ್ಯಾನ್ ಹಾಕಿಕೊಂಡಿದ್ದರು ಎಂಬುದು ಖಚಿತವಾಗುತ್ತದೆ ಎಂದು ನ್ಯಾಯಾಲಯವು ಹೇಳಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Narendra Modi: ಹತ್ತು ವರ್ಷ ಪ್ರಧಾನಿಯಾಗಿರುವ ನರೇಂದ್ರ ಮೋದಿ ಆಸ್ತಿ ಎಷ್ಟಿದೆ? ಪ್ರಮಾಣಪತ್ರದಲ್ಲಿದೆ ಮಾಹಿತಿ

Narendra Modi: ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳಲ್ಲಿ ಪ್ರಧಾನಿ 9.12 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದ್ದಾರೆ ಮತ್ತು 2.68 ಲಕ್ಷ ಮೌಲ್ಯದ ನಾಲ್ಕು ಚಿನ್ನದ ಉಂಗುರಗಳನ್ನು ಹೊಂದಿದ್ದಾರೆ. ಅವರ ಆದಾಯವು 2018-19ರಲ್ಲಿ 11.14 ಲಕ್ಷ ರೂ.ಗಳಿಂದ 2022-23ರಲ್ಲಿ 23.56 ಲಕ್ಷ ರೂ.ಗೆ ಏರಿದೆ.

VISTARANEWS.COM


on

Narendra Modi
Koo

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಂಗಳವಾರ ವಾರಾಣಸಿ ಲೋಕ ಸಭಾ ಕ್ಷೇತ್ರದಲ್ಲಿ ಮೂರನೇ ಬಾರಿ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಸಲ್ಲಿಸಿದ್ದ ಅಫಿಡವಿಟ್​ನಲ್ಲಿ ಅವರು ತಮ್ಮ ಆಸ್ತಿ ವಿವರಗಳನ್ನು ನೀಡಿದ್ದಾರೆ. ಅದರ ಪ್ರಕಾರ ಅವರು ಒಟ್ಟು 3 ಕೋಟಿ ರೂ.ಗಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ. ಎರಡು ಬಾರಿ ಪ್ರಧಾನಿ ಆಗಿರುವ ಬಳಿಕವೂ ಅವರು ಯಾವುದೇ ಭೂಮಿ, ಮನೆ ಅಥವಾ ಕಾರುಗಳನ್ನು ಹೊಂದಿಲ್ಲ. ಅವರು ತಮ್ಮ ಉಳಿಕೆಯ ಎಲ್ಲ ಮಾಹಿತಿಗಳನ್ನು ಚುನಾವಣಾ ಅಫಿಡವಿಟ್ ನಲ್ಲಿ ತಿಳಿಸಿದ್ದಾರೆ.

ವಾರಣಾಸಿ ಕ್ಷೇತ್ರದಿಂದ ಪ್ರಧಾನಿ ಮೋದಿ ಮಂಗಳವಾರ ನಾಮಪತ್ರ ಸಲ್ಲಿಸಿದ್ದು, ಅಫಿಡವಿಟ್​ನಲ್ಲಿ ಅವರು ಒಟ್ಟು 3.02 ಕೋಟಿ ರೂ.ಗಳ ಆಸ್ತಿ ಪ್ರಕಟಿಸಿದ್ದಾರೆ. ಅದರಲ್ಲಿ ಬಹುಪಾಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿದೆ. ಅಂದರೆ 2.86 ಕೋಟಿ ರೂ.ಗಳ ಸ್ಥಿರ ಠೇವಣಿ ಇಟ್ಟಿದ್ದಾರೆ. (Fixed Deposit) ಅವರ ಕೈಯಲ್ಲಿ ಒಟ್ಟು ₹ 52,920 ನಗದು ಗಾಂಧಿನಗರ ಮತ್ತು ವಾರಣಾಸಿಯ ಎರಡು ಬ್ಯಾಂಕ್ ಖಾತೆಗಳಲ್ಲಿ ಉಳಿದ ₹ 80,304 ಉಳಿಕೆಯಿದೆ.

ಪ್ರಧಾನಿ ಮೋದಿಯ ನಾಮಪತ್ರದ ​ ವಿವರ ಇಲ್ಲಿದೆ

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳಲ್ಲಿ ಪ್ರಧಾನಿ 9.12 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದ್ದಾರೆ ಮತ್ತು 2.68 ಲಕ್ಷ ಮೌಲ್ಯದ ನಾಲ್ಕು ಚಿನ್ನದ ಉಂಗುರಗಳನ್ನು ಹೊಂದಿದ್ದಾರೆ. ಅವರ ಒಟ್ಟು ಆದಾಯ 2018-19ರಲ್ಲಿ ಇದ್ದ 11.14 ಲಕ್ಷ ರೂ.ಗಳಿಂದ 2022-23ರಲ್ಲಿ 23.56 ಲಕ್ಷ ರೂಪಾಯಿಗೆ ಏರಿದೆ.

ಶೈಕ್ಷಣಿಕ ಅರ್ಹತೆ

ಪ್ರಧಾನಿ ಮೋದಿ 1978 ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಆರ್ಟ್ಸ್ ಮತ್ತು 1983ರಲ್ಲಿ ಗುಜರಾತ್ ವಿಶ್ವವಿದ್ಯಾಲಯದಿಂದ ಮಾಸ್ಟರ್ ಆಫ್ ಆರ್ಟ್ಸ್ ಪೂರ್ಣಗೊಳಿಸಿದ್ದೇನೆ ಎಂದು ಪ್ರಧಾನಿ ಘೋಷಿಸಿದ್ದಾರೆ. ಅವರ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳು ಬಾಕಿ ಉಳಿದಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: PM Narendra Modi: ಪಿಎಂ ಮೋದಿ ನಾಮಪತ್ರ ಅನುಮೋದಿಸಿದ ನಾಲ್ವರ ಹಿನ್ನೆಲೆ ಏನು?

ಮೂರನೇ ಬಾರಿಗೆ ಸಂಸದರಾಗಿ ಆಯ್ಕೆಯಾಗುತ್ತಿರುವ ವಾರಾಣಸಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, “ನಾನು ಭಾವಪರವಶನಾಗಿದ್ದೇನೆ. ನಿಮ್ಮ ಪ್ರೀತಿಯ ನೆರಳಿನಲ್ಲಿ 10 ವರ್ಷಗಳು ಹೇಗೆ ಕಳೆದವು ಎಂದು ನನಗೆ ತಿಳಿದಿರಲಿಲ್ಲ. ‘ಆಜ್ ಮಾ ಗಂಗಾ ನೆ ಮುಜೆ ಗಾಡ್ ಲೇ ಲಿಯಾ ಹೈ’ (ಇಂದು, ತಾಯಿ ಗಂಗಾ ನನ್ನನ್ನು ದತ್ತು ತೆಗೆದುಕೊಂಡಿದ್ದಾಳೆ) ಎಂದು ಹೇಳಿದ್ದಾರೆ. ವಾರಣಾಸಿಯಲ್ಲಿ ಜೂನ್ 1 ರಂದು ಏಳನೇ ಹಂತದ ಮತದಾನ ನಡೆಯಲಿದೆ.

ನಾಮಪತ್ರ ಸಲ್ಲಿಕೆ ವೇಳೆ ಪಿಎಂ ಮೋದಿ ಪಕ್ಕದಲ್ಲಿ ಕುಳಿತಿದ್ದ ಸಾಧು ಯಾರು?

ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಮಂಗಳವಾರ ವಾರಾಣಾಸಿ ಲೋಕಸಭೆ ಕ್ಷೇತ್ರದಿಂದ ನಾಮಪತ್ರ (Narendra Modi nomination) ಸಲ್ಲಿಸಿದರು. ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅವರ ಜೊತೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ಸೇರಿದಂತೆ ಇನ್ನೂ ಹಲವರಿದ್ದರು. ಆದರೆ ಮುಖ್ಯವಾಗಿ ಒಂದು ಮುಖ ಎಲ್ಲರ ಗಮನ ಸೆಳೆಯಿತು. ಅದು ಮೋದಿಯವರ ಪಕ್ಕದಲ್ಲಿಯೇ ಕುಳಿತಿದ್ದ, ಗಡ್ಡಧಾರಿ ಸಾಧು. ಮೋದಿ ಹಾಗೂ ಈ ವ್ಯಕ್ತಿ ಆತ್ಮೀಯವಾಗಿ ಮಾತನಾಡಿಕೊಳ್ಳುತ್ತಿದ್ದುದು ಕ್ಯಾಮೆರಾದಲ್ಲಿ ಸೆರೆಯಾಯಿತು.

ಹಾಗಾದರೆ ಅವರು ಯಾರು? ವಾರಾಣಸಿ ಕ್ಷೇತ್ರದಲ್ಲಿ ಪ್ರಧಾನಿ ಸಲ್ಲಿಸಿದ ನಾಮಪತ್ರವನ್ನು ಅನುಮೋದಿಸಿದ ನಾಲ್ವರಲ್ಲಿ ಈ ಸಾಧುವೂ ಒಬ್ಬರು. ಅವರ ಹೆಸರು ಪಂಡಿತ ಗಣೇಶ್ವರ ಶಾಸ್ತ್ರಿ (Pandit Ganeshwar Shastri). ಇತರ ಮೂವರೆಂದರೆ ಬೈಜನಾಥ್ ಪಟೇಲ್, ಲಾಲ್‌ಚಂದ್ ಕುಶ್ವಾಹಾ ಮತ್ತು ಸಂಜಯ್ ಸೋಂಕರ್.

ಯಾರು ಈ ಗಣೇಶ್ವರ ಶಾಸ್ತ್ರಿ? ಇವರು ಇತ್ತೀಚೆಗೆ ನಡೆದ ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರಸಿದ್ಧ ವಿದ್ವಾಂಸರು. ವಿದ್ವಾಂಸ ರಾಜೇಶ್ವರ ಶಾಸ್ತ್ರಿಯವರ ಎರಡನೇ ಮಗ. ವಿದ್ವಾನ್‌ ಗಣೇಶ್ವರ ಶಾಸ್ತ್ರಿ ಅವರು ಕಾಶಿಯಲ್ಲಿ ನೆಲೆಸಿದ್ದು, ಧರ್ಮ ಪ್ರಚಾರ ಮತ್ತು ಬೋಧನೆಗೆ ಜೀವನವನ್ನು ಸಮರ್ಪಿಸಿಕೊಂಡಿದ್ದಾರೆ. ಅವರು ಸಾಂಗ್ವೇದ ವಿದ್ಯಾಲಯದಲ್ಲಿ ಗೀರ್ವಾಣವಾಗ್‌ವರ್ಧಿನಿ ಸಭೆಯ ನಿರ್ಧಾರಗಳನ್ನು ಶ್ರದ್ಧೆಯಿಂದ ಅನುಸರಿಸುತ್ತಾರೆ ಮತ್ತು ಜ್ಯೋತಿಷ್ಯ, ಆಯುರ್ವೇದ ಮತ್ತು ಆಚರಣೆಗಳಲ್ಲಿ ತಮ್ಮ ಪರಿಣತಿಯ ಮೂಲಕ ಜನರಿಗೆ ಸಹಾಯ ಮಾಡುತ್ತಿರುತ್ತಾರೆ.

ಜನವರಿ 22ರಂದು ನಡೆದ ಅಯೋಧ್ಯೆ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾ ಸಮಾರಂಭವು ಪಂಡಿತ ಗಣೇಶ್ವರ ಶಾಸ್ತ್ರಿ ದ್ರಾವಿಡ ಅವರು ನಿರ್ಧರಿಸಿದ 84 ಸೆಕೆಂಡುಗಳ ಕಾಲ ಶುಭ ಮುಹೂರ್ತದಲ್ಲಿ ನಡೆದಿತ್ತು. ಈ ಸಮಯವನ್ನು ರಾಮ ಮಂದಿರದ ಅಡಿಪಾಯ ಹಾಕಲು ಸಹ ಬಳಸಲಾಗಿತ್ತು. ಇದು ಈ ಮಂದಿರ ಯೋಜನೆಯಲ್ಲಿ ಈ ವಿದ್ವಾಂಸರು ಎಷ್ಟು ಆಳವಾಗಿ ತೊಡಗಿಕೊಂಡಿದ್ದಾರೆ ಎಂಬುದನ್ನು ಎತ್ತಿ ತೋರಿಸುತ್ತದೆ.

ಗಣೇಶ್ವರ ಶಾಸ್ತ್ರಿ ಅವರ ಪೂರ್ವಜರು ಗಂಗಾನದಿಯ ದಡದ ಕಾಶಿಯ ರಾಮಘಾಟ್ ಪ್ರದೇಶದಲ್ಲಿ ನೆಲೆಸಿದ್ದಾರೆ. ಗಣೇಶ್ವರ ಶಾಸ್ತ್ರಿ ಹುಟ್ಟಿದ್ದು ಇಲ್ಲೇ. ಇವರ ಕುಟುಂಬ ದಕ್ಷಿಣ ಭಾರತದಿಂದ ಬಂದು ಕಾಶಿಯಲ್ಲಿ ನೆಲೆಸಿದೆ. ಅವರ ಹಿರಿಯ ಸಹೋದರ, ಗೌರವಾನ್ವಿತ ವಿದ್ವಾಂಸರಾದ ಪಂಡಿತ ವಿಶ್ವೇಶ್ವರ ಶಾಸ್ತ್ರಿ ಅವರು ಕಾಶಿಯಲ್ಲಿ ವಾಸಿಸುತ್ತಿದ್ದಾರೆ. ಶೈಕ್ಷಣಿಕ ಶ್ರೇಷ್ಠತೆ ಈ ಕುಟುಂಬದ ಪರಂಪರೆಯಾಗಿದೆ.

ಮೋದಿ ನಾಮಪತ್ರ ಅನುಮೋದಿಸಿದ ಇನ್ನು ಮೂವರೆಂದರೆ ಬೈಜನಾಥ್ ಪಟೇಲ್, ಹಿರಿಯ RSS ಸ್ವಯಂಸೇವಕ, OBC ಸಮುದಾಯಕ್ಕೆ ಸೇರಿದವರು. ಲಾಲ್‌ಚಂದ್ ಕುಶ್ವಾಹಾ, ಇವರು ಕೂಡ ಒಬಿಸಿ ಸಮುದಾಯದವರು. ಸಂಜಯ್ ಸೋಂಕರ್, ಇವರು ದಲಿತ ಸಮುದಾಯದಿಂದ ಬಂದವರು

Continue Reading

ಪ್ರಮುಖ ಸುದ್ದಿ

Income Tax Office : ಆದಾಯ ತೆರಿಗೆ ಕಚೇರಿಯಲ್ಲಿ ಬೆಂಕಿ ಅವಘಡ; ಒಂದು ಸಾವು; ಇಲ್ಲಿದೆ ವಿಡಿಯೊ

Income Tax Office: ಆದಾಯ ತೆರಿಗೆ ಸಿಆರ್ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ನಮಗೆ ಮಧ್ಯಾಹ್ನ 3.07 ಕ್ಕೆ ಕರೆ ಬಂತು. ನಾವು ಒಟ್ಟು 21 ಅಗ್ನಿಶಾಮಕ ಟೆಂಡರ್ ಗಳನ್ನು ರವಾನಿಸಿದ್ದೇವೆ. ಹೆಚ್ಚಿನ ತನಿಖೆಗಾಗಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ನಾವು ಸ್ಥಳೀಯ ಪೊಲೀಸರಿಗೆ ಈ ವಿಷಯದ ಬಗ್ಗೆ ಮಾಹಿತಿ ನೀಡಿದ್ದೇವೆ ಎಂದು ದೆಹಲಿ ಅಗ್ನಿಶಾಮಕ ಸೇವೆಗಳ ಅಧಿಕಾರಿಗಳು ತಿಳಿಸಿದ್ದಾರೆ.

VISTARANEWS.COM


on

Income Tax office
Koo

ನವ ದೆಹಲಿ: ಇಲ್ಲಿ ಐಟಿಒ ಪ್ರದೇಶದ (Income Tax Office) ಕೇಂದ್ರ ಕಂದಾಯ ಕಟ್ಟಡದಲ್ಲಿ ಮಂಗಳವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟವರು 46 ವರ್ಷದ ಪುರುಷನಾಗಿದ್ದು, ಅಲ್ಲಿ ಕಚೇರಿ ಸೂಪರಿಂಟೆಂಡೆಂಟ್ ಆಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬಳಿಕ ಸಿಲುಕಿ ಹಾಕಿಕೊಂಡಿದ್ದ ಏಳು ಜನರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆದಾಯ ತೆರಿಗೆ ಸಿಆರ್ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ನಮಗೆ ಮಧ್ಯಾಹ್ನ 3.07 ಕ್ಕೆ ಕರೆ ಬಂತು. ನಾವು ಒಟ್ಟು 21 ಅಗ್ನಿಶಾಮಕ ಟೆಂಡರ್ ಗಳನ್ನು ರವಾನಿಸಿದ್ದೇವೆ. ಹೆಚ್ಚಿನ ತನಿಖೆಗಾಗಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ನಾವು ಸ್ಥಳೀಯ ಪೊಲೀಸರಿಗೆ ಈ ವಿಷಯದ ಬಗ್ಗೆ ಮಾಹಿತಿ ನೀಡಿದ್ದೇವೆ ಎಂದು ದೆಹಲಿ ಅಗ್ನಿಶಾಮಕ ಸೇವೆಗಳ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕಟ್ಟಡವು ಹಳೆಯ ಪೊಲೀಸ್ ಪ್ರಧಾನ ಕಚೇರಿಯ ಎದುರು ಇದೆ/ ಇದನ್ನು ಇನ್ನೂ ಅದರ ಕೆಲವು ಘಟಕಗಳಿಗೆ ರಕ್ಷಣಾ ಪಡೆ ಹೋಗಿದೆ ಎಂದು ಅವರು ತಿಳಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವೀಡಿಯೊಗಳಲ್ಲಿ ಕಟ್ಟಡದ ನಿವಾಸಿಗಳು ಬೆಂಕಿಯಿಂದ ತಪ್ಪಿಸಿಕೊಳ್ಳುವುದಕ್ಕೆ ಕಿಟಕಿಯ ಅಂಚಿನ ಮೇಲೆ ಆಶ್ರಯ ಪಡೆಯುತ್ತಿರುವುದು ಕಂಡುಬಂದಿದೆ.

ಬೆಂಕಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ.

ಕಟ್ಟಡದ ಮೂರನೇ ಮಹಡಿಯಿಂದ ಐದು ಪುರುಷರು ಮತ್ತು ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು ಏಳು ಜನರನ್ನು ಡಿಎಫ್ಎಸ್ ಸುರಕ್ಷಿತವಾಗಿ ರಕ್ಷಿಸಿದೆ ಎಂದು ಸಂಜೆ 4 ಗಂಟೆಗೆ ನಮಗೆ ಮಾಹಿತಿ ಸಿಕ್ಕಿತು. ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ ಎಂದು ಡಿಎಫ್ಎಸ್ ಮುಖ್ಯಸ್ಥ ಅತುಲ್ ಗರ್ಗ್ ಹೇಳಿದ್ದಾರೆ.

ಅಗ್ನಿಶಾಮಕ ದಳದವರು ಸ್ಥಳಕ್ಕೆ ತಲುಪುತ್ತಿದ್ದಂತೆ, ಅವರು ಕಟ್ಟಡವನ್ನು ಖಾಲಿ ಮಾಡಿದರು. ವಿಷಕಾರಿ ಹೊಗೆಯಿಂದ ರಕ್ಷಿಸಲು ನಾವು ಗ್ಯಾಸ್ ಮಾಸ್ಕ್ ಬಳಸಬೇಕಾಯಿತು. ಆದರೆ ಕಟ್ಟಡದಲ್ಲಿದ್ದ ಎಲ್ಲರನ್ನೂ ಸುರಕ್ಷಿತವಾಗಿ ರಕ್ಷಿಸಲಾಯಿತು. ಬೆಂಕಿಯ ನಿಜವಾದ ಕಾರಣವನ್ನು ತಿಳಿಯಲು ಹೆಚ್ಚಿನ ತನಿಖೆಗಾಗಿ ನಾವು ಪ್ರದೇಶದ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ ಎಂದು ಗರ್ಗ್ ಹೇಳಿದರು.

ಭಾನುವಾರ, ದೆಹಲಿಯ ಬವಾನಾ ಪ್ರದೇಶದ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ ಮತ್ತು ಭಾರಿ ಬೆಂಕಿಯಲ್ಲಿ ಕನಿಷ್ಠ ಏಳು ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Billboard Collapse : 14 ಸಾವಿಗೆ ಕಾರಣವಾದ ಹೋರ್ಡಿಂಗ್ ಕಂಪನಿ ಮಾಲೀಕನ ಮೇಲಿದೆ ಅತ್ಯಾಚಾರ ಸೇರಿದಂತೆ 20ಕ್ಕೂ ಹೆಚ್ಚು ಕೇಸ್​ಗಳು

ಎಲ್ಲರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಸಫ್ದರ್ಜಂಗ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಗಾಯಗೊಂಡ ಇತರರನ್ನು ಸುರೇಶ್, ರಾಕೇಶ್, ಪಂಕಜ್ ಪಾಲ್ ಮತ್ತು ಘನ್ ಶ್ಯಾಮ್ ಎಂದು ಗುರುತಿಸಲಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್ ನಿಂದ ಬಂದ ಕಿಡಿಯು ಅಲ್ಲಿ ಇರಿಸಲಾಗಿದ್ದ ರಾಸಾಯನಿಕಗಳಿಗೆ ಬೆಂಕಿ ಹೊತ್ತಿಕೊಳ್ಳಲು ಕಾರಣವಾಯಿತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

Continue Reading

ಪ್ರಮುಖ ಸುದ್ದಿ

Billboard Collapse : 14 ಸಾವಿಗೆ ಕಾರಣವಾದ ಹೋರ್ಡಿಂಗ್ ಕಂಪನಿ ಮಾಲೀಕನ ಮೇಲಿದೆ ಅತ್ಯಾಚಾರ ಸೇರಿದಂತೆ 20ಕ್ಕೂ ಹೆಚ್ಚು ಕೇಸ್​ಗಳು

ಜಾಹೀರಾತು ಏಜೆನ್ಸಿ ಮಾಲೀಕ ಭಿಂಡೆ 2009ರಲ್ಲಿ ಮುಲುಂಡ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಈ ವೇಳೆ ತಮ್ಮ ಅಫಿಡವಿಟ್​ನಲ್ಲಿ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ ಮತ್ತು ನೆಗೋಷಿಯಬಲ್ ಇನ್​ಸ್ಟ್ರುಮೆಂಟ್​ ಆ್ಯಕ್ಟ್​ (ಚೆಕ್ ಬೌನ್ಸ್ ​ ಪ್ರಕರಣ ) ಅಡಿಯಲ್ಲಿ ತಮ್ಮ ವಿರುದ್ಧ 23 ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದ್ದ.

VISTARANEWS.COM


on

Billboard Collapse
Koo

ನವದೆಹಲಿ: ಮುಂಬೈನ ಘಾಟ್​ಕೋಪರ್​ನಲ್ಲಿ ಸೋಮವಾರ ಧೂಳು ಬಿರುಗಾಳಿ ಹಾಗೂ ಮಳೆ ಸುರಿದಾಗ ಹೋರ್ಡಿಂಗ್ ಕುಸಿತು ಬಿದ್ದು (Billboard Collapse) 14 ಮಂದಿ ಮೃತಪಟ್ಟು 74ಕ್ಕೂ ಹೆಚ್ಚು ಮಂದಿ ಗಾಯೊಂಡಿದ್ದರು. ಈ ಹಿನ್ನೆಲೆಯಲ್ಲಿ ಹೋರ್ಡಿಂಗ್ ಸ್ಥಾಪಿಸಿದ್ದ ಇಗೊ ಮೀಡಿಯಾ ಕಂಪನಿಯ ಮಾಲೀಕ ಭವೇಶ್ ಭಿಂಡೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಚ್ಚರಿಯೆಂರೆ ಭವೇಶ್​ಗೆ ಇದು ಮಾಮೂಲಿ. ಯಾಕೆಂಧರೆ ಅವರ ವಿರುದ್ಧ ಅತ್ಯಾಚಾರ ಸೇರಿದಂತೆ 20 ಕ್ಕೂ ಹೆಚ್ಚು ಪ್ರಕರಣಗಳಿವೆ. ಘಟನ ಬಳಿಕ ಭಿಂಡೆ ಪರಾರಿಯಾಗಿದ್ದು, ಆತನ ಸೆಲ್ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಜಾಹೀರಾತು ಏಜೆನ್ಸಿ ಮಾಲೀಕ ಭಿಂಡೆ 2009ರಲ್ಲಿ ಮುಲುಂಡ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಈ ವೇಳೆ ತಮ್ಮ ಅಫಿಡವಿಟ್​ನಲ್ಲಿ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ ಮತ್ತು ನೆಗೋಷಿಯಬಲ್ ಇನ್​ಸ್ಟ್ರುಮೆಂಟ್​ ಆ್ಯಕ್ಟ್​ (ಚೆಕ್ ಬೌನ್ಸ್ ​ ಪ್ರಕರಣ ) ಅಡಿಯಲ್ಲಿ ತಮ್ಮ ವಿರುದ್ಧ 23 ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದ್ದ.

ಈ ವರ್ಷದ ಜನವರಿಯಲ್ಲಿ ಮುಲುಂಡ್ ಪೊಲೀಸ್ ಠಾಣೆಯಲ್ಲಿ ಭಿಡೆ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಚಾರ್ಜ್​ ಶೀಟ್​ ಕೂಡ ಸಲ್ಲಿಸಲಾಗಿದೆ. ಹೋರ್ಡಿಂಗ್​ಗಳು ಮತ್ತು ಬ್ಯಾನರ್​​ ಸ್ಥಾಪಿಸಲು ಭಿಂಡೆ ಭಾರತೀಯ ರೈಲ್ವೆ ಮತ್ತು ಮುಂಬೈ ನಾಗರಿಕ ಸಂಸ್ಥೆ, ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಯಿಂದ ಹಲವಾರು ಗುತ್ತಿಗೆಗಳನ್ನು ಪಡೆದಿದ್ದಾನೆ. ಎರಡೂ ಸಂಸ್ಥೆಗಳ ನಿಯಮಗಳನ್ನು ಹಲವಾರು ಬಾರಿ ಉಲ್ಲಂಘಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ. ಆತನ ಕಂಪನಿ ವಿರುದ್ಧ ಮರ ವಿಷ ಹಾಕಿದ ಮತ್ತು ಮರ ಕಡಿಯುವ ಪ್ರಕರಣಗಳಲ್ಲಿ ದೂರು ದಾಖಲಾಗಿದೆ.

ಅತ್ಯಂತ ದೊಡ್ಡ ಹೋರ್ಡಿಂಗ್​

ಸೋಮವಾರ ಪೆಟ್ರೋಲ್​ ಸ್ಟೇಷನ್​ ಮೇಲೆ ಮೇಲೆ ಬಿದ್ದ ಹೋರ್ಡಿಂಗ್ 120X120 ಅಡಿ ರಚನೆಯಾಗಿದ್ದು, ಅದು ಲಿಮ್ಕಾ ಬುಕ್ ಆಫ್ ರೆಕಾರ್ಡ್​ನಲ್ಲಿ ಸ್ಥಾನ ಪಡೆಯುವಷ್ಟು ದೊಡ್ಡದಾಗಿದೆ. ಅಂದ ಹಾಗೆ ಬಿಎಂಸಿ 40X40 ಅಡಿಗಿಂತ ಹೆಚ್ಚಿನ ಗಾತ್ರದ ಜಾಹೀರಾತು ಫಲಕಗಳನ್ನು ಅನುಮತಿಸುವುದಿಲ್ಲ. ಹೀಗಾಗಿ ನಿಯಮ ಮೀರಿ ಅಳವಡಿಸಿರುವುದು ಸ್ಪಷ್ಟ.

ಇದನ್ನೂ ಓದಿ: Dog Attack : ಮನೆಯಲ್ಲಿ ಮಲಗಿಸಿದ್ದ ಐದು ತಿಂಗಳ ಮಗುವನ್ನು ಕಚ್ಚಿ ಕೊಂದ ಬೀದಿ ನಾಯಿ!

ನಗರದಲ್ಲಿನ ಎಲ್ಲಾ ಅಕ್ರಮ ಹೋರ್ಡಿಂಗ್ ಗಳ ವಿರುದ್ಧ ಕ್ರಮ ಕೈಗೊಳ್ಳಲು ನಾವು ಆದೇಶಿಸಿದ್ದೇವೆ. ನಾವು ಇಂದು ಅಭಿಯಾನ ಪ್ರಾರಂಭಿಸುತ್ತಿದ್ದೇವೆ. ಅನುಮತಿ ಪಡೆಯದ ಕಾರಣ ಈ ಪ್ರಕರಣದಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಹೋರ್ಡಿಂಗ್ ಗೋಚರಿಸುವಂತೆ ಕೆಲವು ಮರಗಳನ್ನು ಕತ್ತರಿಸಲಾಗಿದೆ ಎಂಬ ದೂರು ಸಹ ಬಂದಿದೆ. ಈ ಸಂಬಂಧ ನಾವು ಪ್ರಕರಣ ದಾಖಲಿಸಿದ್ದೇವೆ ಎಂದು ಬಿಎಂಸಿ ಆಯುಕ್ತ ಭೂಷಣ್ ಗಗ್ರಾನಿ ಸುದ್ದಿಗಾರರಿಗೆ ತಿಳಿಸಿದರು.

ಬಿಎಂಸಿ ಹೆಚ್ಚುವರಿ ಆಯುಕ್ತ ಸುಧಾಕರ್ ಶಿಂಧೆ ಮಾತನಾಡಿ, ನಿಯಮ ಉಲ್ಲಂಘನೆ ವಿವಾದ ಬಗ್ಗೆ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಲೋಪಗಳು ಎಲ್ಲಿ ಸಂಭವಿಸಿವೆ ಎಂಬುದು ತನಿಖೆಯಿಂದ ಬಹಿರಂಗವಾಗಲಿದೆ. ಗಾಯಗೊಂಡ ಜನರನ್ನು ನೋಡಿಕೊಳ್ಳುವುದು ಬಿಎಂಸಿಯ ಪ್ರಸ್ತುತ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ 5 ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದಾರೆ. ಗಾಯಗೊಂಡವರ ಚಿಕಿತ್ಸೆಯ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಹೇಳಿದ್ದಾರೆ.

Continue Reading

ಪ್ರವಾಸ

Ooty Tour: ಪ್ರತಿ ಸೀಸನ್‌ನಲ್ಲೂ ಭಿನ್ನ ಅನುಭವ! ನಿಮ್ಮ ಊಟಿ ಪ್ರವಾಸ ಯಾವಾಗ?

ಊಟಿಗೆ ಯಾವ ಸಮಯದಲ್ಲಿ ಬೇಕಾದರೂ ಭೇಟಿ ನೀಡಬಹುದು. ಇಲ್ಲಿ ಪ್ರತಿಯೊಂದು ತಿಂಗಳೂ ಏನಾದರೂ ಒಂದು ವಿಶೇಷ ಇದ್ದೇ ಇರುತ್ತದೆ. ಹೀಗಾಗಿ ನಿಮ್ಮ ಆಸಕ್ತಿಗೆ ಅನುಗುಣವಾಗಿ ಊಟಿಗೆ ಪ್ರವಾಸ (Ooty Tour) ಹೊರಡುವ ಯೋಜನೆ ಮಾಡಬಹುದು. ಊಟಿಯ ಅದ್ಭುತಗಳ ಬಗ್ಗೆ ಇಲ್ಲಿದೆ ಮಾಹಿತಿ.

VISTARANEWS.COM


on

By

Ooty Tour
Koo

ಬೇಸಿಗೆಯ ಬಿಸಿಲಿನ ಕಣ್ತಪ್ಪಿಸಿ ಪ್ರಕೃತಿಯ ಮಡಿಲಲ್ಲಿ ಕಾಲ ಕಳೆಯಬೇಕು ಎನ್ನುವ ಆಸೆ ಮನದಲ್ಲಿ ಮೂಡಿದಾಗ ಕೂಡಲೇ ನೆನಪುಗುವುದು ದಕ್ಷಿಣ ಭಾರತದ (southern India) ಸುಪ್ರಸಿದ್ಧ ಪ್ರವಾಸಿ ತಾಣ ಊಟಿ (Ooty Tour). ದಕ್ಷಿಣ ಭಾರತದ ನೀಲಗಿರಿ ಬೆಟ್ಟಗಳಲ್ಲಿ ( Nilgiri Hills) ನೆಲೆಯಾಗಿರುವ ಸುಂದರವಾದ ಗಿರಿಧಾಮ ಪ್ರದೇಶವಾಗಿರುವ ಊಟಿಯಲ್ಲಿ ಕಣ್ತುಂಬಿಕೊಳ್ಳಲು ಸಾಕಷ್ಟು ಪ್ರದೇಶಗಳಿವೆ. ಪ್ರಶಾಂತವಾದ ಭೂದೃಶ್ಯಗಳು, ಆಹ್ಲಾದಕರ ಹವಾಮಾನ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಇದು ಹೊಂದಿದೆ.

ಪ್ರವಾಸ ಪ್ರಿಯರಿಗಾಗಿ ಊಟಿ ಏನನ್ನಾದರೂ ನೀಡುತ್ತದೆ. ಅದು ಪ್ರಕೃತಿಯ ಪ್ರೀತಿ, ಸಾಹಸದ ಪ್ರಜ್ಞೆ ಅಥವಾ ಶಾಂತಿ ಮತ್ತು ಶಾಂತತೆಯ ಹಂಬಲವನ್ನು ತಣಿಸುತ್ತದೆ. ಪ್ರತಿ ಋತುವಿಗೂ ತನ್ನದೇ ಆದ ವಿಶೇಷತೆಯನ್ನು ಒದಗಿಸುತ್ತದೆ. ವರ್ಷವಿಡೀ ಬೇಸಿಗೆಯು ಬಹುವರ್ಣದ ಹೂವುಗಳನ್ನು ತರುತ್ತದೆ. ಮಳೆಗಾಲ ಬಂದೊಡನೆ ಎಲ್ಲವನ್ನೂ ಮಂಜಿನಿಂದ ಆವರಿಸುವಂತೆ ಮಾಡುತ್ತದೆ. ಶರತ್ಕಾಲದಲ್ಲಿ ಉಲ್ಲಾಸಕರವಾದ ಗಾಳಿ ಮತ್ತು ಚಳಿಗಾಲದ ತಂಪು ಅಪ್ಪುಗೆಯನ್ನು ಮರೆಯಲಾಗದು.

ಗಿರಿಧಾಮಗಳ ರಾಣಿ ಎಂದೂ ಕರೆಯಲಾಗುವ ಊಟಿಗೆ ವರ್ಷಪೂರ್ತಿ ಭೇಟಿ ಮಾಡಬಹುದು. ಪ್ರತಿ ಋತುವಿನಲ್ಲಿ ಇದು ತನ್ನದೇ ಆದ ವೈಭವವನ್ನು ತೊಂಬಿಕೊಂಡು ತನುಮನಕ್ಕೆ ಸಂತೋಷವನ್ನು ಉಣಬಡಿಸುತ್ತದೆ. ನಿಖರವಾಗಿ ಯಾವಾಗ ಹೋಗಬೇಕೆಂದು ತಿಳಿಯುವುದು ಖಂಡಿತವಾಗಿಯೂ ನಮ್ಮ ಪ್ರಯಾಣದ ಅನುಭವವನ್ನು ಸುಧಾರಿಸುತ್ತದೆ. ಊಟಿಯಲ್ಲಿ ಪ್ರತಿ ಸೀಸನ್ ಏನು ವಿಶೇಷ ಎಂಬ ಮಾಹಿತಿ ಇಲ್ಲಿದೆ.


ಬೇಸಿಗೆಯ ವೈಭವ; ಮಾರ್ಚ್‌ನಿಂದ ಜೂನ್

ಊಟಿಗೆ ಪ್ರವಾಸ ಹೋಗಲು ಅತ್ಯಂತ ಜನಪ್ರಿಯ ಸಮಯವೆಂದರೆ ಬೇಸಿಗೆಯ ತಿಂಗಳು. ಮಾರ್ಚ್‌ನಿಂದ ಜೂನ್‌ವರೆಗೆ ಹಗಲಿನ ತಾಪಮಾನವು ಇಲ್ಲಿ 15 ಡಿಗ್ರಿ ಸೆಲ್ಸಿಯಸ್ ನಿಂದ 25 ಡಿಗ್ರಿ ಸೆಲ್ಸಿಯಸ್‌ವರೆಗೆ ಇರುತ್ತದೆ. ಇದು ಬಿಸಿಯಾದ ಬಯಲು ಪ್ರದೇಶಗಳಿಗೆ ಹೋಲಿಸಿದರೆ ಇದು ತುಂಬಾ ಆರಾಮದಾಯಕವಾಗಿದೆ. ಈ ಅವಧಿಯಲ್ಲಿ ಹವಾಮಾನವು ತಂಪಾಗಿರುತ್ತದೆ. ಇದು ಹಸಿರು ಕಣಿವೆಗಳು, ಹೂಬಿಡುವ ಹೂವುಗಳು ಮತ್ತು ಬೀಳುವ ಕ್ಯಾಸ್ಕೇಡ್‌ಗಳನ್ನು ಅನ್ವೇಷಿಸಲು ಸೂಕ್ತವಾಗಿದೆ. ಪ್ರತೀ ವರ್ಷ ಮೇ ತಿಂಗಳಲ್ಲಿ, ಬೊಟಾನಿಕಲ್ ಗಾರ್ಡನ್ಸ್‌ನಲ್ಲಿ ಅದ್ಭುತವಾದ ಪುಷ್ಪ ಪ್ರದರ್ಶನವನ್ನು ನಡೆಸಲಾಗುತ್ತದೆ.


ಮಾನ್ಸೂನ್‌ ಮ್ಯಾಜಿಕ್ -ಜುಲೈನಿಂದ ಸೆಪ್ಟೆಂಬರ್

ಒಮ್ಮೆ ಮಳೆ ಬಂದರೆ ಮತ್ತೆ ಎಲ್ಲವೂ ಹಸಿರು ಬಣ್ಣಕ್ಕೆ ತಿರುಗುತ್ತದೆ. ಆದರೆ ಈ ಬಾರಿ ಹೆಚ್ಚು ತೀವ್ರವಾಗಿ ಇಡೀ ಪ್ರದೇಶವು ಸೊಂಪಾದ ಸಸ್ಯಗಳಿಂದ ಆವೃತವಾಗಿದೆ. ಎಷ್ಟರಮಟ್ಟಿಗೆ ಎಂದರೆ ಕೆಲವೊಮ್ಮೆ ಇಡೀ ಪಟ್ಟಣವು ದಟ್ಟವಾದ ಎಲೆಗಳ ಅಡಿಯಲ್ಲಿ ಕಣ್ಮರೆಯಾಗುತ್ತದೆ. ಈ ತಿಂಗಳುಗಳಲ್ಲಿ ಜುಲೈನಿಂದ ಸೆಪ್ಟೆಂಬರ್ ವರೆಗೆ, ಊಟಿಯ ಮೇಲೆ ಮಧ್ಯಮ ಅಥವಾ ಭಾರೀ ಮಳೆ ಬೀಳುತ್ತದೆ. ಇದು ಸುತ್ತಲಿನ ಎಲ್ಲವನ್ನೂ ರಿಫ್ರೆಶ್ ಮಾಡಿದಂತೆ ಭಾಸವಾಗುತ್ತದೆ. ಬೇಸಿಗೆಯ ಶಾಖದ ಅನಂತರ ಮತ್ತೊಮ್ಮೆ ಜೀವಂತ ತಳೆದಂತೆ ಕಾಣುತ್ತದೆ. ಮಳೆಯ ಕಾರಣದಿಂದ ಹೊರಾಂಗಣ ಚಟುವಟಿಕೆಗಳು ಸೀಮಿತವಾಗಿರಬಹುದು. ಆದರೆ ಮಂಜಿನಿಂದ ಆವೃತವಾದ ಪರ್ವತಗಳ ಮೂಲಕ ಹರಿಯುವ ತೊರೆಗಳ ಸೌಂದರ್ಯ ಇಮ್ಮಡಿಯಾಗುತ್ತದೆ.


ಶರತ್ಕಾಲದ ಅದ್ಭುತ- ಅಕ್ಟೋಬರ್‌ನಿಂದ ನವೆಂಬರ್

ಮಳೆಗಾಲ ಅವಧಿ ಮುಗಿದ ಅನಂತರ, ಶರತ್ಕಾಲದಲ್ಲಿ ಆಕಾಶವು ಮತ್ತೆ ನೀಲಿ ಬಣ್ಣಕ್ಕೆ ತಿರುಗುತ್ತದೆ. ಚಳಿಗಾಲ ಪ್ರಾರಂಭವಾಗುವವರೆಗೆ ಪ್ರಶಾಂತ ಪರಿಸರ ಮನಸ್ಸಿಗೆ ಹಿತ ನೀಡುತ್ತದೆ. ಈ ಸಮಯದಲ್ಲಿ ತಾಪಮಾನವು 10 ಡಿಗ್ರಿಯಿಂದ 20 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ. ಹೀಗಾಗಿ ಇದು ಚಟುವಟಿಕೆಗಳಿಗೆ ಸೂಕ್ತವಾಗಿರುತ್ತದೆ. ಟ್ರೆಕ್ಕಿಂಗ್, ಬೋಟಿಂಗ್, ದೃಶ್ಯವೀಕ್ಷಣೆ ನಡೆಸಲು ಸೂಕ್ತ ಸಮಯವಾಗಿರುತ್ತದೆ. ಹವಾಮಾನವು ಸಾಕಷ್ಟು ಸ್ನೇಹಪರವಾಗಿರುತ್ತದೆ. ಛಾಯಾಗ್ರಹಣಕ್ಕೆ ಇದು ಸೂಕ್ತ ಸಮಯ. ಈ ಸಂದರ್ಭದಲ್ಲಿ ಊಟಿ ಮಾರಿಯಮ್ಮನ್ ದೇವಾಲಯದ ಉತ್ಸವವನ್ನು ಕಣ್ತುಂಬಿಕೊಳ್ಳಲು ಮರೆಯಬೇಡಿ.


ಚಳಿಗಾಲದ ವಂಡರ್ ಲ್ಯಾಂಡ್ (ಡಿಸೆಂಬರ್‌ನಿಂದ ಫೆಬ್ರವರಿ)

ಚಳಿಗಾಲದಲ್ಲಿ ರಾತ್ರಿಯ ಸಮಯದಲ್ಲಿ ತಾಪಮಾನವು ತೀವ್ರವಾಗಿ ಇಳಿಯುತ್ತದೆ. ಸುಮಾರು 5 ಡಿಗ್ರಿ ಸೆಲ್ಸಿಯಸ್ ಗಿಂತಲೂ ಕೆಳಗೆ ಇಳಿಯುತ್ತದೆ. ಮುಂಜಾನೆಯು ಸಾಮಾನ್ಯವಾಗಿ ಮಂಜಿನಿಂದ ಕೂಡಿರುತ್ತದೆ. ಆದರೆ ಇಡೀ ದಿನ ತಂಪಾಗಿರುತ್ತದೆ.

ಇದನ್ನೂ ಓದಿ: Kochi Tour: ವಾರಾಂತ್ಯದ ಪ್ರವಾಸಕ್ಕೆ ಕೊಚ್ಚಿ ಸೂಕ್ತ ತಾಣ; ಏನೇನಿವೆ ಆಕರ್ಷಣೆ?

ಸಾಕಷ್ಟು ಬಿಸಿಲು ಸಿಗುತ್ತದೆ. ಆದರೂ ಪ್ರದೇಶದ ಸುತ್ತಲಿನ ದಟ್ಟವಾದ ಕಾಡುಗಳಿಂದಾಗಿ ಸೂರ್ಯನ ಬೆಳಕು ಅಷ್ಟೇನೂ ನೆಲದ ಮಟ್ಟವನ್ನು ತಲುಪುವುದಿಲ್ಲ, ಆದ್ದರಿಂದ ಚಹಾ ತೋಟಗಳ ಸುತ್ತಲೂ ಮಾಂತ್ರಿಕ ಸ್ಪರ್ಶ ನೀಡಿದಂತೆ ಭಾಸವಾಗುತ್ತದೆ. ಸಾಹಸಿಗಳು ನೀಲಗಿರಿಯ ಅತೀ ಎತ್ತರದ ಪ್ರದೇಶವಾದ ದೊಡ್ಡಬೆಟ್ಟ ಶಿಖರದಲ್ಲಿ ಚಾರಣಕ್ಕೆ ಹೋಗಬಹುದು ಅಥವಾ ವಿವಿಧ ಜಾತಿಯ ಪ್ರಾಣಿಗಳು, ಪಕ್ಷಿಗಳು, ಸರೀಸೃಪಗಳು, ಕೀಟಗಳನ್ನು ಮುದುಮಲೈ ವನ್ಯಜೀವಿ ಅಭಯಾರಣ್ಯದಲ್ಲಿ ಅನ್ವೇಷಿಸಬಹುದು. ಜನವರಿಯಲ್ಲಿ ಇಲ್ಲಿ ವಾರ್ಷಿಕ ಚಹಾ ಪ್ರವಾಸೋದ್ಯಮ ಉತ್ಸವ ನಡೆಯುತ್ತದೆ. ಇಲ್ಲಿ ಸಾಂಸ್ಕೃತಿಕ ಪ್ರದರ್ಶನಗಳನ್ನು ಆನಂದಿಸಬಹುದು, ವಿವಿಧ ಮಾದರಿಯ ಚಹಾಗಳನ್ನು ಸವಿಯಬಹುದು.

Continue Reading
Advertisement
Narendra Modi
ಪ್ರಮುಖ ಸುದ್ದಿ20 mins ago

Narendra Modi: ಹತ್ತು ವರ್ಷ ಪ್ರಧಾನಿಯಾಗಿರುವ ನರೇಂದ್ರ ಮೋದಿ ಆಸ್ತಿ ಎಷ್ಟಿದೆ? ಪ್ರಮಾಣಪತ್ರದಲ್ಲಿದೆ ಮಾಹಿತಿ

Viral Video
ವೈರಲ್ ನ್ಯೂಸ್28 mins ago

Viral Video: 25 ವರ್ಷಗಳ ಹಿಂದೆ ಬಿಬಿಸಿ ನ್ಯೂಸ್ ಥೀಮ್ ಟ್ಯೂನ್ ಹುಟ್ಟಿಕೊಂಡಿದ್ದು ಹೇಗೆ ಗೊತ್ತೇ?

Chaya Singh
ಕರ್ನಾಟಕ35 mins ago

Chaya Singh: ನಟಿ ಛಾಯಾ ಸಿಂಗ್ ಮನೆಯಲ್ಲಿ ಕಳ್ಳತನ; ಚಿನ್ನಾಭರಣ ಕದ್ದಿದ್ದ ಮನೆಕೆಲಸದಾಕೆ ಬಂಧನ

former MLC Arun Shahapur latest Statement
ಬೆಂಗಳೂರು36 mins ago

Bengaluru News: ಕಾಂಗ್ರೆಸ್ ಆಡಳಿತದಲ್ಲಿ ಶೈಕ್ಷಣಿಕ ದುರಾಡಳಿತ; ಅರುಣ್ ಶಹಾಪುರ ಆರೋಪ

HD Revanna Released first reaction after release will be acquitted of all charges
ರಾಜಕೀಯ50 mins ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

Income Tax office
ಪ್ರಮುಖ ಸುದ್ದಿ52 mins ago

Income Tax Office : ಆದಾಯ ತೆರಿಗೆ ಕಚೇರಿಯಲ್ಲಿ ಬೆಂಕಿ ಅವಘಡ; ಒಂದು ಸಾವು; ಇಲ್ಲಿದೆ ವಿಡಿಯೊ

Billboard Collapse
ಪ್ರಮುಖ ಸುದ್ದಿ1 hour ago

Billboard Collapse : 14 ಸಾವಿಗೆ ಕಾರಣವಾದ ಹೋರ್ಡಿಂಗ್ ಕಂಪನಿ ಮಾಲೀಕನ ಮೇಲಿದೆ ಅತ್ಯಾಚಾರ ಸೇರಿದಂತೆ 20ಕ್ಕೂ ಹೆಚ್ಚು ಕೇಸ್​ಗಳು

Stabbing Case
ಕರ್ನಾಟಕ1 hour ago

Stabbing Case: ಕುಡಿದ ಅಮಲಿನಲ್ಲಿ ಭುಜ ತಗುಲಿದ್ದಕ್ಕೆ ಕಿರಿಕ್; ವ್ಯಕ್ತಿಗೆ ಚೂರಿಯಿಂದ ಮನಸೋ ಇಚ್ಛೆ ಇರಿದ ಯುವಕರು

Ooty Tour
ಪ್ರವಾಸ1 hour ago

Ooty Tour: ಪ್ರತಿ ಸೀಸನ್‌ನಲ್ಲೂ ಭಿನ್ನ ಅನುಭವ! ನಿಮ್ಮ ಊಟಿ ಪ್ರವಾಸ ಯಾವಾಗ?

WhatsApp Update
ತಂತ್ರಜ್ಞಾನ1 hour ago

WhatsApp Update: ಅಪ್‌ಡೇಟ್ ಆಗಲಿದೆ ವಾಟ್ಸ್‌ಆಪ್ ಚಾನೆಲ್; ಹೊಸ ಆಪ್ಶನ್‌ ಏನೇನು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

HD Revanna Released first reaction after release will be acquitted of all charges
ರಾಜಕೀಯ50 mins ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20243 hours ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20247 hours ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ7 hours ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು8 hours ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ15 hours ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ1 day ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ1 day ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

Prajwal Revanna Case Revanna bail plea to be heard Judge reprimands SIT cops for their behaviour
ಕ್ರೈಂ1 day ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಎಸ್‌ಐಟಿ ಪೊಲೀಸರ ವರ್ತನೆಗೆ ಜಡ್ಜ್‌ ಗರಂ!

Karnataka Weather Forecast
ಮಳೆ1 day ago

Karnataka Weather : ನಾಳೆ ಮುಕ್ಕಾಲು ಕರ್ನಾಟಕದಲ್ಲಿ ಬಿರುಗಾಳಿ ಜತೆಗೆ ವಿಪರೀತ ಮಳೆ

ಟ್ರೆಂಡಿಂಗ್‌