ನನ್ನ ಹೆಸರನ್ನು ಯಾರೂ ಮಿಸ್​​​ಯೂಸ್​​ ಮಾಡಬಾರದು: ಹುಚ್ಚ ವೆಂಕಟ್​​ - Vistara News

ರಾಜಕೀಯ

ನನ್ನ ಹೆಸರನ್ನು ಯಾರೂ ಮಿಸ್​​​ಯೂಸ್​​ ಮಾಡಬಾರದು: ಹುಚ್ಚ ವೆಂಕಟ್​​

ಸೋಮವಾರ ಸ್ಫೋಟವಾಗುವಂತೆ ಶಾಲೆಗೆ ಬಾಂಬ್​​ ಇಡಲಾಗಿದ್ದು, ಬೆಳಗ್ಗೆ 10 ಗಂಟೆಗೆ ಸ್ಫೋಟವಾಗುತ್ತದೆ ಎಂದು ಹುಚ್ಚ ವೆಂಕಟ್​​ ಹೆಸರಿನ ಇಮೇಲ್​​​ ವಿಳಾಸದಿಂದ ಸಂದೇಶ ಬಂದಿತ್ತು.

VISTARANEWS.COM


on

huccha venkat actor
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಒಡೆತನದ ಶಾಲೆಗೆ ಬಾಂಬ್​​ ಬೆದರಿಕೆ ಇಮೇಲ್​​​​​​ ಕುರಿತು ಚಿತ್ರನಟ ಹುಚ್ಚ ವೆಂಕಟ್​​​ ಪ್ರತಿಕ್ರಿಯೆ ನೀಡಿದ್ದಾರೆ.

ರಾಜರಾಜೇಶ್ವರಿ ನಗರದಲ್ಲಿರುವ ನ್ಯಾಷನಲ್​ ಹಿಲ್​​ ವ್ಯೂ ಪಬ್ಲಿಕ್​​ ಶಾಲೆಗೆ ಭಾನುವಾರ ಸಂಜೆ 6.28ಕ್ಕೆ ಹಾಗೂ ಸೋಮವಾರ ಬೆಳಗ್ಗೆ 8.48ಕ್ಕೆ ಇನ್ನೊಂದು ಇಮೇಲ್​​​ ಮಾಡಲಾಗಿತ್ತು.

ಸೋಮವಾರ ಬೆಳಗ್ಗೆ 10 ಗಂಟೆಗೆ ಸ್ಫೋಟವಾಗುವಂತೆ ಬಾಂಬ್​​​ ಇಡಲಾಗಿದೆ. ಈ ಬಾಂಬ್​​ ಪ್ರಭಾವ ಸುತ್ತಲಿನ 200 ಮೀಟರ್​​​ನಷ್ಟಿರುತ್ತದೆ ಎಂದು ಕೊನೆಗೆ ಬಾಂಬ್​​ ಟೆರರಿಸ್ಟ್​​ ಎಂದು ತಿಳಿಸಲಾಗಿತ್ತು. ಎರಡೂ ಇಮೇಲ್​​ಗಳನ್ನು Huchaswamyvenkat96@gmail.com ಇಮೇಲ್​ ವಿಳಾಸದಿಂದ ಮಾಡಲಾಗಿತ್ತು.

ಇದನ್ನೂ ಓದಿ | ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಒಡೆತನದ ಶಾಲೆಗೆ ಬಾಂಬ್‌ ಬೆದರಿಕೆ

ಈ ಕುರಿತು ಹುಚ್ಚ ವೆಂಕಟ್​​ ವಿಡಿಯೋವೊಂದರ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. `ನನ್ನ ಹೆಸರನ್ನು ದುರುಪಯೋಗಪಡಿಸಿಕೊಳ್ಳುವವರಿಗಾಗಿ ಈ ಮೆಸೇಜ್​​. ನನ್ನ ಹೆಸರನ್ನು ಯಾವುದೇ ಕಾರಣಕ್ಕೆ ಯಾರೋ ದುರುಪಯೋಗಪಡಿಸಿಕೊಳ್ಳಬಾರದು. ನನ್ನ ಹೆಸರಿನಲ್ಲಿ ಇಮೇಲ್​​​ ಕಳಿಸಬಾರದು. ಬಾಯ್​​ ಫ್ರಮ್​​ ಫೈಟಿಂಗ್​​ &​​​ ಫೈರಿಂಗ್​​ ಸ್ಟಾರ್​​ ಹುಚ್ಚ ವೆಂಕಟ್​​. ಇದನ್ನು, ನನ್ನ ಹೆಸರನ್ನು ಯಾರು ಮಿಸ್​​ಯೂಸ್​​ ಮಾಡ್ತಾರೊ ಅವರಿಗೆ ಹೇಳುತ್ತಿದ್ದೇನೆ’ ಎಂದಿದ್ದಾರೆ.

ಪೋಷಕರಿಗೆ ಕರೆ

ಶಾಲೆಗೆ ಬಾಂಬ್​ ಬೆದರಿಕೆ ಬಂದ ಕೂಡಲೆ ಮಕ್ಕಳನ್ನು ಮತ್ತೊಂದು ಬ್ಲಾಕ್​​ಗೆ ಸ್ಥಳಾಂತರ ಮಾಡಲಾಯಿತು. ಅನೇಕ ಪೋಷಕರು ಶಾಲೆಯ ಬಳಿ ಆಗಮಿಸಲು ಮುಂದಾದರು. ಈ ಸಮಯದಲ್ಲಿ ಡಿ.ಕೆ. ಶಿವಕುಮಾರ್​​ ಪುತ್ರಿ ಗೇಟ್​​ ಬಳಿಯಲ್ಲಿ ನಿಂತು, ಮಕ್ಕಳೆಲ್ಲರೂ ಸುರಕ್ಷಿತರಾಗಿದ್ದಾರೆ, ಭಯಪಡುವ ಅಗತ್ಯವಿಲ್ಲ ಎಂದು ಧೈರ್ಯ ಹೇಳಿದರು. ಅನೇಕ ಪೋಷಕರಿಗೆ ಕರೆ ಮಾಡಿ ಸಮಾಧಾನ ಹೇಳಿದರು.

ಭದ್ರತೆ ಲೋಪವಿಲ್ಲ ಎಂದ ಶಿವಕುಮಾರ್​​

ಬಾಂಬ್​​ ಬೆದರಿಕೆ ಕುರಿತು ಇಮೇಲ್​​ ಬಂದಿರುವುದನ್ನು ಖಚಿತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​​, ಇಮೇಲ್​​ ನೋಡಿದ ತಕ್ಷಣ ಪ್ರಾಂಶುಪಾಲರು ನಮಗೆ ತಿಳಿಸಿದ್ದಾರೆ. ಕೂಡಲೆ ಪೊಲೀಸ್​ ಆಯುಕ್ತರ ಜತೆ ಮಾತನಾಡಿದೆವು, ಈಗಾಗಲೆ ಬಹುತೇಕ ತಪಾಸಣೆ ಮುಕ್ತಾಯವಾಗಿದೆ. ಶಾಲೆಯಲ್ಲಿ ಸಾಕಷ್ಟು ಭದ್ರತಾ ವ್ಯವಸ್ಥೆಯಿದೆ, ಯಾರೂ ಭಯಪಡುವ ಅಗತ್ಯವಿಲ್ಲ. ಭಾನುವಾರ ಬೇರೆ ಪರೀಕ್ಷೆಯೊಂದು ಶಾಲೆಯಲ್ಲಿ ನಡೆದಿತ್ತು, ಹೀಗಾಗಿ ಹೊರಗಿನವರು ಆಗಮಿಸಿದ್ದರು. ಸಮಸ್ಯೆ ಆಗುವುದು ಬೇಡ ಎಂದು ಪೊಲೀಸರಿಗೆ ತಿಳಿಸಿದ್ದೇವೆ. ಪೋಷಕರು ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ | ಹುಚ್ಚ ವೆಂಕಟ್​​ ಹೆಸರಿನಲ್ಲಿ ಶಾಲೆಗೆ ಬಾಂಬ್​​ ಬೆದರಿಕೆ: ಎರಡು ಇಮೇಲ್​​​ ಮಾಡಿರುವ ದುಷ್ಕರ್ಮಿಗಳು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Lok Sabha Election 2024

Lok Sabha Election 2024: ಕೋಲಾರದಲ್ಲಿ ಕಾಂಗ್ರೆಸ್‌ ಅಚ್ಚರಿ ಅಭ್ಯರ್ಥಿ? ಪ್ರಜಾಧ್ವನಿ ಯಾತ್ರೆಯೂ ಮುಂದೂಡಿಕೆ

Lok Sabha Election 2024: ಎರಡು ಬಣಗಳಿಗೂ ಒಪ್ಪಿಗೆ ಆಗುವ ಮೂರು ಹೆಸರುಗಳನ್ನು ಶಿಫಾರಸು ಮಾಡಲಾಗುತ್ತಿದೆ. ಅದರಲ್ಲಿ ಕೆ.ವಿ ಗೌತಮ್ ಹೆಸರು ಪ್ರಮುಖವಾಗಿದೆ.

VISTARANEWS.COM


on

kolar kv gautam ramesh kumar kh muniyappa
Koo

ಕೋಲಾರ: ಕೋಲಾರದಲ್ಲಿ (Kolar) ಲೋಕಸಭೆ ಚುನಾವಣೆ (Lok Sabha Election 2024) ಸ್ಪರ್ಧೆಗೆ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿ ಕೂತಿರುವ ಹಿನ್ನೆಲೆಯಲ್ಲಿ, ಉಭಯ ಬಣಗಳ ತಿಕ್ಕಾಟದಿಂದ ಬೇಸತ್ತಿರುವ ಹೈಕಮಾಂಡ್‌ ಅಚ್ಚರಿ ಅಭ್ಯರ್ಥಿಯನ್ನು ಮುನ್ನೆಲೆಗೆ ತರಲಿದೆ ಎನ್ನಲಾಗಿದೆ.

ಟಿಕೆಟ್ ಆಯ್ಕೆ ಕಗ್ಗಂಟು ಇಂದು ಬಗೆಹರಿಸಲು ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಕಠಿಣ ನಿರ್ಧಾರ ಮಾಡಿದ್ದು, ಕೆ.ವಿ ಗೌತಮ್ ಎಂಬುವವರ ಹೆಸರು ಶಿಫಾರಸು ಮಾಡಲು ಚಿಂತಿಸಿದ್ದಾರೆ. ಕೆ.ವಿ ಗೌತಮ್ ಸದ್ಯ ಬೆಂಗಳೂರು ಕೇಂದ್ರ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿದ್ದಾರೆ.

ಕೋಲಾರದಲ್ಲಿ ಪ್ರಾತಿನಿಧ್ಯಕ್ಕಾಗಿ ರಮೇಶ್ ಕುಮಾರ್ (Ramesh Kumar) ಬಣ ಹಾಗೂ ಸಚಿವ ಕೆ.ಎಚ್ ಮುನಿಯಪ್ಪ‌ (KH Muniyappa) ಟೀಮ್‌ ನಡುವೆ ಜಿದ್ದಾಜಿದ್ದಿ ಇದೆ. ಹೀಗಾಗಿ ಎರಡು ಬಣಗಳಿಗೂ ಒಪ್ಪಿಗೆ ಆಗುವ ಮೂರು ಹೆಸರುಗಳನ್ನು ಶಿಫಾರಸು ಮಾಡಲಾಗುತ್ತಿದೆ. ಅದರಲ್ಲಿ ಕೆ.ವಿ ಗೌತಮ್ ಹೆಸರು ಪ್ರಮುಖವಾಗಿದೆ.

ಟಿಕೆಟ್‌ ತಮ್ಮ ಅಳಿಯ ಚಿಕ್ಕಪೆದ್ದಣ್ಣಗೆ ಕೊಡಬೇಕು ಎಂದು ಮುನಿಯ್ಪ ಪಟ್ಟು ಹಿಡಿದಿದ್ದರು. ಮುನಿಯಪ್ಪ‌ ಕುಟುಂಬಕ್ಕೆ ಟಿಕೆಟ್ ಬೇಡ ಎಂದು ರಮೇಶ್ ಕುಮಾರ್, ಎಂಸಿ ಸುಧಾಕರ್ ಟೀಮ್‌ ಪಟ್ಟು ಬಿಗಿಮಾಡಿದೆ. ಸಿ.ಎಂ ಮುನಿಯಪ್ಪ ಅವರನ್ನು ಅಭ್ಯರ್ಥಿ ಮಾಡಿ ಎಂದು ರಮೇಶ್ ಕುಮಾರ್ ಬಣ ಹೇಳುತ್ತಿದೆ. ಉಭಯ ಬಣಗಳ ಬಡಿದಾಟಕ್ಕೆ ಬ್ರೇಕ್ ಹಾಕಲು ಅಚ್ಚರಿ ಹೆಸರು ಶಿಫಾರಸು ಮಾಡಲು ನಾಯಕರು ಮುಂದಾಗಿದ್ದಾರೆ. ಸದ್ಯ ಉಭಯ ಬಣಗಳು ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದಿವೆ.

ತಮ್ಮ ಆಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ಕೊಡಿಸಲು ಮುನಿಯಪ್ಪ ಲಾಬಿ ಮುಂದುವರಿದಿದ್ದು, ಮಲ್ಲಿಕಾರ್ಜುನ ಖರ್ಗೆ ಜೊತೆ ಮಾತನಾಡಿದ್ದಾರೆ. ಒತ್ತಡಕ್ಕೆ ಮಣಿದು ಟಿಕೆಟ್ ತಪ್ಪಿಸಿದರೆ ತಪ್ಪು ಸಂದೇಶ ಹೋಗುತ್ತದೆ ಎಂದಿದ್ದಾರೆ.

ಪ್ರಚಾರ ಪ್ರಜಾಧ್ವನಿ ಯಾತ್ರೆ ಮುಂದೂಡಿಕೆ

ಕೋಲಾರ ಸಮಸ್ಯೆ ಬಗೆಹರಿದಿದ್ದರೆ ಇಂದು ಕೋಲಾರದ ಕುರುಡುಮಲೆಯಿಂದಲೇ ಕಾಂಗ್ರೆಸ್ ಪ್ರಚಾರ ಆರಂಭಿಸಬೇಕಿತ್ತು. ಕೋಲಾರ ಅಭ್ಯರ್ಥಿ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಪ್ರಚಾರ ಮುಂದೂಡಿಕೆ ಮಾಡಲಾಗಿದೆ. ಹೀಗಾಗಿ ಉಳಿದಿರುವ ನಾಲ್ಕು ಕ್ಷೇತ್ರಗಳ ಅಭ್ಯರ್ಥಿ ಪಟ್ಟಿಯನ್ನು ಹೈಕಮಾಂಡ್‌ ಇಂದು ಬಿಡುಗಡೆ ಮಾಡಲೇಬೇಕಿದೆ.

ಸದ್ಯ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳು

ಚಿಕ್ಕಬಳ್ಳಾಪುರ- ರಕ್ಷರಾಮಯ್ಯ
ಚಾಮರಾಜನಗರ – ಸುನಿಲ್ ಬೋಸ್
ಬಳ್ಳಾರಿ – ತುಕಾರಾಂ
ಕೋಲಾರ – ಚಿಕ್ಕಪೆದ್ದಣ್ಣ/ಕೆ.ವಿ ಗೌತಮ್/ ಸಿ.ಎಂ ಮುನಿಯಪ್ಪ/ಎಲ್ ಹನುಮಂತಯ್ಯ

ಇದನ್ನೂ ಓದಿ: Lok Sabha Election 2024: ಕೋಲಾರ ಕಾಂಗ್ರೆಸ್‌ ಗಲಾಟೆಗೆ ಸಿಎಂ, ಡಿಸಿಎಂ ಟ್ರೀಟ್ಮೆಂಟ್‌! ತಣ್ಣಗಾದ ರಮೇಶ್‌ ಕುಮಾರ್‌, ಮುನಿಯಪ್ಪ ಬಣ

Continue Reading

Lok Sabha Election 2024

Lok Sabha Election 2024: ಪ್ರಜ್ವಲ್‌ ರೇವಣ್ಣ 40 ಕೋಟಿ ರೂ. ಒಡೆಯ; ಇದೆ ಕೆಜಿಗಟ್ಟಲೆ ಚಿನ್ನ!

Lok Sabha Election 2024: 40 ಕೋಟಿ 94 ಲಕ್ಷ ರೂ. ಮೌಲ್ಯರ ಚರ – ಸ್ಥಿರಾಸ್ಥಿಯನ್ನು ಪ್ರಜ್ವಲ್‌ ರೇವಣ್ಣ ಹೊಂದಿದ್ದಾರೆ. ಇದರಲ್ಲಿ 5.44 ಕೋಟಿ ರೂಪಾಯಿ ಚರ ಹಾಗೂ 35.40 ಕೋಟಿ ರೂಪಾಯಿ ಸ್ಥಿರ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ. ಸದ್ಯ 9.29 ಲಕ್ಷ ರೂಪಾಯಿ ನಗದು ಹೊಂದಿರುವುದಾಗಿ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೆ, ಸರ್ಕಾರಕ್ಕೆ 3.04 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ತೆರಿಗೆ ಸಲ್ಲಿಕೆ ಬಗ್ಗೆ ಕಾನೂನು ಹೋರಾಟ ನಡೆಸುತ್ತಿರುವ ಬಗ್ಗೆಯೂ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

VISTARANEWS.COM


on

Lok Sabha Election 2024 Prajwal Revanna gets Rs 40 crore worth asset
Koo

ಹಾಸನ: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಒಬ್ಬೊಬ್ಬರೇ ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸುತ್ತಿದ್ದಾರೆ. ಗುರುವಾರ (ಮಾ. 28) ಹಾಸನ ಲೋಕಸಭಾ ಕ್ಷೇತ್ರಕ್ಕೆ (Hassan Lok Sabha constituency) ಜೆಡಿಎಸ್‌ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ (Prajwal Revanna) ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಅವರು ಸಲ್ಲಿಸಿರುವ ಅಫಿಡವಿಟ್‌ನಲ್ಲಿ 40.94 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ.

40 ಕೋಟಿ 94 ಲಕ್ಷ ರೂ. ಮೌಲ್ಯರ ಚರ – ಸ್ಥಿರಾಸ್ಥಿಯನ್ನು ಪ್ರಜ್ವಲ್‌ ರೇವಣ್ಣ ಹೊಂದಿದ್ದಾರೆ. ಇದರಲ್ಲಿ 5.44 ಕೋಟಿ ರೂಪಾಯಿ ಚರ ಹಾಗೂ 35.40 ಕೋಟಿ ರೂಪಾಯಿ ಸ್ಥಿರ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ. ಸದ್ಯ 9.29 ಲಕ್ಷ ರೂಪಾಯಿ ನಗದು ಹೊಂದಿರುವುದಾಗಿ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ವಿವಿಧ ಬ್ಯಾಂಕ್‌ಗಳ ಉಳಿತಾಯ ಖಾತೆಯಲ್ಲಿ 56 ಲಕ್ಷ ರೂ. ನಗದನ್ನು ಹೊಂದಿರುವ ಪ್ರಜ್ವಲ್‌ ರೇವಣ್ಣ, ಕಳೆದ ಐದು ವರ್ಷದಲ್ಲಿ ಕೃಷಿಯಿಂದ 2.75 ಕೋಟಿ ರೂಪಾಯಿ ಆದಾಯ ಗಳಿಸಿದ್ದಾರೆ. ಕೃಷಿಯೇತರ ಮೂಲದಿಂದ 1.33 ಕೋಟಿ ರೂಪಾಯಿ ಆದಾಯವನ್ನು ಗಳಿಕೆ ಮಾಡಿದ್ದಾರೆ.

ಬೆಂಗಳೂರಲ್ಲಿ ವಾಣಿಜ್ಯ ಮಳಿಗೆ

31 ಹಸು, ನಾಲ್ಕು ಎತ್ತು, ಒಂದು ಟ್ರ್ಯಾಕ್ಟರ್ ಅನ್ನು ಪ್ರಜ್ವಲ್ ರೇವಣ್ಣ ಹೊಂದಿದ್ದಾರೆ. ಬೆಂಗಳೂರು, ಮೈಸೂರು ಸೇರಿ ವಿವಿಧೆಡೆ ವಾಣಿಜ್ಯ ಕಟ್ಟಡಗಳನ್ನು ಸಹ ಇವರು ಹೊಂದಿದ್ದಾರೆ. ಹೊಳೆನರಸೀಪುರ ಹಾಗೂ ಬೆಂಗಳೂರಿನ ನೆಲಮಂಗಲದಲ್ಲಿ ಆಸ್ತಿ ಹೊಂದಿರುವ ಎಚ್‌.ಡಿ. ರೇವಣ್ಣ ಪುತ್ರ ಕೋಟಿಗಳ ಒಡೆಯರಾಗಿದ್ದಾರೆ.

ಇದನ್ನೂ ಓದಿ: Lok Sabha Election 2024: ಡಿ.ಕೆ. ಸುರೇಶ್‌ ಆಸ್ತಿ ಮೌಲ್ಯ 598 ಕೋಟಿ ರೂ.; 5 ವರ್ಷದಲ್ಲಿ 259.19 ಕೋಟಿ ರೂ. ಹೆಚ್ಚಳ!

ಕುಟುಂಬದವರಿಂದ 4.48 ಕೋಟಿ ರೂ. ಸಾಲ

ಅತ್ತೆ ಅನುಸೂಯ ಅವರಿಂದ 22 ಲಕ್ಷ ರೂ., ಅತ್ತೆ ಶೈಲಜಾರಿಂದ 10 ಲಕ್ಷ ರೂಪಾಯಿ ಹಾಗೂ ಅಜ್ಜಿ ಚನ್ನಮ್ಮರಿಂದ 23 ಲಕ್ಷ ರೂಪಾಯಿ, ತಂದೆ ರೇವಣ್ಣ ಅವರಿಂದ 86 ಲಕ್ಷ ರೂಪಾಯಿ, ಸಹೋದರ ಡಾ. ಸೂರಜ್ ಅವರಿಂದ 1 ಕೋಟಿ ರೂಪಾಯಿ ಸಾಲವನ್ನು ಪ್ರಜ್ವಲ್‌ ರೇವಣ್ಣ ಪಡೆದಿದ್ದಾರೆ. ಒಟ್ಟು 4.48 ಕೋಟಿ ರೂಪಾಯಿ ಸಾಲವನ್ನು ಹೊಂದಿದ್ದಾಗಿ ಅಫಿಡವಿಟ್‌ನಲ್ಲಿ ಘೋಷಿಸಿದ್ದಾರೆ.

ಸರ್ಕಾರಕ್ಕೆ 3.04 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ತೆರಿಗೆ ಸಲ್ಲಿಕೆ ಬಗ್ಗೆ ಕಾನೂನು ಹೋರಾಟ ನಡೆಸುತ್ತಿರುವ ಬಗ್ಗೆಯೂ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕೆಜಿಗಟ್ಟಲೆ ಚಿನ್ನ ಬೆಳ್ಳಿ ಹೊಂದಿರುವ ಪ್ರಜ್ವಲ್

ಪ್ರಜ್ವಲ್‌ ರೇವಣ್ಣ ಅವರ ಬಳಿ ಒಟ್ಟು 67 ಲಕ್ಷ ರೂಪಾಯಿ ಮೌಲ್ಯದ 1 ಕೆಜಿ 100 ಗ್ರಾಂ ಚಿನ್ನವಿದೆ. ಅಲ್ಲದೆ, 17.48 ಲಕ್ಷ ರೂಪಾಯಿ ಮೌಲ್ಯದ 23 ಕೆಜಿ ಬೆಳ್ಳಿ ಹಾಗೂ 1.90 ಲಕ್ಷ ರೂಪಾಯಿ ಮೌಲ್ಯದ ವಜ್ರದ ಆಭರಣವನ್ನು ಸಹ ಹೊಂದಿದ್ದಾರೆ.

Continue Reading

ಕರ್ನಾಟಕ

Parliament Flashback: ಕಾಂಗ್ರೆಸ್‌ನಿಂದ ನಾಲ್ಕು ಬಾರಿ ಗೆದ್ದು, ಬಿಜೆಪಿಯಿಂದ ಸ್ಪರ್ಧಿಸಿದಾಗ ಸೋತು ಹೋಗಿದ್ದ ಒಡೆಯರ್‌!

Parliament Flashback: ಮೈಸೂರು ರಾಜ ವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರು ಮೈಸೂರು ಲೋಕಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಗೆಲುವು ಸಾಧಿಸಿದ್ದರು. ಒಡೆಯರ್‌ ನಿರಂತರ ಎರಡು ಬಾರಿ ಕಾಂಗ್ರೆಸ್‌ನಿಂದ ಗೆದ್ದು ಮೂರನೇ ಬಾರಿ ಬಿಜೆಪಿ ಟಿಕೆಟ್‌ನಿಂದ ಚುನಾವಣೆ ಕಣಕ್ಕಿಳಿದಾಗ ಸೋತು ಹೋದರು! ಮುಂದೆ ಮತ್ತೆರಡು ಬಾರಿ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದರು!

VISTARANEWS.COM


on

Parliament Flashback
Koo

ಬೆಂಗಳೂರು: ಮೈಸೂರು ರಾಜ ವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ (Maharaja Srikantadatta Narasimharaja Wadiyar) ಮೈಸೂರು ಲೋಕಸಭಾ ಕ್ಷೇತ್ರದಿಂದ ನಾಲ್ಕು ಬಾರಿ (Parliament Flashback) ಗೆಲುವು ಸಾಧಿಸಿದ್ದರು. ಸೋಜಿಗವೆಂದರೆ ಒಡೆಯರ್‌ ನಿರಂತರ ಎರಡು ಬಾರಿ ಕಾಂಗ್ರೆಸ್‌ (Congress)ನಿಂದ ಗೆದ್ದು ಮೂರನೇ ಬಾರಿ ಬಿಜೆಪಿ (BJP) ಟಿಕೆಟ್‌ನಿಂದ ಚುನಾವಣೆ ಕಣಕ್ಕಿಳಿದಾಗ ಸೋತು ಹೋದರು! ಮುಂದೆ ಮತ್ತೆರಡು ಬಾರಿ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದರು!

1984ರಲ್ಲಿ ಮೊದಲ ಬಾರಿ ಸ್ಪರ್ಧೆ

1984ರಲ್ಲಿ ಒಡೆಯರ್‌ ಮೊದಲ ಬಾರಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆದ್ದು ಲೋಕಸಭೆ ಪ್ರವೇಶಿಸಿದರು. 1989ರಲ್ಲಿ ಮತ್ತೊಮ್ಮೆ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದರು.

1991ರಲ್ಲಿ ಕಾಂಗ್ರೆಸ್‌ ಹೈಕಮಾಂಡ್‌, ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸ್‌ ಅವರ ಪುತ್ರಿ ಚಂದ್ರಪ್ರಭಾ ಅರಸ್‌ ಅವರಿಗೆ ಟಿಕೆಟ್‌ ನೀಡಿತು. ಸಿಟ್ಟಿಗೆದ್ದ ಒಡೆಯರ್‌ ಅವರು ಬಿಜೆಪಿಯಿಂದ ಕಣಕ್ಕಿಳಿದರು. ಆದರೆ ಚಂದ್ರಪ್ರಭಾ ಅರಸ್‌ ಎದುರು ಸೋತು ಹೋದರು.

ಮತ್ತೊಮ್ಮೆ ಒಡೆಯರ್‌ಗೆ ಟಿಕೆಟ್‌

1996ರಲ್ಲಿ ಕಾಂಗ್ರೆಸ್‌ ಮತ್ತೊಮ್ಮೆ ಒಡೆಯರ್‌ಗೆ ಟಿಕೆಟ್‌ ನೀಡಿತು. ಆ ಚುನಾವಣೆಯಲ್ಲಿ ಒಡೆಯರ್‌ ಜನತಾ ದಳದ ಅಭ್ಯರ್ಥಿ ಜಿ.ಟಿ.ದೇವೇಗೌಡ ಅವರನ್ನು ಸೋಲಿಸಿದರು. ಆದರೆ 1998ರಲ್ಲಿ ಕಾಂಗ್ರೆಸ್‌ ಚಿಕ್ಕಮಾದು ಅವರಿಗೆ ಟಿಕೆಟ್‌ ನೀಡಿತು. ಬಿಜೆಪಿ ಅಭ್ಯರ್ಥಿ ಸಿ.ಎಚ್‌.ವಿಜಯಶಂಕರ್‌ ಅವರು ಚಿಕ್ಕಮಾದು ಅವರನ್ನು ಸೋಲಿಸುವ ಮೂಲಕ ಬಿಜೆಪಿ ಮೊದಲ ಬಾರಿ ಮೈಸೂರಿನಲ್ಲಿ ಖಾತೆ ತೆರೆಯಿತು. 2004ರಲ್ಲಿ ಕಾಂಗ್ರೆಸ್‌ ಮತ್ತೆ ಒಡೆಯರ್‌ ಅವರನ್ನು ಕಣಕ್ಕಿಳಿಸಿತು. ಆದರೆ ಬಿಜೆಪಿಯ ವಿಜಯಶಂಕರ್‌ ಅವರು 3,16,442 ಮತಗಳನ್ನು ಪಡೆದು ಎರಡನೇ ಬಾರಿ ಗೆಲುವು ಸಾಧಿಸಿದರು. ಜನತಾ ದಳದಿಂದ ಸ್ಪರ್ಧಿಸಿದ್ದ ಎ.ಎಸ್‌.ಗುರುಸ್ವಾಮಿ 3,06,292 ಮತ ಪಡೆದು ಎರಡನೇ ಸ್ಥಾನ ಪಡೆದರೆ, ಒಡೆಯರ್‌ ಅವರು 2,99,227 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು. ಅಲ್ಲಿಗೆ ಅವರ ಚುನಾವಣಾ ರಾಜಕೀಯ ಅಂತ್ಯವಾಯಿತು.

ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರನ್ನೇ ಸೋಲಿಸಿದ್ದ ಸಿದ್ದು!

ಲೋಕಸಭೆ ಚುನಾವಣೆಗಳು ಹಲವು ಅಚ್ಚರಿಯ ಫಲಿತಾಂಶಗಳಿಗೆ ಸಾಕ್ಷಿಯಾಗಿವೆ. 1991ರ ಲೋಕಸಭೆ ಚುನಾವಣೆಯಲ್ಲಿ ಬಾಗಲಕೋಟ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು (Ramakrishna Hegde) ಅನಿರೀಕ್ಷಿತ ಫಲಿತಾಂಶ ಕಾಣಬೇಕಾಯಿತು. ಹೆಗಡೆಯವರ ರಾಜಕೀಯ ಜೀವನದಲ್ಲಿ ಈ ಫಲಿತಾಂಶ ಭಾರಿ ಹಿನ್ನಡೆ ಉಂಟು ಮಾಡಿತು.

ಸಿದ್ದು ನ್ಯಾಮಗೌಡ: ಇವರ ಮೂಲ ಹೆಸರು ಸಿದ್ದಪ್ಪ ಭೀಮಪ್ಪ ನ್ಯಾಮಗೌಡ. ಬ್ಯಾರೇಜ್‌ ಸಿದ್ದು ಎಂದೇ ಇವರು ಖ್ಯಾತರಾಗಿದ್ದರು. ರೈತರಿಂದಲೇ 1 ಕೋಟಿ ರೂ. ದೇಣಿಗೆ ಸಂಗ್ರಹಿಸಿ, ಜತೆಗೆ ರೈತರ ಶ್ರಮದಾನದ ಮೂಲಕ ಚಿಕ್ಕಪಡಸಲಗಿ ಗ್ರಾಮದಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಿದ ಖ್ಯಾತಿ ಇವರದ್ದು. ಸರ್ಕಾರದ ನೆರವು ಪಡೆಯದೆ ಖಾಸಗಿಯಾಗಿ ನಿರ್ಮಿಸಿದ ದೇಶದ ಮೊದಲ ಅಣೆಕಟ್ಟು ಇದು.

ರಾಷ್ಟ್ರ ಮಟ್ಟದ ಸುದ್ದಿ

30,000 ಎಕರೆ ಭೂಮಿಗೆ ನೀರಾವರಿ, 2.5 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಕೆ ಮತ್ತು 1.5 ಲಕ್ಷ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಗುರಿಯನ್ನು ಇದು ಹೊಂದಿತ್ತು. ಹಾಗಾಗಿ ಆ ಸಂದರ್ಭದಲ್ಲಿ ಸಿದ್ದು ನ್ಯಾಮಗೌಡ ಅವರು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಲ್ಲಿದ್ದರು.

1991ರ ಲೋಕಸಭೆ ಚುನಾವಣೆಯಲ್ಲಿ ಬಾಗಲಕೋಟ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಜನತಾ ದಳ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಆಗ ಕಾಂಗ್ರೆಸ್‌ ಅಚ್ಚರಿಯ ಅಭ್ಯರ್ಥಿಯನ್ನಾಗಿ ಸಿದ್ದು ನ್ಯಾಮಗೌಡ ಅವರನ್ನು ಕಣಕ್ಕಿಳಿಸಿತು. ಆ ಚುನಾವಣೆಯಲ್ಲಿ ಸಿದ್ದು ನ್ಯಾಮಗೌಡ ಅವರು 2,76,849 (ಶೇ. 46.51) ಮತಗಳನ್ನು ಪಡೆದರೆ, ರಾಮಕೃಷ್ಣ ಹೆಗಡೆ ಅವರಿಗೆ 2,55,645 (ಶೇ.42.05) ಮತಗಳು ಲಭಿಸಿದವು. 21,204 ಮತಗಳ ಅಂತರದಿಂದ ರಾಮಕೃಷ್ಣ ಹೆಗಡೆ ಅವರು ಪರಾಭವ ಅನುಭವಿಸಿದರು.

ಉತ್ತರ ಕರ್ನಾಟಕದಲ್ಲಿ ಜನಪ್ರಿಯರಾಗಿದ್ದ ಹೆಗಡೆ

ರಾಮಕೃಷ್ಣ ಹೆಗಡೆ ಆಗ ಉತ್ತರ ಕರ್ನಾಟಕದಲ್ಲಿ ಅಪಾರ ಜನಪ್ರಿಯತೆ ಪಡೆದಿದ್ದರು. ಆದರೆ ಹೊಸ ಮುಖದ ಎದುರು ಅವರು ಸೋತಿದ್ದು ರಾಷ್ಟ್ರ ಮಟ್ಟದ ಸುದ್ದಿಯಾಯಿತು. ಹೆಗಡೆಯಂಥ ಪ್ರಭಾವಿ ರಾಜಕಾರಣಿಯನ್ನು ಸೋಲಿಸಿದ್ದಕ್ಕಾಗಿ ನ್ಯಾಮಗೌಡ ಅವರಿಗೆ ನರಸಿಂಹ ರಾವ್‌ ಸಂಪುಟದಲ್ಲಿ ಸಚಿವ ಸ್ಥಾನ ನೀಡಲಾಯಿತು. ಆದರೆ ಸಿದ್ದು ನ್ಯಾಮಗೌಡ ಅವರು 1996ರ ಚುನಾವಣೆಯಲ್ಲಿ ಜನತಾ ದಳ ಅಭ್ಯರ್ಥಿ ಎಚ್‌.ವೈ.ಮೇಟಿ (ಈಗ ಕಾಂಗ್ರೆಸ್‌ ಶಾಸಕ) ಎದುರು ಸೋತು ಹೋದರು. ಮುಂದೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಕ್ಷೇತ್ರದಿಂದ 2013, 2018ರಲ್ಲಿ ಸಿದ್ದು ನ್ಯಾಮಗೌಡ ಅವರು ಶಾಸಕರಾಗಿ ಆಯ್ಕೆಯಾದರು. 2018ರ ಮೇ 28ರಂದು ಕಾರು ಅಪಘಾತದಲ್ಲಿ ಇವರು ಮೃತಪಟ್ಟರು.

ಇದನ್ನೂ ಓದಿ: Parliament Flashback: ಬೆಂಗಳೂರು ದಕ್ಷಿಣ ಕ್ಷೇತ್ರ ಅಂದರೆ ಕಾಂಗ್ರೆಸ್‌ಗೆ ದುಃಸ್ವಪ್ನ! ಗೆದ್ದಿದ್ದು ಒಮ್ಮೆ ಮಾತ್ರ!

Continue Reading

ಕರ್ನಾಟಕ

Lok Sabha Election 2024: ಮಂಡ್ಯದಲ್ಲಿ ಜೆಡಿಎಸ್-ಬಿಜೆಪಿ ಮುಖಂಡರ ಸಮನ್ವಯ ಸಭೆ ಯಶಸ್ವಿ; ಏ. 4ಕ್ಕೆ ಹೆಚ್ಡಿಕೆ ನಾಮಪತ್ರ ಸಲ್ಲಿಕೆ

Lok Sabha Election 2024: ಮಂಡ್ಯದಲ್ಲಿ ಗುರುವಾರ (ಮಾ. 28) ಜೆಡಿಎಸ್-ಬಿಜೆಪಿ ಮುಖಂಡರ ಸಮನ್ವಯ ಸಭೆ ನಡೆದಿದ್ದು, ಎಚ್.ಡಿ. ಕುಮಾರಸ್ವಾಮಿ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಲು ಉಭಯ ಪಕ್ಷಗಳ ನಾಯಕರು ತೀರ್ಮಾನ ಕೈಗೊಂಡರು. ಈ ವೇಳೆ ಮಾತನಾಡಿದ ಎಚ್‌ಡಿಕೆ, ಡಿಸೆಂಬರ್ ಒಳಗಾಗಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇನ್ನು ಮೇಕೆದಾಟು ಯೋಜನೆ ಬಗ್ಗೆಯೂ ಪ್ರಸ್ತಾಪ ಮಾಡಿರುವ ಮಾಜಿ ಸಿಎಂ, ಬಿರಿಯಾನಿ ತಿಂದು ಪಾದಯಾತ್ರೆ ಮಾಡಿದರೆ ಮೇಕೆದಾಟು ಆಗುತ್ತಾ? ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಮಂಡ್ಯ ಹಾಲಿ ಸಂಸದರೆ ಸುಮಲತಾ ಅಂಬರೀಶ್‌ ಅವರು ತಮಗೆ ಆಶೀರ್ವಾದ ಮಾಡುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

VISTARANEWS.COM


on

Lok Sabha Election 2024 HD Kumaraswamy to file nomination for Mandya Lok Sabha seat on April 4
Koo

ಮಂಡ್ಯ: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಹೈವೋಲ್ಟೇಜ್‌ ಕ್ಷೇತ್ರವಾಗಿರುವ ಮಂಡ್ಯ ಲೋಕಸಭಾ ಚುನಾವಣಾ ಕಣಕ್ಕೆ ಬಿಜೆಪಿ – ಜೆಡಿಎಸ್‌ ಮೈತ್ರಿ (BJP JDS Alliance) ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಧುಮಿಕಿದ್ದಾರೆ. ಈ ವೇಳೆ ಎಚ್‌ಡಿಕೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಅವರ ನೇತೃತ್ವದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು, ಮುಖಂಡರ ಸಮನ್ವಯ ಸಮಿತಿ ಸಭೆ ನಡೆದಿದ್ದು, ಯಶಸ್ವಿಯಾಗಿದೆ. ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಮಂತ್ರಿ ಮಾಡುವ ನಿಟ್ಟಿನಲ್ಲಿ ಎಚ್‌ಡಿಕೆ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಲು ಶಪಥ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಜೆಡಿಎಸ್‌ ಮತ್ತು ಬಿಜೆಪಿ ನಡುವೆ ಆಗಿರುವ ಈ ಮೈತ್ರಿಯೂ ರಾಜ್ಯದಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡಲಿದೆ. ನಾನು ಮಂಡ್ಯ ಲೋಕಸಭೆ ಅಭ್ಯರ್ಥಿಯಾಗಿ ಏಪ್ರಿಲ್‌ 4ರಂದು ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಎಂದು ಪ್ರಕಟಿಸಿದರು.

ಇದನ್ನೂ ಓದಿ: Lok Sabha Election 2024: ಕೋಲಾರ ಕಾಂಗ್ರೆಸ್‌ ಗಲಾಟೆಗೆ ಸಿಎಂ, ಡಿಸಿಎಂ ಟ್ರೀಟ್ಮೆಂಟ್‌! ತಣ್ಣಗಾದ ರಮೇಶ್‌ ಕುಮಾರ್‌, ಮುನಿಯಪ್ಪ ಬಣ

ಈ ಮೈತ್ರಿ ಅತ್ಯಂತ ಸಹಜ ಮೈತ್ರಿಯಾಗಿದೆ. ಈ ಹಿಂದೆ ಜೆಡಿಎಸ್-ಕಾಂಗ್ರೆಸ್‌ ನಡುವೆ ಮೈತ್ರಿಯಾಗಿತ್ತು ನಿಜ. ಅದು ಅಸಹಜ ಮೈತ್ರಿಯಾಗಿತ್ತು. ಅದರ ಪ್ರತಿಫಲವೇನು ಎನ್ನುವುದು ರಾಜ್ಯದ ಜನತೆಗೆ ಗೊತ್ತಿದೆ. ಮೈತ್ರಿ ಹೆಸರಿನಲ್ಲಿ ಅವರು ನಮ್ಮ ಬೆನ್ನಿಗೆ ಚೂರಿ ಹಾಕಿದರು. ಜೆಡಿಎಸ್-ಬಿಜೆಪಿ ಮೈತ್ರಿ ಸಹಜ ಮೈತ್ರಿ ಎನ್ನುವುದಕ್ಕೆ ನಿನ್ನೆ ಮೈಸೂರಿನಲ್ಲಿ ಹಾಗೂ ಇಂದು ಮಂಡ್ಯದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಕಂಡು ಬರುತ್ತಿರುವ ಉತ್ಸಾಹವೇ ನಿದರ್ಶನ ಎಂದು ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಈ ಮೈತ್ರಿಯಾಗಿದೆ. ರಾಜ್ಯ ಅಭಿವೃದ್ಧಿಗಾಗಿ ಈ ಮೈತ್ರಿ ನಿರ್ಧಾರ ಕೈಗೊಳ್ಳಲಾಗಿದೆ. ಬಿಜೆಪಿ-ಜೆಡಿಎಸ್‌ ಹಾಲುಜೇನಿನಂತೆ ಕೆಲಸ ಮಾಡಲಿವೆ. ಹಿಂದಿನಿಂದಲೂ ಜೆಡಿಎಸ್‌ ಪಕ್ಷವನ್ನು ಮುಗಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಲೇ ಇದೆ. ಆ ಪಕ್ಷದ ಜತೆ ಸರ್ಕಾರ ಮಾಡಿದ್ದು ನನ್ನ ಅತಿ ಕೆಟ್ಟ ನಿರ್ಧಾರ. ಬಿಜೆಪಿ ಜತೆ ನಾನು ಮಾಡಿದ 20 ತಿಂಗಳ ಆಡಳಿತವನ್ನು ಜನರು ಇಂದಿಗೂ ನೆನೆಯುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.

17 ವರ್ಷ ವನವಾಸ ಅನುಭವಿಸಿದ್ದೇನೆ

ಅಧಿಕಾರ ಹಸ್ತಾಂತರ ಮಾಡಲಿಲ್ಲ ಎಂಬ ಆರೋಪ ನನ್ನ ಮೇಲೆ ಕೆಲವರು ಮಾಡುತ್ತಾರೆ. ನಾನು ಮಾಡದೆ ಇರುವ ತಪ್ಪನ್ನು ನನ್ನ ತಲೆ ಮೇಲೆ ಹೊತ್ತಿದ್ದೇನೆ. 17 ವರ್ಷ ವನವಾಸ ಅನುಭವಿಸಿದ್ದೇನೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲಿಕ್ಕೆ ಕಾರಣ ಅವರ ಶಕ್ತಿ ಅಲ್ಲ. ಜೆಡಿಎಸ್‌-ಬಿಜೆಪಿ ಹೊಂದಾಣಿಕೆ ಆಗದೆ, ನಮ್ಮಲ್ಲಿದ್ದ ಪೈಪೋಟಿ ಅವರಿಗೆ ಲಾಭವಾಗಿದೆ.
ಕಾಂಗ್ರೆಸ್ ಸರ್ಕಾರ ಬಂದಿದ್ದು ಆಕಸ್ಮಿಕ. ಅದು ಆಕಸ್ಮಿಕ ಸರ್ಕಾರ ಎಂದು ಎಂದು ಅವರು ಕಿಡಿಕಾರಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು‌ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಬಾಂಧವ್ಯದ ಬಗ್ಗೆ ಕೆಲವರು ಲಘುವಾಗಿ ಮಾತನಾಡುವುದನ್ನು ಕೇಳಿದ್ದೇನೆ. ಗೌಡರು ಮೋದಿಯವರು ಪ್ರಧಾನಿಯಾದರೆ ದೇಶ ಬಿಡುತ್ತೇನೆ ಎಂದಿರಲಿಲ್ಲ. ರಾಜ್ಯಸಭೆಗೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದರು. ಆದರೆ ಆ ಬಳಿಕ ಮೋದಿ ಅವರನ್ನು ಭೇಟಿಯಾದ ವೇಳೆ ದೇವೇಗೌಡರಿಗೆ ಅವರು ಕೊಟ್ಟ ಗೌರವವವನ್ನು ಇಡೀ ದೇಶ ನೋಡಿದೆ. ಹೀಗಾಗಿ ಯಾರೂ ಚುನಾವಣೆ ಸಮಯದ ಹೇಳಿಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು ಎಂದು ಎಚ್‌.ಡಿ. ಕುಮಾರಸ್ವಾಮಿ ಸಲಹೆ ಮಾಡಿದರು.

ನರೇಂದ್ರ ಮೋದಿ ಅವರು ದೇವೇಗೌಡರನ್ನು ತಂದೆ ಸಮನಾರಾಗಿ ನಡೆಸಿಕೊಳ್ಳುತ್ತಾರೆ. ಆದರೆ, ರಾಜಕೀಯ ಬದುಕು ಕೊಟ್ಟ ಅದೇ ದೇವೇಗೌಡರನ್ನು ಸಿದ್ದರಾಮಯ್ಯ ಹೀಯಾಳಿಸುತ್ತಾರೆ. ಇದು ಸಿದ್ದರಾಮಯ್ಯಗೂ ಮೋದಿ ಅವರಿಗೂ ಇರುವ ವ್ಯತ್ಯಾಸ. ಕಾಂಗ್ರೆಸ್ ಎಷ್ಟೇ ಶ್ರಮವಹಿಸಿದರೂ ಜೆಡಿಎಸ್‌ ಮುಗಿಸಲು ಆಗಲ್ಲ. ರಾಜ್ಯಕ್ಕೆ ಸುಭದ್ರ ಸರ್ಕಾರದ ಅವಶ್ಯಕತೆ ಇದೆ. ದೇಶಕ್ಕೆ ನರೇಂದ್ರ ಮೋದಿ ಆಡಳಿತ ಅನಿವಾರ್ಯ. ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲ್ಲುತ್ತಾರೆ. ಮಂಡ್ಯದಲ್ಲಿ ಬಿಜೆಪಿ-ಜೆಡಿಎಸ್‌ ಕಾರ್ಯಕರ್ತರು ಒಗ್ಗಟ್ಟಾದರೆ ಐತಿಹಾಸಿಕ ಗೆಲುವು ನಮ್ಮದಾಗಲಿದೆ ಎಂದರು ಕುಮಾರಸ್ವಾಮಿ ಹೇಳಿದರು.

ಡಿಸೆಂಬರ್ ಒಳಗಾಗಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಪತನ

ನಾನು ಜೋತ್ಯಿಷ್ಯಕಾರನಲ್ಲ. ಆದರೆ, ಈ ಚುನಾವಣೆ ನಂತರ ಮುಂದಿನ ಡಿಸೆಂಬರ್ ತಿಂಗಳ ಒಳಗಾಗಿ ಕಾಂಗ್ರೆಸ್‌ ಸರ್ಕಾರ ಪತನವಾಗುತ್ತದೆ. ಅದು ತಾನಾಗಿಯೇ ಬಿದ್ದುಹೋಗಲಿದೆ. ನಾನು ಮತ್ತು ವಿಜಯೇಂದ್ರ ಅದಕ್ಕಾಗಿ ಕಷ್ಟಪಡಬೇಕಿಲ್ಲ. ಅವರೇ ಅವರ ಸರಕಾರವನ್ನು ಬೀಳಿಸಿಕೊಳ್ಳುತ್ತಾರೆ ಎಂದು ಕುಮಾರಸ್ವಾಮಿ ಭವಿಷ್ಯ ನುಡಿದರು.

ಬಿರಿಯಾನಿ ತಿಂದು ಪಾದಯಾತ್ರೆ ಮಾಡಿದರೆ ಮೇಕೆದಾಟು ಆಗುತ್ತಾ?

ಮೇಕೆದಾಟುಗಾಗಿ ಕಾಂಗ್ರೆಸ್‌ನವರು ಪಾದಯಾತ್ರೆ ಮಾಡಿದರು. ಇವತ್ತು ಏನಾಗಿದೆ? ಮೇಕೆದಾಟು ಕಟ್ಟಲು ಅನುಮತಿ ಕೇಳುತ್ತಿದ್ದಾರೆ‌. ಮತ್ತೆ ಆವತ್ತು ಪಾದಯಾತ್ರೆ ಯಾಕೆ ನಡೆಸಿದರು? ನಿಮ್ಮ ಮಿತ್ರಪಕ್ಷ ಡಿಎಂಕೆ ಪ್ರಣಾಳಿಕೆಯಲ್ಲಿ ಮೇಕೆದಾಟು ಕಟ್ಟಲು ಅವಕಾಶ ಕೊಡಲ್ಲ ಎಂದಿದ್ದಾರೆ. ಪೇಪರ್ ಪೆನ್ನು ಕೊಟ್ಟರೆ ನಾಳೆ ಬೆಳಗ್ಗೆ ಮೇಕೆದಾಟು ಮಾಡುತ್ತೇನೆ ಎಂದರಲ್ಲ. ಈಗ ಏನಾಗಿದೆ ನಿಮಗೆ? ಮೇಕೆದಾಟು ಯೋಜನೆ ಮಾಡಿ. ಮೇಕೆದಾಟು ಹೆಸರೇಳಿಕೊಂಡು ರಾಜಕಾರಣ ಮಾಡುವ ದಾರಿದ್ರ್ಯ ದೇವೇಗೌಡರಿಗೆ ಬಂದಿಲ್ಲ. ಪಾದಯಾತ್ರೆಯಿಂದ ನೀರು ತರಲು ಆಗಲ್ಲ ಶಿವಕುಮಾರಣ್ಣ. ಪ್ರಾಧಿಕಾರದಲ್ಲಿ ಸರಿಯಾದ ವಾದ ಮಂಡನೆ ಆಗಬೇಕು‌. ಬಿರಿಯಾನಿ ತಿಂದು ಪಾದಯಾತ್ರೆ ಮಾಡಿದರೆ ಆಗಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮೇಲೆ ಎಚ್.ಡಿ. ಕುಮಾರಸ್ವಾಮಿ ನೇರ ವಾಗ್ದಾಳಿ ನಡೆಸಿದರು.

ಪುಟ್ಟರಾಜು ನನ್ನ ಗಮನಕ್ಕೆ ತಾರದೆ ಘೋಷಣೆ ಮಾಡಿದ್ದಾರೆ

ಎರಡೂ ಪಕ್ಷಗಳ ಕಾರ್ಯಕರ್ತರು, ನಾಯಕರ ಒತ್ತಾಸೆಯೇ ನಾನು ಮಂಡ್ಯದಲ್ಲಿ ಸ್ಪರ್ಧೆ ಮಾಡುವ ನಿರ್ಧಾರ ಕೈಗೊಳ್ಳಲು ಕಾರಣ. ನಾನು ಸ್ಪರ್ಧಿಸುವ ಮಾಡಬೇಕೆಂಬ ಆದೇಶ ಕಾರ್ಯಕರ್ತರಿಂದ ಬಂದಿದೆ. ನಮ್ಮ ಹಳೇ ಸ್ನೇಹಿತರೊಬ್ಬರು ಪುಟ್ಟರಾಜು ಅವರ ಹೆಸರು ಹೇಳಿದ್ದಾರೆ. ಡಿ.ಸಿ. ತಮ್ಮಣ್ಣ ಹಾಗೂ ಸಿ.ಎಸ್. ಪುಟ್ಟರಾಜು ಸ್ಪರ್ಧೆ ಬಗ್ಗೆ ಚರ್ಚೆ ನಡೆದಿತ್ತು. ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ಕಾರ್ಯಕರ್ತರ ಅಪೇಕ್ಷೆ ಇದೆ. ಪುಟ್ಟರಾಜು ನನ್ನ ಗಮನಕ್ಕೆ ತಾರದೆ ಮೇಲುಕೋಟೆಯಲ್ಲಿ ಘೋಷಣೆ ಮಾಡಿದ್ದಾರೆ. ನಾನು ಪಲಾಯನವಾದಿಯಲ್ಲ. ಜನರ ಅಪೇಕ್ಷೆಗೆ ತಲೆ ಭಾಗಿ ಬಂದಿದ್ದೇನೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಸುಮಲತಾ ನನಗೆ ಆಶೀರ್ವಾದ ಮಾಡುವ ವಿಶ್ವಾಸವಿದೆ

ಸುಮಲತಾ ಅಂಬರೀಶ್‌ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ನಾನು ಮತ್ತು ಅಂಬರೀಶ್ ಸ್ನೇಹಿತರು. ಅದೂ ಎಲ್ಲರಿಗೂ ತಿಳಿದಿರುವ ವಿಚಾರವೇ. ಸುಮಲತಾ ಅವರು ನನಗೆ ಅಂಬರೀಶ್‌ ಅವರೊಂದಿಗೆ ಊಟ ಬಡಿಸಿದ್ದಾರೆ. ನಾವು ಶತ್ರುಗಳಲ್ಲ. ಅವರು ನನಗೆ ಆಶೀರ್ವಾದ ಮಾಡುವ ವಿಶ್ವಾಸವಿದೆ. ಅವರು ನಿರ್ಧಾರ ಮಾಡಿ ಘೋಷಣೆ ಮಾಡುತ್ತಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ: Lok Sabha Election 2024: ಡಿ.ಕೆ. ಸುರೇಶ್‌ ಆಸ್ತಿ ಮೌಲ್ಯ 598 ಕೋಟಿ ರೂ.; 5 ವರ್ಷದಲ್ಲಿ 259.19 ಕೋಟಿ ರೂ. ಹೆಚ್ಚಳ!

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಬಗ್ಗೆಯೂ ಇದೇ ರೀತಿಯ ಚೇಷ್ಟೆ ಮಾಡುತ್ತಿದ್ದಾರೆ. ಅದೇನೂ ವರ್ಕೌಟ್ ಆಗಲ್ಲ. ಮಂಜುನಾಥ್ ಜನಸಾಮಾನ್ಯರ ಅಭ್ಯರ್ಥಿ. ಏನು ಕುತಂತ್ರ ಮಾಡಿದರು ಪ್ರಯೋಜನವಿಲ್ಲ. ಡಿ.ಕೆ. ಸುರೇಶ್ ಕೆಲಸ ಮಾಡಿದ್ದೀವಿ, ಕೂಲಿ ಕೇಳ್ತಿದ್ದೀವಿ ಅನ್ನೋ ವಿಚಾರ.
ನಾವೇನೂ ದರೋಡೆ ಮಾಡಿದ್ದೀವಾ? ರಾಮನಗರ ಜಿಲ್ಲೆಗೆ ನಾನು ಕಾಲಿಡುವ ಮುಂಚೆ ಯಾವ ಪರಿಸ್ಥಿತಿ ಇತ್ತು.
ನಾನು ಕಾಲಿಟ್ಟ ಬಳಿಕ ಯಾವ ಪರಿಸ್ಥಿತಿ ಇದೆ. ಯಾವ ರೀತಿ ಕಾರ್ಯಕ್ರಮಗಳನ್ನು ಕೊಟ್ಟಿದ್ದೀವಿ. ನಾನು ಮತ್ತು ಯಡಿಯೂರಪ್ಪ ಇದ್ದ ವೇಳೆ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಮಾಡಿದ್ದೇವು. ಇದಕ್ಕೆ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಸಾಕ್ಷಿ ಇದ್ದಾರೆ ಎಂದು ಡಿ.ಕೆ. ಸುರೇಶ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಂಡ್ಯ ಸಭೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟ್ವೀಟ್‌

ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ, ಮಾಜಿ ಉಪ ಮುಖ್ಯಮಂತ್ರಿಗಳಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾದ ಜಿ.ಟಿ. ದೇವೇಗೌಡ, ಮಾಜಿ ಸಚಿವರಾದ ಸಿ.ಎಸ್ ಪುಟ್ಟರಾಜು, ಸಾ.ರಾ.ಮಹೇಶ್, ಡಾ.ನಾರಾಯಣ ಗೌಡ, ಎಸ್.ಎ.ರಾಮದಾಸ್, ಶಾಸಕ ಎಚ್.ಟಿ. ಮಂಜುನಾಥ್, ಮಾಜಿ ಶಾಸಕರಾದ ಸುರೇಶ್ ಗೌಡ, ರವೀಂದ್ರ ಶ್ರೀಕಂಠಯ್ಯ, ಡಾ.ಕೆ.ಅನ್ನದಾನಿ, ಕೆ.ಟಿ.ಶ್ರೀಕಂಠೇಗೌಡ, ಬಿಜೆಪಿಯ ಶರಣು ತಳ್ಳೀಕೇರಿ, ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಇಂದ್ರೇಶ್, ಬಿ.ಆರ್‌.ರಾಮಚಂದ್ರ, ಕೆ.ಎಸ್.ವಿಜಯ್ ಆನಂದ್ ಸೇರಿದಂತೆ ಎರಡೂ ಪಕ್ಷಗಳ ಅನೇಕ ಮುಖಂಡರು, ಕಾರ್ಯಕರ್ತರು ಸೇರಿದ್ದರು.

Continue Reading
Advertisement
Cows
ಕರ್ನಾಟಕ9 mins ago

ಹಾಸನದಲ್ಲಿ ಅಕ್ರಮ ಗೋಮಾಂಸ ಜಾಲ; 60 ಗೋವುಗಳನ್ನು ಕೊಂದ ರಾಕ್ಷಸರು!

R Ashwin
ಕ್ರೀಡೆ14 mins ago

IPL 2024: ಐಪಿಎಲ್‌ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಆರ್‌.ಅಶ್ವಿ‌ನ್‌!

Bangalore water crisis IT companies
ಬೆಂಗಳೂರು18 mins ago

Bangalore Water Crisis: “ನೀರು ಕೊಡ್ತೀವಿ, ಪ್ಲೀಸ್‌ ಹೋಗ್ಬೇಡಿ…” ಐಟಿ ಸಂಸ್ಥೆಗಳಿಗೆ ರಾಜ್ಯ ಮನವಿ; ಗಾಳ ಹಾಕಿದ ಕೇರಳ

Chikkaballapur
ಕರ್ನಾಟಕ42 mins ago

ಚಿಕ್ಕಬಳ್ಳಾಪುರದಲ್ಲಿ ಅತ್ತೆಯನ್ನು ಎಳೆದೊಯ್ದು ತಿಪ್ಪೆಗೆ ಎಸೆದ ಕ್ರೂರ ಸೊಸೆ; ವೃದ್ಧೆಯ ತಪ್ಪೇನು?

Actor Suriya announces film
ಕಾಲಿವುಡ್42 mins ago

Actor Suriya: ಹೊಸ ಸಿನಿಮಾ ಅನೌನ್ಸ್‌ ಮಾಡಿದ ಕಾಲಿವುಡ್‌ ನಟ ಸೂರ್ಯ: ಅಚ್ಚರಿಯಾಗಿದೆ ಪೋಸ್ಟರ್‌!

Yuva Rajkumar Yuva cutout
ಸಿನಿಮಾ44 mins ago

Yuva Rajkumar: ʻಯುವʼನ ಆರ್ಭಟ ಶುರು: ಸಿನಿಮಾ ನೋಡಿ ಬೆಳ್ಳುಳ್ಳಿ ಕಬಾಬ್‌ ಚಂದ್ರು ಏನಂದ್ರು?

hanuma vihari
ಕ್ರೀಡೆ54 mins ago

Hanuma Vihari: ಹನುಮ ವಿಹಾರಿಗೆ ಶೋಕಾಸ್‌ ನೋಟಿಸ್‌ ನೀಡಿದ ಎಸಿಎ

kolar kv gautam ramesh kumar kh muniyappa
Lok Sabha Election 202456 mins ago

Lok Sabha Election 2024: ಕೋಲಾರದಲ್ಲಿ ಕಾಂಗ್ರೆಸ್‌ ಅಚ್ಚರಿ ಅಭ್ಯರ್ಥಿ? ಪ್ರಜಾಧ್ವನಿ ಯಾತ್ರೆಯೂ ಮುಂದೂಡಿಕೆ

gangster mukhtar ansari
ದೇಶ1 hour ago

ಮುಖ್ತಾರ್‌ ಅನ್ಸಾರಿ ನಿಧನ; ಸ್ವಾತಂತ್ರ್ಯ ಹೋರಾಟಗಾರನ ಮೊಮ್ಮಗ ಗ್ಯಾಂಗ್‌ಸ್ಟರ್‌ ಆಗಿದ್ದು ಹೇಗೆ?

Pant Loses Cool
ಕ್ರೀಡೆ1 hour ago

Rishabh Pant: ಸ್ಮರಣೀಯ ಪಂದ್ಯದಲ್ಲೂ ತಾಳ್ಮೆ ಕಳೆದುಕೊಂಡ ಪಂತ್​; ವಿಡಿಯೊ ವೈರಲ್​

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ5 hours ago

Dina Bhavishya : ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ; ಈ ರಾಶಿಯವರು ಎಚ್ಚರಿಕೆ ವಹಿಸಿ

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 202420 hours ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 202422 hours ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ1 day ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20242 days ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20242 days ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20242 days ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ2 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು3 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ3 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

ಟ್ರೆಂಡಿಂಗ್‌