Apple Phone: ಬಿಜೆಪಿ ಸರ್ಕಾರದ್ದು ಪ್ರಚಾರ ಜಾಸ್ತಿ, ಫಲಿತಾಂಶ ನಾಸ್ತಿ ನೀತಿ: ಫಾಕ್ಸ್‌ಕಾನ್‌ ಕುರಿತು ಎಚ್‌.ಡಿ. ಕುಮಾರಸ್ವಾಮಿ ಟೀಕೆ Vistara News

ಕರ್ನಾಟಕ ಎಲೆಕ್ಷನ್

Apple Phone: ಬಿಜೆಪಿ ಸರ್ಕಾರದ್ದು ಪ್ರಚಾರ ಜಾಸ್ತಿ, ಫಲಿತಾಂಶ ನಾಸ್ತಿ ನೀತಿ: ಫಾಕ್ಸ್‌ಕಾನ್‌ ಕುರಿತು ಎಚ್‌.ಡಿ. ಕುಮಾರಸ್ವಾಮಿ ಟೀಕೆ

ಕರ್ನಾಟಕದಲ್ಲಿ ಹೂಡಿಕೆ ಮಾಡುವುದಾಗಿ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಇದೀಗ ಫಾಕ್ಸ್‌ಕಾನ್‌ ನಡೆ ಇದೀಗ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ.

VISTARANEWS.COM


on

apple-phone HD Kumaraswamy tweet regarding Foxconn issue
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಆಪಲ್‌ ಫೋನ್‌ಗಳ (Apple Phone) ಉತ್ಪಾದಕ ಸಂಸ್ಥೆ ಬೆಂಗಳೂರಿನಲ್ಲಿ 1 ಲಕ್ಷ ಉದ್ತೋಗ ಸೃಷ್ಟಿಸುವ ಹೂಡಿಕೆ ಮಾಡುವ ಕುರಿತು ಗೊಂದಲ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್‌ ವರಿಷ್ಠ ಎಚ್‌.ಡಿ. ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.

ಫಾಕ್ಸ್‌ಕಾನ್‌ ಹೂಡಿಕೆ ಮಾಡುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಇತ್ತೀಚೆಗೆ ಟ್ವೀಟ್‌ ಮಾಡಿದ್ದರು. ಆದರೆ ಈ ಕುರಿತು ಯಾವುದೇ ನಿರ್ದಿಷ್ಟ ಒಪ್ಪಂದ ಆಗಿಲ್ಲ ಎಂದು ಫಾಕ್ಸ್‌ಕಾನ್‌ ಹೇಳಿರುವುದು ಗೊಂದಲಕ್ಕೆ ಕಾರಣವಾಗಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಎಚ್‌.ಡಿ. ಕುಮಾರಸ್ವಾಮಿ, “ರಾಜ್ಯ ಬಿಜೆಪಿ ಪ್ರಚಾರ ಜಾಸ್ತಿ, ಫಲಿತಾಂಶ ನಾಸ್ತಿ ಎನ್ನುವ ನೀತಿ. ಇದೇ ಅದರ ಘೋಷವಾಕ್ಯ,ಧ್ಯೇಯವಾಕ್ಯ. ಜಾಹೀರಾತುಗಳಲ್ಲಿಯೇ ಜಳಕ ಮಾಡುತ್ತಿರುವ ಈ ಸರ್ಕಾರಕ್ಕೆ ಜನರ ಕ್ಷೇಮ, ಅಭಿವೃದ್ಧಿಯ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ, ಉದ್ಯೋಗ ಸೃಷ್ಟಿ ಬಗ್ಗೆ ಎಳ್ಳಷ್ಟೂ ದೂರದೃಷ್ಟಿ ಇಲ್ಲ”

“ಐಫೋನ್ ತಯಾರಿಸುವ ತೈವಾನ್‌ ದೇಶದ ಫಾಕ್ಸ್‌ ಕಾನ್‌ ಕಂಪನಿ ರಾಜ್ಯದಲ್ಲಿ ಹೂಡಿಕೆ ಮಾಡಲು ಬಂದಿದೆ ಎಂದು ಶುಕ್ರವಾರ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಹಾಗೂ ಇಬ್ಬರು ಸಚಿವರು ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಂಡರು. ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಕೈಯ್ಯಲ್ಲಿ ಸಹಿಪತ್ರಗಳನ್ನಿಡಿದು ಮಾಧ್ಯಮಗಳಿಗೆ ಪೋಸು ಕೊಟ್ಟರು.”

ಇದನ್ನೂ ಓದಿ: ಬೆಂಗಳೂರಲ್ಲಿ ಆ್ಯಪಲ್ ಫೋನ್ ಉತ್ಪಾದನಾ ಘಟಕ ಇಲ್ಲ, ಒಪ್ಪಂದ ಮಾಡಿಕೊಂಡಿಲ್ಲ ಎಂದ ಫಾಕ್ಸ್‌ಕಾನ್

“ಆ ಬೆನ್ನಲ್ಲೇ ತೈವಾನ್‌ʼನ ತೈಪೆಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಕಂಪನಿ, “ಕರ್ನಾಟಕದಲ್ಲಿ ಹೂಡಿಕೆ ಮಾಡುವ ಯಾವುದೇ ನಿರ್ಣಾಯಕ ಒಪ್ಪಂದ ಆಗಿಲ್ಲ” ಎಂದು ಸ್ಪಷ್ಟಪಡಿಸಿದೆ. ಹಾಗಾದರೆ, ಶುಕ್ರವಾರ ಮಾನ್ಯ ಬಸವರಾಜ ಬೊಮ್ಮಾಯಿ ಸಮಕ್ಷಮದಲ್ಲಿ ಆಗಿದ್ದೇನು? ಅದೇನು ಒಪ್ಪಂದವೋ ಅಥವಾ ಪ್ರಚಾರದ ಗಿಮಿಕ್ಕೋ?? ಜನರಿಗೆ ತಿಳಿಸಬೇಕಿದೆ. ಕೋವಿಡ್‌ ನಂತರದ ಕಾಲದಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆಗೆ ಬಹಳ ಮಹತ್ವವಿದೆ. ಸರಕಾರ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಎಡವಟ್ಟು ಮಾಡಿಕೊಂಡ ಕಾರಣಕ್ಕೆ ಓಲಾ ಕಂಪನಿ ಕರ್ನಾಟಕದ ಕೈ ಜಾರಿತು. ₹7,614 ಕೋಟಿ ಹೂಡಿಕೆ ತಮಿಳುನಾಡು ರಾಜ್ಯದ ಪಾಲಾಯಿತು”.

“ಚುನಾವಣೆ, ಪ್ರಚಾರಕ್ಕಿಂತ ಜನರ ಬದುಕು ಮುಖ್ಯ. ಈ ಬಿಜೆಪಿ ಸರ್ಕಾರಕ್ಕೆ ಅಧಿಕಾರವೇ ಮುಖ್ಯ. ಉಳಿದಿದ್ದೆಲ್ಲ ಅಮುಖ್ಯ. ಕನ್ನಡಿಗರ ಕಷ್ಟಗಳಿಗೆ ಕೊನೆ ಇಲ್ಲ ಎನ್ನುವಂತಾಗಿದೆ” ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Shadow CM: ಕಾಂಗ್ರೆಸ್‌ನ ಪೇಸಿಎಂ ಅಭಿಯಾನಕ್ಕೆ ಬಿಜೆಪಿಯಿಂದ ಶ್ಯಾಡೊ ಸಿಎಂ ಪೋಸ್ಟರ್ ವಾರ್

ಅಧಿಕಾರಿಗಳ ವರ್ಗಾವಣೆಯಿಂದ ಮೊದಲುಗೊಂಡು ಅನೇಕ ಕಾರ್ಯಗಳನ್ನು ಸಿಎಂ ಸಿದ್ದರಾಮಯ್ಯ ಪುತ್ರ ಹಾಗೂ ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ನಡೆಸುತ್ತಿದ್ದಾರೆ (Shadow CM) ಎಂದು ಬಿಜೆಪಿ ಆರೋಪಿಸಿದೆ.

VISTARANEWS.COM


on

Shadow CM Posters
Koo

ಬೆಂಗಳೂರು: ವಿಧಾನಸಭೆ ಎಲೆಕ್ಷನ್‌ಗೂ ಮುನ್ನ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರದ ವಿರುದ್ಧ ಪೇಸಿಎಂ ಅಭಿಯಾನವನ್ನು ಕಾಂಗ್ರೆಸ್‌ ರೂಪಿಸಿತ್ತು. ಕರ್ನಾಟಕ ರಾಜ್ಯ ಕಾಂಟ್ರಾಕ್ಟರ್ಸ್‌ ಅಸೋಸಿಯೇಷನ್‌ ಮಾಡಿದ್ದ 40% ಕಮಿಷನ್‌ ಆರೋಪವನ್ನೇ ಆಧಾರವಾಗಿಸಿಕೊಂಡು ಪೆಸಿಎಂ ಪೋಸ್ಟರ್‌ಗಳನ್ನು ಬಹಿರಂಗವಾಗಿ ಅಂಟಿಸಿತ್ತು. (Shadow CM)

ಈ ಪೋಸ್ಟರ್‌ಗಳು ಸರ್ಕಾರಕ್ಕೆ ಸಾಕಷ್ಟ ಮುಜುಗರ ಉಂಟುಮಾಡಿದ್ದವು. ರಾಜ್ಯ ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಜನರಿಗೆ ಮನವರಿಕೆ ಮಾಡುವಲ್ಲಿ ಸಾಕಷ್ಟು ಪರಿಣಾಮಕಾರಿಯಾಗಿದ್ದವು. ಇದೀಗ ಕಾಂಗ್ರೆಸ್‌ ಸರ್ಕಾರ ರಚನೆಯಾಗಿದ್ದು, ಶ್ಯಾಡೊ ಸಿಎಂ ಅಭಿಯಾನವನ್ನು ಬಿಜೆಪಿ ಕೈಗೆತ್ತಿಕೊಂಡಿದೆ.

ಅಧಿಕಾರಿಗಳ ವರ್ಗಾವಣೆಯಿಂದ ಮೊದಲುಗೊಂಡು ಅನೇಕ ಕಾರ್ಯಗಳನ್ನು ಸಿಎಂ ಸಿದ್ದರಾಮಯ್ಯ ಪುತ್ರ ಹಾಗೂ ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ನಡೆಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಇದೇ ಆರೋಪಕ್ಕೆ ಅನಗುಣವಾಗಿ ಶ್ಯಾಡೊ ಸಿಎಂ ಪೋಸ್ಟರ್‌ಗಳನ್ನು ರೂಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದೆ.

1. ಕಲೆಕ್ಷನ್ ಏಜೆಂಟ್ ಸುರ್ಜೇವಾಲಾರ ಕೈಗೊಂಬೆಯಾಗಿರುವ ಸಿದ್ದರಾಮಯ್ಯ, ಪುತ್ರನನ್ನು ಶ್ಯಾಡೋ ಸಿಎಂ ಮಾಡಿ ತಾಳಕ್ಕೆ ಕುಣಿಯುತ್ತಿದ್ದಾರೆ. ಸೋನಿಯಾ ಗಾಂಧಿಯವರ ತಾಳಕ್ಕೆ ರಾಜ್ಯದ ಕಾಂಗ್ರೆಸ್ ನಾಯಕರು ಕುಣಿಯುತ್ತಿದ್ದಾರೆ. 2024ರ ಕಾಂಗ್ರೆಸ್ ಚುನಾವಣಾ ಖರ್ಚಿಗೆ ರಾಜ್ಯ ಬಲಿಯಾಗುತ್ತಿದೆ.

2. ಸರಕಾರದ ಎಲ್ಲಾ ಬಗೆಯ ಡೀಲ್‌ಗಳಿಗೆ ನೇರವಾಗಿ ಸಂಪರ್ಕಿಸಿ…

3. ಹುದ್ದೆಗಳು ಮಾರಾಟಕ್ಕಿವೆ… #ShadowCM ರವರನ್ನು ನೇರವಾಗಿ ಸಂಪರ್ಕಿಸಬಹುದು.

4. ಹುದ್ದೆಗಳು ಮಾರಾಟಕ್ಕಿವೆ.. #ShadowCM ರವರನ್ನು ನೇರವಾಗಿ ಸಂಪರ್ಕಿಸಬಹುದು.

5. CM ನೆರಳಿನಲ್ಲಿ #ShadowCM ಅವ್ಯವಹಾರ. ಅಂಕೆ ಮೀರಿದೆ ಇವರಿಬ್ಬರ ಭ್ರಷ್ಟಾಚಾರ.

6. Commission Master in the shadows of Chief Minister!

Continue Reading

ಕರ್ನಾಟಕ

Evm Machine : ಡೆಮಾಲಿಷನ್‌ ವೇಳೆ ಎಂಜಿನಿಯರ್ ಮನೆಯಲ್ಲಿ ಇವಿಎಂ ಯೂನಿಟ್‌ಗಳು ಪತ್ತೆ!

Evm Control Units : ಮನೆ ಡೆಮಾಲಿಷನ್‌ ಸಮಯದಲ್ಲಿ ಎಂಜಿನಿಯರ್‌ವೊಬ್ಬರ ಮನೆಯಲ್ಲಿ ಇವಿಎಂ ಕಂಟ್ರೋಲ್‌ ಯೂನಿಟ್‌ಗಳು ಪತ್ತೆಯಾಗಿವೆ. ಇವಿಎಂ ಕಂಟ್ರೋಲ್‌ ಯೂನಿಟ್‌ಗಳನ್ನು ತಹಸೀಲ್ದಾರ್‌ ವಶಕ್ಕೆ ಪಡೆದುಕೊಂಡಿದ್ದಾರೆ.

VISTARANEWS.COM


on

By

EVM units
Koo

ಬೆಂಗಳೂರು ಗ್ರಾಮಾಂತರ: ಇಲ್ಲಿನ ದೊಡ್ಡಬಳ್ಳಾಪುರ ತಾಲೂಕಿನ ಮೋಪರಹಳ್ಳಿ ಗ್ರಾಮದಲ್ಲಿ ಮನೆ ಡೆಮಾಲಿಷನ್ ವೇಳೆ ಇವಿಎಂ ಕಂಟ್ರೋಲ್‌ ಯೂನಿಟ್‌ಗಳು (Evm Control Units ) ಪತ್ತೆ ಆಗಿವೆ. ದೊಡ್ಡಬಳ್ಳಾಪುರ ನಿರ್ಮಿತಿ ಕೇಂದ್ರದ ಎಂಜಿನಿಯರ್ ಶಿವಕುಮಾರ್ ಎಂಬುವವರ ಮನೆಯಲ್ಲಿ (Evm Machine) ಪತ್ತೆ ಆಗಿದೆ.

2018ರ ಚುನಾವಣೆಯಲ್ಲಿ ಬಳಸಿ ರಿಜೆಕ್ಟ್‌ ಆಗಿದ್ದ ಇವಿಎಂ ಕಂಟ್ರೋಲ್ ಯೂನಿಟ್ ಮಿಷನ್‌ಗಳು ಎನ್ನಲಾಗಿದೆ. ಅಂದಹಾಗೇ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕಾಗಿ ಮನೆಯನ್ನು ಡೆಮಾಲಿಷನ್ ಮಾಡಲಾಗುತ್ತಿತ್ತು. ಈ ವೇಳೆ ಮನೆಯ ಅವಶೇಷಗಳಲ್ಲಿ ಇವಿಎಂ ಕಂಟ್ರೋಲ್‌ ಯೂನಿಟ್‌ ಪತ್ತೆ ಆಗಿವೆ. ಯೂನಿಟ್‌ಗಳು ಪತ್ತೆಯಾದ ಹಿನ್ನೆಲೆ ಸ್ಥಳಕ್ಕೆ ತಹಸೀಲ್ದಾರ್‌ ಮೋಹನ ಕುಮಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

EVM units found in demolition
ಎಂಜಿನಿಯರ್‌ ಮನೆ ಡೆಮಾಲಿಷನ್‌ ವೇಳೆ ಇವಿಎಂ ಯೂನಿಟ್‌ಗಳು ಪತ್ತೆ

ಮನೆಯ ಅವಶೇಷದಡಿ 7 ಯೂನಿಟ್‌ಗಳು ಪತ್ತೆ ಆಗಿದ್ದು, ತಹಸೀಲ್ದಾರ್‌ ಎಲ್ಲವನ್ನೂ ವಶಕ್ಕೆ ಪಡೆದು ಹಿರಿಯ ಅಧಿಕಾರಿಗಳಿಗೆ ವರದಿ ನೀಡಿದ್ದಾರೆ. ತಹಸೀಲ್ದಾರ್‌ ಮೋಹನ ಕುಮಾರಿ ಮುಂದಿನ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಶಿವಶಂಕರ್ ಅವರಿಗೆ ವರದಿಯನ್ನು ನೀಡಿದ್ದಾರೆ. ಸದ್ಯ, ರಿಜೆಕ್ಟ್‌ ಆಗಿರುವ ಇವಿಎಂ ಕಂಟ್ರೋಲ್‌ ಯೂನಿಟ್‌ ಮಿಷನ್‌ಗಳನ್ನು ಯಾಕಾಗಿ ಮನೆಯಲ್ಲಿ ಇರಿಸಿಕೊಂಡಿದ್ದರು ಎಂಬ ಪ್ರಶ್ನೆ ಕಾಡುತ್ತಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Continue Reading

ಕರ್ನಾಟಕ

MLC Election: ವಿಧಾನ ಪರಿಷತ್‌ಗೆ ಕಾಂಗ್ರೆಸ್‌ನ ಮೂವರು ಅವಿರೋಧ ಆಯ್ಕೆ; ಶೆಟ್ಟರ್‌ ಕಮ್‌ ಬ್ಯಾಕ್‌

MLC Election: ಕಾಂಗ್ರೆಸ್‌ನ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಹಾಗೂ ತಿಪ್ಪಣ್ಣಪ್ಪ ಕಮಕನೂರು ಅವರು ಎಂಎಲ್‌ಸಿಯಾಗಿ ಅವಿರೋಧ ಆಯ್ಕೆಯಾಗಿದ್ದಾರೆ.

VISTARANEWS.COM


on

New MLC Jagadish Shettar NS Boseraju and Tippanna Kamakanoor
ಜಗದೀಶ್ ಶೆಟ್ಟರ್, ತಿಪ್ಪಣ್ಣಪ್ಪ ಕಮಕನೂರು ಹಾಗೂ ಎನ್.ಎಸ್. ಬೋಸರಾಜು
Koo

ಬೆಂಗಳೂರು: ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ (MLC Election) ಮೂವರು ಕಾಂಗ್ರೆಸ್ ಅಭ್ಯರ್ಥಿಗಳು ಅವಿರೋಧ ಅಯ್ಕೆಯಾಗಿದ್ದಾರೆ. ಪಕ್ಷೇತರ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡಿದ್ದರಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ತಿಪ್ಪಣ್ಣಪ್ಪ ಕಮಕನೂರು ಹಾಗೂ ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಅವರ ಅವಿರೋಧ ಆಯ್ಕೆ ಘೋಷಿಸಲಾಗಿದೆ.

ನಾಮಪತ್ರ ವಾಪಸ್ ಪಡೆಯಲು ಶುಕ್ರವಾರ ಕೊನೆಯ ದಿನವಾಗಿತ್ತು. ಪಕ್ಷೇತರ ಅಭ್ಯರ್ಥಿ ಡಾ.ಕೆ ಪದ್ಮರಾಜನ್‌ ಅವರ ನಾಮಪತ್ರ ಸೂಚಕರಿಲ್ಲದ ಕಾರಣ ತಿರಸ್ಕೃತಗೊಂಡಿದೆ. ಹೀಗಾಗಿ ಉಳಿದ ಮೂವರು ಕಾಂಗ್ರೆಸ್‌ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ. ಈ ಬಗ್ಗೆ ವಿಧಾನಸಭಾ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿ ಎಂ.ಕೆ.ವಿಶಾಲಾಕ್ಷಿ ಮಾಹಿತಿ ನೀಡಿದ್ದಾರೆ.

ಶೆಟ್ಟರ್‌ 5 ವರ್ಷ, ಬೋಸರಾಜು 1 ವರ್ಷ, ಕಮಕನೂರು 3 ವರ್ಷ ಎಂಎಲ್‌ಸಿ

ರಾಜ್ಯದಲ್ಲಿ ಖಾಲಿಯಾಗಿರುವ ವಿಧಾನ ಪರಿಷತ್‌ನ (MLC Election) ಮೂರು ಸ್ಥಾನಗಳಿಗೆ ಜೂನ್‌ 30ರಂದು ಚುನಾವಣೆ ನಡೆಯಬೇಕಿತ್ತು. ಆದರೆ, ಕಾಂಗ್ರೆಸ್‌ ಮೂವರು ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ. ಇನ್ನು ಇವರ ಅಧಿಕಾರಾವಧಿ ನೋಡುವುದಾದರೆ, ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ 5 ವರ್ಷ, ಹಾಲಿ ಸಚಿವ ಎನ್.ಎನ್‌. ಬೋಸ್‌ ರಾಜು 1 ವರ್ಷ ಮತ್ತು ತಿಪ್ಪಣ್ಣ ಕಮಕನೂರು 3 ವರ್ಷ ಎಂಎಲ್‌ಸಿಯಾಗಿ ಇರಲಿದ್ದಾರೆ.

ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್‌ ನಡೆಯುವ ಚುನಾವಣೆ ಇದಾಗಿದೆ. 135 ಶಾಸಕರನ್ನು ಹೊಂದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಎಲ್ಲ ಮೂರು ಸ್ಥಾನಗಳನ್ನು ಗೆದ್ದುಕೊಂಡಿದೆ.

ಇದನ್ನೂ ಓದಿ | ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ? ಸುಳಿವು ಬಿಚ್ಚಿಟ್ಟ ಸಿ.ಪಿ.ಯೋಗೇಶ್ವರ್

ಶೆಟ್ಟರ್‌ಗೆ ದೊಡ್ಡ ಗೌರವ

ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿಯಲ್ಲಿ ಟಿಕೆಟ್‌ ನಿರಾಕರಿಸಲ್ಪಟ್ಟು ಕಾಂಗ್ರೆಸ್‌ ಸೇರಿದ್ದ ಜಗದೀಶ್‌ ಶೆಟ್ಟರ್‌ ಅವರು ಚುನಾವಣೆಯಲ್ಲಿ ಸೋಲು ಕಂಡರೂ ಅವರಿಗೆ ಪಕ್ಷ ದೊಡ್ಡ ಗೌರವವನ್ನೇ ನೀಡಿದೆ. ಬಾಬುರಾವ್‌ ಚಿಂಚನಸೂರು ಅವರಿಂದ ತೆರವಾಗಿರುವ ಸ್ಥಾನಕ್ಕೆ ಜಗದೀಶ್‌ ಶೆಟ್ಟರ್‌ ಅವರು ಆಯ್ಕೆಯಾಗಿದ್ದು, ಐದು ವರ್ಷ ಸದಸ್ಯರಾಗಿರಲಿದ್ದಾರೆ.

ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಆಗಿದ್ದರಿಂದ ಈ ಬಾರಿ ಕಾಂಗ್ರೆಸ್ ಗೆ ಲಾಭವಾಗಿತ್ತು. 39 ಲಿಂಗಾಯತ ಸಮುದಾಯದ ಶಾಸಕರು ಗೆಲ್ಲುವುದರಲ್ಲಿ ಶೆಟ್ಟರ್‌ ಅವರ ವರ್ಚಸ್ಸಿನ ಪ್ರಭಾವವೂ ಇದೆ ಎಂದು ಕಾಂಗ್ರೆಸ್‌ ಕಂಡುಕೊಂಡಿದೆ. ಇದರ ಲಾಭವನ್ನು ಲೋಕಸಭಾ ಚುನಾವಣೆಯಲ್ಲಿಯೂ ಪಡೆಯಲು ಶೆಟ್ಟರ್‌ಗೆ ಮಣೆ ಹಾಕಲಾಗಿದೆ ಎಂದು ಹೇಳಲಾಗಿದೆ. ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಿಂದ ಶೆಟ್ಟರ್ ಗೆ ಐದು ವರ್ಷಗಳ ಅವಧಿ ಇರೋ ಎಂಎಲ್ಸಿ ಸ್ಥಾನವನ್ನು ಕಾಂಗ್ರೆಸ್‌ ಕೊಟ್ಟಿದೆ ಎನ್ನಲಾಗಿದೆ.

ಇದನ್ನೂ ಓದಿ | Congress Guarantee: ರಾಜ್ಯ ಬಿಜೆಪಿ ಅಧ್ಯಕ್ಷ ಮನೆಗೆ ಮಾರಿ ಪರರಿಗೆ ಉಪಕಾರಿ: ಸಚಿವ ದಿನೇಶ್‌ ಗುಂಡೂರಾವ್‌ ವಾಗ್ದಾಳಿ

ಎನ್.ಎಸ್‌. ಬೋಸರಾಜು ಅವರಿಗೆ 1 ವರ್ಷ ಅವಕಾಶವಿರುವ ಪರಿಷತ್‌ ಸದಸ್ಯತ್ವವನ್ನು ನೀಡಲಾಗಿದೆ. ಬೋಸರಾಜು ಅವರನ್ನು ಈಗಾಗಲೇ ಸಣ್ಣ ನೀರಾವರಿ ಸಚಿವರನ್ನಾಗಿ ನೇಮಕ ಮಾಡಲಾಗಿದೆ. ಇವರು ಆರ್‌.ಶಂಕರ್‌ ಅವರಿಂದ ತೆರವಾಗಿರುವ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.

ಇತ್ತ ತಿಪ್ಪಣ್ಣ ಕಮಕನೂರು ಅವರಿಗೆ ಲಕ್ಷ್ಮಣ ಸವದಿ ಅವರಿಂದ ತೆರವಾದ ಮೂರು ವರ್ಷಗಳ ಅವಧಿಯ ಮೇಲ್ಮನೆ ಸ್ಥಾನವನ್ನು ನೀಡಲಾಗಿದೆ.

Continue Reading

ಕರ್ನಾಟಕ

‌Brand Bengaluru: ವಿದ್ಯುತ್‌ ಜತೆಗೆ ಕಸದ ಶುಲ್ಕವೂ ಸೇರ್ಪಡೆಗೆ ಸಲಹೆ: ಖಚಿತಪಡಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್‌

ಬೆಂಗಳೂರನ್ನು ಉತ್ತಮಪಡಿಸಲು ಪೋರ್ಟಲ್‌ ಲಾಂಚ್ ಮಾಡ್ತಿದ್ದೇನೆ. ಪ್ರಮುಖ ನಗರಗಳಲ್ಲಿ ಪುಟ್ ಪಾತ್ ಸಮಸ್ಯೆ ಇದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

VISTARANEWS.COM


on

DK Shivakumar Thushar girinath
Koo

ಬೆಂಗಳೂರು: ಅನೇಕ ನಗರಗಳಲ್ಲಿ ಕಸ ಸಂಗ್ರಹಣೆಗೆ ಶುಲ್ಕ ವಿಧಿಸಲಾಗುತ್ತಿದೆ. ಬೆಂಗಳೂರಿನಲ್ಲೂ ಶುಲ್ಕ ವಿಧಿಸಿ ವಿದ್ಯುತ್‌ ಬಿಲ್‌ ಜತೆಗೆ ಸೇರಿಸಬೇಕು ಎಂಬ ಸಲಹೆ ಬಂದಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ನಾಗರಿಕರು ಹಾಗೂ ತಜ್ಞರಿಂದ ಸಲಹೆ ಕೇಳುವ BrandBengaluru.karnataka.gov.in ಪೋರ್ಟಲ್‌ಗೆ ಚಾಲನೆ ನೀಡಿದ ನಂತರ ಮಾತನಾಡಿದರು.

1 ಕೋಟಿ 60 ಲಕ್ಷ ಜನಸಂಖ್ಯೆ ಬೆಂಗಳೂರಿನಲ್ಲಿ ಇದೆ. 1 ಕೋಟಿ 30 ಲಕ್ಷ ಅಧಿಕೃತ ಜನಸಂಖ್ಯೆ. ಆದರೆ ಪ್ರತಿದಿನ ಬಂದು ಹೋಗವರ ಸಂಖ್ಯೆ ಹೆಚ್ಚಿದೆ. ಬೆಂಗಳೂರಿನ ಪ್ರಕೃತಿ ಗಮನದಲ್ಲಿಟ್ಟುಕೊಂಡು ಇಲ್ಲಿ ಬಂದು ನೆಲೆಸಲು ಇಚ್ಚೆ ಪಡುತ್ತಾರೆ. ಬೆಂಗಳೂರಿಗೆ ಬಂದವರು ಯಾರು ವಾಪಸು ಹೋಗಲ್ಲ.

ನಾನು ಸಹ ಬೆಂಗಳೂರಿನ ನಿವಾಸಿ. ಜನ ಸಮಾನ್ಯರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದೇನೆ. ಬಿಲ್ಡರ್ಸ್, ಉದ್ಯಮಿಗಳು ಸಹ ಕರೆಸಿದ್ದೆ ಅವರ ಅಭಿಪ್ರಾಯ ಪಡೆದಿದ್ದೇನೆ. ಹಿರಿಯ ನಾಯಕರ ಅಭಿಪ್ರಾಯ ಸಹ ಸಂಗ್ರಹ ಮಾಡಿದ್ದೇನೆ. ಮಾಜಿ ಸಿಎಂಗಳನ್ನ ಭೇಟಿ ಮಾಡ್ತೀನಿ. ಬೊಮ್ಮಾಯಿ ಸಮಯ ಕೇಳಿದ್ದೆ. ಕಸಕ್ಕೆ ಕೆಲ ನಗರಗಳಲ್ಲಿ ತೆರಿಗೆ ಹಾಕುತ್ತಿದ್ದಾರೆ. ಇಲ್ಲೂ ಹಾಕಿ ಅಂತ ಸಲಹೆ ನೀಡಿದ್ದಾರೆ. ವಿದ್ಯುತ್ ಬಿಲ್ ಜತೆಗಿನ ಇದನ್ನ ಹಾಕಲು ಸಲಹೆ ಬಂದಿದೆ. ಆದರೆ ಈಗ ವಿದ್ಯುತ್ ಬಿಲ್ ಜತೆ ಹಾಕಲು ಸಾಧ್ಯವಿಲ್ಲ ಎಂದರು.

ಬೆಂಗಳೂರನ್ನು ಉತ್ತಮಪಡಿಸಲು ಪೋರ್ಟಲ್‌ ಲಾಂಚ್ ಮಾಡ್ತಿದ್ದೇನೆ. ಪ್ರಮುಖ ನಗರಗಳಲ್ಲಿ ಪುಟ್ ಪಾತ್ ಸಮಸ್ಯೆ ಇದೆ. ಮಲ್ಲೇಶ್ವರ, ಬಸವನಗುಡಿಯಲ್ಲಿ ಪುಟ್ ಪಾತ್ ಸಮಸ್ಯೆ ಇದೆ. ಬೆಂಗಳೂರು ಟ್ರಾಫಿಕ್‌ನಲ್ಲಿ ಕೆಲಸ ಮಾಡಿದ ನಿವೃತ್ತ ಅಧಿಕಾರಿಗಳ ಅಭಿಪ್ರಾಯ ಸಂಗ್ರಹ ಮಾಡ್ತೀನಿ. ಟ್ರೈನ್ ಮತ್ತು ಬಸ್ಸು ಹೋಗುವ ರೀತಿ ಟನಲ್‌ ಮಾಡಬೇಕು ಅನ್ನೋ ಅಭಿಪ್ರಾಯ ಇದೆ. ಜಯದೇವ ಬಳಿ ಪೈಲಟ್ ಯೋಜನೆ ಅಂತ ಪರಿಗಣಿಸುತ್ತಿದ್ದೇವೆ. ಬೆಂಗಳೂರು ಪ್ಲಾನ್ಡ್‌ ಸಿಟಿ ಅಲ್ಲ. ಮುಂಬಯಿ, ದೆಹಲಿ ರೀತಿಯಲ್ಲಿ ಪ್ಲಾನ್ ಸಿಟಿ ಅಲ್ಲ. ಆದರೆ ಮುಂಬಯಿ ಮತ್ತು ದೆಹಲಿಯಲ್ಲಿ ಟ್ರಾಫಿಕ್ ಜಾಸ್ತಿ ಇದೆ. ನಮಗಿಂತಲೂ ಹೆಚ್ಚಿಜ ಟ್ರಾಫಿಕ್ ಇದೆ. ಇಲ್ಲಿ ನೀರು ನುಗ್ಗಿದರೂ ಸಮಸ್ಯೆ ಆಗುತ್ತೆ, ಅದನ್ನೇ ದೊಡ್ಡದಾಗಿ ಬರೆಯುತ್ತೀರಿ ಎಂದರು.

ಹಿಂದಿನ ಕಾಮಗಾರಿಗಳನ್ನು ಸರ್ಕಾರ ಸ್ಥಗಿತಗೊಳಿಸಿದೆ ಎಂಭ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿ, ಇನ್ನಷ್ಟು ದೊಡ್ಡಮಟ್ಟದಲ್ಲಿ ಮಾತನಾಡಲಿ. ಎಲ್ಲ ಬಿಚ್ಚಿಸ್ತೀನಿ. ಟೆಂಡರ್ ಡಬಲ್ ಆಗ್ತಿದೆ, ನಾವು ಅಧಿಕಾರಕ್ಕೆ ಬಂದ್ರೆ ಇದಕ್ಕೆ ಅವಕಾಶ ಕೊಡಲ್ಲ ಎಂದು ನಾವು ಚುನಾವಣೆ ಸಂದರ್ಭದಲ್ಲಿ ಹೇಳಿದ್ದೆವು. ನಾವು ಅದಕ್ಕೆ ಬದ್ಧರಾಗಿದ್ದೇವೆ. ಯಾವ ಗುತ್ತಿಗೆದಾರ ಏನು ಬೇಕಾದರೂ ಮಾಡಿಕೊಳ್ಳಲಿ. ಕಾನೂನಾತ್ಮಕವಾಗಿ ಪರಿಶೀಲನೆ ಮಾಡುವವರೆಗೂ ನಾವು ವರ್ಕ್ ಆರ್ಡರ್ ಕೊಡಲ್ಲ. ತನಿಖೆ ಬಳಿಕವೇ ಕಾಮಗಾರಿ ಬಿಲ್ ಬಿಡುಗಡೆ ಮಾಡ್ತೀವಿ ಎಂದರು.

ನಗರದಲ್ಲಿ ಇರೋ ಸ್ಲಮ್ ಶಿಫ್ಟ್ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಂತಹ ಸಲಹೆಗಳು ಬಂದಿವೆ. ಕೆಲವರು ಸರ್ಕಾರಿ ಜಾಗದಲ್ಲಿ ಇದ್ದಾರೆ. ಕೆಲ ಸ್ಲಮ್ ನಗರದ ಒಳಗೆ ಇವೆ. ಅದನ್ನ ಶಿಫ್ಟ್ ಮಾಡಲು ಸಮಯ ಬೇಕಾಗುತ್ತದೆ ಎಂದರು.

ಇದನ್ನೂ ಓದಿ: Rice Politics: ನಾಳೆ ಅಮಿತ್‌ ಶಾ ಭೇಟಿಗೆ ಸಿದ್ದರಾಮಯ್ಯ ದೆಹಲಿ ಪ್ರವಾಸ; ನಾನೂ ಹೋಗುವೆ ಎಂದ ಡಿಕೆಶಿ

Continue Reading
Advertisement
girl students fall ill
ಕರ್ನಾಟಕ13 mins ago

Raichur News: ಮಾನ್ವಿ ಹಾಸ್ಟೆಲ್‌ನಲ್ಲಿ ಊಟ ಸೇವಿಸಿ 14 ವಿದ್ಯಾರ್ಥಿನಿಯರು ಅಸ್ವಸ್ಥ

Fans brave the dampness, waiting for India's tour of South Africa to kick off
ಕ್ರಿಕೆಟ್24 mins ago

IND vs SA: ಮಳೆಗೆ ಕೊಚ್ಚಿ ಹೋದ ಭಾರತ-ದಕ್ಷಿಣ ಆಫ್ರಿಕಾ ಮೊದಲ ಟಿ20 ಪಂದ್ಯ

Gautam Gambhir
ಕ್ರಿಕೆಟ್46 mins ago

Gautam Gambhir: ಮತ್ತೆ ಪಾಕ್​ ಆಟಗಾರನ ಬೆಂಬಲಕ್ಕೆ ನಿಂತ ಗೌತಮ್​ ಗಂಭೀರ್

Shakti Scheme
ಕರ್ನಾಟಕ57 mins ago

Shakti Scheme: ಒಂದೇ ಆಧಾರ್‌ ಕಾರ್ಡ್‌ ಬಳಸಿ ಇಬ್ಬರ ಪ್ರಯಾಣ; ಸಿಕ್ಕಿಬಿದ್ದ ಬುರ್ಕಾಧಾರಿ ಮಹಿಳೆಯರು!

Supreme Court verdict on Article 370 and Know about this article
ದೇಶ2 hours ago

ನಾಳೆ ಆರ್ಟಿಕಲ್ 370 ರದ್ದು ತೀರ್ಪು; ಅದಕ್ಕೂ ಮೊದಲು ಈ ಸಂಗತಿ ತಿಳಿದುಕೊಂಡಿರಿ

WPL 2024 Auction
ಕ್ರಿಕೆಟ್2 hours ago

ಬಿಡ್ಡಿಂಗ್​ ಹಣದಲ್ಲಿ ತಂದೆ-ತಾಯಿಗೆ ವಿಶೇಷ ಉಡುಗೊರೆ ನೀಡಲು ಮುಂದಾದ ಕರ್ನಾಟಕದ ​ ವೃಂದಾ ದಿನೇಶ್​

Naveen Ammembala
ದಕ್ಷಿಣ ಕನ್ನಡ2 hours ago

ಹೈಪರ್ ಲೋಕಲ್ ಸುದ್ದಿಗೂ ಅಭ್ಯುದಯ ಪತ್ರಿಕೋದ್ಯಮಕ್ಕೂ ಅವಿನಾಭಾವ ಸಂಬಂಧ: ನವೀನ್ ಅಮ್ಮೆಂಬಳ

Chhattisgarh to be CM Vishnu has two deputies and Raman Singh Speaker
ದೇಶ2 hours ago

ಛತ್ತೀಸ್‍‌ಗಢ ಸಿಎಂ ವಿಷ್ಣುಗೆ ಇಬ್ಬರು ಡೆಪ್ಯುಟಿಗಳು; ರಮಣ್ ಸಿಂಗ್ ಸ್ಪೀಕರ್

Rambhapuri seer and MB Patil
ಕರ್ನಾಟಕ3 hours ago

ಎಂ.ಬಿ. ಪಾಟೀಲ್‌ಗೆ ನೀರಾವರಿ ಖಾತೆ ಸಿಗಬೇಕಿತ್ತು; ಡಿಕೆಶಿಗೆ ಕೊಟ್ಟಿದ್ದಕ್ಕೆ ರಂಭಾಪುರಿ ಶ್ರೀ ಬೇಸರ!

India U19 vs Pakistan U19
ಕ್ರಿಕೆಟ್3 hours ago

U19 Asia Cup: ಪಾಕಿಸ್ತಾನ​ ವಿರುದ್ಧ ಭಾರತಕ್ಕೆ 8 ವಿಕೆಟ್​ ಸೋಲು

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ1 week ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

DCC Bank Recruitment 2023
ಉದ್ಯೋಗ11 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ3 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Actor Shivarajkumar rejects DKS offer
ಕರ್ನಾಟಕ7 hours ago

Shiva Rajkumar: ಲೋಕಸಭೆಗೆ ಸ್ಪರ್ಧಿಸಿ ಎಂದ ಡಿಕೆಶಿ; ನಾನು ರಾಜಕೀಯಕ್ಕೆ ಬರಲ್ಲ ಎಂದ ಶಿವರಾಜ್‌ಕುಮಾರ್!

HD Kumaraswamy attack on congress
ಕರ್ನಾಟಕ9 hours ago

HD Kumaraswamy: ಬಿಜೆಪಿಗೆ ‌50 ಶಾಸಕರ ಕರ್ಕೊಂಡು ಬರ್ತೇವೆ ಎಂದಿರುವ ಕಾಂಗ್ರೆಸ್‌ ನಾಯಕ!

Dina Bhavishya
ಪ್ರಮುಖ ಸುದ್ದಿ17 hours ago

Dina Bhavishya : ಈ ರಾಶಿಯವರ ಲೆಕ್ಕಾಚಾರವು ಇಂದು ಉಲ್ಟಾ ಪಲ್ಟಾ!

read your daily horoscope predictions for december 9 2023
ಪ್ರಮುಖ ಸುದ್ದಿ2 days ago

Dina bhavishya: ಗೌಪ್ಯ ವಿಷಯ ಹೇಳುವಾಗ ಈ ರಾಶಿಯವರು ಎಚ್ಚರ!

Actress Leelavathi felicitated
South Cinema2 days ago

Actress Leelavathi: ನಮ್ಮಮ್ಮ ಲೀಲಮ್ಮ-ನಿಮ್ಮೊಳಗೆ ನಾವಮ್ಮ ಪ್ರಶಸ್ತಿ ನೀಡಿ ಗೌರವಿಸಿದ್ದ ಫಿಲ್ಮ್‌ ಚೇಂಬರ್

Actress Leelavati and Rajkumar film
South Cinema2 days ago

Actress Leelavathi: ಲೀಲಾವತಿಗೆ ಸಂದ ಪ್ರಶಸ್ತಿಗಳ ಗರಿ; ಇಲ್ಲಿದೆ ಸಿನಿ ಜರ್ನಿ ಲಿಸ್ಟ್‌

Actress Leelavati and Rajkumar film
South Cinema2 days ago

Actress Leelavathi: ತೆರೆಯಲ್ಲಿ ಮೋಡಿ ಮಾಡಿದ್ದ ಡಾ.ರಾಜ್‌ಕುಮಾರ್‌-ಲೀಲಾವತಿ ಜೋಡಿ!

PM Narenda modi and Moulvi thanveer Peera
ಕರ್ನಾಟಕ2 days ago

CM Siddaramaiah: ಮೌಲ್ವಿ ಫೋಟೊ ಹಾಕಿ ಮೋದಿ ಟಾರ್ಗೆಟ್‌ ಮಾಡಿದ ಯತ್ನಾಳ್‌ ಎಂದ ಸಿದ್ದರಾಮಯ್ಯ

Dina Bhavishya
ಪ್ರಮುಖ ಸುದ್ದಿ3 days ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ3 days ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

ಟ್ರೆಂಡಿಂಗ್‌