ST Somashekhar : ಜನಸ್ಪಂದನ ಕಾರ್ಯಕ್ರಮಕ್ಕೆ ಡಿಕೆಶಿಗೆ ಆಹ್ವಾನ; ಸೋಮಶೇಖರ್‌ ಕಾಂಗ್ರೆಸ್‌ ಸೇರ್ಪಡೆ ಫಿಕ್ಸಾ? - Vistara News

Latest

ST Somashekhar : ಜನಸ್ಪಂದನ ಕಾರ್ಯಕ್ರಮಕ್ಕೆ ಡಿಕೆಶಿಗೆ ಆಹ್ವಾನ; ಸೋಮಶೇಖರ್‌ ಕಾಂಗ್ರೆಸ್‌ ಸೇರ್ಪಡೆ ಫಿಕ್ಸಾ?

ST Somashekhar : ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್‌ ಅವರು ಶನಿವಾರ ಬೆಳಗ್ಗೆ ಮೋದಿ ಕಾರ್ಯಕ್ರಮದ ಕಡೆಗೆ ತಲೆ ಹಾಕಿಲ್ಲ. ಆದರೆ, ಸಂಜೆ ಡಿಕೆಶಿ ಜತೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ!

VISTARANEWS.COM


on

ST Somashekhar
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಯಶವಂತಪುರದ ಬಿಜೆಪಿ ಶಾಸಕರಾಗಿರುವ ಎಸ್‌ಟಿ ಸೋಮಶೇಖರ್‌ (ST Somashekhar) ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರ್ಪಡೆಯ (Operation Hasta) ಸುದ್ದಿ ನಿಜವಾಗುವ ಕಾಲ ಸನ್ನಿಹಿತವಾದಂತೆ ಕಾಣುತ್ತಿದೆ. ಹಂತ ಹಂತವಾಗಿ ಬಿಜೆಪಿಯಿಂದ ದೂರವಾಗುತ್ತಾ, ಕಾಂಗ್ರೆಸ್‌ಗೆ ಹತ್ತಿರವಾಗುತ್ತಿರುವ ಅವರ ನಡೆಯಲ್ಲಿ ಶನಿವಾರ ಒಂದು ನಿರ್ಣಾಯಕ ದಿನವಾಗುವ ಸಾಧ್ಯತೆ ಇದೆ.

ಜನಸ್ಪಂದನ ಕಾರ್ಯಕ್ರಮಕ್ಕೆ ಡಿಕೆ ಶಿವಕುಮಾರ್‌ಗೆ ಆಹ್ವಾನ

ಬಿಜೆಪಿ ಪಕ್ಷದ ಎಲ್ಲ ಕಾರ್ಯಕ್ರಮಗಳಿಂದ ದೂರವಾಗಿ ನಿಂತಿರುವ ಎಸ್‌ಟಿ ಸೋಮಶೇಖರ್‌ ಅವರು ಶನಿವಾರ ಸಂಜೆ ತಮ್ಮ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುತ್ತಿದ್ದಾರೆ. ಇದರಲ್ಲಿ ಅವರು ವೇದಿಕೆ ಹಂಚಿಕೊಳ್ಳುತ್ತಿರುವುದು ರಾಜ್ಯದ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ಅವರ ಜತೆ.

ಚೇಂಜ್‌ ಮೇಕರ್ಸ್‌ ಆಫ್‌ ಕನಕಪುರ ನಿವಾಸಿ ಸಂಘ ಎಂಬ ಸಂಸ್ಥೆ, ಶೋಭಾ ಫಾರೆಸ್ಟ್‌ ವ್ಯೂ ನಿವಾಸಿ ಸಂಘ (ಎಸ್‌ಫ್‌ವಿ) ಜತೆ ಸೇರಿಕೊಂಡು ಯಶವಂತಪುರ ವಿಧಾನಸಭಾ ಕ್ಷೇತ್ರದ ಹೆಮ್ಮಿಗೆ ಪುರ ವಾರ್ಡ್‌ ಸಂಖ್ಯೆ 198ರ ನಿವಾಸಿಗಳ ಜತೆ ʻಜನಸ್ಪಂದನʼ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರ ಅಧ್ಯಕ್ಷತೆಯನ್ನು ವಹಿಸುವವರು ಶಾಸಕ ಎಸ್‌.ಟಿ. ಸೋಮಶೇಖರ್‌. ಸಂಜೆ ನಾಲ್ಕು ಗಂಟೆಗೆ ಕಾರ್ಯಕ್ರಮ ನಡೆಯಲಿದೆ.

ST Somashekhar

ಎಸ್‌ಟಿ ಸೋಮಶೇಖರ್‌ ಅವರು ಇತ್ತೀಚೆಗೆ ಬಿಜೆಪಿಯ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಆಯೋಜಿಸಿದ್ದ ಬೆಂಗಳೂರು ಶಾಸಕರ ಸಭೆಯಲ್ಲಿ ಅವರು ಗೈರು ಹಾಜರಾಗಿದ್ದರು. ಮಾತ್ರವಲ್ಲ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬಂದಾಗಲೂ ಸೋಮಶೇಖರ್‌ ಮಾತ್ರ ತಿರುಗಿ ನೋಡಿಲ್ಲ!

ಬಿ.ಎಸ್‌. ಯಡಿಯೂರಪ್ಪ ಅವರು ಸೋಮಶೇಖರ್‌ ಅವರ ಜತೆ ಮಾತನಾಡುವ ಹೊಣೆಯನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ವಹಿಸಿದ್ದರು. ಆದರೆ, ಬೊಮ್ಮಾಯಿ ಅವರು ಮಾತನಾಡಿಲ್ಲ. ಸಿ.ಟಿ. ರವಿ, ಆರ್‌. ಅಶೋಕ್‌ ಅವರು ಕರೆಸಿಕೊಂಡು ಮಾತನಾಡಿದರೂ ಸೋಮಶೇಖರ್‌ ಅವರು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ ಹೊರತು ಸಾಂತ್ವನ ಸಿಕ್ಕಿಲ್ಲ ಎನ್ನಲಾಗಿದೆ.

ಇದರ ನಡುವೆ ಸೋಮಶೇಖರ್‌ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು. ಮತ್ತು ಅವರ ಕ್ಷೇತ್ರಕ್ಕೆ ದೊಡ್ಡ ಮೊತ್ತದ ಅನುದಾನವನ್ನು ಪಡೆದುಕೊಂಡು ಬಂದಿದ್ದರು. ಇದೆಲ್ಲವೂ ಸೋಮಶೇಖರ್‌ ಅವರು ಕಾಂಗ್ರೆಸ್‌ಗೆ ಹೋಗುವ ಸಂದೇಶ ಎಂಬಂತೆ ವಿಶ್ಲೇಷಿಸಲಾಗುತ್ತಿದೆ.

ಇದೀಗ ತಮ್ಮ ಕ್ಷೇತ್ರದಲ್ಲಿ ಡಿ.ಕೆ. ಶಿವಕುಮಾರ್‌ ಅವರಿಗೆ ಸಂಬಂಧಿಸಿದ ಸಂಘಟನೆಗಳು ಆಯೋಜಿಸಿರುವ ಜನಸ್ಪಂದನ ಕಾರ್ಯಕರ್ಮದಲ್ಲಿ ಎಸ್‌ಟಿ ಸೋಮಶೇಖರ್‌ ಭಾಗವಹಿಸುತ್ತಿರುವುದು ಭಾರಿ ಸದ್ದು ಮಾಡಿದೆ.

ಇದನ್ನೂ ಓದಿ: Operation Hasta : ಮೋದಿ ಬಂದ್ರೂ ಬರಲಿಲ್ಲ ಸೋಮಶೇಖರ್‌, ಸಿಎಂ ಭೇಟಿಯಾದ್ರು ಶಿವರಾಂ ಹೆಬ್ಬಾರ್‌! ಏನಾಗ್ತಿದೆ?

ಸಿದ್ದರಾಮಯ್ಯ ಭೇಟಿ ಮಾಡಿದ ಶಿವರಾಮ್‌ ಹೆಬ್ಬಾರ್‌

ಈ ನಡುವೆ, ಆಪರೇಷನ್‌ ಹಸ್ತದ ಸುಳಿಗೆ ಸಿಲುಕಿದ್ದಾರೆ ಎಂದು ಹೇಳಲಾದ ಇನ್ನೊಬ್ಬ ಶಾಸಕ ಶಿವರಾಮ ಹೆಬ್ಬಾರ್‌ ಅವರು ಕೂಡಾ ಶನಿವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅವರು ಬರ ಘೋಷಣೆ ಮತ್ತು ಪರಿಹಾರದ ಬೇಡಿಕೆಯನ್ನು ಇಟ್ಟುಕೊಂಡು ಹೋಗಿದ್ದಾರಾದರೂ, ನಿಜವಾದ ಉದ್ದೇಶ ಅದಲ್ಲ ಎನ್ನಲಾಗುತ್ತಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Sunil Chhetri : ಕಣ್ಣೀರು ಹಾಕುತ್ತಲೇ ಕೊನೇ ಅಂತಾರಾಷ್ಟ್ರೀಯ ಪಂದ್ಯವಾಡಿ ವಿದಾಯ ಹೇಳಿದ ಸುನಿಲ್​ ಛೆಟ್ರಿ

Sunil Chhetri :ಕುವೈತ್ ವಿರುದ್ಧದ ಡ್ರಾದ ನಂತರ ಎರಡೂ ತಂಡದ ಆಟಗಾರರು ಅವರಿಗೆ ಗಾರ್ಡ್​ ಆಫ್​ ಹಾನರ್​ ಸಲ್ಲಿಸಿದರು. ಈ ವೇಳೆ ಛೆಟ್ರಿ ಆನಂದ ಭಾಷ್ಪ ಸುರಿಸಿದರು. ಭಾರತೀಯ ಅಭಿಮಾನಿಗಳಿಂದ ಭಾರಿ ಹರ್ಷೋದ್ಗಾರ ಗೌರವ ಸಲ್ಲಿಸಿದರು. ಆಟಗಾರರು ಅವರಿಗೆ ಅಭಿನಂದನೆ ಸಲ್ಲಿಸಿದರು.

VISTARANEWS.COM


on

sunil chhetri
Koo

ಕೋಲ್ಕತ್ತಾ: ಇಲ್ಲಿನ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ 58,000 ಕ್ಕೂ ಹೆಚ್ಚು ಅಭಿಮಾನಿಗಳ ಸಮ್ಮುಖದಲ್ಲಿ ಭಾರತ ಫುಟ್ಬಾಲ್ ತಾರೆ ಸುನಿಲ್ ಛೆಟ್ರಿ (Sunil Chhetri) ಅಂತಾರಾಷ್ಟ್ರೀಯ ಫುಟ್ಬಾಲ್​ಗೆ ವಿದಾಯ ಹೇಳಿದರು. ಕತಾರ್ ವಿರುದ್ಧದ ಪಂದ್ಯದ ಫಲಿತಾಂಶವು ಡ್ರಾದಲ್ಲಿ ಕೊನೆಗೊಂಡ ಕಾರಣ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯಗಳಲ್ಲಿ ಭಾರತದ ಪ್ರಗತಿ ಹಾದಿಗೆ ಅಡಚಣೆ ಉಂಟಾಯಿತು. ಇದು ಭಾರತದ ಫುಟ್ಬಾಲ್ ಪಾಲಿಗೆ ಬೇಸರದ ವಿಷಯ. ಆದಾಗ್ಯೂ ಅಭಿಮಾನಿಗಳು ಕೆಲವು ಕ್ಷಣಗಳವರೆಗೆ ನಿರಾಶೆ ಬದಿಗಿಟ್ಟರು. ಛೆಟ್ರಿಗೆ ಪ್ರೇಕ್ಷಕರು ಗಾರ್ಡ್​ ಆಫ್​ ಹಾನರ್ ಸಲ್ಲಿಸಿದರು.

ಕುವೈತ್ ವಿರುದ್ಧದ ಡ್ರಾದ ನಂತರ ಎರಡೂ ತಂಡದ ಆಟಗಾರರು ಅವರಿಗೆ ಗಾರ್ಡ್​ ಆಫ್​ ಹಾನರ್​ ಸಲ್ಲಿಸಿದರು. ಈ ವೇಳೆ ಛೆಟ್ರಿ ಆನಂದ ಭಾಷ್ಪ ಸುರಿಸಿದರು. ಭಾರತೀಯ ಅಭಿಮಾನಿಗಳಿಂದ ಭಾರಿ ಹರ್ಷೋದ್ಗಾರ ಗೌರವ ಸಲ್ಲಿಸಿದರು. ಆಟಗಾರರು ಅವರಿಗೆ ಅಭಿನಂದನೆ ಸಲ್ಲಿಸಿದರು.

ಈ ಪಂದ್ಯದಲ್ಲಿ, 39 ವರ್ಷದ ಆಟಗಾರ ಅತ್ಯಂತ ಉತ್ಸಾಹದಲ್ಲಿದ್ದಂತೆ ಕಂಡರು. ತಮ್ಮ ಯುವ ಸಹ ಆಟಗಾರರನ್ನು ಮೀರಿಸಿ ಓಡಾಡುತ್ತಿದ್ದರು. ತಮ್ಮ 151 ನೇ ಪ್ರದರ್ಶನದಲ್ಲಿ 94 ಗೋಲುಗಳ ದಾಖಲೆಯ ಸಂಖ್ಯೆಯನ್ನು ಸೇರಿಸುವ ಭರವಸೆಯಲ್ಲಿದ್ದರು. ಆದಾಗ್ಯೂ, ಭಾರತದ ದಾಖಲೆಯ ಗೋಲ್ ಸ್ಕೋರರ್​ಗೆ ಪರಿಪೂರ್ಣ ವಿದಾಯ ಸಿಗಲಿಲ್ಲ, ಕುವೈತ್ ಆಟದಲ್ಲಿ ಪ್ರಾಬಲ್ಯ ಸಾಧಿಸಿತು.

ಛೆಟ್ರಿ 94ಗೋಲ್​ಗಳ ಸರದಾರ

39 ವರ್ಷದ ಛೆಟ್ರಿ, 94 ಗೋಲುಗಳನ್ನು ಗಳಿಸುವ ಮೂಲಕ ಕ್ರೀಡೆಯ ಇತಿಹಾಸದಲ್ಲಿ ನಾಲ್ಕನೇ ಅತಿ ಹೆಚ್ಚು ಗೋಲ್ ಸ್ಕೋರರ್ ಆಗಿ ತಮ್ಮ 19 ವರ್ಷಗಳ ಅಂತರರಾಷ್ಟ್ರೀಯ ಫುಟ್ಬಾಲ್ ವೃತ್ತಿಜೀವನವನ್ನು ಕೊನೆಗೊಳಿಸಿದರು. ಪೋರ್ಚುಗಲ್​ನ ಕ್ರಿಸ್ಟಿಯಾನೊ ರೊನಾಲ್ಡೊ (128 ಗೋಲುಗಳು), ಇರಾನ್​ನ ಅಲಿ ಡೇಯ್ (108 ಗೋಲುಗಳು) ಮತ್ತು ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ (106 ಗೋಲುಗಳು) ಅವರಿಗಿಂತ ಮೊದಲಿನ ಸ್ಥಾನಗಳಲ್ಲಿ ಇದ್ದಾರೆ.

ಪೋಷಕರು ಭಾಗಿ

ಛೆಟ್ರಿ ಅವರ ಅಂತಾರಾಷ್ಟ್ರೀಯ ಫುಟ್ಬಾಲ್​​ಗೆ ವಿದಾಯ ಹೇಳಿರುವುದು ಹೃದಯಸ್ಪರ್ಶಿ ಕ್ಷಣವಾಗಿತ್ತು. ಏಕೆಂದರೆ ಭಾವನಾತ್ಮಕ ಬೀಳ್ಕೊಡುಗೆಯಲ್ಲಿ ಅವರ ಹೆತ್ತವರಾದ ಖಾರ್ಗಾ ಮತ್ತು ಸುಶೀಲಾ, ಅವರ ಪತ್ನಿ ಸೋನಮ್ ಭಟ್ಟಾಚಾರ್ಯ ಮತ್ತು ಹಲವಾರು ಅಧಿಕಾರಿಗಳು ಮತ್ತು ಮಾಜಿ ಆಟಗಾರರು ಹಾಜರಿದ್ದರು, ಇದು ಅವರು ಭಾರತೀಯ ಫುಟ್ಬಾಲ್ ಮೇಲೆ ಬೀರಿದ ಆಳ ಪ್ರಭಾವಕ್ಕೆ ಸಾಕ್ಷಿಯಾಗಿದೆ.

ಒಂದು ವೇಳೆ ಭಾರತ ಕತಾರ್ ತಂಡವನ್ನು ಸೋಲಿಸಲು ವಿಫಲವಾದರೆ, ಪ್ರಸ್ತುತ ನಾಲ್ಕು ಅಂಕಗಳನ್ನು ಹೊಂದಿರುವ ಕುವೈತ್ ಜೂನ್ 11 ರಂದು ಅಫ್ಘಾನಿಸ್ತಾನವನ್ನು ಸೋಲಿಸಿದರೆ ವಿಶ್ವಕಪ್ ಅರ್ಹತಾ ಸುತ್ತಿನ ಮೂರನೇ ಸುತ್ತಿಗೆ ಪ್ರವೇಶಿಸಬಹುದು.

Continue Reading

ಕರ್ನಾಟಕ

Gadag News : ಕ್ಷುಲ್ಲಕ ಕಾರಣಕ್ಕೆ ಗಲಾಟೆ, ಮನೆಗಳಿಗೆ ನುಗ್ಗಿ ದೊಣ್ಣೆ, ಬಡಿಗೆಗಳಿಂದ ಹಲ್ಲೆ

Gadag News : ಜಮೀನು ಬದುವಿನ ವಿಷಯಕ್ಕೆ ಎರಡು ಗುಂಪಿನ ಮಧ್ಯೆ ಗಲಾಟೆ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಏಕಾಏಕಿ ಮನೆಗಳಿಗೆ ನುಗ್ಗಿ ದಾಳಿ ಮಾಡಿ ಹಲ್ಲೆ ನಡೆಸಿದ್ದಾರೆ. ಗಲಾಟೆಯು ಎರಡು ದಿನದ ಹಿಂದೆ ಆರಂಭಗೊಂಡಿತ್ತು. ಪೊಲೀಸ್​ ಠಾಣೆಯ ಮೆಟ್ಟಿಲೇರಿತ್ತು. ಅಲ್ಲಿ ಸಮಾಧಾನ ಮಾಡಿ ಕಳುಹಿಸಿದ್ದರು.

VISTARANEWS.COM


on

Gadag News
Koo

ಗದಗ : ಕ್ಷುಲ್ಲಕ ಕಾರಣವೊಂದಕ್ಕೆ ಮನೆಗಳಿಗೆ ನುಗ್ಗಿ ಮಹಿಳೆಯರು ಸೇರಿದಂತೆ ಮನೆ ಮಂದಿಗೆಲ್ಲ ಡೊಣ್ಣೆ, ಬಡಿಗೆಗಳಿಂದ ಹಲ್ಲೆ ನಡೆಸಿದ ಪ್ರಕರಣವೊಂದು ದಾಖಲಾಗಿದೆ. ಗದಗ (Gadag News) ತಾಲೂಕಿನ ಅಡವಿಸೋಮಾಪೂರ ಸಣ್ಣ ತಾಂಡಾದಲ್ಲಿ ಘಟನೆ ನಡೆದಿದೆ. ಇಬ್ಬರು ಮಹಿಳೆಯರು ಸೇರಿ ಐವರ ಮೇಲೆ ಹಲ್ಲೆ ನಡೆದಿದೆ

ಜಮೀನು ಬದುವಿನ ವಿಷಯಕ್ಕೆ ಎರಡು ಗುಂಪಿನ ಮಧ್ಯೆ ಗಲಾಟೆ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಏಕಾಏಕಿ ಮನೆಗಳಿಗೆ ನುಗ್ಗಿ ದಾಳಿ ಮಾಡಿ ಹಲ್ಲೆ ನಡೆಸಿದ್ದಾರೆ. ಗಲಾಟೆಯು ಎರಡು ದಿನದ ಹಿಂದೆ ಆರಂಭಗೊಂಡಿತ್ತು. ಪೊಲೀಸ್​ ಠಾಣೆಯ ಮೆಟ್ಟಿಲೇರಿತ್ತು. ಅಲ್ಲಿ ಸಮಾಧಾನ ಮಾಡಿ ಕಳುಹಿಸಿದ್ದರು. ಹಿರಿಯರ ಮಧ್ಯಸ್ಥಿಕೆಯಲ್ಲಿ ಗಲಾಟೆ ಬಗೆಹರಿಸಿಕೊಳ್ಳಲಾಗಿತ್ತು. ಇದೀಗ ಮತ್ತೆ ಏಕಾ ಏಕಿ ಗಲಾಟೆ ಮಾಡಿ ಐವರು ಜನರ ಮೇಲೆ ಹಲ್ಲೆ ನಡೆಸಲಾಗಿದೆ. ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Rain News: ಪ್ರತ್ಯೇಕ ಮಳೆ ಅವಘಡ; ಸಿಡಿಲು ಬಡಿದು ಬಾಲಕ, ಮಹಿಳೆ ದುರ್ಮರಣ

ಎರಡು ಪ್ರತ್ಯೇಕ ಮಳೆ ಅವಘಡಗಳಲ್ಲಿ ಸಿಡಿಲು ಬಡಿದು ಬಾಲಕ ಮತ್ತು ಮಹಿಳೆ ದುರ್ಮರಣ ಹೊಂದಿದ್ದಾರೆ. ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಸಿಡಿಲಿಗೆ ಬಾಲಕನೊಬ್ಬ ಬಲಿಯಾಗಿದ್ದರೆ, ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಬಂಡೆಮ್ಮ ನಗರ ಗ್ರಾಮದ ಬಳಿ ಸಿಡಿಲು ಬಡಿದು ಬಾಲಕ ಮೃತಪಟ್ಟಿದ್ದು, ಇನ್ನೊಬ್ಬ ಬಾಲಕನಿಗೆ ಗಂಭೀರ ಗಾಯಗಳಾಗಿವೆ. ಕುರಿ ಮೇಯಿಸಲು ಹೋಗಿದ್ದ ವೇಳೆ ಗುಡುಗು, ಸಿಡಿಲು ಸಹಿತ ಮಳೆ ಸುರಿದಿದ್ದು, ಈ ವೇಳೆ ಮರದ ಬಳಿ ನಿಂತಾಗ ಅವಘಡ ನಡೆದಿದೆ. ಗುಡ್ಡದಕೇರಿ ಬಡಾವಣೆಯ ನಿವಾಸಿ ಯಲ್ಲಪ್ಪ ಕಿಲೀಕೈ (17) ಮೃತ ಬಾಲಕ. ಪರಸಪ್ಪ ಕಿಲೀಕೈ (15) ಗಾಯಾಳುವಾಗಿದ್ದು, ಆತನಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇದನ್ನೂ ಓದಿ: Vijayanagara News: ತಾಯಿ, ಶಿಶು ಮರಣ ಪ್ರಕರಣ ಮರುಕಳಿಸಿದರೆ ಶಿಸ್ತು ಕ್ರಮ: ಡಿಸಿ ದಿವಾಕರ್

ಸಿಡಿಲಿಗೆ ರೈತ ಮಹಿಳೆ ಬಲಿ

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಜೆ ರಾಂಪುರದಲ್ಲಿ ಸಿಡಿಲು ಬಡಿದು ರೈತ ಮಹಿಳೆ ರತ್ನಮ್ಮ ಓತಗೇರಿ(43) ಎಂಬುವವರು ಮೃತಪಟ್ಟಿದ್ದಾರೆ. ಹೊಲಕ್ಕೆ ರತ್ನಮ್ಮನೊಂದಿಗೆ ಆಕೆಯ ಅಕ್ಕ ದೇವಮ್ಮ ಸಹ ಹೋಗಿದ್ದರು. ಮಳೆ ಆರಂಭವಾಗುತ್ತಿದ್ದಂತೆ ದೇವಮ್ಮ ಮನೆ ಸೇರಿದ್ದರು. ಆದರೆ ಹೊಲದಲ್ಲಿದ್ದ ರತ್ನಮ್ಮಗೆ ಸಿಡಿಲು ಬಡಿದಿದ್ದರಿಂದ ಮೃತಪಟ್ಟಿದ್ದಾರೆ.

Continue Reading

ಪ್ರಮುಖ ಸುದ್ದಿ

Unemployment Rate : ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಒಂದೇ ವರ್ಷದಲ್ಲಿ ಶೇಕಡಾ 4 ಇಳಿಕೆ; ವರದಿ

Unemployment Rate : ಹಿಂದಿನ ವರ್ಷಕ್ಕೆ ಹೋಲಿಸಿದರೆ 2023ರಲ್ಲಿ ಭಾರತದಲ್ಲಿ ಹೈ ನೆಟ್​ ವರ್ಥ್​ ಇಂಡಿವಿಜುಯಲ್ಸ್- HNWI (10 ಲಕ್ಷ ಡಾಲರ್​ಗೂ ಹೆಚ್ಚು ಆಸ್ತಿ ಹೊಂದಿರುವ ವ್ಯಕ್ತಿಗಳನ್ನು ಈ ರೀತಿ ಹೇಳಲಾಗುತ್ತದೆ) ​ ಸಂಖ್ಯೆ ಶೇಕಡಾ 12.2 ರಷ್ಟು ಹೆಚ್ಚಾಗಿದೆ. ದೇಶದಲ್ಲಿ ಎಚ್ಎನ್​ಡಬ್ಲ್ಯು ಐ ಸಂಪತ್ತು 2022 ರಲ್ಲಿ 1,286.7 ಬಿಲಿಯನ್ ಡಾಲರ್​ನಿಂದ 2023 ರಲ್ಲಿ ಶೇಕಡಾ 12.4 ರಷ್ಟು ಏರಿಕೆಯಾಗಿದ್ದು, 1,445.7 ಬಿಲಿಯನ್ ಡಾಲರ್​ಗೆ ತಲುಪಿದೆ

VISTARANEWS.COM


on

Unemployment Rate
Koo

ನವದೆಹಲಿ: ಕಳೆದ ಒಂದು ವರ್ಷದಲ್ಲಿ ಭಾರತವು ಉದ್ಯೋಗದ ಪ್ರಮಾಣದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ವರದಿಯೊಂದು ಹೇಳಿದೆ ಭಾರತದ ನಿರುದ್ಯೋಗ ದರವು 2023ರಲ್ಲಿ ಶೇಕಡಾ 3.1 ಕ್ಕೆ ಇಳಿಕೆಯಾಗಿದ್ದು. ಇದು 2022 ರಲ್ಲಿ ಶೇಕಡಾ 7 ರಷ್ಟಿತ್ತು ಎಂದು ಕ್ಯಾಪ್​ಜೆಮಿನಿ ರೀಸರ್ಚ್​ ಸೆಂಟರ್​ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಜಿಡಿಪಿಯಲ್ಲಿನ ಒಟ್ಟು ಶೇಕಡಾವಾರು ರಾಷ್ಟ್ರೀಯ ಉಳಿತಾಯವು 2022 ರಲ್ಲಿ ಶೇಕಡಾ 29.9 ಕ್ಕೆ ಹೋಲಿಸಿದರೆ 2023 ರಲ್ಲಿ ಶೇಕಡಾ 33.4 ಕ್ಕೆ ಏರಿಕೆಯಾಗಿದೆ ಎಂದೂ ವರದಿ ಹೇಳಿದೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ 2023ರಲ್ಲಿ ಭಾರತದಲ್ಲಿ ಹೈ ನೆಟ್​ ವರ್ಥ್​ ಇಂಡಿವಿಜುಯಲ್ಸ್- HNWI (10 ಲಕ್ಷ ಡಾಲರ್​ಗೂ ಹೆಚ್ಚು ಆಸ್ತಿ ಹೊಂದಿರುವ ವ್ಯಕ್ತಿಗಳನ್ನು ಈ ರೀತಿ ಹೇಳಲಾಗುತ್ತದೆ) ​ ಸಂಖ್ಯೆ ಶೇಕಡಾ 12.2 ರಷ್ಟು ಹೆಚ್ಚಾಗಿದೆ. ದೇಶದಲ್ಲಿ ಎಚ್ಎನ್​ಡಬ್ಲ್ಯು ಐ ಸಂಪತ್ತು 2022 ರಲ್ಲಿ 1,286.7 ಬಿಲಿಯನ್ ಡಾಲರ್​ನಿಂದ 2023 ರಲ್ಲಿ ಶೇಕಡಾ 12.4 ರಷ್ಟು ಏರಿಕೆಯಾಗಿದ್ದು, 1,445.7 ಬಿಲಿಯನ್ ಡಾಲರ್​ಗೆ ತಲುಪಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಈ ವಿಚಾರದಲ್ಲಿ ಜಾಗತಿಕವಾಗಿ ಭಾರತ ಮತ್ತು ಆಸ್ಟ್ರೇಲಿಯಾ ಅತ್ಯುತ್ತಮವಾಗಿದೆ. ಇಲ್ಲಿ ಎಚ್ಎನ್​ಡಬ್ಲ್ಯುಐ ಸಂಪತ್ತಿನ ಬೆಳವಣಿಗೆಯನ್ನು ಕ್ರಮವಾಗಿ ಶೇಕಡಾ 12.4 ಮತ್ತು ಶೇಕಡಾ 7.9 ಮತ್ತು ಎಚ್​ಎನ್​ಡಬ್ಲ್ಯು ಜನಸಂಖ್ಯೆಯ ಬೆಳವಣಿಗೆ ಕ್ರಮವಾಗಿ ಶೇಕಡಾ 12.2 ಮತ್ತು ಶೇಕಡಾ 7.8 ರಷ್ಟು ದಾಖಲಾಗಿದೆ.

ಈ ಎರಡೂ ದೇಶಗಳಲ್ಲಿನ ಸಂಪತ್ತಿನ ಬೆಳವಣಿಗೆಯು ಸ್ಥಿರ ಆರ್ಥಿಕತೆ ಮತ್ತು ಈಕ್ವಿಟಿ ಮಾರುಕಟ್ಟೆಗಳ ದೃಢವಾದ ಕಾರ್ಯಕ್ಷಮತೆ ಆಗಿದೆ ಎಂದು ವರದಿ ತೋರಿಸಿವೆ. ಕಳೆದ ಆರು ತ್ರೈಮಾಸಿಕಗಳಲ್ಲಿ ಭಾರತದ ಆರ್ಥಿಕತೆಯು ತನ್ನ ತ್ವರಿತ ಗತಿಯಲ್ಲ ಬೆಳೆದಿದೆ. ಇದು ದೃಢವಾದ ಖಾಸಗಿ ಬಳಕೆ ಮತ್ತು ಉತ್ಪಾದನೆ ಮತ್ತು ನಿರ್ಮಾಣ ಚಟುವಟಿಕೆಗಳಲ್ಲಿನ ಸಕಾರಾತ್ಮಕ ಪ್ರವೃತ್ತಿಗಳಿಂದ ಆಗಿದೆ ಎಂದು ವರದಿ ಹೇಳಿದೆ.

ಇದನ್ನೂ ಓದಿ: Lok Sabha Election : ಶತಕ ಬಾರಿಸಿದ ಕಾಂಗ್ರೆಸ್​​; ಪಕ್ಷೇತರನ ಬೆಂಬಲದೊಂದಿಗೆ ಕಾಂಗ್ರೆಸ್​ನ ಸೀಟ್​ಗಳ ಸಂಖ್ಯೆ 100ಕ್ಕೆ ಏರಿಕೆ

2022 ರಲ್ಲಿ ಶೇಕಡಾ 6 ರಷ್ಟು ಹೆಚ್ಚಳದ ನಂತರ ದೇಶದ ಮಾರುಕಟ್ಟೆ ಬಂಡವಾಳೀಕರಣವು ಕಳೆದ ವರ್ಷ ಶೇಕಡಾ 29 ರಷ್ಟು ಹೆಚ್ಚಾಗಿದೆ. ಸುಧಾರಿತ ಬಂಡವಾಳ ವೆಚ್ಚ, ಬಲವಾದ ಬ್ಯಾಂಕಿಂಗ್ ವ್ಯವಸ್ಥೆ, ಸಾಲದ ಬೆಳವಣಿಗೆ, ವಾಹನಗಳು ಮತ್ತು ವಿದ್ಯುತ್​ಗೆ ಹೆಚ್ಚಿದ ಬೇಡಿಕೆ ಮತ್ತು ಡಿಜಿಟಲೀಕರಣ-ಚಾಲಿತ ಉತ್ಪಾದನೆಗಳ ಹೆಚ್ಚಳದಂತಹ ಅಂಶಗಳು ಈ ಪ್ರವೃತ್ತಿಯನ್ನು ಹೆಚ್ಚಿಸಿದೆ ಎಂದು ವರದಿಯು ತಿಳಿಸಿದೆ.

ವಿದೇಶಿ ಬಂಡವಾಳ ಹೂಡಿಕೆ (ಎಫ್ಪಿಐ) ಹರಿವು 2023-24ರಲ್ಲಿ ಗಮನಾರ್ಹ ಏರಿಕೆ ಕಂಡಿದೆ. ಒಟ್ಟು ಎಫ್ಪಿಐ ಒಳಹರಿವು 24.9 ಬಿಲಿಯನ್ ಡಾಲರ್ (ಡಿಸೆಂಬರ್ 6 ರವರೆಗೆ) ಹಿಂದಿನ ಎರಡು ವರ್ಷಗಳ ನಿವ್ವಳ ಹೊರಹರಿವಿಗೆ ಹೋಲಿಸಿದರೆ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.

Continue Reading

ಪ್ರಮುಖ ಸುದ್ದಿ

Lok Sabha Election : ಶತಕ ಬಾರಿಸಿದ ಕಾಂಗ್ರೆಸ್​​; ಪಕ್ಷೇತರನ ಬೆಂಬಲದೊಂದಿಗೆ ಕಾಂಗ್ರೆಸ್​ನ ಸೀಟ್​ಗಳ ಸಂಖ್ಯೆ 100ಕ್ಕೆ ಏರಿಕೆ

Lok Sabha Election : ಉದ್ಧವ್ ಠಾಕ್ರೆ ಈ ಸ್ಥಾನವನ್ನು ಕಾಂಗ್ರೆಸ್​ಗೆ ಬಿಟ್ಟುಕೊಡಲು ನಿರಾಕರಿಸಿದ್ದರು. ಹೀಗಾಗಿ ಪಾಟಿಲ್​ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಅವರು ತಮ್ಮ ಸಮೀಪದ ಬಿಜೆಪಿಯ ಸಂಜಯ್ ಪಾಟೀಲ್ ಅವರನ್ನು 1,00,053 ಮತಗಳಿಂದ ಸೋಲಿ ಸಿದ್ದರು. ಇಲ್ಲಿ ಶಿವಸೇನೆ ಅಭ್ಯರ್ಥಿ ಚಂದ್ರಹರ್ ಪಾಟೀಲ್ ಕೇವಲ 60,860 ಮತಗಳನ್ನು ಪಡೆದಿದ್ದರು.

VISTARANEWS.COM


on

Lok Sabha Election
Koo

ನವದೆಹಲಿ: ಲೋಕ ಸಭಾ ಚುನಾವಣೆಯಲ್ಲಿ (Lok Sabha Election) ಮಹಾರಾಷ್ಟ್ರದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಗೆದ್ದಿದ್ದ ಸಂಸದರೊಬ್ಬರು ಗುರುವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಹೀಗಾಗಿ ಹಳೆ ಪಕ್ಷದ ಒಟ್ಟು ಸದಸ್ಯರ 100ಕ್ಕೆ ಏರಿಕೆಯಾಗಿದೆ. ಈ ಮೂಲಕ ಕಾಂಗ್ರೆಸ್ ಪಕ್ಷ ಶತಕದ ಸಂಭ್ರವನ್ನಾಚರಿಸಿದೆ. ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ ಒಪ್ಪಂದದ ಅಡಿಯಲ್ಲಿ ಮಹಾ ವಿಕಾಸ್ ಅಘಾಡಿ ಮೈತ್ರಿ ಪಾಲುದಾರ ಶಿವಸೇನೆ (ಯುಬಿಟಿ) ಗೆ ಟಿಕೆಟ್​ ನೀಡಿದ್ದಕ್ಕೆ ಬೇಸರಗೊಂಡಿದ್ದ ಕಾಂಗ್ರೆಸ್ ಮುಖಂಡ ವಿಶಾಲ್ ಪಾಟೀಲ್ ಸಾಂಗ್ಲಿಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ಇದೀಗ ಅವರು ಮಾತೃಪಕ್ಷಕ್ಕೆ ವಾಪಸಾಗಿರುವ ಕಾರಣ ಕಾಂಗ್ರೆಸ್ ಸದಸ್ಯರ ಸಂಖ್ಯೆ ಹೆಚ್ಚಿದೆ.

ಉದ್ಧವ್ ಠಾಕ್ರೆ ಈ ಸ್ಥಾನವನ್ನು ಕಾಂಗ್ರೆಸ್​ಗೆ ಬಿಟ್ಟುಕೊಡಲು ನಿರಾಕರಿಸಿದ್ದರು. ಹೀಗಾಗಿ ಪಾಟಿಲ್​ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಅವರು ತಮ್ಮ ಸಮೀಪದ ಬಿಜೆಪಿಯ ಸಂಜಯ್ ಪಾಟೀಲ್ ಅವರನ್ನು 1,00,053 ಮತಗಳಿಂದ ಸೋಲಿ ಸಿದ್ದರು. ಇಲ್ಲಿ ಶಿವಸೇನೆ ಅಭ್ಯರ್ಥಿ ಚಂದ್ರಹರ್ ಪಾಟೀಲ್ ಕೇವಲ 60,860 ಮತಗಳನ್ನು ಪಡೆದಿದ್ದರು.

ಮಹಾರಾಷ್ಟ್ರದ ಜನರು ದ್ರೋಹ, ಅಹಂಕಾರ ಮತ್ತು ವಿಭಜನೆಯ ರಾಜಕೀಯವನ್ನು ಸೋಲಿಸಿದ್ದಾರೆ. ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜ್, ಮಹಾತ್ಮ ಜ್ಯೋತಿಬಾ ಫುಲೆ ಮತ್ತು ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಅವರಂತಹ ನಮ್ಮ ಪ್ರೇರಣಾದಾಯಕ ನಾಯಕರಿಗೆ ಇದು ಸೂಕ್ತ ಗೌರವವಾಗಿದೆ. ಸಾಂಗ್ಲಿಯ ಚುನಾಯಿತ ಸಂಸದ ಶ್ರೀ ವಿಶಾಲ್ ಪಾಟೀಲ್ (@patilvishalvp) ಅವರು ಕಾಂಗ್ರೆಸ್ ಪಕ್ಷಕ್ಕೆ ನೀಡಿದ ಬೆಂಬಲವನ್ನು ಸ್ವಾಗತಿಸುತ್ತೇನೆ. ಸಂವಿಧಾನ ದೀರ್ಘಕಾಲ ಸುರಕ್ಷಿತವಾಗಿರಲಿ ಎಂದು ಬರೆಯಲಾಗಿದೆ.

ಪಾಟೀಲ್ ಅವರ ಬೆಂಬಲವು ಲೋಕಸಭೆಯಲ್ಲಿ 99 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್​ಗೆ ಗಮನಾರ್ಹ ಉತ್ತೇಜನ ಸಿಕ್ಕಿದೆ. ಈ ಪಕ್ಷ ಹಿಂದಿನ ಚುನಾವಣೆಯಲ್ಲಿ ಪಡೆದಿದ್ದ 52 ರಿಂದ ತನ್ನ ಸಂಖ್ಯೆಯನ್ನು ದುಪ್ಪಟ್ಟು ಮಾಡಿದೆ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಮಹಾರಾಷ್ಟ್ರದ 48 ಸ್ಥಾನಗಳಲ್ಲಿ 30 ಸ್ಥಾನಗಳನ್ನು ಗೆದ್ದಿವೆ. ಮತ್ತೊಂದೆಡೆ, ಬಿಜೆಪಿ-ಎನ್ಸಿಪಿ-ಶಿವಸೇನೆ ಮಹಾಯುತಿ ಮೈತ್ರಿಕೂಟವು ಕೇವಲ 17 ಸ್ಥಾನಗಳನ್ನು ಗಳಿಸಿತ್ತು.

ಇದನ್ನೂ ಓದಿ: Kangana Ranaut : ಪಂಜಾಬ್​ನಲ್ಲಿ ಭಯೋತ್ಪಾದನೆ ಹೆಚ್ಚುತ್ತಿದೆ; ತಮ್ಮ ಮೇಲೆ ಹಲ್ಲೆ ನಡೆಸಿದ ಬಗ್ಗೆ ಕಂಗನಾ ಪ್ರತಿಕ್ರಿಯೆ ಹೀಗಿತ್ತು

ಲೋಕಸಭಾ ಚುನಾವಣಾ ಫಲಿತಾಂಶದ ಬಗ್ಗೆ ಚರ್ಚಿಸಲು ಇಂಡಿಯಾ ಬಣದ ಸದಸ್ಯರು ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ ಸಭೆ ಸೇರಿದರು. “ನಮ್ಮ ಮೈತ್ರಿಕೂಟಕ್ಕೆ ದೊರೆತ ಅಪಾರ ಬೆಂಬಲಕ್ಕಾಗಿ ಇಂಡಿಯಾ ಬಣದ ಘಟಕಗಳು ಭಾರತದ ಜನರಿಗೆ ಧನ್ಯವಾದ ಅರ್ಪಿಸುತ್ತವೆ. ಜನಾದೇಶವು ಬಿಜೆಪಿ ಮತ್ತು ಅವರ ದ್ವೇಷ ಮತ್ತು ಭ್ರಷ್ಟಾಚಾರದ ರಾಜಕೀಯಕ್ಕೆ ಸೂಕ್ತ ಉತ್ತರ ನೀಡಿದೆ” ಎಂದು ಖರ್ಗೆ ಸಭೆಯ ನಂತರ ಹೇಳಿದರು.

“ಇದು ಭಾರತದ ಸಂವಿಧಾನವನ್ನು ರಕ್ಷಿಸಲು ಮತ್ತು ಬೆಲೆ ಏರಿಕೆ, ನಿರುದ್ಯೋಗ ಮತ್ತು ಕ್ರೋನಿ ಕ್ಯಾಪಿಟಲಿಸಂ ವಿರುದ್ಧ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಜನಾದೇಶವಾಗಿದೆ. ಮೋದಿ ನೇತೃತ್ವದ ಬಿಜೆಪಿಯ ಫ್ಯಾಸಿಸ್ಟ್ ಆಡಳಿತದ ವಿರುದ್ಧ ಭಾರತ ಬಣವು ಹೋರಾಟವನ್ನು ಮುಂದುವರಿಸುತ್ತದೆ” ಎಂದು ಅವರು ಹೇಳಿದರು.

Continue Reading
Advertisement
karnataka weather Forecast
ಮಳೆ4 mins ago

Karnataka Weather : ಗುಡುಗು ಸಹಿತ ಭಾರಿ ಮಳೆ; ಇಂದಿನಿಂದ 5 ದಿನ ಮೀನುಗಾರರು ಸಮುದ್ರಕ್ಕೆ ಇಳಿಯುವಂತಿಲ್ಲ

pulses benefits
ಆರೋಗ್ಯ33 mins ago

Pulses Benefits: ಬೇಳೆಕಾಳುಗಳಲ್ಲಿರುವ ಎಲ್ಲ ಪೋಷಕಾಂಶಗಳು ದೇಹಕ್ಕೆ ಸೇರಬೇಕಾದರೆ ಹೀಗೆ ಮಾಡಿ!

dry fruits
ಆಹಾರ/ಅಡುಗೆ2 hours ago

Dry Fruits: ಈ ಒಣಹಣ್ಣುಗಳನ್ನು ಬೆಳಗ್ಗೆ ಎದ್ದ ಕೂಡಲೇ ತಿನ್ನುವುದು ಒಳ್ಳೆಯದಲ್ಲ!

Dina Bhavishya
ಭವಿಷ್ಯ2 hours ago

Dina Bhavishya :‌ ನಂಬಿಕೆ ಇಟ್ಟು ಕಾರ್ಯದಲ್ಲಿ ಮುನ್ನುಗ್ಗಿ ಯಶಸ್ಸು ಗ್ಯಾರಂಟಿ

T 20 Wordl Cup
ಕ್ರೀಡೆ3 hours ago

T20 World Cup : ಕ್ರಿಕೆಟ್​ ಕೂಸು ಅಮೆರಿಕ ತಂಡದ ವಿರುದ್ಧ ಸೋತ ಪಾಕಿಸ್ತಾನ

Stock Market Crash
ಪ್ರಮುಖ ಸುದ್ದಿ7 hours ago

Stock Market Crash : ವಿದೇಶಿ ಹೂಡಿಕೆಗಳು ಬರದಂತೆ ರಾಹುಲ್ ಗಾಂಧಿ ಪಿತೂರಿ ಮಾಡುತ್ತಿದ್ದಾರೆ; ಬಿಜೆಪಿಯಿಂದ ತಿರುಗೇಟು

sunil chhetri
ಪ್ರಮುಖ ಸುದ್ದಿ7 hours ago

Sunil Chhetri : ಕಣ್ಣೀರು ಹಾಕುತ್ತಲೇ ಕೊನೇ ಅಂತಾರಾಷ್ಟ್ರೀಯ ಪಂದ್ಯವಾಡಿ ವಿದಾಯ ಹೇಳಿದ ಸುನಿಲ್​ ಛೆಟ್ರಿ

Shri Bhandara Keri Mutt Shri Vidyesh Theertha Swamiji ashirvachan
ಕರ್ನಾಟಕ7 hours ago

Mysore News: ಅಧ್ಯಯನದಲ್ಲಿ ಆನಂದ ಕಾಣುವವರು ಮಾತ್ರ ಉನ್ನತ ಮಟ್ಟದ ಜ್ಞಾನಾರ್ಜನೆ ಮಾಡಲು ಸಾಧ್ಯ: ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ

Gadag News
ಕರ್ನಾಟಕ8 hours ago

Gadag News : ಕ್ಷುಲ್ಲಕ ಕಾರಣಕ್ಕೆ ಗಲಾಟೆ, ಮನೆಗಳಿಗೆ ನುಗ್ಗಿ ದೊಣ್ಣೆ, ಬಡಿಗೆಗಳಿಂದ ಹಲ್ಲೆ

Rain News
ಕರ್ನಾಟಕ9 hours ago

Rain News: ಪ್ರತ್ಯೇಕ ಮಳೆ ಅವಘಡ; ಸಿಡಿಲು ಬಡಿದು ಬಾಲಕ, ಮಹಿಳೆ ದುರ್ಮರಣ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ18 hours ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ3 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ4 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ4 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ5 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು6 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 weeks ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

ಟ್ರೆಂಡಿಂಗ್‌