Bigg Boss Kannada | ಬಿಗ್‌ ಬಾಸ್‌ ಮೊದಲ ಸ್ಪರ್ಧಿಯಾಗಿ ಆರ್ಯವರ್ಧನ್‌ ಗುರೂಜಿ ಎಂಟ್ರಿ - Vistara News

ಕಿರುತೆರೆ/ಒಟಿಟಿ

Bigg Boss Kannada | ಬಿಗ್‌ ಬಾಸ್‌ ಮೊದಲ ಸ್ಪರ್ಧಿಯಾಗಿ ಆರ್ಯವರ್ಧನ್‌ ಗುರೂಜಿ ಎಂಟ್ರಿ

ಬಿಗ್‌ ಬಾಸ್‌ ಕನ್ನಡ (Bigg Boss Kannada) ಒಟಿಟಿ (Bigg Boss OTT) ಯಲ್ಲಿ ಮೊದಲ ಸ್ಪರ್ಧಿಯಾಗಿ ಆರ್ಯವರ್ಧನ್‌ ಗುರೂಜಿ ಎಂಟ್ರಿ ಕೊಟ್ಟಿದ್ದಾರೆ.

VISTARANEWS.COM


on

Bigg Boss kannada
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬಿಗ್‌ಬಾಸ್‌ ಒಟಿಟಿ (Bigg Boss Kannada) (ಆ.6) ಶನಿವಾರ ಸಂಜೆ 7 ಗಂಟೆಗೆ ಗ್ರ್ಯಾಂಡ್‌ ಓಪನಿಂಗ್‌ ಪಡೆದುಕೊಳ್ಳುತ್ತಿದೆ. ಮೊದಲ ಸ್ಪರ್ಧಿಗಳ ಬಗ್ಗೆ ಎಲ್ಲರಿಗೂ ಕುತೂಹಲವಿತ್ತು. ಇದೀಗ ಮೊದಲ ಸ್ಪರ್ಧಿ ಹೆಸರನ್ನು ರಿವೀಲ್‌ ಮಾಡಲಾಗಿದೆ. ಮೊದಲ ಸ್ಪರ್ಧಿಯಾಗಿ ಆರ್ಯವರ್ಧನ್‌ ಗುರೂಜಿ ಬಿಗ್‌ಬಾಸ್‌ ಮನೆ ಸೇರಿದ್ದಾರೆ.

ಆರ್ಯವರ್ಧನ್‌ ಗುರೂಜಿ
ಆರ್ಯವರ್ಧನ್‌ ಗುರೂಜಿ ಅವರು ಸಂಖ್ಯಾಶಾಸ್ತ್ರ ತಜ್ಞರಾಗಿದ್ದಾರೆ. ಇವರು ಐಪಿಎಲ್‌ ಸಂದರ್ಭದಲ್ಲಿ ಖಾಸಗಿ ವಾಹಿನಿಯೊಂದರಲ್ಲಿ ಸಂಖ್ಯಾಬಲದ ಮೂಲಕ ಯಾವ ತಂಡ ಗೆಲ್ಲುತ್ತದೆ? ಸೋಲುತ್ತದೆ ಎಂಬ ಬಗ್ಗೆ ಊಹಿಸುತ್ತಿದ್ದರು. ಆದರೆ, ಅವರ ಲೆಕ್ಕಾಚಾರ ತಪ್ಪಾಗಿ ಟ್ರೋಲ್‌ಗೆ ಒಳಗಾಗುತ್ತಿದ್ದರು. ಸಾಕಷ್ಟು ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬೆಂಬಲಿಸಿಕೊಂಡ ಬಂದಿದ್ದ ಆರ್ಯವರ್ಧನ್‌ ಅವರಿಗೆ ಸಾಕಷ್ಟು ಫಾಲೋವರ್ಸ್ ಕೂಡ ಇದ್ದಾರೆ. ಜನ್ಮದಿನಾಂಕ, ನಕ್ಷತ್ರದ ಮೇಲೆ ಆರ್ಯವರ್ಧನ್ ಅವರು ವ್ಯಕ್ತಿಗಳ ಭವಿಷ್ಯ ಹೇಳುತ್ತಾರೆ. ಈ ಹಿಂದಿನ ಬಿಗ್‌ ಬಾಸ್‌ ಕಾರ್ಯಕ್ರಮಗಳಲ್ಲಿ ಬ್ರಹ್ಮಾಂಡ ಗುರೂಜಿ, ಕಾಳಿ ಸ್ವಾಮಿಯಂತಹ ಗುರೂಜಿಗಳು ಬಂದಿದ್ದರು. ಇವರು ಹೇಗೆ ರಂಜಿಸಲಿದ್ದಾರೆ ಎಂಬುದು ನೋಡಬೇಕಿದೆ.

ಇದನ್ನೂ ಓದಿ | Bigg Boss Kannada | ಹೇಗಿದೆ ಬಿಗ್‌ ಬಾಸ್‌ ಒಟಿಟಿ ಶೋ ಮನೆ?

ಒಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ 24 ಗಂಟೆ ಲೈವ್‌ನಲ್ಲಿ ಪ್ರಸಾರವಾಗಲಿದ್ದು, ಮನೆಯಲ್ಲಿ ನಡೆಯುವ ಎಲ್ಲ ಮಾಹಿತಿ ಸಿಗಲಿದೆ. ಇದೇ ಮೊದಲ ಬಾರಿಗೆ ಬಿಗ್ ಬಾಸ್ ಒಟಿಟಿಯಲ್ಲಿ ಪ್ರಸಾರ ಆಗುತ್ತಿದೆ. ವೂಟ್‌ ಆ್ಯಪ್ ಡೌನ್‌ಲೋಡ್‌ ಮಾಡಿಕೊಂಡರೆ ಮಾತ್ರ ಈ ಕಾರ್ಯಕ್ರಮ ನೋಡಲು ಸಾಧ್ಯ.

ಮುಂದೆ ಬರಲಿರುವ ಬಿಗ್ ಬಾಸ್ ಕನ್ನಡ ಸೀಸನ್ 9 ಟಿವಿಯಲ್ಲಿಯೂ ಪ್ರಸಾರವಾಗಲಿದೆ. ಬಿಗ್‌ ಬಾಸ್ ಒಟಿಟಿ ಶೋ ಮುಗಿದ ನಂತರದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 9 ಆರಂಭವಾಗಲಿದೆ.

ಇದನ್ನೂ ಓದಿ | Bigg Boss Kannada | ಓವರ್ ದಿ ಟಾಪ್ ಹಾಡಿಗೆ ಓವರ್ ದಿ ಟಾಪ್ ಚಪ್ಪಾಳೆ: ಬಿಗ್ ಬಾಸ್ ಒಟಿಟಿ ಪ್ರೋಮೊ ರಿಲೀಸ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Kannada Web Series: ಹೀರೋ ಆಗಿ ಅದೃಷ್ಟ ಪರೀಕ್ಷೆಗಿಳಿದ ಬಸ್ ಮೆಕಾನಿಕಲ್; ಸೆಟ್ಟೇರಿತು ‘ಕರ್ನಾಟಕ Love’s ಕೇರಳ’ ವೆಬ್ ಸಿರೀಸ್

Kannada Web Series: ಕನ್ನಡದಲ್ಲಿ ವೆಬ್‌ ಸೀರಿಸ್‌ಗಳು ಕಡಿಮೆ. ಇದೀಗ ಈ ಕೊರತೆಯನ್ನು ನೀಗಿಸಲು ಹೊಸಬರ ತಂಡವೊಂದು ಮುಂದಾಗಿದೆ. ‘ಕರ್ನಾಟಕ Love’s ಕೇರಳ’ ಹೆಸರಿನ ವೆಬ್‌ ಸೀರಿಸ್‌ ಬೆಂಗಳೂರಿನಲ್ಲಿ ಸೆಟ್ಟೇರಿದೆ.

VISTARANEWS.COM


on

kannada web series
Koo

ಬೆಂಗಳೂರು: ಸ್ಯಾಂಡಲ್‌ವುಡ್‌ ಈಗ ಹೊಸಬರಿಗೆ ವಿಫುಲ ಅವಕಾಶವಿದೆ. ಹೊಸಬರ ಚಿತ್ರಗಳು ಸಿನಿಪ್ರಿಯರ ಮೆಚ್ಚುಗೆ ಗಳಿಸುತ್ತಿವೆ. ಇದೀಗ ಮತ್ತೊಂದು ಪ್ರತಿಭಾನ್ವಿತ ಹಾಗೂ ಯುವ ಸಿನಿಮೋತ್ಸಾಹಿಗಳ ತಂಡವೊಂದು ಸೇರಿ ‘ಕರ್ನಾಟಕ Love’s ಕೇರಳ’ (Karnataka Loves Kerala) ಎಂಬ ವೆಬ್ ಸಿರೀಸ್ ರೂಪಿಸುತ್ತಿದೆ.‌ ಅದರ ಮೊದಲ ಭಾಗವಾಗಿ ಇತ್ತೀಚೆಷ್ಟೇ ಬೆಂಗಳೂರಿನ ವೆಂಕಟೇಶ್ವರ ದೇಗುಲದಲ್ಲಿ ವೆಬ್‌ ಸೀರಿಸ್‌ (Kannada Web Series)ಗೆ ಮುಹೂರ್ತ ನಡೆಸಲಾಯಿತು. ‘ಕರ್ನಾಟಕ Love’s ಕೇರಳ’ ಸಿರೀಸ್‌ಗೆ ಗರುಡ ರಾಮ್ ಕ್ಲಾಪ್ ಮಾಡಿದ್ದು, ವೀರಕಪುತ್ರ ಶ್ರೀನಿವಾಸ್ ಕ್ಯಾಮೆರಾ ಚಾಲನೆ ನೀಡಿದರು.

‘ಕರ್ನಾಟಕ Love’s ಕೇರಳ’ ವೆಬ್ ಸರಣಿಗೆ ಯುವ ಪ್ರತಿಭೆ ಲೋಕೇಶ್ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ನಿರ್ದೇಶನದ ಜತೆಗೆ ನಾಯಕನಾಗಿಯೂ ಅದೃಷ್ಟ ಪರೀಕ್ಷೆಗಿಳಿದ್ದಾರೆ. ಬಸ್ ಮೆಕಾನಿಕಲ್ ಆಗಿರುವ ಲೋಕೇಶ್‌‌ ಒಂದಷ್ಟು ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಹಲವು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿಯಿಸಿದ್ದು, ಇದೀಗ ಪೂರ್ಣ ಪ್ರಮಾಣದ ನಾಯಕನಾಗಿ ಬಣ್ಣ ಹಚ್ಚುತ್ತಿದ್ದಾರೆ. ಇವರಿಗೆ ಜೋಡಿಯಾಗಿ ಜ್ಯೋತಿ, ಸಹನಾ ಸಾಥ್ ನೀಡುತ್ತಿದ್ದಾರೆ.

ಎಂ.ಎಂ.ಕೆ. ಬಾಲು ನಿರ್ಮಾಣ‌ ಮಾಡುತ್ತಿರುವ ʼಕರ್ನಾಟಕದ love’s ಕೇರಳʼ ಸಿರೀಸ್‌ಗೆ ಲೋಕೇಶ್ ಅವರದ್ದೇ ಕಥೆ ಚಿತ್ರಕಥೆ. ಟೈಟಲ್ ಹೇಳುವಂತೆ ಇದೊಂದು ಪ್ರೇಮಕಥೆ‌‌ ಒಳಗೊಂಡಿದೆ. ಆನಂದ್ ಇಳಯರಾಜ ಛಾಯಾಗ್ರಹಣ, ಪ್ರವೀಣ್ ಶ್ರೀನಿವಾಸ್ ಸಂಗೀತ, ಮಹೇಶ್ ಸಂಕಲನ ಸರಣಿಗಿದೆ.‌ ಮುಂದಿನ ವಾರದಿಂದ ಕೇರಳ ಭಾಗದಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಸಜ್ಜಾಗಿದೆ.

’ಭುವನಂ ಗಗನಂ’ ಸಿನಿಮಾಗೆ ಧ್ರುವ ಸರ್ಜಾ ಸಾಥ್‌

ಬೆಂಗಳೂರು: ಸ್ಯಾಂಡಲ್‌ವುಡ್‌ ಅಂಗಳದ ಇಬ್ಬರು ಪ್ರತಿಭಾನ್ವಿತ ನಟರಾದ ʻಸಲಾರ್ʼ ಪ್ರಮೋದ್ ಹಾಗೂ ʼದಿಯಾʼ ಪೃಥ್ವಿ ಅಂಬಾರ್ ನಟನೆಯ ಬಹುನಿರೀಕ್ಷಿತ ಸಿನಿಮಾ ʻಭುವನಂ ಗಗನಂʼ. ಈ ಚಿತ್ರದ ನಿರ್ಮಾಪಕ ಎಂ. ಮುನೇಗೌಡ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಟೀಸರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಬೆಸ್ಟ್ ವಿಷಸ್ ತಿಳಿಸಿದ್ದಾರೆ. ಬೆಂಗಳೂರಿನ ಡಾ. ರಾಜಕುಮಾರ್‌ ಇಂಡೋರ್ ಸ್ಟೇಡಿಯಂನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ನಟ ನೆನಪಿರಲಿ ಪ್ರೇಮ್, ನಿರ್ದೇಶಕ ಸಿಂಪಲ್ ಸುನಿ ಸೇರಿದಂತೆ ಹಲವರು ಉಪಸ್ಥಿತಿದ್ದರು.

ಇದನ್ನೂ ಓದಿ: Kannada New Movie: ʻಕಮಲ್ ಹಾಸನ್ʼ ಬಂದು ಟೈಟಲ್‌ ಲಾಂಚ್‌ ಮಾಡಿದ್ರು! ಯಾವುದು ಆ ಸಿನಿಮಾ?

ಭುವನಂ ಗಗನಂ ಸಿನಿಮಾ ಲವ್, ರೋಮ್ಯಾನ್ಸ್, ಫ್ಯಾಮಿಲಿ ಎಮೋಷನ್ ಕಥಾಹಂದರ ಸಿನಿಮಾವಾಗಿದ್ದು, ನಗರ, ಹಳ್ಳಿ ಎರಡು ಬ್ಯಾಕ್ ಡ್ರಾಪ್‌ನಲ್ಲಿ ನಡೆಯುವ ಕಥೆಯಾಗಿದ್ದು, ಪ್ರಮೋದ್‌ಗೆ ಜೋಡಿಯಾಗಿ ʼಲವ್ ಮಾಕ್ಟೇಲ್ʼ ಖ್ಯಾತಿಯ ರೆಚೆಲ್ ಡೇವಿಡ್, ಪೃಥ್ವಿಗೆ ಜೋಡಿಯಾಗಿ ಅಶ್ವಥಿ ನಟಿಸ್ತಿದ್ದಾರೆ. ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರಕಾಶ್ ತುಮ್ಮಿನಾಡು, ಸಿದ್ಲಿಂಗು ಶ್ರೀಧರ್, ಹರಿಣಿ, ʼಸ್ಪರ್ಶʼ ರೇಖಾ, ಪ್ರಜ್ವಲ್ ಶೆಟ್ಟಿ, ಚೇತನ್ ದುರ್ಗ ತಾರಾಬಳಗದಲ್ಲಿದ್ದಾರೆ. ಉದಯ್ ಲೀಲಾ ಕ್ಯಾಮೆರಾ ಕೈಚಳಕ, ಗುಮ್ಮಿನೇನಿ ವಿಜಯ್ ಮ್ಯೂಸಿಕ್ ಕಿಕ್, ಸುನಿಲ್‌ ಕಶ್ಯಪ್ ಸಂಕಲನ ಸಿನಿಮಾಕ್ಕಿದೆ. ಮಳೆಗಾಲದಲ್ಲಿ ʼಭುವನಂ ಗಗನಂʼ ಸಿನಿಮಾ ತೆರೆಗೆ ಬರಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕಿರುತೆರೆ/ಒಟಿಟಿ

Kapil Sharma: ಸುನಿಲ್‌ ಗ್ರೋವರ್ ಜತೆಗೆ ನೆಟ್​ಫ್ಲಿಕ್ಸ್​ಗೆ ಕಾಲಿಟ್ಟ ಕಪಿಲ್ ಶರ್ಮಾ; ಶೋ ಟ್ರೇಲರ್‌ ಔಟ್‌: ಪ್ರಸಾರ ಯಾವಾಗ ?

Kapil Sharma: ಹಾಸ್ಯ, ಮನರಂಜನೆಯ ರಸದೌತಣ ನೀಡಿ ದೇಶದ ಮನೆಮಾತಾಗಿರುವ ಕಪಿಲ್‌ ಶರ್ಮಾ ಅವರ ಹೊಸ ಶೋ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶರ್ಮಾ ಶೋ’ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ. ಸದ್ಯ ಶೋದ ಟ್ರೇಲರ್‌ ಬಿಡುಗಡೆಯಾಗಿದ್ದು, ಗಮನ ಸೆಳೆಯುತ್ತಿದೆ.

VISTARANEWS.COM


on

kapil sharma
Koo

ಮುಂಬೈ: ಭಾರತೀಯರ ಅಚ್ಚುಮೆಚ್ಚಿನ ಕಾಮಿಡಿ ಶೋ ʼದಿ ಕಪಿಲ್‌ ಶರ್ಮಾ ಶೋʼ (The Kapil Sharma Show). ಈ ಶೋ ಮೂಲಕ ಹಾಸ್ಯ, ಮನರಂಜನೆಯ ರಸದೌತಣ ನೀಡಿ ದೇಶದ ಮನೆಮಾತಾಗಿರುವ ಕಪಿಲ್‌ ಶರ್ಮಾ (Kapil Sharma) ಹಾಗೂ ಸುನಿಲ್‌ ಗ್ರೋವರ್‌ (Sunil Grover) ಮತ್ತೆ ಒಂದಾಗಿದ್ದಾರೆ. ಸುಮಾರು ಆರು ವರ್ಷಗಳ ಮುನಿಸಿನ ಬಳಿಕ ಇಬ್ಬರೂ ಒಂದಾಗಿದ್ದಾರೆ. ನೆಟ್‌ಫ್ಲಿಕ್ಸ್‌ (Netflix)ನಲ್ಲಿ ಪ್ರಸಾರವಾಗಲಿರುವ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶರ್ಮಾ ಶೋ’ (The Great Indian Kapil Show)ದಲ್ಲಿ ಈ ಇಬ್ಬರು ದಿಗ್ಗಜರು ಒಂದಾಗಲಿದ್ದಾರೆ. ಈ ಮೂಲಕ ಟಿವಿಯಲ್ಲಿ ಜನಪ್ರಿಯವಾದ ಶೋ ಒಟಿಟಿಗೂ ಕಾಲಿಟ್ಟಿದೆ. ಶನಿವಾರ (ಮಾರ್ಚ್‌ 23) ಈ ಶೋದ ಟ್ರೇಲರ್‌ ಬಿಡುಗಡೆಯಾಗಿದ್ದು, ಗಮನ ಸೆಳೆದಿದೆ.

ಬಾಲಿವುಡ್​, ಕ್ರಿಕೆಟ್​ ಲೋಕದ ಭಾರಿ ದೊಡ್ಡ ಸೆಲೆಬ್ರಿಟಿಗಳು ಕಪಿಲ್​ ಅವರ ಶೋಗೆ ಬಂದಿರುವುದು ಟ್ರೇಲರ್‌ನಲ್ಲಿ ಕಂಡು ಬಂದಿದೆ. ಮತ್ತೊಂದು ವಿಶೇಷ ಎಂದರೆ ಕಪಿಲ್​ ಶರ್ಮಾ ಅವರ ಹಳೆಯ ಗೆಳೆಯರೆಲ್ಲ ಮತ್ತೆ ಶೋಗೆ ಬಂದಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಇನ್ನು ನಗುವಿಗೆ ಕೊರತೆ ಇಲ್ಲ ಎಂದು ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ.

ಯಾವಾಗ ಪ್ರಸಾರ ?

ಸುನಿಲ್‌ ಗ್ರೋವರ್‌ ಜತೆಗೆ ಅರ್ಚನಾ ಪೂರನ್‌ ಸಿಂಗ್‌, ಕಿಕು ಶಾರದಾ, ರಾಜೀವ್ ಠಾಕೂರ್ ಮತ್ತು ಕೃಷ್ಣ ಅಭಿಷೇಕ್ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶರ್ಮಾ ಶೋ’ದ ಭಾಗವಾಗಲಿದ್ದಾರೆ. ನೆಟ್​ಫ್ಲಿಕ್ಸ್​ನಲ್ಲಿ ಮಾರ್ಚ್ 30ರಿಂದ ಪ್ರತಿ ಶನಿವಾರ ರಾತ್ರಿ 8 ಗಂಟೆಗೆ ಹೊಸ ಈ ಶೋ ಪ್ರಸಾರವಾಗಲಿದೆ.

ಟ್ರೇಲರ್‌ನಲ್ಲಿ ಏನಿದೆ?

ಶೋ ಅದ್ದೂರಿಯಾಗಿ ಮೂಡಿ ಬಂದಿದೆ ಎನ್ನುವುದಕ್ಕೆ ಟ್ರೇಲರ್‌ನಲ್ಲಿ ಸಾಕ್ಷಿ ಸಿಕ್ಕಿದೆ. ಭಾರತೀಯ ಚಿತ್ರರಂಗ ಹಾಗೂ ಕ್ರಿಕೆಟ್​ ಲೋಕದ ದಿಗ್ಗಜರು ಈ ಬಾರಿ ಶೋಗೆ ಅತಿಥಿಗಳಾಗಿ ಆಗಮಿಸಲಿದ್ದಾರೆ. ಪ್ರಸ್ತುತ ಬಿಡುಗಡೆ ಆಗಿರುವ ಟ್ರೇಲರ್‌ನಲ್ಲಿ ​ಬಾಲಿವುಡ್ ಸ್ಟಾರ್ ನಟ ರಣ್​ಬೀರ್ ಕಪೂರ್, ತಮ್ಮ ತಾಯಿ ಹಾಗೂ ಸಹೋದರಿ ಜತೆಗೆ ಶೋದಲ್ಲಿ ಭಾಗವಹಿಸಿರುವುದು ಕಂಡು ಬಂದಿದೆ. ಸಾಮಾನ್ಯವಾಗಿ ಯಾವುದೇ ಶೋಗೆ ಹೋಗದ ಆಮೀರ್ ಖಾನ್ ಸಹ ಕಪಿಲ್ ಶರ್ಮಾ ಶೋಗೆ ಆಗಮಿಸಿದ್ದಾರೆ. ಭಾರತೀಯ ಕ್ರಿಕೆಟ್ ಟೀಂನ ನಾಯಕ ರೋಹಿತ್‌ ಶರ್ಮಾ, ಕ್ರಿಕೆಟಿಗ ಶ್ರೆಯಸ್ ಐಯ್ಯರ್ ಮತ್ತಿತರರು ಆಗಮಿಸಿದ್ದಾರೆ. ಹೀಗಾಗಿ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶರ್ಮಾ ಶೋ’ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: ನಾರಾಯಣಮೂರ್ತಿ ಬಸ್‌ ಕಂಡಕ್ಟರ್ ಹೈ ಕ್ಯಾ?‌ ಭೇಟಿ ಕುರಿತು ಕಪಿಲ್‌ ಶರ್ಮಾ ಶೋನಲ್ಲಿ ಸುಧಾಮೂರ್ತಿ ಹೇಳಿದ್ದೇನು?

ಇಬ್ಬರ ಮಧ್ಯೆ ಏಕೆ ಜಗಳ?

ಕಪಿಲ್‌ ಶರ್ಮಾ ಹಾಗೂ ಸುನಿಲ್‌ ಗ್ರೋವರ್‌ ಅವರ ಮಧ್ಯೆ 2017ರಲ್ಲಿ ಭಿನ್ನಾಭಿಪ್ರಾಯ ಮೂಡಿತ್ತು. ಆಸ್ಟ್ರೇಲಿಯಾದಲ್ಲಿ ಶೋ ಮುಗಿಸಿ, ಮುಂಬೈಗೆ ಆಗಮಿಸುವಾಗ ವಿಮಾನದಲ್ಲಿಯೇ ಕಪಿಲ್‌ ಶರ್ಮಾ ಅವರು ಸುನಿಲ್‌ ಗ್ರೋವರ್‌ ಅವರಿಗೆ ಬೈದಿದ್ದರು. ಇದಾದ ಬಳಿಕ ಇಬ್ಬರೂ ವಾಗ್ವಾದ ನಡೆಸಿದ್ದರು ಎನ್ನಲಾಗಿದೆ. ನಂತರ ಸುನಿಲ್‌ ಗ್ರೋವರ್‌ ಅವರು ʼದಿ ಕಪಿಲ್‌ ಶರ್ಮಾ ಶೋʼ ತೊರೆದಿದ್ದರು. ಜಗಳದ ಕುರಿತು ಸ್ಪಷ್ಟನೆ ನೀಡಿದ್ದ ಕಪಿಲ್‌ ಶರ್ಮಾ, “ನಾನು ಎಂದಿಗೂ ಸುನಿಲ್‌ ಗ್ರೋವರ್‌ ಜತೆ ಜಗಳ ಆಡಿಲ್ಲ, ಬೈದಿಲ್ಲ. ನಾನು ಅದ್ಭುತ ವ್ಯಕ್ತಿಗಳ ಜತೆ ಕೆಲಸ ಮಾಡಲು ಬಯಸುತ್ತೇನೆ. ಅವರಲ್ಲಿ ಸುನಿಲ್‌ ಗ್ರೋವರ್‌ ಕೂಡ ಒಬ್ಬರು” ಎಂದು ಹೇಳಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕಿರುತೆರೆ/ಒಟಿಟಿ

OTT Release: ಒಟಿಟಿ ಪ್ರಿಯರಿಗೆ ಈ ವಾರ ಹಬ್ಬ; ʼಉಪಾಧ್ಯಕ್ಷʼ ಚಿತ್ರದ ಜತೆಗೆ ರಿಲೀಸ್‌ ಆದ‌ ಇತರ ಶೋಗಳ ವಿವರ ಇಲ್ಲಿದೆ

OTT Release: ಈ ವಾರ ಒಟಿಟಿಯಲ್ಲಿ ಚಿಕ್ಕಣ್ಣ ಅಭಿನಯದ ಉಪಾಧ್ಯಕ್ಷ ಸಿನಿಮಾ ಸೇರಿದಂತೆ ಹಲವು ಚಿತ್ರಗಳು ತೆರೆ ಕಂಡಿವೆ. ಈ ಕುರಿತಾದ ವಿವರ ಇಲ್ಲಿದೆ.

VISTARANEWS.COM


on

ott
Koo

ಮುಂಬೈ: ಇತ್ತೀಚೆಗೆ ಒಟಿಟಿ ಫ್ಲಾಟ್‌ಫಾರ್ಮ್‌ಗೆ ವೀಕ್ಷಕರು ಹೆಚ್ಚಾಗಿದ್ದಾರೆ. ಹಲವರು ಥಿಯೇಟರ್‌ಗೆ ಹೋಗಿ ಸಿನಿಮಾ ನೋಡುವುದಕ್ಕಿಂತ ಒಟಿಟಿ ರಿಲೀಸ್‌ಗೆ ಕಾಯುತ್ತಿರುತ್ತಾರೆ. ಸಿನಿಮಾ ಜತೆಗೆ ವೆಬ್‌ ಸೀರಿಸ್‌, ಶೋಗಳಿಗೂ ಸಾಕಷ್ಟು ಸಂಖ್ಯೆಯಲ್ಲಿ ಪ್ರೇಕ್ಷಕರಿದ್ದಾರೆ. ಈ ವಾರ ಒಟಿಟಿಯಲ್ಲಿ ತೆರೆ ಕಾಣುತ್ತಿರುವ ಪ್ರಮುಖ ಚಿತ್ರಗಳು, ಶೋಗಳ ವಿವರ ಇಲ್ಲಿದೆ (OTT Release).

ಶೋ ಟೈಮ್‌ (ಡಿಸ್ನಿ ಪ್ಲಸ್‌ ಹಾಟ್‌ ಸ್ಟಾರ್‌)-ಮಾರ್ಚ್‌ 8

ಬಾಲಿವುಡ್‌ ಸ್ಟಾರ್‌ ಇಮ್ರಾನ್‌ ಹಶ್ಮಿ ಅಭಿನಯದ ವೆಬ್‌ ಸೀರಿಸ್‌ ʼಶೋ ಟೈಮ್‌ʼ ಡಿಸ್ನಿ ಪ್ಲಸ್‌ ಹಾಟ್‌ ಸ್ಟಾರ್‌ನಲ್ಲಿ ಮಾರ್ಚ್‌ 8ರಿಂದ ಸ್ಟ್ರೀಮಿಂಗ್‌ ಆಗುತ್ತಿದೆ. ಕರಣ್‌ ಜೋಹರ್‌ ಅವರ ಧರ್ಮ ಪ್ರೊಡಕ್ಷನ್ಸ್‌ ಈ ವೆಬ್‌ ಸೀರಿಸ್‌ ಅನ್ನು ನಿರ್ಮಿಸಿದ್ದು, ಶ್ರೀಯಾ ಶರಣ್‌, ಮೌನಿ ರಾಯ್‌, ನಾಸಿರುದ್ದೀನ್‌ ಶಾ ಮತ್ತಿತರರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಮಹಾರಾಣಿ ಸೀನಸ್‌ 3 (ಸೋನಿ ಲೈವ್‌)-ಮಾರ್ಚ್‌ 7

ಜನಪ್ರಿಯ ವೆಬ್‌ ಸೀರಿಸ್‌ ʼಮಹಾರಾಣಿʼಯ ಮೂರನೇ ಸೀಸನ್‌ ಕೂಡ ಮಾರ್ಚ್‌ 8ರಿಂದ ಪ್ರಸಾರವಾಗುತ್ತಿದೆ. ಬಾಲಿವುಡ್‌ ನಟಿ ಹುಮಾ ಖರೇಷಿ ಅಭಿನಯದ ಈ ಪಾಲಿಟಿಕಲ್‌ ಡ್ರಾಮವನ್ನು ಸೋನಿ ಲೈವ್‌ (SonyLIV)ನಲ್ಲಿ ವೀಕ್ಷಿಸಬಹುದು. ಸಾಮಾನ್ಯ ಹೆಣ್ಣು ಮಗಳೊಬ್ಬಳು ರಾಜಕೀಯ ಪ್ರವೇಶ ಪಡೆಯುವ ರೋಚಕ ಕಥೆಯನ್ನು ಇದು ಒಳಗೊಂಡಿದೆ.

ಮೆರ‍್ರಿ ಕ್ರಿಸ್‌ಮಸ್‌ (ನೆಟ್‌ಫ್ಲಿಕ್ಸ್‌)-ಮಾರ್ಚ್‌ 8

ಮಾರ್ಚ್‌ 8ರಿಂದ ನೀವು ನೋಡಬಹುದಾದ ಥ್ರಿಲ್ಲರ್‌ ಚಿತ್ರ ʼಮೆರ‍್ರಿ ಕ್ರಿಸ್‌ಮಸ್‌ʼ. ಕಾಲಿವುಡ್‌ ಸ್ಟಾರ್‌ ವಿಜಯ್‌ ಸೇತುಪತಿ ಮತ್ತು ಬಾಲಿವುಡ್‌ ನಟಿ ಕತ್ರಿನಾ ಕೈಫ್‌ ಮೊದಲ ಬಾರಿ ತೆರೆ ಮೇಲೆ ಒಂದಾದ ಚಿತ್ರವನ್ನು ಶ್ರೀರಾಮ್‌ ರಾಘವನ್‌ ನಿರ್ದೇಶಿಸಿದ್ದಾರೆ. ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡ ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಅಷ್ಟೇನೂ ಸದ್ದು ಮಾಡಿಲ್ಲ. ನೆಟ್‌ಫ್ಲಿಕ್ಸ್‌ನಲ್ಲಿ ಈ ಸಿನಿಮಾವನ್ನು ವೀಕ್ಷಿಸಬಹುದು.

ದಿ ರಿಜಿಮ್‌ (ಜಿಯೋ ಸಿನಿಮಾ)- ಮಾರ್ಚ್‌ 4

ಈ ಇಂಗ್ಲಿಷ್‌ ಟಿವಿ ಮಿನಿ ಸಿರೀಸ್‌ ಮಾರ್ಚ್‌ 4ರಿಂದ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ. ಸರ್ವಾಧಿಕಾರಿ ಎಲೆನಾ ವೆರ್ನ್ಹ್ಯಾಮ್ ಪಾತ್ರದಲ್ಲಿ ಆಸ್ಕರ್ ಪ್ರಶಸ್ತಿ ವಿಜೇತೆ ಕೇಟ್ ವಿನ್ಸ್ಲೆಟ್ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಹಗ್ ಗ್ರಾಂಟ್, ಮಥಿಯಾಸ್ ಶೋನರ್ಟ್ಸ್ ಮತ್ತು ಗೈಲ್ಯೂಮ್ ಗ್ಯಾಲಿಯನ್ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಡ್ಯಾಮ್‌ಸೆಲ್‌ (ನೆಟ್‌ಫ್ಲಿಕ್ಸ್‌)- ಮಾರ್ಚ್‌ 8

ಅಮೆರಿಕನ್‌ ಡಾರ್ಕ್‌ ಫ್ಯಾಂಟಸಿ ಚಿತ್ರ ʼಡ್ಯಾಮ್‌ಸೆಲ್‌ʼ ಮಾರ್ಚ್‌ 8ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯ. ಮಿಲ್ಲಿ ಬಾಬಿ ಬ್ರೌನ್, ರೇ ವಿನ್ಸ್ಟೋನ್, ನಿಕ್ ರಾಬಿನ್ಸನ್, ಶೋಹ್ರೆ ಅಘ್ಡಾಶ್ಲೂ, ಏಂಜೆಲಾ ಬ್ಯಾಸೆಟ್, ರಾಬಿನ್ ರೈಟ್ ಮತ್ತಿತರರು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಲಾಲ್‌ ಸಲಾಂ (ನೆಟ್‌ಫ್ಲಿಕ್ಸ್‌)- ಮಾರ್ಚ್‌ 8

ಕಾಲಿವುಡ್‌ ಸೂಪರ್‌ ಸ್ಟಾರ್‌ ರಜನಿಕಾಂತ್‌ ಅಭಿನಯದ ʼಲಾಲ್‌ ಸಲಾಂʼ ಚಿತ್ರವನ್ನು ಥಿಯೇಟರ್‌ನಲ್ಲಿ ಮಿಸ್‌ ಮಾಡಿಕೊಂಡವರು ಒಟಿಟಿಯಲ್ಲಿ ಮಾರ್ಚ್‌ 8ರಿಂದ ಈ ಸಿನಿಮಾವನ್ನು ನೋಡಬಹುದು. ನೆಟ್‌ಫ್ಲಿಕ್ಸ್‌ನಲ್ಲಿ ಇದು ಸ್ಟ್ರೀಮಿಂಗ್‌ ಆಗುತ್ತಿದೆ. ಐಶ್ವರ್ಯಾ ರಜನಿಕಾಂತ್‌ ನಿರ್ದೇಶನದ ಈ ಚಿತ್ರದಲ್ಲಿ ವಿಷ್ಣು ವಿಶಾಲ್‌, ವಿಕ್ರಾಂತ್‌ ಮತ್ತಿತರರು ಮುಖ್ಯ ಪಾತ್ರದಲ್ಲಿದ್ದಾರೆ. ಥಿಯೇಟರ್‌ನಲ್ಲಿ ಸಾಧಾರಣ ಯಶಸ್ಸು ಕಂಡಿದ್ದ ಇದು ಒಟಿಟಿಯಲ್ಲಿ ಗಮನ ಸೆಳೆಯುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

ಉಪಾಧ್ಯಕ್ಷ (ಸನ್‌ ನೆಕ್ಟ್ಸ್‌) – ಮಾರ್ಚ್‌ 8

ಇತ್ತೀಚೆಗೆ ಸ್ಯಾಂಡಲ್‌ವುಡ್‌ನಲ್ಲಿ ಸುದ್ದಿ ಮಾಡಿದ ಚಿತ್ರ ʼಉಪಾಧ್ಯಕ್ಷʼ. ಇದೀಗ ಈ ಸಿನಿಮಾ ಸದ್ದಿಲ್ಲದೆ ಒಟಿಟಿಗೆ ಲಗ್ಗೆ ಇಟ್ಟಿದೆ. ಮಾರ್ಚ್‌ 8ರಿಂದ ನೀವು ಸನ್‌ ನೆಕ್ಟ್ಸ್‌ಲ್ಲಿ ಉಪಾಧ್ಯಕ್ಷ ಚಿತ್ರ ವೀಕ್ಷಿಸಬಹುದು. ಚಿಕ್ಕಣ್ಣ ನಾಯಕನಾಗಿರುವ ಈ ಚಿತ್ರ ಮಲೈಕಾ ವಸುಪಾಲ್‌, ರವಿಶಂಕರ್‌, ಸಾಧು ಕೋಕಿಲ, ವೀಣಾ ಸುಂದರ್‌ ಮತ್ತಿತರರು ಪ್ರಧಾನ ಪಾತ್ರಗಳಲ್ಲಿ ಮಿಂಚಿದ್ದಾರೆ.

ಅನ್ವೇಷಿಪ್ಪಿನ್‌ ಕಂಡೆಂತ್ತುಮ್‌ (ನೆಟ್‌ಫ್ಲಿಕ್ಸ್‌)- ಮಾರ್ಚ್‌ 8

ನೀವು ಮಲಯಾಳಂ ಚಿತ್ರ ಪ್ರೇಮಿಗಳಾಗಿದ್ದರೆ ಈ ಚಿತ್ರವನ್ನು ಮಿಸ್‌ ಮಾಡದೇ ನೋಡಿ. ಈ ಕ್ರೈಂ ಥ್ರಿಲ್ಲರ್‌ 90ರ ದಶಕದ ಪೊಲೀಸ್‌ ತನಿಖೆಯ ಕಥೆ ಹೇಳುತ್ತುದೆ. ಟೊವಿನೋ ಥಾಮಸ್‌, ಇಂದ್ರನ್ಸ್‌, ಸಿದ್ಧಿಕ್‌ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ ಈ ಚಿತ್ರದಲ್ಲಿ ಯಾರೂ ಊಹಿಸದ ಕ್ಲೈಮ್ಯಾಕ್ಸ್‌ ಇದೆ. ಡಾರ್ವಿನ್ ಕುರಿಯಕ್ಕೋಸ್‌ ಈ ಸಿನಿಮಾದ ನಿರ್ದೇಶಕರು. ಅನ್ವೇಷಿಪ್ಪಿನ್‌ ಕಂಡೆಂತ್ತುಮ್‌ ಚಿತ್ರವನ್ನು ಮಾರ್ಚ್‌ 8ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಬಹುದು.

ಇದನ್ನೂ ಓದಿ: Nitish Bharadwaj: ʼ16,000 ಹೆಂಡತಿಯರನ್ನು ನಿಭಾಯಿಸಿದʼವನಿಗೆ ಪತ್ನಿಯಿಂದ ದೌರ್ಜನ್ಯ! ಏನಿವರ ಗೋಳಿನ ಕತೆ?

Continue Reading

ಕಿರುತೆರೆ

Nitish Bharadwaj: ʼ16,000 ಹೆಂಡತಿಯರನ್ನು ನಿಭಾಯಿಸಿದʼವನಿಗೆ ಪತ್ನಿಯಿಂದ ದೌರ್ಜನ್ಯ! ಏನಿವರ ಗೋಳಿನ ಕತೆ?

ಇದು ಜನಪ್ರಿಯ ಟಿವಿ ಸೀರಿಯಲ್‌ (TV Serial) ʼಮಹಾಭಾರತʼದ ಕೃಷ್ಣನ ಪಾತ್ರಧಾರಿ ನಟ ನಿತೀಶ್ ಭಾರದ್ವಾಜ್ (Nitish Bharadwaj) ಬದುಕಿನ ಕತೆ.

VISTARANEWS.COM


on

nitish bharadwaj with wife
Koo

ಮುಂಬಯಿ: ಮಹಾಭಾರತದ (Mahabharat) ಕೃಷ್ಣನೇನೋ 16,000 ಹೆಂಡತಿಯರನ್ನು ಜಗಳವಿಲ್ಲದೆ ನಿಭಾಯಿಸಿದ. ಆದರೆ ಈ ʼಕೃಷ್ಣʼನ (Krishna) ಬದುಕು ಮಾತ್ರ ಪತ್ನಿಯಿಂದಲೇ ಬರ್ಬಾದ್‌ ಆಗಿದೆ. ಇದು ಜನಪ್ರಿಯ ಟಿವಿ ಸೀರಿಯಲ್‌ (TV Serial) ʼಮಹಾಭಾರತʼದ ಕೃಷ್ಣನ ಪಾತ್ರಧಾರಿ ನಟ ನಿತೀಶ್ ಭಾರದ್ವಾಜ್ (Nitish Bharadwaj) ಬದುಕಿನ ಕತೆ.

ನಿತೀಶ್‌ ಭಾರದ್ವಾಜ್‌ ಮತ್ತು ಅವರ ವಿಚ್ಛೇದಿತ ಪತ್ನಿ ಸ್ಮಿತಾ ಭಾರದ್ವಾಜ್ ನಡುವಿನ ಕಲಹದ ಕತೆ ಹೊಸದೇನೂ ಅಲ್ಲ. ಕಳೆದ ಕೆಲವು ತಿಂಗಳುಗಳಲ್ಲಿ ಇಬ್ಬರೂ ಪರಸ್ಪರರ ವಿರುದ್ಧ ಹಲವಾರು ಆರೋಪಗಳನ್ನು ಮಾಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ನಿತೀಶ್ ಇನ್ನಷ್ಟು ಆಘಾತಕಾರಿ ಆರೋಪಗಳನ್ನು ಮಾಡಿದ್ದಾರೆ. ತಮ್ಮಿಬ್ಬರ ದಾಂಪತ್ಯದಲ್ಲಿ ತಾನು ಅತ್ಯಂತ ದೌರ್ಜನ್ಯಕ್ಕೀಡಾದವನು ಎಂದು ಹೇಳಿಕೊಂಡಿದ್ದಾರೆ.

“ಈ ದಾಂಪತ್ಯದಲ್ಲಿ ನಾನು ಎಲ್ಲಾ ರೀತಿಯ ನಿಂದನೆಗಳನ್ನು ಎದುರಿಸಿದ್ದೇನೆ. ನನ್ನ ಪೋಷಕರನ್ನು ನನ್ನಿಂದ ದೂರವಿಡಲಾಯಿತು. ನನ್ನ ಇಬ್ಬರು ಮಕ್ಕಳನ್ನು ನನ್ನಿಂದ ದೂರವಿಡಲಾಯಿತು. ನನ್ನ 11 ವರ್ಷದ ಹೆಣ್ಣುಮಕ್ಕಳು ಹೇಳಿದ ಎರಡು ಸಾಲುಗಳನ್ನು ಮಾತ್ರ ನಾನು ನಿಮಗೆ ಹೇಳುವೆ- ʻಅಪ್ಪಾ, ನಿಮ್ಮನ್ನು ನಮ್ಮ ತಂದೆ ಎಂದು ಕರೆಯಲು ನಮಗೆ ಅಸಹ್ಯವಾಗುತ್ತದೆ.’ ಇದು ಒಂದು ಮಗು ನನಗೆ ಹೇಳಿದ್ದು” ಎಂದು ನಿತೀಶ್ ದುಃಖಿಸಿದ್ದಾರೆ.

“ನನಗೆ ಆಗುತ್ತಿರುವ ಪ್ರಕ್ಷುಬ್ಧತೆಯನ್ನು ಹೇಗೆ ನಿಭಾಯಿಸಬೇಕೆಂದು ನನಗೆ ತಿಳಿಯುತ್ತಿಲ್ಲ. ನಾನು ಹಣ ಕೇಳುತ್ತಿದ್ದೇನೆ ಎಂದು ನನ್ನ ಮೇಲೆ ಮಾಡಿರುವ ಆರೋಪ ಸುಳ್ಳು. ನಾನು ನನ್ನಿಂದ ಮೋಸ ಮಾಡಿ ಕಸಿಯಲಾದ ಹಣವನ್ನು ಕೇಳುತ್ತಿದ್ದೇನೆ. ಹಾಗಾಗಿ ಇಂದು ನಾನು ಮಾಡುತ್ತಿರುವುದು ನನ್ನ ಮಕ್ಕಳ ಪಾಲಿನ ಹೋರಾಟವಾಗಿದೆ” ಎಂದಿದ್ದಾರೆ ನಿತೀಶ್. ‌

“ವಂಚಿತನಾದ ನಾನು ಬೇರೆ ಯಾವುದೇ ಮಹಿಳೆಗೆ ನ್ಯಾಯ ಸಲ್ಲಿಸಲು ಸಾಧ್ಯವಾಗುತ್ತದೆಯೇ ಎಂದು ನನಗೆ ಗೊತ್ತಾಗುತ್ತಿಲ್ಲ. ದಾಂಪತ್ಯ ನನಗೆ ಎಂದೂ ಗೌರವಾರ್ಹವಾದುದು. ನಾನು ಅದನ್ನು ನಂಬುತ್ತೇನೆ. ನನ್ನ ಹೆತ್ತವರ ದಾಂಪತ್ಯ ಸೇರಿದಂತೆ ಹಲವು ಯಶಸ್ವಿ ಕುಟುಂಬಗಳನ್ನು ನಾನು ನೋಡಿದ್ದೇನೆ” ಎಂದಿದ್ದಾರೆ ಅವರು.

ಕಳೆದ ತಿಂಗಳು ನಿತೀಶ್ ಭಾರದ್ವಾಜ್ ಅವರು ಅವರ ಪತ್ನಿ ಸ್ಮಿತಾ ಗೇಟ್ ವಿರುದ್ಧ ಕಿರುಕುಳ ಮತ್ತು ಅಶಿಸ್ತಿನ ವರ್ತನೆಯನ್ನು ಆರೋಪಿಸಿ ಪೊಲೀಸ್ ದೂರು ದಾಖಲಿಸಿದ್ದಾರೆ. ಸ್ಮಿತಾ ಗೇಟ್‌, ಮಧ್ಯಪ್ರದೇಶದ ಮಾನವ ಹಕ್ಕುಗಳ ಆಯೋಗದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವರದಿಯ ಪ್ರಕಾರ, ತಮ್ಮ ಅವಳಿ ಹೆಣ್ಣು ಮಕ್ಕಳಾದ ದೇವಯಾನಿ ಮತ್ತು ಶಿವರಂಜನಿ ಅವರನ್ನು ಭೇಟಿಯಾಗದಂತೆ ನಿತೀಶ್‌ ಅವರನ್ನು ಸ್ಮಿತಾ ತಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ತಮ್ಮ ಹೆಣ್ಣುಮಕ್ಕಳ ಶಾಲೆಗಳಿಗೆ ತಾವು ಹೋಗುವುದನ್ನು ತಡೆದಿದ್ದಾರೆ. ಇದು ತಮ್ಮ ಮಾನಸಿಕ ನೆಮ್ಮದಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಅವರು ದೂರಿದ್ದಾರೆ.

ಜನಪ್ರಿಯ ಟಿವಿ ಸರಣಿ ಮಹಾಭಾರತದಲ್ಲಿ ಶ್ರೀಕೃಷ್ಣನ ಪಾತ್ರದಲ್ಲಿ ನಿತೀಶ್ ದೇಶಾದ್ಯಂತ ಖ್ಯಾತಿ ಗಳಿಸಿದ್ದರು. ವಿಷ್ಣು ಪುರಾಣ, ಮೊಹೆಂಜೊದಾರೋ, ಕೇದಾರನಾಥ್ ಮತ್ತಿತರ ಜನಪ್ರಿಯ ಧಾರಾವಾಹಿಗಳು ಮತ್ತು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Actor Dhanush: ಧನುಷ್‌-ರಶ್ಮಿಕಾ ಅಭಿನಯದ ಸಿನಿಮಾದ ಟೈಟಲ್‌ ರಿವೀಲ್‌!

Continue Reading
Advertisement
Protein Supplements
ಆರೋಗ್ಯ12 mins ago

Protein Supplements: ಪ್ರೊಟಿನ್‌ ಸಪ್ಲಿಮೆಂಟ್‌ನ ಸೈಡ್‌ ಎಫೆಕ್ಟ್‌ ಏನೇನು? ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆಯ ಸೂಚನೆ ಇಲ್ಲಿದೆ

Shankara Jayanti 2024
ಧಾರ್ಮಿಕ27 mins ago

Shankara Jayanti 2024: ಇಂದು ಶಂಕರ ಜಯಂತಿ; ಶಂಕರಾಚಾರ್ಯರ ಕುರಿತ 9 ಕುತೂಹಲಕರ ಸಂಗತಿಗಳು

International Nurses’s Day
ಆರೋಗ್ಯ42 mins ago

International Nurses’s Day: ಇಂದು ನರ್ಸ್‌ಗಳ ದಿನ; ಈ ದಿನಾಚರಣೆ ಹಿನ್ನೆಲೆ ಏನು?

Dina Bhavishya
ಭವಿಷ್ಯ42 mins ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

IPL 2024
ಪ್ರಮುಖ ಸುದ್ದಿ5 hours ago

IPL 2024 : ಮುಂಬೈ ವಿರುದ್ಧ 18 ರನ್ ಜಯ, ಪ್ಲೇಆಫ್​ ಪ್ರವೇಶಿಸಿದ ಕೆಕೆಆರ್​ ತಂಡ

car catches fire
ಕ್ರೈಂ6 hours ago

Car Catches Fire: ಕಾರಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡು ವ್ಯಕ್ತಿ ಸಜೀವ ದಹನ

jay Shah
ಪ್ರಮುಖ ಸುದ್ದಿ7 hours ago

Jay Shah : ದೇಶಿಯ ಕ್ರಿಕೆಟ್​ನಲ್ಲಿ ಭಾರೀ ಬದಲಾವಣೆಗಳ ಸೂಚನೆ ನೀಡಿದ ಜಯ್​ ಶಾ

ಬೆಂಗಳೂರು7 hours ago

Child Actor Master OM: ಓದಿಗೂ ಸೈ, ಮಾಡೆಲಿಂಗ್‌ಗೂ ಸೈ ಈ ಸೂಪರ್‌ ಟೀನ್‌ ಮಾಡೆಲ್‌ ಮಾಸ್ಟರ್‌ ಓಂ!

ಬೆಂಗಳೂರು7 hours ago

LuLu Fashion Week 2024: ಲುಲು ಫ್ಯಾಷನ್ ವೀಕ್ 2024; ಕಲರ್ ಫುಲ್ ಬಟ್ಟೆ ತೊಟ್ಟು ಕಂಗೊಳಿಸಿದ ನಾರಿಮಣಿಗಳು

IPL 2024
ಕ್ರಿಕೆಟ್7 hours ago

IPL 2024 : ಗುಜರಾತ್​ ತಂಡ ಸೇರಿದ ಗುರ್ನೂರ್ ಬ್ರಾರ್; ಎಲ್ಲಿಯ ಆಟಗಾರ ಇವರು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ42 mins ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

Bengaluru News
ಬೆಂಗಳೂರು14 hours ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

Dina Bhavishya
ಭವಿಷ್ಯ1 day ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

Physical Abuse The public prosecutor called the client woman to the lodge
ಕ್ರೈಂ2 days ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ2 days ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ2 days ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ2 days ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ2 days ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ2 days ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ2 days ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

ಟ್ರೆಂಡಿಂಗ್‌