BBK Season 10 : ಸಂಗೀತಾ ಯು ಆರ್‌ ರಾಂಗ್;‌ ಡಾಮಿನೆನ್ಸ್‌ ಕ್ವೀನ್‌ ಕಿವಿ ಹಿಂಡಿದ ಕಿಚ್ಚ - Vistara News

ಕಿರುತೆರೆ/ಒಟಿಟಿ

BBK Season 10 : ಸಂಗೀತಾ ಯು ಆರ್‌ ರಾಂಗ್;‌ ಡಾಮಿನೆನ್ಸ್‌ ಕ್ವೀನ್‌ ಕಿವಿ ಹಿಂಡಿದ ಕಿಚ್ಚ

BBK Season 10 : ಫ್ಲಿಪ್‌ ಎಂಬ ಪದ ಬಳಸಿ ತನಿಷಾ ಮತ್ತು ಕಾರ್ತಿಕ್‌ ಅವರ ಸ್ನೇಹವನ್ನೇ ಪ್ರಶ್ನೆ ಮಾಡಿದ ಸಂಗೀತಾ ಶೃಂಗೇರಿಗೆ ನಿಮ್ಮ ಸ್ನೇಹ ಎಷ್ಟು ಸಾಚಾ ಎಂದು ಪ್ರಶ್ನೆ ಮಾಡಿದ್ದಾರೆ ಕಿಚ್ಚ ಸುದೀಪ್‌. ಈ ಮೂಲಕ ಡಾಮಿನೆನ್ಸ್‌ ರಾಣಿಯ ಕಿವಿ ಹಿಂಡಿದ್ದಾರೆ.

VISTARANEWS.COM


on

Sangeetha Shringeri and Kiccha Sudeep
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಫ್ಲಿಪ್‌ ಎಂಬ ಪದವನ್ನು ಇಟ್ಟುಕೊಂಡು ಎರಡು ದಿನಗಳ ಕಾಲ ತನಿಷಾ (Tanisha Kuppanda) ಮತ್ತು ಕಾರ್ತಿಕ್‌ (Kartik Mahesh) ಅವರನ್ನು ಕಾಡಿದ, ಇಬ್ಬರೂ ಕಣ್ಣೀರು ಹಾಕುವಂತೆ ಮಾಡಿ ಕೊನೆಗೆ ತಾನು ಮಾತ್ರ ಸೇಫ್‌ ಆಗಿ ಸಂಭ್ರಮಿಸಿದ ಸಂಗೀತಾ ಶೃಂಗೇರಿ (Sangeeta Shringeri) ಅವರಿಗೆ ಕಿಚ್ಚ ಸುದೀಪ್‌ (Kiccha Sudeep) ಸಖತ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ. ನೀವು ಮೂವರೂ ಹೊರಗಡೆ ತುಂಬ ಕೆಟ್ಟದಾಗಿ ಕಾಣಿಸುತ್ತಿದ್ದೀರಿ. ಒಬ್ಬರು ಓವರ್ ಡಾಮಿನೆಂಟ್‌ ಆಗಿ ಕಾಣಿಸುತ್ತಿದ್ದೀರಿ. ಒಬ್ಬರು ತುಂಬಾ ವೀಕ್ ಆಗಿ ಕಾಣಿಸುತ್ತಿದ್ದೀರಿ. ಇನ್ನೊಬ್ಬರು ವಿಧಿನೇ ಇಲ್ಲದೆ, ತಲೆ ಇಲ್ಲದೆ ಆಡ್ತಿರೋರ ಹಾಗೆ ಕಾಣಿಸುತ್ತಿದ್ದೀರಿ. ಹೀಗೆ ಮಾಡಿದರೆ ಡೆಡ್‌ ಎಂಡ್‌ಗೆ ಹೋಗುವುದು ಮೂವರಿಗೂ ಕಷ್ಟ ಆಗುತ್ತದೆ. ಆ ದಿನ ನೀವು ನನ್ನ ಮಾತು ನೆನಪಿಸಿಕೊಳ್ತೀರಿ ಎಂದು ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.

‘ಬಿಗ್ ಬಾಸ್‌ ಕನ್ನಡ ಸೀಸನ್‌ 10’ (BBK Season 10) ಇದರ ಆರನೇ ವಾರದ ʻವಾರದ ಕಥೆ ಕಿಚ್ಚನ ಜತೆʼ ಸಂಚಿಕೆಯಲ್ಲಿ ತುಂಬಾ ಹೊತ್ತು ಸಂಗೀತಾ – ಕಾರ್ತಿಕ್ – ತನಿಷಾ ನಡುವಿನ ಸ್ನೇಹ ಮತ್ತು ವಾದ ವಿವಾದಗಳ ಚರ್ಚೆ ನಡೆಯಿತು. ‘’ಫ್ರೆಂಡ್‌ ಆಗಿ ಅವಕಾಶವಿದ್ದರೂ ನನ್ನನ್ನ ಸೇಫ್‌ ಮಾಡಲಿಲ್ಲ’’ ಎಂದು ಪದೇಪದೆ ಕಾರ್ತಿಕ್ ಮತ್ತು ತನಿಷಾ ಅವರನ್ನು ಚುಚ್ಚಿದ ಸಂಗೀತಾ ಅವರನ್ನು ಕಿಚ್ಚ ಸುದೀಪ್‌ ʻಯೂ ಆರ್‌ ರಾಂಗ್‌ʼ ಅಂತ ನೇರವಾಗಿಯೇ ಹೇಳಿದರು. ಏನೇ ಹೇಳಿದರೂ ಕೇಳದೆ ವಾದವನ್ನೇ ಮುಂದುವರಿಸಿದ ಸಂಗೀತಾ ಅವರಿಗೆ ಕಿಚ್ಚ ಚೆನ್ನಾಗಿಯೇ ಕ್ಲಾಸ್‌ ತೆಗೆದುಕೊಂಡರು. ಫ್ರೆಂಡ್‌ಷಿಪ್‌ ಅಂತ ಹೇಳ್ತಾ ಉಳಿದವರ ತಪ್ಪುಗಳನ್ನು ಎತ್ತಿ ತೋರಿಸುತ್ತಾ ಡಾಮಿನೆನ್ಸ್‌ ಮಾಡುವ ನೀವು ಫ್ರೆಂಡ್‌ ಆಗಿ 100% ಕೊಟ್ಟಿದ್ದೀರಾ ಎಂದು ನೇರವಾಗಿಯೇ ಕೇಳಿದರು.

ಕಳೆದ ವಾರದ ಲುಡೋ ಟಾಸ್ಕ್‌ನಲ್ಲಿ ಸಂಗೀತಾ, ಕಾರ್ತಿಕ್‌ ಮತ್ತು ತನಿಷಾ ಒಂದು ಗ್ರೂಪ್‌ ಆಗಿದ್ದರು. ಆಟದ ನಡುವೆ ಈ ಗ್ರೂಪ್‌ಗೆ SWAP ಎನ್ನುವ ಆಪ್ಶನ್‌ ಸಿಕ್ಕಾಗ ಅತಿ ಹೆಚ್ಚು ಸೇಫ್‌ ಆಗಿದ್ದ, HOMEಗೆ ಹೋಗಲು ಕೇವಲ ಎರಡನೇ ನಂಬರ್‌ ಅಗತ್ಯವಿದ್ದ ವರ್ತೂರು ಸಂತೋಷ್‌ ಅವರ ಸ್ಥಾನವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಆಗ ಸಂಗೀತಾ ತಾನು ಹೋಗುವುದಾಗಿ ಹೇಳಿದ್ದರು. ತನಿಷಾ ಮತ್ತು ಕಾರ್ತಿಕ್‌ ಯಾವ ಮಾತೂ ಇಲ್ಲದೆ ಒಪ್ಪಿ ಸಂಗೀತಾರನ್ನು ಕಳುಹಿಸಿಕೊಟ್ಟಿದ್ದರು. ವರ್ತೂರು ಬಂದು ತನಿಷಾ ಮತ್ತು ಕಾರ್ತಿಕ್‌ ಜತೆ ಸೇರಿದ್ದರು.

sangeetha Karthik tanisha

ಮುಂದಿನ ಹಂತದಲ್ಲಿ ಈ ಗ್ರೂಪ್‌ಗೆ ಒಬ್ಬರನ್ನು ಸೇವ್‌ ಮಾಡುವ ಅವಕಾಶ ಸಿಕ್ಕಾಗ ಕಾರ್ತಿಕ್‌ ಮತ್ತು ತನಿಷಾ ಸಂಗೀತಾ ಅವರ ಹೆಸರು ಎತ್ತಿಕೊಳ್ಳಲು ಮುಂದಾದರಾದರೂ ವರ್ತೂರು ಸಂತೋಷ್‌ ಅವರು ಈ ವಿಚಾರದಲ್ಲಿ ನನ್ನ ಜತೆಗೂ ಚರ್ಚೆ ಮಾಡಿ ಎಂದು ಸೂಚಿಸಿದರು. ಆದರೆ, ಮೂವರ ಚರ್ಚೆಯ ಹಂತದಲ್ಲಿ ಸಂಗೀತಾ ಹೆಸರು ಬರಲಿಲ್ಲ. ಬದಲಾಗಿ ನೀತು ಮತ್ತು ಸಿರಿ ಅವರ ಹೆಸರು ಬಂದು ಸಿರಿ ಅವರನ್ನು ಆಯ್ಕೆ ಮಾಡಲಾಗಿತ್ತು. ಆಗ ಸಂಗೀತಾ ʻಫ್ಲಿಪ್‌ʼ ಎಂಬ ಪದವನ್ನು ಬಳಸಿ ಕಾರ್ತಿಕ್‌ ಮತ್ತು ತನಿಷಾ ಅವರನ್ನು ಛೇಡಿಸಿದ್ದರು. ಮುಂದೆಯೂ ಬೆಂಬಿಡದೆ ಕಾಡಿದ್ದರು. ಫ್ರೆಂಡ್‌ ಆಗಿ ನೀವು ನನ್ನನ್ನು ಸೇಫ್‌ ಮಾಡದೆ ಸಿರಿ ಅವರನ್ನು ಆಯ್ಕೆ ಮಾಡುವ ಮೂಲಕ ಬಣ್ಣ ಬದಲಿಸಿದಿರಿ ಎಂದು ಹೇಳಿದ್ದರು. ಕಾರ್ತಿಕ್‌ ಮತ್ತು ತನಿಷಾ ಹೇಗೆ ಹೇಗೆ ವಿವರಿಸಿದರೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ.

ಇದೆಲ್ಲ ವಿಚಾರಗಳು ಕಿಚ್ಚನ ಪಂಚಾಯಿತಿಯಲ್ಲಿ ಚರ್ಚೆಗೆ ಬಂತು.

ನಿಮಗೂ ಅವಕಾಶ ಸಿಕ್ಕಿತ್ತು, ನೀವ್ಯಾಕೆ ನಿಮ್ಮ ಫ್ರೆಂಡ್ಸ್‌ ಹೆಸರು ತೆಗೆದುಕೊಂಡಿಲ್ಲ!

ಲೂಡೋ ಆಟದ ವೇಳೆ ಸಂತೋಷ್‌ ಅವರ ಜತೆ ಪ್ಲೇಸ್‌ ಸ್ವಾಪ್‌ ಮಾಡುವ ಹಂತದಲ್ಲಿ ನಾನು ಹೋಗ್ತೀನಿ ಅಂತ ಸಂಗೀತಾ ಮುಂದಾಗಿದ್ದನ್ನು ಉಲ್ಲೇಖಿಸಿದ ಸುದೀಪ್‌, ಆ ಜಾಗಕ್ಕೆ ಹೋಗುವ ವಿಚಾರದಲ್ಲಿ ನೀವು ಕಾರ್ತಿಕ್‌ ಮತ್ತು ತನಿಷಾ ಜತೆ ಚರ್ಚೆ ಮಾಡಿದ್ರಾ ಎಂದು ಕೇಳಿದರು. ಆಗ ಸಂಗೀತಾ ʻಅವರೂ ಕೇಳಬಹುದಿತ್ತುʼ ಎಂದರು. ಆಗ ಸುದೀಪ್‌, ವಾರವಿಡೀ ‘ನೀನೂ ಕೇಳಬಹುದಿತ್ತು’ ಅಂತ ನೀವು ತುಂಬಾ ಸಲ ಹೇಳಿದ್ದೀರಿ. ಆದ್ರೆ ನೀವ್ಯಾಕೆ ಕೇಳಲಿಲ್ಲ? ಎಂದು ಪ್ರಶ್ನಿಸಿದರು.

ಆಗ ಸಂಗೀತ- ‘ನೀನು ಹೋಗು’ ಅಂದ್ಮೇಲೆ ನಾನು ಇನ್ನೇನು ಕೇಳಲಿ? ಎಂದು ಪ್ರಶ್ನಿಸಿದರು. ನೀವು ಹೋಗ್ತೀನಿ ಎಂದಾಗ ‘’ಹೋಗಬೇಡ’’ ಅನ್ನೋಕೆ ಅವರಿಗೆ ಮನಸ್ಸಾಗಲಿಲ್ಲ. ಒಬ್ಬ ಫ್ರೆಂಡ್‌ ಹೋಗಲು ಇಷ್ಟಪಟ್ಟರು. ಬಾಕಿ ಇಬ್ಬರು ಅದಕ್ಕೆ ಸ್ಪಂದಿಸಿದರು. ‘’ನಾನೂ ಹೋಗಬೇಕು’’ ಅಂತ ಹೇಳುವ ಮನಸ್ಸು ಇಬ್ಬರಿಗೂ ಇರಲಿಲ್ಲ ಎಂದು ವಿವರಿಸಿದರು.

ಕಾರ್ತಿಕ್‌ ಮತ್ತು ತನಿಷಾ ತಮಗೂ ಅಲ್ಲಿಗೆ ಹೋಗಬೇಕು ಅನ್ನೋ ಮನಸಿತ್ತು. ಆದರೆ, ಸಂಗೀತಾ ಆಸಕ್ತಿ ತೋರಿಸಿದಾಗ ಬೇಡ ಅನ್ನಲಾಗಲಿಲ್ಲ. ಅದಕ್ಕೆ ಬಿಟ್ಟುಕೊಟ್ಟೆವು ಎಂದರು.

ಲುಡೋ ಆಟದಲ್ಲಿ ನಿಮಗೂ ಒಬ್ಬರನ್ನು ಸೇಫ್‌ ಮಾಡುವ ಅವಕಾಶ ಸಿಕ್ಕಿತ್ತು. ಆಗ ನೀವ್ಯಾಕೆ ನಿಮ್ಮ ಫ್ರೆಂಡ್ಸ್ ಹೆಸರು ತೆಗೆದುಕೊಂಡಿಲ್ಲ, ಎಥಿಕ್ಸ್‌ ಹೆಸರಲ್ಲಿ ವರ್ತೂರು ಸಂತೋಷ್‌ ಹೆಸರು ತೆಗೆದುಕೊಂಡಿರಿ. ಆಗ ನಿಮಗೆ ಫ್ರೆಂಡ್‌ಷಿಪ್‌ ಯಾಕೆ ನೆನಪಾಗಲಿಲ್ಲ ಎಂದು ಸುದೀಪ್‌ ನೇರವಾಗಿ ಸಂಗೀತಾ ಅವರನ್ನು ಕೇಳಿದರು.

ಆಗ ಸಂಗೀತಾ, ವರ್ತೂರು ಸಂತೋಷ್ ಅವರ ಮನೆಗೆ ನಾನು ಬಂದಿದ್ದೆ. ಅಲ್ಲಿಗೆ ಬರದೇ ಹೋಗಿದ್ದರೆ ನನಗೆ ಗೆಲ್ಲುವ ಚಾನ್ಸಸ್ ಇರ್ತಿರ್ಲಿಲ್ಲ ಎಂದರು. ಆಗ ಸುದೀಪ್‌, ʻʻಇಲ್ಲ ಸಂಗೀತಾ ಅವರೇ, ಅವರಿಬ್ಬರು ನಿಮ್ಮನ್ನು ಅಲ್ಲಿಗೆ ಕಳುಹಿಸಲಿಲ್ಲ ಅಂದಿದ್ದರೆ ನೀವು ಗೆಲ್ಲೋಕೆ ಸಾಧ್ಯ ಆಗುತ್ತಿರಲಿಲ್ಲʼʼ ಎಂದರು.

ಅದಕ್ಕೆ ಮೊಂಡುವಾದ ಮಾಡಿದ ಸಂಗೀತಾ, ಅಲ್ಲಿ ಪ್ರಾಬಬಿಲಿಟಿ ಆಫ್‌ ವಿನ್ನಿಂಗ್ ⅙ ಇತ್ತು, ಅಲ್ಲಿ ಲಕ್ ಇತ್ತು… ಹೀಗಾಗಿ ಕ್ರೆಡಿಟ್‌ ಅನ್ನು ಕಾರ್ತಿಕ್‌ ಮತ್ತು ತನಿಷಾಗೆ ಕೊಡುವುದಿಲ್ಲ ಎಂದರು.

ಆಗ ಸುದೀಪ್‌- ವರ್ತೂರು ಸಂತೋಷ್ ಅವರ ಜಾಗದಲ್ಲಿ ನೀವೇ ಬರಬೇಕು ಅನ್ನೋದು ವರ್ತೂರು ಸಂತೋಷ್ ಅವರ ಆಯ್ಕೆ ಅಲ್ಲ. ನಿಮ್ಮ ಆಸೆ ಪ್ರಕಾರ.. ಕಾರ್ತಿಕ್, ತನಿಷಾ ಹಿಂದೆ ಮುಂದೆ ನೋಡದೆ ಸ್ಪಂದಿಸಿದರು. ಆಟ ಅಲ್ಲಿ ನೋಡಬೇಕಾದರೆ, ಸೇಫೆಸ್ಟ್ ಇದ್ದದ್ದು ಅದೇ ಮನೆ. ಏನು ಬೇಕಾದರೂ ಆಗಬಹುದಿತ್ತು ಅನ್ನೋದು ಆಮೇಲೆ. ಆದರೆ, ಸರ್‌ಫೇಸ್‌ ಲೆವೆಲ್‌ನಲ್ಲಿ ನಿಮ್ಮ ಪರವಾಗಿ ನಿಂತವರು ಕಾರ್ತಿಕ್, ತನಿಷಾ. ಆಟದ ರೂಲ್ಸ್ ಪ್ರಕಾರ ವರ್ತೂರು ಸಂತೋಷ್ ಶಿಫ್ಟ್ ಆದರು ಅನ್ನೋದು ಬಿಟ್ಟರೆ ದೊಡ್ಡತನದಲ್ಲಿ ಅಲ್ಲ. ಆ ಟ್ವಿಸ್ಟ್ ಬರಲಿಲ್ಲ ಅಂದಿದ್ದರೆ ವರ್ತೂರು ಸಂತೋಷ್ ಅಲ್ಲೇ ಇರುತ್ತಿದ್ದರು ಎಂದು ನೆನಪಿಸಿದರು.

ಇಷ್ಟೆಲ್ಲ ವಾದ ಮಾಡಿ, ಜಗಳವಾಡಿದ ನೀವೇ ಸೇಫ್‌ ಆಗಿ ಕುಳಿತಿದ್ದೀರಿ.. ಎಲ್ಲವನ್ನೂ ಕೇಳಿಸಿಕೊಂಡ ತನಿಷಾ ಮತ್ತು ಕಾರ್ತಿಕ್‌ ನಾಮಿನೇಷನ್‌ ಸೀಟ್‌ ನಲ್ಲಿ ಕುಳಿತಿದ್ದಾರೆ ಎಂದು ನೆನಪಿಸಿದರು ಕಿಚ್ಚ ಸುದೀಪ್‌.

ಸಂಗೀತಾ ಸ್ನೇಹದಲ್ಲಿ 100% ಕೊಟ್ಟಿಲ್ಲ ಎಂದ ಕಾರ್ತಿಕ್‌, ತನಿಷಾ

ಸಂಗೀತಾ ನೀವು ಪದೇಪದೆ ನೀವ್ಯಾಕೇ ಕೇಳಲಿಲ್ಲ, ನೀವು ಕೇಳಬೇಕಿತ್ತು ಅಂತ ಹೇಳುತ್ತಲೇ ಇದ್ರಿ. ಏನೂ ಯೋಚನೆ ಮಾಡದೆ.. ನಿಮ್ಮ ಮಾತನ್ನ ಕೇಳಿದ ತಕ್ಷಣ ಆಕಡೆಗೆ ಕಳುಹಿಸಿಕೊಟ್ರಲ್ಲ. ಅದಾದ್ಮೇಲೂ ಅನ್ನಿಸಿಕೊಂಡ್ರಲ್ಲ. ಅದರ ವಾಲ್ಯೂ ಏನು? ಇದೇನಾ ನಿಮ್ಮ ಫ್ರೆಂಡ್‌ಶಿಪ್‌? ಈ ಫ್ರೆಂಡ್‌ಶಿಪ್‌ನಲ್ಲಿ ನೀವು 100% ಗಿವಿಂಗ್ ಆಗಿದ್ದೀರಾ? ಎಂದು ಕಿಚ್ಚ ಕೇಳಿದರು. ಇಲ್ಲಿವರೆಗೂ ಕೊಟ್ಟಿದ್ದೀನಿ ಅಂತ ಸಂಗೀತಾ ಹೇಳಿದರು. ಆದರೆ, ಕಾರ್ತಿಕ್‌ ಮತ್ತು ತನಿಷಾ ಇಲ್ಲ ಎಂದರು. ʻʻಫ್ರೆಂಡ್‌ಶಿಪ್ ಹಾಳಾಗಬಾರದು ಅಂತ ಸ್ವಲ್ಪ ಜಾಸ್ತಿನೇ ಅಡ್ಜಸ್ಟ್ ಮಾಡಿಕೊಳ್ತಿದ್ದೀವಿ ಅನ್ಸತ್ತೆ ಸರ್.ʼʼ ಎಂದು ತನಿಷಾ ಹೇಳಿದರು.

ಈ ನಡುವೆ ಕಿಚ್ಚ ಅವರು ನಮೃತಾ ಬಳಿ ಕಾರ್ತಿಕ್‌, ಸಂಗೀತಾ, ತನಿಷಾ ಸಂಬಂಧದ ಬಗ್ಗೆ ಕೇಳುತ್ತಾರೆ. ಆಗ ನಮೃತಾ ʻʻಮೂವರ ಮಧ್ಯೆಯೇ ಬೇರೆ ಬೇರೆ ಗ್ರೂಪ್ ಇದೆ ಅನ್ಸುತ್ತೆ. ಅಂದ್ರೆ.. ಕಾರ್ತಿಕ್ – ಸಂಗೀತಾ, ಕಾರ್ತಿಕ್ – ತನಿಷಾ ಅಂತ. ಫ್ರೆಂಡ್‌ಶಿಪ್‌ನಿಂದ ಸಂಗೀತಾ ಬೇರೆ ಏನೋ ಎಕ್ಸ್‌ಪೆಕ್ಟ್ ಮಾಡ್ತಾರೆ. ತನಿಷಾ ಏನೂ ಎಕ್ಸ್‌ಪೆಕ್ಟ್ ಮಾಡ್ತಿಲ್ಲ. ಕಾರ್ತಿಕ್ ಇಬ್ಬರ ಮಧ್ಯೆ ಒಳ್ಳೆಯ ಈಕ್ವೇಷನ್ ಇಟ್ಟುಕೊಂಡಿದ್ದಾರೆ ಅಂತ ಅನ್ಸುತ್ತೆ ಸರ್ʼʼ ಎಂದು ವಾಸ್ತವ ಹೇಳಿದರು.

ತ್ಯಾಗ ಮಾಡೋದೂ ಮುಖ್ಯ ಅಲ್ಲ, ತಾಯಿ ಆಗೋದೂ ಮುಖ್ಯ ಅಲ್ಲ

ಸಂಗೀತಾ ವಿಷಯದಲ್ಲಿ ತಾನು ತುಂಬ ತ್ಯಾಗ ಮಾಡುತ್ತಿದ್ದೇನೆ, ಕಾಂಪ್ರೊಮೈಸ್‌ ಮಾಡಿಕೊಳ್ಳುತ್ತಿದ್ದೇನೆ ಅನಿಸುತ್ತಿದೆ ಎಂದು ಕಾರ್ತಿಕ್‌ ಹೇಳಿದರೆ, ನಾನು ಸಂಗೀತಾಳನ್ನು ಪುಟ್ಟ ಹುಡುಗಿ ಅಂದುಕೊಂಡು ತಾಯಿ ಹಾಗೆ ನೋಡಿಕೊಂಡೆ ಎಂದು ತನಿಷಾ ಹೇಳಿದರು. ಆದರೆ ನಂಬಿಕೆ ಇಲ್ಲ ಅಂತ ಸಂಗೀತಾ ಹೇಳುವಾಗ ಬೇಜಾರಾಯ್ತು ಅಂದರು.

ಆಗ ಸುದೀಪ್‌, ʻʻನಿಮ್ಮ ಫ್ರೆಂಡ್‌ಶಿಪ್‌ನ ನೀವೇನು ಮೇನ್‌ಟೇನ್ ಮಾಡೋಕೆ ಹೋಗ್ತೀರೋ.. ತ್ಯಾಗ ಮಾಡೋಕೆ ಹೋಗ್ತೀರೋ.. ಗೊತ್ತಿಲ್ಲ. ಹೊರಗಡೆ ಅಗ್ಲಿ ಆಗಿ ಕಾಣಬೇಡಿ. ಅಗ್ಲಿ ಹಾಗೇ ಕಾಣಿಸುತ್ತಿದೆ. ನಿಮ್ಮ ನಿಮ್ಮಲ್ಲಿ ನೀವು ಸ್ಟ್ರಾಂಗ್ ಸ್ಪರ್ಧಿಗಳು ಅಂದುಕೊಂಡರೆ, ಅದಕ್ಕೆ ತಕ್ಕ ಹಾಗೆ ಬಾಳಿ ಬದುಕಬೇಕೇ ಹೊರತು ಎಕ್ಸ್‌ಪೆಕ್ಟ್ ಮಾಡೋದು, ತ್ಯಾಗ ಮಾಡೋದು, ತಾಯಿ ಆಗೋದು ಮುಖ್ಯನಾ? ಎಂದು ಕೇಳಿದರು.

ಇದನ್ನೂ ಓದಿ: BBK Season 10: ಆರನೇ ವಾರ ಬಿಗ್‌ ಬಾಸ್‌ ಮನೆಯಿಂದ ಇಶಾನಿ ಔಟ್‌

ಅಂದು ನಡೆದಿದ್ದೇನು? ಕ್ಲಾರಿಟಿ ಕೊಟ್ಟ ಸುದೀಪ್‌

ಲುಡೋ ಆಟದ ವೇಳೆ ಒಬ್ಬರನ್ನು ಸೇವ್‌ ಮಾಡಬೇಕು ಅಂತ ಬಂದಾಗ ಸಂಗೀತಾ ಹೇಗಿದ್ದರೂ ಸೇಫ್ ಆಗ್ತಾಳೆ ಈಗ ಅಂತ ಕಾರ್ತಿಕ್, ತನಿಷಾ ಮಾತನಾಡಿಕೊಂಡರು. ಅದು ವರ್ತೂರು ಸಂತೋಷ್‌ಗೆ ಕೇಳಿಸಲಿಲ್ಲ. ವರ್ತೂರು ಸಂತೋಷ್ ಬಂದ್ಮೇಲೆ ಸಿರಿ ಹೆಸರನ್ನು ತೆಗೆದುಕೊಂಡರು. ದುರದೃಷ್ಟ ಏನಂದರೆ.. ಸಂಗೀತಾ ಅವರೇ.. ತಾವು ಸೇಫ್ ಆದ್ಮೇಲೂ ಇಷ್ಟೆಲ್ಲಾ ಮಾಡಿದ್ದು ಸರಿ ಅಲ್ಲ ಎಂದು ಕಿಚ್ಚ ಸುದೀಪ್‌ ಸ್ಪಷ್ಟವಾಗಿ ಹೇಳಿದರು.

ನೀವು ಮೂರೂ ಜನ ಆಡೋಕೆ ಹೋಗಿದ್ದೀರಾ.. ಅಥವಾ ಸಂಗೀತಾನ ಗೆಲ್ಲಿಸೋಕೆ ನೀವಿಬ್ಬರೂ ಹೋಗಿದ್ದೀರಾ ಅಂತ ಹೊರಗಡೆ ಡೌಟ್‌ ಇದೆ. ಫ್ರೆಂಡ್‌ಶಿಪ್‌ ತಪ್ಪು ಅಂತ ಹೇಳುತ್ತಿಲ್ಲ. ಡೋಂಟ್‌ ಮೇಕ್‌ ಇಟ್‌ ಟಾಕ್ಸಿಕ್. ಹೊರಗಡೆ ನೋಡುತ್ತಿರುವವರಿಗೆ ಟಾಕ್ಸಿಕ್ ಮಾಡಬೇಡಿ ಎಂದು ಕಿವಿ ಮಾತು ಹೇಳಿದರು. ಇಷ್ಟಾದರೂ ಮಾತು ಮುಂದುವರಿಸಿದ ಸಂಗೀತಾ ಅವರಿಗೆ ಯೂ ಆರ್‌ ರಾಂಗ್‌ ಅಂತ ಕಿಚ್ಚ ಸ್ಪಷ್ಟವಾಗಿಯೇ ಹೇಳಿದರು. ಹೀಗೇ ಮುಂದುವರಿದರೆ ಮುಂದಿನ ದಾರಿ ಕಷ್ಟ ಆಗುತ್ತದೆ ಎಂದು ಎಚ್ಚರಿಸಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬಿಗ್ ಬಾಸ್

Bigg Boss Kannada : ಕಿಚ್ಚನ ಪಂಚಾಯ್ತಿಯಲ್ಲಿ ಗರ್ಮಾಗರಂ ವಿಷ್ಯಗಳು; ಬಿಗ್‌ಬಾಸ್‌ ನಿರ್ಧಾರವನ್ನೇ ಪ್ರಶ್ನೆ ಮಾಡ್ತಾರಾ ಸುದೀಪ್‌!

ವಾರದ ಕತೆ ಕಿಚ್ಚನ ಜೊತೆ ಪಂಚಾಯ್ತಿಯಲ್ಲಿ ಯಾವೆಲ್ಲ ವಿಷ್ಯಗಳು ಚರ್ಚೆಗೆ ಬರುತ್ತೆ ಗೊತ್ತಾ?
ಕಿಚ್ಚನ ಪಂಚಾಯ್ತಿಗೆ ವೀಕ್ಷಕರು ಇಟ್ಟ ಬೇಡಿಕೆಗಳೇನು?

VISTARANEWS.COM


on

By

Bigg boss kannada
Koo

ಬೆಂಗಳೂರು: ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್‌ ಶೋನಲ್ಲಿ ಕಿಚ್ಚು ಹೆಚ್ಚಾಗಿದೆ. ಇದೆ ಮೊದಲ ಸಲ ಬಿಗ್‌ ಬಾಸ್‌ ಮನೆಯಿಂದ ಇಬ್ಬರು ಸ್ಪರ್ಧಿಗಳು ನಿಯಮ ಮೀರಿದ ಹಿನ್ನೆಲೆಯಲ್ಲಿ ನೇರವಾಗಿ ಎಲಿಮಿನೇಟ್‌ ಆಗಿದ್ದಾರೆ. ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ಲಾಯರ್‌ ಜಗದೀಶ್‌, ದೈಹಿಕ ಹಲ್ಲೆ ಆರೋಪದ ಮೇಲೆ ರಂಜಿತ್‌ ಶುಕ್ರವಾರ ಮನೆ ತೊರೆದಿದ್ದರು.

ಇದೀಗ ವಾರದ ಕಥೆ ಕಿಚ್ಚ ಜತೆಯಲ್ಲಿ ನಟ ಸುದೀಪ್‌ ಬಿಗ್‌ಬಾಸ್‌ ನಿರ್ಧಾರವನ್ನೇ ಪ್ರಶ್ನೆ ಮಾಡ್ತಾರಾ? ಕಿಚ್ಚನ ಪಂಚಾಯ್ತಿಯಲ್ಲಿ ಗರ್ಮಾಗರಂ ವಿಷ್ಯಗಳು ಯಾವುದು ಎಂಬ ಕುತೂಹಲ ಮೂಡಿದೆ.

ಅಸಲಿಗೆ ದೊಡ್ಡ ಮನೆಯಲ್ಲಿ ಆ ದಿನ ನಡೆದಿದ್ದೇನು ಗೊತ್ತಾ?

ಕಳೆದ (ಬುಧವಾರ) ಟಾಸ್ಕ್‌ ಮುಗಿದ ಬಳಿಕ ಗಾರ್ಡನ್‌ ಏರಿಯಾದಲ್ಲಿ ಜಗದೀಶ್‌ ಮತ್ತು ಗೋಲ್ಡ್‌ ಸುರೇಶ್‌ ಮಾತನಾಡುತ್ತ ಕೂತಿದ್ದರು. ಈ ವೇಳೆ ಮಾತಿನ ಭರದಲ್ಲಿ ಜಗದೀಶ್‌ ಮನೆಯ ಸ್ಪರ್ಧಿಗಳ ಬಗ್ಗೆ ಇಲ್ಲ ಸಲ್ಲದ ಪದ ಬಳಕೆ ಮಾಡಿ ಮಾತನಾಡಲು ಶುರುಮಾಡಿದರು. ಜಗದೀಶ್‌ ಅವರ ಮಾತುಗಳು ಸುರೇಶ್‌ಗೆ ಅಸಹನೀಯ ಎನಿಸತೊಡಗಿದವು. ಕೂಡಲೇ ಇಂಥ ಪದಗಳ ಪ್ರಯೋಗ ನನ್ನ ಮುಂದೆ ಮಾಡಬೇಡ ಎಂದು ಬೇಡಿಕೊಂಡರು. ಮುಂದುವರಿದು, ಆ ಹಂಸಾ ಮುಂ* ಎಂಬ ಪದ ಬಳಕೆ ಪ್ರಯೋಗಿಸಿದರು .

ಅಲ್ಲಿಂದ ಶುರುವಾಯ್ತು ವಾರ್‌.. ಹಂಸಾಗೆ ಆ ಪದ ಪ್ರಯೋಗಿಸಿದ ವಿಚಾರ, ನಂತರ ಇಡೀ ಮನೆಗೂ ಗೊತ್ತಾಯ್ತು. ಮುಂದುವರಿದು ದೊಡ್ಡ ಮಟ್ಟದ ಮಾತಿನ ಚಕಮಕಿ ನಡೆಯಿತು. ಮಾತಿಗೆ ಮಾತು ಬೆಳೆಯಿತು. ತಳ್ಳಾಟ ನೂಕಾಟವೂ ನಡೆಯಿತು. ಲಾಯರ್‌ ಜಗದೀಶ್‌ ಅವರ ಮೇಲೆ ಇಡೀ ಮನೆಯ ಮಹಿಳಾ ಸ್ಪರ್ಧಿಗಳು ಮುಗಿಬಿದ್ದರು. ಇದೇ ವೇಳೆ ಮಾತುಕತೆ ಅತಿರೇಕಕ್ಕೆ ಹೋಗುತ್ತಿದ್ದಂತೆ, ಜಗದೀಶ್‌ ಅವರನ್ನು ಅಲ್ಲೇ ಇದ್ದ ರಂಜಿತ್‌ ತಳ್ಳಿದರು. ಇದೆಲ್ಲವನ್ನು ಗಮನಿಸಿದ ಬಿಗ್‌ಬಾಸ್‌ ಸಹ ತಾಳ್ಮೆ ಕಳೆದುಕೊಂಡು, ಮೊದಲ ಸಲ ಜೋರಾಗಿ ಕೂಗಿ ಎಲ್ಲರನ್ನು ಒಂದೆಡೆ ಕೂರಿಸಿದರು.

ದೈಹಿಕ ಹಲ್ಲೆ ಆರೋಪದ ಮೇಲೆ ರಂಜಿತ್‌ ಹೊರಕ್ಕೆ

ಇತ್ತ, ಕೆಲ ಹೊತ್ತಿನ ಬಳಿಕ ಮಹಿಳೆಯರಿಗೆ ನಿಂದನೆ, ಅಪಮಾನ ಸಹಿಸುವುದಿಲ್ಲ ಎಂಬ ಆರೋಪದ ಮೇಲೆ ಜಗದೀಶ್‌ ಅವರನ್ನು ಬಿಗ್‌ಬಾಸ್‌ನಿಂದ ನೇರವಾಗಿ ಎಲಿಮಿನೇಟ್‌ ಮಾಡಿ, ಹೊರಗೆ ಕಳಿಸಲಾಯಿತು. ಇತ್ತ ದೈಹಿಕ ಹಲ್ಲೆ ಅಕ್ಷಮ್ಯ ಅಪರಾಧ ಎಂಬ ನಿಯಮದಡಿ ರಂಜಿತ್‌ ಅವರನ್ನೂ ಹೊರಗೆ ಕಳಿಸಲಾಯಿತು. ಈ ಮೂಲಕ ಶುಕ್ರವಾರ ಅಚ್ಚರಿಯ ಬೆಳವಣಿಗೆಯಲ್ಲಿ ಡಬಲ್‌ ಶಾಕಿಂಗ್‌ ಎಲಿಮಿನೇಷನ್‌ ಆಯ್ತು. ಇತ್ತ ರಂಜಿತ್‌ ಮಾಡಿದ್ದು ಸರಿಯಿದೆ. ಅವರ ಉದ್ದೇಶ ಒಳ್ಳೆಯದು ಎಂದು ಸ್ಪರ್ಧಿಗಳು ಕಣ್ಣೀರಿಟ್ಟರೂ, ನಿಯಮ ಗೌರವಿಸುವ ಸಲುವಾಗಿ ಔಟ್‌ ಮಾಡಲಾಯಿತು.

ಇದೀಗ.. ವಾರದ ಪಂಚಾಯ್ತಿಯಲ್ಲಿ ಕಿಚ್ಚ ಮಾತನಾಡಲಿರುವ ‘ಗರಮಾ ಗರಂ’ ವಿಷಯಗಳು ಯಾವವು ಎಂಬುದನ್ನು ಕಲರ್ಸ್‌ ಕನ್ನಡ ಸೋಶಿಯಲ್‌ ಮೀಡಿಯಾದಲ್ಲಿ ನಿನ್ನೆ ಪೋಸ್ಟ್‌ ಹಂಚಿಕೊಂಡಿದೆ . ಆ ಪೋಸ್ಟ್‌ಗೆ ಸಾವಿರಾರು ಕಾಮೆಂಟ್‌ಗಳ ಮಹಾಪೂರವೇ ಹರಿದು ಬಂದಿವೆ. ಆ ಪೈಕಿ ವೀಕ್ಷಕರ ಪ್ರಶ್ನೆಗಳೇನು? ಕಿಚ್ಚನ ಮುಂದೆ ವೀಕ್ಷಕರು ಇಟ್ಟಿರುವ ಬೇಡಿಕೆಗಳೇನು? ಇಲ್ಲಿದೆ ನೋಡಿ

ಈ ಸಲದ ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರಲ್ಲಿ ಶಾಕಿಂಗ್‌ ಎಲಿಮಿನೇಷನ್‌ ನಡೆದಿದೆ. ಮಹಿಳಾ ಸ್ಪರ್ಧಿಗಳ ಬಗ್ಗೆ ಕೆಟ್ಟ ಪದ ಪ್ರಯೋಗ ಬಳಸಿದ್ದಕ್ಕೆ ಜಗದೀಶ್‌ ಎಲಿಮಿನೇಟ್‌ ಆದರೆ, ಒಳ್ಳೆಯ ಉದ್ದೇಶ ಇದ್ದರೂ, ದೈಹಿಕ ಹಲ್ಲೆ ಮಾಡಿದ ಆರೋಪದ ಮೇಲೆ ರಂಜಿತ್‌ ಮನೆಯಿಂದ ಹೊರ ನಡೆದಿದ್ದಾರೆ. ಇತ್ತ ಮನೆಯ ಸ್ಪರ್ಧಿಗಳು ರಂಜಿತ್‌ ತೆರಳಿದ್ದಕ್ಕೆ ಬೇಸರದಲ್ಲಿದ್ದರೆ, ಜಗದೀಶ್‌ ಹೊರ ನಡೆದಿದ್ದಕ್ಕೆ ಕುಣಿದು ಕುಪ್ಪಳಿಸಿದ್ದಾರೆ. ಇದೆಲ್ಲದರ ನಡುವೆಯೇ ವಾರಾಂತ್ಯವೂ ಬಂದಿದೆ. ಕಿಚ್ಚನ ಆಗಮನಕ್ಕೂ ಕ್ಷಣಗಣನೆ ಆರಂಭವಾಗಿದೆ.

ಕಳೆದ ವಾರ ಯಾವುದೇ ಎಲಿಮಿನೇಷನ್‌ ಇರಲಿಲ್ಲ. ಅಚ್ಚರಿಯ ಬೆಳವಣಿಗೆಯಲ್ಲಿ ಎಲ್ಲರೂ ಸೇವ್‌ ಆಗಿದ್ದರು. ಆದರೆ, ಈ ವಾರ ಹಾಗಾಗಲಿಲ್ಲ. ಯಾರೂ ನಿರೀಕ್ಷಿಸದೇ ಇಬ್ಬರು ಸ್ಪರ್ಧಿಗಳು ನೇರವಾಗಿ ಹೊರ ನಡೆಯಬೇಕಾಯಿತು. ಹೀಗಿರುವಾಗ ಈ ವಾರ ಎಲಿಮಿನೇಷನ್‌ ಇರುತ್ತಾ? ಎಂಬ ಒಂದಷ್ಟು ಪ್ರಶ್ನೆಗಳಂತೂ ಎಲ್ಲರ ಮನಸಿನಲ್ಲೂ ಮೂಡಿದೆ. ಅದರಲ್ಲೂ ವೀಕ್ಷಕರು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಇದೀಗ ಕಿಚ್ಚನ ಪಂಚಾಯ್ತಿಯಲ್ಲಿ ಆ ಪ್ರಶ್ನೆಗಳಿಗೆ ಉತ್ತರ ಸಿಗಬಹುದಾ?

ಹೌದು. ಸೋಷಿಯಲ್‌ ಮೀಡಿಯಾದಲ್ಲಿ ಈ ವಾರದ ಕಿಚ್ಚನ ಪಂಚಾಯ್ತಿಯಲ್ಲಿ ಕಿಚ್ಚ ಮಾತನಾಡಬೇಕಿರೋ ‘ಗರಮಾ ಗರಂ’ ವಿಷಯಗಳು ಯಾವವು” ಎಂದು ಪೋಸ್ಟ್‌ ಹಂಚಿಕೊಂಡಿದೆ ಕಲರ್ಸ್‌ ಕನ್ನಡ. ಆ ಪೋಸ್ಟ್‌ಗೆ ಸಾವಿರಾರು ಕಾಮೆಂಟ್‌ಗಳು ಹರಿದು ಬಂದಿವೆ. ಆ ಪೈಕಿ ವೀಕ್ಷಕರ ಪ್ರಶ್ನೆಗಳೇನು? ಕಿಚ್ಚ ಸುದೀಪ್‌ ಮುಂದೆ ವೀಕ್ಷಕರು ಇಟ್ಟಿರುವ ಬೇಡಿಕೆಗಳೇನು? ಇಲ್ಲಿದೆ ನೋಡಿ ಆಯ್ದ ಕೆಲವು ಪ್ರಶ್ನೆಗಳು ಮತ್ತು ಬೇಡಿಕೆಗಳು.

ಸುದೀಪ್‌ಗೆ ವೀಕ್ಷಕರ ಪ್ರಶ್ನೆ ಮತ್ತು ಬೇಡಿಕೆ:

  • -ಜಗ್ಗು ಇಲ್ಲದ ಬಿಗ್‌ ಬಾಸ್ ನಾವು ನೋಡಲ್ಲ.‌ ಲಾಯರ್ ಜಗದೀಶ್‌ಗೆ ನ್ಯಾಯ ಸಿಗಬೇಕು. ಪುರುಷರಿಗೆ ಆದ ನಿಂದನೆ ಅಪಮಾನದ ಬಗ್ಗೆ ಕರ್ನಾಟಕದ ಜನತೆ ಸಹಿಸುವುದಿಲ್ಲ. ಅವರನ್ನ ಮತ್ತೆ ಅಖಾಡಕ್ಕೆ ಇಳಿಸಲೇಬೇಕು. ಹೆಣ್ಣಿಗೆ ಮಾತ್ರ ಅವಮಾನ ಆಗಿರಲಿಲ್ಲ ಗಂಡಿಗೂ ಅವಮಾನ ಆಗಿದೆ ಇದರ ಬಗ್ಗೆ ನೀವು ಪ್ರಶ್ನೆ ಎತ್ತಲೇಬೇಕು. ಗಂಡಿನ ಮರ್ಯಾದೆಗೆ ಧಕ್ಕೆ ಬರ್ತಿದೆ ಈ ಬಿಗ್ ಬಾಸ್ ಮನೆಯ ಹೆಣ್ಣು ಮಕ್ಕಳಿಂದ. ಮುಂದೆ ಪುರುಷ ರಕ್ಷಣಾ ವೇದಿಕೆಯನ್ನು ತೆರೆದರು ತೆರೆಯಬಹುದು.
  • -ಸುದೀಪ್‌ ಸರ್‌, ಜಗದೀಶ್‌ ಅವರನ್ನ ಏಕವಚನದಲ್ಲಿ ಮಾತಾಡುವುದಲ್ಲದೇ ಹೋರ್ಗಡೆ ಎನ್ ತಗೊಂಡು ಹೊಡೀತಾರೆ ನಿಂಗೆ ಎನ್ನುತ್ತ ತಳ್ಳಿದ್ದಾರೆ ಭವ್ಯ ಇದಕ್ಕೆ ನ್ಯಾಯ ಸಿಗುತ್ತಾ?
  • -ಮಾನಸ ಅವರು ಒಬ್ಬ ಗಂಡಸಿಗೆ ಸೀರೆ ಕೊಡ್ತೀನಿ ಉಟ್ಕೋ, ಅಂತಾರೆ ಅವಳ ಗಂಡ ತುಕಾಲಿ, ಹೆಂಡತಿ ತುಕಾಲಿ ಪ್ರೊ ಮ್ಯಾಕ್ಸ್ ಅಂತ ನೆಟ್ಟಿಗರು ಕಿಡಿಕಾರಿದ್ದಾರೆ. ಗಂಡಿನ ಘನತೆಗೆ ಧಕ್ಕೆ ಆದಾಗ ತಿರುಗೇಟು ಕೊಟ್ಟರೆ ಅದು ಮಹಿಳೆಗೆ ಅಗೌರವವೇ? ಕಿಚ್ಚ ಸುದೀಪ್ ಇದಕ್ಕೆ ನ್ಯಾಯ ಒದಗಿಸುವ ಮೂಲಕ ಪುರುಷರ ಘನತೆ ಕಾಪಾಡಬೇಕು ಅಂದಿದ್ದಾರೆ.
  • -ಜಗ್ಗುನ ಪ್ರವೋಕ್ ಮಾಡಿದ ಎಲ್ಲರಿಗೂ ಅವರ ತಪ್ಪಿನ ಅರಿವು ಮಾಡಿಸಬೇಕು. ಹೆಣ್ಣಿನ ಬಗ್ಗೆ ಕೆಟ್ಟದಾಗಿ ಮಾತಾಡುವುದು ತಪ್ಪು. ಜಗದೀಶ್‌ಗೆ ಶಿಕ್ಷೆಯಾಗಿದ್ದು ಸರಿ. ಆದರೆ ಚೈತ್ರ ಹೇಳ್ತಾರೆ ಅಪ್ಪನಿಗೆ ಹುಟ್ಟಿದರೆ ಬಾ, ಒಬ್ಬ ಅಪ್ಪನಿಗೆ ಹುಟ್ಟಿದ್ದರೆ ಬಾ ಅಂತ ಇದರಲ್ಲಿ ಆಗಿರುವುದು ಒಂದು ಹೆಣ್ಣಿಗೆ ಅವಮಾನ ಅಂದರೇ (ಜಗದೀಶ್ ತಾಯಿಯ ಬಗ್ಗೆ ) ಇದರ ಬಗ್ಗೆನೂ ಚರ್ಚೆ ಆಗಲೇಬೇಕು.
  • -ಜಗ್ಗು ಮಾತಾಡಿದ್ದು ತಪ್ಪು ಅದರಲ್ಲಿ 2 ಮಾತಿಲ್ಲ.. ಆದ್ರೆ ಸತತ 3 ದಿನಗಳಿಂದ ರಂಜಿತ್, ಮಂಜು, ತ್ರಿವಿಕ್ರಮ ಜಗಳ ಆಡೋ ತರ ಪ್ರಚೋದನೆ ಮಾಡಿದ್ದು ತಪ್ಪಲ್ವಾ?.. ಮಾನಸ ಮಾತು ಅಸಹ್ಯವಾಗಿತ್ತು ಅವಳನ್ನು ಯಾಕೆ ಹೊರಗೆ ಹಾಕಿಲ್ಲ. . ಚೈತ್ರ, ಭವ್ಯ, ಮಾನಸ 3 ಜನ ಅಮ್ಮ ಅಪ್ಪ ಹೆಂಡ್ತಿ ಅನ್ನೋ ಶಬ್ದ ಬಳಸಿ ಮಾತನಾಡುವುದಲ್ಲದೇ ಜಗದೀಶ್‌ ಅವರನ್ನ ಥಳಿಸಿದ್ದಾರೆ.

ರಂಜಿತ್‌ಗೆ ವೀಕ್ಷಕರ ಮೆಚ್ಚುಗೆ

ರಂಜಿತ್‌ ನೇರವಾಗಿ ಮನೆಯಿಂದ ಹೊರಬರುತ್ತಿದ್ದಂತೆ, ಸೋಷಿಯಲ್‌ ಮೀಡಿಯಾದಲ್ಲಿ ರಂಜಿತ್‌ ಪರವಾಗಿ ಮೆಚ್ಚುಗೆಯ ಕಾಮೆಂಟ್‌ಗಳು ಸಂದಾಯವಾಗುತ್ತಿವೆ. “ನಿಮ್ಮ ಹೆಸರು ಬಿಗ್‌ಬಾಸ್‌ನಲ್ಲಿ ಶಾಶ್ವತ. ಒಂದೊಳ್ಳೆಯ ಉದ್ದೇಶಕ್ಕೆ ನೀವು ನಿಯಮ ಮುರಿದಿದ್ದೀರಿ. ಇದನ್ನು ಬೇರೆಯವರೂ ಮಾಡಲು ಅಸಾಧ್ಯ” ಎಂದು ಧ್ರುವ ಎಂಬುವವರು ಟ್ವಿಟ್‌ ಮಾಡಿದ್ದಾರೆ. “ಉದ್ದೇಶ ಸರಿ. ಅಸಲಿ ವಿಚಾರ ಬಿಗ್‌ಬಾಸ್‌ಗೂ ಗೊತ್ತು, ಅಷ್ಟೇ ಸಾಕು.. ಮಿಸ್‌ ಯೂ ರಂಜಿತ್”‌ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಒಳ್ಳೆಯ ಉದ್ದೇಶಕ್ಕೆ ಹೋಗ್ತಿದ್ದೀಯಾ ಮಗ. ಸೂರ್ಯ ರಂಜಿತ್‌ ಬಿಬಿ ಇರೋವರೆಗೂ ಇದು ಒಂದು ಉದಾಹರಣೆಯಾಗಿ ನಿಲ್ಲಲಿದೆ. ಒಂದೊಳ್ಳೆಯ ಕಾರಣಕ್ಕೆ ನೀವು ಆಚೆ ಹೋಗಿದ್ದೀರಿ” ಎಂದು ವೀಕ್ಷಕರು ಟ್ವಿಟ್‌ ಮಾಡಿದ್ದಾರೆ.

Continue Reading

ಬೆಂಗಳೂರು

New Serial : ಡಿಫರೆಂಟ್ ಕಥೆಯೊಂದಿಗೆ ಕಿರುತೆರೆಯಲ್ಲಿ ಶುರುವಾಗ್ತಿದೆ ʻನಿನ್ನ ಜೊತೆ ನನ್ನ ಕಥೆʼ

New Serial: ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಕಾಂಟ್ರಾಕ್ಟ್ ಮದುವೆಯನ್ನೊಳಗೊಂಡ ಹೊಸ ಧಾರಾವಾಹಿ “ನಿನ್ನ ಜೊತೆ ನನ್ನ ಕಥೆ” ಶುರುವಾಗ್ತಿದೆ. ಇದೇ ಸೋಮವಾರದಿಂದ ಅಂದರೆ ಸೆ.30ರ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.

VISTARANEWS.COM


on

By

new serial
Koo

ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ಅದೆಷ್ಟೋ ಮದುವೆ ಆಧಾರಿತ ಕಥೆಗಳು ಬಂದು ಹೋಗಿವೆ. ಆದರೆ ಇದೀಗ ‘ನಿನ್ನ ಜೊತೆ ನನ್ನ ಕಥೆ’ ಎಂಬ ಹೊಸ ಧಾರಾವಾಹಿಯ ಮೂಲಕ ವಿನೂತನ ಕಥೆಯನ್ನು (New Serial) ವೀಕ್ಷಕರಿಗೆ ಹೇಳಲು ಕನ್ನಡದ ಜನಪ್ರಿಯ ವಾಹಿನಿ ಸ್ಟಾರ್ ಸುವರ್ಣ (star suvarna) ಸಜ್ಜಾಗಿದೆ.

ಕರ್ನಾಟಕದ ಸಕ್ಕರೆನಾಡು ಎಂದೇ ಪ್ರಸಿದ್ಧವಾಗಿರುವ ಮಂಡ್ಯದಲ್ಲಿ ಈ ಕಥೆಯು ಕೇಂದ್ರೀಕೃತವಾಗಿರುತ್ತದೆ. ಸಾಮಾನ್ಯವಾಗಿ ಮನಸು-ಮನಸುಗಳ ಬೆಸುಗೆಯಿಂದ ಮದುವೆಯಾಗುತ್ತದೆ. ಆದರೆ ಇದೊಂತರ ಡಿಫರೆಂಟ್ ಕಥೆ ಅಂತಾನೇ ಹೇಳಬಹುದು. ಕಥಾನಾಯಕಿ ಭೂಮಿ ಚಹಾ (ಟೀ) ಮಾರುವವಳಾಗಿದ್ದು, ಪೊಲೀಸ್ ಕಾನ್ಸ್‌ಟೇಬಲ್‌ ಆಗಬೇಕೆಂಬ ಕನಸನ್ನು ಹೊಂದಿರುತ್ತಾಳೆ. ಇನ್ನೊಂದು ಕಡೆ ಯಾರದ್ದೋ ಸಂಚಿಗೆ ಬಲಿಯಾಗಿ ಭೂಮಿಯ ತಾಯಿ ತಪ್ಪೇ ಮಾಡದಿದ್ರೂ ಜೈಲು ಸೇರಿರುತ್ತಾರೆ.

new serial

ಇನ್ನು ಈ ಕಥೆಯ ನಾಯಕ ಅಜಿತ್‌, ಶ್ರೀಮಂತ ಕುಟುಂಬದಲ್ಲಿ ಬೆಳೆದಿದ್ದು ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿರುತ್ತಾನೆ. ಮದುವೆ ಅಂದ್ರೇನೆ ಇಷ್ಟವಿರದ ಆದಿಗೆ ಮನೆಯಲ್ಲಿ ಮದುವೆಯ ತಯಾರಿ ಮಾಡುತ್ತಿರುತ್ತಾರೆ. ಮುಂದೆ, ಅನಿವಾರ್ಯ ಕಾರಣಗಳಿಂದಾಗಿ ಭೂಮಿ ಹಾಗು ಅಜಿತ್‌ ಇಬ್ಬರು ಪರಸ್ಪರ ಷರತ್ತುಗಳಿಗೆ ಒಪ್ಪಿಕೊಂಡು ಒಂದು ವರ್ಷದ ಕಾಂಟ್ರಾಕ್ಟ್‌ನೊಂದಿಗೆ ಮದುವೆಯಾಗ್ತಾರೆ. ಕಾಂಟ್ರಾಕ್ಟ್ ಮದುವೆಯಿಂದ ಒಂದಾದ ಈ ಜೀವಗಳ ಮನಸುಗಳು ಮುಂದೆ ಹೇಗೆ ಒಂದಾಗುತ್ತೆ ? ಎಂಬುದು ಈ ಧಾರಾವಾಹಿಯ ಮುಖ್ಯ ಕಥಾ ಹಂದರ.

ಈ ಕಥೆಯ ನಾಯಕನ ಪಾತ್ರದಲ್ಲಿ ನಟಿಸುತ್ತಿರುವ ನಟ ನಿರಂಜನ್ ವರ್ಷಗಳ ಬಳಿಕ “ನಿನ್ನ ಜೊತೆ ನನ್ನ ಕಥೆ” ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆಗೆ ಮರಳುತ್ತಿದ್ದಾರೆ. ನಾಯಕಿಯಾಗಿ ನಟಿ ನಿರುಷ ಗೌಡ ನಟಿಸುತ್ತಿದ್ದು ಕಥೆಯು ಅದ್ಬುತ ತಾರಾಬಳಗವನ್ನು ಹೊಂದಿದೆ. ಹೊಚ್ಚ ಹೊಸ ಧಾರಾವಾಹಿ “ನಿನ್ನ ಜೊತೆ ನನ್ನ ಕಥೆ” ಇದೇ ಸೋಮವಾರದಿಂದ ರಾತ್ರಿ 8 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸಿನಿಮಾ

Suvarna Celebrity League : ವಾರಾಂತ್ಯದಲ್ಲಿ ಸೆಲೆಬ್ರಿಟಿಗಳ ಸಮರ; ಕಿರುತೆರೆಯಲ್ಲಿ ಶುರುವಾಗಲಿದೆ ಸುವರ್ಣ ಸೆಲೆಬ್ರಿಟಿ ಲೀಗ್

Suvarna Celebrity League : ರಿಯಾಲಿಟಿ ಶೋ ಮೂಲಕ ಕನ್ನಡ ಕಿರುತೆರೆಯಲ್ಲಿ ಹೊಸತನದ ಸಂಚಲನವನ್ನು ಸೃಷ್ಟಿಸಲು ಸ್ಟಾರ್ ಸುವರ್ಣ ವಾಹಿನಿ ಭರ್ಜರಿಯಾಗಿ ಸಜ್ಜಾಗಿದೆ . ವೀಕೆಂಡ್‌ನಲ್ಲಿ ಪ್ರೇಕ್ಷಕರಿಗೆ ಮತ್ತಷ್ಟು ಮನರಂಜನೆಯ ರಸದೌತಣ ನೀಡಲು ಹೊಚ್ಚ ಹೊಸ ಶೋ “ಸುವರ್ಣ ಸೆಲೆಬ್ರಿಟಿ ಲೀಗ್” ಹೊತ್ತು ತರ್ತಿದೆ.

VISTARANEWS.COM


on

By

Suvarna Celebrity League a reality show launched on Star Suvarna
Koo

ಬೆಂಗಳೂರು: ಕಿರುತೆರೆಯಲ್ಲಿ ಸೆಲೆಬ್ರಿಟಿಗಳ ಬಹುದೊಡ್ಡ ಸಮರ “ಸುವರ್ಣ ಸೆಲೆಬ್ರಿಟಿ ಲೀಗ್” (Suvarna Celebrity League) ಇದೇ ಭಾನುವಾರದಿಂದ (ಸೆ.15) ರಾತ್ರಿ 7 ಗಂಟೆಗೆ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಇದೊಂದು ಕಿರುತೆರೆಯ ಜನಪ್ರಿಯ ಸೆಲೆಬ್ರಿಟಿಗಳನ್ನು ಒಳಗೊಂಡ ವಿನೂತನ ರೀತಿಯ ರಿಯಾಲಿಟಿ ಶೋ ಆಗಿದೆ. ಇದರಲ್ಲಿ ಒಟ್ಟು 2 ತಂಡಗಳು ಇರಲಿದ್ದು, 10 ಜನ ಸೆಲೆಬ್ರಿಟಿ ಸ್ಪರ್ಧಿಗಳ ನಡುವೆ ಸರಿ ಸುಮಾರು 8 ವಾರಗಳ ಕಾಲ ನಡೆಯುವ ಸಮರ ಇದಾಗಿದೆ. ಈ ಜಟಾಪಟಿಯಲ್ಲಿ ಯಾವ ತಂಡ ಗೆದ್ದು “ಸುವರ್ಣ ಸೆಲೆಬ್ರಿಟಿ ಲೀಗ್” ಪಟ್ಟವನ್ನು ತನ್ನದಾಗಿಸಿಕೊಳ್ಳುತ್ತದೆ ? ಎಂಬುದು ಈ ಕಾರ್ಯಕ್ರಮದ ಶೈಲಿಯಾಗಿದೆ. ಜತೆಗೆ ಮೋಜು-ಮಸ್ತಿ, ತರ್ಲೆ ತುಂಟಾಟದ ಜತೆ ಪೈಪೋಟಿಯ ಮಹಾ ಯುದ್ಧವೇ ನಡೆಯಲಿದೆ.

ನಿರೂಪಕರಾಗಿ ಮಿಂಚಲಿರುವ ಕಾರ್ತಿಕ್‌ ಮಹೇಶ್‌

ಇನ್ನು ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ನಟನೆಯ ಮೂಲಕ ಕನ್ನಡಿಗರ ಮನಸ್ಸನ್ನು ಅದ್ಧೂರಿಯಾಗಿ ಗೆದ್ದ ನಟ ಕಾರ್ತಿಕ್ ಮಹೇಶ್ ಇದೇ ಮೊದಲ ಬಾರಿಗೆ ‘ಸುವರ್ಣ ಸೆಲೆಬ್ರಿಟಿ ಲೀಗ್‌’ ನ ನಿರೂಪಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇದು ಈ ಕಾರ್ಯಕ್ರಮದ ಮತ್ತೊಂದು ವಿಶೇಷತೆ ಆಗಿದೆ.

‘ಸುವರ್ಣ ಸೆಲೆಬ್ರಿಟಿ ಲೀಗ್’ ಶೋ ಲಾಂಚ್‌ಗೆ ಭರ್ಜರಿಯಾಗಿ ತಯಾರಿ ನಡೆದಿದ್ದು, ಪ್ರೊಮೋಗಳಿಂದ ವೀಕ್ಷಕರಲ್ಲಿ ಕಾತುರತೆ ಹೆಚ್ಚಾಗಿದೆ. 10 ಸ್ಪರ್ಧಿಗಳಾಗಿ ಕಿರುತೆರೆ ಕಲಾವಿದರುಗಳಾದ ವಿನಯ್ ಗೌಡ, ನಮ್ರತಾ ಗೌಡ ಹಾಗೂ ‘ಕಥೆಯೊಂದು ಶುರುವಾಗಿದೆ’ ಧಾರಾವಾಹಿಯ ಚಂದು ಗೌಡ, ‘ಆಸೆ’ ಧಾರಾವಾಹಿಯ ಪ್ರಿಯಾಂಕಾ ಮತ್ತು ನಿನಾದ್ ಹರಿತ್ಸ, ‘ಗೌರಿಶಂಕರ’ ಧಾರಾವಾಹಿಯ ಅಭಿಜ್ಞಾ ಭಟ್, ತನಿಷಾ ಕುಪ್ಪಂಡ, ಪ್ರಿಯಾಂಕಾ ಶಿವಣ್ಣ, ರಕ್ಷಕ್ ಬುಲೆಟ್ ಹಾಗೂ ‘ಕಾಮಿಡಿ ಗ್ಯಾಂಗ್ಸ್’ನ ಹಿತೇಶ್ ಭಾಗವಹಿಸಲಿದ್ದಾರೆ.

Suvarna Celebrity League a reality show launched on Star Suvarna

ಇನ್ಮುಂದೆ ವಾರಾಂತ್ಯದಲ್ಲಿ ಶುರುವಾಗಲಿದೆ ಸೆಲೆಬ್ರಿಟಿಗಳ ಬಹುದೊಡ್ಡ ಸಮರ “ಸುವರ್ಣ ಸೆಲೆಬ್ರಿಟಿ ಲೀಗ್” ಇದೇ ಭಾನುವಾರದಿಂದ ಪ್ರತೀ ಭಾನುವಾರ ರಾತ್ರಿ 7 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

Continue Reading

ಕಿರುತೆರೆ

Namratha Gowda: ಕಪ್ಪು ಸೀರೆಯುಟ್ಟು ನೋಡುಗರ ನಿದ್ದೆಗೆಡಿಸಿದ ಕಿರುತೆರೆ ನಟಿ ನಮ್ರತಾ ಗೌಡ

Namratha Gowda: ಹಾಟ್‌ ಆಗಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರು ನಮ್ರತಾ ಗೌಡ . ಇಲ್ಲಿವೆ ಫೋಟೊಗಳು!

VISTARANEWS.COM


on

Namratha Gowda
Koo
Namratha Gowda
ಬಿಗ್‌ಬಾಸ್‌ ಖ್ಯಾತಿಯ ನಮ್ರತಾ ಗೌಡ ಲಕ್ಷ್ಮೀ ಕೃಷ್ಣ ಡಿಸೈನ್ ಮಾಡಿರುವ ಕಪ್ಪು ಸೀರೆಯುಟ್ಟು ಗಮನ ಸೆಳೆದಿದ್ದಾರೆ.
Namratha Gowda
ಸ್ಲೀವ್ ಲೆಸ್ ಬ್ಲೌಸ್ ಜತೆ ಬ್ಲ್ಯಾಕ್‌ ಹ್ಯಾಂಡ್‌ ಗ್ಲೌಸ್‌, ಅದರ ಮೇಲೆ ಡೈಮಂಡ್‌ ರಿಂಗ್‌ ಮತ್ತು ಸಿಂಹಿಣಿಯ ಲೋಗೋ ಇರುವ ಬೆಲ್ಟ್‌ ಇದು ಬೆಡಗಿಯ ನ್ಯೂ ಲುಕ್‌ನ ವಿಷೇಶವಾಗಿದೆ.
Namratha Gowda
ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕ್ಯೂಟ್‌ ಮತ್ತು ಹಾಟ್ ಫೋಟೊಗಳನ್ನು ಪೋಸ್ಟ್‌ ಮಾಡಿರುವ ನಮ್ಮು “Some wars help us bloom” ಎಂದು ಕ್ಯಾಪ್ಶನ್ ಸಹ ಹಾಕಿಕೊಂಡಿದ್ದಾರೆ.
Namratha Gowda
ಕೆಲದಿನಗಳ ಹಿಂದೆ ಪ್ಯಾರ್ ಗೆ ಆಗ್ಬಿಟ್ಟೈತೆ ನಟಿ ಪಾರುಲ್ ಯಾದವ್ ಬ್ಲ್ಯಾಕ್ ಸೀರೆ ಧರಿಸಿ ಬೋಲ್ಡ್‌ ಆಗಿ ಫೋಟೊ ಶೂಟ್ ಮಾಡಿಸಿದ್ದು ಅದು ವೈರಲ್ ಆಗಿತ್ತು. ಇದೀಗ ಅವರನ್ನು ಮೀರಿಸುವ ಹಾಗೆ ನಟಿ ನಮ್ರತಾ ಗೌಡ ಫೋಟೊಗಳನ್ನು ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
Namratha Gowda
ಸದ್ಯಕ್ಕೆ ಜಿಮ್‌ ವರ್ಕೌಟ್‌ ಮಾಡಿ ಫಿಟ್‌ ಆಗುತ್ತಿರುವ ನಮ್ರತಾ ಮುಂಬರುವ ಪ್ರಾಜೆಕ್ಟ್‌ಗಳಲ್ಲಿ ಬ್ಯೂಸಿ ಆಗಲಿದ್ದಾರೆ.
Continue Reading
Advertisement
Kodava Family Hockey Tournament Website Launched
ಕೊಡಗು1 ತಿಂಗಳು ago

Kodagu News : ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ವೈಬ್ ಸೈಟ್ ಲೋಕಾರ್ಪಣೆ

Bengaluru News
ಬೆಂಗಳೂರು1 ತಿಂಗಳು ago

Bengaluru News : ಮಾಡಲಿಂಗ್‌ನಲ್ಲಿ ಗಿನ್ನಿಸ್‌ ರೆಕಾರ್ಡ್‌ ಮಾಡಲು ಹೊರಟ ಹಳ್ಳಿಹೈದ

Dina Bhavishya
ಭವಿಷ್ಯ1 ತಿಂಗಳು ago

Dina Bhavishya : ಯಾವುದಾದರೂ ಪ್ರಸಂಗಗಳಿಂದ ನಿಮ್ಮ ಮೇಲೆ ಅಪವಾದ ಬರುವ ಸಾಧ್ಯತೆ ಎಚ್ಚರಿಕೆ ಇರಲಿ

Gadag News Father commits suicide by throwing three children into river
ಗದಗ1 ತಿಂಗಳು ago

Gadag News : ಮೂವರು ಮಕ್ಕಳನ್ನು ನದಿಗೆ ಎಸೆದು, ಆತ್ಮಹತ್ಯೆ ಮಾಡಿಕೊಂಡ ತಂದೆ!

Dina Bhavishya
ಭವಿಷ್ಯ1 ತಿಂಗಳು ago

Dina Bhavishya: ಪ್ರಯತ್ನದಲ್ಲಿ ನಂಬಿಕೆ ಇಟ್ಟು ಕಾರ್ಯದಲ್ಲಿ ಮುನ್ನುಗ್ಗಿ, ಯಶಸ್ಸು ಖಂಡಿತ

Dina Bhavishya
ಭವಿಷ್ಯ1 ತಿಂಗಳು ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗಲಿದೆ

Bengaluru airport
ಬೆಂಗಳೂರು1 ತಿಂಗಳು ago

Bengaluru Airport : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೈಗರ್‌ ವಿಂಗ್ಸ್‌; 2ನಲ್ಲಿ ಅತಿದೊಡ್ಡ ವರ್ಟಿಕಲ್‌ ಗಾರ್ಡನ್‌ ಅನಾವರಣ

Dina Bhavishya
ಭವಿಷ್ಯ1 ತಿಂಗಳು ago

Dina Bhavishya : ಈ ರಾಶಿಯವರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಆಲೋಚಿಸಿ

Dina Bhavishya
ಭವಿಷ್ಯ1 ತಿಂಗಳು ago

Dina Bhavishya : ಸದಾ ಕಲ್ಪನೆಯಲ್ಲಿ ಕನಸುಗಳನ್ನು ಕಾಣುತ್ತಾ ಕಾಲಹರಣ ಮಾಡ್ಬೇಡಿ

dina bhavishya read your daily horoscope predictions for november 4 2024
ಭವಿಷ್ಯ2 ತಿಂಗಳುಗಳು ago

Dina Bhavishya : ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಶುಭ ಸುದ್ದಿ

galipata neetu
ಕಿರುತೆರೆ1 ವರ್ಷ ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ1 ವರ್ಷ ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ1 ವರ್ಷ ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ1 ವರ್ಷ ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ3 ತಿಂಗಳುಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್4 ತಿಂಗಳುಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್4 ತಿಂಗಳುಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ4 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ5 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ5 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ5 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು5 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ5 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ5 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌