All England Open: All England Badminton Championship; Indus and Saina basin All England Badminton: ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್​; ಸಿಂಧು, ಸೈನಾ ಕಣದಲ್ಲಿ - Vistara News All England Badminton: ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್​; ಸಿಂಧು, ಸೈನಾ ಕಣದಲ್ಲಿ

ಕ್ರೀಡೆ

All England Badminton: ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್​; ಸಿಂಧು, ಸೈನಾ ಕಣದಲ್ಲಿ

ಪ್ರತಿಷ್ಠಿತ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್​ ಚಾಂಪಿಯನ್‌ಶಿಪ್​ನಲ್ಲಿ ಪಿ.ವಿ.ಸಿಂಧು ಮತ್ತು ಲಕ್ಷ್ಯ ಸೇನ್‌ ಭಾರತದ ಪದಕ ಭರವಸೆ ಎನಿಸಿದ್ದಾರೆ.

VISTARANEWS.COM


on

All England Open: All England Badminton Championship; Indus and Saina basin
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬರ್ಮಿಂಗ್‌ಹ್ಯಾಮ್‌: ಮಂಗಳವಾರದಿಂದ(ಮಾರ್ಚ್ 14) ಇಲ್ಲಿ ಆರಂಭವಾಗಲಿರುವ ಪ್ರತಿಷ್ಠಿತ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್​ ಚಾಂಪಿಯನ್‌ಶಿಪ್​ನಲ್ಲಿ(All England Badminton) ಭಾರತದ ಬ್ಯಾಡ್ಮಿಂಟನ್‌ ಪಟುಗಳು ಕಣಕ್ಕಿಳಿಯಲು ಸಜ್ಜಾಗಿದ್ದಾರೆ. 22 ವರ್ಷಗಳ ಭಾರತದ ಪ್ರಶಸ್ತಿ ಬರ ನೀಗಿತೇ ಎಂಬುವುದು ಈ ಟೂರ್ನಿಯ ಕುತೂಹಲವಾಗಿದೆ.

ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ.ಸಿಂಧು, ಯುವ ಆಟಗಾರ ಲಕ್ಷ್ಯ ಸೇನ್‌(Lakshya Sen), ಸೈನಾ ನೆಹ್ವಾಲ್(Saina Nehwal)​ ಅವರು ಈ ಟೂರ್ನಿಯಲ್ಲಿ ಭಾರತದ ಪದಕ ಭರವಸೆ ಎನಿಸಿದ್ದಾರೆ. ಭಾರತದ ಪುಲ್ಲೇಲ ಗೋಪಿಚಂದ್‌ (2001) ಮತ್ತು ಪ್ರಕಾಶ್‌ ಪಡುಕೋಣೆ (1980) ಅವರಿಗೆ ಪ್ರತಿಷ್ಠಿತ ಪ್ರಶಸ್ತಿ ಒಲಿದಿತ್ತು. 2015ರಲ್ಲಿ ಸೈನಾ ನೆಹ್ವಾಲ್​, 2022ರಲ್ಲಿ ಲಕ್ಷ್ಯ ಸೇನ್‌ ಫೈನಲ್​ ಪ್ರವೇಶಿಸಿದ್ದರೂ ಇಲ್ಲಿ ಮೇಲುಗೈ ಸಾಧಿಸಲಾಗದೆ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಕಳೆದ ಬಾರಿ ಕೈತಪ್ಪಿದ ಪ್ರಶಸ್ತಿಯನ್ನು ಈ ಬಾರಿ ಲಕ್ಷ್ಯ ಸೇನ್‌ ಗೆಲ್ಲಲಿದ್ದಾರಾ ಎಂದು ಕಾದು ನೋಡಬೇಕಿದೆ.

ಗಾಯದಿಂದ ಬಳಲಿ ಬಹಳ ದಿನಗಳ ಬಳಿಕ ಕಣಕ್ಕೆ ಇಳಿಯುತ್ತಿರುವ ಸಿಂಧು ಮತ್ತು ಲಕ್ಷ್ಯ ಅವರಿಗೆ ಮಲೇಷ್ಯಾ ಓಪನ್‌ ಮತ್ತು ಇಂಡಿಯಾ ಓಪನ್ ಟೂರ್ನಿಗಳಲ್ಲಿ ನಿರೀಕ್ಷಿತ ಸಾಮರ್ಥ್ಯ ತೋರಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಸಂಪೂರ್ಣ ಚೇತರಿಕೆ ಕಂಡಿರುವ ಇವರು ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ.

ಇದನ್ನೂ ಓದಿ Spanish Para-Badminton: ಕಂಚಿನ ಪದಕ ವಿಜೇತ ಕನ್ನಡಿಗ ಸುಹಾಸ್ ಸ್ವದೇಶಕ್ಕೆ ಆಗಮನ

ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಲಕ್ಷ್ಯ ಅವರು ಚೀನಾ ತೈಪೆಯ ಚೊ ಟಿಯೆನ್ ಚೆನ್ ಅವರನ್ನು ಎದುರಿಸಲಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಸಿಂಧು ಅವರು ಚೀನಾದ ಜಾಂಗ್‌ ಯಿ ಮನ್‌ ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನ ಇನ್ನೊಂದು ಪಂದ್ಯದಲ್ಲಿ ಸೈನಾ ನೆಹ್ವಾಲ್‌ ಅವರು ಚೀನಾದ ಹಾನ್ ಯು ಎದುರು ಸೆಣಸಾಟ ನಡೆಸಲಿದ್ದಾರೆ. ಉಳಿದಂತೆ ಡಬಲ್ಸ್​ನಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಇಂಡೊನೇಷ್ಯಾದ ಮಾರ್ಕಸ್‌ ಫರ್ನಾಲ್ಡಿ ಗಿಡಿಯೊನ್‌-ಕೆವಿನ್‌ ಸಂಜಯ ಸುಕಮುಲ್ಜೊ ಸವಾಲು ಎದುರಿಸಲಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IPL 2024 Points Table: 3ನೇ ಗೆಲುವು ಸಾಧಿಸಿದ ಬಳಿಕ ಮುಂಬೈಗೆ ಅಂಕಪಟ್ಟಿಯಲ್ಲಿ ಎಷ್ಟನೇ ಸ್ಥಾನ?

IPL 2024 Points Table: ಮುಂಬೈ ಇಂಡಿಯನ್ಸ್​(Mumbai Indians) ತಂಡ ಗುರುವಾರ ರಾತ್ರಿ ನಡೆದ ಐಪಿಎಲ್​ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್(Punjab Kings)​ ವಿರುದ್ಧ ರೋಚಕ 9 ರನ್​ಗಳ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ(IPL 2024 Points Table) ಪ್ರಗತಿ ಸಾಧಿಸಿ 7ನೇ ಸ್ಥಾನಕ್ಕೇರಿದೆ.

VISTARANEWS.COM


on

IPL 2024 Points Table
Koo

ಮುಲ್ಲಾನ್‌ಪುರ್‌: ಮಾಜಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​(Mumbai Indians) ತಂಡ ಗುರುವಾರ ರಾತ್ರಿ ನಡೆದ ಐಪಿಎಲ್​ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್(Punjab Kings)​ ವಿರುದ್ಧ ರೋಚಕ 9 ರನ್​ಗಳ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ(IPL 2024 Points Table) ಪ್ರಗತಿ ಸಾಧಿಸಿದೆ. ಈ ಪಂದ್ಯಕ್ಕೂ ಮುನ್ನ 9ನೇ ಸ್ಥಾನದಲ್ಲಿದ್ದ ಮುಂಬೈ ಈ ಗೆಲುವಿನೊಂದಿಗೆ 7ನೇ ಸ್ಥಾನಕ್ಕೇರಿದೆ. ಸೋಲು ಕಂಡ ಪಂಜಾಬ್​ 9ನೇ ಸ್ಥಾನಕ್ಕೆ ಕುಸಿದಿದೆ.

ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ರಾಜಸ್ಥಾನ್​ ರಾಯಲ್ಸ್​76112 (+0.677)
ಕೆಕೆಆರ್​​6428 (+1.399)
ಚೆನ್ನೈ ಸೂಪರ್​ ಕಿಂಗ್ಸ್​​6428 (+0.726)
ಹೈದರಾಬಾದ್​​6428(+0.502)
ಲಕ್ನೋ6336 (+0.038)
ಡೆಲ್ಲಿ ಕ್ಯಾಪಿಟಲ್ಸ್​​7346 (-0.074)
ಮುಂಬೈ​7346 (-0.133)
ಗುಜರಾತ್7346 (-1.303)
ಪಂಜಾಬ್​7254 (-0.251)
ಆರ್​ಸಿಬಿ7162 (-1.185)

ಪಂದ್ಯ ಗೆದ್ದ ಮುಂಬೈ


ಅಶುತೋಷ್​ ಶರ್ಮಾ (61 ರನ್​, 28 ಎಸೆತ, 2 ಫೋರ್​, 7 ಸಿಕ್ಸರ್​), ಶಶಾಂಕ್ ಸಿಂಗ್​ (25 ಎಸೆತ, 41 ರನ್​, 2 ಫೋರ್​, 3 ಸಿಕ್ಸರ್​ ಮಧ್ಯಮ ಕ್ರಮಾಂಕದಲ್ಲಿ ದಿಟ್ಟ ಹೋರಾಟ ನಡೆಸಿದ ಹೊರತಾಗಿಯೂ ಅಗ್ರ ಕ್ರಮಾಂಕದ ಬ್ಯಾಟರ್​ಗಳ ತೀವ್ರ ವೈಫಲ್ಯದ ಹಿನ್ನೆಲೆಯಲ್ಲಿ ಪಂಜಾಬ್ ಕಿಂಗ್ಸ್​ ತಂಡ ಐಪಿಎಲ್​ 2024ನೇ (IPL 2024) ಆವೃತ್ತಿಯಲ್ಲಿ ಮತ್ತೊಂದು ಸೋಲಿಗೆ ಒಳಗಾಯಿತು. ಮಹಾರಾಜಾ ಯಾದವೀಂದ್ರ ಸಿಂಗ್​ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಪಂಜಾಬ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಮುಂಬಯಿ ತಂಡ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 192 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಪಂಜಾಬ್​ 19.1 ಓವರ್​ಗಳಲ್ಲಿ 183 ರನ್​ಗೆ ಆಲ್​ಔಟ್​ ಆಗಿ ಕೇವಲ 9 ರನ್​ ಅಂತರದಿಂದ ಸೋಲೊಪ್ಪಿಕೊಂಡಿತು.

ಇದನ್ನೂ ಓದಿ IPL 2024 : ಪಂಜಾಬ್​ ತಂಡಕ್ಕೆ ವಿರೋಚಿತ 9 ರನ್ ಸೋಲು, ಜಯದ ಹಳಿಗೆ ಮರಳಿದ ಮುಂಬೈ

ಮೊದಲು ಬ್ಯಾಟ್ ಮಾಡಿದ ಮುಂಬಯಿ ಪರ ಸೂರ್ಯಕುಮಾರ್​ ಅರ್ಧ ಶತಕ (78 ರನ್​) ಬಾರಿಸಿದರು. ಆದರೆ ಅವರ ಸ್ಕೋರ್ ಹೆಚ್ಚು ವೇಗವಾಗಿರಲಿಲ್ಲ. ರೋಹಿತ್ ಶರ್ಮಾ 36 ರನ್ ಬಾರಿಸಿದರೆ ತಿಲಕ್ ವರ್ಮಾ 34 ರನ್​ ಗಳಿಸಿದರು. ಹಾರ್ದಿಕ್ ಪಾಂಡ್ಯ 10 ರನ್ ಗೆ ಸೀಮಿತಗೊಂಡರೆ ಟಿಮ್ ಡೇವಿಡ್​ 14 ರನ್ ಬಾರಿಸಿದರು. ಆರಂಭಿಕ ಆಟಗಾರ ಇಶಾನ್ ಕಿಶನ್​ 8 ರನ್ ಬಾರಿಸಿ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಎದುರಿಸಿದರು.

Continue Reading

ಪ್ರಮುಖ ಸುದ್ದಿ

IPL 2024 : ಪಂಜಾಬ್​ ತಂಡಕ್ಕೆ ವಿರೋಚಿತ 9 ರನ್ ಸೋಲು, ಜಯದ ಹಳಿಗೆ ಮರಳಿದ ಮುಂಬೈ

IPL 2024: ಟಾಸ್​ ಗೆದ್ದ ಪಂಜಾಬ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಮುಂಬಯಿ ತಂಡ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 192 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಪಂಜಾಬ್​ 19.1 ಓವರ್​ಗಳಲ್ಲಿ 183 ರನ್​ಗೆ ಆಲ್​ಔಟ್​ ಆಗಿ ಸೋಲೊಪ್ಪಿಕೊಂಡಿತು.

VISTARANEWS.COM


on

IPL 2024
Koo

ಮಲ್ಲಾನ್​ಪುರ: ಅಶುತೋಷ್​ ಶರ್ಮಾ (61 ರನ್​, 28 ಎಸೆತ, 2 ಫೋರ್​, 7 ಸಿಕ್ಸರ್​), ಶಶಾಂಕ್ ಸಿಂಗ್​ (25 ಎಸೆತ, 41 ರನ್​, 2 ಫೋರ್​, 3 ಸಿಕ್ಸರ್​ ಮಧ್ಯಮ ಕ್ರಮಾಂಕದಲ್ಲಿ ದಿಟ್ಟ ಹೋರಾಟ ನಡೆಸಿದ ಹೊರತಾಗಿಯೂ ಅಗ್ರ ಕ್ರಮಾಂಕದ ಬ್ಯಾಟರ್​ಗಳ ತೀವ್ರ ವೈಫಲ್ಯದ ಹಿನ್ನೆಲೆಯಲ್ಲಿ ಪಂಜಾಬ್ ಕಿಂಗ್ಸ್​ ತಂಡ ಐಪಿಎಲ್​ 2024ನೇ (IPL 2024) ಆವೃತ್ತಿಯಲ್ಲಿ ಮತ್ತೊಂದು ಸೋಲಿಗೆ ಒಳಗಾಗಿದೆ. ಮುಂಬಯಿ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ 9 ರನ್​ಗಳ ವಿರೋಚಿತ ಸೋಲಿಗೆ ಒಳಗಾಗಿದೆ. ಪಂಜಾಬ್ ತಂಡಕ್ಕೆ ಇದು ಐದನೇ ಸೋಲಾಗಿದೆ. ಇದೇ ವೇಳೆ ಮುಂಬಯಿ ತಂಡ ಮತ್ತೆ ಗೆಲುವಿನ ಹಳಿಗೆ ಮರಳಿದೆ. ಆಡಿರುವ ಏಳು ಪಂದ್ಯಗಳಲ್ಲಿ ಮುಂಬಯಿಗೆ ದೊರೆತ ಮೂರನೇ ಗೆಲುವು ಇದು.

ಇಲ್ಲಿನ ಮಹಾರಾಜಾ ಯಾದವೀಂದ್ರ ಸಿಂಗ್​ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಪಂಜಾಬ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಮುಂಬಯಿ ತಂಡ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 192 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಪಂಜಾಬ್​ 19.1 ಓವರ್​ಗಳಲ್ಲಿ 183 ರನ್​ಗೆ ಆಲ್​ಔಟ್​ ಆಗಿ ಸೋಲೊಪ್ಪಿಕೊಂಡಿತು.

ಇದನ್ನೂ ಓದಿ: Preity Zinta : ರೋಹಿತ್​ ಶರ್ಮಾಗಾಗಿ ಪ್ರಾಣ ಪಣಕ್ಕಿಡಲು ಸಿದ್ಧ; ಪ್ರೀತಿ ಜಿಂಟಾ ಹೇಳಿಕೆ ಸಿಕ್ಕಾಪಟ್ಟೆ ವೈರಲ್​

ಮೊದಲು ಬ್ಯಾಟ್ ಮಾಡಿದ ಮುಂಬಯಿ ಪರ ಸೂರ್ಯಕುಮಾರ್​ ಅರ್ಧ ಶತಕ (78 ರನ್​) ಬಾರಿಸಿದರು. ಆದರೆ ಅವರ ಸ್ಕೋರ್ ಹೆಚ್ಚು ವೇಗವಾಗಿರಲಿಲ್ಲ. ರೋಹಿತ್ ಶರ್ಮಾ 36 ರನ್ ಬಾರಿಸಿದರೆ ತಿಲಕ್ ವರ್ಮಾ 34 ರನ್​ ಗಳಿಸಿದರು. ಹಾರ್ದಿಕ್ ಪಾಂಡ್ಯ 10 ರನ್ ಗೆ ಸೀಮಿತಗೊಂಡರೆ ಟಿಮ್ ಡೇವಿಡ್​ 14 ರನ್ ಬಾರಿಸಿದರು. ಆರಂಭಿಕ ಆಟಗಾರ ಇಶಾನ್ ಕಿಶನ್​ 8 ರನ್ ಬಾರಿಸಿ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಎದುರಿಸಿದರು.

ಅಶುತೋಷ್​ ಮಿಂಚಿನ ಬ್ಯಾಟಿಂಗ್

ದೊಡ್ಡ ಗುರಿಯನ್ನು ಬೆನ್ನಟ್ಟಲು ಹೊರಟ ಪಂಜಾಬ್ ತಂಡ ಆರಂಭ ಹೀನಾಯವಾಗಿತ್ತು. 14 ರನ್​ಗಳಿಗೆ ಪ್ರಮುಖ 4 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಕರ್ರನ್​ 6 ರನ್ ಬಾರಿಸಿದರೆ, ಪ್ರಭ್​ಸಿಮ್ರಾನ್ ಸಿಂಗ್ ಶೂನ್ಯಕ್ಕೆ ಔಟಾದರು. ರೀಲಿ ರೊಸ್ಸೊ ಹಾಗೂ ಲಿಯಾಮ್ ಲಿವಿಂಗ್​ಸ್ಟನ್​ ತಲಾ ಒಂದು ರನ್ ಬಾರಿಸಿ ಔಟಾದರು. ಹರ್ಪ್ರೀತ್ ಸಿಂಗ್​ 13 ರನ್​ಗೆ ಸೀಮಿತಗೊಂಡರು. ಈ ವೇಳೆ ಶಶಾಂಕ್ ಸಿಂಗ್ ವಿಕೆಟ್​ ಪತನವಾಗುವುದನ್ನು ತಪ್ಪಿಸಿ 41 ರನ್ ಬಾರಿಸಿದರು. ಆದರೆ ಸ್ಫೋಟಕ ಬ್ಯಾಟರ್​ ಜಿತೇಶ್ ಶರ್ಮಾ 9 ರನ್​ಗೆ ಸೀಮಿತಗೊಂಡರು.

77 ರನ್​ಗೆ 6 ವಿಕೆಟ್​ಕಳೆದುಕೊಂಡ ಪಂಜಾಬ್​ 100 ರನ್ ಒಳಗೆ ಆಲ್​ಔಟ್ ಆಗುವುದಾಗಿ ಭಾವಿಸಲಾಗಿತ್ತು. ಆದರೆ ಅಶುತೋಷ್​ ಸ್ಟೈಲಿಶ್​ ಬೌಂಡರಿ ಹಾಗೂ ಸಿಕ್ಸರ್​ಗಳ ಮೂಲಕ ಪಂದ್ಯದ ಗತಿಯನ್ನು ಬದಲಾಯಿಸಿದರು. ಪಂಜಾಬ್ ಗೆಲ್ಲುತ್ತದೆ ಎಂಬ ಹಂತಕ್ಕೆ ಹೋಯಿತು. ಈ ವೇಳೆ ಅಶುತೋಷ್​ ಔಟಾದರು. ಜತೆಗೆ ಹರ್ಪ್ರೀತ್ ಬ್ರಾರ್ ಕೂಡ ಔಟಾದರು. ಕೊನೆಯಲ್ಲಿ ರಬಾಡ ಗೆಲ್ಲಿಸುವರೆಂಬ ಆಶಾಭಾವ ಉಂಟಾಗಿತ್ತು. ಆದರೆ ಅವರು ರನ್ಔಟ್ ಆದರು.

ಮುಂಬಯಿ ಪರ ಬುಮ್ರಾ ಹಾಗೂ ಕೋಜಿ ತಲಾ 3 ವಿಕೆಟ್​ ಉರುಳಿಸಿದರು.

Continue Reading

ಕ್ರೀಡೆ

Preity Zinta : ರೋಹಿತ್​ ಶರ್ಮಾಗಾಗಿ ಪ್ರಾಣ ಪಣಕ್ಕಿಡಲು ಸಿದ್ಧ; ಪ್ರೀತಿ ಜಿಂಟಾ ಹೇಳಿಕೆ ಸಿಕ್ಕಾಪಟ್ಟೆ ವೈರಲ್​

Preity Zinta: ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯಕ್ಕೂ ಮುನ್ನ ಮಾತನಾಡಿದ ಪ್ರೀತಿ ಜಿಂಟಾ, ಮುಂಬರುವ ಐಪಿಎಲ್ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡ ರೋಹಿತ್​ ಅವರನ್ನು ಬಿಡುಗಡೆ ಮಾಡಿದರೆ ಅವರನ್ನು ನಾಯಕನನ್ನಾಗಿ ಮಾಡಲು ತಮ್ಮ ಪ್ರಾಣವನ್ನು ಪಣಕ್ಕಿಡಲು ಸಿದ್ಧ ಎಂದು ಹೇಳಿದ್ದಾರೆ.

VISTARANEWS.COM


on

Preity Zinta
Koo

ಬೆಂಗಳೂರು: ಪಂಜಾಬ್ ಕಿಂಗ್ಸ್ ತಂಡದ ಮಾಲೀಕರಾದ ಪ್ರೀತಿ ಜಿಂಟಾ (Preity Zinta) ಅವರು ಐಪಿಎಲ್ 2024 (IPL 2024) ರಲ್ಲಿ ಸಂಪೂರ್ಣವಾಗಿ ಬ್ಯುಸಿಯಾಗಿದ್ದಾರೆ. ಅವರು ತಮ್ಮ ಪಂಜಾಬ್ ಕಿಂಗ್ಸ್ (Punjab Kings) ತಂಡವನ್ನು ಹುರಿದುಂಬಿಸಲೆಂದೇ ಸ್ಟೇಡಿಯಮ್​ಗೆ ಬರುತ್ತಿದ್ದಾರೆ. ಅಂತೆಯೇ ಗುರುವಾರ (ಏಪ್ರಿಲ್​ 18ರಂದು) ಕಾಯಂ ನಾಯಕ ಶಿಖರ್ ಧವನ್ ಇಲ್ಲದೆ ಮುಂಬೈ ಇಂಡಿಯನ್ಸ್ ಆಡುತ್ತಿರುವ ಪಂಜಾಬ್ ತಂಡಕ್ಕೆ ಪ್ರೋತ್ಸಾಹ ನೀಡಲು ಅವರು ಬಂದಿದ್ದರು. ಅಂತೆಯೇ ಅವರು ಪಂದ್ಯಕ್ಕೆ ಮೊದಲು ಮಾತನಾಡುತ್ತಾ ರೋಹಿತ್​ ಶರ್ಮಾ ಅವರನ್ನು ಪಡೆದುಕೊಳ್ಳುವುದಕ್ಕೆ ಜೀವನ ಪಣವಿಡುತ್ತೇನೆ ಎಂದು ಹೇಳಿದ್ದಾರೆ. ಈ ಮಾರು ವೈರಲ್​ ಆಗಿದೆ.

ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯಕ್ಕೂ ಮುನ್ನ ಮಾತನಾಡಿದ ಪ್ರೀತಿ ಜಿಂಟಾ, ಮುಂಬರುವ ಐಪಿಎಲ್ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡ ರೋಹಿತ್​ ಅವರನ್ನು ಬಿಡುಗಡೆ ಮಾಡಿದರೆ ಅವರನ್ನು ನಾಯಕನನ್ನಾಗಿ ಮಾಡಲು ತಮ್ಮ ಪ್ರಾಣವನ್ನು ಪಣಕ್ಕಿಡಲು ಸಿದ್ಧ ಎಂದು ಹೇಳಿದ್ದಾರೆ.

“ರೋಹಿತ್ ಶರ್ಮಾ ಮೆಗಾ ಹರಾಜಿಗೆ ಬಂದರೆ ಅವರನ್ನು ಪಡೆಯಲು ನಾನು ನನ್ನ ಜೀವನವನ್ನು ಪಣಕ್ಕಿಡುತ್ತೇನೆ. ನಮ್ಮ ತಂಡದಲ್ಲಿ ಸ್ಥಿರತೆ ಮತ್ತು ಚಾಂಪಿಯನ್ ಮನಸ್ಥಿತಿಯನ್ನು ತರುವ ನಾಯಕನನ್ನು ಮಾತ್ರ ನಾವು ಕಳೆದುಕೊಳ್ಳುತ್ತಿದ್ದೇವೆ”ಎಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಸೋತ ನಂತರ ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಪ್ರೀತಿ ಜಿಂಟಾ ಹೇಳಿದ್ದಾರೆ.

ಐಪಿಎಲ್ 2024 ಪಾಯಿಂಟ್ಸ್ ಟೇಬಲ್​ನ್ಲಲಿ 8 ನೇ ಸ್ಥಾನದಲ್ಲಿರುವ ಶಿಖರ್ ಧವನ್ ನೇತೃತ್ವದ ಪಂಜಾಬ್ ಕಿಂಗ್ಸ್ ಈ ಋತುವಿನಲ್ಲಿ ಕೆಟ್ಟ ಫಾರ್ಮ್​ನಿಂದ ಬಳಲುತ್ತಿದೆ.

ಇದನ್ನೂ ಓದಿ: IPL 2024 : ಮದುವೆ ಆಮಂತ್ರಣಕ್ಕೆ ಸಿಎಸ್​ಕೆ ಥೀಮ್​, ಯುವ ಜೋಡಿಯ ಅಭಿಮಾನಕ್ಕೆ ಮೆಚ್ಚುಗೆ

ಮತ್ತೊಂದು ಫ್ರಾಂಚೈಸಿ ರೋಹಿತ್ ಶರ್ಮಾ ಬಗ್ಗೆ ಆಸಕ್ತಿ ತೋರಿಸುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಐಪಿಎಲ್ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಮಾಜಿ ನಾಯಕ ಲಭ್ಯವಿರಬೇಕು ಎಂದು ಹಲವು ತಂಡಗಳು ಬಯಸಿವೆ. ಇದಕ್ಕೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಕೂಡ ರೋಹಿತ್ ಶರ್ಮಾ ಅವರನ್ನು ತಮ್ಮ ತಂಡದಲ್ಲಿ ಹೊಂದುವ ಬಗ್ಗೆ ಮಾತನಾಡಿದ್ದರು.

Continue Reading

ಕ್ರೀಡೆ

IPL 2024 : ಮದುವೆ ಆಮಂತ್ರಣಕ್ಕೆ ಸಿಎಸ್​ಕೆ ಥೀಮ್​, ಯುವ ಜೋಡಿಯ ಅಭಿಮಾನಕ್ಕೆ ಮೆಚ್ಚುಗೆ

IPL 2024: ಆಹ್ವಾನವನ್ನು ಐಪಿಎಲ್ ಟಿಕೆಟ್ ರೂಪದಲ್ಲಿ ರಚಿಸಲಾಗಿದೆ. ಮ್ಯಾಚ್ ಪ್ರಿವ್ಯೂ” ಮತ್ತು “ಮ್ಯಾಚ್ ಪ್ರೆ ಡಿಕ್ಷನ್” ನಂತಹ ಪದಗಳ ಬಳಕೆ ಮಾಡಲಾಗಿದ್ದು ಆಮಂತ್ರಣ ಪತ್ರಿಕೆ ಸಂಪೂರ್ಣವಾಗಿ ಐಪಿಎಲ್​ನಿಂದ ಪ್ರೇರಿತವಾಗಿದೆ. ಮದುವೆ ಆಮಂತ್ರಣ ಪತ್ರಿಕೆಯ ಫೋಟೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾಗಿದ್ದು, 10 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ 60,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.

VISTARANEWS.COM


on

IPL 2024
Koo

ಚೆನ್ನೈ: ಮನುಷ್ಯನ ಜೀವನದಲ್ಲಿ ವಿವಾಹವು ಒಂದು ವಿಶೇಷ ಸಂದರ್ಭ. ಈ ಸಂದರ್ಭವನ್ನು ಅತ್ಯಂತ ಸಂಭ್ರಮದಿಂದ ಕಳೆಯಲು ಎಲ್ಲರೂ ಬಯಸುತ್ತಾರೆ. ಇನ್ನೂ ಕೆಲವರು ಅದನ್ನು ಇನ್ನಷ್ಟು ವಿಶೇಷವಾಗಿ ಅಥವಾ ಆಕರ್ಷಣೀಯವಾಗಿ ಮಾಡುತ್ತಾರೆ. ಅಂತೆಯೇ ತಮಿಳುನಾಡಿನ ಕ್ರಿಕೆಟ್​ ಪ್ರೇಮಿ ದಂಪತಿಗಳು ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಥೀಮ್​ ಬಣ್ಣಗಳನ್ನು ಬಳಸಿಕೊಂಡು ತಮ್ಮ ಮದುವೆಯ ಆಮಂತ್ರಣ ಪತ್ರಿಕೆ ಮುದ್ರಣ ಮಾಡಿಸಿ ಸುದ್ದಿಯಾಗಿದ್ದಾರೆ. ಐಪಿಎಲ್ (IPL 2024) ನಡೆಯುತ್ತಿರುವ ಹಿನ್ನೆಲೆಯಲ್ಲಿ ಇದು ಬಹುವಾಗಿ ಗಮನ ಸೆಳೆದಿದೆ. ವಿಶಿಷ್ಟ ವಿವಾಹ ಆಮಂತ್ರಣ ಪತ್ರಿಕೆ ವೈರಲ್ ಆಗಿದ್ದು, ಸಿಎಸ್​ಕೆ ಲೋಗೋದೊಳಗೆ ವಧು ಮತ್ತು ವರನ ಹೆಸರುಗಳನ್ನು ಹಾಕಲಾಗಿದೆ.

ಆಹ್ವಾನವನ್ನು ಐಪಿಎಲ್ ಟಿಕೆಟ್ ರೂಪದಲ್ಲಿ ರಚಿಸಲಾಗಿದೆ. ಮ್ಯಾಚ್ ಪ್ರಿವ್ಯೂ” ಮತ್ತು “ಮ್ಯಾಚ್ ಪ್ರೆ ಡಿಕ್ಷನ್” ನಂತಹ ಪದಗಳ ಬಳಕೆ ಮಾಡಲಾಗಿದ್ದು ಆಮಂತ್ರಣ ಪತ್ರಿಕೆ ಸಂಪೂರ್ಣವಾಗಿ ಐಪಿಎಲ್​ನಿಂದ ಪ್ರೇರಿತವಾಗಿದೆ. ಮದುವೆ ಆಮಂತ್ರಣ ಪತ್ರಿಕೆಯ ಫೋಟೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾಗಿದ್ದು, 10 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ 60,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.

ಫೋಟೋದಲ್ಲಿ ದಂಪತಿಗಳಾದ ಗಿಫ್ಟ್ಲೀನ್ ಪರ್ಸಿ ಮತ್ತು ಮಾರ್ಟಿನ್ ರಾಬರ್ಟ್ ಗೆ ಶುಭಾಶಯ ತಿಳಿಸಲಾಗಿದೆ. ಇದು ಅದ್ಭುತ ಜತೆಯಾಟ ಎಂದು ಕೆಲವು ಕಾಮೆಂಟ್ ಬರೆದಿದ್ದಾರೆ. ಈ ಪೋಸ್ಟ್​ನಲ್ಲಿ ನವವಿವಾಹಿತರು ತಮ್ಮ ಚಿತ್ರಗಳನ್ನು ಒಳಗೊಂಡ ಟ್ರೋಫಿಯಂತಹ ಕಟ್-ಔಟ್ ಪೋಸ್ಟರ್​ಗಳನ್ನು ನೀಡಿದ್ದಾರೆ. ಬಳಕೆದಾರರು ದಂಪತಿಗಳನ್ನು ಅಭಿನಂದಿಸಿದ್ದಾರೆ ಮತ್ತು ಅವರಿಗೆ ಯಶಸ್ವಿ ಜೀವನಕ್ಕಾಗಿ ಹಾರೈಸಿದ್ದಾರೆ.

ಇದನ್ನೂ ಓದಿ: Kodagu News: ಕೊಡಗು ಗೌಡ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

“ಸುಂದರ ಜತೆಯಾಟ ಮತ್ತು ಇನ್ನಿಂಗ್ಸ್​​ಗಾಗಿ ಹೆಚ್ಚಿನ ಅಭಿನಂದನೆಗಳು” ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. “ಆಮಂತ್ರಣದ ಎಡಭಾಗದಲ್ಲಿರುವ ಆ ಪೈವ್​ ಸ್ಟಾರ್​” ಎಂದು ಇನ್ನೊಬ್ಬರು ಹೇಳಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾರ್ಚ್ 22 ರಂದು ಪ್ರಾರಂಭವಾಗಿ ಮೇ 26 ರವರೆಗೆ ನಡೆಯುತ್ತದೆ. 17ನೇ ಆವೃತ್ತಿಯ ಟಿ20 ಟೂರ್ನಿ ಭಾರತದ 13 ನಗರಗಳಲ್ಲಿ ನಡೆಯುತ್ತಿದ್ದು, 10 ತಂಡಗಳು 74 ಪಂದ್ಯಗಳಲ್ಲಿ ಸ್ಪರ್ಧಿಸುತ್ತಿವೆ.

ಕಳೆದ ಋತುವಿನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಐದನೇ ಬಾರಿಗೆ ಪ್ರಶಸ್ತಿ ಗೆದ್ದಿದ್ದ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಜೊತೆಗೆ ಟೂರ್ನಿಯ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಫ್ರಾಂಚೈಸಿ ಎಂಬ ಖ್ಯಾತಿ ಪಡೆದುಕೊಂಡಿದೆ.

Continue Reading
Advertisement
IPL 2024 Points Table
ಕ್ರೀಡೆ16 mins ago

IPL 2024 Points Table: 3ನೇ ಗೆಲುವು ಸಾಧಿಸಿದ ಬಳಿಕ ಮುಂಬೈಗೆ ಅಂಕಪಟ್ಟಿಯಲ್ಲಿ ಎಷ್ಟನೇ ಸ್ಥಾನ?

open sump drowned
ಕ್ರೈಂ17 mins ago

Drowned: ನೀರಿನ ಸಂಪ್‌ನಲ್ಲಿ ಮುಳುಗಿ ತಾಯಿ- ಮಗು ಸಾವು, ಮುಚ್ಚಳ ಹಾಕದೆ ಬಿಟ್ಟಿದ್ದ ಮಾಲಿಕ

Benefits of Spinach Juice
ಆರೋಗ್ಯ36 mins ago

Benefits Of Spinach Juice: ದಟ್ಟ ಕೂದಲು ಬೇಕೆ? ಪಾಲಕ್‌ ಜ್ಯೂಸ್‌ ಕುಡಿಯಿರಿ

murder case gadag
ಕ್ರೈಂ50 mins ago

Murder Case: ನಗರಸಭೆ ಉಪಾಧ್ಯಕ್ಷೆಯ ಮಗ ಸೇರಿ 4 ಮಂದಿ ಮಲಗಿದಲ್ಲೇ ಕೊಚ್ಚಿ ಕೊಲೆ

voting
ಪ್ರಮುಖ ಸುದ್ದಿ1 hour ago

Lok Sabha Election 2024: ಮೊದಲ ಹಂತದ ಮತದಾನ ಆರಂಭ; 102 ಲೋಕಸಭಾ ಕ್ಷೇತ್ರಗಳ ಭವಿಷ್ಯ ಇಂದು ನಿರ್ಣಯ

kalpana chawla rajamarga column
ಅಂಕಣ2 hours ago

ರಾಜಮಾರ್ಗ ಅಂಕಣ: ಭಾರತದ ಹೆಣ್ಣು ಮಕ್ಕಳಿಗೆ ಆಕಾಶದ ಎತ್ತರವೂ ಕಡಿಮೆ ಎಂದು ಸಾಬೀತು ಪಡಿಸಿದ ಕಲ್ಪನಾ ಚಾವ್ಲಾ!

Karnataka Weather Forecast
ಮಳೆ2 hours ago

Karnataka Weather : 40 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ; ಗುಡುಗು ಸಹಿತ ಭಾರಿ ಮಳೆ ಎಚ್ಚರಿಕೆ

Dina bhavishya
ಭವಿಷ್ಯ4 hours ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Steet Food
ಆಹಾರ/ಅಡುಗೆ8 hours ago

ವಿಸ್ತಾರ ಸಂಪಾದಕೀಯ: ಸಾರ್ವಜನಿಕ ಆಹಾರದಲ್ಲಿ ಆರೋಗ್ಯ ಕಾಳಜಿ ಪ್ರಮುಖವಾಗಿರಲಿ

IPL 2024
ಪ್ರಮುಖ ಸುದ್ದಿ9 hours ago

IPL 2024 : ಪಂಜಾಬ್​ ತಂಡಕ್ಕೆ ವಿರೋಚಿತ 9 ರನ್ ಸೋಲು, ಜಯದ ಹಳಿಗೆ ಮರಳಿದ ಮುಂಬೈ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ4 hours ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ2 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ3 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20244 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20245 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ5 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ6 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ7 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ1 week ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

ಟ್ರೆಂಡಿಂಗ್‌