ENGvsPAK | ಪಾಕಿಸ್ತಾನವನ್ನು ಹಣಿದ ಖುಷಿಯ ನಡುವೆ ಆಂಗ್ಲರ ಪಡೆಗೆ ಹಿನ್ನಡೆ; ಪ್ರಮುಖ ಆಲ್‌ರೌಂಡರ್‌ಗೆ ಗಾಯ - Vistara News

ಕ್ರಿಕೆಟ್

ENGvsPAK | ಪಾಕಿಸ್ತಾನವನ್ನು ಹಣಿದ ಖುಷಿಯ ನಡುವೆ ಆಂಗ್ಲರ ಪಡೆಗೆ ಹಿನ್ನಡೆ; ಪ್ರಮುಖ ಆಲ್‌ರೌಂಡರ್‌ಗೆ ಗಾಯ

ಇಂಗ್ಲೆಂಡ್‌ ತಂಡದ ಆಲ್‌ರೌಂಡರ್‌ ಲಿಯಾಮ್‌ ಲಿವಿಂಗ್‌ಸ್ಟನ್‌ ಗಾಯಗೊಂಡಿದ್ದು ಮುಂದಿನ ಎರಡು ಟೆಸ್ಟ್ ಪಂದ್ಯಗಳಿಗೆ (ENGvsPAK) ಅಲಭ್ಯರಾಗಿದ್ದಾರೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಾವಲ್ಪಿಂಡಿ : ಆತಿಥೇಯ ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್‌ ಸರಣಿಯ ((ENGvsPAK)) ಮೊದಲ ಪಂದ್ಯದಲ್ಲಿ ೭೪ ರನ್‌ಗಳ ವಿಜಯ ಸಾಧಿಸಿರುವ ಪ್ರವಾಸಿ ಇಂಗ್ಲೆಂಡ್‌ ತಂಡ ಖುಷಿಯಲ್ಲಿರುವ ಸಂದರ್ಭದಲ್ಲೇ ಗಾಯದ ಆತಂಕ ಎದುರಾಗಿದೆ. ತಂಡದ ಪ್ರಮುಖ ಆಲ್‌ರೌಂಡರ್‌ ಲಿಯಾಮ್‌ ಲಿವಿಂಗ್‌ಸ್ಟನ್‌ ಅವರು ಮುಂದಿನೆರಡು ಪಂದ್ಯಗಳಿಗೆ ಲಭ್ಯರಿಲ್ಲ ಎಂಬುದಾಗಿ ಇಂಗ್ಲೆಂಡ್‌ ತಂಡ ಮೂಲಗಳು ತಿಳಿಸಿವೆ.

ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ ೬೫೭ ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಅಂತೆಯೇ ಪಂದ್ಯದ ಎರಡನೇ ದಿನ ಪಾಕಿಸ್ತಾನ ತಂಡ ಬ್ಯಾಟಿಂಗ್ ಮಾಡುವಾಗ ಬೌಂಡರಿ ಲೈನ್‌ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಲಿಯಾಮ್‌ ಲಿವಿಂಗ್‌ಸ್ಟನ್‌ ಬಿದ್ದು ಮಂಡಿಗೆ ಗಾಯ ಮಾಡಿಕೊಂಡಿದ್ದರು. ತಕ್ಷಣ ಅವರು ಮೈದಾನ ತೊರೆದಿದ್ದರು. ಆದಾಗ್ಯೂ ಎರಡನೇ ಇನಿಂಗ್ಸ್‌ನಲ್ಲಿ ಅವರು ಬ್ಯಾಟ್‌ ಮಾಡಲು ಬಂದಿದ್ದರೂ ವಿಕೆಟ್‌ಗಳ ನಡುವಿನ ಓಡಾಟ ಮಾಡಲು ಅಡಚಣೆ ಎದುರಿಸಿದ್ದರು. ಬಳಿಕ ಅವರು ಕೊನೇ ದಿನವೂ ಫೀಲ್ಡಿಂಗ್ ಮಾಡಿರಲಿಲ್ಲ.

ಲಿವಿಂಗ್‌ಸ್ಟನ್‌ ಅವರಿಗೆ ಭಾನುವಾರ ಸ್ಕ್ಯಾನಿಂಗ್ ಮಾಡಲಾಗಿದ್ದು, ಮೂಳೆಗೂ ಗಾಯವಾಗಿರುವುದು ಗೊತ್ತಾಗಿದೆ. ಹೀಗಾಗಿ ಮುಂದಿನೆರಡು ಪಂದ್ಯಕ್ಕೆ ಅವರು ಇಲ್ಲ ಎಂಬುದಾಗಿ ತಂಡದ ಮೂಲಗಳು ಪ್ರಕಟಿಸಿವೆ. ದುರದೃಷ್ಟವೆಂದರೆ ಲಿಯಾಮ್‌ಗೆ ಇದು ಪದಾರ್ಪಣೆಯ ಟೆಸ್ಟ್‌ ಪಂದ್ಯ. ಆ ಪಂದ್ಯದ ಎರಡನೇ ದಿನವೇ ಅವರು ಗಾಯಗೊಂಡಿದ್ದಾರೆ. ಲಿಯಾಮ್‌ ಅವರ ಬದಲಿಗೆ ಯಾರು ಆಡಲಿದ್ದಾರೆ ಎಂಬುದನ್ನು ಇಂಗ್ಲೆಂಡ್‌ ತಂಡ ಇನ್ನೂ ಖಚಿತಪಡಿಸಿಲ್ಲ. ಆದರೆ, ಅವರ ಅಲಭ್ಯತೆಯಿಂದ ತಂಡಕ್ಕೆ ನಷ್ಟವಾಗಲಿದೆ. ಯಾಕೆಂದರೆ, ಸ್ಪಿನ್‌ ಬೌಲಿಂಗ್‌ ಮೂಲಕವೂ ಅವರು ತಂಡಕ್ಕೆ ನೆರವಾಗಬೇಕಾಗಿತ್ತು.

ಟೆಸ್ಟ್‌ ಸರಣಿಯ ಎರಡನೇ ಪಂದ್ಯ ಡಿಸೆಂಬರ್‌ ೯ರಂದು ಮುಲ್ತಾನ್‌ನಲ್ಲಿ ನಡೆಯಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರಿಕೆಟ್

Shubman Gill: ಶತಕದ ಐಪಿಎಲ್​ ಪಂದ್ಯವನ್ನಾಡಲು ಸಜ್ಜಾದ ಗಿಲ್​; ಸಾಧನೆ ಹೇಗಿದೆ?

shubman gill: 2018ರಲ್ಲಿ ಕೆಕೆಆರ್ ತಂಡದ ಪರ ಕಣಕ್ಕಿಳಿಯುವ ಮೂಲಕ ಐಪಿಎಲ್​ ಜರ್ನಿ ಆರಂಭಿಸಿದ ಶುಭಮನ್​ ಗಿಲ್​ ಇದುವರೆಗೆ 99 ಪಂದ್ಯಗಳನ್ನಾಡಿ ಮೂರು ಶತಕ, 20 ಅರ್ಧಶತಕ ಮತ್ತು ಒಂದು ಬಾರಿ ಆರೆಂಜ್​ ಕ್ಯಾಪ್​ ಗೆದ್ದಿದ್ದಾರೆ. ಜತೆಗೆ ಟ್ರೋಫಿ ಗೆದ್ದ ತಂಡದ ಸದ್ಯಸನೂ ಆಗಿದ್ದಾರೆ.

VISTARANEWS.COM


on

shubman gill
Koo

ನವದೆಹಲಿ: ಇಂದು ನಡೆಯುವ ಐಪಿಎಲ್(IPL 2024) ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್(Delhi Capitals)​ ಮತ್ತು ಗುಜರಾತ್​ ಟೈಟಾನ್ಸ್(Gujarat Titans)​ ಕಣಕ್ಕಿಳಿಯಲಿದೆ. ಈ ಪಂದ್ಯ ಟೀಮ್​ ಇಂಡಿಯಾದ ಯುವ ಆಟಗಾರ, ಗುಜರಾತ್​ ತಂಡದ ನಾಯಕ ಶುಭಮನ್​ ಗಿಲ್(Shubman Gill)​ ಅವರಿಗೆ 100ನೇ ಐಪಿಎಲ್​ ಪಂದ್ಯವಾಗಿದೆ. ಹೀಗಾಗಿ ಅವರ ಮೇಲೆ ಇಂದಿನ ಪಂದ್ಯದಲ್ಲಿ ಅಭಿಮಾನಿಗಳು ಭಾರೀ ನಿರೀಕ್ಷೆ ಇರಿಸಿದ್ದಾರೆ.

2018ರಲ್ಲಿ ಕೆಕೆಆರ್ ತಂಡದ ಪರ ಕಣಕ್ಕಿಳಿಯುವ ಮೂಲಕ ಐಪಿಎಲ್​ ಜರ್ನಿ ಆರಂಭಿಸಿದ ಶುಭಮನ್​ ಗಿಲ್​ ಇದುವರೆಗೆ 99 ಪಂದ್ಯಗಳನ್ನಾಡಿ ಮೂರು ಶತಕ, 20 ಅರ್ಧಶತಕ ಮತ್ತು ಒಂದು ಬಾರಿ ಆರೆಂಜ್​ ಕ್ಯಾಪ್​ ಗೆದ್ದಿದ್ದಾರೆ. ಜತೆಗೆ ಟ್ರೋಫಿ ಗೆದ್ದ ತಂಡದ ಸದ್ಯಸನೂ ಆಗಿದ್ದಾರೆ. ಇದೀಗ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. 3088 ರನ್​ ಕೂಡ ಬಾರಿಸಿದ್ದಾರೆ. ಸದ್ಯ ಗುಜರಾತ್‌ ಎಂಟರಲ್ಲಿ 4 ಪಂದ್ಯ ಗೆದ್ದು 6ನೇ ಸ್ಥಾನದಲ್ಲಿದೆ. ಇಂದು ಗೆದ್ದರೆ 10 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಬಹುದು.

ಗುಜರಾತ್​ಗೆ ಸೇಡಿನ ಪಂದ್ಯ


ಈ ಪಂದ್ಯ ಗುಜರಾತ್​ಗೆ ಸೇಡಿನ ಪಂದ್ಯವಾಗಿದೆ. ಡೆಲ್ಲಿ ವಿರುದ್ಧದ ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತಿತ್ತು. ಅದು ಕೂಡ ತವರಿನ ಅಂಗಳದಲ್ಲಿ ಕೇವಲ 89 ರನ್​ಗೆ ಆಲೌಟ್​ ಆಗುವ ಮೂಲಕ ತವರಿನ ಪ್ರೇಕ್ಷಕರ ಮುಂದೆಯೇ ತೀವ್ರ ಮುಜುಗರಕ್ಕೆ ಒಳಗಾಗಿತ್ತು. ಇದೀಗ ಈ ಸೋಲಿಗೆ ಡೆಲ್ಲಿಗೆ ತವರಿನಲ್ಲೇ ಸೋಲುಣಿಸಿ ಸೇಡು ತೀರಿಸುವ ತವಕದಲ್ಲಿದೆ. ಗುಜರಾತ್‌ ಬ್ಯಾಟಿಂಗ್‌ ಸರದಿಯಲ್ಲಿ ಸಾಯಿ ಸುದರ್ಶನ್‌, ಡೇವಿಡ್‌ ಮಿಲ್ಲರ್‌, ಒಮರ್‌ಜಾಯ್‌, ತೆವಾಟಿಯ ಇನ್ನಿಂಗ್ಸ್‌ ಬೆಳೆಸುವ ಜತೆಗೆ ಬಿರುಸಿನ ಆಟ ಆಡಬೇಕಿದೆ.

ಡೆಲ್ಲಿ ಬ್ಯಾಟಿಂಗ್‌ ಸರದಿಯ ಸಮಸ್ಯೆಯೆಂದರೆ ಓಪನಿಂಗ್‌ ವೈಫ‌ಲ್ಯ. ವಾರ್ನರ್‌-ಪೃಥ್ವಿ ಶಾ ಬಡಬಡಣೆ ಒಂದೆರಡು ಬೌಂಡರಿ ಬಾರಿಸಿ ವಿಕೆಟ್​ ಕಳೆದುಕೊಳ್ಳುತ್ತಿದ್ದಾರೆ. ಹೆಚ್ಚು ಹೊತ್ತು ಕ್ರೀಸ್‌ ಆಕ್ರಮಿಸಿಕೊಳ್ಳುವಲ್ಲಿ ವಿಫ‌ಲರಾಗುತ್ತಿದ್ದಾರೆ. ಹೀಗಾಗಿ ಪವರ್‌ ಪ್ಲೇಯಲ್ಲಿ ರನ್‌ ಹರಿದು ಬರುತ್ತಿಲ್ಲ. ಬದಲಿ ಆಟಗಾರನಾಗಿ ತಂಡ ಸೇರಿದ ಆಸ್ಟ್ರೇಲಿಯಾದ ಯುವ ಬ್ಯಾಟರ್​ ಫ್ರೇಜರ್​- ಮೆಕ್‌ಗರ್ಕ್‌, ಇಂಪ್ಯಾಕ್ಟ್​ ಆಟಗಾರ ಅಭಿಷೇಕ್​ ಪೊರೆಲ್‌ ಮತ್ತು ನಾಯಕ ಪಂತ್‌ ಹೊರತುಪಡಿಸಿ ಉಳಿದವರೆಲ್ಲ ರನ್‌ ಬರಗಾಲದಲ್ಲಿದ್ದಾರೆ. ಬೌಲಿಂಗ್​ ಕೂಡ ಅಷ್ಟಕ್ಕಷ್ಟೇ. ಖಲೀಲ್​ ಅಹ್ಮದ್​ ದುಬಾರಿಯಾಗುತ್ತಿದ್ದಾರೆ.

ಇದನ್ನೂ ಓದಿ IPL 2024: 13 ವರ್ಷದ ಐಪಿಎಲ್​ ದಾಖಲೆ ಮುರಿದ ಮಾರ್ಕಸ್​ ಸ್ಟೋಯಿನಿಸ್

ಸಂಭಾವ್ಯ ತಂಡಗಳು


ಗುಜರಾತ್​: ವೃದ್ಧಿಮಾನ್ ಸಹಾ, ಶುಭಮನ್ ಗಿಲ್ (ನಾಯಕ), ಡೇವಿಡ್ ಮಿಲ್ಲರ್, ಅಜ್ಮತುಲ್ಲಾ ಒಮರ್ಜಾಯ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ನೂರ್ ಅಹ್ಮದ್, ಸಂದೀಪ್ ವಾರಿಯರ್, ಮೋಹಿತ್ ಶರ್ಮಾ.

ಡೆಲ್ಲಿ ಕ್ಯಾಪಿಟಲ್ಸ್​: ಡೇವಿಡ್ ವಾರ್ನರ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಅಭಿಷೇಕ್ ಪೊರೆಲ್, ರಿಷಭ್ ಪಂತ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಅಕ್ಷರ್ ಪಟೇಲ್, ಲಲಿತ್ ಯಾದವ್, ಕುಲದೀಪ್ ಯಾದವ್, ಅನ್ರಿಚ್ ನಾರ್ಟ್ಜೆ, ಖಲೀಲ್ ಅಹ್ಮದ್, ಮುಖೇಶ್ ಕುಮಾರ್.

Continue Reading

ಕ್ರಿಕೆಟ್

Sachin Birthday: ಕ್ರಿಕೆಟ್ ದೇವರ ಕುರಿತ 30 ಕುತೂಹಲಕರ ಸಂಗತಿಗಳಿವು

Sachin Birthday: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಬಗ್ಗೆ ಸಾಕಷ್ಟು ವಿಚಾರಗಳು ನಮಗೆ ತಿಳಿದಿದೆ. ಆದರೂ ಮತ್ತಷ್ಟು ತಿಳಿಯಬೇಕೆನ್ನುವ ಆಸೆಯಂತೂ ಎಲ್ಲರಿಗೂ ಇದೆ. ಇಂದು 51ನೇ ಜನ್ಮ ದಿನವನ್ನು ಆಚರಿಸಿಕೊಳ್ಳುತ್ತಿರುವ ಸಚಿನ್ ಅವರ ಬಗೆಗಿನ 30 ಪ್ರಮುಖ ಸಂಗತಿಗಳು ಇಂತಿವೆ.

VISTARANEWS.COM


on

By

Sachin Tendulkar
Koo

ಕ್ರಿಕೆಟ್ (Cricket) ದೇವರು ಸಚಿನ್ ತೆಂಡೂಲ್ಕರ್ (Sachin Birthday) ಅವರಿಗೆ ಇಂದು 51 ಜನ್ಮ ದಿನದ (birthday) ಸಂಭ್ರಮ. ಭಾರತದ (india) ಶ್ರೇಷ್ಠ ಬ್ಯಾಟ್ಸ್ ಮ್ಯಾನ್ ಸಚಿನ್ ಅವರ ಜನ್ಮ ದಿನವನ್ನು ಇಡೀ ಜಗತ್ತೇ ಇಂದು ಆಚರಿಸುತ್ತಿದೆ. ಜೀವನದ ಅತ್ಯಂತ ಕಡಿಮೆ ಸಮಯದಲ್ಲಿ ಹೆಚ್ಚು ಸಾಧನೆ ಮಾಡಿದ ತೆಂಡೂಲ್ಕರ್ ಅವರು ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ.

ಭಾರತದ ಪ್ರತಿಷ್ಠಿತ ಭಾರತೀಯ ಕ್ರಿಕೆಟಿಗರಲ್ಲಿ ಒಬ್ಬರಾದ ಸಚಿನ್ ತೆಂಡೂಲ್ಕರ್‌ ಏಪ್ರಿಲ್ 24ರಂದು 51ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಅವರ ಜೀವನದ 30 ಆಕರ್ಷಕ ವಿಷಯಗಳನ್ನು ತಿಳಿಯೋಣ.

1. ಸಚಿನ್ ತೆಂಡೂಲ್ಕರ್ ರಣಜಿ ತಂಡಕ್ಕೆ ಸೇರಿದಾಗ ಅವರಿಗೆ 14 ವರ್ಷ. ಆಗ ರಣಜಿ ತಂಡಕ್ಕೆ ಸೇರಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯೂ ಅವರದಾಗಿತ್ತು.

2. ಸಚಿನ್ ತೆಂಡೂಲ್ಕರ್ 1987ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಬಾಲ್‌ಬಾಯ್ ಆಗಿದ್ದರು.

3. ಸಚಿನ್ ತೆಂಡೂಲ್ಕರ್ ಅವರು ಕಾಲಿಗೆ ಪ್ಯಾಡ್ ಕಟ್ಟುವಾಗ ಮೊದಲು ಎಡ, ಬಳಿಕ ಬಲ ಬದಿಯ ಪ್ಯಾಡ್ ಅನ್ನು ಹಾಕುತ್ತಾರೆ. ಇದರಿಂದ ಉತ್ತಮವಾಗಿ ಆಡಬಹುದು ಎನ್ನುವ ನಂಬಿಕೆ ಅವರದಾಗಿತ್ತು.

4. ನಿದ್ದೆಯಲ್ಲಿ ಮಾತನಾಡುವುದು, ನಡೆಯುವುದು ಸಚಿನ್ ತೆಂಡೂಲ್ಕರ್ ಅವರ ಅಭ್ಯಾಸವಾಗಿತ್ತು. ಸಂದೀಪ್ ಪಾಟೀಲ್ ಮತ್ತು ಕ್ಲೇಟನ್ ಮುರ್ಜೆಲ್ಲೊ ಅವರ ಪುಸ್ತಕ ಕ್ಯಾಟ್ ಟೋಲ್ಡ್: ಹ್ಯೂಮರಸ್ ಕ್ರಿಕೆಟಿಂಗ್ ಅನೆಕ್ಡೋಟ್ಸ್‌ ನಲ್ಲಿ ಇದನ್ನು ಹೇಳಲಾಗಿದೆ.

5. ಪ್ರಸಿದ್ಧ ಆಸ್ಟ್ರೇಲಿಯಾದ ವೇಗದ ಬೌಲರ್ ಡೆನ್ನಿಸ್ ಲಿಲ್ಲಿ 1987ರಲ್ಲಿ ಚೆನ್ನೈನ ಎಂಆರ್ ಎಫ್ ಪೇಸ್ ಅಕಾಡೆಮಿಯಲ್ಲಿ ಭಾಗಿಯಾಗುವ ಸಚಿನ್ ತಂಡೂಲ್ಕರ್ ಅವರ ಆಸೆಯನ್ನು ತಿರಸ್ಕರಿಸಿದ್ದರು!


6. ಸಚಿನ್ ತೆಂಡೂಲ್ಕರ್ ಅವರು ಬಾಂಬೆ ರಣಜಿ ತಂಡದೊಂದಿಗೆ ಪ್ರವಾಸದಲ್ಲಿದ್ದಾಗ ಓದಲು ತಮ್ಮ ಪಠ್ಯಪುಸ್ತಕಗಳನ್ನು ತಂದಿದ್ದರು!

7. ಸೋತ ತಂಡದ ಆಟಗಾರನಾಗಿ ಸಚಿನ್ ತೆಂಡೂಲ್ಕರ್ ಆರು ಪಂದ್ಯ ಶ್ರೇಷ್ಠ ಪ್ರಶಸ್ತಿಗಳನ್ನು ಪಡೆದಿರುವುದು ದಾಖಲೆಯಾಗಿದೆ.

8. ಯುನೈಟೆಡ್ ಕಿಂಗ್‌ಡಮ್‌ನಲ್ಲಿ 1990ರಲ್ಲಿ ಸಚಿನ್ ತಮ್ಮ ಮೊದಲ ಟೆಸ್ಟ್ ಶತಕವನ್ನು ಗಳಿಸಿದಾಗ ಅವರ ವಯಸ್ಸು 18. ಆಗ ಅವರಿಗೆ ಷಾಂಪೇನ್ ಬಾಟಲಿಯನ್ನು ಪಂದ್ಯಶ್ರೇಷ್ಠ ಟ್ರೋಫಿಯಾಗಿ ನೀಡಲಾಯಿತು. ಕಾನೂನುಬದ್ಧವಾಗಿ ಕುಡಿಯಬಹುದಾದ ವಯಸ್ಸಿನಲ್ಲಿದ್ದ ಸಚಿನ್ ಗೆ ಅದನ್ನು ತೆರೆಯಲು ಬರಲಿಲ್ಲ. 1998ರಲ್ಲಿ ಅವರ ಮಗಳು ಸಾರಾ ತಮ್ಮ ಮೊದಲ ಹುಟ್ಟುಹಬ್ಬದಂದು ಅದನ್ನು ಅಂತಿಮವಾಗಿ ತೆರೆದರು!


9. 1988ರಲ್ಲಿ ಇಂಟರ್-ಸ್ಕೂಲ್ ಪಂದ್ಯದ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಭಾರತದ ಮಾಜಿ ಸ್ಟಾರ್ ಆಟಗಾರ ವಿನೋದ್ ಕಾಂಬ್ಳಿ 664 ರನ್‌ಗಳ ಜೊತೆಯಾಟದ ಮೂಲಕ ದಾಖಲೆಯನ್ನು ಬರೆದಿದ್ದರು.

10. 1992ರಲ್ಲಿ ಯಾರ್ಕ್‌ಷೈರ್‌ಗೆ ಮೊದಲ ವಿದೇಶಿ ಕ್ರಿಕೆಟಿಗರಾಗಿದ್ದ ಸಚಿನ್ ತೆಂಡೂಲ್ಕರ್ 19ನೇ ವಯಸ್ಸಿಗೆ ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್ ಆಡಿದ ಅತ್ಯಂತ ಕಿರಿಯ ಭಾರತೀಯರು.

11. ಟಿವಿ ವಿಮರ್ಶೆಯ ಅನಂತರ ಮೂರನೇ ಅಂಪೈರ್‌ನಿಂದ ವಜಾಗೊಂಡ ಮೊದಲ ಆಟಗಾರ ಸಚಿನ್ ತೆಂಡೂಲ್ಕರ್. ಇದು ಭಾರತದ 1992-1993 ರ ದಕ್ಷಿಣ ಆಫ್ರಿಕಾ ಪ್ರವಾಸದ ಸಮಯದಲ್ಲಿ ನಡೆದಿತ್ತು.

12. ಎಲ್ಲಾ ಮೂರು ಪ್ರಮುಖ ದೇಶೀಯ ಪ್ರಥಮ ದರ್ಜೆ ಪಂದ್ಯಾವಳಿಗಳಾದ ರಣಜಿ ಟ್ರೋಫಿ, ದುಲೀಪ್ ಟ್ರೋಫಿ ಮತ್ತು ಇರಾನಿ ಕಪ್ ನಲ್ಲಿ ಸಚಿನ್ ತೆಂಡೂಲ್ಕರ್ ಅವರು ತಮ್ಮ ಚೊಚ್ಚಲ ಪಂದ್ಯದಲ್ಲೇ ಶತಕಗಳನ್ನು ಗಳಿಸಿದ್ದರು.

13. ಭಾರತದ ಐಕಾನ್ ಸುನಿಲ್ ಗವಾಸ್ಕರ್ ಅವರು ಪಂದ್ಯದುದ್ದಕ್ಕೂ ಧರಿಸಿದ್ದ ಬ್ಯಾಟಿಂಗ್ ಪ್ಯಾಡ್‌ಗಳನ್ನು ಕರಾಚಿಯಲ್ಲಿ ಚೊಚ್ಚಲ ಟೆಸ್ಟ್ ಪಂದ್ಯಕ್ಕಾಗಿ ಸಚಿನ್ ತೆಂಡೂಲ್ಕರ್ ಅವರಿಗೆ ನೀಡಲಾಯಿತು.

14. ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಸಚಿನ್ ತೆಂಡೂಲ್ಕರ್ 90ರ ದಶಕದಲ್ಲಿ 23 ಬಾರಿ ಔಟಾದರು. ಅವರು ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ 200 ವಿಕೆಟ್ ಗಳನ್ನು ಗಳಿಸಿದ್ದಾರೆ. ಇದರಲ್ಲಿ ಟೆಸ್ಟ್ ನಲ್ಲಿ 45, ಓಡಿಐ ಗಳಲ್ಲಿ 154 ಮತ್ತು ಟಿ20 ಗಳಲ್ಲಿ ಒಂದು.

15. ಸಚಿನ್ ತೆಂಡೂಲ್ಕರ್ ಅವರು 2010ರ ಸೆಪ್ಟೆಂಬರ್ 3ರಂದು ಭಾರತೀಯ ವಾಯುಪಡೆಯಿಂದ ಗ್ರೂಪ್ ಕ್ಯಾಪ್ಟನ್ ಗೌರವ ಶ್ರೇಣಿಯನ್ನು ಪಡೆದ ಮೊದಲ ಆಟಗಾರರಾಗಿದ್ದಾರೆ.

16. 2012ರ ಜೂನ್ 4ರಂದು ಸಚಿನ್ ತೆಂಡೂಲ್ಕರ್ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ಅವರು ಅಧಿಕೃತವಾಗಿ ಸಂಸತ್ತಿನ ಸದಸ್ಯರಾದರು.

17. 1975ರಿಂದ 1996ರವರೆಗೆ ಪ್ರತಿ ವಿಶ್ವಕಪ್‌ನಲ್ಲಿ ಭಾಗವಹಿಸಿದ್ದ ಸಚಿನ್ ತೆಂಡೂಲ್ಕರ್ ಮತ್ತು ಪಾಕಿಸ್ತಾನದ ಜಾವೇದ್ ಮಿಯಾಂದಾದ್ 1992 ಮತ್ತು 2011 ರ ನಡುವೆ 50 ಓವರ್‌ಗಳ ವಿಶ್ವಕಪ್‌ನಲ್ಲಿ ಆರು ಬಾರಿ ಕಾಣಿಸಿಕೊಂಡಿದ್ದಾರೆ.

18. ಕೊಚ್ಚಿಯಲ್ಲಿ ಎರಡು ಬಾರಿ ಸಚಿನ್ ತೆಂಡೂಲ್ಕರ್ ಓಡಿಐನಲ್ಲಿ ತಲಾ ಐದು ವಿಕೆಟ್‌ಗಳನ್ನು ಪಡೆದಿದ್ದಾರೆ. ಅದು 1998ರಲ್ಲಿ ಆಸ್ಟ್ರೇಲಿಯಾ ವಿರುದ್ಧ 5/32 ಮತ್ತು 2005ರಲ್ಲಿ ಪಾಕಿಸ್ತಾನದ ವಿರುದ್ಧ 5/50.

19. ಸಚಿನ್ ತೆಂಡೂಲ್ಕರ್ ಅವರ 51 ಟೆಸ್ಟ್ ಶತಕಗಳಲ್ಲಿ 20 ಜಯ, 11 ಸೋಲು. ಉಳಿದ ಇಪ್ಪತ್ತು ಡ್ರಾ ಪರೀಕ್ಷೆಗೆ ಬಂದಿತ್ತು.


20. ಸಚಿನ್ ತೆಂಡೂಲ್ಕರ್ ಜಿಂಬಾಬ್ವೆಯಲ್ಲಿ ಟೆಸ್ಟ್ ಶತಕ ದಾಖಲಿಸಿಲ್ಲ.

21. ಸಚಿನ್ ತೆಂಡೂಲ್ಕರ್ ಅವರ ಓಡಿಐ ಶತಕಗಳಲ್ಲಿ 33 ಗೆಲುವಿಗೆ ಕಾರಣವಾಗಿವೆ. 14 ಸೋಲು, ಒಂದು ಟೈನಲ್ಲಿ ಕೊನೆಗೊಂಡಿದ್ದು, ಒಂದು ಪಂದ್ಯ ಡ್ರಾ ಆಗಿದೆ.

22. ಓಡಿಐಗಳಲ್ಲಿ ಮೂರು ಬಾರಿ ಸಚಿನ್ ತೆಂಡೂಲ್ಕರ್ ಅವರನ್ನು 99 ರನ್‌ಗಳಿಗೆ ಔಟ್ ಆಗಿದ್ದು ಇವೆಲ್ಲವೂ 2007ರಲ್ಲಿ ನಡೆದಿತ್ತು.

23. ವಿಶ್ವಕಪ್ ಕ್ರಿಕೆಟ್‌ನಲ್ಲಿ 2,000 ಕ್ಕಿಂತ ಹೆಚ್ಚು ರನ್ ಮಾಡಿದ ಏಕೈಕ ಬ್ಯಾಟರ್ ಸಚಿನ್ ತೆಂಡೂಲ್ಕರ್. 45 ಪಂದ್ಯಗಳಲ್ಲಿ ಅವರು 2,278 ರನ್ ಗಳಿಸಿದ್ದಾರೆ.

24. 1995ರಲ್ಲಿ ವೇಷ ಹಾಕಿಕೊಂಡು ರೋಜಾ ಚಲನಚಿತ್ರವನ್ನು ನೋಡಲು ಹೋದರು. ಆದರೆ ಥಿಯೇಟರ್ನಲ್ಲಿ ಪ್ರೇಕ್ಷಕರು ಅವರನ್ನು ಗುರುತಿಸಿದ್ದರಿಂದ ಅವರು ತೊಂದರೆ ಅನುಭವಿಸಬೇಕಾಯಿತು.

25. ಲೆಜೆಂಡರಿ ಟೆನಿಸ್ ಆಟಗಾರ ಜಾನ್ ಮೆಕೆನ್ರೋ ಅವರ ಶ್ರೇಷ್ಠ ಅನುಯಾಯಿಯಾದ ತೆಂಡೂಲ್ಕರ್ ಅವರು ತಮ್ಮ ಕೂದಲನ್ನು ಬೆಳೆಸಿ ಅವರಂತೆ ಕಾಣುವ ಪ್ರಯತ್ನ ಮಾಡಿದ್ದರು.


26. ಸೌರವ್ ಗಂಗೂಲಿ ಅವರು ಸಚಿನ್ ಅವರನ್ನು “ಬಾಬು ಮೋಶಾಯ್” ಎಂದು ಉಲ್ಲೇಖಿಸುತ್ತಾರೆ. ಆದರೆ ಗಂಗೂಲಿ ಅವರನ್ನು “ಛೋಟಾ ಬಾಬು” ಎಂದು ಸಚಿನ್ ಹೇಳುತ್ತಾರೆ.

27. ತೆಂಡೂಲ್ಕರ್ ಅವರನ್ನು ಮೆಚ್ಚಿದ ಪ್ರಸಿದ್ಧ ಕ್ರೀಡಾ ವ್ಯಕ್ತಿಗಳಲ್ಲಿ ಅರ್ಜೆಂಟೀನಾದ ಫುಟ್‌ಬಾಲ್ ಆಟಗಾರ ಡಿಯಾಗೋ ಮರಡೋನಾ, ಟೆನಿಸ್ ಆಟಗಾರರಾದ ಪೀಟ್ ಸಾಂಪ್ರಾಸ್ ಮತ್ತು ಬೋರಿಸ್ ಬೆಕರ್ ಮತ್ತು ಅನೇಕರು ಸೇರಿದ್ದಾರೆ.

28. ಒಂಬತ್ತು ಓಡಿಐ ಶತಕಗಳೊಂದಿಗೆ ಸಚಿನ್ 1998ರ ಒಂದು ವರ್ಷದಲ್ಲಿ ಅತಿ ಹೆಚ್ಚು ಶತಕಗಳ ದಾಖಲೆಯನ್ನು ಉಳಿಸಿಕೊಂಡಿದ್ದಾರೆ.

29. ಸಚಿನ್‌ ಅವರು ಪ್ರಸಿದ್ಧ ಸಾಹಿತ್ಯ ಸಹವಾಸ್ ನ ಬಾಂದ್ರಾ ಪೂರ್ವ ಆವರಣದ ಹಿಂದೆ ಹರಿಯುವ ತೊರೆಯಲ್ಲಿ ಗೊದಮೊಟ್ಟೆ ಮತ್ತು ಗಪ್ಪಿ ಮೀನುಗಾರಿಕೆಗೆ ಹೋಗುತ್ತಿದ್ದರು.

30. ತೆಂಡೂಲ್ಕರ್ ಅವರು ತಮ್ಮ ಫೆರಾರಿಯಲ್ಲಿ ಪತ್ನಿ ಅಂಜಲಿಯನ್ನು ಕರೆದುಕೊಂಡು ಹೋಗುವುದಿಲ್ಲ.

Continue Reading

ಕ್ರಿಕೆಟ್

IPL 2024: 13 ವರ್ಷದ ಐಪಿಎಲ್​ ದಾಖಲೆ ಮುರಿದ ಮಾರ್ಕಸ್​ ಸ್ಟೋಯಿನಿಸ್

IPL 2024: ಸ್ಟೋಯಿನಿಸ್​ ಅವರು ಅಜೇಯ 124 ರನ್​ ಬಾರಿಸುವ ಮೂಲಕ ಚೇಸಿಂಗ್​ ವೇಳೆ ಐಪಿಎಲ್​ನಲ್ಲಿ ಅ್ಯಧಿಕ ವೈಯಕ್ತಿಕ ರನ್​ ಗಳಿಸಿದ ಮೊದಲ ಆಟಗಾರ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆದರು. ಇದಕ್ಕೂ ಮುನ್ನ ಈ ದಾಖಲೆ ಪಾಲ್​ ವಾಲ್ತಾಟಿ ಹೆಸರಿನಲ್ಲಿತ್ತು. ಕಾಕತಾಳಿಯವೆಂದರೆ ವಾಲ್ತಾಟಿ ಕೂಡ ಚೆನ್ನೈ ವಿರುದ್ಧವೇ ಈ ದಾಖಲೆ ಬರೆದಿದ್ದರು.

VISTARANEWS.COM


on

Marcus Stoinis
Koo

ಚೆನ್ನೈ: ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್(Chennai Super Kings)​ ವಿರುದ್ಧದ ಮಂಗಳವಾರದ ಐಪಿಎಲ್(IPL 2024)​ ಪಂದ್ಯದಲ್ಲಿ ವಿಸ್ಫೋಟಕ ಬ್ಯಾಟಿಂಗ್​ ನಡೆಸಿ ಅಜೇಯ 124 ರನ್​ ಗಳಿಸಿ ಶತಕ ಬಾರಿಸಿದ ಲಕ್ನೋ ಸೂಪರ್​ ಜೈಂಟ್ಸ್(Lucknow Super Giants)​ ತಂಡದ, ಆಸ್ಟ್ರೇಲಿಯಾ ಆಟಗಾರ ಮಾರ್ಕಸ್​ ಸ್ಟೋಯಿನಿಸ್(Marcus Stoinis)​ ಐಪಿಎಲ್​ನಲ್ಲಿ ನೂತನ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಈ ಮೂಲಕ ಮಾಜಿ ಆಟಗಾರ ಪಾಲ್​ ವಾಲ್ತಾಟಿ ದಾಖಲೆಯನ್ನು ಮುರಿದಿದ್ದಾರೆ.

ಸ್ಟೋಯಿನಿಸ್​ ಅವರು ಅಜೇಯ 124 ರನ್​ ಬಾರಿಸುವ ಮೂಲಕ ಚೇಸಿಂಗ್​ ವೇಳೆ ಐಪಿಎಲ್​ನಲ್ಲಿ ಅ್ಯಧಿಕ ವೈಯಕ್ತಿಕ ರನ್​ ಗಳಿಸಿದ ಮೊದಲ ಆಟಗಾರ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆದರು. ಇದಕ್ಕೂ ಮುನ್ನ ಈ ದಾಖಲೆ ಪಾಲ್​ ವಾಲ್ತಾಟಿ ಹೆಸರಿನಲ್ಲಿತ್ತು. ಕಾಕತಾಳಿಯವೆಂದರೆ ವಾಲ್ತಾಟಿ ಕೂಡ ಚೆನ್ನೈ ವಿರುದ್ಧವೇ ಈ ದಾಖಲೆ ಬರೆದಿದ್ದರು. 2011ರಲ್ಲಿ ಪಂಜಾಬ್​ ಪರ ಆಡಿದ ವಾಲ್ತಾಟಿ ಅಜೇಯ 120 ರನ್​ ಬಾರಿಸಿದ್ದರು. ಇದೀಗ 13 ವರ್ಷಗಳ ಬಳಿಕ ಈ ದಾಖಲೆಯನ್ನು ಸ್ಟೋಯಿಸಿಸ್​ ಮುರಿದಿದ್ದಾರೆ.

ಇದನ್ನೂ ಓದಿ IPL 2024 Points Table: ಚೆನ್ನೈಗೆ ಹೀನಾಯವಾಗಿ ಸೋಲುಣಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ ಲಕ್ನೋ

ಚೇಸಿಂಗ್​ ವೇಳೆ ಅತ್ಯಧಿಕ ರನ್​ ಗಳಿಸಿದ ಆಟಗಾರರು


ಮಾರ್ಕಸ್​ ಸ್ಟೋಯಿನಿಸ್​-124* ರನ್​, ಚೆನ್ನೈ ವಿರುದ್ಧ (2024)

ಪಾಲ್​ ವಾಲ್ತಾಟಿ-120* ರನ್​, ಚೆನ್ನೈ ವಿರುದ್ಧ (2011)

ವೀರೇಂದ್ರ ಸೆಹವಾಗ್​-119 ರನ್​, ಡೆಕ್ಕನ್​ ಚಾರ್ಜಸ್​ ವಿರುದ್ಧ (2011)

ಸಂಜು ಸ್ಯಾಮ್ಸನ್​-119 ರನ್​, ಪಂಜಾಬ್​ ವಿರುದ್ಧ (2021)

ಶೇನ್​ ವಾಟ್ಸನ್​-117* ರನ್​, ಸನ್​ರೈಸರ್ಸ್​ ವಿರುದ್ಧ (2018)

ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಇತ್ತಂಡಗಳ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಚೆನ್ನೈ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 210 ರನ್‌ ಗಳಿಸಿತು. ಇದನ್ನು ಬೆನ್ನತ್ತಿದ ಲಕ್ನೋ 19.3 ಓವರ್‌ ಗಳಲ್ಲಿ 4 ವಿಕೆಟ್‌ಗೆ 213 ರನ್‌ ಗಳಿಸಿ, 6 ವಿಕೆಟ್‌ ಗಳಿಂದ ಜಯಭೇರಿ ಬಾರಿಸಿತು.

ಚೇಸಿಂಗ್​ ವೇಳೆ ಸ್ಫೋಟಕ ಬ್ಯಾಟಿಂಗ್​ ನಡೆಸಿದ ಮಾರ್ಕಸ್‌ ಸ್ಟಾಯಿನಿಸ್‌ 63 ಎಸೆತಗಳಲ್ಲಿ 13 ಬೌಂಡರಿ, 6 ಸಿಕ್ಸರ್‌ಗಳ ಸಮೇತ ಅಜೇಯ 124 ರನ್‌ ಚಚ್ಚಿ ತಂಡಕ್ಕೆ ಸ್ಮರಣೀಯ ಗೆಲುವು ತಂದು ಕೊಟ್ಟರು. ಅಂತಿಮ ಓವರ್​ ತನಕ ಪಂದ್ಯ ಚೆನ್ನೈ ತಂಡದ ಕೈಯಲ್ಲಿತ್ತು. ಮುಸ್ತಫಿಜುರ್‌ ಎಸೆದ ಈ ಓವರ್​ನಲ್ಲಿ 20 ರನ್‌ ಹರಿದು ಬಂತು. ಇದು ಚೆನ್ನೈ ಸೋಲಿಗೆ ಪ್ರಮುಖ ಕಾರಣ. ಋತುರಾಜ್‌ 60 ಎಸೆತ ಎದುರಿಸಿ, 12 ಬೌಂಡರಿ , 3 ಸಿಕ್ಸರ್‌ಗಳೊಂದಿಗೆ 108 ರನ್‌ ಚಚ್ಚಿ ಶತಕ ಬಾರಿಸಿದರು. ಆದರೆ ಸೋಲಿನಿಂದ ಅವರ ಶತಕ ವ್ಯರ್ಥಗೊಂಡಿತು.

Continue Reading

ಕ್ರೀಡೆ

IPL 2024 Points Table: ಚೆನ್ನೈಗೆ ಹೀನಾಯವಾಗಿ ಸೋಲುಣಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ ಲಕ್ನೋ

IPL 2024 Points Table: ಇಂದು ನಡೆಯುವ ಗುಜರಾತ್​ ಮತ್ತು ಡೆಲ್ಲಿ ನಡುವಣ ಪಂದ್ಯದಲ್ಲಿ ಶುಭಮನ್​ ಗಿಲ್​ ಸಾರಥ್ಯದ ಗುಜರಾತ್​ ತಂಡ ಗೆದ್ದರೆ 10 ಅಂಕದೊಂದಿಗೆ 5ನೇ ಸ್ಥಾನಕ್ಕೇರುತ್ತದೆ. ಚೆನ್ನೈ ಮತ್ತೆ ಒಂದು ಸ್ಥಾನ ಕುಸಿದು 6ನೇ ಸ್ಥಾನ ಪಡೆಯಲಿದೆ. ಡೆಲ್ಲಿ ಗೆದ್ದರೆ 6ನೇ ಸ್ಥಾನಕ್ಕೇರಲಿದೆ.

VISTARANEWS.COM


on

IPL 2024 Points Table
Koo

ಚೆನ್ನೈ: ಬೃಹತ್​ ಮೊತ್ತದ, ಅತ್ಯಂತ ರೋಚಕವಾಗಿ ನಡೆದ ಮಂಗಳವಾರದ ಐಪಿಎಲ್​(IPL 2024) ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್(Chennai Super Kings)​ ತವರಿನಲ್ಲಿಯೇ ಸೋಲಿನ ಮುಖಭಂಗ ಎದುರಿಸಿದೆ. ಕನ್ನಡಿಗ ಕೆ.ಎಲ್​ ರಾಹುಲ್​ ಸಾರಥ್ಯದ ಲಕ್ನೋ ಸೂಪರ್​ ಜೈಂಟ್ಸ್(Lucknow Super Giants)​ ತಂಡ 6 ವಿಕೆಟ್​ಗಳಿಂದ ಗೆದ್ದು ಚೆನ್ನೈ ತಂಡದ ಸೊಕ್ಕಡಗಿಸಿದೆ. ಜತೆಗೆ ಈ ಗೆಲುವಿನೊಂದಿಗೆ ಚೆನ್ನೈ ಹಿಂದಿಕ್ಕಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಸೋಲು ಕಂಡ ಚೆನ್ನೈ 5ನೇ ಸ್ಥಾನಕ್ಕೆ ಕುಸಿದಿದೆ.

ಇಂದು ನಡೆಯುವ ಗುಜರಾತ್​ ಮತ್ತು ಡೆಲ್ಲಿ ನಡುವಣ ಪಂದ್ಯದಲ್ಲಿ ಶುಭಮನ್​ ಗಿಲ್​ ಸಾರಥ್ಯದ ಗುಜರಾತ್​ ತಂಡ ಗೆದ್ದರೆ 10 ಅಂಕದೊಂದಿಗೆ 5ನೇ ಸ್ಥಾನಕ್ಕೇರುತ್ತದೆ. ಚೆನ್ನೈ ಮತ್ತೆ ಒಂದು ಸ್ಥಾನ ಕುಸಿದು 6ನೇ ಸ್ಥಾನ ಪಡೆಯಲಿದೆ. ಡೆಲ್ಲಿ ಗೆದ್ದರೆ 6ನೇ ಸ್ಥಾನಕ್ಕೇರಲಿದೆ. ಪ್ಲೇ ಆಫ್​ ಪ್ರವೇಶಕ್ಕೆ 8 ತಂಡಗಳ ಮಧ್ಯೆ ಭಾರೀ ಪೈಪೋಟಿ ಏರ್ಪಟ್ಟಿದ್ದು, ಪಂದ್ಯಗಳು ರೋಚಕವಾಗಿ ಸಾಗುತ್ತಿದೆ.

ಇದನ್ನೂ ಓದಿ IPL 2024 : ಸ್ಟೊಯ್ನಿಸ್​​ ಶತಕ, ಚೆನ್ನೈ ವಿರುದ್ಧ 6 ವಿಕೆಟ್​ ಗೆಲವು ಸಾಧಿಸಿದ ಲಕ್ನೊ

ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ರಾಜಸ್ಥಾನ್​ ರಾಯಲ್ಸ್​87114 (+0.698)
ಕೆಕೆಆರ್​​75210 (+1.206)
ಹೈದರಾಬಾದ್​​75210 (+0.914)
ಲಕ್ನೋ85310 (+0.148)
ಚೆನ್ನೈ8448 (+0.415)
ಗುಜರಾತ್8448 (-1.055)
ಮುಂಬೈ8356 (-0.227)
ಡೆಲ್ಲಿ8356 (-0.477)
ಪಂಜಾಬ್​8264 (-0.292)
ಆರ್​ಸಿಬಿ8172 (-1.046)

ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಇತ್ತಂಡಗಳ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಚೆನ್ನೈ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 210 ರನ್‌ ಗಳಿಸಿತು. ಇದನ್ನು ಬೆನ್ನತ್ತಿದ ಲಕ್ನೋ 19.3 ಓವರ್‌ ಗಳಲ್ಲಿ 4 ವಿಕೆಟ್‌ಗೆ 213 ರನ್‌ ಗಳಿಸಿ, 6 ವಿಕೆಟ್‌ ಗಳಿಂದ ಜಯಭೇರಿ ಬಾರಿಸಿತು.

ಚೇಸಿಂಗ್​ ವೇಳೆ ಸ್ಫೋಟಕ ಬ್ಯಾಟಿಂಗ್​ ನಡೆಸಿದ ಮಾರ್ಕಸ್‌ ಸ್ಟಾಯಿನಿಸ್‌ 63 ಎಸೆತಗಳಲ್ಲಿ 13 ಬೌಂಡರಿ, 6 ಸಿಕ್ಸರ್‌ಗಳ ಸಮೇತ ಅಜೇಯ 124 ರನ್‌ ಚಚ್ಚಿ ತಂಡಕ್ಕೆ ಸ್ಮರಣೀಯ ಗೆಲುವು ತಂದು ಕೊಟ್ಟರು. ಅಂತಿಮ ಓವರ್​ ತನಕ ಪಂದ್ಯ ಚೆನ್ನೈ ತಂಡದ ಕೈಯಲ್ಲಿತ್ತು. ಮುಸ್ತಫಿಜುರ್‌ ಎಸೆದ ಈ ಓವರ್​ನಲ್ಲಿ 20 ರನ್‌ ಹರಿದು ಬಂತು. ಇದು ಚೆನ್ನೈ ಸೋಲಿಗೆ ಪ್ರಮುಖ ಕಾರಣ. ಋತುರಾಜ್‌ 60 ಎಸೆತ ಎದುರಿಸಿ, 12 ಬೌಂಡರಿ , 3 ಸಿಕ್ಸರ್‌ಗಳೊಂದಿಗೆ 108 ರನ್‌ ಚಚ್ಚಿ ಶತಕ ಬಾರಿಸಿದರು. ಆದರೆ ಸೋಲಿನಿಂದ ಅವರ ಶತಕ ವ್ಯರ್ಥಗೊಂಡಿತು.

Continue Reading
Advertisement
Lok Sabha Election 2024 General holiday for first phase of polling on April 26
Lok Sabha Election 20242 mins ago

Lok Sabha Election 2024: ಏಪ್ರಿಲ್‌ 26ಕ್ಕೆ ಮೊದಲ ಹಂತದ ಮತದಾನ; ಸಾರ್ವತ್ರಿಕ ರಜೆ ಘೋಷಿಸಿದ ರಾಜ್ಯ ಸರ್ಕಾರ

Dr Sushruth Gowda
ಕರ್ನಾಟಕ19 mins ago

Dr Sushruth Gowda: ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಡಾ.ಶುಶ್ರುತ್ ಗೌಡ

Railway Ticket
ದೇಶ22 mins ago

Railway Ticket: ಎಲ್ಲರಿಗೂ ರೈಲ್ವೆ ಟಿಕೆಟ್‌, ವೇಟಿಂಗ್‌ ಮಾತೇ ಇಲ್ಲ; ಕೇಂದ್ರ ಮಹತ್ವದ ಘೋಷಣೆ!

shubman gill
ಕ್ರಿಕೆಟ್23 mins ago

Shubman Gill: ಶತಕದ ಐಪಿಎಲ್​ ಪಂದ್ಯವನ್ನಾಡಲು ಸಜ್ಜಾದ ಗಿಲ್​; ಸಾಧನೆ ಹೇಗಿದೆ?

Chitradurga Lok Sabha Constituency BJP candidate Govinda M karajola election campaign in shira
ತುಮಕೂರು28 mins ago

Lok Sabha Election 2024: ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಮತಯಾಚನೆ

Dhanya Ramkumar reels with Kishen Bilagali
ಸ್ಯಾಂಡಲ್ ವುಡ್29 mins ago

Dhanya Ramkumar: ಕಿಶನ್ ಬಿಳಗಲಿ ಜತೆ ಡಾ. ರಾಜ್​ಕುಮಾರ್ ಮೊಮ್ಮಗಳ ಡ್ಯೂಯೆಟ್‌!

Sachin Tendulkar
ಕ್ರಿಕೆಟ್32 mins ago

Sachin Birthday: ಕ್ರಿಕೆಟ್ ದೇವರ ಕುರಿತ 30 ಕುತೂಹಲಕರ ಸಂಗತಿಗಳಿವು

Viral News
ವೈರಲ್ ನ್ಯೂಸ್53 mins ago

Viral News: ತಂಗಿಗೆ ಟಿವಿ ಗಿಫ್ಟ್‌ ಕೊಡಲು ಮುಂದಾದ ಪತಿಯನ್ನು ಕೊಲ್ಲಿಸಿದ ಪತ್ನಿ!

Rajkumar Birth Anniversary ​​Jaggesh said that Rajkumar blessed him when he was admitted due to suicide attempt
ಸ್ಯಾಂಡಲ್ ವುಡ್56 mins ago

Rajkumar Birth Anniversary: ಆತ್ಮಹತ್ಯೆಗೆ ಯತ್ನಿಸಿ ಅಡ್ಮಿಟ್‌ ಆದಾಗ ಅಣ್ಣಾವ್ರು ಆಶೀರ್ವಾದ ಮಾಡಿದ್ದರೆಂದ ಜಗ್ಗೇಶ್‌!

World Chess Championship
ಕ್ರೀಡೆ59 mins ago

World Chess Championship: ಡಿ.ಗುಕೇಶ್‌-ಲಿರೆನ್‌ ನಡುವಣ ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌ ಪಂದ್ಯಕ್ಕೆ ಮುಹೂರ್ತ ಫಿಕ್ಸ್​

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ11 hours ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು2 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ2 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು2 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು2 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ2 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ3 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ4 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20244 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

ಟ್ರೆಂಡಿಂಗ್‌