Amazon Prime : ಅಮೆಜಾನ್ ಪ್ರೈಮ್​ನಲ್ಲಿ ನೋಡಬಹುದು ಟಿ20 ವಿಶ್ವ ಕಪ್ - Vistara News

ಕ್ರಿಕೆಟ್

Amazon Prime : ಅಮೆಜಾನ್ ಪ್ರೈಮ್​ನಲ್ಲಿ ನೋಡಬಹುದು ಟಿ20 ವಿಶ್ವ ಕಪ್

Amazon Prime : 2024ರಿಂದ ಹಿಡಿದು 2027ರವರೆಗಿನ ಎಲ್ಲ ಟೂರ್ನಿಗಳನ್ನು ನೇರ ಪ್ರಸಾರ ಮಾಡುವ ಹಕ್ಕನ್ನು ಅಮೆಜಾನ್ ಪ್ರೈಮ್ ಪಡೆದುಕೊಂಡಿದೆ.

VISTARANEWS.COM


on

amazon Prime
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಅಮೆರಿಕದ ಮೂಲದ ಒಟಿಟಿ ಫ್ಲ್ಯಾಟ್​​ಫಾರ್ಮ್​ ಅಮೆಜಾನ್ ಪ್ರೈಮ್ (Amazon Prime) ಭಾರತದಲ್ಲೂ ಸಿಕ್ಕಾಪಟ್ಟೆ ಜನಪ್ರಿಯ. ಇಕಾಮರ್ಸ್​ ಸಂಸ್ಥೆಯೂ ಇದರಲ್ಲಿ ಸೇರಿಕೊಂಡಿರುವ ಕಾರಣ ಅತಿ ಹೆಚ್ಚು ಮಂದಿ ಇದರ ಸಬ್​ಸ್ಕ್ರೈಬ್​ ಆಗಿದ್ದಾರೆ. ಈ ಒಟಿಟಿ ವೇದಿಕೆ ಇದೀಗ ಕ್ರಿಕೆಟ್​ ಪಂದ್ಯಗಳ ನೇರ ಪ್ರಸಾರವನ್ನೂ ಮಾಡಲು ಮುಂದಾಗಿದೆ. ಹೀಗಾಗಿ ಮುಂದಿನ 2024ರ ಟಿ20 ವಿಶ್ವ ಕಪ್​ ಸೇರಿದಂತೆ 2024ರಿಂದ 2027ರವರೆಗಿನ ಐಸಿಸಿ ಕ್ರಿಕೆಟ್​ ಪಂದ್ಯಗಳು ಅಮೆಜಾನ್ ಪ್ರೈಮ್​ನಲ್ಲಿ ಪ್ರಸಾರವಾಗಲಿದೆ. ಪ್ರೈಮ್​ ಆ್ಯಪ್ ಇದ್ದವರು ಯಾವುದೇ ಅಡೆತಡೆಗಳು ಇಲ್ಲದೆ ಪಂದ್ಯಗಳನ್ನು ವೀಕ್ಷಿಸಬಹುದು. ವಿಷಯ ತಿಳಿದ ತಕ್ಷಣ ನಾವು ಸಂಭ್ರಮ ಪಡುವ ಅಗತ್ಯವಿಲ್ಲ. ಯಾಕೆಂದರೆ ನೇರ ಪ್ರಸಾರದ ಹಕ್ಕನ್ನು ಅಮಜಾನ್ ಕಂಪನಿ ಪಡೆದುಕೊಂಡಿರುವುದು ಆಸ್ಟ್ರೇಲಿಯಾದಲ್ಲಿ ಪ್ರಸಾರ ಮಾಡಲು ಮಾತ್ರ. ಹೀಗಾಗಿ ಭಾರತೀಯರಿಗೆ ಇದರ ಅನುಕೂಲವಿಲ್ಲ.

2024ರಲ್ಲಿ ಅಮೆರಿಕದಲ್ಲಿ ನಡೆಯಲಿರುವ ಪುರುಷರ ಟಿ20 ವಿಶ್ವಕಪ್ ಟೂರ್ನಿಯಿಂದ ಮುಂದಿನ ನಾಲ್ಕು ವರ್ಷಗಳ ಕಾಲ ನಡೆಯಲಿರುವ ಎಲ್ಲಾ ಐಸಿಸಿ ಟೂರ್ನಿಗಳನ್ನು ಆಸ್ಟ್ರೇಲಿಯಾದಲ್ಲಿ ನೇರ ಪ್ರಸಾರ ಮಾಡುವ ಹಕ್ಕನ್ನು ಅಮೆಜಾನ್ ಪ್ರೈಮ್ ವಿಡಿಯೋ ಪಡೆದುಕೊಂಡಿದೆ. ಈ ಒಪ್ಪಂದದಲ್ಲಿ ಪುರುಷರ ಮತ್ತು ಮಹಿಳಾ ಕ್ರಿಕೆಟ್ ವಿಶ್ವಕಪ್, ಟಿ 20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ಅಂಡರ್ 19 ಮತ್ತು ವಿಶ್ವ ಟೆಸ್ಟ್ ಚಾಂಪಿಯನ್​ಶೀಪ್​​ ಫೈನಲ್ ಪಂದ್ಯಗಳು ಸೇರಿಕೊಂಡಿವೆ. ಈ ಒಪ್ಪಂದವು ಎಲ್ಲಾ ಐಸಿಸಿ ಕ್ವಾಲಿಫೈಯರ್ ಮತ್ತು ಅಂಡರ್ 19 ವಿಶ್ವಕಪ್ ಟೂರ್ನಿಗಳನ್ನೂ ಒಳಗೊಂಡಿದೆ. ಹೊಸ ಪಾಲುದಾರಿಕೆಯು ಉಚಿತವಲ್ಲ ಎಂಬುದಾಗಿ ತಿಳಿಸಲಾಗಿದೆ

ಅಮೆಜಾನ್ ಪ್ರೈಮ್ ವಿಡಿಯೋ ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಹಕ್ಕುಗಳನ್ನು ಪಡೆದುಕೊಂಡಿರುವುದು ಇದೇ ಮೊದಲು ಮತ್ತು ಭಾರತದಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ಪಂದ್ಯಗಳನ್ನು ಸ್ಟ್ರೀಮಿಂಗ್ ಮಾಡಿದ ನಂತರ ಜಾಗತಿಕವಾಗಿ ಕ್ರೀಡೆಗೆ ಕಾಲಿಟ್ಟಿರುವುದು ಇದು ಎರಡನೇ ಬಾರಿ.

ಕ್ರಿಕೆಟ್ ಪ್ರಸಾರ ಹಕ್ಕುಗಳ ಗಳಿಕೆಯಲ್ಲಿ ಆರ್ಥಿಕ ನಷ್ಟ ಎದುರಿಸುತ್ತಿರುವ ಫಾಕ್ಸ್ ಸ್ಪೋರ್ಟ್ಸ್ ಮತ್ತು ಸೆವೆನ್ ನೆಟ್ವರ್ಕ್​​​ಗೆ ಇದು ಸವಾಲೆನಿಸಿದೆ. ಅಮೆಜಾನ್ ಪ್ರೈಮ್​ ಪ್ರವೇಶದಿಂದ ಅಲ್ಲಿನ ನೇರ ಪ್ರಸಾರದ ಚಿತ್ರಣ ಬದಲಾಗಲಿದೆ.

ಯಾವೆಲ್ಲ ಟೂರ್ನಿಗಳ ನೇರ ಪ್ರಸಾರ

 • ಪುರುಷರ ಟಿ 20 ವಿಶ್ವಕಪ್: ಯುಎಸ್ಎ / ವೆಸ್ಟ್ ಇಂಡೀಸ್ (ಜೂನ್ 2024)
 • ಮಹಿಳಾ ಟಿ 20 ವಿಶ್ವಕಪ್: ಬಾಂಗ್ಲಾದೇಶ (ಸೆಪ್ಟೆಂಬರ್ 2024)
 • ಪುರುಷರ ಚಾಂಪಿಯನ್ಸ್ ಟ್ರೋಫಿ: ಪಾಕಿಸ್ತಾನ (ಫೆಬ್ರವರಿ 2025)
 • ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್: ಇಂಗ್ಲೆಂಡ್ (ಜೂನ್ 2025)
 • ಮಹಿಳಾ ಏಕದಿನ ವಿಶ್ವಕಪ್: ಭಾರತ (ಸೆಪ್ಟೆಂಬರ್ 2025)
 • ಪುರುಷರ ಟಿ 20 ವಿಶ್ವಕಪ್: ಭಾರತ-ಶ್ರೀಲಂಕಾ (ಸೆಪ್ಟೆಂಬರ್ 2026)
 • ಮಹಿಳಾ ಟಿ 20 ವಿಶ್ವಕಪ್: ಇಂಗ್ಲೆಂಡ್ (ಜೂನ್ 2026)
 • ಮಹಿಳಾ ಚಾಂಪಿಯನ್ಸ್ ಟ್ರೋಫಿ: ಶ್ರೀಲಂಕಾ (ಫೆಬ್ರವರಿ 2027)
 • ಪುರುಷರ ಏಕದಿನ ವಿಶ್ವಕಪ್: ದಕ್ಷಿಣ ಆಫ್ರಿಕಾ/ನಮೀಬಿಯಾ (ಅಕ್ಟೋಬರ್ 2027)

ಈ ಒಪ್ಪಂದವು ಸ್ಟ್ರೀಮಿಂಗ್ ಸೇವೆಗೆ ವಿಚಾರದಲ್ಲಿ ಹೊಸ ಮೈಲುಗಲ್ಲು ಮತ್ತು ಇದು ಆಸ್ಟ್ರೇಲಿಯಾದ ಕ್ರಿಕೆಟ್ ಅಭಿಮಾನಿಗಳಿಗೆ ಅಭೂತಪೂರ್ವ ಅವಕಾಶ ಎಂದು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್​​ನ ಅಮೆಜಾನ್ ಪ್ರೈಮ್ ಮುಖ್ಯಸ್ಥ ಹುಶಿದಾರ್ ಖರಾಸ್ ಹೇಳಿದ್ದಾರೆ.

ಇದನ್ನೂ ಓದಿ : Ind vs SA : ಭಾರತ ವಿರುದ್ಧ ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ

ಕ್ರಿಕೆಟ್ ವಿಶ್ವಕಪ್ ವಿಶ್ವದ ಅತಿ ಹೆಚ್ಚು ವೀಕ್ಷಿಸಿದ ಕ್ರೀಡಾಕೂಟಗಳಲ್ಲಿ ಒಂದಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ಆವೃತ್ತಿಯನ್ನು ನೂರಾರು ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಮುಂದಿನ ನಾಲ್ಕು ವರ್ಷಗಳಲ್ಲಿ ಆಸ್ಟ್ರೇಲಿಯಾದ ಪ್ರೈಮ್ ಸದಸ್ಯರು ತಮ್ಮ ನೆಚ್ಚಿನ ಕ್ರಿಕೆಟ್ ತಂಡಗಳು ಮತ್ತು ಆಟಗಾರರು ಕ್ರಿಕೆಟ್​ನ ಅತಿದೊಡ್ಡ ಬಹುಮಾನಕ್ಕಾಗಿ ಸ್ಪರ್ಧಿಸುವುದನ್ನು ಪ್ರೈಮ್ ವೀಡಿಯೊದಲ್ಲಿ ವೀಕ್ಷಿಸಲು ಸಾಧ್ಯವಾಗುತ್ತದೆ ” ಎಂದು ಖರಾಸ್ ಹೇಳಿದ್ದಾರೆ.

ಅಮೆಜಾನ್ 2024 ರಲ್ಲಿ ಬಿಡುಗಡೆಯಾಗಲಿರುವ ಟೆಸ್ಟ್ ಸಾಕ್ಷ್ಯಚಿತ್ರದ ಮೂರನೇ ಸೀಸನ್ ಅನ್ನು ಘೋಷಿಸಿದೆ. ದಿ ಟೆಸ್ಟ್: ಎ ನ್ಯೂ ಎರಾ ಫಾರ್ ಆಸ್ಟ್ರೇಲಿಯಾ, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾದ ಸಹ-ನಿರ್ಮಾಣದ ಸರಣಿಯಾಗಿದೆ. ಮೂರನೇ ಆವೃತ್ತಿಯು ಈ ವರ್ಷ ಇಂಗ್ಲೆಂಡ್​ನಲ್ಲಿ ನಡೆದ ಆಶಸ್ ಸರಣಿಯಲ್ಲಿ 2-2 ರಿಂದ ಕೊನೆಗೊಂಡಿತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

Akash Deep: ಮೊದಲ ಪಂದ್ಯದಲ್ಲೇ ಕ್ಲೀನ್‌ಬೌಲ್ಡ್‌ ಮಾಡಿದರೂ ಔಟ್‌ ಕೊಡದ ಅಂಪೈರ್;‌ ತಪ್ಪು ಯಾರದ್ದು?

Akash Deep: ರಾಂಚಿಯ ಜೆಎಸ್‌ಸಿಎ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ನಾಲ್ಕನೇ ಟೆಸ್ಟ್‌ ಪಂದ್ಯ ನಡೆಯುತ್ತಿದೆ. ಪದಾರ್ಪಣೆ ಪಂದ್ಯದಲ್ಲಿಯೇ ಆಕಾಶ್‌ ದೀಪ್‌ ಎಸೆದ ನೋ ಬಾಲ್‌ ಅವರಿಗೆ ದುಬಾರಿ ಎನಿಸಿತು.

VISTARANEWS.COM


on

Akash Deep
Koo

ರಾಂಚಿ: ಭಾರತ ಹಾಗೂ ಇಂಗ್ಲೆಂಡ್‌ (IND vs ENG) ನಡುವಿನ ನಾಲ್ಕನೇ ಟೆಸ್ಟ್‌ (Test Match) ಪಂದ್ಯವು ಶುಕ್ರವಾರ (ಫೆಬ್ರವರಿ 23) ಆರಂಭವಾಗಿದ್ದು, ವೇಗಿ ಆಕಾಶ್‌ ಪದಾರ್ಪಣೆ ಮಾಡಿದ್ದಾರೆ. ರಾಂಚಿಯ ಜೆಎಸ್‌ಸಿಎ ಇಂಟರ್‌ನ್ಯಾಷನಲ್‌ ಸ್ಟೇಡಿಯಂ ಕಾಂಪ್ಲೆಕ್ಸ್‌ನಲ್ಲಿ ಆರಂಭವಾದ ಪಂದ್ಯದಲ್ಲಿ ಆಕಾಶ್‌ ದೀಪ್‌ (Akash Deep) ಅವರು ನೋ ಬಾಲ್‌ ಎಸೆದಿದ್ದು ಅವರಿಗೆ ದುಬಾರಿಯಾಗಿ ಪರಿಣಮಿಸಿತು. ಇಂಗ್ಲೆಂಡ್‌ ಆರಂಭಿಕ ಆಟಗಾರ ಜಾಕ್‌ ಕ್ರಾವ್ಲೆ (Zak Crawley) ಅವರನ್ನು ಆಕಾಶ್‌ ದೀಪ್‌ ಕ್ಲೀನ್‌ ಬೌಲ್ಡ್‌ (Clean Bowled) ಮಾಡಿದರೂ ನೋ ಬಾಲ್‌ ಎಸೆದ ಕಾರಣ ಪ್ರಮುಖ ವಿಕೆಟ್‌ ಕೈ ತಪ್ಪಿತು. ಈ ವಿಡಿಯೊ ಈಗ ವೈರಲ್‌ ಆಗಿದೆ.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಇಂಗ್ಲೆಂಡ್‌ ತಂಡಕ್ಕೆ ಜಾಕ್‌ ಕ್ರಾವ್ಲೆ ಹಾಗೂ ಬೆನ್‌ ಡಕೆಟ್‌ ಅವರು ಉತ್ತಮ ಆರಂಭ ಒದಗಿಸಿದರು. ವಿಕೆಟ್‌ ನಷ್ಟವಿಲ್ಲದೆ ಇಂಗ್ಲೆಂಡ್‌ 47 ರನ್‌ ಗಳಿಸಿತ್ತು. ಆಗ, ಆಕಾಶ್‌ ದೀಪ್‌ ಎಸೆದ ಮೋಡಿಯ ಎಸೆತಕ್ಕೆ ಜಾಕ್‌ ಕ್ರಾವ್ಲೆ ನಿರುತ್ತರರಾದರು. ಕ್ಲೀನ್‌ಬೌಲ್ಡ್‌ ಆದ ಕಾರಣ ಸ್ಟಂಪ್‌ ಮಾರುದ್ದ ಬಿದ್ದಿತ್ತು. ಪದಾರ್ಪಣೆ ಮಾಡಿದ ಟೆಸ್ಟ್‌ ಪಂದ್ಯದಲ್ಲೇ ಮೊದಲ ವಿಕೆಟ್‌ ಪಡೆದ ಖುಷಿಯಲ್ಲಿ ಆಕಾಶ್‌ ದೀಪ್‌ ತೇಲಾಡುತ್ತಿದ್ದರು. ಆದರೆ, ಅಂಪೈರ್‌ ನೋ ಬಾಲ್‌ (Front Foot) ಎಂದು ಘೋಷಿಸಿದ ಕಾರಣ ಆಕಾಶ್‌ ದೀಪ್‌ ಖುಷಿ ಕಮರಿ ಹೋಯಿತು.

ಮೂರು ವಿಕೆಟ್‌ ಕಿತ್ತಿದ ಆಕಾಶ್‌ ದೀಪ್

ನೋ ಬಾಲ್‌ ಆದ ಕಾರಣ ಮೊದಲ ವಿಕೆಟ್‌ ಖುಷಿಯಿಂದ ವಂಚಿತರಾದರೂ ಎದೆಗುಂದ ಆಕಾಶ್‌ ದೀಪ್‌, ಚಾಣಾಕ್ಷತನದಿಂದ ಬೌಲಿಂಗ್‌ ಮಾಡಿದರು. ಬೆನ್‌ ಡಕೆಟ್‌ ಅವರ ವಿಕೆಟ್‌ ಪಡೆಯುವ ಮೂಲಕ ಆಕಾಶ್‌ ದೀಪ್‌, ಟೆಸ್ಟ್‌ನಲ್ಲಿ ಖಾತೆ ತೆರೆದರು. ಅಲ್ಲದೆ, ನಂತರ ಜಾಕ್‌ ಕ್ರಾವ್ಲಿ ಹಾಗೂ ಒಲಿ ಪೋಪ್‌ ಅವರ ವಿಕೆಟ್‌ ಪಡೆಯುವ ಮೂಲಕ ಪದಾರ್ಪಣೆ ಪಂದ್ಯದಲ್ಲಿಯೇ ಭರವಸೆ ಮೂಡಿಸಿದ್ದಾರೆ. ಅದರಲ್ಲೂ, ಬೌಲ್ಡ್‌ ಮಾಡುವ ಮೂಲಕವೇ ಜಾಕ್‌ ಕ್ರಾವ್ವಿ ವಿಕೆಟ್‌ ಪಡೆದಿದ್ದು ವಿಶೇಷವಾಗಿದೆ.

ಇದನ್ನೂ ಓದಿ: ಕೊಹ್ಲಿಗೆ ಮಗ ಹುಟ್ಟಿದ್ದೇ ತಡ‌, ನಿವೃತ್ತಿಯ ಭವಿಷ್ಯ ನುಡಿದ ಜ್ಯೋತಿಷಿ; ಏನಿದು ವೈರಲ್‌ ಪೋಸ್ಟ್?

ಬಿಹಾರದವರಾದ ಆಕಾಶ್‌ ದೀಪವ್‌ ಅವರಿಗೆ ಭಾರತ ಕ್ರಿಕೆಟ್‌ ತಂಡದ ಕ್ಯಾಪ್‌ ಸಿಗುತ್ತಲೇ ಅವರು ಭಾವುಕರಾದರು. ಬಳಿಕ ತಾಯಿ ಬಳಿ ಹೋಗಿ, ಕಾಲು ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದರು. ಭಾರತ ಹಾಗೂ ಇಂಗ್ಲೆಂಡ್‌ ಮಧ್ಯೆ ಐದು ಪಂದ್ಯಗಳ ಟೆಸ್ಟ್‌ ಸರಣಿ ನಡೆಯುತ್ತಿದ್ದು, ಈಗಾಗಲೇ ಭಾರತವು 2-1ರ ಮುನ್ನಡೆ ಪಡೆದಿದೆ. ನಾಲ್ಕನೇ ಪಂದ್ಯವನ್ನು ಗೆದ್ದರೆ ಸರಣಿಯು ರೋಹಿತ್‌ ಶರ್ಮಾ ಪಡೆಯ ವಶವಾಗಲಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ ಗೆದ್ದರೆ, ನಂತರದ ಎರಡು ಪಂದ್ಯಗಳನ್ನು ಭಾರತ ಗೆದ್ದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸಿನಿಮಾ

WPL 2024: ಆಟಗಾರ್ತಿ ಮೆಗ್ ಲ್ಯಾನಿಂಗ್‌ಗೆ ಸಿಗ್ನೇಚರ್ ಸ್ಟೆಪ್ಸ್‌ ಹೇಳಿಕೊಟ್ಟ ಶಾರುಖ್‌: ವಿಡಿಯೊ ವೈರಲ್‌!

WPL 2024: ವುಮೆನ್‌ ಪ್ರೀಮಿಯರ್‌ ಲೀಗ್‌ ಆರಂಭಕ್ಕೂ ಮೊದಲು ಭಾರತೀಯ ಆಟಗಾರ್ತಿ ಜೆಮಿಮಾ ರಾಡ್ರಿಗಸ್ ತಂಡದ ಜತೆಗೂ ಶಾರುಖ್‌ ಸಮಯ ಕಳೆದಿದ್ದಾರೆ. ಇದೇ ವೇಳೆ ಅವರು ಆಸ್ಟ್ರೇಲಿಯಾ ಆಟಗಾರ್ತಿಗೆ ತಮ್ಮ ಸಿಗ್ನೇಚರ್‌ ಸ್ಟೆಪ್ಸ್‌ ಹೇಳಿಕೊಟ್ಟರು.

VISTARANEWS.COM


on

Shah Rukh Khan teaches Meg Lanning his iconic pose
Koo

ಬೆಂಗಳೂರು: ಮಹಿಳೆಯರ ವರ್ಣರಂಜಿತ ಟಿ20 ಕ್ರಿಕೆಟ್​ ಲೀಗ್ ಡಬ್ಲ್ಯೂಪಿಎಲ್ (WPL 2024) 2ನೇ ಆವೃತ್ತಿಗೆ ಇಂದು (ಫೆ.23) ಚಾಲನೆ ಸಿಗಲಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ(chinnaswamy stadium) ಬಾಲಿವುಡ್‌ ಗ್ಲ್ಯಾಮರ್‌ನೊಂದಿಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಮಹಿಳಾ ಕ್ರಿಕೆಟ್ ತಂಡಕ್ಕೆ ಬೆಂಬಲ ನೀಡಲು ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್‌ಖಾನ್‌ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಿದ್ದಾರೆ. ಈ ವೇಳೆ ಆಸ್ಟ್ರೇಲಿಯಾ ಕ್ರಿಕೆಟ್‌ ಆಟಗಾರ್ತಿ ಮೆಗ್ ಲ್ಯಾನಿಂಗ್ (Meg Lanning) ಅವರಿಗೆ ತಮ್ಮ ಸಿಗ್ನೇಚರ್ ಸ್ಟೆಪ್ಸ್‌ ಹೇಳಿಕೊಟ್ಟಿದ್ದಾರೆ ಶಾರುಖ್‌. ಜತೆಗೆ ಶಾತುಖ್‌ ಅವರು ಮೈದಾನದಲ್ಲಿ ತಮ್ಮ ಸಣ್ಣ ಪುಟ್ಟ ಚೇಷ್ಟೆಗಳನ್ನು ಮಾಡಿದ್ದಾರೆ. ಇದೀಗ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ʻಚಕ್ ದೇ! ಇಂಡಿಯಾʼ ಶಾರುಖ್‌ ನಟನೆಯ ಸಿನಿಮಾ. 2007ರಲ್ಲಿ ತೆರೆ ಕಂಡಿತ್ತು. ಭಾರತದ ಹಾಕಿ ಕುರಿತ ಈ ಸಿನಿಮಾ ಇತ್ತು. ಇದರಲ್ಲಿ ಶಾರುಖ್‌ ಅವರು ʻಕೋಚ್ ಕಬೀರ್ ಖಾನ್ʼ ಪಾತ್ರದಲ್ಲಿ ಅಭಿನಯಿಸಿದ್ದರು. ಇದೀಗ ಭಾರತೀಯ ಆಟಗಾರ್ತಿ ಜೆಮಿಮಾ ರಾಡ್ರಿಗಸ್ ತಂಡದ ಜತೆಗೂ ಶಾರುಖ್‌ ಸಮಯ ಕಳೆದಿದ್ದಾರೆ. ʻಕೋಚ್ ಕಬೀರ್ ಖಾನ್’ ಪ್ರೀತಿಯಿಂದ ನಮಗೆ ಹಾರೈಸಿದರು ಎಂದು ಜೆಮಿಮಾ ರಾಡ್ರಿಗಸ್ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ವೀಡಿಯೊಗಳಲ್ಲಿ, ಶಾರುಖ್ ಅವರು ಮುಂಬರುವ ಪಂದ್ಯದ ಆಟಗಾರರಿಗೆ ಶುಭ ಹಾರೈಸುತ್ತಿರುವುದು ಕಂಡುಬಂದಿದೆ.

ಇದನ್ನೂ ಓದಿ: WPL 2024: ನಾಳೆಯಿಂದ ಡಬ್ಲ್ಯೂಪಿಎಲ್ ಆರಂಭ; ವೇಳಾಪಟ್ಟಿ, ತಂಡಗಳ ಮಾಹಿತಿ ಹೀಗಿದೆ

ಅಷ್ಟೇ ಅಲ್ಲದೆ, ಉದ್ಘಾಟನಾ ಸಮಾರಂಭಕ್ಕೆ ಶಾರುಖ್‌ ಪಠಾಣ್ ಸಿನಿಮಾ ಹಾಡಿಗೆ ಸ್ಟೆಪ್ಸ್‌ ಕೂಡ ಹಾಕಲಿದ್ದಾರೆ. ರಿಹರ್ಸಲ್‌ ಮಾಡುತ್ತಿರುವ ವಿಡಿಯೊಗಳು ಕೂಡ ವೈರಲ್‌ ಆಗಿವೆ.

ಮಾರ್ಚ್ 17ಕ್ಕೆ ಫೈನಲ್​


ಕಳೆದ ವರ್ಷದ ಸಂಪೂರ್ಣ ಕೂಟವು ಮುಂಬೈನಲ್ಲಿ ನಡೆದಿದ್ದು, ಈ ಬಾರಿ ಬೆಂಗಳೂರು ಮತ್ತು ನವದೆಹಲಿಯಲ್ಲಿ ನಡೆಯಲಿದೆ. ನಾಳೆ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಕಳೆದ ವರ್ಷದ ಫೈನಲಿಸ್ಟ್​ಗಳಾದ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೆಣಸಾಡಲಿದೆ. ಈ ಬಾರಿ ಟೂರ್ನಿಯಲ್ಲಿ ಒಟ್ಟು 22 ಪಂದ್ಯಗಳು ನಡೆಯಲಿವೆ. ಅಂತಿಮ ಪಂದ್ಯ ಮಾರ್ಚ್ 17 ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಎಲ್ಲಾ ಪಂದ್ಯಗಳು ಸಂಜೆ 7:30ಕ್ಕೆ ಆರಂಭವಾಗಲಿವೆ. ಮಾರ್ಚ್ 15 ರಂದು ಎಲಿಮಿನೇಟರ್ ಪಂದ್ಯ ನಡೆಯಲಿದೆ.

Continue Reading

ಕ್ರೀಡೆ

T20 World Cup 2024 : ವಿಶ್ವ ಕಪ್​ನ ಪ್ರಚಾರ ವಿಡಿಯೊ ಬಿಡುಗಡೆ ಮಾಡಿದ ಐಸಿಸಿ

T20 World Cup 2024 : ಐಸಿಸಿ ಟಿ20 ವಿಶ್ವ ಕಪ್​ ಜೂನ್​ 1ರಿಂದ ಜೂನ್ 29ರವರೆಗೆ ನಡೆಯಲಿದೆ.

VISTARANEWS.COM


on

T20 World Cup
Koo

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಪುರುಷರ ಟಿ 20 ವಿಶ್ವಕಪ್ 2024ನ (T20 World Cup 2024) ಅಧಿಕೃತ ಪ್ರಚಾರ ವೀಡಿಯೊವನ್ನು ಬಿಡುಗಡೆ ಮಾಡಿದೆ. ಇದು ಟೂರ್ನಿಯ 100 ದಿನಗಳ ಕ್ಷಣಗಣನೆಯ ಆರಂಭವನ್ನು ಸೂಚಿಸುತ್ತದೆ. ‘ಔಟ್ ಆಫ್ ದಿಸ್ ವರ್ಲ್ಡ್’ ಎಂಬ ಶೀರ್ಷಿಕೆಯ ವಿಡಿಯೊದಲ್ಲಿ ಟಿ 20 ಸೂಪರ್​ಸ್ಟಾರ್​ಗಳಾದ ಕ್ವಿಂಟನ್ ಡಿ ಕಾಕ್, ಕೀರನ್ ಪೊಲಾರ್ಡ್, ಮಾರ್ಕಸ್ ಸ್ಟೊಯಿನಿಸ್, ಶಾಹೀನ್ ಅಫ್ರಿದಿ ಮತ್ತು ಶುಭ್ಮನ್ ಗಿಲ್ ಇದ್ದಾರೆ.

ಈ ವಿಡಿಯೊವು ವೆಸ್ಟ್ ಇಂಡೀಸ್ ಮತ್ತು ಯುಎಸ್ಎಯಲ್ಲಿ ನಡೆದ ಟಿ 20 ವಿಶ್ವಕಪ್ ಪಂದ್ಯಗಳ ವಿವಿಧ ಸ್ಥಳಗಳನ್ನು ತೋರಿಸುತ್ತದೆ. ಪಂದ್ಯಾವಳಿಯ ಸುತ್ತಲಿನ ಉತ್ಸಾಹವನ್ನು ತೋರಿಸಿದೆ. ಜೂನ್ 1ರಿಂದ ಜೂನ್ 29 ರವರೆಗೆ ನಡೆಯಲಿರುವ ಬಹುನಿರೀಕ್ಷಿತ ಪಂದ್ಯಾವಳಿಗೆ ಕೇವಲ 100 ದಿನಗಳು ಉಳಿದಿದ್ದು, ವೆಸ್ಟ್ ಇಂಡೀಸ್ ಮತ್ತು ಯುಎಸ್ಎಯಲ್ಲಿ ನಡೆಯಲಿರುವ ಐಸಿಸಿ ಪುರುಷರ ಟಿ 20 ವಿಶ್ವಕಪ್ 2024 ರ ಉಳಿದ ಟಿಕೆಟ್​ಗಳು ಈಗ ಸಾಮಾನ್ಯ ಮಾರಾಟಕ್ಕೆ ಲಭ್ಯವಿರುತ್ತವೆ.

ಫೆಬ್ರವರಿ 1 ರಂದು ಲೈವ್ ಆದ ಟಿಕೆಟ್​ಗಳಿಗೆ ಅಭೂತಪೂರ್ವ ಬೇಡಿಕೆಯ ನಂತರ, ಈವೆಂಟ್​​ನ ಸಾಮಾನ್ಯ ಟಿಕೆಟ್​​ಗಳು ಫೆಬ್ರವರಿ 22, ಆಂಟಿಗುವಾ ಸ್ಟ್ಯಾಂಡರ್ಡ್ ಟೈಮ್ ಬೆಳಿಗ್ಗೆ 10 ಗಂಟೆಯಿಂದ ಟಿ 20 ವಿಶ್ವಕಪ್ ವೆಬ್​ಸೈಟ್​ನಲ್ಲಿ ಲಭ್ಯವಾಗಿಗಿದೆ. ಐಸಿಸಿ 161 ಕ್ಕೂ ಹೆಚ್ಚು ದೇಶಗಳಿಂದ 3 ಮಿಲಿಯನ್ ಟಿಕೆಟ್ ಅರ್ಜಿಗಳನ್ನು ಸ್ವೀಕರಿಸಿದೆ.

ಇದನ್ನೂ ಓದಿ : IPL 2024 : ಆರ್​ಸಿಬಿ ತಂಡದ ವೇಳಾಪಟ್ಟಿ, ಪಂದ್ಯದ ವಿವರಗಳು ಇಲ್ಲಿವೆ

ಜೂನ್​ನಲ್ಲಿ ನ್ಯೂಯಾರ್ಕ್​ನಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಎಲ್ಲಾ ಟಿ 20 ವಿಶ್ವಕಪ್ ಪಂದ್ಯಗಳಿಗೆ ಟಿಕೆಟ್​ಗಳು ಪ್ರಸ್ತುತ ಲಭ್ಯವಿಲ್ಲ. ಟ್ರಿನಿಡಾಡ್ ಮತ್ತು ಟೊಬಾಗೊ ಮತ್ತು ಗಯಾನಾದಲ್ಲಿ ನಡೆಯುವ ಸೆಮಿಫೈನಲ್ ಪಂದ್ಯಗಳು ಮತ್ತು ಬಾರ್ಬಡೋಸ್​ನಲ್ಲಿ ನಡೆಯುವ ಫೈನಲ್ ಪಂದ್ಯಗಳ ಟಿಕೆಟ್​ಗೆ ಹೆಚ್ಚಿನ ಬೇಡಿಕೆ ಬಂದಿದೆ. ಆದಾಗ್ಯೂ, ವೆಸ್ಟ್ ಇಂಡೀಸ್​ನಲ್ಲಿ ಇತರ ಎಲ್ಲಾ ಪಂದ್ಯಗಳ ಟಿಕೆಟ್​ಗಳು ಖರೀದಿಗೆ ಲಭ್ಯವಿದೆ.

ರೋಮಾಂಚಕಾರಿ ಆಟ

ಐಸಿಸಿ ಪುರುಷರ ಟಿ 20 ವಿಶ್ವಕಪ್ 2024 ಒಂದು ರೋಮಾಂಚಕಾರಿ ಆಟವಾಗಿದೆ. ವಿಶ್ವದಾದ್ಯಂತದ ಅತ್ಯುತ್ತಮ ಟಿ 20 ಆಟಗಾರರು ಟ್ರೋಫಿಗಾಗಿ ಕಣಕ್ಕೆ ಇಳಿಯಲಿದ್ದಾರೆ. ಆಂಟಿಗುವಾ, ಬಾರ್ಬಡೋಸ್, ಗಯಾನಾ ಮತ್ತು ಟ್ರಿನಿಡಾಡ್ ಮತ್ತು ಟೊಬಾಗೊದಲ್ಲಿ ಪಂದ್ಯಗಳು ನಡೆಯಲಿವೆ. ಅದೇ ರೀತಿ ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ನಲ್ಲೂ ಪಂದ್ಯಗಳು ಆಯೋಜನೆಗೊಂಡಿದೆ. ಕೇವಲ 100 ದಿನಗಳು ಬಾಕಿ ಇರುವಾಗ, ಅಭಿಮಾನಿಗಳು ಈಗ ಉಳಿದ ಪಂದ್ಯಗಳ ಟಿಕೆಟ್ ಖರೀದಿಯಲ್ಲಿ ಉತ್ಸಾಹ ತೋರಿದ್ದಾರೆ.

Continue Reading

ಪ್ರಮುಖ ಸುದ್ದಿ

IPL 2024 : ಆರ್​ಸಿಬಿ ತಂಡದ ವೇಳಾಪಟ್ಟಿ, ಪಂದ್ಯದ ವಿವರಗಳು ಇಲ್ಲಿವೆ

IPL 2024 : ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಚೆನ್ನೈ ಸೂಪರ್​ ಕಿಂಗ್ಸ್​ ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ.

VISTARANEWS.COM


on

Chennai Super Kings
Koo

ಬೆಂಗಳೂರು : ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ 2024 ರ (IPL 2024) ಋತುವಿನ ಮೊದಲ ಹಂತದ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅನಾವರಣಗೊಳಿಸಿದೆ. ಲೋಕಸಭಾ ಚುನಾವಣೆಗಳು ನಡೆಯುತ್ತಿರುವುದರಿಂದ ಪ್ರತ್ಯೇಕ ಹಂತಗಳಲ್ಲಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಆದಾಗ್ಯೂ ಟೂರ್ನಿ ಭಾರತದಲ್ಲಿಯೇ ನಡೆಯುವುದು ಖಚಿತವಾಗಿದೆ.

ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.

ಆರ್​ಸಿಬಿ ಐಪಿಎಲ್ 2024 ವೇಳಾಪಟ್ಟಿ

ಆರ್​ಸಿಬಿ ಫ್ರಾಂಚೈಸಿ ಮಾರ್ಚ್ 22ರಂದು ಹಾಲಿ ಚಾಂಪಿಯನ್ ಸಿಎಸ್​ಕೆ ವಿರುದ್ಧ ಪಂದ್ಯದೊಂದಿಗೆ ಐಪಿಎಲ್ 2024 ಅಭಿಯಾನವನ್ನು ಪ್ರಾರಂಭಿಸಲಿದೆ. ಚೆನ್ನೈನ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಬಿಸಿಸಿಐ ಬಿಡುಗಡೆ ಮಾಡಿದ ಐಪಿಎಲ್ 2024ರ ಮೊದಲ ಹಂತದ ವೇಳಾಪಟ್ಟಿಯ ಪ್ರಕಾರ, ಆರ್​​ಸಿಬಿ ಏಪ್ರಿಲ್ 7ರವರೆಗೆ ನಾಲ್ಕು ಪಂದ್ಯಗಳನ್ನು ಆಡಲಿದೆ.

ಇದನ್ನೂ ಓದಿ : IPL 2024 : ಐಪಿಎಲ್​ ವೇಳಾಪಟ್ಟಿ ಪ್ರಕಟ; ಇಲ್ಲಿದೆ ಸಂಪೂರ್ಣ ವಿವರ

ಪಂದ್ಯಗಳ ವಿವರ ಇಲ್ಲಿದೆ

 • ಪಂದ್ಯ ಸಂಖ್ಯೆ 1: ಸಿಎಸ್​ಕೆ ವಿರುದ್ಧ, ದಿನಾಂಕ: ಮಾರ್ಚ್​ 22; ಸಮಯ: ರಾತ್ರಿ 8.00ಗೆ, ಸ್ಥಳ: ಚೆನ್ನೈ
 • ಪಂದ್ಯ ಸಂಖ್ಯೆ 6: ಪಂಜಾಬ್ ವಿರುದ್ಧ; ದಿನಾಂಕ: ಮಾರ್ಚ್​ 25; ಸಮಯ: ರಾತ್ರಿ: 7.30; ಸ್ಥಳ ಬೆಂಗಳೂರು
 • ಪಂದ್ಯ ಸಂಖ್ಯೆ 10: ಕೆಕೆಆರ್​​, ದಿನಾಂಕ: ಮಾರ್ಚ್​​ 29, ಸಮಯ: ರಾತ್ರಿ 7.30; ಸ್ಥಳ: ಬೆಂಗಳೂರು
 • ಪಂದ್ಯ ಸಂಖ್ಯೆ 15; ಎಲ್​ಎಸ್​​ಜಿ, ದಿನಾಂಕ: ಏಪ್ರಿಲ್​; ಸಮಯ 7.30; ಸ್ಥಳ: ಬೆಂಗಳೂರು
 • ಪಂದ್ಯ ಸಂಖ್ಯೆ 19, ಆರ್​ಸಿಬಿ, ದಿನಾಂಕ: ಏಪ್ರಿಲ್​ 6, ಸಮಯ 7.30; ಸ್ಥಳ ಜೈಪುರ

ತಂಡದ ವಿವರ ಇಲ್ಲಿವೆ


ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್ವೆಲ್, ವಿರಾಟ್ ಕೊಹ್ಲಿ, ಕ್ಯಾಮೆರಾನ್ ಗ್ರೀನ್, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಾಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಯಾಂಕ್ ದಾಗರ್, ಮಹಿಪಾಲ್ ಲೊಮ್ರೊರ್, ಕರಣ್ ಶರ್ಮಾ, ಮನೋಜ್ ಭಾಂಡಗೆ, ವೈಶಾಕ್ ವಿಜಯ್ ಕುಮಾರ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟಾಪ್ಲೆ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕರ್ರನ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್.

Continue Reading
Advertisement
Shah Rukh Khan Friend BREAKS Silence on Rumour of Him Dating
ಸಿನಿಮಾ5 mins ago

Shah Rukh Khan: ಪ್ರಿಯಾಂಕಾ ಜತೆ ರಹಸ್ಯವಾಗಿ ಡೇಟಿಂಗ್ ಮಾಡ್ತಿದ್ರಾ ಶಾರುಖ್‌?

Namma Metro
ಬೆಂಗಳೂರು33 mins ago

Namma Metro : ಗುಡ್‌ ನ್ಯೂಸ್‌- ಫೆ.26 ರಿಂದ ಪ್ರತಿ ಮೂರು ನಿಮಿಷಕ್ಕೆ ಮೆಟ್ರೋ ರೈಲು ಓಡಾಟ

Talibans
ವಿದೇಶ37 mins ago

Taliban: ತುಂಬಿದ ಸ್ಟೇಡಿಯಂನಲ್ಲಿ ಇಬ್ಬರನ್ನು ಗುಂಡಿಕ್ಕಿ ಸಾಯಿಸಿದ ತಾಲಿಬಾನಿಗಳು; ಯಾಕೆ?

dks
ಕರ್ನಾಟಕ56 mins ago

ನೀರಾ ಕುಡಿದಾಗ ನನಗೆ ಅಮಲಾಗಲಿಲ್ಲ: ಅನುಭವ ಮೆಲುಕು ಹಾಕಿದ ಡಿಸಿಎಂ ಡಿ.ಕೆ.ಶಿವಕುಮಾರ್

s jaishankar raisina dialogue
ಪ್ರಮುಖ ಸುದ್ದಿ1 hour ago

S Jaishankar: ವಿಶ್ವ ಸಂಸ್ಥೆಯಲ್ಲಿ ಸುಧಾರಣೆ ಅಗತ್ಯ: ವಿದೇಶಾಂಗ ಸಚಿವ ಜೈಶಂಕರ್‌ ಪ್ರತಿಪಾದನೆ

Sumalatha Ambareesh and Pralhad Joshi
ಧಾರವಾಡ2 hours ago

Sumalatha Ambareesh: ಸ್ಪರ್ಧೆ ಖಚಿತ ಎಂದ ಸುಮಲತಾ; ‌ಅವರು ಬಿಜೆಪಿಯೊಳಗೆ ಇರ್ತಾರೆ ಎಂದ ಜೋಶಿ

Fire breaks out in auto shed Burnt autos
ಬೆಂಗಳೂರು2 hours ago

Fire Accident : ಬೆಂಗಳೂರಿನಲ್ಲಿ ತಡರಾತ್ರಿ ಭಾರೀ ಅಗ್ನಿ ಅವಘಡ! 40-50 ಆಟೋಗಳು ಬೆಂಕಿಗಾಹುತಿ

Rahul Gandhi
ದೇಶ2 hours ago

ಶಾ ವಿರುದ್ಧ ಹೇಳಿಕೆ; ಮಾನಹಾನಿ ಕೇಸ್‌ ರದ್ದು ಕೋರಿ ರಾಹುಲ್‌ ಗಾಂಧಿ ಸಲ್ಲಿಸಿದ ಅರ್ಜಿ ವಜಾ, ಮತ್ತೆ ಸಂಕಷ್ಟ

divorce
ವೈರಲ್ ನ್ಯೂಸ್2 hours ago

ವಿಚ್ಛೇದನ; ಪತ್ನಿಯೇ ಪತಿಗೆ 5 ಸಾವಿರ ರೂ. ಜೀವನಾಂಶ ಕೊಡಲು ಕೋರ್ಟ್‌ ಆದೇಶ!

Hindu temples money used for development of Hindu communities CM Siddaramaiah
ರಾಜಕೀಯ2 hours ago

Hindu Temples: ಹಿಂದೂ ದೇಗುಲದ ಹಣವು ಮುಂದೂ ಆ ಸಮುದಾಯಗಳ ಅಭಿವೃದ್ಧಿಗೇ ಬಳಕೆ: ಸಿಎಂ ಸಿದ್ದರಾಮಯ್ಯ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ4 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Fire breaks out in auto shed Burnt autos
ಬೆಂಗಳೂರು2 hours ago

Fire Accident : ಬೆಂಗಳೂರಿನಲ್ಲಿ ತಡರಾತ್ರಿ ಭಾರೀ ಅಗ್ನಿ ಅವಘಡ! 40-50 ಆಟೋಗಳು ಬೆಂಕಿಗಾಹುತಿ

read your daily horoscope predictions for february 23 2024
ಭವಿಷ್ಯ11 hours ago

Dina Bhavishya : ಈ ರಾಶಿಯವರಿಗೆ ಆಫೀಸ್‌ನಲ್ಲಿ ಬಾಸ್‌ನ ಕಿರಿಕಿರಿಯಿಂದ ದಿನಪೂರ್ತಿ ಟೆನ್ಷನ್‌!

Catton Candy contain cancer Will there be a ban in Karnataka
ಬೆಂಗಳೂರು23 hours ago

cotton candy Ban : ಕರ್ನಾಟಕದಲ್ಲಿ ಬ್ಯಾನ್‌ ಆಗುತ್ತಾ ಬಾಂಬೆ ಮಿಠಾಯಿ; ಕ್ಯಾನ್ಸರ್​​ ಕಾರಕ ವಿಷ ಪತ್ತೆ!

Swarnavalli Mutt appoints successor ceremony
ಕರ್ನಾಟಕ1 day ago

Swarnavalli Mutt: ಸ್ವರ್ಣವಲ್ಲೀ ಶ್ರೀಗಳ ಶಿಷ್ಯ ಸ್ವೀಕಾರ ಸಂಪನ್ನ; ಇಲ್ಲಿದೆ ಲೈವ್‌ ವಿಡಿಯೊ

read your daily horoscope predictions for february 21 2024
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಸಂಗಾತಿಯ ವರ್ತನೆಯು ಕೋಪ, ಮುಜುಗರವನ್ನುಂಟು ಮಾಡುತ್ತೆ!

read your daily horoscope predictions for february 20 2024
ಭವಿಷ್ಯ3 days ago

Dina Bhavishya : ಈ ದಿನ ಆತುರದಲ್ಲಿ ಈ ರಾಶಿಯವರು ಯಾವ ತೀರ್ಮಾನವನ್ನು ಮಾಡ್ಬೇಡಿ!

read your daily horoscope predictions for february 19 2024
ಭವಿಷ್ಯ4 days ago

Dina Bhavishya : ನಿಮ್ಮನ್ನು ದ್ವೇಷಿಸುವವರೇ ಸ್ನೇಹಿತರಾಗಿ ಬದಲಾಗುತ್ತಾರೆ

read your daily horoscope predictions for february 18 2024
ಭವಿಷ್ಯ5 days ago

Dina Bhavishya : ಈ ರಾಶಿಯವರು ಇಂದು ನೀರಿನಂತೆ ಹಣವನ್ನು ಖರ್ಚು ಮಾಡ್ತಾರೆ

Challenging Darsha
ಪ್ರಮುಖ ಸುದ್ದಿ6 days ago

Actor Darshan : ಚಾಲೆಂಜಿಂಗ್ ಸ್ಟಾರ್​ ದರ್ಶನ್​ ‘ಬೆಳ್ಳಿ ಪರ್ವ’ ಕಾರ್ಯಕ್ರಮದ ಲೈವ್​ ಇಲ್ಲಿ ವೀಕ್ಷಿಸಿ

Children lock up their mother for property
ಕರ್ನಾಟಕ6 days ago

Inhuman Behaviour : ಆಸ್ತಿಗಾಗಿ ಹೆತ್ತ ತಾಯಿಯನ್ನೇ ಗೃಹ ಬಂಧನದಲ್ಲಿಟ್ಟರು ಮಕ್ಕಳು!

ಟ್ರೆಂಡಿಂಗ್‌