Amithabh Bachachan | ಮೆಸ್ಸಿ ಮತ್ತು ರೊನಾಲ್ಡೊ ಕೈ ಕುಲುಕಿದ ಅಮಿತಾಭ್​ ಬಚ್ಚನ್​, ವಿಡಿಯೊ ವೈರಲ್​ - Vistara News

ಕ್ರಿಕೆಟ್

Amithabh Bachachan | ಮೆಸ್ಸಿ ಮತ್ತು ರೊನಾಲ್ಡೊ ಕೈ ಕುಲುಕಿದ ಅಮಿತಾಭ್​ ಬಚ್ಚನ್​, ವಿಡಿಯೊ ವೈರಲ್​

VISTARANEWS.COM


on

Lionel messi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸೌದಿ ಅರೇಬಿಯಾ: ಬಾಲಿವುಡ್​ ಸೂಪರ್​ ಸ್ಟಾರ್​ ಅಮಿತಾಭ್​ ಬಚ್ಚನ್ ಅವರು ಫುಟ್ಬಾಲ್​ ಆಟಗಾರರಾದ ಲಿಯೋನೆಲ್​ ಮೆಸ್ಸಿ ಮತ್ತು ರೊನಾಲ್ಡೊ ಅವರ ಕೈ ಕುಲುಕಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಸೌದಿ ಅರೇಬಿಯಾದಲ್ಲಿ ಪಿಎಸ್​ಜಿ ಹಾಗೂ ರಿಯಾದ್​ ಇಲೆವೆನ್​ ತಂಡಗಳ ನಡುವೆ ಸೌಹಾರ್ದ ಪಂದ್ಯ ನಡೆದಿತ್ತು. ಮೆಸ್ಸಿ ಪಿಎಸ್​ಜಿ ತಂಡದ ಪರವಾಗಿ ಆಡುತ್ತಿದ್ದರೆ, ರೊನಾಲ್ಡೊ ಇತ್ತೀಚೆಗೆ ಸೌದಿ ಅರೇಬಿಯಾದ ಅಲ್​ ನಾಸರ್​ ಕ್ಲಬ್​ ಸೇರಿಕೊಂಡಿದ್ದರು.

ಗುರುವಾರ ರಿಯಾದ್ ಹಾಗೂ ಪಿಎಸ್​ಜಿ ತಂಡಗಳ ನಡುವೆ ಪಂದ್ಯ ನಡೆದಿತ್ತು. ರೊನಾಲ್ಗೊ ಹಾಗೂ ಮೆಸ್ಸಿಯ ಸಾವಿರಾರು ಭಾರತೀಯ ಅಭಿಮಾನಿಗಳು ಈ ಪಂದ್ಯವನ್ನು ವೀಕ್ಷಿಸಿದ್ದರು. ಕೆಲವರು ಸೌದಿ ಅರೇಬಿಯಾಕ್ಕೆ ಪಂದ್ಯವನ್ನು ನೇರವಾಗಿ ವೀಕ್ಷಣೆ ಮಾಡಿದರೆ, ಟಿವಿಯಲ್ಲೂ ನೇರ ಪ್ರಸಾರವಾಗಿತ್ತು. ಫ್ರಾನ್ಸ್​ನ ಕೈಲ್​ ಎಂಬಾಪೆ ಕೂಡ ಈ ಪಂದ್ಯದಲ್ಲಿ ಪಾಲ್ಗೊಂಡಿದ್ದರು.

ಈ ಪಂದ್ಯಕ್ಕೆ ಬಾಲಿವುಡ್​ ಬಿಗ್​ಬಿ ಅಮಿತಾಭ್​ ಬಚ್ಚನ್​ ಅವರಿಗೆ ಆಹ್ವಾನವಿತ್ತು. ಅಂತೆಯೇ ಅವರು ಪಂದ್ಯದ ಪೂರ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಿಗ್ಗಜ ಆಟಗಾರರಿಗೆ ಕೈ ಕುಲುಕಿದರು. ವಿಶ್ವಾದ್ಯಂತದ ಕೋಟ್ಯಂತರ ಫುಟ್ಬಾಲ್​ ಅಭಿಮಾನಿಗಳು ಈ ಪಂದ್ಯವನ್ನು ವೀಕ್ಷಿಸಿದ್ದಾರೆ. ತಮ್ಮಿಷ್ಟದ ಆಟಗಾರರನ್ನು ಬೆಂಬಲಿಸಿದ್ದಾರೆ.

ಇದನ್ನೂ ಓದಿ | Ziva Dhoni | ಎಂ.ಎಸ್​. ಧೋನಿ ಮಗಳು ಜೀವಾ ಸಿಂಗ್​ಗೆ ಉಡುಗೊರೆ ನೀಡಿದ ಲಿಯೋನೆಲ್​ ಮೆಸ್ಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

DC vs GT: ಡೆಲ್ಲಿ ದಾಳಿಗೆ ಚೆಲ್ಲಾಪಿಲ್ಲಿಯಾದ ಗುಜರಾತ್​; 6 ವಿಕೆಟ್​ ಹೀನಾಯ ಸೋಲು

DC vs GT: ಈ ಹಿಂದಿನ ಪಂದ್ಯಗಳಲ್ಲಿ ಕಳಪೆ ಬೌಲಿಂಗ್​ ಮೂಲಕ ಭಾರೀ ಟೀಕೆ ಎದುರಿಸಿದ್ದ ಡೆಲ್ಲಿ ಬೌಲರ್​ಗಳು ಈ ಪಂದ್ಯದಲ್ಲಿ ಉತ್ಕೃಷ್ಟ ಮಟ್ಟದ ಬೌಲಿಂಗ್​ ದಾಳಿ ಸಂಘಟಿಸಿದರು. ಮುಕೇಶ್​ ಕುಮಾರ್​ 14 ರನ್​ಗೆ 3 ವಿಕೆಟ್​ ಕಿತ್ತರೆ, ಟ್ರಿಸ್ಟಾನ್ ಸ್ಟಬ್ಸ್ ಒಂದೇ ಒವರ್​ನಲ್ಲಿ 2 ಪ್ರಮುಖ ವಿಕೆಟ್​ ಬೇಟೆಯಾಡಿದರು. ಅನುಭವಿ ಇಶಾಂತ್​ ಶರ್ಮ ಕೇವಲ 8 ರನ್​ ವೆಚ್ಚದಲ್ಲಿ 2 ವಿಕೆಟ್​ ಉರುಳಿಸಿದರು.

VISTARANEWS.COM


on

DC vs GT
Koo

ಅಹಮದಾಬಾದ್: ಮುಕೇಶ್​ ಕುಮಾರ್(3)​ ಮತ್ತು ಇಶಾಂತ್​ ಶರ್ಮ(2) ಅವರ ಉತ್ಕೃಷ್ಟ ಮಟ್ಟದ ಬೌಲಿಂಗ್​ ದಾಳಿಗೆ ನಲುಗಿದ ಗುಜರಾತ್​ ಟೈಟಾನ್ಸ್(Gujarat Titans)​ ತಂಡ ಡೆಲ್ಲಿ ಕ್ಯಾಪಿಟಲ್ಸ್​(DC vs GT) ವಿರುದ್ಧದ ಬುಧವಾರದ ಐಪಿಎಲ್(IPL 2024)​ ಪಂದ್ಯದಲ್ಲಿ 6 ವಿಕೆಟ್​ಗಳ ಹೀನಾಯ ಸೋಲು ಕಂಡಿದೆ. ​

ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡ ಡೆಲ್ಲಿ(Delhi Capitals) ತಂಡದ ನಾಯಕ ಪಂತ್​ ಅವರ ಆಯ್ಕೆಯನ್ನು ಬೌಲರ್​ಗಳು ತಮ್ಮ ಘಾತಕ ದಾಳಿಯ ಮೂಲಕ ಸಮರ್ಥಿಸಿಕೊಂಡರು. ಎದುರಾಳಿ ಗುಜರಾತ್​ ತಂಡವನ್ನು 89 ರನ್​ಗಳಿಗೆ ಆಲೌಟ್​ ಮಾಡಿದರು. ಇದು ಈ ಬಾರಿಯ ಟೂರ್ನಿಯಲ್ಲಿ ತಂಡವೊಂದು ಗಳಿಸಿದ ಮೊದಲ ಕನಿಷ್ಠ ಮೊತ್ತವಾಗಿದೆ. ಸಾಧಾರಣ ಮೊತ್ತವನ್ನು ಬೆನ್ನತ್ತಿದ ಡೆಲ್ಲಿ 8.5 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 92 ರನ್​ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

ಚೇಸಿಂಗ್​ ವೇಳೆ ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ ಬಿರುಸಿನ ಬ್ಯಾಟಿಂಗ್​ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಇವರ ಈ ಆಕ್ರಮಣಕಾರಿ ಬ್ಯಾಟಿಂಗ್​ನಿಂದಾಗಿ 2 ಓವರ್​ ಮುಕ್ತಾಯಗೊಳ್ಳುವ ಮುನ್ನವೇ ತಂಡಕ್ಕೆ 25 ರನ್​ ಹರಿದುಬಂತು. ಆದರೆ ಇವರ ಈ ಆಟ ಹೆಚ್ಚು ಹೊತ್ತು ಸಾಗಲಿಲ್ಲ. ಸ್ಪೆನ್ಸರ್ ಜಾನ್ಸನ್ ಎಸೆದ ವೈಡ್​ ಲೆಂತ್​ ಬಾಲ್​ನ ಮರ್ಮವನರಿಯದೆ ಕ್ಯಾಚ್​ ನೀಡಿ ವಿಕೆಟ್​ ಕಳೆದುಕೊಂಡರು. ಅವರ ಗಳಿಕ 10 ಎಸೆತಗಳಿಂದ 20 ರನ್. ಈ ವಿಕೆಟ್​ ಪತನದ ಬಳಿಕ ಆಡಲಿಳಿದ ಅಭಿಷೇಕ್​ ಪೋರೆಲ್(15)​ ಮತ್ತು ಶಾಯ್ ಹೋಪ್(19)​ ಬೇಗನೆ​ ವಿಕೆಟ್​ ಕಳೆದುಕೊಂಡು ತಂಡಕ್ಕೆ ಆತಂಕ ತಂದೊಡ್ಡಿದರು. ಈ ವೇಳೆ ತಾಳ್ಮೆಯುತ ಬ್ಯಾಟಿಂಗ್​ ನಡೆಸಿದ ನಾಯಕ ಪಂತ್​(16) ಮತ್ತು ಸುಮೀತ್​ ಕುಮಾರ್​(9) ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು. ಗುಜರಾತ್​ ಪರ ಸಂದೀಪ್​ ವಾರಿಯರ್​ 2 ವಿಕೆಟ್​ ಕಿತ್ತರು.

ರಶೀದ್​ ಖಾನ್​ ಏಕಾಂಗಿ ಹೋರಾಟ


ಇನಿಂಗ್ಸ್​ ಆರಂಭಿಸಿದ ಗುಜರಾತ್​ ತಂಡದ ಬ್ಯಾಟರ್​ಗಳು ಡೆಲ್ಲಿ ಬೌಲರ್​ಗಳಾದ ಇಶಾಂತ್​ ಶರ್ಮ, ಮುಕೇಶ್​ ಕುಮಾರ್​ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಅವರ ಕರಾರುವಾಕ್ ಬೌಲಿಂಗ್ ಎದುರು ಅಬ್ಬರಿಸಲು ವಿಫಲರಾದರು. ನಾಯಕ ಶುಭಮನ್​​ ಗಿಲ್​(8), ವೃದ್ಧಿಮಾನ್​ ಸಾಹಾ(2), ಡೇವಿಡ್​ ಮಿಲ್ಲರ್​(2), ಅಭಿನವ್​ ಮನೋಹರ್​(8) ಮತ್ತು ಈ ಆವೃತ್ತಿಯಲ್ಲಿ ಮೊದಲ ಪಂದ್ಯವಾನ್ನಾಡಿದ ಶಾರುಖ್ ಖಾನ್(0) ಸಿಂಗಲ್​ ಡಿಜಿಟ್​ಗೆ ಸೀಮಿತರಾಗಿ ಪೆವಿಲಿಯನ್​ ಪರೇಡ್​ ನಡೆಸಿದರು.

ಇದನ್ನೂ ಓದಿ IPL 2024: ಕೆಕೆಆರ್ ಸೋಲು ಕಂಡು ಕಣ್ಣೀರು ಸುರಿಸಿದ ನಟ ಶಾರೂಖ್ ಖಾನ್‌; ಫೋಟೊ ವೈರಲ್​

ಇನ್ನೇನು ತಂಡ 50ರನ್​ ಒಳಗಡೆ ಗಂಟು-ಮೂಟೆ ಕಟ್ಟುತ್ತದೆ ಎನ್ನುವ ಹಂತದಲ್ಲಿ 8ನೇ ಕ್ರಮಾಂಕದಲ್ಲಿ ಆಡಲಿಳಿದ ರಶೀದ್​ ಖಾನ್​ ಏಕಾಂಗಿ ಹೋರಾಟ ನಡೆಸಿ 24 ಎಸೆತಗಳಿಂದ 31 ರನ್​ ಚಚ್ಚಿ ತಂಡದ ಮೊತ್ತವನ್ನು 80ರ ಗಡಿ ದಾಟಿಸಿ ಮಾನ ಉಳಿಸಿದರು. ಒಟ್ಟಾರೆಯಾಗಿ ತಂಡದ ಪರ ಮೂರು ಮಂದಿ ಮಾತ್ರ ಎರಡಂಕಿ ಮೊತ್ತ ಕಲೆಹಾಕುವಲ್ಲಿ ಯಶಸ್ಸು ಕಂಡರು. ಸಾಯಿ ಸುದರ್ಶನ್​(12) ಮತ್ತು ರಾಹುಲ್​ ತೆವಾಟಿಯ(10) ರನ್​ ಬಾರಿಸಿದರು.

ಡೆಲ್ಲಿ ಬೌಲರ್​ಗಳ ಸಂಘಟಿತ ಹೋರಾಟ


ಈ ಹಿಂದಿನ ಪಂದ್ಯಗಳಲ್ಲಿ ಕಳಪೆ ಬೌಲಿಂಗ್​ ಮೂಲಕ ಭಾರೀ ಟೀಕೆ ಎದುರಿಸಿದ್ದ ಡೆಲ್ಲಿ ಬೌಲರ್​ಗಳು ಈ ಪಂದ್ಯದಲ್ಲಿ ಉತ್ಕೃಷ್ಟ ಮಟ್ಟದ ಬೌಲಿಂಗ್​ ದಾಳಿ ಸಂಘಟಿಸಿದರು. ಮುಕೇಶ್​ ಕುಮಾರ್​ 14 ರನ್​ಗೆ 3 ವಿಕೆಟ್​ ಕಿತ್ತರೆ, ಟ್ರಿಸ್ಟಾನ್ ಸ್ಟಬ್ಸ್ ಒಂದೇ ಒವರ್​ನಲ್ಲಿ 2 ಪ್ರಮುಖ ವಿಕೆಟ್​ ಬೇಟೆಯಾಡಿದರು. ಅನುಭವಿ ಇಶಾಂತ್​ ಶರ್ಮ ಕೇವಲ 8 ರನ್​ ವೆಚ್ಚದಲ್ಲಿ 2 ವಿಕೆಟ್​ ಉರುಳಿಸಿದರು. ಖಲೀಲ್​ ಅಹ್ಮದ್​ ಒಂದು ಮೇಡನ್​ ಸಹಿತ 18 ನೀಡಿ 1 ವಿಕೆಟ್​ ಪಡೆದರು. ಅಕ್ಷರ್​ ಕೂಡ ಒಂದು ವಿಕೆಟ್​ ಕಲೆಹಾಕಿದರು. ಆದರೆ ಕುಲ್​ದೀಪ್​ 4 ಓವರ್​ ಎಸೆದರೂ ವಿಕೆಟ್​ ಕೀಳುವಲ್ಲಿ ವಿಫಲರಾದರು.

Continue Reading

ಕ್ರೀಡೆ

T20 World Cup: ಟಿ20 ವಿಶ್ವಕಪ್​ನಲ್ಲಿ ರೋಹಿತ್​ ಜತೆ ವಿರಾಟ್​ ಕೊಹ್ಲಿ ಆರಂಭಿಕನಾಗಿ ಕಣಕ್ಕೆ

T20 World Cup: ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲ 20 ತಂಡಗಳು ಕೂಡ ಮೇ 1ರ ಒಳಗಡೆ ಆಟಗಾರರ ಅಂತಿಮ ಪಟ್ಟಿ ರಚಿಸಿ ಐಸಿಸಿಗೆ ನೀಡಬೇಕಿದೆ. ಇದೇ ಕಾರಣದಿಂದ ಆಯ್ಕೆ ಸಮಿತಿಯು ಭಾರತದ ಮೊದಲ ಸಂಭಾವ್ಯ ತಂಡವನ್ನು ಎಪ್ರಿಲ್‌ ಕೊನೆಯ ವಾರದಲ್ಲಿ ಪ್ರಕಟಿಸಲಿದೆ ಎನ್ನಲಾಗಿದೆ.

VISTARANEWS.COM


on

T20 World Cup
Koo

ಮುಂಬಯಿ: ಕೆಲವು ತಿಂಗಳ ಹಿಂದೆ ಟಿ20 ವಿಶ್ವಕಪ್(T20 World Cup)​ ಟೂರ್ನಿಯಲ್ಲಿ ವಿರಾಟ್​ ಕೊಹ್ಲಿಗೆ ಸ್ಥಾನ ಸಿಗುವುದು ಅನುಮಾನ ಎಂದು ಹೇಳಲಾಗಿತ್ತು. ಇದೀಗ ಟೂರ್ನಿಯಲ್ಲಿ ವಿರಾಟ್​ ಕೊಹ್ಲಿ(virat kohli) ಮತ್ತು ರೋಹಿತ್​ ಶರ್ಮ(rohit sharma) ಭಾರತದ ಇನಿಂಗ್ಸ್​ ಆರಂಭಿಸಲಿದ್ದಾರೆ ಎಂದು ವರದಿಯಾಗಿದೆ. ದೈನಿಕ್​ ಜಾಗರಣ್​ ವರದಿ ಪ್ರಕಾರ ರೋಹಿತ್​ ಜತೆ ಕೊಹ್ಲಿ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ ಎಂದು ತಿಳಿದುಬಂದಿದೆ.

ಟಿ20 ವಿಶ್ವಕಪ್​ ಟೂರ್ನಿಗೆ ತಂಡವನ್ನು ಆಯ್ಕೆ ಮಾಡುವ ಸಲುವಾಗಿ ನಾಯಕ ರೋಹಿತ್​ ಶರ್ಮ, ಕೋಚ್​ ರಾಹುಲ್​ ದ್ರಾವಿಡ್​ ಇಂದು(ಬುಧವಾರ) ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್​ ಅಗರ್ಕರ್​ ಜತೆ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಭೆಯಲ್ಲಿ ರೋಹಿತ್​ ಅವರು ಕೊಹ್ಲಿಯನ್ನು ಆರಂಭಿನಾಗಿ ಆಡಿಸುವ ಬೇಡಿಕೆ ಇರಿಸಿದ್ದಾರೆ ಎಂದು ದೈನಿಕ್​ ಜಾಗರಣ್​ ತನ್ನ ವರದಿಯಲ್ಲಿ ತಿಳಿಸಿದೆ. ಕೊಹ್ಲಿ ಐಪಿಎಲ್​ನಲ್ಲಿ ಆರಂಭಿಕಾಗಿ ಕಣಕ್ಕಿಳಿದು ಉತ್ತಮವಾಗಿ ಆಡುತ್ತಿದ್ದಾರೆ. ಹೀಗಾಗಿ ಅವರನ್ನು ಟಿ20ಯಲ್ಲಿಯೂ ಆರಂಭಿನಾಗಿ ಆಡಿಸಲು ಕೋಚ್​ ಮತ್ತು ನಾಯಕ ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.

2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್​ ಬಳಿಕ ವಿರಾಟ್​ ಕೊಹ್ಲಿ ಭಾರತ ಪರ ಟಿ 20 ಆಡಿದ್ದು ಇದೇ ವರ್ಷಾರಂಭದಲ್ಲಿ ತವರಿನಲ್ಲಿ ನಡೆದ ಅಫಘಾನಿಸ್ತಾನ ವಿರುದ್ಧದ ಸರಣಿಯಲ್ಲಿ. ಆದರೆ ಈ ಸರಣಿಯಲ್ಲಿ ಕೊಹ್ಲಿ ಕೇವಲ 29 ರನ್ ಗಳಿಸಿದ್ದರು. ಹೀಗಾಗಿ ಅವರನ್ನು ಟಿ20 ವಿಶ್ವಕಪ್ ಗೆ ಪರಿಗಣಿಸುವ ಸಾಧ್ಯತೆ ಕಡಿಮೆ ಎನ್ನಲಾಗಿತ್ತು. ಮಾತ್ರವಲ್ಲದೆ ಟಿ20 ವಿಶ್ವಕಪ್ ನಡೆಯುವ ಅಮೆರಿಕ ಮತ್ತು ವಿಂಡೀಸ್​ ಪಿಚ್​ಗಳು ನಿಧಾನಗತಿಯದ್ದಾಗಿದ್ದು, ಕೊಹ್ಲಿಗೆ ಇದು ಸೂಕ್ತವಾಗಿಲ್ಲ ಎನ್ನುವ ಕಾರಣಕ್ಕೆ ಆಯ್ಕೆ ಸಮಿಯಿ ಅವರನ್ನು ಹೊರಗಿಡುವ ಚಿಂತನೆ ನಡೆಸಿದೆ ಎಂದು ವರದಿಯಾಗಿತ್ತು. ಆದರೆ, ಇದೀಗ ಅವರಿಗೆ ಅವಕಾಶ ಸಿಗಲಿದೆ ಎಂದು ತಿಳಿದುಬಂದಿದೆ.

ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲ 20 ತಂಡಗಳು ಕೂಡ ಮೇ 1ರ ಒಳಗಡೆ ಆಟಗಾರರ ಅಂತಿಮ ಪಟ್ಟಿ ರಚಿಸಿ ಐಸಿಸಿಗೆ ನೀಡಬೇಕಿದೆ. ಇದೇ ಕಾರಣದಿಂದ ಆಯ್ಕೆ ಸಮಿತಿಯು ಭಾರತದ ಮೊದಲ ಸಂಭಾವ್ಯ ತಂಡವನ್ನು ಎಪ್ರಿಲ್‌ ಕೊನೆಯ ವಾರದಲ್ಲಿ ಪ್ರಕಟಿಸಲಿದೆ ಎನ್ನಲಾಗಿದೆ.

ಇದನ್ನೂ ಓದಿ T20 World Cup 2024: ಶೀಘ್ರದಲ್ಲೇ ಟಿ20 ವಿಶ್ವಕಪ್​ಗೆ ಭಾರತ ತಂಡ ಪ್ರಕಟ; ಮಾಯಾಂಕ್‌ ಯಾದವ್​ಗೆ ಸ್ಥಾನ ಖಚಿತ

ಈಗಾಗಲೇ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ದ್ವಿತೀಯ ಪಂದ್ಯ ಜೂನ್‌ 9 ರಂದು ಪಾಕ್​ ವಿರುದ್ಧ ಆಡಲಿದ. ಭಾರತ ತನ್ನ ಎಲ್ಲ ಲೀಗ್‌ ಪಂದ್ಯಗಳನ್ನು ಅಮೆರಿಕದಲ್ಲೇ ಆಡದೆ. ಇದರಲ್ಲಿ ಮೂರು ಪಂದ್ಯಗಳು ನ್ಯೂಯಾರ್ಕ್‌ ಮತ್ತು ಒಂದು ಪಂದ್ಯ ಫ್ಲೋರಿಡಾದಲ್ಲಿ ನಡೆಯಲಿದೆ.

ಭಾರತದ ಪಂದ್ಯಗಳು

ದಿನಾಂಕಎದುರಾಳಿಸ್ಥಳ
ಜೂನ್​ 5ಐರ್ಲೆಂಡ್​ನ್ಯೂಯಾರ್ಕ್​
ಜೂನ್​ 9ಪಾಕಿಸ್ತಾನನ್ಯೂಯಾರ್ಕ್​
ಜೂನ್​ 12ಅಮೆರಿಕನ್ಯೂಯಾರ್ಕ್
ಜೂನ್​ 15ಕೆನಡಾಫ್ಲೋರಿಡಾ
Continue Reading

ಕ್ರೀಡೆ

IPL 2024: ಕೆಕೆಆರ್ ಸೋಲು ಕಂಡು ಕಣ್ಣೀರು ಸುರಿಸಿದ ನಟ ಶಾರೂಖ್ ಖಾನ್‌; ಫೋಟೊ ವೈರಲ್​

IPL 2024: ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದ ಕಾರಣ ಕೆಕೆಆರ್​(KKR) ತಂಡದ ನಾಯಕ ಶ್ರೇಯಸ್​ ಅಯ್ಯರ್(Shreyas Iyer)​ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಸೋಲಿನ ಹತಾಶೆಯಲ್ಲಿದ್ದ ಅವರಿಗೆ ದಂಡದ ಬಿಸಿ ಕೂಡ ಮುಟ್ಟಿದಂತಾಗಿದೆ.

VISTARANEWS.COM


on

IPL 2024
Koo

ಕೋಲ್ಕತ್ತಾ: ಅಗ್ರಸ್ಥಾನಕ್ಕೇರುವ ಇರಾದೆಯೊಂದಿಗೆ ರಾಜಸ್ಥಾನ್​ ರಾಯಲ್ಸ್(RR)​ ವಿರುದ್ಧ ಆಡಲಿಳಿದಿದ್ದ ಕೆಕೆಆರ್(KKR)​ ತಂಡ ಜಾಸ್​ ಬಟ್ಲರ್​ ಅವರ ಅಜೇಯ ಶತಕದ(IPL 2024) ಆಟದಿಂದ ಸೋಲು ಕಂಡಿತ್ತು. ತವರಿನಲ್ಲೇ ಸೋಲು ಕಂಡ ಬೇಸರದಲ್ಲಿ ತಂಡದ ಸಹ ಮಾಲೀಕ, ಬಾಲಿವುಡ್​ ನಟ ಶಾರೂಖ್ ಖಾನ್‌(Shah Rukh Khan) ಅವರು ಕಣ್ಣೀರು ಸುರಿಸಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಶಾರೂಖ್ ಖಾನ್‌ ತನ್ನ ತಂಡ ಸೋಲು ಕಂಡಾಗ ಭಾವುಕರಾದರು. ಆದರೂ ಕೂಡ ಪಂದ್ಯ ಮುಗಿದ ಬಳಿಕ ಮೈದಾನಕ್ಕೆ ಹತಾಶರಾಗಿ ಕುಳಿತಿದ್ದ ತನ್ನ ತಂಡದ ಆಟಗಾರರನ್ನು ಸಮಾಧಾನ ಪಡೆಸಿದರು. ಅಲ್ಲದೆ ಡ್ರೆಸ್ಸಿಂಗ್​ ರೂಮ್​ಗೂ ತೆರಳಿ ಆಟಗಾರರಿಗೆ ಮುಂದಿನ ಪಂದ್ಯದಲ್ಲಿ ಉತ್ತಮವಾಗಿ ಆಡುವಂತೆ ಧೈರ್ಯ ತುಂಬಿದರು. ಜತೆಗೆ ಗೆಲುವು ಸಾಧಿಸಿದ ಎದುರಾಳಿ ತಂಡದ ಆಟಗಾರರನ್ನು ಕೂಡ ತಬ್ಬಿಕೊಂಡು ಅಭಿನಂದಿಸಿದರು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಕೆಕೆಆರ್​ ಸುನೀಲ್‌ ನಾರಾಯಣ್‌ ಅವರ ಸ್ಫೋಟಕ ಶತಕದಿಂದಾಗಿ ನಿಗದಿತ 20 ಓವರ್​ಗಳಲ್ಲಿ 6 ವಿಕೆಟಿಗೆ 223 ರನ್ನುಗಳ ಬೃಹತ್‌ ಮೊತ್ತ ಪೇರಿಸಿತು. ಬೃಹತ್​ ಮೊತ್ತವನ್ನು ಬೆನ್ನಟ್ಟಿಕೊಂಡು ಹೋದ ರಾಜಸ್ಥಾನ್​ ನಾಟಕೀಯ ಕುಸಿತ ಕಂಡರೂ ಜಾಸ್‌ ಬಟ್ಲರ್‌ ಅವರ ಏಕಾಂಗಿ ಶತಕದ ಆಟದಿಂದ ಗರೋಚಕ 2 ವಿಕೆಟ್​ ಗೆಲುವು ಸಾಧಿಸಿತು. ಗೆಲುವಿನ ರನ್​ ಕೂಡ ಬಟ್ಲರ್​ ಅವರೇ ಬಾರಿಸಿ ತಂಡಕ್ಕೆ ಸ್ಮರಣೀಯ ಜಯ ತಂದುಕೊಟ್ಟರು. 60 ಎಸೆತ ಎದುರಿಸಿದ್ದು 9 ಬೌಂಡರಿ ಮತ್ತು 6 ಸಿಕ್ಸರ್‌ ನೆರವಿನಿಂದ 107 ರನ್‌ ಗಳಿಸಿ ಅಜೇಯರಾಗಿ ಉಳಿದರು. ಬಟ್ಲರ್‌ ಅವರ ಈ ಶತಕ ವೈಭವದಿಂದಾಗಿ ಸುನೀಲ್‌ ನಾರಾಯಣ್‌ ಅವರ ಸಾಧನೆ ವ್ಯರ್ಥವಾಯಿತು.

ಇದನ್ನೂ ಓದಿ IPL 2024: ಆರ್​ಸಿಬಿ ತಂಡದ ಹೀನಾಯ ಪ್ರದರ್ಶನಕ್ಕೆ ಕಾರಣ ತಿಳಿಸಿದ ಮಾಜಿ ಆಟಗಾರ

ಅಯ್ಯರ್​ಗೆ 12 ಲಕ್ಷ ದಂಡ


ಇದೇ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದ ಕಾರಣ ಕೆಕೆಆರ್​(KKR) ತಂಡದ ನಾಯಕ ಶ್ರೇಯಸ್​ ಅಯ್ಯರ್(Shreyas Iyer)​ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಸೋಲಿನ ಹತಾಶೆಯಲ್ಲಿದ್ದ ಅವರಿಗೆ ದಂಡದ ಬಿಸಿ ಕೂಡ ಮುಟ್ಟಿದಂತಾಗಿದೆ.

‘ಇದು ಐಪಿಎಲ್‌ನ ನೀತಿ ಸಂಹಿತೆಯಡಿಯಲ್ಲಿ ಕನಿಷ್ಠ ಓವರ್‌ ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ ಈ ಆವೃತ್ತಿಯಲ್ಲಿ ಕೆಕೆಆರ್ ತಂಡದ ಮೊದಲ ಅಪರಾಧವಾಗಿರುವುದರಿಂದ, ಶ್ರೇಯಸ್ ಐಯ್ಯರ್ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ’ ಎಂದು ಐಪಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ. ಐಪಿಎಲ್​ನ ಕೋಡ್​ ಆಫ್​ ಕಂಡಕ್ಟ್​ ಅಪರಾಧವನ್ನು ಅಯ್ಯರ್ ಒಪ್ಪಿಕೊಂಡಿದ್ದಾರೆ.

Continue Reading

ದೇಶ

Ananya Reddy: UPSCಯಲ್ಲಿ 3ನೇ ರ‍್ಯಾಂಕ್‌ ಪಡೆಯಲು ಅನನ್ಯಾ ರೆಡ್ಡಿಗೆ ಕೊಹ್ಲಿಯೇ ಸ್ಫೂರ್ತಿಯಂತೆ!

Ananya Reddy: ಮೆಹಬೂಬ್‌ನಗರ ಜಿಲ್ಲೆಯವರಾದ ಅನನ್ಯಾ ರೆಡ್ಡಿ ಅವರು ದೆಹಲಿ ವಿಶ್ವವಿದ್ಯಾಲಯದ ಮಿರಿಂಡ ಹೌಸ್‌ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಕ್ರಿಕೆಟ್‌ನಲ್ಲಿ ಆಸಕ್ತಿ ಹೊಂದಿರುವ ಇವರು ಮಕ್ಕಳಿಗೆ ಕಲಿಸುವುದರಲ್ಲಿ ಖುಷಿ ಕಂಡವರು. ಕೋಚಿಂಗ್‌ ಸೆಂಟರ್‌ಗಳಿಗೆ ಹೋಗದೆ, ತರಬೇತಿ ಪಡೆಯದೆ, ಸತತ ಅಧ್ಯಯನದ ಮೂಲಕ ಯುಪಿಎಸ್‌ಸಿಯಲ್ಲಿ ದೇಶಕ್ಕೇ ಮೂರನೇ ರ‍್ಯಾಂಕ್‌ ಪಡೆದಿರುವ ಇವರಿಗೆ ವಿರಾಟ್‌ ಕೊಹ್ಲಿಯೇ ಸ್ಫೂರ್ತಿಯಂತೆ!

VISTARANEWS.COM


on

Donuru Ananya Reddy
Koo

ತೆಲಂಗಾಣ: ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಯ ಫಲಿತಾಂಶ (UPSC Results 2023) ಪ್ರಕಟವಾಗಿದ್ದು, ಉತ್ತರ ಪ್ರದೇಶದ ಆದಿತ್ಯ ಶ್ರೀವಾಸ್ತವ್‌ (Aditya Srivastava) ಅವರು ಮೊದಲ ರ‍್ಯಾಂಕ್‌ ಗಳಿಸಿದ್ದಾರೆ. ಇನ್ನು, ತೆಲಂಗಾಣದ ಡೋನೂರು ಅನನ್ಯಾ ರೆಡ್ಡಿ (Donuru Ananya Reddy) ಅವರು ದೇಶಕ್ಕೇ ಮೂರನೇ ರ‍್ಯಾಂಕ್‌ ಪಡೆದಿದ್ದಾರೆ. ತೆಲಂಗಾಣದ ಮೆಹಬೂಬ್‌ನಗರ ಜಿಲ್ಲೆಯವರಾದ ಡೋನೂರು ಅನನ್ಯಾ ರೆಡ್ಡಿ ಅವರು ಕೋಚಿಂಗ್‌ ತರಬೇತಿ ಇಲ್ಲದೆಯೇ ಅಧ್ಯಯನ ಮಾಡಿ ಇಂತಹ ಸಾಧನೆಗೈದಿದ್ದಾರೆ. ಅಷ್ಟೇ ಅಲ್ಲ, ಕೊಹ್ಲಿಯು ಮೈದಾನದಲ್ಲಿ ರನ್‌ ಗಳಿಸಿದ ರೀತಿ ಪರೀಕ್ಷೆಯಲ್ಲಿ ರನ್‌ ಗಳಿಸಿದ ಅನನ್ಯಾ ರೆಡ್ಡಿ ಅವರಿಗೆ ರನ್‌ ಮಷೀನ್‌ ವಿರಾಟ್‌ ಕೊಹ್ಲಿಯೇ (Virat Kohli) ಸಾಧನೆಗೆ ಸ್ಫೂರ್ತಿ ಎಂದಿದ್ದಾರೆ.

“ವಿರಾಟ್‌ ಕೊಹ್ಲಿ ನನ್ನ ಫೇವರಿಟ್‌ ಕ್ರಿಕೆಟಿಗ. ಅವರ ಶಿಸ್ತು, ಎಂದಿಗೂ ಬಿಟ್ಟುಕೊಡಬಾರದು, ಹಿಂದಡಿ ಇಡಬಾರದು, ಮುನ್ನುಗ್ಗುತ್ತಿರಬೇಕು ಎಂಬ ಛಲ, ಅವರ ಆ್ಯಟಿಟ್ಯೂಡ್‌ ತುಂಬ ಇಷ್ಟ. ಅವರನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡು, ಅವರಂತೆ ಪರಿಶ್ರಮ ವಹಿಸಿದ ಕಾರಣಕ್ಕಾಗಿ ನಾನು ಯುಪಿಎಸ್‌ಸಿಯಲ್ಲಿ ರ‍್ಯಾಂಕ್‌ ಪಡೆಯಲು ಸಾಧ್ಯವಾಯಿತು” ಎಂದು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

ತರಬೇತಿ ಪಡೆಯದೆ ಓದಿ ರ‍್ಯಾಂಕ್‌

ಮೆಹಬೂಬ್‌ನಗರ ಜಿಲ್ಲೆಯವರಾದ ಅನನ್ಯಾ ರೆಡ್ಡಿ ಅವರು ದೆಹಲಿ ವಿಶ್ವವಿದ್ಯಾಲಯದ ಮಿರಿಂಡ ಹೌಸ್‌ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಕ್ರಿಕೆಟ್‌ನಲ್ಲಿ ಆಸಕ್ತಿ ಹೊಂದಿರುವ ಇವರು ಮಕ್ಕಳಿಗೆ ಕಲಿಸುವುದರಲ್ಲಿ ಖುಷಿ ಕಂಡವರು. ಪದವಿ ನಂತರ ಕಷ್ಟಪಟ್ಟು ಓದಿದ ಇವರು ಯಾವುದೇ ತರಬೇತಿ ಇಲ್ಲದೆಯೇ ಯುಪಿಎಸ್‌ಸಿಯಲ್ಲಿ ಮೂರನೇ ರ‍್ಯಾಂಕ್‌ ಪಡೆದಿದ್ದಾರೆ. ಮಾನವಶಾಸ್ತ್ರ ವಿಷಯದ ಕುರಿತು ಮಾತ್ರ ಇವರು ತರಬೇತಿ ಪಡೆದಿದ್ದು ಬಿಟ್ಟರೆ, ಉಳಿದ ತಯಾರಿಯನ್ನು ಅವರೇ ಮಾಡಿಕೊಂಡು, ಸತತ ಪರಿಶ್ರಮದ ಮೂಲಕ ಸಾಧನೆಯ ಮೆಟ್ಟಿಲು ಹತ್ತಿದ್ದಾರೆ.

ದೇಶಕ್ಕೇ ತೃತೀಯ ರ‍್ಯಾಂಕ್‌ ಪಡೆದ ಕುರಿತು ಅನನ್ಯಾ ರೆಡ್ಡಿ ಮಾಹಿತಿ ನೀಡಿದ್ದಾರೆ. “ನಾನು ಯಾವುದೇ ಕೋಚಿಂಗ್‌ ಸಂಸ್ಥೆಗಳಲ್ಲಿ ತರಬೇತಿ ಪಡೆದಿಲ್ಲ. ನಿತ್ಯ 12-14 ತಾಸು ಕಡ್ಡಾಯವಾಗಿ ಅಧ್ಯಯನ ಮಾಡುತ್ತಿದ್ದೆ. ನಾನು ಚಿಕ್ಕವಳಿದ್ದಾಗಲೇ ಸಮಾಜಕ್ಕೆ ನನ್ನಿಂದಾದ ಸೇವೆ ಮಾಡಬೇಕು ಎಂದು ಬಯಸಿದ್ದೆ. ಶಾಲೆಯಲ್ಲಿದ್ದಾಗಲೇ ಈ ದಿಸೆಯಲ್ಲಿ ಅಧ್ಯಯನ ಮಾಡುತ್ತಿದ್ದೆ. ಮುಖ್ಯ ಪರೀಕ್ಷೆ, ಸಂದರ್ಶನವನ್ನು ಆತ್ಮವಿಶ್ವಾಸದಿಂದ ಎದುರಿಸಿದ್ದೆ. ಆದರೆ, ಮೂರನೇ ರ‍್ಯಾಂಕ್‌ ಪಡೆಯುತ್ತೇನೆ ಎಂದುಕೊಂಡಿರಲಿಲ್ಲ” ಎಂಬುದಾಗಿ ಅನನ್ಯಾ ರೆಡ್ಡಿ ತಿಳಿಸಿದ್ದಾರೆ.

ದೇಶಕ್ಕೇ ಮೊದಲ ರ‍್ಯಾಂಕ್‌ ಪಡೆದ ಆದಿತ್ಯ ಶ್ರೀವಾಸ್ತವ್‌ ಅವರು ಉತ್ತರ ಪ್ರದೇಶದ ಲಖನೌ ಮೂಲದವರು. ಇವರು ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಲಖನೌನಲ್ಲಿಯೇ ಮುಗಿಸಿದ್ದಾರೆ. ಐಐಟಿ ಕಾನ್ಪುರದಲ್ಲಿ ಎಂ.ಟೆಕ್‌ ಸ್ನಾತಕೋತ್ತರ ಪದವಿ ಪಡೆದ ಇವರು 15 ತಿಂಗಳು ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡಿದ್ದರು. ಆದರೆ, ಐಎಎಸ್‌ ಅಧಿಕಾರಿಯಾಗಬೇಕು ಎಂಬ ಕನಸು ಹೊತ್ತ ಇವರು ಎಲೆಕ್ಟ್ರಿಕಲ್‌ ಎಂಜಿನಿಯರ್ ಉದ್ಯೋಗ ಬಿಟ್ಟು ಐಎಎಸ್‌ಗೆ ಅಧ್ಯಯನ ಮಾಡಲು ಆರಂಭಿಸಿದರು. ಈಗ ಇವರು ಯಶಸ್ಸು ಸಾಧಿಸಿದ್ದಾರೆ.

ಇದನ್ನೂ ಓದಿ: UPSC Results 2023: ಎಂಎನ್‌ಸಿ ಕೆಲಸ ಬಿಟ್ಟ ಆದಿತ್ಯಗೆ ಯುಪಿಎಸ್‌ಸಿ ಫಸ್ಟ್‌ ರ‍್ಯಾಂಕ್;‌ ಯಾರಿವರು?

Continue Reading
Advertisement
jai shree ram assault case
ಕ್ರೈಂ32 mins ago

Jai Shree Ram slogan: ರಾಮಭಕ್ತರ ಮೇಲೆ ಹಲ್ಲೆ ಮಾಡಿದ 4 ಮಂದಿಯ ಬಂಧನ, ಇಂದು ಬಿಜೆಪಿ ಪ್ರತಿಭಟನೆ

Karnataka Weather
ಕರ್ನಾಟಕ1 hour ago

Karnataka Weather: ಇಂದು ದಕ್ಷಿಣ ಕನ್ನಡ, ಬೆಳಗಾವಿ ಸೇರಿ ವಿವಿಧೆಡೆ ಗುಡುಗು, ಬಿರುಗಾಳಿ ಸಹಿತ ಮಳೆ!

EVM
ಪ್ರಮುಖ ಸುದ್ದಿ2 hours ago

ವಿಸ್ತಾರ ಸಂಪಾದಕೀಯ: ಮತ್ತೆ ಮತಪತ್ರಗಳ ‘ಶಿಲಾಯುಗ’ಕ್ಕೆ ಹೋಗಲಾಗದು! ಆಧಾರರಹಿತವಾಗಿ ಮತಯಂತ್ರ ದೂಷಣೆ ಸರಿಯಲ್ಲ

Baking Powder
ಆಹಾರ/ಅಡುಗೆ2 hours ago

Baking Powder: ಬೇಕಿಂಗ್‌ ಪುಡಿ ಹುಟ್ಟಿದ ಕತೆ ಕುತೂಹಲಕರ! ಅಡುಗೆ ಮಾಡುವ ಇದರ ಹಿನ್ನೆಲೆ ಗೊತ್ತಿರಲಿ

daily horoscope predictions for April 18 2024
ಭವಿಷ್ಯ3 hours ago

Dina Bhavishya : ಈ ರಾಶಿಯವರು ಇಂದು ಕಾರಣಾಂತರಗಳಿಂದ ಮೋಸ ಹೋಗುವ ಸಾಧ್ಯತೆ ಇದೆ!

DD News Logo
ದೇಶ8 hours ago

DD News Logo: ರಾಮನವಮಿ ದಿನವೇ ಡಿಡಿ ನ್ಯೂಸ್‌ ಲೋಗೊ ಕೇಸರಿಮಯ; ತೀವ್ರವಾಯ್ತು ಚರ್ಚೆ!

Jai Shree Ram slogan
ಪ್ರಮುಖ ಸುದ್ದಿ8 hours ago

Jai Shree Ram slogan: ಹಿಂದು ಯುವಕರ ಮೇಲೆ ಹಲ್ಲೆ ಮಾಡಿದ್ದ ಮೂವರ ಬಂಧನ

Union Minister Pralhad Joshi election campaign in Hubli
ಹುಬ್ಬಳ್ಳಿ9 hours ago

Lok Sabha Election 2024: ಪ್ರಧಾನಿ ಮೋದಿ ನೇತೃತ್ವದ ಸರ್ಕಾರದಿಂದ ಸ್ವಚ್ಛ ಆಡಳಿತ: ಪ್ರಲ್ಹಾದ್‌ ಜೋಶಿ

Times Influential list 2024
ಕ್ರೀಡೆ9 hours ago

Times Influential list 2024: ಟೈಮ್ಸ್‌ ಪ್ರಭಾವಿ ಪಟ್ಟಿಯಲ್ಲಿ ಸ್ಥಾನ ಪಡೆದ ಸಾಕ್ಷಿ ಮಲಿಕ್,ಆಲಿಯಾ ಭಟ್

Terrorist Attack
ದೇಶ9 hours ago

Terrorist Attack: ಕಾಶ್ಮೀರದಲ್ಲಿ ಬಿಹಾರದ ಕಾರ್ಮಿಕನನ್ನು ಹತ್ಯೆಗೈದ ಉಗ್ರರು; ತಿಂಗಳಲ್ಲಿ 2ನೇ ದಾಳಿ

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ1 day ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ2 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20243 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20243 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ4 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ5 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ6 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ6 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ7 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

ಟ್ರೆಂಡಿಂಗ್‌